Tag: ವಿಶ್ವ ತಂದೆಯ ದಿನಾಚರಣೆ

  • ಅಪ್ಪಂದಿರ ದಿನದಂದು ವರುಣ್‍ಗೆ ತಂದೆಯಿಂದ ಕಪಾಳಮೋಕ್ಷ: ವಿಡಿಯೋ

    ಅಪ್ಪಂದಿರ ದಿನದಂದು ವರುಣ್‍ಗೆ ತಂದೆಯಿಂದ ಕಪಾಳಮೋಕ್ಷ: ವಿಡಿಯೋ

    ಮುಂಬೈ: ಬಾಲಿವುಡ್ ನಟ ಫಾದರ್ ಡೇ ಎಂದೇ ತನ್ನ ತಂದೆಯಿಂದ ಕಪಾಳಕ್ಕೆ ಬಾರಿಸಿಕೊಂಡಿದ್ದಾರೆ. ಅಲ್ಲದೆ ತನ್ನ ತಂದೆ ಕಪಾಳಕ್ಕೆ ಹೊಡೆದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ತಂದೆ ಡೇವಿಡ್ ದವನ್ ತನ್ನ ಮಗ ವರುಣ್‍ಗೆ ಕಪಾಳಕ್ಕೆ ಹೊಡೆದಿದ್ದಾರೆ. ಕಪಾಳಕ್ಕೆ ಹೊಡೆದುಕೊಂಡ ತಕ್ಷಣ ವರುಣ್ ಕ್ಯಾಮೆರಾ ನೋಡಿ ಸ್ಮೈಲ್ ಮಾಡಿದ್ದಾರೆ. ಈ ವಿಡಿಯೋವನ್ನು ವರುಣ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ವರುಣ್ ಈ ವಿಡಿಯೋ ಹಂಚಿಕೊಂಡು ಅದಕ್ಕೆ, “ತಂದೆ, ತಂದೆ ಆಗಿರುತ್ತಾರೆ. ನನ್ನ ತಂದೆ ನನಗೆ ಪ್ರೀತಿಯಿಂದ ಹೊಡೆದರೆ ಅದು ಇಷ್ಟವಾಗುತ್ತದೆ. ನಿಮಗೆ ಹೇಗೆ ಅನಿಸುತ್ತದೆ” ಎಂದು ಪೋಸ್ಟ್ ಮಾಡಿದ್ದಾರೆ.

    ಡೇವಿಡ್ ನಿರ್ದೇಶಕರಾಗಿದ್ದು, ವರುಣ್ ನಟನೆಯ ‘ಮೈ ತೇರಾ ಹೀರೋ’ ಹಾಗೂ ‘ಜುಡ್ವಾ-2’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈಗ ಡೇವಿಡ್ ‘ಕೂಲಿ ನಂ 1’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ವರುಣ್‍ಗೆ ನಾಯಕಿಯಾಗಿ ಸಾರಾ ಅಲಿಖಾನ್ ನಟಿಸುತ್ತಿದ್ದು, ಮೇ 1, 2020ರಂದು ಚಿತ್ರ ಬಿಡುಗಡೆ ಆಗಲಿದೆ.

    ವರುಣ್ ದವನ್ ಅಲ್ಲದೆ ಬಾಲಿವುಡ್ ಕಲಾವಿದರಾದ ರಣ್‍ವೀರ್ ಸಿಂಗ್, ಅರ್ಜುನ್ ಕಪೂರ್, ಸೋನಂ ಕಪೂರ್, ಸಾರಾ ಅಲಿ ಖಾನ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ತಮ್ಮ ತಂದೆ ಜೊತೆಗಿರುವ ಫೋಟೋವನ್ನು ಹಂಚಿ ಶುಭಾಶಯ ತಿಳಿಸಿದ್ದಾರೆ.