Tag: ವಿಶ್

  • ರಶ್ಮಿಕಾಗೆ ಆಲ್ ರೌಂಡರ್ ಎಂದ ಅಲ್ಲು ಅರ್ಜುನ್

    ರಶ್ಮಿಕಾಗೆ ಆಲ್ ರೌಂಡರ್ ಎಂದ ಅಲ್ಲು ಅರ್ಜುನ್

    – ನಿತಿನ್‍ಗೆ ಡಬಲ್ ಅಭಿನಂದನೆ

    ಹೈದರಾಬಾದ್: ಟಾಲಿವುಡ್‍ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ನಿತಿನ್‍ಗೆ ಅಭಿನಂದನೆ ತಿಳಿಸಿದ್ದಾರೆ.

    ತೆಲುಗು ನಟ ನಿತಿನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಭೀಷ್ಮ’ ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹೀಗಾಗಿ ನಿತಿನ್ ಮತ್ತು ರಶ್ಮಿಕಾ ಮಂದಣ್ಣಗೆ ಅಲ್ಲು ಅರ್ಜುನ್ ಶುಭಾಶಯಗಳನ್ನು ತಿಳಿಸಿದ್ದಾರೆ. ಅಲ್ಲು ಅರ್ಜುನ್ ಎರಡು ಟ್ವೀಟ್ ಮಾಡುವ ಮೂಲಕ ಅಭಿನಂದನೆ ತಿಳಿಸಿದ್ದಾರೆ.

    ಮೊದಲಿಗೆ “ನಟ ನಿತಿನ್‍ಗೆ ಡಬಲ್ ಅಭಿನಂದನೆಗಳು. ಈಗ ನಿಮ್ಮ ಮದುವೆ ಸಂಭ್ರಮ-ಆಚರಣೆಗೆ ಡಬಲ್ ಜೋಷ್ ಸಿಗಲಿದೆ. ಒಳ್ಳೆಯ ಸಮಯಕ್ಕೆ ಒಳ್ಳೆಯದ್ದೇ ಆಗಿದೆ. ನಿಜಕ್ಕೂ ಈಗ ನಿಮಗೆ ತುಂಬಾ ಖುಷಿಯಾಗುತ್ತಿದೆ. ಇಡೀ ‘ಭೀಷ್ಮ’ ಸಿನಿಮಾ ತಂಡವನ್ನು ನಾನು ಅಭಿನಂದಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

    ಮತ್ತೊಂದು ಟ್ವೀಟ್ ಮಾಡಿರುವ ಅಲ್ಲು ಅರ್ಜುನ್ “ಕಮರ್ಶಿಯಲ್ ಎಮೋಷನಲ್ ಎಂಟರ್ ಟೈನರ್ ನೀಡಿದ ನಿರ್ದೇಶಕ ವೆಂಕಿ ಅವರಿಗೆ ಅಭಿನಂದನೆಗಳು. ಇನ್ನೂ ಆಲ್ ರೌಂಡರ್ ರಶ್ಮಿಕಾ ಮಂದಣ್ಣ  ಮತ್ತು ಯಶಸ್ವಿ ನಿರ್ಮಾಪಕ ವಂಶಿಗೆ ಶುಭಾಶಯಗಳು. ನಿಮಗೆ 2020ರ ಜನವರಿ ಮತ್ತು ಫೆಬ್ರವರಿ ನಿಜಕ್ಕೂ ಉತ್ತಮವಾಗಿದೆ” ಎಂದು ಹೇಳಿ ಎಲ್ಲರಿಗೂ ಮತ್ತೊಮ್ಮೆ ಅಭಿನಂದನೆ ತಿಳಿಸಿದ್ದಾರೆ.

    ವೆಂಕಿ ಕುಡುಮುಲ ನಿರ್ದೇಶನದ ಸಿನಿಮಾ ‘ಭೀಷ್ಮ’ ಶಿವರಾತ್ರಿ ಹಬ್ಬದ ಪ್ರಯುಕ್ತ (ಫೆಬ್ರವರಿ 21) ರಂದು ಬಿಡುಗಡೆ ಆಗಿತ್ತು. ಈ ಸಿನಿಮಾದಲ್ಲಿ ರಶ್ಮಿಕಾ ಮತ್ತು ನಿತಿನ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಸ್ಯಾಂಡಲ್‍ವುಡ್ ಮಾತ್ರವಲ್ಲದೇ ತೆಲುಗು ಮತ್ತು ತಮಿಳಿನಲ್ಲೂ ಅಭಿನಯಿಸುವ ಮೂಲಕ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

    ಇನ್ನೂ ನಿತಿನ್ ತಮ್ಮ ಬಹುದಿನದ ಗೆಳತಿ ಶಾಲಿನಿ ಅವರ ಕೈಹಿಡಿಯಲಿದ್ದಾರೆ. ಸುಮಾರು ನಾಲ್ಕೈದು ವರ್ಷದಿಂದ ಶಾಲಿನಿ ಹಾಗೂ ನಿತಿನ್ ಸ್ನೇಹಿತರು. ಈ ಸ್ನೇಹ ಪ್ರೀತಿಗೆ ತಿರುಗಿ ಈಗ ತಮ್ಮ ಗೆಳತಿಯ ಜೊತೆ ದಾಂಪತ್ಯ ಜೀವನ ಆರಂಭಿಸಲು ನಿತಿನ್ ನಿರ್ಧರಿಸಿದ್ದಾರೆ. ತಮ್ಮ ಪ್ರೀತಿಯ ಬಗ್ಗೆ ಇಬ್ಬರ ಮನೆಯಲ್ಲೂ ತಿಳಿಸಿ, ಹಿರಿಯರ ಸಮ್ಮತಿ ಪಡೆದು ಈ ಜೋಡಿ ಮದುವೆಯಾಗುತ್ತಿದ್ದಾರೆ.

  • 2 ದೋಣಿ ಮೇಲೆ ಯಾವತ್ತೂ ಪಯಣ ಮಾಡ್ಬೇಡಿ: ದರ್ಶನ್

    2 ದೋಣಿ ಮೇಲೆ ಯಾವತ್ತೂ ಪಯಣ ಮಾಡ್ಬೇಡಿ: ದರ್ಶನ್

    ಬೆಂಗಳೂರು: ಎರಡು ದೋಣಿ ಮೇಲೆ ಯಾವತ್ತೂ ಪಯಣ ಮಾಡಬೇಡಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳುವ ಮೂಲಕ ಹೊಸ ವರ್ಷಕ್ಕೆ ಶುಭಾಶಯವನ್ನು ಕೋರಿದ್ದಾರೆ.

    ನಟ ದರ್ಶನ್ ಟ್ವೀಟ್ ಮಾಡುವ ಮೂಲಕ ಸಮಸ್ತ ಜನರಿಗೆ 2020ರ ಹೊಸ ವರ್ಷದ ಶುಭಾಶಯವನ್ನು ತಿಳಿಸಿದ್ದಾರೆ.

    “ಕಳೆದು ಹೋದ ಸಮಯ ಮತ್ತೆ ಹಿಂದಿರುಗಿ ಬರಲು ಸಾಧ್ಯವಿಲ್ಲ. ಎರಡು ದೋಣಿ ಮೇಲೆ ಯಾವತ್ತೂ ಪಯಣ ಮಾಡಬೇಡಿ. ನಿಮ್ಮ ಗುರಿ, ಅದಕ್ಕೆ ಬೇಕಾದ ಕಾರ್ಯ ನಿಷ್ಠೆ ಮೇಲೆ ನಂಬಿಕೆ ಇರಲಿ. ಈ ವರ್ಷ ನಿಮ್ಮ ಎಲ್ಲಾ ಕನಸುಗಳು ಸಾಕಾರಗೊಳ್ಳಲಿ. ನಿಮಗೂ ನಿಮ್ಮ ಕುಟುಂಬಕ್ಕೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು. ನಿಮ್ಮ ದಾಸ ದರ್ಶನ್” ಎಂದು ಹೊಸ ವರ್ಷಕ್ಕೆ ಶುಭಾಶಯ ಕೋರಿದ್ದಾರೆ.

    ಜೊತೆಗೆ ರಾಬರ್ಟ್ ಸಿನಿಮಾ ಫಸ್ಟ್ ಲುಕ್ ಪೋಸ್ಟರನ್ನು ಶೇರ್ ಮಾಡಿಕೊಂಡಿದ್ದಾರೆ. ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ನಟ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಮೋಷನ್ ಪೋಸ್ಟರ್ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದರು. ಈ ಸಿನಿಮಾದಲ್ಲಿ ದರ್ಶನ್ ಹೊಸ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ದಚ್ಚುವಿನ ನಯಾ ಲುಕ್‍ಗೆ ಫಿದಾ ಆಗಿದ್ದರು. ಯೂಟ್ಯೂಬ್‍ನಲ್ಲಿ ಕೂಡ ಮೋಷನ್ ಪೋಸ್ಟರ್ ಭಾರೀ ಸದ್ದು ಮಾಡಿತ್ತು.

    ‘ರಾಬರ್ಟ್’ ಸಿನಿಮಾ ತರುಣ್ ಸುಧೀರ್ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ಈಗಾಗಲೇ ಸಿನಿಮಾದ ಸಂಪೂರ್ಣ ಚಿತ್ರೀಕರಣ ಮುಕ್ತಾಯವಾಗಿದೆ. ದರ್ಶನ್‍ಗೆ ಜೊಡಿಯಾಗಿ ಆಶಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ.

  • ವಿನೂತನವಾಗಿ ಹೊಸ ವರ್ಷಕ್ಕೆ ಕಿಚ್ಚ ಕುಟುಂಬದಿಂದ ವಿಶ್

    ವಿನೂತನವಾಗಿ ಹೊಸ ವರ್ಷಕ್ಕೆ ಕಿಚ್ಚ ಕುಟುಂಬದಿಂದ ವಿಶ್

    ಬೆಂಗಳೂರು: ವಿಶ್ವಾದಾದ್ಯಂತ ಇಂದು ಹೊಸ ವರ್ಷದ ಸಂಭ್ರಮ ಮನೆ ಮಾಡಿದೆ. ಇತ್ತ ಸ್ಯಾಂಡಲ್‍ವುಡ್‍ನ ಕಿಚ್ಚ ಸುದೀಪ್ ಹೊಸ ವರ್ಷಕ್ಕೆ ನೂತನವಾಗಿಯೇ ಸಮಸ್ತ ಕನ್ನಡಿಗರಿಗೂ ನ್ಯೂ ಇಯರ್ ವಿಶ್ ಮಾಡಿದ್ದಾರೆ.

    ಸುದೀಪ್ ಟ್ವೀಟ್ ಮಾಡುವುದರ ಜೊತೆಗೆ ಒಂದು ವಿಡಿಯೋ ಅಪ್ಲೋಡ್ ಮಾಡುವ ಮೂಲಕ ನ್ಯೂ ಇಯರ್‌ಗೆ ಶುಭಾಶಯ ಕೋರಿದ್ದಾರೆ. “ವಿಡಿಯೋದಲ್ಲಿ ನನ್ನ ಪ್ರೀತಿಯ ಸಮಸ್ತ ಕನ್ನಡಿಗರ ಕುಟುಂಬಕ್ಕೆ ಈ ನಿಮ್ಮ ಪ್ರೀತಿಯ ಕಿಚ್ಚ ಸುದೀಪನ ಕುಟುಂಬದಿಂದ ಎಂದು ಹೇಳಿ ಪಕ್ಕಕ್ಕೆ ಹೋಗುತ್ತಾರೆ. ಆಗ ಅವರ ಕುಟುಂಬದ ಸದಸ್ಯರೆಲ್ಲರೂ ಹೊಸ ವರ್ಷದ ಶುಭಾಶಯಗಳು” ಎಂದು ವಿಶ್ ಮಾಡಿದ್ದಾರೆ. ಹೀಗಾಗಿ ಸುದೀಪ್ ವಿನೂತನವಾಗಿಯೇ ನ್ಯೂ ಇಯರ್‌ಗೆ ವಿಶ್ ಮಾಡಿದ್ದಾರೆ.

    ಇದಕ್ಕೂ ಮೊದಲು “2020ಗೆ ಹೆಜ್ಜೆಯಿಡುವ ಮುನ್ನ ಈ ವರ್ಷದ ನಿಮ್ಮ ಹೆಜ್ಜೆಗುರುತುಗಳತ್ತ ಒಮ್ಮೆ ಕಣ್ಣಾಯಿಸಿ ನೋಡಿ. ಈ ವರ್ಷದಲ್ಲಿ ನೀವು ಕಳೆದ ಅಮೂಲ್ಯ ಕ್ಷಣಗಳು ಮತ್ತು ಜೊತೆಯಾದ ವ್ಯಕ್ತಿಗಳು, ನೀವು ಕ್ಷಮೆ ಕೇಳಬೇಕಾದವರು ಮತ್ತು ನಿಮ್ಮಿಂದ ಕ್ಷಮೆಗೆ ಕಾದಿರುವವರು. ಬೇರೆಯವರಿಂದ ನಿಮಗೆ ಸಿಕ್ಕ ಒಳ್ಳೆಯದು ಮತ್ತು ನಿಮ್ಮಿಂದ ಬೇರೆಯವರಿಗಾದ ಒಳ್ಳೆಯದು” ಎಂದು ಟ್ವೀಟ್ ಮಾಡಿದ್ದಾರೆ.

    ಮತ್ತೆರಡು ಟ್ವೀಟ್ ಮಾಡಿ “ಮುಂತಾದವುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿಕೊಂಡರೆ ನೀವು ನಡೆದು ಬಂದ ಹಾದಿ ಬಗ್ಗೆ ಸ್ಪಷ್ಟತೆಗಳು ಸಿಕ್ಕಿಬಿಡುತ್ತವೆ. ಆ ಸ್ಪಷ್ಟತೆಗಳ ಆಧಾರದ ಮೇಲೆ ಈ ವರ್ಷ ಮಾಡಬೇಕಾದ್ದೇನು? ಮಾಡಬಾರದ್ದೇನು? ನೀ ಬದಲಾಗಬೇಕಾದ್ದು ಎಲ್ಲಿ? ಸ್ಥಿರತೆ ಕಾಪಾಡಿಕೊಳ್ಳಬೇಕಾದ್ದು ಎಲ್ಲಿ? ಎಂಬವುಗಳ ಬಗ್ಗೆ ದಿಟ್ಟ ನಿರ್ಧಾರ ಹೊಂದಿ 2020ನೇ ವರ್ಷಕ್ಕೆ ಹೆಜ್ಜೆಯಿಡೋಣ. 2020 ಅನ್ನು ಅತ್ಯಂತ ಹರ್ಷದಿಂದ ಸ್ವಾಗತಿಸಿ, ಹೆಚ್ಚು ಸಾರ್ಥಕವಾಗಿ ಕಳೆಯೋಣ” ಎಂದು ಹೊಸ ವರ್ಷಕ್ಕೆ ವಿಶ್ ಮಾಡಿದ್ದಾರೆ.

  • ಬಿಗ್ ಹಗ್ ಟು ಮೈ ಬೆಸ್ಟಿ ಅಂದ್ರು ಪ್ರಿಯಾ ಸುದೀಪ್

    ಬಿಗ್ ಹಗ್ ಟು ಮೈ ಬೆಸ್ಟಿ ಅಂದ್ರು ಪ್ರಿಯಾ ಸುದೀಪ್

    ಬೆಂಗಳೂರು: ಇಂದು ಸ್ನೇಹಿತರ ದಿನವಾಗಿದ್ದು, ಎಲ್ಲರೂ ತಮ್ಮ ಗೆಳೆಯ-ಗೆಳತಿಯರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಹೀಗೆಯೇ ನಟ ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಅವರು ತಮ್ಮ ಜೊತೆಗಾರನಿಗೆ ವಿಶ್ ಮಾಡಿದ್ದಾರೆ.

    ಪ್ರಿಯಾ ಸುದೀಪ್ ತಮ್ಮ ಪತಿ ಸುದೀಪ್ ಅವರನ್ನು ಬೆಸ್ಟಿ ಎಂದು ಟ್ವೀಟ್ ಮಾಡುವ ಮೂಲಕ ವಿಶ್ ಮಾಡಿದ್ದಾರೆ. ಜೊತೆಗೆ ಪತಿಯೊಂದಿಗಿನ ಫೋಟೋ ಹಾಕಿ ಫನ್ನಿಯಾಗಿ ಬರೆದುಕೊಂಡಿದ್ದಾರೆ. “ನನ್ನ ಸ್ನೇಹಿತನೊಂದಿಗೆ ಸಿಲ್ಲಿಯಾಗಿರುವುದು, ಈ ಅವತಾರದಲ್ಲಿ ನಿಮ್ಮ ಪೈಲ್ವಾನ್ ಅನ್ನು ಎಂದಾದರೂ ನೋಡಿದ್ದೀರಾ? ನನ್ನ ಬೆಸ್ಟಿಗೆ ದೊಡ್ಡ ಅಪ್ಪುಗೆ” ಎಂದು ಬರೆದಿದ್ದಾರೆ. ಜೊತೆಗೆ ಎರಡು ನಗುವ ಎಮೋಜಿಯನ್ನು ಹಾಕಿದ್ದಾರೆ.

    ಪ್ರಿಯಾ ಅವರು ಟ್ವೀಟ್ ಮಾಡಿದ ತಕ್ಷಣ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಸ್ನೇಹಿತರ ದಿನದ ಶುಭಾಶಯವನ್ನು ತಿಳಿಸುತ್ತಿದ್ದಾರೆ. ಪತ್ನಿಯ ಟ್ವೀಟಿಗೆ ಸುದೀಪ್ ಅವರು, ನೀನು ನನ್ನ ಅದ್ಭುತ ಸ್ನೇಹಿತೆಯಾಗಿದ್ದೀಯಾ, ನಿಮ್ಮ ಅಪ್ಪುಗೆಗೆ ತುಂಬಾ ಧನ್ಯವಾದಗಳು ಎಂದು ಪ್ರತಿಕ್ರಿಯಿಸಿದ್ದಾರೆ.

    ನಟ ಸುದೀಪ್ ಅವರು ‘ಕೋಟಿಗೊಬ್ಬ-3’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

  • ದೇವೇಗೌಡರಿಗೆ ಶುಭಕೋರಿದ ಸುಮಲತಾ ಅಂಬರೀಶ್

    ದೇವೇಗೌಡರಿಗೆ ಶುಭಕೋರಿದ ಸುಮಲತಾ ಅಂಬರೀಶ್

    ಬೆಂಗಳೂರು: ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ದೇವೇಗೌಡರ ಹುಟ್ಟುಹಬ್ಬದ ಪ್ರಯುಕ್ತ ಸುಮಲತಾ ಅಂಬರೀಶ್ ಅವರು ಶುಭಾಶಯ ಕೋರಿದ್ದಾರೆ.

    ಸುಮಲತಾ ಅವರು ಟ್ವೀಟ್ ಮಾಡುವ ಮೂಲಕ ದೇವೇಗೌಡರಿಗೆ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ. “ಗೌರವಾನ್ವಿತ ಮಾಜಿ ಪ್ರಧಾನಿಗಳಾದ ಶ್ರೀ ಹೆಚ್.ಡಿ. ದೇವೇಗೌಡರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು” ಎಂದು ಟ್ವೀಟ್ ಮಾಡಿದ್ದಾರೆ.

    ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಪ್ರಧಾನಿ ಮೋದಿ ಸೇರಿದಂತೆ ಅನೇಕರು ದೇವೇಗೌಡರಿಗೆ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ. “ಮಾಜಿ ಪ್ರಧಾನಿ ಮತ್ತು ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಚರಾದ ಎಚ್.ಡಿ. ದೇವೇಗೌಡ ಅವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ರೈತರು, ಗ್ರಾಮ ಭಾರತದ ಬಗೆಗಿನ ಅವರ ಕಾಳಜಿ ಹಾಗೂ ಇಳಿವಯಸ್ಸಿನಲ್ಲಿಯೂ ದಣಿವರಿಯದ ಹೋರಾಟದ ಕೆಚ್ಚು ನನಗೆ ಸದಾ ಪ್ರೇರಣೆ. ಅವರಿಗೆ ಆರೋಗ್ಯ, ಆಯುಷ್ಯವನ್ನು ಹಾರೈಸುತ್ತೇನೆ” ಎಂದು ಸಿದ್ದರಾಮಯ್ಯ ಶುಭ ಕೋರಿದ್ದಾರೆ.

    ಮಾಜಿ ಪ್ರಧಾನಿ ದೇವೇಗೌಡರು ಇಂದು 87ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಕುಟುಂಬ ಸಮೇತರಾಗಿ ತಿರುಪತಿಗೆ ಹೋಗಿ ದೇವರ ದರ್ಶನ ಮಾಡಿಕೊಂಡು ಬಂದಿದ್ದಾರೆ. ಅಲ್ಲಿಂದ ವಾಪಸ್ಸಾದ ಬಳಿಕ ಮನೆಯಲ್ಲಿ ಸತ್ಯನಾರಾಯಣಸ್ವಾಮಿ ಪೂಜೆಯನ್ನು ಮಾಡಿಸಿದ್ದಾರೆ.

  • ಡಿಯರ್ ಬಾಬಿ ಎಂದು ವಿಜಯ್‍ಗೆ ರಶ್ಮಿಕಾ ವಿಶ್

    ಡಿಯರ್ ಬಾಬಿ ಎಂದು ವಿಜಯ್‍ಗೆ ರಶ್ಮಿಕಾ ವಿಶ್

    ಬೆಂಗಳೂರು: ಇಂದು ತೆಲುಗು ನಟ ವಿಜಯ್ ದೇವರಕೊಂಡ ಅವರ ಹುಟ್ಟುಹುಬ್ಬ. ಈ ಹಿನ್ನೆಲೆಯಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಡಿಯರ್ ಬಾಬಿ ಎಂದು ಕರೆಯುವ ಮೂಲಕ ಶುಭಾಶಯ ತಿಳಿಸಿದ್ದಾರೆ.

    ನಟಿ ರಶ್ಮಿಕಾ ಅವರು ಟ್ವೀಟ್ ಮಾಡುವ ಮೂಲಕ ವಿಜಯ್ ಅವರಿಗೆ ಬರ್ತ್ ಡೇ ವಿಶ್ ಮಾಡಿದ್ದಾರೆ. “ಡಿಯರ್ ಬಾಬಿ ಹ್ಯಾಪಿಯೆಸ್ಟ್ ಬರ್ತ್ ಡೇ ಟು ಯೂ” ಎಂದು ಬರೆದು ಅವರ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

    ಈ ಹಿಂದೆ ರಶ್ಮಿಕಾ ಹುಟ್ಟುಹಬ್ಬಕ್ಕೂ ವಿಜಯ್ ದೇವರಕೊಂಡ ಸ್ಪೆಷಲ್ ಆಗಿ ವಿಶ್ ಮಾಡಿದ್ದರು. ಈಗ ಅವರ ಬರ್ತ್ ಡೇಗೆ ರಶ್ಮಿಕಾ ಶುಭ ಕೋರಿದ್ದಾರೆ. ಅಸಲಿಗೆ ಇವರಿಬ್ಬರು ಅಭಿನಯಿಸುತ್ತಿರುವ ‘ಡಿಯರ್ ಕಾಮ್ರೇಡ್’ ಸಿನಿಮಾದಲ್ಲಿ ಬರುವ ಪಾತ್ರಗಳ ಹೆಸರಾಗಿದೆ. ಅಂದರೆ ಚಿತ್ರದಲ್ಲಿ ದೇವರಕೊಂಡ ಬಾಬಿ ಎಂದು ಹಾಗೂ ರಶ್ಮಿಕಾ ಲಿಲ್ಲಿ ಎಂಬ ಪಾತ್ರದಲ್ಲಿ ನಟಿಸಿದ್ದಾರೆ.

    ‘ಡಿಯರ್ ಕಾಮ್ರೇಡ್’ ಸಿನಿಮಾ ಕನ್ನಡ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಯಲ್ಲಿ ಜುಲೈ 26ರಂದು ಬಿಡುಗಡೆಯಾಗುತ್ತಿದೆ. ಈ ಜೋಡಿ ‘ಗೀತಾ ಗೋವಿಂದಂ’ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿತ್ತು. ವಿಜಯ್ ದೇವರಕೊಂಡ ‘ನುವ್ವಿಲಾ’ ಸಿನಿಮಾದ ಮೂಲಕ ಸಿನಿರಂಗ ಪ್ರವೇಶ ಮಾಡಿದ್ದರು. ನಂತರ ‘ಪೆಳ್ಳಿ ಚೂಪುಲು’ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಂಡಿದ್ದರು.

  • ತೆಲುಗು ಸ್ಟೈಲಿಶ್ ಸ್ಟಾರ್ ಜೊತೆ ರಶ್ಮಿಕಾ ಮಂದಣ್ಣ

    ತೆಲುಗು ಸ್ಟೈಲಿಶ್ ಸ್ಟಾರ್ ಜೊತೆ ರಶ್ಮಿಕಾ ಮಂದಣ್ಣ

    ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಈಗಾಗಲೇ ಸ್ಯಾಂಡಲ್‍ವುಡ್ ಸೇರಿದಂತೆ ತೆಲುಗು, ತಮಿಳು ಸ್ಟಾರ್ ನಟರ ಜೊತೆ ಅಭಿನಯಿಸಿದ್ದಾರೆ. ಈಗ ಟಾಲಿವುಡ್‍ನ ಸ್ಟೈಲಿಶ್ ಸ್ಟಾರ್ ಗೆ ನಾಯಕಿಯಾಗಿ ಅಭಿನಯಿಸಲಿದ್ದಾರೆ.

    ನಟ ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದಣ್ಣ ಅವರು ಅಭಿನಯಿಸುತ್ತಿದ್ದಾರೆ. ಈ ಬಗ್ಗೆ ರಶ್ಮಿಕಾ ಅವರೇ ಹೇಳಿಕೊಂಡಿದ್ದಾರೆ. ಇಂದು ನಟ ಅಲ್ಲು ಅರ್ಜುನ್ ಅವರು ಹುಟ್ಟುಹಬ್ಬವಾಗಿದ್ದು, ನಟ-ನಟಿಯರು ಅವರಿಗೆ ಬರ್ತ್ ಡೇ ಶುಭಾಶಯವನ್ನು ಕೋರುತ್ತಿದ್ದಾರೆ.

    ಈ ಹಿನ್ನೆಲೆಯಲ್ಲಿ ರಶ್ಮಿಕಾ ಅವರು ಕೂಡ, “ನೀವು ಯಾವಾಗಲೂ ಎಲ್ಲರನ್ನು ಬೆಂಬಲಿಸುತ್ತೀರ. ಶೀಘ್ರದಲ್ಲಿಯೇ ನಾನು ನಿಮ್ಮೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ತುಂಬಾ ಉತ್ಸುಕಳಾಗಿದ್ದೇನೆ. ಹುಟ್ಟುಹಬ್ಬದ ಶುಭಾಶಯ” ಎಂದು ಟ್ವೀಟ್ ಮಾಡಿ ವಿಶ್ ಮಾಡಿದ್ದಾರೆ.

    ನಿರ್ದೇಶಕ ಸುಕುಮಾರ್ ಹೊಸ ಸಿನಿಮಾದಲ್ಲಿ ನಟ ಅಲ್ಲು ಅರ್ಜುನ್ ಅಭಿನಯಿಸುತ್ತಿದ್ದಾರೆ. ಈ ಸಿನಿಮಾಗೆ ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಮೊದಲ ಬಾರಿಗೆ ರಶ್ಮಿಕಾ ಮತ್ತು ಅಲ್ಲು ಅರ್ಜುನ್ ಜೋಡಿಯಾಗಿ ಅಭಿನಯಿಸಲಿದ್ದಾರೆ.

  • ನೀನು ನನಗಾಗಿಯೇ ಹುಟ್ಟಿದ್ದೀಯಾ ಮೈ ಲವ್ ಅಂದ್ರು ಯಶ್..!

    ನೀನು ನನಗಾಗಿಯೇ ಹುಟ್ಟಿದ್ದೀಯಾ ಮೈ ಲವ್ ಅಂದ್ರು ಯಶ್..!

    – ರಾಧಿಕಾಗೆ ಯಶ್ ಬರ್ತ್ ಡೇ ವಿಶ್

    ಬೆಂಗಳೂರು: ನಟಿ ರಾಧಿಕಾ ಪಂಡಿತ್ ಗುರುವಾರವಷ್ಟೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪತ್ನಿಯ ಬರ್ತ್ ಡೇಗೆ ನಟ ಯಶ್ ವಿಶೇಷವಾಗಿ ವಿಶ್ ತಿಳಿಸಿದ್ದಾರೆ.

    ನಟ ಯಶ್ ಅವರು ಟ್ವೀಟ್ಟರ್, ಇನ್ ಸ್ಟಾಗ್ರಾಂನಲ್ಲಿ ಫೋಟೋ ಹಾಕಿ ಪತ್ನಿಗೆ ಪ್ರೀತಿಯಿಂದ ಶುಭಾಶಯ ತಿಳಿಸಿದ್ದಾರೆ. ಯಶ್ ಅವರು, “ಈ ಜೀವನದಲ್ಲಿ ನಾನು ಏನು ಮಾಡುತ್ತಿದ್ದೇನೆ ಎಂಬುದಕ್ಕಿಂತ, ಈ ಬದುಕಿನಲ್ಲಿ ನನ್ನ ಜೊತೆ ಯಾರಿದ್ದಾರೆ ಎಂಬುದರಿಂದ ನನ್ನ ಬದುಕು ಸುಂದರವಾಗಿದೆ. ನಿನಗೆ ಧನ್ಯವಾದ. ನೀನು ನನಗಾಗಿಯೇ ಹುಟ್ಟಿದ್ದೀಯಾ ಎಂದು ನನಗೆ ಭಾಸವಾಗುತ್ತದೆ. ಹ್ಯಾಪಿ ಬರ್ತ್ ಡೇ ಮೈ ಲವ್” ಎಂದು ಟ್ವೀಟ್ ಮಡಿದ್ದಾರೆ.

    ಪ್ರೀತಿಯ ಮಾತುಗಳ ಜೊತೆ ಇಬ್ಬರ ಒಂದು ಸುಂದರವಾದ ಫೋಟೋ ಹಾಕಿದ್ದಾರೆ. ಆ ಫೋಟೋದಲ್ಲಿ ರಾಧಿಕಾ ಅವರನ್ನು ತಮ್ಮ ಕೈಗಳಿಂದ ಯಶ್ ಅಪ್ಪಿಕೊಂಡು ಅವರನ್ನೇ ನೋಡುತ್ತಿರುವುದನ್ನು ಕಾಣಬಹುದಾಗಿದೆ.

    ರಾಧಿಕಾ ಅವರು ಪ್ರತಿ ವರ್ಷ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಣೆ ಮಾಡಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಅವರು ಬೆಂಗಳೂರಿನಲ್ಲಿ ಇಲ್ಲದ ಕಾರಣ ಅವರ ಅಭಿಮಾನಿಗಳನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಈ ಬಗ್ಗೆ ಬರ್ತ್ ಡೇ ದಿನಕ್ಕೂ ಮುನ್ನವೇ ವಿಡಿಯೋ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • Dad My Forever Hero- ಮಗನಿಂದ ಪ್ರಣಯ್‍ಗೆ ಭಾವನಾತ್ಮಕ ವಿಶ್

    Dad My Forever Hero- ಮಗನಿಂದ ಪ್ರಣಯ್‍ಗೆ ಭಾವನಾತ್ಮಕ ವಿಶ್

    ಹೈದರಾಬಾದ್: ತೆಲಂಗಾಣದಲ್ಲಿ ಮರ್ಯಾದಾ ಹತ್ಯೆಗೆ ಬಲಿಯಾಗಿದ್ದ ಪ್ರಣಯ್ ಹುಟ್ಟುಹಬ್ಬದ ಪ್ರಯುಕ್ತ ಪತ್ನಿ ಅಮೃತಾ ಅವರು ಭಾವನಾತ್ಮಕವಾಗಿ ಶುಭಾಶಯ ಕೋರಿದ್ದು, ಮಗನಿಂದಲೂ ವಿಶ್ ಮಾಡಿಸಿದ್ದಾರೆ.

    ಅಮೃತಾ ಅವರು ಜನವರಿ 25 ಶುಕ್ರವಾರ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮೃತ ಪ್ರಣಯ್ ಬರ್ತ್ ಡೇ ಫೆಬ್ರವರಿ 1 ರಂದು ಇತ್ತು. ಆದ್ದರಿಂದ ಅಮೃತಾ ಪ್ರೀತಿಯಿಂದ ಪತಿ ಪ್ರಣಯ್ ಗೆ ಫೇಸ್ ಬುಕ್ ನಲ್ಲಿ ಶುಭಾಶಯ ಕೋರಿದ್ದಾರೆ. ಬಳಿಕ ಅವರು ತನ್ನ ಮಗುವನ್ನು ಎತ್ತಿಕೊಂಡಿರುವ ಫೋಟೋ ಹಾಕಿ ಮಗನಿಂದಲೂ ಶುಭಾಶಯ ತಿಳಿಸಿದ್ದಾರೆ.

    ಮೊದಲಿಗೆ ಅಮೃತಾ, “ಗಂಟೆ, ದಿನ, ತಿಂಗಳು, ವರ್ಷ ಹಾಗೂ ದಶಕಗಳು ಉರುಳಬಹುದು. ಆದರೆ ನಾನು ನಿಮ್ಮ ಬರ್ತ್ ಡೇ ದಿನವನ್ನು ಎಂದಿಗೂ ಮರೆಯುವುದಿಲ್ಲ. ನೀವು ನಿಮ್ಮ ತೋಳುಗಳಿಂದ ನನ್ನನ್ನು ಹಿಡಿದು, ನನ್ನ ಕಣ್ಣುಗಳನ್ನು ನೋಡುತ್ತಾ ‘ಐ ಲವ್ ಯು’ ಎಂದು ನನ್ನ ಕಣ್ಣುಗಳಿಗೆ ಪಿಸುಗುಟ್ಟಿದ್ದೀರಿ. ಹ್ಯಾಪಿ ಬರ್ತ್ ಡೇ. ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೀನಿ” ಎಂದು ಬರೆದು ಪ್ರಣಯ್ ಅಮೃತಾ ಕಣ್ಣುಗಳನ್ನು ನೋಡುತ್ತಿರುವ ಫೋಟೋ ಹಾಕಿ ಶುಭಾಶಯ ತಿಳಿಸಿದ್ದರು.

    “ನಿಮ್ಮ ಆತ್ಮ ತುಂಬಾ ಪರಿಶುದ್ಧವಾಗಿದೆ. ನಿಮ್ಮ ಅತ್ಯಮೂಲ್ಯವಾದ ಬುದ್ಧಿವಂತಿಕೆ ಬೆರಗುಗೊಳಿಸುತ್ತದೆ. ಹ್ಯಾಪಿ ಬರ್ತ್ ಡೇ ಡ್ಯಾಡಿ.. ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ” ಎಂದು ಬರೆದು ಮಗನ ಜೊತೆಗಿರುವ ಫೋಟೋ ಹಾಕಿ ಮಗನಿಂದ ಅಪ್ಪನಿಗೆ ಶುಭಾಶಯ ತಿಳಿಸಿದ್ದಾರೆ.

    ಅಮೃತಾ ವಿಶ್ ಮಾಡಿದ ರೀತಿ ಮತ್ತು ಫೋಟೋ ಎಲ್ಲರ ಮನಕಲಕುವಂತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಮೃತಾ ಅವರು ಈ ಪೋಸ್ಟ್ ಮಾಡಿದ ತಕ್ಷಣ ಅನೇಕ ಮಂದಿ ಲೈಕ್ಸ್ ಮಾಡಿದ್ದು, ಶುಭಾಶಯ ಕೋರಿದ್ದಾರೆ. ಅಷ್ಟೇ ಅಲ್ಲದೇ ಫೋಟೋವನ್ನು 2.6 ಸಾವಿರ ಮಂದಿ ಶೇರ್ ಮಾಡಿದ್ದು, 21 ಸಾವಿರ ಜನರು ಲೈಕ್ಸ್ ಮಾಡಿದ್ದಾರೆ. ಜೊತೆಗೆ ಪ್ರಣಯ್ ಮತ್ತು ಅಮೃತಾ ಜೀವನದ ಪಯಣದ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ.

    ಪ್ರಣಯ್ ಮತ್ತು ಅಮೃತಾ ಇಬ್ಬರು ಪ್ರೀತಿಸಿದ್ದು, ಇವರಿಬ್ಬರ ಜಾತಿ ಬೇರೆಯಾಗಿದ್ದರಿಂದ ಅಮೃತಾ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದ್ರೂ ಯುವ ಜೋಡಿ ಮನೆಯವರ ವಿರೋಧದ ನಡುವೆಯೂ ಮದುವೆ ಆಗಿದ್ದರು. ಆದರೆ 2018 ಸೆಪ್ಟೆಂಬರ್ 14ರಂದು ಪ್ರಣಯ್ ಮತ್ತು ಅಮೃತಾ ಆಸ್ಪತ್ರೆ ಮುಂದೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಮಚ್ಚಿನಿಂದ ಪ್ರಣಯ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದನು. ಆದರೆ ಪ್ರಣಯ್ ಕೊಲೆಗೆ ಆತನ ಮಾವ ಮಾರುತಿ ರಾವ್ ಬರೋಬ್ಬರಿ ಒಂದು ಕೋಟಿ ಹಣವನ್ನು ಹಂತಕರಿಗೆ ನೀಡಿದ್ದಾರೆ ಎಂಬ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಪ್ಪನ ತೊಡೆ ಮೇಲೆ ಯುವರಾಜ – ವರ್ಧಂತಿಗೆ ಯದುವೀರ್ ವಿಶ್

    ಅಪ್ಪನ ತೊಡೆ ಮೇಲೆ ಯುವರಾಜ – ವರ್ಧಂತಿಗೆ ಯದುವೀರ್ ವಿಶ್

    ಮೈಸೂರು: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತನ್ನ ಮಗ ಯುವರಾಜ ಆಧ್ಯವೀರ್ ಗೆ ವರ್ಧಂತಿಯ(ಹುಟ್ಟುಹಬ್ಬ) ಶುಭಾಶಯವನ್ನು ಕೋರಿದ್ದಾರೆ.

    ಯದುವೀರ್ ಅವರು ಫೇಸ್‍ಬುಕ್ ನಲ್ಲಿ ಮಗ ತೊಡೆಯ ಮೇಲೆ ಕುಳಿತಿರುವ ಫೋಟೋ ಹಾಕಿ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ. ಫೋಟೋದಲ್ಲಿ  ಆಧ್ಯವೀರ್ ತುಂಟತನದಿಂದ ಕ್ಯಾಮೆರಾಗೆ ಪೋಸ್ ಕೊಟ್ಟಿರುವ ರೀತಿಯಲ್ಲಿ ಕಂಡು ಬಂದಿದೆ.

    ಅರಮನೆಯ ಸಂಪ್ರದಾಯದ ಪ್ರಕಾರ ಹುಟ್ಟುಹಬ್ಬವನ್ನು ಆಧ್ಯವೀರ್ ಹುಟ್ಟಿದ ಸ್ವಲ್ಪ ದಿನಗಳ ನಂತರ ಆಚರಿಸಲಾಗುತ್ತದೆ. ಅದರಂತೆಯೇ ವರ್ಧಂತಿಯು ಡಿಸೆಂಬರ್ 26 ರಂದು ಇದ್ದರೂ ಇಂದು ಆಚರಿಸಿದ್ದಾರೆ. ಈ ಬಗ್ಗೆ ಯದುವೀರ್ ಅವರು ಫೇಸ್‍ಬುಕ್ ನಲ್ಲಿ ತಿಳಿಸಿದ್ದಾರೆ.

    ಪೋಸ್ಟ್:
    “ಯುವರಾಜ ಶ್ರೀ ಆಧ್ಯವೀರ್ ನರಸಿಂಹರಾಜ ಒಡೆಯರ್ ಅವರ ವರ್ಧಂತಿಯಂದು ಅವರಿಗೆ ಶುಭ ಕೋರುತ್ತೇವೆ. ಜಗನ್ಮಾತೆಯಾದ ಶ್ರೀ ಚಾಮುಂಡೇಶ್ವರಿ ದೇವಿಯು ಅವರಿಗೆ ಉತ್ತಮ ಆರೋಗ್ಯ ಹಾಗು ಐಶ್ವರ್ಯವನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇವೆ. ಯುವರಾಜರ ವರ್ಧಂತಿಯು 26 ಡಿಸೆಂಬರ್ 2018 ರಂದು ಇದ್ದರೂ, ಮೈಸೂರು ಅರಮನೆಯ ಸಂಪ್ರದಾಯದ ಪ್ರಕಾರ ಮೊದಲನೆಯ ವರ್ಧಂತಿಯನ್ನು ಹೆಚ್ಚಿಸುವ ಪದ್ಧತಿ ಇರುವುದರಿಂದ, ಅವರ ವರ್ಧಂತಿಯನ್ನು ಇಂದು ಆಚರಿಸಲಾಗುತ್ತಿದೆ” ಎಂದು ಬರೆದು ಮಗನ ಜೊತೆಯಿರುವ ಫೋಟೋ ಹಾಕಿ ಪೋಸ್ಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv