Tag: ವಿಶ್ವೇಶ್ವರ ಹೆಗ್ಗಡೆ ಕಾಗೇರಿ

  • ಕಾಗೇರಿಗೊಂದು ನ್ಯಾಯ ಹೆಬ್ಬಾರ್‌ಗೊಂದು ನ್ಯಾಯ- ಸಿಡಿದೆದ್ದ ಹೆಬ್ಬಾರ್ ಅಭಿಮಾನಿಗಳು?

    ಕಾಗೇರಿಗೊಂದು ನ್ಯಾಯ ಹೆಬ್ಬಾರ್‌ಗೊಂದು ನ್ಯಾಯ- ಸಿಡಿದೆದ್ದ ಹೆಬ್ಬಾರ್ ಅಭಿಮಾನಿಗಳು?

    ಕಾರವಾರ: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಯಲ್ಲಾಪುರದ ಐದು ಜನ ಬಿಜೆಪಿ ಪದಾಧಿಕಾರಿಗಳನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ವೆಂಕಟೇಶ್ ನಾಯ್ಕ್ ಮರು ನೇಮಕ ಮಾಡಿರುವುದಕ್ಕೆ ಶಿವರಾಮ್ ಹೆಬ್ಬಾರ್ (Shivaram Hebbar) ಅವರ ಅಭಿಮಾನಿ ಬಳಗ ಅಸಮಾಧಾನ ಹೊರಹಾಕಿದೆ.

    ಇಂದು ಯಲ್ಲಾಪುರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಹೆಬ್ಬಾರ್ ಅಭಿಮಾನಿ ಬಳಗದ ಪಟ್ಟಣಪಂಚಾಯತ್ ಸದಸ್ಯ ಸತೀಶ್ ಶಿವಾನಂದ್ ನಾಯ್ಕ್, ಅಸಮಾಧಾನ ಹೊರಹಾಕಿದ್ದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಚಟುವಟಿಕೆ ನಡೆಸಿ ಯಲ್ಲಾಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಶಿವರಾಮ್ ಹೆಬ್ಬಾರ್ ರವರು ಅತ್ಯಲ್ಪ ಮತಗಳಿಂದ ಗೆಲುವು ಕಾಣುವಂತಾಯ್ತು. ಹೀಗಾಗಿ ಇಂಥವರ ವಿರುದ್ಧ ಕ್ರಮಕ್ಕಾಗಿ ಶಾಸಕ ಶಿವರಾಮ್ ಹೆಬ್ಬಾರ್ ರವರು ಪಕ್ಷದ ವರಿಷ್ಟರಿಗೆ ದೂರು ನೀಡಿದ್ದರು. ಇದಲ್ಲದೇ ಶಿರಸಿ ಯ ಮಾಜಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸಹ ದೂರು ನೀಡಿದ್ದರು.

    ಇದರ ಅನ್ವಯ ಶಿರಸಿ, ಯಲ್ಲಾಪುರದಲ್ಲಿ ಪದಾಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡ ಪಕ್ಷದ ಶಿಸ್ತುಪಾಲನಾ ಸಮಿತಿ ಯಲ್ಲಾಪುರ ಹಾಗೂ ಶಿರಸಿ ಭಾಗದಲ್ಲಿನ ಪಕ್ಷ ವಿರೋಧಿ ಕಾರ್ಯ ನಡೆಸಿದ ಪದಾಧಿಕಾರಿಗಳನ್ನು ಪಕ್ಷದ ಪದಾಧಿಕಾರಿ ಸ್ಥಾನ ದಿಂದ ವಿಮುಕ್ತಿಗೊಳಿಸಲಾಗಿತ್ತು. ಆದರೆ ಇದೀಗ ಯಲ್ಲಾಪುರದಲ್ಲಿ ಐದು ಜನರನ್ನು ಪುನಃ ಪದಾಧಿಕಾರಿ ಸ್ಥಾನಕ್ಕೆ ಅವರನ್ನು ಮರು ನೇಮಕ ಮಾಡಿಕೊಳ್ಳಲಾಗಿದೆ. ಆದರೆ ಶಿರಸಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಇದ್ದು ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಯಲ್ಲಾಪುರದಲ್ಲಿ ಮರು ನೇಮಕ ಮಾಡಿದಂತೆ ಶಿರಸಿಯಲ್ಲಿ ಯಾಕೆ ಮಾಡಲಿಲ್ಲ? ಹೆಬ್ಬಾರ್ ಗೆ ಒಂದು ನ್ಯಾಯ, ಕಾಗೇರಿಯವರಿಗೆ ಒಂದು ನ್ಯಾಯ ಮಾಡಿದ್ದು ಎಷ್ಟು ಸರಿ ಎಂದು ಅವರು ಅಕ್ರೋಶ ಹೊರಹಾಕಿದರು. ಇದನ್ನೂ ಓದಿ: ಭಾರತ ಅಭಿವೃದ್ಧಿಯಾದರೆ ಕೆಲವರ ಆಟ ನಡೆಯಲ್ಲ: ಮೋಹನ್ ಭಾಗವತ್

    ಶಾಸಕರು ನೀಡಿದ ಲಿಖಿತ ದೂರಿಗೆ ಪಕ್ಷ ಮಣ್ಣನೆ ನೀಡಿಲ್ಲ. ಪಕ್ಷವಿರೋಧಿಗಳನ್ನ ಪುನಃ ಸೇರ್ಪಡೆ ಮಾಡಿಕೊಂಡ ಪಕ್ಷದ ವರಿಷ್ಠರ ನಡೆ ಖಂಡನೀಯ. ಕೇವಲ ನಾಮಕಾವಸ್ತೆ ಕ್ರಮ ಜರುಗಿಸಿದಂತೆ ಪಕ್ಷದಲ್ಲಿದ್ದ ಪದವಿಗಳಿಂದ ವಿಮುಕ್ತಿಗೊಳಿಸಿ ತೇಪೆ ಹಚ್ಚುವ ಕೆಲಸವಾಗಿತ್ತು. ಆದರೆ ಇದೀಗ ಪಕ್ಷದ ಅಭ್ಯರ್ಥಿಯನ್ನೇ ಸೋಲಿಸ ಹೊರಟ ಪಕ್ಷ ದ್ರೋಹಿಗಳಿಗೆ ಮತ್ತೆ ಅದೇ ಸ್ಥಾನಗಳಿಗೆ ಮರು ಸೇರ್ಪಡೆ ಮಾಡುತ್ತಿರುವ ಸುದ್ದಿ ನೋಡಿ ನಿಷ್ಠಾವಂತ ಹೆಬ್ಬಾರ್ ಅಭಿಮಾನಿಗಳಾದ ನಮ್ಮಂತಹ ಸಹಸ್ರಾರು ಮಂದಿಗೆ ಅತೀವ ಬೇಸರವಾಗಿದೆ. ನನ್ನನ್ನು ಸಹ ಹೆಸರಿಗೆ ಮಾತ್ರ ಶಕ್ತಿಕೇಂದ್ರದ ಅಧ್ಯಕ್ಷೆಯನ್ನಾಗಿಸಿ ಫೋನ್ ಕರೆ ಮಾಡುವ ಕೆಲಸಕ್ಕೆ ಮಾತ್ರ ಬಳಸಿಕೊಂಡು ನಿರ್ಲಕ್ಷಿಸಿದ ಧೋರಣೆ ಅತ್ಯಂತ ಖಂಡನೀಯ.

    ಪಕ್ಷದ ವರಿಷ್ಠರ ಈ ನಡೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ನಮ್ಮೆಲ್ಲರ ಚುನಾವಣೆ ಸಂದರ್ಭದ ಶ್ರಮಕ್ಕೆ ಅವಮಾನಿಸಿದಂತಾಗಿದೆ. ಈ ಸಂಬಂಧ ಪಕ್ಷದ ಜಿಲ್ಲಾ ವರಿಷ್ಟರು ಮತ್ತು ರಾಜ್ಯದ ವರಿಷ್ಠರು ಪಕ್ಷದ ಶಾಸಕರ ಗಮನಕ್ಕೂ ತರದೆ ಪಕ್ಷದ್ರೋಹಿಗಳನ್ನು ಮತ್ತೆ ಪಕ್ಷದ ಪದವಿಗಳಿಗೆ ಮರು ಸೇರ್ಪಡೆ ಮಾಡಿರುವುದು ಶಾಸಕರಿಗೆ ಮಾಡಿದ ಅಪಮಾನವಾಗಿದ್ದು, ಇದನ್ನು ಹೆಬ್ಬಾರ್ ಅಭಿಮಾನಿ ಬಳಗ ಉಗ್ರವಾಗಿ ವಿರೋಧಿಸುತ್ತಿದೆ ಎಂದರು.

    ತಕ್ಷಣ ಪಕ್ಷದ ನಾಯಕರು ಶಾಸಕರೊಂದಿಗೆ ಮಾತನಾಡಿ ಅವರ ಒಪ್ಪಿಗೆ ಪಡೆದು ಈ ಕ್ರಮದ ಬಗ್ಗೆ ನಿರ್ಧರಿಸಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಬರಲಿರುವ ಲೋಕ ಸಭಾ ಚುನಾವಣೆಯಲ್ಲಿ ಪಕ್ಷವೇ ಅಧಿಕೃತವಾಗಿ ಪಕ್ಷದ್ರೋಹಿಗಳಿಗೆ ಬಲ ತುಂಬಿ ಪಕ್ಷದಿಂದ ಸ್ಪರ್ಧಿಸುವ ಅಧಿಕೃತ ಅಭ್ಯರ್ಥಿ ವಿರುದ್ಧ ಪ್ರಚಾರಮಾಡಿ ಸೋಲಿಸುವಂತೆ ಪ್ರೇರಣೆ ನೀಡಿದಂತಾಗಲಿದೆ.

    ಹಾಗೇನಾದರೂ ಆದಲ್ಲಿ ಪಕ್ಷ, ತತ್ವ, ಸಿದ್ಧಾಂತ, ಶಿಸ್ತು ಎಲ್ಲವೂ ತೋರ್ಪಡಿಕೆಯ ಭಾಷಣದ ಪದಗಳೆಂದು ಕಾರ್ಯಕರ್ತರಾದ ನಾವುಭಾವಿಸುವಂತಾಗಲಿದೆ ದಯವಿಟ್ಟು ಅದಕ್ಕೆ ಆಸ್ಪದ ನೀಡದೇ ಕ್ರಮಜರುಗಿಸಬೇಕಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಅಮಿತ್ ಅಂಗಡಿ, ಸದಸ್ಯರಾದ ಪ್ರಶಾಂತ್ ತಳವಾರ, ಅಬ್ದುಲ್ ಅಲಿ ನೂತನ ನಗರ, ಹಲೀಮ ಕಕ್ಕೇರಿ, ಗೀತಾ ದೇಶ ಭಂಡಾರಿ, ನಾಗರಾಜ್ ಅಂಕೋಲೆಕರ್ ಉಪಸ್ಥಿತರಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಮೊಮ್ಮಗ ಶಶಿಭೂಷಣ್ ಹೆಗಡೆ ಬಿಜೆಪಿ ಸೇರ್ಪಡೆ

    ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಮೊಮ್ಮಗ ಶಶಿಭೂಷಣ್ ಹೆಗಡೆ ಬಿಜೆಪಿ ಸೇರ್ಪಡೆ

    ಕಾರವಾರ: ವಿಧಾನಸಭಾ ಚುನಾವಣೆ (Karnataka Assembly Election) ಸಮೀಪಿಸುತಿದ್ದಂತೆ ಪಕ್ಷ ತೊರೆದು ಹೊಸ ಪಕ್ಷ ಸೇರುವುದು ನಾಯಕರ ಪಾಲಿಗೆ ಹೊಸದೇನಲ್ಲ. ಆದ್ರೆ ಇದೀಗ ವಿಶ್ವೇಶ್ವರ ಹೆಗ್ಗಡೆ ಕಾಗೇರಿ ಕ್ಷೇತ್ರದಲ್ಲಿ ಅವರಿಗೆ ಎದುರಾಳಿಯಾಗಿದ್ದ ದಿವಂಗತ ರಾಮಕೃಷ್ಣ ಹೆಗಡೆ ಅವರ ಮೊಮ್ಮಗ ಶಶಿಭೂಷಣ್ ಹೆಗಡೆ (Shashibhushan Hegde) ಜೆಡಿಎಸ್‌ ತೊರೆದು ಬಿಜೆಪಿ (BJP) ಸೇರಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ (NalinKumar Kateel) ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ.

    ಶಶಿಭೂಷಣ್ ಹೆಗಡೆ ಹಿಂದೆ ಕುಮಟಾ ಕ್ಷೇತ್ರದಲ್ಲಿ ಎರಡು ಬಾರಿ ವಿಧಾನಸಭೆಗೆ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದರು. 2018 ರಲ್ಲಿ ಶಿರಸಿ ಕ್ಷೇತ್ರದಲ್ಲಿ ಸ್ಪರ್ಧಿಸಿ 26,625 ಮತಗಳನ್ನ ಪಡೆದು 3ನೇ ಸ್ಥಾನದಲ್ಲಿದ್ದರು. ಈ ಹಿಂದೆ 2004 ರಲ್ಲಿ ಕುಮಟಾದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ 31,273 ಮತ ಪಡೆದು ಕಾಂಗ್ರೆಸ್‌ ಅಭ್ಯರ್ಥಿ ಮೋಹನ್ ಕೆ.ಶಟ್ಟಿ ವಿರುದ್ಧ 3,465 ಮತಗಳ ಅಂತರದಿಂದ ಸೋತರೇ, 2008 ರಲ್ಲಿ ಅದೇ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ 30,201 ಮತ ಪಡೆದು ಅಂದಿನ ಜೆಡಿಎಸ್‌ ಅಭ್ಯರ್ಥಿ ದಿನಕರ್ ಶಟ್ಟಿ ವಿರುದ್ಧ 591 ಮತಗಳ ಅಂತರದಲ್ಲಿ ಸೋಲು ಕಂಡು 3ನೇ ಸ್ಥಾನದಲ್ಲಿದ್ದರು. ದನ್ನೂ ಓದಿ: ಗುರುವಿನ ಋಣ ತೀರಿಸಲು ರಾಜಕೀಯ ನಿವೃತ್ತಿ ಘೋಷಿಸಿದ ಹಾಲಾಡಿ ಶ್ರೀನಿವಾಸ ಶೆಟ್ಟಿ

    ಮೂರು ಸೋಲಿನ ನಂತರ ಜೆಡಿಎಸ್ ನಲ್ಲೇ ತಮ್ಮ ಅಸ್ತಿತ್ವ ಉಳಿಸಿಕೊಂಡು ಶಿರಸಿ ಕ್ಷೇತ್ರದಲ್ಲಿ ತಮ್ಮ ಹಿಡಿತ ಗಟ್ಟಿಗೊಳಿಸಿಕೊಳ್ಳುವ ಪ್ರಯತ್ನದಲ್ಲಿ ಸಾಗಿದ್ದರು. ಈ ಬಾರಿ ಮತ್ತೆ ಸ್ಪರ್ಧಿಸಲು ಅವಕಾಶ ವದಗಿಬಂದರೂ ಸ್ಫರ್ಧಿಸುವ ಮನಸ್ಸು ಮಾಡಲಿಲ್ಲ. ಈ ನಡುವೆ ಕಾಂಗ್ರೆಸ್‌ ಸಹ ಶಶಿಭೂಷಣ್ ಹೆಗಡೆ ಅವರನ್ನ ಪಕ್ಷಕ್ಕೆ ಸೆಳೆಯಲು ಕಸರತ್ತು ನಡೆಸಿತ್ತು. ಆದರೇ ಸಿಎಂ ಬಸವರಾಜ್ ಬೊಮ್ಮಾಯಿ ಪ್ರಯತ್ನದ ಫಲದಿಂದ ಕೊನೆಗೂ ಮತ್ತೆ ಶಶಿಭೂಷಣ್ ಹೆಗಡೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಕಾಗೇರಿ ಅವರಿಗೆ ಪ್ರಬಲ ಬ್ರಾಹ್ಮಣ ನಾಯಕರ ಪ್ರತಿಸ್ಪರ್ಧಿ ಇಲ್ಲದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ದನ್ನೂ ಓದಿ: ಯಾರೇ ಕೈಮುಗಿದರೂ ಮೋದಿ ವಾಪಸ್ ಕೈಮುಗಿಯುತ್ತಾರೆ- ಕೋಟ ಶ್ರೀನಿವಾಸ ಪೂಜಾರಿ

    ಈ ಬಾರಿ ಶಶಿಭೂಷಣ್ ಹೆಗಡೆ ಸ್ಪರ್ಧೆಯಿಲ್ಲ: ಶಶಿಭೂಷಣ್ ಹೆಗಡೆ ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದು ಸ್ವತಃ ಅವರೇ ಹೇಳಿದ್ದಾರೆ. ಬದಲಾಗಿ ಪಕ್ಷದ ಕೆಲಸದಲ್ಲಿ ಇವರನ್ನು ತೊಡಗಿಸಿಕೊಳ್ಳಲಾಗುತ್ತಿದೆ. ಒಂದು ವೇಳೆ ಲೋಕಸಭಾ ಚುನಾವಣೆಯಲ್ಲಿ ಸಂಸದ ಸ್ಥಾನಕ್ಕೆ ಅನಂತ್‌ ಕುಮಾರ್ ಹೆಗಡೆ ಸ್ಪರ್ಧಿಸದಿದ್ದರೇ ಆ ಸ್ಥಾನಕ್ಕೆ ಶಶಿ ಅವರನ್ನು ಕಣಕ್ಕಿಳಿಸುವ ಲೆಕ್ಕಾಚಾರ ಬಿಜೆಪಿ ಪಕ್ಷದ್ದಾಗಿದೆ.