Tag: ವಿಷಯ

  • ಮಂಗಳವಾರ ಅಭಿಮಾನಿಗಳಿಗೆ ಗುಡ್‍ನ್ಯೂಸ್ ಕೊಡ್ತಾರೆ ಪ್ರಭಾಸ್

    ಮಂಗಳವಾರ ಅಭಿಮಾನಿಗಳಿಗೆ ಗುಡ್‍ನ್ಯೂಸ್ ಕೊಡ್ತಾರೆ ಪ್ರಭಾಸ್

    ಹೈದರಾಬಾದ್: ಅಕ್ಟೋಬರ್ 23ರಂದು ವಿಶೇಷವಾದ ಒಂದು ವಿಷಯವನ್ನು ಶೇರ್ ಮಾಡಲು ಕಾತುರದಿಂದ ಕಾಯುತ್ತಿದ್ದೇನೆ ಎಂದು ಟಾಲಿವುಡ್ ನಟ ಪ್ರಭಾಸ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.

    ಪ್ರಭಾಸ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ, “ಪ್ರೀತಿಯ ಅಭಿಮಾನಿಗಳೇ, ಈ ತಿಂಗಳ 23ರಂದು ನಿಮ್ಮ ಜೊತೆ ವಿಶೇಷವಾದ ಒಂದು ವಿಷಯವನ್ನು ಹಂಚಿಕೊಳ್ಳಲು ಕಾತುರದಿಂದ ಕಾಯುತ್ತಿದ್ದೇನೆ. ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಅಕ್ಟೋಬರ್ 23 ಪ್ರಭಾಸ್ ಅವರ ಹುಟ್ಟುಹಬ್ಬ ದಿನವಾಗಿದ್ದು, ಕಳೆದ ವರ್ಷ ಅವರು ತಮ್ಮ ಹುಟ್ಟುಹಬ್ಬದಂದು ‘ಸಾಹೋ’ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದ್ದರು. ಈ ವರ್ಷವೂ ಕೂಡ ಪ್ರಭಾಸ್ ತಮ್ಮ ಹುಟ್ಟುಹಬ್ಬದಂದು ಒಂದು ವಿಷಯವನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಳ್ಳಲಿದ್ದಾರೆ.

    ಪ್ರಭಾಸ್ 2016ರಲ್ಲೂ ತಮ್ಮ ಹುಟ್ಟುಹಬ್ಬದ ದಿನ ‘ಬಾಹುಬಲಿ- 2’ ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಮಾಡಿದ್ದರು. ಈ ಚಿತ್ರ ವಿಶ್ವಾದ್ಯಂತ ಯಶಸ್ವಿಯಾಗಿತ್ತು. ಈ ಚಿತ್ರದಿಂದ ಪ್ರಭಾಸ್ ಇನ್ನಷ್ಟು ಜನಪ್ರಿಯವಾದರು, ಅಲ್ಲದೇ ಅವರಿಗೆ ಅಭಿಮಾನಿಗಳು ಹೆಚ್ಚಾದ್ದರು. ಈಗ ಪ್ರಭಾಸ್ ಅಭಿಮಾನಿಗಳು ಅ. 23ಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.

    ಸದ್ಯ ಪ್ರಭಾಸ್ ಅವರ ಮುಂದಿನ ಸಾಹೋ ಚಿತ್ರದಲ್ಲಿ ಶ್ರದ್ಧಾ ಕಪೂರ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಸಾಹೋ ಆ್ಯಕ್ಷನ್ ಹಾಗೂ ಥ್ರಿಲ್ಲರ್ ಚಿತ್ರ ಎಂದು ಹೇಳಲಾಗುತ್ತಿದೆ. ಅಲ್ಲದೇ ಈ ಚಿತ್ರ ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ಬಿಡುಗಡೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv