Tag: ವಿಶ್ವ ಆರ್ಥಿಕ ವೇದಿಕೆ

  • ಭಾರತದಲ್ಲಿ ಹೂಡಿಕೆ ಮಾಡಲು ಇದು ಉತ್ತಮ ಸಮಯ: ಮೋದಿ

    ಭಾರತದಲ್ಲಿ ಹೂಡಿಕೆ ಮಾಡಲು ಇದು ಉತ್ತಮ ಸಮಯ: ಮೋದಿ

    ನವದೆಹಲಿ: ಭಾರತದಲ್ಲಿ ಹೂಡಿಕೆ ಮಾಡಲು ಇದು ಉತ್ತಮ ಸಮಯ ಎಂದು ಹೇಳಿ ಪ್ರಧಾನಿ ನರೇಂದ್ರ ಮೋದಿ ವಿಶ್ವದ ಹೂಡಿಕೆದಾರರನ್ನು ಆಹ್ವಾನಿಸಿದ್ದಾರೆ.

    ವಿಶ್ವ ಆರ್ಥಿಕ ವೇದಿಕೆ(WEF)ಯ ಐದು ದಿನಗಳ ಆನ್‍ಲೈನ್ ‘ದಾವೋಸ್ ಅಜೆಂಡಾ’ದಲ್ಲಿ ಮಾತನಾಡಿದ ಮೋದಿ ಅವರು, ಭಾಷಣದ ವೇಳೆ ದೇಶವನ್ನು ವಿಶ್ವದ ‘ಅತ್ಯಂತ ಆಕರ್ಷಕ’ ಹೂಡಿಕೆ ತಾಣವನ್ನಾಗಿ ಮಾಡಲು ಸರ್ಕಾರ ಕೈಗೊಂಡಿರುವ ವಿವಿಧ ಕ್ರಮಗಳನ್ನು ವಿವರಿಸಿದರು. ಭಾರತೀಯ ಯುವಕರು ಉದ್ಯಮಶೀಲ ಮನೋಭಾವವನ್ನು ಹೊಂದಿದ್ದಾರೆ. ಹೊಸ ತಂತ್ರಜ್ಞಾನವನ್ನು ಆವಿಷ್ಕರಿಸಲು ಮತ್ತು ಅಳವಡಿಸಿಕೊಳ್ಳಲು ಉತ್ಸುಕತೆಯನ್ನು ಹೊಂದಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಕೊಹ್ಲಿ ಯಾವುದೇ ವಿವಾದದಲ್ಲಿರಲು ಬಯಸುವುದಿಲ್ಲ: ಕೊಹ್ಲಿ ಬಾಲ್ಯದ ಕೋಚ್

    ಭಾರತೀಯ ಯುವಕರು ನಿಮ್ಮ ವ್ಯವಹಾರಗಳು ಮತ್ತು ಆಲೋಚನೆಗಳನ್ನು ಎತ್ತರಕ್ಕೆ ಕೊಂಡೊಯ್ಯಲು ಸಿದ್ಧರಾಗಿದ್ದಾರೆ. ನಮ್ಮ ಜಾಗತಿಕ ಕೌಶಲ್ಯಗಳೊಂದಿಗೆ, ಭಾರತವು 2021 ರಲ್ಲಿ 60,000 ಕ್ಕೂ ಹೆಚ್ಚು ಸ್ಟಾರ್ಟ್‍ಅಪ್‍ಗಳನ್ನು ನೋಂದಾಯಿಸಿದೆ ಎಂದು ವಿವರಿಸಿದರು.

    ಭಾರತವು ಪ್ರಜಾಪ್ರಭುತ್ವದಲ್ಲಿ ನಂಬಿಕೆಯನ್ನು ಹೊಂದಿದೆ. ಇದು ನಮ್ಮ ತಂತ್ರಜ್ಞಾನ, ನಮ್ಮ ಮನೋಧರ್ಮ ಮತ್ತು ಪ್ರತಿಭೆಯನ್ನು ಒಳಗೊಂಡಿದೆ. 2014 ರಲ್ಲಿ, ಭಾರತದಲ್ಲಿ ನೂರು ನೋಂದಾಯಿತ ಸ್ಟಾರ್ಟ್‍ಅಪ್‍ಗಳು ಇದ್ದವು. ಈಗ ಆ ಸಂಖ್ಯೆ 60 ಸಾವಿರ ದಾಟಿದೆ. ನಾವು ಈಗ 80 ಕ್ಕೂ ಹೆಚ್ಚು ಯುನಿಕಾರ್ನ್‍ಗಳನ್ನು ಹೊಂದಿದ್ದೇವೆ ಎಂದರು.

    ತಂತ್ರಜ್ಞಾನ ಮತ್ತು ಡಿಜಿಟಲ್ ಮೂಲಸೌಕರ್ಯದಲ್ಲಿ ಭಾರತದ ಆವಿಷ್ಕಾರಗಳು, ಯುನಿಫೈಡ್ ಪೇಮೆಂಟ್ಸ್ ಇಂಟರ್‍ಫೇಸ್(ಯುಪಿಐ) ನಂತಹ ತಂತ್ರಜ್ಞಾನಗಳ ತ್ವರಿತ ಅಳವಡಿಕೆ, ಆರೋಗ್ಯ ಸೇತು ಮತ್ತು ಕೋವಿನ್‍ನಂತಹ ತಾಂತ್ರಿಕ ಪರಿಹಾರಗಳು ಮತ್ತು ದೇಶದಲ್ಲಿ ವ್ಯಾಪಾರ ಮಾಡಲು ಬಲಪಡಿಸಲು ತೆರಿಗೆ ಸುಧಾರಣೆಯಾಗಿರುವುದನ್ನು ಒತ್ತಿ ಹೇಳಿದರು.

    ಭಾರತವು ವಿಶ್ವಕ್ಕೆ ದಾಖಲೆಯ ಸಂಖ್ಯೆಯ ಸಾಫ್ಟ್‍ವೇರ್ ಡೆವಲಪರ್‍ಗಳನ್ನು ಕಳುಹಿಸುತ್ತಿದೆ. ವಿಶ್ವದಲ್ಲೇ ಮೂರನೇ ಅತಿ ಹೆಚ್ಚು ಯುನಿಕಾರ್ನ್‍ಗಳನ್ನು ಭಾರತ ಹೊಂದಿದೆ ಎಂದು ಹೇಳುವ ಮೂಲಕ ಎಲ್ಲರ ಗಮನಸೆಳೆದರು. ಡಿಜಿಟಲ್ ಪರಿಹಾರಗಳ ಪ್ರಗತಿಯಲ್ಲಿ, ಕಳೆದ ತಿಂಗಳು ಭಾರತವು ಯುಪಿಐ ಮೂಲಕ 4.4 ಬಿಲಿಯನ್ ವಹಿವಾಟುಗಳನ್ನು ಕಂಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಅಮೆರಿಕ ನೆರವಿನಿಂದ ಮಹಿಳಾ-ಮಕ್ಕಳ ಆರೋಗ್ಯ ಕೇಂದ್ರ

    ನಾವು ಸರಿಯಾದ ದಿಕ್ಕಿನಲ್ಲಿ ಸುಧಾರಣೆಗಳತ್ತ ಗಮನ ಹರಿಸಿದ್ದೇವೆ. ಜಾಗತಿಕ ಆರ್ಥಿಕ ತಜ್ಞರು ಭಾರತದ ನಿರ್ಧಾರಗಳನ್ನು ಶ್ಲಾಘಿಸಿದ್ದಾರೆ. ನಾವು ಭಾರತದಿಂದ ವಿಶ್ವದ ಆಕಾಂಕ್ಷೆಗಳನ್ನು ಪೂರೈಸುತ್ತೇವೆ ಎಂದು ನನಗೆ ಖಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ವಿಶ್ವ ಆರ್ಥಿಕ ವೇದಿಕೆಯಲ್ಲಿ ಇಂದು ಪ್ರಧಾನಿ ಮೋದಿ ಭಾಷಣ

    ವಿಶ್ವ ಆರ್ಥಿಕ ವೇದಿಕೆಯಲ್ಲಿ ಇಂದು ಪ್ರಧಾನಿ ಮೋದಿ ಭಾಷಣ

    ನವದೆಹಲಿ: ವಿಶ್ವ ಆರ್ಥಿಕ ವೇದಿಕೆಯ (ಡಬ್ಲೂಇಎಫ್) ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ಟೇಟ್ ಆಫ್ ದಿ ವರ್ಲ್ಡ್ ಕುರಿತು ಇಂದು ರಾತ್ರಿ 8:30 ವೀಡಿಯೋ ಕಾನ್ಫರೆನ್ಸ್ ಮೂಲಕ ವಿಶೇಷ ಭಾಷಣ ಮಾಡಲಿದ್ದಾರೆ.

    ಈ ವರ್ಚುವಲ್ ಕಾರ್ಯಕ್ರಮವೂ ಜ. 17 ರಿಂದ 21ರವರೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಜಪಾನ್ ಪ್ರಧಾನಿ ಕಿಶಿಡಾ ಫ್ಯೂಮಿಯೊ, ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುವಾ ವಾನ್ ಡೆರ್ ಲೇಯೆನ್, ಆಸ್ಟ್ರೇಲಿಯನ್ ಪ್ರಧಾನಿ ಸ್ಕಾಟ್ ಮಾರಿಸನ್, ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ, ಇಸ್ರೇಲಿ ಪ್ರಧಾನಿ ಸೇರಿದಂತೆ ಹಲವಾರು ರಾಷ್ಟ್ರಗಳ ಮುಖ್ಯಸ್ಥರು ಮಾತನಾಡಲಿದ್ದಾರೆ.

    ಅಂತಾರಾಷ್ಟ್ರೀಯ ಸಂಸ್ಥೆ ಹಾಗೂ ನಾಗರಿಕ ಸಮಾಜದ ಉನ್ನತ ಹುದ್ದೆಯಲ್ಲಿರುವ ಉದ್ಯೋಗಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜಗತ್ತಿಗೆ ಎದುರಾಗಿರುವ ಸವಾಲುಗಳು ಹಾಗೂ ಅವುಗಳನ್ನು ಹೇಗೆ ಪರಿಹರಿಸಬೇಕು ಎನ್ನುವುದರ ಕುರಿತು ಚರ್ಚೆ ನಡೆಯಲಿದೆ.

    modi

    ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರ ವಿಶೇಷ ಭಾಷಣದೊಂದಿಗೆ ಶೃಂಗಸಭೆ ಆರಂಭವಾಗಲಿದೆ. ಪ್ರಧಾನಿ ಮೋದಿ ಇಂದು ಸಂಜೆ ವಿಶೇಷ ಭಾಷಣವನ್ನು ಮಾಡಲಿದ್ದು, ನಂತರ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರ ಭಾಷಣ ನಡೆಯಲಿದೆ. ಇದನ್ನೂ ಓದಿ: ಪಕ್ಷದಿಂದ ಸಚಿವನ ಉಚ್ಛಾಟಿಸಿದ ಬಿಜೆಪಿ – ಮತ್ತೆ ‘ಕೈ’ ಹಿಡೀತಾರಾ ಹರಕ್ ಸಿಂಗ್ ರಾವತ್?

    ಡಬ್ಲೂಇಎಫ್ ಕಳೆದ 50 ವರ್ಷಗಳಿಂದ ವಾರ್ಷಿಕ ಸಭೆಯನ್ನು ಆಯೋಜಿಸುತ್ತಿದೆ. ಆದರೆ ಕೋವಿಡ್‍ನಿಂದಾಗಿ ಕಳೆದ ವರ್ಷ ಉನ್ನತ ಮಟ್ಟದ ಕಾರ್ಯಕ್ರಮ ನಡೆದಿರಲಿಲ್ಲ. ಈ ವರ್ಷವೂ ಕಾರ್ಯಕ್ರಮವನ್ನು ಬೇಸಿಗೆಯ ಆರಂಭದವರೆಗೆ ಮುಂದೂಡಿದ್ದರು. ಇದನ್ನೂ ಓದಿ: ದೇಶದಲ್ಲಿ ಒತ್ತಾಯದಿಂದ ಯಾರಿಗೂ Corona Vaccine ನೀಡಲ್ಲ: ಕೇಂದ್ರ ಸರ್ಕಾರ