Tag: ವಿಶ್ವದಾಖಲೆ

  • ವಿಶ್ವ ದಾಖಲೆಗಾಗಿ ದಟ್ಟ ಮಂಜಿನಲ್ಲಿ ಕುಳಿತು ಯೋಗಾಭ್ಯಾಸ

    ವಿಶ್ವ ದಾಖಲೆಗಾಗಿ ದಟ್ಟ ಮಂಜಿನಲ್ಲಿ ಕುಳಿತು ಯೋಗಾಭ್ಯಾಸ

    ಹಾವೇರಿ/ಬೀದರ್‌ : ವಿಶ್ವದಾಖಲೆಗಾಗಿ ಏಕಕಾಲಕ್ಕೆ 12 ಸಾವಿರ ವಿದ್ಯಾರ್ಥಿಗಳು ಹಾವೇರಿಯ (Haveri) ಕ್ರೀಡಾಂಗಣದಲ್ಲಿ ಭಾನುವಾರ ಮುಂಜಾನೆಯೇ ದಟ್ಟವಾದ ಮಂಜಿನಲ್ಲಿ ಯೋಗಾಭ್ಯಾಸ ನಡೆಸಿದರು.

    ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ವಿಶ್ವದಾಖಲೆಗಾಗಿ ಯೋಗಾಥಾನ್ (Yogathon) ಕಾರ್ಯಕ್ರಮ ನಡೆಯಿತು. ದಟ್ಟವಾದ ಮಂಜಿನಲ್ಲೇ ಕುಳಿತು ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಿಂದ ಆಗಮಿಸಿದ್ದ 12 ಸಾವಿರ ವಿದ್ಯಾರ್ಥಿಗಳು ಯೋಗಾಥಾನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ಈ ವೇಳೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಪಂ ಸಿಇಓ ಮೊಹಮ್ಮದ ರೋಷನ್, ಎಸ್ಪಿ ಹನುಮಂತರಾಯ, ಶಾಸಕ ನೆಹರು ಓಲೇಕಾರ, ನಗರಸಭೆ ಅಧ್ಯಕ್ಷ ಸಂಜೀವ ನೀರಲಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಯೋಗಾಥಾನ್‌ನಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ಎಲೆಕ್ಷನ್ ಎಫೆಕ್ಟ್: ಸಂಕ್ರಾಂತಿ ಹಬ್ಬಕ್ಕೆ ಜನರಿಗೆ ಗಿಫ್ಟೋ ಗಿಫ್ಟ್ – ಮನೆ ಮನೆಗೆ ತಟ್ಟೆ, ಲೋಟ, ಸ್ಪೂನ್ ಕೊಟ್ಟ MLA

    ಬೀದರ್‌ನಲ್ಲಿ 3 ಸಾವಿರ ಜನ ಭಾಗಿ: ರಾಜ್ಯಾದ್ಯಂತ ಗಿನ್ನಿಸ್ ದಾಖಲೆಗಾಗಿ‌ ನಡೆಯುತ್ತಿರುವ ಯೋಗಾಥಾನ್ ಕಾರ್ಯಕ್ರಮದಲ್ಲಿ ಗಡಿ ಜಿಲ್ಲೆ ಬೀದರ್‌ನಲ್ಲಿ (Bidar) 3 ಸಾವಿರಕ್ಕೂ ಅಧಿಕ ಜನ ಏಕಕಾಲಕ್ಕೆ ಯೋಗದಲ್ಲಿ ಭಾಗಿಯಾದರು. ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಬೀದರ್ ನಗರದ ನೆಹರೂ ಸ್ಟೇಡಿಯಂನಲ್ಲಿ ಯೋಗಾಥಾನ್ ಕಾರ್ಯಕ್ರಮ ನಡೆಯಿತು.

    ಯೋಗಾಥಾನ್ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಗೋವಿಂದ್ ರೆಡ್ಡಿ ಚಾಲನೆ ನೀಡಿದ್ದು, ಎಸ್ಪಿ ಕಿಶೋರ್ ಬಾಬು, ಶಾಸಕ ರಹೀಂಖಾನ್, ಯೋಗಪಟುಗಳು, ಶಾಲಾ – ಕಾಲೇಜಿನ ವಿದ್ಯಾರ್ಥಿಗಳು, (Student) ಅಧಿಕಾರಿಗಳು, ಸಾರ್ವಜನಿಕರು ಯೋಗಾಥಾನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಕಾವೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಗೆ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 450 ಎಸೆತಕ್ಕೆ 506 ರನ್‌ – ಇಂಗ್ಲೆಂಡ್‌ ಬ್ಯಾಟರ್‌ಗಳ ಆರ್ಭಟಕ್ಕೆ ಹಲವು ವಿಶ್ವದಾಖಲೆ ಉಡೀಸ್‌

    450 ಎಸೆತಕ್ಕೆ 506 ರನ್‌ – ಇಂಗ್ಲೆಂಡ್‌ ಬ್ಯಾಟರ್‌ಗಳ ಆರ್ಭಟಕ್ಕೆ ಹಲವು ವಿಶ್ವದಾಖಲೆ ಉಡೀಸ್‌

    ರಾವಲ್ಪಿಂಡಿ: ಪಾಕಿಸ್ತಾನದ(Pakistan) ವಿರುದ್ಧ ರಾವಲ್ಪಿಂಡಿಯಲ್ಲಿ ಇಂದಿನಿಂದ ಶುರುವಾದ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್(England) ಬ್ಯಾಟರ್‌ಗಳು ವಿಶ್ವದಾಖಲೆ(World Record) ನಿರ್ಮಿಸಿದ್ದಾರೆ. ಮೊದಲ ದಿನವೇ ರನ್ ಸುನಾಮಿ ಎದ್ದಿದ್ದು ಟಾಸ್ ಗೆದ್ದು ಬ್ಯಾಟ್ ಮಾಡಲು ಇಳಿದ ಇಂಗ್ಲೆಂಡ್, ಟಿ-20 ಮಾದರಿಯಲ್ಲಿ ರನ್ ಹೊಳೆ ಹರಿಸಿದೆ.

    ನಾಲ್ವರು ಟಾಪ್ ಆರ್ಡರ್ ಬ್ಯಾಟರ್‌ಗಳು ಶತಕ(Century) ಗಳಿಸಿದ ಕಾರಣ ಮೊದಲ ದಿನದ ಅಂತ್ಯಕ್ಕೆ 75 ಓವರ್‌ಗೆ (450 ಎಸೆತ) ನಾಲ್ಕು ವಿಕೆಟ್ ಕಳೆದುಕೊಂಡು ಬರೋಬ್ಬರಿ 506 ರನ್ ಗಳಿಸಿದೆ. ಓವರಿಗೆ 6.75 ರನ್‍ರೇಟ್‌ನಲ್ಲಿ  ಬ್ಯಾಟ್‌ ಬೀಸಿದ್ದಾರೆ.

    ಝಾಕ್ ಕ್ರಾಲಿ 122 ರನ್‌(111 ಎಸೆತ, 21 ಬೌಂಡರಿ), ಬೆನ್ ಡಕೆಟ್ 107 ರನ್‌(110 ಎಸೆತ, 15 ಬೌಂಡರಿ), ಆಲಿ ಪೋಪ್ 108 ರನ್‌(104 ಎಸೆತ, 14 ಬೌಂಡರಿ), ಹ್ಯಾರಿ ಬ್ರೂಕ್ ಔಟಾಗದೇ 101 ರನ್‌(81 ಎಸೆತ, 14 ಬೌಂಡರಿ, 2 ಸಿಕ್ಸರ್) ಹೊಡೆದಿದ್ದಾರೆ.

    ಕೊನೆಯಲ್ಲಿ ನಾಯಕ ಬೆನ್‌ಸ್ಟೋಕ್ಸ್‌ 226.6 ಸ್ಟ್ರೈಕ್‌ ರೇಟ್‌ನಲ್ಲಿ ಔಟಾಗದೇ 34 ರನ್‌(15 ಎಸೆತ, 6 ಬೌಂಡರಿ, 1 ಸಿಕ್ಸ್‌) ಹೊಡೆದಿದ್ದರಿಂದ 506 ರನ್‌ ಗಳಿಸಿದೆ. ಇತರೇ ರೂಪದಲ್ಲಿ 11 ರನ್‌(2 ಬೈ, 6 ಲೆಗ್‌ಬೈ, 2 ನೋಬಾಲ್‌, 1 ವೈಡ್‌) ಬಂದಿದೆ. ಜಾಹಿದ್ ಮಹಮೂದ್ 23 ಓವರ್‌ ಎಸೆದು 160 ರನ್‌ ನೀಡಿ 2 ವಿಕೆಟ್‌ ಪಡೆದಿದ್ದಾರೆ.  ಇದನ್ನೂ ಓದಿ: ವಿರಾಟ್‌ಕೊಹ್ಲಿ ಅಲ್ಲ, ಎಬಿಡಿ ನನ್ನ ರೋಲ್ ಮಾಡೆಲ್ – ಬಾಬರ್ ಅಜಮ್‌

    ಮೊದಲ ದಿನ ಅತಿ ಹೆಚ್ಚು ರನ್‌
    ಮೊದಲ ದಿನವೇ  506 ರನ್‌ಗಳಿಸಿದ್ದು ಟೆಸ್ಟ್‌ ಕ್ರಿಕೆಟ್‌ನಲ್ಲಿ ದಾಖಲೆ. ಈ ಹಿಂದೆ ಸಿಡ್ನಿ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 1910 ರಲ್ಲಿ ಆಸ್ಟ್ರೇಲಿಯಾದ 494 ರನ್‌ ಹೊಡೆದಿತ್ತು.

    2012ರ ಟೆಸ್ಟ್‌ನಲ್ಲಿ ಮತ್ತೆ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಅಡಿಲೇಡ್‌ನಲ್ಲಿ 5 ವಿಕೆಟ್‌ ನಷ್ಟಕ್ಕೆ 482 ರನ್‌ ಹೊಡೆದಿತ್ತು. ಈ ಮೊತ್ತ 86.5 ಓವರ್‌ನಲ್ಲಿ ದಾಖಲಾಗಿತ್ತು. ಟೆಸ್ಟ್‌ ಪಂದ್ಯದಲ್ಲಿ ದಿನ ಒಂದಕ್ಕೆ 90 ಓವರ್‌ ಎಸೆಯಲಾಗುತ್ತದೆ. ಆದರೆ ಇಂಗ್ಲೆಂಡ್‌ ಕೇವಲ 75 ಓವರ್‌ನಲ್ಲಿ 506 ರನ್‌ ಗಳಿಸಿರುವುದು ವಿಶೇಷ.

    4 ಶತಕ:
    ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಮೊದಲ ದಿನ 4 ಆಟಗಾರರು ಶತಕ ಸಿಡಿಸಿದ್ದು ಇದೇ ಮೊದಲು. ಅದರಲ್ಲೂ ಮೂವರು ಬ್ಯಾಟರ್‌ಗಳ ಸ್ಟ್ರೈಕ್‌ ರೇಟ್‌ 100ಕ್ಕಿಂತಲೂ ಅಧಿಕ ಇರುವುದು ಮತ್ತೊಂದು ದಾಖಲೆ. ಝಾಕ್ ಕ್ರಾಲಿ(109.90) ಆಲಿ ಪೋಪ್(103.84), ಹ್ಯಾರಿ ಬ್ರೂಕ್(124.69) ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದ್ದಾರೆ.

    ದಾಖಲೆಯ ಆರಂಭಿಕ ಜೊತೆಯಾಟ:
    ಝಾಕ್ ಕ್ರಾಲಿ ಮತ್ತು ಬೆನ್ ಡಕೆಟ್ 35.4 ಓವರ್‌ನಲ್ಲಿ(214 ಎಸೆತ) 6.53 ಸ್ಕೋರಿಂಗ್‌ ರೇಟಿಂಗ್‌ನಲ್ಲಿ ಮೊದಲ ವಿಕೆಟಿಗೆ 233 ರನ್‌ ಚಚ್ಚಿದ್ದಾರೆ.‌ ಇದು 200 ಅಥವಾ ಅದಕ್ಕಿಂತ ಹೆಚ್ಚಿನ ರನ್‌ಗಳ ಆರಂಭಿಕ ಜೊತೆಯಾಟದಲ್ಲಿ ದಾಖಲಾದ  ಅತ್ಯಧಿಕ ಸ್ಕೋರಿಂಗ್‌ ರೇಟ್.

    ಈ ಹಿಂದೆ ಜೋ ಬರ್ನ್ಸ್ ಮತ್ತು ಡೇವಿಡ್ ವಾರ್ನರ್ (2015 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಪ್ರತಿ ಓವರ್‌ಗೆ 6.29 ರನ್) ಮತ್ತು ಗ್ರೇಮ್ ಸ್ಮಿತ್ ಮತ್ತು ಎಬಿ ಡಿವಿಲಿಯರ್ಸ್ (2005 ರಲ್ಲಿ ಜಿಂಬಾಬ್ವೆ ವಿರುದ್ಧ ಪ್ರತಿ ಓವರ್‌ಗೆ 6.22 ರನ್) ದ್ವಿಶತಕದ ಜೊತೆಯಾಟವಾಡಿದ್ದರು.

    ಒಂದು ಓವರ್‌ನಲ್ಲಿ ಸತತ ಆರು ಬೌಂಡರಿ
    ಹ್ಯಾರಿ ಬ್ರೂಕ್ ಅವರು ಇಂದು ಟೆಸ್ಟ್‌ ಕ್ಯಾಪ್‌ ಧರಿಸಿದ್ದ ಸೌದ್ ಶಕೀಲ್‌ ಅವರ ಎರಡನೇ ಓವರ್‌ನಲ್ಲಿ ಆರು ಬೌಂಡರಿ ಚಚ್ಚಿದ್ದಾರೆ. ಈ ಮೂಲಕ ಟೆಸ್ಟ್ ಪಂದ್ಯದ ಓವರ್‌ ಒಂದರಲ್ಲಿ ಸತತ ಆರು ಬೌಂಡರಿಗಳನ್ನು ಹೊಡೆದ ಐದನೇ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಬ್ರೂಕ್‌ ಪಾತ್ರರಾಗಿದ್ದಾರೆ.

    1982ರಲ್ಲಿ ಬಾಬ್ ವಿಲ್ಲಿಸ್ ವಿರುದ್ಧ ಸಂದೀಪ್ ಪಾಟೀಲ್, 2004ರಲ್ಲಿ ಮ್ಯಾಥ್ಯೂ ಹೊಗಾರ್ಡ್ ವಿರುದ್ಧ ಕ್ರಿಸ್‌ ಗೇಲ್‌, 2006ರಲ್ಲಿ ಮುನಾಫ್ ಪಟೇಲ್ ವಿರುದ್ಧ ರಾಮ್‌ನರೇಶ್ ಸರ್ವನ್‌, 2007ರಲ್ಲಿ ಜೇಮ್ಸ್ ಆಂಡರ್ಸನ್ ಬೌಲಿಂಗ್‌ಗೆ ಸನತ್‌ ಜಯಸೂರ್ಯ 6 ಬೌಂಡರಿ ಹೊಡೆದಿದ್ದರು.

    Live Tv
    [brid partner=56869869 player=32851 video=960834 autoplay=true]

  • ಟಿ20 ಕ್ರಿಕೆಟ್‍ನಲ್ಲಿ ಗೇಲ್ ವಿಶ್ವದಾಖಲೆ ಆಟ – ವಿಂಡೀಸಿಗೆ ಸರಣಿ

    ಟಿ20 ಕ್ರಿಕೆಟ್‍ನಲ್ಲಿ ಗೇಲ್ ವಿಶ್ವದಾಖಲೆ ಆಟ – ವಿಂಡೀಸಿಗೆ ಸರಣಿ

    ಸೈಂಟ್ ಲೂಸಿಯಾ: ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಟಿ20 ಕ್ರಿಕೆಟ್‍ನಲ್ಲಿ ವಿಶ್ವದಾಖಲೆ ಬರೆದಿದ್ದಾರೆ. ಟಿ20 ಕ್ರಿಕೆಟಿನಲ್ಲಿ 14 ಸಾವಿರ ರನ್‍ಗಳ ಗಡಿಯನ್ನು ದಾಟಿದ ವಿಶ್ವದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಗೇಲ್ ಪಾತ್ರವಾಗಿದ್ದಾರೆ.

    ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಜಂಪಾ ಎಸೆದ ಇನ್ನಿಂಗ್ಸ್ ನ  9ನೇ ಓವರ್ ನಲ್ಲಿ ಸಿಕ್ಸರ್ ಸಿಡಿಸಿ ಗೇಲ್ ಈ ದಾಖಲೆ ಬರೆದರು. ಮೂರನೇ ಟಿ20 ಪಂದ್ಯಕ್ಕೂ ಮೊದಲು ಗೇಲ್ 13,971 ರನ್ ಹೊಡೆದಿದ್ದರು.

    ಮೊದಲ ಎರಡು ಪಂದ್ಯದಲ್ಲಿ ಕ್ರಮವಾಗಿ 4, 13 ರನ್ ಹೊಡೆದಿದ್ದ ಗೇಲ್ ಮೂರನೇ ಪಂದ್ಯದಲ್ಲಿ 67 ರನ್(38 ಎಸೆತ, 4 ಬೌಂಡರಿ, 7 ಸಿಕ್ಸರ್) ಹೊಡೆದು ಔಟಾದರು.

    ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 6 ವಿಕೆಟ್ ನಷ್ಟಕ್ಕೆ 141 ರನ್ ಹೊಡೆದರೆ ವಿಂಡೀಸ್ 14.5 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 142 ರನ್‍ಗಳಿಸಿ ಜಯಗಳಿಸಿತು. ಈ ಮೂಲಕ 5 ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ದಾಖಲೆಯೊಂದಿಗೆ 67 ರನ್ ಸಿಡಿಸಿದ ಗೇಲ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇದನ್ನೂ ಓದಿ : ಐಪಿಎಲ್‍ನಲ್ಲಿ ಸಿಕ್ಸರ್‌ಗಳ ದಾಖಲೆಯ ಒಡೆಯನಾದ ಕ್ರಿಸ್ ಗೇಲ್

    ಗೇಲ್ ನಂತರದ ಸ್ಥಾನವನ್ನು ವಿಂಡೀಸಿನ ಪೊಲಾರ್ಡ್(10,836 ರನ್), ಪಾಕಿಸ್ತಾನದ ಶೋಯೆಬ್ ಮಲ್ಲಿಕ್(10,074 ರನ್), ಆಸ್ಟ್ರೇಲಿಯಾದ ಡೇವಿಡ್ ವಾರ್ನರ್(10,017 ರನ್), ವಿರಾಟ್ ಕೊಹ್ಲಿ(9,992 ರನ್) ಪಡೆದಿದ್ದಾರೆ.

    2013ರಲ್ಲಿ ನಡೆದ ಐಪಿಎಲ್‍ಲ್ಲಿ ಗೇಲ್ ಆರ್‌ಸಿಬಿ ಪರ ಆಡಿ ಪುಣೆ ವಾರಿಯರ್ಸ್ ವಿರುದ್ಧ ಔಟಾಗದೇ 175 ರನ್ ಹೊಡೆದಿದ್ದರು. ಇದು ಟಿ20ಯಲ್ಲಿ ಗೇಲ್ ಅವರ ಅತ್ಯಧಿಕ ಮೊತ್ತವಾಗಿದೆ.

    ಗೇಲ್ ಒಟ್ಟು 431 ಟಿ20 ಪಂದ್ಯಗಳಿಂದ 14,038 ರನ್ ಚಚ್ಚಿದ್ದಾರೆ. 37.63 ಸರಾಸರಿ, 146.18 ಸ್ಟ್ರೈಕ್ ರೇಟ್ ನೊಂದಿಗೆ 22 ಶತಕ, 87 ಅರ್ಧಶತಕ ಹೊಡೆದಿದ್ದಾರೆ. 1083 ಬೌಂಡರಿ, 1028 ಸಿಕ್ಸರ್ ಸಿಡಿಸಿದ್ದಾರೆ.

  • ಮೋಸ್ಟ್ ಬ್ಯಾಕ್ವರ್ಡ್ ಬಾಡಿ ಸ್ಕಿಪ್ ನಲ್ಲಿ ತನುಶ್ರೀ ವಿಶ್ವದಾಖಲೆ

    ಮೋಸ್ಟ್ ಬ್ಯಾಕ್ವರ್ಡ್ ಬಾಡಿ ಸ್ಕಿಪ್ ನಲ್ಲಿ ತನುಶ್ರೀ ವಿಶ್ವದಾಖಲೆ

    -ನಿಮಿಷಕ್ಕೆ 55 ಬಾರಿ ಆಸನ ಪೂರೈಸಿದ ಪಬ್ಲಿಕ್ ಹೀರೋ

    ಉಡುಪಿ: ಒಂದು ರಾಷ್ಟ್ರ ದಾಖಲೆ ಮಾಡೋದಕ್ಕೆ ಜೀವಮಾನದ ಸಾಧನೆ ಬೇಕಾಗುತ್ತೆ. ಉಡುಪಿಯ ತನುಶ್ರೀಗೆ ದಾಖಲೆಗಳನ್ನು ಮಾಡುವುದು ಎಂದರೆ ನೀರು ಕುಡಿದಷ್ಟೇ ಸುಲಭ. ವಯಸ್ಸು 11 ದಾಟುವ ಮೊದಲೇ ನಮ್ಮ ಪಬ್ಲಿಕ್ ಹೀರೋ ಬರೋಬ್ಬರಿ 6 ವಿಶ್ವದಾಖಲೆ ಮುಡಿಗೇರಿಸಿಕೊಂಡು ಮಿಂಚಿದ್ದಾಳೆ.

    ಉಡುಪಿಯ ಸೈಂಟ್ ಸಿಸಲೀಸ್ ಹೈಸ್ಕೂಲಿನ ಆರನೇ ತರಗತಿಯ ತನುಶ್ರೀ, ಇದೀಗ ಆರನೇ ವಿಶ್ವ ದಾಖಲೆ ಮಾಡಿದ್ದಾಳೆ. ಒಂದು ನಿಮಿಷದಲ್ಲಿ 55 ಬಾರಿ ಮೋಸ್ಟ್ ಬ್ಯಾಕ್ವರ್ಡ್ ಬಾಡಿ ಸ್ಕಿಪ್ ಮಾಡಿ ದಾಖಲೆ ಮುಡಿಗೇರಿಸಿಕೊಂಡಿದ್ದಾಳೆ. ಸೈಂಟ್ ಸಿಸಲೀಸ್ ಸಭಾಂಗಣದಲ್ಲಿ ನೂರಾರು ಜನರು, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ತೀರ್ಪುಗಾರರ ನಡುವೆ ತನುಶ್ರೀ ಪಿತ್ರೋಡಿ ಸಲೀಸಾಗಿಯೇ ಈ ರೆಕಾರ್ಡ್ ಮಾಡಿದ್ದಾಳೆ.

    ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ತೀರ್ಪುಗಾರ ಡಾ. ಮನೀಶ್ ಬಿಷ್ಶೋಯ್ ಮಾತನಾಡಿ, ಈವರೆಗೆ ಬ್ಯಾಕ್ವರ್ಡ್ ಬಾಡಿ ಸ್ಕಿಪ್ ನಲ್ಲಿ ರೆಕಾರ್ಡ್ ಅಟೆಮ್ಟ್ ಮಾಡಿಲ್ಲ. ದುಬೈ ಯುವತಿ ಫ್ರಂಟ್ ಬಾಡಿ ಸ್ಕಿಪ್ ಮಾಡಿದ್ದಳು. ಈ ಆಸನ ಬಹಳ ಕಷ್ಟಕರ. ತನುಶ್ರೀ ದೇಹದಲ್ಲಿ ಮೂಳೆ ಇಲ್ಲವೇನೋ ಎಂಬ ರೀತಿಯಲ್ಲಿ ಒಂದು ನಿಮಿಷಗಳಲ್ಲಿ 55 ಬಾರಿ ಆಸನ ಪೂರೈಸಿದ್ದಾಳೆ ಎಂದರು.

    ಆರು ವಿಶ್ವ ದಾಖಲೆ ಮಾಡಿದ ತನುಶ್ರೀ ಪಿತ್ರೋಡಿ
    ನಮ್ಮ ಪಬ್ಲಿಕ್ ಹೀರೋ ಆಗಿರುವ ತನುಶ್ರೀ, 2017ರಲ್ಲಿ ನಿರಾಲಂಬ ಪೂರ್ಣ ಚಕ್ರಾಸನ, 2018ರಲ್ಲಿ ಮೋಸ್ಟ್ ಫುಲ್ ಬಾಡಿ ರೆವಲ್ಯೂಷನ್ ಮೇಂಟೇನಿಂಗ್ ಎ ಚೆಸ್ಟ್ ಸ್ಟ್ಯಾಂಡ್ ಪೋಸಿಶನ್ ಭಂಗಿ, 2019ರಲ್ಲಿ ಮೋಸ್ಟ್ ನಂಬರ್ ಆಫ್ ರೋಲ್ಸ್ ಇನ್ ಒನ್ ಮಿನಿಟ್ ಇನ್ ಧನುರಾಸನ ಪೋಸ್ಚರ್ ಹಾಗೂ 2020 ರಲ್ಲಿ ಚಕ್ರಾಸನ ರೇಸ್ ವಿಭಾಗದಲ್ಲಿ 100 ಮೀಟರ್ ಅಂತರವನ್ನು 1.14 ಸೆಕುಂಡಿನಲ್ಲಿ ಕ್ರಮಿಸಿ ವಿಶ್ವದಾಖಲೆ ಮಾಡಿದ್ದಳು. ಹೊಸ ದಾಖಲೆಗೆ ಕೊರೊನಾ ರಜೆಯನ್ನು ಬಳಸಿಕೊಂಡು ತನುಶ್ರೀ ಪ್ರ್ಯಾಕ್ಟೀಸ್ ಮಾಡಿದ್ದಳು.

    ತನುಶ್ರೀ ಪಿತ್ರೋಡಿ ಮಾತನಾಡಿ, ಲಾಕ್‍ಡೌನ್ ಸಂದರ್ಭದಲ್ಲಿ ಪ್ರ್ಯಾಕ್ಟಿಸ್ ಮಾಡಿದೆ. 50, 51 ಬಾರಿ ಬ್ಯಾಕ್ವರ್ಡ್ ಬಾಡಿ ಸ್ಕಿಪ್ ಮಾಡುತ್ತಿದ್ದೆ. ಜನರು ಹುರುದುಂಬಿಸುತ್ತಿರುವಾಗ ಜೋಷ್ ಬಂತು. ನನ್ನ ತಂದೆ ತಾಯಿಗೆ, ಶಿಕ್ಷಣ ಸಂಸ್ಥೆಗೆ ತುಂಬಾ ಥ್ಯಾಂಕ್ಸ್ ಅಂತ ಹೇಳಿದರು. ತನುಶ್ರೀ ತಂದೆ ಉದಯ್ ಮಾತನಾಡಿ, ತನುಶ್ರೀಗೆ ಯಾವೆಲ್ಲಾ ವಿಭಾಗದಲ್ಲಿ ಸಾಧನೆ ಮಾಡಬೇಕೋ ಮಾಡಲಿ. ನಾವು ಬೆಂಬಲವಾಗಿ ನಿಲ್ಲುತ್ತೇವೆ ಎಂದರು.

    ಯೋಗ, ದಾಖಲೆಗಳ ಜೊತೆ ತನುಶ್ರೀ ಭರತನಾಟ್ಯದ ಪ್ರವೀಣೆ, ಯಕ್ಷಗಾನ ಕಲಾವಿದೆ. ಮುಂದೆ ಒಂದು ನಿಮಿಷದಲ್ಲಿ ಅತೀ ಹೆಚ್ಚು ಯೋಗ ಭಂಗಿಗಳನ್ನು ಮಾಡಿ ದಾಖಲೆ ಮಾಡುವ ಕನಸು ಇಟ್ಟುಕೊಂಡಿದ್ದಾಳೆ ತನುಶ್ರೀ.

  • 23 ರನ್‌ ಹೊಡೆದು ವಿಶ್ವದಾಖಲೆ ನಿರ್ಮಿಸಿದ ಕೊಹ್ಲಿ

    23 ರನ್‌ ಹೊಡೆದು ವಿಶ್ವದಾಖಲೆ ನಿರ್ಮಿಸಿದ ಕೊಹ್ಲಿ

    ಕ್ಯಾನ್ಬೆರಾ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದ್ದ ದಾಖಲೆ ಮುರಿದು ವಿಶ್ವದಾಖಲೆ ನಿರ್ಮಿಸಿದ್ದಾರೆ.

    ಏಕದಿನ ಕ್ರಿಕೆಟ್‌ನಲ್ಲಿ ಇಲ್ಲಿಯವರೆಗೆ ವೇಗವಾಗಿ 12 ಸಾವಿರ ರನ್‌ಗಳ ಗಡಿಯನ್ನು ದಾಟಿದ ಆಟಗಾರರ ಪಟ್ಟಿಯಲ್ಲಿ ಸಚಿನ್ ಮೊದಲ ಸ್ಥಾನಲ್ಲಿದ್ದರು. ಆದರೆ ಈಗ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರನೇ ಪಂದ್ಯದಲ್ಲಿ 23 ರನ್‌ ಗಳಿಸುವ ಮೂಲಕ ಈ ಪಟ್ಟಿಯಲ್ಲಿ ನಂಬರ್‌ ಒನ್‌ ಸ್ಥಾನಕ್ಕೆ ಏರಿದ್ದಾರೆ.

    ಸಚಿನ್ 300 ಇನ್ನಿಂಗ್ಸ್‌ಗಳಲ್ಲಿ 12 ಸಾವಿರ ಏಕದಿನ ರನ್ ಗಳಿಸಿದರೆ ಕೊಹ್ಲಿ 251 ಪಂದ್ಯಗಳ 242 ಇನ್ನಿಂಗ್ಸ್ ಗಳಲ್ಲಿ 12 ಸಾವಿರ ರನ್‌ ಪೂರ್ಣಗೊಳಿಸಿದ್ದಾರೆ. ಈ ಪಂದ್ಯಕ್ಕೂ ಮುನ್ನ ಕೊಹ್ಲಿ ತಮ್ಮ 241 ಇನ್ನಿಂಗ್ಸ್‌ಗಳ ಆಟದಲ್ಲಿ 11,977 ರನ್‌ ಹೊಡೆದಿದ್ದರು.

    ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 314 ಇನ್ನಿಂಗ್ಸ್, ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕಾರ 336 ಇನ್ನಿಂಗ್ಸ್, ಸನತ್ ಜಯಸೂರ್ಯ 379 ಇನ್ನಿಂಗ್ಸ್ ಮತ್ತು ಮಹೇಲಾ ಜಯವರ್ಧನೆ 399 ಇನ್ನಿಂಗ್ಸ್ ಗಳಲ್ಲಿ 12 ಸಾವಿರ ರನ್‌ಗಳ ಗಡಿ ದಾಟಿದ್ದರು.

    ಇದಕ್ಕೂ ಮೊದಲು ಸಚಿನ್ ಅವರ ವೇಗದ 10 ಸಾವಿರ ರನ್ ಪೂರೈಸಿದ ದಾಖಲೆಯನ್ನು ಬ್ರೇಕ್ ಮಾಡಿದ್ದ ಕೊಹ್ಲಿ, ಕೇವಲ 205 ಇನ್ನಿಂಗ್ಸ್ ಗಳಲ್ಲಿ 10 ಸಾವಿರ ರನ್ ಬಾರಿಸಿದ್ದರು. ಸಚಿನ್ 10 ಸಾವಿರ ರನ್ ಹೊಡೆಯಲು 259 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದರು. ಇದರ ಜೊತೆಗೆ ಆಸ್ಟ್ರೇಲಿಯಾ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ 89 ರನ್ ಗಳಿಸಿದ್ದ ಕೊಹ್ಲಿ ವೇಗವಾಗಿ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ 22 ಸಾವಿರ ರನ್ ಹೊಡೆದ ಆಟಗಾರ ಎಂಬ ಸಾಧನೆ ಮಾಡಿದ್ದರು.

  • 14 ವರ್ಷದವನು ಈಗ ವಿಶ್ವದ ಅತೀ ಎತ್ತರದ ಬಾಲಕ!

    14 ವರ್ಷದವನು ಈಗ ವಿಶ್ವದ ಅತೀ ಎತ್ತರದ ಬಾಲಕ!

    ಬೀಜಿಂಗ್: ಚೀನಾದ 14 ವರ್ಷದ ಬಾಲಕನೊಬ್ಬ ವಿಶ್ವದ ಅತೀ ಎತ್ತರದ ಹದಿಹರೆಯದ ಪುರುಷ ಎಂಬ ದಾಖಲೆಯನ್ನು ಮಾಡಿದ್ದಾನೆ.

    ರೆನ್ ಕಿಯು(14) 7 ಅಡಿ ಮತ್ತು ಮೂರು ಇಂಚು ಉದ್ದವಿದ್ದಾನೆ. ಈತ ಚೀನಾದ ಸಿಚುವಾನ್ ಪ್ರಾಂತ್ಯದ ಲೆಶನ್ ನಗರದ ಜೂನಿಯರ್ ಹೈಸ್ಕೂಲ್ ವಿಧ್ಯಾರ್ಥಿಯಾಗಿದ್ದಾನೆ. ರೆನ್ 18 ವರ್ಷ ವಯಸ್ಸಿನವರಿಗಿಂತ ಕೆಳಗಿನ ಪುರುಷರ ವಿಭಾಗದಲ್ಲಿ ಅತೀ ಎತ್ತರದ ಟೀನೇಜರ್ ಎಂಬ ಗಿನ್ನಿಸ್ ವಿಶ್ವ ದಾಖಲೆಯ ಪುಟದಲ್ಲಿ ಸೇರಿದ್ದಾನೆ.

    ಗಿನ್ನಿಸ್ ದಾಖಲೆ ಬಗ್ಗೆ ರೆನ್ ಕಿಯು ಹೇಳುವುದೇನು?
    ನಾನು ಶಾಲೆಗೆ ಪ್ರವೇಶಿಸಿದಾಗಿನಿಂದ ನನ್ನ ವಯಸ್ಸಿನ ಸ್ನೇಹಿತರಿಗಿಂತ ನಾನು ಎತ್ತರವಾಗಿರುವುದನ್ನು ಗಮನಿಸಿದ್ದೇನೆ. ನನ್ನ ಎತ್ತರವನ್ನು ನೋಡಿ ಹಲವರು ನನ್ನನ್ನು ದೊಡ್ಡವನು ಎಂದು ಭಾವಿಸುತ್ತಿದ್ದರು. ಇದರಿಂದ ಕೊಂಚ ಬೇಸರವಾಗುತ್ತಿತ್ತು. ಆದರೆ ಇದೇ ಎತ್ತರದಿಂದ ಏನನ್ನಾದರೂ ಸಾಧನೆ ಮಾಡಬೇಕು ಎಂದು ಆಲೋಚಿಸಿದೆ. ಆಗ ವಿಶ್ವ ದಾಖಲೆಯನ್ನು ಪಡೆಯಬಹುದೇ ಎಂದು ಪ್ರಯತ್ನಿಸಿದೆ. ಈಗ ಗಿನ್ನಿಸ್ ದಾಖಲೆ ಪಡೆದಿದ್ದೇನೆ ಎಂದು ರೆನ್ ಕಿಯು ಹೇಳಿದ್ದಾರೆ.

    ವಿಶ್ವದ ಅತಿ ಎತ್ತರದ ಪುರುಷ ಹದಿಹರೆಯದವರ ದಾಖಲೆಯನ್ನು ಈ ಹಿಂದೆ ಯುಎಸ್‍ನ ಕೆವಿನ್ ಬ್ರಾಡ್‍ಫಾರ್ಡ್ ಹೊಂದಿದ್ದರು. ಆದರೆ ಕೆವಿನ್ ಗಿಂತ 5 ಸೆಂ.ಮೀ ಎತ್ತರ ಇರುವ ಮೂಲಕವಾಗಿ ಅವರ ದಾಖಲೆಯನ್ನು ಕಿಯು ಮುರಿದಿದ್ದಾರೆ.

  • ಇನ್ನೂ ಯಾರೂ ಸರಗಟ್ಟಿಲ್ಲ ಮಾಹಿಯ 5 ವಿಶ್ವ ದಾಖಲೆ

    ಇನ್ನೂ ಯಾರೂ ಸರಗಟ್ಟಿಲ್ಲ ಮಾಹಿಯ 5 ವಿಶ್ವ ದಾಖಲೆ

    ನವದೆಹಲಿ: ಭಾರತದ ಕ್ರಿಕೆಟ್ ಮಾಂತ್ರಿಕ, ದಂತ ಕಥೆ ಎಂದೆಲ್ಲ ಮೆಚ್ಚುಗೆಗೆ ಪಾತ್ರವಾಗಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಇದರಲ್ಲಿ 5 ವಿಶ್ವ ದಾಖಲೆಗಳನ್ನು ಇನ್ನೂ ಯಾರೂ ಸರಗಟ್ಟಿಲ್ಲ.

    ಇದೀಗ ಎಲ್ಲ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಅವರು ಗುಡ್ ಬೈ ಹೇಳಿದ್ದು, ಅಭಿಮಾನಿಗಳಲ್ಲಿ ಭಾರೀ ನಿರಾಸೆಯನ್ನುಂಟು ಮಾಡಿದೆ. ಟೆಸ್ಟ್ ಕ್ರಿಕೆಟ್‍ಗೆ ಧೋನಿ 2014ರಲ್ಲಿ ನಿವೃತ್ತಿ ಘೋಷಿಸಿದ ಧೋನಿ ಶನಿವಾರ ಎಲ್ಲ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದಾರೆ. ಆದರೆ ಐಪಿಎಲ್‍ಬಲ್ಲಿ ಧೋನಿ ಆಟವಾಡುತ್ತಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಸೆಪ್ಟೆಂಬರ್ 19ರಿಂದ ಯುಎಇಯಲ್ಲಿ ಐಪಿಎಲ್ ಪಂದ್ಯ ನಡೆಯಲಿದೆ.

    1. ಮೂರು ಐಸಿಸಿ ಟ್ರೋಫಿ ಗೆದ್ದ ಏಕೈಕ ನಾಯಕ
    ಧೋನಿ ನಾಯಕತ್ವದಲ್ಲಿ ಭಾರತ 2007ರಲ್ಲಿ ನಡೆದ ಟಿ-20 ವಿಶ್ವಕಪ್‍ನ ಆರಂಭಿಕ ಪಂದ್ಯದಲ್ಲೇ ಗೆಲುವು ಸಾಧಿಸುವ ಮೂಲಕ ಗೆಲುವಿನ ಖಾತೆಯನ್ನು ತೆರೆಯಿತು. ಇದಾದ ಬಳಿಕ 2011ರ ಏಕದಿನ ವಿಶ್ವಕಪ್ 2013ರ ಐಸಿಸಿ ಚಾಂಪಿಯನ್ಸ್ ಟ್ರೋಪಿಯಲ್ಲಿ ಸಹ ಗೆಲವು ಸಾಧಿಸಿದೆ.

    2. ಹೆಚ್ಚು ಅಂತರಾಷ್ಟ್ರೀಯ ಪಂದ್ಯಗಳ ನಾಯಕ
    ಮಾಹಿ ಒಟ್ಟು 332 ಅಂತರಾಷ್ಟ್ರೀಯ ಪಂದ್ಯಗಳ ನಾಯಕತ್ವ ವಹಿಸಿದ್ದು, 200 ಏಕದಿನ, 60 ಟೆಸ್ಟ್ ಹಾಗೂ 72 ಟಿ 20 ಪಂದ್ಯಗಳಲ್ಲಿ ತಮ್ಮ ನಾಯಕತ್ವದ ಜಾಣತನ ತೋರಿಸಿದ್ದಾರೆ. ಇದು ಸಹ ವಿಶ್ವ ದಾಖಲೆಯಾಗಿದೆ. ಈವರೆಗೆ ಇದನ್ನು ಯಾರೂ ಸರಗಟ್ಟಿಲ್ಲ. ಆಸ್ಟ್ರೇಲಿಯಾದ ರಿಕ್ಕಿ ಪಾಂಟಿಂಗ್ 324 ಅಂತರಾಷ್ಟ್ರೀಯ ಪಂದ್ಯಗಳಿಗೆ ನಾಯಕರಾಗಿದ್ದರು. ಅಲ್ಲದೆ ಧೋನಿ ಮೂರು ಮಾದರಿಯ ಮಧ್ಯಗಳ ಪೈಕಿ ಎಲ್ಲದರಲ್ಲೂ 50 ಹೆಚ್ಚು ಪಂದ್ಯಗಳಿಗೆ ನಾಯಕತ್ವ ವಹಿಸಿದ ಹೆಗ್ಗಳಿಕೆ ಹೊಂದಿದ್ದಾರೆ.

    3. ಹೆಚ್ಚು ಏಕದಿನ ಪಂದ್ಯಗಳಲ್ಲಿ ನಾಟ್‍ಔಟ್
    ಮಾಹಿ 84 ಅಂತರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ನಾಟ್‍ಔಟ್ ಆಗಿ ಉಳಿದುಕೊಂಡಿದ್ದಾರೆ. ಇದು ಸಹ ಮತ್ತೊಂದು ವಿಶ್ವ ದಾಖಲೆಯಾಗಿದೆ. ಇದರಲ್ಲಿ ಎರಡನೇ ಸ್ಥಾನವನ್ನು ದಕ್ಷಿಣ ಆಫ್ರಿಕಾದ ಆಲ್‍ರೌಂಡರ್ ಶಾನ್ ಪೊಲಾಕ್ ಪಡೆದಿದ್ದು, 72 ಬಾರಿ ಔಟಾಗದೇ ಉಳಿದಿದ್ದಾರೆ.

    4. ಹೆಚ್ಚು ಸ್ಟಂಪಿಂಗ್
    ಧೋನಿ ಎಂದರೆ ಸ್ಟಂಪಿಂಗ್‍ನಲ್ಲಿ ಎಕ್ಸ್‍ಪರ್ಟ್. ಮಿಂಚಿನ ವೇಗದಲ್ಲಿ ಬಾಲ್ ಅನ್ನು ಸ್ಟಂಪ್‍ಗೆ ತಾಗಿಸುತ್ತಾರೆ. ಒಟ್ಟು 350 ಪಂದ್ಯಗಳಲ್ಲಿ ಧೋನಿ ಹೆಸರಲ್ಲಿ 123 ಆಟಗಾರರು ಸ್ಟಂಪ್ ಮಾಡಿದ್ದಾರೆ. 100 ಅಂತರಾಷ್ಟ್ರೀಯ ಸ್ಟಂಪಿಂಗ್‍ಗಳನ್ನು ಮಾಡಿದ ಏಕೈಕ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆ ಮಾಹಿಯದ್ದು. ಒಟ್ಟು ಸ್ಟಂಪಿಂಗ್‍ನಲ್ಲಿ ದಕ್ಷಿಣ ಆಫ್ರಿಕಾದ ಮಾರ್ಕ್ ಬೌಚರ್ ಹಾಗೂ ಆಸ್ಟ್ರೇಲಿಯಾದ ಆಡಮ್ ಗಿಲ್‍ಕ್ರಿಸ್ಟ್ ಧೋನಿ ನಂತರದ ಸ್ಥಾನವನ್ನು ಪಡೆದಿದ್ದಾರೆ.

    5. ನಾಯಕನಾಗಿ ಫೈನಲ್ ಗೆಲುವು
    ಧೋನಿ 6 ಅಂತರಾಷ್ಟ್ರೀಯ ಫೈನಲ್ ಪಂದ್ಯಗಳಿಗೆ ನಾಯಕತ್ವ ವಹಿಸಿದ್ದು, ಇದರಲ್ಲಿ ಭಾರತ ನಾಲ್ಕು ಬಾರಿ ಜಯಗಳಿಸಿದೆ. ಈ ಮೂಲಕ ಧೋನಿ ಅಂತರಾಷ್ಟ್ರೀಯ ಏಕದಿನ ಪಂದ್ಯಗಳ ಯಶಸ್ಸಿನ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ತಂಡದ ನಾಯಕನಾಗಿ ಧೋನಿ ಒಟ್ಟು 110 ಏಕದಿನ ಪಂದ್ಯಗಳಲ್ಲಿ ತಂಡವನ್ನು ಜಯದತ್ತ ಕೊಂಡೊಯ್ದಿದ್ದಾರೆ. ಇದರಲ್ಲಿ ಧೋನಿ ಎರಡನೇ ಸ್ಥಾನದಲ್ಲಿದ್ದು, ರಿಕ್ಕಿ ಪಾಂಟಿಂಗ್ 165 ಏಕದಿನ ಪಂದ್ಯಗಳಲ್ಲಿ ತಂಡವನ್ನು ಜಯಗಳಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.

  • ಸಚಿನ್ 190 ರನ್‍ಗೆ ಎಲ್‍ಬಿ ಆಗಿದ್ರೂ ಪ್ರೇಕ್ಷಕರ ಭಯದಿಂದ ಅಂಪೈರ್ ಔಟ್ ನೀಡಿಲ್ಲ – ಸ್ಟೇನ್

    ಸಚಿನ್ 190 ರನ್‍ಗೆ ಎಲ್‍ಬಿ ಆಗಿದ್ರೂ ಪ್ರೇಕ್ಷಕರ ಭಯದಿಂದ ಅಂಪೈರ್ ಔಟ್ ನೀಡಿಲ್ಲ – ಸ್ಟೇನ್

    ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಸಚಿನ್ ದ್ವಿಶತಕ ಹೊಡೆಯುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದರು. ಆದರೆ ಈ ಪಂದ್ಯದಲ್ಲಿ ಸಚಿನ್ 190 ರನ್ ಗಳಿಸಿದ್ದಾಗ ಔಟಾಗಿದ್ದರೂ ಅಂಪೈರ್ ಔಟ್ ನೀಡಲಿಲ್ಲ. ಅಂಪೈರ್ ಔಟ್ ನೀಡದ್ದಕ್ಕೆ ಕಾರಣ ಪ್ರೇಕ್ಷಕರು ಎಂದು ಆಫ್ರಿಕಾದ ವೇಗಿ ಡೇಲ್ ಸ್ಟೇನ್  ಹೇಳಿದ್ದಾರೆ.

    ಕೋವಿಡ್ 19 ಲಾಕ್‍ಡೌನ್ ಹಿನ್ನೆಲೆಯಲ್ಲಿ ಆಟಗಾರು ಕ್ರೀಡಾ ವಾಹಿನಿಗಳ ಜೊತೆ ಮಾತನಾಡಿ ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದೇ ರೀತಿಯಾಗಿ ಸ್ಕೈ ಸ್ಪೋರ್ಟ್ಸ್ ಕ್ರಿಕೆಟ್ ಕಾರ್ಯಕ್ರಮದಲ್ಲಿ ಜೇಮ್ಸ್ ಆಂಡರ್ಸನ್ ಅವರ ಜೊತೆ ಮಾತನಾಡಿದ ಸ್ಟೇನ್ ಸಚಿನ್ ದ್ವಿಶತಕ ಸಿಡಿಸುವ ಮೊದಲೇ ಔಟಾಗಿದ್ದರು. ಆದರೆ ಅಂಪೈರ್ ಇಯಾನ್ ಗೌಲ್ಡ್ ನನ್ನ ಮನವಿಯನ್ನು ಪುರಸ್ಕರಿಸಲಿಲ್ಲ ಎಂದು ಹೇಳಿದ್ದಾರೆ.

    ಗ್ವಾಲಿಯರ್ ನಲ್ಲಿ ನಡೆದ ಪಂದ್ಯದಲ್ಲಿ ಸಚಿನ್ ಮೊದಲ ದ್ವಿಶತಕ ಸಿಡಿಸಿದ್ದರು. ಈ ವೇಳೆ 190 ರನ್ ಗಳಿಸಿದ ಸಂದರ್ಭದಲ್ಲಿ ಸಚಿನ್ ಎಲ್‍ಬಿಯಾಗಿದ್ದರು. ಈ ವಿಚಾರ ಅಂಪೈರ್ ಇಯಾನ್ ಗೌಲ್ಡ್‍ಗೆ ತಿಳಿದಿತ್ತು. ಪ್ರೇಕ್ಷಕರ ಕೂಗಾಟಕ್ಕೆ ಹೆದರಿ ನಾಟೌಟ್ ನೀಡಿದ್ದರು. ಪಂದ್ಯ ಮುಗಿದ ಬಳಿಕ ನಾನು ನೇರವಾಗಿ ಅಂಪೈರ್ ಬಳಿ ಹೋಗಿ, ಯಾಕೆ ನನ್ನ ಮನವಿಯನ್ನು ಪುರಸ್ಕರಿಸಲಿಲ್ಲ ಎಂದು ಪ್ರಶ್ನಿಸಿದೆ. ಇದಕ್ಕೆ ಇಯಾನ್ ಗೌಲ್ಡ್, ಸುತ್ತಲೂ ಒಮ್ಮೆ ನೋಡಿ “ಔಟ್ ತೀರ್ಪು ನೀಡಿದ್ದರೆ ನಾನು ಹೋಟೆಲಿಗೆ ಮರಳುತ್ತಿರಲಿಲ್ಲ” ಎಂದು ಉತ್ತರಿಸಿದ್ದ ವಿಚಾರವನ್ನು ಈಗ ಸ್ಟೇನ್ ನೆನಪು ಮಾಡಿಕೊಂಡಿದ್ದಾರೆ.

    2010ರ ಫೆ. 24 ರಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 50 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 401 ರನ್ ಗಳಿಸಿತ್ತು.

    ಸೆಹ್ವಾಗ್ 9, ದಿನೇಶ್ ಕಾರ್ತಿಕ್ 79, ಯೂಸೂಫ್ ಪಠಾನ್ 36, ಧೋನಿ ಔಟಾಗದೇ 68 ರನ್( 35 ಎಸೆತ, 7 ಬೌಂಡರಿ, 4 ಸಿಕ್ಸರ್) ಹೊಡೆದಿದ್ದರು. ಆರಂಭಿಕನಾಗಿ ಕಣಕ್ಕೆ ಇಳಿದಿದ್ದ ಸಚಿನ್ ಔಟಾಗದೇ 147 ಎಸೆತದಲ್ಲಿ 200 ರನ್ ಹೊಡೆದಿದ್ದರು. ಈ ವಿಶ್ವ ದಾಖಲೆಯ ಇನ್ನಿಂಗ್ಸ್ ನಲ್ಲಿ 3 ಸಿಕ್ಸರ್, 25 ಬೌಂಡರಿಯನ್ನು ಹೊಡೆದಿದ್ದರು. 100 ರನ್ ರನ್ ಗಳು ಬೌಂಡರಿ ಮೂಲಕವೇ ಬಂದಿತ್ತು. ಕಠಿಣ ಗುರಿಯನ್ನು ಪಡೆದ ದಕ್ಷಿಣ ಆಫ್ರಿಕಾ 42.5 ಓವರ್ ಗಳಲ್ಲಿ 248 ರನ್ ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ಭಾರತ 153 ರನ್ ಗಳಿಂದ ಜಯಗಳಿಸಿತ್ತು.

  • ವಿಶ್ವದಾಖಲೆ, ಧೋನಿ ದಾಖಲೆ ಬ್ರೇಕ್, ಸರಣಿ ಶ್ರೇಷ್ಠ ಗೌರವ – ಪಂದ್ಯ ಒಂದು, ಕೊಹ್ಲಿ ದಾಖಲೆ ಹಲವು

    ವಿಶ್ವದಾಖಲೆ, ಧೋನಿ ದಾಖಲೆ ಬ್ರೇಕ್, ಸರಣಿ ಶ್ರೇಷ್ಠ ಗೌರವ – ಪಂದ್ಯ ಒಂದು, ಕೊಹ್ಲಿ ದಾಖಲೆ ಹಲವು

    ಬೆಂಗಳೂರು: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ.

    ಮಾಜಿ ನಾಯಕ ಧೋನಿ ದಾಖಲೆಯನ್ನು ಹಿಂದಿಕ್ಕುವುದರ ಜೊತೆಗೆ ನಾಯಕನಾಗಿ ಅತಿ ಕಡಿಮೆ ಇನ್ನಿಂಗ್ಸ್ ನಲ್ಲಿ 5 ಸಾವಿರ ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರವಾಗಿದ್ದಾರೆ.

    ಏಕದಿನ ಪಂದ್ಯದಲ್ಲಿ ನಾಯಕನಾಗಿ ಅತಿ ಕಡಿಮೆ ಇನ್ನಿಂಗ್ಸ್ ನಲ್ಲಿ 5 ಸಾವಿರ ರನ್ ಹೊಡೆಯುವ ಮೂಲಕ ಕೊಹ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಕೊಹ್ಲಿ 86 ಪಂದ್ಯಗಳ 82 ಇನ್ನಿಂಗ್ಸ್ ನಲ್ಲಿ 5 ಸಾವಿರ ರನ್ ಹೊಡೆದಿದ್ದಾರೆ. ಈ ಹಿಂದೆ ಅನುಕ್ರಮವಾಗಿ ಧೋನಿ(145 ಪಂದ್ಯ, 127 ಇನ್ನಿಂಗ್ಸ್), ಆಸ್ಟ್ರೇಲಿಯಾದ ರಿಕ್ಕಿ ಪಾಂಟಿಂಗ್(137 ಪಂದ್ಯ, 131 ಇನ್ನಿಂಗ್ಸ್), ಮೊಹಮ್ಮದ್ ಅಜರುದ್ದೀನ್(137 ಪಂದ್ಯ, 135 ಇನ್ನಿಂಗ್ಸ್), ಸೌರವ್ ಗಂಗೂಲಿ(140 ಪಂದ್ಯ, 136 ಇನ್ನಿಂಗ್ಸ್) ಕಡಿಮೆ ಇನ್ನಿಂಗ್ಸ್ ನಲ್ಲಿ ನಾಯಕನಾಗಿ 5 ಸಾವಿರ ರನ್ ಹೊಡೆದಿದ್ದರು.

    ಭಾರತದ ಪರವಾಗಿ ಧೋನಿ ನಾಯಕನಾಗಿ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಇಲ್ಲಿಯವರೆಗೆ 303 ಇನ್ನಿಂಗ್ಸ್ ಗಳಿಂದ 11,207 ರನ್‍ಗಳನ್ನು ಹೊಡೆದಿದ್ದರು. ಕೊಹ್ಲಿ ಭಾನುವಾರದ ಪಂದ್ಯದಲ್ಲಿ 89 ರನ್ ಹೊಡೆಯುವ ಮೂಲಕ ಧೋನಿ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಕೊಹ್ಲಿ ಈಗ 199 ಇನ್ನಿಂಗ್ಸ್ ಗಳಿಂದ 11,208 ರನ್ ಹೊಡೆದಿದ್ದಾರೆ. ಇದನ್ನೂ ಓದಿ: ಗಂಗೂಲಿ, ಸಚಿನ್ ಹಿಂದಿಕ್ಕಿ ವಿಶ್ವ ಕ್ರಿಕೆಟ್‍ನಲ್ಲಿ ಹಿಟ್‍ಮ್ಯಾನ್ ಸಾಧನೆ

    ಕೊಹ್ಲಿ ಕೊನೆಯ ಪಂದ್ಯದಲ್ಲಿ 89 ರನ್(91 ಎಸೆತ, 8 ಬೌಂಡರಿ) ಹೊಡೆದು ಜಯಕ್ಕೆ 15 ರನ್‍ಗಳ ಅಗತ್ಯವಿದ್ದಾಗ ಔಟಾದರು. ಮೊದಲ ಪಂದ್ಯದಲ್ಲಿ 16 ರನ್, ಎರಡನೇ ಪಂದ್ಯದಲ್ಲಿ 78 ರನ್(76 ಎಸೆತ, 6 ಬೌಂಡರಿ) ಹೊಡೆದ ಕೊಹ್ಲಿ ಅರ್ಹವಾಗಿಯೇ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

  • ‘ನಾನು ಬಿಸಿಸಿಐ ಅಧ್ಯಕ್ಷ, ರೆಗ್ಯುಲರ್ ಕ್ಯಾಪ್ಟನ್ ಅಲ್ಲ’- ರೋಹಿತ್ ಗರಂ

    ‘ನಾನು ಬಿಸಿಸಿಐ ಅಧ್ಯಕ್ಷ, ರೆಗ್ಯುಲರ್ ಕ್ಯಾಪ್ಟನ್ ಅಲ್ಲ’- ರೋಹಿತ್ ಗರಂ

    ನವದೆಹಲಿ: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ ಮಾಧ್ಯಮಗಳ ವಿರುದ್ಧ ಗರಂ ಆಗಿದ್ದು, ತಾನು ಬಿಸಿಸಿಐ ಅಧ್ಯಕ್ಷ ಅಥವಾ ತಂಡದ ರೆಗ್ಯುಲರ್ ನಾಯಕನಲ್ಲ ಎಂದು ಖಾರವಾಗಿ ಉತ್ತರಿಸಿದ್ದಾರೆ.

    ಪಂದ್ಯದ ಕುರಿತು ಮಾಧ್ಯಮಗಳ ಎದುರು ಮಾಹಿತಿ ನೀಡಲು ಆಗಮಿಸಿದ್ದ ರೋಹಿತ್ ಅವರಿಗೆ ಸುದ್ದಿಗೋಷ್ಠಿಯ ವೇಳೆ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ವಿರುದ್ಧ ಕೇಳಿ ಬಂದ ವಿಮರ್ಶೆಗಳ ಕುರಿತ ಪ್ರಶ್ನೆ ಎದುರಾಗಿದ್ದು, ಈ ಪ್ರಶ್ನೆ ಎದುರಾಗುತ್ತಿದಂತೆ ರೋಹಿತ್ ಗರಂ ಆಗಿ ಮಾತನಾಡಿದರು.

    ಮೊದಲು ಅನುಷ್ಕಾ ಶರ್ಮಾರ ಅವರ ವಿಮರ್ಶೆ ಮಾಡಿ ಹೇಳಿಕೆ ನೀಡಿದ್ದ ಟೀಂ ಇಂಡಿಯಾ ಮಾಜಿ ವಿಕೆಟ್ ಕೀಪರ್ ಫಾರೂಖ್ ಇಂಜಿನಿಯರ್, ಅನುಷ್ಕಾ ಶರ್ಮಾ ಖಡಕ್ ಉತ್ತರ ನೀಡುತ್ತಿದಂತೆ ಕ್ಷಮೆ ಕೋರಿದ್ದರು. ಈ ಬೆಳವಣಿಗೆಗಳ ಬಗ್ಗೆ ರೋಹಿತ್ ರನ್ನು ಪ್ರಶ್ನಿಸಲಾಗಿತ್ತು. ಇದರಿಂದ ಅಸಮಾಧಾನಗೊಂಡ ರೋಹಿತ್, ನಾನು ಬಿಸಿಸಿಐ ಅಧ್ಯಕ್ಷ, ತಂಡದ ರೆಗ್ಯುಲರ್ ಕ್ಯಾಪ್ಟನ್ ಕೂಡ ಅಲ್ಲ. ಈ ವಿಷಯದ ಬಗ್ಗೆ ನಾನು ಮಾತನಾಡುವುದು ಏನಿದೆ? ಈ ಬಗ್ಗೆ ನೀವು ನೇರವಾಗಿ ಫಾರೂಖ್ ಅವರನ್ನೇ ಪ್ರಶ್ನೆ ಮಾಡಿ. ಅವರು ಏನು ಹೇಳಿದ್ದಾರೆ ಎಂಬುವುದು ತಿಳಿಯುತ್ತದೆ. ನಾನು ಈ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದರು. ಇದನ್ನು ಓದಿ: ಅನುಷ್ಕಾ ಶರ್ಮಾ ಖಡಕ್ ಪ್ರತಿಕ್ರಿಯೆ ಬೆನ್ನಲ್ಲೇ ಕ್ಷಮೆ ಕೇಳಿದ ಫಾರೂಖ್

    ವಿಶ್ವ ದಾಖಲೆ ಸನಿಹ: ಇತ್ತ ಟೂರ್ನಿಯಲ್ಲಿ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ ವಿಶ್ವದಾಖಲೆ ನಿರ್ಮಿಸುವ ಸನಿಹದಲ್ಲಿದ್ದು, ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಸಿಡಿಸಿದ ಆಟಗಾರ ಎನಿಸಿಕೊಳ್ಳಲು ರೋಹಿತ್‌ಗೆ 8 ರನ್ ಗಳ ಅಗತ್ಯವಿದೆ. ಸದ್ಯ 2,450 ರನ್ ಗಳಿರುವ ಕೊಹ್ಲಿ ನಂ.1 ಪಟ್ಟದಲ್ಲಿದ್ದು, ರೋಹಿತ್ 2,443 ರನ್ ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಬಾಂಗ್ಲಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲೇ ರೋಹಿತ್, ಕೊಹ್ಲಿ ದಾಖಲೆಯನ್ನು ಮುರಿಯುವ ಅವಕಾಶವನ್ನು ಪಡೆದಿದ್ದಾರೆ.