Tag: ವಿಶ್ವ ಅಪ್ಪಂದಿರ ದಿನ

  • Father’s Day: ಮಕ್ಕಳ ಜೊತೆಯಿರುವ ರಿಷಬ್ ಸ್ಪೆಷಲ್ ಫೋಟೋ ಹಂಚಿಕೊಂಡ ಪ್ರಗತಿ ಶೆಟ್ಟಿ

    Father’s Day: ಮಕ್ಕಳ ಜೊತೆಯಿರುವ ರಿಷಬ್ ಸ್ಪೆಷಲ್ ಫೋಟೋ ಹಂಚಿಕೊಂಡ ಪ್ರಗತಿ ಶೆಟ್ಟಿ

    ವಿಶ್ವ ಅಪ್ಪಂದಿರ ದಿನವಾಗಿರೋ ಕಾರಣ, ಸೆಲೆಬ್ರಿಟಿಗಳು ತಂದೆ ಜೊತೆಗಿನ ವಿಶೇಷ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಇದೀಗ ನಟ ರಿಷಬ್ ಅವರು ಮಕ್ಕಳ ಜೊತೆಯಿರೋ ಫೋಟೋವನ್ನ ಪತ್ನಿ ಪ್ರಗತಿ ಶೆಟ್ಟಿ (Pragathi Shetty) ಶೇರ್ ಮಾಡಿದ್ದಾರೆ. ಈ ಪೋಸ್ಟ್‌ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.‌

    ‘ಕಾಂತಾರ’ (Kantara) ಸಿನಿಮಾದಿಂದ ಪ್ಯಾನ್ ಸ್ಟಾರ್ ಆಗಿ ಮಿಂಚ್ತಿರುವ ನಟ ರಿಷಬ್ ಶೆಟ್ಟಿ (Rishab Shetty) ಅವರು ಫ್ಯಾಮಿಲಿಗೂ (Family) ಸಮಯ ಮೀಸಲಿಡುತ್ತಾರೆ. ಕಾಂತಾರ ಚಿತ್ರದ ಸಕ್ಸಸ್ ನಂತರ ಕುಟುಂಬದ ಕಡೆ ಗಮನ ಕೊಡುತ್ತಿದ್ದರು. ವಿದೇಶ ಪ್ರವಾಸಕ್ಕೂ ಹೋಗಿ ಬಂದಿದ್ದರು. ತಮ್ಮ ಹುಟ್ಟೂರು ಕುಂದಾಪುರಕ್ಕೂ ನಟ ಭೇಟಿ ನೀಡಿದ್ದರು. ಈಗ ವಿಶ್ವ ಅಪ್ಪಂದಿರ ದಿನದಂದು ಪ್ರಗತಿ ಶೆಟ್ಟಿ ಪೋಸ್ಟ್ ನೆಟ್ಟಿಗರ ಗಮನ ಸೆಳೆದಿದೆ. ಇದನ್ನೂ ಓದಿ:ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡ ‘ಪಾರು’ ಸೀರಿಯಲ್ ನಟಿ

    ವಿಶ್ವದ ಕೂಲೆಸ್ಟ್ ಅಪ್ಪನಿಗೆ ತಂದೆಯರ ದಿನದ ಶುಭಾಶಯಗಳು! ನಿಮ್ಮ ಪ್ರೀತಿ, ಬೆಂಬಲ ಮತ್ತು ಸಮರ್ಪಣಾ ಮನೋಭಾವವು ಪ್ರತಿದಿನವೂ ಅದ್ಭುತ ಅನುಭವ ನೀಡಿದೆ. ಬೆಸ್ಟ್ ಪತಿ ಮತ್ತು ತಂದೆಯಾಗಿದ್ದಕ್ಕಾಗಿ ಧನ್ಯವಾದಗಳು. ನೀವು ನನ್ನ ಪಕ್ಕದಲ್ಲಿರುವುದಕ್ಕೆ ನಾನು ತುಂಬಾ ಅದೃಷ್ಟಶಾಲಿ ಎಂದು ಪ್ರಗತಿ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ‘ಕಾಂತಾರ’ ಪಾರ್ಟ್ 2 ಸಿನಿಮಾಗಾಗಿ ಎದುರು ನೋಡುತ್ತಿರುವ ಅಭಿಮಾನಿಗಳಿಗೆ ಚಿತ್ರತಂಡ ಸಿಹಿಸುದ್ದಿ ನೀಡಿದೆ. ಸ್ಕ್ರಿಪ್ಟ್ ರೆಡಿಯಾಗಿದ್ದು, ಇದೇ ಆಗಸ್ಟ್ 27ರಿಂದ ಚಿತ್ರೀಕರಣ ಶುರುವಾಗಲಿದೆ. ಕಾಂತಾರ ಪಾರ್ಟ್ 2ಗೆ ತೆರೆಮರೆಯಲ್ಲಿ ರಿಷಬ್ ಶೆಟ್ಟಿ ಭರ್ಜರಿ ತಯಾರಿ ಮಾಡಿದ್ದಾರೆ.

  • ಅಪ್ಪಂದಿರ ದಿನಾಚರಣೆಗೆ ವಿಶೇಷ ಪೋಸ್ಟ್ ಹಂಚಿಕೊಂಡ ರಾಧಿಕಾ ಪಂಡಿತ್

    ಅಪ್ಪಂದಿರ ದಿನಾಚರಣೆಗೆ ವಿಶೇಷ ಪೋಸ್ಟ್ ಹಂಚಿಕೊಂಡ ರಾಧಿಕಾ ಪಂಡಿತ್

    ಸ್ಯಾಂಡಲ್‌ವುಡ್ ನಟಿ ರಾಧಿಕಾ ಪಂಡಿತ್ (Radhika Pandit) ಅವರು ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ. ಸದ್ಯ ವಿಶ್ವ ಅಪ್ಪಂದಿರ ದಿನಾಚರಣೆಯಂದು ಅಪ್ಪನ ಜೊತೆಗಿನ ಬಾಂಧವ್ಯವನ್ನ ವಿವರಿಸಿ ಚೆಂದದ ಪೋಸ್ಟ್‌ವೊಂದನ್ನ ನಟಿ ಹಂಚಿಕೊಂಡಿದ್ದಾರೆ. ಈ ಕುರಿತ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಯೋಗರಾಜ್ ಭಟ್ಟರು ಮೀಸೆ ತೆಗೆದಿದ್ದಕ್ಕೆ ಅಜ್ಜಯ್ಯ ಕಾರಣ

    ಕಿರಿತೆರೆಯ ‘ನಂದಗೋಕುಲ’ (Nandagokula) ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದ ನಾಯಕಿ ರಾಧಿಕಾ, ಬಳಿಕ ಮೊಗ್ಗಿನ ಮನಸ್ಸು ಸಿನಿಮಾ ನಾಯಕಿಯಾಗಿ ಮಿಂಚಿದ್ದರು. ಸ್ಟಾರ್ ಪಟ್ಟ ಇರುವಾಗಲೇ ಯಶ್ (Yash) ಜೊತೆ ರಾಧಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ರಾಧಿಕಾ ಅವರ ಸಕ್ಸಸ್‌ಗೆ ತಂದೆ ಕೃಷ್ಣ ಪ್ರಸಾದ್ ಪಂಡಿತ್ ಅವರ ಬೆಂಬಲ ಅಪಾರ. ಹೀಗಿರುವಾಗ ನಟಿ ಕೂಡ ತಂದೆಯ ಮುದ್ದಿನ ಮಗಳು ನಾನು ಎಂದು ಮಾತನಾಡಿದ್ದಾರೆ. ತಂದೆಯ ಜೊತೆಗಿನ ಪ್ರೀತಿ, ಬಾಂದವ್ಯದ ಬಗ್ಗೆ ಬಣ್ಣಿಸಿದ್ದಾರೆ.

     

    View this post on Instagram

     

    A post shared by Radhika Pandit (@iamradhikapandit)

    ನಾನು ಯಾವಾಗಲೂ ಅಪ್ಪನ ಹುಡುಗಿ ಅವನ ಬಳಿಗೆ ಓಡುತ್ತೇನೆ. ನನ್ನಪ್ಪ ನನ್ನ ಮಾರ್ಗದರ್ಶಕ, ನನ್ನ ಹೀರೋ ಎಂದು ರಾಧಿಕಾ ಬರೆದುಕೊಂಡಿದ್ದಾರೆ. ನನ್ನ ತಂದೆ ಜೊತೆಗಿನ ಬಾಂಧವ್ಯ ಇರುವ ಹಾಗೆಯೇ, ಐರಾ ಮತ್ತು ಯಥರ್ವ್‌ ಅವರ ತಂದೆ ಯಶ್ ಜೊತೆಯಿದೆ. ಇದನ್ನೂ ನೋಡಲು ಖುಷಿಯಾಗುತ್ತದೆ ಎಂದಿದ್ದಾರೆ. ಈ ಮೂಲಕ ಅಪ್ಪಂದಿರ ದಿನಾಚರಣೆಗೆ (Fathers Day) ವಿಶೇಷ ಸಂದೇಶ ಹಂಚಿಕೊಂಡಿದ್ದಾರೆ.

    ಇನ್ನೂ ‘ಯಶ್ 19’ ಸಿನಿಮಾ ಬಗ್ಗೆ ಅಭಿಮಾನಿಗಳು ಎಂದು ನೋಡ್ತಿದ್ದಾರೆ. ಕೆಜಿಎಫ್ 2 ಸಕ್ಸಸ್ ನಂತರ ಯಶ್ ಮುಂದಿನ ಸಿನಿಮಾ ಬಗ್ಗೆ ಅಪ್‌ಡೇಟ್ ಸಿಗದೇ ನಿರಾಶರಾಗಿದ್ದಾರೆ. ರಾಧಿಕಾ ಪಂಡಿತ್ ಕೂಡ ಚಿತ್ರರಂಗಕ್ಕೆ ಅದ್ಯಾವಾಗ ರೀ ಎಂಟ್ರಿ ಕೊಡುತ್ತಾರೆ ಅಂತಾ ಫ್ಯಾನ್ಸ್ ಎದುರು ನೋಡ್ತಿದ್ದಾರೆ.

  • ಅಪ್ಪಾಜಿಯನ್ನು ವಿಶೇಷವಾಗಿ ನೆನಪಿಸಿಕೊಂಡ ಪುನೀತ್ ರಾಜ್‍ಕುಮಾರ್

    ಅಪ್ಪಾಜಿಯನ್ನು ವಿಶೇಷವಾಗಿ ನೆನಪಿಸಿಕೊಂಡ ಪುನೀತ್ ರಾಜ್‍ಕುಮಾರ್

    ಬೆಂಗಳೂರು: ವಿಶ್ವ ಅಪ್ಪಂದಿರ ದಿನಾಚರಣೆಯ ಅಂಗವಾಗಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ವಿಶೇಷವಾಗಿ ಹಾಡಿನ ಮೂಲವಾಗಿ ತಮ್ಮ ತಂದೆಯನ್ನು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ:  ಅಪ್ಪನ ಡಾನ್ಸ್ ನೋಡೊದ್ರಲ್ಲಿ ಬ್ಯುಸಿಯಾದ ಜ್ಯೂನಿಯರ್ ಚಿರು

    ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ ಹಾಡು ಹೇಳಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅಪ್ಪಂದಿರ ದಿನಕ್ಕೆ ಪುನೀತ್ ರಾಜ್‍ಕುಮಾರ್ ಅವರು ಶುಭಕೋರಿದ್ದಾರೆ. ಈ ಹಾಡು ಪುನೀತ್ ರಾಜ್‍ಕುಮಾರ್ ಬಾಲನಟನಾಗಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದ ಭಾಗ್ಯವಂತ ಸಿನಿಮಾದ್ದಾಗಿದೆ. ಈ ಸಿನಿಮಾದಲ್ಲಿ ಡಾ. ರಾಜ್‍ಕುಮಾರ್ ಅವರು ಅತಿಥಿ ಪಾತ್ರ ಮಾಡಿದ್ದರು.

    ಭಾರತೀಯ ಚಿತ್ರರಂಗದ ಮೇರು ನಟ ಡಾ. ರಾಜ್‍ಕುಮಾರ್ ಅವರನ್ನು ಮಗ ಹಾಡಿನ ಮೂಲಕವಾಗಿ ಅಪ್ಪಂದಿರ ದಿನಾಚರಣೆ ಶುಭವನ್ನು ಕೋರಿದ್ದಾರೆ. ಚಿಕ್ಕ ವಯಸ್ಸಿನಿಂದಲೇ ಸಿನಿಮಾಗಳಲ್ಲಿ ನಟಿಸುತ್ತಿದ್ದ ಪುನೀತ್‍ಗೆ ತಂದೆಯೇ ಮೊದಲ ಗುರು. ಆಗ ಪುನೀತ್ ಹೆಸರು ಮಾಸ್ಟರ್ ಲೋಹಿತ್ ಎಂದಾಗಿತ್ತು. ಹಲವಾರು ಸಿನಿಮಾಗಳಲ್ಲಿ ಅವರು ಅಪ್ಪಾಜಿ ಜೊತೆ ನಟಿಸುವ ಅವಕಾಶ ಪಡೆದುಕೊಂಡಿದ್ದರು. ಆ ಮೂಲಕ ಚಿಕ್ಕವಯಸ್ಸಿನಲ್ಲಿಯೇ ಅವರಿಗೆ ಸಿನಿಮಾ ಬಗ್ಗೆ ಅಪಾರ ಅನುಭವ ದಕ್ಕಿತ್ತು.ಫಾದರ್ಸ್ ಡೇಗೆ ಸೋಶಿಯಲ್ ಮೀಡಿಯಾದಲ್ಲಿ ವಿವಿಧ ಪೋಸ್ಟ್‌ಗಳನ್ನು ಹಾಕುತ್ತಾ ಸಂಭ್ರಮಿಸುವವರ ಮಧ್ಯೆ ಅಪ್ಪನಿಗೆ ಪುನೀತ್ ಅವರು ವಿಶೇಷವಾಗಿ ಧನ್ಯವಾದ ತಿಳಿಸುತ್ತಿದ್ದಾರೆ.