Tag: ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್

  • Women’s World Boxing Championships: ಚಿನ್ನ ಗೆದ್ದು ದಾಖಲೆ ಬರೆದ ನೀತು ಘಂಘಾಸ್

    Women’s World Boxing Championships: ಚಿನ್ನ ಗೆದ್ದು ದಾಖಲೆ ಬರೆದ ನೀತು ಘಂಘಾಸ್

    ನವದೆಹಲಿ: ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದ ಬಾಕ್ಸಿಂಗ್‌ ಕ್ರೀಡಾಪಟು ನೀತು ಘಂಘಾಸ್‌ (Nitu Ghanghas) ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ (Women’s World Boxing Championships) ಚಿನ್ನದ ಪದಕ ಗೆದ್ದು ವಿಶ್ವದಾಖಲೆ ಮಾಡಿದ್ದಾರೆ.

    ಶನಿವಾರ ನವದೆಹಲಿಯಲ್ಲಿ ನಡೆದ ವಿಶ್ವಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ನಿತು 48 ಕೆಜಿ ವಿಭಾಗದಲ್ಲಿ ಮಂಗೋಲಿಯಾದ ಲುತ್ಸೈಖಾನ್ ಅಲ್ಟಾನ್‌ಸೆಟ್ಸೆಗ್ ವಿರುದ್ಧ ಜಯ ಸಾಧಿಸಿ, ವಿಶ್ವದಾಖಲೆ ಬರೆದಿದ್ದಾರೆ. ಇದನ್ನೂ ಓದಿ: ಪ್ರಶ್ನೆಪತ್ರಿಕೆಯಲ್ಲಿ ಕೊಹ್ಲಿ ಫೋಟೋ ನೋಡಿ ವಿದ್ಯಾರ್ಥಿಗಳು ಶಾಕ್!

    2-3ನೇ ಸುತ್ತಿನಲ್ಲಿ ಸಮತೋಲನ ಕಳೆದುಕೊಂಡರೂ ತಮ್ಮ ಆಕ್ರಮಣಕಾರಿ ಆಟದಿಂದ ಜಯ ಸಾಧಿಸಿದ್ದಾರೆ. ಈ ಮೂಲಕ 2023ರ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಬಾಕ್ಸರ್ ಎನಿಸಿಕೊಂಡಿದ್ದಾರೆ.

    ಆಕ್ರಮಣಕಾರಿ ಪ್ರದರ್ಶನ ನೀಡಿದ ನಿತು ಮೊದಲ ಸುತ್ತಿನಲ್ಲೇ 5-0 ಮುನ್ನಡೆ ಸಾಧಿಸಿದರು. 2ನೇ ಸುತ್ತಿನಲ್ಲಿ ಪಾಯಿಂಟ್ಸ್‌ಗಳನ್ನ 3-2ಕ್ಕೆ ಕಳೆದುಕೊಂಡರು. ಕೊನೆಯ 3 ನಿಮಿಷಗಳಲ್ಲಿ ನಿತು ರಕ್ಷಣಾತ್ಮಕ ಆಟವಾಡಿ ಕೊನೆಗೆ 3-2 ಅಂತರದಲ್ಲಿ ಗೆಲುವು ಸಾಧಿಸಿದರು. ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಮತ್ತೆ `ಸೂರ್ಯʼ ಉದಯಿಸುತ್ತೆ – ಮಿಸ್ಟರ್‌ 360ಗೆ ಯುವರಾಜ್‌ ಸಿಂಗ್‌ ಬೆಂಬಲ

    ಇದುವೆರೆಗೆ ಭಾರತ 11 ಬಾರಿ ಮಹಿಳಾ ವಿಶ್ವಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಬಾಚಿಕೊಂಡಿದೆ. ಅದರಲ್ಲಿ ಬಾಕ್ಸಿಂಗ್‌ ದಂಥಕತೆ ಮೇರಿ ಕೋಮ್‌ 6 ಬಾರಿ ‌(2002, 2005, 2006, 2008, 2010 ಮತ್ತು 2018) ವಿಶ್ವಚಾಂಪಿಯನ್‌ ಆಗಿದ್ದಾರೆ. ಸರಿತಾ ದೇವಿ (2006), ಆರ್‌.ಎಲ್ ಜೆನ್ನಿ (2006), ಕೆ.ಸಿ ಲೇಖಾ (2006) ಮತ್ತು ನಿಖತ್ ಜರೀನ್ (2022) ತಲಾ ಒಂದೊಂದು ಬಾರಿ ಚಾಂಪಿಯನ್‌ ಆಗಿದ್ದರು. ಇದೀಗ ಈ ದಿಗ್ಗಜರ ಸಾಲಿಗೆ ನಿತು ಘಂಘಾಸ್‌ ಸೇರಿದ್ದಾರೆ.

  • ಚೊಚ್ಚಲ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಬೆಳ್ಳಿ ಪದಕ ಗೆದ್ದ ಮಂಜು ರಾಣಿ

    ಚೊಚ್ಚಲ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಬೆಳ್ಳಿ ಪದಕ ಗೆದ್ದ ಮಂಜು ರಾಣಿ

    ಉಲಾನ್ ಉಡೆ (ರಷ್ಯಾ): ರಷ್ಯಾದಲ್ಲಿ ನಡೆಯುತ್ತಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನ 48 ಕೆಜಿ ತೂಕ ವಿಭಾಗದಲ್ಲಿ ಭಾರತದ ಮಹಿಳಾ ಬಾಕ್ಸರ್ ಮಂಜು ರಾಣಿ ಬೆಳ್ಳಿ ಪದಕಕ್ಕೆ ಕೊರಳೊಡಿದ್ದಾರೆ.

    ರಷ್ಯಾದ ಎಕ್ತರಿನಾ ಪಾಲ್ಟಸೆವ್ ವಿರುದ್ಧ ಭಾನುವಾರ ನಡೆದ ಅಂತಿಮ ಪಂದ್ಯದಲ್ಲಿ ಮಂಜು ರಾಣಿ 4-1 ಪಾಯಿಂಟ್ಸ್ ನಿಂದ ಸೋಲೊಪ್ಪಿದ್ದಾರೆ. ಈ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತರಾಗಿದ್ದಾರೆ. ಇದಕ್ಕೂ ಮುನ್ನ ಶನಿವಾರ ನಡೆದ ಸೆಮಿಫೈನಲ್‍ನಲ್ಲಿ ಮಂಜು ಥೈಲ್ಯಾಂಡ್‍ನ ಸಿ.ರಾಕಾಸತ್ ಅವರನ್ನು ಸೋಲಿಸಿದ್ದರು. ಆ ಪಂದ್ಯವನ್ನು ಮಂಜು 4-1 ಪಾಯಿಂಟ್ಸ್ ನಿಂದ ಗೆದಿದ್ದರು.  ಇದನ್ನೂ ಓದಿ: ಕಂಚಿನ ಪದಕಕ್ಕೆ ಮುತ್ತಿಟ್ಟ ಮೇರಿ ಕೋಮ್

    ಚೊಚ್ಚಲ ವಿಶ್ವ ಚಾಂಪಿಯನ್‍ಶಿಪ್‍ನಲ್ಲೇ ಅಂತಿ ಘಟ್ಟ ತಲುಪಿದ ಭಾರತದ ಎರಡನೇ ಬಾಕ್ಸರ್ ಎಂಬ ಹಿರಿಮೆಗೆ ಮಂಜು ರಾಣಿ ಭಾಜರಾಗಿದ್ದಾರೆ. ಜೊತೆಗೆ ಚೊಚ್ಚಲ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಮಂಜು ರಾಣಿ ಪಾತ್ರರಾದರು. 2010ರಲ್ಲಿ ಎಂ.ಸಿ.ಮೇರಿ ಕೋಮ್ ಈ ಸಾಧನೆ ಮಾಡಿದ್ದರು.

    ಹರಿಯಾಣದ ರೋಹ್ಟಕ್ ಮೂಲದ ಮಂಜು ರಾಣಿ ಪ್ರತಿಷ್ಠಿತ ಸ್ಟ್ರಾನ್ಜಾ ಸ್ಮಾರಕ ಪಂದ್ಯಾವಳಿಯಲ್ಲಿ ಈ ವರ್ಷ ಬೆಳ್ಳಿ ಪದಕ ಗೆದ್ದಿದ್ದರು. ಅವರ ತಂದೆ ಗಡಿ ಭದ್ರತಾ ಪಡೆಯ ಅಧಿಕಾರಿಯಾಗಿದ್ದರು. ಆದರೆ ಕ್ಯಾನ್ಸರ್ ನಿಂದ 2010ರಲ್ಲಿ ನಿಧನರಾಗಿದ್ದಾರೆ.

    ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಭಾರತವು 4 ಪದಕಗಳನ್ನು ಗಳಿಸಿದೆ. ಇದಕ್ಕೂ ಮುನ್ನ ಎಂ.ಸಿ ಮೇರಿ ಕೋಮ್, ಜಮುನಾ ಬೊರೊ ಮತ್ತು ಲವ್ಲಿನಾ ಬೊರ್ಗೊಹೈನ್ ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

  • 35ನೇ ವಯಸ್ಸಿನಲ್ಲಿ 6ನೇ ಚಿನ್ನದ ಪದಕಕ್ಕೆ ಮುತ್ತಿಟ್ಟ ಮೇರಿ ಕೋಮ್

    35ನೇ ವಯಸ್ಸಿನಲ್ಲಿ 6ನೇ ಚಿನ್ನದ ಪದಕಕ್ಕೆ ಮುತ್ತಿಟ್ಟ ಮೇರಿ ಕೋಮ್

    ನವದೆಹಲಿ: ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ ಭಾರತದ ಸ್ಟಾರ್ ಬಾಕ್ಸರ್ ಮೇರಿ ಕೋಮ್ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಈ ಮೂಲಕ 6ನೇ ಬಾರಿಗೆ ಚಿನ್ನದ ಜಯಿಸಿ ಅತಿಹೆಚ್ಚು ವಿಶ್ಚ ಚಾಂಪಿಯನ್‍ಶಿಪ್ ಜಯಿಸಿದ ದಾಖಲೆ ಹೊಂದಿರುವ ಕ್ಯೂಬಾ ದಂತಕಥೆ ಫೆಲಿಕ್ಸ್ ಸ್ಯಾವನ್ ದಾಖಲೆಯನ್ನು ಸರಿಗಟ್ಟಿದ್ದಾರೆ.

    ವಿಶ್ವ ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‍ಶಿಪ್‍ನ 45 ಕೆಜಿ ವಿಭಾಗದಲ್ಲಿ ಗುರುವಾರ ಫೈನಲ್ ಪ್ರವೇಶ ಮಾಡಿದ್ದ ಮೇರಿಕೋಮ್ ಇಂದು ಉಕ್ರೇನ್ ದೇಶದ ಎಚ್ ಓಖೋಟಾ ವಿರುದ್ಧ 5-0 ಅಂಕಗಳಿಂದ ಗೆಲುವು ದಾಖಲಿಸಿದರು.

    ವಿಶ್ವ ಬಾಕ್ಸಿಂಗ್ ಚಾಂಪಿಯನ್‍ನಲ್ಲಿ ಚಿನ್ನ ಗೆಲ್ಲುವ ಮೂಲಕ 6 ಚಿನ್ನ, 1 ಬೆಳ್ಳಿ ಪದಕ ಪಡೆದಿದ್ದಾರೆ. 2006 ರಲ್ಲಿ ಸ್ವದೇಶದಲ್ಲೇ ಚಿನ್ನದ ಪದಕ ಗೆದ್ದಿದ್ದ ಮೇರಿ ಕೋಮ್ 2ನೇ ಬಾರಿಗೆ ತವರಿನ ಅಭಿಮಾನಿಗಳ ಮುಂದೇ ಈ ಸಾಧನೆ ಮಾಡಿದ್ದಾರೆ. 2010 ರಲ್ಲಿ 48 ಕೆಜಿ ವಿಭಾಗದಲ್ಲಿ ಭಾಗವಹಿಸಿದ್ದ ಮೇರಿ ಕೋಮ್ ಚಿನ್ನದ ಪದಕ ಪಡೆದಿದ್ದರು.

    ಈ ಕುರಿತು ಪಂದ್ಯದ ಬಳಿಕ ಮಾತನಾಡಿದ ಮೇರಿ ಕೋಮ್, ತನ್ನ ಈ ಸಾಧನೆಯನ್ನು ಹಾಗೂ ಪದಕವನ್ನು ದೇಶಕ್ಕೆ ಅರ್ಪಿಸುವುದಾಗಿ ತಿಳಿಸಿದರು. ಟೂರ್ನಿಯ ಸೆಮಿ ಫೈನಲ್‍ನಲ್ಲಿ ಗುರುವಾರ ಉತ್ತರ ಕೊರಿಯಾದ ಕಿಮ್ ಹ್ಯಾಂಗ್ ಮಿ ಅವರನ್ನ ಎದುರಿಸಿದ್ದ ಗೆಲುವು ಪಡೆದಿದ್ದ ಮೇರಿ ಕೋಮ್ ಫೈನಲ್ ಪ್ರವೇಶಿಸಿದ್ದರು.