Tag: ವಿಶ್ವ ಹಿಂದೂ ಪರಿಷದ್

  • ಸಂಘಟನೆಯ ಮೂಲಕ ದೇಶವನ್ನು ಒಗ್ಗೂಡಿಸುವ ಕೆಲಸವಾಗ್ಬೇಕು: ಬೆಕ್ಕಿನ ಕಲ್ಮಠ ಶ್ರೀ

    ಸಂಘಟನೆಯ ಮೂಲಕ ದೇಶವನ್ನು ಒಗ್ಗೂಡಿಸುವ ಕೆಲಸವಾಗ್ಬೇಕು: ಬೆಕ್ಕಿನ ಕಲ್ಮಠ ಶ್ರೀ

    ಶಿವಮೊಗ್ಗ: ಜಾತಿ-ಜಾತಿಗಳ ಮೂಲಕ ಸಮಾಜ ವಿಘಟನೆಯಾಗಿದ್ದು ಇದನ್ನು ಬಿಟ್ಟು ಪ್ರತಿಯೊಬ್ಬರು ಸಂಘಟನೆಯ ಮೂಲಕ ದೇಶವನ್ನು ಒಂದು ಕೂಡಿಸುವ ಕೆಲಸ ಆಗಬೇಕು ಎಂದು ಬೆಕ್ಕಿನ ಕಲ್ಮಠದ ಡಾ||ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.

    ಇತ್ತೀಚೆಗೆ ನಡೆದ ಪ್ರಾಂತ ಬೈಠಕ್ ಗೆ ಚಾಲನೆ ಕೊಟ್ಟು ಮಾತನಾಡಿದ ಅವರು, ಸಂಘಟನೆಯಲ್ಲಿ ಬಲವಿದೆ ಎಂಬುದು ನಿರಂತರವಾಗಿ ಸಾಬೀತಾಗುತ್ತಿದೆ. ಇದರಿಂದ ಪ್ರತಿಯೊಬ್ಬರು ಸಂಘಟನೆಯ ಅಡಿಯಲ್ಲಿ ಬಂದಾಗ ಸದೃಢ ಸಮಾಜ ನಿರ್ಮಾಣವಾಗುತ್ತದೆ ಎಂದರು.

    ಬೈಠಕ್ ನಲ್ಲಿ ಕಳೆದ 6 ತಿಂಗಳಲ್ಲಿ ಮಾಡಿದ ಸೇವಾ ವರದಿಯನ್ನು ಪಡೆಯಲಾಯಿತು ಮತ್ತು ಮುಂದಿನ ಕಾರ್ಯ ಯೋಚನೆ ಮಾಡಲಾಯಿತು. ವಿಶ್ವ ಹಿಂದೂ ಪರಿಷದ್ ಕೇಂದ್ರೀಯ ಸಮಿತಿಯ ಅನುಮತಿಯನ್ನು ಪಡೆದು ಲಾಂಛನ (ಲೋಗೋ)ವನ್ನು ಬಳಸಬೇಕೆಂದು ನಿರ್ಣಯಿಸಲಾಯಿತು.

    ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಬೈಠಕ್ ನಲ್ಲಿ ಅಖಿಲ ಭಾರತೀಯ ಸಹ ಪ್ರಧಾನ ಕಾರ್ಯದರ್ಶಿ ಸ್ಥಾನು ಮಾಲಯನ್, ಬೆಂಗಳೂರು ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ್ ಹೆಗಡೆ ಜಿ ,ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವರಾಜ್, ಸರ್ಜಿ ಕಲ್ಯಾಣ ಮಂಟಪದ ಮಾಲೀಕರು ಪುಷ್ಪ ರಮೇಶ್, ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಎಂ ಬಿ ಪುರಾಣಿಕ, ಪ್ರಾಂತ ಕಾರ್ಯದರ್ಶಿ ಜಗನ್ನಾಥ್ ಶಾಸ್ತ್ರಿ ಪ್ರಾಂತ ಉಪಾಧ್ಯಕ್ಷರಾದ ಕುಸುಮನರಾಯಣಾಚಾರ್, ರಾಮಪ್ಪ ಜಿ, ಟಿ.ಎ. ಪಿ. ಶೆಣೈ ಜಿ, ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ವಾಸುದೇವ್, ಪ್ರಾಂತ ಸಹ ಕೋಶಾಧ್ಯಕ್ಷರು ದೀಪಕ್ ರಾಜ ಗೋಪಾಲ್ ಮತ್ತು ಕಾರ್ಯಕರ್ತರು ಇದ್ದರು.

  • ಹಿಂದೂ ಧಾರ್ಮಿಕ ದತ್ತಿಯಿಂದ ಮಸೀದಿ, ಮದರಸಾಗಳಿಗೆ ತಸ್ತಿಕ್ ಭತ್ತೆ ನೀಡಲು ನಿರ್ಧಾರ- ವಿಹೆಚ್‍ಪಿ ವಿರೋಧ

    ಹಿಂದೂ ಧಾರ್ಮಿಕ ದತ್ತಿಯಿಂದ ಮಸೀದಿ, ಮದರಸಾಗಳಿಗೆ ತಸ್ತಿಕ್ ಭತ್ತೆ ನೀಡಲು ನಿರ್ಧಾರ- ವಿಹೆಚ್‍ಪಿ ವಿರೋಧ

    – ನಿರ್ಧಾರ ಹಿಂಪಡೆಯಲು ಆಗ್ರಹ

    ಮಂಗಳೂರು: ರಾಜ್ಯದಲ್ಲಿ ಕೋವಿಡ್ 19 ಸೋಂಕಿನಿಂದಾಗಿ ಅರ್ಚಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಕಾರಣ ಸರ್ಕಾರದಿಂದ ತಸ್ತಿಕ್ ಭತ್ತೆ ನೀಡಲು ಆದೇಶಿಸಿದನ್ನು ವಿಶ್ವ ಹಿಂದೂ ಪರಿಷತ್ ಸ್ವಾಗತಿಸುತ್ತದೆ. ಆದರೆ ಅದೇ ಆದೇಶದ ಪ್ರಕಾರ ತಸ್ತಿಕ್ ಹಣವನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ 41 ಮಸೀದಿ, ಮದರಸಾದ ಮೌಲ್ವಿಗಳಿಗೆ ನೀಡಲು ನಿರ್ಧರಿಸಿದ್ದನ್ನು ವಿಶ್ವ ಹಿಂದೂ ಪರಿಷದ್ ವಿರೋಧಿಸುತ್ತದೆ.

    ದೈವಸ್ಥಾನ, ದೇವಸ್ಥಾನದ ಹಣವನ್ನು ಹಿಂದೂಗಳಿಗೆ ಮತ್ತು ದೇವಸ್ಥಾನದ ಕಾರ್ಯಗಳಿಗೆ ಮಾತ್ರ ಉಪಯೋಗಿಸಬೇಕು ವಿನಃ ಮಸೀದಿ, ಮದರಸಾಗಳಿಗೆ ಉಪಯೋಗಿಸುವುದನ್ನು ಖಂಡಿಸುವ ಮೂಲಕ ಈ ನಿರ್ಧಾರವನ್ನು ಹಿಂಪಡೆಯಬೇಕೆಂದು ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮನವಿ ಸಲ್ಲಿಸಲಾಯಿತು.

    ಮನವಿಗೆ ಸ್ಪಂದಿಸಿದ ಸಚಿವರು ನಿರ್ಧಾರವನ್ನು ಹಿಂದೆ ಪಡೆಯುವುದಾಗಿ ಭರವಸೆ ಕೊಟ್ಟರು. ವಿಶ್ವ ಹಿಂದೂ ಪರಿಷದ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್, ಜಿಲ್ಲಾ ಅಧ್ಯಕ್ಷ ಗೋಪಾಲ್ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್, ಜಿಲ್ಲಾ ಉಪಾಧ್ಯಕ್ಷರು ಮನೋಹರ್ ಸುವರ್ಣ, ಜಿಲ್ಲಾ ಸಂಚಾಲಕ್ ಪುನೀತ್ ಅತ್ತಾವರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  ಇದನ್ನೂ ಓದಿ: ಕೈಗಾರಿಕೆಗಳು, ಆಸ್ಪತ್ರೆಗಳಿಗೆ ಆಮ್ಲಜನಕ ಸರಬರಾಜು ಮೇಲುಸ್ತುವಾರಿಗೆ ಜಿಲ್ಲೆಗಳಲ್ಲಿ ನೋಡಲ್ ಅಧಿಕಾರಿ: ಶೆಟ್ಟರ್

  • ಕೋವಿಡ್ ಸಮಯದಲ್ಲಿ ವಿಎಚ್‍ಪಿಯಿಂದ ಸಮಾಜ ಸೇವೆ – ಏನೇನು ಮಾಡಿದೆ?

    ಕೋವಿಡ್ ಸಮಯದಲ್ಲಿ ವಿಎಚ್‍ಪಿಯಿಂದ ಸಮಾಜ ಸೇವೆ – ಏನೇನು ಮಾಡಿದೆ?

    ಬೆಂಗಳೂರು: ಕೊರೊನಾ ಸಂಕಷ್ಟ ಸಮಯದಲ್ಲಿ ವಿಶ್ವ ಹಿಂದೂ ಪರಿಷದ್ ರಾಜ್ಯಾದ್ಯಂತ ಹಲವು ರೀತಿಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಕೊರೊನಾದಿಂದ ಬಳಲುತ್ತಿರುವ ಅನೇಕ ಮಂದಿಗೆ ಆಕ್ಸಿಜನ್, ಊಟ, ಉಚಿತ ಆಟೋ ಸೇವೆ ಹೀಗೆ ಹಲವು ರೀತಿಯಲ್ಲಿ ಸಹಾಯ ಮಾಡುತ್ತಿದೆ.

    ಈಗ ವಿಶ್ವ ಹಿಂದೂ ಪರಿಷದ್ ಬೆಂಗಳೂರಿನ ಕೇಂದ್ರ ಕಾರ್ಯಾಲಯದಿಂದ ಬೆಳಗಾವಿಗೆ 5, ಶಿವಮೊಗ್ಗಕ್ಕೆ 2, ಚಿತ್ರದುರ್ಗ 1, ಮಂಗಳೂರಿಗೆ 1 ಆಕ್ಸಿಜನ್ ಸಾಂದ್ರಕವನ್ನು ಕಳುಹಿಸಿ ಕೊಡಲಾಗುತ್ತಿದೆ. ಈ ಸಂದರ್ಭದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ಶ್ರೀಬಸವರಾಜ್ ಜಿ ಅವರು ಸೇವಾಕಾರ್ಯಗಳ ವಿವರ ನೀಡಿದರು.

    ಏನೇನು ಮಾಡಿದೆ?
    * ಎಲ್ಲಾ ಜಿಲ್ಲೆಗಳಲ್ಲಿ ರಕ್ತದಾನ ಶಿಬಿರ
    * ಮಂಗಳೂರಿನಲ್ಲಿ ಕೋವಿಡ್ ರೋಗಿಗಳಿಗೆ ಉಚಿತ ಆಟೋ ಸೇವೆ, ಅದಕ್ಕಾಗಿ ಸಹಾಯವಾಣಿ ಆರಂಭ
    * ಮಂಗಳೂರು, ಸುರತ್ಕಲ್, ಉಪ್ಪಿನಂಗಡಿ, ಮಡಿಕೇರಿ, ಚಿತ್ರದುರ್ಗ, ಮಳವಳ್ಳಿ, ತುಮಕೂರು, ಬೆಳಗಾವಿ, ಹುಬ್ಬಳ್ಳಿ ಹೀಗೆ ಹಲವಾರು ಕಡೆ ಕೋವಿಡ್‍ನಿಂದ ಮೃತಪಟ್ಟವರನ್ನು ಹಿಂದೂ ಪದ್ಧತಿಯಂತೆ ಅಂತ್ಯಕ್ರಿಯೆ.
    * ಶಿವಮೊಗ್ಗದಲ್ಲಿ ಅನ್ನ ಪರಬ್ರಹ್ಮ ಎನ್ನುವ ಕಾರ್ಯಕ್ರಮದಡಿ ಹಸಿದವರಿಗೆ ಪ್ರತಿದಿನ ನಗರದಾದ್ಯಂತ 1 ಸಾವಿರ ಆಹಾರ ಪೊಟ್ಟಣ ವಿತರಣೆ
    * ಬೆಂಗಳೂರಿನಲ್ಲಿ ಕೋವಿಡ್ ಆಗಿ ಹೋ ಐಸೋಲೇಷನ್‍ನಲ್ಲಿ ಇರುವವರಿಗೆ ಮೆಡಿಸನ್ ವಿತರಣೆ.
    * ಚಿತ್ರದುರ್ಗದ ಜಿಲ್ಲೆಯ ಹೊಳಲ್ಕೆರೆಯ ಸರಕಾರಿ ಆಸ್ಪತ್ರೆಗಳಲ್ಲಿರುವ ರೋಗಿಗಳ ಸಂಬಂಧಿಗಳಿಗೆ ಪ್ರತಿನಿತ್ಯ 200 ಆಹಾರ ಪೊಟ್ಟಣ ವಿತರಣೆ.
    * ಶಿವಮೊಗ್ಗದಲ್ಲಿ ವಿಶ್ವ ಹಿಂದೂ ಪರಿಷದ್ ಮತ್ತು ಸೇವಾ ಭಾರತೀಯಿಂದ 40 ಬೆಡ್ ಗಳ ಕೋವಿಡ್ ಆರೈಕೆ ಕೇಂದ್ರದ ಮೂಲಕ ಸಹಾಯ.
    * ಚಿತ್ರದುರ್ಗದಲ್ಲಿ ವಿಹಿಂಪ ಮತ್ತು ಜೈನ್ ಸಮುದಾಯ ಒಟ್ಟಾಗಿ 12 ಬೆಡ್ ಗಳ ಕೋವಿಡ್ ಆರೈಕೆ ಕೇಂದ್ರವನ್ನು ತೆರೆದಿಒದೆ.
    * ವಿಶ್ವ ಹಿಂದೂ ಪರಿಷದ್ ಕರ್ನಾಟಕ ಕೇಂದ್ರಕಾರ್ಯಾಲಯ ಧರ್ಮಶ್ರೀಯಲ್ಲಿ ಎರಡು ದಿನಗಳ ಕಾಲ ವ್ಯಾಕ್ಸಿನೇಷನ್ ಡ್ರೈವ್.
    * ಬೆಳಗಾವಿಯಲ್ಲಿ ವಿಶ್ವ ಹಿಂದೂ ಪರಿಷದ್, ಆರ್‍ಎಸ್‍ಎಸ್ ಏಕಲ್ ವಿದ್ಯಾಲಯದ ಆಶ್ರಯದಲ್ಲಿ ಕೋವಿಡ್ ಕೇರ್ ಸೆಂಟರ್.

  • ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ವತಿಯಿಂದ ರಾಮ ಮಂದಿರಕ್ಕೆ ದೇಣಿಗೆ

    ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ವತಿಯಿಂದ ರಾಮ ಮಂದಿರಕ್ಕೆ ದೇಣಿಗೆ

    ಬೆಂಗಳೂರು: ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ವತಿಯಿಂದ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣನಿಧಿ ಸಮರ್ಪಣಾಅಭಿಯಾನಕ್ಕೆ ತಾವೇ ನಿಧಿ ಸಂಗ್ರಹಣೆ ಮಾಡಿದ್ದಾರೆ. ನಂತರ ವಿಶ್ವ ಹಿಂದೂ ಪರಿಷದ್ ಕಚೇರಿಗೆ ಬಂದು ಬೆಂಗಳೂರು ಮಧ್ಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ್ ಹೆಗಡೆ ಹಾಗೂ ಕರ್ನಾಟಕ ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವರಾಜು ರವರಿಗೆ ನಿಧಿಯನ್ನು ಸಮರ್ಪಿಸಿ ರಶೀದಿಯನ್ನು ಪಡೆದರು.

    ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ವತಿಯಿಂದ ಉಪಾಧ್ಯಕ್ಷರಾದ ಶಿವಮೊಗ್ಗ ಭಾಸ್ಕರ್ ಹಾಗೂ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್ ನಿಧಿ ಸಮರ್ಪಿಸಿದರು.

  • ಹೆಚ್‍ಡಿಕೆ ಟ್ವೀಟ್ ಬಾಲಿಶ, ಬೇಜವಾಬ್ದಾರಿಯಿಂದ ಕೂಡಿದ್ದಾಗಿದೆ: ವಿಹಿಂಪ

    ಹೆಚ್‍ಡಿಕೆ ಟ್ವೀಟ್ ಬಾಲಿಶ, ಬೇಜವಾಬ್ದಾರಿಯಿಂದ ಕೂಡಿದ್ದಾಗಿದೆ: ವಿಹಿಂಪ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ಪ್ರಸ್ತುತ ನಡೆಯುತ್ತಿರುವ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಕುರಿತಾಗಿ ಮಾಡಿರುವ ಟ್ವೀಟ್ ಇದೀಗ ವಿವಾದಕ್ಕೀಡಾಗಿದೆ.

    ರಾಮಮಂದಿರಕ್ಕೆ ಹಣ ಸಂಗ್ರಹಿಸುತ್ತಿರುವವರು ಹಣ ಕೊಟ್ಟವರ, ಕೊಡದವರ ಮನೆ ಗುರುತು ಮಾಡುತ್ತಿರುವುದು ತಿಳಿಯಿತು. ಯಾತಕ್ಕೆ ಹೀಗೆ ಮಾಡುತ್ತಿದ್ದಾರೆಂಬುದು ಗೊತ್ತಿಲ್ಲ. ಹಿಟ್ಲರ್ ಕಾಲದಲ್ಲಿ ನಾಜಿ-ಯಹೂದಿಗಳಿಗೆ ಗಲಾಟೆ ನಡೆದು ಲಕ್ಷಾಂತರ ಜನರ ಮಾರಣ ಹೋಮ ನಡೆಯಿತು. ದೇಶದಲ್ಲಿ ನಡೆಯುತ್ತಿರುವ ಈ ಬೆಳವಣಿಗೆ ಎಲ್ಲಿ ತಲುಪುತ್ತದೆ ಗೊತ್ತಿಲ್ಲ ಎಂದು ಮಾಜಿ ಸಿಎಂ ಟ್ವೀಟ್ ಮಾಡಿದ್ದರು. ವಿಶ್ವ ಹಿಂದೂ ಪರಿಷತ್ ಶ್ರೀರಾಮ್ ಮಂದಿರ ನಿಧಿ ಸಮರ್ಪಣಾ ಅಭಿಯಾನದ ನೇತೃತ್ವ ವಹಿಸುತ್ತಿದ್ದು ಮಾಜಿ ಮುಖ್ಯಮಂತ್ರಿಗಳ ಟ್ವೀಟ್ ಬಾಲಿಶ ಹಾಗೂ ಬೇಜವಾಬ್ದಾರಿಯಿಂದ ಕೂಡಿದ್ದಾಗಿದೆ ಎಂದು ತೀಕ್ಷ್ಣವಾಗಿ ಖಂಡಿಸಿದೆ.

    ವಿಹಿಂಪದ ಕರ್ನಾಟಕ ರಾಜ್ಯದ ಸಂಘಟನಾ ಕಾರ್ಯದರ್ಶಿ ಬಸವರಾಜು ತಮ್ಮ ಪತ್ರಿಕಾ ಹೇಳಿಕೆಯಲ್ಲಿ, ಸಮಾಜವು ಧನಾತ್ಮಕವಾಗಿ ನಿಧಿ ಸಮರ್ಪಣೆಯಲ್ಲಿ ತೊಡಗಿದೆ. ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಿಸಲು ಸಹಾಯವಾಗುವಂತೆ ಜನಸಾಮಾನ್ಯರೆಲ್ಲರೂ ನಿಧಿ ಸಮರ್ಪಿಸುತ್ತಿರುವಾಗ, ಮಾಜಿ ಮುಖ್ಯಮಂತ್ರಿಯೊಬ್ಬರಿಂದ ಇಂತಹ ಬೇಜವಾಬ್ದಾರಿ ಹೇಳಿಕೆ ಸಲ್ಲದು. ವಿಹಿಂಪ ಸೇರಿದಂತೆ ಹಲವು ಸಂಘಟನೆಗಳ ಕಾರ್ಯಕರ್ತರು ಮನೆ ಮನೆಗೆ ತೆರಳಿ ನಿಧಿಯನ್ನು ಸಂಗ್ರಹಿಸುವಾಗ ಇಂತಿಷ್ಟೇ ಹಣವನ್ನು ದಾನ ಮಾಡಬೇಕೆಂದು ಕೇಳುವುದಿಲ್ಲ. ಪ್ರಭು ಶ್ರೀರಾಮನ ಆದರ್ಶವನ್ನು ಜೀವನದಲ್ಲಿ ಪಾಲಿಸಬೇಕು ಹಾಗೂ ಈ ದೇಶದ ಅಸ್ಮಿತೆಯಾದ ಶ್ರೀರಾಮನ ಮಂದಿರಕ್ಕೆ ವಿವಿಧ ಸ್ಥರದ ಹಲವಾರು ಜನಸಾಮಾನ್ಯರು ತಮ್ಮ ಕೊಡುಗೆ ಸಮರ್ಪಣೆ ಮಾಡುತ್ತಿರುವುದನ್ನು ಗಮನಿಸಬೇಕು. ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಇಂತಹ ಬೇಜವಾಬ್ದಾರಿ ಹೇಳಿಕೆಯನ್ನು ವಿಹಿಂಪ ಖಂಡಿಸುತ್ತದೆ. ಆರ್‍ಎಸ್‍ಎಸ್ ಅಂತಹ ಸಂಘಟನೆಯ ಬಗ್ಗೆ ವೃಥಾ ಆರೋಪ ಮಾಡುವುದು ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ.

    ಸಾರ್ವಜನಿಕ ವಲಯದಲ್ಲಿ ಸೊರಗುತ್ತಿರುವ ಸಂವಾದ ಹಾಗೂ ಅದರಲ್ಲಿ ನೇರವಾಗಿ ಭಾಗಿಯಾಗಿರುವ ಹೆಚ್‍ಡಿ ಕುಮಾರಸ್ವಾಮಿಯವರ ನಡೆಗೆ ವಿಹಿಂಪ ಆಕ್ಷೇಪ ವ್ಯಕ್ತಪಡಿಸುತ್ತದೆ ಎಂದಿದ್ದಾರೆ. ಇದೇ ವೇಳೆ ಬಜರಂಗ ದಳದ ಸೂರ್ಯನಾರಾಯಣ ಮಾತನಾಡಿ, ಸ್ವ-ಇಚ್ಛೆಯಿಂದ ಜನರು ನೀಡುವ ದೇಣಿಗೆಗೆ ಕುಮಾರಸ್ವಾಮಿಯವರು ಅವಮಾನಿಸಿದ್ದು, ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

  • ವಿಹಿಂಪದ ಹಿರಿಯ ಪ್ರಚಾರಕ ಬಾಬುರಾವ್ ದೇಸಾಯಿ ನಿಧನ

    ವಿಹಿಂಪದ ಹಿರಿಯ ಪ್ರಚಾರಕ ಬಾಬುರಾವ್ ದೇಸಾಯಿ ನಿಧನ

    ಬೆಂಗಳೂರು: ವಿಶ್ವ ಹಿಂದೂ ಪರಿಷದ್‍ನ ಹಿರಿಯ ಪ್ರಚಾರಕ ಬಾಬುರಾವ್ ದೇಸಾಯಿ(96)ಯವರು ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.

    ಇವರು ವಿಶ್ವ ಹಿಂದೂ ಪರಿಷತ್‍ನ ಪೂರ್ವ ಅಖಿಲ ಭಾರತೀಯ ಕಾರ್ಯದರ್ಶಿ, ಪೂರ್ವ ಏಕಲ ವಿದ್ಯಾಲಯ ಪ್ರಭಾರಿ, ಶ್ರೀ ರಾಮ ಜನ್ಮ ಭೂಮಿ ಆಂದೋಲನ ನೇತೃತ್ವ ವಹಿಸಿದ್ದರು. ಇದೀಗ ದೇಸಾಯಿ ಅವರು ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

    ಹಿರಿಯ ಪ್ರಚಾರಕರಾದ ವಿಶ್ವ ಹಿಂದೂ ಪರಿಷದ್‍ನ ಬಾಬುರಾವ್ ದೇಸಾಯಿಯವರು ಶುಕ್ರವಾರ ರಾತ್ರಿ ಪರಂಧಾಮ ಸೇರಿದರು ಎಂದು ತಿಳಿಸಲು ಅತೀವ ದುಃಖವಾಗುತ್ತಿದೆ. ಸದ್ಯ ಧರ್ಮಶ್ರೀಯಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿಶ್ವ ಹಿಂದೂ ಪರಿಷದ್ ಅವರಿಗೆ ಅಶ್ರುಪೂರ್ಣ ಶ್ರದ್ಧಾಂಜಲಿಯನ್ನು ಸಮರ್ಪಿಸಿದೆ.

    ಇಂದು ಸಂಜೆ 3 ಗಂಟೆಗೆ ಬೆಂಗಳೂರು ಕಾರ್ಯಾಲಯದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಇರುತ್ತದೆ ಎಂದು ಪರಿಷದ್ ಕಾರ್ಯಾಲಯ ಪ್ರಕಟಣೆ ಹೊರಡಿಸಿದೆ.

  • ಗೋ ರಕ್ಷಣೆಗೆ ಬಜರಂಗದಳ ಟೊಂಕ ಕಟ್ಟಿ ನಿಂತಿದೆ: ಕೇಶವ ಹೆಗಡೆ

    ಗೋ ರಕ್ಷಣೆಗೆ ಬಜರಂಗದಳ ಟೊಂಕ ಕಟ್ಟಿ ನಿಂತಿದೆ: ಕೇಶವ ಹೆಗಡೆ

    ಬೆಳಗಾವಿ: ಗೋಹತ್ಯೆ ಮಾಡುವವರ ಮೇಲೆ ಪ್ರಕರಣ ದಾಖಲಿಸುವುದಿಲ್ಲ. ಅದನ್ನು ತಡೆಯುವ ವಿಶ್ವ ಹಿಂದೂ ಪರಿಷದ್ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸುತ್ತಾರೆ. ಆದರೂ ಗೋವು ರಕ್ಷಣೆಗೆ ಬಜರಂಗದಳ ಟೊಂಕ ಕಟ್ಟಿ ನಿಂತಿದೆ ಎಂದು ವಿಶ್ವ ಹಿಂದೂ ಪರಿಷದ್ ಬಜರಂಗದಳದ ಕೇಶವ ಹೆಗಡೆ ಹೇಳಿದರು.

    ಇಂದು ನಗರದ ಮರಾಠಾ ಮಂದಿರದಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳದ ಹಿತ ಚಿಂತಕ ಅಭಿಯಾನದ ಸಮಾವೇಶ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೂ ಸಮಾಜವನ್ನು ಸದೃಢಗೊಳಿಸಲು ಎಲ್ಲರೂ ಸೇರಿ ಶ್ರಮಿಸಬೇಕಿದೆ. ಎಲ್ಲಾ ಸಮುದಾಯದ ಹಿಂದೂಗಳು ಸಂಕಲ್ಪ ಮಾಡಿ ರಾಷ್ಟ್ರ ವಿರೋಧಿಗಳ ವಿರುದ್ಧ ಹೋರಾಟ ಮಾಡಬೇಕಿದೆ ಎಂದರು.

    ಕೇಂದ್ರ ಸರ್ಕಾರ ಹಿಂದೂಗಳ ರಕ್ಷಣೆಗೆ ಪೌರತ್ವ ಕಾಯ್ದೆಯನ್ನು ಜಾರಿಗೆ ತಂದಿದೆ. ಇದನ್ನು ಕಾಂಗ್ರೆಸ್ ಪಕ್ಷ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದೆ. ಈ ಕಾಯ್ದೆಯ ಬಗ್ಗೆ ಯಾರಿಗೆ ತಿಳಿದಿರುವುದಿಲ್ಲವೋ ಅಂಥವರು ಇದನ್ನು ವಿರೋಧಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ರುದ್ರಕೇಶ ಮಠದ ಹರಿಗುರು ಶ್ರೀ ಮಹಾರಾಜ ಸ್ವಾಮೀಜಿ ಮಾತನಾಡಿ, ಕಳೆದ 55 ವರ್ಷಗಳಿಂದ ಆರಂಭವಾದ ವಿಶ್ವ ಹಿಂದೂ ಪರಿಷದ್ ಸಂಘಟನೆಯಲ್ಲ. ಇದು ಹಿಂದೂತ್ವದ ಆಧಾರ ಸ್ಥಂಭವಾಗಿದೆ ಎಂದರು. ಈ ಕಾರ್ಯಕ್ರಮದಲ್ಲಿ ಕಾರಂಜಿ ಮಠದ ಶ್ರೀ ಗುರುಸಿದ್ಧ ಸ್ವಾಮೀಜಿ, ಲಾಲಚಂದ್ರ ಚಂಡೇರಿ, ಜೀಜಾಲಾಲ ಪಟೇಲ್, ಬಾರ್ ಅಸೋಸಿಯೇಷನ್ ಅಧ್ಯಕ್ಷ ಅನಿಲ್ ಮುಳವಾಡಮಠ, ವಿನಾಯಕ್ ಕಾಕತಿಕರ, ಸುನೀಲ್ ತಳವಾರ, ಜಯರಾಮ್ ಸುತಾರ, ಬಸವರಾಜ್ ಹಳಬರ, ಅರುಣ್ ಗವಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

  • ‘ಮೊದಲು ಮಂದಿರ ನಂತರ ಸರ್ಕಾರ’ ಎಂಬ ಘೋಷವಾಕ್ಯದೊಂದಿಗೆ ಅಯೋಧ್ಯೆಗೆ ಹೊರಟ ಶಿವ ಸೈನಿಕರು

    ‘ಮೊದಲು ಮಂದಿರ ನಂತರ ಸರ್ಕಾರ’ ಎಂಬ ಘೋಷವಾಕ್ಯದೊಂದಿಗೆ ಅಯೋಧ್ಯೆಗೆ ಹೊರಟ ಶಿವ ಸೈನಿಕರು

    ಮುಂಬೈ: ಶಿವಸೇನಾ ಮತ್ತು ವಿಶ್ವ ಹಿಂದೂ ಪರಿಷದ್(ವಿಎಚ್‍ಪಿ) ಕಾರ್ಯಕರ್ತರನ್ನು ಒಳಗೊಂಡ ಶಿವ ಸೈನಿಕರು `ಮೊದಲು ಮಂದಿರ-ನಂತರ ಸರ್ಕಾರ’ ಎಂಬ ಘೋಷವಾಕ್ಯದೊಂದಿಗೆ ರಾಮಜನ್ಮ ಭೂಮಿ ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದಾರೆ.

    ಹೌದು, 2019ರ ಲೋಕಸಭಾ ಚುನಾವಣೆಯ ಪ್ರಮುಖ ಅಸ್ತ್ರವಾಗಿರುವ ರಾಮ ಮಂದಿರ ನಿರ್ಮಾಣಕ್ಕೆ ಒತ್ತಡ ಹೆಚ್ಚುತ್ತಿರುವ ಬೆನ್ನಲ್ಲೇ, ಶಿವಸೇನೆ ಹಾಗೂ ವಿಎಚ್‍ಪಿ ಕಾರ್ಯಕರ್ತರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

    ಗುರುವಾರ ಮಧ್ಯಾಹ್ನ ಮಹಾರಾಷ್ಟ್ರದ ಥಾಣೆ ರೈಲ್ವೇ ನಿಲ್ದಾಣದಲ್ಲಿ ಸಿದ್ಧವಾಗಿದ್ದ ವಿಶೇಷ ರೈಲಿನಲ್ಲಿ ಶಿವ ಸೈನಿಕರು ಅಯೋಧ್ಯೆಗೆ ಪ್ರಯಾಣ ಬೆಳೆಸಿದರು. ಕೇಸರಿ ವಸ್ತ್ರ ಧರಿಸಿದ್ದ ಸುಮಾರು 2 ಸಾವಿರಕ್ಕೂ ಅಧಿಕ ಮಂದಿ ಪ್ರವಾಸ ಕೈಗೊಂಡಿದ್ದಾರೆ. ಈ ವಿಶೇಷ ರೈಲಿಗೆ ಆರತಿ ಬೆಳಗುವ ಮೂಲಕ ಥಾಣೆಯ ಮೇಯರ್ ಮೀನಾಕ್ಷಿ ಸಿಂಧೆ ಚಾಲನೆ ನೀಡಿದರು.

    ಈ ಕುರಿತು ಪ್ರತಿಕ್ರಿಯಿಸಿರುವ ಶಿವಸೇನೆ ಕಾರ್ಪೋರೇಟರ್ ನರೇಶ್ ಮಸ್ಕೆ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ಭರವಸೆಗಳನ್ನು ಕೇಳುತ್ತಲೇ ಬಂದಿದ್ದೇವೆ. ಆದರೆ ಇದುವರೆಗೂ ರಾಮ ಮಂದಿರ ಮಾತ್ರ ನಿರ್ಮಾಣವಾಗಿಲ್ಲ. ಭಗವಾನ್ ಶ್ರೀ ರಾಮನ ಮಂದಿರ ನಿರ್ಮಾಣದ ಕಾರ್ಯಕ್ಕೆ ಈಗ ಸಕಾಲ ಕೂಡಿ ಬಂದಿದೆ ಎಂದು ಹೇಳಿದ್ದಾರೆ.

    ಶುಕ್ರವಾರ ರಾತ್ರಿ ಅಯೋಧ್ಯೆ ತಲುಪಲಿರುವ ಸಾವಿರಾರು ಕಾರ್ಯಕರ್ತರು, ಶನಿವಾರ ಸಂಜೆ ನಯಾ ಘಾಟ್ ನಲ್ಲಿ ಮಹಾ ಸಮಾವೇಶ ಹಾಗೂ ಮಂಗಳಾರತಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ತೊಗಾಡಿಯಾರ ಬದಲು ಹಿಂದೂ ವಿರೋಧಿ ಓವೈಸಿಯನ್ನು ಎನ್‍ಕೌಂಟರ್ ಮಾಡ್ಬೇಕಿತ್ತು- ಬಿಜೆಪಿ ವಿರುದ್ಧ ಮುತಾಲಿಕ್ ವಾಗ್ದಾಳಿ

    ತೊಗಾಡಿಯಾರ ಬದಲು ಹಿಂದೂ ವಿರೋಧಿ ಓವೈಸಿಯನ್ನು ಎನ್‍ಕೌಂಟರ್ ಮಾಡ್ಬೇಕಿತ್ತು- ಬಿಜೆಪಿ ವಿರುದ್ಧ ಮುತಾಲಿಕ್ ವಾಗ್ದಾಳಿ

    ಹುಬ್ಬಳ್ಳಿ: ವಿಶ್ವ ಹಿಂದೂ ಪರಿಷದ್ ಮುಖ್ಯಸ್ಥ ಪ್ರವೀಣ್ ಭಾಯ್ ತೊಗಾಡಿಯಾ ಅವರನ್ನು ಎನ್ ಕೌಂಟರ್ ಮಾಡ ಹೊರಟವರು ಮೊದಲು ಹಿಂದೂ ವಿರೋಧಿ ಅಕ್ಬರುದ್ದೀನ್ ಓವೈಸಿಯನ್ನು ಎನ್ ಕೌಂಟರ್ ಮಾಡಬೇಕಿತ್ತು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಹುಬ್ಬಳ್ಳಿಯ ಕೇಶ್ವಾಪುರದ ರಾಯ್ಕರ ಭವನದಲ್ಲಿ ಪ್ರವೀಣ್ ಭಾಯ್ ತೊಗಾಡಿಯಾ ಅಭಿಮಾನಿ ಬಳಗ ಉದ್ಘಾಟನೆ ಮಾಡಿ ಬಳಿಕ ಮಾತನಾಡಿದ ಅವರು, ಹಿಂದೂಸ್ತಾನ್ ದಲ್ಲಿಯೇ ಹಿಂದೂ ಹೋರಾಟಗಾರರನ್ನು ಎನ್ ಕೌಂಟರ್ ಮಾಡಲು ಮುಂದಾಗಿದ್ದು ದುರಂತ. ತೊಗಾಡಿಯಾ ಅವರ ಎನ್ ಕೌಂಟರ್ ಮಾಡುವ ಬದಲು ಹಿಂದು ವಿರೋಧಿ ಓವೈಸಿ ಎನ್‍ಕೌಂಟರ್ ಮಾಡಬೇಕಿತ್ತು ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

    ಹಿಂದೂ ಸಮಾಜವನ್ನು ಬಳಸಿಕೊಂಡು ಬಿಜೆಪಿ ಅಧಿಕಾರ ಹಿಡಿದಿದೆ. ಈಗ ಹಿಂದು ಹೋರಾಟಗಾರ ತೆಲೆಯ ಮೇಲೆ ಕಾಲಿಟ್ಟು ಬಿಜೆಪಿ ಅಧಿಕಾರ ಮಾಡುತ್ತಿದೆ. ನಮ್ಮ ಹೋರಾಟವನ್ನು ಬಳಸಿಕೊಂಡು ಅಧಿಕಾರ ಹಿಡಿದಿರುವ ಬಿಜೆಪಿಗೆ ತಕ್ಕ ಪಾಠ ಕಲಿಸುವ ಕಾಲ ಬಂದಿದೆ ಎಂದು ವಾಗ್ದಾಳಿ ನಡೆಸಿದರು.

    ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರಕ್ಕೆ ಬಿಜೆಪಿಯ ದರ್ಪ ಹಾಗೂ ದುರಾಡಳಿತ ಕಾರಣವಾಗಿದೆ. ಕಳೆದ 50 ವರ್ಷದಲ್ಲಿ ಕಾಂಗ್ರೆಸ್ ಲೂಟಿ ಮಾಡಿದಕ್ಕಿಂತ ಹೆಚ್ಚು 5 ವರ್ಷದಲ್ಲಿ ಬಿಜೆಪಿ ಅವರು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.

    ಯಾರು ಅಕ್ಬರುದ್ದೀನ್ ಓವೈಸಿ:
    ಆಲ್ ಇಂಡಿಯಾ ಮಜ್ಲಿಸ್ ಎಇತ್ತೆಹಾದುಲ್ ಮುಸ್ಲಿಮೀನ್‍ನ (ಎಂಐಎಂ) ಪಕ್ಷದ ನಾಯಕ, ಹಾಲಿ ಸಂಸದರಾಗಿರುವ ಅಸಾದುದ್ದೀನ್ ಓವೈಸಿ ಅವರ ಸಹೋದರರಾಗಿರುವ ಅಕ್ಬರುದ್ದೀನ್ ಓವೈಸಿ ಈ ಹಿಂದೆ ಹಿಂದೂ ಧರ್ಮವನ್ನು ವಿರೋಧಿಸಿ ಭಾಷಣ ಮಾಡಿದ್ದರು. ಪ್ರಸ್ತುತ ಅಕ್ಬರುದ್ದೀನ್ ಓವೈಸಿ ತೆಲಂಗಾಣ ರಾಜ್ಯದ ಎಂಐಎಂ ಪಕ್ಷದ ಚಂದ್ರರಾಯನಗುಟ್ಟ ಕ್ಷೇತ್ರದ ಶಾಸಕರಾಗಿದ್ದಾರೆ.