Tag: ವಿಷ್ಣುವರ್ಧನ್

  • ಜಮೀನು ಖರೀದಿಸ್ತೀನಿ ಅಂದವರು ಯಾಕೆ ಖರೀದಿಸಿಲ್ಲ : ಅನಿರುದ್ಧ ಪ್ರಶ್ನೆ ಮಾಡಿದ್ದು ಯಾರಿಗೆ?

    ಜಮೀನು ಖರೀದಿಸ್ತೀನಿ ಅಂದವರು ಯಾಕೆ ಖರೀದಿಸಿಲ್ಲ : ಅನಿರುದ್ಧ ಪ್ರಶ್ನೆ ಮಾಡಿದ್ದು ಯಾರಿಗೆ?

    ಭಿಮಾನಿ ಸ್ಟುಡಿಯೋದಲ್ಲಿದ್ದ ನಟ ವಿಷ್ಣುವರ್ಧನ್ (Vishnuvardhan) ಸಮಾಧಿ ನೆಲಸಮ ಆಗುತ್ತಿದ್ದಂತೆಯೇ ಭಾರೀ ಆಕ್ರೋಶ ವ್ಯಕ್ತವಾಯಿತು. ನಟ ಸುದೀಪ್ (Sudeep) ಸೇರಿದಂತೆ ಹಲವರು ಸಮಾಧಿ ನೆಲಸಮ ಆದ ಕುರಿತಂತೆ ಆವೇಶ ಭರಿತ ಮಾತುಗಳನ್ನು ಆಡಿದರು. ಸಮಾಧಿಯ ಜಾಗವನ್ನು ದುಡ್ಡು ಕೊಟ್ಟ ಖರೀದಿಸುವ ಮಾತುಗಳನ್ನು ಸುದೀಪ್ ಆಡಿದರು. ಈ ಕುರಿತಂತೆ ಇವತ್ತು ವಿಷ್ಣು ಮನೆಯಲ್ಲಿ ನಡೆದ ಅಭಿಮಾನಿಗಳ ಸಭೆಯಲ್ಲಿ ಸುದೀಪ್ ಅವರ ಹೆಸರನ್ನು ತಗೆದುಕೊಳ್ಳದೇ, ಈವರೆಗೂ ಜಾಗ ಖರೀದಿ ಯಾಕೆ ಮಾಡಿಲ್ಲ? ಅಂತ ಅನಿರುದ್ಧ ಪ್ರಶ್ನೆ ಮಾಡಿದರು. ಈ ಮೂಲಕ ಸುದೀಪ್ ಅವರಿಗೆ ಅನಿರುದ್ಧ (Aniruddha) ಟಾಂಗ್ ಕೊಟ್ಟರಾ? ಅನ್ನುವ ಚರ್ಚೆ ಶುರುವಾಗಿದೆ.

    ನಟ ವಿಷ್ಣುವರ್ಧನ್ ಅವರ ಸಮಾಧಿ ನೆಲಸಮ ಆದ ಕುರಿತು ಸಾಕಷ್ಟು ಟೀಕೆಗಳು ಕೇಳಿ ಬಂದವು. ಸಮಾಧಿ ನೆಲಸಮ ಆಗಿದ್ದರ ಹಿಂದೆ ಸ್ವತಃ ವಿಷ್ಣುವರ್ಧನ್ ಕುಟುಂಬವೂ ಇದೆ ಅಂತ ಕೆಲವರು ಆರೋಪ ಮಾಡಿದ್ದರು. ಸಮಾಧಿ ಉಳಿಸಿಕೊಳ್ಳಲು ಅಭಿಮಾನಿಗಳು ಮಾಡಿದ ಹೋರಾಟಕ್ಕೆ ವಿಷ್ಣು ಕುಟುಂಬದ ಬೆಂಬಲವಿರಲಿಲ್ಲ ಅನ್ನೋ ಆರೋಪ ಕೂಡ ಕೇಳಿ ಬಂದಿತ್ತು. ದೂರ ಉಳಿಯುವುದಕ್ಕಾಗಿಯೇ ವಿಷ್ಣು ಕುಟುಂಬ ಹಣ ಪಡೆದಿದೆ ಅಂತಾನೂ ಆರೋಪ ಹೊರಸಲಾಗಿತ್ತು. ಈ ಎಲ್ಲದರ ಕುರಿತು ಮಾತನಾಡಲು ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ ಅಭಿಮಾನಿಗಳ ಸಭೆ ಕರೆದಿದ್ದರು. ತಮ್ಮ ಮೇಲಿನ ಆರೋಪಗಳ ಬಗ್ಗೆ ಮಾತಾಡಿದರು. ವಿಷ್ಣು ಸಮಾಧಿ ಕುರಿತಾದ ಹೋರಾಟಕ್ಕೆ ತಮ್ಮ ಬೆಂಬಲವನ್ನೂ ಅವರು ವ್ಯಕ್ತಪಡಿಸಿದರು.

    ಬೆಂಗಳೂರಿನ ಅಭಿಮಾನ್‌ ಸ್ಟುಡಿಯೋದಲ್ಲಿದ್ದ (Abhiman Studio) ಡಾ.ವಿಷ್ಣುವರ್ಧನ್ ಅವರ ಸಮಾಧಿಯನ್ನು ರಾತ್ರೋರಾತ್ರಿ ನೆಲಸಮ ಮಾಡಲಾಗಿತ್ತು. ಇದರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ವಿಷ್ಣುವರ್ಧನ್ ಸಮಾಧಿ ಉಳಿವಿಗಾಗಿ ಹೋರಾಟ ಮಾಡುತ್ತಿದ್ದು, ವಿಷ್ಣು ಅಭಿಮಾನಿಗಳು ಅಕ್ಷರಶಃ ಕಣ್ಣೀರಿಟ್ಟಿದ್ದರು. ಜೊತೆಗೆ ವಿಷ್ಣುವರ್ಧನ್ ಕುಟುಂಬದ ಮೇಲೆಯೇ ಹರಿಹಾಯ್ದಿದ್ದರು. ವಿಷ್ಣು ಸಮಾಧಿ ನೆಲಸಮ ಆಗುವ ವಿಚಾರ, ವಿಷ್ಣು ಕುಟುಂಬಕ್ಕೆ ಮೊದಲೇ ಗೊತ್ತಿತ್ತು. ಅವರು ಅದಕ್ಕಾಗಿ ಹಣ ಪಡೆದಿದ್ದರಿಂದ, ಮೌನಕ್ಕೆ ಜಾರಿದ್ದಾರೆ ಅಂತ ಆರೋಪ ಮಾಡಲಾಗಿತ್ತು. ಸಮಾಧಿ ನೆಲಸಮ ಆಗುವುದರ ಹಿಂದೆ ಸ್ವತಃ ವಿಷ್ಣು ಕುಟುಂಬವೇ ಇದೆ ಅನ್ನುವ ಮಾತು ಕೇಳಿ ಬಂದಿತ್ತು. ಈ ಕುರಿತು ಅನಿರುದ್ಧ ಇದೀಗ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇದನ್ನೂ ಓದಿ: ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು ಮತ್ತೆ ಒಂದಾಗೋಕೆ ಬಯಸಿದ ಪತ್ನಿ ಸಪ್ನ

     

    ವಿಷ್ಣುವರ್ಧನ್ ಅವರ ಸಮಾಧಿಯು ನೆಲಸಮ ಆಗಿದ್ದಕ್ಕೆ ವಿಷ್ಣು ಕುಟುಂಬ ಸಂಭ್ರಮಿಸುತ್ತಿದೆ ಅಂತ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡರು. ಸಮಾಧಿ ಜಾಗಕ್ಕೆ ಕುಟುಂಬದವರು ಕಾಲಿಡದೇ ಇರುವ ಕಾರಣಕ್ಕಾಗಿ, ಕೋರ್ಟ್ನಲ್ಲೂ ತಮ್ಮ ಹೋರಾಟಕ್ಕೆ ಹಿನ್ನೆಡೆ ಆಯಿತು ಅಂತ ಕೆಲ ಅಭಿಮಾನಿಗಳು ಮಾಧ್ಯಮಗಳ ಜೊತೆ ಮಾತಾಡಿದ್ದರು. ಈ ಎಲ್ಲದರ ಕುರಿತು ಅನಿರುದ್ಧ ಪ್ರತಿಕ್ರಿಯೆ ನೀಡಿದ್ದಾರೆ. ವಿಷ್ಣುವರ್ಧನ್ ಅವರ ಸಮಾಧಿ ನೆಲಸಮ ಆಗಿದ್ದು ನಮಗೂ ಅಪಾರ ನೋವನ್ನುಂಟು ಮಾಡಿದೆ. ಸಂಭ್ರಮಿಸುವ ವಿಕೃತ ಮನಸ್ಸು ನಮ್ಮದಲ್ಲ ಅಂತ ಅನಿರುದ್ಧ ತಿರುಗೇಟು ನೀಡಿದ್ದಾರೆ. ಕುಟುಂಬದ ಘನತೆಯನ್ನು ಹಾಳು ಮಾಡಲು ಹೊರಟರೆ, ಕಾನೂನು ಮೂಲಕ ಉತ್ತರ ಕೊಡುತ್ತೇವೆ ಅಂತ ಎಚ್ಚರಿಕೆಯನ್ನೂ ಅವರು ಕೊಟ್ಟಿದ್ದಾರೆ.

    ಬೆಂಗಳೂರಿನ ವಿಷ್ಣುವರ್ಧನ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಅಭಿಮಾನಿಗಳ ಪ್ರಶ್ನೆಗಳನ್ನು ಆಲಿಸಿದ ಅನಿರುದ್ಧ, ಅಭಿಮಾನಿ ಸ್ಟುಡಿಯೋದಲ್ಲಿ ಸಮಾಧಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ತಮ್ಮ ಕುಟುಂಬದ ಬೆಂಬಲವಿದೆ ಎಂದು ಹೇಳಿದ್ದಾರೆ. ಅಭಿಮಾನ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅವರ ಸಮಾಧಿ ಉಳಿಯಬೇಕು ಅಂತ ಬಯಸಿದ್ದವರಲ್ಲಿ ನಾನೂ ಒಬ್ಬ. ಈಗಲೂ ಹೋರಾಟ ಮುಂದುವರೆಯುತ್ತದೆ ಅಂದರೆ, ಕಂಡಿತಾ ನಮ್ಮ ಕುಟುಂಬದ ಬೆಂಬಲ ಇದ್ದೇ ಇರುತ್ತದೆ ಅಂತ ಅನಿರುದ್ಧ ಘೋಷಿಸಿದ್ದಾರೆ. ಸಮಾಧಿ ನೆಲಸಮ ಆಗಿದ್ದರ ಹಿಂದೆ ತಾವಾಗಲಿ, ತಮ್ಮ ಕುಟುಂಬವಾಗಲಿ ಇಲ್ಲ ಅನ್ನುವುದನ್ನು ಸ್ಪಷ್ಟ ಪಡಿಸಿದ್ದಾರೆ. ಇದರ ಜೊತೆಗೆ ಅಭಿಮಾನ ಸ್ಟುಡಿಯೋದಲ್ಲೇ ಸ್ಮಾರಕ ಆಗಬೇಕು ಅಂತ ತಾವು ಪಟ್ಟಿರುವ ಕಷ್ಟವನ್ನೂ ವಿವರಿಸಿದ್ದಾರೆ. ಅದು ಫಲ ಕೊಡದೇ ಹೋದಾಗ, ಮೈಸೂರಿಗೆ ಶಿಫ್ಟ್ ಮಾಡಲಾಯಿತು ಅಂದಿದ್ದಾರೆ.

     

    ಬೆಂಗಳೂರಿನ ಅಭಿಮಾನ ಸ್ಟುಡಿಯೋದಲ್ಲೂ ವಿಷ್ಣುವರ್ಧನ್ ಅವರ ಸಮಾಧಿ ಇರಬೇಕು ಅಂತ ಇದೇ ಸಂದರ್ಭದಲ್ಲಿ ಕೆಲವು ಅಭಿಮಾನಿಗಳು ಆಗ್ರಹಿಸಿದರು. ಸರಕಾರದ ವಿರುದ್ಧ ಘೋಷಣೆ ಕೂಡ ಕೂಗಿದರು. ತಮಗೆ ನ್ಯಾಯ ಸಿಗಬೇಕು ಅಂತ ಕೆಲವರು ಆಗ್ರಹಿಸಿದರು. ಅಭಿಮಾನಿಗಳ ಎಲ್ಲ ಪ್ರಶ್ನೆಗಳಿಗೂ ಅನಿರುದ್ಧ ಸಮಾಧಾನದಿಂದಲೇ ಉತ್ತರಿಸಿದರು. ಇನ್ಮುಂದೆ ತಮ್ಮ ಕುಟುಂಬದ ವಿರುದ್ಧ ಮಾತಾಡಬೇಕಾದರೆ, ಎಚ್ಚರಿಕೆಯಿಂದ ಮಾತಾಡಿ ಅಂತ ಗುಡುಗಿದರು. ತಮ್ಮ ಕುಟುಂಬದ ವಿರುದ್ಧ ಮಾತಾಡುವ ಅಭಿಮಾನಿಗಳ ವಿರುದ್ಧ ದೂರು ನೀಡುವುದಾಗಿಯೂ ಅವರು ಹೇಳಿದ್ದಾರೆ. ಸಮಾಧಿ ನೆಲಸಮ ವಿಚಾರದಲ್ಲಿ ಸ್ಯಾಂಡಲ್ವುಡ್ ಕೂಡ ಆಕ್ರೋಶ ವ್ಯಕ್ತ ಪಡಿಸಿದೆ. ವಿಷ್ಣು ಕುಟುಂಬ ಕೂಡ ಹೋರಾಟಕ್ಕೆ ಜೊತೆಯಾಗುವುದಾಗಿ ತಿಳಿಸಿದೆ. ಸಮಾಧಿಗಾಗಿ ಮತ್ತೊಂದು ಸುತ್ತಿನ ಹೋರಾಟ ನಡೆಯುತ್ತಾ? ಕಾದು ನೋಡಬೇಕು.

  • ದಾದಾ ಅಂತ್ಯಕ್ರಿಯೆ ಸ್ಥಳದಲ್ಲೇ ಸ್ಮಾರಕ ನಿರ್ಮಿಸಲಿ – ಫಿಲ್ಮ್ ಚೇಂಬರ್‌ಗೆ ವಿಷ್ಣು ಅಭಿಮಾನಿಗಳ ಸಂಘ ಮನವಿ

    ದಾದಾ ಅಂತ್ಯಕ್ರಿಯೆ ಸ್ಥಳದಲ್ಲೇ ಸ್ಮಾರಕ ನಿರ್ಮಿಸಲಿ – ಫಿಲ್ಮ್ ಚೇಂಬರ್‌ಗೆ ವಿಷ್ಣು ಅಭಿಮಾನಿಗಳ ಸಂಘ ಮನವಿ

    ಕನ್ನಡ ಚಿತ್ರರಂಗದ ಧೀಮಂತ ನಾಯಕ ಡಾ.ವಿಷ್ಣುವರ್ಧನ್ ಸಮಾಧಿ (Vishnuvardhan Memorial) ನೆಲಸಮ ಮಾಡಿದ ಹಿನ್ನೆಲೆ ಕರ್ನಾಟಕದಾದ್ಯಂತ ಅಭಿಮಾನಿಗಳ ಆಕ್ರೋಶ ಭುಗಿಲೆದ್ದಿದೆ. ಇತ್ತ ಕನ್ನಡ ಚಿತ್ರರಂಗದ ಗಣ್ಯರು ಒಬ್ಬೊಬ್ಬರಾಗಿ ದನಿ ಎತ್ತುತ್ತಿದ್ದಾರೆ. ಇಂದು ಫಿಲ್ಮ್ ಚೇಂಬರ್‌ಗೆ ಡಾ.ವಿಷ್ಣುವರ್ಧನ್ ಅಭಿಮಾನಿಗಳು (Vishnuvardhan Fans) ಮನವಿ ಸಲ್ಲಿಸಿದ್ದಾರೆ.

    ರಾತ್ರೋ ರಾತ್ರಿ ವಿಷ್ಣು ಸಮಾಧಿ ತೆರವುಗೊಳಿಸಿದ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ದಾದಾ ಅಂತ್ಯಕ್ರಿಯೆ ನಡೆದ ಜಾಗದಲ್ಲಿ ಅವರ ಸ್ಮಾರಕ ಪುನರ್‌ ನಿರ್ಮಾಣ ಆಗಬೇಕು ಅಂತ ಒತ್ತಾಯಿಸಿ ವಿಷ್ಣು ಅಭಿಮಾನಿಗಳ ಸಂಘ ಫಿಲ್ಮ್ ಚೇಂಬರ್‌ಗೆ ಮನವಿ ಸಲ್ಲಿಸಿದೆ. ಇದನ್ನೂ ಓದಿ: ಆನ್‌ಲೈನ್ ಬೆಟ್ಟಿಂಗ್ – ಇ.ಡಿ ವಿಚಾರಣೆಗೆ ಹಾಜರಾದ ನಟ ರಾಣಾ ದಗ್ಗುಬಾಟಿ

    ವಿಷ್ಣುವರ್ಧನ್ ಅಭಿಮಾನಿಗಳ ಮನವಿ ಸ್ವೀಕರಿಸಿದ ಫಿಲ್ಮ್ ಚೇಂಬರ್. ನಾವು ಕೂಡ ಸರ್ಕಾರದ (Government) ಗಮನಕ್ಕೆ ತರುತ್ತೇವೆ. ಈಗಾಗಲೇ ಸರ್ಕಾರ ಪರ್ಯಾಯವಾಗಿ ಮೈಸೂರಿನಲ್ಲಿ ಸ್ಮಾರಕ ಮಾಡಿದೆ. ಆದರೂ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ (Abhiman Studio) ಜಾಗ ಉಳಿಸಿಕೊಳ್ಳುವ ನಿಮ್ಮ ಪ್ರಯತ್ನಕ್ಕೆ ನಾವು ಕೂಡ ಸಾಥ್ ನೀಡುತ್ತೇವೆ. ನಾವು ನಿಮ್ಮ ಜೊತೆ ಇದ್ದೇವೆ. ಎಲ್ಲಾ ಕಲಾವಿದರು ಒಂದೇ ಎಂದು ಪ್ರತಿಕ್ರಿಯೆ ನೀಡಿದ್ದಾರೆ.  ಇದನ್ನೂ ಓದಿ: ವಿಷ್ಣು ಸ್ಮಾರಕಕ್ಕಾಗಿ ಕೋರ್ಟಿಗೆ ಬೇಕಾದ್ರೂ ಹೋಗ್ತೀನಿ, ಹಣಕಾಸು ಕೊಡಲು ರೆಡಿ ಇದ್ದೀನಿ: ಕಿಚ್ಚ ಸುದೀಪ್‌

    ಧೀಮಂತ ನಾಯಕನ ವಿಚಾರದಲ್ಲಿ ಪದೇ ಪದೇ ಇದೆ ರೀತಿ ತಾರತಮ್ಯ ನಡೆಯುತ್ತಿದ್ದು, ಇದಕ್ಕೆ ಸೂಕ್ತ ನ್ಯಾಯ ಸಿಗದೇ ಇದ್ದರೆ ಕರ್ನಾಟಕದಾದ್ಯಂತ ತೀವ್ರ ಹೋರಾಟ ಮಾಡುತ್ತೇವೆ. ಇದಕ್ಕೆ ಸರ್ಕಾರ ಶೀಘ್ರವೇ ನ್ಯಾಯ ಒದಗಿಸಬೇಕು ಎಂದು ಫಿಲ್ಮ್ ಚೇಂಬರ್ ಮೂಲಕ ಮನವಿ ಮಾಡಿದ್ದಾರೆ. ರಾತ್ರೋ ರಾತ್ರಿ ಸಮಾಧಿ ನೆಲಸಮ ಮಾಡಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅಭಿಮಾನಿಗಳು ಮನವಿ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕೆ ತಾರ್ಕಿಕ ಅಂತ್ಯ ಸಿಗುತ್ತಾ ಅಂತಾ ಕಾದು ನೋಡ್ಬೇಕು. ಇದನ್ನೂ ಓದಿ: ವಿಷ್ಣು ಸಮಾಧಿ ನೆಲಸಮ; ಯಾರದ್ದೋ ಮಾತು ಕೇಳಿ ಕುಟುಂಬದ ವಿರುದ್ಧ ಮಾತನಾಡ್ಬೇಡಿ – ಫ್ಯಾನ್ಸ್‌ಗೆ ಅನಿರುದ್ಧ್ ಮನವಿ

  • ವಿಷ್ಣು ಸಮಾಧಿ ನೆಲಸಮ; ಯಾರದ್ದೋ ಮಾತು ಕೇಳಿ ಕುಟುಂಬದ ವಿರುದ್ಧ ಮಾತನಾಡ್ಬೇಡಿ – ಫ್ಯಾನ್ಸ್‌ಗೆ ಅನಿರುದ್ಧ್ ಮನವಿ

    ವಿಷ್ಣು ಸಮಾಧಿ ನೆಲಸಮ; ಯಾರದ್ದೋ ಮಾತು ಕೇಳಿ ಕುಟುಂಬದ ವಿರುದ್ಧ ಮಾತನಾಡ್ಬೇಡಿ – ಫ್ಯಾನ್ಸ್‌ಗೆ ಅನಿರುದ್ಧ್ ಮನವಿ

    ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ ನಟ ಡಾ. ವಿಷ್ಣುವರ್ಧನ್ (Dr Vishnuvardhan) ಅವರ ಸಮಾಧಿಯನ್ನು ಅಭಿಮಾನಿಗಳ ವಿರೋಧದ ನಡುವೆಯೇ ಗುರುವಾರ ರಾತ್ರೋರಾತ್ರಿ ತೆರವು ಮಾಡಲಾಗಿತ್ತು. ಈ ಕುರಿತು ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ (Anirudh) ಪ್ರತಿಕ್ರಿಯೆ ನೀಡಿ, ಯಾರದ್ದೋ ಮಾತು ಕೇಳಿ ಕುಟುಂಬದ ವಿರುದ್ಧ ಮಾತನಾಡ್ಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

    ಸಮಾಧಿ ನಿರ್ಮಾಣ ಮಾಡಲಾದ ಜಾಗ ವಿವಾದಾತ್ಮಕ ಸ್ಥಳ ಇತ್ತು ಎಂಬುದು ನಮಗೆ ಗೊತ್ತಿರಲಿಲ್ಲ. ನಾವು ಅಲ್ಲೇ ಹೋಗಿ ಸಂಸ್ಕಾರ ಮಾಡಬೇಕು ಅಂದುಕೊಂಡಿದ್ದೆವು. ಕುಮಾರಸ್ವಾಮಿ ಅವರು ಹೇಳಿದ್ರು ದೇವೇಗೌಡರು ಹೇಳಿದ್ದಾರೆ. ವಿಷ್ಣುವರ್ಧನ್ ಅವರಿಗೆ ಅವರದ್ದೇ ಆದ ಗೌರವ ಇದೆ. ಹಾಗಾಗಿ ಅಭಿಮಾನ್ ಸ್ಟುಡಿಯೋದಲ್ಲಿ ಗೌರವಯುತವಾಗಿ ಮಾಡಿ ಎಂದಿದ್ರು. ಹಾಗಾಗಿ ನಾವು ಒಪ್ಪಿಕೊಂಡಿದ್ದೆವು ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾತ್ರೋರಾತ್ರಿ ವಿಷ್ಣು ಸಮಾಧಿ ನೆಲಸಮ – ಅಭಿಮಾನಿಗಳಿಂದ ತೀವ್ರ ಆಕ್ರೋಶ

    ದಯವಿಟ್ಟು ಅಭಿಮಾನಿಗಳು ದೂರ ಆಗಬೇಡಿ. ಯಾರದ್ದೋ ಮಾತು ಕೇಳಿ ಕುಟುಂಬದ ವಿರುದ್ಧ ಮಾತಾನಾಡಬೇಡಿ. ಏನೇ ಇದ್ದರೂ ನನ್ನನ್ನೇ ನೇರವಾಗಿ ಸಂಪರ್ಕ ಮಾಡಿ. ಅಭಿಮಾನಿಗಳ ಪ್ರಯತ್ನದಿಂದ ಬೆಂಗಳೂರಿನಲ್ಲೇ ಸ್ಮಾರಕ ಆದರೆ ತುಂಬಾ ಒಳ್ಳೆಯದು. ಬೇಕಿದ್ದರೆ ಸರ್ಕಾರದ ಬಳಿ ಮಾತನಾಡಲು ನಾವು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 3.15 ಕೋಟಿ ವಂಚನೆ ಆರೋಪ; ನಟ ಧ್ರುವ ಸರ್ಜಾ ವಿರುದ್ಧ ಎಫ್‌ಐಆರ್

    ನಾನು ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಕೊಡಿ ಎಂದು ಕೇಳಿದ್ದೇನೆ. ಕೇವಲ ಅಪ್ಪಾವ್ರಿಗೆ ಮಾತ್ರ ಅಲ್ಲ. ಎಲ್ಲಾ ಕಲಾವಿದರಿಗೂ ಕೊಟ್ಟು ಗೌರವಿಸಿ ಎಂದು ಕೇಳಿದ್ದೇನೆ. ಚಿತ್ರರಂಗದ ಪರವಾಗಿ ನಾನೇ ಧ್ವನಿ ಎತ್ತಿದ್ದೇನೆ. ಅಲ್ಲದೇ ಈ ಬಗ್ಗೆ ಲೇಖನ ಕೂಡ ಬರೆದಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಪರಭಾಷೆಯಲ್ಲಿ ಸಿನಿಮಾ ಮಾಡಲ್ಲ ಅಂದಿದ್ದಕ್ಕೆ ನೋಟಿಸ್ ಕಳುಹಿಸಿದ್ದಾರೆ – ಧ್ರುವ ಮ್ಯಾನೇಜರ್ ಸ್ಪಷ್ಟನೆ

    ಬೆಂಗಳೂರಲ್ಲೇ ಅಪ್ಪಾವ್ರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ 2 ಕೋಟಿ ರೂ. ಹಣ ಕೊಟ್ಟಿತ್ತು. ಆದರೆ ಆ ಜಾಗ ಕೋರ್ಟ್ನಲ್ಲಿದ್ದಿದ್ದರಿಂದ ಸರ್ಕಾರಕ್ಕೆ ಜಾಗ ಕೊಂಡುಕೊಳ್ಳಲು ಆಗಲಿಲ್ಲ. ಕೇವಲ 2 ಎಕ್ರೆ ಜಾಗ ಕೊಡಿ ಎಂದು ಕೇಳಿದ್ದೆವು. ಅಭಿಮಾನ್ ಸ್ಟುಡಿಯೋ ಜಾಗವನ್ನ ಮನಸ್ಸು ಮಾಡಿದ್ರೆ ಸರ್ಕಾರವೇ ವಶ ಪಡಿಸಿಕೊಳ್ಳಬಹುದಾಗಿತ್ತು. ಆದರೆ ಸರ್ಕಾರ ಆ ಕೆಲಸ ಮಾಡಲಿಲ್ಲ. ಹೀಗಾಗಿ ನಾವು ಮೈಸೂರಿಗೆ ಹೋದೆವು ಎಂದು ಹೇಳಿದ್ದಾರೆ.

    ಭಾರತೀ ಅಮ್ಮ ಈ ಬಗ್ಗೆ ತಿಳಿದು ತುಂಬಾ ನೊಂದುಕೊಂಡಿದ್ದಾರೆ. ಯಾರೇ ಈ ರೀತಿ ನಡೆದುಕೊಂಡಿದ್ದರೂ ಶಿಕ್ಷೆ ಆಗಲಿ ಎಂದಿದ್ದಾರೆ. ಅದು ಖಾಸಗಿ ಜಾಗ ಆಗಿದ್ದರೂ ಭಾವನಾತ್ಮಕವಾಗಿ ಸಮಾಧಿ ಇದ್ದ ಜಾಗ, ಅದು ಕನ್ನಡಿಗರ ಜಾಗವಾಗಿತ್ತು. ಬಾಲಣ್ಣ ಅವರ ಮೇಲೆ ನಮಗೆ ತುಂಬಾ ಗೌರವ ಇದೆ ಎಂದಿದ್ದಾರೆ.

  • ನಟ ವಿಷ್ಣುವರ್ಧನ್‌ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ಮನವಿ

    ನಟ ವಿಷ್ಣುವರ್ಧನ್‌ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ಮನವಿ

    – ಸಿಎಂ ಭೇಟಿಯಾಗಿ ಮನವಿ ಸಲ್ಲಿಸಿದ ವಿಷ್ಣು ಅಳಿಯ ಅನಿರುದ್ಧ್‌

    ದಿವಂಗತ ಸಾಹಸಸಿಂಹ ವಿಷ್ಣುವರ್ಧನ್‌ (Vishnuvardhan) ಅವರಿಗೆ ಮರಣೋತ್ತರ ಕರ್ನಾಟಕ ರತ್ನ (Karnataka Ratna) ಪ್ರಶಸ್ತಿ ಪ್ರದಾನಕ್ಕೆ ಮನವಿ ಸಲ್ಲಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ವಿಷ್ಣು ಅಳಿಯ ಅನಿರುದ್ಧ್‌ ಮನವಿ ಮಾಡಿದ್ದಾರೆ.

    ಸೆಪ್ಟೆಂಬರ್ 18 ರಂದು ವಿಷ್ಣುವರ್ಧನ್ ಅವರ 75ನೇ ಜನ್ಮದಿನ. ಈ ವಿಶೇಷ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಿ, ಇದು ಅವರ ಅಪಾರ ಅಭಿಮಾನಿಗಳ ಆಕಾಂಕ್ಷೆ ಎಂದು ಅನಿರುದ್ಧ್‌ (Aniruddha Jatkar) ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ತಲೈವಾನ್ ತಲೈವಿ ಟ್ರೈಲರ್‌ ರಿಲೀಸ್ – ವಿಜಯ್ ಸೇತುಪತಿ-ನಿತ್ಯಾ ಮಸ್ತ್ ಮಸ್ತ್..!

    ಚಲನಚಿತ್ರ ರಂಗ, ಕಲಾರಂಗಕ್ಕೆ ವಿಷ್ಣು ಅವರ ಕೊಡುಗೆ ಅಪಾರ. ಇನ್ನೂ ಅವರಿಗೆ ಕೇಂದ್ರದಿಂದಲೂ ಪದ್ಮಶ್ರೀ ಪ್ರಶಸ್ತಿ ಕೊಟ್ಟಿಲ್ಲ. ಕರ್ನಾಟಕ ಸರ್ಕಾರದಿಂದಲೂ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿಲ್ಲ. ಹೀಗಾಗಿ, ಅವರ 75ನೇ ವರ್ಷದ ವಿಶೇಷ ಸಂದರ್ಭದಲ್ಲಾದರೂ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡುವಂತೆ ಅನಿರುದ್ಧ್ ಮನವಿ ಮಾಡಿದ್ದಾರೆ.

  • ಭವಿಷ್ಯದಲ್ಲಿ ಒಳ್ಳೆಯ ವಿಷ್ಣು ಸ್ಮಾರಕ ತಲೆ ಎತ್ತಲಿದೆ: ಭಾರತಿ ವಿಷ್ಣುವರ್ಧನ್

    ಭವಿಷ್ಯದಲ್ಲಿ ಒಳ್ಳೆಯ ವಿಷ್ಣು ಸ್ಮಾರಕ ತಲೆ ಎತ್ತಲಿದೆ: ಭಾರತಿ ವಿಷ್ಣುವರ್ಧನ್

    ವಿಷ್ಣುವರ್ಧನ್ (Vishnuvardhan) 15ನೇ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆ ಮೈಸೂರಿನ ವಿಷ್ಣು ಸ್ಮಾರಕ ಭವನದಲ್ಲಿ ವಿಷ್ಣುವರ್ಧನ್ ಪ್ರತಿಮೆಗೆ ಕುಟುಂಬಸ್ಥರು ನಮನ ಸಲ್ಲಿಸಿದರು. ಈ ವೇಳೆ, ವಿಷ್ಣು ಸ್ಮಾರಕದ ಬಗ್ಗೆ ಮಾತನಾಡಿ, ಭವಿಷ್ಯದಲ್ಲಿ ಒಳ್ಳೆಯ ವಿಷ್ಣು ಸ್ಮಾರಕ ತಲೆ ಎತ್ತಲಿದೆ ಎಂದು ಭಾರತಿ ವಿಷ್ಣುವರ್ಧನ್ ಮಾತನಾಡಿದರು. ಇದನ್ನೂ ಓದಿ:ಸಕ್ಸಸ್‌ಗಾಗಿ ದಿಟ್ಟ ನಿರ್ಧಾರ ಕೈಗೊಂಡ ಶ್ರೀಲೀಲಾ

    ಸಾಹಸಸಿಂಹ ವಿಷ್ಣುವರ್ಧನ್ ವಿಧಿವಶರಾಗಿ ಇಂದಿಗೆ 15 ವರ್ಷ ಕಳೆದಿದೆ. ಆದರೆ ಇನ್ನೂ ಕೂಡ ಸ್ಮಾರಕ ವಿವಾದ ಮುಗಿದಿಲ್ಲ. ಅಭಿಮಾನಿ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಸಮಾಧಿ ಇದ್ದರೂ, ಕೋರ್ಟ್‌ನಲ್ಲಿ ತಡೆ ಇರೋದ್ರಿಂದ ಅಭಿಮಾನಿಗಳಿಗೆ ಪೊಲೀಸರು ಪೂಜೆಗೆ ಅವಕಾಶ ಕೊಡಲಿಲ್ಲ. ಸಮಾಧಿ ಸ್ಥಳದಿಂದ ದೂರದಿಂದಲೇ ಪೂಜೆ ಸಲ್ಲಿಸಲು ಅವಕಾಶ ಕೊಟ್ಟಿದ್ದರಿಂದ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ, ಸಮಾಧಿಗೆ ಪೂರ್ತಿ ಹೂವು ಅಲಂಕರಿಸಲು ಅವಕಾಶ ಕೊಟ್ಟಿಲ್ಲ. ವಿಷ್ಣುವರ್ಧನ್ ಅವರ ಭಾವಚಿತ್ರ ಹಾಕಲು ಬಿಟ್ಟಿಲ್ಲ. ದೂರದ ಊರಿನಿಂದ ಬಂದಿದ್ದೇವೆ ಅಂತ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

    ಇನ್ನೂ, ಪ್ರತಿಬಾರಿಯಂತೆ ಈ ಬಾರಿಯೂ ಮೈಸೂರಲ್ಲಿ ಸ್ಮಾರಕ ನಿರ್ಮಾಣಕ್ಕೆ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೈಸೂರಲ್ಲಿ ಯಾವುದೇ ಕಾರಣಕ್ಕೂ ನಮಗೆ ಸ್ಮಾರಕ ಬೇಡ. ಅಂತ್ಯಕ್ರಿಯೆ ನಡೆದ ಈ ಜಾಗವೇ ನಮಗೆ ಪುಣ್ಯಸ್ಥಳ. ಅಂತ್ಯಕ್ರಿಯೆ ನಡೆದ ಈ ಜಾಗವನ್ನು ನಮಗೆ ಬಿಟ್ಟುಕೊಡಿ ಅಂತ ಅಭಿಮಾನಿಗಳು ಒತ್ತಾಯಿಸಿದ್ದಾರೆ.

    ಇವೆಲ್ಲದರ ಮಧ್ಯೆ, ಮೈಸೂರಿನ ವಿಷ್ಣು ಸ್ಮಾರಕ ಭವನದಲ್ಲಿ ವಿಷ್ಯುವರ್ಧನ್‌ಗೆ ನಮನ ಸಲ್ಲಿಸಲಾಗಿದೆ. ವಿಷ್ಣುವರ್ಧನ್ ಪತ್ನಿ ಭಾರತಿ ಹಾಗೂ ಅಳಿಯ ಅನಿರುದ್ಧ್ ವಿಷುವರ್ಧನ್ ಪ್ರತಿಮೆಗೆ ನಮನ ಸಲ್ಲಿಸಿದ್ದರು. ಬಳಿಕ ಮಾಧ್ಯಮಕ್ಕೆ ಭಾರತಿ ಪ್ರತಿಕ್ರಿಯಿಸಿ, ಭವಿಷ್ಯದಲ್ಲಿ ವಿಷ್ಣು ಅವರ ಒಳ್ಳೆಯ ಸ್ಮಾರಕ ತಲೆ ಎತ್ತಲಿದೆ. ಅಭಿಮಾನಿಗಳು ಸಂಭ್ರಮಿಸಲಿದ್ದಾರೆ. ನಮ್ಮ ಕೈಯಲ್ಲಿ ಏನೂ ಇಲ್ಲ. ದೇವರು ನಡೆಸಿದಂತೆ ಆಗುತ್ತದೆ ಅಂತ ಸ್ಮಾರಕ ನಿರ್ಮಾಣವನ್ನು ಸಮರ್ಥಿಸಿಕೊಂಡಿದ್ದಾರೆ. ಒಟ್ನಲ್ಲಿ ವಿಷ್ಣು ವಿಧಿವಶರಾಗಿ 15 ವರ್ಷ ಕಳೆದಿದ್ದರೂ, ಸ್ಮಾರಕ ವಿಚಾರದಲ್ಲಿ ಕಿತ್ತಾಟ ನಡೆಯುತ್ತಿರೋದು ದುರಂತವೇ ಸರಿ.

    ಇಂದು ಅಪ್ಪಾಜಿ ಅವರ 15ನೇ ವರ್ಷದ ಪುಣ್ಯ ಸ್ಮರಣೆಯಾಗಿದ್ದು, ನಮ್ಮ ಕುಟುಂಬದ ಪರವಾಗಿ ಅಭಿಮಾನಿಗಳಿಗೆ ಧನ್ಯವಾದಗಳು ಎಂದಿದ್ದಾರೆ. ನನ್ನ ಪಾಲಿಗೆ ಮಾಸ್ ಹೀರೋ ಒಬ್ಬರೆ, ಅದು ಸಾಹಸಸಿಂಹ ಡಾ.ವಿಷ್ಣುವರ್ಧನ್ ಎಂದರು. ಈ ರೀತಿ ಯಾವುದೇ ಯುದ್ಧಗಳು ಆಗಬಾರದು. ನಾವೆಲ್ಲ ಒಂದೇ ಕುಟುಂಬವಿದ್ದಂತೆ. ಈ ರೀತಿ ಯುದ್ಧಕ್ಕೆ ಅವಕಾಶ ಕೊಡಬಾರದು. ಆದರೆ ಅಭಿಮಾನಿಗಳು ಅವರ ಅಭಿಮಾನವನ್ನ ಬೇರೆ ಬೇರೆ ರೀತಿ ತೋರಿಸಿಕೊಳ್ಳುತ್ತಾರೆ. ಕಲಾವಿದರು ನಾವೆಲ್ಲ ಒಂದೇ ಕುಟುಂಬ ಇದ್ದಹಾಗೆ. ಆದಷ್ಟು ಯುದ್ಧ ಹೋರಾಟ ಕಮ್ಮಿ ಮಾಡಿ, ಜೊತೆಗೆ ಪ್ರೀತಿಯನ್ನ ಎಲ್ಲರೂ ಹಿಂಚಿಕೆ ಮಾಡಿ ಎಂದು ಅನಿರುದ್ಧ್ ಮನವಿ ಮಾಡಿದರು. ಅದರಿಂದ ನಮ್ಮ ಚಿತ್ರರಂಗ ಬೆಳೆಯುತ್ತದೆ. ಬೇರೆ ರಾಜ್ಯಗಳಿಗೂ ನಾವು ಮಾದರಿ ಆಗುತ್ತೇವೆ ಎಂದರು.

  • ನಟ ವಿಷ್ಣುವರ್ಧನ್ ನೆನಪಲ್ಲಿ ‘ಯಜಮಾನ’ ಪ್ರೀಮಿಯರ್ ಲೀಗ್

    ನಟ ವಿಷ್ಣುವರ್ಧನ್ ನೆನಪಲ್ಲಿ ‘ಯಜಮಾನ’ ಪ್ರೀಮಿಯರ್ ಲೀಗ್

    ಜಮಾನ (Yajamana) ಪ್ರೀಮಿಯರ್ ಲೀಗ್ ಮತ್ತೆ ಬಂದಿದೆ. ಇದು ಅಭಿಮಾನಿಗಳಿಂದ ಅಭಿಮಾನಿಗಳಿಗಾಗಿ ಅಭಿಮಾನಿಗಳಿಗೋಸ್ಕರ್ ನಡೆಯುವ ಕ್ರಿಕೆಟ್ (Cricket) ಪಂದ್ಯಾವಳಿ. ಕಳೆದೆರೆಡು ವರ್ಷಗಳಿಂದ ಯಶಸ್ವಿ ಆಯೋಜಿಸಿಕೊಂಡು ಬರ್ತಿರುವ ವೈಪಿಎಲ್ ಮೇ 4 ಮತ್ತು 5 ರಂದು ಎರಡು ದಿನಗಳ ಕಾಲ‌ ನಡೆಯುತ್ತಿದೆ. ಈ ಹಿನ್ನೆಲೆ ಬೆಂಗಳೂರಿನ ಎಂಎಂ ಲೆಗಸಿನಲ್ಲಿ ನಿನ್ನೆ ಜರ್ಸಿ ಬಿಡುಗಡೆ ಮಾಡಲಾಯಿತು. ನಟ ಜಯರಾಮ್ ಕಾರ್ತಿಕ್ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದರು.

    ಇದೇ ವೇಳೆ ನಟ ಜಯರಾಮ್ ಕಾರ್ತಿಕ್ ಮಾತನಾಡಿ, ವಿಷ್ಣು ಸೇನಾ ಸಮಿತಿಗೆ ವಂದನೆಗಳು. ಇದು ಯಜಮಾನ ಪ್ರೀಮಿಯರ್ ಲೀಗ್ ನ ಮೂರನೇ ಸೀಸನ್. ಒಂದು ಕ್ರಿಕೆಟ್ ಪಂದ್ಯಾವಳಿ ನಡೆಸುವುದು ಕಷ್ಟ. ಇದೆಲ್ಲಾ ಫ್ಯಾನ್ಸ್ ಸೇರಿಕೊಂಡು ಮೂರು ವರ್ಷದ ಹಿಂದೆ ಶುರು ಮಾಡಿದರು. ಈಗ ಮೂರನೇ ಸೀಸನ್.‌ ನನ್ನ ಪ್ರೀತಿಯ ಅಚ್ಚುಮೆಚ್ಚಿನ ಆಕ್ಟರ್ ವಿಷ್ಣು (Vishnuvardhan) ಸರ್ ಅವರ ಹೆಸರಿನಲ್ಲಿ ಪಂದ್ಯಾವಳಿ ನಡೆಯುತ್ತಿದೆ. ಯಜಮಾನ ಪ್ರೀಮಿಯರ್ ಲೀಗ್ ಟೈಟಲ್ ಚೆನ್ನಾಗಿದೆ. ಇದು ನಮ್ಮ ಹೃದಯಕ್ಕೆ ಹತ್ತಿರವಾಗಿದೆ. ನಮಗೆ ವಿಷ್ಣು ಸರ್ ಸ್ಫೂರ್ತಿ. ವೈಪಿಎಲ್ ನಲ್ಲಿ ಭಾಗವಹಿಸಲಿರುವ ಇಡೀ ತಂಡಕ್ಕೆ ಆಲ್ ದಿ ಬೆಸ್ಟ್ ಎಂದರು.

     

    ಯದುನಂದನ್ ಗೌಡ ಮಾತನಾಡಿ, ಯಜಮಾನ ಪ್ರೀಮಿಯರ್ ಲೀಗ್ ನ ಮೂರು ವರ್ಷಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಶುರು ಮಾಡಿದ್ದೇವು.‌ ಪ್ರೀಮಿಯರ್, ಐಪಿಎಲ್ ಅಂತಾ ಕ್ರಿಕೆಟ್ ಪಂದ್ಯಾವಳಿ ಮಾಡುತ್ತಾರೆ. ನಾವು ಯಾಕೆ ವಿಷ್ಣು ಸರ್ ಹೆಸರಿನಲ್ಲಿ ಮಾಡಬಾರದು ಎಂದು ಅವರ ಹೆಸರಲ್ಲಿ ಶುರು ಮಾಡಿದೆವು. ಕನ್ನಡ ಇಂಡಸ್ಟ್ರೀಗೆ ಕ್ರಿಕೆಟ್ ಪರಿಚಯಿಸಿದ್ದು,ನಮ್ಮ ಯಜಮಾನರು. ವಿಷ್ಣು ಸರ್ ಕನಸುಗಳಿಗೆ ಬಣ್ಣ ಹಚ್ಚುವ ಕೆಲಸ ನಡೆಯುತ್ತಿಲ್ಲ. ಹೀಗಾಗಿ ಅಭಿಮಾನಿಗಳೇ ಸೇರಿಕೊಂಡು ಯಜಮಾನ ಪ್ರೀಮಿಯರ್ ಲೀಗ್ ಪ್ರಾರಂಭಿಸಿದೆವು. ಅಭಿಮಾನಿಗಳ ನಡುವಿನ ಸ್ಟಾರ್ ವಾರ್ ಹೊಡೆದು ಹಾಕಿ ಎಲ್ಲಾ ಅಭಿಮಾನಿಗಳನ್ನು ಒಂದೇ ವೇದಿಕೆಯಲ್ಲಿ ತರುವ ಕೆಲಸವನ್ನು ಯಜಮಾನ ಪ್ರೀಮಿಯರ್ ಲೀಗ್ ಮೂಲಕ ಮಾಡಲಾಗಿದೆ. ನಿಮ್ಮ ಸಹಕಾರ ಇದ್ದರೆ ಈ ಪಂದ್ಯಾವಳಿಯನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಎಂದರು.

  • ದ್ವಾರಕೀಶ್ ನಿಧನಕ್ಕೆ ಸಿಎಂ, ಡಿಸಿಎಂ ಸಂತಾಪ

    ದ್ವಾರಕೀಶ್ ನಿಧನಕ್ಕೆ ಸಿಎಂ, ಡಿಸಿಎಂ ಸಂತಾಪ

    ನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ, ಹಿರಿಯ ನಟ ದ್ವಾರಕೀಶ್ (Dwarakish) ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್  (DK Shivakumar) ಸಂತಾಪ ವ್ಯಕ್ತ (Condolence) ಪಡಿಸಿದ್ದಾರೆ.  ನಟ, ನಿರ್ದೇಶಕ, ನಿರ್ಮಾಪಕರಾಗಿ ಬಹುಕಾಲ ಕನ್ನಡ ಚಿತ್ರರಂಗದ ಸೇವೆಗೈದ ಕನ್ನಡಿಗರ ಪ್ರೀತಿಯ ‘ಪ್ರಚಂಡ ಕುಳ್ಳ’ ದ್ವಾರಕೀಶ್ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು. ಡಾ. ರಾಜ್‌ಕುಮಾರ್ ಮತ್ತು ಡಾ. ವಿಷ್ಣುವರ್ಧನ್ ಅವರಂತಹ ಮೇರು ನಟರೊಂದಿಗೆ ಪರದೆ ಹಂಚಿಕೊಳ್ಳುತ್ತಿದ್ದರೂ ಹಾಸ್ಯಭರಿತ ನಟನೆಯ ಮೂಲಕ ನೋಡುಗರ ಮನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ದ್ವಾರಕೀಶ್ ಅವರ ನಿಧನದಿಂದ ಕನ್ನಡ ಚಿತ್ರರಂಗ ಬಡವಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ, ಕುಟುಂಬವರ್ಗ ಮತ್ತು ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ ಸಿದ್ದರಾಮಯ್ಯ.

    ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಹಾಗೂ ಹಿರಿಯ ಕಲಾವಿದ ದ್ವಾರಕೀಶ್ ಅವರ ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ, ನಿರ್ದೇಶಕರಾಗಿ, ಕಲಾವಿದನಾಗಿ ಅಗಾಧವಾದ ಸೇವೆ ಸಲ್ಲಿಸಿರುವ ದ್ವಾರಕೀಶ್ ಅವರ ನಿಧನದ ಸುದ್ದಿ ಕೇಳಿ ಬೇಸರವಾಗಿದೆ. ಕನ್ನಡ ಚಿತ್ರರಂಗದಲ್ಲಿ ಅನೇಕ ಹೊಸ ಮೈಲುಗಲ್ಲುಗಳನ್ನು ಸಾಧಿಸಿ, ಚಿತ್ರರಂಗಕ್ಕೆ ದೊಡ್ಡ ಅಡಿಪಾಯ ಹಾಕಿಕೊಟ್ಟವರಲ್ಲಿ ದ್ವಾರಕೀಶ್ ಕೂಡ ಒಬ್ಬರು. ಡಾ. ರಾಜಕುಮಾರ್, ಡಾ. ವಿಷ್ಣುವರ್ಧನ್, ಡಾ.ಅಂಬರೀಶ್, ಶಂಕರ್ ನಾಗ್ ಸೇರಿದಂತೆ ಕನ್ನಡ ಚಿತ್ರರಂಗದ ಘಟಾನುಘಟಿ ನಟರ ಜೊತೆ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಅನೇಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿ ಬೆಳೆಸಿದ್ದಾರೆ.

     

    ದ್ವಾರಕೀಶ್ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ಈ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಶಿವಕುಮಾರ್ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

  • ದ್ವಾರಕೀಶ್ ಮತ್ತು ವಿಷ್ಣುವರ್ಧನ್ ಸ್ನೇಹ: ಏಳು ಬೀಳಿನ ಗೆಳೆತನ

    ದ್ವಾರಕೀಶ್ ಮತ್ತು ವಿಷ್ಣುವರ್ಧನ್ ಸ್ನೇಹ: ಏಳು ಬೀಳಿನ ಗೆಳೆತನ

    ಡಾ. ವಿಷ್ಣುವರ್ಧನ್ (Vishnuvardhan) ಜೊತೆ ಸಿನಿಮಾ ಮಾಡಲು ಅತಿರಥ ಮಹಾರಥ ನಿರ್ದೇಶಕರು, ನಿರ್ಮಾಪಕರು ದುಂಬಾಲು ಬೀಳುತ್ತಿದ್ದರು ಎನ್ನುವುದಕ್ಕೆ ಅವರ ಚಿತ್ರಗಳೇ ಸಾಕ್ಷಿ. ಡಾ. ರಾಜಕುಮಾರ್ ಗರಡಿಯಿಂದ ಬಂದ ಸಾಕಷ್ಟು ನಿರ್ದೇಶಕರು ಮತ್ತು ನಿರ್ಮಾಪಕರು ವಿಷ್ಣುವರ್ಧನ್ ಅವರ ಕಾಲ್‌ಶೀಟ್‌ಗಾಗಿ ಕಾಯುತ್ತಿದ್ದರು. ಎಲ್ಲ ಹಂಗುಗಳನ್ನು ತೊರೆದುಕೊಂಡು ಬಂದು ವಿಷ್ಣು ಮುಂದೆ ನಿಲ್ಲುತ್ತಿದ್ದರು. ಅಂತಹ ಕಾಲ್‌ಶೀಟ್‌ಗಾಗಿ ಕಾದ ನಿರ್ದೇಶಕ, ನಿರ್ಮಾಪಕ ಮತ್ತು ಕಲಾವಿದರಲ್ಲಿ ದ್ವಾರಕೀಶ್ ಕೂಡ ಒಬ್ಬರು.

    ವಿಷ್ಣುವರ್ಧನ್ ಮತ್ತು ದ್ವಾರಕೀಶ್ (Dwarakish) ಅವರ ಚೊಚ್ಚಲ ಸಿನಿಮಾ `ಕಳ್ಳ ಕುಳ್ಳ’ ಬರುವ ಹೊತ್ತಿಗೆ ದ್ವಾರಕೀಶ್ ಅವರು ಕನ್ನಡ ಚಿತ್ರೋದ್ಯಮದಲ್ಲಿ ಸಾಕಷ್ಟು ಸಿನಿಮಾ ಮಾಡಿದ್ದರು. ಹೆಸರಾಂತ ನಟರಾಗಿ ಗುರುತಿಸಿಕೊಂಡಿದ್ದರು. ದ್ವಾರಕೀಶ್ ಕಾಲ್‌ಶೀಟ್‌ಗಾಗಿ ಕಾಯುತ್ತಿದ್ದ ದಿನಮಾನಗಳವು. ಅಂತಹ ವೇಳೆಯಲ್ಲಿ ವಿಷ್ಣುವರ್ಧನ್ ಜೊತೆ ಸಿನಿಮಾ ಮಾಡಬೇಕು ಎಂದು ಕನಸುಕಂಡರು ಕನ್ನಡದ ಕುಳ್ಳ ದ್ವಾರಕೀಶ್. ತಮ್ಮ ಮನೆಯ ಬಾಗಿಲಿಗೆ ಬಂದ ಯಾರನ್ನೂ ವಿಷ್ಣು ನಿರಾಸೆಗೊಳಿಸುತ್ತಿರಲಿಲ್ಲ. ದ್ವಾರಕೀಶ್‌ನಂತಹ ಮೇರು ನಟ ಬಂದರೆ, ಖಾಲಿ ಕೈಯಲ್ಲಿ ಕಳುಹಿಸುವ ಮಾತೇ ಇಲ್ಲ. `ಆಯಿತು ಒಟ್ಟಿಗೆ ಸಿನಿಮಾ ಮಾಡೋಣ’ ಎಂದು ಹೇಳಿಬಿಟ್ಟಿದ್ದರು ವಿಷ್ಣು. ಆಗ ತಯಾರಾಗಿದ್ದೆ `ಕಳ್ಳ ಕುಳ್ಳ’ ಚಿತ್ರ. 1975ರಲ್ಲಿ ತೆರೆಕಂಡ ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಗೆದ್ದಿತು. ಕನ್ನಡ ಸಿನಿಮಾ ರಂಗದ `ಕಳ್ಳ ಕುಳ್ಳ ಜೋಡಿ’ ಎಂದೇ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಅವರನ್ನು ಕರೆಯುವಂತೆ ಮಾಡಿತ್ತು. ಅಲ್ಲಿಂದ ಶುರುವಾದ ಈ ಜೋಡಿಯ ಪಯಣ 1986ರ ಹೊತ್ತಿಗೆ ಒಂದು ಡಜನ್‌ನಷ್ಟು ಸಿನಿಮಾಗಳನ್ನು ಮಾಡಿಸಿತು.

    ಕಳ್ಳ ಕುಳ್ಳ ನಂತರ ಕಿಟ್ಟು ಪುಟ್ಟು, ಭಲೇ ಹುಡುಗ, ಸಿಂಗಪುರ್‌ನಲ್ಲಿ ರಾಜಾಕುಳ್ಳ, ಅವಳ ಹೆಜ್ಜೆ, ಗುರು ಶಿಷ್ಯರು, ಪೆದ್ದಗೆದ್ದ, ಜಿಮ್ಮಿಗಲ್ಲು, ಇಂದಿನ ರಾಮಾಯಣ, ಮದುವೆ ಮಾಡು ತಮಾಷೆ ನೋಡು… ಹೀಗೆ ಹನುಮಂತನ ಬಾಲದಂತೆ ಪಟ್ಟಿ ಬೆಳೆಯುತ್ತಾ ಹೋಯಿತು. ವಿಷ್ಣುವರ್ಧನ್ ಮೇಲೆ ದ್ವಾರಕೀಶ್ ಅವರಿಗೆ ಎಷ್ಟು ನಂಬಿಕೆ ಬಂತೆಂದರೆ ವಿಷ್ಣುವಿದ್ದರೆ ಗಲ್ಲಾಪೆಟ್ಟಿಗೆ ತುಂಬುವುದರಲ್ಲಿ ಅನುಮಾನವಿಲ್ಲ ಎನ್ನುವಷ್ಟರ ಮಟ್ಟಿಗೆ ನಂಬಿದ್ದರು. ಅದು ನಿಜವೂ ಆಗಿತ್ತು. ಈ ಧೈರ್ಯದಿಂದಲೇ ಅವರು `ರಾಜಾ ಕುಳ್ಳ’ ಸಿನಿಮಾವನ್ನು ಸಿಂಗಾಪುರದಲ್ಲಿ ಚಿತ್ರೀಕರಣ ಮಾಡಲು ಮುಂದಾದರು.

    ಎಪ್ಪತ್ತರ ದಶಕದಲ್ಲಿ ಮದರಾಸು, ಬೆಂಗಳೂರು, ಮೈಸೂರಿನ ಸುತ್ತಲಿನ ಸ್ಟುಡಿಯೋಗಳಲ್ಲಿ ಅಥವಾ ಆ ಸ್ಟುಡಿಯೋಗಳನ್ನೇ ಆಶ್ರಯಿಸಿಕೊಂಡಿದ್ದ ಹೊರಾಂಗಣದಲ್ಲಿ ಚಿತ್ರೀಕರಣ ಮಾಡುವ ವಾಡಿಕೆಯಿತ್ತು. ಬಜೆಟ್ ಕೂಡ ಹಿಗ್ಗಿಸುವಂತಹ ಧೈರ್ಯ ಮಾಡುತ್ತಿರಲಿಲ್ಲ. ಆದರೆ, ಪ್ರಪ್ರಥಮವಾಗಿ ತಮ್ಮ ಸಿನಿಮಾವನ್ನು ಸಿಂಗಾಪುರದಲ್ಲಿ ಶೂಟಿಂಗ್ ಮಾಡಲು ನಿರ್ಧರಿಸಿದ್ದರು. ಅದರಲ್ಲಿ ಯಶಸ್ವಿ ಕೂಡ ಆದರು ದ್ವಾರಕೀಶ್. ಕನ್ನಡ ಚಿತ್ರರಂಗದಲ್ಲೇ ಸಿಂಗಾಪುರದಲ್ಲಿ ಶೂಟಿಂಗ್ ಆದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ `ರಾಜಾ ಕುಳ್ಳ’ ಪಾತ್ರವಾಯಿತು. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅದೊಂದು ಮೈಲಿಗಲ್ಲಾಯಿತು. ನಿರ್ಮಾಪಕರಾಗಿ ಸಾಕಷ್ಟು ಹೆಸರು ಮಾಡಿದ ದ್ವಾರಕೀಶ್, 1985ರಲ್ಲಿ ತೆರೆಕಂಡ ವಿಷ್ಣುವರ್ಧನ್ ಮತ್ತು ಭವ್ಯ ಜೊತೆಯಾಗಿ ನಟಿಸಿದ್ದ `ನೀ ಬರೆದ ಕಾದಂಬರಿ’ ಸಿನಿಮಾದ ಮೂಲಕ ನಿರ್ದೇಶಕರಾಗಿಯೂ ಯಶಸ್ಸಿನ ತುತ್ತ ತುದಿಯಲ್ಲಿ ಕೂತರು. ದ್ವಾರಕೀಶ್ ಗೆಲುವಿನ ಹಿಂದೆ ಶಕ್ತಿಯಾಗಿ ನಿಂತದ್ದು ಇದೇ ವಿಷ್ಣುವರ್ಧನ್. ಆದರೆ, ಈ ಜೋಡಿಯ ಮಧ್ಯೆಯೂ ಬಿರುಕುಂಟಾಯಿತು.

     

    ಯಶಸ್ಸು ಯಾವತ್ತಿಗೂ ಒಂದಾಗಿರುವುದಕ್ಕೆ ಬಿಡುವುದಿಲ್ಲ. ಅದನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟ. ಯಶಸ್ಸಿನ ಅಮಲು ತಲೆಗೇರಿಸಿಕೊಂಡರೆ ಎಂತಹ ಅನಾಹುತ ಆಗುತ್ತದೆ ಎನ್ನುವುದಕ್ಕೆ ದ್ವಾರಕೀಶ್ ನಡೆಯೇ ಸಾಕ್ಷಿ. ಸಿನಿಮಾಗಳು ಗೆಲ್ಲುತ್ತಾ ಹೋದವು. ಹಣವೂ ಹಾಗೆಯೇ ಹರಿದು ಬಂತು. ಗೆಲ್ಲುವ ಕುದುರೆ ಎಂಬ ವಿಷ್ಣುವರ್ಧನ್ ಎಲ್ಲರಿಗೂ ಪ್ರಿಯವಾಗಿ ಹೋದರು. ಬರೀ ದ್ವಾರಕೀಶ್ ಮಾತ್ರ ಶ್ರೀಮಂತನಾಗಬೇಕಾ? ನಮಗೂ ಕಾಲ್‌ಶೀಟ್ ಕೊಡಿ ಎಂದು ನಿರ್ಮಾಪಕರು ದುಂಬಾಲು ಬಿದ್ದರು. ನಮಗೂ ಒಂದು ಯಶಸ್ಸು ದಯಪಾಲಿಸಿ ಎಂದು ಇತರ ನಿರ್ದೇಶಕರು ವಿಷ್ಣುವರ್ಧನ್ ಅವರಲ್ಲಿ ಮನವಿ ಮಾಡಿಕೊಂಡರು. ಕಷ್ಟ ಅಂತ ಬಂದರೆ ತಕ್ಷಣವೇ ಕರಗುತ್ತಿದ್ದ ಅವರು ಇತರರಿಗೆ ಕಾಲ್‌ಶೀಟ್ ಕೊಡಲು ಶುರು ಮಾಡಿದರು. ಅಲ್ಲಿಗೆ ದ್ವಾರಕೀಶ್ ಕೋಪಗೊಂಡರು. ನನ್ನಿಂದ ಬೆಳೆದ ಹುಡುಗ, ನನ್ನ ವಿರುದ್ಧವೇ ಜಿದ್ದಿಗೆ ಬಿದ್ದನಲ್ಲ ಎಂದು ಅಪಾರ್ಥ ಮಾಡಿಕೊಂಡರು. ಗೆಳೆತನದ ವಿಷಯದಲ್ಲಿ ವ್ಯಾಪಾರವನ್ನೂ ಎಳೆತಂದರು. ಅದು ವಿಷ್ಣುವರ್ಧನ್ ಅವರಿಗೆ ಇಷ್ಟವಾಗಲಿಲ್ಲ. ಯಾರಾದರೂ ತಮ್ಮನ್ನು ಬೆಳೆಸಿದೆ ಎಂದು ಹೇಳಿಬಿಟ್ಟರೆ ವಿಷ್ಣುವರ್ಧನ್ ಅವರಿಗೆ ಆಗುತ್ತಿರಲಿಲ್ಲ. ಯಾರೂ, ಯಾರನ್ನೂ ಬೆಳೆಸುವುದಿಲ್ಲ ಎನ್ನುವ ಸಿದ್ಧಾಂತದಲ್ಲಿ ಬದುಕಿದ್ದ ಜೀವವದು. ದ್ವಾರಕೀಶ್ ಮಾತು ಇಷ್ಟವಾಗಲಿಲ್ಲ. ಪರಸ್ಪರ ಕಿತ್ತಾಡಿಕೊಂಡರು. ದ್ವಾರಕೀಶ್ ಅವರಿಂದ ದೂರವೇ ಆದರು. ಇಬ್ಬರೂ ಕೂತು ಮಾತನಾಡಿದ್ದರೆ ಸರಿ ಹೋಗಬಹುದಿತ್ತು. ಹರಿದ ಕೌದಿ ಹೊಳೆಯಲು ತುಂಬಾ ಜಾಣ್ಮೆ ಬೇಕಿರಲಿಲ್ಲ. ಎದುರು ಕೂತು ಮಾತನಾಡಿದ್ದರೆ ಸಾಕಿತ್ತು. ಆದರೆ ದ್ವಾರಕೀಶ್ ಹಾಗೆ ಮಾಡಲಿಲ್ಲ. ವಿಷ್ಣು ಎದುರಿಗೆ ಹೊಸ ಹೀರೋಗಳನ್ನು ತಂದು ನಿಲ್ಲಿಸುತ್ತೇನೆ ಎಂದು ಘೋಷಿಸಿದರು. ಹೊಸಬರನ್ನು ಹಾಕಿಕೊಂಡು ಡಾನ್ಸ್ ರಾಜ ಡಾನ್ಸ್, ಶ್ರುತಿ ಹಾಕಿದ ಹೆಜ್ಜೆ-ಹೀಗೆ ಅನೇಕ ಸಿನಿಮಾಗಳನ್ನು ಮಾಡಿದರು. ಆದರೆ, ಗೆದ್ದದ್ದು ಮೂರು ಮತ್ತೊಂದು ಮಾತ್ರ. ಬಹುತೇಕ ಚಿತ್ರಗಳು ನೆಲಕಚ್ಚಿದ ಪರಿಣಾಮ ಆರ್ಥಿಕವಾಗಿ ಕುಸಿದು ಬಿಟ್ಟರು. ಮಾಡಿಟ್ಟಿದ್ದ ಆಸ್ತಿ ಮಾರಬೇಕಾಗಿ ಬಂತು. ದ್ವಾರಕೀಶ್ ಅಕ್ಷರಶಃ ಕಂಗಾಲಾದರು. ದ್ವಾರಕೀಶ್ ಜೊತೆ ವಿಷ್ಣುವರ್ಧನ್ ಮಾತಾಡದೇ ಇದ್ದರೂ, ಹಿರಿಜೀವಕ್ಕೆ ಹೀಗಾಗುತ್ತಿದೆಯಲ್ಲ ಎಂದು ಒಳಗೊಳಗೆ ಸಂಕಟ ಪಟ್ಟರು. ದ್ವಾರಕೀಶ್ ದುಡುಕಬಾರದಿತ್ತು ಎಂದು ಕಣ್ಣೀರಿಟ್ಟರು. ಕನ್ನಡ ಚಿತ್ರೋದ್ಯಮಕ್ಕೆ ಸಾಕಷ್ಟು ಕೊಡುಗೆ ನೀಡಿರುವ, ಕಲಾವಿದರಿಗೆ ಅನ್ನ ಹಾಕಿರುವ, ಅಸಂಖ್ಯಾತ ಅಭಿಮಾನಿಗಳನ್ನು ರಂಜಿಸಿರುವ ಹಿರಿಯ ನಟರೊಬ್ಬರು ಬೀದಿಗೆ ಬೀಳಬಾರದು ಎನ್ನುವ ಕಕ್ಕುಲಾತಿಯಿಂದಾಗ ವಿಷ್ಣು ಮತ್ತೆ ದ್ವಾರಕೀಶ್ ಅವರ ಕೈ ಹಿಡಿದರು. ಮತ್ತೆ ಕಾಲ್‌ಶೀಟ್ ಕೊಟ್ಟರು. ದ್ವಾರಕೀಶ್ ಮಾಡಿದ್ದ ಅಷ್ಟೂ ಸಾಲವನ್ನು `ಆಪ್ತಮಿತ್ರ’ ಸಿನಿಮಾ ತೀರಿಸಿತು. ವಿಷ್ಣುವರ್ಧನ್ ಜೊತೆಗಿನ ತಮ್ಮ ವೈಷಮ್ಯವನ್ನು ದ್ವಾರಕೀಶ್ ಅವರೇ ಸ್ವತಃ ಹಲವಾರು ಬಾರಿ ಹೇಳಿಕೊಂಡಿದ್ದಿದೆ. `ನಾನು ಅಹಂ ತೋರಿಸಬಾರದಿತ್ತು. ತಪ್ಪು ಮಾಡಿಬಿಟ್ಟೆ. ನನ್ನೊಂದಿಗೆ ವಿಷ್ಣು ಇದ್ದಿದ್ದರೆ ಇನ್ನೂ ಸಾಕಷ್ಟು ದಾಖಲೆಗಳನ್ನು ಮಾಡಬಹುದಿತ್ತು. ನಮ್ಮ ಯಶಸ್ಸಿನ ಜೋಡಿಯ ಮುಂದೆ ಇತರರು ಹೆದರುತ್ತಿದ್ದರು. ಅದೇ ನನ್ನನ್ನು ಮೂರ್ಖನನ್ನಾಗಿ ಮಾಡಿಸಿತು. ದೂರವಾದ ನಂತರ ಆರ್ಥಿಕ ಮುಗ್ಗಟ್ಟಿಗೆ ಬಳಲಿದೆ, ಆರೋಗ್ಯ ಹಾಳಾಯಿತು, ಆಸ್ತಿ ಕಳೆದುಕೊಂಡೆ. ಕೇವಲ ವಿಷ್ಣು ಮೇಲಿನ ಕೋಪದಿಂದ ಹಲವಾರು ಹೊಸ ಕಲಾವಿದರನ್ನು ಪರಿಚಯಿಸಿದೆ. ನೆಲಕ್ಕೆ ಬಿದ್ದೆ. ಆದರೆ, ಮತ್ತೆ ನನ್ನನ್ನು ಮೇಲಕ್ಕೆ ಎತ್ತಲಿಕ್ಕೆ ನನ್ನ ವಿಷ್ಣುನೇ ಬರಬೇಕಾಯಿತು’ ಎಂದು ಭಾವುಕರಾಗಿ ಹೇಳಿಕೊಂಡಿದ್ದಿದೆ. ನಾನು ವಿಷ್ಣುವನ್ನು ಮರೆತರೆ ದೇವರು ಎಂದೂ ನನ್ನನ್ನು ಕ್ಷಮಿಸುವುದಿಲ್ಲ ಎಂದು ಹೇಳಿದ್ದೂ ಇದೆ. `ಕನ್ನಡ ಸಿನಿಮಾ ರಂಗಕ್ಕೆ ದ್ವಾರಕೀಶ್ ಆಲದ ಮರವಿದ್ದಂತೆ. ಈಗ ಅವರು ಕುಸಿದಿದ್ದಾರೆ. ಬಸವಳಿದಿದ್ದಾರೆ. ಮತ್ತೆ ಅವರಿಗೆ ನಾವೆಲ್ಲ ಚೈತನ್ಯ ತುಂಬಬೇಕು. ಶಕ್ತಿಯಾಗಿ ನಿಲ್ಲಬೇಕು’ ಎಂದು ಪತ್ರಿಕೆಯೊಂದರ ಸಂದರ್ಶನದಲ್ಲೂ ವಿಷ್ಣು ಹೇಳಿದ್ದರು. ಆಪ್ತಮಿತ್ರ ಸಿನಿಮಾಗೆ ಕಾಲ್‌ಶೀಟ್ ಕೊಟ್ಟರು. ಈ ಸಿನಿಮಾದ ಗೆಲುವು ದ್ವಾರಕೀಶ್ ಅವರಿಗೆ ಮರುಜನ್ಮ ನೀಡಿತು.

  • ‘ವಿಷ್ಣುಮಾರ್ಗ’ ಚಿತ್ರದಲ್ಲಿ ವಿಷ್ಣು ಅಭಿಮಾನಿ ಆದ ಹುಚ್ಚ ವೆಂಕಟ್

    ‘ವಿಷ್ಣುಮಾರ್ಗ’ ಚಿತ್ರದಲ್ಲಿ ವಿಷ್ಣು ಅಭಿಮಾನಿ ಆದ ಹುಚ್ಚ ವೆಂಕಟ್

    ನ್ನಡದ ಹೆಸರಾಂತ ನಟ ವಿಷ್ಣುವರ್ಧನ್ (Vishnuvardhan) ಅವರನ್ನು ನೆನಪಿಸುವಂತಹ ಕಿರುಚಿತ್ರವೊಂದು ರೆಡಿಯಾಗಿದೆ. ಈ (Vishnu Marga) ಕಿರುಚಿತ್ರದಲ್ಲಿ ಹುಚ್ಚ ವೆಂಕಟ್ (Huchcha Venkat) ಕೂಡ ನಟಿಸಿದ್ದು, ವಿಷ್ಣುವರ್ಧನ್ ಅವರ ಅಭಿಮಾನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಾ.ವಿಷ್ಣು ಸೇನಾ ಸಮಿತಿಯು ಈ ಕಿರುಚಿತ್ರವನ್ನು ನಿರ್ಮಾಣ ಮಾಡಿದೆ.

    ಹುಚ್ಚ ವೆಂಕಟ್ ಇತ್ತೀಚಿನ ದಿನಗಳಲ್ಲಿ ಯಾರಿಗೂ ಕಾಣದಂತೆ ಮಾಯವಾಗಿದ್ದರು. ಅವರನ್ನು ಹುಡುಕಿ ತಂದು, ಈ ಕಿರುಚಿತ್ರದಲ್ಲಿ ನಟಿಸುವಂತೆ ಮಾಡಿದೆ ಚಿತ್ರತಂಡ. ವಿಜಯ್ ಕಿತ್ತೂರ್ ಈ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದು, ವಿಷ್ಣು ಗೋವಿಂದ್ ಸಂಕಲನ ಮಾಡಿದ್ದಾರೆ.

    ಖ್ಯಾತ ಫೋಟೋಗ್ರಾಫರ್ ಮತ್ತು ಡಿಸೈನರ್ ರಾಜು ವಿಷ್ಣು (Raj Vishnu) ಕೂಡ ಈ ಕಿರುಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿದ್ದು, ಮೊನ್ನೆಯಷ್ಟೇ ಕಿರುಚಿತ್ರದ ಲಿರಿಕಿಲ್ ವಿಡಿಯೋ  ರಿಲೀಸ್ ಆಗಿದೆ. ನಿರ್ದೇಶಕ ಮತ್ತು ನಟರಾದ ರಘುರಾಮ್, ನವೀನ್ ಕೃಷ್ಣ, ನಿರ್ದೇಶಕ ಖದರ್ ಕುಮಾರ್ ಹಾಗೂ ಡಾ.ವಿಷ್ಣು ಸೇನಾ ಸಮಿತಿ ರಾಜ್ಯಾಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

     

    ವಿಷ್ಣುವರ್ಧನ್ ಅವರ ಕುರಿತಂತೆ ಹಲವಾರು ವಿಚಾರಗಳನ್ನು ಈ ಕಿರುಚಿತ್ರ ಹೊತ್ತು ತರಲಿದ್ದು, ಈಗಾಗಲೇ ರಿಲೀಸ್ ಆಗಿರುವ ಲಿರಿಕಲ್ ವಿಡಿಯೋ ಸಾಂಗ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅತೀ ಶೀಘ್ರದಲ್ಲೇ ಈ ಕಿರುಚಿತ್ರ ನೋಡುಗರಿಗೆ ಲಭ್ಯವಾಗಲಿದೆ.

  • ನಟ ವಿಷ್ಣುವರ್ಧನ್ ಪುತ್ಥಳಿ ತಯಾರಿಸಿದ್ದು ಅರುಣ್ ಯೋಗಿರಾಜ್

    ನಟ ವಿಷ್ಣುವರ್ಧನ್ ಪುತ್ಥಳಿ ತಯಾರಿಸಿದ್ದು ಅರುಣ್ ಯೋಗಿರಾಜ್

    ರಾಮ್ ಲಲ್ಲಾ ಮೂರ್ತಿ (Ram Lalla)ಮಾಡುವ ಮೂಲಕ ಜಗತ್ ಪ್ರಸಿದ್ಧಿ ಪಡೆದಿರುವ ಮೈಸೂರಿನ ಅರುಣ್ ಯೋಗಿರಾಜ್ (Arun Yogiraj)ಗೂ ಸಿನಿಮಾ ರಂಗಕ್ಕೂ ನಂಟಿದೆ. ಮೈಸೂರಿನ ವಿಷ್ಣುವರ್ಧನ್ (Vishnuvardhan) ಸ್ಮಾರಕದಲ್ಲಿ ತಲೆಯೆತ್ತಿ ನಿಂತಿರುವ ಡಾ.ವಿಷ್ಣುವರ್ಧನ್ ಅವರ ಪುತ್ಥಳಿಯನ್ನು (Putthali) ತಯಾರು ಮಾಡಿದ್ದು ಇದೇ ಅರುಣ್ ಯೋಗಿರಾಜ್.

     

    ಅರುಣ್ ಯೋಗಿರಾಜ್ ಸ್ಥಳೀಯ ಮಟ್ಟದಲ್ಲಿ ಶಿಲ್ಪಿಕಾರರಾಗಿ ಗುರುತಿಸಿಕೊಂಡಿದ್ದರೂ, ಡಾ.ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ನಿರ್ಮಾಣ ಮಾಡುವ ಮೂಲಕ ಸಿನಿಮಾ ರಂಗಕ್ಕೂ ಪರಿಚಿತ ಆದರು. ಅದರಲ್ಲೂ ಸ್ಮಾರಕದ ಉದ್ಘಾಟನೆ ದಿನದಂದು ವಿಷ್ಣುವರ್ಧನ್ ಪುತ್ಥಳಿ ಹಾಗೂ ಭಾರತಿ ವಿಷ್ಣುವರ್ಧನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದರು.

     

    ಇದೀಗ ಅರುಣ್ ಯೋಗಿರಾಜ್ ನ್ಯಾಷಿನಲ್ ಸ್ಟಾರ್ ಆಗಿ ಬದಲಾಗಿದ್ದಾರೆ. ಇವರದ್ದೇ ಕಲ್ಪನೆಯಲ್ಲಿ ತಯಾರಾದ ರಾಮ್ ಲಲ್ಲಾ ಮೂರ್ತಿಯು ಆಯ್ಕೆಯಾದ ನಂತರ ಅರುಣ್ ಸಖತ್ ಫೇಮಸ್ ಆಗಿದ್ದಾರೆ. ಇವರ ಕಲ್ಪನೆಯಲ್ಲಿ ಅರಳಿದ ಪ್ರತಿಮೆಗಳು ಇದೀ ಒಂದೊಂದೇ ಬೆಳಕಿಗೆ ಬರುತ್ತಿವೆ.

     

    ನಿನ್ನೆಯಷ್ಟೇ ಅರುಣ್ ಯೋಗಿರಾಜ್ ಬೆಂಗಳೂರಿಗೆ ಬಂದಿಳಿದ್ದಾರೆ. ಜೊತೆಗೆ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್. ರಂಗನಾಥ್ ಅವರ ಜೊತೆ ಎಕ್ಸ್ ಕ್ಲ್ಯೂಸಿವ್ ಆಗಿ ಸಂದರ್ಶನಕ್ಕೆ ಕೂತಿದ್ದಾರೆ. ಸಾಕಷ್ಟು ವಿಚಾರಗಳನ್ನೂ ಅವರು ಹಂಚಿಕೊಂಡಿದ್ದಾರೆ.