Tag: ವಿಷ್ಣು ಮಂಚು

  • ‘ಶಿವ’ನಾಗಿ ಪ್ರಭಾಸ್: ಕಣ್ಣಪ್ಪನ ಸಿನಿಮಾಗೆ ಹೊಸ ಮೆರುಗು

    ‘ಶಿವ’ನಾಗಿ ಪ್ರಭಾಸ್: ಕಣ್ಣಪ್ಪನ ಸಿನಿಮಾಗೆ ಹೊಸ ಮೆರುಗು

    ಣ್ಣಪ್ಪ ಸಿನಿಮಾದಲ್ಲಿ ಪ್ರಭಾಸ್ ಶಿವನ (Shiva) ಪಾತ್ರವನ್ನು ನಿರ್ವಹಿಸಲಿದ್ದಾರೆ. ಶಿವನಾಗಿ ಪ್ರಭಾಸ್ (Prabhas) ಹೇಗೆ ಕಾಣುತ್ತಾರೆ ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿ ಇದ್ದೇ ಇತ್ತು. ಹಾಗಾಗಿಯೇ ಅಭಿಮಾನಿಗಳು ತಾವೇ ‘ಎಐ’ ತಂತ್ರಜ್ಞಾನದಲ್ಲಿ ಶಿವನ ಅವತಾರ ಫೋಟೋ ರೆಡಿ ಮಾಡಿದ್ದಾರೆ. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋಗಳು ಸದ್ಯ ವೈರಲ್ ಆಗಿವೆ.

    ನ್ಯೂಜಿಲೆಂಡ್‌ನಲ್ಲಿ ಶೂಟಿಂಗ್

    ವಿಷ್ಣು ಮಂಚು ಅಭಿನಯದ ‘ಕಣ್ಣಪ್ಪ’ (Kannappa) ಚಿತ್ರಕ್ಕೆ ನ್ಯೂಜಿಲೆಂಡ್ (New Zealand) ನಲ್ಲಿ ಚಿತ್ರೀಕರಣ (Shooting) ಪ್ರಾರಂಭವಾಗಿದೆ. ಈ ಚಿತ್ರವು ವಿಷ್ಣು ಮಂಚು (Vishnu Manchu) ಅವರ ಮಹತ್ವಾಕಾಂಕ್ಷೆಯ ಚಿತ್ರವಾಗಿದ್ದು, ಇಂಥದ್ದೊಂದು ಪೌರಾಣಿಕ ಚಿತ್ರದ ಭಾಗವಾಗಬೇಕು ಎಂಬುದು ಅವರ ಏಳು ವರ್ಷಗಳ ಕನಸಾಗಿತ್ತು. ಅದು ಶಿವ-ಪಾರ್ವತಿಯರ ಆಶೀರ್ವಾದದಿಂದ ಕೊನೆಗೂ ನನಸಾಗಿದೆ ಎಂದು ವಿಷ್ಣು ಹೇಳಿಕೊಂಡಿದ್ದಾರೆ.

    ಇಂಥದ್ದೊಂದು ಬೃಹತ್‍ ಭಕ್ತಿಪ್ರಧಾನ ಚಿತ್ರದ ಕನಸನ್ನು ವಿಷ್ಣು ಅವರಲ್ಲಿ ಮೊದಲಿಗೆ ಬಿತ್ತಿದ್ದು ಖ್ಯಾತ ನಟ ಮತ್ತು ನಿರ್ದೇಶಕ ತನಿಕೆಲ್ಲ ಭರಣಿ. ಏಳು ವರ್ಷಗಳ ಹಿಂದೆ, ಭರಣಿ ಅವರು ವಿಷ್ಣುಗೆ ‘ಕಣ್ಣಪ್ಪ’ ಚಿತ್ರದ ಕಥೆ ಹೇಳಿದರಂತೆ. ಅಲ್ಲಿಂದ ಪ್ರಾರಂಭವಾದ ಪ್ರಯಾಣ, ಈಗ ಸಿನಿಮಾ ಪ್ರಾರಂಭವಾಗುವವರೆಗೂ ಬಂದು ನಿಂತಿದೆ. ಈ ಪ್ರಯಾಣದಲ್ಲಿ ಕಥೆಗೆ ಸೂಕ್ತ ಸಲಹೆ, ಸೂಚನೆ ಕೊಟ್ಟು ಪ್ರೋತ್ಸಾಹಿಸಿದ ಪರಚೂರಿ ಗೋಪಾಲಕೃಷ್ಣ, ವಿಜಯೇಂದ್ರ ಪ್ರಸಾದ್‍, ತೋಟಪಲ್ಲಿ ಸಾಯಿನಾಥ್‍, ತೋಟ ಪ್ರಸಾದ್‍ ಮತ್ತು ನಿರ್ದೇಶಕರಾದ ನಾಗೇಶ್ವರ ರೆಡ್ಡಿ ಹಾಗೂ ಈಶ್ವರ ರೆಡ್ಡಿ ಮುಂತಾದವರನ್ನು ವಿಷ್ಣು ಮರೆಯುವುದಿಲ್ಲ. ಅವರೆಲ್ಲರ ಸಲಹೆ-ಸೂಚನೆಗಳಿಲ್ಲದಿದ್ದರೆ ಚಿತ್ರದ ಕಥೆ ಇಷ್ಟೊಂದು ಅದ್ಭುತವಾಗಿ ಮೂಡಿಬರುವುದಕ್ಕೆ ಸಾಧ್ಯವಿರಲಿಲ್ಲ ಎಂದು ನಂಬಿದ್ದಾರೆ. ಇದನ್ನೂ ಓದಿ:ನಟ ರಣಬೀರ್ ಕಪೂರ್ ಗೆ ‘ಇಡಿ’ ಶಾಕ್: ವಿಚಾರಣೆಗಾಗಿ ನೋಟಿಸ್

    ಕಳೆದ ಎಂಟು ತಿಂಗಳುಗಳು ಮರೆಯಲಾರದ ಅನುಭವ ಎನ್ನುವ ವಿಷ್ಣು, ಕಣ್ಣಪ್ಪ ಚಿತ್ರತಂಡದವರಿಗೆ ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಒಂದು ಮರೆಯಲಾರದ ಅನುಭವ. ನಮ್ಮ ತಂಡದವರು ರಜೆ ಇಲ್ಲದೆ ಕೆಲಸ ಮಾಡಿದ್ದಾರೆ. ಹಬ್ಬಗಳನ್ನು ಮರೆತು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ. ದಿನಕ್ಕೆ ಐದು ಗಂಟೆಯಷ್ಟೇ ನಿದ್ದೆ ಮಾಡಿದ್ದಾರೆ. ಎಷ್ಟೇ ಒತ್ತಡಗಳಿದ್ದರೂ, ನಮ್ಮ ನಿರ್ಧಾರ ಮತ್ತು ನಂಬಿಕೆ ಅಚಲವಾಗಿತ್ತು. ಎಲ್ಲರ ಶ್ರಮದಿಂದಾಗಿ ಕಣ್ಣಪ್ಪ ಚಿತ್ರವು ಚಿತ್ರೀಕರಣ ಹಂತದವರೆಗೂ ಬಂದಿದೆ. 600ಕ್ಕೂ ಹೆಚ್ಚು ಜನರ ತಂಡ ನ್ಯೂಜಿಲೆಂಡ್‌ನಲ್ಲಿ ಬೀಡುಬಿಟ್ಟು, ನಮ್ಮ ಕನಸನ್ನು ನನಸಾಗಿಸುವುದಕ್ಕೆ ದುಡಿಯುತ್ತಿದೆ. ನಮ್ಮ ತಂದೆ ಮೋಹನ್‍ ಬಾಬು ಅವರ ಸಹಕಾರ, ಪ್ರೋತ್ಸಾಹವು ನಮ್ಮ ತಂಡಕ್ಕೆ ದೊಡ್ಡ ಸ್ಫೂರ್ತಿಯಾಗಿದೆ ಎನ್ನುತ್ತಾರೆ.

     

    ಕಣ್ಣಪ್ಪ ಚಿತ್ರದಲ್ಲಿ ಈ ದೇಶದ ಪ್ರತಿಭಾವಂತ ನಟರ ದಂಡೇ ಇದೆಯಂತೆ. ಚಿತ್ರದಲ್ಲಿ ಯಾರು ಯಾರು ನಟಿಸುತ್ತಿದ್ದಾರೆ ಎಂಬ ವಿಷಯವನ್ನು ಮುಂದಿನ ದಿನಗಳಲ್ಲಿ ಹಂತಹಂತವಾಗಿ ತಿಳಿಸಲಾಗುತ್ತದಂತೆ. ಅದರ ಮಧ್ಯೆಯೂ ಸೋಷಿಯಲ್‍ ಮೀಡಿಯಾದಲ್ಲಿ ಚಿತ್ರದ ಕುರಿತು ಸುಳ್ಳುಸುದ್ದಿಗಳು ಹರಡುತ್ತಿರುವುದರಿಂದ, ಅದನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು ಎಂದು ವಿಷ್ಣು ಮನವಿ ಮಾಡಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನ್ಯೂಜಿಲ್ಯಾಂಡ್ ನಲ್ಲಿ ಚಿತ್ರೀಕರಣ ಆರಂಭಿಸಿದ ‘ಕಣ್ಣಪ್ಪ’

    ನ್ಯೂಜಿಲ್ಯಾಂಡ್ ನಲ್ಲಿ ಚಿತ್ರೀಕರಣ ಆರಂಭಿಸಿದ ‘ಕಣ್ಣಪ್ಪ’

    ವಿಷ್ಣು ಮಂಚು ಅಭಿನಯದ ‘ಕಣ್ಣಪ್ಪ’ (Kannappa) ಚಿತ್ರಕ್ಕೆ ನ್ಯೂಜಿಲ್ಯಾಂಡ್‍ (New Zealand) ನಲ್ಲಿ ಚಿತ್ರೀಕರಣ (Shooting) ಪ್ರಾರಂಭವಾಗಿದೆ. ಈ ಚಿತ್ರವು ವಿಷ್ಣು ಮಂಚು (Vishnu Manchu) ಅವರ ಮಹತ್ವಾಕಾಂಕ್ಷೆಯ ಚಿತ್ರವಾಗಿದ್ದು, ಇಂಥದ್ದೊಂದು ಪೌರಾಣಿಕ ಚಿತ್ರದ ಭಾಗವಾಗಬೇಕು ಎಂಬುದು ಅವರ ಏಳು ವರ್ಷಗಳ ಕನಸಾಗಿತ್ತು. ಅದು ಶಿವ-ಪಾರ್ವತಿಯರ ಆಶೀರ್ವಾದದಿಂದ ಕೊನೆಗೂ ನನಸಾಗಿದೆ ಎಂದು ವಿಷ್ಣು ಹೇಳಿಕೊಂಡಿದ್ದಾರೆ.

    ಇಂಥದ್ದೊಂದು ಬೃಹತ್‍ ಭಕ್ತಿಪ್ರಧಾನ ಚಿತ್ರದ ಕನಸನ್ನು ವಿಷ್ಣು ಅವರಲ್ಲಿ ಮೊದಲಿಗೆ ಬಿತ್ತಿದ್ದು ಖ್ಯಾತ ನಟ ಮತ್ತು ನಿರ್ದೇಶಕ ತನಿಕೆಲ್ಲ ಭರಣಿ. ಏಳು ವರ್ಷಗಳ ಹಿಂದೆ, ಭರಣಿ ಅವರು ವಿಷ್ಣುಗೆ ‘ಕಣ್ಣಪ್ಪ’ ಚಿತ್ರದ ಕಥೆ ಹೇಳಿದರಂತೆ. ಅಲ್ಲಿಂದ ಪ್ರಾರಂಭವಾದ ಪ್ರಯಾಣ, ಈಗ ಸಿನಿಮಾ ಪ್ರಾರಂಭವಾಗುವವರೆಗೂ ಬಂದು ನಿಂತಿದೆ. ಈ ಪ್ರಯಾಣದಲ್ಲಿ ಕಥೆಗೆ ಸೂಕ್ತ ಸಲಹೆ, ಸೂಚನೆ ಕೊಟ್ಟು ಪ್ರೋತ್ಸಾಹಿಸಿದ ಪರಚೂರಿ ಗೋಪಾಲಕೃಷ್ಣ, ವಿಜಯೇಂದ್ರ ಪ್ರಸಾದ್‍, ತೋಟಪಲ್ಲಿ ಸಾಯಿನಾಥ್‍, ತೋಟ ಪ್ರಸಾದ್‍ ಮತ್ತು ನಿರ್ದೇಶಕರಾದ ನಾಗೇಶ್ವರ ರೆಡ್ಡಿ ಹಾಗೂ ಈಶ್ವರ ರೆಡ್ಡಿ ಮುಂತಾದವರನ್ನು ವಿಷ್ಣು ಮರೆಯುವುದಿಲ್ಲ. ಅವರೆಲ್ಲರ ಸಲಹೆ-ಸೂಚನೆಗಳಿಲ್ಲದಿದ್ದರೆ ಚಿತ್ರದ ಕಥೆ ಇಷ್ಟೊಂದು ಅದ್ಭುತವಾಗಿ ಮೂಡಿಬರುವುದಕ್ಕೆ ಸಾಧ್ಯವಿರಲಿಲ್ಲ ಎಂದು ನಂಬಿದ್ದಾರೆ. ಇದನ್ನೂ ಓದಿ:ಕರ್ನಾಟಕದವರು ಸತ್ತಿಲ್ಲ, ಬದುಕಿದ್ದೇವೆ- ಕಾವೇರಿ ಪರ ಧ್ವನಿಯೆತ್ತಿದ ಸಾ ರಾ ಗೋವಿಂದು

    ಕಳೆದ ಎಂಟು ತಿಂಗಳುಗಳು ಮರೆಯಲಾರದ ಅನುಭವ ಎನ್ನುವ ವಿಷ್ಣು, ಕಣ್ಣಪ್ಪ ಚಿತ್ರತಂಡದವರಿಗೆ ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಒಂದು ಮರೆಯಲಾರದ ಅನುಭವ. ನಮ್ಮ ತಂಡದವರು ರಜೆ ಇಲ್ಲದೆ ಕೆಲಸ ಮಾಡಿದ್ದಾರೆ. ಹಬ್ಬಗಳನ್ನು ಮರೆತು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ. ದಿನಕ್ಕೆ ಐದು ಗಂಟೆಯಷ್ಟೇ ನಿದ್ದೇ ಮಾಡಿದ್ದಾರೆ. ಎಷ್ಟೇ ಒತ್ತಡಗಳಿದ್ದರೂ, ನಮ್ಮ ನಿರ್ಧಾರ ಮತ್ತು ನಂಬಿಕೆ ಅಚಲವಾಗಿತ್ತು. ಎಲ್ಲರ ಶ್ರಮದಿಂದಾಗಿ ಕಣ್ಣಪ್ಪ ಚಿತ್ರವು ಚಿತ್ರೀಕರಣ ಹಂತದವರೆಗೂ ಬಂದಿದೆ. 600ಕ್ಕೂ ಹೆಚ್ಚು ಜನರ ತಂಡ ನ್ಯೂಜಿಲ್ಯಾಂಡ್‍ನಲ್ಲಿ ಬೀಡುಬಿಟ್ಟು, ನಮ್ಮ ಕನಸನ್ನು ನನಸಾಗಿಸುವುದಕ್ಕೆ ದುಡಿಯುತ್ತಿದೆ. ನಮ್ಮ ತಂದೆ ಮೋಹನ್‍ ಬಾಬು ಅವರ ಸಹಕಾರ, ಪ್ರೋತ್ಸಾಹವು ನಮ್ಮ ತಂಡಕ್ಕೆ ದೊಡ್ಡ ಸ್ಫೂರ್ತಿಯಾಗಿದೆ ಎನ್ನುತ್ತಾರೆ.

     

    ಕಣ್ಣಪ್ಪ ಚಿತ್ರದಲ್ಲಿ ಈ ದೇಶದ ಪ್ರತಿಭಾವಂತ ನಟರ ದಂಡೇ ಇದೆಯಂತೆ. ಚಿತ್ರದಲ್ಲಿ ಯಾರು ಯಾರು ನಟಿಸುತ್ತಿದ್ದಾರೆ ಎಂಬ ವಿಷಯವನ್ನು ಮುಂದಿನ ದಿನಗಳಲ್ಲಿ ಹಂತಹಂತವಾಗಿ ತಿಳಿಸಲಾಗುತ್ತದಂತೆ. ಅದರ ಮಧ್ಯೆಯೂ ಸೋಷಿಯಲ್‍ ಮೀಡಿಯಾದಲ್ಲಿ ಚಿತ್ರದ ಕುರಿತು ಸುಳ್ಳುಸುದ್ದಿಗಳು ಹರಡುತ್ತಿರುವುದರಿಂದ, ಅದನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು ಎಂದು ವಿಷ್ಣು ಮನವಿ ಮಾಡಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಕಣ್ಣಪ್ಪ’ ಸಿನಿಮಾದಿಂದ ಹೊರ ನಡೆದ ನಟಿ ನೂಪರ್ ಸನನ್

    ‘ಕಣ್ಣಪ್ಪ’ ಸಿನಿಮಾದಿಂದ ಹೊರ ನಡೆದ ನಟಿ ನೂಪರ್ ಸನನ್

    ಭಾರೀ ಬಜೆಟ್ ನಲ್ಲಿ ತಯಾರಾಗುತ್ತಿರುವ ‘ಭಕ್ತ ಕಣ್ಣಪ್ಪ’ ಸಿನಿಮಾದಿಂದ ಖ್ಯಾತ ಬಾಲಿವುಡ್ ನಟಿ ನೂಪರ್ ಸನನ್ (Nupur Sanan) ಹೊರ ಬಂದಿದ್ದಾರೆ. ಅಂದುಕೊಂಡಂತೆ ಆಗಿದ್ದರೆ, ಇವರು ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಬೇಕಿತ್ತು. ಆದರೆ, ನೂಪರ್ ಚಿತ್ರತಂಡದಿಂದ ಆಚೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

    ರಾಜ್‌ಕುಮಾರ್‌ ನಟನೆಯ ‘ಬೇಡರ ಕಣ್ಣಪ್ಪ’ ಸಿನಿಮಾ ತೆಲುಗಿನಲ್ಲಿ ರಿಮೇಕ್ ಆಗುತ್ತಿದೆ. ಹೊಸ ರೂಪದಲ್ಲಿ ‘ಭಕ್ತ ಕಣ್ಣಪ್ಪ’ ಸಿನಿಮಾವಾಗಿ ಮೂಡಿ ಬರಲಿದ್ದು, ಬಾಹುಬಲಿ ಪ್ರಭಾಸ್ (Prabhas) ಪ್ರಮುಖ ಪಾತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ

    1952ರಲ್ಲಿ ಡಾ.ರಾಜ್‌ಕುಮಾರ್ ‘ಬೇಡರ ಕಣ್ಣಪ್ಪ’ ಸಿನಿಮಾದಲ್ಲಿ ನಟಿಸಿದ್ದರು. ಅಣ್ಣಾವ್ರು ಮಾಡಿದ್ದ ಪಾತ್ರವನ್ನೇ ಕೃಷ್ಣಂ ರಾಜು ಅವರು ನಟಿಸಿ ಸೈ ಎನಿಸಿಕೊಂಡಿದ್ದರು. ಈ ಸಿನಿಮಾ ಕೃಷ್ಣಂ ರಾಜು (Krishnam Raju) ಅವರ ವೃತ್ತಿರಂಗದಲ್ಲಿ ಬಿಗ್ ಬ್ರೇಕ್ ಕೊಟ್ಟಿತ್ತು. ಚಿತ್ರ ಸಕ್ಸಸ್‌ಫುಲ್ ಪ್ರದರ್ಶನ ಕಂಡಿತ್ತು. ಇದೇ ಸಿನಿಮಾವನ್ನು ಹೊಸ ವರ್ಷನ್‌ನಲ್ಲಿ ಪ್ರಭಾಸ್ ನಿರ್ಮಿಸುವ ಕನಸು ಅವರಿಗಿತ್ತು. ಆದರೆ ಕಳೆದ ವರ್ಷ ಅವರು ನಿಧನರಾದರು.

    ಕಣ್ಣಪ್ಪ ಕುರಿತ ಸಿನಿಮಾದಲ್ಲಿ ನಟ ಪ್ರಭಾಸ್ ನಟಿಸುವುದು ಪಕ್ಕಾ ಆಗಿದೆ. ಆದರೆ ಅವರಿಲ್ಲಿ ಕಣ್ಣಪ್ಪನ ಪಾತ್ರ ಮಾಡುತ್ತಿಲ್ಲ. ಬದಲಿಗೆ, ಆ ಸಿನಿಮಾದಲ್ಲಿ ವಿಶೇಷ ಪಾತ್ರ ಮಾಡಲಿದ್ದಾರೆ. ಹೌದು, ಕಣ್ಣಪ್ಪನ ಸಿನಿಮಾದಲ್ಲಿ ಪ್ರಭಾಸ್ ಅವರು ಶಿವನ ಪಾತ್ರ ಮಾಡಲಿದ್ದಾರೆ. ಈ ಮೂಲಕ ದೊಡ್ಡಪ್ಪನ ಕನಸನ್ನು ಪ್ರಭಾಸ್ ನನಸು ಮಾಡುತ್ತಿರೋದಕ್ಕೆ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

     

    ‘ಭಕ್ತ ಕಣ್ಣಪ್ಪ’ (Bhakta Kannappa) ಸಿನಿಮಾವನ್ನು ಹೊಸ ರೂಪದಲ್ಲಿ ನಟ ಮಂಚು ವಿಷ್ಣು (Manchu Vishnu) ನಿರ್ಮಾಣ ಮಾಡುತ್ತಿದ್ದಾರೆ. ಕಣ್ಣಪ್ಪನ ಪಾತ್ರದಲ್ಲಿ ಮಂಚು ವಿಷ್ಣು ನಟಿಸಲಿದ್ದಾರೆ. 150 ಕೋಟಿ. ರೂ ಬಜೆಟ್‌ನಲ್ಲಿ ಸಿನಿಮಾ ಮೂಡಿ ಬರಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಕ್ಕಳ ಜಗಳಕ್ಕೆ ಬ್ರೇಕ್‌ ಹಾಕಲು ಆಸ್ತಿ ಹಂಚಿಕೆಗೆ ಮುಂದಾದ ನಟ ಮೋಹನ್‌ ಬಾಬು?

    ಮಕ್ಕಳ ಜಗಳಕ್ಕೆ ಬ್ರೇಕ್‌ ಹಾಕಲು ಆಸ್ತಿ ಹಂಚಿಕೆಗೆ ಮುಂದಾದ ನಟ ಮೋಹನ್‌ ಬಾಬು?

    ಟಾಲಿವುಡ್‌ನ ಈ ಸ್ಟಾರ್‌ಗೆ ಹೆಸರೂ ಇದೆ ಹಣಾನೂ ಇದೆ. ಮೂವರು ಮಕ್ಕಳು, ಮಕ್ಕಳೆಲ್ಲಾ ಸ್ಟಾರ್ಸು. ಇದೀಗ ಆ ಸ್ಟಾರ್‌ಗೆ ಗಳಿಸಿದ ಆಸ್ತಿಯೇ ತಲೆನೋವು ತಂದಿದೆ. ಎದೆಎತ್ತರಕ್ಕೆ ಬೆಳೆದ ಮಕ್ಕಳು ಕಿತ್ತಾಡ್ಕೊಂಡು ಮೂರು ದಿಕ್ಕಲ್ಲಿ ದಾರಿ ಕಂಡುಕೊಂಡಿದ್ದಾರೆ. ಈ ಕಡೆ ತಂದೆ ಇನ್ನೊಂದು ದಾರಿ ಹಿಡಿದು ಹೊರಟಿದ್ದಾರೆ. ಏನಿದು ಟಾಲಿವುಡ್‌ನಲ್ಲಿ ಗುಲ್ಲಾಗಿರೋ ಜ್ಯುಬಲಿಹಿಲ್ಸ್ ಗಲ್ಲಿ ಸಮಾಚಾರ ಗೊತ್ತೇ..?

    ಟಾಲಿವುಡ್‌ನ (Tollywood)  ಶ್ರೀಮಂತ ನಟರಲ್ಲಿ ಇವರೂ ಒಬ್ಬರು. 90ರ ಕಾಲದ ಸೂಪರ್ ಸ್ಟಾರ್. ನಮ್ಮ್ ಅಂಬರೀಶ್ ಅವರ ಆಪ್ತಮಿತ್ರ. ಅವರ ಹೆಸರೇ ಡೈಲಾಗ್ ಕಿಂಗ್ ಮೋಹನ್ ಬಾಬು. ಡಿಫರೆಂಟ್ ಸ್ಟೈಲ್‌ನಿಂದ ಟಾಲಿವುಡ್‌ನಲ್ಲಿ ಭದ್ರನೆಲೆಕಂಡುಕೊಂಡ ಮೋಹನ್‌ಬಾಬುಗೆ ಮೂವರು ಮಕ್ಕಳು. ವಿಷ್ಣು ಮಂಚು(Vishnu Manchu)  ಮತ್ತು ಮನೋಜ್ ಮಂಚು (Manoj Manchu) ಹಾಗೂ ಲಕ್ಷ್ಮಿ ಮಂಚು. ಮೂರೂ ಮಕ್ಕಳು ಸ್ಟಾರೇ. ಆದರೆ ವಿಷ್ಣು ಹಾಗೂ ಮನೋಜ್ ಮಂಚುವಿನ ಪರಸ್ಪರ ಕಿತ್ತಾಟ ವೈಮನಸ್ಸು ನಾಲ್ಕು ಗೋಡೆ ಮಧ್ಯೆ ಉಳಿದಿಲ್ಲ. ಕೈಕೈಮಿಲಾಯಿಸಿಕೊಂಡು ಹೊಡೆದಾಡಿಕೊಂಡ ವೀಡಿಯೋ ವೈರಲ್ ಆಗಿ ಇಳಿವಯಸಿನಲ್ಲಿ ಮೋಹನ್ ಬಾಬು(Mohan Babu) ತಲೆಕೆಡಿಸಿಕೊಳ್ಳುವಂತಾಯ್ತು. ಇನ್ನು ಮಗಳು ಲಕ್ಷ್ಮಿ ಕೂಡ ತಮ್ಮದೇ ಸೆಪರೇಟ್ ಮನೆ ಮಾಡ್ಕೊಂಡು ವಾಸವಿದ್ದಾಳೆ.

    ಮಕ್ಕಳು ಅವರವರ ಪಾಡಿಗೆ ದೂರ ಇದ್ರೂ ಮೋಹನ್ ಬಾಬು ತಲೆ ಕೆಡಿಸಿಕೊಳ್ತಿರಲಿಲ್ಲವೇನೋ ಆದರೆ ಆಗಿರೋದು ಬೇರೆ ಅನ್ನುತ್ತದೆ ಟಾಲಿವುಡ್ ಮೂಲ. ಮಕ್ಕಳ ಜಗಳ ನೋಡಲಾರದೆ ಮೋಹನ್ ಬಾಬು ಆಸ್ತಿ ಪಾಲು ಮಾಡಲು ಅಲೆಯುತ್ತಿದ್ದಾರೆ. ಆಂಧ್ರದ ರಿಜಿಸ್ಟರ್ ಆಫೀಸ್‌ಗೂ ಮೋಹನ್ ಬಾಬು ಕಾಲಿಟ್ಟಿದ್ದು ಮಕ್ಕಳಿಗೆ ಆಸ್ತಿ ಪಾಲು ಮಾಡಿ ಪಾರಾಗುತ್ತಿದ್ದಾರೆ ಎನ್ನಲಾಗ್ತಿದೆ. ಈ ಮೂಲಕ ನೆಮ್ಮದಿ ಜೀವನ ಕಂಡುಕೊಳ್ಳಲು ಪ್ಲ್ಯಾನ್ ಮಾಡಿದ್ದಾರಂತೆ. ಅದಕ್ಕೆ ಹೇಳೋದು ಹಣ ಅತಿಯಾಗಿದ್ದರೂ ಕಷ್ಟವೇ.

    ಸ್ಟಾರ್ ನಟರ ಕುಟುಂಬ, ಕಲಾವಿದರು ಅಂದ ಮೇಲೆ ಅಭಿಮಾನಿಗಳಿಗೆ ಪ್ರೇರಣೆಯಾಗಬೇಕು. ಕೂಡಿ ಬಾಳುವ ಮೂಲಕ ಫ್ಯಾನ್ಸ್ಗೆ ಉದಾಹರಣೆಯಾಗಿ ನಿಲ್ಲಬೇಕು. ಆದರೆ ಮೋಹನ್ ಬಾಬು ಅವರ ಮನೆಯ ಜಗಳ ನೋಡಿ ಆಡಿಕೊಳ್ಳುವವರ ಬಾಯಿಗೆ ಗುರಿಯಾಗಿದ್ದಾರೆ. ಮುಂದೆ ಏನಾಗತ್ತೋ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟಾಲಿವುಡ್ ನಟ ವಿಷ್ಣು ಮಂಚುಗಾಗಿ ಸನ್ನಿ ಲಿಯೋನ್ ಭರ್ಜರಿ ಕುಕ್ಕಿಂಗ್!

    ಟಾಲಿವುಡ್ ನಟ ವಿಷ್ಣು ಮಂಚುಗಾಗಿ ಸನ್ನಿ ಲಿಯೋನ್ ಭರ್ಜರಿ ಕುಕ್ಕಿಂಗ್!

    ಬಾಲಿವುಡ್‌ನ ಸ್ಟಾರ್ ನಟಿಯರಲ್ಲಿ ಸನ್ನಿ ಲಿಯೋನ್ ಕೂಡ ಒಬ್ಬರು. ಹಿಂದಿ ಚಿತ್ರರಂಗಕ್ಕೆ ಸೀಮಿತವಾಗದೇ ಪರಭಾಷಾ ಚಿತ್ರಗಳಲ್ಲೂ ಛಾಪೂ ಮೂಡಿಸುತ್ತಿರುವ ಕಲಾವಿದೆ. ಸದ್ಯ ತೆಲುಗು ಹೆಸರಿಡದ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ವಿಶೇಷ ಅಂದ್ರೆ ಸೆಟ್‌ನಲ್ಲಿ ನಟ ವಿಷ್ಣು ಮಂಚುಗಾಗಿ ಸನ್ನಿ ಲಿಯೋನ್ ಭರ್ಜರಿ ಅಡುಗೆ ಮಾಡಿದ್ದಾರೆ. ಈ ವಿಡಿಯೋ ಈಗ ಬಾರಿ ವೈರಲ್ ಆಗುತ್ತಿದೆ.

    ನಟಿ ಸನ್ನಿ ಲಿಯೋನ್‌ಗೆ ಪ್ರತಿನಿತ್ಯದ ಅಪ್‌ಡೇಟ್‌ಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಾರೆ ಈ ಮೂಲಕ ತಮ್ಮ ಜೀವನದಲ್ಲಿ ಏನಾಗುತ್ತಿದೆ ಎಂಬ ವಿಚಾರಗಳನ್ನು ಅಭಿಮಾನಿಗಳಿಗೆ ಅಪ್‌ಡೇಟ್ ಮಾಡ್ತಿರತ್ತಾರೆ. ಈಗ ಸನ್ನಿ ತೆಲುಗು ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಈ ವೇಳೆ ಚಿತ್ರೀಕರಣದ ಸೆಟ್‌ನಲ್ಲಿ ರುಚಿ ರುಚಿಯಾದ ಆಲೂ ಪರೋಟ ಮಾಡಿ, ವಿಷ್ಣು ಮಂಚು ಅವರಿಗೆ ಕೊಟ್ಟಿದ್ದಾರೆ.

    ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿರೋ ಸನ್ನಿ ಲಿಯೋನ್ ಕುಕ್ಕಿಂಗ್ ವಿಡಿಯೋದಲ್ಲಿ ಆಲು ಪರೋಟ ಮಾಡುವ ವಿಧಾನದ ತೋರಿಸುತ್ತಾ ಸಹನಟ ವಿಷ್ಣು ಮಂಚು ಅವರಿಗೆ ಆಲೂ ಪರೋಟ ಬೊಂಬಾಟ್ ಭೋಜನ ಮಾಡಿ ಕೊಟ್ಟಿದ್ದಾರೆ. ಈ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ಬಾರೀ ವೈರಲ್ ಆಗುತ್ತಿದೆ. ಇದನ್ನೂ ಓದಿ:ಮದುವೆ ನಂತರ ರಶ್ಮಿಕಾ ಮಂದಣ್ಣ ಜತೆ ಮನಾಲಿಯಲ್ಲಿ ಕಾಣಿಸಿಕೊಂಡ ರಣಬೀರ್ ಕಪೂರ್

     

    View this post on Instagram

     

    A post shared by Sunny Leone (@sunnyleone)

    ಜಿ. ನಾಗೇಂದ್ರ ರೆಡ್ಡಿ ಬರೆದಿರುವ ಚಿತ್ರಕಥೆಗೆ ಈಶಾನ್ ಸೂರ್ಯ ನಿರ್ದೇಶನ ಮಾಡ್ತಿದ್ದಾರೆ. ಚಿತ್ರದಲ್ಲಿ ವಿಷ್ಣು ಮಂಚು ನಾಯಕಿಯಾಗಿ ಪಾಯಲ್ ರಜಪೂತ್ ಕಾಣಿಸಿಕೊಳ್ಳಲಿದ್ದಾರೆ. ಸನ್ನಿ ಲಿಯೋನ್ ಮತ್ತು ಶಿವ ಬಾಲಾಜಿ ಪವರ್‌ಫುಲ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸದ್ಯ ಸನ್ನಿ ಹೊಸ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಬಹುಭಾಷಾ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಸನ್ನಿ ಚಿತ್ರಕ್ಕಾಗಿ ಫ್ಯಾನ್ಸ್ ಕಾಯ್ತಿದ್ದಾರೆ.