Tag: ವಿಶ್ವದಾಖಲೆ

  • ಟಿ20 ಕ್ರಿಕೆಟ್‌ನಂತೆ ಟೀಂ ಇಂಡಿಯಾ ಬ್ಯಾಟಿಂಗ್‌- ಒಂದೇ ದಿನ 2 ವಿಶ್ವದಾಖಲೆ

    ಟಿ20 ಕ್ರಿಕೆಟ್‌ನಂತೆ ಟೀಂ ಇಂಡಿಯಾ ಬ್ಯಾಟಿಂಗ್‌- ಒಂದೇ ದಿನ 2 ವಿಶ್ವದಾಖಲೆ

    ಕಾನ್ಪುರ: ಬಾಂಗ್ಲಾದೇಶ (Bangladesh) ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್‌ (Second Test) ಪಂದ್ಯದಲ್ಲಿ ಟಿ20 ಕ್ರಿಕೆಟ್‌ನಂತೆ (T20 Cricket) ಬ್ಯಾಟ್‌ ಬೀಸಿದ ಪರಿಣಾಮ ಭಾರತ (Team India) ತಂಡ ಎರಡು ವಿಶ್ವದಾಖಲೆ (World Record) ನಿರ್ಮಿಸಿದೆ.

    ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ವೇಗದ 50 ರನ್‌ (19 ಎಸೆತ) ಮತ್ತು ಅತಿ ವೇಗದ 100 ರನ್‌ (61 ಎಸೆತ) ಭಾರತ ಹೊಡೆದಿದೆ. ಮೊದಲ 50 ರನ್‌ ಪೈಕಿ ಜೈಸ್ವಾಲ್‌ 30 ರನ್‌, ರೋಹಿತ್‌ ಶರ್ಮಾ 19 ರನ್‌ ಮತ್ತು ಎರಡು ಇತರೇ ರನ್‌ ಬಂದಿತ್ತು.

     

    ಈ ಜುಲೈನಲ್ಲಿ ಇಂಗ್ಲೆಂಡ್‌ ವಿಂಡೀಸ್‌ ವಿರುದ್ಧ 26 ಎಸೆತಗಳಲ್ಲಿ 50 ರನ್‌ ಹೊಡೆದಿತ್ತು. ವೇಗದ 100 ರನ್‌ ಹೊಡೆದ ದಾಖಲೆ ಈ ಮೊದಲು ಭಾರತದ ಹೆಸರಿನಲ್ಲೇ ಇತ್ತು. 2023 ರಲ್ಲಿ ವಿಂಡೀಸ್‌ ವಿರುದ್ಧ ಪೋರ್ಟ್‌ ಆಫ್‌ ಸ್ಪೇನ್‌ನಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ 74 ಎಸೆತಗಳಲ್ಲಿ 100 ರನ್‌ ಹೊಡೆದಿತ್ತು. ಇದನ್ನೂ ಓದಿ: IPL Mega Auction | ಡುಪ್ಲೆಸಿ ಔಟ್‌ – ಆರ್‌ಸಿಬಿಗೆ ಆನೆ ಬಲ

    ಇನ್ನಿಂಗ್ಸ್‌ ಮೊದಲ ಓವರ್‌ನಲ್ಲಿ ಯಶಸ್ವಿ ಜೈಸ್ವಾಲ್‌ ಹ್ಯಾಟ್ರಿಕ್‌ ಬೌಂಡರಿ ಹೊಡೆದಿದ್ದರು. ರೋಹಿತ್‌ ಶರ್ಮಾ ತಾನು ಎದುರಿಸಿದ ಮೊದಲ ಎಸೆತದಲ್ಲೇ ಸಿಕ್ಸ್‌ ಸಿಡಿಸಿದ್ದರು.

    ರೋಹಿತ್‌ ಶರ್ಮಾ 23 ರನ್(11‌ ಎಸೆತ, 1 ಬೌಂಡರಿ, 3 ಸಿಕ್ಸ್‌), ಯಶಸ್ವಿ ಜೈಸ್ವಾಲ್‌ 72 ರನ್‌ ( 21 ಎಸೆತ, 12 ಬೌಂಡರಿ, 2 ಸಿಕ್ಸರ್‌) , ಶುಭಮನ್‌ ಗಿಲ್‌ 39 ರನ್‌ (36 ಎಸೆತ, 4 ಬೌಂಡರಿ, 1 ಸಿಕ್ಸರ್‌), ರಿಷಭ್‌ ಪಂತ್‌ 9 ರನ್‌ ಗಳಿಸಿ ಔಟಾದರು.

    21 ಓವರ್‌ ಮುಕ್ತಾಯಕ್ಕೆ ಭಾರತ 4 ವಿಕೆಟ್‌ ನಷ್ಟಕ್ಕೆ 175 ರನ್‌ ಗಳಿಸಿದೆ. ಕೊಹ್ಲಿ 20 ರನ್‌ ಗಳಿಸಿದರೆ ರಾಹುಲ್‌ 13 ರನ್‌ ಹೊಡೆದು ಕ್ರೀಸ್‌ನಲ್ಲಿ ಆಡುತ್ತಿದ್ದಾರೆ.

    ಮೂರನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್‌ ನಷ್ಟಕ್ಕೆ 107 ರನ್‌ ಗಳಿಸಿದ್ದ ಬಾಂಗ್ಲಾದೇಶ ಇಂದು 74.2 ಓವರ್‌ಗಳಲ್ಲಿ 233 ರನ್‌ ಗಳಿಗೆ ಆಲೌಟ್‌ ಆಯ್ತು. ಮೊಮಿನುಲ್ ಹಕ್ 107 ರನ್‌ಗಳಿಸಿ ಅಜೇಯರಾಗಿ ಉಳಿದರು.

    ಬುಮ್ರಾ 3 ವಿಕೆಟ್‌ ಪಡೆದರೆ, ಮೊಹಮ್ಮದ್‌ ಸಿರಾಜ್‌, ಅಶ್ವಿನ್‌, ಅಕಾಶ್‌ ದೀಪ್‌ ತಲಾ 2 ವಿಕೆಟ್‌ ಪಡೆದರೆ ರವೀಂದ್ರ ಜಡೇಜಾ 1 ವಿಕೆಟ್‌ ಪಡೆದರು.

     

  • ಪಬ್ಲಿಕ್ ಹೀರೋ ತುಳಸಿ ಹೆಗಡೆ ಯಕ್ಷಗಾನದಲ್ಲಿ ವಿಶ್ವ ದಾಖಲೆ

    ಪಬ್ಲಿಕ್ ಹೀರೋ ತುಳಸಿ ಹೆಗಡೆ ಯಕ್ಷಗಾನದಲ್ಲಿ ವಿಶ್ವ ದಾಖಲೆ

    ಕಾರವಾರ: ಅತ್ಯಂತ‌ ಕಿರಿಯ ವಯಸ್ಸಿನಲ್ಲೇ ವಿಶ್ವಶಾಂತಿಗೆ ಯಕ್ಷ ನೃತ್ಯ ಮೂಲಕ ಕೊಡುಗೆ ನೀಡುತ್ತಿರುವ ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋ ಆಗಿದ್ದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆ (Tulasi Hegade) ಹೆಸರು ಇದೀಗ ಜಾಗತಿಕ ಮಟ್ಟದಲ್ಲೂ ದಾಖಲಾಗಿದೆ.

    ಲಂಡನ್ ಮೂಲದ ಪ್ರತಿಷ್ಠಿತ ವರ್ಲ್ಡ್ 9‌ ರೆಕಾರ್ಡ್ ಸಂಸ್ಥೆಯು ತುಳಸಿ ಹೆಗಡೆ ಹೆಸರನ್ನು ತನ್ನ ವಿಶ್ವದಾಖಲೆಯ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿಕೊಂಡಿದೆ. ಯಕ್ಷಗಾನ ಕಲಾ‌ ಪ್ರಕಾರದ ಮೂಲಕ ವಿಶ್ವಶಾಂತಿಗೆ ಈವರೆಗೆ 9 ಕಲಾ ಕುಸುಮದ ಮೂಲಕ ನೀಡುತ್ತಿರುವ ಕೊಡುಗೆಗಳನ್ನು ಗಮನಿಸಿ ಮಕ್ಕಳ ವಿಭಾಗದ ತನ್ನ ದಾಖಲಾತಿಯಲ್ಲಿ ಸೇರಿಸಿಕೊಂಡಿದೆ.

    ಬೆರಳ ತುದಿಯಲ್ಲಿ ನರ್ತನ ಮಾಡುವ ವಿದೇಶವೊಂದರ ನೃತ್ಯ ಕಲಾ ಪ್ರಕಾರ ಹೊರತುಪಡಿಸಿದರೆ ಈವರೆಗೆ ಪ್ರಪಂಚದ ಯಾವುದೇ ಕಲಾ ಪ್ರಕಾರ ಈ‌ ದಾಖಲಾತಿ ಪಟ್ಟಿಗೆ ಸೇರ್ಪಡೆ ಆಗಿರಲಿಲ್ಲ ಎಂದು ಈ ಸಂಸ್ಥೆ ತಿಳಿಸಿದೆ. ಈ ದಾಖಲೆಗೆ ತುಳಸಿ ಹೆಗಡೆ ಹೆಸರು ಸೇರ್ಪಡೆಯಿಂದ ಯಕ್ಷ ರೂಪಕದ ಮೂಲಕ ಯಕ್ಷಗಾನದ ಹೆಸರೂ ಇದೇ ಪ್ರಥಮ ಬಾರಿಗೆ ಸೇರಿದಂತಾಗಿದೆ.

    ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯಲ್ಲಿ 10 ನೇ ತರಗತಿ ಓದುತ್ತಿರುವ ತುಳಸಿ ಹೆಗಡೆ ತನ್ನ ಮೂರು ವರ್ಷದಿಂದಲೇ ಯಕ್ಷಗಾನ ಕ್ಷೇತ್ರಕ್ಕೆ ಬಾಲ ಹೆಜ್ಜೆ ಇಟ್ಟವಳು. ಐದೂವರೆ ವರ್ಷದಿಂದ ವಿಶ್ವ ಶಾಂತಿ ರೂಪಕಗಳನ್ನು ಪ್ರಸ್ತುತಗೊಳಿಸುತ್ತಿದ್ದಾಳೆ. ಇದನ್ನೂ ಓದಿ: ಶಿರಸಿ ಮೂಲದ ಯುವತಿ ಡಾ.ಶೃತಿ ಹೆಗಡೆಗೆ ವಿಶ್ವ ಸುಂದರಿ-2024 ಕಿರೀಟ!

    ಪೌರಾಣಿಕ ಆಖ್ಯಾನಗಳ 9 ರೂಪಕಗಳನ್ನು ಪ್ರಸ್ತುತಗೊಳಿಸುವ ಈಕೆ, ರಾಜ್ಯ, ಹೊರ ರಾಜ್ಯಗಳಲ್ಲಿ 850ಕ್ಕೂ ಅಧಿಕ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾಳೆ. ಹಿರಿಯ ಕಲಾವಿದರ ಜೊತೆ ಬೇರೆ ಬೇರೆ ಯಕ್ಷಗಾನ ಆಖ್ಯಾನಗಳಲ್ಲೂ ಪಾತ್ರ ಮಾಡುತ್ತಿದ್ದಾಳೆ.

    ಈಗಾಗಲೇ ಇಂಡಿಯಾ ಬುಕ್ ಆಪ್ ರೆಕಾರ್ಡನಲ್ಲಿಯೂ ದಾಖಲಾಗಿದ್ದು, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ನೀಡುವ ರಾಜ್ಯ ಮಟ್ಟದ ಬಾಲ ಗೌರವ ಪ್ರಶಸ್ತಿ, ಟೈಮ್ಸಆಫ್ ಇಂಡಿಯಾದ ದೇಶ ಮಟ್ಟದ 19ವರ್ಷದೊಳಗಿನ ಅನ್ ಸ್ಟಾಪೇಬಲ್ 21 ಅವಾರ್ಡ್ ಸೇರಿದಂತೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಅರಸಿ ಬಂದಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೂ ಅವಕಾಶ ಸಿಕ್ಕಿತ್ತು.‌

  • 24 ರನ್‌ಗಳ ಗೆಲುವು, ಸೆಮಿಗೆ ಎಂಟ್ರಿ – ವಿಶ್ವಕಪ್‌ ಫೈನಲ್ ಸೋಲಿಗೆ ಸೇಡು ತೀರಿಸಿದ ಭಾರತ

    24 ರನ್‌ಗಳ ಗೆಲುವು, ಸೆಮಿಗೆ ಎಂಟ್ರಿ – ವಿಶ್ವಕಪ್‌ ಫೈನಲ್ ಸೋಲಿಗೆ ಸೇಡು ತೀರಿಸಿದ ಭಾರತ

    ಗ್ರಾಸ್‌ ಐಲೆಟ್‌(ಸೇಂಟ್‌ ಲೂಸಿಯಾ): ಟಿ20 ವಿಶ್ವಕಪ್‌ (T20 World Cup) ಕ್ರಿಕೆಟ್‌ ಸೂಪರ್‌ 8 ಪಂದ್ಯದಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ ಭಾರತ 24 ರನ್‌ಗಳ ಜಯ ಸಾಧಿಸಿ ಸೆಮಿಫೈನಲ್‌ ಪ್ರವೇಶಿಸಿದೆ. ಈ ಮೂಲಕ ಕಳೆದ ವರ್ಷದ ವಿಶ್ವಕಪ್‌ ಕ್ರಿಕೆಟ್‌ ಫೈನಲಿನಲ್ಲಿ ಸೋತಿದ್ದ ಭಾರತ ಈ ಪಂದ್ಯವನ್ನು ಗೆಲ್ಲುವ ಮೂಲಕ ಸೇಡು ತೀರಿಸಿದೆ.

    ಗೆಲ್ಲಲು 205 ರನ್‌ಗಳ ಕಠಿಣ ಗುರಿಯನ್ನು ಪಡೆದ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 181 ರನ್‌ ಹೊಡೆದು ಜಯಗಳಿಸಿತು. ಕೊನೆಯಲ್ಲಿ ಆರ್ಶ್‌ದೀಪ್‌ ಸಿಂಗ್‌, ಕುಲದೀಪ್‌ ಯಾದವ್‌, ಬುಮ್ರಾ ಉತ್ತಮ ಬೌಲಿಂಗ್‌ ದಾಳಿ ನಡೆಸಿದ ಪರಿಣಾಮ ಭಾರತ ಗೆಲುವು ಸಾಧಿಸಿತು.

    ಡೇವಿಡ್‌ ವಾರ್ನರ್‌ 6 ರನ್‌ಗಳಿಸಿ ಬೇಗನೇ ಔಟಾದರೂ ಟ್ರಾವಿಸ್‌ ಹೆಡ್‌ ಮತ್ತು ಮಿಚೆಲ್‌ ಮಾರ್ಷ್‌ ಎರಡನೇ ವಿಕೆಟಿಗೆ 81 ರನ್‌ ಜೊತೆಯಾಟವಾಡಿ ಚೇತರಿಕೆ ನೀಡಿದರು.

    ವಿಕೆಟ್‌ ಉರುಳುತ್ತಿದ್ದರೂ ಟ್ರಾವಿಸ್‌ ಹೆಡ್‌ ನಿಂತು ಆಡುತ್ತಿದ್ದರು. ಬೂಮ್ರಾ ಎಸೆದ ಇನ್ನಿಂಗ್ಸ್‌ 17ನೇ ಓವರ್‌ನಲ್ಲಿ ಟ್ರಾವಿಸ್‌ ಹೆಡ್‌ 76 ರನ್‌ (43 ಎಸೆತ, 9 ಬೌಂಡರಿ,4 ಸಿಕ್ಸ್‌) ಗಳಿಸಿದ್ದಾಗ ರೋಹಿತ್‌ ಶರ್ಮಾ ಕ್ಯಾಚ್‌ ನೀಡಿ ಔಟಾದ ಬಳಿಕ ಭಾರತದತ್ತ ಪಂದ್ಯ ವಾಲಿತು.

    ಆರ್ಶ್‌ದೀಪ್‌ ಸಿಂಗ್‌ 3 ವಿಕೆಟ್‌, ಕುಲದೀಪ್‌ ಯಾದವ್‌ 2 , ಬುಮ್ರಾ ಮತ್ತು ಅಕ್ಷರ್‌ ಪಟೇಲ್‌ ತಲಾ ಒಂದೊಂದು ವಿಕೆಟ್‌ ಕಿತ್ತರು. ಇದನ್ನೂ ಓದಿ: ಸಿಕ್ಸ್‌, ಬೌಂಡರಿ ಸುರಿಮಳೆ – ವಿಶ್ವದಾಖಲೆ ನಿರ್ಮಿಸಿದ ರೋಹಿತ್‌ ಶರ್ಮಾ

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ಪರ ವಿರಾಟ್‌ ಕೊಹ್ಲಿ ಶೂನ್ಯಕ್ಕೆ ಔಟಾದರು. ವಿಕೆಟ್‌ ಉರುಳಿದ್ದರೂ ರೋಹಿತ್‌ ಶರ್ಮಾ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದರು. ಕೇವಲ 41 ಎಸೆತಗಳಲ್ಲಿ 91 ರನ್‌ ಹೊಡೆಯವ ಮೂಲಕ ಹಲವು ದಾಖಲೆ ನಿರ್ಮಿಸಿದರು. ಈ ಸುಂದರ ರೋಹಿತ್‌ ಶರ್ಮಾ (Rohit Sharma) ಸಿಕ್ಸ್‌ ಮತ್ತು ಬೌಂಡರಿ ಮೂಲಕವೇ 76 ರನ್‌ ಚಚ್ಚಿದ್ದರು. 19 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ ರೋಹಿತ್‌ ಮಿಚೆಲ್‌ ಸ್ಟ್ರಾಕ್‌ ಎಸೆತದಲ್ಲಿ ಬೌಲ್ಡ್‌ ಔಟ್‌ ಆದರು.

    ರಿಷಭ್‌ ಪಂತ್‌ 15 ರನ್‌, ಸೂರ್ಯಕುಮಾರ್‌ ಯಾದವ್‌ 31 ರನ್‌(16 ಎಸೆತ, 3 ಬೌಂಡರಿ, 2 ಸಿಕ್ಸರ್‌), ಶಿವಂ ದುಬೆ 28 ರನ್‌ (22 ಎಸೆತ, 2 ಬೌಂಡರಿ, 1 ಸಿಕ್ಸ್‌), ಹಾರ್ದಿಕ್‌ ಪಾಂಡ್ಯ ಔಟಾಗದೇ 27 ರನ್‌ ( 17 ಎಸೆತ, 1 ಬೌಂಡರಿ, 2 ಸಿಕ್ಸ್‌), ಜಡೇಜಾ ಔಟಾಗದೇ 9 ರನ್‌ (5 ಎಸೆತ, 1 ಸಿಕ್ಸ್‌) ಹೊಡೆದ ಪರಿಣಾಮ ಭಾರತ ಅಂತಿಮವಾಗಿ 5 ವಿಕೆಟ್‌ ನಷ್ಟಕ್ಕೆ 205 ರನ್‌ ಹೊಡೆಯಿತು.

  • ಸಿಕ್ಸ್‌, ಬೌಂಡರಿ ಸುರಿಮಳೆ – ವಿಶ್ವದಾಖಲೆ ನಿರ್ಮಿಸಿದ ರೋಹಿತ್‌ ಶರ್ಮಾ

    ಸಿಕ್ಸ್‌, ಬೌಂಡರಿ ಸುರಿಮಳೆ – ವಿಶ್ವದಾಖಲೆ ನಿರ್ಮಿಸಿದ ರೋಹಿತ್‌ ಶರ್ಮಾ

    ಗ್ರಾಸ್‌ ಐಲೆಟ್‌(ಸೇಂಟ್‌ ಲೂಸಿಯಾ): ಟಿ20 ವಿಶ್ವಕಪ್‌ (T20 World Cup) ಆಸ್ಟ್ರೇಲಿಯಾ (Australia) ವಿರುದ್ಧ ನಡೆದ ಸೂಪರ್‌ 8 ಪಂದ್ಯದಲ್ಲಿ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ ವಿಶ್ವ ದಾಖಲೆ (World Record) ಬರೆದಿದ್ದಾರೆ.

    ಕೇವಲ 41 ಎಸೆತಗಳಲ್ಲಿ 91 ರನ್‌ ಹೊಡೆಯವ ಮೂಲಕ ಹಲವು ದಾಖಲೆ ನಿರ್ಮಿಸಿದ್ದಾರೆ. ಈ ಸುಂದರ ಇನ್ನಿಂಗ್ಸ್‌ ಬರೋಬ್ಬರಿ 8 ಸಿಕ್ಸ್‌, 7 ಬೌಂಡರಿ ಒಳಗೊಂಡಿತ್ತು. ರೋಹಿತ್‌ ಶರ್ಮಾ (Rohit Sharma) ಸಿಕ್ಸ್‌ ಮತ್ತು ಬೌಂಡರಿ ಮೂಲಕವೇ 76 ರನ್‌ ಚಚ್ಚಿದ್ದರು.

    ವಿರಾಟ್‌ ಕೊಹ್ಲಿ (Virat Kohli) ಶೂನ್ಯಕ್ಕೆ ಔಟಾದರೂ ರೋಹಿತ್‌ ಶರ್ಮಾ ಆಸೀಸ್‌ ಬೌಲರ್‌ಗಳನ್ನು ಬೆಂಡೆತ್ತಿದ್ದರು. 19 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ ರೋಹಿತ್‌ ಮಿಚೆಲ್‌ ಸ್ಟ್ರಾಕ್‌ ಎಸೆತದಲ್ಲಿ ಬೌಲ್ಡ್‌ ಔಟ್‌ ಆದರು. ಇದನ್ನೂ ಓದಿ: ಟೀಂ ಇಂಡಿಯಾ ಮುಖ್ಯಕೋಚ್‌ ಹುದ್ದೆಗೆ ಗಂಭೀರ್‌ ಫಿಕ್ಸ್‌? – ಗಂಭೀರ್‌ ಸ್ಪಷ್ಟನೆ ಏನು?

    ಅತಿ ಹೆಚ್ಚು ರನ್‌:
    ಟಿ20 ಕ್ರಿಕೆಟ್‌ ಅತಿ ಹೆಚ್ಚು ರನ್‌ ಸಿಡಿಸಿದ ಬ್ಯಾಟರ್‌ ಆಗಿ ಹೊರಹೊಮ್ಮಿದ್ದಾರೆ. ಪಾಕಿಸ್ತಾನದ ಬಾಬರ್‌ ಅಜಂ 146 ಇನ್ನಿಂಗ್ಸ್‌ನಿಂದ 4,145 ರನ್‌ ಹೊಡೆದರೆ ರೋಹಿತ್‌ ಶರ್ಮಾ 149 ಇನ್ನಿಂಗ್ಸ್‌ನಿಂದ 4,165 ರನ್‌ ಹೊಡೆದಿದ್ದಾರೆ.


    ನಾಯಕನಾಗಿ ವೇಗದ ಅರ್ಧಶತಕ
    19 ಎಸೆತಗಳಲ್ಲಿ ರೋಹಿತ್‌ ಶರ್ಮಾ ಅರ್ಧಶತಕ ಹೊಡೆದರು. ಈ ಮೊದಲು 2007ರಲ್ಲಿ ಬಾಂಗ್ಲಾದ ಮೊಹಮ್ಮದ್‌ ಅಶ್ರಫುಲ್‌ 20 ಎಸೆತಗಳಲ್ಲಿ ಫಿಫ್ಟಿ ಹೊಡೆದಿದ್ದರು.

    ಭಾರತದ ಪರ ಅತಿ ಹೆಚ್ಚು ಸಿಕ್ಸ್‌:
    ಭಾರತದ ಪರ ಪಂದ್ಯವೊಂದರಲ್ಲಿ ಅತಿ ಹೆಚ್ಚು ಸಿಕ್ಸ್‌ ಸಿಡಿಸಿದ ಆಟಗಾರನಾಗಿ ರೋಹಿತ್‌ ಶರ್ಮಾ ಹೊರ ಹೊಮ್ಮಿದ್ದಾರೆ. ಈ ಹಿಂದೆ ಯುವರಾಜ್‌ ಸಿಂಗ್‌ 2007ರಲ್ಲಿ ಇಂಗ್ಲೆಂಡ್‌ ವಿರುದ್ಧ 7 ಸಿಕ್ಸ್‌ ಹೊಡೆದಿದ್ದರು. ಈ ಪಂದ್ಯದಲ್ಲಿ ಯುವರಾಜ್‌ ಒಂದೇ ಓವರ್‌ನಲ್ಲಿ 6 ಸಿಕ್ಸ್‌ ಸಿಡಿಸಿ ವಿಶ್ವದಾಖಲೆ ಬರೆದಿದ್ದರು.

     

  • ಟಿ20ಯಲ್ಲಿ ವಿಶ್ವದಾಖಲೆ ಬರೆದ ಡೇವಿಡ್‌ ವಾರ್ನರ್‌

    ಟಿ20ಯಲ್ಲಿ ವಿಶ್ವದಾಖಲೆ ಬರೆದ ಡೇವಿಡ್‌ ವಾರ್ನರ್‌

    ಹೋಬರ್ಟ್‌: ಆಸ್ಟ್ರೇಲಿಯಾದ (Australia) ಸ್ಫೋಟಕ ಆರಂಭಿಕ ಆಟಗಾರ ಡೇವಿಡ್‌ ವಾರ್ನರ್ (David Warner) ಅರ್ಧಶತಕ ಸಿಡಿಸುವ ಮೂಲಕ ಟಿ20 (T20) ಕ್ರಿಕೆಟ್‌ನಲ್ಲಿ ವಿಶ್ವದಾಖಲೆ (World Record) ಬರೆದಿದ್ದಾರೆ.

    ವಿಂಡೀಸ್‌ (West Indies) ವಿರುದ್ಧ 22 ಎಸೆತದಲ್ಲಿ 50 ರನ್‌ ಹೊಡೆಯುವ ಮೂಲಕ 100ನೇ ಅರ್ಧಶತಕ ಸಿಡಿಸಿದರು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ 100 ಅರ್ಧಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ವಾರ್ನರ್‌ ಪಾತ್ರರಾದರು.  ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಪೂಜೆ- ಯೋಗಿ ಆದಿತ್ಯನಾಥ್‌ಗೆ ಟಿಎಂಸಿ ನಾಯಕ ಎಚ್ಚರಿಕೆ

    ಎಲ್ಲಾ ಮಾದರಿಯ ಟಿ20 ಕ್ರಿಕೆಟ್‌ನಲ್ಲಿ 367 ಪಂದ್ಯಗಳ 366 ಇನ್ನಿಂಗ್ಸ್‌ನಲ್ಲಿ ಡೇವಿಡ್‌ ವಾರ್ನರ್‌ ಈ ಸಾಧನೆ ಮಾಡಿದರು. ಈ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ (Virat Kohli) ಎರಡನೇ ಸ್ಥಾನದಲ್ಲಿದ್ದಾರೆ.

    ಕೊಹ್ಲಿ 376 ಪಂದ್ಯಗಳ 359 ಇನ್ನಿಂಗ್ಸ್‌ ಆಡಿ 91 ಅರ್ಧಶತಕ ಸಿಡಿಸಿದ್ದಾರೆ. ವಿಂಡೀಸ್‌ ಆಟಗಾರ ಕ್ರಿಸ್‌ ಗೇಲ್‌ 463 ಪಂದ್ಯಗಳಿಂದ 88 ಅರ್ಧಶತಕ ಸಿಡಿಸಿ ಮೂರನೇ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ಲಂಡನ್‌ ಪ್ಲಾನ್‌ ವಿಫಲವಾಗಿದೆ- ಫಲಿತಾಂಶ ಘೋಷಣೆಗೂ ಮುನ್ನ ಇಮ್ರಾನ್‌ ವಿಜಯದ ಭಾಷಣ

    11 ರನ್‌ಗಳ ಜಯ:
    ಮೊದಲ ಟಿ20 ಪಂದ್ಯಗಳಲ್ಲಿ ವಿಂಡೀಸ್‌ ವಿರುದ್ಧ 11 ರನ್‌ಗಳ ಜಯವನ್ನು ಆಸ್ಟ್ರೇಲಿಯಾ ಸಾಧಿಸಿದೆ. ಡೇವಿಡ್‌ ವಾರ್ನರ್‌ 36 ಎಸೆತ ಎದುರಿಸಿ 70 ರನ್‌(12 ಬೌಂಡರಿ, 1 ಸಿಕ್ಸರ್‌) ಹೊಡೆದು ಔಟಾದರು. ಟಿಮ್‌ ಡೇವಿಡ್‌ 37 ರನ್‌, ಜೋಶ್‌ ಇಂಗ್ಲಿಸ್‌ 39 ರನ್‌ ಹೊಡೆದರು. ಅಂತಿಮವಾಗಿ ಆಸ್ಟ್ರೇಲಿಯಾ 7 ವಿಕೆಟ್‌ ನಷ್ಟಕ್ಕೆ 213 ರನ್‌ ಗಳಿಸಿತು. ಉತ್ತಮ ಹೋರಾಟ ನೀಡಿದ ವಿಂಡೀಸ್‌ 8 ವಿಕೆಟ್‌ ನಷ್ಟಕ್ಕೆ 202 ರನ್‌ಗಳಿಸಿತು.

  • ಯೂಟ್ಯೂಬ್‌ನಲ್ಲಿ ವಿಶ್ವದಾಖಲೆ ಬರೆದ ನರೇಂದ್ರ ಮೋದಿ

    ಯೂಟ್ಯೂಬ್‌ನಲ್ಲಿ ವಿಶ್ವದಾಖಲೆ ಬರೆದ ನರೇಂದ್ರ ಮೋದಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಯೂಟ್ಯೂಬ್‌ನಲ್ಲಿ (YouTube) ವಿಶ್ವದಾಖಲೆ (World Record) ಬರೆದಿದ್ದಾರೆ. ಯೂಟ್ಯೂಬ್‌ನಲ್ಲಿ 2 ಕೋಟಿ ಚಂದದಾರರನ್ನು ಹೊಂದಿದ ವಿಶ್ವದ ಏಕೈಕ ನಾಯಕ ಎಂಬ ಕೀರ್ತಿಗೆ ಪಾತ್ರವಾಗಿದ್ದಾರೆ.

    ಪ್ರಧಾನಿ ಮೋದಿ ಖಾತೆಯಿಂದ ಇಲ್ಲಿಯವರೆಗೆ ಒಟ್ಟು 23 ಸಾವಿರ ವಿಡಿಯೋಗಳು ಅಪ್ಲೋಡ್‌ ಆಗಿವೆ. 2023ರ ಡಿಸೆಂಬರ್‌ ತಿಂಗಳಿನಲ್ಲೇ 2.24 ಶತಕೋಟಿ ವೀಕ್ಷಣೆ ಕಂಡಿವೆ.

    2005ರಲ್ಲಿ ಯೂಟ್ಯೂಬ್‌ ಕಂಪನಿ ಆರಂಭವಾದರೆ  ಮೋದಿಯವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ 2007 ರಲ್ಲಿ ಖಾತೆ ತೆರೆದಿದ್ದರು. ಇದನ್ನೂ ಓದಿ: Ayodhya Ram Mandir – ಕಾರ್ಯಕ್ರಮಕ್ಕೆ ಆಹ್ವಾನಿತ ಗಣ್ಯರ ಕಂಪ್ಲೀಟ್‌ ಲಿಸ್ಟ್‌

    ಯೂಟ್ಯೂಬ್‌ನಲ್ಲಿ ಎರಡನೇ ಅತಿ ಹೆಚ್ಚು ಚಂದದಾರರು ಬ್ರೆಜಿಲ್‌ ಮಾಜಿ ಅಧ್ಯಕ್ಷ ಜೈರ್‌ ಬೋಲ್ಸೋನಾ ಅವರಿಗಿದ್ದು 64 ಲಕ್ಷ ಮಂದಿ ಸಬ್‌ಸ್ಕ್ರೈಬ್‌ ಮಾಡಿದ್ದಾರೆ. ಮೂರನೇ ಸ್ಥಾನದಲ್ಲಿರುವ ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ ಅವರನ್ನು 11 ಲಕ್ಷ ಮಂದಿ ಸಬ್‌ಸ್ಕ್ರೈಬ್‌ ಮಾಡಿದ್ದರೆ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರ ಖಾತೆಯನ್ನು 7.94 ಲಕ್ಷ ಮಂದಿ ಸಬ್‌ಸ್ಕ್ರೈಬ್‌ ಮಾಡಿದ್ದಾರೆ.

    ಟರ್ಕಿಯ ಎರ್ಡೊಗನ್ 4.19 ಲಕ್ಷ, ಫ್ರಾನ್ಸಿನ ಮ್ಯಾಕ್ರಾನ್ 3.16 ಲಕ್ಷ, ಅರ್ಜೆಂಟೀನಾದ ಆಲ್ಬರ್ಟೊ ಫೆರ್ನಾಂಡಿಸ್‌81,200 ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದ್ದರು.

    ಟ್ವಿಟ್ಟರ್‌ನಲ್ಲಿ ಮೋದಿ ಅವರನ್ನು 9.4 ಕೋಟಿ ಮಂದಿ ಫಾಲೋ ಮಾಡಿದ್ದರೆ, ಫೇಸ್‌ಬುಕ್‌ನಲ್ಲಿ ಮೋದಿ ಅವರ ಪೇಜನ್ನು 4.8 ಕೋಟಿ ಮಂದಿ ಲೈಕ್‌ ಮಾಡಿದ್ದಾರೆ. ಇನ್‌ಸ್ಟಾದಲ್ಲಿ ಮೋದಿ ಅವರನ್ನು 8.2 ಕೋಟಿ ಮಂದಿ ಫಾಲೋ ಮಾಡುತ್ತಿದ್ದಾರೆ. ಮೋದಿ ಅವರನ್ನು ವಾಟ್ಸಪ್‌ನಲ್ಲಿ 12 ಕೋಟಿ ಮಂದಿ ಫಾಲೋ ಮಾಡುತ್ತಿದ್ದಾರೆ.

  • ಮ್ಯಾಕ್ಸಿ ಬೆಂಕಿ ಆಟಕ್ಕೆ ಹಲವು ದಾಖಲೆಗಳು ಭಸ್ಮ – ವಿಶ್ವದಾಖಲೆಯ ಪಟ್ಟಿ ಓದಿ

    ಮ್ಯಾಕ್ಸಿ ಬೆಂಕಿ ಆಟಕ್ಕೆ ಹಲವು ದಾಖಲೆಗಳು ಭಸ್ಮ – ವಿಶ್ವದಾಖಲೆಯ ಪಟ್ಟಿ ಓದಿ

    ಮುಂಬೈ: ಸ್ನಾಯು ಸೆಳೆತ, ರನ್‌ ಓಡಲು ಪರದಾಟ, ಓವರ್‌ನ ಕೊನೆಯ ಬಾಲಿನಲ್ಲಿ ಸಿಂಗಲ್‌ ಓಟ, ರನ್‌ ಓಡಲು ಕಷ್ಟವಾಗುತ್ತದೆ ಎಂದಾಗ ಬೌಂಡರಿ ಸಿಕ್ಸರ್‌ ಸುರಿಮಳೆ… ಇದು ಆಸ್ಟ್ರೇಲಿಯಾದ ಸ್ಟಾರ್‌ ಆಲ್‌ರೌಂಡರ್‌ ಮ್ಯಾಕ್ಸ್‌ವೆಲ್‌ (Glenn Maxwell) ವಿಶ್ವದಾಖಲೆಯ (World Record) ಚೇಸಿಂಗ್‌ ಆಟದ ಪರಿ.

    ಮುಂಬೈನಲ್ಲಿ ಅಫ್ಘಾನಿಸ್ತಾನದ (Afghanistan) ವಿರುದ್ಧ ಮ್ಯಾಕ್ಸಿ ಏಕಾಂಗಿಯಾಗಿ ಆಡಿ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಸ್ನಾಯು ಸೆಳೆತವಾಗಿದ್ದರೂ ಛಲ ಬಿಡದೇ ಹೋರಾಡಿದ ಮ್ಯಾಕ್ಸ್‌ವೆಲ್‌ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಯಾರೂ ಮಾಡದ ಸಾಧನೆ ಮಾಡಿ ಈಗ ಇತಿಹಾಸ ನಿರ್ಮಿಸಿದ್ದಾರೆ.

     

    View this post on Instagram

     

    A post shared by ICC (@icc)


    91 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡಾಗ ಆಸ್ಟ್ರೇಲಿಯಾ 150 ರನ್‌ಗಳಿಸುವುದೇ ಕಷ್ಟ ಎಂದೇ ಭಾವಿಸಲಾಗಿತ್ತು. ಆದರೆ ಮ್ಯಾಕ್ಸಿ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದರು. ಸ್ನಾಯು ಸೆಳೆತವಾದರೂ ಕಷ್ಟಪಟ್ಟು ಬ್ಯಾಟ್‌ ಮಾಡಿದರು. ಒಂದು ಹಂತದಲ್ಲಿ ಇನ್ನೇನು ಮ್ಯಾಕ್ಸ್‌ವೆಲ್‌ ರಿಟೈರ್ಡ್‌ ಹರ್ಟ್‌ ಆಗಿ ಹೊರನಡೆಯಲಿದ್ದಾರೆ ಎನ್ನುವ ಪರಿಸ್ಥಿತಿ ಇತ್ತು. ಮ್ಯಾಕ್ಸಿ 147 ರನ್‌ ಗಳಿಸಿದ್ದಾಗ ಆಡಂ ಜಂಪಾ ಹೆಲ್ಮೆಟ್‌, ಪ್ಯಾಡ್‌ ಕಟ್ಟಿಕೊಂಡು ಬೌಂಡರಿ ಗೆರೆ ಬಳಿ ಸಿದ್ಧವಾಗಿ ನಿಂತಿದ್ದರು. ಆದರೆ ಹಠ ಬಿಡದ ಮ್ಯಾಕ್ಸ್‌ವೆಲ್‌ ಬಹಳ ಲೆಕ್ಕಾಚಾರದಿಂದ ಬ್ಯಾಟ್‌ ಬೀಸತೊಡಗಿದರು. ಹೆಚ್ಚು ಹೆಚ್ಚು ಬೌಂಡರಿ, ಸಿಕ್ಸರ್‌ ಸಿಡಿಸುವ ಮೂಲಕ ತಂಡದ ಸ್ಕೋರ್‌ ಹೆಚ್ಚಿಸಿದರು. ಓವರ್‌ನ ಕೊನೆಯ ಎಸೆತದಲ್ಲಿ ಕಷ್ಟಪಟ್ಟು ಒಂದು ರನ್‌ ಓಡುವ ಮೂಲಕ ಮರಳಿ ಸ್ಟ್ರೈಕ್‌ಗೆ ಬರುತ್ತಿದ್ದರು. ಅಂತಿಮವಾಗಿ 128 ಎಸೆತದಲ್ಲಿ 201 ರನ್‌ ಸಿಡಿಸಿ ತಂಡವನ್ನು ಸೆಮಿಸ್‌ಗೇರಿಸಿದರು.

    ಮ್ಯಾಕ್ಸ್‌ವೆಲ್‌ ಬ್ಯಾಟಿನಿಂದ 21 ಬೌಂಡರಿ ಸಿಡಿದರೆ ಬರೋಬ್ಬರಿ 10 ಸಿಕ್ಸ್‌ ಸಿಡಿಯಲ್ಪಟ್ಟಿತ್ತು. ಬೌಂಡರಿ, ಸಿಕ್ಸ್‌ ಮೂಲಕವೇ 144 ರನ್‌ ಚಚ್ಚಿದ್ದರು. ಅದರಲ್ಲೂ ಮುರಿಯದ 8ನೇ ವಿಕೆಟಿಗೆ ನಾಯಕ ಪ್ಯಾಟ್‌ ಕಮ್ಮಿನ್ಸ್‌ ಜೊತೆಗೆ 170 ಎಸೆತಗಳಲ್ಲಿ 202ರನ್‌ ಜೊತೆಯಾಟವಾಡಿದರು. ಇದರಲ್ಲಿ ಮ್ಯಾಕ್ಸಿ ಪಾಲು 179 ರನ್‌. ಪ್ಯಾಟ್‌ ಕಮ್ಮಿನ್ಸ್‌ 68 ಎಸೆತ ಎದುರಿಸಿ ಕೇವಲ 12 ರನ್‌ ಹೊಡೆದು ಮ್ಯಾಕ್ಸಿಗೆ ಉತ್ತಮ ಸಾಥ್‌ ನೀಡಿದರು. ಆಸ್ಟ್ರೇಲಿಯಾ ಒಟ್ಟು ಸ್ಕೋರ್‌ 293. ಇದರಲ್ಲಿ ಮ್ಯಾಕ್ಸ್‌ವೆಲ್‌ ಒಬ್ಬರದ್ದೇ 201 ರನ್‌. ಇದನ್ನೂ ಓದಿ: World Cup 2023: ಆಸೀಸ್‌ ವಿರುದ್ಧ ಹಲವು ದಾಖಲೆ ನಿರ್ಮಿಸಿದ ಅಫ್ಘಾನ್‌..!

    ಮ್ಯಾಕ್ಸಿಯ ಬ್ಯಾಟಿಂಗ್‌ ಆರ್ಭಟ ಹೇಗಿತ್ತು ಎಂದರೆ 50 ರನ್‌ 51 ಎಸೆತದಲ್ಲಿ ಬಂದಿದ್ದರೆ 100 ರನ್‌ 76 ಎಸೆತದಲ್ಲಿ ಬಂದಿತ್ತು. 150 ರನ್‌ 104 ಎಸೆತದಲ್ಲಿ ದಾಖಲಾದರೆ 200 ರನ್‌ 128ನೇ ಎಸೆತದಲ್ಲಿ ಬಂದಿತ್ತು. ನಿಲ್ಲಲು ಆಗದ ಸ್ಥಿತಿಯಲ್ಲಿ ಸ್ಫೋಟಕ ಬ್ಯಾಟ್‌ ಮಾಡಿದ ಮ್ಯಾಕ್ಸ್‌ವೆಲ್‌ ಹಲವು ದಾಖಲೆಗಳನ್ನು ಉಡೀಸ್‌ ಮಾಡಿದ್ದಾರೆ.

     

    View this post on Instagram

     

    A post shared by ICC (@icc)


    ಆಸ್ಟ್ರೇಲಿಯಾದ ಮೊದಲ ದ್ವಿಶತಕ
    5 ಬಾರಿ ವಿಶ್ವಕಪ್‌ ಗೆದ್ದಿರುವ ಆಸ್ಟ್ರೇಲಿಯಾ (Australia) ಪರವಾಗಿ ಇಲ್ಲಿಯವರೆಗೂ ಯಾವೊಬ್ಬ ಬ್ಯಾಟರ್‌ ದ್ವಿಶತಕ ಸಿಡಿಸಿರಲಿಲ್ಲ. ಈ ಹಿಂದೆ ಶೇನ್‌ ವಾಟ್ಸನ್‌ ಔಟಾಗದೇ 185 ರನ್‌ ಸಿಡಿಸಿದ್ದರು. ಇದು ಆಸ್ಟ್ರೇಲಿಯಾ ಪರವಾಗಿ ದಾಖಲಾದ ಅತ್ಯಧಿಕ ಸ್ಕೋರ್‌ ಆಗಿತ್ತು. ಬಾಂಗ್ಲಾದೇಶದ ವಿರುದ್ಧ 2011 ರ ವಿಶ್ವಕಪ್‌ನಲ್ಲಿ ಈ ವಾಟ್ಸನ್‌ ಈ ಸಾಧನೆ ನಿರ್ಮಿಸಿದ್ದರು. ವಾಟ್ಸನ್‌ ದಾಖಲೆಯನ್ನು ಮ್ಯಾಕ್ಸಿ ಈಗ ಮುರಿದಿದ್ದಾರೆ.

    ರನ್‌ ಚೇಸ್‌ನಲ್ಲಿ ವಿಶ್ವದಾಖಲೆ
    ಚೇಸಿಂಗ್‌ನಲ್ಲಿ 200 ರನ್‌ ಹೊಡೆಯುವುದು ಬಹಳ ಕಷ್ಟ. ಮ್ಯಾಕ್ಸ್‌ವೆಲ್‌ ಚೇಸಿಂಗ್‌ ವೇಳೆ ದ್ವಿಶತಕ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ 2021ರಲ್ಲಿ ಪಾಕಿಸ್ತಾನ ಫಖರ್‌ ಜಮಾನ್‌ ದಕ್ಷಿಣ ಆಫ್ರಿಕಾದ ವಿರುದ್ಧ 193 ರನ್‌ ಹೊಡೆದಿದ್ದರು. ಮೊಬೈಲಿನಲ್ಲೇ ಲೇಟೆಸ್ಟ್‌ ಸುದ್ದಿ ಓದಲು ಪಬ್ಲಿಕ್‌ ಟಿವಿ ವಾಟ್ಸಪ್‌ ಚಾನೆಲಿಗೆ ಸೇರ್ಪಡೆಯಾಗಿಪಬ್ಲಿಕ್‌ ಟಿವಿ ವಾಟ್ಸಪ್‌ ಚಾನೆಲ್‌

     

    View this post on Instagram

     

    A post shared by ICC (@icc)

    ದ್ವಿತಶತಕ ಸಿಡಿಸಿದ ಮೂರನೇ ಆಟಗಾರ
    ಔಟಾಗದೇ 201 ರನ್‌ ಸಿಡಿಸುವ ಮೂಲಕ ವಿಶ್ವಕಪ್‌ನಲ್ಲಿ ಮೂರನೇ ದ್ವಿಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಈ ಹಿಂದೆ 2015ರಲ್ಲಿ ಜಿಂಬಾಬ್ವೆ ವಿರುದ್ಧ ಕ್ರಿಸ್‌ ಗೇಲ್‌ 215 ರನ್‌ ಸಿಡಿಸಿದ್ದರೆ 2015ರಲ್ಲೇ ನ್ಯೂಜಿಲೆಂಡ್‌ನ ಮಾರ್ಟಿನ್‌ ಗುಪ್ಟಿಲ್‌ ಔಟಾಗದೇ ವಿಂಡೀಸ್‌ ವಿರುದ್ಧ 237 ರನ್‌ ಹೊಡೆದಿದ್ದರು.

    ಎರಡನೇ ವೇಗದ ದ್ವಿಶತಕ
    ಕೇವಲ 128 ಎಸೆತಗಳಲ್ಲಿ ದ್ವಿಶತಕ ಸಿಡಿಸುವ ಮೂಲಕ ಮ್ಯಾಕ್ಸ್‌ವೆಲ್‌ ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ವೇಗದ ದ್ವಿಶತಕ ಸಿಡಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಭಾರತದ ಇಶನ್‌ ಕಿಶನ್‌ 2022ರಲ್ಲಿ 126 ಎಸೆತದಲ್ಲಿ ಬಾಂಗ್ಲಾ ವಿರುದ್ಧ ದ್ವಿಶತಕ ಸಿಡಿಸುವ ಮೂಲಕ ಮೊದಲ ಸ್ಥಾನ ಪಡೆದಿದ್ದಾರೆ.

     

  • ಹಿಟ್‌ಮ್ಯಾನ್‌ ಸ್ಫೋಟಕ ಆಟಕ್ಕೆ 4 ದಾಖಲೆ ಸೃಷ್ಟಿ!

    ಹಿಟ್‌ಮ್ಯಾನ್‌ ಸ್ಫೋಟಕ ಆಟಕ್ಕೆ 4 ದಾಖಲೆ ಸೃಷ್ಟಿ!

    ನವದೆಹಲಿ: ಟೀಂ ಇಂಡಿಯಾ (Team India) ನಾಯಕ ಹಿಟ್‌ಮ್ಯಾನ್‌ ಎಂದೇ ಖ್ಯಾತಿ ಪಡೆದಿರುವ ರೋಹಿತ್‌ ಶರ್ಮಾ (Rohith Sharma) ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಶತಕ, ಸಿಕ್ಸರ್‌ ಸಿಡಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ.

    ಅಫ್ಘಾನಿಸ್ತಾನ (Afghanistan) ವಿರುದ್ಧ ಶತಕ ಸಿಡಿಸುವ ಮೂಲಕ ಏಕದಿನ ವಿಶ್ವಕಪ್‌ನಲ್ಲಿ (World Cup Cricket) 7 ಶತಕ ಸಿಡಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

    ಏಕದಿನ ಕ್ರಿಕೆಟ್‌ನಲ್ಲಿ ಸಚಿನ್‌ ತೆಂಡೂಲ್ಕರ್‌ 6, ಶ್ರೀಲಂಕಾದ ಕುಮಾರ ಸಂಗಕ್ಕಾರ 5, ರಿಕ್ಕಿಪಾಂಟಿಂಗ್‌ 5, ಡೇವಿಡ್‌ ವಾರ್ನರ್‌ 4, ಸೌರವ್‌ ಗಂಗೂಲಿ 4 ಶತಕ ಸಿಡಿಸಿದ್ದರು. ಇದನ್ನೂ ಓದಿ: ಲಂಕಾ ವಿರುದ್ಧ ಮೋಸದಾಟವಾಡಿತಾ ಪಾಕ್‌? – ಮತ್ತೆ ಮತ್ತೆ ಟೀಕೆಗೆ ಗುರಿಯಾಗ್ತಿರೋದೇಕೆ?

    ಟಿ20 ಶೈಲಿಯಲ್ಲಿ ಬ್ಯಾಟ್‌ ಬೀಸಿದ ರೋಹಿತ್‌ ಶರ್ಮಾ 30 ಎಸೆತದಲ್ಲಿ 50 ರನ್‌ (7 ಬೌಂಡರಿ, 2 ಸಿಕ್ಸರ್‌) ಹೊಡೆದರೆ 63 ಎಸೆತದಲ್ಲಿ 100 ರನ್‌ (12 ಬೌಂಡರಿ, 4 ಸಿಕ್ಸರ್‌) ಚಚ್ಚಿದರು. ಅಂತಿಮವಾಗಿ ರೋಹಿತ್‌ ಶರ್ಮಾ ತಂಡದ ಮೊತ್ತ 205 ಆಗಿದ್ದಾಗ 131 ರನ್‌ (84 ಎಸೆತ, 16 ಬೌಂಡರಿ, 5 ಸಿಕ್ಸರ್‌) ಸಿಡಿಸಿ ರಶೀದ್‌ ಖಾನ್‌ ಬೌಲಿಂಗ್‌ನಲ್ಲಿ ಬೌಲ್ಡ್‌ ಆಗುವ ಮೂಲಕ ಔಟಾದರು.

    ಅತಿವೇಗದ 1000 ರನ್​
    ವಿಶ್ವಕಪ್‌ನಲ್ಲಿ ವೇಗವಾಗಿ 1000 ರನ್ ಪೂರೈಸಿದ ದಾಖಲೆಯನ್ನೂ ರೋಹಿತ್ ಶರ್ಮಾ ಮಾಡಿದ್ದಾರೆ. ಡೇವಿಡ್ ವಾರ್ನರ್ ಜೊತೆಗೆ 19 ಇನಿಂಗ್ಸ್​ಗಳಲ್ಲಿ ವೇಗವಾಗಿ ಈ ಸಾಧನೆ ಮಾಡಿದ ಬ್ಯಾಟರ್​ ಎಂಬ ಸಾಧನೆ ಮಾಡಿದ್ದಾರೆ.

    ಭಾರತ ಪರ ಅತಿ ವೇಗದ ಶತಕ
    63 ಎಸೆತಗಳಲ್ಲಿ ಶತಕ ಬಾರಿಸಿದ ಭಾರತೀಯ ಎಂಬ ಹೆಗ್ಗಳಿಕೆಗೆ ರೋಹಿತ್‌ ಪಾತ್ರರಾಗಿದ್ದಾರೆ. ಈ ಹಿಂದೆ ಕಪಿಲ್ ದೇವ್ 72 ಎಸೆತಗಳಲ್ಲಿ ಶತಕ ಹೊಡೆದಿದ್ದರು.

    ಅತಿ ಹೆಚ್ಚು ಸಿಕ್ಸರ್‌
    ಎಲ್ಲಾ ಮಾದರಿ ಕ್ರಿಕೆಟ್​ ಸೇರಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಸಿಕ್ಸರ್​ಗಳನ್ನು ಚಚ್ಚಿದ ಆಟಗಾರನಾಗಿ ರೋಹಿತ್‌ ಹೊರಹೊಮ್ಮಿದ್ದಾರೆ. ಈ ಹಿಂದೆ ವೆಸ್ಟ್ ಇಂಡೀಸ್​​ನ ​ಕ್ರಿಸ್ ಗೇಲ್ 553 ಸಿಕ್ಸರ್ (551 ಇನ್ನಿಂಗ್ಸ್) ಹೊಡೆದು ಮೊದಲ ಸ್ಥಾನದಲ್ಲಿದ್ದರು. ಈಗ ಮೂರನೇ ಸಿಕ್ಸರ್ ಬಾರಿಸುವ ಮೂಲಕ ಒಟ್ಟು 554 ಸಿಕ್ಸರ್​ಗಳೊಂದಿಗೆ ಅಗ್ರಸ್ಥಾನಕ್ಕೆ ಏರಿದ್ದಾರೆ.

     

     

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಿಜ್ವಾನ್‌, ಶಫೀಕ್ ಶತಕದಾಟ – ಲಂಕಾ ವಿರುದ್ಧ ಪಾಕ್‌ಗೆ ವಿಶ್ವದಾಖಲೆಯ ಜಯ

    ರಿಜ್ವಾನ್‌, ಶಫೀಕ್ ಶತಕದಾಟ – ಲಂಕಾ ವಿರುದ್ಧ ಪಾಕ್‌ಗೆ ವಿಶ್ವದಾಖಲೆಯ ಜಯ

    ಹೈದರಾಬಾದ್‌: ವಿಶ್ವಕಪ್‌ ಟೂರ್ನಿಯಲ್ಲಿ (World Cup Cricket) ವಿಶ್ವದಾಖಲೆಯ (World Record) ರನ್‌ ಚೇಸ್‌ ಮಾಡಿದ ಪಾಕಿಸ್ತಾನ (Pakistan) ಶ್ರೀಲಂಕಾ(Srilanka) ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ.

    ಗೆಲ್ಲಲು 345 ರನ್‌ಗಳ ಕಠಿಣ ಸವಾಲು ಪಡೆದ ಪಾಕಿಸ್ತಾನ ಮೊಹಮ್ಮದ್‌ ರಿಜ್ವಾನ್‌ (Mohammad Rizwan) ಅಜೇಯ ಶತಕ ಮತ್ತು ಅಬ್ದುಲ್ಲಾ ಶಫೀಕ್ ಅವರ ಶತಕದ ಆಟದಿಂದ 48.2 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 345 ರನ್‌ ಚಚ್ಚುವ ಮೂಲಕ ಸತತ ಎರಡನೇ ಜಯ ಸಾಧಿಸಿತು.

    7.2 ಓವರ್‌ಗಳಿಗೆ 2 ವಿಕೆಟ್‌ ನಷ್ಟಕ್ಕೆ 37 ರನ್‌ ಗಳಿಸಿ ಸಂಕಷ್ಟದಲ್ಲಿದ್ದಾಗ ಅಬ್ದುಲ್ಲಾ ಶಫಿಕ್‌ ಮತ್ತು ರಿಜ್ವಾನ್‌ ಮೂರನೇ ವಿಕೆಟಿಗೆ 156 ಎಸೆತಗಳಲ್ಲಿ 176 ಜೊತೆಯಾಟವಾಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು.

    ಅಬ್ದುಲ್ಲಾ ಶಫಿಕ್‌ 113 ರನ್‌(103 ಎಸೆತ, 10 ಬೌಂಡರಿ, 3 ಸಿಕ್ಸರ್)‌ ಹೊಡೆದು ಔಟಾದರೆ ಸೌದ್‌ ಶಕೀಲ್‌ 31 ರನ್‌ ಕೊನೆಯಲ್ಲಿ ಇಫ್ತಿಕಾರ್‌ ಅಹ್ಮದ್‌ ಔಟಾಗದೇ 22 ರನ್‌ (10 ಎಸೆತ, 4 ಬೌಂಡರಿ) ಹೊಡೆದರು. ಔಟಾಗದೇ 131 ರನ್‌ (121 ಎಸೆತ, 8 ಬೌಂಡರಿ, 3 ಸಿಕ್ಸರ್)‌ ಹೊಡೆದ ಮೊಹ್ಮದ್‌ ರಿಜ್ವಾನ್‌ ಅವರಿಗೆ ಪಂದ್ಯಶ್ರೇಷ್ಠ ಗೌರವ ಸಿಕ್ಕಿತು.  ಇದನ್ನೂ ಓದಿ: ಶತಕ ಸಿಡಿಸಿ ಎರಡು ದಾಖಲೆ ಬರೆದ ಮಲಾನ್‌ – ಇಂಗ್ಲೆಂಡ್‌ಗೆ 137ರನ್‌ಗಳ ಭರ್ಜರಿ ಜಯ

    ಟಾಸ್‌ ಗೆದ್ದು ಬ್ಯಾಟ್‌ ಮಾಡಿದ ಲಂಕಾ ಆರಂಭದಲ್ಲಿ ವಿಕೆಟ್‌ ಕಳೆದುಕೊಂಡರೂ ಪಾತುಮ್‌ ನಿಸ್ಸಾಂಕ 51 ರನ್‌ (61 ಎಸೆತ, 7 ಬೌಂಡರಿ, 1 ಸಿಕ್ಸರ್‌), ಕುಶಲ್‌ ಪಿರೇರಾ 122 ರನ್‌ (77 ಎಸೆತ, 14 ಬೌಂಡರಿ, 6 ಸಿಕ್ಸರ್) ಕುಸಾಲ್‌ ಮೆಂಡಿಸ್‌ 108 ರನ್‌ (89 ಎಸೆತ, 11 ಬೌಂಡರಿ, 2 ಸಿಕ್ಸರ್)‌ ಹೊಡೆದ ಪರಿಣಾಮ ತಂಡದ ಮೊತ್ತ 9 ವಿಕೆಟ್‌ ನಷ್ಟಕ್ಕೆ 344 ರನ್‌ ಗಳಿಸಿತು. ಅದರಲ್ಲೂ ಮೆಂಡಿಸ್‌ 40 ಎಸೆತಗಳಲ್ಲಿ ಅರ್ಧಶತಕ ಹೊಡೆದರೆ 67 ಎಸೆತಗಳಲ್ಲಿ ಶತಕ ಚಚ್ಚಿದ್ದರು.

    ವಿಶ್ವದಾಖಲೆ ಚೇಸಿಂಗ್‌:
    ಈ ಹಿಂದೆ 2011ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಐರ್ಲೆಂಡ್‌ 7 ವಿಕೆಟ್‌ ನಷ್ಟಕ್ಕೆ 329 ರನ್‌ ಹೊಡೆದಿದ್ದೇ ಇದೂವರೆಗಿನ ದಾಖಲೆಯ ರನ್‌ ಚೇಸ್‌ ಆಗಿತ್ತು. 2019 ರಲ್ಲಿ ವಿಂಡೀಸ್‌ ವಿರುದ್ಧ ಬಾಂಗ್ಲಾದೇಶ 322 ರನ್‌ ಹೊಡೆದು ಜಯಗಳಿಸಿತ್ತು.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಾಖಲೆಯ ಬರೋಬ್ಬರಿ 122 ಕೋಟಿಗೆ ಫ್ಯಾನ್ಸಿ ನಂಬರ್‌ ಸೇಲ್‌

    ದಾಖಲೆಯ ಬರೋಬ್ಬರಿ 122 ಕೋಟಿಗೆ ಫ್ಯಾನ್ಸಿ ನಂಬರ್‌ ಸೇಲ್‌

    ದುಬೈ: ಕೋಟ್ಯಂತರ ರೂ. ನೀಡಿ ದುಬಾರಿ ಬೆಲೆಯ ಕಾರುಗಳನ್ನು ಶ್ರೀಮಂತರು ಖರೀದಿಸುವುದು ನಿಮಗೆ ಗೊತ್ತೇ ಇದೆ. ಆದರೆ ದುಬೈಯಲ್ಲಿ ವ್ಯಕ್ತಿಯೊಬ್ಬರು ಬರೋಬ್ಬರಿ 122 ಕೋಟಿ ರೂ. ನೀಡಿ ಫ್ಯಾನ್ಸಿ ನಂಬರ್‌ (Fancy Number) ಖರೀದಿ ಮಾಡಿ ವಿಶ್ವದಾಖಲೆ (World Record) ನಿರ್ಮಿಸಿದ್ದಾರೆ.

    ವಿಐಪಿ ನಂಬರ್‌ ʼP 7′ ದಾಖಲೆಯ 55 ದಶಲಕ್ಷ ದಿರ್ಹಾಮ್‌ (ಅಂದಾಜು 122.6 ಕೋಟಿ ರೂ.) ಹರಾಜಾಗಿದೆ. ಫ್ಯಾನ್ಸಿ ʼP 7′ ಸಂಖ್ಯೆಗೆ ಮೂಲಬೆಲೆ 15 ದಶಲಕ್ಷ ದಿರ್ಹಾಮ್‌ ನಿಗದಿ ಮಾಡಲಾಗಿತ್ತು. ಆರಂಭದ ಕೆಲವೇ ನಿಮಿಷಗಳಲ್ಲಿಇದು 30 ದಶಲಕ್ಷ ದಿರ್ಹಾಮ್‌ಗೆ ಹೋಗಿತ್ತು. ಕೊನೆಗೆ ಇದು 55 ದಶಲಕ್ಷ ದಿರ್ಹಾಮ್‌ ಮಾರಾಟವಾಗಿದೆ. ಇಷ್ಟೊಂದು ಹಣವನ್ನು ಖರ್ಚು ಮಾಡಿ ಬಿಡ್‌ ಗೆದ್ದವರು ಯಾರು ಎನ್ನುವುದು  ಬಹಿರಂಗವಾಗಿಲ್ಲ. ಇದನ್ನೂ ಓದಿ: Public TV Explainer – ಮೋದಿಯನ್ನು ಫಾಲೋ ಮಾಡಿದ ಮಸ್ಕ್‌: ಟೆಸ್ಲಾ ಕಾರು ಇನ್ನೂ ಭಾರತಕ್ಕೆ ಬಂದಿಲ್ಲ ಯಾಕೆ?

    ಯುಎಇ ಪ್ರಧಾನಿ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ರಂಜಾನ್‌ ಸಮಯದಲ್ಲಿ 100 ಕೋಟಿ ಉಚಿತ ಊಟ ವಿತರಣೆ ಮಾಡಲು ಮುಂದಾಗಿದ್ದು ಈ ಸೇವೆಗೆ ಸಹಾಯ ನೀಡಲು ಎಮಿರೆಟ್ಸ್‌ ಸಂಸ್ಥೆ ಫ್ಯಾನ್ಸಿ ಸಂಖ್ಯೆ ಮತ್ತು ಮೊಬೈಲ್‌ ಸಂಖ್ಯೆಗಳನ್ನು ಹರಾಜು ಹಾಕಿತ್ತು. ಈ ಹರಾಜಿನ ಮೂಲಕ ಒಟ್ಟು 100 ದಶಲಕ್ಷ ದಿರ್ಹಾಮ್‌ (ಅಂದಾಜು 220 ಕೋಟಿ ರೂ.) ಸಂಗ್ರಹಿಸಲಾಗಿದೆ.

    2008ರಲ್ಲಿ ಅಬುಧಾಬಿಯಲ್ಲಿ ʼNo. 1ʼ ಪ್ಲೇಟ್‌ 52.22 ದಶಲಕ್ಷ ದಿರ್ಹಾಮ್‌ಗೆ ಬಿಡ್‌ ಆಗಿತ್ತು. ಇದು ಇಲ್ಲಿಯವರೆಗೆ ದುಬಾರಿ ಬೆಲೆಗೆ ಹರಾಜಾದದ ಫ್ಯಾನ್ಸಿ ನಂಬರ್‌ ಆಗಿತ್ತು. ಈಗ ಈ ದಾಖಲೆಯನ್ನು ʼP 7′ ಮುರಿದಿದೆ.