Tag: ವಿಶ್ವನಾಥ್

  • ಕಾಶಿ ವಿಶ್ವನಾಥನನ್ನ ಬಿಜೆಪಿ ವಿಶ್ವನಾಥ ಎನ್ನಬೇಡಿ: ಕೆ.ಎಸ್ ಈಶ್ವರಪ್ಪ

    ಕಾಶಿ ವಿಶ್ವನಾಥನನ್ನ ಬಿಜೆಪಿ ವಿಶ್ವನಾಥ ಎನ್ನಬೇಡಿ: ಕೆ.ಎಸ್ ಈಶ್ವರಪ್ಪ

    ರಾಯಚೂರು: ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ (Kashi Vishwanath Temple) ಮಂದಿರ ಒಡೆದು ಮಸೀದಿ ಕಟ್ಟಿದ್ದರು ವಾರಣಾಸಿ ನ್ಯಾಯಾಲಯದ ತೀರ್ಪು ಸಂತೋಷ ತಂದಿದೆ. ಬಿಜೆಪಿ ರಾಮ ಅಂತ ಕೆಲ ಕಾಂಗ್ರೆಸ್ ನವರು ಕರೆಯುತ್ತಿದ್ದರು. ಈ ತೀರ್ಪಿನ ಮೂಲಕ ಬಿಜೆಪಿ ಕಾಶಿ ವಿಶ್ವನಾಥ ಎಂದು ಕರೆಯಬೇಡಿ. ಇಲ್ಲಿನ ಮುಸ್ಲಿಮರು ನಾವು ಅಣ್ಣ-ತಮ್ಮಂದಿರು. ಕಾಂಗ್ರೆಸ್‌ನವರು ಒಡೆದಾಳುವ ನೀತಿ ಮಾಡುತ್ತಿದ್ದಾರೆ, ನಮ್ಮನ್ನ ಒಡೆಯಬೇಡಿ ಅಂತ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

    ರಾಯಚೂರಿನಲ್ಲಿ (Raichur) ಮಾತನಾಡಿದ ಅವರು, ಔರಂಗಜೇಬನ ಕಾಲದಲ್ಲಿ ದೇವಾಲಯ ಒಡೆದು ಮಸೀದಿ ಕಟ್ಟಿದ್ದರು. ನೆಲಮಾಳಿಗೆಯಲ್ಲಿ ಹಿಂದೂಗಳ 10 ಮೂರ್ತಿ ಸಿಕ್ಕಿದೆ. 7 ದಿನ ಹಿಂದೂಗಳು ಪೂಜಿಸಲು ನ್ಯಾಯಾಲಯ ಅವಕಾಶ ಕೊಟ್ಟಿರುವುದು ಸಂತೋಷದ ವಿಷಯ. ಜೈಶ್ರೀರಾಮ ಅಂತ ಕರೆಯುತ್ತಿದ್ದೆವು ತೀರ್ಪಿನಿಂದ ಈಗ ಹರಹರ ಮಹಾದೇವ ಅಂತ ಕೆರೆಯುತ್ತೇವೆ. ವಾರಣಾಸಿ ನ್ಯಾಯಾಲಯ ತೀರ್ಪು ಎಲ್ಲರಿಗೂ ಸಂತೋಷ ತಂದಿದೆ. ಅಲ್ಲಿನ ಮುಸ್ಲಿಮರು ಹೈಕೋರ್ಟ್‌ಗೆ ಹೋಗ್ತೀವಿ ಅಂತಿದ್ದಾರೆ. ಅವರು ಎಲ್ಲಿಗಾದ್ರೂ ಹೋಗಲಿ ಅಭ್ಯಂತರವಿಲ್ಲ ಎಲ್ಲಾ ದಾಖಲೆಗಳು ನಮ್ಮ ಪರ ಇವೆ. ಮುಸ್ಲಿಂ ಪರ ವಕೀಲರಿಗೆ ಹೇಳುತ್ತೇನೆ ದಾಖಲೆಗಳು ನಮ್ಮ ಪರ ಇರುವುದರಿಂದ ತೀರ್ಪು ಒಪ್ಪಿಕೊಳ್ಳಬೇಕು ಅಂತ ಹೇಳಿದರು.

    ಕಾಶಿ ವಿಶ್ವನಾಥ ದೇವಾಲಯದ ಪುನರ್ ನಿರ್ಮಾಣ ಆಗಬೇಕು. ಇನ್ನೂ ಕೆಳಗಡೆ ಅರ್ಧ ಮಂದಿರವಿದೆ. ನೀವು ನಮ್ಮ ಗುಲಾಮರು ಅಂತ ತೋರಿಸಲು ಮಂದಿರದ ಮೇಲೆ ಮಸೀದಿ ಕಟ್ಟಿದ್ದಾರೆ. ಕಾಶಿ ವಿಶ್ವನಾಥ ಟ್ರಸ್ಟ್ ನವರು ಮಂದಿರ ಪುನರ್ ನಿರ್ಮಾಣ ಮಾಡಲು ಮುಂದಾಗಬೇಕು ಅನ್ನೋದು ನಮ್ಮ ಅಪೇಕ್ಷೆ.ಇದನ್ನ ಯಾವುದೇ ಕಾರಣಕ್ಕೂ ರಾಜಕಾರಣಕ್ಕೆ ಎಳೆಯಬೆಡಿ ಎಂದರು. ಇದನ್ನೂ ಓದಿ: ಮೈಸೂರಿಗೂ ಕಾಲಿಟ್ಟ ಧ್ವಜ ದಂಗಲ್- ಪ್ರತಾಪ್ ಸಿಂಹ ವಿರೋಧದ ಬೆನ್ನಲ್ಲೇ ಟಿಪ್ಪು ಬಾವುಟ ತೆರವು

    ಯಾವ ಕಾರಣಕ್ಕೂ ಹಿಂದೂ ಸಮಾಜ ಒಡೆಯಬೇಡಿ. ಬಿಜೆಪಿಯ ಕಾಶಿ ವಿಶ್ವನಾಥ ಅನ್ನಬೇಡಿ. ಮುಸ್ಲಿಮರಿಗೆ ಏನ್ ಅವಕಾಶ ಸಿಗಬೇಕು ಅದನ್ನ ಕೋರ್ಟ್ ತೀರ್ಮಾನ ಮಾಡುತ್ತೆ. ಮಂದಿರ ಧ್ವಂಸ ಮಾಡಿದರೂ ನೆಲಮಾಳಿಗೆಯನ್ನ ಧ್ವಂಸ ಮಾಡಲು ಆಗಿಲ್ಲ. ದೇವನಾಗರಿ ಲಿಪಿ ಇರೋದು ಅಲ್ಲಿ ಗೊತ್ತಾಗಿದೆ. ಕಾಶಿಯಲ್ಲಿ ಮೂಲ ಮಂದಿರವನ್ನ ಪುನರ್ ಪ್ರತಿಷ್ಠಾಪನೆ ಮಾಡಬೇಕು.ಇಡೀ ಹಿಂದೂ ಸಮಾಜ ತೀರ್ಪನ್ನ ಸ್ವಾಗತ ಮಾಡುತ್ತದೆ.ಎಲ್ಲರೂ ಒಟ್ಟಾಗಿ ಭವ್ಯ ಮಂದಿರ ನಿರ್ಮಾಣ ಮಾಡೋಣ ಎಂದು ಈಶ್ವರಪ್ಪ ಹೇಳಿದರು.

  • ‘ಪರಿಷತ್’ನಲ್ಲಿ ಕನಸಿನ ರಾಣಿ ಮಾಲಾಶ್ರೀ ಕುರಿತು ಹಾಸ್ಯ ಚರ್ಚೆ

    ‘ಪರಿಷತ್’ನಲ್ಲಿ ಕನಸಿನ ರಾಣಿ ಮಾಲಾಶ್ರೀ ಕುರಿತು ಹಾಸ್ಯ ಚರ್ಚೆ

    ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕನ್ನಡ ಹೆಸರಾಂತ ನಟಿ, ಕನಸಿನ ರಾಣಿ ಮಾಲಾಶ್ರೀ ಕುರಿತಾಗಿ ಬಿಸಿಬಿಸಿ ಚರ್ಚೆಯಾಗಿದೆ. ವಿಧಾನ ಪರಿಷತ್ (Vidhana Parishad) ನಲ್ಲಿ ಈ ಚರ್ಚೆ ನಡೆದಿದ್ದು, ಉಮಾಶ್ರೀ (Umashree) ಸೇರಿದಂತೆ ಹಲವರು ಇದರಲ್ಲಿ ಭಾಗಿಯಾಗಿದ್ದರು. ಅಷ್ಟಕ್ಕೂ ಮಾಲಾಶ್ರೀಯನ್ನು ನೆನಪಿಸಿಕೊಂಡಿದ್ದು ಬಿಜೆಪಿಯ ಸದಸ್ಯ ವಿಶ್ವನಾಥ್ (Vishwanath) ಎನ್ನುವುದು ವಿಶೇಷ.

    ವಿಧೇಯಕದ ಮೇಲಿನ ಚರ್ಚೆ ವೇಳೆ ಉಮಾಶ್ರೀ ಹೆಸರಿನ ಬದಲಾಗಿ, ಬಾಯ್ತಪ್ಪಿ ಮಾಲಾಶ್ರೀ (Malashree) ಅವರ ಹೆಸರು ಹೇಳಿದರು ವಿಶ್ವನಾಥ್. ಮಾಲಾಶ್ರೀ ಹೆಸರು ಕೇಳಿ ಸಭಾಪತಿಗಳಿಗೆ ಒಂದು ರೀತಿಯಲ್ಲಿ ಅಚ್ಚರಿ ಆಯಿತು. ಹಾಗಾಗಿ ಮಾಲಾಶ್ರೀ ಅವರನ್ನು ಈಗೇಕೆ ನೆನಪಿಸಿಕೊಂಡಿರಿ ಎಂದು ತಮಾಷೆಯಾಗಿಯೇ ವಿಶ್ವನಾಥ್ ಅವರನ್ನು ಕೇಳಿದರು.  ಈ ವೇಳೆ ಮಧ್ಯ ಪ್ರವೇಶ ಮಾಡಿದ ತೇಜಸ್ವಿನಿ ಗೌಡ, ಭಾರತದಲ್ಲಿ ಹೇಮಾಮಾಲಿನಿ ಹೇಗೆ ಕನಸಿನ ಕನ್ಯೆ ಎಂದು ಹೆಸರು ಪಡೆದಿದ್ರೊ, ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ಮಾಲಾಶ್ರೀ ನಟನೆಯಿಂದ ಹೆಸರು ಮಾಡಿದ್ರು ಎಂದರು. ಮಾತು ಮುಂದುವರೆಸಿದ ತೇಜಸ್ವಿನಿಗೌಡ  ನಾಯಕಿಯಾಗಲು ಸೌಂದರ್ಯದ ಮಾನದಂಡ ಬದಲು ನಟನೆಯ ಮಾನದಂಡ ಆಗಿದ್ದರೆ, ಉಮಾಶ್ರೀಯವರು ನಾಯಕಿಯಾಗಿ ಹಲವು ಚಿತ್ರದಲ್ಲಿ ನಟಿಸಬಹುದಿತ್ತು ಎಂದರು.

    ಈ ವೇಳೆ ಎದ್ದು ನಿಂತ ಉಮಾಶ್ರೀ, ನನ್ನ ನಟನೆಯ ಬಗ್ಗೆ ಮಾತನಾಡಿದ್ದಕ್ಕೆ ಧನ್ಯವಾದ. ನಾನು ರಂಗಭೂಮಿಯಿಂದ ಬಂದವಳು. ರಂಗಭೂಮಿಯಲ್ಲಿ ನಾಯಕಿ ಪಾತ್ರ ಮಾಡಿದ್ದೇನೆ. ಆದರೆ ಸಿನಿಮಾದಲ್ಲಿ ಹಲವು ವಿಭಾಗ ಇದೆ. ನಾಯಕಿ, ಸಹ ನಟಿ, ಹಾಸ್ಯ ನಟಿ, ಪೋಷಕ ನಟಿ ಅಂತ. ನನಗೆ ನಾಯಕಿ ಆಗಿಲ್ಲ ಅನ್ನೋ ನೋವು ಇತ್ತು. ಆದರೆ ಗಿರೀಶ್ ಕಾಸರವಳ್ಳಿಯವರು ನನಗೆ ಗುಲಾಬಿ ಟಾಕೀಸ್ ಚಿತ್ರದಲ್ಲಿ ನಾಯಕಿ ನಟಿಯ ಅವಕಾಶ ನೀಡಿದ್ರು. ಗುಲಾಬಿ ಟಾಕೀಸ್ ಚಿತ್ರದಿಂದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ನಾಯಕಿ ಪ್ರಶಸ್ತಿ ಬಂತು. ನನಗೆ ಬೆಂಬಲ ನೀಡಿದ ಕರ್ನಾಟಕ ಜನತೆ, ಕರ್ನಾಟಕ ಚಿತ್ರ ರಂಗಕ್ಕೆ ಧನ್ಯವಾದ ಎಂದು ಹೇಳಿದರು ಉಮಾಶ್ರೀ.

    ಈ ವೇಳೆ ಮಧ್ಯೆ ಪ್ರವೇಶ ಮಾಡಿದ ಸಚಿವ ಎಚ್ ಕೆ ಪಾಟೀಲ್, ನಟಿ ಉಮಾಶ್ರೀಯವರ ಒಡಲಾಳ ನಾಟಕ ನೋಡಿದ್ರೆ ಎಂತಹ ಅದ್ಬುತ ಕಲಾವಿದೆ ಎಂದು ಗೊತ್ತಾಗಲಿದೆ. ನಮ್ಮ ಭಾಗದಲ್ಲಿ ಉಮಾಶ್ರೀ ಈ ಪಾತ್ರದ ಮೂಲಕ ನಾಯಕರಾಗಿಯೇ ಇದ್ದರು. ನಮ್ಮ ನಾಯಕಿ ಸೋನಿಯಾಗಾಂಧಿಯವರಿಗೆ ಒಡಲಾಳ ನಾಟಕವನ್ನ ತೋರಿಸಿದ್ವಿ. ಆ ನಂತರ ಉಮಾಶ್ರಿಯವರನ್ನ ಭೇಟಿ ಮಾಡಿಸಿದಾಗ ಆ ನಾಟಕದಲ್ಲಿ ಪಾತ್ರ ಮಾಡಿರುವವರು ಇವರೇನಾ ಎಂದು ಮೂರು ಬಾರಿ ಕೇಳಿದ್ರು ಎಂದರು.

    ಹೀಗೆ ಮಾಲಾಶ್ರೀ ಬಿಟ್ಟು ಉಮಾಶ್ರೀ ನಟನೆಯ ಬಗ್ಗೆ ಪರಿಷತ್ ನಲ್ಲಿ ಮೆಚ್ಚುಗೆ ವ್ಯಕ್ತ ಪಡಿಸಲಾಯಿತು. ಮತ್ತೆ ಹಾಸ್ಯ ಮಾಡಿದ ಸಭಾಪತಿ, ಈಗ ಯಾಕೆ ಮಾಲಾಶ್ರೀ ನೆನಪು ‌ಎಂದು ಮತ್ತೆ ಕೇಳಿದರು. ಕಲಾಸಕ್ತಿ ಹುಣಸೆಕಾಯಿ ಇದ್ದ ಹಾಗೆ ಎಂದು ಹಾಸ್ಯ ಮಾಡಿದರು ವಿಶ್ವನಾಥ್. ಹೀಗೆ ಹಾಸ್ಯ ರೂಪದಲ್ಲಿ ವಿಧೇಯಕದ ವೇಳೆ ಚರ್ಚೆಯಾಗಿ ಮಾಲಾಶ್ರೀ ಮತ್ತು  ಉಮಾಶ್ರೀ ಹೆಸರು ಪ್ರಸ್ತಾಪವಾಯಿತು.

  • ವಿಧಾನ ಪರಿಷತ್‍ನಲ್ಲಿ ಗುಂಡಿನ ಗಮ್ಮತ್ತಿನ ಬಗ್ಗೆ ಚರ್ಚೆ- ನಗೆಗಡಲಲ್ಲಿ ತೇಲಿದ ಸದನ

    ವಿಧಾನ ಪರಿಷತ್‍ನಲ್ಲಿ ಗುಂಡಿನ ಗಮ್ಮತ್ತಿನ ಬಗ್ಗೆ ಚರ್ಚೆ- ನಗೆಗಡಲಲ್ಲಿ ತೇಲಿದ ಸದನ

    ಬೆಂಗಳೂರು: ಬಜೆಟ್ (Budget) ಮೇಲಿನ ಭಾಷಣದ ಚರ್ಚೆ ಗುಂಡಿನತ್ತ ತಿರುಗಿ ವಿಧಾನ ಪರಿಷತ್ (Vidhana Parishad) ಕಲಾಪದಲ್ಲಿ ಕೆಲ ಕಾಲ ಗುಂಡಿನ ಮತ್ತಿನ ಗಮ್ಮತ್ತಾಯಿತು. ಗುಂಡಿನ ಚರ್ಚೆಗೆ ಇಡೀ ಸದನವೇ ನಗೆಗಡಲಲ್ಲಿ ತೇಲಾಡಿತು. ಸರ್ವ ರೋಗಕ್ಕೂ ಸಾರಾಯಿ ಮದ್ದು ಅಂತ ಮಾತಿದೆ ಎಂದು ಗುಂಡಿನ ಬಗೆಗಿನ ಚರ್ಚೆಯನ್ನು ಹಾಸ್ಯದ ರೀತಿಯಲ್ಲಿ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ (H Vishwanath) ಸಮರ್ಥನೆ ಮಾಡಿಕೊಂಡರು.

    ವಿಧಾನ ಪರಿಷತ್ ವಿತ್ತೀಯ ಕಾರ್ಯಕಲಾಪದಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮೊದಲಿಗರಾಗಿ ಮಾತನಾಡಿದ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್, ಕಾಂಗ್ರೆಸ್ ಬಜೆಟ್ ಬೆಂಬಲಿಸಿಕೊಂಡು ಮಾತನಾಡಿದರು. ಶಾಸನ ಸಭೆಗೆ ಬರೋದು ಜನರ ಸಮಸ್ಯೆ, ದುಃಖಗಳ ಬಗ್ಗೆ ಚರ್ಚೆ ಮಾಡುವುದಕ್ಕೆ. ಆದರೆ ಇವತ್ತು ವ್ಯವಸ್ಥೆ ಬದಲಾಗಿದೆ ಅಂತ ಕಳವಳ ವ್ಯಕ್ತಪಡಿಸಿದರು.

    ಈ ವೇಳೆ ಮಾತನಾಡುವಾಗ ಗುಂಡಿನ ಚರ್ಚೆಗೆ ವಿಷಯ ತಿರುಗಿತು. ಅತಿ ಹೆಚ್ಚು ಸರಕು ಮತ್ತು ಸೇವಾ ತೆರಿಗೆ (GST) ಕಟ್ಟುವುದು ನಾವು. ಜನ ಬೆಳಗ್ಗೆ ಎದ್ದರೆ ಜಿಎಸ್‍ಟಿ ಕಟ್ಟಬೇಕು. ಹಾಲು, ಪೇಪರ್ ಸೇರಿ ಎಲ್ಲದ್ದಕ್ಕೂ ಜಿಎಸ್‍ಟಿ. ನಾವು ರಾತ್ರಿ ಮಲಗೋವರೆಗೂ ಜಿಎಸ್‍ಟಿ ಕಟ್ಟುತ್ತೇವೆ ಎಂದರು.

    ಈ ವೇಳೆ ಗುಂಡಿನ ಬಗ್ಗೆ ಹೇಳಲಿಲ್ಲವಲ್ಲ ಎಂದು ಬಿಜೆಪಿ ಸದಸ್ಯರು ವಿಶ್ವನಾಥ್ ಕಾಲೆಳೆದರು. ಈ ವೇಳೆ ಸಮ್ಮಿಶ್ರ ಸರ್ಕಾರದ ಪತನದ ವಿಚಾರ ಪ್ರಸ್ತಾಪ ಮಾಡಿದ ವಿಶ್ವನಾಥ್, ಸಮ್ಮಿಶ್ರ ಸರ್ಕಾರದ ಪತನ ಸಮಯದಲ್ಲಿ ವೈಎ ನಾರಾಯಣಸ್ವಾಮಿ ಮನೆಯಲ್ಲಿ ಸೇರುತ್ತಿದ್ದೆವು. ಸಮ್ಮಿಶ್ರ ಸರ್ಕಾರ ಪತನಕ್ಕೆ ನಾರಾಯಣಸ್ವಾಮಿ ಮನೆಯಲ್ಲಿ ಸೇರುವಾಗ ಗುಂಡು ಹೊಡೆಯುತ್ತಿದ್ದೆವು ಎಂದ ಬಿಜೆಪಿ (BJP) ಸದಸ್ಯರ ಕಾಲೆಳೆದರು. ಇದನ್ನೂ ಓದಿ: ಸರ್ಕಾರದಿಂದ ವೆಬ್ ಸೀರೀಸ್ ಪ್ರಶಸ್ತಿ ಘೋಷಿಸಿದ ಸಚಿವ ಅನುರಾಗ್ ಠಾಕೂರ್

    ನಾರಾಯಣಸ್ವಾಮಿ (Narayanaswamy) ಮನೆಯಲ್ಲಿ ಎಣ್ಣೆ ಹೊಡೆದಿದ್ದೇವೆ ಎಂದಿದ್ದ ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಛಲವಾದಿ ನಾರಾಯಣಸ್ವಾಮಿ, ಯಾವ ನಾರಾಯಣಸ್ವಾಮಿ ಎಂದು ವಿಶ್ವನಾಥ್ ಹೇಳಬೇಕು. ನಾನು ಈ ಎಣ್ಣೆ ವಿಚಾರದಲ್ಲಿ ಇಲ್ಲ ಎಂದರು. ಈ ವೇಳೆ ಸದನದಲ್ಲಿ ಹಾಸ್ಯದ ಹೊನಲು ಹರಿಯಿತು.

    ವಿಶ್ವನಾಥ್ ಮಾತಿಗೆ ಸದನದಲ್ಲಿ 10 ನಿಮಿಷ ಗುಂಡಿನ ಬಗ್ಗೆ ಚರ್ಚೆಯಾಯಿತು. ತೇಜಸ್ವಿನಿಗೌಡ, ರವಿಕುಮಾರ್, ಭಾರತಿ ಶೆಟ್ಟಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಹಾಸ್ಯಭರಿತ ಎಣ್ಣೆ ಬಗ್ಗೆ ಚರ್ಚೆಯಾಯಿತು. ಇದನ್ನೂ ಓದಿ: ಬಿಎಸ್‍ವೈ ಭೇಟಿಯಾಗಿ ಆಶೀರ್ವಾದ ಪಡೆದ್ರು ಸಿ.ಟಿ ರವಿ!

    ನಂತರ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ನಾನು ವಿಶ್ವನಾಥ್ ಜೊತೆಗೆ ಇದ್ದೆವು. ವಿಶ್ವನಾಥ್ ಈಗ ಗುಂಡು ಹೊಡೆಯುವುದು ಬಿಟ್ಟಿದ್ದಾರೆ. ಬಜೆಟ್ ಬಗ್ಗೆ ಮಾತನಾಡುವಾಗ ಲಾಟರಿ, ಸಾರಾಯಿ ನಿಷೇಧ ಮಾಡಿದ್ದು ಸರ್ಕಾರಕ್ಕೆ ಹೇಳಿ ಎಂದು ಕಿಚಾಯಿಸಿದರು.

    ಈ ವೇಳೆ ಮಾತನಾಡಿದ ಬಿಜೆಪಿ ಸದಸ್ಯ ರವಿಕುಮಾರ್ ಮಧ್ಯದ ಸುಂಕ ಹೆಚ್ಚಾಗಿದೆ. ಮದ್ಯಪ್ರಿಯರ ಬಗ್ಗೆ ಕಾಳಜಿಯಿಂದ ಇದರ ಬಗ್ಗೆಯೂ ಬೆಳಕು ಚೆಲ್ಲಲಿ ಎಂದರು. ತೇಜಸ್ವಿನಿಗೌಡ ಮಾತನಾಡಿ, ಇದರ ಬಗ್ಗೆ ಈಗ ಬೆಳಕನ್ನ ಚೆಲ್ಲಲು ಆಗುವುದಿಲ್ಲ. ಇದು ರಾತ್ರಿಯಲ್ಲಿ ನಡೆಯುವ ವಿಷಯ ಎಂದು ಹಾಸ್ಯ ಚಟಾಕಿ ಹಾರಿಸಿದರು. ಭಾರತಿ ಶೆಟ್ಟಿ ಮಾತನಾಡಿ, ಗುಂಡು ಹೊಡೆದವರ ಜೊತೆ ನಾವು ಬದುಕುತ್ತಿದ್ದೇವೆ ಎಂದರು.

    ಬಿಜೆಪಿ ಸದಸ್ಯರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಭಾ ನಾಯಕ ಬೋಸರಾಜ್, ಗುಂಡು ಹಾನಿಕರ ಎಂದು ಅದನ್ನ ಕಡಿವಾಣ ಹಾಕಬೇಕೆಂದು ಅದರ ಮೇಲೆ ಸುಂಕ ಹೆಚ್ಚು ಮಾಡಿದ್ದೇವೆ ಎಂದು ಅಬಕಾರಿ ಸುಂಕ ಹೆಚ್ಚಳ ಸಮರ್ಥಿಸಿಕೊಂಡರು.

    ನಂತರ ಮಾತನಾಡಿದ ವಿಶ್ವನಾಥ್, ಗುಂಡಿನ ಬಗ್ಗೆ ಚರ್ಚೆ ವೇಳೆ ಮಾತಾಡುತ್ತಿದ್ದ ಭಾರತಿ ಶೆಟ್ಟಿ, ತೇಜಸ್ವಿನಿಗೌಡ ಇಬ್ಬರಿಗೂ ಟಾಂಗ್ ಕೊಟ್ಟರು. ಗುಂಡು ಹೊಡೆಯದೆ ಇರುವ ಇವರಿಗೆ ಇಷ್ಟು ಗುಂಡಿಗೆ ಇರೋದಾದರೆ ಗುಂಡು ಹಾಕೋ ನಮಗೆ ಎಷ್ಟು ಗುಂಡಿಗೆ ಇರಬೇಕು ಎಂದು ಹಾಸ್ಯ ಚಟಾಕಿ ಹಾರಿಸಿದರು.

    ನಾವು ಗೆದ್ದಾಗಲೂ ಕುಡಿಯುತ್ತೇವೆ. ಸೋತಾಗಲೂ ಕುಡಿಯುತ್ತೇವೆ. ಸತ್ತಾಗಲೂ ಕುಡಿಯುತ್ತೇವೆ. ಸರ್ವ ರೋಗಕ್ಕೂ ಸಾರಾಯಿ ಮದ್ದು ಅಂತ ಮಾತಿದೆ ಎಂದು ಗುಂಡಿನ ಬಗೆಗಿನ ಚರ್ಚೆಯನ್ನು ಹಾಸ್ಯದ ರೀತಿ ಸಮರ್ಥನೆ ಮಾಡಿಕೊಂಡರು ಸದನ ನಗೆಗಡಲಲ್ಲಿ ತೇಲೀತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡಿಕೆಶಿ ಭೇಟಿಯಾದ ಹೆಚ್. ವಿಶ್ವನಾಥ್

    ಡಿಕೆಶಿ ಭೇಟಿಯಾದ ಹೆಚ್. ವಿಶ್ವನಾಥ್

    ಬೆಂಗಳೂರು: ರಾಜ್ಯದ ಹಿತಕ್ಕಾಗಿ ಪ್ರಣಾಳಿಕೆ ಸಂಬಂಧ ವಿಶ್ವನಾಥ್ (H Vishwanath) ಜೊತೆ ಚರ್ಚೆ ಮಾಡಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು.

    ಬಿಜೆಪಿ ಎಂಎಲ್‍ಸಿ ಹೆಚ್. ವಿಶ್ವನಾಥ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ವಿಶ್ವನಾಥ್ ಇಬ್ಬರು ಯೂತ್ ಕಾಂಗ್ರೆಸ್‍ನಲ್ಲಿ (Congress) ಒಟ್ಟಿಗೆ ಕೆಲಸ ಮಾಡಿದವರು. ಅನೇಕ ಸಂಪುಟದಲ್ಲಿ ಒಟ್ಟಿಗೆ ಸಚಿವರಾಗಿ ಕೆಲಸ ಮಾಡಿದ್ದೇವೆ. ಅವರಿಗೆ ಬಹಳ ಐಡಿಯಾಗಳಿವೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಿತಕ್ಕಾಗಿ ಪ್ರಣಾಳಿಕೆ ಸಂಬಂಧ ಅವರ ಜೊತೆ ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದರು.

    ವಿಶ್ವನಾಥ್ ಅವರು ಇಂಡಿಪೆಂಡೆಂಟ್ ಮ್ಯಾನ್ ಆಗಿದ್ದು, ಸೌಹಾರ್ದಯುತವಾಗಿ ಭೇಟಿ ಆಗಿದ್ದಾರೆ. ರಾಜಕೀಯ ಏನು ಮಾತನಾಡಿಲ್ಲ ಎಂದ ಅವರು, ಊಹಾಪೋಹಕ್ಕೆ ನಾನು ಉತ್ತರ ಕೊಡಲ್ಲ. ರಾಜಕೀಯದಲ್ಲಿ ಯಾವುದು ಶಾಶ್ವತವಲ್ಲ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ನಮ್ಮ ಲೀಡರ್‌ಶೀಪ್ ನಮ್ಮ ಸಿದ್ಧಾಂತ ಒಪ್ಪಿ ಯಾರು ಬೇಕಾದರು ಬರಬಹುದು ಎಂದು ಬೇರೆ ಪಕ್ಷದ ನಾಯಕರಿಗೆ  ಆಹ್ವಾನಿಸಿದರು.

    ಚುನಾವಣೆ ಸಮಯದಲ್ಲಿ ತಿಂಗಳಲ್ಲಿ ಎರಡು ಬಾರಿ ಪ್ರಧಾನಿ ಮೋದಿ ರಾಜ್ಯಕ್ಕೆ ಬರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರಧಾನಿ ಮೋದಿ ಅವರು ತಿಂಗಳಿಗೆ ಎರಡು ಬಾರಿ ಯಾಕೆ, ರಾಜ್ಯಕ್ಕೆ ಪ್ರತಿದಿನ ಬರಲಿ. ಅಷ್ಟೇ ಯಾಕೆ ಇಲ್ಲೆ ಇರಲಿ. ಪ್ರಧಾನಿ ಮೋದಿ ಅವರಿಗೆ ಏನು ಗೌರವ ಕೊಡಬೇಕು ನಾವು ಕೊಡುತ್ತೇವೆ. ಇವಾಗ ರಾಜ್ಯದಲ್ಲಿ 40% ಕಮಿಷನ್ ಇದೆ. ಮೋದಿ ಬಂದ ಮೇಲೆ 50% ಆಗಬಹುದು ಅಷ್ಟೇ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಗುಜರಾತ್‌ಗೆ ತೆರಳಲಿದ್ದಾರೆ ಬಿಎಸ್‌ವೈ

    ಅಧ್ಯಕ್ಷ ಸ್ಥಾನ ನಿಭಾಯಿಸಲು ಡಿಕೆಶಿ ಹೆಣಗಾಡುತ್ತಿದ್ದಾರೆ ಎಂಬ ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪರಮೇಶ್ವರ್ ಅವರು ನನ್ನ ಮೇಲಿನ ಅನುಕಂಪದಿಂದ ಹಾಗೆ ಹೇಳಿದ್ದಾರೆ. ದಿನಕ್ಕೆ ಇರೋದು 24 ಗಂಟೆ ಮಾತ್ರ ಆಗಿದ್ದರಿಂದ ಕಾಲ ಇನ್ನೊಂದಿಷ್ಟು ಹೆಚ್ಚಿದ್ದರೆ ಹೆಚ್ಚು ಕೆಲಸ ಮಾಡಬಹುದಿತ್ತು. ನಾನು ದಿನಾಲೂ ಮಲಗೋದು ರಾತ್ರಿ 2-3 ಗಂಟೆ ಆಗುತ್ತದೆ. ಹೀಗಾಗಿ ಆರೋಗ್ಯದ ಬಗ್ಗೆ ಗಮನ ಕೊಡಿ ಎಂದು ಪರಮೇಶ್ವರ್ ಹೇಳ್ತಾ ಇರ್ತಾರೆ. ಹಾಗೆ ನನ್ನ ಮೇಲಿನ ಅನುಕಂಪದಿಂದ ಹಾಗೆ ಹೇಳಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಮುಸ್ಲಿಂ ವಿದ್ಯಾವಂತರ‍್ಯಾರೂ ನಾಲ್ಕು ಮದುವೆಯಾಗಲ್ಲ – ನಿತಿನ್ ಗಡ್ಕರಿ

    Live Tv
    [brid partner=56869869 player=32851 video=960834 autoplay=true]

  • ಹಳ್ಳಿಹಕ್ಕಿ ಮರಳಿ ಗೂಡು ಸೇರುತ್ತಾ? ನಿನ್ನೆ ಖರ್ಗೆ, ಇವತ್ತು ಸಿದ್ದು ಭೇಟಿಯ ಗುಟ್ಟೇನು?

    ಹಳ್ಳಿಹಕ್ಕಿ ಮರಳಿ ಗೂಡು ಸೇರುತ್ತಾ? ನಿನ್ನೆ ಖರ್ಗೆ, ಇವತ್ತು ಸಿದ್ದು ಭೇಟಿಯ ಗುಟ್ಟೇನು?

    ಬೆಂಗಳೂರು: ವಿಧಾನಸಭೆ ಚುನಾವಣೆ ಬರುತ್ತಿದ್ದಂತೆ ವಲಸಿಗರ ನಡೆ ಕುತೂಹಲ ಮೂಡಿಸುತ್ತಿದೆ. ಬಿಜೆಪಿ (BJP) ಪರಿಷತ್ ಸದಸ್ಯ ಎಚ್. ವಿಶ್ವನಾಥ್ (H Vishwanath) ಸದ್ದಿಲ್ಲದೇ ಇಬ್ಬರು ಘಟಾನುಘಟಿ ಕಾಂಗ್ರೆಸ್ ನಾಯಕರನ್ನು ಬ್ಯಾಕ್ ಟು ಬ್ಯಾಕ್ ಭೇಟಿ ಮಾಡಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ವಿಶ್ವನಾಥ್ ಬಿಜೆಪಿ ತೊರೆದು ಕಾಂಗ್ರೆಸ್ (Congress) ಸೇರ್ತಾರಾ ಅನ್ನೋ ಅನುಮಾನ ಹುಟ್ಟಿಸಿದೆ.

    ಕಳೆದ 3 ವರ್ಷಗಳಿಂದ ಬಿಜೆಪಿಯಲ್ಲಿರುವ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಈಗ ಮರಳಿ ಗೂಡಿಗೆ ಸೇರಲು ಕಸರತ್ತು ನಡೆಸ್ತಿದ್ದಾರಾ? ಬಿಜೆಪಿ ತೊರೆದು ಮಾತೃಪಕ್ಷ ಸೇರ್ತಾರಾ ವಿಶ್ವನಾಥ್? ಈ ಅನುಮಾನ ಬರಲು ಕಾರಣ ನಿನ್ನೆ ಮತ್ತು ಇವತ್ತು ವಿಶ್ವನಾಥ್ ತೋರಿದ ನಡೆ. ವಿಶ್ವನಾಥ್ ಅವರು, ನಿನ್ನೆಯಷ್ಟೇ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun kharge) ಅವರನ್ನು ಭೇಟಿ ಮಾಡಿ ಅನೇಕರ ಹುಬ್ಬು ಮೇಲೆ ಹೋಗುವಂತೆ ಮಾಡಿದ್ದರು.

    ಅದರ ಬೆನ್ನಲ್ಲೇ ಇವತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡುವ ಮೂಲಕ ತೀವ್ರ ಕುತೂಹಲ ಮೂಡಿಸಿದ್ದಾರೆ. ಇವತ್ತು ಬೆಳಗ್ಗೆ ಆರೋಗ್ಯ ವಿಚಾರಿಸುವ ನೆಪದಲ್ಲಿ ಸಿದ್ದರಾಮಯ್ಯ (Siddaramaiah) ಅವರ ಸರ್ಕಾರಿ‌ ನಿವಾಸಕ್ಕೆ ವಿಶ್ವನಾಥ್ ಭೇಟಿ ಕೊಟ್ಟರು. ಅರ್ಧ ಗಂಟೆಗೂ ಹೆಚ್ಚು ಕಾಲ ಸಿದ್ದರಾಮಯ್ಯ ಅವರ ಜತೆ ವಿಶ್ವನಾಥ್ ಮಾತುಕತೆ ನಡೆಸಿದರು.

    ಅಷ್ಟಕ್ಕೂ ವಿಶ್ವನಾಥ್, ಸಿದ್ದರಾಮಯ್ಯನವರ ನಡೆಯಿಂದ ಬೇಸತ್ತು ಕಾಂಗ್ರೆಸ್ ತೊರೆದು ಜೆಡಿಎಸ್ (JDS) ಸೇರಿದ್ದರು. ನಂತರ ಜೆಡಿಎಸ್‌ನಲ್ಲೂ ವೈಮನಸ್ಸು ಬಂದು ಸಮ್ಮಿಶ್ರ ಸರ್ಕಾರ ಕೆಡವಿ 16 ಜನ ವಲಸಿಗರ ಜತೆ ತಾವೂ ಬಿಜೆಪಿಗೆ ಸೇರ್ಪಡೆ ಆಗಿದ್ದರು. ಆದರೆ ಬಿಜೆಪಿಯಲ್ಲಿ ಮಾತ್ರ ಈವರೆಗೂ ಅವರಿಗೆ ಸಚಿವ ಸ್ಥಾನ ಸಿಗಲಿಲ್ಲ. ಅವರ ಹಿರಿತನಕ್ಕೆ ಮಾನ್ಯತೆಯೂ ಸಿಗಲಿಲ್ಲ. ಸಾಲದ್ದಕ್ಕೆ ಉಪಚುನಾವಣೆಯಲ್ಲಿ ಸಹ ಸೋತರು.

    ಬಹಳ ಕಸರತ್ತು ನಡೆಸಿ ಸಾಹಿತ್ಯ ಕೋಟಾದಿಂದ ಪರಿಷತ್‌ಗೆ ನಾಮನಿರ್ದೇಶನಗೊಂಡರು. ಆದರೆ ಬಿಜೆಪಿಯಲ್ಲಿದ್ರೂ ಅಲ್ಲಿನ ನಾಯಕರನ್ನು ಸತತವಾಗಿ ಟೀಕಿಸುತ್ತಲೇ ಬಂದರು. ಸದ್ಯ ಅವರು ಈಗ ಬಿಜೆಪಿಯಿಂದಲೂ ಮಾನಸಿಕವಾಗಿ ದೂರವಾಗಿದ್ದಾರೆ. ಇನ್ನು, ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ತೀರಾ ಎಂಬ ಪ್ರಶ್ನೆಗೆ ಅಸ್ಪಷ್ಟ ಉತ್ತರದ ಮೂಲಕವೇ ಪಕ್ಷ ಬಿಡುವ ಸುಳಿವನ್ನು ನೀಡಿದ್ದಾರೆ. ಇದನ್ನೂ ಓದಿ: ತವರಿಗೆ ಮತ್ತೆ ಮರಳುತ್ತಾ ಹಳ್ಳಿಹಕ್ಕಿ- ವಿಶ್ವನಾಥ್‍ಗೆ ಈಗ ಖರ್ಗೆಯೇ ಆಸರೆ!

    ವಿಶ್ವನಾಥ್ ಕಾಂಗ್ರೆಸ್‌ನ ಘಟಾನುಘಟಿ ನಾಯಕರನ್ನು ಭೇಟಿ ಮಾಡಿರೋದು, ಅವರು ಪಕ್ಷಾಂತರ ಮಾಡ್ತಾರೆ ಅಂತ ದಟ್ಟವಾಗಿಯೇ ಚರ್ಚೆ ನಡೀತಿದೆ. ತಮ್ಮ ಪುತ್ರನ ರಾಜಕೀಯ ಭವಿಷ್ಯ ಗಟ್ಟಿ ಮಾಡುವ ಪ್ರಯತ್ನವೂ ಇದರಲ್ಲಿ ಸೇರಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಆಸ್ತಿ ವಿಚಾರಕ್ಕೆ ಸೋದರ ಸಂಬಂಧಿಯ ತಲೆಯನ್ನೇ ಕಡಿದ್ರು – ಸೆಲ್ಫಿ ತೆಗೆದು ವಿಕೃತಿ ಮೆರೆದ್ರು

    Live Tv
    [brid partner=56869869 player=32851 video=960834 autoplay=true]

  • ಮತ್ತೆ ಕಾಂಗ್ರೆಸ್ ಸೇರುವ ಮುನ್ಸೂಚನೆ ಕೊಟ್ಟ ಹೆಚ್. ವಿಶ್ವನಾಥ್

    ಮತ್ತೆ ಕಾಂಗ್ರೆಸ್ ಸೇರುವ ಮುನ್ಸೂಚನೆ ಕೊಟ್ಟ ಹೆಚ್. ವಿಶ್ವನಾಥ್

    ಮಡಿಕೇರಿ: ಮತ್ತೆ ಕಾಂಗ್ರೆಸ್ ಸೇರುವ ಮುನ್ಸೂಚನೆಯನ್ನು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ನೀಡಿದ್ದು, ನನ್ನ ಝಂಡಾ ಬದಲಾಗಬಹುದು ಆದರೆ ನನ್ನ ಅಜೆಂಡಾ ಬದಲಾಗಲು ಸಾಧ್ಯವಿಲ್ಲ ಎಂದು ತಿಳಿಸಿದರು.

    ಹುಣಸೂರಿನಲ್ಲಿ ಕೆಂಪೇಗೌಡ ಜಯಂತಿ ವೇಳೆ ಡಿ.ಕೆ. ಶಿವಕುಮಾರ್ ಹಾಗೂ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಸ್ಥಳೀಯ ಶಾಸಕರೊಬ್ಬರ ಮನೆಯಲ್ಲಿ ಊಟ ಮಾಡಿದ ವಿಚಾರವಾಗಿ ಮಾತನಾಡಿದ ಅವರು ಅದರಲ್ಲಿ ಯಾವ ವಿಶೇಷ ಏನೂ ಇಲ್ಲ. ನಾನು, ಡಿ.ಕೆ.ಶಿವಕುಮಾರ್ ಅವರು ಮೊದಲಿನಿಂದಲೂ ಕಾಂಗ್ರೆಸ್‍ನ ಕಾರ್ಯಕರ್ತರಾಗಿದ್ದೆವು. ಈ ಪಕ್ಷದಲ್ಲೇ ಇದ್ದು ಅನೇಕ ಜನಪರ ಕೆಲಸವನ್ನು ಮಾಡಿದ್ದೇವೆ ಎಂದರು.

    Congress

    ಈ ದೇಶದ ಜನರು, ಬಡವರ ಪರ ಕಾರ್ಯಕ್ರಮವನ್ನು ಮಾಡುವುದಾಗಿದೆ. ಜಾತ್ಯಾತೀತ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರದ ಜೊತೆ ಕೆಲಸ ಮಾಡಬೇಕು. ಇದು ನನ್ನ ಅಜೆಂಡಾವಾಗಿದೆ. ಹೀಗಾಗಿ ನನ್ನ ಅಜೆಂಡಾವನ್ನು ಯಾವುದೋ ಒಂದು ಝಂಡಾದಲ್ಲಿ ಕುಳಿತುಕೊಂಡು ಕೆಲಸ ಮಾಡುವುದು ಮುಖ್ಯವಾಗಿರುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಆರೋಗ್ಯ ಸರಿಯಿಲ್ಲದೆ ಒದ್ದಾಡುತ್ತಿದ್ದೆ, ಹೀಗಾಗಿ 2 ದಿನ ತಡವಾಗಿದೆ: ವಿ ಸೋಮಣ್ಣ

    ಮುಂದಿನ ನಡೆ ಕಾಂಗ್ರೆಸ್ ಕಡೆಗಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಯಾರಿಗೆ ಗೊತ್ತು. ಸಂಜೆ ಮಳೆ ಬರಬಹುದು ವಾತಾವರಣವೂ ಬದಲಾಗಬಹುದು. ಒತ್ತಾಯ ಬಂದರೆ ಕಾಂಗ್ರೆಸ್‍ಗೂ ಹೋಗಬಹುದು. ಹೇಳಲಾಗುವುದಿಲ್ಲ. ಹೀಗೆ ಆಗಬೇಕು ಹಾಗೇ ಆಗಬೇಕು ಎಂಬ ನಿರ್ಣಯಗಳು ರಾಜಕಾರಣದಲ್ಲಿಲ್ಲ. ರಾಜಕಾರಣ ಈಗ ಯಾವ ರೀತಿಯಾಗಿದೆ ಎಂದು ನಾವು ವೋಟಿಗಾಗಿ ಏನನ್ನು ಬೇಕಾದರು ಮಾಡಬಹುದು ಎನ್ನುವ ಥರವಾಗಿದೆ ಎಂದರು.

    ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಕ್ಕೆ ಯಾವ ಸಿದ್ಧತೆಗಳು ಇಲ್ಲ, ಅದಕ್ಕೆನು ದಂಡುದಾಳಿಯನ್ನು ಕರೆದುಕೊಂಡು ಹೋಗಬೇಕೆ ಎಂದು ಪ್ರಶ್ನಿಸಿದ ಅವರು, ಹೋಗಬೇಕು ಅಂತ ಅವಕಾಶ ಮತ್ತು ಒತ್ತಾಯಗಳು ಬಂದರೆ ಹೋಗುತ್ತೇನೆ ಅದರಲ್ಲಿ ಏನು ಇದೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರಿಗೆ ಇನ್ಮುಂದೆ ಸಾಂಪ್ರದಾಯಿಕ ವೈದ್ಯ ಪದ್ಧತಿ ಹಬ್ ಆಗೋ ಅವಕಾಶ- ಯೋಗಿ ಆದಿತ್ಯನಾಥ್

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮಯ್ಯ ಕಾಂಗ್ರೆಸ್ ಪಾಲಿನ ಭಸ್ಮಾಸುರ: ಎಚ್. ವಿಶ್ವನಾಥ್

    ಸಿದ್ದರಾಮಯ್ಯ ಕಾಂಗ್ರೆಸ್ ಪಾಲಿನ ಭಸ್ಮಾಸುರ: ಎಚ್. ವಿಶ್ವನಾಥ್

    ಮೈಸೂರು: ಸಿದ್ದರಾಮಯ್ಯ ಯಾರನ್ನು ಬೆಳೆಯಲು ಬಿಡುವುದಿಲ್ಲ. ಅವರು ಕಾಂಗ್ರೆಸ್ ಪಾಲಿನ ಭಸ್ಮಾಸುರ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಕಿಡಿಕಾರಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಮತ್ತೆ ಸ್ಪರ್ಧಿಸಿದರೆ 49 ಸಾವಿರ ಮತದಿಂದ ಸೋಲುತ್ತಾರೆ. ಇದರಿಂದಾಗಿ ಈಗ ಬೇರೆ ಕ್ಷೇತ್ರ ಹುಡುಕುತ್ತಿದ್ದಾರೆ ಎಂದ ಅವರು ಸಿದ್ದರಾಮಯ್ಯನಿಂದ ಅಹಿಂದದವರು ಮುಳುಗಿ ಹೋದರು. ಅಹಿಂದದವರನ್ನು ಉಪಯೋಗಿಸಿಕೊಂಡು ಸಿದ್ದರಾಮಯ್ಯ ದಡಕ್ಕೆ ಬಂದರು. ಸಿದ್ದರಾಮಯ್ಯ ಕುರುಬರನ್ನು ಬೆಳೆಸಲಿಲ್ಲ. ಎಲ್ಲರನ್ನು ಮುಗಿಸಿದರು. ಈಗ ಕಾಂಗ್ರೆಸ್‍ನ ಹಳ್ಳ ಹಿಡಿಸುವ ಕೆಲಸ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಎಸ್.ಆರ್. ಪಾಟೀಲ್ ಅವರನ್ನು ಮುಗಿಸಿದ್ದು ಸಿದ್ದರಾಮಯ್ಯ. ಅವರಿಗೆ ಟಿಕೆಟ್ ಕೊಡಲಿಲ್ಲ. ಚಿಮ್ಮನಕಟ್ಟಿ ಮನೆ ಹಾಳಾಗಿದ್ದು ಸಿದ್ದರಾಮಯ್ಯರಿಂದ. ಯಾರ ಮನೆ ಹಾಳಾದರೂ ಸರಿ ನೀವು ಚೆನ್ನಾಗಿರಬೇಕು ಅಷ್ಟೇ. ಇದೇ ನಿಮ್ಮ ಸಿದ್ಧಾಂತ. ನಿನಗೆ ದೆಹಲಿಯಲ್ಲಿ ಯಾರು ಗೊತ್ತಿದ್ದರೂ ಖರ್ಗೆ, ಎಸ್.ಎಂ. ಕೃಷ್ಣ ಸಹಾಯ ಮಾಡಿದಕ್ಕೆ ಕಾಂಗ್ರೆಸ್ ಪಕ್ಷ ಸೇರಿದ್ದು. ನನ್ನನ್ನು ಸಿಎಂ ಇಬ್ರಾಹಿಂರನ್ನು ಸಿದ್ದರಾಮಯ್ಯ ಜೀವ ಇರುವವರೆಗೂ ನೆನಪಿಸಿಕೊಳ್ಳಬೇಕು. ಆದರೆ ಕೃತಜ್ಞತೆಯೇ ಇಲ್ಲದ ಜನ ನಾಯಕ ಅಂದರೆ ಅದು ಸಿದ್ದರಾಮಯ್ಯ ಮಾತ್ರ ಎಂದು ಕುಟುಕಿದರು. ಇದನ್ನೂ ಓದಿ: ಅಸಮಾಧಾನ ಹೊರ ಹಾಕಿದ ಬೆನ್ನಲ್ಲೇ ಡಿಕೆಶಿಯನ್ನು ಭೇಟಿಯಾದ ಆನಂದ್ ಸಿಂಗ್

    H. Vishwanath

    ನನ್ನ ಸಂಪರ್ಕದಲ್ಲಿ ಬೇರೆ ಪಕ್ಷದ ಶಾಸಕರು ಸಚಿವರು ಇದ್ದಾರೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ 15 ಜನರಿಗೆ ಎಷ್ಟು ಕೋಟಿ ಕೊಟ್ಟು ಖರೀದಿ ಮಾಡುತ್ತಿದ್ದೀರಾ. ನಾವು 17 ಜನ ಹೋದಾಗ ಏನೆಲ್ಲಾ ಮಾತನಾಡಿದ್ದೀರಿ. ರಮೇಶ್ ಕುಮಾರ್ ಕೈಲಿ ಏನೆಲ್ಲಾ ಮಾಡಿಸಿದ್ದೀರಿ ಎನ್ನುವುದು ನೆನಪಿದೆಯಾ ಎಂದು ಪ್ರಶ್ನಿಸಿದ ಅವರು, ನಿಮ್ಮ ಜೊತೆ ಮಲಗಿದರೆ ಪಾವಿತ್ರ್ಯತೆ ನಮ್ಮ ಜೊತೆ ಮಲಗಿದರೆ ಅನೈತಿಕತೆನಾ ಎಂದು ತಿರುಗೇಟು ನೀಡಿದರು. ಸಿದ್ದರಾಮಯ್ಯ ಅವರು ಜನರನ್ನು ದಡ್ಡರು ಅಂದುಕೊಂಡಿದ್ದಾರೆ. ಆದರೆ ಜನರಿಗೆ ಎಲ್ಲಾ ಗೊತ್ತಿದೆ ಅವರೇ ನಿಮಗೆ ಪಾಠ ಕಲಿಸುತ್ತಾರೆ ಎಂದರು. ಇದನ್ನೂ ಓದಿ: ಕುಡಿತ ಬಿಟ್ಟರೆ ಮಾತ್ರ ಮನೆಗೆ ಬರುತ್ತೇನೆ ಎಂದಿದ್ದಕ್ಕೆ ಪತ್ನಿಯನ್ನೇ ಕೊಲೆಗೈದ

  • ಸಿದ್ದರಾಮಯ್ಯಗೆ ಮಾತಿನ ಮೇಲೆ ಹಿಡಿತ ಇಲ್ಲ: ವಿಶ್ವನಾಥ್ ಕಿಡಿ

    ಸಿದ್ದರಾಮಯ್ಯಗೆ ಮಾತಿನ ಮೇಲೆ ಹಿಡಿತ ಇಲ್ಲ: ವಿಶ್ವನಾಥ್ ಕಿಡಿ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತಿನ ಮೇಲೆ ಹಿಡಿತ ಇಲ್ಲದಂತೆ ಮಾತನಾಡುತ್ತಾರೆ. ಹಿಂದುತ್ವ ಮತ್ತು ಆರ್‌ಎಸ್‌ಎಸ್ ವಿರೋಧ ಮಾಡಿದರೆ ಅಲ್ಪಸಂಖ್ಯಾತರು ಮತ ಹಾಕುತ್ತಾರೆ ಎಂಬ ಕೆಟ್ಟ ಅಭಿಪ್ರಾಯ ಹೊಂದಿದ್ದಾರೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಇವತ್ತು ಆರ್‌ಎಸ್‌ಎಸ್‌ ಇಲ್ಲದೇ ಹೋಗಿದ್ದರೆ ದೇಶದ ಪರಿಸ್ಥಿತಿ ಏನಾಗುತ್ತಿತ್ತು ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ನಾವೆಲ್ಲರೂ ಮೂಲ ಆರ್‌ಎಸ್‌ಎಸ್‍ನಿಂದ ಬಂದವರು. ನಮಗೆ ಯಾವುದೇ ರೀತಿಯಲ್ಲಿ ಬಹಿರಂಗವಾಗಿ ನೇಣಿಗೆ ಹಾಕಿ, ಕೈ ಕತ್ತರಿಸಿ, ಕಲ್ಲು ಹೊಡೆಯಿರಿ ಎಂದು ಆರ್‌ಎಸ್‌ಎಸ್‌ ಹೇಳಿಲ್ಲ. ಭಾರತ್ ಮಾತಾಕಿ ಜೈ ಎನ್ನಬೇಕು, ವಂದೇ ಮಾತರಂ ಹೇಳಬೇಕು, ನಮ್ಮ ದೇಶಕ್ಕೆ ಯಾವುದೇ ರೀತಿಯ ತೊಂದರೆ ಆದಾಗ ನಾವು ಧ್ವನಿ ಎತ್ತಬೇಕು. ಈ ದಿಸೆಯಲ್ಲಿ ಆರ್‌ಎಸ್‌ಎಸ್‌ ಕೆಲಸ ಮಾಡುತ್ತಿದೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: 18 ತಿಂಗಳ ಬಳಿಕ ಸವದತ್ತಿ ಎಲ್ಲಮ್ಮ ದರ್ಶನಕ್ಕೆ ಅವಕಾಶ- ಕಂಡಿಶನ್ಸ್ ಅಪ್ಲೈ

    ಸಿದ್ದರಾಮಯ್ಯನವರು ಇನ್ನು ಮುಂದೆಯಾದರೂ ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಚಡ್ಡಿಗಳು ಎಂದು ಹೇಳುವುದನ್ನು ನಿಲ್ಲಿಸಬೇಕು. ಬಹುಶಃ ಮೊನ್ನೆ ವಿಧಾನಸಭೆಯಲ್ಲಿ ಅವರ ಪಂಚೆ ಉದುರಿದಾಗ ಈ ಚಡ್ಡಿಯೇ ಅವರ ಮಾನ ಉಳಿಸಿದೆ. ದೇಶದ ಗೌರವ, ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಹೋರಾಟ ಮಾಡಿಕೊಂಡಿರುವ ಸಂಸ್ಥೆಯಿದು. ಒಮ್ಮೆ ಸಿದ್ದರಾಮಯ್ಯನವರು ನಮ್ಮ ಒಟಿಸಿ ಕ್ಯಾಂಪ್‍ಗೆ ಬಂದು ಅಲ್ಲಿನ ಶಿಸ್ತು ದೇಶಭಕ್ತಿಯನ್ನು ಕಲಿಯಲಿ. ಹೀಗೆ ಬಂದರೆ ಅವರ ಮನಃಸ್ಥಿತಿ ಬದಲಾಗುತ್ತದೆ. ದಯಮಾಡಿ ಸಿದ್ದರಾಮಯ್ಯನವರೇ ನೀವು ಒಂದು ತಿಂಗಳ ಮಟ್ಟಿಗೆ ನಮ್ಮ ಆರ್‌ಎಸ್‌ಎಸ್‍ನ ಒಟಿಸಿಗೆ ಬನ್ನಿ ಎಂದಿದ್ದಾರೆ. ಇದನ್ನೂ ಓದಿ: ತಾಲಿಬಾನ್‍ಗೂ, RSSಗೂ ವ್ಯತ್ಯಾಸ ಇದೆ: ಸಿದ್ದರಾಮಯ್ಯಗೆ ಆರಗ ಜ್ಞಾನೇಂದ್ರ ತಿರುಗೇಟು

    ನೀವೆಲ್ಲಾ ತಾಲಿಬಾನ್ ಪರವಾಗಿರುವವರು, ಹಾಗಾಗಿ ಒಮ್ಮೆಯೂ ನೀವು ತಾಲಿಬಾನ್ ವಿರೋಧಿಸಿಲ್ಲ. ತಾಲಿಬಾನ್ ಮನಸ್ಥಿತಿ ಕಾಂಗ್ರೆಸ್‍ನವರಿಗೆ ಇದೆ. ನೀವು ಎಷ್ಟು ಆರ್‌ಎಸ್‌ಎಸ್‌ ಅನ್ನು ಟೀಕೆ ಮಾಡುತ್ತೀರಿ, ನರೇಂದ್ರ ಮೋದಿಯವರನ್ನು ಟೀಕೆ ಮಾಡುತ್ತೀರಿ, ಅಷ್ಟು ಕಪ್ಪು ಚುಕ್ಕೆ ನಿಮಗಾಗುತ್ತದೆ. ನಿಮಗೆ ತುಂಬಾ ಡ್ಯಾಮೇಜ್ ಆಗುತ್ತದೆ. ನೀವು ಹೀಗೆ ಮಾತನಾಡುತ್ತಾ ಹೋದರೆ, ಜನ ನಿಮ್ಮನ್ನು ಲೆಕ್ಕಕ್ಕೆ ಇಟ್ಟಿಕೊಳ್ಳುವುದಿಲ್ಲ. ನೀವು ಸೈಕಲ್, ಜಟಕಾ ಹತ್ತಿ ರಾಜ್ಯ ಸುತ್ತುವ ವೇಳೆಗೆ ನಾವು ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ ಎಂದು ವ್ಯಂಗ್ಯವಾಡಿದ್ದಾರೆ.

  • ಬಿಜೆಪಿ ನಾಯಕರಿಗೆ ಮನವಿ ಸಲ್ಲಿಸಿದ ಶ್ರೀರಾಮಸೇನೆ

    ಬಿಜೆಪಿ ನಾಯಕರಿಗೆ ಮನವಿ ಸಲ್ಲಿಸಿದ ಶ್ರೀರಾಮಸೇನೆ

    ಬೆಂಗಳೂರು: ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿ ಕೇಂದ್ರ ಸಚಿವ ನಾರಾಯಣ ಸ್ವಾಮಿ ಮತ್ತು ಯಲಹಂಕ ಶಾಸಕ ವಿಶ್ವನಾಥ್‍ಗೆ ಶ್ರೀರಾಮಸೇನೆ ಸಂಘಟನೆ ಮುಖಂಡರು ಮನವಿ ಸಲ್ಲಿಸಿದ್ದಾರೆ.

    ಜಾಲಹಳ್ಳಿಯಲ್ಲಿ ನಾರಾಯಣ ಸ್ವಾಮಿಯನ್ನು ಭೇಟಿ ಮಾಡಿ ಶ್ರೀರಾಮ ಸೇನೆ ಬೆಂಗಳೂರು ಘಟಕದ ಮುಖಂಡರು ಮನವಿ ಸಲ್ಲಿಸಿದ್ದಾರೆ. ನೂರಾರು ವರ್ಷಗಳಿಂದ ನಡೆದು ಬಂದ ಸಾರ್ವಜನಿಕ ಗಣೇಶೋತ್ಸವ ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ನಿರ್ಬಂಧ ವಿಧಿಸಿದೆ. ಆದರೆ ಎಲ್ಲಾ ಜೀವನ ಚಟುವಟಿಕೆ ಸಾಮಾನ್ಯ ಸ್ಥಿತಿಗೆ ಮರಳಿದ್ದರೂ ನಿರ್ಬಂಧ ವಿಧಿಸಿದ್ದು ಈ ಹಬ್ಬವನ್ನೇ ಅವಲಂಬಿಸಿರುವ ಸಾವಿರಾರು ಕುಟುಂಬಕ್ಕೆ ಹೊಟ್ಟೆಯ ಮೇಲೆ ಹೊಡೆದ ಹಾಗೆ ಆಗುತ್ತದೆ. ಮೂರ್ತಿ ತಯಾರಕರು ನಾಲ್ಕಾರು ತಿಂಗಳ ಮುಂಚಿತವಾಗಿ ಮೂರ್ತಿ ತಯಾರಿಸುತ್ತಾರೆ. ಅವರ ಸ್ಥಿತಿ ಏನು? ಶಾಮಿಯಾನ, ವಿದ್ಯುತ್ ದೀಪ, ವಾದ್ಯವೃಂದ ಮುಂತಾದವರು ಗಣೇಶೋತ್ಸವವನ್ನೆ ಅವಲಂಬಿತರಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗುತ್ತದೆ ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಹಿಂದೂ ಸಂಘಟನೆಗಳ ಒತ್ತಡಕ್ಕೆ ಮಣಿದ ಸರ್ಕಾರ – ಗಣೇಶೋತ್ಸವಕ್ಕೆ ಷರತ್ತುಬದ್ಧ ಅನುಮತಿ?

    ಕೋವಿಡ್ ನಿಯಮ ಪಾಲಿಸಿ ಹೇಗೆ ಮಾಲ್ ಚಿತ್ರಮಂದಿರ, ಚುನಾವಣೆ, ರಾಜಕೀಯ ಸಮಾವೇಶ, ಶಾಲಾ-ಕಾಲೇಜು ಮುಂತಾದವು ನಡೆಯುತ್ತಿವೆಯೋ ಅದೇ ರೀತಿ ಗಣೇಶೋತ್ಸವ ಆಚರಿಸಲು ಅನುಮತಿ ನೀಡಬೇಕೆಂದು ಆಗ್ರಹಿಸುತ್ತೇವೆ. ನಮ್ಮ ಧಾರ್ಮಿಕ ಆಚರಣೆಗೆ ಚ್ಯುತಿ ಬರದಂತೆ ಕೋವಿಡ್ ನಿಯಮ ಉಲ್ಲಂಘನೆ ಆಗದಂತೆ ತಾವು ಶೀಘ್ರ ನಿರ್ಬಂಧ ಮರಳಿ ಪಡೆಯಬೇಕೆಂದು ಆಗ್ರಹಿಸುತ್ತೇವೆ ಎಂದು ಮನವಿ ಪತ್ರದ ಮೂಲಕ ಸರ್ಕಾರದ ಗಮನಕ್ಕೆ ತರುವಂತೆ ಸಚಿವರು ಮತ್ತು ಶಾಸಕರಿಗೆ ಆಗ್ರಹಿಸಿದ್ದಾರೆ.


    ಈ ಸಂದರ್ಭದಲ್ಲಿ ಬೆಂಗಳೂರು ನಗರ ಅಧ್ಯಕ್ಷರಾದ ಚಂದ್ರಶೇಖರ್ ಹಾಗೂ ಪ್ರಧಾನ ಕಾರ್ಯದರ್ಶಿ ಸುಂದರೇಶ್ ನರ್ಗಲ್, ಸಂಘಟನಾ ಕಾರ್ಯದರ್ಶಿ ಅಮರನಾಥ್ ಮತ್ತು ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಇದನ್ನೂ ಓದಿ: ಸಭೆಯಲ್ಲಿ ಲಸಿಕೆ, ಹಬ್ಬಗಳ ನಡುವೆ ವೈರಸ್ ನಿಯಂತ್ರಣ ಕುರಿತು ಚರ್ಚೆ: ಗೌರವ್ ಗುಪ್ತ

  • ಮಗನಿಂದಲೇ ಯಡಿಯೂರಪ್ಪಗೆ ಈ ಸ್ಥಿತಿ ಬಂತು: ಎಚ್.ವಿಶ್ವನಾಥ್

    ಮಗನಿಂದಲೇ ಯಡಿಯೂರಪ್ಪಗೆ ಈ ಸ್ಥಿತಿ ಬಂತು: ಎಚ್.ವಿಶ್ವನಾಥ್

    ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ 17 ಜನ ಶಾಸಕರು ಬೇಸತ್ತಿದ್ದೆವು. 17 ಜನ ಪಕ್ಷ ತೊರೆದು ಬಿಜೆಪಿಗೆ ಬಂದೆವು. ಇವರು ಚೆನ್ನಾಗಿ ಆಡಳಿತ ಮಾಡಬಹುದು ಎಂದು ಭಾವಿಸಿದ್ದೆವು. ಯಡಿಯೂರಪ್ಪ ಮೇಲೆ ವಿಶ್ವಾಸ ಇತ್ತು. ಹೀಗಾಗಿ ನಾವೆಲ್ಲ ಯಡಿಯೂರಪ್ಪಗೆ ಅವಕಾಶ ಕೊಟ್ಟೆವು. ಯಡಿಯೂರಪ್ಪ ಬಗ್ಗೆ ಈಗಲೂ ನಮಗೆ ಅಷ್ಟೇ ಗೌರವ ಇದೆ. ಯಡಿಯೂರಪ್ಪ ಕುಟುಂಬದ ಹಸ್ತಕ್ಷೇಪ, ಎಲ್ಲ ಇಲಾಖೆಗಳಲ್ಲಿ ಹಸ್ತಕ್ಷೇಪ ಇತ್ತು. ಪುತ್ರ ವಿಜಯೇಂದ್ರ ಹಸ್ತಕ್ಷೇಪದಿಂದ ಸಾಕಾಗಿತ್ತು ಎಂದು ಎಚ್ ವಿಶ್ವನಾಥ್ ಗುಡುಗಿದ್ದಾರೆ.

    ಯಡಿಯೂರಪ್ಪ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ವಿಶ್ವನಾಥ್, ಯಡಿಯೂರಪ್ಪ ಪುತ್ರ ವಿಜಯೇಂದ್ರ ಎಲ್ಲವನ್ನು ನುಚ್ಚುನೂರು ಮಾಡಿದರು. ನಾವೇನಾದರೂ ಹೋದರೆ ವಿಜಯೇಂದ್ರ ಭೇಟಿಯಾಗಿ ಎನ್ನುತ್ತಿದ್ದರು. ನಾನು ವಿಜಯೇಂದ್ರನ ಮುಂದೆ ನಿಲ್ಲಬೇಕೆ? ನಾನು ದೊಡ್ಡವರ ಜೊತೆ ಕೆಲಸ ಮಾಡಿದವನು. ನಾನು ವಿಜಯೇಂದ್ರ ಮುಂದೆ ನಿಲ್ಲಲು ಸಾಧ್ಯವಿಲ್ಲ. ಯಾರಿಗೂ ಗೌರವ ಇಲ್ಲದ ಪರಿಸ್ಥಿತಿ ನಿರ್ಮಾಣ ಮಾಡಿದರು. ಮನೆಯಲ್ಲಿ ನಡೆಯುವ ಭ್ರಷ್ಟಾಚಾರದ ಬಗ್ಗೆ ನಾವೆಲ್ಲ ಹೇಳಿದ್ದೆವು. ಅನೇಕರು ರಾಜೀನಾಮೆ ನೀಡುವುದಾಗಿ ಹೇಳಿದ್ದರು. ತಂದೆಯ ಇಂದಿನ ಸ್ಥಿತಿಗೆ ವಿಜಯೇಂದ್ರನೇ ಕಾರಣ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಭ್ರಷ್ಟ ಮುಖ್ಯಮಂತ್ರಿ ತೆಗೆದು ಭ್ರಷ್ಟನನ್ನು ಮಾಡಿದರೆ ಸಾಮಾನ್ಯ ಜನರಿಗೇನು ಲಾಭ: ಸಿದ್ದರಾಮಯ್ಯ

    ಮಗನ ದುರಹಂಕಾರವೇ ಇದಕ್ಕೆ ಕಾರಣ. ಅಸಂವಿಧಾನಿಕ ವ್ಯಕ್ತಿಯಾದರೂ ಆಡಳಿತ ನಡೆಸಿದ್ದಾನೆ. ಅವನ ಬಳಿಯೇ ಎಲ್ಲ ಫೈಲ್ ಬರುತ್ತಿತ್ತು. ನಾನು ಬಹಿರಂಗವಾಗಿಯೇ ಧ್ವನಿ ಎತ್ತಿದ್ದೆ. ಇಂದು ರಾಜೀನಾಮೆಗೂ ವಿಜಯೇಂದ್ರ ಕಾರಣ. ಎಲ್ಲ ಇಲಾಖೆಯಲ್ಲಿ ವಿಜಯೇಂದ್ರನ ಹಸ್ತಕ್ಷೇಪ ಇತ್ತು. ಅಧಿಕಾರಿಗಳ ವರ್ಗಾವಣೆ, ಟೆಂಡರ್, ನಿಗಮ ಮಂಡಳಿಗೆ ನೇಮಕ ಮಾಡಿದ್ಯಾರು? ಮಂತ್ರಿಗಳು ವಿಜಯೇಂದ್ರ ಎದುರು ನಿಲ್ಲಬೇಕಿತ್ತು. ವಿಜಯೇಂದ್ರ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರಿಗೆ ಅವಕಾಶ ಕೊಡಲಿಲ್ಲ. ಯಡಿಯೂರಪ್ಪ ಮಗನ ಮಾತು ಕೇಳಿ ಕೆಟ್ಟರು ಎಂದು ಕಿಡಿಕಾರಿದರು.

    ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ 17 ಜನ ಅತಂತ್ರರಾಗುವ ಪ್ರಶ್ನೆಯೇ ಇಲ್ಲ. ನಾವು ಯಾವುದೇ ಸಭೆಗಳನ್ನೂ ಮಾಡಲ್ಲ. 17 ಮಂದಿಗೆ ಅನ್ಯಾಯವೂ ಆಗಲ್ಲ. ಮಂತ್ರಿಗಳಾಗೇ ಮುಂದುವರಿಯುತ್ತಾರೆ. ಪುತ್ರ ವ್ಯಾಮೋಹ, ಮನೆಯವರ ಭ್ರಷ್ಟಾಚಾರ ಯಡಿಯೂರಪ್ಪರ ಈ ಸ್ಥಿತಿಗೆ ಕಾರಣ. ಮುಂದೆ ಪಂಚಮಸಾಲಿ ಲಿಂಗಾಯಿತ ನಾಯಕ ಸಿಎಂ ಆದರೆ ಒಳ್ಳೆಯದು ನನ್ನ ಹಾಗೂ ಪ್ರತಾಪ್ ಸಿಂಹ ಪಾಟೀಲ್ ಸೋಲಿಸಿದ್ದು ವಿಜಯೇಂದ್ರ. ಮಗನಿಂದ ಈಗ ತಂದೆ ರಾಜೀನಾಮೆ ಕೊಡುವಂತಾಗಿದೆ ಎಂದು ವಾಗ್ದಾಳಿ ನಡೆಸಿದರು.