Tag: ವಿಶ್ವ ದಾಖಲೆ

  • ವಿಶ್ವ ದಾಖಲೆಯೊಂದಿಗೆ ಅತಿದೊಡ್ಡ ಅಧ್ಯಾತ್ಮಿಕ ಮೇಳಕ್ಕೆ ವಿದ್ಯುಕ್ತ ತೆರೆ – 45 ದಿನದಲ್ಲಿ 65 ಕೋಟಿ ಭಕ್ತರ ಪುಣ್ಯಸ್ನಾನ

    ವಿಶ್ವ ದಾಖಲೆಯೊಂದಿಗೆ ಅತಿದೊಡ್ಡ ಅಧ್ಯಾತ್ಮಿಕ ಮೇಳಕ್ಕೆ ವಿದ್ಯುಕ್ತ ತೆರೆ – 45 ದಿನದಲ್ಲಿ 65 ಕೋಟಿ ಭಕ್ತರ ಪುಣ್ಯಸ್ನಾನ

    ಪ್ರಯಾಗ್‌ರಾಜ್‌: 45 ದಿನ ಇಡೀ ಜಗತ್ತೇ ನಿಬ್ಬೆರಗಾಗುವ ರೀತಿಯಲ್ಲಿ ನಡೆದ ಉತ್ತರ ಪ್ರದೇಶದ (Uttar Pradesh) ಪ್ರಯಾಗ್‌ ರಾಜ್‌ನಲ್ಲಿ (Prayagraj) ನಡೆದ ಮಹಾಕುಂಭ ಮೇಳಕ್ಕೆ (Maha Kumbh Mela) ಇಂದು ವಿದ್ಯುಕ್ತ ತೆರೆ ಬಿದ್ದಿದೆ. ಜಗತ್ತಿನ ಅತಿದೊಡ್ಡ ಧಾರ್ಮಿಕ ಉತ್ಸವದಲ್ಲಿ 65 ಕೋಟಿಗೂ ಹೆಚ್ಚು ಭಕ್ತರು ಪುಣ್ಯ ಸ್ನಾನ ಮಾಡಿ ವಿಶ್ವ ದಾಖಲೆ ಬರೆದಿದ್ದಾರೆ.

    ಶಿವರಾತ್ರಿಯ (Maha Shivaratri ) ಹಿನ್ನೆಲೆಯಲ್ಲಿ ಇಂದು ನಡೆದ ಕೊನೆಯ ಅಮೃತಸ್ನಾನದಲ್ಲಿ ಒಂದು ಕೋಟಿಗೂ ಅಧಿಕ ಜನರು ಭಾಗಿಯಾಗಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಪುನೀತರಾದರು. ಎಲ್ಲೆಡೆ ಹರ್ ಹರ್ ಮಹಾದೇವ್ ಎಂಬ ಕೂಗು ಮಾರ್ದನಿಸಿತು.

    ರಾತ್ರಿಯಿಂದಲೇ ತ್ರಿವೇಣಿ ಸಂಗಮದಲ್ಲಿ ಬೀಡುಬಿಟ್ಟಿದ್ದ ಕೋಟ್ಯಂತರ ಭಕ್ತರು ಇಂದು ಬ್ರಾಹ್ಮೀ ಮುಹೂರ್ತದಲ್ಲಿ ಪುಣ್ಯಸ್ನಾನ ಮಾಡಿದರು. ಬೆಳಗ್ಗೆ ಎಂಟು ಗಂಟೆಗೆ ಸುಮಾರು 40 ಲಕ್ಷ ಭಕ್ತರು ಅಮೃತ ಸ್ನಾನ ಮಾಡಿದರು. ಸಂಜೆ ಹೊತ್ತಿಗೆಲ್ಲಾ ಈ ಸಂಖ್ಯೆ ಕೋಟಿ ದಾಟಿತು.

    ಅಮೃತಸ್ನಾನ (Amrutha snanam) ಮಾಡಲು ಬಂದಿದ್ದ ಭಕ್ತರ ಮೇಲೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಸುರಿಸಲಾಯ್ತು. ಮುಂಜಾಗ್ರತಾ ಕ್ರಮಗಿ ಸಾಕಷ್ಟು ಕ್ರಮಗಳನ್ನು ಯುಪಿ ಸರ್ಕಾರ ತೆಗೆದುಕೊಂಡಿತ್ತು. ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಗೋರಖ್‌ಪುರದ ವಾರ್ ರೂಂನಲ್ಲಿ ಕುಳಿತು ಇಡೀ ದಿನ ಮಹಾಕುಂಭಮೇಳವನ್ನು ವೀಕ್ಷಿಸುತ್ತಿದ್ದರು.

    ವಿಪಕ್ಷಗಳ ರಾಜಕೀಯ, ಕೆಲ ಸಣ್ಣಪುಟ್ಟ ಘಟನೆ ಹೊರತುಪಡಿಸಿದರೆ ಕುಂಭಮೇಳ ಸುಸೂತ್ರವಾಗಿ ಮುಗಿದಿದೆ . 144 ವರ್ಷಕ್ಕೊಮ್ಮೆ ಬರುವ ಮಹಾ ಕುಂಭಮೇಳ ಹಲವು ದಾಖಲೆ ಬರೆದಿದೆ.

    ದಾಖಲೆಗಳ ಮಹಾಕುಂಭಮೇಳ
    – ಜನವರಿ 13 ರಿಂದ ಆರಂಭಗೊಂಡ ಕುಂಭಮೇಳದಲ್ಲಿ 65 ಕೋಟಿಗೂ ಅಧಿಕ ಭಕ್ತರಿಂದ ಪುಣ್ಯಸ್ನಾನ
    – ಜನವರಿ 19 ರ ಮೌನಿ ಅಮಾವಾಸ್ಯೆಯಂದು ಒಂದೇ ದಿನ 10 ಕೋಟಿಗೂ ಹೆಚ್ಚ ಜನರಿಂದ ಎರಡನೇ ಅಮೃತ ಸ್ನಾನ
    – 183 ದೇಶಗಳ ಪ್ರತಿನಿಧಿಗಳು, ಲಕ್ಷಾಂತರ ಕೈದಿಗಳಿಂದಲೂ ಅಮೃತಸ್ನಾನ
    – ಆಧ್ಯಾತ್ಮಿಕ ಮೇಳಕ್ಕೆ ಆಧುನಿಕ ತಂತ್ರಜ್ಞಾನದ ಮೆರುಗು. ಎಐ, ವಿಆರ್,ಎಆರ್, ಎಲ್‌ಇಡಿ, ಹೊಲೋಗ್ರಾಮ್ ಬಳಕೆ
    – ಮಹಾಕುಂಭಕ್ಕೆ ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರದಿಂದ ಒಟ್ಟು 7,500 ಕೋಟಿ ರೂ. ವೆಚ್ಚ. 3 ಲಕ್ಷ ಕೋಟಿ ರೂ. ಆದಾಯ
    – ಸ್ಥಳೀಯ ಬಡವರಿಗೆ ಆರ್ಥಿಕವಾಗಿ ಲಾಭ, ದೊಡ್ಡ ದೊಡ್ಡ ಉದ್ಯಮಿಗಳಿಗೂ ಲಾಭ

     

     

  • ಕೊಹ್ಲಿ ವಿಶ್ವದಾಖಲೆ ನಿರ್ಮಾಣಕ್ಕೆ ಬೇಕಿದೆ ಕೇವಲ 94 ರನ್‌!

    ಕೊಹ್ಲಿ ವಿಶ್ವದಾಖಲೆ ನಿರ್ಮಾಣಕ್ಕೆ ಬೇಕಿದೆ ಕೇವಲ 94 ರನ್‌!

    ಬೆಂಗಳೂರು: ಟೀಂ ಇಂಡಿಯಾದ (Team India) ಮಾಜಿ ನಾಯಕ ವಿರಾಟ್‌ ಕೊಹ್ಲಿ (Virat Kohli) ಏಕದಿನ ಕ್ರಿಕೆಟ್‌ನಲ್ಲಿ 94 ರನ್‌ ಸಿಡಿಸಿದರೆ ವೇಗವಾಗಿ 14 ಸಾವಿರ ರನ್‌ ಗಡಿ ದಾಟಿದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.

    ಸದ್ಯ 295 ಪಂದ್ಯವಾಡಿರುವ ಕೊಹ್ಲಿ 283 ಇನ್ನಿಂಗ್ಸ್‌ಗಳಿಂದ ಒಟ್ಟು 13,906 ರನ್‌ ಹೊಡೆದಿದ್ದಾರೆ. ಇದನ್ನೂ ಓದಿ: ಭಾರತದ ವಿರುದ್ಧ ಟಿ20 ಸರಣಿಯಲ್ಲಿ ಆರ್‌ಸಿಬಿ ಟಾಪ್‌ ಪ್ಲೇಯರ್‌ಗಳು ಫ್ಲಾಪ್‌ – ಫ್ರಾಂಚೈಸಿಗೆ ತಲೆನೋವು

    ಏಕದಿನ ಕ್ರಿಕೆಟ್‌ನಲ್ಲಿ 14 ಸಾವಿರ ರನ್‌ಗಳ ಗಡಿಯನ್ನು ಇಬ್ಬರು ಮಾತ್ರ ದಾಟಿದ್ದಾರೆ. ಸಚಿನ್‌ ತೆಂಡೂಲ್ಕರ್‌ (Sachin Tendulkar) 350 ಇನ್ನಿಂಗ್ಸ್‌ ತೆಗೆದುಕೊಂಡರೆ ಶ್ರೀಲಂಕಾದ ಕುಮಾರ ಸಂಗಕ್ಕಾರ (Kumara Sangakkara) 378 ಇನ್ನಿಂಗ್ಸ್‌ ತೆಗೆದುಕೊಂಡು ಈ ಸಾಧನೆ ಮಾಡಿದ್ದಾರೆ.

    ಇಂಗ್ಲೆಂಡ್‌ ವಿರುದ್ಧ ಸರಣಿಯಲ್ಲಿ ಕೊಹ್ಲಿ ಈ ವಿಶ್ವದಾಖಲೆ (World Record) ನಿರ್ಮಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. 3 ಪಂದ್ಯಗಳ ಏಕದಿನ ಸರಣಿ ಫೆ.6 ರಿಂದ ಆರಂಭವಾಗಲಿದ್ದು ನಾಗಪುರದಲ್ಲಿ ಮೊದಲ ಪಂದ್ಯ ನಡೆಯಲಿದೆ.

    ಸಚಿನ್‌ ತೆಂಡೂಲ್ಕರ್‌ ಒಟ್ಟು 463 ಪಂದ್ಯವಾಡಿ 452 ಇನ್ನಿಂಗ್ಸ್‌ನಿಂದ 18,426 ರನ್‌ ಹೊಡೆದರೆ ಕುಮಾರ ಸಂಗಕ್ಕಾರ 404 ಪಂದ್ಯವಾಡಿ 380 ಇನ್ನಿಂಗ್ಸ್‌ನಿಂದ 14,234 ರನ್‌ ಹೊಡೆದಿದ್ದಾರೆ.

     

  • ಶಫಾಲಿ ವರ್ಮಾ ಸ್ಫೋಟಕ ದ್ವಿಶತಕ – ಮೊದಲ ದಿನವೇ 3 ವಿಶ್ವದಾಖಲೆ ಬರೆದ ಭಾರತ

    ಶಫಾಲಿ ವರ್ಮಾ ಸ್ಫೋಟಕ ದ್ವಿಶತಕ – ಮೊದಲ ದಿನವೇ 3 ವಿಶ್ವದಾಖಲೆ ಬರೆದ ಭಾರತ

    ಚೆನ್ನೈ: ದಕ್ಷಿಣ ಆಫ್ರಿಕಾ (South Africa) ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ ಮೊದಲ ದಿನವೇ ಟೀಂ ಇಂಡಿಯಾದ (Team India) ಆಟಗಾರ್ತಿಯರು 3 ವಿಶ್ವದಾಖಲೆ (World Record) ಬರೆದಿದ್ದಾರೆ.

    ಆರಂಭಿಕ ಆಟಗಾರ್ತಿ 20 ವರ್ಷದ ಶಫಾಲಿ ವರ್ಮಾ (Shafali Verma) ವೇಗದ ದ್ವಿಶತಕ ಸಿಡಿಸಿ ಸಾಧನೆ ಮಾಡಿದ್ದಾರೆ. ಏಕದಿನ ಶೈಲಿಯಲ್ಲಿ ಬ್ಯಾಟ್‌ ಬೀಸಿದ ಶಫಾಲಿ ವರ್ಮಾ ಕೇವಲ 194 ಎಸೆತಗಳಲ್ಲಿ ದ್ವಿಶತಕ ಸಿಡಿಸಿದರು. ಈ ಮೊದಲು ಆಸ್ಟ್ರೇಲಿಯಾ ಅನ್ನಾಬೆಲ್ ಸದರ್ಲ್ಯಾಂಡ್ ಅವರು 2024ರಲ್ಲೇ ಆಫ್ರಿಕಾ ವಿರುದ್ಧ 248 ಎಸೆತಗಳಲ್ಲಿ 200 ರನ್‌ ಹೊಡೆದಿದ್ದರು.

    ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧನಾ (Smriti Mandhana ) ಅವರ ಮೊದಲ ವಿಕೆಟಿಗೆ 312 ಎಸೆತಗಳಲ್ಲಿ 292 ಜೊತೆಯಾಟವಾಡಿ ವಿಶ್ವದಾಖಲೆ ಬರೆದಿದ್ದಾರೆ. ಈ ಹಿಂದೆ 2004ರಲ್ಲಿ ಪಾಕಿಸ್ತಾನದ ಕಿರಣ್‌ ಬಲೂಚ್‌ ಮತ್ತು ಸಜಿದಾ ಅವರು ವಿಂಡೀಸ್‌ ವಿರುದ್ಧ ಮೊದಲ ವಿಕೆಟಿಗೆ 241 ರನ್‌ ಜೊತೆಯಾಟವಾಡಿದ್ದರು. ಇದನ್ನೂ ಓದಿ: ಗೆದ್ದು ಬಾ ಟೀಂ ಇಂಡಿಯಾ – 2014 ರಿಂದ 2023ವರೆಗೆ ಐಸಿಸಿ ಟೂರ್ನಿಯಲ್ಲಿ ಭಾರತ ಸಾಧನೆ ಏನು?

    ಟೀಂ ಇಂಡಿಯಾ ಆಟಗಾರ್ತಿಯರ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನದಿಂದ 98 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 525 ರನ್‌ ಗಳಿಸಿದೆ. ಈ ಮೂಲಕ ಟೆಸ್ಟ್‌ ಕ್ರಿಕೆಟ್‌ ಇತಿಹಾಸಲ್ಲಿ ಮೊದಲ ದಿನ ಅತಿ ಹೆಚ್ಚು ರನ್‌ ಪೇರಿಸಿದ ದಾಖಲೆಯನ್ನು ಭಾರತ ಬರೆದಿದೆ. ಇದನ್ನೂ ಓದಿ: ಸೆಮಿಫೈನಲ್‌ ಗೆಲ್ಲುತ್ತಿದ್ದಂತೆಯೇ ಬಿಕ್ಕಿ ಬಿಕ್ಕಿ ಅತ್ತ ಹಿಟ್‌ಮ್ಯಾನ್- ವೀಡಿಯೋ ವೈರಲ್‌

    ಸ್ಮೃತಿ ಮಂಧನಾ 149 ರನ್‌ (161 ಎಸೆತ, 27 ಬೌಂಡರಿ, 1 ಸಿಕ್ಸರ್)‌ ಹೊಡೆದು ಔಟಾದರೆ ಶಫಾಲಿ ವರ್ಮಾ 205 ರನ್‌(197 ಎಸೆತ, 23 ಬೌಂಡರಿ, 8 ಸಿಕ್ಸರ್‌) ಹೊಡೆದು ರನೌಟ್‌ಗೆ ಬಲಿಯಾದರು.


    ಜೆಮಿಮಾ ಜೆಮಿಮಾ ರಾಡ್ರಿಗಸ್ 55 ರನ್‌ (94 ಎಸೆತ, 8 ಬೌಂಡರಿ) ಹೊಡೆದು ವಿಕೆಟ್‌ ಒಪ್ಪಿಸಿದರು. ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ ಔಟಾಗದೇ 42 ರನ್(‌76 ಎಸೆತ, 2 ಬೌಂಡರಿ), ರಿಚಾ ಘೋಷ್‌ ಔಟಾಗದೇ 43 ರನ್‌(33 ಎಸೆತ, 9 ಬೌಂಡರಿ) ಹೊಡೆದಿದ್ದಾರೆ.

  • 4 ಓವರ್‌, 4 ಮೇಡನ್‌, 3 ವಿಕೆಟ್‌ – ವಿಶ್ವದಾಖಲೆ ಬರೆದ ಲಾಕಿ ಫರ್ಗ್ಯೂಸನ್

    4 ಓವರ್‌, 4 ಮೇಡನ್‌, 3 ವಿಕೆಟ್‌ – ವಿಶ್ವದಾಖಲೆ ಬರೆದ ಲಾಕಿ ಫರ್ಗ್ಯೂಸನ್

    ಟ್ರಿನಿಡಾಡ್: ಟಿ20 ಕ್ರಿಕೆಟ್‌ನಲ್ಲಿ (T20) ಒಂದು ಓವರ್‌ ಮೇಡನ್‌ ಮಾಡುವುದು ಅಪರೂಪ. ಹೀಗಿರುವಾಗ ಎಲ್ಲಾ 4 ಓವರ್‌ ಮೇಡನ್‌ ಮಾಡಿ 3 ವಿಕೆಟ್‌ ಕಿತ್ತು ನ್ಯೂಜಿಲೆಂಡ್‌ನ (New Zealand) ವೇಗದ ಬೌಲರ್ ಲಾಕಿ ಫರ್ಗ್ಯೂಸನ್ (Lockie Ferguson) ನೂತನ ದಾಖಲೆ ಬರೆದಿದ್ದಾರೆ.

    ಸಿ’ ಗುಂಪಿನ ಲೀಗ್‌ ಪಂದ್ಯದಲ್ಲಿ ಪಾಪುವಾ ನ್ಯೂಗಿನಿ (Papua New Guinea) ವಿರುದ್ಧ ಫರ್ಗ್ಯೂಸನ್ ಈ ವಿಶಿಷ್ಟ ದಾಖಲೆ ಬರೆದಿದ್ದಾರೆ. 4 ಓವರ್‌ ಎಸೆದು ಯಾವುದೇ ರನ್‌ ಬಿಟ್ಟು ಕೊಡದೇ 3 ವಿಕೆಟ್‌ ಪಡೆದಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಟಿ 20 ಕ್ರಿಕೆಟ್‌ನಲ್ಲಿ ಎಲ್ಲಾ ನಾಲ್ಕು ಓವರ್‌ಗಳಲ್ಲಿ ಮೇಡನ್ ಸಾಧನೆ ಮಾಡಿದ ಎರಡನೇ ಬೌಲರ್ ಎನಿಸಿದ್ದಾರೆ.

     

    ಈ ಹಿಂದೆ 2021ರ ಟಿ20 ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಕೆನಡಾದ ಸಾದ್ ಬಿನ್ ಜಾಫರ್ ಅವರು ಪನಮಾ ವಿರುದ್ಧ ನಾಲ್ಕು ಓವರ್‌ಗಳಲ್ಲಿ ಮೇಡನ್ ಸಾಧನೆ ಮಾಡಿ 2 ವಿಕೆಟ್‌ ಪಡೆದಿದ್ದರು.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಪಾಪುವಾ ನ್ಯೂಗಿನಿ 78 ರನ್‌ಗಳಿಗೆ ಆಲೌಟ್‌ ಆಯ್ತು. ಸುಲಭದ ಸವಾಲನ್ನು ಬೆನ್ನಟ್ಟಿದ ನ್ಯೂಜಿಲೆಂಡ್‌ 12.3 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 79 ರನ್‌ ಹೊಡೆದು ಜಯ ಸಾಧಿಸಿತು. ಏಳು ವಿಕೆಟ್ ಅಂತದ ಜಯ ಗಳಿಸಿದರೂ ನ್ಯೂಜಿಲೆಂಡ್ ತನ್ನ ಟಿ20 ಕ್ರಿಕೆಟ್‌ ಅಭಿಯಾನ ಕೊನೆಗೊಳಿಸಿತು. ಇದನ್ನೂ ಓದಿ: ಸೂಪರ್-8ಗೆ ಲಗ್ಗೆಯಿಟ್ಟ ತಂಡಗಳು ಯಾವುವು?

    ಸಿ ಗುಂಪಿನಲ್ಲಿ ಅಫ್ಘಾನಿಸ್ತಾನ ಮತ್ತು ವೆಸ್ಟ್‌ ಇಂಡೀಸ್‌ ತಲಾ 6 ಅಂಕ ಪಡೆದು ಸೂಪರ್‌ 8 ಪ್ರವೇಶಿಸಿದೆ. ನ್ಯೂಜಿಲೆಂಡ್‌ 2 ಪಂದ್ಯ ಗೆದ್ದು 4 ಅಂಕ ಪಡೆದ ಕಾರಣ ಟೂರ್ನಿಯಿಂದ ನಿರ್ಗಮಿಸಿದೆ.

    ಈ ಪಂದ್ಯದ ಮೂಲಕ ಟ್ರೆಂಟ್‌ ಬೌಲ್ಟ್‌ (Trent Boult) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದರು. ತನ್ನ ಕೊನೆಯ ಟ್ವೆಂಟಿ2- ವಿಶ್ವಕಪ್ ಪಂದ್ಯದಲ್ಲಿ ಟ್ರೆಂಟ್ ಬೌಲ್ಟ್ 4 ಓವರ್‌ ಎಸೆದು 14 ರನ್ ತೆತ್ತು ಎರಡು ವಿಕೆಟ್ ಗಳಿಸಿದರು.

     

  • 20 ವರ್ಷಗಳ ಹಿಂದಿನ ಸಚಿನ್‌ ವಿಶ್ವದಾಖಲೆಯನ್ನು ಮುರಿದ ಕೊಹ್ಲಿ

    20 ವರ್ಷಗಳ ಹಿಂದಿನ ಸಚಿನ್‌ ವಿಶ್ವದಾಖಲೆಯನ್ನು ಮುರಿದ ಕೊಹ್ಲಿ

    ಮುಂಬೈ: ದಾಖಲೆ ಮೇಲೆ ದಾಖಲೆ ನಿರ್ಮಿಸುತ್ತಿರುವ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿ (Virat Kohli) ವಿಶ್ವಕಪ್‌ನಲ್ಲಿ ಸಚಿನ್‌ ತೆಂಡೂಲ್ಕರ್‌ (Sachin Tendulkar) ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು (World Record) ಮುರಿದಿದ್ದಾರೆ.

    ಒಟ್ಟು 10 ಪಂದ್ಯಗಳಿಂದ 711 ರನ್‌ಗಳಿಸುವ ಮೂಲಕ ಕೊಹ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ ಸಚಿನ್‌ 2003ರ ವಿಶ್ವಕಪ್‌ನಲ್ಲಿ 673 ರನ್‌ ಹೊಡೆದಿದ್ದರು.

    673 ರನ್‌ ಸಿಡಿಸುವ ಮೂಲಕ ವಿಶ್ವಕಪ್ (World Cup Cricket) ಟೂರ್ನಿಯೊಂದರಲ್ಲಿ ಅತಿಹೆಚ್ಚು ರನ್ ದಾಖಲಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 2003ರಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಫೈನಲ್‌ನಲ್ಲಿ ಸೋತರೂ ಸಚಿನ್‌ ಅವರ ಅತ್ಯುತ್ತಮ ಆಟಕ್ಕೆ ಸರಣಿ ಶ್ರೇಷ್ಠ ಪ್ರಶಸ್ತಿ ಸಿಕ್ಕಿತ್ತು.  ಇದನ್ನೂ ಓದಿ: World Cup Semifinal: ಕ್ರಿಕೆಟ್‌ ದೇವರ ಶತಕಗಳ ದಾಖಲೆ ನುಚ್ಚುನೂರು ಮಾಡಿದ ಕಿಂಗ್‌ ಕೊಹ್ಲಿ

    ಈ ಸಾಧನೆ ನಿರ್ಮಿಸಿ 20 ವರ್ಷ ಕಳೆದರೂ ಈ ದಾಖಲೆ ಇನ್ನೂ ಸಚಿನ್ ಹೆಸರಿನಲ್ಲೇ ಇತ್ತು. ಸಚಿನ್‌ 11 ಪಂದ್ಯಗಳಿಂದ ಈ ದಾಖಲೆ ನಿರ್ಮಿಸಿದ್ದರೆ ಕೊಹ್ಲಿ 10 ಪಂದ್ಯಗಳಿಂದ 700 ರನ್‌ಗಳ ಗಡಿಯನ್ನು ದಾಟಿದ್ದಾರೆ.

    ನ್ಯೂಜಿಲೆಂಡ್‌ ವಿರುದ್ಧದ  ಸೆಮಿಫೈನಲ್‌ ಪಂದ್ಯದಲ್ಲಿ 106 ಎಸೆತಗಳಲ್ಲಿ 8 ಬೌಂಡರಿ 1 ಸಿಕ್ಸರ್‌ನೊಂದಿಗೆ ಶತಕ ಸಿಡಿಸಿ ಕೊಹ್ಲಿ ವಿಶ್ವದಾಖಲೆ ಬರೆದಿದ್ದಾರೆ. ಅಂತಿಮವಾಗಿ ಕೊಹ್ಲಿ 117 ರನ್‌ (113 ಎಸೆತ, 9 ಬೌಂಡರಿ, 2 ಸಿಕ್ಸ್‌) ಸಿಡಿಸಿ ಔಟಾದರು.

     

    View this post on Instagram

     

    A post shared by ICC (@icc)

    ಸದ್ಯ ಈ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾದ ಕ್ವಿಂಟನ್‌ ಡಿಕಾಕ್‌ 591 ರನ್‌, ನ್ಯೂಜಿಲೆಂಡಿನ ರಚಿನ್‌ ರವೀಂದ್ರ 565 ರನ್‌, ರೋಹಿತ್‌ ಶರ್ಮಾ 550 ರನ್‌ ಹೊಡೆದಿದ್ದಾರೆ.

    ಅತಿ ಹೆಚ್ಚು ರನ್‌ ಹೊಡೆದ ಆಟಗಾರರು:
    ವಿರಾಟ್‌ ಕೊಹ್ಲಿ 711 ರನ್‌, ಸಚಿನ್‌ ತೆಂಡೂಲ್ಕರ್‌ 673 ರನ್‌ (2003), ಮಾಥ್ಯೂ ಹೇಡನ್‌ 659 ರನ್‌ (2007), ರೋಹಿತ್‌ ಶರ್ಮಾ 648 ರನ್‌ (2019)

  • 7,000 ರಾಖಿ ಕಟ್ಟಿಸಿಕೊಂಡು ವಿಶ್ವ ದಾಖಲೆ ಬರೆದ ಜನಪ್ರಿಯ ಆನ್‌ಲೈನ್ ಬೋಧಕ ಖಾನ್ ಸರ್

    7,000 ರಾಖಿ ಕಟ್ಟಿಸಿಕೊಂಡು ವಿಶ್ವ ದಾಖಲೆ ಬರೆದ ಜನಪ್ರಿಯ ಆನ್‌ಲೈನ್ ಬೋಧಕ ಖಾನ್ ಸರ್

    ಪಾಟ್ನಾ: ಜನಪ್ರಿಯ ಆನ್‌ಲೈನ್ ಬೋಧಕ, ಪಾಟ್ನಾದ ಖಾನ್ ಸರ್ (Khan Sir) 7,000 ರಾಖಿಗಳನ್ನು (Rakhi) ಕಟ್ಟಿಸಿಕೊಳ್ಳುವ ಮೂಲಕ ವಿಶ್ವ ದಾಖಲೆ (World Record) ಬರೆದಿದ್ದಾರೆ. ರಕ್ಷಾ ಬಂಧನ (Raksha Bandhan) ದಿನದಂದು ಕೋಚಿಂಗ್ ಸೆಂಟರ್‌ನಲ್ಲಿ (Coaching Centre) ಏರ್ಪಡಿಸಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿನಿಯರು (Students) ಖಾನ್ ಸರ್‌ಗೆ ರಾಖಿ ಕಟ್ಟಲು ಮುಗಿಬಿದ್ದರು.

    ಅಪಾರ ಜನಸ್ತೋಮದಿಂದಾಗಿ ಎಲ್ಲರಿಗೂ ರಾಖಿ ಕಟ್ಟಲು ಸಾಧ್ಯವಾಗಲಿಲ್ಲ. ಖಾನ್ ಸರ್ ಅವರು ಪ್ರತಿಯೊಬ್ಬ ವಿದ್ಯಾರ್ಥಿನಿಯನ್ನೂ ಖುದ್ದಾಗಿ ಭೇಟಿಯಾಗಿ ರಾಖಿ ಕಟ್ಟುವಂತೆ ನೋಡಿಕೊಂಡರು. ಈ ಘಟನೆ ಸುಮಾರು ಎರಡೂವರೆ ಗಂಟೆಗಳ ಕಾಲ ನಡೆಯಿತು. ಇಂತಹ ಘಟನೆ ಹಿಂದೆಂದೂ ಸಂಭವಿಸಿಲ್ಲ. ಇದು ವಿಶ್ವ ದಾಖಲೆ ಎಂದು ವರದಿಯಾಗಿದೆ. ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್ INDIA ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾಗಲಿ: ಎಎಪಿ ಮುಖ್ಯ ವಕ್ತಾರೆ

    ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಖಾನ್ ಸರ್, ನನಗೆ ಸ್ವಂತ ಸಹೋದರಿಯರು ಇಲ್ಲ. ಆದ್ದರಿಂದ ಈ ಎಲ್ಲಾ ಹುಡುಗಿಯರನ್ನು ತನ್ನ ಸಹೋದರಿಯರಂತೆ ಪರಿಗಣಿಸುತ್ತೇನೆ. ಪ್ರತಿ ವರ್ಷ ನನ್ನ ವಿದ್ಯಾರ್ಥಿಗಳಿಂದ ರಾಖಿಗಳನ್ನು ಕಟ್ಟಲಾಗುತ್ತದೆ. ಅವರಷ್ಟು ರಾಖಿಗಳನ್ನು ಜಗತ್ತಿನಲ್ಲಿ ಯಾರೂ ಯಾರಿಗೂ ಕಟ್ಟುತ್ತಿರಲಿಲ್ಲ ಎಂದು ವಿಶ್ವಾಸದಿಂದ ಹೇಳಿದರು. ಇದನ್ನೂ ಓದಿ: ನಾಳೆಯಿಂದ INDIA ಒಕ್ಕೂಟದ 3ನೇ ಸಭೆ – ‘ಬಿಜೆಪಿ ಚಲೇ ಜಾವೋ’ ಅಭಿಯಾನಕ್ಕೆ ಚಾಲನೆ ನಿರೀಕ್ಷೆ

    ವಿದ್ಯಾರ್ಥಿನಿಯರು ಕೋಚಿಂಗ್ ಪಡೆಯಲು ಬೇರೆ ಬೇರೆ ಸ್ಥಳಗಳಿಂದ ಬರುತ್ತಾರೆ. ತಮ್ಮ ಕುಟುಂಬವನ್ನು ಬಿಟ್ಟು ತಮ್ಮ ಕೋಚಿಂಗ್ ಸೆಂಟರ್‌ನಲ್ಲಿ ಓದುತ್ತಾರೆ. ಅವರು ತಮ್ಮ ಕುಟುಂಬಗಳನ್ನು ಕಳೆದುಕೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾನು ಅವರಿಗೆ ಸಹೋದರನ ಸ್ಥಾನ ನೀಡುತ್ತೇನೆ. ಶಿಕ್ಷಣದ ಮೂಲಕ ತನ್ನ ಸಹೋದರಿಯರು ಯಶಸ್ಸನ್ನು ಸಾಧಿಸಲು ಮತ್ತು ಉತ್ತಮ ಉದ್ಯೋಗಗಳನ್ನು ಪಡೆಯಲು ಸಹಾಯ ಮಾಡುವುದು ನನ್ನ ಗುರಿಯಾಗಿದೆ ಎಂದರು. ಇದನ್ನೂ ಓದಿ: Chandrayaan-3: ‘ಸ್ಮೈಲ್ ಪ್ಲೀಸ್’ – ವಿಕ್ರಂನ ಫೋಟೋ ಕ್ಲಿಕ್ಕಿಸಿದ ಪ್ರಗ್ಯಾನ್

    ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿದ್ಯಾರ್ಥಿಗಳು ಖಾನ್ ಸರ್ ಅವರನ್ನು ವಿಶ್ವದ ಅತ್ಯುತ್ತಮ ಶಿಕ್ಷಕ, ಗುರು ಮತ್ತು ಸಹೋದರ ಎಂದು ಶ್ಲಾಘಿಸಿದರು. ಅವರಿಗಿಂತ ಉತ್ತಮ ಸಹೋದರ ಇಲ್ಲ ಎಂದು ಪ್ರತಿಪಾದಿಸಿದರು. ಕೆಲವು ವಿದ್ಯಾರ್ಥಿಗಳು ತಮ್ಮ ಜೀವನದುದ್ದಕ್ಕೂ ಖಾನ್ ಸರ್ ಅವರ ಕೈಗೆ ರಾಖಿ ಕಟ್ಟುವುದನ್ನು ಮುಂದುವರಿಸುತ್ತೇವೆ ಎಂದು ತಮ್ಮ ಬಯಕೆಯನ್ನು ವ್ಯಕ್ತಪಡಿಸಿದರು. ಇದನ್ನೂ ಓದಿ: ಅದಾನಿ ಷೇರು ಶಾರ್ಟ್‌ ಸೆಲ್ಲಿಂಗ್‌, 16 ಕಂಪನಿಗಳಿಗೆ ಭಾರೀ ಲಾಭ – ಇಡಿ ತನಿಖಾ ವರದಿಯಲ್ಲಿ ಏನಿದೆ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಗ್ಗಿ ಹೇಳಿ ವಿಶ್ವ ದಾಖಲೆ ಬರೆದ ಚೈತನ್ಯ ಶಾಲೆ

    ಮಗ್ಗಿ ಹೇಳಿ ವಿಶ್ವ ದಾಖಲೆ ಬರೆದ ಚೈತನ್ಯ ಶಾಲೆ

    ಬೆಂಗಳೂರು: 10 ರಾಜ್ಯಗಳ ಚೈತನ್ಯ ಸ್ಕೂಲ್‌ನ 73 ಶಾಖೆಗಳಿಂದ 400 ಜೂಮ್‌ ಲಿಂಕ್ಸ್‌ ಮೂಲಕ 2,000ಕ್ಕೂ ಹೆಚ್ಚು ವಿದ್ಯಾರ್ಥಿಗಳು 100 ನಿಮಿಷಗಳಲ್ಲಿ ಮಗ್ಗಿ ಪಠಿಸುವ ಮೂಲಕ  ವರ್ಲ್ಡ್‌ ಬುಕ್‌ ಆಫ್‌ ರೆಕಾರ್ಡ್ಸ್‌ – ಲಂಡನ್‌  (World Book of Records London) ದಾಖಲೆ ಮಾಡಿದ್ದಾರೆ.

    ಬೆಂಗಳೂರಿನ (Bengaluru) ಜಯನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ 1 ರಿಂದ 100ರವರೆಗೆ ಮ್ಯಾಥ್ ಟೇಬಲ್ಸ್‌ಗಳನ್ನು (ಮಗ್ಗಿ) 100 ನಿಮಿಷಗಳಲ್ಲಿ ಹೇಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಈ ಮೂಲಕ ಶ್ರೀ ಚೈತನ್ಯ ಟೆಕ್ನೋ ಶಾಲೆಗಳ (Chaitanya Techno School) ಮಕ್ಕಳು ಹ್ಯಾಟ್ರಿಕ್ ವಿಶ್ವ ದಾಖಲೆ ನಿರ್ಮಿಸಿದರು. ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟು – ಪಾಕ್‌ನಲ್ಲಿ ಅಗತ್ಯ ವಸ್ತುಗಳ ಕೊರತೆ, ಚಿಕನ್ ಬೆಲೆಯೂ ಗಗನಕ್ಕೆ

    ಈ ಕಾರ್ಯಕ್ರಮದಲ್ಲಿ ಚೈತನ್ಯ ಟೆಕ್ನೋ ಶಾಲೆಯ ಮ್ಯಾವರಿಕ್ಸ್ ವಿಭಾಗದ 5 ರಿಂದ 9ನೇ ವಯಸ್ಸಿನ ಮಕ್ಕಳು ಭಾಗವಹಿಸಿದ್ದರು. ಈ ಶಾಲೆಯೂ ಸತತವಾಗಿ ಮೂರು ವರ್ಷಗಳಿಂದ ಈ ದಾಖಲೆ ನಿರ್ಮಿಸಿದ್ದಾರೆ.  ಚೈತನ್ಯ ಟೆಕ್ನೋ ಸ್ಕೂಲ್ ಪ್ರತೀ ವರ್ಷವೂ ಮಕ್ಕಳಿಗೆ ಬೇರೆ ಬೇರೆ ಕೌಶಲ್ಯಗಳ ಬಗ್ಗೆ ತರಬೇತಿ ನೀಡಿ ತಮ್ಮ ಸಂಸ್ಥೆಯ ಮಕ್ಕಳ ಹೆಸರನ್ನು ವರ್ಲ್ಡ್ ರೆಕಾರ್ಡ್‌ನಲ್ಲಿ ನೊಂದಾಯಿಸುವಲ್ಲಿ ಸಹಕರಿಸುತ್ತಾ ಬಂದಿದೆ. ಇದನ್ನೂ ಓದಿ: ಇಂದು ಕೂಡಲಸಂಗಮ, ಗೋಕರ್ಣದಲ್ಲಿ ಸಿದ್ದೇಶ್ವರ ಶ್ರೀ ಅಸ್ಥಿ ವಿಸರ್ಜನೆ

    ಚೈತನ್ಯ ಶಾಲೆಗಳ ಶೈಕ್ಷಣಿಕ ನಿರ್ದೇಶಕಿ ಮಾತನಾಡಿ, ಈ ದಾಖಲೆಯನ್ನು ʼವರ್ಲ್ಡ್ ಆಫ್‌ ರೆಕಾರ್ಡ್ ಲಂಡನ್ʼ ಮೇಲ್ವಿಚಾರಣೆ ನಡೆಸಿತು. ಮಕ್ಕಳ ಮಾನಸಿಕ ಬುದ್ಧಿಮತೆಯನ್ನು ಹೆಚ್ಚಿಸಲು ಇಂತಹ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಾಸಾ ಹಮ್ಮಿಕೊಳ್ಳುವ ವಿಶ್ವ ಸ್ಪೇಸ್ ಸೆಟಲ್ಮೆಂಟ್ ಸ್ಪರ್ಧೆಯಲ್ಲಿ ಚೈತನ್ಯ ಟೆಕ್ನೋ ಶಾಲೆ ಭಾಗವಹಿಸಿ ಚಾಂಪಿಯನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಯೋಗಿ ಆದಿತ್ಯನಾಥ್ 50ನೇ ಹುಟ್ಟುಹಬ್ಬಕ್ಕೆ 111 ಅಡಿ ಎತ್ತರ ಕೇಕ್ ಸಿದ್ಧ

    ಯೋಗಿ ಆದಿತ್ಯನಾಥ್ 50ನೇ ಹುಟ್ಟುಹಬ್ಬಕ್ಕೆ 111 ಅಡಿ ಎತ್ತರ ಕೇಕ್ ಸಿದ್ಧ

    ಲಕ್ನೋ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ 50ನೇ ಜನ್ಮದಿನದ ಪ್ರಯುಕ್ತ ಅವರ ಬೆಂಬಲಿಗರೊಬ್ಬರು ಭಾನುವಾರ ಬರೇಲಿಯಲ್ಲಿ 111 ಅಡಿ ಎತ್ತರದ ಕೇಕ್ ಕತ್ತರಿಸುವ ಮೂಲಕ ವಿಶ್ವ ದಾಖಲೆಗೆ ಯತ್ನಿಸುತ್ತಿದ್ದಾರೆ.

    ಬರೇಲಿಯ ನವಾಬ್‍ಗಂಜ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಶಾಸಕ, ಸಂಸದ ಆರ್ಯ ಅವರ ಕ್ಷೇತ್ರದಲ್ಲಿ ವಿಶ್ವದಾಖಲೆಗೆ ಪ್ರಯತ್ನಿಸಿದ್ದಾರೆ ಎಂದು ಮಾಜಿ ನಗರ ಪಂಚಾಯತ್ ಅಧ್ಯಕ್ಷ ಅಮೀರ್ ಜೈದಿ ತಿಳಿಸಿದರು.

    ಎತ್ತರದ ಕೇಕ್‍ಗಳಲ್ಲಿ ಪ್ರಸ್ತುತ ವಿಶ್ವದಾಖಲೆಯಲ್ಲಿ 108.27 ಅಡಿಯ ಕೇಕ್ ದಾಖಲೆಯನ್ನು ಸೃಷ್ಟಿಸಿದೆ. ಆದರೆ 111 ಅಡಿ ಎತ್ತರದ ಕೇಕ್ ಕತ್ತರಿಸುವ ಮೂಲಕ ಈ ದಾಖಲೆಯನ್ನು ಮುರಿಯಲು ಪ್ರಯತ್ನಿಸುತ್ತಿದ್ದಾರೆ. ಹಂತ ಹಂತವಾಗಿ ಜೋಡಿಸಲಾದ ಈ ಕೇಕ್ 40 ಕ್ವಿಂಟಲ್ ತೂಕವಿದೆ. ಇದನ್ನೂ ಓದಿ: ಬಿಜೆಪಿ ಮುಖಂಡ ಅನಂತ್ ರಾಜು ಆತ್ಮಹತ್ಯೆ ಕೇಸ್- 2 ಡೆತ್ ನೋಟ್‍ಗಳು ಲಭ್ಯ

    ರಾಜ್ಯದಾದ್ಯಂತ ಮುಖ್ಯಮಂತ್ರಿಗಳು ಶಾಂತಿಗೆ ಹೆಚ್ಚು ಒತ್ತನ್ನು ನೀಡಿರುವ ಹಿನ್ನೆಲೆಯಲ್ಲಿ ಕೇಕ್ ಆಫ್ ಪೀಸ್ ಎಂಬ ಹೆಸರನ್ನು ಇಡಲಾಗಿದೆ. ವಿಶ್ವ ದಾಖಲೆಯ ಈ ಕೇಕ್‍ನಲ್ಲಿ ಮುಖ್ಯಮಂತ್ರಿಯ ಈ ಉದ್ದೇಶವನ್ನು ಜಗತ್ತಿಗೆ ತಿಳಿಸಲು ಕೇಕ್ ಆಫ್ ಪೀಸ್ ಎಂಬ ಹೆಸರನ್ನು ಬಳಕೆ ಮಾಡಲಾಗಿದೆ.

    ಅಯೋಧ್ಯೆ ಮತ್ತು ಇತರೆಡೆಗಳಲ್ಲಿ ಸುಮಾರು 5 ಲಕ್ಷ ಜನರು ಜನ್ಮದಿನದ ನಿಮಿತ್ತ ಹನುಮಾನ್ ಚಾಲೀಸಾವನ್ನು ಪಠಿಸಲು ಯೋಜಿಸಿದ್ದಾರೆ. ಯೋಗಿ ಬೆಂಬಲಿಗರು ಯೋಜಿಸಿರುವ ಈ ಎಲ್ಲಾ ವಿಷಯಗಳ ಬಗ್ಗೆ ಯೋಗಿ ಆದಿತ್ಯನಾಥ್ ಅವರಿಗೆ ತಿಳಿದಿಲ್ಲ ಎಂದು ಬೆಂಬಲಿಗರು ತಿಳಿಸಿದ್ದಾರೆ. ಯೋಗಿ ಆದಿತ್ಯನಾಥ್ ಅವರಿಗೆ ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಶುಭಾಶಯ ಕೋರಿದ್ದಾರೆ. ಇದನ್ನೂ ಓದಿ: ʻಒಂದು ಕುಟುಂಬ, ಒಂದು ಸರ್ಕಾರಿ ಕೆಲಸʼ – ನೀತಿಯನ್ನು ಎತ್ತಿ ಹಿಡಿದ ಹೈಕೋರ್ಟ್‌

  • 5.5 ತಿಂಗಳಿಗೆ ಜನಿಸಿದ ಮಗು ವಿಶ್ವ ದಾಖಲೆ

    5.5 ತಿಂಗಳಿಗೆ ಜನಿಸಿದ ಮಗು ವಿಶ್ವ ದಾಖಲೆ

    ನ್ಯೂಯಾರ್ಕ್: 2020ರ ಜುಲೈನಲ್ಲಿ ಅಮೆರಿಕಾದ ಅಲಬಾಮದಲ್ಲಿ ಐದೂವರೆ ತಿಂಗಳಲ್ಲೇ ಜನಿಸಿದ ಮಗುವು ಅವಧಿಗಿಂತ ಮುಂಚಿತವಾಗಿ ಹುಟ್ಟಿ ಬದುಕುಳಿದ ಮಗು ಎಂಬ ಗಿನ್ನಿಸ್ ದಾಖಲೆಯನ್ನು ತನ್ನ ಹೆಸರಿನಲ್ಲಿ ಬರೆದುಕೊಂಡಿದೆ.

    2020 ಜುಲೈ4ರಂದು ಮಿಶೆಲ್ ಬಟ್ಲರ್ ಅವರಿಗೆ ಜನಿಸಿದ ಕುರ್ಟಿಸ್ ಝೈ-ಕೀರ್ತ್ ಗಿನ್ನಿಸ್ ದಾಖಲೆಗೆ ಭಾಜನವಾದ ಮಗುವಾಗಿದೆ. ಸಾಮಾನ್ಯವಾಗಿ ಮಹಿಳೆ ಗರ್ಭ ಧರಿಸಿದ 9 ತಿಂಗಳ ಬಳಿಕ ಮಗುವಿನ ಜನ್ಮ ನೀಡುತ್ತಾರೆ. ಆದರೆ ಐದೂವರೆ ತಿಂಗಳಿಗೆ ಈ ಮಗು ಜನಿಸಿದೆ. ಇದನ್ನೂ ಓದಿ: ಫೇಸ್‍ಬುಕ್ ತೆರೆದರೆ ಕೆನ್ನಗೆ ಬಾರಿಸಲು ಮಹಿಳೆ ನೇಮಿಸಕೊಂಡ ಉದ್ಯಮಿ

    ಮಿಶೆಲ್ 2020ರ ನವೆಂಬರ್ 11ರಂದು ತಮ್ಮ ಮಗುವಿನ ಜನ್ಮ ನೀಡಬೇಕಿತ್ತು. ಆದರೆ ಆರೋಗ್ಯ ಪರೀಕ್ಷೆಗೆ 2020ರ ಜುಲೈ 4 ರಂದು ಆಸ್ಪತ್ರೆಗೆ ಬಂದ ಮಿಶೆಲ್ ಅವರನ್ನು ಅಲಬಾಮನ ವಿವಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಇದನ್ನೂ ಓದಿ: ಹಿಂದೂ ಪುರಾತನ ದೇವಾಲಯವನ್ನು ಪುನರ್‌ನಿರ್ಮಿಸಲು ಆದೇಶಿದ ಪಾಕ್ ನ್ಯಾಯಮೂರ್ತಿ

    ಮಿಶೆಲ್ ಅವರಿಗೆ ಒಂದು ಹೆಣ್ಣು, ಗಂಡು ಮಗು ಜನಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಹೆಣ್ಣು ಮಗುಸಾವನ್ನಪ್ಪಿತ್ತು. ಆದರೆ ಹುಟ್ಟಿದಾಗ ಗಂಡು ಮಗು ಕೇವಲ 420 ಗ್ರಾಂ ಅಂದರೆ ಒಂದು ಪುಟ್ಬಾಲ್ ತೂಕ ಕ್ಕಿಂತ ಕಡಿಮೆ ಇತ್ತು. ಈಗ ಇದು ಸಾಮಾನ್ಯ ಮಗುವಿನಂತೆ ಬೆಳೆಯುತ್ತಿದೆ.

  • ವಿಶ್ವದ ಅತ್ಯಂತ ಬೆಲೆ ಬಾಳುವ ಹ್ಯಾಂಡ್ ಬ್ಯಾಗ್- 52 ಕೋಟಿ ಬೆಲೆ, ವಿಶೇಷತೆ ಏನು ಗೊತ್ತಾ?

    ವಿಶ್ವದ ಅತ್ಯಂತ ಬೆಲೆ ಬಾಳುವ ಹ್ಯಾಂಡ್ ಬ್ಯಾಗ್- 52 ಕೋಟಿ ಬೆಲೆ, ವಿಶೇಷತೆ ಏನು ಗೊತ್ತಾ?

    ರೋಮ್: ಇಟಲಿಯ ಐಷಾರಾಮಿ ವಸ್ತುಗಳ ಬ್ರಾಂಡ್ ಆಗಿರುವ ಬೋರಿನಿ ಮಿಲನೇಸಿ ವಿಶ್ವದ ಅತ್ಯಂತ ಬೆಲೆ ಬಾಳುವ ಹ್ಯಾಂಡ್ ಬ್ಯಾಗ್ ಪರಿಚಯಿಸಿದ್ದು, ಇದರ ಬೆಲೆ ಬರೋಬ್ಬರಿ 52 ಕೋಟಿ ರೂ. ಆಗಿದೆ.

    ಬೊಲುಗ್ನಾ ಮೂಲದ ಬ್ರಾಂಡ್ ಆಗಿರುವ ಬೋರಿನಿ ಮಿಲನೇಸಿ ಕೇವಲ ಮೂರು ಐಷಾರಾಮಿ ಪರ್ವಾ ಮೀ ಬ್ಯಾಗ್‍ಗಳನ್ನು ಉತ್ಪಾದಿಸಿದೆ. ಪ್ರತಿ ಬ್ಯಾಗ್ ತಯಾರಿಸಲು 1 ಸಾವಿರ ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ ಎಂದು ವರದಿಯಾಗಿದೆ. ಈ ಬ್ಯಾಗ್ ಕುರಿತು ಬೋರಿನಿ ಮಿಲನೇಸಿ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ಬ್ಯಾಗ್ ಮಾರಾಟದಿಂದ ಬಂದ ಆದಾಯದಲ್ಲಿ ಒಂದು ಭಾಗವನ್ನು ಸಮುದ್ರ ಸ್ವಚ್ಛಗೊಳಿಸುವ ಕಾರ್ಯಕ್ಕೆ ದಾನವಾಗಿ ನೀಡಲಾಗುವುದು ಎಂದು ಘೋಷಿಸಿದೆ.

    6 ಮಿಲಿಯನ್ ಯೂರೋ (52 ಕೋಟಿ ರೂ.) ಬೆಲೆ ಬಾಳುವ ಬ್ಯಾಗ್‍ನ್ನು ಪರಿಚಯಿಸಲು ನಮಗೆ ಹೆಮ್ಮೆಯಾಗುತ್ತದೆ. ಇದು ವಿಶ್ವದ ಅತ್ಯಂತ ಬೆಲೆ ಬಾಳುವ ಬ್ಯಾಗ್ ಎಂಬುದು ಮತ್ತೊಂದು ವಿಶೇಷ. ಪ್ಲಾಸ್ಟಿಕ್‍ನಿಂದ ಮಲಿನವಾಗುತ್ತಿರುವ ಸಮುದ್ರವನ್ನು ರಕ್ಷಿಸಬೇಕಿದ್ದು, ಈ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ಬ್ಯಾಗ್ ತಯಾರಿಸಲಾಗಿದೆ. ಈ ಪೈಕಿ 800 ಸಾವಿರ ಯೂರೋಗಳನ್ನು ಸಮುದ್ರವನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ದಾನ ನೀಡಲಾಗುತ್ತಿದೆ ಎಂದು ಸಂಸ್ಥೆ ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದೆ.

     

    View this post on Instagram

     

    A post shared by BOARINI MILANESI (@boarinimilanesi)

    ಬ್ಯಾಗ್ ಸೆಮಿ ಶೈನಿ ಅಲಿಗೇಟರ್ ಹೊದಿಕೆ ಹೊಂದಿದ್ದು, 10 ಬಿಳಿ ಚಿನ್ನದ ಚಿಟ್ಟೆಗಳು ಹಾಗೂ ವಜ್ರದ ಕೊಕ್ಕೆಗಳಿಂದ ಬ್ಯಾಗ್ ಮೇಲ್ಭಾಗದಲ್ಲಿ ಅಲಂಕರಿಸಲಾಗಿದೆ. 10 ಚಿಟ್ಟೆಗಳಲ್ಲಿ ನಾಲ್ಕು ವಜ್ರ ಹಾಗೂ ಮೂರು ನೀಲಮಣಿ ಹಾಗೂ ಅಪರೂಪದ ಪ್ಯಾರೈಬಾ ಟೂರ್‍ಮ್ಯಾಲೈನ್‍ಗಳಿಂದ ಅಲಂಕರಿಸಲಾಗಿದೆ. ಸಮುದ್ರದಿಂದ ಪ್ರೇರಿತಗೊಂಡು ನೀಲಿ ಬಣ್ಣದಲ್ಲಿ ಚೀಲವನ್ನು ವಿನ್ಯಾಸ ಮಾಡಲಾಗಿದ್ದು, ಕಲ್ಲುಗಳ ಆಕಾರದ ಡಿಸೈನ್ ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಬೋರಿನಿ ಮಿಲನೇಸಿ ಸಹ-ಸಂಸ್ಥಾಪಕ ಮ್ಯಾಟಿಯೊ ರೊಡಾಲ್ಫೊ ಮಿಲನೇಸಿ ಅವರು ತಮ್ಮ ತಂದೆಯ ನೆನಪಿನ ಗೌರವಾರ್ಥವಾಗಿ ಇದನ್ನು ಸಮರ್ಪಿಸಿದ್ದಾರೆ.

    ಬ್ಯಾಗ್ ವಿನ್ಯಾಸಕರಾದ ಕೊರೊಲಿನಾ ಬೋರಿನಿ ಈ ಕುರಿತು ಮಾಹಿತಿ ನೀಡಿ, ನೀಲಮಣಿಗಳು ಸಾಗರದ ಆಳವನ್ನು ಪ್ರತಿನಿಧಿಸುತ್ತವೆ. ಪ್ಯಾರೈಬಾ ಟೂರ್ ಮ್ಯಾಲಿನ್ ಅಸಂಖ್ಯಾತ ಕೆರಿಬಿಯನ್ ಸಮುದ್ರಗಳನ್ನು ನೆನಪಿಸುತ್ತವೆ. ಅಲ್ಲದೆ ವಜ್ರಗಳು ನೀರಿನ ಪಾರದರ್ಶಕತೆಯನ್ನು ಬಿಂಬಿಸುತ್ತವೆ ಎಂದು ವಿವರಿಸಿದ್ದಾರೆ. ಬೋರಿನಿ ಮಿಲನೇಸಿ ಕಂಪನಿಯನ್ನು 2016ರಲ್ಲಿ ಇಟಲಿಯಲ್ಲಿ ಸ್ಥಾಪಿಸಲಾಗಿದ್ದು, ಐಶಾರಾಮಿ ವಸ್ತುಗಳನ್ನು ಉತ್ಪಾದಿಸುತ್ತದೆ.

    ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಪ್ರಕಾರ ಈಗಿನ ವಿಶ್ವದ ಅತ್ಯಂತ ಬೆಲೆ ಬಾಳುವ ಹ್ಯಾಂಡ್ ಬ್ಯಾಗ್ ಮೌವಾಡ್ ಆಗಿದ್ದು, ಇದು ಹೃದಯದಾಕಾರದಲ್ಲಿದೆ. 1001 ನೈಟ್ಸ್ ಡೈಮಂಡ್ ಪರ್ಸ್, 18 ಕ್ಯಾರೆಟ್ ಚಿನ್ನದಿಂದ ಇದನ್ನು ಮಾಡಲಾಗಿದೆ. 4,517 ವಜ್ರಗಳನ್ನು ಹೊಂದಿದೆ.