Tag: ವಿಶ್ವ ಪರಿಸರ ದಿನ

  • ವಿಶ್ವ ಪರಿಸರ ದಿನಾಚರಣೆಯಂದೇ ಅರಣ್ಯಾಧಿಕಾರಿಗಳಿಗೆ ಡಿಕೆಶಿ ಕ್ಲಾಸ್

    ವಿಶ್ವ ಪರಿಸರ ದಿನಾಚರಣೆಯಂದೇ ಅರಣ್ಯಾಧಿಕಾರಿಗಳಿಗೆ ಡಿಕೆಶಿ ಕ್ಲಾಸ್

    – ಕೇವಲ ಫೋಟೋಗೆ ಪೋಸ್ ಕೊಡಲು ಗಿಡ ನೆಡುವುದಲ್ಲ

    ಬೆಂಗಳೂರು: ಇಂದು ವಿಶ್ವ ಪರಿಸರ ದಿನಾಚರಣೆ (World Environment) ಯಾಗಿದ್ದು, ಈ ದಿನದಂದೇ ಅರಣ್ಯಾಧಿಕಾರಿಗಳಿಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಕ್ಲಾಸ್ ತೆಗೆದುಕೊಂಡಿದ್ದಾರೆ.

    ಇಂದು ಬ್ಯಾಟರಾಯನಪುರ ವಿಧಾನ ಸಭಾ ಕ್ಷೇತ್ರದ ಥಣಿಸಂದ್ರ ರಾಚೇನಹಳ್ಳಿಗೆ ಕೆರೆ ಬಳಿ ಬಿಬಿಎಂಪಿಯಿಂದ ಗಿಡ ನೆಡುವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಪಾಲಿಕೆ ಅಧಿಕಾರಿಗಳು ಪಾರ್ಕ್ ಮಧ್ಯದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇದರಿಂದ ಸಿಟ್ಟಿಗೆದ್ದ ಡಿಕೆಶಿ, ಬಿಬಿಎಂಪಿ (BBMP) ಮಹಿಳಾ ಅಧಿಕಾರಿಗೆ ಬೈದರು. ಕಾಮನ್ ಸೆನ್ಸ್ ಇರಬೇಕು ಎಲ್ಲಿ ಗಿಡ ನಡಬೇಕು ಅಂತ ಹೇಳಿದರು. ಪಾರ್ಕ್ ನಲ್ಲಿ ಗಿಡ ನಡುವ ಕಾರ್ಯಕ್ರಮ ಮಾಡಿದ್ದಕ್ಕೆ ಡಿಕೆಶಿ ಬಳಿಕ ನಡೆದ ತಮ್ಮ ಭಾಷಣದಲ್ಲೂ ಅಸಮಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: 275 ಮಂದಿ ಸಾವನ್ನಪ್ಪಿದ ದುರಂತದ ಬೆನ್ನಲ್ಲೇ ಒಡಿಶಾದಲ್ಲಿ ಹಳಿ ತಪ್ಪಿದ ಮತ್ತೊಂದು ರೈಲು!

    ಅರಣ್ಯ ಇಲಾಖೆಯವರು ನನ್ನ ಕೈಯಲ್ಲಿ ಪಾರ್ಕ್ ನಲ್ಲಿ ಗಿಡ ಹಾಕಿಸಿದ್ದಾರೆ. ಇದು ತಪ್ಪು, ಗಿಡವನ್ನು ಪಾರ್ಕ್‍ನಲ್ಲಿ ಹಾಕಿಸುವುದಲ್ಲ. ಅದರಲ್ಲೂ ನೀವು ಅರಣ್ಯ ಇಲಾಖೆಯವರು. ಪಾರ್ಕ್ ನಲ್ಲಿ ಚೆನ್ನಾಗಿರುವ ಜಾಗದಲ್ಲಿ ಗಿಡ ಹಾಕಿಸುವುದಲ್ಲ. ಪಾರ್ಕ್ ನಲ್ಲಿ ಖಾಲಿ ಇರುವ ಜಾಗದಲ್ಲಿ ಹಾಕಿಸಬೇಕಿತ್ತು. ಗಿಡ ಹಾಕಬೇಕಾದ್ರೆ ಯೋಚನೆ ಮಾಡಬೇಕು. ಗಿಡಕ್ಕೆ ನನ್ನ ಹೆಸರು, ಕೃಷ್ಣ ಬೈರೇಗೌಡ ಅವರ ಹೆಸರು ಹಾಕಿದ್ದೀರಾ. ಗಿಡಗಳಿಗೆ ಏಕೆ ನಮ್ಮ ಹೆಸರು ಇಟ್ಟಿದ್ದೀರಿ. ನಾವು ಬಂದು ಗಿಡ ನೋಡ್ಕೊತ್ತೀವಾ?. ಅದರ ಬದಲಿಗೆ ಶಾಲಾ ಮಕ್ಕಳ ಹೆಸರು ಇಡಿ. ಪಾರ್ಕ್‍ಗಳಿಗಿಂತ ಹೆಚ್ಚಾಗಿ ರಸ್ತೆ ಸೇರಿದಂತೆ ಖಾಲಿ ಜಾಗದಲ್ಲಿ ಗಿಡ ಹಾಕಿ. ಮಕ್ಕಳು ಗಿಡಗಳನ್ನು ನೋಡಿಕೊಳ್ಳುತ್ತಾರೆ ಎಂದು ಹೇಳಿದರು.

    ಪರಿಸರಕ್ಕೆ ನಾವು ಅಡ್ಜಸ್ಟ್ ಆಗಿಲ್ಲ, ಪರಿಸರವೇ ನಮಗೆ ಅಡ್ಜಸ್ಟ್ ಆಗಿದೆ. ಬಹಳ ಪ್ಯಾಷನ್ ನಿಂದ ಬೆಂಗಳೂರು ಅಭಿವೃದ್ಧಿ ಮಾಡಬೇಕು ಅನ್ನೋದು ನನ್ನ ಉದ್ದೇಶ ಎಂದರು. ಇದೇ ವೇಳೆ ಬಿಬಿಎಂಪಿ ಅರಣ್ಯ ಇಲಾಖೆ ಐಎಫ್‍ಎಸ್ ಅಧಿಕಾರಿ ಸರಿನಾ ಸಿಕ್ಕಲಿಗಾರ್ ಮೇಲೆ ಗರಂ ಆದ ಡಿಕೆಶಿ, ನಿಮ್ಮ ಕೆಲಸ ಸರಿಯಿಲ್ಲ, ಬದಲಾಯಿಸಿಕೊಳ್ಳಿ. ಇಂದು ನನ್ನ ಕೈಯಲ್ಲಿ ಗಿಡ ನೆಡಿಸಿದ್ದೀರಿ, ಅದು ಸಂಪೂರ್ಣ ಅವೈಜ್ಞಾನಿಕ. ಕೇವಲ ಫೆÇೀಟೋಗೆ ಪೋಸ್ ಕೊಡಲು ಗಿಡ ನೆಡುವುದು ನನಗೆ ಇಷ್ಟ ಇಲ್ಲ. ನಾವು ಮಾಡುವ ಕೆಲಸ ಶಾಶ್ವತವಾಗಿ ಇರಬೇಕು, ಹೊರತು ತೋರಿಕೆಗೆ ಇರಬಾರದು. ಮರ ಇರುವ ಕಡೆ ಗಿಡ ನೆಡಿಸುವುದಲ್ಲ, ಮರ ಇಲ್ಲದ ಕಡೆ ಗಿಡ ನೆಡಿಸಬೇಕು. ಎಷ್ಟು ಅಂತರಕ್ಕೆ ಗಿಡ ಹಾಕಬೇಕು, ಯಾವ ಗಿಡ ಹಾಕಬೇಕು ಅನ್ನೋದು ಗೊತ್ತಿರಬೇಕು. ನಾನು ನನ್ನ ಊರಿನಲ್ಲಿ ಗಿಡಗಳನ್ನ ಬೆಳಸಿದ್ದೀನಿ, ಹೇಗೆ ಬೆಳಸಿಬೇಕು ಅನ್ನೋದು ನನಗೆ ಗೊತ್ತಿದೆ. ಸುಮ್ಮನೆ ತೋರಿಕೆಗೆ ಪರಿಸರ ದಿನ ಆಚರಣೆ ಮಾಡೋದು ಬಿಡಿ ಎಂದರು.

  • ಗಗನಸಖಿಯ ಸಮಾಜಮುಖಿ ಕಾಯಕ – ಗಗನದಿಂದ ಬೀಜದುಂಡೆ ಬಿತ್ತನೆ

    ಗಗನಸಖಿಯ ಸಮಾಜಮುಖಿ ಕಾಯಕ – ಗಗನದಿಂದ ಬೀಜದುಂಡೆ ಬಿತ್ತನೆ

    ಚಿಕ್ಕಬಳ್ಳಾಪುರ: ಇಂದು ವಿಶ್ವ ಪರಿಸರ ದಿನಾಚರಣೆ. ಪರಿಸರ ದಿನ ಅಂಗವಾಗಿ ಎಲ್ಲೆಲ್ಲೂ ಗಿಡಗಳನ್ನು ನೆಡುವುದರ ಮೂಲಕ ಆಚರಣೆ ಮಾಡಲಾಗುತ್ತಿದೆ. ಆದರೆ ಇಲ್ಲೊಬ್ಬರು ಗಗನಸಖಿ ಗಗನದಿಂದಲೇ ಬೀಜ ಬಿತ್ತನೆ ಮಾಡಿ ಗಮನಸೆಳೆದಿದ್ದಾರೆ.

    ಸಿಲಿಕಾನ್ ಸಿಟಿಯ ಬೆಡಗಿ, ಮಾಜಿ ಗಗನ ಸಖಿ, ಗಗನದಿಂದಲೇ ಪ್ಯಾರಾಗ್ಲೈಡಿಂಗ್ ಮೂಲಕ ಪಂಚಗಿರಿಗಳ ಸಾಲಲ್ಲಿ ಬೀಜದುಂಡೆ ಬಿತ್ತನೆ ಮಾಡಿದ್ದಾರೆ. ಈ ಮೂಲಕ ವಿಶೇಷವಾಗಿ ಪರಿಸರ ದಿನಾಚರಣೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಹತ್ತಾರು ವರ್ಷಗಳ ಕಾಲ ಗಗನಸಖಿಯಾಗಿ ಕೆಲಸ ಮಾಡಿದ್ದ ಸಕ್ರಿಯಾ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕಿ ಅನಿತಾ ರಾವ್ ಭಾನುವಾರ ಚಿಕ್ಕಬಳ್ಳಾಪುರ ತಾಲೂಕಿನ ಪಂಚಗಿರಿಗಳಲ್ಲಿ ಪ್ಯಾರಾಮೋಟರಿಂಗ್ ಮೂಲಕ ಬೀಜದುಂಡನೆ ಬಿತ್ತನೆ ಮಾಡಿದರು. ಇದನ್ನೂ ಓದಿ: ಲಂಕಾಗೆ 3.3 ಟನ್‌ ಔಷಧ ಪೂರೈಕೆ – ಭಾರತ ಸರ್ಕಾರದಿಂದ ನೆರವು

    ಹೌದು, ಗಗನಸಖಿಯಾಗಿ ಕೆಲಸ ಮಾಡಿ, ಸಾಂಸಾರಿಕ ಜೀವನಕ್ಕೆ ಕಾಲಿಡುವ ಸಂದರ್ಭ ಗಗನಸಖಿ ಕೆಲಸಕ್ಕೆ ಗುಡ್‌ಬೈ ಹೇಳಿದರು. ಬಳಿಕ ಅನಿತಾ ಸಕ್ರಿಯಾ ಚಾರಿಟೇಬಲ್ ಟ್ರಸ್ಟ್ ಮೂಲಕ ಸಮಾಜಮುಖಿ ಕೆಲಸದ ಕಡೆ ಮುಖ ಮಾಡಿದ್ದಾರೆ. ಇಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಬ್ರಹ್ಮಗಿರಿ, ಸ್ಕಂದಗಿರಿ, ದಿಬ್ಬಗಿರಿ, ನಂದಿಗಿರಿಧಾಮಗಳಲ್ಲಿ ಸುಮಾರು 70,000 ಬೀಜದ ಉಂಡೆಗಳನ್ನು ಹಾಕುವ ಮೂಲಕ ಬರದ ನಾಡಿನ ಬೆಟ್ಟ ಗುಡ್ಡಗಳಲ್ಲಿ ಕಾಡು ಬೆಳೆಸುವ ಕಾಯಕಕ್ಕೆ ಮುಂದಾಗಿದ್ದಾರೆ.

    ಈ ವೇಳೆ ಮಾತನಾಡಿದ ಅನಿತಾ ರಾವ್, ನಾವು ಪರಿಸರ ಬಳಸಿಕೊಳ್ಳುವುದರ ಜೊತೆಗೆ ಪರಿಸರಕ್ಕೆ ಕೊಡುಗೆಯನ್ನೂ ನೀಡಬೇಕು. ಅತಿ ಕಷ್ಟಕರ ಜಾಗಗಳಲ್ಲಿ ಅಂದರೆ, ಬೆಟ್ಟ ಗುಡ್ಡಗಳಲ್ಲಿ ಯಾರೂ ಹೋಗಿ ಗಿಡಗಳನ್ನು ನೆಡಲು ಸಾಧ್ಯವಿಲ್ಲ. ಹೀಗಾಗಿ ಪ್ಯಾರಾಮೋಟರ್, ಹೆಲಿಕಾಪ್ಟರ್, ಮೂಲಕ ಸೀಡ್ ಬಾಲ್‌ಗಳನ್ನು ಹಾಕಿ, ಗಿಡ ನೆಡಲು ಸಾಧ್ಯವಿದೆ. ಇಂದು ಪುಣೆಯಿಂದ ಪ್ಯಾರಾಮೋಟರ್ ತರಿಸಿ ಬಿತ್ತನೆ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಜೂಮ್ ಕ್ಲಾಸ್ ಮಿಸ್ ಮಾಡ್ದೆ ಹಾಜರಾಗಿದ್ದ ಬೆಕ್ಕು – ಹ್ಯಾಟ್ ಕೊಟ್ಟ ವಿಶ್ವವಿದ್ಯಾಲಯ

    ಅರಣ್ಯ ಇಲಾಖೆ ಸಹಯೋಗದೊಂದಿಗೆ 7 ಬಗೆಯ ಸುಮಾರು 100 ಕೆಜಿ ಬೀಜಗಳನ್ನು ಇಂದು ಬಿತ್ತನೆ ಮಾಡಲಾಗಿದೆ. 10 ವರ್ಷ ಗಗನಸಖಿಯಾಗಿ ಕೆಲಸ ಮಾಡಿರುವ ನಾನು ಈಗ ಮನೆಯಲ್ಲೇ ಕುಳಿತು ಕಾಲ ಕಳೆಯುವ ಬದಲು ಇಂತಹ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದೇನೆ ಎಂದರು.

  • ವಿಶ್ವ ಪರಿಸರ ದಿನದಂದು ಗಾಂಜಾ ಗಿಡ ನೆಟ್ಟ ಪುಂಡರು

    ವಿಶ್ವ ಪರಿಸರ ದಿನದಂದು ಗಾಂಜಾ ಗಿಡ ನೆಟ್ಟ ಪುಂಡರು

    ತಿರುವನಂತಪುರಂ: ವಿಶ್ವ ಪರಿಸರ ದಿನದಂದು ಎಲ್ಲರೂ ಕೂಡ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಸಿ ನೆಡುವ ಮೂಲಕ ಆಚರಿಸಿರುವುದನ್ನು ನೋಡಿದ್ದೇವೆ. ಆದರೆ ಕೇರಳದಲ್ಲೊಂದು ಪುಂಡರ ಗುಂಪು ಗಾಂಜಾಗಿಡವನ್ನು ನೆಟ್ಟು ಪರಿಸರ ದಿನ ಆಚರಿಸಿ ಸುದ್ದಿಯಾಗಿದೆ.

    ಕೇರಳದ ಕೊಲ್ಲಂ ಜಿಲ್ಲೆಯ ಕಂಡಚಿರಾ ಎಂಬ ಗ್ರಾಮದಲ್ಲಿ ಜೂನ್ 5 ಪರಿಸರದಿನದಂದು ಪುಂಡರ ಗುಂಪು ತಮ್ಮ ಬೀದಿಯಲ್ಲಿ ಗಾಂಜಾ ಗಿಡಗಳನ್ನು ನೆಟ್ಟು, ನಾವು ಇಷ್ಟಪಡುವ ಗಿಡ ಇದಾಗಿರುವ ಕಾರಣ ಅದನ್ನೇ ನೆಟ್ಟಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಅದರ ಬಳಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದನ್ನೂ ಓದಿ: ಮೀನು ಸಾಗಾಟದ ಲಾರಿಯಲ್ಲಿ 200 ಕೆಜಿ ಗಾಂಜಾ ಸಾಗಾಟ

    ಈ ಕುರಿತು ತಿಳಿಯುತ್ತಿದ್ದಂತೆ ಅಬಕಾರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಸುಮಾರು 60 ಸೆಂ.ಮೀನಷ್ಟು ಉದ್ದದ ಹಲವು ಗಾಂಜಾ ಗಿಡಗಳನ್ನು ಬೆಳೆಸಿರುವುದು ಕಂಡುಬಂದಿದೆ. ಕೂಡಲೇ ಎಲ್ಲಾ ಗಿಡಗಳನ್ನು ಅಧಿಕಾರಿಗಳು ಕಿತ್ತಿದ್ದಾರೆ. ಯುವಕರ ಗುಂಪೊಂದು ಗಾಂಜಾ ವ್ಯಸನದ ಗೀಳಿನಿಂದ ಈ ರೀತಿ ಕೃತ್ಯವೆಸಗಿದ್ದು, ಪರಿಸರದಿನದ ಅಂಗವಾಗಿ ರಸ್ತೆ ಬದಿಯಲ್ಲಿ ಗಾಂಜಾ ಗಿಡಗಳನ್ನು ನೆಟ್ಟು ಫೋಟೋ ತೆಗೆದುಕೊಂಡಿದ್ದಾರೆ. ಇದುವರೆಗೂ ಆ ಯುವಕರು ಪತ್ತೆಯಾಗಿಲ್ಲ. ಎಂದು ಕೊಲ್ಲಂ ಅಬಕಾರಿ ಸ್ಪೇಷಲ್ ಸ್ವ್ಯಾಡ್ ನ ಸರ್ಕಲ್ ಇನ್ಸ್‍ಪೆಕ್ಟರ್ ನೌಷಾದ್ ಅವರು ಮಾಹಿತಿ ನೀಡಿದ್ದಾರೆ.

    ಇಲ್ಲಿನ ಮಂಗಾದ್ ಬೈಪಸ್ ಪ್ರದೇಶದಲ್ಲೂ ಗಾಂಜಾ ಗಿಡ ನೆಟ್ಟಿರುವ ಬಗ್ಗೆ ಮಾಹಿತಿ ಬಂದಿದೆ. ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಯಾವುದೇ ಗಿಡ ಪತ್ತೆಯಾಗಿಲ್ಲ. ಆ ಸಂಬಂಧ ಆರೋಪಿಗಳನ್ನು ಕೂಡಲೇ ಬಂಧಿಸುವುದಾಗಿ ತಿಳಿಸಿದರು. ಈ ಹಿಂದೆ ಮನ್ನರ್ಕಡ್ ಅಬಕಾರಿ ವಲಯದ ಅಧಿಕಾರಿಗಳು ದಾಳಿ ನಡೆಸಿ ಕಾಡಿನಲ್ಲಿ ಬೆಳೆದಿದ್ದ 120 ಗಾಂಜಾ ಗಿಡಗಳನ್ನು ನಾಶಪಡಿಸಿದ್ದರು.

  • ವಿಶ್ವಪರಿಸರ ದಿನದಂದೇ ಬೆಸ್ಕಾಂ ಸಿಬ್ಬಂದಿಯಿಂದ ಮರಗಳ ಮಾರಣಹೋಮ

    ವಿಶ್ವಪರಿಸರ ದಿನದಂದೇ ಬೆಸ್ಕಾಂ ಸಿಬ್ಬಂದಿಯಿಂದ ಮರಗಳ ಮಾರಣಹೋಮ

    ಕೋಲಾರ: ಇಂದು ವಿಶ್ವ ಪರಿಸರ ದಿನ. ಎಲ್ಲೆಡೆ ಗಿಡ-ಮರಗಳನ್ನ ನೆಟ್ಟು ಪರಿಸರ ದಿನಾಚರಣೆ ಆಚರಣೆ ಮಾಡುತ್ತಿದ್ದರೆ, ಕೋಲಾರದಲ್ಲಿ ಈ ದಿನದಂತೆ ಬೆಸ್ಕಾಂ ಅಧಿಕಾರಿಗಳು ಮರಗಳ ಮಾರಣ ಹೋಮ ಮಾಡಿರುವ ಘಟನೆ ನಡೆದಿದೆ.

    ಮುಳಬಾಗಿಲು ತಾಲೂಕಿನ ಮೇಲ್‍ತಾಯಲೂರಿನಿಂದ ತಾಯಲೂರಿಗೆ ಇರುವ ರಸ್ತೆ ಬದಿಯಲ್ಲಿರುವ ಮರಗಳನ್ನು ಬೆಸ್ಕಾಂ ಸಿಬ್ಬಂದಿ ನಿರ್ದಾಕ್ಷಣ್ಯವಾಗಿ ಕಡಿದು ಹಾಕಿದ್ದಾರೆ. ಸುಮಾರು ವರ್ಷಗಳಿಂದ ಅರಣ್ಯ ಇಲಾಖೆಯವರು ಬೆಳಸಿದ್ದ ಮರಗಳನ್ನು ವಿದ್ಯುತ್ ತಂತಿಗೆ ತಗುಲುತ್ತವೆ ಎನ್ನುವ ಒಂದೇ ಕಾರಣಕ್ಕೆ ಮರಗಳನ್ನು ಕಡಿದು ಹಾಕಿದ್ದಾರೆ. ರಸ್ತೆಯ ಎರಡೂ ಬದಿಯಲ್ಲಿ ಬೆಳೆಸಲಾಗಿದ್ದ ಸುಮಾರು 150ಕ್ಕೂ ಹೆಚ್ಚು ಮರಗಳನ್ನು ಈ ರೀತಿ ಕಡಿದು ಹಾಕಲಾಗಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

    ಬೆಸ್ಕಾಂನವರು ಸಾಮಾನ್ಯವಾಗಿ ವಿದ್ಯುತ್ ತಂತಿಗಳಿಗೆ ತಾಗುವ ಮರದ ರೆಂಬೆಗಳನ್ನು ಮಾತ್ರ ಕತ್ತರಿಸುತ್ತಾರೆ. ಆದರೆ ಇಲ್ಲಿ ಮರಗಳನ್ನು ಬುಡ ಸಮೇತ ಕಡಿದು ಹಾಕಿರುವುದು ಪರಿಸರ ಪ್ರೇಮಿಗಳ ವಿರೋಧಕ್ಕೆ ಕಾರಣವಾಗಿದೆ. ಅಲ್ಲದೆ ಈ ಬಗ್ಗೆ ಅರಣ್ಯ ಇಲಾಖೆಯವರು ಸಂಬಂಧಪಟ್ಟವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಪರಿಸರವಾದಿಗಳು ಮತ್ತು ಸ್ಥಳೀಯರು ಆಗ್ರಹಿಸಿದ್ದಾರೆ.

    ಪರಿಸರ ದಿನದ ಆಚರಣೆ:
    ಇತ್ತ ವಿಶ್ವ ಪರಿಸರ ದಿನದ ಅಂಗವಾಗಿ ಕೋಲಾರ ನಗರದ ವಿವಿಧೆಡೆ ಹಲವು ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನ ಆಚರಣೆ ಮಾಡಲಾಗಿದೆ. ಮೊದಲಿಗೆ ಎರಡನೇ ಅಪರ ಜಿಲ್ಲಾ ನ್ಯಾಯಾಧೀಶೆ ಬಿ.ಎಸ್.ರೇಖಾ ಹಾಗೂ ಜಿಲ್ಲಾಧಿಕಾರಿ ಜೆ.ಮಂಜುನಾಥ್ ನಗರದ ಕೋರ್ಟ್ ಆವರಣದಲ್ಲಿ ಗಿಡಕ್ಕೆ ಪೂಜೆ ಮಾಡಿ, ಹತ್ತಾರು ಗಿಡಗಳನ್ನ ನೆಡುವ ಮೂಲಕ ಪರಿಸರ ಜಾಗೃತಿ ಹಾಗೂ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದರು.

    ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಗರದ ರೈಲ್ವೇ ನಿಲ್ದಾಣದ ಸಮೀಪ ಜಿಲ್ಲಾಧಿಕಾರಿ ಜೆ.ಮಂಜುನಾಥ್, ಸಿಇಓ ಜಗದೀಶ್, ಎಸ್‍ಪಿ ರೋಹಿಣಿ ಕಟೋಜ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ವಿದ್ಯಾರ್ಥಿಗಳು ನೂರಾರು ಗಿಡಗಳನ್ನ ನೆಡುವ ಮೂಲಕ ಪರಿಸರ ದಿನವನ್ನ ಆಚರಣೆ ಮಾಡಲಾಗಿದೆ. ಇದೆ ವೇಳೆ ನಗರದ ಹಲವೆಡೆ ವಿವಿಧ ಸಂಘಟನೆಗಳ ಮುಖಂಡರು ಗಿಡಗಳನ್ನ ನೆಟ್ಟು ನಗರ ವಾಸಿಗಳಲ್ಲಿ ಪರಿಸರ ಜಾಗೃತಿ ಮೂಡಿಸಿದರು.

  • ಮೊಬೈಲ್‍ನಲ್ಲೇ ಮುಳುಗಿದ ನೂತನ ಸಂಸದ ತೇಜಸ್ವಿ ಸೂರ್ಯ

    ಮೊಬೈಲ್‍ನಲ್ಲೇ ಮುಳುಗಿದ ನೂತನ ಸಂಸದ ತೇಜಸ್ವಿ ಸೂರ್ಯ

    ಬೆಂಗಳೂರು: ರಾಜ್ಯ ಸರ್ಕಾರದ ಅರಣ್ಯ ಇಲಾಖೆ ವತಿಯಿಂದ ಆಯೋಜನೆಗೊಂಡಿದ್ದ ಪರಿಸರ ಕಾರ್ಯಕ್ರಮದಲ್ಲಿ ನೂತನ ಸಂಸದ ತೇಜಸ್ವಿ ಸೂರ್ಯ ಮೊಬೈಲಿನಲ್ಲಿ ಮುಳುಗಿದ್ದು ಚರ್ಚೆಗೆ ಗ್ರಾಸವಾಗಿದೆ.

    ಮಲ್ಲೇಶ್ವರಂನ ಚೌಡಯ್ಯ ಮೆಮೋರಿಯಲ್ ಹಾಲ್‍ನಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮ ವೇಳೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ವೇದಿಕೆ ಮೇಲೆ ಇದ್ದರೂ ಮೊಬೈಲ್ ಚಾಟಿಂಗ್ ನಲ್ಲಿ ಬ್ಯುಸಿಯಾಗಿದ್ದರು.

    ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕಾರದ ಬಳಿಕ ವೇದಿಕೆ ಮೇಲೆ ಕುಳಿತು ಮೊಬೈಲ್‍ನಲ್ಲಿ ಚಾಟ್ ಮಾಡುತ್ತಾ ಕುಳಿತ್ತಿದ್ದರು. ವೇದಿಕೆಯಲ್ಲಿ ಗಣ್ಯರು ಮಾತನಾಡುತ್ತಿದ್ದರೂ ತೇಜಸ್ವಿ ಸೂರ್ಯ ಮೊಬೈಲ್ ನೋಡುತ್ತಾ ಮಗ್ನರಾಗಿದ್ದರು.

    ಈ ಕಾರ್ಯಕ್ರಮಕ್ಕೆ ಉಪ ಸಭಾಪತಿ ಧರ್ಮೇಗೌಡ, ಶಾಸಕ ಅಶ್ವಥ್ ನಾರಾಯಣ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿದ್ದರು.