Tag: ವಿಸ್ತಾರ

  • ಏರ್ ಇಂಡಿಯಾದೊಂದಿಗೆ ವಿಸ್ತಾರ ವಿಲೀನ – ದೋಹಾದಿಂದ ಮುಂಬೈಗೆ ಮೊದಲ ವಿಮಾನ ಹಾರಾಟ

    ಏರ್ ಇಂಡಿಯಾದೊಂದಿಗೆ ವಿಸ್ತಾರ ವಿಲೀನ – ದೋಹಾದಿಂದ ಮುಂಬೈಗೆ ಮೊದಲ ವಿಮಾನ ಹಾರಾಟ

    ನವದೆಹಲಿ: ಏರ್ ಇಂಡಿಯಾ (Air India) ಹಾಗೂ ವಿಸ್ತಾರ (Vistara) ವಿಮಾನಯಾನ ಸಂಸ್ಥೆಗಳ ವಿಲೀನದ ಬಳಿಕ ಮೊದಲ ವಿಮಾನ ಹಾರಾಟಗೊಂಡಿದೆ.

    ಎ12286 ಕೋಡ್‌ನೊಂದಿಗೆ ಕಾರ್ಯನಿರ್ವಹಿಸುವ ವಿಮಾನವು ಸೋಮವಾರ ಸ್ಥಳೀಯ ಕಾಲಮಾನ ರಾತ್ರಿ 10:07ಕ್ಕೆ ಕತಾರ್‌ನ ದೋಹಾದಿಂದ ಮುಂಬೈಗೆ ಹೊರಟಿದ್ದು, ಮಂಗಳವಾರ ಬೆಳಿಗ್ಗೆ ಮುಂಬೈಗೆ ತಲುಪಲಿದೆ. ಟಾಟಾ ಗ್ರೂಪ್ಸ್‌ನ (TATA Groups) ಭಾಗವಾಗಿರುವ ಎರಡು ಸಂಸ್ಥೆಗಳು ವಿಲೀನಗೊಂಡಿದ್ದು, ವಿಲೀನವಾದ ಬಳಿಕ ಮೊದಲ ಅಂತರರಾಷ್ಟ್ರೀಯ ವಿಮಾನ ಹಾರಾಟಗೊಂಡಿದೆ. ಇನ್ನೂ ಭಾರತದಲ್ಲಿ ಮಂಗಳವಾರ ನಸುಕಿನ ಜಾವ 01:30 ಗಂಟೆಗೆ ಮುಂಬೈನಿಂದ (Mumbai) ದೆಹಲಿಗೆ (Delhi) ಮೊದಲ ವಿಮಾನ ಹಾರಾಟಗೊಂಡಿದೆ.ಇದನ್ನೂ ಓದಿ: ರೆಬೆಲ್ ಸ್ಟಾರ್ ಮನೆಯಲ್ಲಿ ಸಂಭ್ರಮ – ಮುದ್ದಾದ ಗಂಡು ಮಗುವಿಗೆ ಜನ್ಮ ಕೊಟ್ಟ ಅವಿವಾ

    ವಿಲೀನದ ನಂತರ ಏರ್ ಇಂಡಿಯಾ ನಿರ್ವಹಿಸುತ್ತಿರುವ ವಿಸ್ತಾರ ವಿಮಾನಗಳಿಗಾಗಿ ‘ಎ12ಎಕ್ಸ್ಎಕ್ಸ್ಎಕ್ಸ್’ ಕೋಡ್‌ನ್ನು ಬಳಸಲಾಗುತ್ತಿದೆ. ಇದು ಪ್ರಯಾಣಿಕರಿಗೆ ಬುಕ್ಕಿಂಗ್ ಸಮಯದಲ್ಲಿ ವಿಸ್ತಾರ ವಿಮಾನವನ್ನು ಗುರುತಿಸಲು ಸಹಾಯ ಮಾಡುತ್ತದೆ.

    ಟಾಟಾ ಗ್ರೂಪ್‌ನ ಭಾಗವಾಗಿರುವ ಎರಡೂ ವಿಮಾಯಾನ ಸಂಸ್ಥೆಗಳ ವಿಲೀನವು ದೇಶದ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಪ್ರಮುಖ ಬಲವರ್ಧನೆಯನ್ನು ಸೂಚಿಸುತ್ತದೆ. ವಿಸ್ತಾರ ಇದು ಟಾಟಾಸ್ ಮತ್ತು ಸಿಂಗಾಪುರ್ ಏರಲೈನ್ಸ್ ನಡುವಿನ ಜಂಟಿ ಉದ್ಯಮವಾಗಿದ್ದು, ವಿಸ್ತಾರ ವಿಲೀನಗೊಂಡ ಬಳಿಕ ಸಿಂಗಾಪುರ್ ಏರಲೈನ್ಸ್ (Singapore Airlines) ಏರ್ ಇಂಡಿಯಾದ 25.1 ಶೇಕಡಾ ಪಾಲನ್ನು ಪಡೆಯುತ್ತದೆ.ಇದನ್ನೂ ಓದಿ: ಪಿಜಿ ಆಯುಷ್‌ ತಾತ್ಕಾಲಿಕ ಫಲಿತಾಂಶ ಪ್ರಕಟ – ಕೆಇಎ

  • ವಿಮಾನದಲ್ಲಿ ಕುಳಿತು ಫೋನ್‌ನಲ್ಲಿ ‘ಬಾಂಬ್’ ಕುರಿತು ಸಂಭಾಷಣೆ – ದೆಹಲಿ ಏರ್‌ಪೋರ್ಟ್‌ನಲ್ಲಿ ವ್ಯಕ್ತಿ ಅರೆಸ್ಟ್

    ವಿಮಾನದಲ್ಲಿ ಕುಳಿತು ಫೋನ್‌ನಲ್ಲಿ ‘ಬಾಂಬ್’ ಕುರಿತು ಸಂಭಾಷಣೆ – ದೆಹಲಿ ಏರ್‌ಪೋರ್ಟ್‌ನಲ್ಲಿ ವ್ಯಕ್ತಿ ಅರೆಸ್ಟ್

    ನವದೆಹಲಿ: ವಿಮಾನದಲ್ಲಿ (Flight) ವ್ಯಕ್ತಿಯೊಬ್ಬ ಫೋನ್‌ನಲ್ಲಿ ಬಾಂಬ್ (Bomb) ಕುರಿತು ಸಂಭಾಷಣೆ ಮಾಡಿದ್ದಕ್ಕೆ ಆತನನ್ನು ಬಂಧಿಸಿರುವ ಘಟನೆ ದೆಹಲಿಯ (Delhi) ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Indira Gandhi International Airport)  ನಡೆದಿದೆ.

    ಆರೋಪಿ ಉತ್ತರ ಪ್ರದೇಶದ ಪಿಲಿಭಿತ್ ನಿವಾಸಿ ಅಜೀಂ ಖಾನ್ ಎಂದು ಗುರುತಿಸಲಾಗಿದ್ದು, ಆತ ವಿಸ್ತಾರ ವಿಮಾನ (Vistara Airlines) ಸಂಖ್ಯೆ ಯುಕೆ-981ರಲ್ಲಿ ದೆಹಲಿಯಿಂದ ದುಬೈಗೆ ಪ್ರಯಾಣಿಸುತ್ತಿದ್ದ. ಈ ವೇಳೆ ಆತ ತನ್ನ ಫೋನ್‌ನಲ್ಲಿ ಬಾಂಬ್ ಕುರಿತು ಮಾತನಾಡುತ್ತಿದ್ದ. ಇದನ್ನು ಸಹ ಪ್ರಯಾಣಿಕರೊಬ್ಬರು ಕೇಳಿಸಿಕೊಂಡಿದ್ದಾರೆ.

    ಆರೋಪಿ ಬಾಂಬ್ ಕುರಿತು ವಿಮಾನದಲ್ಲಿ ಮಾತನಾಡುತ್ತಿದ್ದುದನ್ನು ಕೇಳಿಸಿಕೊಂಡ ಮಹಿಳೆ ತಕ್ಷಣ ವಿಮಾನದ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ ಸಿಬ್ಬಂದಿ ಆರೋಪಿಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ (CIF) ಹಸ್ತಾಂತರಿಸಿದ್ದಾರೆ. ಇದನ್ನೂ ಓದಿ: ಉಸ್ತುವಾರಿ ಸಚಿವರ ಪಟ್ಟಿ ರಿಲೀಸ್‌ – ನಿಮ್ಮ ಜಿಲ್ಲೆಯ ಉಸ್ತುವಾರಿ ಯಾರಿಗೆ?

    ಬಳಿಕ ಆತನನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಫೋನ್‌ನಲ್ಲಿ ಆತ ಬಾಂಬ್ ಕುರಿತು ಸಂಭಾಷಣೆ ಮಾಡುತ್ತಿದ್ದುದರ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 27 ವರ್ಷಗಳ ನಂತರ ಭಾರತದಲ್ಲಿ ವಿಶ್ವಸುಂದರಿ ಸ್ಪರ್ಧೆ: ಮೊದಲಾಗಿದ್ದು ಬೆಂಗಳೂರಿನಲ್ಲಿ