Tag: ವಿಶ್ವ ರೇಡಿಯೋ ದಿನ

  • ರೇಡಿಯೋ ಜನರನ್ನು ಸಂಪರ್ಕಿಸುವ ಅದ್ಭುತ ಮಾಧ್ಯಮ: ನರೇಂದ್ರ ಮೋದಿ

    ರೇಡಿಯೋ ಜನರನ್ನು ಸಂಪರ್ಕಿಸುವ ಅದ್ಭುತ ಮಾಧ್ಯಮ: ನರೇಂದ್ರ ಮೋದಿ

    ನವದೆಹಲಿ: ವಿಶ್ವ ರೇಡಿಯೋ ದಿನದಂದು ಪ್ರಧಾನಿ ನರೇಂದ್ರ ಮೋದಿ ರೇಡಿಯೋ ಕೇಳುಗರಿಗೆ ಶುಭಾಶಯ ಕೋರಿ ಇದೊಂದು ಅದ್ಭುತ ಮಾಧ್ಯಮ ಎಂದರು.

    ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ ರೇಡಿಯೋ ಜನರ ಜೀವನದ ಅವಿಭಾಜ್ಯ ಅಂಗವಾಗಿ ಉಳಿದಿದೆ. ಇದು ಜನರನ್ನು ಸಂಪರ್ಕಿಸುವ ಅದ್ಭುತ ಮಾಧ್ಯಮವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಟಾಟಾ ಸನ್ಸ್ ಗ್ರೂಪ್‌ಗೆ ಎನ್ ಚಂದ್ರಶೇಖರನ್ ಅಧ್ಯಕ್ಷರಾಗಿ ಮರು ನೇಮಕ

    ಎಲ್ಲಾ ರೇಡಿಯೋ ಕೇಳುಗರಿಗೆ ಹಾಗೂ ಈ ಅತ್ಯುತ್ತಮ ಮಾಧ್ಯಮವನ್ನು ತಮ್ಮ ಪ್ರತಿಭೆ, ಸೃಜನಶೀಲತೆಯಿಂದ ಶ್ರೀಮಂತಗೊಳಿಸುತ್ತಿರುವವರಿಗೆ ವಿಶ್ವ ರೇಡಿಯೋ ದಿನದ ಶುಭಾಶಯಗಳು ಎಂದು ಮೋದಿ ಟ್ವಿಟ್ಟರ್‍ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಹಿಜಬ್ ವಿಚಾರದಲ್ಲಿ ಕೋರ್ಟ್ ಏನೇ ತೀರ್ಪು ಕೊಟ್ಟರೂ ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು: ಹೆಚ್.ಡಿ ದೇವೇಗೌಡ

    ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ 2012ರಲ್ಲಿ ಈ ದಿನವನ್ನು ರೇಡಿಯೋ ಅಂತರರಾಷ್ಟ್ರೀಯ ದಿನವಾಗಿ ಅಳವಡಿಸಿಕೊಂಡಿದೆ, ಫೆಬ್ರವರಿ 13 ಅನ್ನು ವಿಶ್ವ ರೇಡಿಯೋ ದಿನವಾಗಿ ಆಚರಿಸಲಾಗುತ್ತದೆ.

  • ಸಾಮಾಜಿಕ ಸಂಪರ್ಕವನ್ನು ವೃದ್ಧಿಸುವ ಅದ್ಭುತ ಮಾಧ್ಯಮ ರೇಡಿಯೋ: ಮೋದಿ

    ಸಾಮಾಜಿಕ ಸಂಪರ್ಕವನ್ನು ವೃದ್ಧಿಸುವ ಅದ್ಭುತ ಮಾಧ್ಯಮ ರೇಡಿಯೋ: ಮೋದಿ

    ನವದೆಹಲಿ: ವಿಶ್ವರೇಡಿಯೋ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕವಾಗಿ ಶುಭಕೋರಿದ್ದಾರೆ.

    ವಿಶ್ವಸಂಸ್ಥೆ ಸಾಮಾನ್ಯ ಸಭೆ 2012ರಿಂದ ಪ್ರತಿವರ್ಷ ಫೆಬ್ರವರಿ 13ರಿಂದ ಅಂತರಾಷ್ಟ್ರೀಯ ರೇಡಿಯೋ ದಿನವನ್ನು ಆಚರಿಸಲು ಅಂಗೀಕಾರ ಮಾಡಿದೆ. ಮೋದಿ ಅವರು ಇಂದು ಟ್ವೀಟ್ ಮಾಡುವ ಮೂಲಕವಾಗಿ ರೇಡಿಯೋ ದಿನದ ಶುಭಾಶಯವನ್ನು ಕೋರಿದ್ದಾರೆ.

    ಟ್ವಿಟ್ಟರ್‌ನಲ್ಲಿ ಏನಿದೆ?
    ರೇಡಿಯೋ ದಿನದ ಶುಭಾಶಯಗಳು. ರೇಡಿಯೋ ಕೇಳುವ ಎಲ್ಲರಿಗೂ ಶುಭಾಶಯಗಳು. ಹೊಸ ಹೊಸ ವಿಚಾರ ಹಾಗೂ ಸಂಗೀತದೊಂದಿಗೆ ಝೆಂಕರೀಸುವಂತೆ ರೇಡಿಯೋ ಮಾಡುತ್ತದೆ. ರೇಡಿಯೋ ಸಾಮಾಜಿಕ ಸಂಪರ್ಕವನ್ನು ವೃದ್ಧಿಸುವ ಒಂದು ಅದ್ಭುತವಾದ ಮಾಧ್ಯಮವಾಗಿದೆ. ಮನ್ ಕೀ ಬಾತ್‍ನಿಂದಾಗಿ ನನಗೆ ರೇಡಿಯೋದ ಮಹತ್ವ ಹಾಗೂ ಧನಾತ್ಮಕ ಪರಿಣಾಮದ ಅರಿವಾಗಿದೆ ಎಂದು ಬರೆದುಕೊಂಡು ಟ್ವೀಟ್ ಮಾಡಿ ಶುಭಕೊರಿದ್ದಾರೆ.