Tag: ವಿಶ್ವಕಪ್

  • ನೆದರ್ಲ್ಯಾಂಡ್ಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ – ಅಫ್ಘಾನ್‌ ಸೆಮಿಗೆ ಪ್ರವೇಶಿಸುತ್ತಾ? ಲೆಕ್ಕಾಚಾರ ಏನು?

    ನೆದರ್ಲ್ಯಾಂಡ್ಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ – ಅಫ್ಘಾನ್‌ ಸೆಮಿಗೆ ಪ್ರವೇಶಿಸುತ್ತಾ? ಲೆಕ್ಕಾಚಾರ ಏನು?

    ಲಕ್ನೋ: ವಿಶ್ವಕಪ್‌ ಕ್ರಿಕೆಟ್‌ನಲ್ಲಿ (world Cup Cricket) ಬೌಲಿಂಗ್‌ ಮತ್ತು ಬ್ಯಾಟಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಅಫ್ಘಾನಿಸ್ತಾನ (Afghanistan) ಕ್ರಿಕೆಟ್‌ ಶಿಶು ನೆದರ್ಲ್ಯಾಂಡ್ಸ್ (Netherlands) ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ನೆದರ್ಲ್ಯಾಂಡ್ಸ್ 46.3 ಓವರ್‌ಗಳಲ್ಲಿ 179 ರನ್‌ಗಳಿಗೆ ಆಲೌಟ್‌ ಆಯ್ತು. ಸುಲಭದ ಸವಾಲನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ ಇನ್ನೂ 111 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್‌ ನಷ್ಟಕ್ಕೆ 181 ರನ್‌ ಹೊಡೆಯುವ ಮೂಲಕ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಸೆಮಿಫೈನಲ್‌ (Semi Final) ಪ್ರವೇಶದ ಕನಸನ್ನು ಜೀವಂತವಾಗಿಟ್ಟುಕೊಂಡಿತು.

    ಅಫ್ಘಾನ್‌ ಪರವಾಗಿ ನಾಯಕ ಹಶ್ಮತುಲ್ಲಾ ಶಾಹಿದಿ ಔಟಾಗದೇ 56 ರನ್‌ (64 ಎಸೆತ, 6 ಬೌಂಡರಿ), ರಹಮತ್ ಶಾ 52 ರನ್‌ (54 ಎಸೆತ, 8 ಬೌಂಡರಿ), ಅಜ್ಮತುಲ್ಲಾ ಔಟಾಗದೇ 31 ರನ್‌ (28 ಎಸೆತ, 3 ಬೌಂಡರಿ) ಹೊಡೆದರು.

    ಸೆಮಿ ಆಸೆ ಜೀವಂತ
    ಭರ್ಜರಿ ಗೆಲುವಿನೊಂದಿಗೆ ಅಫ್ಘಾನಿಸ್ತಾನದ ಸೆಮಿ ಪ್ರವೇಶಕ್ಕೆ ಎರಡು ಹಜ್ಜೆ ಮಾತ್ರ ಬಾಕಿಯಿದ್ದು, ಅಂಕಪಟ್ಟಿಯಲ್ಲಿ 4 ಜಯದೊಂದಿಗೆ 8 ಅಂಕ ಪಡೆಯುವ ಅಫ್ಘಾನಿಸ್ತಾನ 5ನೇ ಸ್ಥಾನಕ್ಕೆ ಜಿಗಿದಿದೆ.

    ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗಳು 8 ಅಂಕ ಪಡೆದರೂ ನೆಟ್‌ ರನ್‌ ರೇಟ್‌ನಿಂದಾಗಿ ಕ್ರಮವಾಗಿ ಮೂರು ಮತ್ತು ನಾಲ್ಕನೇಯ ಸ್ಥಾನವನ್ನು ಪಡೆದಿದೆ.  ಇದನ್ನೂ ಓದಿ: ಟೀಂ ಇಂಡಿಯಾ ಬೌಲರ್‌ಗಳಿಗೆ ಸ್ಪೆಷಲ್‌ ಬಾಲ್‌ ಕೊಡ್ತಿದ್ದಾರೆ – ಗೆಲುವಿನ ಬಗ್ಗೆ ಪಾಕ್‌ ಮಾಜಿ ಕ್ರಿಕೆಟಿಗ ಟೀಕೆ

    ಆಸ್ಟ್ರೇಲಿಯಾಗೆ (Australia) ಇನ್ನೂ 3 ಪಂದ್ಯಗಳಿದ್ದರೆ ಅ‍ಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್‌ಗೆ (New Zealand) 2 ಪಂದ್ಯಗಳಿವೆ. ನ.7 ರಂದು ಅಸ್ಟ್ರೇಲಿಯಾ, ನ.10 ರಂದು ದಕ್ಷಿಣ ಆಫ್ರಿಕಾದ ವಿರುದ್ಧ ಅಫ್ಘಾನಿಸ್ತಾನ ಸೆಣೆಸಾಡಲಿದೆ. ಈ ಎರಡು ಪಂದ್ಯಗಳನ್ನು ಗೆದ್ದರೆ ಅಫ್ಘಾನಿಸ್ತಾನ ಸೆಮಿ ಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ.

    ಶನಿವಾರ ಬೆಂಗಳೂರಿನಲ್ಲಿ ಪಾಕಿಸ್ತಾನ (Pakistan) ಮತ್ತು ನ್ಯೂಜಿಲೆಂಡ್‌ ಮಧ್ಯೆ ಪಂದ್ಯ ಇದ್ದರೆ ಅಹಮದಾಬಾದ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ಮಧ್ಯೆ ಪಂದ್ಯ ನಡೆಯಲಿದೆ. ನ್ಯೂಜಿಲೆಂಡ್‌ ಮತ್ತು ಆಸ್ಟ್ರೇಲಿಯಾ ಸೋತರೆ ಅಫ್ಘಾನಿಸ್ತಾನಕ್ಕೆ ಲಾಭ. ಒಂದು ವೇಳೆ ನ್ಯೂಜಿಲೆಂಡ್‌ ಮತ್ತು ಆಸ್ಟ್ರೇಲಿಯಾ ಗೆದ್ದರೆ ಅಫ್ಘಾನಿಸ್ತಾನದ ಉತ್ತಮ ರನ್‌ರೇಟ್‌ನಿಂದ ಉಳಿದ ಎರಡು ಪಂದ್ಯಗಳನ್ನು ಗೆಲ್ಲಬೇಕಾಗುತ್ತದೆ.

    ಅಫ್ಘಾನಿಸ್ತಾನ ಸೆಮಿ ಭವಿಷ್ಯ ನ.7 ರಂದು ತೀರ್ಮಾನವಾಗಲಿದೆ. ಆಸ್ಟ್ರೇಲಿಯಾ ವಿರುದ್ಧ ಪಂದ್ಯ ಗೆದ್ದರೆ ಸಮಸ್ಯೆ ಇಲ್ಲ. ಈ ಪಂದ್ಯವನ್ನು ಸೋತರೆ ಉತ್ತಮ ರನ್‌ ರೇಟ್‌ ಇದ್ದರೆ ಮಾತ್ರ ಸೆಮಿ ಪ್ರವೇಶಿಸಬಹುದು. ಇನ್ನೊಂದು ಕಡೆಯಲ್ಲಿ ಪಾಕಿಸ್ತಾನಕ್ಕೂ ಎರಡು ಪಂದ್ಯಗಳಿವೆ. ಈ ಕಾರಣಕ್ಕೆ ಸೆಮಿ ಪ್ರವೇಶಕ್ಕೆ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಪಾಕಿಸ್ತಾನದ ಮಧ್ಯೆ ನೇರ ಸ್ಪರ್ಧೆ ನಡೆಯುತ್ತಿದೆ.


    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಮಿ ಬೆಂಕಿ ಬೌಲಿಂಗ್‌ಗೆ ನೀಲಿ ತಾರೆ ಫಿದಾ – ಕೇಂದ್ರ ಲಸ್ಟ್‌ ರಿಯಾಕ್ಷನ್‌ ಸಿಕ್ಕಾಪಟ್ಟೆ ವೈರಲ್‌

    ಶಮಿ ಬೆಂಕಿ ಬೌಲಿಂಗ್‌ಗೆ ನೀಲಿ ತಾರೆ ಫಿದಾ – ಕೇಂದ್ರ ಲಸ್ಟ್‌ ರಿಯಾಕ್ಷನ್‌ ಸಿಕ್ಕಾಪಟ್ಟೆ ವೈರಲ್‌

    ಮುಂಬೈ: 2023ರ ಏಕದಿನ ವಿಶ್ವಕಪ್‌ (World Cup 2023) ಟೂರ್ನಿಯಲ್ಲಿ ಮೊದಲ ತಂಡವಾಗಿ ಟೀಂ ಇಂಡಿಯಾ ಸೆಮಿಫೈನಲ್​ಗೆ ಎಂಟ್ರಿಕೊಟ್ಟಿದೆ. ಕೇವಲ 55 ರನ್‌ಗಳಿಗೆ ಶ್ರೀಲಂಕಾ ತಂಡವನ್ನು ಧೂಳಿಪಟ ಮಾಡಿದ ಭಾರತ, 302 ರನ್​​ಗಳ ವಿಶ್ವದಾಖಲೆಯ ಜಯ ಸಾಧಿಸಿದೆ. ಅದರಲ್ಲೂ ಲಂಕಾ ವಿರುದ್ಧ ಬೆಂಕಿ ಬೌಲಿಂಗ್‌ ದಾಳಿ ಮಾಡಿದ ಮೊಹಮ್ಮದ್ ಶಮಿ 5 ವಿಕೆಟ್ ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಶಮಿ ಮಾರಕ ಬೌಲಿಂಗ್‌ ಅಭಿಮಾನಿಗಳು ಮಾತ್ರವಲ್ಲದೇ ಅಮೆರಿಕದ ನೀಲಿ ತಾರೆಯ (American Actress) ಗಮನವನ್ನೂ ಸೆಳೆದಿದೆ.

    ಹೌದು.. ಅಕ್ಟೋಬರ್‌ 29ರಂದು ಸಹ ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ಇಂಗ್ಲೆಂಡ್‌ ವಿರುದ್ಧ ಮಾರಕ ಬೌಲಿಂಗ್‌ ದಾಳಿ ನಡೆಸಿದ್ದ ಶಮಿ 7 ಓವರ್‌ಗಳಲ್ಲಿ ಕೇವಲ 22 ರನ್‌ ಬಿಟ್ಟುಕೊಟ್ಟು 4 ವಿಕೆಟ್‌ ಕಬಳಿಸಿದ್ದರು. ಇದರೊಂದಿಗೆ ವಿಶ್ವಕಪ್‌ ಕ್ರಿಕೆಟ್‌ನಲ್ಲಿ 40 ವಿಕೆಟ್‌ ಪಡೆದ 3ನೇ ಭಾರತೀಯ ಎಂಬ ವಿಶೇಷ ಸಾಧನೆ ಮಾಡಿದ್ದರು. ಈ ವೇಳೆ ಲಕ್ಷ್ಮಿ ರತನ್‌ ಶುಕ್ಲಾ ಎಂಬ ಟ್ವಿಟ್ಟರ್‌ ಎಕ್ಸ್‌ ಖಾತೆಯಲ್ಲಿ ಶಮಿ ಫೋಟೋ ಜೊತೆಗೆ ಹೀರೋ ಆಫ್‌ ದಿ ವೀಕ್‌ (ವಾರದ ಹೀರೋ) ಎಂದು ಪೋಸ್ಟ್‌ ಮಾಡಲಾಗಿತ್ತು. ಈ ಪೋಸ್ಟ್‌ಗೆ ರಿಯಾಕ್ಟ್‌ ಮಾಡಿದ ಕೇಂದ್ರ ಲಸ್ಟ್‌ (Kendra Lust), ಅಭಿನಂದನೆಗಳು ಎಂದು ಸೂಚಿಸುವ ಇಮೊಜಿಯಲ್ಲಿ ರಿಯಾಕ್ಟ್‌ ಮಾಡಿದ್ದಾರೆ. ಲಂಕಾ ವಿರುದ್ಧ ಶಮಿ 5 ವಿಕೆಟ್‌ ಪಡೆದು ಮಿಂಚಿದ ಬಳಿಕ ಈ ಪೋಸ್ಟ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

    ಲಂಕಾ ವಿರುದ್ಧ ಕೇವಲ 5 ಓವರ್‌ ಬೌಲಿಂಗ್‌ ಮಾಡಿದ ಶಮಿ, 18 ರನ್‌ ಬಿಟ್ಟುಕೊಟ್ಟು 5 ವಿಕೆಟ್‌ ಕಿತ್ತರು. ಇದರೊಂದಿಗೆ ಟೀಂ ಇಂಡಿಯಾ ಪರ ಏಕದಿನ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಅತಿಹೆಚ್ಚು ವಿಕೆಟ್​ ಕಿತ್ತ ಮೊದಲ ಬೌಲರ್ ಎಂಬ ಖ್ಯಾತಿಯನ್ನೂ ಗಳಿಸಿದ್ರು. ಪ್ರಸ್ತುತ ಟೂರ್ನಿಯಲ್ಲಿ ತಾನು ಆಡಿದ ಮೂರೇ ಪಂದ್ಯಗಳಲ್ಲಿ 14 ವಿಕೆಟ್ ಪಡೆದ ಶಮಿ, ಆ ಮೂಲಕ ವಿಶ್ವಕಪ್​​ನಲ್ಲಿ ಭಾರತದ ಪರ ಅತಿಹೆಚ್ಚು ವಿಕೆಟ್​ ಪಡೆದ ಜಹೀರ್​ ಖಾನ್ ಮತ್ತು ಜಾವಗಲ್ ಶ್ರೀನಾಥ್ ಅವರ 44 ವಿಕೆಟ್​ಗಳ ಜಂಟಿ ದಾಖಲೆಯನ್ನ ನುಚ್ಚು ನೂರು ಮಾಡಿದ್ರು. ಇದನ್ನೂ ಓದಿ: World Cup 2023: ಲಂಕಾಗೆ ಬೆಂಕಿ ಹಚ್ಚಿ ನಂ.1 ಪಟ್ಟಕ್ಕೇರಿದ ಶಮಿ

    ಸದ್ಯ ಮೊಹಮ್ಮದ್ ಶಮಿ 14 ವಿಶ್ವಕಪ್​ ಪಂದ್ಯಗಳನ್ನಾಡಿರುವ ಶಮಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಒಟ್ಟು 45 ವಿಕೆಟ್‌ ಪಡೆದು ನಂ.1 ಸ್ಥಾನದಲ್ಲಿದ್ದರೆ, 44 ವಿಕೆಟ್​ ಪಡೆದ ಜಹೀರ್ ಖಾನ್, ಜಾವಗಲ್ ಶ್ರೀನಾಥ್ ಕ್ರಮವಾಗಿ 2-3ನೇ ಸ್ಥಾನದಲ್ಲಿದ್ದಾರೆ. 33 ವಿಕೆಟ್​ ಜಸ್ಪ್ರೀತ್ ಬುಮ್ರಾ 4ನೇ ಸ್ಥಾನ ಮತ್ತು 31 ವಿಕೆಟ್​ ಪಡೆದಿರುವ ಅನಿಲ್ ಕುಂಬ್ಳೆ 5ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: World Cup 2023: ಮತ್ತೆ ಶತಕ ಮಿಸ್‌ – ಕ್ಯಾಬಿನ್‌ನಲ್ಲಿ ಕುಳಿತು ಕಣ್ಣೀರಿಟ್ಟ ಕೊಹ್ಲಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • World Cup 2023: ಮತ್ತೆ ಶತಕ ಮಿಸ್‌ – ಕ್ಯಾಬಿನ್‌ನಲ್ಲಿ ಕುಳಿತು ಕಣ್ಣೀರಿಟ್ಟ ಕೊಹ್ಲಿ

    World Cup 2023: ಮತ್ತೆ ಶತಕ ಮಿಸ್‌ – ಕ್ಯಾಬಿನ್‌ನಲ್ಲಿ ಕುಳಿತು ಕಣ್ಣೀರಿಟ್ಟ ಕೊಹ್ಲಿ

    ಮುಂಬೈ: ಶ್ರೀಲಂಕಾ (Sri Lanka) ವಿರುದ್ಧ ಗುರುವಾರ ನಡೆದ ವಿಶ್ವಕಪ್‌ ಪಂದ್ಯದಲ್ಲಿ 49ನೇ ಶತಕ ಸಿಡಿಸಿ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ (Sachin Tendulkar) ದಾಖಲೆ ಸರಿಗಟ್ಟುವ ಸನಿಹದಲ್ಲಿದ್ದ ಕಿಂಗ್‌ ಕೊಹ್ಲಿ (Virat Kohli) ಮತ್ತೆ ಎಡವಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ರು. ಆದ್ರೂ ಕೂಡ ಕ್ರಿಕೆಟ್‌ ದೇವರ ಹೆಸರಿನಲ್ಲಿದ್ದ ಮಹತ್ತರ ದಾಖಲೆಯೊಂದನ್ನು ಮುರಿದು ಗಮನ ಸೆಳೆದಿದ್ದಾರೆ.

    ಶ್ರೀಲಂಕಾ ವಿರುದ್ಧ 88 ರನ್‌ ಬಾರಿಸಿದ್ದ ಕೊಹ್ಲಿ 32ನೇ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದ್ರು. ಶತಕ ಸಿಡಿಸಿ ದಾಖಲೆ ಬರೆಯುವ ಸನಿಹದಲ್ಲಿದ್ದ ಕೊಹ್ಲಿ ಔಟಾಗುತ್ತಿದ್ದಂತೆ ಹತಾಷಾ ಭಾವದಿಂದ ಹೊರನಡೆದ್ರು. ಈ ವೇಳೆ ಅಭಿಮಾನಿಗಳೂ ಕೊಹ್ಲಿ (Kohli Fans) ಬೇಸರದಿಂದ ನಡೆದು ಹೋಗುತ್ತಿದ್ದ ದೃಶ್ಯವನ್ನ ಮೊಬೈಲ್‌ಗಳಲ್ಲಿ ಸೆರೆಹಿಡಿದ್ರು. ನಂತರ ಕ್ಯಾಬಿನ್‌ನಲ್ಲಿ ಕುಳಿತ ಕೊಹ್ಲಿ ಕಣ್ಣಲ್ಲಿ ಇದ್ದಕ್ಕಿದ್ದಂತೆ ನೀರು ಕಚ್ಚಿತು. ಅಭಿಮಾನಿಗಳನ್ನು ಕಂಡಾಗ ನಗುಮುಖದಿಂದಲೇ ಕೈಸನ್ನೆ ಮಾಡಿದ ಕೊಹ್ಲಿ ಬಳಿಕ ಕ್ಯಾಬಿನ್‌ನಲ್ಲಿ ಕುಳಿತು ಬಿಕ್ಕಿ-ಬಿಕ್ಕಿ ಕಣ್ಣೀರಿಟ್ಟಿದ್ದಾರೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅಭಿಮಾನಿಗಳಿಗೂ ಬೇಸರವುಂಟುಮಾಡಿದೆ. ಇದನ್ನೂ ಓದಿ: 48 ವರ್ಷಗಳಲ್ಲೇ ಮೊದಲು! ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಬುಮ್ರಾ

    ಗುರುವಾರ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ನಾಯಕ ರೋಹಿತ್ ಶರ್ಮಾ ಇನ್ನಿಂಗ್ಸ್‌ ಆರಂಭದ 2ನೇ ಎಸೆತದಲ್ಲೇ ವಿಕೆಟ್‌ ಕೈಚೆಲ್ಲಿದರು. ಆದ್ರೆ 2ನೇ ವಿಕೆಟ್‌ಗೆ ಶುಭಮನ್ ಗಿಲ್, ಜೊತೆಗೂಡಿದ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ, ಶ್ರೀಲಂಕಾ ಬೌಲರ್‌ಗಳನ್ನ ಬೆಂಡೆತ್ತಿದರು. 2ನೇ ವಿಕೆಟ್‌ಗೆ ಈ ಜೋಡಿ 179 ಎಸೆತಗಳಲ್ಲಿ 189 ರನ್‌ ಬಾರಿಸಿತ್ತು. ಇದನ್ನೂ ಓದಿ: ಶಮಿ ದಾಳಿಗೆ ಲಂಕಾ ಭಸ್ಮ – 302 ರನ್‌ಗಳ ಭರ್ಜರಿ ಜಯ, ಸೆಮಿಗೆ ಟೀಂ ಇಂಡಿಯಾ

    ಪಂದ್ಯದ ಆರಂಭದಲ್ಲೇ ಶ್ರೀಲಂಕಾದ ಕ್ಷೇತ್ರ ರಕ್ಷಕರು ತೋರಿದ ಕಳಪೆ ಪ್ರದರ್ಶನದಿಂದ ಹಲವು ಬಾರಿ ಜೀವದಾನ ಪಡೆದಿದ್ದ ವಿರಾಟ್ ಕೊಹ್ಲಿ, ನಂತರ ಸಿಡಿಲಬ್ಬರದ ಆಟಕ್ಕೆ ಮುಂದಾಗಿದ್ದರು. ಒಂದೂ ಸಿಕ್ಸರ್‌ ಸಿಡಿಸದಿದ್ದರೂ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 49ನೇ ಶತಕ ಸಿಡಿಸಿ ಸಚಿನ್ ದಾಖಲೆ ಸರಿಗಟ್ಟುವ ಭರವಸೆ ಮೂಡಿಸಿದ್ದರು. ಆದ್ರೆ ಶ್ರೀಲಂಕಾದ ದಿಲ್ಷಾನ್ ಮಧುಶಂಕ ಬೌಲಿಂಗ್ ನಲ್ಲಿ ನಿಸ್ಸಾಂಕಗೆ ಕ್ಯಾಚ್ ನೀಡಿ ಮೈದಾನ ತೊರೆದರು.‌ ಗಾಡ್ ಆಫ್ ಕ್ರಿಕೆಟ್ ಖ್ಯಾತಿಯ ಸಚಿನ್ ತೆಂಡೂಲ್ಕರ್ ತಮ್ಮ ವೃತ್ತಿ ಜೀವನದಲ್ಲಿ ಏಷ್ಯನ್ ಕಂಡೀಷನ್ಸ್ ಗಳಲ್ಲಿ ಆಡಿದ್ದ 188 ಇನಿಂಗ್ಸ್‌ನಲ್ಲಿ 8 ಸಾವಿರ ರನ್ ಗಡಿ ಮುಟ್ಟಿದ್ದರೆ, ವಿರಾಟ್ ಕೊಹ್ಲಿ 159 ಇನಿಂಗ್ಸ್ ನಲ್ಲೇ ಆ ದಾಖಲೆ ಮುರಿದಿದ್ದಾರೆ. ಇಷ್ಟಾದರೂ ಕೊಹ್ಲಿಗೆ ಸಮಾಧಾನ ತರಿಸದೇ ಕ್ಯಾಬಿನ್‌ನಲ್ಲಿ ಕಣ್ಣೀರಿಟ್ಟರು.

    ಒಟ್ಟಿನಲ್ಲಿ ಇನ್ನೆರಡು ಲೀಗ್‌ ಪಂದ್ಯಗಳಿದ್ದು, ಉಳಿದ ಪಂದ್ಯಗಳಲ್ಲಾದರೂ ಕೊಹ್ಲಿ ಶತಕ ಪೂರೈಸಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.  ಇದನ್ನೂ ಓದಿ: ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ ಆಫ್ರಿದಿ – ಟಾಪ್ 10 ರಲ್ಲಿ ಇಬ್ಬರು ಟೀಂ ಇಂಡಿಯಾ ಆಟಗಾರರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • World Cup 2023: ಲಂಕಾಗೆ ಬೆಂಕಿ ಹಚ್ಚಿ ನಂ.1 ಪಟ್ಟಕ್ಕೇರಿದ ಶಮಿ

    World Cup 2023: ಲಂಕಾಗೆ ಬೆಂಕಿ ಹಚ್ಚಿ ನಂ.1 ಪಟ್ಟಕ್ಕೇರಿದ ಶಮಿ

    ಮುಂಬೈ: 2023ರ ಐಸಿಸಿ ಏಕದಿನ ವಿಶ್ವಕಪ್‌ (World Cup 2023) ಟೂರ್ನಿಯಲ್ಲಿ ಮೊದಲ ತಂಡವಾಗಿ ಟೀಂ ಇಂಡಿಯಾ ಸೆಮಿಫೈನಲ್​ಗೆ ಲಗ್ಗೆಯಿಟ್ಟಿದೆ. ಕೇವಲ 55 ರನ್‌ಗಳಿಗೆ ಶ್ರೀಲಂಕಾ ತಂಡವನ್ನು ಧೂಳಿಪಟ ಮಾಡಿದ ಭಾರತ, 302 ರನ್​​ಗಳ ವಿಶ್ವದಾಖಲೆಯ ಜಯ ಸಾಧಿಸಿತು. ಅದರಲ್ಲೂ ಲಂಕಾ ವಿರುದ್ಧ ಬೆಂಕಿ ಬೌಲಿಂಗ್‌ ದಾಳಿ ಮಾಡಿದ ಮೊಹಮ್ಮದ್ ಶಮಿ (Mohammed Shami) 5 ವಿಕೆಟ್ ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇದರೊಂದಿಗೆ ವಿಶ್ವಕಪ್​​ನಲ್ಲಿ ದಾಖಲೆಯೊಂದನ್ನು ನಿರ್ಮಿಸಿದರು.

    ಲಂಕಾ (Sri Lanka) ವಿರುದ್ಧ ಕೇವಲ 5 ಓವರ್‌ ಬೌಲಿಂಗ್‌ ಮಾಡಿದ ಶಮಿ, 18 ರನ್‌ ಬಿಟ್ಟುಕೊಟ್ಟು 5 ವಿಕೆಟ್‌ ಕಿತ್ತರು. ಇದರೊಂದಿಗೆ ಟೀಂ ಇಂಡಿಯಾ ಪರ ಏಕದಿನ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಅತಿಹೆಚ್ಚು ವಿಕೆಟ್​ ಕಿತ್ತ ಮೊದಲ ಬೌಲರ್​ ಎಂಬ ಖ್ಯಾತಿ ಗಳಿಸಿದ್ರು. ಪ್ರಸ್ತುತ ಟೂರ್ನಿಯಲ್ಲಿ ತಾನು ಆಡಿದ ಮೂರೇ ಪಂದ್ಯಗಳಲ್ಲಿ 14 ವಿಕೆಟ್ ಪಡೆದ ಶಮಿ, ಆ ಮೂಲಕ ವಿಶ್ವಕಪ್​​ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಪರ ಅತಿಹೆಚ್ಚು ವಿಕೆಟ್​ ಪಡೆದ ಜಹೀರ್​ ಖಾನ್ ಮತ್ತು ಜಾವಗಲ್ ಶ್ರೀನಾಥ್ (Zaheer Khan And Javagal Srinath) ಅವರ 44 ವಿಕೆಟ್​ಗಳ ಜಂಟಿ ದಾಖಲೆಯನ್ನ ನುಚ್ಚು ನೂರು ಮಾಡಿದ್ರು. ಇದನ್ನೂ ಓದಿ: World Cup 2023: ಗಿಲ್‌ ಕೈ ತಪ್ಪಿದ ಶತಕ – ಸಾರಾಗೆ ಬೇಸರ 

    ಸದ್ಯ 14 ವಿಶ್ವಕಪ್​ ಪಂದ್ಯಗಳನ್ನಾಡಿರುವ ಶಮಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಒಟ್ಟು 45 ವಿಕೆಟ್‌ ಪಡೆದು ನಂ.1 ಸ್ಥಾನದಲ್ಲಿದ್ದರೆ, 44 ವಿಕೆಟ್​ ಪಡೆದ ಜಹೀರ್ ಖಾನ್, ಜಾವಗಲ್ ಶ್ರೀನಾಥ್ ಕ್ರಮವಾಗಿ 2-3ನೇ ಸ್ಥಾನದಲ್ಲಿದ್ದಾರೆ. 33 ವಿಕೆಟ್​ ಜಸ್ಪ್ರೀತ್ ಬುಮ್ರಾ 4ನೇ ಸ್ಥಾನ ಮತ್ತು 31 ವಿಕೆಟ್​ ಪಡೆದಿರುವ ಅನಿಲ್ ಕುಂಬ್ಳೆ 5ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: 48 ವರ್ಷಗಳಲ್ಲೇ ಮೊದಲು! ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಬುಮ್ರಾ

    ಇದೇ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 5 ವಿಕೆಟ್, ಇಂಗ್ಲೆಂಡ್ ವಿರುದ್ಧ 4 ವಿಕೆಟ್ ಉಡೀಸ್‌ ಮಾಡಿದ್ದ ಶಮಿ ಶ್ರೀಲಂಕಾ ವಿರುದ್ಧವೂ ಪ್ರಮುಖ 5 ವಿಕೆಟ್‌ಗಳನ್ನ ಪಡೆಯುವ ಮೂಲಕ ಲಂಕಾ ದಹನಕ್ಕೆ ಕಾರಣವಾದರು. ಇದರೊಂದಿಗೆ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 45 ವಿಕೆಟ್​​ ಪಡೆದ ಸಾಧನೆ ಮಾಡಿದರು. ಜೊತೆಗೆ ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ಸತತ 2 ಬಾರಿ 4ಕ್ಕೂ ಹೆಚ್ಚು ವಿಕೆಟ್‌ ಪಡೆದ ವಿಶ್ವದ 2ನೇ ಬೌಲರ್ ಎಂಬ ವಿಶೇಷ ಸಾಧನೆಗೂ ಪಾತ್ರರಾದರು. ಇದನ್ನೂ ಓದಿ: ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ ಆಫ್ರಿದಿ – ಟಾಪ್ 10 ರಲ್ಲಿ ಇಬ್ಬರು ಟೀಂ ಇಂಡಿಯಾ ಆಟಗಾರರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • World Cup 2023: ಗಿಲ್‌ ಕೈ ತಪ್ಪಿದ ಶತಕ – ಸಾರಾಗೆ ಬೇಸರ

    World Cup 2023: ಗಿಲ್‌ ಕೈ ತಪ್ಪಿದ ಶತಕ – ಸಾರಾಗೆ ಬೇಸರ

    ಮುಂಬೈ: ಟೀಂ ಇಂಡಿಯಾದ (Team India) ಆರಂಭಿಕ ಬ್ಯಾಟರ್‌ ಶುಭಮನ್‌ ಗಿಲ್‌ (Shubman Gill), ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 8 ರನ್‌ ಅಂತರದಲ್ಲಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ತಮ್ಮ ಚೊಚ್ಚಲ ಶತಕದಿಂದ ವಂಚಿತರಾದರು. ಇದು ಗಿಲ್‌ ಅಭಿಮಾನಿಗಳಲ್ಲೂ ನಿರಾಸೆ ಮೂಡಿಸಿತು.

    ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಟೀಂ ಇಂಡಿಯಾ ಪರ ಶುಭಮನ್‌ ಗಿಲ್‌ ಕೊಹ್ಲಿ ಜೊತೆಗೂಡಿ ಭರ್ಜರಿ ಆಟವಾಡಿದರು. 92 ಎಸೆತಗಳಲ್ಲಿ 11 ಫೋರ್‌ ಮತ್ತು 2 ಸಿಕ್ಸರ್‌ಗಳೊಂದಿಗೆ ಶತಕದತ್ತ ದಾಪುಗಾಲಿಟ್ಟಿದ್ದ ಗಿಲ್‌, ಸ್ಲೋ ಬೌನ್ಸರ್ ಎದುರು ಅಪ್ಪರ್‌ ಕಟ್‌ ಆಡುವ ಪ್ರಯತ್ನದಲ್ಲಿ 92 ರನ್‌ಗೆ ವಿಕೆಟ್‌ ಕೈಚೆಲ್ಲಿದರು. ಇದನ್ನೂ ಓದಿ: ಆಪ್‌ಗೆ ಮತ್ತೊಂದು ಶಾಕ್ – ಸಚಿವ ರಾಜ್ ಕುಮಾರ್ ಆನಂದ್ ನಿವಾಸದ ಮೇಲೆ ಇಡಿ ದಾಳಿ

    ಈ ವೇಳೆ ವಾಂಖೆಡೆ ಕ್ರೀಡಾಂಗಣದ ಗ್ಯಾಲರಿಯಲ್ಲಿ ಕುಳಿತಿದ್ದ ಶುಭಮನ್ ಗಿಲ್‌ ಅವರ ಪ್ರೇಯಸಿ ಎಂದೇ ಗುರುತಿಸಿಕೊಂಡಿರುವ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರ ಪುತ್ರಿ ಸಾರಾ ತೆಂಡೂಲ್ಕರ್‌ (Sara Tendulkar) ಬೇಸರಗೊಂಡರು. ಆದಾಗ್ಯೂ ಟೀಂ ಇಂಡಿಯಾದ ಪ್ರಿನ್ಸ್‌ ಖ್ಯಾತಿಯ ಆಟಗಾರನಿಗೆ ಸ್ಟ್ಯಾಂಡಿಂಗ್ ಓವೇಷನ್‌ ಕೊಟ್ಟರು.

    ಈ ದೃಶ್ಯದ ವೀಡಿಯೋ ಸೋಷಿಯಲ್‌ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಇಂಡಿಯಾ ಮೈತ್ರಿಕೂಟದಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ: ನಿತೀಶ್‌ ಕುಮಾರ್‌ ಬೇಸರ

    ಈಗಾಗಲೇ ಗಿಲ್‌ ಮತ್ತು ಸಾರಾ ನಡುವಣ ಪ್ರೇಮ ಪುರಾಣ ಸುದ್ದಿ ಜಾಲತಾಣದಲ್ಲಿ ಆಗಾಗ್ಗೆ ಸದ್ದು ಮಾಡುತ್ತಿದ್ದು, ಇವರಿಬ್ಬರ ಪ್ರೇಮ ಪುರಾಣಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಇಬ್ಬರೂ ಕದ್ದು ಮುಚ್ಚಿ ಡೇಟಿಂಗ್‌ ಮಾಡುತ್ತಿರುವುದು ಹಲವು ಬಾರಿ ಬೆಳಕಿಗೆ ಬಂದಿದೆ. ಆದ್ರೆ, ಎಲ್ಲಿಯೂ ಕೂಡ ಇಬ್ಬರಿಂದ ಅಧಿಕೃತ ಮಾಹಿತಿ ಹೊರಬಂದಿಲ್ಲ. ಇದನ್ನೂ ಓದಿ: Breaking: ಲಂಚ ಪಡೆಯುವಾಗಲೇ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ED ಅಧಿಕಾರಿಗಳು ಅರೆಸ್ಟ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕ್ರಿಕೆಟ್‌ ದೇವರಿಗೆ ವಿಶೇಷ ಗೌರವ – ವಾಂಖೆಡೆ ಸ್ಟೇಡಿಯಂನಲ್ಲಿ ಸಚಿನ್‌ ಪ್ರತಿಮೆ ಅನಾವರಣ

    ಕ್ರಿಕೆಟ್‌ ದೇವರಿಗೆ ವಿಶೇಷ ಗೌರವ – ವಾಂಖೆಡೆ ಸ್ಟೇಡಿಯಂನಲ್ಲಿ ಸಚಿನ್‌ ಪ್ರತಿಮೆ ಅನಾವರಣ

    ಮುಂಬೈ: ಕ್ರಿಕೆಟ್‌ ದೇವರು ಎಂದೇ ಕರೆಸಿಕೊಳ್ಳುವ ಟೀಂ ಇಂಡಿಯಾ (Team India) ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಅವರ ಬೃಹತ್‌ ಪ್ರತಿಮೆಯನ್ನು (Sachin Tendulkar Statue) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಅನಾವರಣಗೊಳಿಸಲಾಗಿದೆ.

    ಕ್ರಿಕೆಟ್‌ ಲೋಕದಲ್ಲಿ ಹಲವಾರು ದಾಖಲೆಗಳನ್ನು ಬರೆದಿರುವ ದಿಗ್ಗಜ ಕ್ರಿಕೆಟಿಗ ಸಚಿನ್‌ (Sachin Tendulkar) ಅವರ ಪಾಲಿಗೆ, ಮುಂಬೈನ ಪ್ರಸಿದ್ಧ ವಾಂಖೆಡೆ ಕ್ರೀಡಾಂಗಣವು (Wankhede Stadium) ತುಂಬಾ ವಿಶೇಷ. ಹೀಗಾಗಿ ಅವರಿಗೆ ಗೌರವಾರ್ಥವಾಗಿ ಪ್ರತಿಮೆ ನಿರ್ಮಿಸಲಾಗಿದೆ. ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂದೆ ಪ್ರತಿಮೆ ಅನಾವರಣಗೊಳಿಸಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಗೆದ್ದರೂ ಪಟಾಕಿ ಸಿಡಿಸುವಂತಿಲ್ಲ – BCCI ಪಟಾಕಿ ಬ್ಯಾನ್‌ ಮಾಡಿದ್ದೇಕೆ?

    ಕಾರ್ಯಕ್ರಮದಲ್ಲಿ ಸಚಿನ್‌ ತೆಂಡೂಲ್ಕರ್‌ ಪತ್ನಿ ಅಂಜಲಿ, ಪುತ್ರಿ ಸಾರಾ, ಸಹೋದರ ಅಜಿತ್‌ ಜೊತೆಗೆ ಪಾಲ್ಗೊಂಡಿದ್ದರು. ಐಸಿಸಿ ಮಾಜಿ ಅಧ್ಯಕ್ಷ ಶರದ್‌ ಪವಾರ್‌, ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ, ಉಪಾಧ್ಯಕ್ಷ ರಾಜೀವ್‌ ಶುಕ್ಲಾ ಇದ್ದರು.

    ಈ ವರ್ಷದ ಏಪ್ರಿಲ್‌ನಲ್ಲಿ ಸಚಿನ್ ಅವರು ತಮ್ಮ 50ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಹೀಗಾಗಿ ಪ್ರತಿಮೆಯನ್ನು ಅವರ 50 ವರ್ಷಗಳ ಅರ್ಥಪೂರ್ಣ ಬದುಕಿಗೆ ಸಮರ್ಪಿಸಲಾಗಿದೆ. ಇದನ್ನೂ ಓದಿ:  ವಿಶ್ವಕಪ್‌ನ ಟಾಪ್‌ 7 ತಂಡಗಳು 2025 ರ ಚಾಂಪಿಯನ್ಸ್‌ ಟ್ರೋಫಿಗೆ – ಪಾಕಿಸ್ತಾನ ಡೈರೆಕ್ಟ್‌ ಎಂಟ್ರಿ

    2011ರಲ್ಲಿ ಭಾರತ ವಿಶ್ವಕಪ್‌ ಗೆದ್ದ ಬಳಿಕ ವಾಂಖೆಡೆ ಸ್ಟೇಡಿಯಂನಲ್ಲಿಯೇ ಸಚಿನ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಹೀಗಾಗಿ ಅಲ್ಲಿ ಅವರ ಹೆಸರಿನ ಸ್ಟ್ಯಾಂಡ್ ಇದೆ. ಅಲ್ಲದೇ ಸಚಿನ್‌ ತಮ್ಮ 200ನೇ ಮತ್ತು ಅಂತಿಮ ಟೆಸ್ಟ್ ಪಂದ್ಯವನ್ನೂ 2013ರ ನವೆಂಬರ್‌ನಲ್ಲಿ ವಾಂಖೆಡೆಯಲ್ಲಿ ಆಡಿದ್ದರು.

    ಕ್ರಿಕೆಟ್‌ನಲ್ಲಿ ತೆಂಡೂಲ್ಕರ್‌ ಮಾಡಿರುವ ಹಲವು ದಾಖಲೆಗಳು ಇನ್ನೂ ಬ್ರೇಕ್‌ ಆಗಿಲ್ಲ. ಟೆಸ್ಟ್ ಕ್ರಿಕೆಟ್‌ನಲ್ಲಿ ಬರೋಬ್ಬರಿ 15,921 ರನ್‌ಗಳು ಹಾಗೂ ಏಕದಿನ ಸ್ವರೂಪದಲ್ಲಿ 18,426 ರನ್‌ಗಳನ್ನು ಸಿಡಿಸಿರುವ ಸಚಿನ್ ದಾಖಲೆಯನ್ನು ಇನ್ನೂ ಯಾರೂ ಮುರಿಯಲು ಸಾಧ್ಯವಾಗಿಲ್ಲ. ಆದ್ರೆ ಏಕದಿನ ಕ್ರಿಕೆಟ್‌ನಲ್ಲಿ 49 ಶತಕಗಳ ದಾಖಲೆಯನ್ನು ಸದ್ಯದಲ್ಲೇ ವಿರಾಟ್‌ ಕೊಹ್ಲಿ ಅವರು ಮುರಿಯುವ ನಿರೀಕ್ಷೆ ಹೊಂದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನ್ಯೂಜಿಲೆಂಡ್‌ ವಿರುದ್ಧ ಆಫ್ರಿಕಾಗೆ 190 ರನ್‌ಗಳ ಭರ್ಜರಿ ಜಯ – ಸೆಮಿಗೆ ಹೋಗುತ್ತಾ ಪಾಕ್‌?

    ನ್ಯೂಜಿಲೆಂಡ್‌ ವಿರುದ್ಧ ಆಫ್ರಿಕಾಗೆ 190 ರನ್‌ಗಳ ಭರ್ಜರಿ ಜಯ – ಸೆಮಿಗೆ ಹೋಗುತ್ತಾ ಪಾಕ್‌?

    ಪುಣೆ: ಕ್ವಿಂಟನ್‌ ಡಿ ಕಾಕ್‌ (Quinton de Kock) ಮತ್ತು ಡುಸ್ಸೆನ್ (Rassie van der Dussen) ಅವರ ಶತಕದಾಟ ನಂತರ ಬೌಲರ್‌ಗಳ ಮಾರಕ ಬೌಲಿಂಗ್‌ ಸಹಾಯದಿಂದ ವಿಶ್ವಕಪ್‌ ಕ್ರಿಕೆಟ್‌ನಲ್ಲಿ (World Cup Cricket) ನ್ಯೂಜಿಲೆಂಡ್‌ (New Zealand) ವಿರುದ್ಧ ದಕ್ಷಿಣ ಆಫ್ರಿಕಾ (South Africa) 190 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

    ಟಾಸ್‌ ಸೋತು ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 357 ರನ್‌ ಹೊಡೆಯಿತು. ಭಾರೀ ಮೊತ್ತವನ್ನು ಚೇಸ್‌ ಮಾಡಲು ಆರಂಭಿಸಿದ  ನ್ಯೂಜಿಲೆಂಡ್‌  ಆರಂಭದಲ್ಲೇ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿ ಅಂತಿಮವಾಗಿ 35.3 ಓವರ್‌ಗಳಲ್ಲಿ 167 ರನ್‌ಗಳಿಗೆ ಸರ್ವಪತನಗೊಂಡಿತು.

    ಕೇಶವ್‌ ಮಹಾರಾಜ್‌ ಅವರು 4 ವಿಕೆಟ್‌ ಕಿತ್ತರೆ, ಮಾಕ್ರೋ ಜನ್ಸೆನ್‌ 3 ವಿಕೆಟ್‌ ಪಡೆದರು. ನ್ಯೂಜಿಲೆಂಡ್‌ ಪರವಾಗಿ ಗ್ಲೇನ್‌ ಫಿಲಿಪ್ಸ್‌ 60 ರನ್‌ (50 ಎಸೆತ, 4 ಬೌಂಡರಿ, 4 ಸಿಕ್ಸರ್‌) ವಿಲ್‌ ಯಂಗ್‌ 33 ರನ್‌(37 ಎಸೆತ, 5 ಬೌಂಡರಿ) ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು.

    ಕ್ವಿಂಟನ್‌ ಡಿ ಕಾಕ್‌ ಅವರು 114 ರನ್‌ (116 ಎಸೆತ, 10 ಬೌಂಡರಿ, 3 ಸಿಕ್ಸ್‌) ಡುಸ್ಸೆನ್ 133 ರನ್‌ (118 ಎಸೆತ, 9 ಬೌಂಡರಿ, 5 ಸಿಕ್ಸರ್‌) ಹೊಡೆದು ಔಟಾದರು. ಡೇವಿಡ್‌ ಮಿಲ್ಲರ್‌ ಕೊನೆಯಲ್ಲಿ 30 ಎಸೆತ ಎದುರಿಸಿ 53 ರನ್‌ (2 ಬೌಂಡರಿ, 4 ಸಿಕ್ಸರ್‌) ಹೊಡೆದ ಪರಿಣಾಮ ದಕ್ಷಿಣ ಆಫ್ರಿಕಾ 350 ರನ್‌ ಗಳ ಗಡಿಯನ್ನು ದಾಟಿತು.

    ಸೆಮಿಫೈನಲ್‌ ಹೋಗುತ್ತಾ ಪಾಕ್‌?
    ಭಾರತ ಮತ್ತು ದಕ್ಷಿಣ ಆಫ್ರಿಕಾ 12 ಅಂಕ ಪಡೆದರೂ ನೆಟ್‌ ರನ್‌ ರೇಟ್‌ ಉತ್ತಮವಾಗಿರುವ ಕಾರಣ ಅಂಕ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಮೊದಲ ಸ್ಥಾನ ಪಡೆದರೆ ಭಾರತ (Team India) ಎರಡನೇ ಸ್ಥಾನ ಪಡೆದಿದೆ. ಆದರೆ ಭಾರತ 6 ಪಂದ್ಯದಿಂದ 12 ಅಂಕ ಸಂಪಾದಿಸಿದೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಈ ಎರಡು ತಂಡಗಳು ಸೆಮಿಫೈನಲ್‌ ಪ್ರವೇಶದ ಬಾಗಿಲಿನ ಹತ್ತಿರ ಬಂದಿದೆ.

    ನ್ಯೂಜಿಲೆಂಡ್‌ ಈ ಪಂದ್ಯವನ್ನು ಸೋತ ಕಾರಣ ಪಾಕಿಸ್ತಾನಕ್ಕೆ (Pakistan) ಸೆಮಿ ಪ್ರವೇಶಿಸುವ ಅವಕಾಶ ಈಗ ಸೃಷ್ಟಿಯಾಗಿದೆ. ಸದ್ಯ ಪಾಕಿಸ್ತಾನ 7 ಪಂದ್ಯವಾಡಿ 3ರಲ್ಲಿ ಜಯ ಸಾಧಿಸುವ ಮೂಲಕ 6 ಅಂಕ ಪಡೆದು 5ನೇ ಸ್ಥಾನದಲ್ಲಿದ್ದರೆ ನ್ಯೂಜಿಲೆಂಡ್‌ 7 ಪಂದ್ಯವಾಡಿ 4 ಜಯ ಸಾಧಿಸುವ ಮೂಲಕ 8 ಅಂಕ ಸಂಪಾದಿಸಿ 4ನೇ ಸ್ಥಾನದಲ್ಲಿದೆ.   ಇದನ್ನೂ ಓದಿ: ವಿಶ್ವಕಪ್‌ನಲ್ಲಿ ವಿಶೇಷ ಸಾಧನೆ ಮಾಡಿದ ಡಿ ಕಾಕ್‌ – ಸಚಿನ್‌ ವಿಶ್ವ ದಾಖಲೆ ಮುರಿಯಲು ಬೇಕಿದೆ 129 ರನ್‌

    ಮುಂದಿನ ಎರಡು ಪಂದ್ಯವನ್ನು ನ್ಯೂಜಿಲೆಂಡ್‌ ಸೋತು ತನ್ನ ಎರಡು ಪಂದ್ಯವನ್ನು ಗೆದ್ದರೆ 10 ಅಂಕ ಸಂಪಾದಿಸುವ ಮೂಲಕ ಪಾಕ್‌ ಸೆಮಿ ಫೈನಲ್‌ ಪ್ರವೇಶಿಸುವ ಸಾಧ್ಯತೆ ಇದೆ.

    ಇನ್ನೊಂದು ಕಡೆಯಲ್ಲಿ ಆಸ್ಟ್ರೇಲಿಯಾ 6 ಪಂದ್ಯಗಳಿಂದ 8 ಅಂಕ ಸಂಪಾದಿಸಿದರೆ ಬಾಂಗ್ಲಾದೇಶ 6 ಪಂದ್ಯಗಳಿಂದ 6 ಅಂಕ ಸಂಪಾದಿಸಿದೆ. ಈ ಎರಡು ತಂಡಗಳು 3 ಪಂದ್ಯ ಗೆದ್ದರೆ ಅಥವಾ  2 ಪಂದ್ಯ ಗೆದ್ದು ಉತ್ತಮ ರನ್‌ ರೇಟ್‌ ಹೊಂದಿದ್ದರೆ ಪಾಕಿಸ್ತಾನದ ಸೆಮಿ ಬಾಗಿಲು ಬಂದ್‌ ಆಗಲಿದೆ. ಹೀಗಾಗಿ ಬೇರೆ ಪಂದ್ಯಗಳ ಫಲಿತಾಂಶದ ಆಧಾರದ ಮೇಲೆ ಪಾಕಿಸ್ತಾನದ ಸೆಮಿಫೈನಲ್‌ ಭವಿಷ್ಯ ನಿಂತಿದೆ.


    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಸೀಸ್‌ಗೆ ಆಘಾತ – ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಮ್ಯಾಕ್ಸ್‌ವೆಲ್ ಔಟ್

    ಆಸೀಸ್‌ಗೆ ಆಘಾತ – ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಮ್ಯಾಕ್ಸ್‌ವೆಲ್ ಔಟ್

    ಅಹಮದಾಬಾದ್: ಇದೇ ನವೆಂಬರ್ 4ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಪಂದ್ಯದಿಂದ ಆಸ್ಟ್ರೇಲಿಯಾ ಸ್ಟಾರ್ ಆಲ್‌ರೌಂಡರ್ ಗ್ಲೇನ್‌ ಮ್ಯಾಕ್ಸ್‌ವೆಲ್‌ (Glenn Maxwell) ಹೊರಗುಳಿದಿದ್ದಾರೆ.

    ಗಾಲ್ಫ್ ಕಾರ್ಟ್‌ನಲ್ಲಿ (Golf Cart) (ಗಾಲ್ಫ್ ಕೋರ್ಟ್‌ನಲ್ಲಿ ಬಳಸುವ ವಾಹನ) ಕ್ಲಬ್‌ಹೌಸ್‌ನಿಂದ ಹೋಟೆಲ್‌ಗೆ ಹಿಂದಿರುಗುತ್ತಿದ್ದ ವೇಳೆ ಮ್ಯಾಕ್ಸ್‌ವೆಲ್‌ ಕಾರ್ಟ್‌ನಿಂದ ಸ್ಲಿಪ್‌ಆಗಿ ಬಿದ್ದಿದ್ದಾರೆ. ಇದರಿಂದ ತಲೆಗೆ ಪೆಟ್ಟಾಗಿದ್ದು, ತೀವ್ರ ನೋವನುಭವಿಸಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸದ್ಯ ಅವರಿಗೆ ವಿಶ್ರಾಂತಿ ಬೇಕಿರುವುದರಿಂದ ಇಂಗ್ಲೆಂಡ್ (England) ವಿರುದ್ಧದ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ಆಸ್ಟ್ರೇಲಿಯಾ ತಂಡದ ಕೋಚ್ ಆಂಡ್ರ‍್ಯೂ ಮೆಕ್‌ಡೊನಾಲ್ಡ್ ತಿಳಿಸಿದ್ದಾರೆ.

    ಸದ್ಯ ಸೆಮಿಫೈನಲ್‌ಗೆ ಸನಿಹದಲ್ಲಿರುವ ಆಸೀಸ್, ಇಂಗ್ಲೆಂಡ್ ವಿರುದ್ಧ ಮ್ಯಾಕ್ಸ್‌ವೆಲ್‌ ಬದಲಿಗೆ ಕ್ಯಾಮರೂನ್ ಗ್ರೀನ್ (Cameron Green) ಅಥವಾ ಮಾರ್ಕಸ್ ಸ್ಟೋಯ್ನಿಸ್ (Marcus Stoinis) ಅವರನ್ನು ಕಣಕ್ಕಿಳಿಸುವ ಪ್ಲ್ಯಾನ್ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಟೀಂ ಇಂಡಿಯಾ ಗೆದ್ದರೂ ಪಟಾಕಿ ಸಿಡಿಸುವಂತಿಲ್ಲ – BCCI ಪಟಾಕಿ ಬ್ಯಾನ್‌ ಮಾಡಿದ್ದೇಕೆ?

    ಇತ್ತೀಚೆಗೆ ನೆದರ್ಲೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮ್ಯಾಕ್ಸಿ 40 ಎಸೆತಗಳಲ್ಲೇ ಶತಕ ಸಿಡಿಸುವ ಮೂಲಕ ವಿಶ್ವದಾಖಲೆ ಬರೆದಿದ್ದರು. ಕೊನೆಯದ್ದಾಗಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ 24 ಎಸೆತಗಳಲ್ಲಿ 41 ರನ್ ಬಾರಿಸಿದ್ದರು. ಇದನ್ನೂ ಓದಿ: ಕಿಂಗ್‌ ಕೊಹ್ಲಿ, ರೋಹಿತ್‌ ಬಯೋಪಿಕ್‌ನಲ್ಲಿ ನಟಿಸುತ್ತಾರಾ ಶಾಹಿದ್ ಕಪೂರ್?

    ಈವರೆಗೆ 6 ಪಂದ್ಯಗಳ ಪೈಕಿ 4ರಲ್ಲಿ ಗೆಲುವು ಸಾಧಿಸಿರುವ ಆಸೀಸ್ 8 ಅಂಕಗಳು, +0.970 ರನ್‌ರೇಟ್‌ನೊಂದಿಗೆ 4ನೇ ಸ್ಥಾನದಲ್ಲಿದೆ. ಸೆಮಿಫೈನಲ್ ಪ್ರವೇಶಿಸಲು ಇನ್ನೂ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕಿದ್ದು, ಮ್ಯಾಕ್ಸ್‌ವೆಲ್‌ ಬದಲಿಗೆ ಮತ್ತೊಬ್ಬ ಆಲ್‌ರೌಂಡರ್‌ನನ್ನ ಕಣಕ್ಕಿಳಿಸುವ ಪ್ಲ್ಯಾನ್ ಮಾಡಿದೆ.  

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಾಕ್-ಬಾಂಗ್ಲಾ ಪಂದ್ಯದ ವೇಳೆ ಪ್ಯಾಲೆಸ್ತೀನ್ ಧ್ವಜ ಹಾರಿಸಿದ ಯುವಕರು – ನಾಲ್ವರು ವಶಕ್ಕೆ

    ಪಾಕ್-ಬಾಂಗ್ಲಾ ಪಂದ್ಯದ ವೇಳೆ ಪ್ಯಾಲೆಸ್ತೀನ್ ಧ್ವಜ ಹಾರಿಸಿದ ಯುವಕರು – ನಾಲ್ವರು ವಶಕ್ಕೆ

    ಕೋಲ್ಕತ್ತಾ: ಮಂಗಳವಾರ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ (Eden Gardens Stadium) ನಡೆದ ಪಾಕಿಸ್ತಾನ-ಬಾಂಗ್ಲಾದೇಶ ವಿಶ್ವಕಪ್ (World Cup) ಕ್ರಿಕೆಟ್ ಪಂದ್ಯದ ವೇಳೆ ಪ್ಯಾಲೆಸ್ತೀನ್ (Palestinian) ಧ್ವಜ (Flag) ಹಾರಿಸಿದ ನಾಲ್ವರು ಯುವಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ವಶಕ್ಕೆ ಪಡೆದವರಲ್ಲಿ ಇಬ್ಬರು ಜಾರ್ಖಂಡ್‌ನ ನಿವಾಸಿಗಳಾಗಿದ್ದು, ಇನ್ನಿಬ್ಬರು ಕೋಲ್ಕತ್ತಾದ ಎಕ್ಬಾಲ್‌ಪೋರ್ ಮತ್ತು ನೆರೆಯ ಹೌರಾದಿಂದ ಬಂದವರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಬ್ಬರನ್ನು ಗೇಟ್ ಸಂಖ್ಯೆ 6ರ ಬಳಿ ಪ್ಯಾಲೆಸ್ತೀನ್ ಧ್ವಜ ಹಾರಿಸಿದ್ದಕ್ಕಾಗಿ ವಶಕ್ಕೆ ಪಡೆದಿದ್ದು, ಮತ್ತಿಬ್ಬರನ್ನು ಬ್ಲಾಕ್ ಜಿ1 ನಲ್ಲಿ ವಶಕ್ಕೆ ಪಡೆಯಲಾಗಿದೆ. ನಾವು ಅವರ ಉದ್ದೇಶವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ ಎಂದು ಐಪಿಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಮತ್ತೆ 100 ರೂ. ಏರಿಕೆ!

    ಮೈದಾನ ಪೊಲೀಸ್ ಠಾಣೆಯಿಂದ ನಾಲ್ವರನ್ನು ಕಾನೂನು ಪರಿಪಾಲಕರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಮೊದಲಿಗೆ ಅಲ್ಲಿ ಪೋಸ್ಟಿಂಗ್ ಮಾಡಿದ ಪೊಲೀಸರಿಗೆ ಪ್ರತಿಭಟನಾಕಾರರು ಏನು ಮಾಡುತ್ತಿದ್ದಾರೆ ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ನಂತರ ಅವರು ಪ್ಯಾಲೆಸ್ತೀನ್ ಧ್ವಜವನ್ನು ಹಾರಿಸುತ್ತಿರುವುದನ್ನು ಗಮನಿಸಿದ ಬಳಿಕ ಅವರನ್ನು ವಶಕ್ಕೆ ಪಡೆಯಲಾಯಿತು. ಆದರೆ ಅವರು ಯಾವುದೇ ಘೋಷಣೆಯನ್ನು ಕೂಗಲಿಲ್ಲ ಎಂದು ಐಪಿಎಸ್ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿಗೆ ಕೇಜ್ರಿವಾಲ್‌ ಕಂಡರೆ ಭಯ, ಶ್ರೀಘ್ರವೇ ಬಂಧನ ಸಾಧ್ಯತೆ – ಸಚಿವೆ ಅತಿಶಿ

    ಆರಂಭಿಕ ತನಿಖೆಯಲ್ಲಿ ಇಪ್ಪತ್ತು ವಯಸ್ಸಿನ ನಾಲ್ವರು ಯುವಕರು ಗಾಜಾದಲ್ಲಿ ನಡೆಯುತ್ತಿರುವ ಇಸ್ರೇಲ್-ಹಮಾಸ್ ಸಂಘರ್ಷವನ್ನು ಪ್ರತಿಭಟಿಸುತ್ತಿದ್ದು, ಜನರಲ್ಲಿ ಸಂಚಲನ ಮೂಡಿಸುವ ಸಲುವಾಗಿ ಅಂತರ್‌ರಾಷ್ಟ್ರೀಯ ಪಂದ್ಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಕೋಲ್ಕತ್ತಾ ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಯಾರ ಪ್ರಭಾವಕ್ಕೂ ಒಳಗಾಗದಿದ್ರೆ ಫೋನ್‌ ಹ್ಯಾಕಿಂಗ್‌ ಪ್ರಯತ್ನ ಯಾಕೆ? – ಯಾವುದಕ್ಕೂ ಹೆದರಲ್ಲ: ರಾಗಾ ತಿರುಗೇಟು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೊನೆಗೂ ಪಾಕಿಗೆ ಜಯ – ಸೆಮಿ ರೇಸ್‌ನಿಂದ ಬಾಂಗ್ಲಾ ಔಟ್‌

    ಕೊನೆಗೂ ಪಾಕಿಗೆ ಜಯ – ಸೆಮಿ ರೇಸ್‌ನಿಂದ ಬಾಂಗ್ಲಾ ಔಟ್‌

    ಕೋಲ್ಕತ್ತಾ: ಸತತ 4 ಸೋಲಿನಿಂದ ಕಂಗೆಟ್ಟಿದ್ದ ಪಾಕಿಸ್ತಾನ (Pakistan) ಕೊನೆಗೂ ತನ್ನ 7ನೇ ಪಂದ್ಯದಲ್ಲಿ ಜಯ ಸಾಧಿಸಿದೆ. ಬೌಲರ್‌ ಮತ್ತು ಬ್ಯಾಟರ್‌ಗಳ ಸಾಂಘಿಕ ಪ್ರದರ್ಶನದಿಂದ ಬಾಂಗ್ಲಾದೇಶದ (Bangladesh) ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿದ ಪಾಕ್‌ ಅಂಕ ಪಟ್ಟಿಯಲ್ಲಿ 6 ಅಂಕ ಪಡೆದು 5ನೇ ಸ್ಥಾನಕ್ಕೆ ಜಿಗಿದಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಬೀಸಿದ ಬಾಂಗ್ಲಾದೇಶ 45.1 ಓವರ್‌ಗಳಲ್ಲಿ 204 ರನ್‌ಗಳಿಗೆ ಆಲೌಟ್‌ ಆಯ್ತು. ಸುಲಭದ ಸವಾಲನ್ನು ಬೆನ್ನಟ್ಟಿದ ಪಾಕಿಸ್ತಾನ ಇನ್ನೂ 105 ಎಸೆತ ಬಾಕಿ ಇರುವಂತೆಯೇ 3 ವಿಕೆಟ್‌ ನಷ್ಟಕ್ಕೆ 205 ರನ್‌ ಹೊಡೆದು ಜಯಗಳಿಸಿತು. 7 ಪಂದ್ಯವಾಡಿ ಕೇವಲ 2 ಅಂಕ ಸಂಪಾದಿಸಿರುವ ಬಾಂಗ್ಲಾ ಈ ಪಂದ್ಯವನ್ನು ಸೋಲುವ ಮೂಲಕ ವಿಶ್ವಕಪ್‌ ಕ್ರಿಕೆಟ್‌ (World Cup Cricket) ಸೆಮಿ ಫೈನಲ್‌ ರೇಸ್‌ನಿಂದ ಹೊರನಡೆಯಿತು.

    ಪಾಕ್‌ ಆರಂಭಿಕ ಆಟಗಾರರಾದ ಅಬ್ದುಲ್ಲಾ ಶಫಿಕ್‌ ಮತ್ತು ಫಖರ್‌ ಜಮಾನ್‌ ಮೊದಲ ವಿಕೆಟಿಗ 127 ಎಸೆತಗಳಿಗೆ 128 ರನ್‌ ಜೊತೆಯಾಟವಾಡುವ ಮೂಲಕ ಪಂದ್ಯವನ್ನು ಬಾಂಗ್ಲಾ ಕೈಯಿಂದ ಕಸಿದರು. ಅಬ್ದುಲ್ಲಾ ಶಫಿಕ್‌ 68 ರನ್‌ (69 ಎಸೆತ, 9 ಬೌಂಡರಿ, 2 ಸಿಕ್ಸರ್‌) ಹೊಡೆದರೆ ಫಖರ್‌ ಜಮಾನ್‌ 81 ರನ್‌ (74 ಎಸೆತ, 3 ಬೌಂಡರಿ, 7 ಸಿಕ್ಸರ್‌) ಚಚ್ಚಿ ಔಟಾದರು.  ಇದನ್ನೂ ಓದಿ: ಪಿಸಿಬಿಗೆ ಪಾಕಿಸ್ತಾನ ವಿಶ್ವಕಪ್ ಗೆಲ್ಲುವುದು ಬೇಕಿಲ್ಲ: ಪಾಕ್ ಆಟಗಾರನ ಆರೋಪ

    ನಾಯಕ ಬಾಬರ್‌ ಅಜಂ 9 ರನ್‌ ಗಳಿಸಿ ಔಟಾದರೂ ಮೊಹಮ್ಮದ್‌ ರಿಜ್ವಾನ್‌ ಔಟಾಗದೇ 26 ರನ್‌ (21 ಎಸೆತ, 4 ಬೌಂಡರಿ) ಇಫ್ತಿಕಾರ್‌ ಅಹ್ಮದ್‌ ಔಟಾಗದೇ 17 ರನ್‌ (15 ಎಸೆತ, 2 ಬೌಂಡರಿ) ಹೊಡೆಯುವ ಮೂಲಕ ಜಯವನ್ನು ತಂದುಕೊಟ್ಟರು.

    ಆರಂಭದಲ್ಲೇ ಶಾಹಿನ್‌ ಅಫ್ರಿದಿ 2 ವಿಕೆಟ್‌ ಪಡೆಯುವ ಮೂಲಕ ಬಾಂಗ್ಲಾಗೆ ಶಾಕ್‌ ನೀಡಿದರು. 23 ರನ್‌ಗಳಿಗೆ ಬಾಂಗ್ಲಾ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡಿತ್ತು. ಲಿಟ್ಟನ್‌ ದಾಸ್‌ 45 ರನ್‌ (64 ಎಸೆತ, 6 ಬೌಂಡರಿ), ಮೊಹಮದುಲ್ಲಾ 56 ರನ್‌ (70 ಎಸೆತ, 6 ಬೌಂಡರಿ, 1 ಸಿಕ್ಸರ್‌), ನಾಯಕ ಶಕಿಬ್‌ ಉಲ್‌ ಹಸನ್‌ 43 ರನ್‌ (64 ಬೌಂಡರಿ, 4 ಸಿಕ್ಸರ್‌) ಹೊಡೆದ ಪರಿಣಾಮ ಬಾಂಗ್ಲಾದೇಶ 200 ರನ್‌ಗಳ ಗಡಿ ದಾಟಿತು.

    ಶಾಹಿನ್‌ ಅಫ್ರಿದಿ 9 ಓವರ್‌ ಎಸೆದು 1 ಮೇಡನ್‌ ಮಾಡಿ 23 ರನ್‌ ನೀಡಿ 3 ವಿಕೆಟ್‌ ಕಿತ್ತರೆ, ಮೊಹಮ್ಮದ್‌ ವಾಸಿಮ್‌ 3 ವಿಕೆಟ್‌ ಪಡೆದರು. ಹ್ಯಾರಿಸ್‌ ರೌಫ್‌ 2 ವಿಕೆಟ್‌ ಪಡೆದರು.

    ಪಾಕಿಸ್ತಾನ 7 ಪಂದ್ಯವಾಡಿ 5ನೇ ಸ್ಥಾನ ಪಡೆದರೂ ಸೆಮಿಫೈನಲ್‌ ಪ್ರವೇಶ ಉಳಿದ ತಂಡಗಳ ಫಲಿತಾಂಶದ ಮೇಲೆ ನಿಂತಿದೆ. ದಕ್ಷಿಣ ಆಫ್ರಿಕಾ 10 ಅಂಕ ಪಡೆದು ಎರಡನೇ ಸ್ಥಾನದಲ್ಲಿದ್ದರೆ,ನ್ಯೂಜಿಲೆಂಡ್‌ ಮತ್ತು ಆಸ್ಟ್ರೇಲಿಯಾ ತಲಾ 8 ಅಂಕ ಪಡೆದು ಕ್ರಮವಾಗಿ ಮೂರು ಮತ್ತು ನಾಲ್ಕನೇಯ ಸ್ಥಾನದಲ್ಲಿದೆ. ಆಡಿರುವ 6 ಪಂದ್ಯಗಳನ್ನು ಗೆದ್ದಿರುವ ಭಾರತ 12 ಅಂಕ ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]