Tag: ವಿಷ್ಣು ಸ್ಮಾರಕ

  • ಅಭಿಮಾನ್ ಸ್ಟುಡಿಯೋ ಮುಟ್ಟುಗೋಲಿಗೆ ಸರ್ಕಾರ ಆದೇಶ – ಅನಿರುದ್ಧ ರಿಯಾಕ್ಷನ್ ಏನು?

    ಅಭಿಮಾನ್ ಸ್ಟುಡಿಯೋ ಮುಟ್ಟುಗೋಲಿಗೆ ಸರ್ಕಾರ ಆದೇಶ – ಅನಿರುದ್ಧ ರಿಯಾಕ್ಷನ್ ಏನು?

    1970ರಲ್ಲಿ ಬೆಂಗಳೂರಿನಲ್ಲಿ (Bengaluru) ಸ್ಟುಡಿಯೋ ನಿರ್ಮಾಣ ಮಾಡುವ ಸಲುವಾಗಿ ಸರ್ಕಾರ ಅರಣ್ಯ ಪ್ರದೇಶದ ಆದೇಶ ಜಾರಿ ಮಾಡಿ ಕೆಲವು ನಿಯಮಗಳಡಿ 20 ಎಕರೆ ಜಾಗವನ್ನ ಹಿರಿಯ ನಟ ಟಿ.ಎನ್ ಬಾಲಣ್ಣ ಅವರ ಕುಟುಂಬಕ್ಕೆ ನೀಡಿತ್ತು. ಬಳಿಕ ಬಾಲಣ್ಣ ಕುಟುಂಬಸ್ಥರು ಸರ್ಕಾರ ವಿಧಿಸಿದ್ಧ ನಿಯಮಗಳ ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪದಡಿ ಆ ಜಾಗವನ್ನ ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿ ಅರಣ್ಯ ಇಲಾಖೆ ಜಿಲ್ಲಾಧಿಕಾರಿಗಳಿಗೆ ಪತ್ರವನ್ನ ಬರೆದಿದೆ. ಈ ಬಗ್ಗೆ ನಟ ಹಾಗೂ ಡಾ.ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಜಟ್ಕರ್ (Aniruddha Jatkar) ʻಪಬ್ಲಿಕ್ ಟಿವಿʼಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.

    ಸರ್ಕಾರ ಅಭಿಮಾನ್ ಸ್ಟುಡಿಯೋ (Abhiman Studio) ಜಾಗ ವಶಪಡಿಸಿಕೊಳ್ಳಬಹುದು ಅಂತಾ ಮೊದಲೇ ನನಗೆ ಗೊತ್ತಿತ್ತು. ಆ ನಿಟ್ಟಿನಲ್ಲಿ 6 ವರ್ಷದಿಂದ ನಾವು ಸಾಕಷ್ಟು ಪ್ರಯತ್ನ ಪಟ್ಟೆವು, ಆದ್ರೆ ಅದು ಆಗ್ಲಿಲ್ಲ. ಈಗ ನಮಗೆ ತುಂಬಾ ಖುಷಿ ಕೊಟ್ಟಿದೆ. ಅಪ್ಪಾಜಿ ಅಂತ್ಯ ಸಂಸ್ಕಾರ ಆದ ಜಾಗದಲ್ಲಿ ಭಾರತಿ ಅಮ್ಮ ಸ್ಮಾರಕವನ್ನ ಕಟ್ಟಿದರು. ಆದರೆ ಹಬ್ಬದ ದಿನವೇ ರಾತ್ರೋ ರಾತ್ರಿ ಅಲ್ಲಿ ನೆಲಸಮ ಮಾಡಲಾಯಿತು. ಅದು ಅಭಿಮಾನಿಗಳಿಗೆ ಹಾಗೂ ನಮ್ಮ ಕುಟುಂಬಕ್ಕೆ ಬೇಸರ ತಂದಿತ್ತು. ಈಗ ಅರಣ್ಯ ಪ್ರದೇಶ ಅಂತಾ ಹೇಳಿದೆ. ಸರ್ಕಾರಕ್ಕೆ ಅಲ್ಲಿ 10 ಗುಂಟೆ ಜಾಗ ಕೊಡಿ ಸ್ಮಾರಕ ಕಟ್ಟಿಕೊಡೋದು ಬೇಡ ಅಂತಾ ಮನವಿ ಮಾಡ್ತೀವಿ. ಸರ್ಕಾರ ಈ ಮನವಿಗೆ ಖಂಡಿತ ಸ್ಪಂದಿಸುತ್ತೆ ಅನ್ನೋ ಭರವಸೆ ಇದೆ ಅಂತಾ ಅನಿರುದ್ಧ ಹೇಳಿದ್ದಾರೆ.

    ಈ ವಿಚಾರದಲ್ಲಿ ನಾನು ಏನು ಹೇಳ್ತಿದಿನೋ ಅದನ್ನ ಅಮ್ಮನೂ ಹೇಳೋದು. ಸಿಎಂ ಕಳೆದ ಬಾರಿ ಹೋದಾಗಲೂ ಈ ಬಾರಿ ಹೋದಾಗಲೂ ಕರ್ನಾಟಕ ರತ್ನ ಗೌರವದ ನೀಡುವ ಬಗ್ಗೆ ಭರವಸೆ ಕೊಟ್ಟಿದ್ದಾರೆ. ನಾನು ಅಲ್ಲಿ ಬೇಡಿಕೊಂಡಿಲ್ಲ ಬದಲಾಗಿ ನೆನಪಿಸಿದ್ದೇನೆ. ಅವರ ಗಮನಕ್ಕೆ ತಂದಿದ್ದೇನೆ. ಬಾಲಣ್ಣ ಅವರ ಬಗ್ಗೆ ಹಾಗೂ ಅವರ ಕುಟುಂಬದ ಬಗ್ಗೆ ಸಾಕಷ್ಟು ಗೌರವ ಇದೆ. ಆ ಜಾಗದಲ್ಲಿ ಅಭಿವೃದ್ಧಿ ಆಗಿದ್ರೆ ಚೆನ್ನಾಗಿರ್ತಿತ್ತು. ಅಲ್ಲಿ ಅಪ್ಪಾಜಿ ಅವರ ಸಮಾಧಿಗೆ ಅವಕಾಶ ಕೊಟ್ಟಿದ್ದರು ಅವರಿಗೂ ಗೌರವ ಇರ್ತಿತ್ತು. ಈಗ ಸರ್ಕಾರ ಮುಟ್ಟುಗೋಲು ಹಾಕಿಕೊಳ್ತಿದೆ ಎಂದಿದ್ದಾರೆ ಅನಿರುದ್ಧ.

  • ಅಭಿಮಾನ್‌ ಸ್ಟುಡಿಯೋದಲ್ಲಿರೋ ವಿಷ್ಣು ಸ್ಮಾರಕಕ್ಕೆ ಪೂಜೆ ಸಲ್ಲಿಸದಂತೆ ತಡೆ – ಪ್ರತಿಭಟನೆಗೆ ವಿಷ್ಣು ಫ್ಯಾನ್ಸ್‌ ನಿರ್ಧಾರ

    ಅಭಿಮಾನ್‌ ಸ್ಟುಡಿಯೋದಲ್ಲಿರೋ ವಿಷ್ಣು ಸ್ಮಾರಕಕ್ಕೆ ಪೂಜೆ ಸಲ್ಲಿಸದಂತೆ ತಡೆ – ಪ್ರತಿಭಟನೆಗೆ ವಿಷ್ಣು ಫ್ಯಾನ್ಸ್‌ ನಿರ್ಧಾರ

    – ಹುಟ್ಟು ಹಬ್ಬದ ದಿನವೇ ಸ್ಟೂಡಿಯೋ ಮಾಲೀಕರು-ವಿಷ್ಣು ಫ್ಯಾನ್ಸ್‌ನಡುವೆ ಶೀತಲ ಸಮರ

    ಬೆಂಗಳೂರು: ಅಭಿಮಾನ್‌ ಸ್ಟುಡಿಯೋದಲ್ಲಿರೋ ವಿಷ್ಣು ಸ್ಮಾರಕಕ್ಕೆ (Abhiman Studio Vishnuvardhan Memorial) ಪೂಜೆ ಸಲ್ಲಿಸದಂತೆ ನಟ ಬಾಲಣ್ಣ ಅವರ ಮಕ್ಕಳಿಂದ ತಡೆಯೊಡ್ಡಿದ ಹಿನ್ನೆಲೆ ಅಭಿಮಾನ್‌ ಸ್ಟುಡಿಯೋ ಮುಂದೆ ದಿ. ಡಾ.ವಿಷ್ಣುವರ್ಧನ್‌ ಅಭಿಮಾನಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.

    ದಿ. ಡಾ.ವಿಷ್ಣುವರ್ಧನ್ ಅವರ 74ನೇ ಜನ್ಮದಿನದ ಅಂಗವಾಗಿ ಸಾವಿರಾರು ಅಭಿಮಾನಿಗಳು (Vishnu Fans) ಬೆಂಗಳೂರಿನ ಅಭಿಮಾನ್‌ ಸ್ಟುಡಿಯೋ ಸ್ಮಾರಕಕ್ಕೆ ಪೂಜೆ ಸಲ್ಲಿಸಲು ಆಗಮಿಸಿದ್ದಾರೆ. ದೂರದೂರುಗಳಿಂದ ಬೆಳ್ಳಂಬೆಳಗ್ಗೆಯೇ ಬಂದು ಸಾಲುಗಟ್ಟಿ ನಿಂತಿದ್ದಾರೆ. ಆದ್ರೆ ವಿಷ್ಣು ಸ್ಮಾರಕಕ್ಕೆ ಪೂಜೆ ಸಲ್ಲಿಸದಂತೆ ನಟ ಬಾಲಣ್ಣ ಅವರ ಮಕ್ಕಳು ತಡೆಯೊಡ್ಡಿದ್ದಾರೆ. ಸ್ಟುಡಿಯೋ ಗೇಟ್‌ ಬೀಗ ಹಾಕಿ ಸ್ಮಾರಕ ಮೈಸೂರಿನಲ್ಲಿ ಆಗಿರುವುದರಿಂದ ಅಲ್ಲಿಗೇ ಹೋಗಿ ಪೂಜೆ ಮಾಡುವಂತೆ ಖಾರವಾಗಿ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಅಭಿಮಾನಿಗಳು ಸ್ಮಾರಕದ ಗೇಟ್‌ ಬಳಿ ಪ್ರತಿಭಟನೆಗೆ ನಿರ್ಧರಿಸಿದ್ದಾರೆ. ಇದನ್ನೂ ಓದಿ: ಹಾಳಾಗುತ್ತಿದೆ ಯುವಜನತೆಯ ಆರೋಗ್ಯ – 60 ಅಲ್ಲ 30 ರಲ್ಲೇ ಬೈಪಾಸ್‌ ಸರ್ಜರಿ 

    ವಿಷ್ಣುವರ್ಧನ್ ಹೆಸರಿನಲ್ಲಿ ಅಭಿಮಾನಿ ಸ್ಟುಡಿಯೋದಲ್ಲಿ ಯಾವುದೇ ಕಾರ್ಯಕ್ರಮ, ಸಂಭ್ರಮಾಚಾರಣೆ ಮಾಡದಂತೆ ನಟ ಬಾಲಣ್ಣ ಅವರ ಮಕ್ಕಳು ಕೋರ್ಟಿನಿಂದ ತಡೆಯಾಜ್ಞೆ ತಂದಿದ್ದಾರೆ. ಆದ್ರೆ ಅಭಿಮಾನಿಗಳು ಪೂಜೆ ಸಲ್ಲಿಸೋಕೆ ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ. ಇದರ ಹೊರತಾಗಿಯೂ ಕೋರ್ಟ್ ತಡೆಯಾಜ್ಞೆ ನೆಪ ಹೇಳಿ ಕೆಂಗೇರಿ ಪೋಲಿಸರು ಅನುಮತಿಗೆ ನಿರಾಕರಿಸಿದ್ದಾರೆ. ಇದನ್ನೂ ಓದಿ: PUBLiC TV Impact | ಮೆಟ್ರೋ ನಿಲ್ದಾಣದಲ್ಲಿ ಆರೈಕೆ ಕೇಂದ್ರ ಸ್ಥಾಪಿಸುವಂತೆ BMRCLಗೆ ಮಹಿಳಾ ಆಯೋಗ ಪತ್ರ

    ಇದರಿಂದ ಅಸಮಾಧಾನಗೊಂಡ ನೂರಾರು ಸಂಖ್ಯೆಯ ವಿಷ್ಣುವರ್ಧನ್‌ ಅಭಿಮಾನಿಗಳು ಅಭಿಮಾನ್‌ ಸ್ಟುಡಿಯೋ ಗೇಟ್‌ ಬಳಿಯೇ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಇದರಿಂದ ಹುಟ್ಟು ಹಬ್ಬದ ದಿನವೇ ಅಭಿಮಾನ್ ಸ್ಟೂಡಿಯೋ ಮಾಲೀಕರು ಮತ್ತು ವಿಷ್ಣು ಫ್ಯಾನ್ಸ್‌ನಡುವೆ ಶೀತಲ ಸಮರ ಮುಂದುವರಿದಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರ: ದಶಕದ ಮೊದಲ ವಿಧಾನಸಭಾ ಚುನಾವಣೆಗೆ ಇಂದು ಮತದಾನ

  • ದೌರ್ಜನ್ಯ ನಡೆಸಿ ವಿಷ್ಣು ಸ್ಮಾರಕಕ್ಕೆ ಜಮೀನು ಕಿತ್ತುಕೊಳ್ಳೋ ಬದಲು ವಿಷ ಕೊಟ್ಟು ಬಿಡಿ – ರೈತ ಮಹಿಳೆ

    ದೌರ್ಜನ್ಯ ನಡೆಸಿ ವಿಷ್ಣು ಸ್ಮಾರಕಕ್ಕೆ ಜಮೀನು ಕಿತ್ತುಕೊಳ್ಳೋ ಬದಲು ವಿಷ ಕೊಟ್ಟು ಬಿಡಿ – ರೈತ ಮಹಿಳೆ

    ಮೈಸೂರು: ನಮ್ಮ ಮೇಲೆ ದೌರ್ಜನ್ಯ ನಡೆಸಿ ಜಮೀನು ಕಿತ್ತು ಕೊಳ್ಳುವ ಬದಲು ವಿಷ ಕೊಟ್ಟು ಬಿಡಿ ಇಲ್ಲೆ ಎಲ್ಲಾ ಸತ್ತು ಹೋಗುತ್ತೇವೆ ಎಂದು ಡಾ. ವಿಷ್ಣು ಸ್ಮಾರಕ ನಿರ್ಮಾಣ ಮಾಡಲು ಗುರುತಿಸಿರುವ ಜಮೀನಿನಲ್ಲಿ ಕೃಷಿ ಮಾಡುತ್ತಿರುವ ರೈತ ಮಹಿಳೆ ಜಯಮ್ಮ ಹೇಳಿದ್ದಾರೆ.

    ಮೈಸೂರಿನ ಹೊರವಲಯದ ಹಾಲಾಳು ಗ್ರಾಮದಲ್ಲಿ ಸ್ಮಾರಕ ನಿರ್ಮಾಣಕ್ಕೆ ಸರಕಾರ ಮುಂದಾಗಿತ್ತು. ಸರ್ಕಾರದ ನಿರ್ಧಾರಕ್ಕೆ ಈ ಜಾಗದಲ್ಲಿ ಕಳೆದ 4 ತಲೆಮಾರುಗಳಿಂದ ಉಳುಮೆ ಮಾಡುತ್ತಿರುವ ಜಯಮ್ಮ ಕುಟುಂಬ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದೆ.

    ವಿಷ್ಣು ಸ್ಮಾರಕ ವಿವಾದಕ್ಕೆ ಅಭಿಮಾನಿಗಳು ಆಗ್ರಹಿಸಿದ ಅಭಿಮಾನಿಗಳ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರೈತ ಮಹಿಳೆ ಜಯಮ್ಮ, ನಮಗೆ ಸೂಕ್ತವಾದ ಪರಿಹಾರ ಕೊಟ್ಟು ಜಮೀನು ತೆಗೆದುಕೊಳ್ಳಿ ಎಂದು ಹೇಳಿದ್ದೇನೆ. ಅದನ್ನು ಬಿಟ್ಟು ದೌರ್ಜನ್ಯ ಮಾಡಿ ಜಮೀನು ಕಿತ್ತು ಕೊಳ್ಳುವುದಾರೆ ವಿಷ ಕೊಡಿ. ನಮ್ಮ ಸಮಾಧಿಯೂ ಇಲ್ಲೇ ಮಾಡಿ ಎಂದರು.

    ಭಾರತಿ ವಿಷ್ಣುವರ್ಧನ್ ಅವರು ನಮ್ಮ ಜೊತೆ ಸರಿಯಾಗಿ ಮಾತನಾಡಿಲ್ಲ. ಇಲ್ಲಿಗೆ ಬರುವ ಎಲ್ಲರೂ ದೌರ್ಜನ್ಯದಿಂದ ನಡೆದುಕೊಳ್ಳುತ್ತಿದ್ದಾರೆ. ನಾಳೆಯಿಂದ ಈ ಜಮೀನಿಗೆ ಯಾರಿಗೂ ಕಾಲಿಡುವುದಕ್ಕೂ ಬಿಡಲ್ಲ. ನಮಗೇ ಸೂಕ್ತ ಪರಿಹಾರ ನೀಡದೆ 4 ತಲೆ ಮಾರುಗಳಿಂದ ಇದೇ ಭೂಮಿಯನ್ನು ನಂಬಿ ಜೀವನ ನಡೆಸುವ ನಮ್ಮ ಅನ್ನಕ್ಕೆ ಕಲ್ಲು ಹಾಕಬೇಡಿ. ನಿಮಗೇ ಇದೇ ಜಾಮೀನು ಬೇಕೆಂದರೆ ಸೂಕ್ತ ಪರಿಹಾರ ನೀಡಿ. ಈ ವಿಚಾರದಲ್ಲಿ ಭಾರತಿ ವಿಷ್ಣುವರ್ಧನ್ ಅವರು ಅಸಹಾಯಕರಾಗಿದ್ದಾರೆ. ಈ ಹಿಂದೆ ಸರ್ಕಾರ ಸ್ಮಾರಕ ನಿರ್ಮಾಣಕ್ಕೆ ಹಣ ನೀಡಲ್ಲ ಎಂದು ಹೇಳಿ, ಸ್ವತಃ ಅವರೇ ಹಣ ನೀಡುತ್ತೇನೆ ಎಂದು ಮಾಹಿತಿ ನೀಡಿದ್ದರು. ಆದರೆ ಅವರು ನೀಡುವ 20 ಲಕ್ಷ ರೂ. ಮಾತ್ರ ನೀಡಿದರೆ ನಮಗೆ ಅನ್ಯಾಯವಾಗುತ್ತದೆ. ಸರ್ಕಾರ ಗೋಮಾಳ ಎಂದು ಹೇಳುತ್ತೆ. ಅದಕ್ಕೆ ನಾವು ಪರಿಹಾರಕ್ಕಾಗಿ ನ್ಯಾಯಾಲಯ ಮೋರೆ ಹೋಗಿದ್ದೇವೆ ಎಂದರು. ಇದನ್ನು ಓದಿ : ಸಾಹಸ ಸಿಂಹನಿಗೆ ಪೂಜೆ ಸಲ್ಲಿಸಿದ ಅಭಿಮಾನಿಗಳು – ಸ್ಮಾರಕ ನಿರ್ಮಾಣಕ್ಕೆ ಶಂಕು ಸ್ಥಾಪನೆ

    ಎಷ್ಟು ಪರಿಹಾರ ಬೇಕು ಎಂದು ಕೇಳಿದ್ದಕ್ಕೆ, 20 ಲಕ್ಷ ಬೇಡ. ನಮ್ಮ ಮನೆಯಲ್ಲಿ 5 ಮಂದಿ ಇದ್ದಾರೆ. ಒಂದೊಂದು ತಲೆಗೆ 30 ಲಕ್ಷ ಕೊಡಬೇಕು. ನಮ್ಮ ಬೇಡಿಕೆಗೆ ಭಾರತಿ ವಿಷ್ಣುವರ್ಧನ್ ಒಪ್ಪಿಗೆ ನೀಡಲಿಲ್ಲ ಎಂದು ಹೇಳಿದರು.

    ಕಲಾವದರಿಗೂ ಕಷ್ಟ ಸುಖ ಗೊತ್ತಿರುತ್ತದೆ. ನಮಗೆ ಮಾತುಕತೆ ಮೂಲವೇ ಚರ್ಚೆ ನಡೆಸಿ ಪರಿಹಾರ ನೀಡಲು ಮುಂದಾದರೆ ಸಿದ್ಧರಾಗಿದ್ದೇವೆ. ಈ ಕುರಿತು ಸರ್ಕಾರದ ಅಧಿಕಾರಿಗಳಿಗೂ ಕೂಡ ನಮ್ಮ ಬೇಡಿಕೆ ತಿಳಿಸಿದ್ದೇವೆ. ಈ ಭೂಮಿಯನ್ನು ನಂಬಿಯೇ ನಮ್ಮ ಕುಟುಂಬ ಜೀವನ ನಡೆಸುತ್ತಿದ್ದು, ಸೂಕ್ತ ಪರಿಹಾರ ನೀಡಬೇಕು ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv