Tag: ವಿಷಾನಿಲ ಸೋರಿಕೆ

  • ಮಂಗಳೂರು | MRPLನಲ್ಲಿ ವಿಷಾನಿಲ ಸೋರಿಕೆ – ಇಬ್ಬರು ಸಿಬ್ಬಂದಿ ಸಾವು

    ಮಂಗಳೂರು | MRPLನಲ್ಲಿ ವಿಷಾನಿಲ ಸೋರಿಕೆ – ಇಬ್ಬರು ಸಿಬ್ಬಂದಿ ಸಾವು

    ಮಂಗಳೂರು: ವಿಷಾನಿಲ ಸೋರಿಕೆಯಿಂದ (Toxic Gas Leak) ಮಂಗಳೂರು ಹೊರವಲಯದ ಸುರತ್ಕಲ್‌ನ (Surathkal) ಎಂಆರ್‌ಪಿಎಲ್ (MRPL) ಘಟಕದ ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದಾರೆ.

    ದೀಪ ಚಂದ್ರ ಭಾರ್ತಿಯಾ ಮತ್ತು ಬಿಜಿಲ್ ಪ್ರಸಾದ್ ಸಾವನ್ನಪ್ಪಿದ ಸಿಬ್ಬಂದಿ. ಮಂಗಳೂರು ತೈಲ ಶುದ್ಧೀಕರಣ ಘಟಕದ ಆಯಿಲ್ ಮೂವ್‌ಮೆಂಟ್ ವಿಭಾಗದಲ್ಲಿ ಘಟನೆ ನಡೆದಿದೆ. ಆಯಿಲ್ ಮೂವ್‌ಮೆಂಟ್ ವಿಭಾಗದಲ್ಲಿ ದೋಷ ಕಂಡು ಬಂದ ಹಿನ್ನೆಲೆ ಪರಿಶೀಲನೆಗೆಂದು ಸಿಬ್ಬಂದಿ ತೆರಳಿದ್ದರು. ಟ್ಯಾಂಕ್ ಮೇಲ್ಛಾವಣಿಗೆ ಹೋದ ಬೆನ್ನಲ್ಲೇ ಇಬ್ಬರೂ ಅಸ್ವಸ್ಥಗೊಂಡಿದ್ದಾರೆ. ತಕ್ಷಣದ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಿದರೂ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ವಾಕಿಂಗ್ ಮಾಡುವಾಗ ಹೃದಯಾಘಾತ – ನರ್ಸಿಂಗ್ ಹೋಮ್ ಮಾಲೀಕ ಸಾವು

    ಇಬ್ಬರ ರಕ್ಷಣೆಗೆ ಮುಂದಾಗಿದ್ದ ಮತ್ತೊಬ್ಬ ಸಿಬ್ಬಂದಿ ವಿನಾಯಕ ಮಯಗೇರಿ ಎಂಬವರ ಸ್ಥಿತಿ ಗಂಭೀರವಾಗಿದೆ. ಸದ್ಯ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎಂಆರ್‌ಪಿಎಲ್ ಆಡಳಿತ ಘಟನೆಯ ತನಿಖೆಗೆ ಸಮಿತಿ ರಚಿಸಿದೆ. ಗ್ರೂಪ್ ಜನರಲ್ ಮ್ಯಾನೇಜರ್‌ಗಳನ್ನೊಳಗೊಂಡ ಉನ್ನತ ಮಟ್ಟದ ತನಿಖಾ ಸಮಿತಿ ರಚನೆ ಮಾಡಲಾಗಿದೆ. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ – ಪೊಲೀಸರ ವಿರುದ್ಧ ಎಫ್‌ಐಆರ್‌ಗೆ ಶಿಫಾರಸು

  • ವಿಷಾನಿಲ ಸೋರಿಕೆ – 16 ಜನರ ದುರ್ಮರಣ

    ವಿಷಾನಿಲ ಸೋರಿಕೆ – 16 ಜನರ ದುರ್ಮರಣ

    ಕೇಪ್ ಟೌನ್: ವಿಷಾನಿಲ ಸೋರಿಕೆಯಿಂದಾಗಿ (Gas Leak)  ಕನಿಷ್ಠ 16 ಜನರು ದುರ್ಮರಣ ಹೊಂದಿರುವ ಘಟನೆ ದಕ್ಷಿಣ ಆಫ್ರಿಕಾದ (South Africa) ಜೋಹನ್ಸ್‌ಬರ್ಗ್‌ನ ಬೋಕ್ಸ್‌ಬರ್ಗ್‌ ಬಳಿ ನಡೆದಿದೆ.

    ಅನಿಲ ಸೋರಿಕೆ ಶಂಕಿತ ಅಕ್ರಮ ಗಣಿಗಾರಿಕೆ ಚಟುವಟಿಕೆಗಳಿಗೆ ಸಂಬಂಧಿಸಿರಬಹುದು ಎಂದು ದಕ್ಷಿಣ ಆಫ್ರಿಕಾದ ಮಾಧ್ಯಮಗಳು ವರದಿ ಮಾಡಿವೆ. ಘಟನೆಯಲ್ಲಿ 1 ವರ್ಷದ ಮಗು ಸೇರಿದಂತೆ 16 ಜನರು ಸಾವನ್ನಪ್ಪಿದ್ದಾರೆ. ಅನಿಲ ಸೋರಿಕೆಯಿಂದಾಗಿ ಮೃತದೇಹಗಳು ಪ್ರದೇಶದಾದ್ಯಂತ ಅಲ್ಲಲ್ಲಿ ಚದುರಿದ ಸ್ಥಿತಿಯಲ್ಲಿ ಕಾಣಸಿಕ್ಕಿವೆ ಎನ್ನಲಾಗಿದೆ. ಇದನ್ನೂ ಓದಿ: 80 ಅಡಿ ಆಳದ ಕಂದಕಕ್ಕೆ ಉರುಳಿದ ಬಸ್‌ – 27 ಮಂದಿ ದಾರುಣ ಸಾವು, 17 ಮಂದಿಗೆ ಗಾಯ

    ದುರಂತದಲ್ಲಿ 24 ಜನರು ಮೃತಪಟ್ಟಿದ್ದಾರೆ ಎಂದು ಮೊದಲಿಗೆ ವರದಿಯಾಗಿತ್ತು. ಬಳಿಕ ರಕ್ಷಣಾ ತಂಡ ಮೃತದೇಹಗಳನ್ನು ಮರುಎಣಿಕೆ ಮಾಡಿದ್ದು, ಮೃತರ ಸಂಖ್ಯೆಯನ್ನು 16 ಎಂದು ಖಚಿತಪಡಿಸಲಾಗಿದೆ. ಇದನ್ನೂ ಓದಿ: ಮಣಿಪುರ ಹಿಂಸಾಚಾರ – ಇಂಟರ್ನೆಟ್ ಸೇವೆ ನಿಷೇಧ ಜು.10 ರವರೆಗೆ ವಿಸ್ತರಣೆ

    ಸದ್ಯ ಅನಿಲ ಸೋರಿಕೆ ಇದೀಗ ನಿಂತಿದ್ದು, 100 ಮೀ. ಆಸುಪಾಸಿನಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಸಗೊಬ್ಬರ ತಯಾರಿಕೆ ಹೆಸರಲ್ಲಿ ಸಲ್ಫ್ಯೂರಿಕ್ ಆ್ಯಸಿಡ್ ಉತ್ಪಾದನೆ – ಲಕ್ಷಾಂತರ ರೂ. ಬೆಳೆ ಹಾನಿ

    ರಸಗೊಬ್ಬರ ತಯಾರಿಕೆ ಹೆಸರಲ್ಲಿ ಸಲ್ಫ್ಯೂರಿಕ್ ಆ್ಯಸಿಡ್ ಉತ್ಪಾದನೆ – ಲಕ್ಷಾಂತರ ರೂ. ಬೆಳೆ ಹಾನಿ

    ಮಂಡ್ಯ: ರಸಗೊಬ್ಬರ ತಯಾರಿಕೆಯ ಹೆಸರಿನಲ್ಲಿ ಸಲ್ಫ್ಯೂರಿಕ್ ಆಸಿಡ್ ಉತ್ಪಾದಿಸಿ, ವಿಷಾನಿಲ ಸೋರಿಕೆಯಾಗಿ ಲಕ್ಷಾಂತರ ರೂ. ಮೌಲ್ಯದ ಬೆಳೆ ಹಾನಿಯಾಗಿರುವ ಘಟನೆ ಮಂಡ್ಯದ ಕಾರೇಕಟ್ಟೆ ಗ್ರಾಮದಲ್ಲಿ ನಡೆದಿದೆ.

    ಕೀರ್ತಿ ಕೆಮಿಕಲ್ ಫ್ಯಾಕ್ಟರಿ ಹೆಸರಿನ ರಸಗೊಬ್ಬರ ತಯಾರಿಕಾ ಘಟಕ ಗ್ರಾಮದ ಹೊರವಲಯದಲ್ಲಿ ಕೆಲ ದಿನಗಳಿಂದ ಅನುಮತಿ ಪಡೆಯದೇ ಸಲ್ಫ್ಯೂರಿಕ್ ಆ್ಯಸಿಡ್ ತಯಾರಿಸುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಹಾಗೆಯೇ ಸ್ಥಳೀಯ ರೈತರು ಕಾರ್ಖಾನೆಗೆ ಮುತ್ತಿಗೆ ಹಾಕಿ ಬಾಗಿಲು ಮುಚ್ಚಿಸಿದ್ದಾರೆ. ಇದನ್ನೂ ಓದಿ: ಪಾದಯಾತ್ರೆ ಕೇಸ್‍ಗೆ ಕೌಂಟರ್ ಕೊಡಲು ಕೈ ಪಾಳಯ ಸಿದ್ಧ

    ಕಾರ್ಖಾನೆಯ ವಿಷಾನಿಲ ಸೋರಿಕೆಯಿಂದಾಗಿ 15 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ತೆಂಗು, ರಾಗಿ, ಹುರುಳಿ ಬೆಳೆಗಳು ನಾಶವಾಗಿದೆ. ಸುತ್ತಮುತ್ತಲ ಗ್ರಾಮದ ಕೆಲವರಿಗೆ ಉಸಿರಾಟದ ಸಮಸ್ಯೆಯೂ ಕಂಡುಬಂದಿದೆ ಎಂದು ನಷ್ಟಕ್ಕೊಳಗಾದ ಗ್ರಾಮಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಮದ್ಯಪಾನಕ್ಕೆ ಕರೆದೊಯ್ದು ಸ್ನೇಹಿತರಿಂದಲೇ ಯುವಕನ ಕತ್ತು ಕೊಯ್ದು ಕೊಲೆ

    ಕಾರ್ಖಾನೆಯನ್ನು ಅನುಮತಿ ಪಡೆದೇ ಆರಂಭಿಸಿದ್ದೇವೆ ಎಂದು ಕೀರ್ತಿ ಕಾರ್ಖಾನೆಯ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ. ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ನೀಡುತ್ತೇವೆ ಎಂದು ತಿಳಿಸಿದೆ. ಆದರೂ ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚುವಂತೆ ಸ್ಥಳೀಯ ರೈತರು ಆಗ್ರಹಿಸುತ್ತಿದ್ದಾರೆ.

  • ವಿಶಾಖಪಟ್ಟಣಂನಲ್ಲಿ ಮತ್ತೆ ವಿಷಾನಿಲ ಸೋರಿಕೆ- ಇಬ್ಬರು ಸಾವು, ನಾಲ್ವರು ಗಂಭೀರ

    ವಿಶಾಖಪಟ್ಟಣಂನಲ್ಲಿ ಮತ್ತೆ ವಿಷಾನಿಲ ಸೋರಿಕೆ- ಇಬ್ಬರು ಸಾವು, ನಾಲ್ವರು ಗಂಭೀರ

    ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣಂನ ಕಾರ್ಖಾನೆಯೊಂದರಲ್ಲಿ ಮತ್ತೆ ಗ್ಯಾಸ್ ಲೀಕ್ ಆಗಿದ್ದು, ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಜೊತೆಗೆ ನಾಲ್ವರು ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇತ್ತೀಚೆಗಷ್ಟೇ ವಿಶಾಖಪಟ್ಟಣಂನ ಆರ್.ಆರ್ ವೆಂಕಟಪುರಂನಲ್ಲಿರುವ ಬಹುರಾಷ್ಟ್ರೀಯ ಕಂಪನಿ ಎಲ್.ಜಿ. ಪಾಲಿಮರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ರಾಸಾಯನಿಕ ಅನಿಲ ಕಾರ್ಖಾನೆಯಲ್ಲಿ ಸೋರಿಕೆಯಾಗಿತ್ತು. ಈಗ ಮತ್ತೆ ಇದೇ ವಿಶಾಖಪಟ್ಟಣಂನ ಸೈನರ್ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಿಂದ ಬೆಂಜಿಮಿಡಾಜೋಲ್ ಅನಿಲ ಸೋರಿಕೆಯಾಗಿದೆ ಎಂದು ರಾಷ್ಟೀಯ ಮಾಧ್ಯಮಗಳು ವರದಿ ಮಾಡಿವೆ.

    ಈ ವಿಚಾರವಾಗಿ ಮಾತನಾಡಿರುವ ಪರ್ವಾಡಾ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಉದಯ್ ಕುಮಾರ್, ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಈ ಘಟನೆಯಲ್ಲಿ ಸಾವನ್ನಪ್ಪಿದ ಇಬ್ಬರು ಕಾರ್ಮಿಕರು ಅನಿಲ ಸೋರಿಕೆಯಾದ ಸಮಯದಲ್ಲಿ ಕಾರ್ಖಾನೆಯಲ್ಲೇ ಇದ್ದರಿಂದ ಅವರು ಸಾವನ್ನಪ್ಪಿದ್ದಾರೆ. ನಾಲ್ವರು ಪರಿಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಿದ್ದೇವೆ. ಕಾರ್ಖಾನೆಯಿಂದ ಸೋರಿಕೆಯಾದ ಅನಿಲ ಬೇರೆಲ್ಲಿಯೂ ಹರಡಿಲ್ಲ ಎಂದು ಮಾಹಿತಿ ನೀಡಿದ್ದಾರೆ.

    ಕಳೆದ ಮೇ 7ರಂದು ಪಾಲಿಸ್ಟೈರೀನ್ ಉತ್ಪನ್ನಗಳನ್ನು ತಯಾರಿಸುವ ದಕ್ಷಿಣ ಕೊರಿಯಾದ ಒಡೆತನದ ಕಾರ್ಖಾನೆಯ ಎಲ್‍ಜಿ ಪಾಲಿಮರ್ಸ್ ಇಂಡಿಯಾ ಲಿಮಿಟೆಡ್‍ನಲ್ಲಿ ಅನಿಲ ಸೋರಿಕೆಯಿಂದ 13 ಜನರು ಸಾವನ್ನಪ್ಪಿದರು. ಸುಮಾರು 10 ಸಾವಿರ ಟನ್ ಅನಿಲ ಸೋರಿಕೆಯಾದ ಕಾರಣ ಈ ಅನಿಲ ಗಾಲಿಯಲ್ಲಿ ಸೇರಿ ಅಕ್ಕಪಕ್ಕದ ಊರುಗಳಿಗೂ ಹರಡಿತ್ತು. ಈ ಪರಿಣಾಮ ನೂರಾರು ಜನರು ಅನಾರೋಗ್ಯಕ್ಕೆ ಒಳಗಾಗಿದ್ದರು.

  • ವಿಶಾಖಪಟ್ಟಣಂ ವಿಷಾನಿಲ ದುರಂತದ ಬೆನ್ನಲ್ಲೇ ಛತ್ತೀಸಗಢದಲ್ಲೂ ಗ್ಯಾಸ್ ಲೀಕ್

    ವಿಶಾಖಪಟ್ಟಣಂ ವಿಷಾನಿಲ ದುರಂತದ ಬೆನ್ನಲ್ಲೇ ಛತ್ತೀಸಗಢದಲ್ಲೂ ಗ್ಯಾಸ್ ಲೀಕ್

    – 7 ಮಂದಿ ಅಸ್ವಸ್ಥ, ಮೂವರ ಸ್ಥಿತಿ ಗಂಭೀರ

    ರಾಯಗಢ: ವಿಶಾಖಪಟ್ಟಣಂನಲ್ಲಿ ವಿಷಾನಿಲ ಸೋರಿಕೆಯಾಗಿ 11 ಮಂದಿ ಸಾವನ್ನಪ್ಪಿ, ಸಾವಿರಾರು ಮಂದಿ ಅಸ್ವಸ್ಥಗೊಂಡ ಬೆನ್ನಲ್ಲೇ ಇದೀಗ ಛತ್ತೀಸಗಢದಲ್ಲೂ ಗ್ಯಾಸ್ ಲೀಕ್ ಆಗಿ 7 ಮಂದಿ ಅಸ್ವಸ್ಥಗೊಂಡಿರುವ ದುರ್ಘಟನೆ ನಡೆದಿದೆ.

    ಛತ್ತೀಸಗಢದ ರಾಯಗಢ ಜಿಲ್ಲೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಪೇಪರ್ ಮಿಲ್ ಅನ್ನು ಶುದ್ಧಿಕರಿಸುತ್ತಿದ್ದ ವೇಳೆ ವಿಷಾನಿಲ ಸೋರಿಕೆಯಾಗಿ ಏಳು ಮಂದಿ ಕಾರ್ಮಿಕರು ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥಗೊಂಡವರ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಘಟನೆಯ ಬಗ್ಗೆ ನಮಗೆ ಪೇಪರ್ ಮಿಲ್ ಕಡೆಯಿಂದ ಮಾಹಿತಿ ಸಿಕ್ಕಿಲ್ಲ. ಆದರೆ ಆಸ್ಪತ್ರೆಯಿಂದ ನಾವು ಈ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದೇವೆ ಎಂದು ರಾಯಗಢದ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್ ಹೇಳಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆ ಇಷ್ಟು ದಿನ ಪೇಪರ್ ಮಿಲ್ ಅನ್ನು ಬಂದ್ ಮಾಡಲಾಗಿತ್ತು. ಆದರೆ ಲಾಕ್‍ಡೌನ್ ಸಡಿಲಗೊಂಡು ಕಾರ್ಖಾನೆ ತೆರೆಯಲು ಸರ್ಕಾರ ಅವಕಾಶ ನೀಡಿದ ಹಿನ್ನೆಲೆ ಬುಧವಾರ ಸಂಜೆ ಮಿಲ್ ಅನ್ನು ಸ್ವಚ್ಛಗೊಳಿಸಲಾಗುತ್ತಿತ್ತು. ಆಗ ರಾತ್ರಿ ವೇಳೆ ವಿಷಾನಿಲ ಸೋರಿಕೆ ಆಗಲು ಆರಂಭವಾಗಿತ್ತು.

    ಇಂದು ಮುಂಜಾನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನ ಆರ್.ಆರ್.ವೆಂಕಟಪುರಂನಲ್ಲಿರುವ ಬಹುರಾಷ್ಟ್ರೀಯ ಕಂಪನಿ ಎಲ್.ಜಿ. ಪಾಲಿಮರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ರಾಸಾಯನಿಕ ಅನಿಲ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಿದ್ದು, ಇದು ಗಾಳಿಯಲ್ಲಿ ಸೇರಿಕೊಂಡು ಸುತ್ತಮುತ್ತಲಿನ ಹಳ್ಳಿಗಳಿಗೂ ಹರಡಿದೆ. ಕಾರ್ಖಾನೆಯಲ್ಲಿ ಇದ್ದ ಎರಡು ಟ್ಯಾಂಕ್‍ಗಳಲ್ಲಿದ್ದ ವಿಷಾನಿಲ ಸೋರಿಕೆಯಾಗಿದ್ದು, ಒಟ್ಟು 10 ಸಾವಿರ ಟನ್ ವಿಷ ಅನಿಲ ಸೋರಿಕೆಯಾಗಿದೆ.

    ಕಾರ್ಖಾನೆಯ ವಿಷ ಅನಿಲ ಸೋರಿಕೆ ದುರಂತ ಒಟ್ಟು 11 ಮಂದಿಯನ್ನು ಬಲಿಪಡೆದಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಗಳೀವೆ. ಇದರ ಜೊತೆ ಸುಮಾರು 180 ಮಂದಿಯ ಸ್ಥಿತಿ ಗಂಭೀರವಾಗಿದ್ದು, 1000ಕ್ಕೂ ಹೆಚ್ಚು ಮಂದಿ ಅಸ್ವಸ್ಥವಾಗಿದ್ದಾರೆ.