Tag: ವಿಶ್ವ ಅಮ್ಮಂದಿರ ದಿನ

  • ಅಮ್ಮನ ಜತೆ ತಾರೆಯರ ಅಪರೂಪದ ಫೋಟೋಗಳು

    ಅಮ್ಮನ ಜತೆ ತಾರೆಯರ ಅಪರೂಪದ ಫೋಟೋಗಳು

    ಮ್ಮಾ, ಈ ಎರಡು ಅಕ್ಷರವೇ ಒಂದು ತಾದಾತ್ಮ್ಯ. ಅವಳೇ ಸಾಟಿ. ಮಮತೆಯ ಮಡಿಲು, ಕರುಣೆಯ ಕಡಲು, ಬದುಕ ಪರಿಚಯಿಸಿದವಳು. ನೋವು ನಲಿವಿಗೂ ಜೊತೆಯಾಗುವಳು. ಅಂಥ ಮಹಾನ್ ದೈವ ಸ್ವರೂಪಿ ಅಮ್ಮಂದಿರು, ತೆರೆಯ ಮೇಲೆ ವಿಜೃಂಭಿಸುವ ತಾರೆಯರ ಬದುಕಲ್ಲೂ ಸಾಕಷ್ಟು ಪ್ರಭಾವ ಬೀರಿದ್ದಾರೆ. ಅವರ ಏಳು ಬೀಳುಗಳಿಗೆ ಜೊತೆಯಾಗಿದ್ದಾರೆ. ಜನಪ್ರಿಯ ತಾರೆಯರು ಅಮ್ಮನ ಜೊತೆಗೆ ಇರುವ ಅಪರೂಪದ ಚಿತ್ರಗಳು ಇಲ್ಲಿವೆ.

    ಅಮ್ಮಾ ಅವಳೆಂದರೆ ಶಕ್ತಿ, ಅವಳೆಂದರೆ ಧೈರ್ಯ ಬದುಕಿನ ಪ್ರತಿ ಹಂತದಲ್ಲೂ ಜೊತೆಯಾಗುವ ತಾಯಿಯ ಕುರಿತು ಅದೆಷ್ಟು ಹೇಳಿದ್ರೂ ಕಮ್ಮಿನೇ ಹೀಗೆ ತಾರೆಯರ ಬದುಕಿನಲ್ಲೂ ಶಕ್ತಿಯಾದವರ ಅಪರೂಪದ ಚಿತ್ರಣಗಳ ಜತೆ ಒಂದು ಚೆಂದದ ಕಹಾನಿ ಇಲ್ಲಿದೆ.

    ಇಡೀ ಚಿತ್ರರಂಗಕ್ಕೆ ಪಾರ್ವತಮ್ಮ ರಾಜ್‌ಕುಮಾರ್ ಅವರು ತಾಯಿಯಾಗಿದ್ದರು ಕಷ್ಟ ಎಂದು ಬಂದವರಿಗೆ ಬೆಂಬಲವಾಗಿ ನಿಲ್ಲುತ್ತಿದ್ದರು. ಚಿತ್ರರಂಗದ ಸ್ಪೂರ್ತಿಯ ಚಿಲುಮೆಯಾಗಿದ್ದರು. ಇನ್ನು ಮುದ್ದಿನ ಮಕ್ಕಳಾದ ಪೂರ್ಣಿಮಾ ಮತ್ತು ಲಕ್ಷ್ಮಿ ಅವರೊಂದಿಗೆ ವಿಶೇಷ ಬಾಂಧವ್ಯವಿತ್ತು. ಅವರೊಂದಿಗಿನ ಅಪರೂಪದ ಚಿತ್ರಣ ಇಲ್ಲಿದೆ.

    ಚಂದನವನದ ಚೆಂದದ ನಟಿಯರಾದ ಮೋಹಕ ತಾರೆ ರಮ್ಯಾ ಮತ್ತು ರಕ್ಷಿತಾ ಪ್ರೇಮ್ ಅದರ ಹೊರತಾಗಿಲ್ಲ. ನಟಿ ರಮ್ಯಾ ಇಂದಿಗೂ ಸ್ಯಾಂಡಲ್‌ವುಡ್ ಕ್ವೀನ್ ಆಗಿ ಸಿನಿಮಾ ಜತೆಗೆ ರಾಜಕೀಯದಲ್ಲಿಯೂ ಗಮನ ಸೆಳೆದಿರೋದಕ್ಕೆ ರಮ್ಯಾ ತಾಯಿ ರಂಜಿತಾ ಅವರ ಬೆಂಬಲ ಬಹಳಷ್ಟಿದೆ. ಹಾಗೆಯೇ ಚಂದನವನದ ಕ್ರೇಜಿ ಕ್ವೀನ್ ಆಗಿ ಮಿಂಚಿರೋ ನಟಿ ರಕ್ಷಿತಾ ಅವರಿಗೂ ಕೂಡ ಅಮ್ಮನೇ ಶಕ್ತಿ.

    ಸ್ಯಾಂಡಲ್‌ವುಡ್ ಸ್ಟಾರ್‌ನಟಿಯರಲ್ಲಿ ರಾಧಿಕಾ ಪಂಡಿತ್ ಕೂಡ ಒಬ್ಬರು. ಈ ನಟಿಯ ಯಶಸ್ಸಿಗೆ ತಾಯಿ ಮಂಗಳಾ ಪಂಡಿತ್ ಅವರ ಶ್ರಮವಿದೆ. ತಾಯಿಯ ಸಾಥ್‌ನಿಂದ ಗಾಂಧಿನಗರದಲ್ಲಿ ಗಟ್ಟಿ ಸ್ಥಾನ ಪಡೆದವರಲ್ಲಿ ಮೊಗ್ಗಿನ ಮನಸ್ಸಿನ ನಟಿ ರಾಧಿಕಾ ಕೂಡ ಒಬ್ಬರು.

    ಅಷ್ಟೇ ಅಲ್ಲ, ಸ್ಯಾಂಡಲ್‌ವುಡ್ ನಟಿಯರು ಅವರ ತಾಯಿಯ ಜತೆ ಹರ್ಷಿಕಾ ಪೂಣಚ್ಚ, ಐಂದ್ರಿತಾ ರೇ, ಜಯಮಾಲಾ ಮತ್ತು ಐಶ್ವರ್ಯ, ವಿನಯಾ ಪ್ರಸಾದ್ ಮತ್ತು ಸುಧಾರಾಣಿ, ಕೀರ್ತಿ ಮತ್ತು ಭಾರತಿ ವಿಷ್ಣುವರ್ಧನ್, ಪಾರ್ವತಿ ಮೆನನ್, ಪೂಜಾ ಗಾಂಧಿ, ರಾಧಿಕಾ, ರೇಖಾದಾಸ್, ಸಂಜನಾ ಗಲ್ರಾನಿ, ನಟಿ ಶ್ರುತಿ ಸೇರಿದಂತೆ ಹಲವು ಸೆಲೆಬ್ರೆಟಿಗಳ ಫೋಟೋಗಳು ಜತೆ ಆ ಫೋಟೋಗಳ ಜತೆ ಒಂದೊಳ್ಳೆ ಖುಷಿಯ ಕ್ಷಣವಿದೆ. ಇದನ್ನೂ ಓದಿ: ರಸ್ತೆ ಗುಂಡಿಗೆ ಬಿದ್ದ ಕಿರುತೆರೆ ಕಲಾವಿದೆ – N.R ಕಾಲೋನಿ ಬಳಿ ನಟಿ ಸುನೇತ್ರಾ ಸ್ಕೂಟರ್ ಅಪಘಾತ

    ಸ್ಯಾಂಡಲ್‌ವುಡ್ ನಟಿಯರ ಅಪರೂಪ ಚಿತ್ರಣಗಳೊಂದಿಗೆ ತಾಯಿ ಜತೆಗಿನ ಬಾಂಧವ್ಯದ ಕಥೆ ಸಾರುತ್ತದೆ. ಅಮ್ಮಂದಿನ ದಿನಾಚರಣೆ ಸಿನಿತಾರೆಯರ ಅಪರೂಪದ ಚಿತ್ರಣಗಳು ಇಲ್ಲಿದೆ.

  • ತನ್ನ ಅವಳಿ ಮಕ್ಕಳನ್ನ ಎತ್ತಿ ಮುದ್ದಾಡಿದ ಇರೋಮ್ ಶರ್ಮಿಳಾ

    ತನ್ನ ಅವಳಿ ಮಕ್ಕಳನ್ನ ಎತ್ತಿ ಮುದ್ದಾಡಿದ ಇರೋಮ್ ಶರ್ಮಿಳಾ

    – ಮಕ್ಕಳಿಗೆ ನಿಕ್ಸ್ ಶಖಿ, ಆಟುಮನ್ ಎಂದು ನಾಮಕರಣ

    ಬೆಂಗಳೂರು: ಉಕ್ಕಿನ ಮಹಿಳೆ ಖ್ಯಾತಿಯ ಮಾನವ ಹಕ್ಕುಗಳ ಹೋರಾಟಗಾರ್ತಿ ಇರೋಮ್ ಶರ್ಮಿಳಾ ಚಾನು ಅವರು ತಮ್ಮ ಅವಳಿ ಮಕ್ಕಳ ಜೊತೆ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ.

    ಇರೋಮ್ ಶರ್ಮಿಳಾ ಅವರು ಅವಳಿ ಹೆಣ್ಣು ಮಕ್ಕಳನ್ನು ಎತ್ತಿ ಮುದ್ದಾಡಿದ್ದಾರೆ. ಆ ಮಕ್ಕಳಿಗೆ ನಿಕ್ಸ್ ಶಖಿ ಮತ್ತು ಆಟುಮನ್ ಎಂದು ನಾಮಕರಣ ಮಾಡಿದ್ದಾರೆ. ನಿಕ್ಸ್ ಶಖಿ 2.16 ಕೆಜಿ ಹಾಗೂ ಆಟುಮನ್ 2.14 ಕೆಜಿ ತೂಕವಿದ್ದು, ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ.

    ಮಣಿಪುರದ ಇರೋಮ್ ಶರ್ಮಿಳಾ ಅವರು ಗರ್ಭಿಣಿಯಾದಾಗಿನಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ ವಿಶ್ವ ಅಮ್ಮಂದಿರ ದಿನವೇ (ಮೇ 12) ರಂದು ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಆಸ್ಪತ್ರೆಯ ವೈದ್ಯರಾದ ಡಾ. ಶ್ರೀಪಾದ ವೀಣೆಕರ್ ಮತ್ತು ತಂಡದಿಂದ ಹೆರಿಗೆ ಮಾಡಿಸಿದ್ದರು.

    ಇರೋಮ್ ಶರ್ಮಿಳಾ ಚಾನು ತಮ್ಮ ಬಹುಕಾಲದ ಸಂಗಾತಿ ಡೆಸ್ಮಂಡ್ ಕುಟಿನ್ಹೊ ಅವರನ್ನು 2017ರಲ್ಲಿ ವಿವಾಹವಾಗಿದ್ದರು. ಡೆಸ್ಮಂಡ್ ಕುಟಿನ್ಹೊ ಮೂಲತಃ ಬ್ರಿಟಿಷ್ ನಾಗರೀಕರಾಗಿದ್ದು, ವಿಶೇಷ ವಿವಾಹ ಕಾಯ್ದೆ ಅಡಿ ಇರೋಮ್ ಶರ್ಮಿಳಾ ಅವರನ್ನು ಆಗ ಉಪ ನೋಂದಣಾಧಿಕಾರಿಯಾಗಿದ್ದ ರಾಧಾಕೃಷ್ಣನ್ ಅವರ ಸಮ್ಮುಖದಲ್ಲಿ ವಿವಾಹವಾಗಿದ್ದರು.

    ಇರೋಮ್ ಶರ್ಮಿಳಾ ಅವರ ಹುಟ್ಟೂರು ಇಂಫಾಲ್. ಅವರು ಮಣಿಪುರದ ಉಕ್ಕಿನ ಮಹಿಳೆ, ನಾಗರಿಕ ಹಕ್ಕುಗಳ ಕಾರ್ಯಕರ್ತೆ, ಕವಯಿತ್ರಿಯಾಗಿ ಗುರುತಿಸಿಕೊಂಡಿದ್ದಾರೆ. ಸಶಸ್ತ್ರಪಡೆಯ (ವಿಶೇಷ ಅಧಿಕಾರ) ಕಾಯಿದೆ 1958 ಅನ್ನು ವಾಪಸ್ ಪಡೆಯಲು ಆಗ್ರಹಿಸಿ 2000 ನವೆಂಬರ್ 3ರಿಂದ ನಿರಶನ ಆರಂಭಿಸಿ 15 ವರ್ಷಗಳ ಕಾಲ ಮುಂದುವರಿಸಿ ಗಟ್ಟಿತನ ತೋರಿದ್ದರು. ರಾಜ್ಯದಲ್ಲಿ ಸಶಸ್ತ್ರಪಡೆಯು ವಿಶೇಷಾಧಿಕಾರ ಬಳಸಿಕೊಂಡು ಮಹಿಳೆಯರ ಮೇಲೆ ಅತ್ಯಾಚಾರ, ಅಮಾಯಕರ ಹತ್ಯೆಯಲ್ಲಿ ತೊಡಗಿರುವುದರ ವಿರುದ್ಧ ಸಿಡಿದೆದ್ದು ಏಕಾಂಗಿಯಾಗಿ ಅಹಿಂಸಾತ್ಮಕ ಪ್ರತಿಭಟನೆ ಕೈಗೊಂಡಿದ್ದರು.

    2014ರ ಆಗಸ್ಟ್ 9ರಂದು ಇರೋಮ್ ಶರ್ಮಿಳಾ ತಮ್ಮ ಉಪವಾಸ ಅಂತ್ಯಗೊಳಿಸಿ ವಿಧಾನಸಭಾ ಚುನಾವಣೆಗೆ ನಿಂತಿದ್ದರು. ಆದರೆ ಕೇವಲ 90 ಮತಗಳನ್ನು ಪಡೆದು ಹೀನಾಯ ಸೋಲು ಕಂಡಿದ್ದರು. ಅದಾದ ಬಳಿಕ ಅವರು ರಾಜಕೀಯದಿಂದಲೇ ಬಹುತೇಕ ದೂರ ಸರಿದರು.

  • ವಿಶ್ವ ಅಮ್ಮಂದಿರ ದಿನವೇ ತಾಯಿಯಾದ್ರು ಉಕ್ಕಿನ ಮಹಿಳೆ ಇರೋಮ್ ಶರ್ಮಿಳಾ

    ವಿಶ್ವ ಅಮ್ಮಂದಿರ ದಿನವೇ ತಾಯಿಯಾದ್ರು ಉಕ್ಕಿನ ಮಹಿಳೆ ಇರೋಮ್ ಶರ್ಮಿಳಾ

    ಬೆಂಗಳೂರು: ವಿಶ್ವ ಅಮ್ಮಂದಿರ ದಿನವೇ ಉಕ್ಕಿನ ಮಹಿಳೆ ಖ್ಯಾತಿಯ ಮಣಿಪುರದ ಮಾನವ ಹಕ್ಕುಗಳ ಹೋರಾಟಗಾರ್ತಿ ಇರೋಮ್ ಶರ್ಮಿಳಾ ಚಾನು ತಾಯಿಯಾಗಿದ್ದಾರೆ.

    ನಗರದ ಮಲ್ಲೇಶ್ವರಂನ ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ ಇರೋಮ್ ಶರ್ಮಿಳಾ ಅವರು ಇಂದು ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

    ಇರೋಮ್ ಶರ್ಮಿಳಾ ಚಾನು ತಮ್ಮ ಬಹುಕಾಲದ ಸಂಗಾತಿ ಡೆಸ್ಮಂಡ್ ಕುಟಿನ್ಹೊ ಅವರನ್ನು 2017ರಲ್ಲಿ ವಿವಾಹವಾಗಿದ್ದರು. ಡೆಸ್ಮಂಡ್ ಕುಟಿನ್ಹೊ ಮೂಲತಃ ಬ್ರಿಟಿಷ್ ನಾಗರೀಕರಾಗಿದ್ದು, ವಿಶೇಷ ವಿವಾಹ ಕಾಯ್ದೆ ಅಡಿ ಇರೋಮ್ ಶರ್ಮಿಳಾ ಅವರನ್ನು ಆಗ ಉಪ ನೋಂದಣಾಧಿಕಾರಿಯಾಗಿದ್ದ ರಾಧಾಕೃಷ್ಣನ್ ಅವರ ಸಮ್ಮುಖದಲ್ಲಿ ವಿವಾಹವಾಗಿದ್ದರು.

    ಇರೋಮ್ ಶರ್ಮಿಳಾ ಅವರ ಹುಟ್ಟೂರು ಇಂಫಾಲ್. ಅವರು ಮಣಿಪುರದ ಉಕ್ಕಿನ ಮಹಿಳೆ, ನಾಗರಿಕ ಹಕ್ಕುಗಳ ಕಾರ್ಯಕರ್ತೆ, ಕವಯಿತ್ರಿಯಾಗಿ ಗುರುತಿಸಿಕೊಂಡಿದ್ದಾರೆ. ಸಶಸ್ತ್ರಪಡೆಯ (ವಿಶೇಷ ಅಧಿಕಾರ) ಕಾಯಿದೆ 1958 ಅನ್ನು ವಾಪಸ್ ಪಡೆಯಲು ಆಗ್ರಹಿಸಿ 2000 ನವೆಂಬರ್ 3ರಿಂದ ನಿರಶನ ಆರಂಭಿಸಿದ್ದು, 15ನೇ ವರ್ಷದಲ್ಲೂ ಮುಂದುವರಿಸಿ ಗಟ್ಟಿತನ ತೋರಿದ್ದರು. ರಾಜ್ಯದಲ್ಲಿ ಸಶಸ್ತ್ರಪಡೆಯು ವಿಶೇಷಾಧಿಕಾರ ಬಳಸಿಕೊಂಡು ಮಹಿಳೆಯರ ಮೇಲೆ ಅತ್ಯಾಚಾರ, ಅಮಾಯಕರ ಹತ್ಯೆಯಲ್ಲಿ ತೊಡಗಿರುವುದರ ವಿರುದ್ಧ ಸಿಡಿದೆದ್ದು ಏಕಾಂಗಿಯಾಗಿ ಅಹಿಂಸಾತ್ಮಕ ಪ್ರತಿಭಟನೆ ಕೈಗೊಂಡಿದ್ದರು.

    2014ರ ಆಗಸ್ಟ್ 9ರಂದು ಇರೋಮ್ ಶರ್ಮಿಳಾ ತಮ್ಮ ಉಪವಾಸ ಅಂತ್ಯಗೊಳಿಸಿ ಲೋಕಸಭಾ ಚುನಾವಣೆಗೆ ನಿಂತಿದ್ದರು. ಆದರೆ ಕೇವಲ 90 ಮತಗಳನ್ನು ಪಡೆದು ಹೀನಾಯ ಸೋಲು ಕಂಡಿದ್ದರು. ಅದಾದ ಬಳಿಕ ಅವರು ರಾಜಕೀಯದಿಂದಲೇ ಬಹುತೇಕ ದೂರ ಸರಿದರು.