Tag: ವಿಷನ್ 2030

  • 2030ರ ವೇಳೆಗೆ ಭಾರತ ಹೇಗಿರಬೇಕು – ಮೋದಿ ಸರ್ಕಾರದ ಟಾಪ್ 10 ವಿಷನ್‍ಗಳು

    2030ರ ವೇಳೆಗೆ ಭಾರತ ಹೇಗಿರಬೇಕು – ಮೋದಿ ಸರ್ಕಾರದ ಟಾಪ್ 10 ವಿಷನ್‍ಗಳು

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಅಂತಿಮ ಬಜೆಟ್ ಮಂಡನೆ ಮಾಡಿದ್ದು, ಇದರಲ್ಲಿ ಮುಂದಿನ 2030ರ ವೇಳೆಗೆ ಭಾರತ ಹೇಗಿರಬೇಕು ಹಾಗೂ ಯಾವ ಕ್ಷೇತ್ರದಲ್ಲಿ ಸ್ವಾವಲಂಬನೆ ಆಗಿರಬೇಕು ಎನ್ನುವುದರ ಬಗ್ಗೆ ತನ್ನ ವಿಷನ್ ತಿಳಿಸಿದೆ.

    1) 10 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ರೂಪಿಸಲು ಸಾಮಾಜಿಕ ಹಾಗೂ ಭೌತಿಕ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವುದು.

    2) ಡಿಜಿಟಲ್ ಇಂಡಿಯಾ ನಿರ್ಮಾಣ ಮಾಡಿ ಹೆಚ್ಚಿನ ಉದ್ಯೋಗ ಅವಕಾಶ ಹಾಗೂ ನವೋದ್ಯಮಗಳನ್ನು ರೂಪಿಸಿ ದೇಶದ ಪ್ರತಿ ಪ್ರಜೆಯನ್ನ ತಲುಪುವ ಗುರಿ ಹೊಂದಲಾಗಿದೆ.

    3) ಪ್ರಮುಖವಾಗಿ ದೇಶವನ್ನ ಸ್ವಚ್ಛ ಹಾಗೂ ಹಸಿರು ಭಾರತವನ್ನಾಗಿ ಮಾರ್ಪಡಿಸುವುದು ಸರ್ಕಾರದ ಗುರಿಯಾಗಿದ್ದು, ಇದಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆ ಹಾಗೂ ನವೀಕರಿಸಬಹುದಾದ ಶಕ್ತಿಗಳ ಬಳಕೆಗೆ ಪ್ರಾಮುಖ್ಯತೆ ಒತ್ತು.

    4) ಮೆಕ್ ಇನ್ ಇಂಡಿಯಾ ಯೋಜನೆ ಮೂಲಕ ನಗರದ ಆಧುನಿಕ ಕೈಗಾರಿಕಾ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಂಡು ಗ್ರಾಮೀಣ ಕೈಗಾರಿಕೆಗಳನ್ನು ಹೆಚ್ಚು ಅಭಿವೃದ್ಧಿ.

    5) ಸರ್ಕಾರ ಪ್ರಮುಖ 5ನೇ ಗುರಿ ಸ್ವಚ್ಛ ನದಿಗಳನ್ನು ರೂಪಿಸುವುದಾಗಿದ್ದು, ಆ ಮೂಲಕ ದೇಶದ ಎಲ್ಲಾ ಜನತೆಗೆ ಶುದ್ಧ ಕುಡಿಯುವ ನೀರು ಲಭಿಸುವಂತೆ ಮಾಡುವುದು. ಅಲ್ಲದೇ ಮೈಕ್ರೋ ಇರಿಗೇಷನ್ ತಂತ್ರಜ್ಞಾನ ಬಳಕೆ.

    6) ಕೃಷಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ, ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಹಾಗೂ ಸಾವಯವ ಆಹಾರ ಉತ್ಪಾದನೆಗೆ ಒತ್ತು.

    7) ಬಾಹ್ಯಾಕಾಶ ಸಂಶೋಧನೆ ಅಭಿವೃದ್ಧಿ ಪಡಿಸಿ ಭಾರತವನ್ನು ಪ್ರಪಂಚದಲ್ಲೇ ಮುಖ್ಯ ಕೇಂದ್ರವಾಗಿಸುವುದರ ಜೊತೆಗೆ 2022ರ ವೇಳೆಗೆ ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಗುರಿ.

    6) ದೇಶದ ಆರ್ಥಿಕತೆಯ ಪ್ರಮುಖ ಭಾಗವಾಗಿರುವ ಕರಾವಳಿ ಪ್ರದೇಶವನ್ನು ರಕ್ಷಣೆ ಮಾಡಿ, ನೀಲಿ ಆರ್ಥಿಕತೆಗೆ ಶಕ್ತಿ ತುಂಬಲು ‘ಸಾಗರ್ ಮಲಾ’ ಯೋಜನೆಯನ್ನು ಜಾರಿ ಮಾಡುವುದು.

    9) ಆರೋಗ್ಯವಂತ ಭಾರತ ನಿರ್ಮಾಣ ಮಾಡಿ, ಎಲ್ಲರಿಗೂ ಉತ್ತಮ ಸಮಗ್ರ ಆರೋಗ್ಯ ವ್ಯವಸ್ಥೆ ನಿರ್ಮಾಣಕ್ಕೆ ಒತ್ತು

    10) ಅಂತಿಮವಾಗಿ ಕನಿಷ್ಠ ಸರ್ಕಾರದ ಆಡಳಿತ ರೂಪಿಸಿ ಗರಿಷ್ಠ ಪ್ರಮಾಣದಲ್ಲಿ ಜನ ಸ್ನೇಹಿ, ಜವಾಬ್ದಾರಿಯುತ ಆಡಳಿತವನ್ನು ನೀಡುವುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv