Tag: ವಿಶ್ವದಾಖಲೆ

  • ಇದು ಒನ್ ಡೇ ಮ್ಯಾಚು ಕಣೋ, 6-6-2-4-6-6-6-6, 8 ಬಾಲಲ್ಲಿ 42 ರನ್!

    ಇದು ಒನ್ ಡೇ ಮ್ಯಾಚು ಕಣೋ, 6-6-2-4-6-6-6-6, 8 ಬಾಲಲ್ಲಿ 42 ರನ್!

    ಬೆಂಗಳೂರು: ವಿಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರ ಮೊಯೀನ್ ಅಲಿ ಆಕ್ರಮಣಕಾರಿ ಆಟವಾಡಿ ವಿಶ್ವದಾಖಲೆ ಮಾಡಿದ್ದಾರೆ.

    ಮೊಯೀನ್ ಅಲಿ ಆಟದ ತೀವ್ರತೆ ಎಷ್ಟಿತ್ತೆಂದರೆ ಕೇವಲ 10 ನಿಮಿಷದಲ್ಲಿ 14 ಬಾಲಲ್ಲಿ 61 ರನ್ ಗಳಿಸಿದ್ದರು.

    45ನೇ ಓವರ್ ನಿಂದ ಆಕ್ರಮಣಕಾರಿ ಆಟಕ್ಕಿಳಿದ ಕಮಿನ್ಸ್ ಹಾಗೂ ಹೋಲ್ಡರ್ ಎಸೆತಗಳನ್ನು ಮನಸೋಇಚ್ಛೆ ಥಳಿಸಿದರು. ಅದರಲ್ಲೂ ಕೊನೆಯ 8 ಬಾಲ್ ನಲ್ಲಿ 6-6-2-4-6-6-6-6 ಬಾರಿಸಿ 42 ರನ್ ಗಳಿಸಿದರು.

    ಈ ಆಟದ ಮೂಲಕ ಮೊಯೀನ್ ಅಲಿ ಇಂಗ್ಲೆಂಡ್ ಪರ ವೇಗದ ಶತಕ ಸಿಡಿಸಿದ ಆಟಗಾರ ಎಂಬ ಖ್ಯಾತಿಗೂ ಪಾತ್ರರಾದರು. ವಿಂಡೀಸ್ ವಿರುದ್ಧದ ಈ ಪಂದ್ಯವನ್ನು ಇಂಗ್ಲೆಂಡ್ 124 ರನ್ ಗಳಿಂದ ಗೆದ್ದಿತ್ತು. 5 ಪಂದ್ಯಗಳ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆಯಲ್ಲಿದೆ.

  • 50ನೇ  ಟಿ- 20ಯಲ್ಲಿ  ಅರ್ಧಶತಕ ಸಿಡಿಸಿ ವಿಶ್ವದಾಖಲೆ ಬರೆದ ಕೊಹ್ಲಿ

    50ನೇ ಟಿ- 20ಯಲ್ಲಿ ಅರ್ಧಶತಕ ಸಿಡಿಸಿ ವಿಶ್ವದಾಖಲೆ ಬರೆದ ಕೊಹ್ಲಿ

    ಕೊಲಂಬೋ: ಶ್ರೀಲಂಕಾ ವಿರುದ್ಧ ನಡೆದ ಏಕೈಕ ಟಿ-20 ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಭಾರತಕ್ಕೆ ಜಯವನ್ನು ತಂದುಕೊಟ್ಟ ನಾಯಕ ಕೊಹ್ಲಿ ವಿಶ್ವದಾಖಲೆ ಬರೆದಿದ್ದಾರೆ.

    ಹೌದು, ಮೂರು ಮಾದರಿಯ ಕ್ರಿಕೆಟ್‍ನ ಕಡಿಮೆ ಪಂದ್ಯದಲ್ಲಿ 15 ಸಾವಿರ ರನ್ ಪೂರ್ಣಗೊಳಿಸಿ ಮೊದಲ ಆಟಗಾರ ಎನ್ನುವ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. 50 ಟಿ -20, 194 ಏಕದಿನ, 60 ಟೆಸ್ಟ್ ಸೇರಿ ಒಟ್ಟು 304 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.

    ಬುಧವಾರದ ಪಂದ್ಯದಲ್ಲಿ 82 ರನ್(54 ಎಸೆತ, 7 ಬೌಂಡರಿ, 1 ಸಿಕ್ಸರ್) ಹೊಡೆಯುವ ಮೂಲಕ ಕೊಹ್ಲಿ ಟಿ-20 ಪಂದ್ಯದಲ್ಲಿ ಅತಿ ಹೆಚ್ಚು ರನ್ ಹೊಡೆದ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದ್ದಾರೆ.

    ಕೊಹ್ಲಿ 50 ಪಂದ್ಯಗಳಿಂದ 1830 ರನ್ ಹೊಡೆದಿದ್ದರೆ, ನ್ಯೂಜಿಲೆಂಡಿನ ಮಾಜಿ ಆಟಗಾರ ಬ್ರೆಂಡನ್ ಮೆಕ್ಕಲಂ 71 ಪಂದ್ಯಗಳಿಂದ 2140 ರನ್ ಹೊಡೆಯುವ ಮೂಲಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ. ಶ್ರೀಲಂಕಾದ ಮಾಜಿ ಆಟಗಾರ ತಿಲಕರತ್ನೆ ದಿಲ್‍ಶಾನ್ 80 ಪಂದ್ಯಗಳನ್ನು ಆಡುವ ಮೂಲಕ 1889 ರನ್‍ಗಳಿಸಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ನ್ಯೂಜಿಲೆಂಡಿನ ಮಾರ್ಟಿನ್ ಗುಪ್ಟಿಲ್ 61 ಪಂದ್ಯಗಳಿಂದ 1806 ರನ್ ಹೊಡೆಯುವ ಮೂಲಕ ನಾಲ್ಕನೇಯ ಸ್ಥಾನವನ್ನು ಪಡೆದಿದ್ದಾರೆ.

    71 ರನ್ ಗಳಿಸಿದಾಗ ಕೊಹ್ಲಿ ಟಿ 20 ಟೂರ್ನಿಯ ಚೇಸಿಂಗ್ ನಲ್ಲಿ 1 ಸಾವಿರ ರನ್ ಪೂರ್ಣಗೊಳಿಸಿದರು. ಅಷ್ಟೇ ಅಲ್ಲದೇ ಚೇಸಿಂಗ್ ನಲ್ಲಿ ಅತಿ ಹೆಚ್ಚು ರನ್ ಹೊಡೆದಿದ್ದ ನ್ಯೂಜಿಲೆಂಡಿನ್ ಬ್ರೆಂಡನ್ ಮೆಕ್ಕಲಂ ದಾಖಲೆಯನ್ನು ಮುರಿದಿದ್ದಾರೆ. ಮೆಕ್ಕಲಂ ಚೇಸಿಂಗ್ ನಲ್ಲಿ 1006 ರನ್ ಹೊಡೆಯುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದರು.

    82 ರನ್ ಹೊಡೆಯುವ ಮೂಲಕ ಚೇಸಿಂಗ್ ನಲ್ಲಿ ಅತ್ಯಧಿಕ ರನ್ ಹೊಡೆದ ಟೀಂ ಇಂಡಿಯಾದ ನಾಯಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಈ ಹಿಂದೆ 2010ರಲ್ಲಿ ಜಿಂಬಾಬ್ವೆ ವಿರುದ್ಧ ಸುರೇಶ್ ರೈನಾ 72 ರನ್ ಹೊಡೆದಿದ್ದರು.

    ಕೊಹ್ಲಿ 50 ಟಿ-20 ಪಂದ್ಯದ 46 ಇನ್ನಿಂಗ್ಸ್ ಗಳಲ್ಲಿ ಒಟ್ಟು 1830 ರನ್ ಗಳಿಸಿದ್ದಾರೆ. ಔಟಾಗದೇ 90 ರನ್ ಅವರ ಅತ್ಯಧಿಕ ಮೊತ್ತ ಆಗಿದ್ದು, 12 ಬಾರಿ ನಾಟೌಟ್ ಆಗಿದ್ದಾರೆ. 53.82 ಸರಾಸರಿಯಲ್ಲಿ 136.16 ಸ್ಟ್ರೈಕ್ ರೇಟ್ ಹೊಂದಿರುವ ಕೊಹ್ಲಿ 17 ಅರ್ಧತಕ ಸಿಡಿಸಿದ್ದಾರೆ. ಒಟ್ಟು 196 ಬೌಂಡರಿ, 35 ಸಿಕ್ಸ್, 25 ಕ್ಯಾಚ್ ಗಳನ್ನು ಹಿಡಿದಿದ್ದಾರೆ.

    ಇದನ್ನೂ ಓದಿ: ದ್ವಿಶತಕದ ಜೊತೆಯಾಟದ ದಶ ದಾಖಲೆ ಬರೆದ ವಿರಾಟ್ ಕೊಹ್ಲಿ!

     

     

     

  • ಏಕದಿನ ಕ್ರಿಕೆಟ್‍ನಲ್ಲಿ ಧೋನಿಯಿಂದ ಮತ್ತೊಂದು ವಿಶ್ವದಾಖಲೆ!

    ಏಕದಿನ ಕ್ರಿಕೆಟ್‍ನಲ್ಲಿ ಧೋನಿಯಿಂದ ಮತ್ತೊಂದು ವಿಶ್ವದಾಖಲೆ!

    ಕೊಲಂಬೋ: ಟೀಂ ಇಂಡಿಯಾದ ಮಾಜಿ ನಾಯಕ, ವಿಕೆಟ್ ಕೀಪರ್ ಆಗಿರುವ ಮಹೇಂದ್ರ ಸಿಂಗ್ ಧೋನಿ ಏಕದಿನ ಕ್ರಿಕೆಟ್ ನಲ್ಲಿ ವಿಶ್ವದಾಖಲೆ ಬರೆದಿದ್ದಾರೆ.

    ಹೌದು. ಶ್ರೀಲಂಕಾ ವಿರುದ್ಧದ ಐದನೇ ಪಂದ್ಯದಲ್ಲಿ ಚಹಲ್ ಬೌಲಿಂಗ್ ನಲ್ಲಿ ಅಖಿಲಾ ಧನಂಜಯರನ್ನು ಸ್ಟಂಪ್ ಔಟ್ ಮಾಡುವ ಮೂಲಕ ಏಕದಿನ ಕ್ರಿಕೆಟ್ ನಲ್ಲಿ 100 ಸ್ಟಂಪ್ ಮಾಡಿದ ವಿಶ್ವದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರವಾಗಿದ್ದಾರೆ.

    ಕ್ಯಾಂಡಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಎರಡನೇ ಪಂದ್ಯದಲ್ಲಿ ಚಹಲ್ ಬೌಲಿಂಗ್ ನಲ್ಲಿ ಗುಣತಿಲಕ ಅವರನ್ನು ಸ್ಟಂಪ್ ಮಾಡುವ ಮೂಲಕ ಶ್ರೀಲಂಕಾದ ಕುಮಾರ ಸಂಗಕ್ಕಾರ ಅವರ ಸಾಧನೆಯನ್ನು ಧೋನಿ ಸರಿಗಟ್ಟಿದ್ದರು.

    ಇಂದಿನ ಪಂದ್ಯ ಸೇರಿದಂತೆ ಧೋನಿ ಒಟ್ಟು 301 ಪಂದ್ಯಗಳ 296 ಇನ್ನಿಂಗ್ಸ್ ಮೂಲಕ 100 ಸ್ಟಪ್ ಔಟ್ ಮಾಡಿದ್ದಾರೆ. 283 ಕ್ಯಾಚ್ ಗಳನ್ನು ಪಡೆಯುವ ಮೂಲಕ ಒಟ್ಟು 383 ಮಂದಿಯನ್ನು ಧೋನಿ ಔಟ್ ಮಾಡಿದ್ದಾರೆ.

    75 ಸ್ಟಂಪ್ ಔಟ್ ಮಾಡುವ ಮೂಲಕ ಶ್ರೀಲಂಕಾದ ರಮೇಶ್ ಕಲುವಿತರಣ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಪಾಕಿಸ್ತಾನ ಮೋಯಿನ್ ಖಾನ್ 73 ಸ್ಟಂಪ್ ಔಟ್ ಮಾಡಿದ್ದರೆ, ಆಸ್ಟ್ರೇಲಿಯಾದ ಆಡಂ ಗಿಲ್‍ಕ್ರಿಸ್ಟ್ 55 ಸ್ಟಂಪ್ ಔಟ್ ಮಾಡುವ ಮೂಲಕ ಐದನೇ ಸ್ಥಾನದಲ್ಲಿದ್ದಾರೆ.

    4ನೇ ಸ್ಥಾನ: ಅತಿ ಹೆಚ್ಚು ಬ್ಯಾಟ್ಸ್ ಮನ್‍ಗಳನ್ನು ಔಟ್ ಮಾಡಿದ ವಿಕೆಟ್ ಕೀಪರ್‍ಗಳ ಪಟ್ಟಿಯಲ್ಲಿ ಧೋನಿ ನಾಲ್ಕನೇಯ ಸ್ಥಾನದಲ್ಲಿದ್ದಾರೆ. ಸಂಗಕ್ಕಾರ 482(383 ಕ್ಯಾಚ್, 99 ಸ್ಟಂಪ್) ಮಾಡುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಗಿಲ್‍ಕ್ರಿಸ್ಟ್ 472(417 ಕ್ಯಾಚ್, 55 ಸ್ಟಂಪ್) ಇದ್ದಾರೆ. ದಕ್ಷಿಣ ಆಫ್ರಿಕಾದ ಮಾರ್ಕ್ ಬೌಷರ್ 424 ಬಲಿ(402 ಕ್ಯಾಚ್, 22 ಸ್ಟಂಪ್) ಪಡೆಯುವ ಮೂಲಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

    ಸದ್ಯ ಒಟ್ಟು 377 ಮಂದಿಯನ್ನು ಔಟ್ ಮಾಡಿರುವ ಧೋನಿ 2019ರ ವಿಶ್ವಕಪ್ ಕ್ರಿಕೆಟ್‍ವರೆಗೆ ಟೀಂ ಇಂಡಿಯಾವನ್ನು ಪ್ರತಿನಿಧಿಸಿದರೆ ಸಂಗಕ್ಕಾರ ನಿರ್ಮಿಸಿದ ದಾಖಲೆಯನ್ನು ಮುರಿಯುವ ಸಾಧ್ಯತೆಯಿದೆ.

    ಭಾರತದಲ್ಲಿ ಯಾರು ಎಷ್ಟು? ಭಾರತದ ಪರವಾಗಿ ನಯನ್ ಮೊಂಗಿಯಾ 44 ಸ್ಟಂಪ್ ಔಟ್ ಮಾಡಿದ್ದರೆ, ಕಿರಣ್ ಮೊರೆ 27 ಸ್ಟಂಪ್ ಔಟ್ ಮಾಡಿದ್ದಾರೆ. ಚಂದ್ರಕಾಂತ್ ಪಂಡಿತ್ 15 ಸ್ಟಂಪ್ ಮಾಡಿದ್ದರೆ, ರಾಹುಲ್ ದ್ರಾವಿಡ್ 14 ಸ್ಟಂಪ್ ಔಟ್ ಮಾಡಿದ್ದಾರೆ.

    ಇದನ್ನೂ ಓದಿ: ನಾಟೌಟಲ್ಲೂ ಧೋನಿ ವಿಶ್ವ ದಾಖಲೆ!

    https://twitter.com/DHONIism/status/904341019977596928

    https://youtu.be/ZTprzduNDDk

    https://youtu.be/ULWBPEngbpk

    https://youtu.be/B8kTz5cnvgo

  • ಶತಕ ಸಿಡಿಸಿ 2017ರ ಏಕದಿನದಲ್ಲಿ ವಿಶೇಷ ಸಾಧನೆಗೈದ ರನ್ ಮೆಷಿನ್!

    ಶತಕ ಸಿಡಿಸಿ 2017ರ ಏಕದಿನದಲ್ಲಿ ವಿಶೇಷ ಸಾಧನೆಗೈದ ರನ್ ಮೆಷಿನ್!

    ಕೊಲಂಬೋ: ಟೀಂ ಇಂಡಿಯಾ ನಾಯಕ,ರನ್ ಮೆಷಿನ್ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ನಾಲ್ಕನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸುವ ಜೊತೆಗೆ ವಿಶೇಷ ಸಾಧನೆ ನಿರ್ಮಿಸಿದ್ದಾರೆ.

    ಈ ಪಂದ್ಯದಲ್ಲಿ 131 ರನ್ ಹೊಡೆಯುವ ಮೂಲಕ ಕೊಹ್ಲಿ 2017ರ ಅವಧಿಯಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ.

    ದಕ್ಷಿಣ ಆಫ್ರಿಕಾ ಫ್ಲಾಡು ಪ್ಲೆಸಿಸ್ 16 ಪಂದ್ಯಗಳಿಂದ 58.14 ಸರಾಸರಿಯಲ್ಲಿ ಒಟ್ಟು 814 ರನ್ ಹೊಡೆದಿದ್ದರು. ಈಗ ಕೊಹ್ಲಿ 17 ಪಂದ್ಯಗಳಿಂದ ಒಟ್ಟು 907 ರನ್ ಗಳಿಸುವ ಮೂಲಕ ಅತಿ ಹೆಚ್ಚು ಹೊಡೆದ ಆಟಗಾರ ಎನ್ನುವ ಪಟ್ಟವನ್ನು ತನ್ನದಾಗಿಸಿದ್ದಾರೆ. ಕೊಹ್ಲಿ 102.52 ಸ್ಟ್ರೈಕ್ ರೇಟ್, 85.20 ಸರಾಸರಿಯಲ್ಲಿ ಈ ಸಾಧನೆ ಮಾಡಿರುವುದು ವಿಶೇಷ.

    ಇಂಗ್ಲೆಂಡಿನ ಜೋ ರೂಟ್ 14 ಪಂದ್ಯಗಳಿಂದ 71.36 ಸರಾಸರಿಯಲ್ಲಿ 785 ರನ್ ಹೊಡೆಯುವ ಮೂಲಕ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

    ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಏರಲು ಕೊಹ್ಲಿಗೆ ಇನ್ನು ಒಂದು ಶತಕ ಬೇಕಿದೆ. 193 ಪಂದ್ಯಗಳಿಂದ ಕೊಹ್ಲಿ 29 ಶತಕ ಹೊಡೆದಿದ್ದರೆ,  ಆಸ್ಟ್ರೇಲಿಯಾದ ಮಾಜಿ ನಾಯಕ ರಿಕ್ಕಿ ಪಾಟಿಂಗ್ 375 ಪಂದ್ಯಗಳಿಂದ 30 ಶತಕ ಹೊಡೆದಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 463 ಪಂದ್ಯಗಳಿಂದ 49 ಶತಕ ಸಿಡಿಸುವ ಮೂಲಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ.

    38 ಎಸೆತದಲ್ಲಿ 50 ರನ್ ಹೊಡೆದ ಕೊಹ್ಲಿ 76 ಎಸೆತದಲ್ಲಿ ಶತಕ ಹೊಡೆದರು. ಅಂತಿಮವಾಗಿ 131 ರನ್(96 ಎಸೆತ, 17 ಬೌಂಡರಿ, 2 ಸಿಕ್ಸರ್) ಚಚ್ಚುವ ಮೂಲಕ ಮಲಿಂಗಾ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ಔಟಾದರು. ಅತಿ ಹೆಚ್ಚು ರನ್ ಹೊಡೆದ ಸಾಧನೆಯ ಜೊತೆಗೆ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಬೌಲಿಂಗ್ ಮಾಡಿದ್ದಾರೆ.

    ಇದನ್ನೂ ಓದಿ: ನಾಟೌಟಲ್ಲೂ ಧೋನಿ ವಿಶ್ವ ದಾಖಲೆ! 

    ಇದನ್ನೂ ಓದಿ: ಅಮ್ಮಾ.. ಪ್ರೀತಿಯಿಂದ ಹೇಳಿಕೊಡಿ- ಪುಟಾಣಿ ವಿಡಿಯೋ ನೋಡಿ ಕೊಹ್ಲಿ, ಶಿಖರ್, ರಾಬಿನ್ ಉತ್ತಪ್ಪ ಹೀಗಂದ್ರು

  • ಏಕದಿನ ಕ್ರಿಕೆಟ್‍ನಲ್ಲಿ ವಿಶ್ವದಾಖಲೆ ಬರೆಯುವ ಸನಿಹದಲ್ಲಿ  ಧೋನಿ

    ಏಕದಿನ ಕ್ರಿಕೆಟ್‍ನಲ್ಲಿ ವಿಶ್ವದಾಖಲೆ ಬರೆಯುವ ಸನಿಹದಲ್ಲಿ ಧೋನಿ

    ಕ್ಯಾಂಡಿ: ಟೀಂ ಇಂಡಿಯಾದ ಮಾಜಿ ನಾಯಕ, ವಿಕೆಟ್ ಕೀಪರ್ ಆಗಿರುವ ಮಹೇಂದ್ರ ಸಿಂಗ್ ಧೋನಿ ಏಕದಿನ ಕ್ರಿಕೆಟ್ ನಲ್ಲಿ ವಿಶ್ವದಾಖಲೆ ಬರೆಯುವ ಹೊಸ್ತಿಲಿನಲ್ಲಿದ್ದಾರೆ.

    ಹೌದು. ಇನ್ನು ಒಂದು ಸ್ಟಂಪ್ ಔಟ್ ಮಾಡಿದರೆ ಏಕದಿನ ಕ್ರಿಕೆಟ್ ನಲ್ಲಿ 100 ಸ್ಟಂಪ್ ಮಾಡಿದ ವಿಶ್ವದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಲಿದ್ದಾರೆ.

    ಕ್ಯಾಂಡಿಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಎರಡನೇ ಪಂದ್ಯದಲ್ಲಿ ಚಹಲ್ ಬೌಲಿಂಗ್ ನಲ್ಲಿ ಗುಣತಿಲಕ ಅವರನ್ನು ಸ್ಟಂಪ್ ಮಾಡುವ ಮೂಲಕ ಈ ವಿಶ್ವದಾಖಲೆ ಸಾಧನೆಯ ಸಮೀಪ ಬಂದಿದ್ದು ಶ್ರೀಲಂಕಾದ ಕುಮಾರ ಸಂಗಕ್ಕಾರ ಅವರ ಸಾಧನೆಯನ್ನು ಸರಿಗಟ್ಟಿದ್ದಾರೆ.

    ಇಂದಿನ ಪಂದ್ಯ ಸೇರಿದಂತೆ ಧೋನಿ ಒಟ್ಟು 298 ಪಂದ್ಯಗಳ 293 ಇನ್ನಿಂಗ್ಸ್ ಮೂಲಕ 99 ಸ್ಟಪ್ ಔಟ್ ಮಾಡಿದ್ದಾರೆ. 278 ಕ್ಯಾಚ್ ಗಳನ್ನು ಪಡೆಯುವ ಮೂಲಕ ಒಟ್ಟು 377 ಮಂದಿಯನ್ನು ಧೋನಿ ಔಟ್ ಮಾಡಿದ್ದಾರೆ.

    ಏಕದಿನದ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಸ್ಟಂಪ್ ಔಟ್ ಮಾಡಿರೋ ಕೀಪರ್‍ಗಳ ಪಟ್ಟಿಯಲ್ಲಿ 99 ಸ್ಟಂಪ್ ಮಾಡುವ ಮೂಲಕ ಧೋನಿ ಮತ್ತು ಕುಮಾರ ಸಂಗಕ್ಕಾರ(404 ಪಂದ್ಯ, 353 ಇನ್ನಿಂಗ್ಸ್) ಜಂಟಿಯಾಗಿ ಮೊದಲ ಸ್ಥಾನದಲ್ಲಿದ್ದಾರೆ. 75 ಸ್ಟಂಪ್ ಔಟ್ ಮಾಡುವ ಮೂಲಕ ಶ್ರೀಲಂಕಾದ ರಮೇಶ್ ಕಲುವಿತರಣ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಪಾಕಿಸ್ತಾನ ಮೋಯಿನ್ ಖಾನ್ 73 ಸ್ಟಂಪ್ ಔಟ್ ಮಾಡಿದ್ದರೆ, ಆಸ್ಟ್ರೇಲಿಯಾದ ಆಡಂ ಗಿಲ್‍ಕ್ರಿಸ್ಟ್ 55 ಸ್ಟಂಪ್ ಔಟ್ ಮಾಡುವ ಮೂಲಕ ನಾಲ್ಕನೇಯ ಸ್ಥಾನದಲ್ಲಿದ್ದಾರೆ.

    4ನೇ ಸ್ಥಾನ: ಅತಿ ಹೆಚ್ಚು ಬ್ಯಾಟ್ಸ್ ಮನ್‍ಗಳನ್ನು ಔಟ್ ಮಾಡಿದ ವಿಕೆಟ್ ಕೀಪರ್‍ಗಳ ಪಟ್ಟಿಯಲ್ಲಿ ಧೋನಿ ನಾಲ್ಕನೇಯ ಸ್ಥಾನದಲ್ಲಿದ್ದಾರೆ. ಸಂಗಕ್ಕಾರ 482(383 ಕ್ಯಾಚ್, 99 ಸ್ಟಂಪ್) ಮಾಡುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಗಿಲ್‍ಕ್ರಿಸ್ಟ್ 472(417 ಕ್ಯಾಚ್, 55 ಸ್ಟಂಪ್) ಇದ್ದಾರೆ. ದಕ್ಷಿಣ ಆಫ್ರಿಕಾದ ಮಾರ್ಕ್ ಬೌಷರ್ 424 ಬಲಿ(402 ಕ್ಯಾಚ್, 22 ಸ್ಟಂಪ್) ಪಡೆಯುವ ಮೂಲಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

    ಸದ್ಯ ಒಟ್ಟು 377 ಮಂದಿಯನ್ನು ಔಟ್ ಮಾಡಿರುವ ಧೋನಿ 2019ರ ವಿಶ್ವಕಪ್ ಕ್ರಿಕೆಟ್‍ವರೆಗೆ ಟೀಂ ಇಂಡಿಯಾವನ್ನು ಪ್ರತಿನಿಧಿಸಿದರೆ ಸಂಗಕ್ಕಾರ ನಿರ್ಮಿಸಿದ ದಾಖಲೆಯನ್ನು ಮುರಿಯುವ ಸಾಧ್ಯತೆಯಿದೆ.

    ಭಾರತದಲ್ಲಿ ಯಾರು ಎಷ್ಟು? ಭಾರತದ ಪರವಾಗಿ ನಯನ್ ಮೊಂಗಿಯಾ 44 ಸ್ಟಂಪ್ ಔಟ್ ಮಾಡಿದ್ದರೆ, ಕಿರಣ್ ಮೊರೆ 27 ಸ್ಟಂಪ್ ಔಟ್ ಮಾಡಿದ್ದಾರೆ. ಚಂದ್ರಕಾಂತ್ ಪಂಡಿತ್ 15 ಸ್ಟಂಪ್ ಮಾಡಿದ್ದರೆ, ರಾಹುಲ್ ದ್ರಾವಿಡ್ 14 ಸ್ಟಂಪ್ ಔಟ್ ಮಾಡಿದ್ದಾರೆ.

    ಇದನ್ನೂ ಓದಿ:ಒಂದೇ ಓವರ್ ನಲ್ಲಿ ಸಿಕ್ಸರ್, ಬೌಂಡರಿ ಚಚ್ಚಿ ಕಪಿಲ್ ದೇವ್ ದಾಖಲೆ ಮುರಿದ ಪಾಂಡ್ಯ

    https://youtu.be/ZTprzduNDDk

    https://youtu.be/ULWBPEngbpk

    https://youtu.be/B8kTz5cnvgo

  • ವಿಶ್ವದಾಖಲೆ ಯೋಗ ಪ್ರದರ್ಶನಕ್ಕೆ ಮೈಸೂರಿನಲ್ಲಿ ಸಿದ್ಧತೆ

    ವಿಶ್ವದಾಖಲೆ ಯೋಗ ಪ್ರದರ್ಶನಕ್ಕೆ ಮೈಸೂರಿನಲ್ಲಿ ಸಿದ್ಧತೆ

    ಮೈಸೂರು: 3ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ವಿಶ್ವದಾಖಲೆ ಯೋಗ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

    ಲಾಂಗೆಸ್ಟ್ ಯೋಗ ಚೈನ್ ಲಿಂಕ್ ಗಿನ್ನಿಸ್ ದಾಖಲೆಗೆ ಮುಂದಾಗಿರೋ ಮೈಸೂರಿನ ಯೋಗಪಟುಗಳು ಅರಮನೆ ಆವರಣದಲ್ಲಿ ಶನಿವಾರ ಪೂರ್ವ ತಯಾರಿ ನಡೆಸಿದರು. ಅರಮನೆಯ ಆವರಣದಲ್ಲಿ 6001 ವಿದ್ಯಾರ್ಥಿಗಳು ಸಾಮೂಹಿಕ ಯೋಗ ಪ್ರದರ್ಶನ ಮಾಡಿದರು. ನುರಿತ ಯೋಗಪಟುಗಳಿಂದ ಚೈನ್ ಲಿಂಕ್ ಯೋಗಕ್ಕೆ ಪೂರ್ವಾಭ್ಯಾಸ ತರಬೇತಿ ನೀಡಲಾಯಿತು.

    2014ರಲ್ಲಿ ತಮಿಳನಾಡಿನ ಪೆರಂಬೂರಿನ ವಿದ್ಯಾಶಾಲಾದ 3800 ವಿದ್ಯಾರ್ಥಿಗಳು ಚೈನ್ ಲಿಂಕ್ ಯೋಗದ ವಿಶ್ವದಾಖಲೆ ನಿರ್ಮಿಸಿದ್ದರು. ಆ ದಾಖಲೆಯನ್ನ ಮುರಿಯಲು ಮೈಸೂರು ನಗರದ ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ.

    ವೀರಭದ್ರಾಸನ ಪ್ರಕಾರ 1 ಹಾಗೂ 2, ತ್ರಿಕೋನಾಸನ, ಪ್ರಸರಿತಪಡೋತ್ತಸನಗಳ ಪ್ರದರ್ಶನ ಮಾಡಲಾಯಿತು. 3 ನಿಮಿಷಗಳಲ್ಲಿ ಯೋಗ ಪ್ರದರ್ಶಿಸುವ ಮೂಲಕ ವಿಶ್ವ ದಾಖಲೆಗೆ ಪೂರ್ವಾಭ್ಯಾಸ ನಡೆಸಲಾಯಿತು. ಇದರಿಂದ ಇವತ್ತು ಅರಮನೆ ಆವರಣದ ತುಂಬೆಲ್ಲ ಮಕ್ಕಳ ಯೋಗಾಭ್ಯಾಸದ ಕಲರವ ತುಂಬಿತ್ತು.

     

    https://youtu.be/Savr_5ExB4w