Tag: ವಿಸ್ತರಣೆ

  • ಸಚಿವ ಸಂಪುಟ ರಚನೆ, ಪುನಾರಚನೆ, ವಿಸ್ತರಣೆ ಎಲ್ಲವೂ ಸಿಎಂ ಪರಮಾಧಿಕಾರ: ಸಿ.ಸಿ ಪಾಟೀಲ್

    ಸಚಿವ ಸಂಪುಟ ರಚನೆ, ಪುನಾರಚನೆ, ವಿಸ್ತರಣೆ ಎಲ್ಲವೂ ಸಿಎಂ ಪರಮಾಧಿಕಾರ: ಸಿ.ಸಿ ಪಾಟೀಲ್

    ಗದಗ: ಸಚಿವ ಸಂಪುಟ ರಚನೆ, ಪುನಾರಚನೆ, ವಿಸ್ತರಣೆ ಎಲ್ಲವು ಮುಖ್ಯಮಂತ್ರಿಗಳ ಪರಮಾಧಿಕಾರ ಎಂದು ಸಚಿವ ಸಿ.ಸಿ ಪಾಟೀಲ್ ಹೇಳಿದರು.

    ನಗರದ ಖಾಸಗಿ ಹೋಟೆಲ್ ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಫಕ್ಕಿರಸಾ ಬಾಂಡಗೆ ಹಾಗೂ ಸ್ನೇಹಿತರು ತಯಾರಿಸಿದ್ದ ದಿನಸಿ ಕಿಟ್ ಗಳನ್ನು ಸಚಿವ ಸಿ.ಸಿ ಪಾಟೀಲ್ ನೇತೃತ್ವದಲ್ಲಿ ಹಂಚಿಕೆ ಮಾಡಲಾಯಿತು. ನಗರದ ಖಾಸಗಿ ಹೊಟೇಲ್ ಆವರಣದಲ್ಲಿ ಸಾವಿರಾರು ಕಿಟ್ ಗಳನ್ನು ಹಂಚಿಕೆ ಮಾಡಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಏನು, ಹೇಗೆ ನಿರ್ಧಾರ ಮಾಡುತ್ತಾರೆ ಎಂದು ನಾನು ಹೇಗೆ ಹೇಳಲಿ?. ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಪ್ರಥಮ ಆಧ್ಯತೆ ಕೊರೋನಾ ನಿಯಂತ್ರಣ ಮಾತ್ರ. ಸಂಪುಟ ವಿಚಾರವಾಗಿ ನನ್ನ ಸಲಹೆ ಕೇಳಿದರೆ, ನಾನು ಪಕ್ಷದ ಚೌಕಟ್ಟಿನಲ್ಲಿ ಹೇಳುತ್ತೇನೆ. ಪಕ್ಷದ ವಿಚಾರವನ್ನ ಮಾಧ್ಯಮದ ಎದುರು ಹಂಚಿಕೊಂಡು ಶಿಸ್ತು ಮೀರುವುದಿಲ್ಲ ಎಂದರು.

    ರಾಜ್ಯದಲ್ಲಿ ಪರೀಕ್ಷೆ ರದ್ದತಿ ವಿಚಾರವಾಗಿ ನಡೆಯುತ್ತಿರುವ ಚರ್ಚೆ ಕುರಿತು ಪ್ರತಿಕ್ರಿಯಿಸಿದರು. ರಾಜ್ಯದ ಮಕ್ಕಳ ಹಿತ ದೃಷ್ಟಿಯಿಂದ ಏನು ನಿರ್ಣಯ ತೆಗೆದುಕೊಳ್ಳಬೇಕು ಅನ್ನೋ ನನ್ನ ವಿಚಾರವನ್ನ ಸಂಪುಟದಲ್ಲಿ ಹೇಳ್ತೀನಿ. ಬೇರೆಯವರ ಖಾತೆಯಲ್ಲಿ ಹಸ್ತಕ್ಷೇಪ ಮಾಡುವುದು ತಪ್ಪು. ಸಚಿವ ಸಂಪುಟದಲ್ಲಿ ಪ್ರಸ್ತಾಪವಾದಾಗ ನನ್ನ ಅಭಿಪ್ರಾಯ ತಿಳಿಸುವೆ ಎಂದರು.

    ಈ ವಿಷಯದಲ್ಲೂ ಶಿಕ್ಷಣ ಸಚಿವರು, ಸಿ.ಎಮ್ ಹಾಗೂ ಅಧಿಕಾರಿಗಳು, ತಜ್ಞರ ಮಾಹಿತಿ ಸಂಗ್ರಹಿಸುತ್ತಾರೆ. ಎಲ್ಲಾ ವಿಚಾರಗಳನ್ನು ಸಿ.ಎಮ್ ನಿಭಾಯಿಸುತ್ತಾರೆ ಎಂದರು. ಈ ಕಾರ್ಯಕ್ರಮದಲ್ಲಿ ಎಮ್.ಎಲ್.ಸಿ, ಎಸ್.ವಿ ಸಂಕನೂರ, ಉದ್ಯಮಿ ಫಕ್ಕೀರಸಾ ಬಾಂಡಗೆ ಸೇರಿದಂತೆ ಅನೇಕ ಜನ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

  • ಸದ್ಯದಲ್ಲೇ ಸಚಿವ ಸಂಪುಟ ವಿಸ್ತರಣೆ, ನಾನು ಆಕಾಂಕ್ಷಿ: ಅಪ್ಪಚ್ಚು ರಂಜನ್

    ಸದ್ಯದಲ್ಲೇ ಸಚಿವ ಸಂಪುಟ ವಿಸ್ತರಣೆ, ನಾನು ಆಕಾಂಕ್ಷಿ: ಅಪ್ಪಚ್ಚು ರಂಜನ್

    ಮಡಿಕೇರಿ: ಸಚಿವ ಸ್ಥಾನ ಸಿಗದ ಹಿರಿಯ ಶಾಸಕರಿಗೆ ಅಸಮಾಧಾನ ಇದ್ದೇ ಇರುತ್ತದೆ. ಮೊದಲ ಬಾರಿ ಶಾಸಕನಾದವನಿಗೆ ಸಚಿವ ಸ್ಥಾನ ಸಿಗುತ್ತದೆ. ಹೀಗಿರುವಾಗ ಐದೈದು ಬಾರಿ ಎಂಎಲ್‍ಎಗಳಾಗಿರುವ ನಮಗೆ ಸಚಿವ ಸ್ಥಾನದ ಆಕಾಂಕ್ಷೆ ಇರೋದಿಲ್ಲವೇ ಎಂದು ಪ್ರಶ್ನಿಸುವ ಮೂಲಕ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ನಾನು ಆಕಾಂಕ್ಷಿ ಎನ್ನುವುದನ್ನು ಹೇಳಿದ್ದಾರೆ.

    ನಾನೂ ಕೂಡ ಸಚಿವ ಆಕಾಂಕ್ಷಿಯೇ. ಲಾಬಿ ಮಾಡದೇ ಇದ್ದರೆ ಸಚಿವ ಸ್ಥಾನ ಸಿಗುವುದಿಲ್ಲ. ಸಚಿವಸ್ಥಾನ, ಅಧಿಕಾರಿ ಸಿಗಬೇಕಾದರೆ ಲಾಬಿ ಮಾಡಲೇಬೇಕು. ಅಷ್ಟಕ್ಕೂ ಲಾಬಿ ಮಾಡುವುದು ಪಕ್ಷ ವಿರೋಧಿ ಚಟುವಟಿಕೆ ಅಲ್ಲ ಎಂದು ಅವರು ಸಮರ್ಥಿಸಿಕೊಂಡರು. ನಾನು ಕತ್ತಿಯವರೊಂದಿಗಾಗಲಿ ಬೇರೆ ಯಾರೊಂದಿಗೂ ಗುರುತಿಸಿಕೊಂಡಿಲ್ಲ. ಪ್ರತ್ಯೇಕ ಯಾವ ಸಭೆಯನ್ನು ನಡೆಸಿಲ್ಲ. ಆದರೆ ಸಚಿವ ಸಂಪುಟ ವಿಸ್ತರಣೆ ಮಾಡುವಾಗ ರಾಜ್ಯಾಧ್ಯಕ್ಷರು, ಸಿಎಂ ಇವರನ್ನು ನಾನೂ ನೇರವಾಗಿ ಭೇಟಿ ಮಾಡಿ ಲಾಬಿ ಮಾಡುತ್ತೇನೆ ಎಂದು ಹೇಳಿದರು.

    ಸದ್ಯ ದೇಶದಲ್ಲಿ ಕೊರೊನಾ ಸಮಸ್ಯೆ ಇರುವುದರಿಂದ ಸರ್ಕಾರ ಆರ್ಥಿಕವಾಗಿ ಸಂಕಷ್ಟದಲ್ಲಿ ಇರುತ್ತದೆ. ಹೀಗಾಗಿ ನಾವು ಸುಮ್ಮನಾಗಿದ್ದೇನೆ. ಮುಂದೆ ನಾನೂ ಕೂಡ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುತ್ತೇನೆ ಎಂದು ನೇರವಾಗಿ ಹೇಳಿದರು.

  • ಮೇ 15ರವರೆಗೂ ಲಾಕ್‍ಡೌನ್ ವಿಸ್ತರಣೆ ಸಾಧ್ಯತೆ – ರಾಜ್ಯಗಳ ಬೇಡಿಕೆ ಏನು?

    ಮೇ 15ರವರೆಗೂ ಲಾಕ್‍ಡೌನ್ ವಿಸ್ತರಣೆ ಸಾಧ್ಯತೆ – ರಾಜ್ಯಗಳ ಬೇಡಿಕೆ ಏನು?

    ನವದೆಹಲಿ: ಲಾಕ್‍ಡೌನ್ ವಿಸ್ತರಣೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ನಡೆಸಿದ್ದು ಸಭೆ ಬಳಿಕ ಲಾಕ್‍ಡೌನ್ ಮುಂದುವರಿಸುವ ತೀರ್ಮಾನಕ್ಕೆ ಬರಲಾಗಿದೆ ಎಂದು ಮೂಲಗಳು ಹೇಳಿವೆ.

    ಮತ್ತಷ್ಟು ವಿನಾಯ್ತಿಗಳೊಂದಿಗೆ ಮೇ 15ರವರೆಗೂ ಲಾಕ್‍ಡೌನ್ ಮುಂದುವರಿಸುವ ಸಾಧ್ಯತೆ ಇದ್ದು, ಈ ಬಗ್ಗೆ ಅಧಿಕೃತ ಆದೇಶ ಹೊರ ಬರಬೇಕಿದೆ. ಈ ವಾರದ ಅಂತ್ಯದಲ್ಲಿ ಪ್ರಧಾನಿ ಮೋದಿ ದೇಶದ ಜನರನ್ನುದ್ದೇಶಿಸಿ ಐದನೇ ಬಾರಿ ಮಾತನಾಡಿಲಿದ್ದು, ಈ ವೇಳೆ ಲಾಕ್‍ಡೌನ್ ವಿಸ್ತರಣೆ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

    ಇಂದಿನ ಸಭೆಯಲ್ಲಿ ಒಂಭತ್ತು ರಾಜ್ಯಗಳಿಗೆ ಮಾತ್ರ ಪ್ರಧಾನಮಂತ್ರಿ ಜೊತೆಗೆ ಮಾತನಾಡಲು ಅವಕಾಶ ನೀಡಲಾಗಿತ್ತು. ಮೇಘಾಲಯ, ಮಿಜೋರಾಂ, ಪುದುಚೇರಿ, ಉತ್ತರಾಖಂಡ, ಹಿಮಾಚಲ ಪ್ರದೇಶ, ಒಡಿಶಾ, ಬಿಹಾರ, ಗುಜರಾತ್, ಹರಿಯಾಣ ಮುಖ್ಯಮಂತ್ರಿಗಳು ಸಭೆಯಲ್ಲಿ ಮಾತನಾಡಿದರು ಬಾಕಿ ಎಲ್ಲ ರಾಜ್ಯಗಳ ಸಿಎಂ ಗಳು ಪತ್ರ ಮೂಲಕ ತಮ್ಮ ವರದಿ ಮತ್ತು ಬೇಡಿಕೆಗಳನ್ನು ಕೇಂದ್ರ ಸರ್ಕಾರಕ್ಕೆ ನೀಡಿದರು.

    ಸಭೆಯಲ್ಲಿ ಮಾತನಾಡಿದ ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ ತುರ್ತು ಅವಶ್ಯಕತೆಗಳ ವಿನಾಯಿತಿಯೊಂದಿಗೆ ಲಾಕ್‍ಡೌನ್ ಮುಂದುವರಿಸಿ. ವೈದ್ಯಕೀಯ ಅವಶ್ಯಕತೆಗಳು ಹೊರತುಪಡಿಸಿ ಅಂತರ್ ಜಿಲ್ಲೆ, ರಾಜ್ಯಗಳ ಗಡಿ ಬಂದ್ ಮಾಡಿ ಎಂದು ಸಲಹೆ ನೀಡಿದರು. ಮೀಜೊರಾಂ ಸಿಎಂ ಕೇಂದ್ರ ಸರ್ಕಾರದ ನಿಯಮಗಳನ್ನು ಪಾಲಿಸುತ್ತೇವೆ ಎಂದರು.

    ಒಡಿಶಾದ ನವೀನ್ ಪಟ್ನಾಯಕ್ ಮಾತನಾಡಿ ಪ್ರಮುಖ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಿ ಲಾಕ್‍ಡೌನ್ ಮುಂದುವರಿಸಬೇಕು. ಸಾರ್ವಜನಿಕ ಸಭೆಗಳು, ಧಾರ್ಮಿಕ ಮತ್ತು ಶಿಕ್ಷಣ ಸಂಸ್ಥೆಗಳ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಮತ್ತು ರಾಜ್ಯದ ಒಳಗಿನ ಆರ್ಥಿಕ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಬೇಕು. ಆರ್ಥಿಕತೆಯನ್ನು ಕಿಕ್‍ಸ್ಟಾರ್ಟ್ ಮಾಡಲು ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.

    ರೋಗದ ಲಕ್ಷಣಗಳನ್ನು ಹೊಂದಿರುವ ಜನರನ್ನು ಅಕ್ರಮಣಕಾರಿಯಾಗಿ ಪರೀಕ್ಷಿಸುತ್ತಿದ್ದೇವೆ. ಗಡಿ ರಾಜ್ಯಗಳು ಹೆಚ್ಚು ಪ್ರಕರಣಗಳನ್ನು ವರದಿ ಮಾಡಿವೆ. ಹಿಮಾಚಲದ 12 ಜಿಲ್ಲೆಗಳಿಗೆ ಯಾವುದೇ ಸಕಾರಾತ್ಮಕ ಪ್ರಕರಣಗಳಿಲ್ಲ. ಬಡ ಮತ್ತು ನಿರ್ಗತಿಕರಿಗೆ ಆರ್ಥಿಕವಾಗಿ ನೆರವು ನೀಡಲು ರಾಜ್ಯವು ಸಿದ್ಧವಾಗಿದೆ. ಆರ್ಥಿಕ ಚಟುವಟಿಕೆಗಳನ್ನು ಆರಂಭಿಸುವ ಸ್ಥಿತಿಯಲ್ಲಿದ್ದೇವೆ. ಇತರೆ ರಾಜ್ಯಗಳ ಅಭಿಪ್ರಾಯವನ್ನು ಸಂಗ್ರಹಿಸಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಿ ಎಂದು ಹಿಮಾಚಲ ಪ್ರದೇಶ ಸಿಎಂ ಜೈರಾಮ್ ಠಾಕೂರ್ ಹೇಳಿದರು.

    ಪುದುಚೇರಿ ಸಿಎಂ ವಿ ನಾರಾಯಣಸ್ವಾಮಿ ಮಾತನಾಡಿ ಪಿಪಿಇ ಕಿಟ್ ಸೇರಿದಂತೆ ವೈದ್ಯಕೀಯ ಉಪಕರಣಗಳನ್ನು ಕೇಂದ್ರ ಸರ್ಕಾರ ಒದಗಿಸಬೇಕು. ಕೊರೊನಾ ವಿರುದ್ಧ ಹೋರಾಟಕ್ಕೆ ಹಣಕಾಸಿನ ನೆರವು ನೀಡಿ. ಮೇ 3ರ ಬಳಿಕ ಲಾಕ್‍ಡೌನ್ ಬಳಿಕ ಕೈಗಾರಿಕೆ ತೆರೆಯಲು ಅವಕಾಶ ನೀಡಿ ಎಂದು ಮನವಿ ಮಾಡಿದರೆ, ಉತ್ತರಾಖಂಡ ಸಿಎಂ ತಿವೇಂದ್ರ ಸಿಂಗ್ ರಾವತ್ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ವ್ಯಾಪಾರ ವಹಿವಾಟು ಆರ್ಥಿಕತೆ ಪುನಾರಂಭಕ್ಕೆ ಅವಕಾಶ ನೀಡಬೇಕು. ಸರ್ಕಾರ ಹಂತ ಹಂತವಾಗಿ ಸಾಮಾನ್ಯ ಸ್ಥಿತಿಗೆ ತರುವ ಪ್ರಯತ್ನ ಮಾಡಿ ಎಂದು ಕೇಳಿಕೊಂಡರು.

    ರಾಜ್ಯಗಳಿಗೆ ಲಾಕ್‍ಡೌನ್ ನಿರ್ಧಾರ?
    ಮೇಲಿನ ಎಲ್ಲ ರಾಜ್ಯಗಳ ಜೊತೆಗೆ ಬಹುತೇಕ ರಾಜ್ಯಗಳು ವಿನಾಯತಿ ಜೊತೆಗೆ ಲಾಕ್‍ಡೌನ್ ಮುಂದುವರೆಸಲು ಸೂಚಿಸಿದ ಹಿನ್ನೆಲೆ ಕೇಂದ್ರ ಸರ್ಕಾರ ಲಾಕ್‍ಡೌನ್ ಮುಂದುವರೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ಈ ಬಾರಿ ಯಾವ ಪ್ರದೇಶದಲ್ಲಿ ಲಾಕ್‍ಡೌನ್ ಮುಂದುವರಿಸಬೇಕು ಮತ್ತು ವಿನಾಯತಿಗೆ ಒಳಪಡಬೇಕು ಎನ್ನುವುದು ರಾಜ್ಯ ಸರ್ಕಾರ ನಿರ್ಧರಿಸುವ ಸಾಧ್ಯತೆ ಇದೆ. ಹಸಿರು ಕಿತ್ತಳೆ ಮತ್ತು ಕೆಂಪು ವಲಯಗಳ ಆಧಾರ ಮೇಲೆ ರಾಜ್ಯ ಸರ್ಕಾರವೇ ಕ್ರಮ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಸೂಚಿಸುವ ಸಾಧ್ಯತೆಯಿದ್ದು ವಲಯವಾರು ಕೇವಲ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಮುಂದೆ ಪ್ರಕಟಿಸಲಿದೆ. ಇದಾದ ಬಳಿಕ ಎಲ್ಲಿ ಯಾವುದಕ್ಕೆ ವಿನಾಯಿತಿ ಸಿಗಲಿದೆ ಎನ್ನುವುದು ಸ್ಪಷ್ಟವಾಗಲಿದೆ.

  • ಮೇ 3ರ ಬಳಿಕ ಲಾಕ್‍ಡೌನ್ ವಿಸ್ತರಿಸಿ – ದೆಹಲಿ ಬಳಿಕ ಐದು ರಾಜ್ಯಗಳಿಂದ ಕೇಂದ್ರಕ್ಕೆ ಮನವಿ

    ಮೇ 3ರ ಬಳಿಕ ಲಾಕ್‍ಡೌನ್ ವಿಸ್ತರಿಸಿ – ದೆಹಲಿ ಬಳಿಕ ಐದು ರಾಜ್ಯಗಳಿಂದ ಕೇಂದ್ರಕ್ಕೆ ಮನವಿ

    ನವದೆಹಲಿ: ಮೇ 3ರ ಬಳಿಕ ಲಾಕ್‍ಡೌನ್ ವಿಸ್ತರಣೆ ಮಾಡುವಂತೆ ದೆಹಲಿ ಬಳಿಕ ಐದು ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ. ನಾಳೆ ಎಲ್ಲ ರಾಜ್ಯಗಳ ಸಿಎಂಗಳ ಜೊತೆ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಸಭೆ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

    ಮೇ 3ರ ಬಳಿಕ ಲಾಕ್‍ಡೌನ್ ವಿಸ್ತರಣೆ ಬಗ್ಗೆ ಗೊಂದಲದಲ್ಲಿರುವ ಕೇಂದ್ರ ಸರ್ಕಾರ ಈ ಬಗ್ಗೆ ಎಲ್ಲ ರಾಜ್ಯಗಳ ಸಿಎಂಗಳ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ. ನಾಳೆ ಬೆಳಗ್ಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಈ ಸಭೆ ನಡೆಯಲಿದೆ.

    ನಾಳಿನ ಸಭೆಗೂ ಮುನ್ನ ಮಹಾರಾಷ್ಟ್ರ, ಮಧ್ಯಪ್ರದೇಶ, ಪಂಜಾಬ್, ಒಡಿಶಾ, ಪಶ್ಚಿಮ ಬಂಗಾಳ ಲಾಕ್‍ಡೌನ್ ವಿಸ್ತರಣೆ ಮಾಡುವಂತೆ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿವೆ. ನಾಳಿನ ಸಭೆಯಲ್ಲೂ ಇದೇ ಅಂಶವನ್ನು ಒತ್ತಿ ಹೇಳುವ ಪ್ರಯತ್ನವಾಗಲಿದೆ. ಲಾಕ್‍ಡೌನ್ ಮುಂದುವರಿಸುವುದು ಸೂಕ್ತ ಹಂತ ಹಂತವಾಗಿ ವಿನಾಯಿತಿ ನೀಡಬೇಕು. ರಾಜ್ಯದ ಹಲವು ಪ್ರದೇಶದಲ್ಲಿ ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತಿದ್ದು ಲಾಕ್‍ಡೌನ್ ತೆರವು ಒಳಿತಲ್ಲ ಎಂದು ಆಯಾ ರಾಜ್ಯದ ಸಿಎಂಗಳು ಅಭಿಪ್ರಾಯಪಟ್ಟಿದ್ದಾರೆ.

    ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಕರ್ನಾಟಕ ಇತರ ಆರು ರಾಜ್ಯಗಳು ಕೇಂದ್ರ ಸರ್ಕಾರದ ನಿರ್ದೇಶನವನ್ನು ಅನುಸರಿಸುವುದಾಗಿ ಹೇಳಿದ್ದು, ಅಸ್ಸಾಂ, ಕೇರಳ ಮತ್ತು ಬಿಹಾರ ರಾಜ್ಯಗಳು ಮತ್ತು ಕೇಂದ್ರ ಪ್ರದೇಶಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ವಿಡಿಯೋ ಸಮಾವೇಶದ ನಂತರ ಮುಂದಿನ ನಿರ್ಧಾರವನ್ನು ಪ್ರಕಟಿಸುವುದಾಗಿ ಹೇಳಿದ. ಈ ನಡುವೆ ತೆಲಂಗಾಣ ಮೇ 7ರವರೆಗೂ ಲಾಕ್‍ಡೌನ್ ವಿಸ್ತರಿಸಿದೆ.

    ಮಹಾರಾಷ್ಟ್ರ ಕೇಂದ್ರ ಸರ್ಕಾರ ನೀಡಿರುವ ವಿನಾಯಿತಿಗಳನ್ನು ರಾಜ್ಯದಲ್ಲಿ ನೀಡುವುದಿಲ್ಲ ಎಂದಿದ್ದು, ಉತ್ತರ ಪ್ರದೇಶ ಮತ್ತಷ್ಟು ದಿನ ಕಾದು ನೋಡುವ ಪ್ರಯತ್ನ ಮಾಡಿದೆ. ತುರ್ತು ಅವಶ್ಯಕ ಅಂಗಡಿಗಳು ಮತ್ತು 11 ಬಗೆಯ ಕೈಗಾರಿಗಳಿಗೆ ಮಾತ್ರ ಅವಕಾಶ ನೀಡಿದೆ. ಪಿಎಂ ಸಭೆಗೂ ಮುನ್ನ ಬಿಜೆಪಿ ಹೊರತಾದ ಪಶ್ಚಿಮ ಬಂಗಾಳ, ಪಂಜಾಬ್, ಮಹಾರಾಷ್ಟ್ರ ಮತ್ತು ಒಡಿಶಾ ಲಾಕ್‍ಡೌನ್ ವಿಸ್ತರಣೆಗೆ ಒಲವು ತೋರಿಸುವುದು ಮಹತ್ವ ಪಡೆದುಕೊಂಡಿದೆ.

  • ಲಾಕ್‍ಡೌನ್ ವಿಸ್ತರಣೆಯ ಎಫೆಕ್ಟ್ – ಮದ್ಯದಂಗಡಿ ಕಳ್ಳತನ

    ಲಾಕ್‍ಡೌನ್ ವಿಸ್ತರಣೆಯ ಎಫೆಕ್ಟ್ – ಮದ್ಯದಂಗಡಿ ಕಳ್ಳತನ

    – ಕಳ್ಳರ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆ

    ರಾಯಚೂರು: ಲಾಕ್‍ಡೌನ್ ಹಿನ್ನೆಲೆ ಮದ್ಯ ಮಾರಾಟಕ್ಕೆ ನಿಷೇಧವಿದೆ. ಹೀಗಾಗಿ ಎಲ್ಲಾ ಬಾರ್‍ಗಳು ಬಂದ್ ಆಗಿವೆ. ಆದರೆ ರಾಯಚೂರಿನಲ್ಲಿ ಮದ್ಯ ಸಿಗದ ಹಿನ್ನೆಲೆಯಲ್ಲಿ ಕೆಲವರು ಬಾರ್‍ಗೆ ಕನ್ನ ಹಾಕಿ ಲಕ್ಷಾಂತರ ರೂಪಾಯಿ ಮದ್ಯ ಕದ್ದಿದ್ದು, ಅಂಗಡಿಯಲ್ಲಿನ ಉಳಿದ ವಸ್ತುಗಳು ಹಾಗೇ ಬಿಟ್ಟಿದ್ದಾರೆ. ಕಳ್ಳರ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ನಗರದ ಅಸ್ಕಿಹಾಳ ಬಳಿಯ ಶ್ರೀರೇಣುಕಾ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಕಳ್ಳತನವಾಗಿದೆ. ಕಳೆದ 20 ದಿನಗಳಿಂದ ಮದ್ಯ ಸಿಗದೇ ಕಂಗೆಟ್ಟ ಮದ್ಯ ಪ್ರಿಯರಿಂದ ಮದ್ಯದಂಗಡಿ ಕಳ್ಳತನವಾಗಿರುವ ಶಂಕೆಯಿದೆ. ವೆಂಕಟೇಶ್‍ಗೌಡ ಅವರಿಗೆ ಸೇರಿದ ರೇಣುಕಾ ಬಾರ್ ಅಂಡ್ ರೆಸ್ಟೋರೆಂಟ್‍ನ ಹಿಂದಿನ ಬಾಗಿಲು ಮುರಿದು ಮದ್ಯದ ಬಾಕ್ಸ್ ಗಳನ್ನು ಕಳ್ಳತನ ಮಾಡಲಾಗಿದೆ.

    ಹಿಂದಿನ ಬಾಗಿಲನ್ನು ಮುರಿದು ಒಳಬಂದ ಇಬ್ಬರು ಕಳ್ಳರು, ಮದ್ಯದ ಕೌಂಟರ್‍ಗೆ ತೆರಳು ಚಾವಣಿಯ ಸಿಮೆಂಟ್ ಸೀಟ್ ಗಳನ್ನ ಹೊಡೆದು ಲಕ್ಷಾಂತರ ರೂ. ಬೆಲೆ ಬಾಳುವ ಮದ್ಯ ಕಳ್ಳತನ ಮಾಡಿದ್ದಾರೆ. ಕಳ್ಳತನ ದೃಶ್ಯ ಸೆರೆಯಾಗಬಾರದು ಎಂದು ಮದ್ಯದಂಗಡಿಯ ಸಿಸಿ ಕ್ಯಾಮೆರಾಗಳ ಒಂದು ಮಾನಿಟರ್ ಅನ್ನು ಜಖಂಗೊಳಿಸಿ ಕೃತ್ಯ ಎಸಗಿದ್ದಾರೆ. ಪಶ್ಚಿಮ ಠಾಣೆ ಹಾಗೂ ಅಬಕಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಘಟನೆ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಮೇ 3ರವರೆಗೂ ರೈಲು, ಮೆಟ್ರೋ ಸಂಚಾರ ನಿಷೇಧ ವಿಸ್ತರಣೆ

    ಮೇ 3ರವರೆಗೂ ರೈಲು, ಮೆಟ್ರೋ ಸಂಚಾರ ನಿಷೇಧ ವಿಸ್ತರಣೆ

    ನವದೆಹಲಿ: ಮೇ 3ರ ವರೆಗೂ ದೇಶದ್ಯಾಂತ ಪ್ಯಾಸೆಂಜರ್ ರೈಲುಗಳ ಸಂಚಾರ ನಿಷೇಧ ವಿಸ್ತರಿಸಿ ಭಾರತೀಯ ರೈಲು ಸಚಿವಾಲಯ ಆದೇಶ ಹೊರಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಭಾಷಣದ ಬಳಿಕ ರೈಲು ಇಲಾಖೆ ಈ ನಿರ್ಧಾರ ಪ್ರಕಟಿಸಿದೆ.

    ಲಾಕ್ ಡೌನ್ ವಿಸ್ತರಿಸಿ ಪ್ರಧಾನಿ ನರೇಂದ್ರ ಅಧಿಕೃತ ಘೋಷಣೆ ಮಾಡಿದ ಹಿನ್ನೆಲೆ ಏಪ್ರಿಲ್ 14ವರೆಗೂ ವಿಧಿಸಿದ್ದ ನಿರ್ಬಂಧವನ್ನು ಮೇ 3ರವರೆಗೂ ವಿಸ್ತರಿಸಿದೆ. ಹಿಂದಿನಂತೆ ದೇಶದ್ಯಾಂತ ಗೂಡ್ಸ್ ರೈಲುಗಳ ಸಂಚಾರ ಇರಲಿದ್ದು ಅಗತ್ಯ ವಸ್ತುಗಳ ಸಾಗಾಟ ಕೆಲಸ ಎಂದಿನಂತೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಬುಕ್ ಮಾಡಿರುವ ಟಿಕೆಟ್ ಗಳನ್ನು ಗ್ರಾಹಕರು ಕ್ಯಾನ್ಸಲ್ ಮಾಡುವ ಅವಶ್ಯಕತೆ ಇಲ್ಲ. ಟಿಕೆಟ್ ತನ್ನಿಂದಾತಾನೇ ರದ್ದಗಾಲಿದ್ದು ಐಆರ್‍ಸಿಟಿಸಿ ಖಾತೆಯಿಂದ ಹಣ ಜಮಾವಣೆಯಾಗಲಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಇದರ ಜೊತೆಗೆ ದೇಶಾಯಂತ ಎಲ್ಲ ಮಹಾ ನಗರಗಳಲ್ಲಿರುವ ಮೆಟ್ರೋ ಸಂಚಾರ ಕೂಡಾ ಮೇ 3ರವರೆಗೂ ರದ್ದಾಗಲಿದೆ ಎಂದು ನಗರಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಡಿಎಸ್ ಮಿಶ್ರಾ ಹೇಳಿದ್ದಾರೆ.

    ಇದರ ಜೊತೆಗೆ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನ ಹಾರಾಟ ಮೇ 3ರವರೆಗೂ ಸ್ಥಗಿತಗೊಳ್ಳಲಿದೆ. ಕೊರೊನಾ ನಿಯಂತ್ರಣಕ್ಕೆ ಬಂದ ನಂತರ ವಿಮಾನ ಸೇವೆಯ ಬಗ್ಗೆ ನಿರ್ಧರಿಸಲಾಗುವುದು ಎಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆಯ ಸಚಿವ ಹರ್‍ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

  • ದೇಶಕ್ಕೆ ನಾವು ಮಾದರಿಯಾಗಲು ಬಯಸುತ್ತೇವೆ : ಉದ್ಧವ್ ಠಾಕ್ರೆ

    ದೇಶಕ್ಕೆ ನಾವು ಮಾದರಿಯಾಗಲು ಬಯಸುತ್ತೇವೆ : ಉದ್ಧವ್ ಠಾಕ್ರೆ

    ನವದೆಹಲಿ: ಕೇಂದ್ರ ಸರ್ಕಾರದ ಅಧಿಕೃತ ಆದೇಶಕ್ಕೂ ಮುನ್ನ ಮಹಾರಾಷ್ಟ್ರ ರಾಜ್ಯ ಸರ್ಕಾರ ಲಾಕ್‍ಡೌನ್ ಅವಧಿ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ದೇಶದಲ್ಲಿ ಲಾಕ್‍ಡೌನ್ ವಿಸ್ತರಿಸಿದ ರಾಜ್ಯವಾಗಿದೆ.

    ಪ್ರಧಾನಿ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಸಭೆ ಬಳಿಕ ಮಾತನಾಡಿರುವ ಸಿಎಂ ಉದ್ಧವ್ ಠಾಕ್ರೆ ತಮ್ಮ ಲಾಕ್‍ಡೌನ್ ವಿಸ್ತರಣೆ ಮಾಡುವ ನಿರ್ಧಾರ ಪ್ರಕಟಿಸಿದ್ದಾರೆ. ಇದೇ ವೇಳೆ ಈ ಕಠಿಣ ಸಂದರ್ಭದಲ್ಲಿ ದೇಶಕ್ಕೆ ನಾವು ಮಾದರಿಯಾಗಲು ಬಯಸುತ್ತೇವೆ ಎಂದು ಠಾಕ್ರೆ ಹೇಳಿದ್ದಾರೆ.

    ರಾಜ್ಯದಲ್ಲಿ ಸೋಂಕು ಕಾಣಿಸಿಕೊಂಡು ಸೋಮವಾರಕ್ಕೆ ಐದು ವಾರಗಳಾಗಲಿದೆ. ಸೋಂಕು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಸಭೆಯಲ್ಲೂ ಉದ್ಧವ್ ಠಾಕ್ರೆ ಲಾಕ್‍ಡೌನ್ ವಿಸ್ತರಣೆ ಮಾಡುವಂತೆ ಮನವಿ ಮಾಡಿದ್ದರು. ಲಾಕ್‍ಡೌನ್ ತೆರವು ಮಾಡುವುದರಿಂದ ರಾಜ್ಯದಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ಹೆಚ್ಚು ಸೋಂಕು ಕಾಣಿಸಿಕೊಂಡಿದ್ದು ಪರಿಸ್ಥಿತಿ ಕೈ ಮೀರಲು ಅವಕಾಶ ನೀಡಬಾರದು ಎಂದು ಮನವಿ ಮಾಡಿದ್ದರು.

  • ಧ್ವಜಾರೋಹಣ ಭಾಷಣದಲ್ಲೂ ಕನ್ನಡ ಕಗ್ಗೊಲೆ ಮಾಡಿದ ಶ್ರೀರಾಮುಲು

    ಧ್ವಜಾರೋಹಣ ಭಾಷಣದಲ್ಲೂ ಕನ್ನಡ ಕಗ್ಗೊಲೆ ಮಾಡಿದ ಶ್ರೀರಾಮುಲು

    – ಶೀಘ್ರದಲ್ಲೇ ಸಂಪುಟ ವಿಸ್ತರಣೆ

    ರಾಯಚೂರು: ಆರೋಗ್ಯ ಸಚಿವ ಶ್ರೀರಾಮುಲು ಅವರು ಭಾಷಣ ಮಾಡಿದಾಗಲೆಲ್ಲಾ ಕನ್ನಡ ಕಗ್ಗೊಲೆ ಮಾಡುತ್ತಲೇ ಇದ್ದಾರೆ. ರಾಯಚೂರಿನಲ್ಲಿ ಗಣರಾಜ್ಯೋತ್ಸವ ಹಿನ್ನೆಲೆ ಧ್ವಜಾರೋಹಣ ನೆರವೇರಿಸಿದ ಬಳಿಕ ಭಾಷಣ ಮಾಡಿದ ಅವರು ಪುಂಖಾನುಪುಂಖವಾಗಿ ಕನ್ನಡವನ್ನ ತಪ್ಪುತಪ್ಪಾಗಿ ಮಾತನಾಡಿದ್ದಾರೆ.

    ಕಳೆದ ವರ್ಷ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ದಿನ ಮಾಡಿದ್ದ ಕೆಲ ತಪ್ಪುಗಳನ್ನೇ ಪುನಃ ಆರೋಗ್ಯ ಸಚಿವರು ಮಾಡಿದ್ದಾರೆ. ಈ ಹಿಂದೆ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಅನ್ನುವ ಬದಲು, ಆಗಸ್ಟ್ 15 ಗಣರಾಜ್ಯೋತ್ಸವ ದಿನಾಚರಣೆ ಎನ್ನುವ ಮೂಲಕ ಆರಂಭಿಸಿ ಮಾದರಿ ಪದಕ್ಕೆ ಮಾಧುರಿ ಅಂತ, ಆಜಾದ್ ಪದಕ್ಕೆ ಆಜಾರ್, ಸ್ವಾತಂತ್ರ್ಯಕ್ಕೆ ಸ್ವಾಸಂತ್ರ, ಉಡಾವಣೆ ಬದಲಾಗಿ ಉಗ್ರಾಣಿಗಳು, ತಂತ್ರಜ್ಞಾನದ ಬದಲಾಗಿ ತಂತ್ರಗ ಎಂದು ಉಚ್ಚರಿಸಿ ಶ್ರೀರಾಮುಲು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.

    ಈ ಬಾರಿ ಭಾಷಣ ಮಾಡುವಾಗ ಶ್ರೀರಾಮುಲು ಅವರು ನಮ್ಮದು ವೈವಿಧ್ಯತೆ ಹೊಂದಿದ ದೇಶ ಎನ್ನುವ ಬದಲು ವೈವಿಧ್ಯತೆ ಇಲ್ಲದ ದೇಶ ಎಂದು ಹೇಳಿ ಟೀಕೆಗೆ ಗುರಿಯಾಗಿದ್ದಾರೆ. ತೆಲುಗು ಪ್ರಭಾವ ಅವರ ಮೇಲೆ ಹೆಚ್ಚಾಗಿ ಇರಬಹುದು. ಆದರೆ ಸಚಿವರು ಕನ್ನಡವನ್ನ ಸರಿಯಾಗಿ ಮಾತನಾಡುವುದನ್ನ ಕಲಿಯದೆ ಇರುವುದು ಕನ್ನಡಿಗರ ದುರಂತವೇ ಸರಿ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು

    ಶೀಘ್ರದಲ್ಲೇ ಸಂಪುಟ ವಿಸ್ತರಣೆ:
    ಸಚಿವ ಸಂಪುಟ ವಿಸ್ತರಣೆ ಆದಷ್ಟು ಬೇಗ ಆಗುತ್ತೆ, ಡಿಸಿಎಂ ಹುದ್ದೆ ನೀಡುವ ಬಗ್ಗೆ ಜನರ ಬೇಡಿಕೆ ಇದ್ದರೂ ಪಕ್ಷದ ತೀರ್ಮಾನವೇ ಅಂತಿಮ ಎಂದು ಶ್ರೀರಾಮುಲು ಹೇಳಿದ್ದಾರೆ. ರಾಯಚೂರಿನ ಪೊಲೀಸ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಶ್ರೀರಾಮುಲು ಅವರು, ಸಿಎಂ ಯಡಿಯೂರಪ್ಪ ಶೀಘ್ರದಲ್ಲಿ ದೆಹಲಿಗೆ ಹೋಗಲಿದ್ದಾರೆ. ಅಮಿತ್ ಶಾ, ಜೆ.ಪಿ ನಡ್ಡಾರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

    ಇದೇ ವೇಳೆ ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆಗೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಜಿಲ್ಲಾ ಕ್ರೀಡಾಂಗಣ ಹಾಗೂ ಜಿಲ್ಲಾಡಳಿತ ಭವನದ ನಿರ್ಮಾಣ ಕೆಲಸ ಬೇಗ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

  • ಆಧಾರ್ ಕಾರ್ಡ್ ಲಿಂಕ್ ಅನಿರ್ಧಿಷ್ಟ ಅವಧಿಗೆ ವಿಸ್ತರಣೆ – ಸುಪ್ರೀಂ

    ಆಧಾರ್ ಕಾರ್ಡ್ ಲಿಂಕ್ ಅನಿರ್ಧಿಷ್ಟ ಅವಧಿಗೆ ವಿಸ್ತರಣೆ – ಸುಪ್ರೀಂ

    ನವದೆಹಲಿ: ವಿವಿಧ ಸೇವೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಅಂತಿಮ ದಿನಾಂಕವನ್ನು ಸುಪ್ರೀಂಕೋರ್ಟ್ ಅನಿರ್ಧಿಷ್ಟ ಅವಧಿವರೆಗೆ ವಿಸ್ತರಣೆ ಮಾಡಿದೆ.

    ಈ ಹಿಂದೆ ಮಾರ್ಚ್ 31 ಆಧಾರ್ ಕಾರ್ಡ್ ಲಿಂಕ್ ಮಾಡಲು ಕೊನೆ ದಿನಾಂಕವಾಗಿತ್ತು. ಆದರೆ ಈಗ ಆಧಾರ್ ಸಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಇತ್ಯರ್ಥ ಆಗುವವರೆಗೂ ಈ ಗಡುವು ವಿಸ್ತರಣೆಯಾಗಲಿದೆ ಎಂದು ಮುಖ್ಯ ನ್ಯಾ. ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಾಧೀಶರನ್ನು ಒಳಗೊಂಡ ಪೀಠ ಹೇಳಿದೆ.

    ವಿಚಾರಣೆ ವೇಳೆ ನ್ಯಾಯಾಲಯ ಮಾರ್ಚ್ 31ರ ವೇಳೆಗೆ ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದೆ. ಅಲ್ಲದೇ ಈ ಅವಧಿಯೊಳಗೆ ಬ್ಯಾಂಕ್ ಸೇರಿದಂತೆ ಇತರೇ ಆರ್ಥಿಕ ಸೇವೆಗಳಿಗೆ ಆಧಾರ್ ಲಿಂಕ್ ಮಾಡಲು ಸಾಧ್ಯವಾಗದೇ ಇದ್ದರೆ ಗಂಭೀರ ಸ್ವರೂಪ ಸಮಸ್ಯೆಗಳು ಎದುರಿಸಬೇಕಾಗುತ್ತದೆ ಎಂದು ತಿಳಿಸಿತ್ತು.

    ಕಳೆದ ವರ್ಷ ಡಿಸೆಂಬರ್ 15 ಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಡೆಡ್‍ಲೈನ್ ನಿಗದಿಯಾಗಿತ್ತು. ಇದಾದ ಬಳಿಕ ಸುಪ್ರೀಂ ಕೋರ್ಟ್ ಮಾರ್ಚ್ 31ಕ್ಕೆ ಡೆಡ್‍ಲೈನ್ ವಿಸ್ತರಿಸಿತ್ತು. ಮಾರ್ಚ್ 31ರ ನಂತರ ಯಾವುದೇ ಕಾರಣಕ್ಕೂ ಡೆಡ್ ಲೈನ್ ವಿಸ್ತರಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಈ ಹಿಂದೆ ತಿಳಿಸಿತ್ತು.

    ಕರ್ನಾಟಕ ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಕೆ. ಎಸ್. ಪುಟ್ಟಸ್ವಾಮಿ ಅವರು ಕೇಂದ್ರ ಸರ್ಕಾರ ತನ್ನ ಸೇವೆಗಳಿಗೆ `ಆಧಾರ್’ ಕಡ್ಡಾಯ ಮಾಡಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ನಲ್ಲಿ ಸಾರ್ವಜನಿಕಾ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಕಾನೂನು ಮಾನ್ಯತೆ ಇಲ್ಲದ `ಆಧಾರ್’ ಸಂಖ್ಯೆಯಿಂದ ನಾಗರಿಕರ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗು­ತ್ತಿದೆ ಎಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

     

  • ಹೆರಿಗೆ ರಜೆ 26 ವಾರಗಳಿಗೆ ವಿಸ್ತರಣೆ – ಸಂಸತ್‍ನಲ್ಲಿ ಮಸೂದೆ ಅಂಗೀಕಾರ

    ಹೆರಿಗೆ ರಜೆ 26 ವಾರಗಳಿಗೆ ವಿಸ್ತರಣೆ – ಸಂಸತ್‍ನಲ್ಲಿ ಮಸೂದೆ ಅಂಗೀಕಾರ

    ನವದೆಹಲಿ: ಹೆರಿಗೆ ರಜೆಯನ್ನು ಈಗಿರುವ 12 ವಾರಗಳಿಂದ 26 ವಾರಗಳಿಗೆ ಏರಿಕೆ ಮಾಡಲಾದ ಮಸೂದೆ ಸಂಸತ್‍ನಲ್ಲಿ ಅಂಗೀಕಾರವಾಗಿದೆ.

    ಗುರುವಾರದಂದು ಲೋಕಸಭೆಯಲ್ಲಿ ಮೆಟರ್ನಿಟಿ ಬೆನಿಫಿಟ್ ಅಮೆಂಡ್‍ಮೆಂಟ್ ಬಿಲ್ 2016 ಅಂಗೀಕಾರವಾಗಿದೆ. ಕಳೆದ ವರ್ಷ ಆಗಸ್ಟ್ ನಲ್ಲಿ ರಾಜ್ಯಸಭೆಯಲ್ಲಿ ಈ ತಿದ್ದುಪಡಿ ಮಸೂದೆ ಅಂಗೀಕಾರವಾಗಿತ್ತು. ಈ ನಿರ್ಧಾರದಿಂದ ದೇಶದ 18 ಲಕ್ಷ ಮಹಿಳೆಯರಿಗೆ ಅನುಕೂಲವಾಗಿದೆ.

    10 ಅಥವಾ ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳಿರುವ ಎಲ್ಲಾ ಸಂಸ್ಥೆಗಳಿಗೆ ಈ ನಿಯಮ ಅನ್ವಯವಾಗಲಿದೆ. ಮಹಿಳೆಯ ಮೊದಲ ಎರಡು ಹೆರಿಗೆಗೆ ಸಂಬಳ ಸಹಿತ 26 ವಾರಗಳ ರಜೆ ನೀಡಬೇಕಾಗಿದೆ. ಮೂರನೇ ಮಗುವಿಗೆ 12 ವಾರಗಳ ರಜೆ ಸಿಗಲಿದೆ.

    ಈ ಮೂಲಕ ಕೆನಡಾ ಹಾಗೂ ನಾರ್ವೆ ನಂತರ ಭಾರತ ಅತೀ ಹೆಚ್ಚು ದಿನಗಳ ಹೆರಿಗೆ ರಜೆ ನೀಡುವ ದೇಶವಾಗಿದೆ. ಕೆನಡಾದಲ್ಲಿ 50 ವಾರಗಳ ಹೆರಿಗೆ ರಜೆ ಹಾಗೂ ನಾರ್ವೆಯಲ್ಲಿ 44 ವಾರಗಳ ಹೆರಿಗೆ ರಜೆ ನೀಡಲಾಗುತ್ತಿದೆ.

    ಈವರೆಗೆ ಮಹಿಳಾ ಉದ್ಯೋಗಿಗಳಿಗೆ 3 ತಿಂಗಳು ಸಂಭಾವನೆ ಸಹಿತ ಹೆರಿಗೆ ರಜೆ ಸಿಗುತ್ತಿತ್ತು. ಈಗ ಇದು ಆರೂವರೆ ತಿಂಗಳಿಗೆ ವಿಸ್ತರಣೆ ಆದಂತಾಗಿದೆ.