Tag: ವಿಶ್ವ ಆನೆ ದಿನ

  • ಮಾನವ-ಆನೆ ಸಂಘರ್ಷ ತಡೆಗೆ ವಿಶೇಷ ಟಾಸ್ಕ್ ಫೋರ್ಸ್‌ ರಚನೆ – ಸಿದ್ದರಾಮಯ್ಯ

    ಮಾನವ-ಆನೆ ಸಂಘರ್ಷ ತಡೆಗೆ ವಿಶೇಷ ಟಾಸ್ಕ್ ಫೋರ್ಸ್‌ ರಚನೆ – ಸಿದ್ದರಾಮಯ್ಯ

    – 10 ವರ್ಷಗಳಲ್ಲಿ 2,500 ಮಾನವ-ಆನೆ ಸಂಘರ್ಷ; ಸಿಎಂ ಮಾಹಿತಿ

    ಬೆಂಗಳೂರು: ಮಾನವ-ಆನೆ ಸಂಘರ್ಷ (Human Elephant Conflict) ತಡೆಗೆ ನಮ್ಮ ಸರ್ಕಾರ ಎಲ್ಲಾ ಕ್ರಮಗೊಂಡಿದೆ. ರೈಲ್ವೆ ಬ್ಯಾರಿಕೇಡ್‌ ಅಳವಡಿಕೆ, ವಿಶೇಷ ಟಾಸ್ಕ್ ಫೋರ್ಸ್‌ (Elephant Task Force) ಸೇರಿದಂತೆ ಹತ್ತು ಹಲವು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

    ವಿಶ್ವ ಆನೆ ದಿನದ (World Elephant Day) ಅಂಗವಾಗಿ ಬೆಂಗಳೂರಿನ ಜಿಕೆವಿಕೆಯಲ್ಲಿ (GKVK) ʻಮಾನವ-ಆನೆ ಸಂಘರ್ಷ ನಿರ್ವಹಣೆʼ ವಿಷಯ ಕುರಿತು ನಡೆದ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಇದೇ ವೇಳೆ ಆನೆಗಳ ರಕ್ಷಣೆಗೆ ರಾಜ್ಯ ಸರ್ಕಾರ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ವಿವರಿಸಿದರು. ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಹೊಸ ಜನೌಷಧಿ ಕೇಂದ್ರಕ್ಕೆ ಅನುಮತಿ ನೀಡಲ್ಲ: ಶರಣ ಪ್ರಕಾಶ್‌ ಪಾಟೀಲ್‌

    ಮಾನವ-ಆನೆ ಸಂಘರ್ಷಗಳು ಹೆಚ್ಚಾಗುತ್ತಿವೆ. ಈ ಅಂತಾರಾಷ್ಟ್ರೀಯ ಸಮ್ಮೇಳನ ಮಾನವ-ಆನೆ ಸಂಘರ್ಷಗಳನ್ನ ಕಡಿಮೆ ಮಾಡುವಲ್ಲಿ ಕ್ರಮ ಕೈಗೊಳ್ಳಲು ಉತ್ತಮವಾಗಿದೆ. ಕರ್ನಾಟಕ ದೇಶದಲ್ಲಿ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯವಾಗಿವೆ. ಅತಿ ಹೆಚ್ಚು ಹುಲಿ ಹೊಂದಿರುವ 2ನೇ ರಾಜ್ಯವಾಗಿದೆ. ಅಲ್ಲದೇ ಅತಿ ಹೆಚ್ಚು ಅರಣ್ಯ ಭೂಮಿ ಹೊಂದಿರುವ ರಾಜ್ಯವೂ ಆಗಿದೆ ಎಂದು ಶ್ಲಾಘಿಸಿದರು. ಇದನ್ನೂ ಓದಿ: ತರಬೇತಿ ವೈದ್ಯೆ ಮೇಲೆ ಅತ್ಯಾಚಾರ ಕೇಸ್‌ – ಅವಮಾನ ಸಹಿಸಲಾರದೇ ಪ್ರಾಂಶುಪಾಲ ರಾಜೀನಾಮೆ

    10 ವರ್ಷಗಳಲ್ಲಿ 2,500 ಮಾನವ-ಆನೆ ಸಂಘರ್ಷ:
    ಕರ್ನಾಟಕದಲ್ಲಿ ಮೈಸೂರು ಮತ್ತು ದಾಂಡೇಲಿ ಮೀಸಲು ಅರಣ್ಯ ಪ್ರದೇಶಗಳಿವೆ. ಕಳೆದ 10 ವರ್ಷಗಳಲ್ಲಿ 2,500 ಮಾನವ-ಆನೆ ಸಂಘರ್ಷ ಪ್ರಕರಣಗಳು ಆಗಿವೆ. ಮಾನವ ಪ್ರಾಣಿ ಸಂಘರ್ಷಗಳ ತಡೆಗೆ ಕರ್ನಾಟಕ ಸರ್ಕಾರ ವಿಶೇಷ ಅನುದಾನ ನೀಡಿದೆ. ಬಜೆಟ್‌ನಲ್ಲಿ ಇದಕ್ಕಾಗಿಯೇ ಹಣ ಮೀಸಲಿಟ್ಟಿದೆ ಅಂತ ವಿವರಿಸಿದರು. ಇದನ್ನೂ ಓದಿ: ಟಿಬಿ ಡ್ಯಾಂ ಗೇಟ್ ಮುರಿದದ್ದು ಅಪಶಕುನ ಮುನ್ಸೂಚನೆ, ಸರ್ಕಾರ ಕೊಚ್ಚಿ ಹೋಗುವ ಕಾಲ ಬಂದಿದೆ: ಗೋವಿಂದ ಕಾರಜೋಳ

    ಸೋಲಾರ್ ಫೆನ್ಸಿಂಗ್ ವ್ಯವಸ್ಥೆ:
    ರೈಲ್ವೆ ಬ್ಯಾರಿಕೇಡ್‌ ಅಳವಡಿಕೆ, ಸೋಲಾರ್ ಫೆನ್ಸಿಂಗ್ ಸೇರಿ ಅನೇಕ ವ್ಯವಸ್ಥೆ ಮಾಡಲಾಗಿದೆ. ದೇಶದಲ್ಲಿ ಮೊದಲ ಬಾರಿಗೆ ರೈಲ್ವೆ ಫೆನ್ಸಿಂಗ್ ಅಳವಡಿಕೆ ಮಾಡಿಕೊಳ್ಳುವ ವ್ಯವಸ್ಥೆ ಮಾಡಿದೆ. ಕರ್ನಾಟಕದಲ್ಲಿ ವಿಶೇಷ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ. ಮಾನವ-ಆನೆ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಈ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ. ಕರ್ನಾಟಕ 0% ಮಾನವ-ಪ್ರಾಣಿ ಸಂಘರ್ಷ ತಡೆಗೆ ವಿಶೇಷ ಕಾರ್ಯಕ್ರಮ ಜಾರಿಗೆ ಮಾಡಲಾಗಿದೆ. ಮಾನವ-ಆನೆ ಸಂಘರ್ಷ ತಡೆಗಟ್ಟಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದು ಮಾಹಿತಿ ನೀಡಿದರು.

    ಇಂದಿನ ಸಮ್ಮೇಳನದ ಮೂಲಕ ಉತ್ತಮ ಸಲಹೆಗಳು ಮಾನವ-ಆನೆ ಸಂಘರ್ಷ ತಡೆಗೆ ಬರಲಿ. ನಮ್ಮ ಸರ್ಕಾರದ ಉದ್ದೇಶ 0% ಮಾನವ-ಆನೆ ಸಂಘರ್ಷ ತಡೆಯೋದು ಅಂತ ತಿಳಿಸಿದರು. ಇದನ್ನೂ ಓದಿ: ಹಿಂಡನ್‌ಬರ್ಗ್‌ನಲ್ಲಿ ಸೊರೊಸ್ ಮುಖ್ಯ ಹೂಡಿಕೆದಾರ, ವಿದೇಶದಿಂದ ಭಾರತದ ವಿರುದ್ಧ ಪಿತೂರಿ: ರವಿಶಂಕರ್‌ ಪ್ರಸಾದ್

    ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್, ಅರಣ್ಯ ಸಚಿವ ಈಶ್ವರ್ ಖಂಡ್ರೆ, ಕೇರಳ, ತಮಿಳುನಾಡು, ತೆಲಂಗಾಣ ರಾಜ್ಯದ ಅರಣ್ಯ ಸಚಿವರು ಭಾಗವಹಿಸಿದ್ದರು.

  • ಅಂತರಾಷ್ಟ್ರೀಯ ಆನೆ ದಿನಕ್ಕೆ ಗಜ ವಿಶೇಷ ಪೋಸ್ಟ್

    ಅಂತರಾಷ್ಟ್ರೀಯ ಆನೆ ದಿನಕ್ಕೆ ಗಜ ವಿಶೇಷ ಪೋಸ್ಟ್

    ಬೆಂಗಳೂರು: ಪ್ರಾಣಿ, ಪಕ್ಷಿ ಸೇರಿದಂತೆ ವನ್ಯ ಜೀವಿಗಳನ್ನು ಹೆಚ್ಚು ಪ್ರೀತಿಸುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಆನೆಗಳೆಂದರೆ ಇನ್ನೂ ಹೆಚ್ಚು ಪ್ರೀತಿ. ಇಂದು ಅಂತರಾಷ್ಟ್ರೀಯ ಆನೆ ದಿನದ ಹಿನ್ನೆಲೆ ಅವುಗಳ ರಕ್ಷಣೆ ಕುರಿತು ವಿಶೇಷ ಪೋಸ್ಟ್ ಹಾಕಿ ಗಮನಸೆಳೆದಿದ್ದಾರೆ.

    ಇನ್‍ಸ್ಟಾಗ್ರಾಮ್‍ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಡಿ ಬಾಸ್, ಇಂದು ಆಗಸ್ಟ್ 12 ರಂದು ‘ವಿಶ್ವ ಆನೆ ದಿನ’ ಈ ಸಂದರ್ಭದಲ್ಲಿ ಆನೆಗಳು ಎದುರಿಸುತ್ತಿರುವ ಹಲವಾರು ಬೆದರಿಕೆಗಳಿಂದ ಅವುಗಳನ್ನು ಸಂರಕ್ಷಿಸಲು ಮತ್ತು ರಕ್ಷಿಸಲು ಸಹಾಯ ಮಾಡುವುದಾಗಿ ನಾವೆಲ್ಲರೂ ಪ್ರತಿಜ್ಞೆ ಮಾಡೋಣ ಎಂಬ ಸಾಲುಗಳನ್ನು ಬರೆದಿದ್ದಾರೆ. ಅಲ್ಲದೆ. ಈ ಪೋಸ್ಟ್‍ನ್ನು ಕರ್ನಾಟಕ ಅರಣ್ಯ ಇಲಾಖೆಗೆ ಟ್ಯಾಗ್ ಮಾಡಿದ್ದಾರೆ.

    ಇತ್ತೀಚೆಗೆ ಆನೆಗಳ ಮೇಲೆ ಹೆಚ್ಚು ದಾಳಿ ನಡೆಯುತ್ತಿದ್ದು, ಕೇರಳದಲ್ಲಿ ಸಹ ಆನೆಯ ಬಾಯಿಯಲ್ಲಿ ಸ್ಫೋಟಕವನ್ನಿಟ್ಟು ಬ್ಲಾಸ್ಟ್ ಮಾಡಿರುವ ಆರೋಪ ಕೇಳಿ ಬಂದಿತ್ತು. ಈ ವೇಳೆ ಗರ್ಭಿಣಿ ಆನೆಯೊಂದು ಸಾವನ್ನಪ್ಪಿದ್ದು, ಇಂದು ವಿಶ್ವಾನೆ ದಿನದ ಹಿನ್ನೆಲೆ ದರ್ಶನ್ ಆನೆಗಳ ರಕ್ಷಣೆ ಕುರಿತು ಗಮನ ಸೆಳೆದಿದ್ದಾರೆ. ಆನೆಗಳು ಎದುರಿಸುತ್ತಿರುವ ಬೆದರಿಕೆಯನ್ನು ಹೋಗಲಾಡಿಸಿ ಅವುಗಳಿಗೆ ರಕ್ಷಣೆ ನೀಡಬೇಕೆಂದು ಮನವಿ ಮಾಡಿದ್ದಾರೆ.

    ದರ್ಶನ್ ಕಾಡು ಹಾಗೂ ವನ್ಯಜೀವಿಗಳ ಬಗ್ಗೆ ಸಾಕಷ್ಟು ಪ್ರೀತಿ ತೋರಿಸುವ ಹಿನ್ನೆಲೆ ಅವರನ್ನು ಅರಣ್ಯ ಇಲಾಖೆಯ ರಾಯಭಾರಿಯನ್ನಾಗಿ ಆಯ್ಕೆ ಮಾಡಲಾಗಿದೆ. ದರ್ಶನ್ ತಮ್ಮದೇ ಫಾರ್ಮ್‍ನಲ್ಲಿ ಹಲವಾರು ಪ್ರಾಣಿಗಳನ್ನು ಸಾಕುತ್ತಿದ್ದಾರೆ. ಅಲ್ಲದೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಹುಲಿ ಮತ್ತು ಆನೆಗಳನ್ನು ಸಹ ದತ್ತು ಪಡೆದು ಪ್ರಾಣಿಗಳ ಪಾಲನೆಗೆ ಸಹಾಯ ಮಾಡುತ್ತಿದ್ದಾರೆ.

    ದರ್ಶನ್ ಅವರ ಈ ಗುಣವನ್ನು ಗಮನಿಸಿದ ಅರಣ್ಯ ಇಲಾಖೆ ಗುಜರಾತ್‍ನಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ರಾಯಭಾರಿರಾಗಿ ನೇಮಕ ಮಾಡಿದಂತೆ ಕರ್ನಾಟಕದಲ್ಲಿ ಚಾಲೆಂಜಿಂಗ್ ಸ್ಟಾರ್ ಅವರನ್ನು ನೇಮಕ ಮಾಡಿದ್ದಾರೆ. ಅಲ್ಲದೆ ಕಾಡ್ಗಿಚ್ಚು ಹಾಗೂ ಅರಣ್ಯ ಸಂರಕ್ಷಣೆ ಬಗ್ಗೆ 90 ನಿಮಿಷಗಳ ಸಾಕ್ಷ್ಯ ಚಿತ್ರದಲ್ಲಿ ಸಹ ದರ್ಶನ್ ನಟಿಸಿದ್ದಾರೆ.