Tag: ವಿಶ್ವ ಕ್ಯಾನ್ಸರ್ ದಿನಾಚರಣೆ

  • WORLD CANCER DAY : ಕ್ಯಾನ್ಸರ್ ವಿರುದ್ಧ ಒಟ್ಟಾಗಿ ಹೋರಾಡೋಣ – ಸ್ಫೂರ್ತಿದಾಯಕ ಮರಳು ಕಲಾಕೃತಿ

    WORLD CANCER DAY : ಕ್ಯಾನ್ಸರ್ ವಿರುದ್ಧ ಒಟ್ಟಾಗಿ ಹೋರಾಡೋಣ – ಸ್ಫೂರ್ತಿದಾಯಕ ಮರಳು ಕಲಾಕೃತಿ

    ನವದೆಹಲಿ: ವಿಶ್ವ ಕ್ಯಾನ್ಸರ್ ದಿನದಂದು, ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪುರಿ ಬೀಚ್‍ನಲ್ಲಿ, ಕ್ಯಾನ್ಸರ್ ರೋಗಕ್ಕೆ ಹೆದರದೆ ಕೆಚ್ಚೆದೆಯಿಂದ ಬದುಕುಳಿದವರು ಮತ್ತು ರೋಗದ ವಿರುದ್ಧ ಹೋರಾಡುತ್ತಿರುವ ರೋಗಪಿಡೀತರಿಗೆ ಸಮರ್ಪಿತವಾದ ಉಸಿರು ತೆಗೆದುಕೊಳ್ಳುತ್ತಿರುವ ಆಕಾರದ ಕಲಾಕೃತಿಯನ್ನು ನಿರ್ಮಿಸಿ ಅದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಫೋಟೋಗೆ ಅವರು ಟ್ಯಾಗ್ಸ್‍ಗಳನ್ನು ಹಾಕಿದ್ದು, #ವಿಶ್ವ ಕ್ಯಾನ್ಸರ್ ದಿನ #ಕ್ಯಾನ್ಸರ್ ನೋವು ಮತ್ತು ಸಂಕಟದಿಂದ ಜಗತ್ತನ್ನು ಮುಕ್ತಗೊಳಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ನಾನು ಪುರಿ ಬೀಚ್‍ನಲ್ಲಿ ನನ್ನವೊಂದು ಸ್ಯಾಂಡ್ ಆರ್ಟ್ ಅನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಚೀನಾ ಒಲಿಂಪಿಕ್ಸ್‌ಗೆ ಭಾರತ ಬಹಿಷ್ಕಾರ – ದಿಟ್ಟ ನಿರ್ಧಾರ ತೆಗೆದುಕೊಂಡ ಭಾರತೀಯ ವಿದೇಶಾಂಗ ಇಲಾಖೆ

    ಸುದರ್ಶನ್ ಪಟ್ನಾಯಕ್ ಅವರು ಸುಮಾರು 16 ವರ್ಷಗಳಿಂದ ಮರಳು ಕಲೆಯನ್ನು ಮಾಡುತ್ತಿದ್ದಾರೆ. ಅವರ ಅನೇಕ ಮರಳಿನ ಶಿಲ್ಪಗಳು ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿವೆ.

    ರೋಗದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದರ ಬಗೆಯ ತಪ್ಪು ಮಾಹಿತಿಯ ವಿರುದ್ಧ ಹೋರಾಡಲು ಪ್ರತಿ ವರ್ಷ ಫೆಬ್ರವರಿ 4 ರಂದು ಅಂತರರಾಷ್ಟ್ರೀಯ ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು (ಯೂಐಸಿಸಿ) ಯೂನಿಯನ್ ಫಾರ್ ಇಂಟನ್ರ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ ಸಂಸ್ಥೆಯು ಇದರ ನೇತೃತ್ವವನ್ನು ವಹಿಸಿದೆ. ಇದನ್ನೂ ಓದಿ: ಹಿಜಬ್ ವಿವಾದ- ಹೈಕೋರ್ಟ್ ತೀರ್ಪಿನ ನಂತರ ಕ್ರಮ: ಬಿಸಿ ನಾಗೇಶ್

    ಈ ವರ್ಷದ – ಕ್ಲೋಸ್ ದಿ ಕೇರ್ ಗ್ಯಾಪ್ – ಇದು ರೋಗಿಗಳು ತಮ್ಮ ಆದಾಯ, ಲಿಂಗ, ಭೌಗೋಳಿಕ ಸ್ಥಳ, ವಯಸ್ಸು, ಲೈಂಗಿಕ ದೃಷ್ಟಿಕೋನ ಮತ್ತು ಜೀವನಶೈಲಿಗೆ ಸಂಬಂಧಿಸಿದಂತೆ ಅವರ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಎದುರಿಸುತ್ತಿರುವ ಅಡೆತಡೆಗಳ ಬಗ್ಗೆ ವ್ಯವಹರಿಸುತ್ತದೆ. ಕೆಲವೊಮ್ಮೆ, ಈ ಅಂಶಗಳು ರೋಗಿಗಳಿಗೆ ಸರಿಯಾದ ಆರೋಗ್ಯದ ಪ್ರವೇಶವನ್ನು ಪಡೆಯಲು ಅಡಚಣೆಯಾಗಬಹುದು.

    ‘ಕ್ಲೋಸ್ ದಿ ಕೇರ್ ಗ್ಯಾಪ್’ (ಆರೈಕೆ ಅವಧಿಯನ್ನು ನಿರ್ವಹಿಸುವುದು) ಈ ವರ್ಷದ ಕ್ಯಾನ್ಸರ್ ದಿನದ ಘೋಷ ವಾಕ್ಯ. ಕ್ಯಾನ್ಸರ್ ಪೀಡಿತ ಎಷ್ಟೋ ಮಂದಿ ತಮ್ಮ ಆದಾಯ, ಲಿಂಗ, ಭೌಗೋಳಿಕ ವಲಯ, ವಯಸ್ಸು, ಲೈಂಗಿಕ ದೃಷ್ಟಿಕೋನ, ಜೀವನಶೈಲಿ ಕಾರಣಕ್ಕಾಗಿ ಕ್ಯಾನ್ಸರ್ ಚಿಕಿತ್ಸೆಗೆ ಅಡೆತಡೆಗಳನ್ನು ಎದುರಿಸುತ್ತಿರುತ್ತಾರೆ. ಸೂಕ್ತ ಸಮಯಕ್ಕೆ ಚಿಕಿತ್ಸೆಗೆ ಎದುರಾಗುವ ಅಡೆತಡೆಯನ್ನು ಸರಿದೂಗಿಸುವ ಕ್ರಮಕೈಗೊಳ್ಳಲು ಯೂಐಸಿಸಿ ನಿರ್ಧರಿಸಿದೆ.

  • ಕ್ಯಾನ್ಸರ್‌ಗೆ ಹೆದರಬೇಕಿಲ್ಲ, ಸೂಕ್ತ ಚಿಕಿತ್ಸೆಯಿದೆ: ಡಾ. ರಾಮಚಂದ್ರ

    ಕ್ಯಾನ್ಸರ್‌ಗೆ ಹೆದರಬೇಕಿಲ್ಲ, ಸೂಕ್ತ ಚಿಕಿತ್ಸೆಯಿದೆ: ಡಾ. ರಾಮಚಂದ್ರ

    – 40 ವರ್ಷ ಮೇಲ್ಪಟ್ಟ ಹೆಣ್ಮಕ್ಕಳು ವಾರ್ಷಿಕ ಚೆಕಪ್ ಮಾಡಿಸಬೇಕು

    ಬೆಂಗಳೂರು: ಕ್ಯಾನ್ಸರ್ ಎಂಬ ಮಹಾಮಾರಿ ಕಾಯಿಲೆಗೆ ಯಾರು ಹೆದರಬೇಕಿಲ್ಲ. ಅದಕ್ಕೆ ಸೂಕ್ತ ಚಿಕಿತ್ಸೆಯಿದೆ. ಕ್ಯಾನ್ಸರ್ ಅನ್ನೋದು ಒಂದು ಕಾಯಿಲೆ. ಅದರಿಂದ ಭಯಪಡುವ ಅಗತ್ಯವಿಲ್ಲ. ಕ್ಯಾನ್ಸರ್ ಖಾಯಿಲೆಯ ಸೊಂಕು ಬಗ್ಗೆ ತಿಳಿದ ಕೂಡಲೇ ತುರ್ತಾಗಿ ಚಿಕಿತ್ಸೆಗೆ ಬರಬೇಕು. ಆಗ ಮಾತ್ರ  ಕ್ಯಾನ್ಸರ್‌ಗೆ ಕಡಿವಾಣ ಹಾಕಬಹುದು ಎಂದು ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ನಿರ್ದೇಶಕ ರಾಮಚಂದ್ರ ಹೇಳಿದ್ದಾರೆ.

    ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಮಾತನಾಡಿದ ಅವರು, ಪ್ರಸ್ತುತ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಗರ್ಭಕೋಶದ ಕಂಟಕದ ಕ್ಯಾನ್ಸರ್ ಕಡಿಮೆಯಾಗುತ್ತಿದೆ. ತಂಬಾಕು, ಪಾನ್ ಪರಾಗ್ ತಿನ್ನುವುದರಿಂದ ಕ್ಯಾನ್ಸರ್ ಹೆಚ್ಚಾಗುತ್ತಿದೆ. ಸರ್ಕಾರ ಇವುಗಳನ್ನ ನಿಷೇಧಿಸಿದ್ದರೂ ಜನ ಇವುಗಳ ಮೇಲೆಯೇ ಅವಲಂಬನೆಯಾಗಿದ್ದಾರೆ. ಕ್ಯಾನ್ಸರ್ ಸೊಂಕು ತಗುಲಿದಾಗ ಶೇ. 60ರಷ್ಟು ತಡೆಗಟ್ಟಬಹುದು ಎಂದು ತಿಳಿಸಿದರು.

    ನಮ್ಮ ಜನ ಕ್ಯಾನ್ಸರ್ ಬಗ್ಗೆ ಗೊತ್ತಿದ್ದರೂ ಬೇಗ ಚಿಕಿತ್ಸೆಗೆ ಬರುವುದಿಲ್ಲ. ಕೊನೆಯ ಹಂತದಲ್ಲಿದ್ದಾಗ ಮಾತ್ರ ಆಸ್ಪತ್ರೆಗಳಿಗೆ ಬರುತ್ತಾರೆ. ಆ ಸಮಯದಲ್ಲಿ ಪರಸ್ಥಿತಿ ಕೈ ಮೀರಿ ಹೋಗಿರುತ್ತೆ. ಹೀಗಾಗಿ ಕ್ಯಾನ್ಸರ್ ಬಗ್ಗೆ ಸಾಕಷ್ಟು ಜನರಲ್ಲಿ ಆತಂಕವಿದೆ ಎಂದರು.

    ಇಂದು ವಿಶ್ವ ಕ್ಯಾನ್ಸರ್ ದಿನಾಚರಣೆ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಿಸಿಎಂ ಅಶ್ವತ್ ನಾರಾಯಣ್ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ಭೇಟಿ ನೀಡಿ ಸ್ವಚ್ಛತೆ ಹಾಗೂ ಕ್ಯಾನ್ಸರ್ ರೋಗಿಗಳ ಆರೋಗ್ಯವನ್ನು ವಿಚಾರಿಸಿದರು. ಆ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ನಿರ್ದೇಶಕ ರಾಮಚಂದ್ರ, 40 ವರ್ಷ ಮೇಲ್ಪಟ್ಟ ಹೆಣ್ಣು ಮಕ್ಕಳು, ವರ್ಷಕ್ಕೊಮ್ಮೆ ಮ್ಯಾಮೋಗ್ರಾಮ್, ಅನ್ಯೂವಲ್ ಚೆಕಪ್ ಮಾಡಿಸಬೇಕು. ಕ್ಯಾನ್ಸರ್ ಖಾಯಿಲೆಯ ಬಗ್ಗೆ ಹೆದರುವಂತ ಅವಶ್ಯಕತೆಯಿಲ್ಲ ಎಂದು ಕ್ಯಾನ್ಸರ್ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬಿದರು.