Tag: ವಿಶ್ವ ದಾಖಲೆ

  • 12 ಸೆಕೆಂಡ್‍ನಲ್ಲಿ 100 ಮೀಟರ್ ಸ್ಕೇಟಿಂಗ್ – ಬೆಳಗಾವಿಯಲ್ಲಿ ಮಾಸ್ಟರ್ ಅಭಿಷೇಕ್ ಮ್ಯಾಜಿಕ್

    12 ಸೆಕೆಂಡ್‍ನಲ್ಲಿ 100 ಮೀಟರ್ ಸ್ಕೇಟಿಂಗ್ – ಬೆಳಗಾವಿಯಲ್ಲಿ ಮಾಸ್ಟರ್ ಅಭಿಷೇಕ್ ಮ್ಯಾಜಿಕ್

    – ಬಾಗಲಕೋಟೆ ಚಿಣ್ಣರಿಂದ ಪವರ್ ಪ್ಲಾಂಟ್ ಪ್ರಸೆಂಟ್

    ಬೆಳಗಾವಿ\ಬಾಗಲಕೋಟೆ: ಹಲವು ವಿಶ್ವ ದಾಖಲೆಗಳನ್ನು ಮಾಡಿರೋ ಗಡಿನಾಡಿನ ಖ್ಯಾತ ಸ್ಕೇಟಿಂಗ್ ಪಟು ಮಾಸ್ಟರ್ ಅಭಿಷೇಕ್ ನಾವಲೆ ಇದೀಗ ಮತ್ತೊಂದು ವಿಶ್ವ ದಾಖಲೆ ಮಾಡಿದ್ದಾರೆ. ಈ ಮೂಲಕ ಹಿಂದೆ ಇದ್ದ ಎಲ್ಲಾ ದಾಖಲೆ ಮುರಿದಿದ್ದಾರೆ. ಅತ್ತ ಬಾಗಲಕೋಟೆಯಲ್ಲಿ ಚಿಣ್ಣರ ಕೈಯಲ್ಲಿ ಅರಳಿದ ಬಗೆ ಬಗೆಯ ವಿಜ್ಞಾನ ಮಾದರಿ, ವಸ್ತುಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

    ಹೀಗೆ ಈತ ಕಾಲಿಗೆ ಚಕ್ರ ಕಟ್ಕೊಂಡು ಓಡೋಕೆ ಶುರು ಮಾಡಿದರೆ ಎಲ್ಲಾ ರೆಕಾರ್ಡ್ ಗಳು ಬ್ರೇಕ್. ಅಂದು ಕೊಂಡಿದ್ದನ್ನು ಸಾಧಿಸಿಯೇ ಬಿಡುವ ಛಲವಂತ. ಬೆಳಗಾವಿಯ ಮಾಸ್ಟರ್ ಅಭಿಷೇಕ್ ನಾವಲೆ, ಖಾನಾಪುರ ರಸ್ತೆ ಹಾಗೂ ಕೆಎಲ್‍ಇ ಸಂಸ್ಥೆಯ ಸ್ಕೇಟಿಂಗ್ ರಿಂಗ್ ನಲ್ಲಿ 100 ಮೀಟರ್ ಗುರಿಯನ್ನು ಕೇವಲ 12 ಸೆಕೆಂಡ್ ನಲ್ಲಿ ಮುಟ್ಟಿ ಸಾಧನೆ ಮಾಡಿದ್ದಾರೆ. ಈ ಮೂಲಕ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ವಿಶ್ವದಾಖಲೆಗೆ ಯತ್ನಿಸಿದ್ದಾರೆ. ಈ ದಾಖಲೆಯನ್ನು ರೆಕಾರ್ಡ್ ಮಾಡಿಕೊಂಡಿರುವ ಕೋಚ್ ಹಾಗೂ ಇತರರು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಗೆ ಕಳುಹಿಸಿದ್ದಾರೆ.

    ಇನ್ನು ಇತ್ತ ಬಾಗಲಕೋಟೆಯ ಬಸವೇಶ್ವರ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ನಡೆದ ಪುಟ್ಟ ಮಕ್ಕಳ ಟ್ಯಾಲೆಂಟ್ ಎಕ್ಸ್ ಪೋ ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು. ಆಟ ಪಾಠ ಎಂದು ಹಾಯಾಗಿ ದಿನಗಳನ್ನು ಕಲಿತಿದ್ದ ಮಕ್ಕಳು ಹೈಡ್ರೋ ಎಲೆಕ್ಟ್ರೀಕ್ ಪವರ್ ಪ್ಲಾಂಟ್, ಮ್ಯಾನ್ ಆಂಡ್ ರೋಬೋಟ್, ಅಗ್ರೀಕಲ್ಚರ್ ಎಲಿಮೆಂಟ್ಸ್ ಹಲವು ವಿಜ್ಞಾನಕ್ಕೆ ಸಂಬಂಧಿಸಿದ ವಸ್ತುಗಳನ್ನು ತಯಾರು ಮಾಡಿ ಪ್ರದರ್ಶನಕ್ಕಿಟ್ಟಿದ್ದರು. ಮಕ್ಕಳ ಟ್ಯಾಲೆಂಟ್ ನೋಡಿದ ಜನರು ಬೇಷ್ ಎಂದು ಹೇಳಿದ್ದಾರೆ.

    ಒಟ್ಟಿನಲ್ಲಿ ಛಲ ಮಾಡೋ ಹುಮ್ಮಸ್ಸಿದ್ದರೆ ಏನನ್ನೂ ಬೇಕಾದರೂ ಸಾಧಿಸಿ ತೋರಿಸಬಹುದು ಎನ್ನುವುದಕ್ಕೆ ಇವರೇ ಸಾಕ್ಷಿ.

  • ವಿಡಿಯೋ: 1 ನಿಮಿಷದಲ್ಲಿ 212 ಹೆಚ್ಚು ವಾಲ್‍ನಟ್ಸ್ ಒಡೆದು ಹೈದರಾಬಾದ್ ವ್ಯಕ್ತಿಯಿಂದ ವಿಶ್ವ ದಾಖಲೆ

    ವಿಡಿಯೋ: 1 ನಿಮಿಷದಲ್ಲಿ 212 ಹೆಚ್ಚು ವಾಲ್‍ನಟ್ಸ್ ಒಡೆದು ಹೈದರಾಬಾದ್ ವ್ಯಕ್ತಿಯಿಂದ ವಿಶ್ವ ದಾಖಲೆ

    ಹೈದರಾಬಾದ್: 1 ನಿಮಿಷದಲ್ಲಿ ಕೈಯಿಂದ ಸುಮಾರು 200 ಕ್ಕಿಂತ ಹೆಚ್ಚು ವಾಲ್‍ನಟ್ಸ್ ಗಳನ್ನು (ಅಕ್ರೋಟ್) ಪುಡಿಪುಡಿ ಮಾಡಿ ಆಂಧ್ರದ ವ್ಯಕ್ತಿಯೊಬ್ಬರು ವಿಶ್ವದಾಖಲೆ ನಿರ್ಮಿಸಿದ್ದಾರೆ.

    ಸಮರ ಕಲೆಗಳ ಮಾಸ್ಟರ್ ಆಗಿರುವ ಪಿ. ಪ್ರಭಾಕರ್ ರೆಡ್ಡಿ ಎಂಬವರು 60 ಸೆಕೆಂಡ್ ಒಳಗಡೆ 212 ವಾಲ್‍ನಟ್ಸ್ ಗಳನ್ನು ಒಡೆದು ಹಾಕಿರುವ ವಿಡಿಯೋವನ್ನು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ಯುಟ್ಯೂಬ್‍ಗೆ ಅಪ್ಲೋಡ್ ಮಾಡಿದೆ.

    ಒಂದು ಮರದ ಟೇಬಲ್ ಮೇಲೆ ಸಾಲು ಸಾಲಾಗಿ ವಾಲ್‍ನಟ್ಸ್ ಗಳನ್ನು ಜೋಡಿಸಿದ್ದು, ಅವುಗಳಿಗೆ ಯಾವುದೇ ರೀತಿಯ ಹಾನಿಯಾಗದಂತೆ ಒಡೆದಿರುವುದನ್ನು ಖಚಿತ ಪಡಿಸಿಕೊಳ್ಳಲು ಪ್ರತ್ಯಕ್ಷ ದರ್ಶಿಗಳನ್ನು ನೇಮಿಸಲಾಗಿತ್ತು ಎಂದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ತಿಳಿಸಿದೆ.

    ಅಂತಿಮ ಹಂತದಲ್ಲಿ ಎಣಿಕೆ ಮಾಡುವಾಗ ವಾಲ್‍ನಟ್ಸ್ ಗಳ ಚಿಪ್ಪುಗಳನ್ನು ಕನಿಷ್ಠ ಎರಡು ತುಂಡುಗಳಾಗಿ ಒಡೆದಿರಬೇಕು ಎಂದು ಸೂಚಿಸಲಾಗಿತ್ತು. 35 ವರ್ಷದ ರೆಡ್ಡಿ ಸಮರ ಕಲೆಯ ಮಾಸ್ಟರ್ ಈ ದಾಖಲೆ ಮಾಡಲು ಪ್ರತಿನಿತ್ಯ ತರಬೇತಿ ಮಾಡಿ ನಂತರ ಈ ದಾಖಲೆ ಮಾಡಿದ್ದಾರೆ.

    ಈ ಹಿಂದೆ ಪಾಕಿಸ್ತಾನದ ಮೊಹಮ್ಮದ್ ರಶೀದ್ ಎಂಬುವರು 210 ನಟ್ಸ್ ಒಡೆದಿದ್ದರು. ಆದರೆ ಈಗ ರೆಡ್ಡಿ ಅವರು 212 ನಟ್ಸ್ ಒಡೆಯುವ ಮೂಲಕ ತಮ್ಮ ಹೆಸರಿಗೆ ದಾಖಲೆಯನ್ನು ವರ್ಗಾಯಿಸಿದ್ದಾರೆ.

    ಎಷ್ಟೇ ಅನುಭವಗಳಿದ್ದರೂ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವ ವ್ಯಕ್ತಿಗಳ ಕೈಗೆ ಯಾವುದೇ ರೀತಿ ಅಪಾಯವಾಗದೇ ಇರಲು ಬಟ್ಟೆಯ ಗ್ಲೌಸ್ ಹಾಕಿಕೊಳ್ಳಲು ಅನುಮತಿ ನೀಡಲಾಗುತ್ತದೆ.


  • ಟೂತ್ ಬ್ರಷ್ ಮೇಲೆ ಬಾಸ್ಕೆಟ್ ಬಾಲ್ ಸ್ಪಿನ್ ಮಾಡಿ ವಿಶ್ವ ದಾಖಲೆ : ವಿಡಿಯೋ ನೋಡಿ

    ಟೂತ್ ಬ್ರಷ್ ಮೇಲೆ ಬಾಸ್ಕೆಟ್ ಬಾಲ್ ಸ್ಪಿನ್ ಮಾಡಿ ವಿಶ್ವ ದಾಖಲೆ : ವಿಡಿಯೋ ನೋಡಿ

    ಧರ್ಮಕೋಟ್: ಬೆರಳಿನ ಮೇಲೆ ಬ್ಯಾಸ್ಕೆಟ್ ಬಾಲ್ ತಿರುಗಿಸಬಹುದು. ಆದ್ರೆ ಬಾಯಲ್ಲಿ ಇಟ್ಟುಕೊಂಡು ಬ್ಯಾಸ್ಕೆಟ್ ಬಾಲ್ ತಿರುಗಿಸೋದು, ಅದ್ರಲ್ಲೂ ಟೂತ್ ಬ್ರಷ್ ಮೇಲೆ ಸುತ್ತಿಸುವುದು ಸುಲಭದ ಮಾತಲ್ಲ. ಆದ್ರೆ ಇಲ್ಲೊಬ್ಬ ಭಾರತೀಯ ವ್ಯಕ್ತಿ ಬಾಯಲ್ಲಿ ಟೂತ್ ಬ್ರಷ್ ಇರಿಸಿಕೊಂಡು ಅದರ ಮೇಲೆ ಬ್ಯಾಸ್ಕೆಟ್ ಬಾಲ್ ತಿರುಗಿಸಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

    ಹೌದು. ಪಂಜಾಬ್ ನಿವಾಸಿಯಾದ 25 ವರ್ಷದ ಯುವಕ ಸಂದೀಪ್ ಸಿಂಗ್ ತನ್ನ ವಿಶಿಷ್ಟ ಕೌಶಲ್ಯದಿಂದ ಇಂತಹದ್ದೊಂದು ಸಾಧನೆ ಮಾಡಿದ್ದಾರೆ. ಬಾಯಲ್ಲಿ ಟೂತ್ ಬ್ರಷ್ ಇರಿಸಿಕೊಂಡು ಅದರ ಮೇಲೆ 53 ಸೆಕೆಂಡ್‍ಗಳ ಕಾಲ ಬ್ಯಾಸ್ಕೆಟ್ ಬಾಲ್ ಸ್ಪಿನ್ ಮಾಡೋ ಮೂಲಕ ಟೂತ್ ಬ್ರಷ್ ಮೇಲೆ ದೀರ್ಘ ಅವಧಿಯವರೆಗೆ ಬ್ಯಾಸ್ಕೆಟ್ ಬಾಲ್ ಸ್ಪಿನ್ ಮಾಡಿದ ದಾಖಲೆ ಮುರಿದಿದ್ದಾರೆ.

    ಇವರು ಏಪ್ರಿಲ್ 8ರಂದು ಧರ್ಮಕೋಟ್‍ನಲ್ಲಿ ಪ್ರೇಕ್ಷಕರ ಮುಂದೆ ಟೂತ್‍ಬ್ರಷ್ ಮೇಲೆ ಬ್ಯಾಸ್ಕೆಟ್ ಬಾಲ್ ತಿರುಗಿಸಿ ಪ್ರದರ್ಶನ ನೀಡಿದ್ರು. ಇದರ ವಿಡಿಯೋವನ್ನ ಗಿನ್ನಿಸ್ ವಿಶ್ವ ದಾಖಲೆಯವರು ಬುಧವಾರದಂದು ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಿದ್ದಾರೆ.

    ಮೊದಲಿಗೆ ಸಂದೀಪ್ ತಮ್ಮ ಬೆರಳಿನ ಮೇಲೆ ಬ್ಯಾಸ್ಕೆಟ್ ಬಾಲ್ ತಿರುಗಿಸಿ ನಂತರ ಅದನ್ನು ಟೂತ್ ಬ್ರಷ್ ಮೇಲೆ ಇರಿಸಿಕೊಂಡು ಮತ್ತೆ ತಿರುಗಿಸಿದ್ದಾರೆ. ಬಳಿಕ ಟೂತ್ ಬ್ರಷ್ ಬಾಯಲ್ಲಿ ಇಟ್ಟುಕೊಂಡು ತಲೆಯನ್ನು ಪಕ್ಕಕ್ಕೆ ವಾಲಿಸಿಕೊಂಡು ಸ್ಪಿನ್ ಮಾಡೋದನ್ನ ವಿಡಿಯೋದಲ್ಲಿ ನೋಡಬಹುದು. ಸಂದೀಪ್ ಅವರು 53 ಸೆಕೆಂಡ್‍ಗಳ ಕಾಲ ಕೈಯ್ಯಲ್ಲಿ ಮುಟ್ಟದೇ ಬಾಯಲ್ಲೇ ಬ್ಯಾಸ್ಕೆಟ್ ಬಾಲನ್ನ ಸ್ಪಿನ್ ಮಾಡಿದ್ದಾರೆ. ಈ ಹಿಂದೆ ಅವರು ಮಾಡಿದ್ದ ದಾಖಲೆಗಿಂತ 6.84 ಸೆಕೆಂಡ್‍ನಷ್ಟು ಕಾಲ ಹೆಚ್ಚಿಗೆ ಸ್ಪಿನ್ ಮಾಡಿ ದಾಖಲೆ ಮುರಿದಿದ್ದಾರೆ.

    ವಿಶ್ವ ದಾಖಲೆ ಮುರಿಯುವುದು ನನ್ನ ಕನಸಾಗಿತ್ತು ಎಂದು ಸಂದೀಪ್ ಹೇಳಿದ್ದಾರೆ.

     

     

  • ವಿಶ್ವ ದಾಖಲೆಯ ಯೋಗ-ಏಕಕಾಲಕ್ಕೆ, ಏಕ ಸ್ಥಳದಲ್ಲಿ 60 ಸಾವಿರ ಜನರಿಂದ ಯೋಗ ಪ್ರದರ್ಶನ

    ವಿಶ್ವ ದಾಖಲೆಯ ಯೋಗ-ಏಕಕಾಲಕ್ಕೆ, ಏಕ ಸ್ಥಳದಲ್ಲಿ 60 ಸಾವಿರ ಜನರಿಂದ ಯೋಗ ಪ್ರದರ್ಶನ

    ಮೈಸೂರು: ಇಂದು ನಗರದ ರೇಸ್‍ಕೋರ್ಸ್ ಆವರಣದಲ್ಲಿ ಏಕ ಕಾಲಕ್ಕೆ ಏಕ ಕಾಲದಲ್ಲಿ 60 ಸಾವಿರ ಜನರು ಯೋಗ ಮಾಡುವ ಮೂಲಕ ಸಾಂಸ್ಕøತಿಕ ನಗರಿ ವಿಶ್ವ ದಾಖಲೆ ಬರೆದಿದೆ.

    60 ಸಾವಿರ ಮಂದಿಯಿಂದ ಆನ್‍ಲೈನ್ ಮೂಲಕ ನೊಂದಣಿ ಮಾಡಿಕೊಂಡು ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯೋಗಾಭ್ಯಾಸ ನಡೆಸಿದರು. ಇಂದು ನಡೆದ ಯೋಗ ದಿನವನ್ನು ಎರಡು ಬೃಹತ್ ಕ್ರೇನ್ ಕ್ಯಾಮಾರ, ಎರಡು ಡ್ರೋಣ್ ಕ್ಯಾಮಾರಗಳನ್ನ ಬಳಸಿ ಕಾರ್ಯಕ್ರಮದ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಇಡೀ ಯೋಗ ಪ್ರದರ್ಶನದ ಸಂಪೂರ್ಣ ವಿಡಿಯೋ ಹಾಗೂ ಟಿಕೆಟ್ ಮಾಹಿತಿಯನ್ನ ಗಿನ್ನಿಸ್ ವರ್ಡ್ ರೇಕಾಡ್ ಸಂಸ್ಥೆಗೆ ರವಾನಿಸಲಾಗುತ್ತದೆ.

    2014ರಲ್ಲಿ ತಮಿಳನಾಡಿನ ಪೆರಂಬೂರಿನ ವಿದ್ಯಾಶಾಲಾದ 3800 ವಿದ್ಯಾರ್ಥಿಗಳು ಚೈನ್ ಲಿಂಕ್ ಯೋಗದ ವಿಶ್ವದಾಖಲೆ ನಿರ್ಮಿಸಿದ್ದರು. ಆ ದಾಖಲೆಯನ್ನ ಮುರಿಯಲು ಮೈಸೂರು ನಗರದ ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ. ಅರಮನೆ ಆವರಣದಲ್ಲಿ ಶನಿವಾರ ಪೂರ್ವ ತಯಾರಿ ನಡೆಸಲಾಗಿತ್ತು. ಅರಮನೆಯ ಆವರಣದಲ್ಲಿ 6001 ವಿದ್ಯಾರ್ಥಿಗಳು ಸಾಮೂಹಿಕ ಯೋಗ ಪ್ರದರ್ಶನ ಮಾಡಿದರು. ನುರಿತ ಯೋಗಪಟುಗಳಿಂದ ಯೋಗಕ್ಕೆ ಪೂರ್ವಾಭ್ಯಾಸ ತರಬೇತಿ ನೀಡಲಾಗಿದೆ.

     

  • 327 ದಿನಗಳಲ್ಲಿ 6000 ಕೇಸ್ ಇತ್ಯರ್ಥ: ವಿಶ್ವ ದಾಖಲೆ ನಿರ್ಮಿಸಿದ ಉತ್ತರಪ್ರದೇಶದ ಜಡ್ಜ್

    327 ದಿನಗಳಲ್ಲಿ 6000 ಕೇಸ್ ಇತ್ಯರ್ಥ: ವಿಶ್ವ ದಾಖಲೆ ನಿರ್ಮಿಸಿದ ಉತ್ತರಪ್ರದೇಶದ ಜಡ್ಜ್

    – 903 ದಂಪತಿಗಳು ಒಂದಾದ್ರು

    ಮುಜಾಫರ್‍ನಗರ್: 327 ಕೆಲಸದ ದಿನಗಳಲ್ಲಿ ಒಟ್ಟು 6065 ಪ್ರಕರಣಗಳನ್ನು ಇತ್ಯರ್ಥ ಮಾಡುವ ಮೂಲಕ ಉತ್ತರಪ್ರದೇಶದ ಮುಜಾಫರ್‍ನಗರದ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರೊಬ್ಬರು ವಿಶ್ವ ದಾಖಲೆ ನಿರ್ಮಿಸಿದ್ದಾರೆ.

    ಜಿಲ್ಲೆಯಲ್ಲಿ ವಕೀಲರ ಪ್ರತಿಭಟನೆಯ ನಡುವೆಯೂ 327 ದಿನಗಳಲ್ಲಿ 6065 ಕೇಸ್‍ಗಳನ್ನು ಬಗೆಹರಿಸಿದ್ದೇನೆ ಎಂದು ನ್ಯಾಯಾಧೀಶರಾದ ತೇಜ್ ಬಹದ್ದೂರ್ ಸಿಂಗ್ ವರದಿಗಾರರಿಗೆ ತಿಳಿಸಿದ್ದಾರೆ.

    ತೇಜ್ ಬಹದ್ದೂರ್ ಅವರ ಈ ದಾಖಲೆ ಗಿನ್ನೀಸ್ ಬುಕ್ ಆಫ್ ರೆಕಾರ್ಡ್ಸ್ ನ ಪುಟ ಸೇರಿರುವುದನ್ನು ಗಿನ್ನೀಸ್ ರೆಕಾಡ್ರ್ಸ್‍ನವರು ಸ್ಪಷ್ಟಪಡಿಸಿದ್ದಾರೆಂದು ವರದಿಯಾಗಿದೆ.

    ಕೋರ್ಟ್ ನಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆಯನ್ನ ಕಡಿಮೆ ಮಾಡಿ ಕಕ್ಷಿಗಾರರಿಗೆ ನ್ಯಾಯ ಒದಗಿಸುವುದು ನನ್ನ ಉದ್ದೇಶ ಎಂದು ನ್ಯಾಯಾಧೀಶರಾದ ಸಿಂಗ್ ಹೇಳಿದ್ದಾರೆ. ಇಡೀ ದೇಶದಲ್ಲಿ ವಿಲೇವಾರಿ ಮಾಡಲಾದ ಕೇಸ್‍ಗಳಲ್ಲಿ ಇದು ಅತ್ಯಂತ ಹೆಚ್ಚಿನದ್ದು. ಕೌಟುಂಬಿಕ ನ್ಯಾಯಾಲಯದಲ್ಲಿ ಕೇಸ್ ಬಗೆಹರಿದ ನಂತರ ಒಟ್ಟು 903 ದಂಪತಿಗಳು ಒಂದಾಗಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ.

  • 5 ಗಂಟೆಗಳಲ್ಲಿ 67 ಹಾಡುಗಳನ್ನ ವೀಣೆಯಲ್ಲಿ ನುಡಿಸಿ ವಿಶ್ವ ದಾಖಲೆ ನಿರ್ಮಿಸಿದ ಅಂಧ ಗಾಯಕಿ

    5 ಗಂಟೆಗಳಲ್ಲಿ 67 ಹಾಡುಗಳನ್ನ ವೀಣೆಯಲ್ಲಿ ನುಡಿಸಿ ವಿಶ್ವ ದಾಖಲೆ ನಿರ್ಮಿಸಿದ ಅಂಧ ಗಾಯಕಿ

    ಕೊಚ್ಚಿ: 5 ಗಂಟೆಗಳ ಕಾಲ ಸತತವಾಗಿ ವೀಣೆಯಲ್ಲಿ 67 ಹಾಡುಗಳನ್ನ ನುಡಿಸುವ ಮೂಲಕ ದಕ್ಷಿಣದ ಪ್ರಸಿದ್ಧ ಗಾಯಕಿ ವೈಕೋಮ್ ವಿಜಯಲಕ್ಷ್ಮೀ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

    ಭಾನುವಾರದಂದು ಕೊಚ್ಚಿಯಲ್ಲಿ ನಡೆದ ಸಂಗೀತ ಗೋಷ್ಠಿಯಲ್ಲಿ ದೃಷ್ಟಿಹೀನರಾದ ವಿಜಯಲಕ್ಷ್ಮೀ, ಈ ಹಿಂದೆ ನಿರ್ಮಿಸಲಾಗಿದ್ದ 51 ಹಾಡಿನ ದಾಖಲೆಯನ್ನು ಮುರಿದಿದ್ದಾರೆ. ಮೊದಲಿಗೆ 52 ಹಾಡುಗಳನ್ನ ನುಡಿಸಬೇಕು ಎಂದುಕೊಂಡಿದ್ದ ವಿಜಯಲಕ್ಷ್ಮೀ ಮಲಯಾಳಂ, ತಮಿಳು ಹಾಗೂ ಹಿಂದಿಯ ಹಾಡುಗಳು, 12 ಕೀರ್ತನೆಗಳು ಸೇರಿದಂತೆ ನಿರಂತರವಾಗಿ 67 ಹಾಡುಗಳನ್ನ ನುಡಿಸಿದ್ರು.

    ಒಟ್ಟು 67 ಹಾಡುಗಳನ್ನು ವಿಜಯಲಕ್ಷ್ಮೀ ಒಂದು ತಂತಿಯಿರುವ ಗಾಯತ್ರಿ ವೀಣೆ/ಏಕ ತಂತಿ ವೀಣೆಯಲ್ಲಿ ನುಡಿಸಿದ್ದು ಮತ್ತೊಂದು ವಿಶೇಷ. ಈ ಅಪರೂಪದ ಸಂಗೀತವಾದ್ಯವನ್ನು ನುಡಿಸುವಲ್ಲಿ ಪರಿಣಿತರಾಗಿರೋ ವಿಜಯಲಕ್ಷ್ಮೀ 5 ವರ್ಷಗಳ ಹಿಂದೆ ಗಾಯಕಿಯಾಗಿ ಮೊದಲ ಹಾಡನ್ನ ಹಾಡಿದ್ರು.

    ಗಾಯತ್ರಿ ವೀಣೆ: ವಿಜಯಲಕ್ಷ್ಮೀ ಅವರ ಅಭಿಮಾನಿಯೊಬ್ಬರು ಅವರಿಗೆ ಗಾಯತ್ರಿ ತಂಬೂರಿಯನ್ನ ಉಡುಗೊರೆಯಾಗಿ ನೀಡಿದ್ದರು. ಅದನ್ನ ಅವರ ತಂದೆಯ ಜೊತೆ ಸೇರಿ ಮರುವಿನ್ಯಾಸಗೊಳಿಸಿ ಏಕ ತಂತಿ ವಾದ್ಯವನ್ನಾಗಿ ಮಾಡಿದ್ರು. ವಯೋಲಿನ್ ಪರಿಣತರಾದ ಕುನ್ನಕ್ಕುಡಿ ವೈದ್ಯನಾಥನ್ ಅವರು ಒಮ್ಮೆ ವಿಜಯಲಕ್ಷ್ಮೀ ಅವರ ಈ ಹೊಸ ವಾದ್ಯದಿಂದ ಸಂಗೀತ ಕೇಳಿ ಇದಕ್ಕೆ ಗಾಯತ್ರಿ ವೀಣೆ ಎಂಬ ಹೆಸರು ಕೊಟ್ಟರು.

    ಮದುವೆ ರದ್ದು: ವಿಜಯಲಕ್ಷ್ಮೀ ಅವರ ಭಾವಿ ಪತಿ ಆಕೆಗೆ ಕಚೇರಿಗಳಲ್ಲಿ ಪ್ರದರ್ಶನ ನೀಡುವುದನ್ನು ನಿಲ್ಲಿಸಿ ಯಾವುದಾದ್ರೂ ಕಾಲೇಜಿನಲ್ಲಿ ಸಂಗೀತ ಶಿಕ್ಷಕಿಯಾಗು ಎಂದು ಹೇಳಿದ್ದರಿಂದ ಎರಡು ವಾರಗಳ ಹಿಂದೆ ವಿಜಯಲಕ್ಷ್ಮೀ ಸಂಗೀತಕ್ಕಾಗಿ ತಮ್ಮ ಮದುವೆಯನ್ನೇ ರದ್ದು ಮಾಡಿದ್ದಾರೆ. ಸಂಗೀತ ನನ್ನ ಬದುಕು. ನನ್ನ ವಿಕಲತೆಯನ್ನು ತೊಂದರೆ ಅಂತ ನಾನೆಂದೂ ಭಾವಿಸಿಲ್ಲ ಅಂತಾರೆ ವಿಜಯಲಕ್ಷ್ಮೀ.

    ವಿಜಯಲಕ್ಷ್ಮೀ ಅವರು ಮಲಯಾಳಂ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಹಾಡಿದ್ದಾರೆ.

  • ಬರಿಗೈಯ್ಯಲ್ಲೇ 1 ನಿಮಿಷದಲ್ಲಿ 124 ತೆಂಗಿನಕಾಯಿ ಒಡೆದು ವಿಶ್ವದಾಖಲೆ ನಿರ್ಮಿಸಿದ ಭಾರತೀಯ

    ಬರಿಗೈಯ್ಯಲ್ಲೇ 1 ನಿಮಿಷದಲ್ಲಿ 124 ತೆಂಗಿನಕಾಯಿ ಒಡೆದು ವಿಶ್ವದಾಖಲೆ ನಿರ್ಮಿಸಿದ ಭಾರತೀಯ

    ತಿರುವನಂತಪುರಂ: ಕೇರಳ ಮೂಲದ ವ್ಯಕ್ತಿಯೊಬ್ಬರು 1 ನಿಮಿಷದಲ್ಲಿ ಬರೋಬ್ಬರಿ 124 ತೆಂಗಿನಕಾಯಿಗಳನ್ನ ಒಡೆದು ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

    ತ್ರಿಶೂರಿನ ಸೋಭಾ ಸಿಟಿ ಮಾಲ್‍ನಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಕೇರಳದ ಪೂಂಜರ್ ನಿವಾಸಿ ಅಭೀಷ್ ಪಿ ಡೊಮನಿಕ್ ಕೇವಲ ಒಂದು ನಿಮಿಷದಲ್ಲಿ 124 ತೆಂಗಿನಕಾಯಿಗಳನ್ನ ಒಡೆದರು. ಈ ಮೂಲಕ ಡೊಮನಿಕ್ ಈ ಹಿಂದೆ ಜರ್ಮನಿಯ ಮುಹಮದ್ ಕಾಹ್ರಿಮನೋವಿಕ್ ನಿರ್ಮಿಸಿದ್ದ ದಾಖಲೆಯನ್ನು ಮುರಿದರು. ಕಾಹ್ರಿಮನೋವಿಕ್ ಒಂದು ನಿಮಿಷದಲ್ಲಿ 118 ತೆಂಗಿನಕಾಯಿಗಳನ್ನ ಒಡೆದಿದ್ದರು.

    ಡೊಮನಿಕ್ 1 ನಿಮಿಷದಲ್ಲಿ 145 ತೆಂಗಿನಕಾಯಿಗಳನ್ನ ಒಡೆದರಾದ್ರೂ ಅದರಲ್ಲಿ ಸಂರ್ಪೂಣವಾಗಿ ಒಡೆದಿದ್ದು 124 ತೆಂಗಿನಕಾಯಿಗಳನ್ನ.

    ಕೇರಳ ಸಾರಿಗೆ ಸಂಸ್ಥೆಯಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿರೋ 25 ವರ್ಷದ ಡೊಮನಿಕ್, ಹಾಕಿ ಸ್ಟಿಕ್, ಹೆಲ್ಮೆಟ್ ಮುರಿಯುವುದು ಹಾಗೂ ಹಲ್ಲಿನಿಂದಲೇ 50 ಮೀಟರ್‍ವರೆಗೆ ಬಸ್ ಎಳೆಯುವುದು ಹೀಗೆ ವಿವಿಧ ವಿಭಾಗಗಳಲ್ಲಿ ದಾಖಲೆ ನಿರ್ಮಿಸಿದ್ದು, ಲಿಮ್ಕಾ ಬುಕ್ ಆಫ್ ರೆಕಾಡ್ರ್ಸ್, ಯುನಿವರ್ಸಲ್ ರೆಕಾರ್ಡ್ ಫೋರಂ, ರೆಕಾರ್ಡ್ ಸೆಟ್ಟರ್ ಬುಕ್ ಆಫ್ ವಲ್ರ್ಡ್ ರೆಕಾಡ್ರ್ಸ್ ಹಾಗೂ ಅಸಿಸ್ಟ್ ವಲ್ರ್ಡ್ ರೆಕಾಡ್ರ್ಸ್‍ನಲ್ಲಿ ಇವರ ಹೆಸರಿದೆ.

    ಇದೀಗ ಡೊಮನಿಕ್ ಅವರು ತೆಂಗಿನಕಾಯಿ ಒಡೆದಿರುವ ವೀಡಿಯೋವನ್ನು ಗಿನ್ನಿಸ್ ಬುಕ್ ಆಫ್ ರೆಕಾಡ್ರ್ಸ್ ನವರಿಗೆ ಕಳಿಸಲಾಗಿದ್ದು 6 ತಿಂಗಳ ಒಳಗೆ ಡೊಮನಿಕ್ ಅವರ ದಾಖಲೆಯನ್ನು ಪರಿಗಣಿಸಲಿದ್ದಾರೆ.

    https://www.youtube.com/watch?v=8E95cXh3c1A

  • ಕುಂದಾನಗರಿಯಲ್ಲಿ ದೇಶಭಕ್ತಿಯ ನಗಾರಿ – ಗಿನ್ನಿಸ್ ಪುಟ ಸೇರಿತು 9 ಸಾವಿರ ವಿದ್ಯಾರ್ಥಿಗಳ ನೃತ್ಯ

    ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ನಡೆದ ಸಮೂಹ ನೃತ್ಯ ಗಿನ್ನಿಸ್ ವಿಶ್ವ ದಾಖಲೆಯ ಪುಟ ಸೇರಿದೆ. ನಗರದ ಮರಾಠ ಮಂಡಳ ಸಂಸ್ಥೆ ಹಾಲಬಾವಿ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 9,200 ವಿದ್ಯಾರ್ಥಿಗಳು ನೃತ್ಯ ಮಾಡಿದ್ರು.

    ರಾಷ್ಟ್ರಧ್ವಜ ಬಿಂಬಿಸುವ ಮೂರು ಬಣ್ಣಗಳ ಆಕರ್ಷಕ ಉಡುಪು ಧರಿಸಿದ ವಿದ್ಯಾರ್ಥಿಗಳು ಬಾಲಿವುಡ್‍ನ 5 ದೇಶಭಕ್ತಿ ಗೀತೆಗಳಿಗೆ ಒಟ್ಟಾಗಿ ಹೆಜ್ಜೆ ಹಾಕಿದ್ರು. ಈ ಹಿಂದೆ ಅಮೃತಸರದಲ್ಲಿ ಇಂಥ ದಾಖಲೆ ನಿರ್ಮಾಣವಾಗಿತ್ತು. ಆದರೆ ಈ ದಾಖಲೆಯನ್ನ ಬೆಳಗಾವಿ ಬ್ರೇಕ್ ಮಾಡಿದೆ ಅಂತ ಗಿನ್ನಿಸ್ ಬುಕ್ ಆಫ್ ರೆಕಾಡ್ರ್ಸ್ ಅಧಿಕಾರಿಗಳು ಘೋಷಿಸಿದ್ರು.

    ಈ ಕಾರ್ಯಕ್ರಮವನ್ನ ನೋಡೋಕೆ ಸಾವಿರಾರು ಜನ ನೆರೆದಿದ್ದರು. ವಿದ್ಯಾರ್ಥಿಗಳ ನೃತ್ಯವನ್ನ ಡ್ರೋನ್ ಮೂಲಕ ವೀಡಿಯೋ ಮಾಡಲಾಗಿದ್ದು ನಯನ ಮನೋಹರವಾಗಿದೆ.

    https://www.youtube.com/watch?v=n9vvdl-oHjc