Tag: ವಿ.ಡಿ ಸಾವರ್ಕರ್

  • Savarkar Controversy: ರಾಹುಲ್‌ ಗಾಂಧಿ ವಿರುದ್ಧ ಮತ್ತೊಂದು ಮಾನನಷ್ಟ ಕೇಸ್‌

    Savarkar Controversy: ರಾಹುಲ್‌ ಗಾಂಧಿ ವಿರುದ್ಧ ಮತ್ತೊಂದು ಮಾನನಷ್ಟ ಕೇಸ್‌

    ಮುಂಬೈ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ (Rahul Gandhi) ಸದ್ಯಕ್ಕೆ ಸಂಕಷ್ಟ ಬೆಂಬಿಡದಂತೆ ಕಾಣ್ತಿದೆ. ಸ್ವಾತಂತ್ರ್ಯ ಹೋರಾಟಗಾರ ವಿ.ಡಿ ಸಾವರ್ಕರ್ (VD Savarkar) ಅವರ ಮೊಮ್ಮಗ, ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

    ಈ ಹಿಂದೆ ರಾಹುಲ್‌ ಗಾಂಧಿ ಲಂಡನ್‌ಗೆ ತೆರಳಿದ್ದಾಗ ತಮ್ಮ ಭಾಷಣದಲ್ಲಿ ವಿ.ಡಿ ಸಾವರ್ಕರ್ ವಿರುದ್ಧ ತಪ್ಪು ಆರೋಪ ಮಾಡಿದ್ದಾರೆ ಎಂಬುದಾಗಿ ಈ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ ಎಂದು ಮೊಮ್ಮಗ ಸತ್ಯಕಿ ಸಾವರ್ಕರ್ (Satyaki Savarkar) ತಿಳಿಸಿದ್ದಾರೆ. ಸತ್ಯಕಿ ಪರ ವಕೀಲರು ಸಿಟಿ ಸಿವಿಲ್‌ ಕೋರ್ಟ್ ನಲ್ಲಿ ರಾಹುಲ್ ಗಾಂಧಿ ವಿರುದ್ಧ ಐಪಿಸಿ (IPC) ಸೆಕ್ಷನ್ 499 ಹಾಗೂ 500 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಕೋರ್ಟ್‌ ಅಧಿಕಾರಿ ಇಂದು ಗೈರು ಹಾಜರಾಗಿದ್ದ ಕಾರಣ ಪ್ರಕರಣದ ಸಂಖ್ಯೆ ಪಡೆಯಲು ಶನಿವಾರ ಆಗಮಿಸುವಂತೆ ಸೂಚಿಸಲಾಗಿದೆ ಇನ್ನೂ ಕೇಸ್ ಸಂಖ್ಯೆ ಸಿಕ್ಕಿಲ್ಲ ಎಂದು ಸತ್ಯಕಿ ಸಾವರ್ಕರ್ ಹೇಳಿದ್ದಾರೆ. ಇದನ್ನೂ ಓದಿ: ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ – ರಾಹುಲ್‌ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ

    ರಾಗಾ ಹೇಳಿದ್ದೇನು?
    ಲಂಡನ್ ನಲ್ಲಿರುವ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ ಸಾವರ್ಕರ್ ವಿಷಯ ಪ್ರಸ್ತಾಪಿಸಿದ್ದರು. ʻತಾವು ಹಾಗೂ ತಮ್ಮ 5-6 ಮಂದಿ ಸ್ನೇಹಿತರು ಸೇರಿ ಓರ್ವ ಮುಸ್ಲಿಂ ವ್ಯಕ್ತಿಯನ್ನು ಥಳಿಸಿದ್ದೆವು ಆಗ ತಮಗೆ ಸಂತೋಷವಾಗಿತ್ತುʼ ಎಂದು ಸಾವರ್ಕರ್ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿರುವುದಾಗಿ ರಾಹುಲ್ ಗಾಂಧಿ ಸಭೆಗೆ ತಿಳಿಸಿದ್ದರು. ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿಗಿಲ್ಲ ಅಡ್ಡಿ – ಮಧ್ಯಂತರ ಆದೇಶ ತೆರವುಗೊಳಿಸಿದ ಹೈಕೋರ್ಟ್

    2019ರ ಲೋಕಸಭಾ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ (Kolara) ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಓರ್ವ ಕಳ್ಳ ಎಂದು ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ್ದ ಸೂರ್‌ ಜಿಲ್ಲಾ ನ್ಯಾಯಾಲಯ ರಾಹುಲ್‌ ಗಾಂಧಿ ಅವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿತು. 2 ವರ್ಷ ಶಿಕ್ಷೆಗೆ ಗುರಿಯಾದ ಬೆನ್ನಲ್ಲೇ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಯಿತು.

  • ಬೆರಕೆ ಅಂದ್ರೆ ಏನು? ಆ ಸಿ.ಟಿ ರವಿಗೆ ಸದ್ಬುದ್ಧಿ ಇಲ್ಲ – ಸಿದ್ದರಾಮಯ್ಯ

    ಬೆರಕೆ ಅಂದ್ರೆ ಏನು? ಆ ಸಿ.ಟಿ ರವಿಗೆ ಸದ್ಬುದ್ಧಿ ಇಲ್ಲ – ಸಿದ್ದರಾಮಯ್ಯ

    ಬಾಗಲಕೋಟೆ: ಬೆರಕೆ ಅಂದ್ರೆ ಏನು? ಬೆರಕೆ ಅಂದ್ರೆ ಏನೂ ಅಂತಾನೆ ನನಗೆ ಗೊತ್ತಿಲ್ಲ. ಆ ಸಿ.ಟಿ ರವಿಗೆ (CT Ravi) ಕಲ್ಚರ್ ಇಲ್ಲ, ಸದ್ಬುದ್ಧಿ ಇಲ್ಲ, ಇರೋದೆಲ್ಲಾ ಬರೀ ಗೂಂಡಾ ಸಂಸ್ಕೃತಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹರಿಹಾಯ್ದಿದ್ದಾರೆ.

    `ಸಿದ್ದರಾಮಯ್ಯ ಒಬ್ಬ ಬೆರಕೆ ರಾಜಕಾರಣಿ, ಒಬ್ಬ ಮತಾಂಧ’ ಎಂಬ ಸಿ.ಟಿ ರವಿ ಹೇಳಿಕೆ ವಿಚಾರವಾಗಿ ಜಮಖಂಡಿ ತಾಲೂಕಿನ ಖಾಜಿಬೀಳಗಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆರಕೆ ಅಂದ್ರೆ ಏನೂ ಅಂತಾನೇ ನನಗೆ ಗೊತ್ತಿಲ್ಲ. ಆ ಸಿ.ಟಿ ರವಿಗೆ ಕಲ್ಚರ್ ಇಲ್ಲ, ಗೂಂಡಾ ಸಂಸ್ಕೃತಿ ಇರೋದು ಅವನಿಗೆ. ಅವರೆಲ್ಲಾ ಮನುಷ್ಯತ್ವ ಇಲ್ಲದೇ ಇರೋರು, ಬಾಯಿಗೆ ಬಂದಂತೆ ಮಾತಾಡ್ತಾರೆ. ಸಿ.ಟಿ ರವಿಗೆ ಮನುಷ್ಯತ್ವ, ಸದ್ಬುದ್ಧಿ ಯಾವುದೂ ಇಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನು ಓದಿ: ಡಿ. 26ರಿಂದ ‘ರಂಗಪಯಣ’ ತಂಡದಿಂದ ನಟ ಶಂಕರ್ ನಾಗ್ ಹೆಸರಿನಲ್ಲಿ ನಾಟಕೋತ್ಸವ

    ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೊ ಅನಾವರಣ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಾವರ್ಕರ್ (VD Savarkar) ಬಗ್ಗೆ ನಾನೇನು ಮಾತನಾಡಿಲ್ಲ. ಮಾತನಾಡೋದಕ್ಕೂ ಹೋಗಲ್ಲ. ನ್ಯಾಷನಲ್ ಲೀಡರ್ಸ್ ವಲ್ಲಭಭಾಯಿ ಫೋಟೊ ಹಾಕಿದ್ದಾರೆ. ಅಂದ್ಮೇಲೆ ನೆಹರೂ ಫೋಟೊ ಹಾಕಬೇಕೋ, ಬೇಡವೋ? ಮಹಾತ್ಮಾ ಗಾಂಧೀಜಿ ಅವರದ್ದು ಹಾಕಿದ್ದಾರೆ. ನೆಹರೂ ಫೋಟೊ ಹಾಕ್ಬೇಕೋ. ಬೇಡ್ವೊ? ಅಂಬೇಡ್ಕರ್ ಅವರದ್ದು ಹಾಕಿದ್ದಾರೆ, ಜಗಜೀವನ್ ರಾಮ್ ಫೋಟೊ ಹಾಕ್ಬೇಕೋ, ಬೇಡ್ವೋ? ಬಸವಣ್ಣ, ವಾಲ್ಮೀಕಿ, ಕನಕದಾಸರು, ನಾರಾಯಣಗುರು, ಶಿಶುನಾಳ ಶರೀಫರೂ ಇದ್ದಾರೆ. ಕುವೆಂಪು ಇದ್ದಾರೆ ಎಲ್ಲ ದಾರ್ಶನಿಕರದ್ದೂ ಹಾಕಬೇಕಿತ್ತಲ್ವಾ? ದಾರ್ಶನಿಕರಿಂದ ಸಮಾಜಕ್ಕೆ ಒಳ್ಳೆಯದಾಗಬೇಕಲ್ವಾ? ಅಷ್ಟೇ ನಮ್ಮ ಡಿಮ್ಯಾಂಡ್ ಎಂದು ಹೇಳಿದ್ದಾರೆ. ಇದನ್ನು ಓದಿ: ವಿದೇಶಾಂಗ ಸಚಿವ ಜೈಶಂಕರ್ ಪುತ್ರನಿಗೆ ಚೀನಾ ಫಂಡಿಂಗ್ ಲಿಂಕ್ – ಕಾಂಗ್ರೆಸ್ ಗಂಭೀರ ಆರೋಪ

    `ಅಭ್ಯರ್ಥಿ ಘೋಷಣೆ ಮಾಡೋರ ವಿರುದ್ಧ ಶಿಸ್ತು ಕ್ರಮ ಕೈಗೊಳ್ತೀವಿ’ ಎಂಬ ಜಿ.ಪರಮೇಶ್ವರ ಹೇಳಿಕೆ ವಿಚಾರಕ್ಕೆ, ಅಭ್ಯರ್ಥಿಯನ್ನ ಘೋಷಣೆ ಮಾಡಲು ಪಕ್ಷದಲ್ಲಿ ಒಂದು ಪ್ರಕ್ರಿಯೆ ಇದೆ. ಅದರ ಪ್ರಕಾರವೇ ಮಾಡಬೇಕು. ನಾನು ಯಾವ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಅವರಿಗೆ ಆಶೀರ್ವಾದ ಮಾಡಿ ಎಂದು ಹೇಳಿದ್ದೇನೆ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಗೆ ತೀವ್ರ ವಿರೋಧ

    ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಗೆ ತೀವ್ರ ವಿರೋಧ

    ತುಮಕೂರು: ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ವಿ.ಡಿ ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಅಧ್ಯಯನ ಪೀಠ ಸ್ಥಾಪಿಸದಂತೆ ವಿವಿಧ ಸಂಘಟನೆಗಳ ಮುಖಂಡರು ವಿವಿ ಕುಲಪತಿಗೆ ಮನವಿ ಸಲ್ಲಿಸಿದ್ದಾರೆ.

    ಸಾವರ್ಕರ್ ಅಭಿಮಾನಿಗಳು ಬೇಕಿದ್ರೆ ಅವರ ಫೋಟೋವನ್ನು ಅವರವರ ಮನೆಯಲ್ಲಿ ಹಾಕಿಕೊಳ್ಳಲಿ,  ಅದರ ಹೊರತಾಗಿ ವಿವಿಯಲ್ಲಿ ಪೀಠ ಸ್ಥಾಪನೆ ಮಾಡುವುದು ಬೇಡ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಗೆ ಮುಂದಾದ ತುಮಕೂರು ವಿವಿ

    ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಸಾವರ್ಕರ್ ಪೀಠ ಮಾಡುತ್ತೇವೆ ಎಂದು ವಿಶ್ವವಿದ್ಯಾನಿಲಯವನ್ನು ರಾಜಕಾರಣದ ಕೇಂದ್ರ ಮಾಡಲು ಹೊರಟಿರುವ ವಿವಿಯ ನಡೆ ನಿಜಕ್ಕೂ ನಾಚಿಕೆ ತರುವಂತದ್ದು. ವಿವಿಯಲ್ಲಿ ಈಗಾಗಲೇ 16 ಅಧ್ಯಯನ ಪೀಠಗಳಿವೆ. ಅವುಗಳನ್ನೇ ನಡೆಸಲು ಅನುದಾನ ಇಲ್ಲ, ಪೀಠೋಪಕರಣಗಳಿಲ್ಲ, ಇನ್ನೂ ಹೊಸ ಕ್ಯಾಂಪಸ್ ಕಟ್ಟಲು ಆಗಿಲಗಲ. ಇಂತಹ ಸಂಧರ್ಭದಲ್ಲಿ ರಾಜಕೀಯ ತೇವಲಿಗೆ ಪೀಠ ಮಾಡುತ್ತಿರುವುದು ವಿಶ್ವವಿದ್ಯಾನಿಲಯದ ಬೌದ್ಧಿಕ ದಾರಿದ್ರ್ಯ, ಹಾಗಾಗಿ ಪೀಠ ಸ್ಥಾಪನೆ ಪೀಠ ಸ್ಥಾಪನೆ ಮಾಡುವುದು ಬೇಡವೆಂದು ಪ್ರಗತಿಪರ ಚಿಂತಕರು ಆಗ್ರಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗಣೇಶ ಮೂರ್ತಿಯೊಂದಿಗೆ ಸಾವರ್ಕರ್ ಫೋಟೋವನ್ನೂ ಇಡ್ತೀವಿ – ಚಕ್ರವರ್ತಿ ಸೂಲಿಬೆಲೆ

    ಗಣೇಶ ಮೂರ್ತಿಯೊಂದಿಗೆ ಸಾವರ್ಕರ್ ಫೋಟೋವನ್ನೂ ಇಡ್ತೀವಿ – ಚಕ್ರವರ್ತಿ ಸೂಲಿಬೆಲೆ

    • ಜಾಗೃತಿಗಾಗಿ ಸಾವರ್ಕರ್ ಕೃತಿ ಹಂಚಿಕೆ – ಯುವಕರಿಗೆ ಕಾರ್ಯಾಗಾರ

    ವಿಜಯಪುರ: ಗಣೇಶ ಹಬ್ಬದಂದು ಗಣೇಶ ಮೂರ್ತಿಯೊಂದಿಗೆ ಸಾವರ್ಕರ್ ಫೋಟೋವನ್ನೂ ಇಡಲು ವಿಚಾರ ಮಾಡಲಾಗಿದೆ ಎಂದು ಯುವ ಬ್ರಿಗೆಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

    ಪಟ್ಟಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರ ಸಾವರ್ಕರ್ ಅವರಂಥ ರಾಷ್ಟ್ರ ನಾಯಕರನ್ನು ಯಾರೇ ಅವಮಾನ ಮಾಡಿದ್ರೂ ಸಹಿಸಿಕೊಳ್ಳುವ ಮಾತೇ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಪ್ರಧಾನಿಗೆ ಕ್ಷಮಾಪಣೆ ಪತ್ರ ನೀಡಿದ್ರೆ ಗುತ್ತಿಗೆದಾರರ ವಿರುದ್ಧದ ಮಾನನಷ್ಟ ಮೊಕದ್ದಮೆ ವಾಪಸ್ – ಮುನಿರತ್ನ

    ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಾವರ್ಕರ್ ಫೋಟೊವನ್ನು ಮುಸ್ಲಿಂ ಏರಿಯಾದಲ್ಲಿ ಹಾಕಬಾರದು, ಅವರ ಫೋಟೊವನ್ನು ಹಾಕಲೇಬಾರದು ಎಂಬ ಚಿಂತನೆಯನ್ನು ಹೊತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ಈ ಬಾರಿ ಗಣೇಶ ಪೆಂಡಾಲ್‌ಗಳಲ್ಲಿ ಸಾವರ್ಕರ್ ಫೋಟೊ ಹಾಕಬೇಕು ಎಂದು ಗಜಾನನ, ಹಿಂದೂಪರ ಸಂಘಟನೆಗಳು ಹಾಗೂ ರಾಷ್ಟ್ರಭಕ್ತರು ಆಲೋಚನೆ ಮಾಡಿದ್ದೇವೆ. ಅದಕ್ಕೆ ಪೂರಕವಾಗಿ ಇಂದು ವಿಜಯಪುರದಲ್ಲಿ ಬೈಠಕ್ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬ್ಯಾಡ್ ಕಾಮೆಂಟ್ ಮಾಡಿದವನಿಗೆ ಮುಟ್ಟಿ ನೋಡಿಕೊಳ್ಳುವಂತೆ ಖಡಕ್ ಉತ್ತರ ಕೊಟ್ಟ ಅನಸೂಯ

    ಗಣೇಶನನ್ನು ಕೂರಿಸುವಾಗ ಸಾವರ್ಕರ್ ಫೋಟೊ ಅನ್ನು ಇಡುವ ವಿಚಾರ ಮಾಡಲಾಗಿದೆ. ಇದಕ್ಕೆ ಪೂರಕವಾಗಿ ಪುಸ್ತಕವನ್ನು ತರಲಾಗಿದೆ. ಅದನ್ನು ಕಡಿಮೆ ಬೆಲೆಗೆ ಪ್ರತಿಯೊಬ್ಬರಿಗೂ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ. ಅಲ್ಲದೇ ಸಾವರ್ಕರ್ ಕುರಿತು ಯುವಕರಿಗೆ ಕಾರ್ಯಾಗಾರ ಮಾಡಲಾಗುತ್ತಿದೆ. ರಾಷ್ಟ್ರ ಪುರುಷರ ಬಗ್ಗೆ ಯಾರಾದ್ರೂ ಕೇವಲವಾಗಿ ಮಾತನಾಡಿದ್ರೆ ಅವರಿಗೆ ಪ್ರತಿಕ್ರಿಯೆ ಕೊಡಲು ಈ ಪ್ರಯತ್ನ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

    12 ವರ್ಷಗಳ ಕಾಲ ಕಾಲಾಪಾನಿ ಅಂತಹ ಜೈಲಿನಲ್ಲಿರುವಾಗ ಬೇರೆ ಅವಕಾಶಗಳೇ ಇರಲಿಲ್ಲ. ಆ ಸಂದರ್ಭದಲ್ಲಿ ಭಾರತದ ಕುರಿತು ಅವರು ತಮ್ಮದೇ ಶೈಲಿಯಲ್ಲಿ ತಮ್ಮದೇ ಕೃತಿಯಲ್ಲಿ ವರ್ಣಿಸಿದ್ದರು. ಅದನ್ನೇ ಪುಸ್ತಕದಲ್ಲಿ ತಿಳಿಸಲಾಗಿದೆ. ಅದನ್ನು ಅರ್ಥ ಮಾಡಿಕೊಳ್ಳುವ ವಿಶಾಲ ಮನಸ್ಸು ಎಲ್ಲರಿಗೂ ಇದೆ ಎಂದು ಟೀಕಾಕಾರರಿಗೆ ಕುಟುಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಾವರ್ಕರ್, ಗೃಹ ಸಚಿವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿದ ಕಾಂಗ್ರೆಸ್

    ಸಾವರ್ಕರ್, ಗೃಹ ಸಚಿವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿದ ಕಾಂಗ್ರೆಸ್

    ಧಾರವಾಡ: ವಿ.ಡಿ ಸಾವರ್ಕರ್ ಅವರ ಭಾವಚಿತ್ರದ ವಿವಾದ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಿರುವಾಗಲೇ ಧಾರವಾಡದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿ.ಡಿ ಸಾವರ್ಕರ್ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅಪಮಾನ ಮಾಡಿದ್ದಾರೆ.

    ಪ್ರತಿಭಟನೆ ನೆಪದಲ್ಲಿ ಸಾವರ್ಕರ್ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ, ಮೊಟ್ಟೆ ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಾವರ್ಕರ್ ಅವರ ಭಾವಚಿತ್ರವನ್ನು ಬೂಟುಗಾಲಿನಿಂದ ತುಳಿದು ಅಪಮಾನ ಮಾಡಿ, ಧಿಕ್ಕಾರ ಕೂಗಿದ್ದಾರೆ. ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ ಕರ್ತವ್ಯ ಲೋಪ ಆರೋಪ – 1,500 ಪುಟಗಳ ದಾಖಲೆ ಸಲ್ಲಿಸಿದ ಸಾ.ರಾ.ಮಹೇಶ್

    ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಿನ್ನೆ ಕೊಡಗಿನ ಮಳೆಹಾನಿ ಪ್ರದೇಶಗಳ ಭೇಟಿಗೆ ತೆರಳಿದ್ದ ಸಂದರ್ಭದಲ್ಲಿ ಹಿಂದೂಪರ ಸಂಘಟನೆ ಹಾಗೂ ಬಿಜೆಪಿ ಕಾರ್ಯಕರ್ತರು ಅವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದರು. ಇದಕ್ಕೆ ಸಂಬಂಧಿಸಿದಂತೆ 9 ಮಂದಿಯನ್ನು ಬಂಧಿಸಿ, ರಾತ್ರಿಯೇ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಘಟನೆ ಸಂಬಂಧ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಆಕ್ರೋಶ ಮುಂದುವರಿಸಿದ್ದು, ಬಿಜೆಪಿ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

    ಧಾರವಾಡ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಬಂದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಪ್ರತಿಕೃತಿಯನ್ನೂ ದಹಿಸಿದರು. ಈ ವೇಳೆ ವೀರ ಸಾವರ್ಕರ್ ಅವರ ಭಾವಚಿತ್ರವನ್ನೂ ಸುಟ್ಟು, ಅದರ ಮೇಲೆ ಮೊಟ್ಟೆ ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಗಾಂಧಿ ಭಾವಚಿತ್ರಕ್ಕೆ ಹಾನಿ – ರಾಹುಲ್‌ ಗಾಂಧಿ ಕಚೇರಿ ಸಿಬ್ಬಂದಿ ಸೇರಿ 4 ಮಂದಿ ಅರೆಸ್ಟ್‌

    ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಐಸಿಸಿ ಸದಸ್ಯ ದೀಪಕ ಚಿಂಚೋರೆ, ಸಾವರ್ಕರ್ ಭಾವ ಚಿತ್ರ ಸುಟ್ಟಿದ್ದು ನಾನು ನೋಡಿಲ್ಲ ಎಂದಿದ್ದಾರೆ. ಅಲ್ಲದೇ ನಮ್ಮ ಕಾರ್ಯಕರ್ತರು ಅದನ್ನು ಮಾಡಿಲ್ಲ, ಬಿಜೆಪಿ ಕಾರ್ಯಕರ್ತರೇ ಅದನ್ನ ಮಾಡಿರಬೇಕು, ಅಂತಹ ಸಂಸ್ಕೃತಿ ನಮ್ಮದಲ್ಲ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ

    ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ

    ಮಡಿಕೇರಿ: ಕೊಡಗು ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. `ಕೊಡಗಿನ ವಿರೋಧಿ, ಕೊಡವರ ವಿರೋಧಿ ಸಿದ್ದರಾಮಯ್ಯ’ ಎಂಬಿತ್ಯಾದಿ ಘೋಷಣೆಗಳ ಮೂಲಕ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಇಲ್ಲಿನ ತಿಮ್ಮಯ್ಯ ವೃತ್ತದಲ್ಲಿ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು ಮುಖಾಮುಖಿಯಾಗಿದ್ದು ವಾತಾವರಣ ಉದ್ವಿಗ್ನಗೊಂಡಿದೆ. ಇದೇ ವೇಳೇ ಹಿಂದೂಪರ ಸಂಘಟನೆ ಕಾರ್ಯಕರ್ತರು ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ಸಿದ್ದರಾಮಯ್ಯಗೆ ಘೇರಾವ್ – `ಗೋ ಬ್ಯಾಕ್ ಸಿದ್ದುಖಾನ್’ ಎಂದು ಆಕ್ರೋಶ

    ಸಿದ್ದರಾಮಯ್ಯ ಶಾಂತಿ ಪ್ರಿಯ ಕೊಡಗಿಗೆ ಬರೋದು ಬೇಡ, ಶಾಂತಿಪ್ರಿಯ ನಾಡಿನಲ್ಲಿ ಕೋಮುಗಲಭೆ ಬೆಳೆಸಿದ್ದಾರೆ. ಕೊಡವರು ದನದ ಮಾಂಸ ತಿನ್ನುತ್ತಾರೆ ಎಂದು ಹೇಳಿದ್ದಾರೆ. 7 ವರ್ಷಗಳ ಹಿಂದೆ ಟಿಪ್ಪು ಜಯಂತಿಯನ್ನು ಬಲವಂತವಾಗಿ ಆಚರಿಸಿದ್ದರು. ಇದರಿಂದ ಜಿಲ್ಲೆಯಲ್ಲಿ ಎರಡು ಜನರ ಪ್ರಾಣ ಹೋದವು. ಅಂತಹವರು ಕೊಡಗಿಗೆ ಬರೋದು ಬೇಡ ಎಂದು ಬಿಜೆಪಿ ನಗರ ಘಟಕದ ಉಪಾಧ್ಯಕ್ಷ ಜಗದೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಬೆಳಿಗ್ಗೆ ಕೊಡಗು ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದ ವೇಳೆ ಇಲ್ಲಿನ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಘೇರಾವ್ ಮಾಡಿಕೊಂಡಿದ್ದಾರೆ.

    ಕೊಡಗಿನ ಗಡಿ ಭಾಗದ ಪೋನ್ನಂಪೇಟೆ ತಾಲೂಕಿನ ತಿತಿಮತಿಯಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ ನೇತೃತ್ವದಲ್ಲಿ ನೂರಾರು ಸಂಖ್ಯೆಯ ಕಾರ್ಯಕರ್ತರು ಪ್ರತಿಭಟಿಸಿದ್ದರು. ಇದನ್ನೂ ಓದಿ: ಸುಳ್ಳು ಮತ್ತು ದೇಶದ್ರೋಹ ಸುದ್ದಿಗಳ ಪ್ರಕಟ – 8 ಯೂಟ್ಯೂಬ್ ಚಾನಲ್‍ಗಳು ನಿಷೇಧ

    ಸಿದ್ದರಾಮಯ್ಯ ಅವರಿದ್ದ ಕಾರನ್ನು ಅಡ್ಡಗಟ್ಟಿ ಸಾವರ್ಕರ್ ಭಾವಚಿತ್ರವನ್ನು ಕಾರಿನೊಳಕ್ಕೆ ಹಾಕಿದಲ್ಲದೇ ಕಪ್ಪು ಬಾವುಟ ಪ್ರದರ್ಶಿಸಿ `ಗೋ ಬ್ಯಾಕ್ ಸಿದ್ದುಖಾನ್, ಗೋ ಬ್ಯಾಕ್ ಸಿದ್ದರಾಮಯ್ಯ’ ಘೋಷಣೆ ಕೂಗಿದ್ದರು.

    ರಾಜ್ಯದಲ್ಲಿ ಮತಾಂಧ ಟಿಪ್ಪುವಿನ ಜಯಂತಿ ಆಚರಣೆ ಜಾರಿಗೆ ತಂದು ಅಮಾಯಕರ ಕೊಲೆಗೆ ಕಾರಣರಾದ ಟಿಪ್ಪು ಭಕ್ತ ಸಿದ್ದರಾಮಯ್ಯ ಕೊಡಗಿಗೆ ಕಾಲಿಡುವುದರಿಂದ ಮತ್ತೆ ಕೊಡಗಿನ ಶಾಂತಿ ಭಂಗವಾಗಲಿದೆ. ಅಷ್ಟೇ ಅಲ್ಲದೇ ಕೊಡವರನ್ನು ಗೋಮಾಂಸ ಭಕ್ಷಕರೆಂದು ಬಿಂಬಿಸಿದ್ದಾರೆ. ಹಿಂದೂ ವಿರೋಧಿ ಸಿದ್ದರಾಮಯ್ಯ ಕೊಡಗಿಗೆ ಕಾಲಿಡಲು ಅಯೋಗ್ಯರಾಗಿದ್ದಾರೆ ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ ಆಕ್ರೋಶ ವ್ಯಕ್ತಪಡಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕೊಡಗಿನಲ್ಲಿ ಸಿದ್ದರಾಮಯ್ಯಗೆ ಘೇರಾವ್ – `ಗೋ ಬ್ಯಾಕ್ ಸಿದ್ದುಖಾನ್’ ಎಂದು ಆಕ್ರೋಶ

    ಕೊಡಗಿನಲ್ಲಿ ಸಿದ್ದರಾಮಯ್ಯಗೆ ಘೇರಾವ್ – `ಗೋ ಬ್ಯಾಕ್ ಸಿದ್ದುಖಾನ್’ ಎಂದು ಆಕ್ರೋಶ

    ಮಡಿಕೇರಿ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಕೊಡಗು ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದ ವೇಳೆ ಇಲ್ಲಿನ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಘೇರಾವ್ ಕೂಗಿದ್ದಾರೆ

    ಕೊಡಗಿನ ಗಡಿ ಭಾಗದ ಪೋನ್ನಂಪೇಟೆ ತಾಲೂಕಿನ ತಿತಿಮತಿಯಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ ನೇತೃತ್ವದಲ್ಲಿ ನೂರಾರು ಸಂಖ್ಯೆಯ ಕಾರ್ಯಕರ್ತರು ಪ್ರತಿಭಟಿಸಿದರು.

    ಸಿದ್ದರಾಮಯ್ಯ ಅವರಿದ್ದ ಕಾರನ್ನು ಅಡ್ಡಗಟ್ಟಿ ಸಾವರ್ಕರ್ ಭಾವಚಿತ್ರವನ್ನು ಕಾರಿನೊಳಕ್ಕೆ ಹಾಕಿದಲ್ಲದೇ ಕಪ್ಪು ಬಾವುಟ ಪ್ರದರ್ಶಿಸಿ `ಗೋ ಬ್ಯಾಕ್ ಸಿದ್ದುಖಾನ್, ಗೋ ಬ್ಯಾಕ್ ಸಿದ್ದರಾಮಯ್ಯ’ ಘೋಷಣೆ ಕೂಗಿದರು. ಇದನ್ನೂ ಓದಿ: Exclusive: ಮುಖಕ್ಕೆ ಮಾಸ್ಕ್ ಧರಿಸಿ ಕಲ್ಲು ಹೊಡೆಯಿರಿ – ಶಿವಮೊಗ್ಗ ಗಲಾಟೆಯ ಪ್ಲ್ಯಾನ್ ವೀಡಿಯೋ ಔಟ್

    ರಾಜ್ಯದಲ್ಲಿ ಮತಾಂಧ ಟಿಪ್ಪುವಿನ ಜಯಂತಿ ಆಚರಣೆ ಜಾರಿಗೆ ತಂದು ಅಮಾಯಕರ ಕೊಲೆಗೆ ಕಾರಣರಾದ ಟಿಪ್ಪು ಭಕ್ತ ಸಿದ್ದರಾಮಯ್ಯ ಕೊಡಗಿಗೆ ಕಾಲಿಡುವುದರಿಂದ ಮತ್ತೆ ಕೊಡಗಿನ ಶಾಂತಿ ಭಂಗವಾಗಲಿದೆ. ಅಷ್ಟೇ ಅಲ್ಲದೇ ಕೊಡವರನ್ನು ಗೋಮಾಂಸ ಭಕ್ಷಕರೆಂದು ಬಿಂಬಿಸಿದ್ದಾರೆ. ಹಿಂದೂ ವಿರೋಧಿ ಸಿದ್ದರಾಮಯ್ಯ ಕೊಡಗಿಗೆ ಕಾಲಿಡಲು ಅಯೋಗ್ಯರಾಗಿದ್ದಾರೆ ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಆರ್ಡರ್ ಮಾಡಿದ್ದ ಆಹಾರದಲ್ಲಿ ಹುಳಗಳು – ರೆಸ್ಟೋರೆಂಟ್ ವಿರುದ್ಧ ಮಹಿಳೆ ದೂರು

    ಈ ಸಂದರ್ಭ ಪೋಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿ ಸಿದ್ದರಾಮಯ್ಯರ ವಾಹನ ಮುಂದೆ ಚಲಿಸಲು ಅನುವುಮಾಡಿಕೊಟ್ಟರು.

    Live Tv
    [brid partner=56869869 player=32851 video=960834 autoplay=true]

  • SDPI ನವರು ಪಾಕಿಸ್ತಾನಕ್ಕೆ ಹೋಗಲಿ – ಶಾಸಕ ಬೋಪಯ್ಯ ಕಿಡಿ

    SDPI ನವರು ಪಾಕಿಸ್ತಾನಕ್ಕೆ ಹೋಗಲಿ – ಶಾಸಕ ಬೋಪಯ್ಯ ಕಿಡಿ

    ಮಡಿಕೇರಿ: ಹಿಂದೂ ನೆಲದ ಸಂಸ್ಕೃತಿಗೆ ಬೆಲೆ ಕೊಡದೇ ಇದ್ದರೇ SDPI ನವರು ಪಾಕಿಸ್ತಾನಕ್ಕೆ ಹೋಗಲಿ ಎಂದು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಕಿಡಿ ಕಾರಿದ್ದಾರೆ.

    ಶಿವಮೊಗ್ಗದಲ್ಲಿ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇಂತಹ ಕೃತ್ಯ ಮಾಡುವವರಿಗೆ ದೇಶದ್ರೋಹ ಅಥವಾ ಗೂಂಡಾ ಕಾಯ್ದೆ ಅಡಿಯಲ್ಲಿ ಶಿಕ್ಷೆ ವಿಧಿಸಬೇಕು. ಇಲ್ಲದೇ ಇದ್ದರೆ ಅಂತಹವರನ್ನು ಮಟ್ಟ ಹಾಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಪಾಶಾ ಬಸು ಪ್ರೆಗ್ನೆಂಟ್, ಸೋಷಿಯಲ್ ಮೀಡಿಯಾದಲ್ಲಿ ಗುಡ್ ನ್ಯೂಸ್ ಹಂಚಿಕೊಂಡ ನಟಿ

    1947ರಲ್ಲಿ ದೇಶ ವಿಭಜನೆ ಮಾಡುವಾಗ ಹಿಂದೂಗಳಿಗೆ ಹಿಂದೂಸ್ಥಾನ, ಮುಸ್ಲಿಮರಿಗೆ ಪಾಕಿಸ್ತಾನ ನೀಡಿಲ್ಲವೇ? ಸಾವರ್ಕರ್ ಫೋಟೊ ತೆಗೆಯುವುದಕ್ಕೆ ಎಸ್‌ಡಿಪಿಐ ನವರು ಯಾರು? ಟಿಪ್ಪು ಸ್ವಾತಂತ್ರ‍್ಯ ಹೋರಾಟಗಾರ ಅಲ್ಲ ಒಬ್ಬ ರಾಜ ಅಷ್ಟೇ. ಎಂದು ನ್ಯಾಯಾಲಯವೇ ಹೇಳಿದೆ. ಆದರೆ ಸಾವರ್ಕರ್ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಅಂಡಮಾನ್ ಜೈಲಿನಲ್ಲಿದ್ದರು. ಬ್ರಿಟಿಷರಿಂದ ಕಠಿಣ ಶಿಕ್ಷೆ ಅನುಭವಿಸಿದ್ದರು. ಅವರ ಫೋಟೋವನ್ನು ತೆರವು ಮಾಡಿದ್ದು ತಪ್ಪು ಎಂದು ಹೇಳಿದ್ದಾರೆ. ಇದನ್ನೂ ಓದಿ: ಜಿಯೋ ಬಿಡುಗಡೆ ಮಾಡಲಿದೆ ಕಡಿಮೆ ಬೆಲೆಯ 5G ಫೋನ್‌ – ಬೆಲೆ ಎಷ್ಟು? ಗುಣ ವೈಶಿಷ್ಟ್ಯಗಳು ಏನು?

    ಈ ದೇಶದ ಸಂಸ್ಕೃತಿಗೆ ಬೆಲೆ ಕೊಡದೇ ಇದ್ದವರು ಇಲ್ಲಿಂದ ಪಾಕಿಸ್ತಾನಕ್ಕೆ ಹೋಗಬಹುದು. ಗೃಹ ಇಲಾಖೆಯೂ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬೋಪಯ್ಯ ಮನವಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಾವರ್ಕರ್‌ನಂತೆ ಜೈಲಿನಿಂದ ಬಿಡುಗಡೆಗೊಳ್ಳಲು ಬ್ರಿಟಿಷರ ಕಾಲು ಹಿಡಿದು ಕ್ಷಮೆ ಕೋರಿದ ಹೇಡಿ ಅಲ್ಲ ನೆಹರು: ಸಿದ್ದರಾಮಯ್ಯ

    ಸಾವರ್ಕರ್‌ನಂತೆ ಜೈಲಿನಿಂದ ಬಿಡುಗಡೆಗೊಳ್ಳಲು ಬ್ರಿಟಿಷರ ಕಾಲು ಹಿಡಿದು ಕ್ಷಮೆ ಕೋರಿದ ಹೇಡಿ ಅಲ್ಲ ನೆಹರು: ಸಿದ್ದರಾಮಯ್ಯ

    ಬೆಂಗಳೂರು: ರಾಜ್ಯ ಸರ್ಕಾರದ ಇಂದಿನ ಜಾಹೀರಾತಿನ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಹೆಸರನ್ನು ಕೈಬಿಡುವಷ್ಟು ಕೀಳು ಮಟ್ಟಕ್ಕೆ ನೀವು ಇಳಿಯಬಾರದಿತ್ತು. ಅವರು ನಿಮ್ಮ ವಿ.ಡಿ.ಸಾವರ್ಕರ್ ಅವರಂತೆ ಜೈಲಿನಿಂದ ಬಿಡುಗಡೆಗೊಳ್ಳಲು ಬ್ರಿಟಿಷರ ಕಾಲು ಹಿಡಿದು ಕ್ಷಮೆ ಕೋರಿದ ಹೇಡಿ ಅಲ್ಲ ಎಂದು ಸರಣಿ ಟ್ವೀಟ್ ಮೂಲಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಟ್ವೀಟ್‌ನಲ್ಲಿ ಏನಿದೆ?
    ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ರಾಜ್ಯ ಸರ್ಕಾರದ ಇಂದಿನ ಜಾಹೀರಾತಿನ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಹೆಸರನ್ನು ಕೈಬಿಡುವಷ್ಟು ಕೀಳು ಮಟ್ಟಕ್ಕೆ ನೀವು ಇಳಿಯಬಾರದಿತ್ತು, ಕುರ್ಚಿ ಉಳಿಸಲು ಈ ಪರಿಯ ಗುಲಾಮಗಿರಿಯೇ? ಬೊಮ್ಮಾಯಿ ಅವರೇ ಪಂಡಿತ್ ಜವಾಹರಲಾಲ್ ನೆಹರು ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ತಮ್ಮ ಬದುಕಿನ 9 ವರ್ಷಗಳನ್ನು ಜೈಲಿನಲ್ಲಿ ಕಳೆದವರು ಎನ್ನುವುದು ನೆನಪಿರಲಿ. ಅವರು ನಿಮ್ಮ ವಿ.ಡಿ.ಸಾವರ್ಕರ್ ಅವರಂತೆ ಜೈಲಿನಿಂದ ಬಿಡುಗಡೆಗೊಳ್ಳಲು ಬ್ರಿಟಿಷರ ಕಾಲು ಹಿಡಿದು ಕ್ಷಮೆ ಕೋರಿದ ಹೇಡಿ ಅಲ್ಲ. ಇದನ್ನೂ ಓದಿ: ಗಾಂಧೀಜಿ ಕಾಂಗ್ರೆಸ್ ಬೇರೆ, ಈಗಿನದು ಡುಪ್ಲಿಕೇಟ್ ಕಾಂಗ್ರೆಸ್: ಪ್ರಹ್ಲಾದ್‌ ಜೋಶಿ

    ಆರ್‌ಎಸ್‌ಎಸ್‌ ಕೋಮುರಾಜಕಾರಣವನ್ನು ವಿರೋಧಿಸಿದ್ದ, ಗಾಂಧಿ ಹತ್ಯೆಯ ನಂತರ ಅದನ್ನು ನಿಷೇಧಿಸಿದ್ದ ಮತ್ತು ತನ್ನ ಬದುಕನ್ನು ಜಾತ್ಯತೀತತೆ ಕಾಪಾಡಲು ಮುಡಿಪಾಗಿಟ್ಟಿದ್ದ ಜವಾಹರಲಾಲ್ ನೆಹರು ಅವರ ಬಗ್ಗೆ ಆರ್‌ಎಸ್‌ಎಸ್‌ ಅಲರ್ಜಿಯನ್ನು ಅರ್ಥಮಾಡಿಕೊಳ್ಳಬಹುದು, ನಿಮಗೇನಾಗಿದೆ ಬೊಮ್ಮಾಯಿ ಅವರೇ, ರಾಜ್ಯ ಸರ್ಕಾರದ ಜಾಹೀರಾತಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ನಮೂದಿಸಲು ನಿಮಗೆ ಸಿಕ್ಕ ಏಕೈಕ ವ್ಯಕ್ತಿ ಜೈಲಿನಿಂದ ಬಿಡುಗಡೆಗೊಳ್ಳಲು ಬ್ರಿಟಿಷರ ಕ್ಷಮೆ ಯಾಚಿಸಿದ್ದ ಹೇಡಿ ವಿ.ಡಿ.ಸಾವರ್ಕರ್ ಮಾತ್ರ ಎನ್ನುವುದು ನಿಮ್ಮ ಪರಿವಾರದ ಸ್ವಾತಂತ್ರ್ಯ ಹೋರಾಟದ ಸತ್ಯವನ್ನು ಬೆತ್ತಲೆ ಮಾಡಿದೆ. ಸ್ವಾತಂತ್ರ್ಯಹೋರಾಟದಲ್ಲಿ ಭಾಗಿಯಾಗಿ ಎರಡು ಬಾರಿ (1921 ಮತ್ತು 1931) ಜೈಲುಶಿಕ್ಷೆ ಅನುಭವಿಸಿದ್ದ ಆರ್‌ಎಸ್‌ಎಸ್‌ ಸಂಸ್ಥಾಪಕ ಕೆ.ಬಿ.ಹೆಡಗೆವಾರ್ ಅವರ ಚಿತ್ರವನ್ನು ಯಾಕೆ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಿಂದ ಕೈಬಿಟ್ಟಿದ್ದೀರಿ ಬೊಮ್ಮಾಯಿ ಅವರೇ? ಇದನ್ನೂ ಓದಿ: ಕಾಶ್ಮೀರದಲ್ಲಿ ಇನ್ನು ಭಾರತದ ಧ್ವಜ ಮಾತ್ರ ಹಾರುತ್ತದೆ, ಪಾಕ್ ಧ್ವಜ ಇತಿಹಾಸ ಮಾತ್ರ: ಮನೋಜ್ ಸಿನ್ಹಾ

    ತ್ರಿವರ್ಣ ಧ್ವಜವನ್ನು ತಿರಸ್ಕರಿಸಿದ್ದ ಅವರ ಬಂಡವಾಳ ಬಯಲಾಗಬಹುದೆಂಬ ಭಯವೇ? ಬ್ರಿಟಿಷರ ಕ್ಷಮೆ ಕೇಳಿ ಜೈಲಿನಿಂದ ಬಿಡುಗಡೆಗೊಂಡ ವಿ.ಡಿ.ಸಾವರ್ಕರ್ ಅವರಿಗೆ ಮೊದಲ ಸಾಲಿನ ಗೌರವ, ಸ್ವಾತಂತ್ರ್ಯ ಹೋರಾಟದ ಜೊತೆ ಬಹುಜನ ಸಮಾಜದ ಹಿತಾಸಕ್ತಿಯ ರಕ್ಷಣೆಗಾಗಿಯೂ ಹೋರಾಟ ನಡೆಸಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಕೊನೆಯ ಸಾಲಿನ ನಿರ್ಲಕ್ಷ್ಯ. ‘ಸುಪ್ತ ಅಸ್ಪೃಶ್ಯತೆಯ ನಗ್ನ ಪ್ರದರ್ಶನ’. ಜನರ ತೆರಿಗೆ ಹಣದಿಂದ ನೀಡಿರುವ ಜಾಹೀರಾತಿನಲ್ಲಿ ಧೀಮಂತ ಸ್ವಾತಂತ್ರ್ಯ ಹೋರಾಟಗಾರ ಪಂಡಿತ ಜವಾಹರಲಾಲ್ ನೆಹರು ಅವರಿಗೆ ಮಾಡಿರುವ ಅವಮಾನವನ್ನು ಸಹಿಸಲಾಗದು. ಈ ಅವಮಾನಕ್ಕಾಗಿ ಮೊದಲು ರಾಜ್ಯದ ಜನತೆಯ ಕ್ಷಮೆ ಕೇಳಿ ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ಚಾಟಿ ಬೀಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]