Tag: ವಿಶ್ವೇಶ್ವರಯ್ಯ

  • ನಮ್ಮಪ್ಪನಿಗೆ ನನ್ನನ್ನು ಇಂಜಿನಿಯರ್ ಮಾಡುವ ಆಸೆಯಿತ್ತು – ಡಿಸಿಎಂ ಡಿಕೆಶಿ

    ನಮ್ಮಪ್ಪನಿಗೆ ನನ್ನನ್ನು ಇಂಜಿನಿಯರ್ ಮಾಡುವ ಆಸೆಯಿತ್ತು – ಡಿಸಿಎಂ ಡಿಕೆಶಿ

    ಬೆಂಗಳೂರು: ನಮ್ಮಪ್ಪನಿಗೆ ನನ್ನನ್ನು ಇಂಜಿನಿಯರ್ ಮಾಡುವ ಆಸೆಯಿತ್ತು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ

    ಇಂಜಿನಿಯರ್ಸ್ ದಿನದ ಹಿನ್ನೆಲೆ ಕೆ.ಆರ್.ಸರ್ಕಲ್‌ನಲ್ಲಿರುವ ವಿಶ್ವೇಶ್ವರಯ್ಯ ಪ್ರತಿಮೆಗೆ ಕ್ರೇನ್‌ನಲ್ಲಿ ಮೇಲಕ್ಕೆ ತೆರಳಿ ಡಿಕೆಶಿ ಮಾಲಾರ್ಪಣೆ ಮಾಡಿದರು. ಎರಡೆರಡು ಬಾರಿ ತಪ್ಪಿ ಹೋಗಿ ಮೂರನೇ ಪ್ರಯತ್ನಕ್ಕೆ ಹಾರಹಾಕಿದರು.ಇದನ್ನೂ ಓದಿ: ಸಂವಿಧಾನದ ರಕ್ಷಣೆ ಎಲ್ಲ ನಾಗರಿಕರ ಜವಾಬ್ದಾರಿ: ಸಿದ್ದರಾಮಯ್ಯ

    ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮಪ್ಪನಿಗೆ ನಾನು ಇಂಜಿನಿಯರ್ ಆಗಬೇಕು ಅಂತ ಆಸೆಯಿತ್ತು, ಆದರೆ ನನಗೆ ಇಂಜಿನಿಯರಿಂಗ್ ಕೋರ್ಸ್ ಮಾಡೋಕೆ ಆಗಲಿಲ್ಲ. ಆದರೆ ಇಂಜಿನಿಯರ್‌ಗಳನ್ನು ತಯಾರು ಮಾಡುವ ಕಾಲೇಜು ಸ್ಥಾಪಿಸಿದ್ದೇನೆ. ನನ್ನ ಇಬ್ಬರು ಮಕ್ಕಳು ಇಂಜಿನಿಯರ್ಸ್. ನಾನು ಜಲಸಂಪನ್ಮೂಲ, ಇಂಧನ ಇಲಾಖೆಯಲ್ಲಿ ಇಂಜಿನಿಯರ್ಸ್ ಜೊತೆ ಕೆಲಸ ಮಾಡಿದ್ದೇನೆ. ಅವರ ಕೆಲಸ, ಕಾರ್ಯಗಳ ಬಗ್ಗೆ ನನಗೆ ಅರಿವು ಇದೆ ಎಂದರು.

  • ನಿಫಾ ತಡೆಯಲು ಮುನ್ನೆಚ್ಚೆರಿಕೆ ವಹಿಸೋಣ, ಸೋಂಕು ತಡೆಯೋಣ ನಾಣ್ಣುಡಿಯೊಂದಿದೆ ಗಡಿಯಲ್ಲಿ ಜಾಗೃತಿ

    ನಿಫಾ ತಡೆಯಲು ಮುನ್ನೆಚ್ಚೆರಿಕೆ ವಹಿಸೋಣ, ಸೋಂಕು ತಡೆಯೋಣ ನಾಣ್ಣುಡಿಯೊಂದಿದೆ ಗಡಿಯಲ್ಲಿ ಜಾಗೃತಿ

    ಚಾಮರಾಜನಗರ: ಗಡಿಭಾಗಗಳಲ್ಲಿ ನಿಫಾ ಕಾಣಿಸಿಕೊಳ್ಳುವ ಶಂಕೆ ಬಂದಿದ್ದು, ಈ ಹಿನ್ನೆಲೆ ಮುನ್ನೆಚ್ಚರಿಕೆ ವಹಿಸೋಣ, ಸೋಂಕು ತಡೆಯೋಣ ನಾಣ್ಣುಡಿಯೊಂದಿದೆ ಗಡಿಭಾಗದ ಜನರಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ.

    ಕೊರೊನಾ ಮುನ್ನೆಚ್ಚರಿಕೆಯ ಕ್ರಮವಾಗಿ ಮೂಲೆ ಹೊಳೆ ಚೆಕ್ ಪೋಸ್ಟ್ ಗೆ ಡಿಎಚ್‍ಒ ಡಾ.ವಿಶ್ವೇಶ್ವರಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನೆ ಬಳಿಕ ಮಾತನಾಡಿದ ಅವರು, ಕೇರಳದಲ್ಲಿ ಕೊರೊನಾ ಮತ್ತು ನಿಫಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸೋಣ ಮತ್ತು ಸೋಂಕು ತಡೆಯೋಣ ಎಂಬ ನಾಣ್ಣುಡಿಯೊಂದಿಗೆ ಜಾಗೃತಿ ಅಭಿಯಾನ ನಡೆಸುವುದಾಗಿ ಹೇಳಿದರು. ಇದನ್ನೂ ಓದಿ: ಊಸರವಳ್ಳಿಯಂತೆ ಬಣ್ಣ ಬದಲಾಗುವ ಚರ್ಮ ಮನುಷ್ಯನಿಗೂ ಬಂತು

    ಕೇರಳದಲ್ಲಿ ನಿಫಾ ವೈರಸ್ ಹಿನ್ನೆಲೆಯಲ್ಲಿ ಚಾಮರಾಜನಗರ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಗಡಿಯಂಚಿನಲ್ಲಿರುವ ಮೂಲೆ ಹೊಳೆ ಚೆಕ್ ಪೋಸ್ಟ್ ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯದ ಏಕೈಕ ಸ್ವರ್ಣ ಗೌರಿ ದೇವಾಲಯದಲ್ಲಿಲ್ಲ ಪೂಜೆ, ಪುನಸ್ಕಾರ

    ವಿಶ್ವೇಶ್ವರಯ್ಯ ಅವರು ವಾಹನ ಚಾಲಕರು ಹಾಗೂ ಪ್ರಯಾಣಿಕರನ್ನು ಖುದ್ದು ತಪಾಸಣೆ ನಡೆಸಿದ್ದಾರೆ. ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು. ಕೊರೊನಾ ಸಂಬಂಧ ಆರ್‍ಟಿಪಿಸಿಆರ್ ಟೆಸ್ಟ್ ನೆಗೆಟಿವ್ ರಿಪೋರ್ಟ್ ಇದ್ದವರಿಗೆ ಮಾತ್ರ ಪ್ರವೇಶ ನೀಡಬೇಕು. ಕಟ್ಟುನಿಟ್ಟಿನ ತಪಾಸಣೆ ನಡೆಸಬೇಕು ಎಂದು ಚೆಕ್ ಪೋಸ್ಟ್ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಸಾಲಬಾಧೆ ತಾಳದೆ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಗಡಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಪ್ರತಿಯೊಬ್ಬರ ಮೇಲೂ ಹದ್ದಿನ ಕಣ್ಣಿಡಲಾಗಿದೆ. ಗಡಿಯಂಚಿನ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಜನರಲ್ಲಿ ರೋಗ ಲಕ್ಷಣ ಕಂಡು ಬಂದರೆ ತಕ್ಷಣ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಪ್ರಾಣಿಗಳು ಕಚ್ಚಿ ತಿಂದಿರುವ ಹಣ್ಣನ್ನು ಯಾರು ತಿನ್ನಬಾರದು. ಸಿಪ್ಪೆ ತೆಗೆದು ಚೆನ್ನಾಗಿ ತೊಳೆದು ತಿನ್ನಬೇಕು. ಬಾವಲಿಗಳು ಹೆಚ್ಚಾಗಿರುವ ಪ್ರದೇಶದಲ್ಲಿ ಜನರು ನೀರನ್ನು ಕಾಯಿಸಿ ಕುಡಿಯಬೇಕು ಎಂದು ಜನರಿಗೆ ಮತ್ತು ಸಿಬ್ಬಂದಿಗೆ ಸೂಚನೆ ಕೊಟ್ಟಿದ್ದಾರೆ.

  • ದೆಹಲಿಯಲ್ಲಿ ಕನ್ನಡಿಗರ ಕೂಗಿಗೆ ಕಡೆಗೂ ಸಿಕ್ಕಿತು ಪುರಸ್ಕಾರ

    ದೆಹಲಿಯಲ್ಲಿ ಕನ್ನಡಿಗರ ಕೂಗಿಗೆ ಕಡೆಗೂ ಸಿಕ್ಕಿತು ಪುರಸ್ಕಾರ

    ನವದೆಹಲಿ: ದೆಹಲಿಯಲ್ಲಿ ಕನ್ನಡಿಗರ ಕೂಗಿಗೆ ಕಡೆಗೂ ಪುರಸ್ಕಾರ ಸಿಕ್ಕಿದ್ದು, ಮೆಟ್ರೋ ನಿಲ್ದಾಣಕ್ಕೆ ಸರ್ ಎಂ ವಿಶ್ವೇಶ್ವರಯ್ಯ ಹೆಸರು ಇಡಲು ಕೇಂದ್ರ ಸರ್ಕಾರ ಮುಂದಾಗಿದೆ.

    ದೆಹಲಿ ಕರ್ನಾಟಕ ಸಂಘದ ಮುಂಭಾಗ ಇರುವ ಮೋತಿ ಬಾಗ್ ಮೆಟ್ರೋ ನಿಲ್ದಾಣಕ್ಕೆ ವಿಶ್ವೇಶ್ವರಯ್ಯ ಹೆಸರು ಇಡಬೇಕೆಂದು ದೆಹಲಿಯ ಕನ್ನಡಿಗರು ಮನವಿ ಮಾಡಿದ್ದರು. ಈ ಮನವಿಯನ್ನು ಸರ್ಕಾರ ಪುರಸ್ಕರಿಸಿದ್ದು, ಸದ್ಯದಲ್ಲೇ ಮೆಟ್ರೋ ನಿಲ್ದಾಣ ಉದ್ಘಾಟನೆಯಾಗಲಿದೆ.

    ಬೆಂಗಳೂರಿನ ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆಯವರೆಗೆ ಸಂಚರಿಸವ ಮಧ್ಯೆ ಸಿಗುವ ಸೆಂಟ್ರಲ್ ಕಾಲೇಜ್ ಬಳಿ ಇರುವ ನಿಲ್ದಾಣಕ್ಕೆ ವಿಶ್ವೇಶ್ವರಯ್ಯ ನಿಲ್ದಾಣ ಎಂದು ಹೆಸರಿಡಲಾಗಿದೆ.