ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನ ಫೈನಲ್ (WTC Finals) ಪಂದ್ಯಗಳನ್ನು 2031ರ ವರೆಗೆ ಇಂಗ್ಲೆಂಡ್‌ನಲ್ಲೇ ನಡೆಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ನಿರ್ಧರಿಸಿದೆ. ಈ ಕುರಿತು ಐಸಿಸಿ ಭಾನುವಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.
ಹೌದು. ಸಿಂಗಾಪುರದಲ್ಲಿ ನಡೆದ ಮಹತ್ವದ ಸಭೆಯ ನಂತರ ಐಸಿಸಿ ಪತ್ರಿಕಾ ಪ್ರಕಟಣೆಯ ಮೂಲಕ ಮಾಹಿತಿ ಹಂಚಿಕೊಂಡಿದೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮುಂದಿನ ಮೂರು ಆವೃತ್ತಿಗಳ ಫೈನಲ್‌ಗಳನ್ನು ಇಂಗ್ಲೆಂಡ್‌ನಲ್ಲೇ (England) ನಡೆಸಲು ತೀರ್ಮಾನಿಸಿದ್ದು, ಅನುಮೋದನೆಯನ್ನೂ ನೀಡಲಾಗಿದೆ. ಕಳೆದ ಮೂರು ಆವೃತ್ತಿಯ WTC ಫೈನಲ್ ಪಂದ್ಯಗಳು ಇಂಗ್ಲೆಂಡ್‌ನಲ್ಲೇ ನಡೆದಿದೆ ಅನ್ನೋದು ವಿಶೇಷ.
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (England Cricket Board)ಯೇ ಮೊದಲ ಆವೃತ್ತಿಯಿಂದಲೂ WTC ಫೈನಲ್ ಪಂದ್ಯಗಳಿಗೆ ಆತಿಥ್ಯ ವಹಿಸುತ್ತಿದೆ. ಈಗ ಮುಂದೆ 2027, 2029, 2031ರ ಆವೃತ್ತಿಗಳೂ ಇಂಗ್ಲೆಂಡ್‌ನಲ್ಲೇ ನಡೆಸಲು ಅನುಮತಿ ಪಡೆದಿದೆ. ಇಂಗ್ಲೆಂಡ್‌ನಲ್ಲಿ ವ್ಯವಸ್ಥೆಗಳ ಅನುಕೂಲ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಐಸಿಸಿ ಹೇಳಿದೆ. ಆದ್ರೆ ಇನ್ನೂ ಸ್ಥಳಗಳನ್ನ ನಿಗದಿಪಡಿಸಿಲ್ಲ.
2021ರಲ್ಲಿ ಚೊಚ್ಚಲ ಆವೃತ್ತಿಯ ಫೈನಲ್ ಪಂದ್ಯವನ್ನು ಇಂಗ್ಲೆಂಡ್‌ನ ಸೌತಾಂಪ್ಟನ್, 2023ರಲ್ಲಿ ದಿ ಓವಲ್ ಹಾಗೂ ಪ್ರಸಕ್ತ ವರ್ಷ ಲಾರ್ಡ್ಸ್ ನಲ್ಲಿ WTC ಫೈನಲ್ ಪಂದ್ಯ ನಡೆದಿತ್ತು. ಮೊದಲೆರಡು ಆವೃತ್ತಿಗಳಲ್ಲಿ ಕ್ರಮವಾಗಿ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಚಾಂಪಿಯನ್ ಆಗಿದ್ದರೆ, ಭಾರತ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. 3ನೇ ಆವೃತ್ತಿಯಲ್ಲಿ ಭಾರತ ನಾಕೌಟ್‌ನಿಂದ ಹೊರಗುಳಿದ ಕಾರಣ ದಕ್ಷಿಣ ಆಫ್ರಿಕಾ ಹಾಗೂ ಆಸೀಸ್ ನಡುವೆ ಫೈನಲ್ ಪಂದ್ಯ ನಡೆದಿತ್ತು. ಲಾರ್ಡ್ ಅಂಗಳದಲ್ಲಿ ಚಾಂಪಿಯನ್ ಆದ ದಕ್ಷಿಣ ಆಫ್ರಿಕಾ ಚಾಂಪಿಯನ್ ಆಗಿ ಚೋಕರ್ಸ್ ಹಣೆಪಟ್ಟಿಯನ್ನೂ ಕಳಚಿತು.
– 10 ವರ್ಷಗಳ ಬಳಿಕ ಬಾರ್ಡರ್ ಗಾವಸ್ಕರ್ ಟ್ರೋಫಿ ಗೆದ್ದ ಆಸ್ಟ್ರೇಲಿಯಾ
– ವೇಗಿ ಜಸ್ಪ್ರೀತ್ ಬುಮ್ರಾಗೆ ಸರಣಿ ಶ್ರೇಷ್ಠ ಪ್ರಶಸ್ತಿ
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಮುಕ್ತಾಯಗೊಂಡಿದ್ದು, ಅತಿಥೇಯ ಆಸ್ಟ್ರೇಲಿಯಾ ತಂಡ 3-1 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿದೆ. ಈ ಮೂಲಕ 10 ವರ್ಷಗಳ ಬಳಿಕ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಗೆದ್ದ ವಿಶೇಷ ಸಾಧನೆಯನ್ನೂ ಕಾಂಗರೂ ಪಡೆ ಮಾಡಿದೆ.
ಈ ಮೂಲಕ ಸತತ 2ನೇ ಬಾರಿಗೆ ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಿದೆ. ಪ್ರಸಕ್ತ ವರ್ಷ ಇಂಗ್ಲೆಂಡ್‌ನ ಪ್ರತಿಷ್ಠಿತ ಲಾರ್ಡ್ಸ್ ಮೈದಾನದಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕಾದಾಟಕ್ಕಿಳಿಯಲಿದೆ. 2021-23ರ ಆವೃತ್ತಿಯಲ್ಲಿ ಮೊದಲ ಬಾರಿಗೆ ಫೈನಲ್ ತಲುಪಿದ್ದ ಆಸ್ಟ್ರೇಲಿಯಾ ಟೀಂ ಇಂಡಿಯಾ ವಿರುದ್ಧ ಗೆದ್ದು ಚಾಂಪಿಯನ್ ಪಟ್ಟಕ್ಕೇರಿತ್ತು.
ಸೂಪರ್ ಸಂಡೇ ಸಿಡ್ನಿಯಲ್ಲಿ ಪವಾಡವೇ ನಡೆಯಬಹುದು ಎಂದು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕಾದುಕುಳಿತಿದ್ದರು. ಒಂದಂತದಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ಆ ರೀತಿಯ ಆಸೆಯನ್ನೂ ಹುಟ್ಟಿಸಿದ್ದರು. ಆದ್ರೆ ಭಾರತದ ವಿರುದ್ಧ ಮತ್ತೆ ಸಿಡಿದ ಟ್ರಾವಿಸ್ ಹೆಡ್ ಮತ್ತು ಮೊದಲನೇ ಪಂದ್ಯದಲ್ಲೇ ತನ್ನ ಸಾಮರ್ಥ್ಯ ಸಾಬೀತು ಪಡಿಸಿದ ಬ್ಯೂ ವೆಬ್‌ಸ್ಟರ್ ಅದಕ್ಕೆ ಅವಕಾಶ ನೀಡದಂತೆ ಮಾಡಿದರು.
ಗೆಲುವಿಗೆ ಕೇವಲ 162 ರನ್‌ಗಳ ಗುರಿ ಪಡೆದಿದ್ದ ಆಸ್ಟ್ರೇಲಿಯಾ ತಂಡ ಆರಂಭದಿಂದಲೇ ಏಕದಿನ ಶೈಲಿಯಲ್ಲಿ ಆಕ್ರಮಣಕಾರಿ ಆಟಕ್ಕೆ ಇಳಿಯಿತು. ಮತ್ತೊಂದೆಡೆ ಗಾಯದ ಸಮಸ್ಯೆಯಿಂದ ವೇಗಿ ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿ ಆಸ್ಟ್ರೇಲಿಯಾ ತಂಡಕ್ಕೆ ಅನುಕೂಲವೇ ಆಯಿತು.
ಲಯ ತಪ್ಪಿದ ಸಿರಾಜ್
ಬುಮ್ರಾ ಅನುಪಸ್ಥಿತಿಯಲ್ಲಿ ಆರಂಭಿಕ ಬೌಲರ್ ಆಗಿ ಕಣಕ್ಕಿಳಿದ ಸಿರಾಜ್ ಮೊದಲ ಓವರ್‌ನಲ್ಲೇ 13 ರನ್ ಚಚ್ಚಿಸಿಕೊಂಡರು. ಅತ್ತ ಆಸ್ಟ್ರೇಲಿಯಾ ಪಾಳಯದಲ್ಲಿ ಆತ್ಮವಿಶ್ವಾಸ ತುಂಬಿ ತುಳುಕುತ್ತಿತ್ತು. ಇದು ಸಾಲದೆಂಬಂತೆ ಪ್ರಸಿದ್ಧ್ ಕೃಷ್ಣ ಅವರು ಮುಂದಿನ ಓವರ್ ನಲ್ಲಿ ಮತ್ತೆ 13 ರನ್ ಗಳನ್ನು ನೀಡಿ ಆಸೀಸ್ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಿದರು. ಈ ಹಂತದಲ್ಲಿ ಇಬ್ಬರು ಬೌಲರ್‌ಗಳು ಅಡ್ಡಾದಿಡ್ಡಿ ಬೌಲಿಂಗ್ ಮಾಡುವುದನ್ನ ನೋಡಿಗಾದ ಪಂದ್ಯ ಬಹಳ ಬೇಗ ಮುಗಿಯುವ ಲಕ್ಷಣಗಳು ಕಂಡು ಬಂದಿತ್ತು.
4ನೇ ಓವರ್ ನಲ್ಲಿ 17 ಎಸೆತಗಳಿಂದ 22 ರನ್ ಗಳನ್ನು ಗಳಿಸಿದ ಸ್ಯಾಮ್ ಕಾನ್‌ಸ್ಟಾಸ್ ಅವರನ್ನು ಪ್ರಸಿದ್ಧ ಕೃಷ್ಣ ಪೆವಿಲಿಯನ್‌ಗಟ್ಟಿದರು. ಜೊತೆಗೆ ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್ ಅವರ ವಿಕೆಟ್‌ಗಳನ್ನು ಕಬಳಿಸಿದರು. ಆಸ್ಟ್ರೇಲಿಯಾ 58 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಾಗ ಗೆಲುವಿನ ಹಾದಿ ಇನ್ನೂ ಸಾಧ್ಯವಿದೆ ಎಂದೇ ಭಾವಿಸಲಾಗಿತ್ತು. ಆದ್ರೆ ಮತ್ತೆ ಟೀಂ ಇಂಡಿಯಾ ಕಾಡಿದ ಟ್ರಾವಿಸ್ ಹೆಡ್ ಹಾಗೂ ವೆಬ್‌ಸ್ಟರ್ ವಿಕೆಟ್ ಬಿಟ್ಟುಕೊಡದೇ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮೊದಲು 6 ವಿಕೆಟ್‌ಗೆ 141 ರನ್ ಗಳಿಸಿ 145 ರನ್‌ಗಳ ಮುನ್ನಡೆ ಕಾಯ್ಡುಕೊಂಡಿದ್ದ ಭಾರತ ತಂಡ ಭಾನುವಾರ ಬೆಳಗ್ಗೆ ಸ್ಪರ್ಧಾತ್ಮಕ ಮೊತ್ತ ಪೇರಿಸಬಹುದು ಎಂಬ ನಿರೀಕ್ಷೆ ಸುಳ್ಳಾಯಿತು. ರವೀಂದ್ರ ಜಡೇಜಾ (13) ಮತ್ತು ವಾಶಿಂಗ್ಟನ್ ಸುಂದರ್ (12) ವಿಕೆಟ್ ಬೇಗನೇ ಕಳೆದುಕೊಂಡರು. ಬಾಲಂಗೋಚಿಗಳೂ ಸಹ ಆಸ್ಟ್ರೇಲಿಯಾ ಬೌಲಿಂಗ್ ತಾಪದ ವಿರುದ್ಧ ನಿಲ್ಲಲು ಸಾಧ್ಯವಾಗಲೇ ಇಲ್ಲ. ಹೀಗಾಗಿ 157 ರನ್ ಗಳಿಗೆ ಭಾರತ ಆಲೌಟ್ ಆಯಿತು. ಪ್ರಥಮ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದಿದ್ದ ಸ್ಕಾಟ್ ಬೋಲೆಂಡ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಪಡೆದರು. ನಾಯಕ ಪ್ಯಾಟ್ ಕಮಿನ್ಸ್ 3 ವಿಕೆಟ್ ಪಡೆದರು. ಉಳಿದೊಂದು ವಿಕೆಟ್ ವೆಬ್‌ಸ್ಟರ್ ಪಾಲಾಯಿತು.
ಎರಡೂ ಇನ್ನಿಂಗ್ಸ್‌ಗಳಲ್ಲಿ ಒಟ್ಟು 10 ವಿಕೆಟ್ ಪಡೆದ ಆಸ್ಚ್ರೇಲಿಯಾದ ವೇಗಿ ಸ್ಕಾಟ್ ಬೋಲೆಂಡ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಸರಣಿಯಲ್ಲಿ ಒಟ್ಟು 32 ವಿಕೆಟ್ ಉರುಳಿಸಿದ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಅವರು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
ಸಂಕ್ಷಿಪ್ತ ಸ್ಕೋರ್
ಭಾರತ ಪ್ರಥಮ ಇನ್ನಿಂಗ್ಸ್ 72.2 ಓವರ್ ಗಳಲ್ಲಿ 185 ರನ್
ಆಸ್ಟ್ರೇಲಿಯಾ ಪ್ರಥಮ ಇನ್ನಿಂಗ್ಸ್ 51 ಓವರ್ ಗಳಲ್ಲಿ 181 ರನ್
ಭಾರತ ದ್ವಿತೀಯ ಇನ್ನಿಂಗ್ಸ್ 39.5 ಓವರ್ ಗಳಲ್ಲಿ 157 ರನ್
ಆಸ್ಚ್ರೇಲಿಯಾ 27 ಓವರ್ ಗಳಲ್ಲಿ 162/4
ಮುಂಬೈ: ವಿಶ್ವಟೆಸ್ಟ್ ಚಾಂಪಿಯನ್ ಶಿಪ್ (WTC) ಭಾಗವಾಗಿ ನ್ಯೂಜಿಲೆಂಡ್ (New Zealand) ವಿರುದ್ಧ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡ ಹೀನಾಯ ಸೋಲು ಕಂಡಿದೆ. ಈ ಕುರಿತು ಮಾತನಾಡಿರುವ ನಾಯಕ ರೋಹಿತ್ ಶರ್ಮಾ (Rohit Sharma), ಸೋಲಿನ ಸಂಪೂರ್ಣ ಹೊಣೆಯನ್ನು ತಾನೆ ಹೊತ್ತುಕೊಳ್ಳುವುದಾಗಿ ಹೇಳಿದ್ದಾರೆ.
ಕಿವೀಸ್ ವಿರುದ್ಧ ಸೋಲಿನ ಬಳಿಕ ಪೋಸ್ಟ್ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ರೋಹಿತ್ ಶರ್ಮಾ, ಈ ಸರಣಿಯ ಸೋಲಿನ ಸಂಪೂರ್ಣ ಜವಾಬ್ದಾರಿಯನ್ನು ನಾನೇ ತೆಗೆದುಕೊಳ್ಳುತ್ತೇನೆ. ಏಕೆಂದರೆ ನಾನು ಉತ್ತಮವಾಗಿ ಬ್ಯಾಟ್ ಮಾಡಲಿಲ್ಲ, ಕೆಟ್ಟದಾಗಿ ಬ್ಯಾಟಿಂಗ್ ಮಾಡಿದೆ. ಬ್ಯಾಟರ್ ಮತ್ತು ನಾಯಕನಾಗಿ ನಾನು ನನ್ನ ಅತ್ಯುತ್ತಮ ಸ್ಥಿತಿಯಲ್ಲಿರಲಿಲ್ಲ. ನಾಯಕನಾಗಿ ತಂಡವನ್ನು ಮುನ್ನಡೆಸದ ಕಾರಣ ನಮ್ಮ ತಂಡ ಕೂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
24 ವರ್ಷಗಳ ಬಳಿಕ ತವರಿನಲ್ಲಿ ವೈಟ್‌ವಾಶ್:
ನ್ಯೂಜಿಲೆಂಡ್ ವಿರುದ್ಧ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. ಈ ಸೋಲಿನೊಂದಿಗೆ 24 ವರ್ಷಗಳ ಬಳಿಕ ತವರಿನಲ್ಲಿ ಸರಣಿ ಸೋತ ಅಪಖ್ಯಾತಿಯನ್ನು ಹೆಗಲಿಗೇರಿಸಿಕೊಂಡಿದೆ. ಕೊನೆಯದ್ದಾಗಿ ಭಾರತ 2000 ಇಸವಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವೈಟ್‌ವಾಶ್ ಆಗಿತ್ತು.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ಭಾರತದ ವಿರುದ್ಧ 26 ರನ್‌ಗಳ ಅಮೋಘ ಜಯ ಸಾಧಿಸಿ, ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿದೆ. ಈ ಮೂಲಕ ಭಾರತದಲ್ಲಿ 3 ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ವೈಟ್‌ವಾಶ್ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
147 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿತು. ನಾಯಕ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ ಅಲ್ಪಮೊತ್ತಕ್ಕೆ ಔಟಾಗಿ ಪೆವಿಲಿಯನ್ ಪರೇಡ್ ನಡೆಸಿದರು. ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಅಲ್ಪಮೊತ್ತಕ್ಕೆ ಔಟಾಗಿದ್ದು ತಂಡಕ್ಕೆ ಭಾರಿ ಆಘಾತ ನೀಡಿತು. ಇದನ್ನೂ ಓದಿ: 24 ವರ್ಷಗಳ ಬಳಿಕ ತವರಿನಲ್ಲಿ ಭಾರತ ವೈಟ್‌ವಾಶ್ – ಸರಣಿ ಗೆದ್ದು ಇತಿಹಾಸ ಸೃಷ್ಟಿಸಿದ ಕಿವೀಸ್
ಪಂತ್ ಬಳಿಕ ಟೀಂ ಇಂಡಿಯಾ ಪಥನ:
ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ರಿಷಭ್ ಪಂತ್ ಆಸರೆಯಾದರು. ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಪಂತ್ 57 ಎಸೆತಗಳಲ್ಲಿ 64 ರನ್ (9 ಬೌಂಡರಿ, 1 ಸಿಕ್ಸರ್) ಗಳಿಸಿದ್ದರು. ಈ ವೇಳೆ ಸುಲಭವಾಗಿ ಕೀಪರ್ ಕ್ಯಾಚ್‌ಗೆ ತುತ್ತಾದರು. ಪಂತ್ ಔಟಾದ ಬೆನ್ನಲ್ಲೇ ಅಶ್ವಿನ್, ಆಕಾಶ್ ದೀಪ್, ವಾಷಿಂಗ್ಟನ್ ಸುಂದರ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಟೀಂ ಇಂಡಿಯಾ 121 ರನ್‌ಗಳಿಗೆ ಸರ್ವಪತನ ಕಂಡಿತು.
147 ರನ್ ಗುರಿ ನೀಡಿದ್ದ ಕಿವೀಸ್:
2ನೇ ದಿನದ ಅಂತ್ಯಕ್ಕೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕಿವೀಸ್ 9 ವಿಕೆಟ್‌ಗೆ 171 ರನ್‌ಗಳಿಸಿತ್ತು. 3ನೇ ದಿನ 143 ರನ್‌ಗಳ ಮುನ್ನಡೆಯೊಂದಿಗೆ ಕ್ರೀಸ್ ಆರಂಭಿಸಿದ್ದ ನ್ಯೂಜಿಲೆಂಡ್ 2ನೇ ಇನ್ನಿಂಗ್ಸ್‌ನಲ್ಲಿ 174 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತಕ್ಕೆ 147 ರನ್‌ಗಳ ಗುರಿ ನೀಡಿತ್ತು. ಇದನ್ನೂ ಓದಿ: 6,6,6,6,6,W,6 – ಒಂದೇ ಓವರ್‌ನಲ್ಲಿ 37 ರನ್ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ!
ಮುಂಬೈ: ನ್ಯೂಜಿಲೆಂಡ್ (New Zealand) ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಕಂಡ ಬೆನ್ನಲ್ಲೇ ಟೀಂ ಇಂಡಿಯಾ (Team India) ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ (WTC Points Table) ನಂ.1 ಸ್ಥಾನ ಕಳೆದುಕೊಂಡಿದೆ.
12 ಪಂದ್ಯಗಳಲ್ಲಿ 62.50 ಪಿಸಿಟಿ (Percentage Of Points Earned) ಪಡೆದಿರುವ ಆಸ್ಟ್ರೇಲಿಯಾ ತಂಡ ಮತ್ತೆ ಅಗ್ರಸ್ಥಾನಕ್ಕೆ ಏರಿದ್ದು, 14 ಪಂದ್ಯಗಳಲ್ಲಿ 58.33 ಪಿಸಿಟಿ ಪಡೆದಿರುವ ಟೀಂ ಇಂಡಿಯಾ 2ನೇ ಸ್ಥಾನಕ್ಕೆ ಕುಸಿದಿದೆ. ಇನ್ನೂ 3, 4 ಮತ್ತು 5ನೇ ಸ್ಥಾನಗಳಲ್ಲಿ ಕ್ರಮವಾಗಿ ಶ್ರೀಲಂಕಾ, ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸ್ಥಾನ ಪಡೆದುಕೊಂಡಿವೆ. ಇದನ್ನೂ ಓದಿ: 24 ವರ್ಷಗಳ ಬಳಿಕ ತವರಿನಲ್ಲಿ ಭಾರತ ವೈಟ್‌ವಾಶ್ – ಸರಣಿ ಗೆದ್ದು ಇತಿಹಾಸ ಸೃಷ್ಟಿಸಿದ ಕಿವೀಸ್
WTC ಟಾಪ್-5 ತಂಡಗಳು:
ಆಸ್ಟ್ರೇಲಿಯಾ – 12 ಪಂದ್ಯ – 62.50 ಪಿಸಿಟಿ
ಭಾರತ – 14 ಪಂದ್ಯ – 58.33 ಪಿಸಿಟಿ
ಶ್ರೀಲಂಕಾ – 9 ಪಂದ್ಯ – 55.56 ಪಿಸಿಟಿ
ನ್ಯೂಜಿಲೆಂಡ್ – 11 ಪಂದ್ಯ – 54.55 ಪಿಸಿಟಿ
ದಕ್ಷಿಣ ಆಫ್ರಿಕಾ – 8 ಪಂದ್ಯ – 54.17 ಪಿಸಿಟಿ
24 ವರ್ಷಗಳ ಬಳಿಕ ತವರಿನಲ್ಲಿ ವೈಟ್‌ವಾಶ್:
ನ್ಯೂಜಿಲೆಂಡ್ ವಿರುದ್ಧ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. ಈ ಸೋಲಿನೊಂದಿಗೆ 24 ವರ್ಷಗಳ ಬಳಿಕ ತವರಿನಲ್ಲಿ ಸರಣಿ ಸೋತ ಅಪಖ್ಯಾತಿಯನ್ನು ಹೆಗಲಿಗೇರಿಸಿಕೊಂಡಿದೆ. ಕೊನೆಯದ್ದಾಗಿ ಭಾರತ 2000 ಇಸವಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವೈಟ್‌ವಾಶ್ ಆಗಿತ್ತು. ಇದನ್ನೂ ಓದಿ: 6,6,6,6,6,W,6 – ಒಂದೇ ಓವರ್‌ನಲ್ಲಿ 37 ರನ್ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ!
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ಭಾರತದ ವಿರುದ್ಧ 26 ರನ್‌ಗಳ ಅಮೋಘ ಜಯ ಸಾಧಿಸಿ, ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿದೆ. ಈ ಮೂಲಕ ಭಾರತದಲ್ಲಿ 3 ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ವೈಟ್‌ವಾಶ್ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
147 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿತು. ನಾಯಕ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ ಅಲ್ಪಮೊತ್ತಕ್ಕೆ ಔಟಾಗಿ ಪೆವಿಲಿಯನ್ ಪರೇಡ್ ನಡೆಸಿದರು. ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಅಲ್ಪಮೊತ್ತಕ್ಕೆ ಔಟಾಗಿದ್ದು ತಂಡಕ್ಕೆ ಭಾರಿ ಆಘಾತ ನೀಡಿತು.
ಪಂತ್ ಬಳಿಕ ಟೀಂ ಇಂಡಿಯಾ ಪಥನ:
ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ರಿಷಭ್ ಪಂತ್ ಆಸರೆಯಾದರು. ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಪಂತ್ 57 ಎಸೆತಗಳಲ್ಲಿ 64 ರನ್ (9 ಬೌಂಡರಿ, 1 ಸಿಕ್ಸರ್) ಗಳಿಸಿದ್ದರು. ಈ ವೇಳೆ ಸುಲಭವಾಗಿ ಕೀಪರ್ ಕ್ಯಾಚ್‌ಗೆ ತುತ್ತಾದರು. ಪಂತ್ ಔಟಾದ ಬೆನ್ನಲ್ಲೇ ಅಶ್ವಿನ್, ಆಕಾಶ್ ದೀಪ್, ವಾಷಿಂಗ್ಟನ್ ಸುಂದರ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಟೀಂ ಇಂಡಿಯಾ 121 ರನ್‌ಗಳಿಗೆ ಸರ್ವಪತನ ಕಂಡಿತು.
ಆಜಾಜ್ ಪಟೇಲ್ ಸ್ಪಿನ್ ದಾಳಿಗೆ ತತ್ತರ:
ಭಾರತೀಯ ಬ್ಯಾಟರ್‌ಗಳ ಎದುರು ಬಿಗಿ ಹಿಡಿತ ಸಾಧಿಸಿದ ಎಡಗೈ ಸ್ಪಿನ್ನರ್ ಆಜಾಜ್ ಪಟೇಲ್ 14.1 ಓವರ್‌ಗಳಲ್ಲಿ 57 ರನ್ ಬಿಟ್ಟುಕೊಟ್ಟು 6 ವಿಕೆಟ್ ಪಡೆದು ಮಿಂಚಿದರು. ಇದರೊಂದಿಗೆ ಗ್ಲೆನ್ ಫಿಲಿಪ್ಸ್ 3 ವಿಕೆಟ್ ಹಾಗೂ ಮ್ಯಾಟ್ ಹೆನ್ರಿ 1 ವಿಕೆಟ್ ಕಿತ್ತರು.
147 ರನ್ ಗುರಿ ನೀಡಿದ್ದ ಕಿವೀಸ್:
2ನೇ ದಿನದ ಅಂತ್ಯಕ್ಕೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕಿವೀಸ್ 9 ವಿಕೆಟ್‌ಗೆ 171 ರನ್‌ಗಳಿಸಿತ್ತು. 3ನೇ ದಿನ 143 ರನ್‌ಗಳ ಮುನ್ನಡೆಯೊಂದಿಗೆ ಕ್ರೀಸ್ ಆರಂಭಿಸಿದ್ದ ನ್ಯೂಜಿಲೆಂಡ್ 2ನೇ ಇನ್ನಿಂಗ್ಸ್‌ನಲ್ಲಿ 174 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತಕ್ಕೆ 147 ರನ್‌ಗಳ ಗುರಿ ನೀಡಿತ್ತು.
2ನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಪರ ರವೀಂದ್ರ ಜಡೇಜಾ 5 ವಿಕೆಟ್, ಅಶ್ವಿನ್ 3 ವಿಕೆಟ್, ಆಕಾಶ್ ದೀಪ್ ಮತ್ತು ವಾಷಿಂಗ್ಟನ್ ಸುಂದರ್ ತಲಾ ಒಂದೊಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್: ಮೊದಲ ಇನ್ನಿಂಗ್ಸ್ ನ್ಯೂಜಿಲೆಂಡ್ – 235/10, ಭಾರತ – 236/10
2ನೇ ಇನ್ನಿಂಗ್ಸ್ ನ್ಯೂಜಿಲೆಂಡ್ – 174/10, ಭಾರತ – 121/10
ಮುಂಬೈ: ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿರುವ ಭಾರತ ತಂಡ (Team India) ಅಂತಿಮ ಟೆಸ್ಟ್ ಪಂದ್ಯಕ್ಕೂ ಮುನ್ನವೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಜಿಗಿದಿದೆ. ಇದರಿಂದ ರೋಹಿತ್ ಶರ್ಮಾ ನಾಯಕತ್ವಕ್ಕೆ ಭಾರೀ ಮೆಚ್ಚುಗೆಯೂ ವ್ಯಕ್ತವಾಗಿದೆ.
ರಾಂಚಿಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ 3ನೇ ಟೆಸ್ಟ್ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಂಡ ನಂತರ 64.58 ಪಿಸಿಟಿ (Percentage Of Points Earned), 62 ಅಂಕಗಳೊಂದಿಗೆ ಟೀಂ ಇಂಡಿಯಾ ಅಗ್ರಸ್ಥಾನಕ್ಕೇರಿದೆ. ಅಷ್ಟೇ ಅಲ್ಲ 117 ಶ್ರೇಯಾಂಕಗಳೊಂದಿಗೆ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಆಸೀಸ್ ಜೊತೆಗೆ ಅಗ್ರಸ್ಥಾನ ಹಂಚಿಕೊಂಡಿದ್ದು, ಅಂತಾರಾಷ್ಟ್ರೀಯ ಟಿ20 ಹಾಗೂ ಏಕದಿನ ಪಂದ್ಯಗಳ ರ‍್ಯಾಂಕಿಂಗ್‌ನಲ್ಲೂ ಅಗ್ರಸ್ಥಾನ ಭದ್ರಪಡಿಸಿಕೊಂಡಿದೆ. ಇದನ್ನೂ ಓದಿ: WTC: ಭಾರತಕ್ಕೆ ಹೀನಾಯ ಸೋಲು – 209 ರನ್‌ಗಳ ಭರ್ಜರಿ ಜಯ, ಆಸೀಸ್‌ಗೆ ಚೊಚ್ಚಲ ಟ್ರೋಫಿ
WTC ನಲ್ಲಿ ಟಾಪ್-5 ತಂಡಗಳು:
2023-25ರ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ಈ ಆವೃತ್ತಿಯಲ್ಲಿ 8 ಪಂದ್ಯಗಳನ್ನಾಡಿದ್ದು, 5ರಲ್ಲಿ ಗೆಲುವು ಸಾಧಿಸಿದೆ. 2 ಪಂದ್ಯಗಳಲ್ಲಿ ಸೋಲು ಕಂಡಿದ್ದು, 1 ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಒಟ್ಟಾರೆ 62 ಅಂಕಗಳನ್ನು ಪಡೆದಿರುವ ಟೀಂ ಇಂಡಿಯಾ 64.58 ಪಿಸಿಟಿಯೊಂದಿಗೆ ಅಗ್ರಸ್ಥಾನದಲ್ಲಿದೆ. 5 ಪಂದ್ಯಗಳಲ್ಲಿ 3ರಲ್ಲಿ ಗೆಲುವು ಸಾಧಿಸಿರುವ ಕಿವೀಸ್ 36 ಅಂಕಗಳೊಂದಿಗೆ (60.00 ಪಿಸಿಟಿ) 2ನೇ ಸ್ಥಾನದಲ್ಲಿದೆ. 11 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿರುವ ಆಸೀಸ್ 59.09 ಪಿಸಿಟಿಯೊಂದಿಗೆ 78 ಅಂಕ ಪಡೆದು 3ನೇ ಸ್ಥಾನ, 2 ಪಂದ್ಯಗಳಲ್ಲಿ 1ರಲ್ಲಿ ಗೆಲುವು ಸಾಧಿಸಿರುವ ಬಾಂಗ್ಲಾದೇಶ 12 ಅಂಕಗಳೊಂದಿಗೆ 4ನೇ ಸ್ಥಾನ ಹಾಗೂ 5 ಪಂದ್ಯಗಳಲ್ಲಿ 2ರಲ್ಲಿ ಗೆಲುವು ಸಾಧಿಸಿರುವ ಪಾಕಿಸ್ತಾನ 36.66 ಪಿಸಿಟಿಯೊಂದಿಗೆ 22 ಅಂಕ ಪಡೆದು 5ನೇ ಸ್ಥಾನದಲ್ಲಿದೆ. ಇದನ್ನೂ ಓದಿ: PublicTV Explainer: ಬಿಸಿಸಿಐ ಕೇಂದ್ರ ಗುತ್ತಿಗೆ ಬಗ್ಗೆ ನಿಮಗೆಷ್ಟು ಗೊತ್ತು?
ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಟಾಪ್-5 ತಂಡಗಳು
* ಆಸ್ಟ್ರೇಲಿಯಾ – 37 ಪಂದ್ಯ – 4,345 ಅಂಕ – 117 ಶ್ರೇಯಾಂಕ
* ಭಾರತ – 32 ಪಂದ್ಯ – 3,746 ಅಂಕ – 117 ಶ್ರೇಯಾಂಕ
* ಇಂಗ್ಲೆಂಡ್ – 43 ಪಂದ್ಯ – 4,941 ಅಂಕ – 115 ಶ್ರೇಯಾಂಕ
* ನ್ಯೂಜಿಲೆಂಡ್ – 29 ಪಂದ್ಯ – 2,939 ಅಂಕ – 101 ಶ್ರೇಯಾಂಕ
* ದಕ್ಷಿಣ ಆಫ್ರಿಕಾ – 27 ಪಂದ್ಯ – 2,671 ಅಂಕ – 99 ಶ್ರೇಯಾಂಕ
ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಟಾಪ್-5 ತಂಡಗಳು
* ಭಾರತ – 58 ಪಂದ್ಯ – 7,020 ಅಂಕ – 121 ಶ್ರೇಯಾಂಕ
* ಆಸ್ಟ್ರೇಲಿಯಾ – 45 ಪಂದ್ಯ – 5,309 ಅಂಕ – 118 ಶ್ರೇಯಾಂಕ
* ದಕ್ಷಿಣ ಆಫ್ರಿಕಾ – 37 ಪಂದ್ಯ – 4,062 ಅಂಕ – 110 ಶ್ರೇಯಾಂಕ
* ಪಾಕಿಸ್ತಾನ – 36 ಪಂದ್ಯ – 3,922 ಅಂಕ – 109 ಶ್ರೇಯಾಂಕ
* ನ್ಯೂಜಿಲೆಂಡ್ – 46 ಪಂದ್ಯ – 4,708 ಅಂಕ – 102 ಶ್ರೇಯಾಂಕ
ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ ಟಾಪ್-5 ತಂಡಗಳು
* ಭಾರತ – 71 ಪಂದ್ಯ – 18,867 ಅಂಕ – 266 ಶ್ರೇಯಾಂಕ
* ಇಂಗ್ಲೆಂಡ್ – 48 ಪಂದ್ಯ – 12,305 ಅಂಕ – 256 ಶ್ರೇಯಾಂಕ
* ಆಸ್ಟ್ರೇಲಿಯಾ – 45 ಪಂದ್ಯ – 11,460 ಅಂಕ – 255 ಶ್ರೇಯಾಂಕ
* ನ್ಯೂಜಿಲೆಂಡ್ – 63 ಪಂದ್ಯ – 15,994 ಅಂಕ – 254 ಶ್ರೇಯಾಂಕ
* ಪಾಕಿಸ್ತಾನ – 58 ಪಂದ್ಯ – 14,454 ಅಂಕ – 249 ಶ್ರೇಯಾಂಕ
ಅಂತಿಮ ಟೆಸ್ಟ್ ಗೆಲ್ಲಲು ಭಾರತ ರಣತಂತ್ರ: ಬೆನ್ ಸ್ಟೋಕ್ಸ್ ಸಾರಥ್ಯದ ಇಂಗ್ಲೆಂಡ್ ತಂಡ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪೈಪೋಟಿ ನಡೆಸಿತು. ಮೊದಲ ಟೆಸ್ಟ್ ಗೆದ್ದು ತನ್ನ ಗುರಿ ಸಾಧನೆ ಕಡೆಗೆ ಮಹತ್ವದ ಹೆಜ್ಜೆಯನ್ನು ಇಟ್ಟರೂ, ಬಳಿಕ ಸತತ 3 ಸೋಲಿನೊಂದಿಗೆ ಟ್ರೋಫಿ ಗೆಲುವಿನ ಆಸೆ ಕೈಚೆಲ್ಲಿತು. ಈಗ ಸರಣಿಯ ಅಂತಿಮ ಪಂದ್ಯ ಧರ್ಮಶಾಲಾದ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ. ಮಾರ್ಚ್ 7 ರಿಂದ ಮಾರ್ಚ್ 11ರ ವರೆಗೆ ಪಂದ್ಯ ನಡೆಯಲಿದೆ. ಈಗಾಗಲೇ ಸರಣಿ ಗೆದ್ದಿರುವ ಭಾರತ ಅಂತಿಮ ಪಂದ್ಯದಲ್ಲೂ ಆಗ್ಲರಿಗೆ ಸೋಲುಣಿಸಲು ರಣತಂತ್ರ ರೂಪಿಸಿದೆ.
ಲಂಡನ್: ವಿಶ್ವಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (WTC Final) ಪಂದ್ಯದ 4ನೇ ದಿನದಾಟ ಆರಂಭಗೊಂಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 469 ರನ್ ಗಳಿಸಿದ್ದ ಆಸ್ಟ್ರೇಲಿಯಾ (Australia) 2ನೇ ಇನ್ನಿಂಗ್ಸ್‌ನಲ್ಲಿ ಭಾರತದ ಬೌಲರ್‌ಗಳ ದಾಳಿಗೆ ತುತ್ತಾದರೂ, 370ಕ್ಕೂ ಅಧಿಕ ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಪ್ರಮುಖ ಬ್ಯಾಟರ್‌ಗಳ ವಿಕೆಟ್ ಪಡೆದ ಟೀಂ ಇಂಡಿಯಾ (Team India) ಸ್ಪಿನ್ನರ್ ರವೀಂದ್ರ ಜಡೇಜಾ (Ravindra Jadeja) ಹೊಸ ದಾಖಲೆಯೊಂದನ್ನ ಹೆಗಲಿಗೇರಿಸಿಕೊಂಡಿದ್ದಾರೆ.
65 ಟೆಸ್ಟ್ ಪಂದ್ಯವನ್ನಾಡಿರುವ ಜಡೇಜಾ 24.25 ಸರಾಸರಿ ಹಾಗೂ 2.44ರ ಎಕಾನಮಿ ರೇಟ್‌ನಲ್ಲಿ 268 ವಿಕೆಟ್ ಪಡೆಯುವ ಮೂಲಕ ಬಿಶನ್ ಸಿಂಗ್ ಬೇಡಿ (Bishan Singh Bedi) ಅವರ ದಾಖಲೆಯನ್ನ ಮುರಿದಿದ್ದಾರೆ. ಬಿಶನ್ ಸಿಂಗ್ 67 ಪಂದ್ಯಗಳಲ್ಲಿ 266 ವಿಕೆಟ್ ಪಡೆಯುವ ಮೂಲಕ ಸಾಧನೆ ಮಾಡಿದ್ದರು. ಆದ್ರೆ ಜಡೇಜಾ 65 ಪಂದ್ಯಗಳಲ್ಲೇ ಈ ಸಾಧನೆ ಮಾಡಿರುವುದು ವಿಶೇಷ. ಜೊತೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 4ನೇ ಯಶಸ್ವಿ ಎಡಗೈ ಸ್ಪಿನ್ನರ್ ಎನಿಸಿಕೊಂಡಿದ್ದಾರೆ.
ಶ್ರೀಲಂಕಾದ ರಂಗನಾ ಹೆರಾತ್ 93 ಪಂದ್ಯಗಳಲ್ಲಿ 433 ವಿಕೆಟ್, ಡೇನಿಯಲ್ ವೆಟ್ಟೋರಿ 113 ಪಂದ್ಯಗಳಲ್ಲಿ 362 ವಿಕೆಟ್ ಮತ್ತು ಇಂಗ್ಲೆಂಡ್‌ನ ಡೆರೆಕ್ ಅಂಡರ್‌ವುಡ್ 86 ಪಂದ್ಯಗಳಲ್ಲಿ 297 ವಿಕೆಟ್ ಪಡೆದಿದ್ದರೆ ಜಡೇಜಾ 65 ಪಂದ್ಯಗಳಲ್ಲಿ 268 ವಿಕೆಟ್ ಪಡೆದು 4ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: WTC Final: 3ನೇ ದಿನದಲ್ಲಿ ಜಡೇಜಾ ಜಾದು – ಆಸ್ಟ್ರೇಲಿಯಾಕ್ಕೆ 296 ರನ್‌ಗಳ ಮುನ್ನಡೆ
ಆಸ್ಟ್ರೇಲಿಯಾ ವಿರುದ್ಧದ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಏಕದಿನ ಕ್ರಿಕೆಟ್ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿ 48 ರನ್ (51 ಎಸೆತ, 7 ಬೌಂಡರಿ, 1 ಸಿಕ್ಸ್) ಗಳಿಸಿದ್ದಾರೆ. ಅಲ್ಲದೇ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ ಒಂದು ವಿಕೆಟ್ ಪಡೆದಿದ್ದ ಜಡೇಜಾ 2ನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಟಾಪ್ ಬ್ಯಾಟರ್ಸ್‌ಗಳನ್ನ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ಮುಂಬೈ: ಜೂನ್ 7 ರಿಂದ 11ರ ವರೆಗೆ ಲಂಡನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ (WTC) ಬಿಸಿಸಿಐ (BCCI) ಟೀಂ ಇಂಡಿಯಾ ಆಟಗಾರರನ್ನ ಆಯ್ಕೆ ಮಾಡಿದೆ.
15 ಜನರ ಬಲಿಷ್ಠ ಆಟಗಾರರ ತಂಡವನ್ನ ಬಿಸಿಸಿಐ ಪ್ರಕಟಿಸಿದ್ದು, ತಂಡದಲ್ಲಿ ಅಜಿಂಕ್ಯಾ ರಹಾನೆಗೆ (Ajinkya Rahane) ಸ್ಥಾನ ನೀಡಲಾಗಿದೆ. ಆದರೆ ಏಕದಿನ ಕ್ರಿಕೆಟ್‌ನಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಎದುರಿಸಿದ್ದ ಸೂರ್ಯಕುಮಾರ್ ಯಾದವ್‌ಗೆ (Suryakumar Yadav) ಕೊಕ್ ನೀಡಲಾಗಿದೆ. ಇದನ್ನೂ ಓದಿ: ಲಂಕಾ ವಿರುದ್ಧ ಕಿವೀಸ್‌ಗೆ ರೋಚಕ ಜಯ – 2ನೇ ಬಾರಿ WTC ಫೈನಲ್‌ಗೆ ಭಾರತ
ಟೀಂ ಇಂಡಿಯಾ (Team India) ಪರ 82 ಟೆಸ್ಟ್ ಪಂದ್ಯಗಳನ್ನಾಡಿರುವ ಅಜಿಂಕ್ಯಾ ರಹಾನೆ 2022ರ ಜನವರಿಯಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದರು. ಆ ನಂತರ ರಹಾನೆ ಕಳಪೆ ಫಾರ್ಮ್‌ನಿಂದಾಗಿ ಟೀಂ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿದ್ದರು. ಇದೀಗ 2023ರ 16ನೇ ಐಪಿಎಲ್ (IPL 2023) ಆವೃತ್ತಿಯಲ್ಲಿ ರಹಾನೆ ಚೆನ್ನೈಸೂಪರ್ ಕಿಂಗ್ಸ್ (CSK) ಪರ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. 5 ಪಂದ್ಯಗಳಲ್ಲಿ 209 ರನ್ ಬಾರಿಸಿದ್ದಾರೆ. 52.25 ಸರಾಸರಿಯಲ್ಲಿರುವ ರಹಾನೆ 199.04 ಸ್ಟ್ರೈಕ್‌ರೇಟ್ ಕಾಯ್ದುಕೊಂಡಿದ್ದಾರೆ.
ಅಲ್ಲದೇ ಐಪಿಎಲ್‌ಗೂ ಮುನ್ನ ನಡೆದ ರಣಜಿ ಟೂರ್ನಿಯಲ್ಲೂ ರಹಾನೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಟೀಂ ಇಂಡಿಯಾದಲ್ಲಿ ಮತ್ತೆ ಚಾನ್ಸ್ ನೀಡಿದೆ. ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಸಹ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಆದರೆ ಸೂರ್ಯಕುಮಾರ್ ಯಾದವ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಇದನ್ನೂ ಓದಿ: WTC ಫೈನಲ್ ಭಾರತ ಗೆದ್ದರೆ ಬೆತ್ತಲಾಗುವೆ – ಪೂನಂ ಪಾಂಡೆ
ಇದರೊಂದಿಗೆ ಕುಲ್‌ದೀಪ್ ಯಾದವ್, ಇಶಾನ್ ಕಿಶನ್ ಸಹ ತಂಡದಿಂದ ಹೊರಗುಳಿದಿದ್ದಾರೆ. ಶ್ರೇಯಸ್ ಅಯ್ಯರ್ ಅವರಿಗೆ ತಂಡದಲ್ಲಿ ಅವಕಾಶ ನೀಡುವ ಸಾಧ್ಯತೆಗಳಿತ್ತು. ಆದ್ರೆ ಅವರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಅವಕಾಶ ಕೈತಪ್ಪಿದೆ. ಈ ಬಾರಿ ಐಪಿಎಲ್‌ನಲ್ಲೂ ಕೆಕೆಆರ್ ತಂಡದ ಪರವಾಗಿ ಒಂದು ಪಂದ್ಯವನ್ನೂ ಆಡಿಲ್ಲ.
ಟೀಂ ಇಂಡಿಯಾ ಫೈನಲ್ ಪ್ರವೇಶಿಸಿದ್ದು ಹೇಗೆ?
ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ನಡೆದ 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಭಾರತ 3-0 ಅಥವಾ 3-1 ಅಂತರದಲ್ಲಿ ಗೆಲ್ಲಬೇಕಾಗಿತ್ತು. ಆದ್ರೆ ಭಾರತ 2-1 ರಲ್ಲಿ ಮುನ್ನಡೆ ಸಾಧಿಸಿತ್ತು. ಅಹಮದಾಬಾದ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ ಗೆಲುವು ಅಗತ್ಯವಿತ್ತು. ಅಂತಿಮ ಪಂದ್ಯ ಡ್ರಾ ನಲ್ಲಿ ಅಂತ್ಯಗೊಂಡಿದ್ದರಿಂದ ಫೈನಲ್ ಪ್ರವೇಶಿಸುವ ಹಾದಿ ಕಠಿಣವಾಗಿತ್ತು.
ಮತ್ತೊಂದೆಡೆ ಶ್ರೀಲಂಕಾ ತಂಡ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯಲು ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ಅಗತ್ಯವಿತ್ತು. ಆದರೆ ಮೊದಲ ಟೆಸ್ಟ್ ಪಂದ್ಯದಲ್ಲೇ ನ್ಯೂಜಿಲೆಂಡ್ ಎದುರು ಕೇವಲ 2 ವಿಕೆಟ್‌ಗಳ ವಿರೋಚಿತ ಸೋಲು ಅನುಭವಿಸುವ ಮೂಲಕ ಫೈನಲ್ ರೇಸ್‌ನಿಂದ ಹೊರ ಬಿದ್ದಿತು. ಭಾರತ 60.29 ಪಿಸಿಟಿಯೊಂದಿಗೆ (Percentage Of Points Earned) ಫೈನಲ್ ಪ್ರವೇಶಿಸಿತು.
ಮುಂಬೈ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ 7 ವಿಕೆಟ್‍ಗಳ ಹೀನಾಯ ಸೋಲುಂಡ ಟೀಮ್ ಇಂಡಿಯಾಗೆ ಸೋಲಿನ ಮೇಲೆ ಸೋಲಾಗಿದೆ. ಜೊತೆಗೆ ಪಂದ್ಯದಲ್ಲಿ ಮಾಡಿದ ಒಂದು ಎಡವಟ್ಟಿನಿಂದಾಗಿ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‍ಶಿಪ್ ಅಂಕಪಟ್ಟಿಯಲ್ಲಿ 2 ಅಂಕಗಳನ್ನು ಕಳೆದುಕೊಂಡು 4 ಸ್ಥಾನಕ್ಕೆ ಕುಸಿತ ಕಂಡಿದೆ.
ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಲೋ ಓವರ್‌ರೇಟ್ ಕಾರಣ ದಂಡಕ್ಕೆ ಗುರಿಯಾಗಿದೆ. ಪಂದ್ಯದಲ್ಲಿ ಆಟಗಾರರ ಸಂಭಾವನೆಯಲ್ಲಿನ ಶೇ.40ರಷ್ಟು ತಂಡದೊಂದಿಗೆ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‍ಶಿಪ್ ಅಂಕಪಟ್ಟಿಯಲ್ಲಿ 2 ಅಂಕಗಳ ನಷ್ಟ ಅನುಭವಿಸಿದೆ. ಪಂದ್ಯದಲ್ಲಿ ಭಾರತ ತಂಡ ನಿಗದಿತ ಸಮಯಕ್ಕೆ ಸರಿಯಾಗಿ 2 ಓವರ್‌ಗಳನ್ನು ಎಸೆಯುವುದು ಬಾಕಿಯಿತ್ತು. ಈ ಕಾರಣ ಮ್ಯಾಚ್ ರೆಫ್ರಿ ಡೇವಿಡ್ ಬೂನ್ ಕ್ರಮ ಕೈಗೊಂಡಿದ್ದಾರೆ. ಪರಿಣಾಮ ಅಂಕಪಟ್ಟಿಯಲ್ಲಿ ಪಾಕಿಸ್ತಾನ ಮೂರನೇ ಸ್ಥಾನಕ್ಕೆ ಏರಿಕೆ ಕಂಡರೆ, ಟೀಂ ಇಂಡಿಯಾ 4ನೇ ಸ್ಥಾನಕ್ಕೆ ಕುಸಿತ ಕಂಡು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‍ಗೇರುವ ಅವಕಾಶ ವಂಚಿತವಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಧೋನಿ ಹುಟ್ಟುಹಬ್ಬಕ್ಕಾಗಿ 41 ಅಡಿ ಎತ್ತರದ ಕಟೌಟ್ ಹಾಕಿದ ಫ್ಯಾನ್ಸ್
5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ನೀಡಿದ್ದ 378 ರನ್‍ಗಳ ಗುರಿ ಪಡೆದಿದ್ದ ಇಂಗ್ಲೆಂಡ್ ತಂಡವು 2ನೇ ಇನ್ನಿಂಗ್ಸ್‌ನ 76.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 378 ರನ್‍ಗಳಿಸುವ ಮೂಲಕ ಜಯ ಸಾಧಿಸಿತು. ಇದರಿಂದ ಅಂತಿಮ ಟೆಸ್ಟ್ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಟೀಂ ಇಂಡಿಯಾ ಕನಸು ಭಗ್ನಗೊಂಡಿತು. ಇಂಗ್ಲೆಂಡ್ ತಂಡ ಐದು ಟೆಸ್ಟ್‌ಗಳ ಸರಣಿಯಲ್ಲಿ 2-2 ಅಂತರದ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ಇದನ್ನೂ ಓದಿ: ಭಾರತದ ಕನಸು ಭಗ್ನ – ಇಂಗ್ಲೆಂಡ್‌ಗೆ 7 ವಿಕೆಟ್‌ಗಳ ಜಯ
India suffer a double blow in the #WTC23 standings.
ಐಸಿಸಿ ನೀತಿ ಸಂಹಿತೆ 2.22 ನಿಯಮದನ್ವಯ ಸ್ಲೋ ಓವರ್‌ರೇಟ್ ಪ್ರಮಾದ ಎಸಗಿರುವ ಕಾರಣ ಕನಿಷ್ಠ ಕ್ರಮವಾಗಿ ಭಾರತ ತಂಡ ಆಟಗಾರರಿಗೆ ಪಂದ್ಯದ ಸಂಭಾವನೆಯಲ್ಲಿನ ಶೇ. 40ರಷ್ಟನ್ನು ದಂಡ ವಿಧಿಸಲಾಗಿದೆ. ಭಾರತ ತಂಡ ನಿಗದಿತ ಸಮಯದ ಅಂತ್ಯಕ್ಕೆ ಇನ್ನು 2 ಓವರ್‌ಗಳನ್ನು ಎಸೆಯುವುದು ಬಾಕಿಯಿತ್ತು. ಜೊತೆಗೆ 16.11.2 ನಿಯಮದ ಪ್ರಕಾರ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‍ಶಿಪ್‍ನ 2 ಅಂಕಗಳನ್ನು ಭಾರತ ತಂಡ ಕಳೆದುಕೊಂಡಿತು.
ಈ ಮೂಲಕ ಆಸ್ಟ್ರೇಲಿಯಾ ತಂಡ ಪಾಯಿಂಟ್ ಪಟ್ಟಿಯಲ್ಲಿ 77.78 ಪಿಸಿಟಿ ಪಡೆದು ಮೊದಲ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾ 71.43 ಅಂಕದೊಂದಿಗೆ 2ನೇ ಸ್ಥಾನದಲ್ಲಿದೆ. ಪಾಕಿಸ್ತಾನ 52.38 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಏರಿಕೆ ಕಂಡರೆ, ಭಾರತ 52.08 ಪಿಸಿಟಿಯೊಂದಿಗೆ 4ನೇ ಸ್ಥಾನಕ್ಕೆ ಕುಸಿತ ಕಂಡಿದೆ.
Live Tv
[brid partner=56869869 player=32851 video=960834 autoplay=true]