Tag: ವಿಶ್ವವಿದ್ಯಾನಿಲಯ

  • ಕಾಲೇಜಿನಲ್ಲಿ ಸೊಂಟ ಬಳುಕಿಸುತ್ತಾ ಹಾಟ್ ಡ್ಯಾನ್ಸ್ ಮಾಡಿದ ಪಾಕ್ ವಿದ್ಯಾರ್ಥಿನಿಗೆ ಶಾಕ್

    ಕಾಲೇಜಿನಲ್ಲಿ ಸೊಂಟ ಬಳುಕಿಸುತ್ತಾ ಹಾಟ್ ಡ್ಯಾನ್ಸ್ ಮಾಡಿದ ಪಾಕ್ ವಿದ್ಯಾರ್ಥಿನಿಗೆ ಶಾಕ್

    ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯೊಬ್ಬಳು (College Student) ವೇದಿಕೆ ಮೇಲೆ ಪಾಶ್ಚಿಮಾತ್ಯ ಹಾಡು ಹೇಳಿಕೊಂಡು ಮಾದಕ ನೃತ್ಯ (Hot Dance) ಮಾಡಿದ್ದಕ್ಕೆ ಕಾಲೇಜಿಗೆ ಸಂಬಂಧಿಸಿದ ವಿಶ್ವವಿದ್ಯಾನಿಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

    ಇದೇ ಅಕ್ಟೋಬರ್ 20ರಂದು ಎನ್‌ಸಿಎಸ್ ವಿಶ್ವವಿದ್ಯಾನಿಲಯದ (NCS University) ಅಂಗ ಸಂಸ್ಥೆಯಾಗಿರುವ ಕೆಎಂಯು ಕಾಲೇಜು ಸಮಾರಂಭದಲ್ಲಿ ವಿದ್ಯಾರ್ಥಿಗಳು ಸಂಗೀತ ಕಾರ್ಯಕ್ರಮ ಆಯೋಜಿಸಿದ್ದರು. ಒಟ್ಟು 13 ಕಾರ್ಯಕ್ರಮಗಳ ಪೈಕಿ, ಕೊನೆಯ ಕಾರ್ಯಕ್ರಮ ಇದಾಗಿತ್ತು. ಈ ವೇಳೆ ವಿದ್ಯಾರ್ಥಿನಿಯೊಬ್ಬಳು ಮಾದಕ ಉಡುಗೆಯಲ್ಲಿ ಪಾಶ್ಚಿಮಾತ್ಯ ಹಾಡು ಹೇಳುತ್ತಾ ಸೊಂಟ ಬಳುಕಿಸಿದ್ದಾರೆ. ವೇದಿಕೆ ಮುಂಭಾಗದಲ್ಲಿದ್ದ ವಿದ್ಯಾರ್ಥಿಗಳೂ ಈಕೆಗೆ ಬೆಂಬಲ ನೀಡಿದ್ದಾರೆ. ಬಳಿಕ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಇದಕ್ಕೆ ವಿವಿ ಆಕ್ಷೇಪ ವ್ಯಕ್ತಪಡಿಸಿದೆ. ಇದನ್ನೂ ಓದಿ: ಹಿಂದುತ್ವದಲ್ಲೇ ಬ್ರಾಹ್ಮಣತ್ವವಿದೆ; ಪಬ್ಲಿಸಿಟಿಗೋಸ್ಕರ ನಟ ಚೇತನ್ ವಿವಾದಿತ ಹೇಳಿಕೆ – ಪೇಜಾವರ ಶ್ರೀ

    ಸುದ್ದಿ ತಿಳಿದ ಖೈಬರ್ ಪ್ರಾಂತ್ಯದ ವೈದ್ಯಕೀಯ ವಿಶ್ವವಿದ್ಯಾಲಯ (Khyber Medical University) ಎನ್‌ಸಿಎಸ್‌ನ ಕೆಎಂಯು ಕಾಲೇಜಿಗೆ ನೋಟಿಸ್ ನೀಡಿದ್ದು, ಈ ರೀತಿಯ ಘಟನೆ ಆಕ್ಷೇಪಾರ್ಹವಾಗಿದ್ದು, ಈ ಬಗ್ಗೆ ಕಾಲೇಜಿನ ನಿರ್ದೇಶಕರು ಉತ್ತರ ಕೊಡಬೇಕು ಎಂದು ತಾಕೀತು ಮಾಡಿದೆ. ಅಲ್ಲದೇ ಎಲ್ಲ ಶಿಕ್ಷಣ ಸಂಸ್ಥೆಗಳು ಪಠ್ಯ ಚಟುವಟಿಕೆಗಳೊಂದಿಗೆ ಸಹಪಠ್ಯ ಚಟುವಟಿಕೆಗಳ ಸಮಯದಲ್ಲಿಯೂ ನೈತಿಕ ಮಾನದಂಡಗಳು ಹಾಗೂ ಸಂಸ್ಥೆಯ ಪಾವಿತ್ರ‍್ಯತೆಯನ್ನು ಕಾಯ್ದುಕೊಳ್ಳುವಂತೆ ಸೂಚಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಆಡಳಿತ ಮಂಡಳಿ ಎಚ್ಚರಿಕೆಗೆ ಡೋಂಟ್‍ಕೇರ್- ಹಿಜಬ್ ಧರಿಸಿ ಬಂದ 15 ವಿದ್ಯಾರ್ಥಿನಿಯರು!

    ಆಡಳಿತ ಮಂಡಳಿ ಎಚ್ಚರಿಕೆಗೆ ಡೋಂಟ್‍ಕೇರ್- ಹಿಜಬ್ ಧರಿಸಿ ಬಂದ 15 ವಿದ್ಯಾರ್ಥಿನಿಯರು!

    ಮಂಗಳೂರು: ಕರಾವಳಿಯಲ್ಲಿ ಮತ್ತೆ ಹಿಜಬ್ ವಿದ್ಯಾರ್ಥಿನಿಯರು ಹೈಡ್ರಾಮಾವೇ ಮಾಡಿದ್ದಾರೆ. ಆಡಳಿತ ಮಂಡಳಿ ಖಡಕ್ ವಾರ್ನಿಂಗ್ ಕೊಟ್ಟರೂ ವಿದ್ಯಾರ್ಥಿನಿಯರು ಮಾತ್ರ ಡೋಂಟ್ ಕೇರ್ ಎಂದಿದ್ದಾರೆ.

    ಹೌದು. ಆಡಳಿತ ಮಂಡಳಿ ಎಚ್ಚರಿಕೆಯ ಬೆನ್ನಲ್ಲೇ ಮಂಗಳೂರು ವಿಶ್ವವಿದ್ಯಾನಿಲಯದ 15 ಮಂದಿ ವಿದ್ಯಾರ್ಥಿನಿಯರು ಹಿಜಬ್ ಧರಿಸಿಯೇ ಕಾಲೇಜಿಗೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಕಾಲೇಜಿನಲ್ಲಿ ಹೊಸ ರೂಲ್ಸ್ ತಂದರೂ ಕೆಲ ವಿದ್ಯಾರ್ಥಿನಿಯರು ರೂಲ್ಸ್ ಬ್ರೇಕ್ ಮಾಡಿದ್ದಾರೆ. ಇದನ್ನೂ ಓದಿ: ತರಗತಿ, ಗ್ರಂಥಾಲಯಕ್ಕೂ ಹಿಜಬ್ ಧರಿಸಿ ಬರುವಂತಿಲ್ಲ- ವಿವಾದದ ಬಳಿಕ ಮಂಗಳೂರು ವಿವಿ ಖಡಕ್ ಆದೇಶ

    ಕಾಲೇಜಿಗೆ ಅವಕಾಶ ಕೊಡದಿದ್ದರಿಂದ ಲೈಬ್ರರಿ ಎಂಟ್ರಿಗೆ ವಿದ್ಯಾರ್ಥಿನಿಯರು ಮುಂದಾಗಿದ್ದಾರೆ. ಈ ವೇಳೆ ಕಾಲೇಜು ಸಿಬ್ಬಂದಿ 15 ಮಂದಿಯನ್ನು ಲೈಬ್ರರಿಯಲ್ಲೂ ತಡೆದಿದ್ದಾರೆ. ಅಲ್ಲದೆ ಹಿಜಬ್ ತೆಗೆಯಲು ಮನವೊಲಿಸಿದರೂ ವಿದ್ಯಾರ್ಥಿನಿಯರು ಸುತಾರಾಂ ಒಪ್ಪಲಿಲ್ಲ. ಬದಲಾಗಿ ಕಾಲೇಜ್ ಕ್ಯಾಂಪಸ್‍ನಲ್ಲೇ ಪುಸ್ತಕ ಓದುತ್ತಾ ಕುಳಿತ ಪ್ರಸಂಗ ನಡೆಯಿತು. ಕೊನೆಗೆ ಆಡಳಿತ ಮಂಡಳಿಯವರು ಸಮಸ್ಯೆ ಬಗೆಹರಿಸಲು ಡಿಸಿ ಮೊರೆ ಹೋದರು.

  • ನಳಂದ, ತಕ್ಷಶಿಲಾ ವಿಶ್ವವಿದ್ಯಾಲಯ ಧ್ವಂಸ ಮಾಡಿದವರನ್ನು ಯಾರೂ ನೆನಪಿಸಿಕೊಳ್ಳುವುದಿಲ್ಲ: ಅಮಿತ್ ಶಾ

    ನಳಂದ, ತಕ್ಷಶಿಲಾ ವಿಶ್ವವಿದ್ಯಾಲಯ ಧ್ವಂಸ ಮಾಡಿದವರನ್ನು ಯಾರೂ ನೆನಪಿಸಿಕೊಳ್ಳುವುದಿಲ್ಲ: ಅಮಿತ್ ಶಾ

    ನವದೆಹಲಿ: ನಳಂದ ಮತ್ತು ತಕ್ಷಶಿಲಾ ವಿಶ್ವವಿದ್ಯಾಲಯಗಳನ್ನು ಧ್ವಂಸ ಮಾಡಿದವರನ್ನು ಯಾರೂ ನೆನಪಿಸಿಕೊಳ್ಳುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದರು.

    ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಮೂರು ದಿನಗಳ ಅಂತರರಾಷ್ಟ್ರೀಯ ವಿಚಾರ ಸಂಕಿರಣವನ್ನು ಅಮಿತ್ ಶಾ ಅವರು ಉದ್ಘಾಟಿಸಿದರು. ಈ ವೇಳೆ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಒಂದು ನಿರ್ದಿಷ್ಟ ಸಿದ್ಧಾಂತವು ಕಲಹಕ್ಕೆ ಕಾರಣವಾಗಿದ್ರೆ, ಅದು ಖಂಡಿತವಾಗಿಯೂ ಭಾರತದ ಸಿದ್ಧಾಂತವಲ್ಲ. ವಿಶ್ವವಿದ್ಯಾನಿಲಯಗಳು ವಿಚಾರ ವಿನಿಮಯದ ವೇದಿಕೆಯಾಗಬೇಕೇ ಹೊರತು ಸೈದ್ಧಾಂತಿಕ ಸಂಘರ್ಷದ ಜಾಗವಾಗಬಾರದು. ಒಂದು ಸಿದ್ಧಾಂತವು ಆಲೋಚನೆಗಳು ಮತ್ತು ಚರ್ಚೆಗಳ ಮೂಲಕ ಮುಂದುವರಿಯುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: SSLC ಫಲಿತಾಂಶ: ಚಿತ್ರದುರ್ಗದ ಆರು ವಿದ್ಯಾರ್ಥಿಗಳು ಮೇಲುಗೈ 

    ನಳಂದ ಮತ್ತು ತಕ್ಷಶಿಲಾ ವಿಶ್ವವಿದ್ಯಾನಿಲಯಗಳನ್ನು ಧ್ವಂಸ ಮಾಡಿದವರನ್ನು ಯಾರೂ ನೆನಪಿಸಿಕೊಳ್ಳುವುದಿಲ್ಲ. ನಳಂದ ವಿಶ್ವವಿದ್ಯಾಲಯದ ಗ್ರಂಥಾಲಯವು ತಿಂಗಳುಗಟ್ಟಲೆ ಸುಟ್ಟುಹೋಗಿದೆ ಎಂದು ಹೇಳಲಾಗುತ್ತದೆ. ಆದರೆ ಆ ವಿಶ್ವವಿದ್ಯಾಲಯಗಳ ಚಿಂತನೆಗಳು ಇಂದಿಗೂ ಜೀವಂತವಾಗಿವೆ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು.

    modi (1)

    ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮೊದಲು ಭಾರತವು ರಕ್ಷಣಾ ನೀತಿಯನ್ನು ಹೊಂದಿರಲಿಲ್ಲ. ಅಸ್ತಿತ್ವದಲ್ಲಿದ್ದರೂ ಸಹ ಅದು ವಿದೇಶಾಂಗ ನೀತಿಯ ‘ನೆರಳು’ ಎಂದು ವಾದಿಸಿದರು. ಈ ಹಿಂದೆ, ನಮ್ಮ ಮೇಲೆ ದಾಳಿ ಮಾಡಲು ಭಯೋತ್ಪಾದಕರನ್ನು ಕಳುಹಿಸಲಾಗುತ್ತಿತ್ತು. ಪುಲ್ವಾಮಾ ದಾಳಿಯಲ್ಲೂ ಅಂತಹ ಪ್ರಯತ್ನಗಳು ನಡೆದಿದ್ದವು. ಆದರೆ ಸರ್ಜಿಕಲ್ ಸ್ಟ್ರೈಕ್ ಮತ್ತು ವೈಮಾನಿಕ ದಾಳಿಯ ಮೂಲಕ ನಾವು ರಕ್ಷಣಾ ನೀತಿಯ ಅರ್ಥವನ್ನು ತೋರಿಸಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮಳೆಯಿಂದ ಹಾನಿಗೊಳಗಾದ ಪ್ರದೇಶ ವೀಕ್ಷಣೆ ಮಾಡಿದ ಬೊಮ್ಮಾಯಿ 

    ಈ ವೇಳೆ ಅಮಿತ್ ಶಾ ಅವರು ಯುವಕರಿಗೆ ದೇಶದ ಬಗ್ಗೆ ತಮ್ಮ ಕರ್ತವ್ಯಗಳನ್ನು ಅರ್ಥಮಾಡಿಕೊಳ್ಳಲು ಸಲಹೆ ನೀಡಿದರು ಮತ್ತು ಭಾರತದ ರಕ್ಷಣಾ ನೀತಿಯ ಬಗ್ಗೆ ಮಾತನಾಡಿದರು.

  • ಮೈಸೂರು ವಿವಿಯಿಂದ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಕಡೆಯ ಅವಕಾಶ

    ಮೈಸೂರು ವಿವಿಯಿಂದ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಕಡೆಯ ಅವಕಾಶ

    ಮೈಸೂರು: ವಿವಿಧ ಕೋರ್ಸ್ ಗಳ ಎರಡು ಪಟ್ಟು ಅವಧಿ ಮುಗಿದ ನಂತರವೂ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕೊನೆಯ ಸುವರ್ಣ ಅವಕಾಶವನ್ನು ಮೈಸೂರು ವಿಶ್ವವಿದ್ಯಾನಿಲಯ ಒದಗಿಸಿದೆ.

    ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯದ ಹಳೆಯ ನಿಯಮದ ಪ್ರಕಾರ ಪರೀಕ್ಷೆ ಬರೆಯಲು ಅವಕಾಶವಿಲ್ಲ. ಆದರೆ ವಿವಿಯೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಈ ನಿಯಮವನ್ನು ಈಗ ಸಡಿಲಿಕೆ ಮಾಡಿದೆ. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪುನಃ ಪರೀಕ್ಷೆ ಬರೆಯಲು ಕಡೆ ಅವಕಾಶ ನೀಡಲಾಗಿದೆ.

    ಬಿಇಡಿ, ಕಾನೂನು ಪದವಿಯ ಆರ್.ಆರ್, ಸಿಎಸ್‍ಎಸ್, ಐಎಸ್‍ಎಸ್ ಸ್ಕೀಂ ಸೇರಿದಂತೆ ವಾರ್ಷಿಕ ಹಾಗೂ ಸೆಮಿಸ್ಟರ್ ಪದ್ಧತಿಯ ಎಲ್ಲಾ ಕೋರ್ಸ್ ಗಳ, ಡಿಪ್ಲೋಮಾ ಸ್ನಾತಕೋತ್ತರ ಕೋರ್ಸ್ ಗಳ ವಿದ್ಯಾರ್ಥಿಗಳಿಗೆ ಹಳೆಯ ಪಠ್ಯಕ್ರಮದಲ್ಲೇ ಪರೀಕ್ಷೆ ಬರೆಯಲು ಕಡೆಯ ಅವಕಾಶ ನೀಡಲಾಗಿದೆ ಎಂದು ವಿವಿಯ ಉಪ ಕುಲಸಚಿವರು ತಿಳಿಸಿದ್ದಾರೆ.

  • ಯಾವ ವಿವಿ ಪರೀಕ್ಷೆಗಳು ಮುಂದೂಡಿಕೆ? ಇಲ್ಲಿದೆ ಮಾಹಿತಿ

    ಯಾವ ವಿವಿ ಪರೀಕ್ಷೆಗಳು ಮುಂದೂಡಿಕೆ? ಇಲ್ಲಿದೆ ಮಾಹಿತಿ

    -ಎಲ್ಲಿ ರಜೆ ಘೋಷಣೆ..? ಎಲ್ಲಿ ರಜೆ ಇಲ್ಲ?

    ಬೆಂಗಳೂರು: ಎರಡು ದಿನ ಕಾರ್ಮಿಕ ಮುಷ್ಕರ ಹಿನ್ನೆಲೆಯಲ್ಲಿ ವಿವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಬೆಂಗಳೂರು ವಿವಿ, ರಾಣಿ ಚೆನ್ನಮ್ಮ ವಿವಿ, ಕರ್ನಾಟಕ ವಿವಿ, ಹಂಪಿ ಕನ್ನಡ ವಿವಿ, ಕುವೆಂಪು ವಿವಿ, ದಾವಣಗೆರೆ ವಿವಿ, ಗಂಗೂಬಾಯಿ ಹಾನಗಲ್ ವಿವಿ ಪರೀಕ್ಷೆಗಳು ಇಂದು ನಡೆಯಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

    ಬೆಂಗಳೂರು ವಿವಿಯು ಕಾನೂನು, ದೈಹಿಕ ಪರೀಕ್ಷೆ, ರಾಣಿ ಚೆನ್ನಮ್ಮ ವಿವಿಯ ಎಲ್ಲಾ ಪರೀಕ್ಷೆಗಳು, ಹಂಪಿ ಕನ್ನಡ ವಿವಿ, ಕರ್ನಾಟಕ ವಿವಿಯ ಎಂಎ, ಎಂಕಾಂ, ಎಂಎಸ್ಸಿ ಸ್ನಾತಕೋತ್ತರ ಪರೀಕ್ಷೆಗಳು ಇವತ್ತು ನಡೆಯಲ್ಲ. ಕುವೆಂಪು ವಿವಿಯ ಬಿಎಡ್ ಪರೀಕ್ಷೆ, ತುಮಕೂರು ವಿವಿಯ ಎಂಬಿಎ, ಎಂಕಾಂ, ಎಂಎ ಪರೀಕ್ಷೆ ಮುಂದೂಡಿಕೆ ಮಾಡಲಾಗಿದೆ. ದಾವಣಗೆರೆ ವಿವಿ, ಗಂಗೂಬಾಯಿ ಹಾನಗಲ್ ವಿವಿ ಪರೀಕ್ಷೆಗಳು ಸಹ ನಡೆಯಲ್ಲ.

    ಎಲ್ಲಿ ರಜೆ ಘೋಷಣೆ..?
    ಬೆಂಗಳೂರು, ಬೆಂಗಳೂರು ಗ್ರಾ., ಮಂಡ್ಯ, ಮೈಸೂರು, ಕೋಲಾರ, ಚಾಮರಾಜನಗರ, ಬಳ್ಳಾರಿ, ಧಾರವಾಡ, ಉತ್ತರ ಕನ್ನಡ, ತುಮಕೂರು, ರಾಯಚೂರು, ದಾವಣಗೆರೆ, ರಾಮನಗರ, ಬೆಳಗಾವಿ, ದಕ್ಷಿಣ ಕನ್ನಡ, ಉಡುಪಿ, ಚಿತ್ರದುರ್ಗ, ಬಾಗಲಕೋಟೆ, ಬೀದರ್, ಕಲಬುರಗಿ, ಗದಗ, ಚಿಕ್ಕಬಳ್ಳಾಪುರ, ಕೊಪ್ಪಳ

    ಎಲ್ಲಿ ರಜೆ ಇಲ್ಲ:
    ಮಡಿಕೇರಿ, ಚಿಕ್ಕಮಗಳೂರು, ವಿಜಯಪುರ, ಹಾವೇರಿ, ಹಾಸನ, ಯಾದಗಿರಿ, ಶಿವಮೊಗ್ಗ

    ಬಂದ್‍ಗೆ ಯಾರ್ಯಾರ ಬೆಂಬಲ?
    ಎಐಟಿಯುಸಿ, ಎನ್‍ಐಡಿಯುಸಿ, ಸಿಐಟಿಯು ಸಂಘಟನೆ ಬೆಂಬಲ ನೀಡಿದ್ದು, ಇತ್ತ ಕೆಎಸ್‍ಆರ್ಟಿಸಿ, ಬಿಎಂಟಿಸಿ ನೌಕರರ ಸಂಘ, ಬಾಷ್ ಕಾರ್ಮಿಕ ಸಂಘಟನೆ, ಬ್ಯಾಂಕ್ ಫೆಡರೇಷನ್ ಆಫ್ ಇಂಡಿಯಾ, ಪೀಣ್ಯ ಕೈಗಾರಿಕಾ ಕಾರ್ಮಿಕ ಸಂಘಟನೆ, ಟಯೋಟಾ ಕಿರ್ಲೋಸ್ಕರ್ ಕಾರ್ಮಿಕರ ಸಂಘ, ಗಾರ್ಮೆಂಟ್ಸ್ ಸಂಘಟನೆ, ಅಂಗನವಾಡಿ ನೌಕರರು, ಕಟ್ಟಡ ಕಾರ್ಮಿಕ ಸಂಘಟನೆ, ಎಸ್‍ಎಫ್‍ಐ ವಿದ್ಯಾರ್ಥಿ ಸಂಘಟನೆ, 50ಕ್ಕೂ ಹೆಚ್ಚು ರೈತ ಸಂಘಟನೆಗಳು, ಎಪಿಎಂಸಿ ಸಂಘ ಬಂದ್ ಗೆ ಬೆಂಬಲ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಯಲಾಯ್ತು ಪ್ರಹ್ಲಾದ್ ಜೋಷಿ ಆಪ್ತರ ಆಟ

    ಬಯಲಾಯ್ತು ಪ್ರಹ್ಲಾದ್ ಜೋಷಿ ಆಪ್ತರ ಆಟ

    – ನಕಲಿ ದಾಖಲೆ ಸೃಷ್ಟಿಸಿ ವಿವಿಯಲ್ಲಿ ಹುದ್ದೆ ಗಿಟ್ಟಿಸಿಕೊಂಡಿದ್ದ ಪರಮಾಪ್ತರು

    ಬೆಂಗಳೂರು: ಬೀದರ್ ನಲ್ಲಿರುವ ಕರ್ನಾಟಕ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದಲ್ಲಿ ಸಂಸದ ಪ್ರಹ್ಲಾದ್ ಜೋಶಿಯವರ ಪರಮಾಪ್ತರು ನಕಲಿ ದಾಖಲೆ ಸೃಷ್ಟಿಸಿ ಹುದ್ದೆ ಪಡೆದುಕೊಂಡಿದ್ದ ವಿಷಯ ಈಗ ಬಯಲಾಗಿದೆ.

    ಧಾರವಾಡದ ಬಿಜೆಪಿ ಸ್ಲಂ ಮೋರ್ಚಾ ಉಪಾಧ್ಯಕ್ಷರಾಗಿರುವ ಈರೇಶ್ ಅಂಚಟಗೇರಿ ಹಾಗೂ ಟಿ ಮುಕುಂದ ವರ್ಮ ಸುಳ್ಳು ಪ್ರಮಾಣ ಪತ್ರ ಕೊಟ್ಟು ವಿವಿಯಲ್ಲಿ ಹುದ್ದೆಯನ್ನು ಗಿಟ್ಟಿಸಿಕೊಂಡಿದ್ದರು. ಇವರಿಬ್ಬರೂ ಸಹ ಪ್ರಹ್ಲಾದ್ ಜೋಷಿಯವರ ಬಲಗೈ ಬಂಟರಾಗಿದ್ದಾರೆ.

    ವಿವಿಯಲ್ಲಿ ಪ್ರಗತಿಪರ ಮೀನುಗಾರರು, ರೈತರು ಹಾಗೂ ಶಿಕ್ಷಣ ತಜ್ಞರು ಸದಸ್ಯರಾಗಲು ಅವಕಾಶ ಇದೆ. ಆದರೆ ಇಬ್ಬರೂ ಒಂದು ಬಾರಿ ಪ್ರಗತಿಪರ ರೈತ ಹಾಗೂ ಇನ್ನೊಂದು ಬಾರಿ ಶಿಕ್ಷಣ ತಜ್ಞ ಎಂದು ಹೇಳಿ ಎರಡು ಬಾರಿ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ. ಅಲ್ಲದೇ ಪ್ರಹ್ಲಾದ್ ಜೋಷಿಯವರ ಪ್ರಭಾವದ ಮೂಲಕ ಹುದ್ದೆಯನ್ನು ಪಡೆದುಕೊಂಡಿದ್ದಾರೆ. ಇದಕ್ಕೆ ರಾಜ್ಯಪಾಲರೂ ಅಂಕಿತ ಹಾಕಿದ್ದರೆನ್ನುವ ಆರೋಪವು ಕೇಳಿ ಬರುತ್ತಿದೆ.

    ವಿವಿ ನಿಯಮಗಳ ಪ್ರಕಾರ ಒಂದು ಬಾರಿ ಮಾತ್ರ ಬೋರ್ಡ್ ಮೆಂಬರ್ ಆಗಿ ಆಯ್ಕೆಯಾಗಬಹುದು. ಆದರೆ ಜೋಷಿ ಆಪ್ತರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಹುದ್ದೆಯನ್ನು ಪಡೆದುಕೊಂಡಿದ್ದಾರೆ. ವಿವಿಯ ಬೋರ್ಡ್ ಸದಸ್ಯ ಸ್ಥಾನಗಳು ಕೇವಲ ಪ್ರಗತಿಪರ ರೈತರು, ಮೀನುಗಾರರು ಹಾಗೂ ಶಿಕ್ಷಣ ತಜ್ಞರಿಗೆ ಮೀಸಲಿದೆ. ಆದರೆ ಇವರಿಬ್ಬರೂ ರಾಜಕೀಯ ಪ್ರಭಾರ ಬೀರಿ ತಮ್ಮ ವಶ ಮಾಡಿಕೊಂಡಿದ್ದಾರೆ. ಸದ್ಯ ಜೋಷಿ ಆಪ್ತರ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ವಿವಿಯ ನಿವೃತ್ತ ಸಹಾಯಕ ಆಡಳಿತಾಧಿಕಾರಿ ಎಸ್.ಈಶ್ವರಪ್ಪ, ಅರ್ಹರಿಗೆ ಸಿಗಬೇಕಾದ ಹುದ್ದೆಗಳು ಪುಡಾರಿಗಳು, ರಾಜಕೀಯ ಪ್ರಭಾವಿಗಳಿಗೆ ಸಿಗುತ್ತಿವೆ. ರಾಜಕೀಯ ಪ್ರಭಾವ ಬೀರಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಎರಡೆರಡು ಬಾರಿ ಸದಸ್ಯರಾಗುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದರಾಮಯ್ಯ ಮನವಿಗೂ ಜಗ್ಗದ ಜಿ.ಟಿ.ದೇವೇಗೌಡ!

    ಸಿದ್ದರಾಮಯ್ಯ ಮನವಿಗೂ ಜಗ್ಗದ ಜಿ.ಟಿ.ದೇವೇಗೌಡ!

    ಬೆಂಗಳೂರು: ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರ ನೇಮಕಾತಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮನವಿಗೂ ಜಗ್ಗದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ಹೊಸ ಸದಸ್ಯರ ನೇಮಕಾತಿಗೆ ಮುಂದಾಗಿದ್ದಾರೆ.

    ಚಾಮುಂಡೇಶ್ವರಿ ಮತಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ನೀಡಿದ್ದ ಇಬ್ಬರು ಹಿರಿಯ ನಾಯಕರು ಸರ್ಕಾರ ರಚನೆಯ ಬಳಿಕವು ಪೈಪೋಟಿಗೆ ತಡೆಹಾಕಿಲ್ಲ. 16 ವಿಶ್ವವಿದ್ಯಾನಿಲಯಗಳ ಸಿಂಡಿಕೇಟ್ ಸದಸ್ಯರನ್ನು ಬದಲಾಯಿಸಲು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಮುಂದಾಗಿದ್ದರು.

    ಜಿ.ಟಿ.ದೇವೇಗೌಡರ ನಡೆಗೆ ಆಕ್ಷೇಪ ವ್ಯಕ್ತಪಡಿಸಿ, ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳಿಗೆ ನಮ್ಮ ಹಿಂದಿನ ಸರ್ಕಾರ ಅವಧಿಯಲ್ಲಿ ಶೈಕ್ಷಣಿಕ ವಲಯದಲ್ಲಿ ಪರಿಣಿತರಾದ ಎಲ್ಲಾ ವರ್ಗದವರನ್ನು ಸಿಂಡಿಕೇಟ್ ಸದಸ್ಯರು/ ವ್ಯವಸ್ಥಾಪನಾ ಮಂಡಳಿ ಸದಸ್ಯರುಗಳನ್ನಾಗಿ ನೇಮಕ ಮಾಡಲಾಗಿದೆ. ಈ ಎಲ್ಲಾ ಸದಸ್ಯರನ್ನು ಬದಲಾವಣೆ ಮಾಡದೆ ಮುಂದುವರೆಸುವಂತೆ ಕೋರುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಾಜಿ ಸಿಎಂ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದರು.

    ಸಿದ್ದರಾಮಯ್ಯ ಅವರ ಮನವಿಗೂ ಜಗ್ಗದ ಜಿ.ಟಿ.ದೇವೇಗೌಡ, ಹಳೇ ಸರ್ಕಾರದ ನಾಮನಿರ್ದೇಶನ ಮುಂದುವರಿಕೆ ಅಸಾಧ್ಯ. ಹೀಗಾಗಿ ಹಿಂದಿನ ಸಿಂಡಿಕೇಟ್ ಸದಸ್ಯರ ನೇಮಕಾತಿ ರದ್ದುಗೊಳಿಸಿ, ಹೊಸದಾಗಿ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ.

  • ಸಿದ್ದರಾಮಯ್ಯ- ಜಿ.ಟಿ.ದೇವೇಗೌಡ ನಡುವೆ ಮತ್ತೇ ಶುರುವಾಯ್ತು ಜಟಾಪಟಿ

    ಸಿದ್ದರಾಮಯ್ಯ- ಜಿ.ಟಿ.ದೇವೇಗೌಡ ನಡುವೆ ಮತ್ತೇ ಶುರುವಾಯ್ತು ಜಟಾಪಟಿ

    ಬೆಂಗಳೂರು: ಚಾಮುಂಡೇಶ್ವರಿ ವಿಧಾನಸಭೆ ಮತ ಕ್ಷೇತ್ರದಲ್ಲಿ ಭಾರೀ ಪೈಪೋಟಿ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರ ನಡುವೆ ಮತ್ತೆ ಜಟಾಪಟಿ ಪ್ರಾರಂಭವಾಗಿದೆ.

    ವಿಶ್ವವಿದ್ಯಾನಿಲಯಗಳ ಸಿಂಡಿಕೇಟ್ ಸದಸ್ಯರ ಬದಲಾವಣೆಗೆ ಮುಂದಾಗಿರುವ ಜಿ.ಟಿ.ದೇವೇಗೌಡರ ನಡೆಗೆ ಆಕ್ಷೇಪ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.

    ಪತ್ರದಲ್ಲಿ ಏನಿದೆ?: ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳಿಗೆ ನಮ್ಮ ಹಿಂದಿನ ಸರ್ಕಾರ ಅವಧಿಯಲ್ಲಿ ಶೈಕ್ಷಣಿಕ ವಲಯದಲ್ಲಿ ಪರಿಣಿತರಾದ ಎಲ್ಲಾ ವರ್ಗದವರನ್ನು ಸಿಂಡಿಕೇಟ್ ಸದಸ್ಯರು/ ವ್ಯವಸ್ಥಾಪನಾ ಮಂಡಳಿ ಸದಸ್ಯರುಗಳನ್ನಾಗಿ ನೇಮಕ ಮಾಡಲಾಗಿದೆ. ಈ ಎಲ್ಲಾ ಸದಸ್ಯರನ್ನು ಬದಲಾವಣೆ ಮಾಡದೆ ಮುಂದುವರೆಸುವಂತೆ ಕೋರುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪತ್ರದಲ್ಲಿ ಮನವಿ ಮಾಡಿದ್ದಾರೆ.

  • ಲೈಬ್ರರಿ, ಲ್ಯಾಬ್‍ಗಳಲ್ಲಿ ವಿದ್ಯಾರ್ಥಿನಿಯರ ಮೈ, ಕೈ ಮುಟ್ಟಿ ಪ್ರಾಧ್ಯಾಪಕನಿಂದ ಲೈಂಗಿಕ ದೌರ್ಜನ್ಯ!

    ಲೈಬ್ರರಿ, ಲ್ಯಾಬ್‍ಗಳಲ್ಲಿ ವಿದ್ಯಾರ್ಥಿನಿಯರ ಮೈ, ಕೈ ಮುಟ್ಟಿ ಪ್ರಾಧ್ಯಾಪಕನಿಂದ ಲೈಂಗಿಕ ದೌರ್ಜನ್ಯ!

    ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಮತ್ತೊಂದು ಕರ್ಮಕಾಂಡ ಬೆಳಕಿಗೆ ಬಂದಿದೆ. ವಿವಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಉಮೇಶ್ ನಾಯ್ಕ್ ವಿದ್ಯಾರ್ಥಿಗಳಿಗೆ ಲೈಂಗಿಕ ಮತ್ತು ಮಾನಸಿಕ ದೌರ್ಜನ್ಯ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ಲೆಕ್ಚರರ್ ಬಗ್ಗೆ ವಿದ್ಯಾರ್ಥಿನಿಯರು ವಿಶ್ವವಿದ್ಯಾನಿಲಯದ ಉಪಕುಲಪತಿ, ರಿಜಿಸ್ಟ್ರಾರ್ ಮತ್ತು ಸ್ಪರ್ಶ್ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಸಾಕಷ್ಟು ಬಾರಿ ದೂರು ನೀಡಿದ್ದರೂ ವಿದ್ಯಾರ್ಥಿಗಳಿಗೆ ಆಡಳಿತ ತನಿಖೆ ನಡೆಸಲಿಲ್ಲ. ಈಗ ಕಾಮುಕ ಪ್ರಾಧ್ಯಾಪಕನ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

    ಕ್ಲಾಸ್ ನಲ್ಲಿ ಹಿಡನ್ ಕ್ಯಾಮೆರಾ ಇಟ್ಟಿದ್ದೇನೆಂದು ಪಾಧ್ಯಾಪಕ ಬೆದರಿಸುತ್ತಿದ್ದು, ದೂರು ನೀಡಿದರೆ ದಲಿತ ದೌರ್ಜನ್ಯ ಕೇಸ್ ದಾಖಲಿಸುತ್ತೇನೆಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

    ಲೈಬ್ರರಿ ಮತ್ತು ಲ್ಯಾಬ್ ಗಳಲ್ಲಿ ಉಮೇಶ್ ವಿದ್ಯಾರ್ಥಿನಿಯರ ಮೈ, ಕೈ ಮುಟ್ಟಿ ಲೈಂಗಿಕ ದೌರ್ಜನ್ಯ ನೀಡಿದ್ದು, ವಿಶ್ವ ವಿದ್ಯಾಲಯ ಮಾತ್ರ ಜಾಣ ಮೌನ ವಹಿಸಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ದೂರು ಕೊಡಲು ಮುಂದಾದ ವಿದ್ಯಾರ್ಥಿನಿಯರಿಗೆ ಡಾ. ಉಮೇಶ್ ಕಾಲ್ ಮಾಡಿ ಬೆದರಿಕೆ ಹಾಕಿದ್ದು, ಬೆದರಿಕೆಯ ಆಡಿಯೋಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

  • ಹಾಸ್ಟೆಲ್ ಖಾಲಿ ಮಾಡುವಂತೆ ಹೇಳಿದ್ದಕ್ಕೆ ಆಕ್ರೋಶಗೊಂಡ ವಿದ್ಯಾರ್ಥಿಗಳಿಂದ ವಾಹನಗಳಿಗೆ ಬೆಂಕಿ! ಪರಿಸ್ಥಿತಿ ಉದ್ವಿಗ್ನ

    ಹಾಸ್ಟೆಲ್ ಖಾಲಿ ಮಾಡುವಂತೆ ಹೇಳಿದ್ದಕ್ಕೆ ಆಕ್ರೋಶಗೊಂಡ ವಿದ್ಯಾರ್ಥಿಗಳಿಂದ ವಾಹನಗಳಿಗೆ ಬೆಂಕಿ! ಪರಿಸ್ಥಿತಿ ಉದ್ವಿಗ್ನ

    ಲಕ್ನೋ: ಬೇಸಿಗೆ ರಜೆ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಲಯ ಖಾಲಿ ಮಾಡುವಂತೆ ಹೇಳಿದ್ದಕ್ಕೆ, ಆಕ್ರೋಶಗೊಂಡ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪ್ರತಿಭಟನೆ ವಿಕೋಪಕ್ಕೆ ತಿರುಗಿ ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆ ಉತ್ತರ ಪ್ರದೇಶದ ಅಲಹಾಬಾದ್‍ನ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆದಿದೆ.

    sಅಲಹಾಬಾದ್ ವಿಶ್ವವಿದ್ಯಾನಿಲಯದ ಅಧಿಕಾರಿ ರಾಮ್ ಸೇವಕ್ ಸುಬೇರವರು ಹಾಸ್ಟೆಲ್‍ನ ವಿದ್ಯಾರ್ಥಿಗಳಿಗೆ ತಮ್ಮ ಕೊಠಡಿಗಳನ್ನು ಖಾಲಿ ಮಾಡುವಂತೆ ಸೋಮವಾರ ತಿಳಿಸಿದ್ದರು. ಒಂದು ವಾರದೊಳಗೆ ತಮ್ಮ ಎಲ್ಲಾ ವಸ್ತುಗಳ ಸಮೇತ ಖಾಲಿ ಮಾಡಬೇಕು, ಇಲ್ಲವಾದಲ್ಲಿ ಪೊಲೀಸರ ಸಹಾಯದಿಂದ ಜೂನ್ 12ರಂದು ಹೊರಹಾಕಲಾಗುತ್ತದೆ ಎಂದು ಹೇಳಿದ್ದರು.

    ಈ ಹೇಳಿಕೆಗೆ ಹಾಸ್ಟೆಲ್‍ನ ವಿದ್ಯಾರ್ಥಿಗಳು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಮಂಗಳವಾರ ಮಧ್ಯಾಹ್ನ ಯೂನಿಯನ್ ಆವರಣದ ಬಳಿ ವಿಶ್ವವಿದ್ಯಾನಿಲಯದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪ್ರತಿಭಟನೆ ಹಿಂಸಾರೂಪಕ್ಕೆ ತೆರಳಿದೆ. ಆವರಣದಿಂದ ಹೊರಗಡೆ ಬಂದ ಪ್ರತಿಭಟನಾಕಾರರು ಏಕಾಏಕಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಕೆಲವು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

    ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಸಶಸ್ತ್ರ ಮೀಸಲು ಪಡೆ ತಂಡ ಮತ್ತು ಹೆಚ್ಚಿನ ಸಂಖ್ಯೆಯ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸ್ಥಳಕ್ಕೆ ಬಂದ ಇವರು ಪ್ರತಿಭಟನಾಕಾರನ್ನು ಬೆನ್ನಟ್ಟಿ ಚದುರಿಹೋಗುವಂತೆ ಮಾಡಿದ್ದಾರೆ. ಅಲ್ಲದೇ ಹಾಸ್ಟೆಲ್‍ನಲ್ಲಿ ಹುಡುಕಾಟ ಮುಂದುವರಿಸಿದ್ದಾರೆ. ಪ್ರತಿಭಟನೆ ನಡೆಸಿದ ಎಲ್ಲಾ ವಿದ್ಯಾರ್ಥಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

    ಈ ವೇಳೆ ಮಾತನಾಡಿದ ಅಲಹಾಬಾದ್ ಎಸ್ಪಿ ಬ್ರಿಜೇಶ್ ಶ್ರೀವತ್ಸವ್‍ರವರು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳನ್ನು ಶೀಘ್ರವೇ ಬಂಧಿಸಲಾಗುವುದೆಂದು ತಿಳಿಸಿದ್ದಾರೆ. ಈ ಗಲಭೆಯಲ್ಲಿ ಉತ್ತರ ಪ್ರದೇಶ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಸಂಪೂರ್ಣ ಜಖಂಗೊಂಡಿದ್ದು, ಪೊಲೀಸ್ ಜೀಪ್ ಮತ್ತು ಬೈಕ್‍ಗಳು ಸುಟ್ಟು ಕರಕಲಾಗಿವೆ ಎಂದು ಮಾಹಿತಿ ನೀಡಿದ್ದಾರೆ.

    ಕಳೆದ ವರ್ಷ ವಿಶ್ವವಿದ್ಯಾನಿಲಯವು ಅಲಹಾಬಾದ್ ಹೈಕೋರ್ಟ್ ನಿರ್ದೇಶನದಂತೆ ಹಲವು ವಿದ್ಯಾರ್ಥಿಗಳನ್ನು ಹಾಸ್ಟೆಲ್‍ನಿಂದ ಹೊರಹಾಕಿತ್ತು. ಈ ವೇಳೆ ವಿದ್ಯಾರ್ಥಿಗಳು ಹಾಸ್ಟೆಲ್ ಸೇರಿದ ವಸ್ತುಗಳಿಗೆ ಹಾನಿಮಾಡಿ ಹೋಗಿದ್ದರು. ಈ ವರ್ಷ ಪುನಃ ಅದೇ ರೀತಿ ತೊಂದರೆ ಆದರೆ ಕ್ರಮ ಕೈಗೊಳ್ಳಲಾಗುತ್ತದೆ ವಿವಿ ತಿಳಿಸಿತ್ತು ಎಂದು ತಿಳಿದು ಬಂದಿದೆ.