Tag: ವಿಶ್ವಕಪ್

  • ಪಿಸಿಬಿಗೆ ಪಾಕಿಸ್ತಾನ ವಿಶ್ವಕಪ್ ಗೆಲ್ಲುವುದು ಬೇಕಿಲ್ಲ: ಪಾಕ್ ಆಟಗಾರನ ಆರೋಪ

    ಪಿಸಿಬಿಗೆ ಪಾಕಿಸ್ತಾನ ವಿಶ್ವಕಪ್ ಗೆಲ್ಲುವುದು ಬೇಕಿಲ್ಲ: ಪಾಕ್ ಆಟಗಾರನ ಆರೋಪ

    ನವದೆಹಲಿ: ವಿಶ್ವಕಪ್‍ನಲ್ಲಿ (ICC World Cup 2023) ಪಾಕ್ ತಂಡ ವಿಫಲವಾಗಬೇಕೆಂಬುದು ಪಿಸಿಬಿ (PCB) ಉದ್ದೇಶವಾಗಿದೆ ಎಂದು ಪಾಕಿಸ್ತಾನ (Pakistan) ತಂಡದ ಹಿರಿಯ ಆಟಗಾರರೊಬ್ಬರು ಹೊಸ ಬಾಂಬ್ ಸಿಡಿಸಿದ್ದಾರೆ.

    ತಂಡವು ವಿಫಲವಾಗಬೇಕೆಂದು ಪಿಸಿಬಿ ಬಯಸುತ್ತಿದೆ. ತಂಡದಲ್ಲಿ ಬದಲಾವಣೆಗಳನ್ನು ಮಾಡುವ ನಿರೀಕ್ಷೆಯಲ್ಲಿ ಪಿಸಿಬಿ ಇದೆ. ಹೀಗಾಗಿಯೇ ನಾವು ವಿಶ್ವಕಪ್ ಕಪ್ ಗೆಲ್ಲುವುದನ್ನು ಪಿಸಿಬಿ ಬಯಸುವುದಿಲ್ಲ ಎಂದು ಹೆಸರನ್ನು ಬಹಿರಂಗ ಪಡಿಸದಂತೆ ಸೂಚಿಸಿ ಪಾಕ್ ಆಟಗಾರರೊಬ್ಬರು ಈ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಪಾಕ್‌ ತಂಡಕ್ಕೆ ಇನ್ಮುಂದೆ ಬಿರಿಯಾನಿ ಬಂದ್‌ – ಆನ್‌ಲೈನ್‌ನಲ್ಲಿ ಬುಕ್‌ ಮಾಡಿ ಸಿಕ್ಕಿಬಿದ್ದ ಆಟಗಾರರು

    ಕ್ರೀಡಾ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಪಿಸಿಬಿ ಎಲ್ಲಾ ಆಟಗಾರರನ್ನೂ ದೂಷಿಸುತ್ತಿದೆ. ನಮ್ಮ ಆಟಗಾರರು ನಿಜವಾಗಿಯೂ ತಮ್ಮ ಪ್ರಯತ್ನವನ್ನು ಮಾಡಿದ್ದಾರೆ. ಕೋಚಿಂಗ್ ಸಿಬ್ಬಂದಿ ಹಾಗೂ ಆಟಗಾರರ ಶ್ರಮ ಬಹಳಷ್ಟಿದೆ ಎಂದಿದ್ದಾರೆ.

    ಕಳೆದ ಐದು ತಿಂಗಳಿನಿಂದ ಪಾಕಿಸ್ತಾನ ಆಟಗಾರರಿಗೆ ವೇತನವೇ ಬಿಡುಗಡೆಯಾಗಿಲ್ಲ. ಈ ಬಗ್ಗೆ ನಾಯಕ ಫೋನ್ ಮಾಡಿದರೆ ಪಿಸಿಬಿ ಅಧ್ಯಕ್ಷ ಝಾಖಾ ಆಶ್ರಫ್ ಕರೆ ಸ್ವೀಕರಿಸುತ್ತಿಲ್ಲ. ಈ ವಿಚಾರ ಸುದ್ದಿಯಾಗುತ್ತಿದ್ದಂತೆ ಅ.30 ರಂದು ಮುಖ್ಯ ಆಯ್ಕೆಗಾರ ಸ್ಥಾನಕ್ಕೆ ಇಂಜಿಮಾಮ್ ಉಲ್ ಹಕ್ ರಾಜೀನಾಮೆ ನೀಡಿದ್ದಾರೆ. ಇಂಜಿಮಾಮ್ ಅವರ ವಿರುದ್ಧ ಕೆಲವು ಆರೋಪಗಳು ಕೇಳಿಬಂದಿದ್ದು ಈ ಬಗ್ಗೆ ಪಿಸಿಬಿ ತನಿಖೆಗೆ ಮುಂದಾಗಿದೆ ಎಂದಿದ್ದಾರೆ.

    ನೆದರ್ಲೆಂಡ್ಸ್ ಮತ್ತು ಶ್ರೀಲಂಕಾ ವಿರುದ್ಧ ಗೆಲುವು ಕಂಡಿದ್ದ ಪಾಕಿಸ್ತಾನ ಆ ನಂತರ 4 ಪಂದ್ಯಗಳಲ್ಲಿ ಸೋಲು ಕಂಡಿದೆ. ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಬಾಬರ್ ಪಡೆ ಸೋಲು ಕಂಡಿದೆ. ಈ ಮೂಲಕ ಬಲಿಷ್ಠ ತಂಡವಾಗಿದ್ದ ಪಾಕ್ ಸತತ 4 ಪಂದ್ಯಗಳನ್ನು ಸೋಲುವ ಮೂಲಕ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿದೆ. ಇದನ್ನೂ ಓದಿ: IPL 2024: ನಿವೃತ್ತಿ ಬಗ್ಗೆ ಮಹತ್ವದ ಸುಳಿವು ಕೊಟ್ಟ ಮಹಿ – ಅಭಿಮಾನಿಗಳಿಗೆ ಬಿಗ್‌ ಶಾಕ್‌!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಾಕ್‌ ತಂಡಕ್ಕೆ ಇನ್ಮುಂದೆ ಬಿರಿಯಾನಿ ಬಂದ್‌ – ಆನ್‌ಲೈನ್‌ನಲ್ಲಿ ಬುಕ್‌ ಮಾಡಿ ಸಿಕ್ಕಿಬಿದ್ದ ಆಟಗಾರರು

    ಪಾಕ್‌ ತಂಡಕ್ಕೆ ಇನ್ಮುಂದೆ ಬಿರಿಯಾನಿ ಬಂದ್‌ – ಆನ್‌ಲೈನ್‌ನಲ್ಲಿ ಬುಕ್‌ ಮಾಡಿ ಸಿಕ್ಕಿಬಿದ್ದ ಆಟಗಾರರು

    ಕೋಲ್ಕತ್ತಾ: ಭಾರತದ ಆತಿಥ್ಯದಲ್ಲಿ ಇದೇ ನಡೆಯುತ್ತಿರುವ ವಿಶ್ವಕಪ್‌ ಟೂರ್ನಿಯಲ್ಲಿ ಪಾಲ್ಗೊಂಡಿರುವ ಬಾಬರ್‌ ಆಜಂ ನಾಯಕತ್ವದ ಪಾಕಿಸ್ತಾನ ಕ್ರಿಕೆಟ್​ ತಂಡವು (Pakistan Criekct Team) ಬಾಂಗ್ಲಾದೇಶ ವಿರುದ್ಧ ಪಂದ್ಯವನ್ನಾಡಲು ಕೋಲ್ಕತ್ತಾಗೆ (Kolkata0 ಆಗಮಿಸಿದೆ. ಭರ್ಜರಿ ಆತಿಥ್ಯದೊಂದಿಗೆ ಹೈದರಾಬಾದ್ ಮತ್ತು ಚೆನ್ನೈನಲ್ಲಿ ಬಿರಿಯಾನಿ ಮತ್ತು ಇತರ ಭಕ್ಷ್ಯಗಳನ್ನು ಸವಿದ ನಂತರ, ಕೋಲ್ಕತ್ತಾ ಮತ್ತು ಬೆಂಗಳೂರಿನಲ್ಲಿ ನಡೆಯಲಿರುವ ಕೊನೆಯ 3 ಪಂದ್ಯಗಳಿಗೆ ತಯಾರಿ ನಡೆಸುತ್ತಿರುವ ಪಾಕಿಸ್ತಾನ ತಂಡಕ್ಕೆ ಇನ್ನುಂದೆ ಬಿರಿಯಾನಿ (Biriyani) ಸಿಗುವುದಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.

    ಪಾಕಿಸ್ತಾನ ತಂಡ ಅಕ್ಟೋಬರ್ 31ರಂದು (ಇಂದು) ಬಾಂಗ್ಲಾದೇಶ ವಿರುದ್ಧ ಹಾಗೂ ನವೆಂಬರ್ 4ರಂದು ನ್ಯೂಜಿಲೆಂಡ್ (New Zealand) ವಿರುದ್ಧ ಬೆಂಗಳೂರಿನಲ್ಲಿ ಸೆಣಸಲಿದೆ. ನವೆಂಬರ್ 11ರಂದು ಕೋಲ್ಕತ್ತಾಗೆ ವಾಪಸಾಗಲಿದ್ದು, ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಆದ್ರೆ ಇನ್ನುಳಿದ ಪಂದ್ಯಗಳಿಗೆ ಪಾಕಿಸ್ತಾನ ಕ್ರಿಕೆಟ್ ತಂಡವು ಬಿರಿಯಾನಿ ಮಾತ್ರವಲ್ಲದೆ ಇನ್ನೂ ಹಲವಾರು ಭಕ್ಷ್ಯಗಳನ್ನು ತ್ಯಜಿಸಬೇಕಾಗಿದೆ. ಕಟ್ಟುನಿಟ್ಟಾದ ಫುಡ್‌ ಚಾರ್ಟ್‌ನೊಂದಿಗೆ ಅಭ್ಯಾಸ ಮಾಡಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.

    ಝಮ್‌ ಝಮ್‌ ಬಿರಿಯಾನಿ ಸವಿದ ಪಾಕ್‌: ಸತತ ಸೋಲಿನಿಂದ ಕಂಗೆಟ್ಟಿರುವ ಪಾಕ್‌ ಆಟಗಾರರು ಫಿಟ್‌ನೆಸ್‌ ಕಾಯ್ದುಕೊಳ್ಳಲು ತಮ್ಮ ಪ್ರೀತಿಯ ಬಿರಿಯಾನಿ ತ್ಯಜಿಸಬೇಕು, ಅದರ ಬದಲಿಗೆ ಮೆಡಿಟರೇನಿಯನ್ ಕಬಾಬ್​​ಗಳು (Mediterranean Kebabs), ಮೊಟ್ಟೆಗಳು ಮತ್ತು ಪ್ರೋಟೀನ್‌ಯುಕ್ತ ಆಹಾರವನ್ನು ಸೇವಿಸಬೇಕು ಎಂದು ಹೇಳಲಾಗಿದೆ. ಈ ನಡುವೆ ತಮಗೆ ನಿಗದಿಪಡಿಸಿದ್ದ ರೆಸ್ಟೋರೆಂಟ್‌ ಅನ್ನು ಬಿಟ್ಟು ಆನ್‌ಲೈನ್‌ನಲ್ಲಿ ಬುಕ್‌ಮಾಡಿದ ಬಗೆಬಗೆಯ ಭಕ್ಷ್ಯಗಳನ್ನ ಸವಿದಿರುವುದು ಕಂಡುಬಂದಿದೆ. ಇದು ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಯಲಿದೆ.

    ಹೌದು. ಕೋಲ್ಕತ್ತಾಗೆ ಆಗಮಿಸಿರುವ ಪಾಕ್‌ ತಂಡಕ್ಕೆ ಮೆನ್‌ ಇನ್‌ ಗ್ರೀನ್‌ ಹೋಟೆಲ್‌ನಲ್ಲಿ ಊಟ ನಿಗದಿಪಡಿಸಲಾಗಿತ್ತು. ಆದ್ರೆ ಪಾಕ್‌ ತಂಡ ಕೋಲ್ಕತ್ತಾದ ಫೇಮಸ್‌ ಝಮ್ ಝಮ್ ರೆಸ್ಟೋರೆಂಟ್‌ ಬಿರಿಯಾನಿ (Zam Zam Biriyani), ಕಬಾಬ್‌ ಹಾಗೂ ಚಾಪ್ಸ್‌ಗಳನ್ನು ಆನ್‌ಲೈನ್‌ನಲ್ಲಿ ಬುಕ್‌ಮಾಡಿ ತರಿಸಿಕೊಂಡು ಸವಿದಿದೆ. ಝಮ್ ಝಮ್ ರೆಸ್ಟೋರೆಂಟ್‌ನ ನಿರ್ದೇಶಕ ಶಾದ್ಮನ್ ಫೈಜ್ ಇದನ್ನು ಖಚಿತಪಡಿಸಿದ್ದಾರೆ.

    ಮೊದಲು ಇದು ಪಾಕ್‌ ತಂಡದಿಂದ ಬಂದ ಆರ್ಡರ್‌ ಎಂದು ತಿಳಿದಿರಲಿಲ್ಲ, ಸ್ವಲ್ಪ ತಡವಾಗಿ ಗೊತ್ತಾಗಿದೆ. ಇಡೀ ವಿಶ್ವದಲ್ಲೇ ಕೋಲ್ಕತ್ತಾದ ನಮ್ಮ ಝಮ್‌ ಝಮ್‌ ಬಿರಿಯಾನಿ ತನ್ನದೇ ವಿಶೇಷತೆ ಹೊಂದಿದೆ. ಹಾಗಾಗಿ ಬಹಳ ಪ್ರಸಿದ್ಧವಾಗಿದೆ ಎಂದು ಹೇಳಿಕೊಂಡಿದ್ದಾರೆ.

    ಇದಕ್ಕೂ ಮುನ್ನ ಹೈದರಾಬಾದ್‌, ಚೆನ್ನೈನಲ್ಲಿ ಪಾಕ್‌ ತಂಡದ ಡಯಟ್‌ ಚಾರ್ಟ್‌ನಲ್ಲಿ ಗ್ರಿಲ್ಡ್‌ ಲ್ಯಾಂಬ್‌ ಚಾಪ್ಸ್ (Grilled Lamb Chops), ಮಟನ್‌ ಕರಿ, ಹೈದರಾಬಾದ್‌ನಲ್ಲಿ ಬಹುಬೇಡಿಕೆಯ ಬಟರ್‌ ಚಿಕನ್‌ ಮತ್ತು ಗ್ರಿಲ್ಡ್‌ ಫಿಶ್‌ (Grilled Fish) ನೀಗದಿಪಡಿಸಲಾಗಿತ್ತು.

    ಕಳಪೆ ಫಿಟ್‌ನೆಸ್‌ ಬಗ್ಗೆ ಕಿಡಿ: ಇನ್ನೂ ಪಾಕಿಸ್ತಾನ ಕ್ರಿಕೆಟ್‌ ತಂಡದ ಪಾಕ್‌ ಕಳಪೆ ಫಿಟ್‌ನೆಸ್‌ ಬಗ್ಗೆ ಪಾಕ್‌ ಮಾಜಿ ನಾಯಕ ವಾಸಿಮ್ ಅಕ್ರಮ್ ಅವರು ವಾಗ್ದಾಳಿ ನಡೆಸಿದ್ದಾರೆ. ಆಟಗಾರರು ಒಂದೆರಡು ವರ್ಷಗಳಿಂದ ಫಿಟ್ನೆಸ್ ಪರೀಕ್ಷೆಗೆ ಒಳಗಾಗಿಲ್ಲ. ದೇಶಕ್ಕಾಗಿ ಆಡುತ್ತಿರುವುದಕ್ಕೆ ಆಟಗಾರರಿಗೆ ಸಂಭಾವನೆ ನೀಡಲಾಗುತ್ತಿದೆ. ಆದ್ರೆ ಒಂದು ನಿರ್ದಿಷ್ಟ ಮಾನದಂಡವಿರಬೇಕು. ಪ್ರತಿದಿನ 8 ಕೆಜಿ ಮಟನ್​ ತಿನ್ನುತ್ತಾರೆ ಎಂದು ಹೇಳಿದ್ದರು. ಹೀಗಾಗಿ ತಂಡದ ಆಡಳಿತವು ಅವರ ಅನಾರೋಗ್ಯಕರ ಆಹಾರ ಪದ್ಧತಿಯನ್ನು ನಿಲ್ಲಿಸಿದೆ ಮತ್ತು ಆಟಗಾರರಿಗೆ ಕಟ್ಟುನಿಟ್ಟಾದ ಆಹಾರ ಯೋಜನೆ ರೂಪಿಸಿದೆ ಎಂದು ಹೇಳಿದ್ದಾರೆ.

    ಸದ್ಯ 6 ರಲ್ಲಿ 2 ಪಂದ್ಯಗಳಲ್ಲಿ ಗೆದ್ದಿರುವ ಪಾಕ್‌ ತಂಡ ಬೃಹತ್‌ ಜಯವನ್ನು ಎದುರು ನೋಡುತ್ತಿದೆ. ಆ ಮೂಲಕ ಉಳಿದ ಮೂರು ಪಂದ್ಯಗಳಲ್ಲಿ ಉತ್ತಮ ರನ್‌ರೇಟ್‌ನೊಂದಿಗೆ ಅಗ್ರ 4ರಲ್ಲಿ ಸ್ಥಾನ ಪಡೆಯಲು ಹಾತೊರೆಯುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇನ್ನೂ ಚಾಂಪಿಯನ್ ಎಂದು ಕರೆದುಕೊಳ್ಳುತ್ತೀರಾ? ಇಂಗ್ಲೆಂಡ್‍ಗೆ ಕುಟುಕಿದ ಶಾಸ್ತ್ರಿ

    ಇನ್ನೂ ಚಾಂಪಿಯನ್ ಎಂದು ಕರೆದುಕೊಳ್ಳುತ್ತೀರಾ? ಇಂಗ್ಲೆಂಡ್‍ಗೆ ಕುಟುಕಿದ ಶಾಸ್ತ್ರಿ

    ಲಕ್ನೋ: ಟೀಂ ಇಂಡಿಯಾ (Team India) ಮತ್ತು ಇಂಗ್ಲೆಂಡ್ (England) ವಿರುದ್ಧದ ಪಂದ್ಯದ ವೇಳೆ ರವಿಶಾಸ್ತ್ರಿ (Ravi Shastri) ಕಾಮೆಂಟರಿ ಮಾಡುವಾಗ ನಿಮ್ಮನ್ನು ಇನ್ನೂ ಮುಂದೆಯೂ ಹಾಲಿ ಚಾಂಪಿಯನ್ ಎಂದು ಕರೆದುಕೊಳ್ಳುತ್ತೀರಾ? ಎಂದು ಕುಟುಕಿದ್ದಾರೆ.

    ಭಾನುವಾರದ ಪಂದ್ಯದಲ್ಲಿ ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬುಮ್ರಾ ಬೌಲಿಂಗ್ ದಾಳಿಯ ನೆರವಿನಿಂದ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧ 100 ರನ್‍ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಬರೋಬ್ಬರಿ 20 ವರ್ಷಗಳ ಬಳಿಕ ವಿಶ್ವಕಪ್ (World Cup )ಟೂರ್ನಿಯಲ್ಲಿ ಆಂಗ್ಲರನ್ನ ಸೋಲಿಸಿ ಜಯದ ಮಾಲೆ ಧರಿಸಿದೆ. ಇದರೊಂದಿಗೆ 6 ಪಂದ್ಯಗಳಲ್ಲಿ ಜಯ ಸಾಧಿಸಿ, ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ. ನಿರಂತರ ಸೋಲಿನ ಸುಳಿಗೆ ಸುಲುಕಿರುವ ಇಂಗ್ಲೆಂಡ್ ತಂಡದ ವಿರುದ್ಧ ಕಮೆಂಟ್ ಮಾಡಿ ಕಾಲೆಳೆದಿದ್ದಾರೆ. ಇದನ್ನೂ ಓದಿ: ಬಾತುಕೋಳಿ ತಲೆಗೆ ಕೊಹ್ಲಿ ಫೋಟೊ ಹಾಕಿ ತಗ್ಲಾಕ್ಕೊಂಡ ಇಂಗ್ಲೆಂಡ್‌ ಫ್ಯಾನ್ಸ್‌ – ಇಂಗ್ಲೆಂಡ್‌ ಆರ್ಮಿಗೆ ಭಾರತ್‌ ಆರ್ಮಿ ಕೌಂಟರ್‌

    ಬಾಂಗ್ಲಾದೇಶ ವಿರುದ್ಧದ ಗೆಲುವನ್ನು ಹೊರತುಪಡಿಸಿ ಇಂಗ್ಲೆಂಡ್‍ನ ಎಲ್ಲಾ ಐದು ಪಂದ್ಯಗಳಲ್ಲಿ ಸೋಲು ಕಂಡಿದೆ. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ 9 ವಿಕೆಟ್‍ಗಳಿಂದ ಸೋಲಿಸಿತ್ತು. ಅಫ್ಘಾನಿಸ್ತಾನ 69 ರನ್‍ಗಳಿಂದ ಆಂಗ್ಲರಿಗೆ ಶಾಕ್ ಕೊಟ್ಟಿತ್ತು. ಸೌತ್ ಆಫ್ರಿಕಾ ತಂಡ ಅವರನ್ನು 229 ರನ್‍ಗಳಿಂದ ಸೋಲುಣಿಸಿತ್ತು. ಶ್ರೀಲಂಕಾ ವಿರುದ್ಧ ಎಂಟು ವಿಕೆಟ್‍ಗಳಿಂದ ಸೋಲು ಕಂಡಿತ್ತು.

    ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ 2003 ರಲ್ಲಿ ಕೊನೆಯ ಬಾರಿಗೆ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿತ್ತು. ಉಳಿದಂತೆ 2007, 2011, 2015 ಮತ್ತು 2019ರಲ್ಲಿ ಭಾರತ, ಇಂಗ್ಲೆಂಡ್ ಎದುರು ಸೋಲು ಅನುಭವಿಸಿತ್ತು. ಹೀಗಾಗಿ ಕಳೆದ 20 ವರ್ಷಗಳಿಂದ ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಆಂಗ್ಲರ ವಿರುದ್ಧ ಗೆಲುವು ಸಿಕ್ಕಿರಲಿಲ್ಲ. ಈಗ 100 ರನ್‍ಗಳ ಭರ್ಜರಿ ಜಯದೊಂದಿಗೆ ಸೆಮಿಫೈನಲ್‍ನತ್ತ ಸಾಗುತ್ತಿದೆ. ಇದನ್ನೂ ಓದಿ: ವಿಶ್ವಕಪ್‌ನ ಟಾಪ್‌ 7 ತಂಡಗಳು 2025 ರ ಚಾಂಪಿಯನ್ಸ್‌ ಟ್ರೋಫಿಗೆ – ಪಾಕಿಸ್ತಾನ ಡೈರೆಕ್ಟ್‌ ಎಂಟ್ರಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕಪ್ಪುಪಟ್ಟಿ ಧರಿಸಿದ ಟೀಂ ಇಂಡಿಯಾ ಆಟಗಾರರು – ಕಾರಣವೇನು ಗೊತ್ತಾ?

    ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕಪ್ಪುಪಟ್ಟಿ ಧರಿಸಿದ ಟೀಂ ಇಂಡಿಯಾ ಆಟಗಾರರು – ಕಾರಣವೇನು ಗೊತ್ತಾ?

    ಲಕ್ನೋ: ವಿಶ್ವಕಪ್ 2023ರ (World Cup 2023) ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧದ ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಆಟಗಾರರು ಕಪ್ಪುಪಟ್ಟಿ ಧರಿಸಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಈ ಬಗ್ಗೆ ಕಾರಣವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದೆ.

    ಭಾರತೀಯ ಕ್ರಿಕೆಟ್ ದಂತಕಥೆ ಬಿಷನ್ ಸಿಂಗ್ ಬೇಡಿ (Bishan Singh Bedi) ಅವರ ನಿಧನಕ್ಕೆ ಸಂತಾಪ ಸೂಚಿಸುವ ಸಲುವಾಗಿ ಟೀಂ ಇಂಡಿಯಾ ಆಟಗಾರರು ಕಪ್ಪುಪಟ್ಟಿ ಧರಿಸಿದ್ದಾರೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಸೋಲಿನ ಹತಾಶೆಯ ನಡುವೆ ಪಾಕ್‍ಗೆ ದಂಡದ ಬರೆ

    ವಯೋಸಹಜ ಅನಾರೋಗ್ಯದಿಂದ ಬೇಡಿ ಅ.23 ರಂದು ದೆಹಲಿಯಲ್ಲಿ ನಿಧನರಾಗಿದ್ದರು. ಅವರು ಭಾರತಕ್ಕಾಗಿ 1967 ಮತ್ತು 1979ರ ನಡುವೆ 67 ಟೆಸ್ಟ್‍ಗಳನ್ನು ಆಡಿದ್ದರು. ಅವುಗಳಲ್ಲಿ 22ರಲ್ಲಿ ನಾಯಕತ್ವ ವಹಿಸಿದ್ದರು. ಅದರಲ್ಲಿ ಒಟ್ಟು 266 ವಿಕೆಟ್‍ಗಳನ್ನು ಗಳಿಸಿದ್ದರು. ತಮ್ಮ 12 ವರ್ಷಗಳ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 10 ಏಕದಿನ ಅಂತರರಾಷ್ಟ್ರೀಯ ಪಂದ್ಯವಾಡಿ 7 ವಿಕೆಟ್‍ಗಳನ್ನು ಪಡೆದಿದ್ದಾರೆ.

    ಅಮೃತಸರದಲ್ಲಿ 1946ರ ಸೆಪ್ಟೆಂಬರ್ 25 ರಂದು ಜನಿಸಿದ ಬೇಡಿ ಭಾರತದ ಮೊದಲ ಏಕದಿನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 370 ಪ್ರಥಮ ದರ್ಜೆ ಪಂದ್ಯಗಳಲ್ಲಿ 1,560 ವಿಕೆಟ್ ಪಡೆದಿದ್ದಾರೆ. ದೇಶೀಯ ಲೀಗ್‍ನಲ್ಲಿ ದೆಹಲಿ ಪರ ಸಿಂಗ್ ಆಡಿದ್ದರು.

    ಗಾಯಗೊಂಡಿದ್ದ ಅಜಿತ್ ವಾಡೇಕರ್ ಅನುಪಸ್ಥಿತಿಯಲ್ಲಿ ಅವರು ತಂಡದ ನಾಯಕತ್ವ ವಹಿಸಿದ್ದಾಗ ಇಂಗ್ಲೆಂಡ್ ವಿರುದ್ಧದ 1971 ರ ಭಾರತ ಐತಿಹಾಸಿಕ ಸರಣಿಯಲ್ಲಿ ಜಯ ದಾಖಲಿಸಿತ್ತು.

    ಆಸ್ಟ್ರೇಲಿಯಾ ಆಟಗಾರ ಫವಾದ್ ಅಹ್ಮದ್ ಇತ್ತೀಚೆಗೆ ತಮ್ಮ ನಾಲ್ಕು ತಿಂಗಳ ಮಗುವನ್ನು ಕಳೆದುಕೊಂಡಿದ್ದಾಗ ಆಸ್ಟ್ರೇಲಿಯನ್ ಆಟಗಾರರು ಕಪ್ಪುಪಟ್ಟಿ ಧರಿಸಿ ಫವಾದ್ ಕುಟುಂಬಕ್ಕೆ ಸಂತಾಪ ಸೂಚಿಸಿದ್ದರು. ಇದನ್ನೂ ಓದಿ: ಕೊಹ್ಲಿ ಶತಕ ಕಣ್ತುಂಬಿಕೊಳ್ಳಲು 12,445 ಕಿಮೀನಿಂದ ಬಂದಿದ್ದ ಅಭಿಮಾನಿಗೆ ಭಾರೀ ನಿರಾಸೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೋಲಿನ ಹತಾಶೆಯ ನಡುವೆ ಪಾಕ್‍ಗೆ ದಂಡದ ಬರೆ

    ಸೋಲಿನ ಹತಾಶೆಯ ನಡುವೆ ಪಾಕ್‍ಗೆ ದಂಡದ ಬರೆ

    ಚೆನ್ನೈ: ಏಕದಿನ ವಿಶ್ವಕಪ್‍ನಲ್ಲಿ (World Cup 2023) ನಿರಂತರ ಸೋಲಿನಿಂದ ಹತಾಶೆಯಲ್ಲಿರುವ ಪಾಕ್ (Pakistan) ತಂಡಕ್ಕೆ ಐಸಿಸಿ ದಂಡ ವಿಧಿಸಿದೆ.

    ಶುಕ್ರವಾರ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ (South Africa) ವಿರುದ್ಧದ ಪಂದ್ಯದಲ್ಲಿ ಪಾಕ್ ನಿಧಾನಗತಿಯ ಬೌಲಿಂಗ್‍ಗಾಗಿ ಪಂದ್ಯದ ಶುಲ್ಕದ 20%ನಷ್ಟು ದಂಡವನ್ನು ವಿಧಿಸಿದೆ. ಇದು ಪಾಕ್ ಆಟಗಾರರ ವೇತನ ವಿಳಂಬದ ನಡುವೆ ಪಾಕ್ ತಂಡಕ್ಕೆ ಹೊರೆಯಾಗಿ ಪರಿಣಮಿಸಿದೆ. ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಿಧಾನಗತಿಯ ಬೌಲಿಂಗ್ ಬಗ್ಗೆ ಅಂಪೈರ್ ಆರೋಪ ಮಾಡಿದ್ದರು. ಇದನ್ನೂ ಓದಿ: ಧರ್ಮಶಾಲಾ ಅಂಗಳದಲ್ಲಿ ವಂದೇ ಮಾತರಂ ಝೇಂಕಾರ – ಅದ್ಭುತ ವೀಡಿಯೋ ನೀವೇ ನೋಡಿ

    ಬೌಲಿಂಗ್ ವೇಳೆ ಪಾಕ್ ಆಟಗಾರರು ನಿಗದಿತ ಸಮಯಕ್ಕಿಂತ ನಾಲ್ಕು ಓವರ್‍ಗಳಷ್ಟು ಹೆಚ್ಚಿನ ಸಮಯವನ್ನು ವ್ಯರ್ಥ ಮಾಡಿದ್ದಾರೆ. ಈ ತಪ್ಪನ್ನು ಪಾಕಿಸ್ತಾನದ ನಾಯಕ ಬಾಬರ್ ಆಜಮ್ ಒಪ್ಪಿಕೊಂಡಿದ್ದಾರೆ. ಇದರಿಂದ ಐಸಿಸಿ ದಂಡ ವಿಧಿಸಲು ನಿರ್ಧರಿಸಿದೆ. ಈ ಬಗ್ಗೆ ಐಸಿಸಿ, ನಾಯಕ ಒಪ್ಪಿಕೊಂಡಿರುವುದರಿಂದ ವಿಚಾರಣೆಯ ಅಗತ್ಯವಿಲ್ಲ ಎಂದಿದೆ.

    ಅಕ್ಟೋಬರ್ 14ರ ಪಂದ್ಯದಲ್ಲಿ ಟೀಂ ಇಂಡಿಯಾ (Team India) ವಿರುದ್ಧ ಸೋತ ಬಳಿಕ ಗೆಲುವಿನ ದಾರಿಗೆ ಬರಲು ಪಾಕ್ ಸೆಣೆಸಾಡುತ್ತಿದೆ. ಪಾಕ್ ಆರು ಪಂದ್ಯಗಳ ಪೈಕಿ 2 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. ಅಕ್ಟೋಬರ್ 31 ರಂದು ಕೋಲ್ಕತ್ತದಲ್ಲಿ ನಡೆಯಲಿರುವ ಪಂದ್ಯದಲ್ಲಿ ಪಾಕ್, ಬಾಂಗ್ಲಾದೇಶದ ವಿರುದ್ಧ ಸೆಣೆಸಲಿದೆ. ಇದನ್ನೂ ಓದಿ: ಬಾಂಗ್ಲಾ ವಿರುದ್ಧ 87 ರನ್‌ಗಳ ಭರ್ಜರಿ ಜಯ – ಬಲಿಷ್ಠ ಇಂಗ್ಲೆಂಡ್‌ ತಂಡವನ್ನೇ ಹಿಂದಿಕ್ಕಿದ ಡಚ್ಚರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಾಕ್ ಆಟಗಾರರಿಗೆ ಐದು ತಿಂಗಳಿಂದ ಸಂಬಳ ಕೊಟ್ಟಿಲ್ಲ: ಮಾಜಿ ನಾಯಕ ಲತೀಫ್

    ಪಾಕ್ ಆಟಗಾರರಿಗೆ ಐದು ತಿಂಗಳಿಂದ ಸಂಬಳ ಕೊಟ್ಟಿಲ್ಲ: ಮಾಜಿ ನಾಯಕ ಲತೀಫ್

    ಇಸ್ಲಮಾಬಾದ್: ಪಾಕಿಸ್ತಾನದ (Pakistan) ರಾಷ್ಟ್ರೀಯ ಕ್ರಿಕೆಟ್ (Cricket) ತಂಡದ ನಾಯಕ ಬಾಬರ್ ಆಜಮ್ (Babar Azam) ಹಾಗೂ ಆಟಗಾರರಿಗೆ ಕಳೆದ ಐದು ತಿಂಗಳಿಂದ ಸಂಬಳ ಸಿಕ್ಕಿಲ್ಲ ಎಂಬ ಆಘಾತಕಾರಿ ವಿಚಾರವನ್ನು ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ (Rashid Latif) ಬಹಿರಂಗಪಡಿಸಿದ್ದಾರೆ.

    ಈ ಬಗ್ಗೆ ಬಾಬರ್ ಆಜಮ್ ಪಿಸಿಬಿ (Pakistan Cricket Board) ಅಧ್ಯಕ್ಷ ಝಕಾ ಅಶ್ರಫ್ ಹಾಗೂ ಸಿಒಒಗೆ ಸಂದೇಶ ಕಳುಹಿಸುತ್ತಿದ್ದಾರೆ. ಅವರು ಸಂದೇಶಗಳಿಗೆ ಪ್ರತಿಕ್ರಿಯಿಸುತ್ತಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸದಿರಲು ಕಾರಣವೇನು? ಮತ್ತೆ ಒಪ್ಪಂದಗಳನ್ನು ಮಾಡಲಾಗುವುದು ಎಂದು ಹೇಳುತ್ತಿದ್ದೀರಿ. ಆಟಗಾರರಿಗೆ ಐದು ತಿಂಗಳಿನಿಂದ ಸಂಬಳವಿಲ್ಲ. ಆಟಗಾರರು ನಿಮ್ಮ ಮಾತನ್ನು ಕೇಳಬೇಕೆ ಎಂದು ಅವರು ಪ್ರಶ್ನಿಸಿದ್ದಾರೆ. ಪಿಸಿಬಿ ಬೆಂಬಲದ ಕೊರತೆಯಿಂದಾಗಿ ಆಟಗಾರರು ಮಂಡಳಿಯಲ್ಲಿ ಸಂತೋಷವಾಗಿಲ್ಲ ಎಂಬ ವರದಿಗಳು ಹೊರಬಂದ ನಂತರ ಲತೀಫ್ ಅವರ ಹೇಳಿಕೆ ಬಂದಿದೆ. ಇದನ್ನೂ ಓದಿ: ಪಾಕ್‌ ವಿರುದ್ಧ ಗೆಲುವನ್ನು ಹನುಮಾನ್‌ಗೆ ಅರ್ಪಿಸಿದ ಮಹರಾಜ್‌ – ಜೈ ಶ್ರೀ ಹನುಮಾನ್‌ ಫುಲ್‌ ಟ್ರೆಂಡ್‌

    ಈ ಹಿಂದೆ ಪಾಕ್ ತಂಡ ವಿಶ್ವಕಪ್ ಆಡಲು ಭಾರತಕ್ಕೆ ಬರುವ ಮುನ್ನ ಸಂಬಳ ಹೆಚ್ಚಿಸುವ ಸೂಚನೆ ನೀಡಿತ್ತು. ಈಗ ಐದು ತಿಂಗಳಾದರೂ ಸಂಬಳ ಆಗದಿರುವುದು ಆಟಗಾರರಿಗೆ ನಿರಂತರ ಸೋಲಿನ ಬಳಿಕ ಮತ್ತೊಂದು ಆಘಾತವಾಗಿದೆ.

    ಸದ್ಯ ಪಾಕ್ ತಂಡದ ಸೆಮಿಫೈನಲ್ ಹಾದಿ ಸಂಕಷ್ಟದಲ್ಲಿದೆ. ಪಾಕಿಸ್ತಾನ ತಂಡಕ್ಕೆ ಲೀಗ್ ಹಂತದಲ್ಲಿ ಮೂರು ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಅಂಕಪಟ್ಟಿಯಲ್ಲಿ ನಾಲ್ಕು ಅಂಕಗಳೊಂದಿಗೆ ತಂಡ ಆರನೇ ಸ್ಥಾನಕ್ಕೆ ಕುಸಿದಿದೆ. ಮುಂದಿನ ಪಂದ್ಯದಲ್ಲಿ ತಂಡವು ಬಾಂಗ್ಲಾದೇಶವನ್ನು ಎದುರಿಸಲಿದೆ. ಆ ಬಳಿಕ 2019ರ ರನ್ನರ್ ಅಪ್ ನ್ಯೂಜಿಲೆಂಡ್ ಮತ್ತು ಅಂತಿಮ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಆಡಲಿದೆ. ಹೀಗಾಗಿ ತಂಡದ ಸೆಮಿಫೈನಲ್ ಕನಸಿನ ಈಡೇರಿಕೆ ಕಷ್ಟವಿದೆ. ಇದನ್ನೂ ಓದಿ: World Cup 2023: ಅಂದು ರೋಹಿತ್‌ ಶರ್ಮಾ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದು ಇದೇ ಕಾರಣಕ್ಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 27 ರನ್‌ ಅಂತರದಲ್ಲಿ 5 ವಿಕೆಟ್‌ ಉಡೀಸ್‌, ಇಂಗ್ಲೆಂಡ್‌ಗೆ ಹೀನಾಯ ಸೋಲು – ಲಂಕಾಗೆ 8 ವಿಕೆಟ್‌ಗಳ ಜಯ

    27 ರನ್‌ ಅಂತರದಲ್ಲಿ 5 ವಿಕೆಟ್‌ ಉಡೀಸ್‌, ಇಂಗ್ಲೆಂಡ್‌ಗೆ ಹೀನಾಯ ಸೋಲು – ಲಂಕಾಗೆ 8 ವಿಕೆಟ್‌ಗಳ ಜಯ

    ಬೆಂಗಳೂರು: ಸಂಘಟಿತ ಬೌಲಿಂಗ್‌ ಹಾಗೂ ಪಾಥುಮ್‌ ನಿಸ್ಸಾಂಕ (Pathum Nissanka) ಭರ್ಜರಿ ಬ್ಯಾಟಿಂಗ್‌ನಿಂದ ಶ್ರೀಲಂಕಾ ತಂಡವು, ಇಂಗ್ಲೆಂಡ್‌ (England) ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಪಾಯಿಂಟ್ಸ್‌ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಜಿಗಿದಿದೆ.

    5 ಪಂದ್ಯಗಳ ಪೈಕಿ 2ರಲ್ಲಿ ಗೆಲುವು ಸಾಧಿಸಿದ್ದ ಪಾಕಿಸ್ತಾನ (Pakistan) ತಂಡವು 4 ಅಂಕ, -0.400 ರನ್‌ ರೇಟ್‌ನೊಂದಿಗೆ 5ನೇ ಸ್ಥಾನದಲ್ಲಿತ್ತು. ಆದ್ರೆ ಆಂಗ್ಲರ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಲಂಕಾ (Sri Lanka) 4 ಅಂಕ, -0.205 ರನ್‌ರೇಟ್‌ನೊಂದಿಗೆ 5ನೇ ಸ್ಥಾನಕ್ಕೆ ಜಿಗಿದು, ಪಾಕ್‌ ತಂಡವನ್ನು ಹಿಂದಿಕ್ಕಿದೆ. ಇದನ್ನೂ ಓದಿ: 2036ರ ಜಾಗತಿಕ ಕ್ರೀಡಾಹಬ್ಬಕ್ಕೆ ಭಾರತ ತಯಾರಿ ಶುರು – ಮುಂದಿರುವ ಸವಾಲುಗಳೇನು?

    ಬ್ಯಾಟಿಂಗ್‌ ಸ್ನೇಹಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌ 33.2 ಓವರ್‌ಗಳಲ್ಲೇ 156 ರನ್‌ಗಳಿಗೆ ಸರ್ವಪತನ ಕಂಡಿತು. ಈ ಗುರಿ ಬೆನ್ನತ್ತಿದ್ದ ಶ್ರೀಲಂಕಾ ತಂಡವು 25.4 ಓವರ್‌ಗಳಲ್ಲೇ 2 ವಿಕೆಟ್‌ ನಷ್ಟಕ್ಕೆ 160 ರನ್‌ ಗಳಿಸಿ ಗೆಲುವಿನ ನಗೆ ಬೀರಿತು. ಇದನ್ನೂ ಓದಿ: ಅಭಿಮಾನಿಗಳಿಗೆ ಅದ್ಭುತ, ಆಟಗಾರರಿಗೆ ಭಯಾನಕ: ಮೂಕ ಕಲ್ಪನೆ ಎಂದು ಮ್ಯಾಕ್ಸ್‌ವೆಲ್‌ ಕೆಂಡ

    ಚೇಸಿಂಗ್‌ ಆರಂಭಿಸಿದ್ದ ಲಂಕಾ ತಂಡವೂ ಸಹ 9 ರನ್‌ಗಳಿಗೆ ಮೊದಲ ವಿಕೆಟ್‌, 23 ರನ್‌ಗಳಿಗೆ 2ನೇ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಬಳಿಕ ಜೊತೆಯಾದ ನಿಸ್ಸಾಂಕ ಹಾಗೂ ಸದೀರ ಸಮರವಿಕ್ರಮ ಜೋಡಿ ಮುರಿಯದ 3ನೇ ವಿಕೆಟ್‌ಗೆ 122 ಎಸೆತಗಳಲ್ಲಿ 137 ರನ್‌ಗಳ ಜೊತೆಯಾಟ ನೀಡುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಪಾಥುಮ್‌ ನಿಸ್ಸಾಂಕ 83 ಎಸೆತಗಳಲ್ಲಿ ಅಜೇಯ 77 ರನ್‌ (7 ಬೌಂಡರಿ, 2 ಸಿಕ್ಸರ್)‌ ಚಚ್ಚಿದರೆ, ಸಮರವಿಕ್ರಮ 54 ಎಸೆತಗಳಲ್ಲಿ 65 ರನ್‌ (7 ಬೌಂಡರಿ, 1 ಸಿಕ್ಸರ್‌) ಸಿಡಿಸಿ ಮಿಂಚಿದರು. ಇಂಗ್ಲೆಂಡ್‌ ಪರ ಡೇವಿಡ್ ವಿಲ್ಲಿ 2 ವಿಕೆಟ್‌ ಕಿತ್ತರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಹಾಲಿ ಚಾಂಪಿಯನ್ಸ್‌ ಇಂಗ್ಲೆಂಡ್‌ ತಂಡ ಲಂಕಾ ಬೌಲರ್‌ಗಳ ದಾಳಿಗೆ ಕಂಗಾಲಾಯಿತು. ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ಗಳು ಸಿಂಹಳಿಯರ ದಾಳಿಗೆ ತರಗೆಲೆಗಳಂತೆ ಉದುರಿದರು. 16 ಓವರ್‌ಗಳಲ್ಲಿ 80 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿದ್ದ ಇಂಗ್ಲೆಂಡ್‌ ಬಳಿಕ ಬೆನ್‌ಸ್ಟೋಕ್ಸ್‌ (Ben Stokes) ಬ್ಯಾಟಿಂಗ್‌ ನೆರವಿನಿಂದ ಚೇತರಿಸಿಕೊಳ್ಳುತ್ತಿತ್ತು. 119 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡಿದ್ದ ಇಂಗ್ಲೆಂಡ್‌ ಕೊನೆಯ 27 ರನ್‌ಗಳ ಅಂತರದಲ್ಲೇ ಉಳಿದ 5 ವಿಕೆಟ್‌ಗಳನ್ನೂ ಕಳೆದುಕೊಂಡು 156 ರನ್‌ಗಳಿಗೆ ಆಲೌಟ್‌ ಆಯಿತು. ಇದನ್ನೂ ಓದಿ: ಏಷ್ಯನ್ ಪ್ಯಾರಾ ಗೇಮ್ಸ್ – ಮೂಡಿಗೆರೆಯ ಯುವತಿಗೆ ಚಿನ್ನ, ಗ್ರಾಮಸ್ಥರಿಂದ ಸಿಹಿ ಹಂಚಿ ಸಂಭ್ರಮ

    ಇಂಗ್ಲೆಂಡ್‌ ಪರ ಜಾನಿ ಬೈರ್ಸ್ಟೋವ್ 30 ರನ್‌, ಡೇವಿಡ್‌ ಮಲಾಬ್‌ 28 ರನ್‌ ಹಾಗೂ ಬೆನ್‌ಸ್ಟೋಕ್ಸ್‌ 43 ರನ್‌ ಗಳಿಸಿದ್ರೆ ಉಳಿದವರು ನಿರೀಕ್ಷಿತ ಬ್ಯಾಟಿಂಗ್‌ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಲಂಕಾ ಪರ ಲಹಿರು ಕುಮಾರ 3 ವಿಕೆಟ್‌ ಕಿತ್ತರೆ, ಕಸುನ್ ರಜಿತಾ, ಏಂಜೆಲೊ ಮ್ಯಾಥ್ಯೂಸ್ ತಲಾ 2 ವಿಕೆಟ್‌ ಹಾಗೂ ಮಹೇಶ್ ತೀಕ್ಷಣ 1 ವಿಕೆಟ್‌ ಪಡೆದು ಮಿಂಚಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಭಿಮಾನಿಗಳಿಗೆ ಅದ್ಭುತ, ಆಟಗಾರರಿಗೆ ಭಯಾನಕ: ಮೂಕ ಕಲ್ಪನೆ  ಎಂದು ಮ್ಯಾಕ್ಸ್‌ವೆಲ್‌ ಕೆಂಡ

    ಅಭಿಮಾನಿಗಳಿಗೆ ಅದ್ಭುತ, ಆಟಗಾರರಿಗೆ ಭಯಾನಕ: ಮೂಕ ಕಲ್ಪನೆ ಎಂದು ಮ್ಯಾಕ್ಸ್‌ವೆಲ್‌ ಕೆಂಡ

    ನವದೆಹಲಿ: ವಿಶ್ವಕಪ್‌ ಕ್ರಿಕೆಟ್‌ (World Cup Cricket) ಪಂದ್ಯದ ವೇಳೆ ಆಯೋಜನೆಗೊಂಡಿರುವ ಲೈಟ್‌ ಶೋಗೆ ಆಸ್ಟ್ರೇಲಿಯಾದ (Australia) ಸ್ಫೋಟಕ ಬ್ಯಾಟರ್‌ ಗ್ಲೇನ್‌ ಮ್ಯಾಕ್ಸ್‌ವೆಲ್‌ (Glenn Maxwell) ಅಸಮಾಧಾನ ಹೊರ ಹಾಕಿದ್ದಾರೆ.

    ನೆದರ್ಲೆಂಡ್ಸ್‌ (Netherlands) ವಿರುದ್ಧ ವೇಗದ ಶತಕ ಸಿಡಿಸಿದ ನಂತರ ಪ್ರತಿಕ್ರಿಯಿಸಿದ ಅವರು, ಲೈಟ್‌ ಶೋ (Light Show) ನನಗೆ ತಲೆನೋವು ತಂದಿತ್ತು. ನನ್ನ ಕಣ್ಣುಗಳು ಮರುಹೊಂದಿಸಲು ನನಗೆ ಸ್ವಲ್ಪ ಸಮಯ ಬೇಕಾಗಿತ್ತು  ಎಂದು ಹೇಳಿದರು.

    ಬಿಗ್ ಬ್ಯಾಷ್ ಪಂದ್ಯದ ವೇಳೆ ಪರ್ತ್ ಸ್ಟೇಡಿಯಂನಲ್ಲಿ ನಾನು ಅಂತಹ ಬೆಳಕಿನ ಪ್ರದರ್ಶನವನ್ನು ನೋಡಿದ್ದೆ. ಈ ಬೆಳಕಿನ ಪ್ರದರ್ಶನ ಭಯಾನಕ ಕಲ್ಪನೆ. ಅಭಿಮಾನಿಗಳಿಗೆ ಅದ್ಭುತವಾಗಿದೆ. ಆದರೆ ಆಟಗಾರರಿಗೆ ಭಯಾನಕವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಒಂದು ಪಂದ್ಯ, ಎರಡು ದಾಖಲೆ; ನೆದರ್ಲೆಂಡ್ಸ್‌ ವಿರುದ್ಧ ಆಸ್ಟ್ರೇಲಿಯಾಗೆ 309 ರನ್‌ಗಳ ಜಯ

    ನೆದರ್ಲೆಂಡ್ಸ್‌ ವಿರುದ್ಧ ಪಂದ್ಯದಲ್ಲಿ ಆಸ್ಟ್ರೇಲಿಯಾ 309 ರನ್‌ಗಳ ಭರ್ಜರಿ ಜಯ ಸಾಧಿಸಿತ್ತು. ಆಸ್ಟ್ರೇಲಿಯಾ 8 ವಿಕೆಟ್‌ ನಷ್ಟಕ್ಕೆ 399 ರನ್‌ ಹೊಡೆದರೆ  ನೆದರ್ಲೆಂಡ್ಸ್‌ 309 ರನ್‌ಗಳಿಗೆ ಆಲೌಟ್‌ ಆಗಿತ್ತು.

    ಗ್ಲೇನ್‌ ಮ್ಯಾಕ್ಸ್‌ವೆಲ್‌ 27 ಎಸೆತಗಳಲ್ಲಿ 50 ರನ್‌ ಹೊಡೆದಿದ್ದರೆ ನಂತರ ಕೇವಲ 13 ಎಸೆತಗಳಲ್ಲಿ 50 ರನ್‌ ಚಚ್ಚಿದ್ದರು. ಅಂತಿಮವಾಗಿ ಮ್ಯಾಕ್ಸ್‌ವೆಲ್‌ 106 ರನ್‌ (44 ಎಸೆತ, 9 ಬೌಂಡರಿ, 8 ಸಿಕ್ಸರ್‌) ಹೊಡೆದು ಔಟಾದರು.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬದ್ಧ ವೈರಿ ಪಾಕ್‌ ವಿರುದ್ಧ 8 ವಿಕೆಟ್‌ಗಳ ಜಯ – ಇತಿಹಾಸ ನಿರ್ಮಿಸಿದ ಅಫ್ಘಾನಿಸ್ತಾನ

    ಬದ್ಧ ವೈರಿ ಪಾಕ್‌ ವಿರುದ್ಧ 8 ವಿಕೆಟ್‌ಗಳ ಜಯ – ಇತಿಹಾಸ ನಿರ್ಮಿಸಿದ ಅಫ್ಘಾನಿಸ್ತಾನ

    – ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಜಿಗಿತ
    – ಕೊನೆಯ ಸ್ಥಾನಕ್ಕೆ ಜಿಗಿದ ಇಂಗ್ಲೆಂಡ್‌

    ಚೆನ್ನೈ: ಇಂಗ್ಲೆಂಡ್‌ಗೆ (England) ಶಾಕ್‌ ನೀಡಿದ್ದ ಅಫ್ಘಾನಿಸ್ತಾನ ಈಗ  ಬದ್ಧ ವೈರಿ ಪಾಕಿಸ್ತಾನಕ್ಕೂ (Pakistan) ಶಾಕ್‌ ನೀಡಿದೆ. ಇದೇ ಮೊದಲ ಬಾರಿಗೆ ವಿಶ್ವಕಪ್‌ ಕ್ರಿಕೆಟ್‌ನಲ್ಲಿ (World Cup Cricket) ಅಫ್ಘಾನಿಸ್ತಾನ (Afghanistan) ಪಾಕಿಸ್ತಾನದ ವಿರುದ್ಧ ಜಯಗಳಿಸಿ ಇತಿಹಾಸ ಸೃಷ್ಟಿಸಿದೆ.

    ಪಾಕಿಸ್ತಾನ ಕಳಪೆ ಬೌಲಿಂಗ್‌ ಮತ್ತು ಕಳಪೆ ಫೀಲ್ಡಿಂಗ್‌ ಲಾಭ ಪಡೆದ ಅಫ್ಘಾನಿಸ್ತಾನ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಗೆಲ್ಲಲು 282 ರನ್‌ಗಳ ಗುರಿಯನ್ನು ಪಡೆದ ಅಫ್ಘಾನಿಸ್ತಾನ ಇನ್ನೂ 6 ಎಸೆತ ಇರುವಂತೆಯೇ 2 ವಿಕೆಟ್‌ ನಷ್ಟಕ್ಕೆ 286 ರನ್‌ ಹೊಡೆಯುವ ಮೂಲಕ ಜಯ ಸಾಧಿಸಿತು.

    ಬ್ಯಾಟಿಂಗ್‌ ಆರಂಭಿಸಿದ ಅಫ್ಘಾನಿಸ್ತಾನ ರೆಹಮಾನುಲ್ಲಾ ಗುರ್ಬಾಜ್‌ ಮತ್ತು ಇಬ್ರಾಹಿಂ ಜಾರ್ದನ್‌ ಮೊದಲ ವಿಕೆಟಿಗೆ 128 ಎಸೆತಗಳಲ್ಲಿ 130 ರನ್‌ ಜೊತೆಯಾಟವಾಡುವ ಮೂಲಕ ಪಂದ್ಯವನ್ನು ಪಾಕ್‌ ಕೈಯಿಂದ ಕಸಿದರು.

    ನಂತರ ಎರಡನೇ ವಿಕೆಟಿಗೆ ರೆಹ್ಮಾತ್‌ ಶಾ ಮತ್ತು ಜದ್ರಾನ್ 74 ಎಸೆತಗಳಲ್ಲಿ 60 ರನ್‌ ಜೊತೆಯಾಟ, ಮುರಿಯದ ಮೂರನೇ ವಿಕೆಟಿಗೆ ರೆಹ್ಮತ್‌ ಶಾ ಮತ್ತು ಹಶ್ಮತುಲ್ಲಾ ಶಾಹಿದಿ 93 ಎಸೆತಗಳಲ್ಲಿ 96 ರನ್‌ ಜೊತೆಯಾಟವಾಡಿ ತಂಡವನ್ನು ಗೆಲ್ಲಿಸಿಕೊಟ್ಟರು. ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ ಪಾಕ್‌ ಮೇಲೆ ಸಿಟ್ಯಾಕೆ?

    ರೆಹಮಾನುಲ್ಲ 65 ರನ್‌ (53 ಎಸೆತ, 9 ಬೌಂಡರಿ, 1 ಸಿಕ್ಸರ್)‌, ಜದ್ರಾನ್ 87 ರನ್‌ (113 ಎಸೆತ, 10 ಬೌಂಡರಿ) ರೆಹ್ಮತ್‌ ಶಾ ಔಟಾಗದೇ 77 ರನ್‌, ಶಾಹಿದಿ ಔಟಾಗದೇ 48 ರನ್‌ (45 ಎಸೆತ, 4 ಬೌಂಡರಿ) ಹೊಡೆದರು.

    https://twitter.com/DailyDetect/status/1716478342042636474

    ಕಳಪೆ ಫೀಲ್ಡಿಂಗ್‌:
    ಇಂದಿನ ಪಾಕ್‌ ಫೀಲ್ಡಿಂಗ್‌ ಕಳಪೆಯಾಗಿತ್ತು. ಬೌಂಡರಿ ಹೋಗುವುದನ್ನು ತಡೆಯಲು ಪಾಕ್‌ ಫೀಲ್ಡರ್‌ಗಳು ವಿಫಲರಾದರು. ಸರಿಯಾಗಿ ಫೀಲ್ಡ್‌ ಮಾಡಿದರೆ ಹಲವು ಬೌಂಡರಿಗಳನ್ನು ತಡೆಯಬಹುದಿತ್ತು. ಸರಿಯಾಗಿ ಫೀಲ್ಡಿಂಗ್‌ ಮಾಡದ್ದಕ್ಕೆ ಕೀಪರ್‌ ರಿಜ್ವಾನ್‌ ಮೊಹಮ್ಮದ್‌ ಅವರು ತಲೆಗೆ ಕೈಯನ್ನು ಚಚ್ಚಿ ಸಿಟ್ಟು ಹೊರಹಾಕಿದ್ದರು.

    https://twitter.com/ACBofficials/status/1716500423014482017

    ಪಾಕಿಸ್ತಾನದ ಆರಂಭ ಉತ್ತಮವಾಗಿತ್ತು. ಅಬ್ದುಲ್ಲ ಶಫಿಕ್‌ 58 ರನ್‌( 75 ಎಸೆತ, 5 ಬೌಂಡರಿ, 2 ಸಿಕ್ಸರ್‌), ನಾಯಕ ಬಾಬರ್‌ ಅಜಂ 74 ರನ್‌ ( 92 ಎಸೆತ, 4 ಬೌಂಡರಿ 1 ಸಿಕ್ಸರ್‌) ಹೊಡೆದು ಔಟಾದರು.

    ಶಾದಬ್‌ ಶಕೀಲ್‌ 40 ರನ್‌(38 ಎಸೆತ, 1 ಬೌಂಡರಿ, 1 ಸಿಕ್ಸರ್‌), ಇಫ್ತಿಕಾರ್‌ ಅಹ್ಮದ್‌ 40 ರನ್‌(27 ಎಸೆತ, 2 ಬೌಂಡರಿ, 4 ಸಿಕ್ಸರ್‌) ಚಚ್ಚಿದ ಪರಿಣಾಮ ಪಾಕಿಸ್ತಾನ 280 ರನ್‌ಗಳ ಗಡಿಯನ್ನು ದಾಟಿತು.

    ನೂರ್‌ ಅಹ್ಮದ್‌ 3 ವಿಕೆಟ್‌ ಕಿತ್ತರೆ, ನವೀನ್‌ ಉಲ್‌ ಹಕ್‌ 2 ವಿಕೆಟ್‌, ಮೊಹಮ್ಮದ್‌ ನಬಿ ಮತ್ತು ಅಜ್ಮತ್ತುಲ್ಲ ತಲಾ ಒಂದು ವಿಕೆಟ್‌ ಪಡೆದರು.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • World Cup 2023: ಸಿಕ್ಸರ್‌ನಿಂದಲೇ ಮತ್ತೊಂದು ದಾಖಲೆ ಬರೆದ ಸಿಕ್ಸರ್ ಶರ್ಮಾ

    World Cup 2023: ಸಿಕ್ಸರ್‌ನಿಂದಲೇ ಮತ್ತೊಂದು ದಾಖಲೆ ಬರೆದ ಸಿಕ್ಸರ್ ಶರ್ಮಾ

    ಧರ್ಮಶಾಲಾ: ಟೀಂ ಇಂಡಿಯಾ (Team India) ಬ್ಯಾಟರ್‌ಗಳ ಅಬ್ಬರಕ್ಕೆ ವಿಶ್ವದಾಖಲೆಗಳು ನುಚ್ಚುನೂರಾಗುತ್ತಿವೆ. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ (ODI) ಭಾರತದ ಪರ 300ಕ್ಕೂ ಅಧಿಕ ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದ ರೋಹಿತ್ ಶರ್ಮಾ (Rohit Sharma) ಇದೀಗ ಸಿಕ್ಸರ್ ನಿಂದಲೇ ಮತ್ತೊಂದು ದಾಖಲೆ ಸಿಡಿಸಿದ್ದಾರೆ.

    ನ್ಯೂಜಿಲೆಂಡ್ ವಿರುದ್ಧ ಭಾನುವಾರ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 40 ಎಸೆತಗಳಲ್ಲಿ 46 ರನ್ ಬಾರಿಸಿದ ರೋಹಿತ್ ಶರ್ಮಾ 4 ಬೌಂಡರಿ, 4 ಸಿಕ್ಸರ್‌ಗಳನ್ನೂ ಸಿಡಿಸಿದರು. ಈ ಮೂಲಕ ಕ್ಯಾಲೆಂಡರ್ ವರ್ಷದಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಭಾರತದ ನಂ.1 ಬ್ಯಾಟರ್ ಹಾಗೂ ವಿಶ್ವದ 3ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: ಕೊಹ್ಲಿ, ಶಮಿ ಮಿಂಚು; 20 ವರ್ಷಗಳ ನಂತರ ಕಿವೀಸ್‌ ಮಣಿಸಿದ ಭಾರತ

    2015ರಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿಡಿ ವಿಲಿಯರ್ಸ್ (AB de Villiers) 58 ಸಿಕ್ಸರ್‌ ಹಾಗೂ 2019ರ ವರ್ಷದಲ್ಲಿ ವೆಸ್ಟ್ ಇಂಡೀಸ್‌ನ ಮಾಜಿ ಕ್ರಿಕೆಟಿಗ ಕ್ರಿಸ್‌ ಗೇಲ್ 56 ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದರು. ಇದೀಗ 2023ರಲ್ಲಿ ರೋಹಿತ್ ಶರ್ಮಾ 53 ಸಿಕ್ಸರ್ ಸಿಡಿಸಿ ವಿಶೇಷ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: ಶಮಿ ಹೊಸ ದಾಖಲೆ – ODI ವಿಶ್ವಕಪ್‌ ಇತಿಹಾಸದಲ್ಲೇ 2 ಬಾರಿ ಐದು ವಿಕೆಟ್‌ ಕಬಳಿಸಿದ ಮೊದಲ ಭಾರತೀಯ

    ಭಾನುವಾರ ನಡೆದ ರೋಚಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ 273 ರನ್‌ಗಳಿಗೆ ಸರ್ವಪತನ ಕಂಡಿತ್ತು. ಈ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ 48 ಓವರ್‌ಗಳಲ್ಲೇ 6 ವಿಕೆಟ್ ನಷ್ಟಕ್ಕೆ 274 ರನ್ ಸಿಡಿಸಿ ದಾಖಲೆ ಬರೆಯಿತು. ಇದನ್ನೂ ಓದಿ: ರೋಹಿತ್‌ ಶರ್ಮಾ ಸ್ಫೋಟಕ ಶತಕ – 8 ವಿಕೆಟ್‌ಗಳ ಜಯದೊಂದಿಗೆ ಪಾಕ್‌ ಹಿಂದಿಕ್ಕಿದ ಭಾರತ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]