ಲಂಡನ್: ಇತ್ತೀಚೆಗೆ ಪಾಕಿಸ್ತಾನ (Pakistan) ತನ್ನ ದೇಶದ ಮೇಲೆಯೇ ನಡೆಸಿದ ವಾಯುದಾಳಿಯಲ್ಲಿ 30 ಮಂದಿ ನಾಗರಿಕರು ಬಲಿಯಾಗಿರುವ ಘಟನೆಯನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ (UNHRC) ಸಭೆಯಲ್ಲಿ ಭಾರತ ತೀವ್ರವಾಗಿ ಖಂಡಿಸಿದೆ.
BREAKING: Indian Diplomat Kshitij Tyagi at UN Human Rights Council exposes Pakistan for bombing their own people in KPK yesterday apart from persecution, human rights violations and illegally occupying Indian territory. pic.twitter.com/SEaWsmQIzD
ತನ್ನ ದೇಶದಲ್ಲೇ ವೈಮಾನಿಕ ದಾಳಿ ನಡೆಸಿದ ಪಾಕ್ ನಡೆಗೆ ಭಾರತ ಪ್ರತಿಕ್ರಿಯಿಸಿದೆ. ಜಾಗತಿಕವಾಗಿ ಅಸ್ಥಿರತೆ ಉಂಟುಮಾಡಲು ಭಯೋತ್ಪಾದನೆ ರಫ್ತು ಮಾಡುತ್ತದೆ. ಈಗ ನೋಡಿದ್ರೆ ತನ್ನ ಸ್ವಂತ ನಾಗರಿಕರ ಮೇಲೆಯೇ ಬಾಂಬ್ ದಾಳಿ ಮಾಡಿದೆ. ಭಯೋತ್ಪಾದನೆಯ ಪ್ರಚಾರಕ್ಕಾಗಿ ಅಂತಾರಾಷ್ಟ್ರೀಯ ವೇದಿಕೆಗಳನ್ನ ದುರುಪಯೋಗಪಡಿಸಿಕೊಂಡಿದೆ. ಎಂದು UNHRCಯಲ್ಲಿನ ಭಾರತೀಯ ಪ್ರತಿನಿಧಿ ಕ್ಷಿತಿಜ್ ತ್ಯಾಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಾಕ್ ಒಳಗಡೆಯೇ ಏರ್‌ಸ್ಟ್ರೈಕ್ – 7 ಬಾಂಬ್‌ಗೆ 30 ಮಂದಿ ಬಲಿ
ಕಾರ್ಯಸೂಚಿ ಐಟಂ-4ರ ವೇಳೆ ಮಾತನಾಡುವಾಗ, ಸೋಮವಾರ ಬೆಳಗ್ಗಿನ ಜಾವ ಜೆಎಫ್ -17 ಪಾಕಿಸ್ತಾನಿ ಯುದ್ಧ ವಿಮಾನಗಳು ತನ್ನ ಮಾಟ್ರೆ ದಾರಾ ಗ್ರಾಮದ ಮೇಲೆ 8 SL-6 ಬಾಂಬ್‌ಗಳ ಮೂಲಕ ವಾಯುದಾಳಿ ನಡೆಸಿದೆ. ಆ ದಾಳಿಯಲ್ಲಿ ಮಹಿಳೆಯರು ಮಕ್ಕಳು ಸೇರಿ 30 ಮಂದಿ ಬಲಿಯಾಗಿದ್ದಾರೆ ಎಂಬ ಅಂಶವನ್ನು ಉಲ್ಲೇಖಿಸಿದರು.
ನಮ್ಮ ಪ್ರದೇಶವನ್ನು ಅಪೇಕ್ಷಿಸುವ ಬದಲು, ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭಾರತೀಯ ಪ್ರದೇಶವನ್ನು ಖಾಲಿ ಮಾಡಬೇಕು ಎಂದರಲ್ಲದೇ ಭಯೋತ್ಪಾದನೆ ರಫ್ತು ಮಾಡುವುದರಿಂದ, ತಮ್ಮದೇ ಜನರ ಮೇಲೆ ಬಾಂಬ್ ದಾಳಿ ಮಾಡುವುದರಿಂದ, ವಿಶ್ವಸಂಸ್ಥೆ ಗುರುತಿಸಿದ ಉಗ್ರರಿಗೆ ಆಶ್ರಯ ನೀಡುವುದರಿಂದ ಸಮಯ ಸಿಕ್ಕರೆ ಜೀವ ಬೆಂಬಲದ ಮೇಲೆ ಆರ್ಥಿಕತೆ ಸುಧಾರಿಸುವತ್ತ ಗಮನಹರಿಸಬೇಕು. ಆದ್ರೆ ಪಾಕಿಸ್ತಾನಕ್ಕೆ ಸಮಯ ಸಿಕ್ಕರೆ ತನ್ನದೇ ದೇಶದ ನಾಗರಿಕೆ ಮೇಲೆ ದಾಳಿ ಮಾಡುವ ಕೆಲಸವನ್ನು ಮಾಡುತ್ತಿದೆ ಎಂದು ವಾಗ್ತಾಳಿ ನಡೆಸಿದರು. ಇದನ್ನೂ ಓದಿ: ತೈವಾನ್‌ನಲ್ಲಿ ʻರಗಾಸಾʼ ಚಂಡಮಾರುತಕ್ಕೆ 14 ಬಲಿ, 124 ಮಂದಿ ಮಿಸ್ಸಿಂಗ್
ಮುಂದುವರಿದು.. ಪುಲ್ವಾಮಾ, ಉರಿ, ಪಠಾಣ್‌ಕೋಟ್ ಮತ್ತು ಮುಂಬೈ ಸೇರಿದಂತೆ ಹಿಂದಿನ ದಾಳಿಗಳು ಹಾಗೂ ಪಹಲ್ಗಾಮ್ ದಾಳಿಯನ್ನು ಉಲ್ಲೇಖಿಸಿ ಪಾಕ್ ವಿರುದ್ಧ ಕಿಡಿ ಕಾರಿದರು.
– ಲಷ್ಕರ್ ಉಗ್ರ ಸಂಘಟನೆ ಬೆಂಬಲವಿಲ್ಲದೇ ಇದೆಲ್ಲ ಸಾಧ್ಯವೇ ಇಲ್ಲವೆಂದ ಭದ್ರತಾ ಮಂಡಳಿ
ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC – ಯುನೈಟೆಡ್ ನೇಷನ್ಸ್ ಸೆಕ್ಯುರಿಟಿ ಕೌನ್ಸಿಲ್) ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯೊಂದು, ಪಹಲ್ಗಾಮ್ ಭಯೋತ್ಪಾದಕ ದಾಳಿಯ (Pahalgam Attack) ಹೊಣೆಯನ್ನ ಉಗ್ರ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಎರಡು ಬಾರಿ ಹೊತ್ತುಕೊಂಡಿದೆ ಎಂದು ಬಹಿರಂಗಪಡಿಸಲಾಗಿದೆ.
ಸಂಘಟನೆಯು ದಾಳಿಯ ಫೋಟೊಗಳನ್ನು ಪ್ರಕಟಿಸುವ ಮೂಲಕ ತನ್ನ ಉಪಸ್ಥಿತಿಯನ್ನ ಖಚಿತಪಡಿಸಲ ಮತ್ತು ಭಯದ ವಾತಾವರಣ ಸೃಷ್ಟಿಸಲು ಯತ್ನಿಸಿದೆ. ಈ ದಾಳಿಯ ಜವಾಬ್ದಾರಿಯನ್ನ ಎರಡು ಬಾರಿ ಹೇಳಿಕೊಂಡಿರುವುದು, ಸಂಘಟನೆಯ ಉದ್ದೇಶಿತ ಯೋಜನೆಯ ಭಾಗವಾಗಿದೆ ಎಂಬ ಅಂಶವನ್ನು ಯುಎನ್‌ಎಸ್‌ಸಿ ಗಮನಿಸಿದೆ. ಇದರೊಂದಿಗೆ ಟಿಆರ್‌ಎಫ್‌ನ ಈ ಕೃತ್ಯವು ಸ್ಥಳೀಯ ಜನತೆ ಮತ್ತು ಪ್ರವಾಸಿಗರಲ್ಲಿ ಭಯ ಹುಟ್ಟಿಸುವ ಉದ್ದೇಶ ಹೊಂದಿತ್ತು ಎಂಬುದು ಸ್ಪಷ್ಟವಾಗಿದೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ – ಪಹಲ್ಗಾಮ್ ಪಾತಕಿ ಬೆನ್ನಲ್ಲೇ ಮತ್ತಿಬ್ಬರು ಉಗ್ರರು ಎನ್‌ಕೌಂಟರ್
ಯುಎನ್‌ಎಸ್‌ಸಿ ತನ್ನ ವರದಿಯಲ್ಲಿ, ಭಯೋತ್ಪಾದಕ ಸಂಘಟನೆಗಳ ವಿರುದ್ಧ ಅಂತಾರಾಷ್ಟ್ರೀಯ ಸಹಕಾರವನ್ನ ಬಲಪಡಿಸುವ ಅಗತ್ಯವನ್ನು ಒತ್ತಿಹೇಳಿದೆ. ಟಿಆರ್‌ಎಫ್ ನಂತಹ ಗುಂಪುಗಳು ಗಡಿಯಾಚೆಗಿನ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿರುವುದರಿಂದ, ಇದನ್ನು ತಡೆಗಟ್ಟಲು ಸದಸ್ಯ ರಾಷ್ಟ್ರಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕೆಂದು ವರದಿಯು ಸೂಚಿಸಿದೆ. ಜೊತೆಗೆ, ಭಯೋತ್ಪಾದಕ ಗುಂಪುಗಳಿಗೆ ಆರ್ಥಿಕ ಸಹಾಯ, ಶಸ್ತ್ರಾಸ್ತ್ರ ಸರಬರಾಜು ಮತ್ತು ತರಬೇತಿಯನ್ನು ತಡೆಯಲು ಕಠಿಣ ಕಾನೂನುಗಳನ್ನು ಜಾರಿಗೊಳಿಸಬೇಕೆಂದು ಯುಎನ್‌ಎಸ್‌ಸಿ ಒತ್ತಾಯಿಸಿದೆ. ಇದನ್ನೂ ಓದಿ: ಇಂದಿರಾಗಾಂಧಿಯ ಅರ್ಧದಷ್ಟು ಧೈರ್ಯ ಇದ್ರೆ ಟ್ರಂಪ್ ಸುಳ್ಳುಗಾರ ಎಂದು ಮೋದಿ ಹೇಳಲಿ: ರಾಹುಲ್ ಗಾಂಧಿ ಸವಾಲ್
– ಭಾರತಕ್ಕೆ ʼMeasles-Rubella Championʼ ಪ್ರಶಸ್ತಿ – ದೇಶದಲ್ಲಿ ಶೂನ್ಯ ಡೋಸ್ ಮಕ್ಕಳ ಅನುಪಾತ ಗಣನೀಯ ಇಳಿಕೆ – ವಾರ್ಷಿಕ ಸರಾಸರಿ 2.6 ಕೋಟಿ ಶಿಶುಗಳಿಗೆ ಉಚಿತ ಲಸಿಕೆ
ನವದೆಹಲಿ: ಜನರ ಆರೋಗ್ಯ ರಕ್ಷಣೆಯಲ್ಲಿ ಜಾಗತಿಕವಾಗಿ ಒಂದು ಹೆಜ್ಜೆ ಮುಂದಿರುವ ಭಾರತ (India) ತಾಯಿ-ಮಕ್ಕಳ ಆರೋಗ್ಯ ಕಾಪಾಡುವಲ್ಲಿ ವಿಶ್ವಕ್ಕೇ ಮಾದರಿಯಾಗಿದೆ. ಇಂದ್ರಧನಷ್‌ನಂತಹ (Mission Indradhanush) ಅತ್ಯದ್ಭುತ ಕಾರ್ಯ ಯೋಜನೆ ಹಾಕಿಕೊಂಡು ಮಕ್ಕಳಲ್ಲಿ ʼಶೂನ್ಯ ಡೋಸ್ʼ ಪ್ರಮಾಣವನ್ನು ಕೇವಲ ಶೇ.0.06ಕ್ಕೆ ಇಳಿಸುವಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ.
ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಜಗತ್ತಿನ 2ನೇ ಅತಿ ದೊಡ್ಡ ರಾಷ್ಟ್ರವಾಗಿದ್ದರೂ ಜನರ ಆರೋಗ್ಯ (Health) ಸಂರಕ್ಷಣೆಯಲ್ಲಿ ಭಾರತ ಹಿಂದೆ ಬಿದ್ದಿಲ್ಲ. ಅದರಲ್ಲೂ ತಾಯಿ-ಮಕ್ಕಳ ಆರೋಗ್ಯ (Health) ಕಾಪಾಡುವಲ್ಲಿ ಒಂದು ಕೈ ಮುಂದೆಯೇ ಇದೆ. ʼಇಂದ್ರಧನುಷ್ʼನಂತಹ ಯೋಜನೆ ಮೂಲಕ ಎಲ್ಲ ಮಕ್ಕಳನ್ನೂ ಲಸಿಕೆ ವ್ಯಾಪ್ತಿಗೆ ಕರೆತರುವಲ್ಲಿ ಯಶ ಕಂಡಿದ್ದು, ವಿಶ್ವಸಂಸ್ಥೆಯೇ ಶ್ಲಾಘಿಸುವ ಮಟ್ಟಿಗೆ ಸಾಧನೆಗೈದಿದೆ.
ಭಾರತದಲ್ಲಿ ಒಂದೂ ಲಸಿಕೆ ಪಡೆಯದೇ ಇದ್ದ ʼಶೂನ್ಯ-ಡೋಸ್ʼ ಮಕ್ಕಳ ಪ್ರಮಾಣ 2023ರಲ್ಲಿ ಶೇ.0.11ರಷ್ಟಿತ್ತು. ಅದನ್ನೀಗ 2024ರ ವೇಳೆಗಾಗಲೇ ಶೇ.0.06ಕ್ಕೆ ಅಂದರೆ ಅರ್ಧದಷ್ಟು ಇಳಿಕೆಗೆ ತಂದಿದೆ. ರಾಷ್ಟ್ರೀಯ ರೋಗನಿರೋಧಕ ಪ್ರಯತ್ನಗಳಲ್ಲಿ ಇತಿಹಾಸದಲ್ಲೇ ಮೊದಲ ಬಾರಿ ಎನ್ನುವಂತೆ ಹೊಸ ದಾಖಲೆ ನಿರ್ಮಿಸಿದ್ದು, ಮಕ್ಕಳ ರೋಗನಿರೋಧಕ ಶಕ್ತಿಯಲ್ಲಿ ಭಾರತ ಜಾಗತಿಕ ನಾಯಕನಾಗಿ ಹೊರಹೊಮ್ಮಿದೆ.
ಜಗತ್ತಿನ ಅತಿದೊಡ್ಡ ಲಸಿಕಾ ಅಭಿಯಾನ ʼಇಂದ್ರಧನುಷ್ʼ: ತಾಯಿ-ಮಕ್ಕಳ ಆರೋಗ್ಯ ಸಂರಕ್ಷಣೆಯಲ್ಲಿ ʼಇಂದ್ರಧನುಷ್ʼ ಭಾರತದ ಒಂದು ಅತ್ಯಂತ ಯಶಸ್ವಿ ಕಾರ್ಯ ಯೋಜನೆ. ಮಾತ್ರವಲ್ಲದೆ, ಮಕ್ಕಳಿಗೆ 12ಕ್ಕೂ ಅಧಿಕ ರೋಗಗಳ ವಿರುದ್ಧ ರಕ್ಷಣೆ ನೀಡುವಂಥ ಜಗತ್ತಿನ ಅತಿ ದೊಡ್ಡ ಲಸಿಕಾ ಅಭಿಯಾನ ಸಹ ಆಗಿದೆ.
ಸಾರ್ವತ್ರಿಕ ರೋಗ ನಿರೋಧಕ ಕಾರ್ಯಕ್ರಮದಡಿ (UIP) ಪ್ರತಿ ವರ್ಷ ಸುಮಾರು 2.6 ಕೋಟಿ ಶಿಶುಗಳು ಮತ್ತು 2.9 ಕೋಟಿ ಗರ್ಭಿಣಿಯರಿಗೆ ಉಚಿತ ಲಸಿಕೆ ನೀಡಲಾಗುತ್ತಿದೆ. ಭವಿಷ್ಯದ ಕುಡಿಗಳ ರಕ್ಷಣೆಗಾಗಿ 2013ರಲ್ಲಿ ಇದ್ದದ್ದು 6 ಲಸಿಕೆ ಮಾತ್ರ. 2014ರ ಬಳಿಕ 5 ಹೊಸ ಲಸಿಕೆ ಸಹ ಸೇರಿಸಲಾಗಿದೆ. ಇದರಿಂದಾಗಿ ತಾಯಿ-ಮಕ್ಕಳ ಮರಣ ಪ್ರಮಾಣ ಗಣನೀಯ ಇಳಿಕೆಯಾಗಿದ್ದು, ಭಾರತ ಆರೋಗ್ಯ ಸಮೃದ್ಧಿಯತ್ತ ಹೆಜ್ಜೆ ಇಟ್ಟಿದೆ. ಇದನ್ನೂಓದಿ: ಕಸಬ್ ಗಲ್ಲಿಗೇರಲು ಕಾರಣರಾಗಿದ್ದ ವಕೀಲ ಉಜ್ವಲ್ ನಿಕಮ್, ಸದಾನಂದನ್ ಮಾಸ್ಟರ್ ಸೇರಿದಂತೆ ನಾಲ್ವರು ರಾಜ್ಯಸಭೆಗೆ ನಾಮನಿರ್ದೇಶನ
ಮಿಷನ್ ಇಂದ್ರಧನುಷ್ ಕಾರ್ಯಕ್ಷಮತೆ: 2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗುತ್ತಲೇ ತಾಯಿ-ಮಕ್ಕಳ ಆರೋಗ್ಯ ಸಂರಕ್ಷಣೆಗೆ ಆದ್ಯತೆ ನೀಡಿದ್ದರ ಫಲವಾಗಿ ʼಮಿಷನ್ ಇಂದ್ರಧನುಷ್ʼ ರೂಪಿತವಾಯಿತು. ಇದರ ಮೂಲಕ ಹಳ್ಳಿ ಹಳ್ಳಿ, ಅರಣ್ಯ ವಾಸಿಗಳು ಹಾಗೂ ವಲಸಿಗರ ಮಕ್ಕಳಿಗೂ ಲಸಿಕೆ ತಲುಪಿಸಲು ವಿಶೇಷ ಯೋಜನೆ ಹಾಕಿಕೊಳ್ಳಲಾಯಿತು. ಪರಿಣಾಮವಾಗಿ ಇಂದು ದೇಶದ 5.46 ಕೋಟಿ ಮಕ್ಕಳಿಗೆ ಮತ್ತು 1.32 ಕೋಟಿ ಗರ್ಭಿಣಿಯರಿಗೆ ಲಸಿಕೆ ನೀಡುವಲ್ಲಿ ಯಶಸ್ಸು ಸಾಧಿಸಿದೆ ಭಾರತ.
ಮರಣ ಪ್ರಮಾಣ ಇಳಿಕೆ: ಇತ್ತೀಚಿನ ಒಂದು ದಶಕದಲ್ಲಿ ಭಾರತದ ಆರೋಗ್ಯ ವಲಯದಲ್ಲಿ ಗಮನಾರ್ಹ ಸುಧಾರಣೆ, ಪ್ರಗತಿ ಕಂಡು ಬಂದಿದೆ. ದೇಶದ ಈ ಸಾಧನೆಯನ್ನು ವಿಶ್ವಸಂಸ್ಥೆ ಅಂತರ-ಏಜೆನ್ಸಿ ಗುಂಪು (UN IGME) 2024ರ ತನ್ನ ವರದಿಯಲ್ಲಿ ಶ್ಲಾಘಿಸಿದ್ದು, ಈ ವರದಿ ಪ್ರಕಾರ 2023ರಲ್ಲಿ ಭಾರತದ ತಾಯಂದಿರ ಮರಣ ಅನುಪಾತ ಪ್ರತಿ 1 ಲಕ್ಷ ಜನನಗಳಿಗೆ 80ಕ್ಕೆ ಇಳಿದಿದೆ.ಇಂದ್ರಧನುಷ್ ಲಸಿಕೆ ಯೋಜನೆ ಸಾಫಲ್ಯತೆಯಿಂದಾಗಿ ಶಿಶು ಮತ್ತು ತಾಯಿ ಮರಣ ಪ್ರಮಾಣದಲ್ಲಿ ಐತಿಹಾಸಿಕ ಇಳಿಕೆ ಕಂಡುಬಂದಿದೆ.1990ರಿಂದ ಶೇ.86ರಷ್ಟು ಕಡಿತವಾಗಿದೆ. ಇದು ಜಾಗತಿಕ ಕುಸಿತವಾದ ಶೇ.48ಕ್ಕಿಂತ ಬಹಳ ಮುಂದಿದೆ. 1990–2023ರ ಅವಧಿಯಲ್ಲಿ 5 ವರ್ಷದೊಳಗಿನ ಮಕ್ಕಳ ಮರಣ ದರದಲ್ಲಿ ಶೇ.78 ಮತ್ತು ನವಜಾತ ಶಿಶುಗಳ ಮರಣ ದರದಲ್ಲಿ ಶೇ.70ರಷ್ಟು ಕುಸಿತವನ್ನು ಸಾಧಿಸಿದೆ. ಜಾಗತಿಕವಾಗಿ ಹೋಲಿಸಿದರೆ ಇದು ಕ್ರಮವಾಗಿ ಶೇ.61 ಮತ್ತು ಶೇ.54ರಷ್ಟು ಇಳಿಕೆಯಲ್ಲಿದೆ.
ಭಾರತದ ಕಾರ್ಯ ಯೋಜನೆ: Neonatal-Tetanus ನಿರ್ಮೂಲನೆ, ಪೋಲಿಯೋ ನಿವಾರಣೆ ಮೊದಲಾದ ಗುರಿಗಳು ಈಗಾಗಲೇ ಸಾಧನೆಯ ಹಾದಿಯಲ್ಲಿದ್ದು, 2025ರಲ್ಲಿ ದಡಾರ ಮತ್ತು ರೂಬೆಲ್ಲಾ ನಿರ್ಮೂಲನ ಅಭಿಯಾನ ಜಾರಿಗೊಳಿಸಿ ನಿರಂತರ ಪ್ರಯತ್ನ ಮಾಡುತ್ತಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ 41.29 ಕೋಟಿ ಆರೋಗ್ಯ ಕಾರ್ಡನ್ನು ವಿತರಿಸಿ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡುತ್ತಿದೆ. ಮತ್ತು ಜನಔಷಧಿ ಕೇಂದ್ರಗಳ ಮೂಲಕ ಕಡಿಮೆ ಬೆಲೆಗೆ ಗುಣಮಟ್ಟದ ಔಷಧಿಗಳನ್ನು ಸಹ ನೀಡುತ್ತಿದೆ. ಇದನ್ನೂಓದಿ: ತುಂಗಭದ್ರಾ ನದಿಯಲ್ಲಿ ನಾಪತ್ತೆಯಾಗಿದ್ದ ಮೂವರು ಯುವಕರು ಶವವಾಗಿ ಪತ್ತೆ
ಜಾಗತಿಕ ಗೌರವ-ಸಾಧನೆಗಳ ಮಾನ್ಯತೆ: ಭಾರತದ ಈ ಪ್ರಗತಿ ಸದ್ಯ ಜಾಗತಿಕ ಮನ್ನಣೆಗೆ ಪಾತ್ರವಾಗಿದ್ದು, 2024ರ ಮಾರ್ಚನಲ್ಲಿ ಭಾರತ ಪ್ರತಿಷ್ಠಿತ ಮೀಸಲ್ಸ್ ಮತ್ತು ರುಬೆಲ್ಲಾ ಚಾಂಪಿಯನ್ ಪ್ರಶಸ್ತಿ, ಗೌರವಕ್ಕೆ ಭಾಜನವಾಗಿದೆ. ಅಲ್ಲದೆ, ಲಸಿಕೆ ನೀಡಿಕೆಯಲ್ಲಿ ಜರ್ಮನಿ ಮತ್ತು ಫಿನ್‌ಲ್ಯಾಂಡ್‌ಗಿಂತ ಭಾರತವೇ ಮುನ್ನಡೆ ಸಾಧಿಸಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಮಾದರಿಯಾಗಿದೆ. WHO, UNICEF ಮುಂತಾದ ಸಂಸ್ಥೆಗಳ ಮೆಚ್ಚುಗೆಗೆ ಪಾತ್ರವಾಗುವ ಜತೆಗೆ ಜನಸಾಮಾನ್ಯರ ಆರೋಗ್ಯ ಸಂರಕ್ಷಣೆಯಲ್ಲಿ ನಿರಂತರ ಬದ್ಧತೆಯನ್ನು ಇದು ಪ್ರದರ್ಶಿಸುತ್ತದೆ.
2014ರಲ್ಲಿ ಇಂದ್ರಧನುಷ್ ಆರಂಭವಾದ ದಿನದಿಂದ ದೇಶದ ಆರೋಗ್ಯ ವಲಯದಲ್ಲಿ ಗಮನಾರ್ಹ ಬದಲಾವಣೆ ಕಂಡಿದೆ. 12 ಲಸಿಕೆಗಳು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವಲ್ಲಿ ಮಹತ್ವದ್ದಾಗಿದ್ದು, ಅದರಲ್ಲೂ ಪೋಲಿಯೊ ವೈರಸ್ ಲಸಿಕೆ (ಐಪಿವಿ), ರೋಟವೈರಸ್ ಲಸಿಕೆ, ನ್ಯುಮೋಕೊಕಲ್ ಕಾಂಜುಗೇಟ್ ಲಸಿಕೆ ಮತ್ತು ದಡಾರ-ರುಬೆಲ್ಲಾ ಲಸಿಕೆಗಳು ಪರಿಣಾಮಕಾರಿ ಆಗಿವೆ.
11 ರಾಜ್ಯಗಳ 143 ಜಿಲ್ಲೆಗಳಲ್ಲಿ ಉದ್ದೇಶಿತ ಶೂನ್ಯ ಡೋಸ್ ಅನುಷ್ಠಾನ ಯೋಜನೆ 2024 ಪ್ರಸ್ತುತ ಮುಂದುವರೆದಿದ್ದು, ನಗರಗಳ ಕೊಳೆಗೇರಿಗಳು ಮಾತ್ರವಲ್ಲದೆ, ಗ್ರಾಮೀಣ ಪ್ರದೇಶ ಸೇರಿದಂತೆ ದೇಶದ ಮೂಲೆ ಮೂಲೆಯನ್ನು ತಲುಪುತ್ತಿದೆ. ಭಾರತ 2014ರಿಂದ ನಿರಂತರ ಪಲ್ಸ್ ಪೋಲಿಯೊ ಅಭಿಯಾನ ಮೂಲಕ ಇಂದು ಪೋಲಿಯೊ ಮುಕ್ತ ಎಂಬ ಹೆಗ್ಗಳಿಕೆಯಲ್ಲಿದೆ.
WHO-UNICEF ರಾಷ್ಟ್ರೀಯ ರೋಗನಿರೋಧಕ ವ್ಯಾಪ್ತಿ (WUENIC) 2023ರ ವರದಿ ದತ್ತಾಂಶದ ಪ್ರಕಾರ ಭಾರತ ಪ್ರತಿಜನಕಗಳಲ್ಲಿ ಜಾಗತಿಕ ಸರಾಸರಿಗಿಂತ ಉತ್ತಮ ಪ್ರದರ್ಶನ ನೀಡುತ್ತಿದೆ. ದೇಶದ DTP-1 (ಪೆಂಟಾವಲೆಂಟ್-1) ವ್ಯಾಪ್ತಿ ಶೇ.93ರಷ್ಟಿದೆ. ಇದು ನೈಜೀರಿಯಾದ ಶೇ.70ಕ್ಕಿಂತ ಗಮನಾರ್ಹ ಎನ್ನುವಂತೆ ಹೆಚ್ಚಾಗಿದೆ. DTP-1 ಮತ್ತು DTP-3 ನಡುವಿನ ಡ್ರಾಪ್ಔಟ್ ದರವು 2013ರಲ್ಲಿ ಶೇ.7ರಿಂದ 2023ರಲ್ಲಿ ಕೇವಲ ಶೇ.2ಕ್ಕೆ ಇಳಿದಿದ್ದು, ಇದೇ ಅವಧಿಯಲ್ಲಿ ದಡಾರ ಲಸಿಕೆ ವ್ಯಾಪ್ತಿ ಸಹ ಶೇ.93ರಷ್ಟು ಸುಧಾರಿಸಿದೆ.
ಮಕ್ಕಳ ಆರೋಗ್ಯದಲ್ಲಿ ಭಾರತವೇ ಮಾದರಿ: ಭಾರತದ ಲಸಿಕೆ ಕಾರ್ಯಕ್ರಮ ಕೇವಲ ಆರೋಗ್ಯದ ಅಂಕಿ-ಅಂಶವಲ್ಲ; ದೇಶದ ಮಾನವ ಸಂಪತ್ತಿನ ಭದ್ರತೆ ಮತ್ತು ಭವಿಷ್ಯದ ತಳಹದಿಯಾಗಿದೆ. ದೇಶದೊಳಗಿನ ಮತ್ತು ಗಡಿಯಲ್ಲಿನ ಪ್ರತಿ ಮಕ್ಕಳಿಗೂ ಸಮಾನ ಆರೋಗ್ಯ ಹಕ್ಕು ಕಲ್ಪಿಸುತ್ತಿದೆ ಕೇಂದ್ರ ಸರ್ಕಾರ. ಈ ವಿಶಿಷ್ಠ ಕಾರ್ಯಯೋಜನೆ, ಭಾರತವನ್ನು ಇಂದು ಶಿಶು ಆರೋಗ್ಯ ಕ್ಷೇತ್ರದಲ್ಲಿ ವಿಶ್ವದ ಶ್ರೇಷ್ಠ ನಾಯಕನನ್ನಾಗಿ ರೂಪಿಸುತ್ತಿದೆ.
– ಫಲವತ್ತತೆ ಕುಸಿದಿರುವುದು ಜನಸಂಖ್ಯಾ ಬದಲಾವಣೆಯ ಆರಂಭ ಮುನ್ಸೂಚನೆ – ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ ವರದಿ ಪ್ರಕಟ
ನವದೆಹಲಿ: ಭಾರತದ ಜನಸಂಖ್ಯೆ (India’s population) 2025ರ ಅಂತ್ಯದ ವೇಳೆಗೆ 146 ಕೋಟಿಗೆ ತಲುಪಲಿದೆ ಎಂದು ವಿಶ್ವಸಂಸ್ಥೆಯ ಜನಸಂಖ್ಯೆಯ ವರದಿ ತಿಳಿಸಿದೆ.
United Nations Population Fund (UNFPA) ತನ್ನ ವರದಿಯಲ್ಲಿ ಭಾರತದ ಪ್ರತಿ ಮಹಿಳೆಯ ಸಂತಾನೋತ್ಪತಿ ಸರಾಸರಿ ಫಲವತ್ತತೆ ದರ (Fertility Rate ) 2.1 ಇತ್ತು. ಆದರೆ ಈಗ ಇದು 1.9ಕ್ಕೆ ಕುಸಿದಿದೆ. ಫಲವತ್ತತೆ ಕುಸಿದಿರುವುದು ಇದು ಭಾರತದಲ್ಲಿ ಜನಸಂಖ್ಯಾ ಬದಲಾವಣೆಯ ಆರಂಭದ ಮುನ್ಸೂಚನೆ ಎಂದು ಹೇಳಿದೆ.
ವರದಿಯಲ್ಲಿ ಏನಿದೆ?
150 ಕೋಟಿ ಸನಿಹದಲ್ಲಿರುವ ಜನಸಂಖ್ಯೆ 170 ಕೋಟಿಗೆ ಏರಿ ನಂತರ 40 ವರ್ಷಗಳ ಬಳಿಕ ಇಳಿಮುಖವಾಗಲಿದೆ. ಜನನ ದರ ನಿಧಾನವಾಗುತ್ತಿದ್ದರೂ, ಭಾರತದ ಯುವ ಜನಸಂಖ್ಯೆಯು ಗಮನಾರ್ಹವಾಗಿ ಉಳಿದಿದೆ.
2025ರಲ್ಲಿ ಭಾರತೀಯರ ಜೀವಿತಾವಧಿಯು ಸರಾಸರಿಯಾಗಿ ಪುರುಷರಲ್ಲಿ 71 ವರ್ಷ ಹಾಗೂ ಮಹಿಳೆಯರಲ್ಲಿ 74 ವರ್ಷಕ್ಕೆ ಏರಿಕೆಯಾಗಿದೆ. ವಯಸ್ಸಾದ ಜನಸಂಖ್ಯೆ (65 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು) ಪ್ರಸ್ತುತ ಏಳು ಪ್ರತಿಶತದಷ್ಟಿದ್ದು, ಜೀವಿತಾವಧಿ ಸುಧಾರಿಸಿದಂತೆ ಮುಂಬರುವ ದಶಕಗಳಲ್ಲಿ ಸರಾಸಿ ವರ್ಷ ಹೆಚ್ಚಾಗುವ ನಿರೀಕ್ಷೆಯಿದೆ.
1960 ರಲ್ಲಿ ಭಾರತದ ಜನಸಂಖ್ಯೆಯು ಸುಮಾರು 43.6 ಕೋಟಿ ಇದ್ದಾಗ ಸರಾಸರಿ ಮಹಿಳೆ ಸುಮಾರು ಆರು ಮಕ್ಕಳನ್ನು ಹೆರುತ್ತಿದ್ದರು. ಈಗ ಮಹಿಳೆ ಸರಾಸರಿಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.
ನ್ಯೂಯಾರ್ಕ್: ವಿಶ್ವಸಂಸ್ಥೆಯಲ್ಲಿ (UNO) ಮತ್ತೆ ಪಾಕಿಸ್ತಾನಕ್ಕೆ ಮುಖಭಂಗವಾಗಿದೆ. ಪಾಕಿಸ್ತಾನದ (Pakistan) ಕೋರಿಕೆಯ ಮೇರೆಗೆ ಕರೆಯಲಾಗಿದ್ದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ರಹಸ್ಯ ಸಭೆಯಲ್ಲಿ ಯಾವುದೇ ಫಲಿತಾಂಶ ಪ್ರಕಟವಾಗಿಲ್ಲ.
ಭಾರತ (India) ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಪಾಕ್ ಮನವಿಯ ಮೇರೆಗೆ ತುರ್ತು ಸಭೆ ನಡೆಯಿತು. ಸಭೆ ಯಾವುದೇ ಹೇಳಿಕೆ, ನಿರ್ಣಯ ಅಥವಾ ಅಧಿಕೃತ ಫಲಿತಾಂಶವಿಲ್ಲದೆ ಮುಕ್ತಾಯಗೊಂಡಿದೆ. ಚರ್ಚೆಯ ಬಳಿಕ ವಿಶ್ವಸಂಸ್ಥೆಯ ಕಡೆಯಿಂದ ಯಾವುದೇ ಮಹತ್ವದ ಪ್ರತಿಕ್ರಿಯೆ ಬಂದಿಲ್ಲ.
ಪಾಕಿಸ್ತಾನಕ್ಕೆ ಈ ರೀತಿ ವಿಶ್ವಸಂಸ್ಥೆಯಲ್ಲಿ ಮುಖಭಂಗವಾಗುವುದು ಹೊಸದೆನಲ್ಲ. ಆಗಸ್ಟ್ 2019 ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಭಾರತದ ಕ್ರಮವನ್ನು ಚರ್ಚಿಸಲು ಚೀನಾ ಭದ್ರತಾ ಮಂಡಳಿಯ ರಹಸ್ಯ ಸಭೆ ನಡೆಸುವಂತೆ ಮನವಿ ಮಾಡಿತ್ತು. ಈ ಸಭೆಯೂ ಯಾವುದೇ ಫಲಿತಾಂಶ ಅಥವಾ ಹೇಳಿಕೆ ಪ್ರಕಟವಾಗದೇ ಕೊನೆಗೊಂಡಿತ್ತು. ಇದನ್ನೂ ಓದಿ: ಕಾಶ್ಮೀರದಲ್ಲಿ 2 ಜಲವಿದ್ಯುತ್ ಯೋಜನೆಗಳಿಗೆ ಚಾಲನೆ – ಪಾಕ್‌ಗೆ ಶಾಕ್
ಮಂಡಳಿಯಲ್ಲಿ ಬಹುಪಾಲು ಸದಸ್ಯರು ಕಾಶ್ಮೀರ ಸಮಸ್ಯೆ ಭಾರತ ಮತ್ತು ಪಾಕಿಸ್ತಾನದ ದ್ವಿಪಕ್ಷೀಯ ವಿಷಯ ಎಂದು ಹೇಳಿದ್ದರು. ಚೀನಾ ಮೂಲಕ ಕಾಶ್ಮೀರ ಸಮಸ್ಯೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತಗೆದುಕೊಂಡು ಹೋಗಿದ್ದ ಪಾಕಿಸ್ತಾನದ ಪ್ರಯತ್ನಕ್ಕೆ ಭಾರೀ ಹಿನ್ನಡೆಯಾಗಿತ್ತು.
ಯಾವೆಲ್ಲ ದೇಶಗಳು ಭಾಗಿ?
ಚೀನಾ, ಫ್ರಾನ್ಸ್, ರಷ್ಯನ್ ಒಕ್ಕೂಟ, ಯುನೈಟೆಡ್ ಕಿಂಗ್‌ಡಮ್ ಮತ್ತು ಅಮೆರಿಕ ಶಾಶ್ವತ ಸದಸ್ಯ ದೇಶಗಳ ಜೊತೆ ಸಾಮಾನ್ಯ ಸಭೆಯಿಂದ ಎರಡು ವರ್ಷಗಳ ಅವಧಿಗೆ ಆಯ್ಕೆಯಾದ 10 ದೇಶಗಳ ಪ್ರತಿನಿಧಿಗಳು ಭದ್ರತಾ ಸಮಿತಿಯ ಸಭೆಯಲ್ಲಿ ಭಾಗಿಯಾದರು.
ಮಡಿಕೇರಿ: ಯುನೈಟೆಡ್ ನೇಷನ್ಸ್ ಎಕನಾಮಿಕ್ ಆ್ಯಂಡ್ ಸೋಶಿಯಲ್ ಕೌನ್ಸಿಲ್‌ನ 2025ನೇ ಸಾಲಿನ ಯೂತ್ ಫೋರಂಗೆ (ECOSOC Youth Forum 2025) ಮಡಿಕೇರಿಯ ಯದೀಶ್ ಕುಂಬಳತ್ತಿಲ್ ರಮೇಶ್ ಭಾರತದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.
ಆರ್ಥಿಕ ಮತ್ತು ಸಾಮಾಜಿಕ ಮಂಡಳಿ (ECOSOC)ಯ ಯೂತ್ ಫೋರಂ ಇದೇ ಏ.15 ರಿಂದ 17ರ ವರೆಗೆ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆಯಲಿದ್ದು, ಭಾರತ ಸೇರಿದಂತೆ ವಿಶ್ವದ 138 ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಕಳ್ಳರು ದಲಿತರನ್ನು ತುಳಿದಿದ್ದಾರೆಯೇ ಹೊರತು ಉದ್ಧಾರ ಮಾಡಿಲ್ಲ: ಅಶೋಕ್
ʻಅಭಿವೃದ್ಧಿ ಶೀಲ ವಿಜ್ಞಾನ ಮತ್ತು ಸಾಮಾಜಿಕ ಒಳಗೊಳ್ಳುವಿಕೆಗಾಗಿ ಅಭಿವೃದ್ಧಿಶೀಲತೆಯನ್ನು ಹೆಚ್ಚಿಸುವುದುʼ ವಿಷಯದ ಅಡಿಯಲ್ಲಿ ಯೂತ್ ಫೋರಂ ಆಯೋಜಿಸಲ್ಪಟ್ಟಿದೆ. ಈ ಪ್ರತಿಷ್ಠಿತ ಶೃಂಗಸಭೆಗೆ ಭಾರತದ ಪ್ರತಿನಿಧಿಯಾಗಿ ಯದೀಶ್ ರಮೇಶ್ ಪಾಲ್ಗೊಳ್ಳುತ್ತಿದ್ದಾರೆ. ಇದನ್ನೂ ಓದಿ: ಅಣ್ಣಮ್ಮ ದೇವಿಗೆ ಹರಕೆ ಸಲ್ಲಿಸಿದ ದರ್ಶನ್ ಪತ್ನಿ
ಯದೀಶ್ ಯಾರು?
ಮಡಿಕೇರಿ ನಗರಸಭಾ ಸದಸ್ಯ ಕೆ.ಎಸ್ ರಮೇಶ್ ಹಾಗೂ ಕೆ.ಆರ್ ರಮ್ಯಾ ದಂಪತಿಯ ಪುತ್ರ ಯದೀಶ್. ಅಮೆರಿಕದ ಬೋಸ್ಟನ್‌ನ ನಾರ್ಥ್ ಈಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಮಂಡ್ಯದ ನಿರ್ಮಿತಿ ಕೇಂದ್ರದಲ್ಲಿ ಭಾರೀ ಅಕ್ರಮ – ಲೋಕಾಯುಕ್ತಕ್ಕೆ ದೂರು
ಈ ಶೃಂಗಸಭೆಯಲ್ಲಿ 2030ರ ಕಾರ್ಯಸೂಚಿ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳ (SDGs) ನೇತೃತ್ವದಲ್ಲಿ ಜಗತ್ತನ್ನು ಹೆಚ್ಚು ನ್ಯಾಯಯುತ, ಹಸಿರು ಮತ್ತು ಸುಸ್ಥಿರ ಸ್ಥಳವಾಗಿ ಪರಿವರ್ತಿಸಲು ಕೈಗೊಳ್ಳಬಹುದಾದ ಕ್ರಮಗಳು ಮತ್ತು ಶಿಫಾರಸುಗಳ ಬಗ್ಗೆ ಚರ್ಚಿಸಲು ಯುವಜನರಿಗೆ ವೇದಿಕೆ ಕಲ್ಪಿಸಲಾಗಿದೆ. ಇದನ್ನೂ ಓದಿ: ವಾರಣಾಸಿ ಗ್ಯಾಂಗ್ ರೇಪ್ – ಏರ್‌ಪೋರ್ಟಲ್ಲೇ ಪೊಲೀಸರಿಂದ ಮಾಹಿತಿ ಪಡೆದ ಪ್ರಧಾನಿ ಮೋದಿ
ಬೆಂಗಳೂರು: ಮಹಿಳೆಯರನ್ನು (Womens) ಪ್ರಮುಖ ಫಲಾನುಭವಿಗಳನ್ನಾಗಿ ಕೇಂದ್ರೀಕರಿಸಿ ರಾಜ್ಯದಲ್ಲಿ (Karnataka) ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳ (Five Guarantee Scheme) ಅನುಷ್ಠಾನದ ಮೂಲಕ ಕರ್ನಾಟಕ ಸಾಧಿಸಿರುವ ಲಿಂಗ ಸಮಾನತೆಯ ಉಪಕ್ರಮಗಳಿಗೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷ ಕ್ಯಾಮರೂನ್‌ನ ಫಿಲೆಮನ್ ಯಾಂಗ್ (Philemon Yang) ಮೆಚ್ಚುಗೆ ಸೂಚಿಸಿದ್ದಾರೆ.
ಇಂದು (ಫೆ. 07) ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಗರದ ಖಾಸಗಿ ಹೋಟೆಲ್ ತಾಜ್ ವೆಸ್ಟೆಂಡ್‌ನಲ್ಲಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ (Shalini Rajneesh) ಅವರು ಸ್ವಸಹಾಯ ಗುಂಪಿನ ಮಹಿಳೆಯರು ರೇಷ್ಮೆ ಗೂಡುಗಳಿಂದ ತಯಾರಿಸಿದ ಪುಷ್ಪಗುಚ್ಛದೊಂದಿಗೆ ಸ್ವಾಗತಿಸಿದರು. ಒಂದು ಜಗತ್ತು ಹಲವು ಸಾಧ್ಯತೆಗಳನ್ನು ಬಿಂಬಿಸುವ ಕರ್ನಾಟಕ ಕುರಿತಾದ ಪುಸ್ತಕವನ್ನು ನೀಡಿದರು.
ಸುಸ್ಥಿರ ಅಭಿವೃದ್ಧಿ ಗುರಿಗಳ (SDG) ಸಾಧನೆಯಲ್ಲಿ ಕರ್ನಾಟಕವು ಉನ್ನತ ಸ್ಥಾನ ಪಡೆಯಲು ಸಾಧ್ಯವಾಗಿರುವ ಬಗ್ಗೆ ವಿಶ್ವಸಂಸ್ಥೆಯ ಅಧ್ಯಕ್ಷರು ಆಸಕ್ತಿಯಿಂದ ಹೆಚ್ಚು ಮಾಹಿತಿ ಹಾಗೂ ವಿವರಗಳನ್ನು ಬಯಸಿದರು.
ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರ ಕೈಗೆ ನಗದು ಹಣ ನೀಡುವ ಗೃಹಲಕ್ಷ್ಮಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅವಕಾಶ ನೀಡುವ ಶಕ್ತಿ, ಕಾರ್ಮಿಕ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆಯ ದರವನ್ನು ಸುಧಾರಿಸಲು ಕೈಗೊಂಡಿರುವ ಕ್ರಮಗಳು , ಹಸಿವು ಮತ್ತು ಅಪೌಷ್ಟಿಕತೆಯನ್ನು ತಡೆಗಟ್ಟಲು ತಲಾವಾರು ಪೋಷಕಾಂಶ ನೀಡಿಕೆ , ಕೌಶಲ್ಯದ ಮೂಲಕ ಉದ್ಯೋಗ ಗಳಿಕೆ, ಅಡುಗೆ ಅನಿಲ ಪೂರೈಕೆ, ಉಚಿತ ವಿದ್ಯುತ್ ಪೂರೈಕೆ ಕುರಿತ ಕಾರ್ಯಕ್ರಮಗಳ ವಿವರಗಳನ್ನು ಮುಖ್ಯ ಕಾರ್ಯದರ್ಶಿಗಳು ನೀಡಿದರು. ಇದನ್ನೂ ಓದಿ: ಗಡಿಯಲ್ಲಿ ನೆಲಬಾಂಬ್ ಸ್ಫೋಟ – ಐಇಡಿ ಹೊತ್ತುಕೊಂಡು ಭಾರತಕ್ಕೆ ನುಗ್ಗುತ್ತಿದ್ದ ಐವರು ಉಗ್ರರ ಸಾವು
ಮಹಿಳೆಯರು ಸ್ವಸಹಾಯ ಗುಂಪುಗಳನ್ನು (SHG) ಸಂಘಟಿಸಲು, ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಮೌಲ್ಯವರ್ಧನೆಗೆ ಪ್ರೋತ್ಸಾಹ, ವಿಷಕಾರಿ ಮುಕ್ತ ವಾತಾವರಣಕ್ಕಾಗಿ ಸಮಗ್ರ ಮತ್ತು ಸಾವಯವ ಕೃಷಿಗೆ ಪ್ರೋತ್ಸಾಹ ಕ್ರಮಗಳು ಸಮಗ್ರ ಹವಾಮಾನ ಬದಲಾವಣೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು ಸಹಾಯ ಮಾಡುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಸಮಾನತೆಯನ್ನು ಉತ್ತೇಜಿಸಲು ಮಹಿಳಾ ಪರ ಕಾರ್ಯಕ್ರಮಗಳನ್ನು ಮುನ್ನಡೆಸುತ್ತಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಳಜಿಯನ್ನು ವಿಶ್ವಸಂಸ್ಥೆಯ ಅಧ್ಯಕ್ಷರು ಶ್ಲಾಘಿಸಿದರು. ಮುಂಬರುವ ವಿಶ್ವಸಂಸ್ಥೆಯ ಕಾರ್ಯಾಗಾರಗಳಲ್ಲಿ ಕರ್ನಾಟಕದ ಯಶೋಗಾಥೆಗಳನ್ನು ಹಂಚಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು, ಇದರಿಂದ ಇತರ ದೇಶಗಳು ಸಹ ಈ ಅತ್ಯುತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
– ಪರಸ್ಪರ ದಾಳಿಯಲ್ಲಿ ಲೆಬನಾನ್ ಕ್ಯಾಪ್ಟನ್, ಇಸ್ರೇಲ್‌ನ ಗಾರ್ಡ್ ಕಮಾಂಡರ್ ಹತ್ಯೆ
ಜೆರುಸಲೇಂ/ಬೈರೂತ್: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಹಿಜ್ಬುಲ್ಲಾ (Hezbollah) ಮುಖ್ಯಸ್ಥ ಹಸನ್ ನಸ್ರಲ್ಲಾ ಹತ್ಯೆ ಬಳಿಕ ಇಸ್ರೇಲ್ (Israel) ಮೇಲೆ ಇರಾನ್ ನೂರಾರು ಕ್ಷಿಪಣಿಗಳ ಮಳೆ ಸುರಿಸಿದೆ. ಇದೇ ಮೊದಲ ಭಾರಿಗೆ ಹೈಪರ್‌ಸಾನಿಕ್ ಕ್ಷಿಪಣಿ ಬಳಸಿ ದಾಳಿ ನಡೆಸಿದೆ. ಈ ಬೆನ್ನಲ್ಲೇ ಇಸ್ರೇಲಿ ಪಡೆಗಳು ಲೆಬನಾನ್ ಮೇಲೆ ಸೇಡಿನ ದಾಳಿ ನಡೆಸಿದೆ. ಲೆಬನಾನ್‌ನ (Lebanon) ಅಲ್-ಬೆಕಾ ಕಣಿವೆಯಲ್ಲಿರುವ ಹಲ್ಬಟಾ ಮತ್ತು ಜಬುದ್ ಪಟ್ಟಣಗಳ ಮೇಲೆ ವೈಮಾನಿಕ ದಾಳಿ ನಡೆಸಿವೆ. ಎರಡೂ ಕಡೆ ಸಾವುನೋವು ಸಂಭವಿಸಿದೆ.
ಹಿಜ್ಬುಲ್ಲಾ ವಿರುದ್ಧ ಯುದ್ಧದಲ್ಲಿ ಇಸ್ರೇಲ್‌ನ ಗಾರ್ಡ್ ಕಮಾಂಡರ್ (Guards commander) ಮತ್ತು ಇತರ ನಾಯಕರು ಜೀವ ಕಳೆದುಕೊಂಡಿದ್ದಾರೆ. ಮತ್ತೊಂದೆಡೆ ಇಸ್ರೇಲ್ ದಾಳಿಗೆ ಲೆಬನಾನ್ ಸೇನೆಯ 22 ವರ್ಷದ ಕ್ಯಾಪ್ಟನ್ ಕ್ಯಾಪ್ಟನ್ ಈಟಾನ್ ಇಟ್ಜಾಕ್ ಓಸ್ಟರ್ ಪ್ರಾಣ ತೆತ್ತಿದ್ದಾರೆ. ಇರಾನ್, ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದ್ದಂತೆ, ಇಸ್ರೇಲ್ ಕೂಡ, ಇರಾನ್‌ಗೆ ಎಚ್ಚರಿಕೆ ನೀಡಿತ್ತು. ಇದಾದ ಬಳಿಕ ಲೆಬನಾನ್‌ನ ಬೈರೂತ್‌ನಲ್ಲಿರುವ ಹಿಜ್ಬುಲ್ಲಾ ಶಿಬಿರಗಳ ಮೇಲೆ ಇಸ್ರೇಲ್ ಸೇನೆ ಬಾಂಬ್ ಮಳೆ ಸುರಿಸಿದೆ. ಈ ಮೂಲಕ ಹಿಜ್ಬುಲ್ಲಾ ಭದ್ರಕೋಟೆ ಎಂದೇ ಕರೆಸಿಕೊಂಡಿದ್ದ ಸೇನಾ ನೆಲೆಗಳನ್ನು ಇಸ್ರೇಲ್ ಛಿದ್ರಗೊಳಿಸಿದೆ.
ತುರ್ತು ಸಭೆಗೆ ವಿಶ್ವಸಂಸ್ಥೆ ತಯಾರಿ:
ಮಧ್ಯ ಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ದಟ್ಟವಾಗಿ ಆವರಿಸಿದೆ. ಪರಿಸ್ಥಿತಿ ದಿನೇ ದಿನೇ ವಿಕೋಪಕ್ಕೆ ತಿರುಗುತ್ತಿದೆ. ಇದರಿಂದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಯನ್ನು ಪರಿಹರಿಸಲು ತುರ್ತು ಸಭೆ ಕರೆಯಲಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ವಿಶ್ವಸಂಸ್ಥೆಯ ಆಂಟೋನಿಯೊ ಗುಟೆರೆಸ್, ಒಂದು ವಾರದ ಹಿಂದೆ ಭದ್ರತಾ ಮಂಡಳಿಗೆ ಲೆಬನಾನ್‌ನ ಪರಿಸ್ಥಿತಿ ಬಗ್ಗೆ ವರದಿ ಮಾಡಿದ್ದಾರೆ. ಸದ್ಯ ಅಲ್ಲಿನ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಲೆಬನಾನಿನ ಸರ್ಕಾರವು ದೇಶದೊಳಗಿನ ಎಲ್ಲಾ ಶಸ್ತ್ರಾಸ್ತ್ರಗಳ ಮೇಲೆ ನಿಯಂತ್ರಣವನ್ನು ಮರಳಿ ಪಡೆಯಬೇಕು ಎಂದು ಪ್ರತಿಪಾದಿಸಿದ್ದಾರೆ.
ನ್ಯೂಯಾರ್ಕ್: ವಿಶ್ವಸಂಸ್ಥೆಯ (United Nations) ಭಾಷಣದಲ್ಲಿ ಇಸ್ರೆಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಭಾರತದ ನಕ್ಷೆ ತೋರಿಸಿ ವರ (Blessing) ಎಂದು ಹೇಳಿ ಹೊಗಳಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಬೆಂಜಮಿನ್ ನೆತನ್ಯಾಹು ಭಾಷಣ ಮಾಡಿದರು. ಈ ವೇಳೆ ಸೌದಿ ಅರೇಬಿಯಾ, ಜೋರ್ಡಾನ್, ಈಜಿಪ್ಟ್, ಸುಡಾನ್, ಭಾರತ ಮತ್ತು ಯುಎಇ ಸೇರಿದಂತೆ ಇಸ್ರೇಲ್‌ಗೆ ಸ್ನೇಹ ಪರವಾಗಿರುವ ದೇಶಗಳ ಚಿತ್ರವನ್ನು ತೋರಿಸಿ ʼವರʼ ಎಂದು ಬಣ್ಣಿಸಿದ್ದಾರೆ. ನಂತರ ಇರಾನ್,ಇರಾಕ್ ಸಿರಿಯಾ ಮ್ಯಾಪ್ ತೋರಿಸಿ ಶಾಪ (Curse) ಎಂದು ಹೇಳಿದ್ದಾರೆ.
Israeli Prime Minister Benjamin Netanyahu displayed two maps during his address to the U.N. General Assembly. The first map, titled “The Blessing,” depicted countries including Saudi Arabia, Jordan, Egypt, Sudan, India, and the UAE, which are considered friendly towards Israel.… pic.twitter.com/1bqcaHMWXy
ನೆತನ್ಯಾಹು ಅವರು ತಮ್ಮ ಭಾಷಣದಲ್ಲಿ, ಇರಾನ್ ಅನ್ನು ಬಹಳ ಸಮಯದವರೆಗೆ ಜಗತ್ತು ಸಮಾಧಾನದಿಂದ ನೋಡಿದೆ. ಆದರೆ ಅದರ ಆಂತರಿಕ ದಮನದ ವಿಚಾರದಲ್ಲಿ ಕುರುಡಾಗಿ ಬಾಹ್ಯ ಆಕ್ರಮಣ ನಡೆಸುತ್ತಿದೆ. ಈ ತುಷ್ಟೀಕರಣ ಕೊನೆಗೊಳ್ಳಬೇಕು ಮತ್ತು ಈಗಲೇ ಕೊನೆಯಾಗಬೇಕು ಎಂದು ಸಿಟ್ಟು ಹೊರಹಾಕಿದರು. ಇದನ್ನೂ ಓದಿ: ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಹತ್ಯೆ – ಇಸ್ರೇಲ್ ಸೇನೆಯಿಂದ ಘೋಷಣೆ
ಟೆಹರಾನ್ ನಿರಂಕುಶಾಧಿಕಾರಿಗಳಿಗೆ ನನ್ನ ಬಳಿ ಸಂದೇಶವಿದೆ. ನೀವು ನಮ್ಮನ್ನು ಹೊಡೆದರೆ, ನಾವು ನಿಮ್ಮನ್ನು ಹೊಡೆಯುತ್ತೇವೆ ಎಂದು ಗುಡುಗಿದರು.
ನೆತನ್ಯಾಹು ಅವರು ಹಿಡಿದ ವರ ನಕ್ಷೆಯು ಇಸ್ರೇಲ್ ಮತ್ತು ಅದರ ಅರಬ್ ಪಾಲುದಾರರ ನಡುವಿನ ಏಕತೆಯ ದೃಷ್ಟಿಯನ್ನು ವಿವರಿಸುತ್ತದೆ. ಹಿಂದೂ ಮಹಾಸಾಗರ ಮತ್ತು ಮೆಡಿಟರೇನಿಯನ್ ಸಮುದ್ರದ ನಡುವಿನ ಭೂ ಸೇತುವೆಯ ಮೂಲಕ ಏಷ್ಯಾ ಮತ್ತು ಯುರೋಪ್‌ನೊಂದಿಗೆ ಸಂಪರ್ಕಿಸುತ್ತದೆ.
ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯರಾಗಿ ಭಾರತವನ್ನು ಸೇರಿಸುವಂತೆ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ (Emmanuel Macron) ಒತ್ತಾಯಿಸಿದ್ದಾರೆ. ಯುಎನ್‌ಎಸ್‌ಸಿಯನ್ನು (UNSC) ಹೆಚ್ಚು ಒಳಗೊಳ್ಳಲು ಮತ್ತು ಪ್ರತಿನಿಧಿಸಲು ಬ್ರೆಜಿಲ್, ಜಪಾನ್, ಜರ್ಮನಿ ಮತ್ತು ಆಫ್ರಿಕಾದ ಎರಡು ದೇಶಗಳ ಉಮೇದುವಾರಿಕೆಯನ್ನು ಬೆಂಬಲಿಸಬೇಕು ಎಂದು ಹೇಳಿದರು.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಯುಎನ್ ಅನ್ನು ಇನ್ನಷ್ಟು ಹೆಚ್ಚು ಪರಿಣಾಮಕಾರಿಯಾಗಿ ಮಾಡಬೇಕಿದೆ. ಅದಕ್ಕಾಗಿಯೇ ಫ್ರಾನ್ಸ್, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ವಿಸ್ತರಿಸುವ ಪರವಾಗಿದೆ. ಜರ್ಮನಿ, ಜಪಾನ್, ಭಾರತ (India) ಮತ್ತು ಬ್ರೆಜಿಲ್ ಖಾಯಂ ಸದಸ್ಯರಾಗಿರಬೇಕು. ಜೊತೆಗೆ ಆಫ್ರಿಕಾ ನಿರ್ಧರಿಸುವ ಎರಡು ದೇಶಗಳು ಅವರನ್ನು ಪ್ರತಿನಿಧಿಸಲು ಅವಕಾಶ ನೀಡಬೇಕು ಎಂದರು. ಇದನ್ನೂ ಓದಿ: ಇಸ್ರೇಲ್ ವೈಮಾನಿಕ ದಾಳಿ – ಹಿಬ್ಜುಲ್ಲಾ ಡ್ರೋನ್ ಘಟಕದ ಮುಖ್ಯಸ್ಥನ ಹತ್ಯೆ
ಸದ್ಯ ಅಮೆರಿಕ, ಚೀನಾ, ರಷ್ಯಾ, ಫ್ರಾನ್ಸ್ ಮತ್ತು ಬ್ರಿಟನ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನವನ್ನು ಹೊಂದಿವೆ. ಅಮೆರಿಕಾ ಮತ್ತು ಫ್ರಾನ್ಸ್ ಸೇರಿದಂತೆ ಹಲವಾರು ದೇಶಗಳು ಭಾರತವನ್ನು ಈ ಪ್ರಬಲ ಗುಂಪಿನ ಭಾಗವಾಗಬೇಕೆಂದು ಪ್ರತಿಪಾದಿಸಿವೆ. ಆದರೆ, ಚೀನಾ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕ್ವಾಡ್ ಲೀಡರ್ಸ್ ಶೃಂಗಸಭೆಯಲ್ಲಿ ಇದೇ ರೀತಿಯ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಅಮೆರಿಕ, ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್‌ನ ನಾಯಕರು ವಿಶ್ವಸಂಸ್ಥೆಯನ್ನು ಹೆಚ್ಚು ಪ್ರತಿನಿಧಿಸಲು ಸುಧಾರಣೆಯ ಅಗತ್ಯವಿದೆ ಎಂದು ಹೇಳಿದರು. ಶೃಂಗಸಭೆಯ ನಂತರ ನೀಡಿದ ಜಂಟಿ ಹೇಳಿಕೆಯಲ್ಲಿ ಹೆಚ್ಚಿನ ದೇಶಗಳ ಪ್ರಾತಿನಿಧ್ಯವನ್ನು ಸೇರಿಸಲು ಅದರ ವಿಸ್ತರಣೆಗೆ ಕರೆ ನೀಡಿದರು. ಇದನ್ನೂ ಓದಿ: ಕದನ ವಿರಾಮಕ್ಕೆ ಕ್ಯಾರೇ ಎನ್ನದ ಇಸ್ರೇಲ್ – ಪೂರ್ಣಪ್ರಮಾಣದ ಯುದ್ಧಕ್ಕೆ ಬೆಂಜಮಿನ್ ನೆತನ್ಯಾಹು ಕರೆ
ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದ ಸಂಪೂರ್ಣ ಖಂಡಗಳನ್ನು ನಿರ್ಲಕ್ಷಿಸಿದಾಗ ನಾವು ಅದನ್ನು ಜಾಗತಿಕ ದೇಹದ ಪ್ರಾಥಮಿಕ ಅಂಗವೆಂದು ಹೇಗೆ ಮಾತನಾಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಪ್ರಶ್ನಿಸಿದ್ದರು. ಪ್ರಮುಖ ಪ್ರದೇಶಗಳನ್ನು ಕೈ ಬಿಟ್ಟು ಪ್ರಪಂಚದ ಪರವಾಗಿ ಮಾತನಾಡಲು ಹೇಗೆ ಸಾಧ್ಯ ಎಂದು ಕೇಳಿದ್ದರು. ಭಾರತವು ಎಂಟು ಬಾರಿ ಯುಎನ್ ಸೆಕ್ಯುರಿಟಿ ಕೌನ್ಸಿಲ್‌ನ ಶಾಶ್ವತವಲ್ಲದ ಸದಸ್ಯರಾಗಿ ಆಯ್ಕೆಯಾಗಿದೆ.