Tag: ವಿಶ್ವಕಪ್

  • World Cup Final – ಭಾರತದ ಗೆಲುವಿಗಾಗಿ ಬೆಂಗಳೂರಿನ ಹಲವೆಡೆ ವಿಶೇಷ ಪೂಜೆ

    World Cup Final – ಭಾರತದ ಗೆಲುವಿಗಾಗಿ ಬೆಂಗಳೂರಿನ ಹಲವೆಡೆ ವಿಶೇಷ ಪೂಜೆ

    ಬೆಂಗಳೂರು: ಏಕದಿನ ವಿಶ್ವಕಪ್ (World Cup) ಕ್ರಿಕೆಟ್ (Cricket) ಪಂದ್ಯ ಅಂತಿಮ ಹಂತಕ್ಕೆ ತಲುಪಿದೆ. ಇಂದು ಗುಜರಾತ್‌ನ (Gujarat) ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ಭಾರತ (India) ಮತ್ತು ಆಸ್ಟ್ರೇಲಿಯಾ (Australia) ತಂಡಗಳ ಮಧ್ಯೆ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಕ್ರಿಕೆಟ್ ಅಭಿಮಾನಿಗಳು ಈ ರೋಚಕ ಮ್ಯಾಚ್ ವೀಕ್ಷಿಸಲು ಅತ್ಯಂತ ಉತ್ಸುಕರಾಗಿದ್ದಾರೆ. ಇಷ್ಟು ಮಾತ್ರವಲ್ಲದೇ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡದ ಗೆಲುವಿಗಾಗಿ ಅನೇಕ ಕಡೆಗಳಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು ನಡೆಯುತ್ತಿವೆ.

    ಭಾರತದ ಗೆಲುವಿಗಾಗಿ ಕ್ರಿಕೆಟ್ ಅಭಿಮಾನಿಗಳು ಬೆಂಗಳೂರಿನ (Bengaluru) ಅನೇಕ ಕಡೆಗಳಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದ್ದಾರೆ. ಭಾರತ ವಿಶ್ವಕಪ್ ಗೆಲ್ಲಲಿ ಅಂತಾ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕ ಮಾಡಿದ್ದು, ಭಾರತದ ಬಾವುಟ ಇಟ್ಟು ಪೂಜೆ ಮಾಡಿದ್ದಾರೆ. ಇದನ್ನೂ ಓದಿ: ವಿಶ್ವಕಪ್ ಗೆಲ್ಲುವ ನಿರೀಕ್ಷೆಯಿದೆ- ಟೀಂ ಇಂಡಿಯಾಗೆ ತೆಂಡೂಲ್ಕರ್ ವಿಶ್

    ವಿಶ್ವಕಪ್ ಕ್ರಿಕೆಟ್ ಹಿನ್ನೆಲೆ ಭಾರತ ಗೆಲ್ಲಲಿ ಅಂತಾ ಎಲ್ಲೆಡೆ ಶುಭ ಹಾರೈಕೆಗಳ ಸುರಿಮಳೆ ಸುರಿಯುತ್ತಿದ್ದು, ಮಲ್ಲೇಶ್ವರಂ 18ನೇ ಕ್ರಾಸ್‌ನ ಮೈದಾನದಲ್ಲಿ ಪುಟಾಣಿ ಮಕ್ಕಳು ಬೆಸ್ಟ್ ವಿಶಶ್ ತಿಳಿಸಿದ್ದಾರೆ. ಬ್ಯಾಟ್ ಹಿಡಿದು ಇಂಡಿಯಾ ಗೆಲುವಿಗೆ ಹಾರೈಸಿದ್ದಾರೆ. ವಿಶ್ವಕಪ್ ಗೆಲುವಿಗಾಗಿ ಬನಶಂಕರಿ ದೇವಸ್ಥಾನದಲ್ಲಿ ಹೋಮ ಹವನ ನಡೆಯುತ್ತಿದೆ. ಭಾರತೀಯ ಕ್ರಿಕೆಟ್ ತಂಡದ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲಾ ಆಟಗಾರರ ಹೆಸರಿನಲ್ಲಿ ಅರ್ಚಕರು ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: World Cup 2023- ಭಾರತ ಗೆದ್ದು ಬರಲಿ ಎಂದು ಬೊಮ್ಮಾಯಿ, ಹೆಚ್‍ಡಿಕೆ ವಿಶ್

    ಇನ್ನು ವಂದೇ ಮಾತರಂ ಸರ್ವ ಸಂಘಟನೆಗಳ ವತಿಯಿಂದ ಸರ್ಕಲ್ ಮಾರಮ್ಮ ದೇವಾಲಯದ ಮುಂದೆ ಪೂಜೆ ಆಯೋಜಿಸಿದ್ದು, ಬ್ಯಾಟ್, ಸ್ಟಂಟ್‌ಗಳಿಗೆ ಹಾರ ಹಾಕಿ, ಕುಂಬಳಕಾಯಿ ಹೊಡೆದು ಪೂಜೆ ಮಾಡಲಾಗಿದೆ. ಅಲ್ಲದೇ ಕ್ರಿಕೆಟ್ ಆಟಗಾರರು ಚೆನ್ನಾಗಿ ಆಟವಾಡಲಿ ಅಂತಾ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದು, ಭಾರತ ತಂಡದ ಆಟಗಾರರ ಭಾವಚಿತ್ರ ಹಿಡಿದು ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಲೆದರ್ ಬಾಲ್ ಮೇಲೆ ಸಹಿ ಮಾಡಿ ಭಾರತ ತಂಡಕ್ಕೆ ಶುಭಕೋರಿದ ಬಿ.ವೈ ರಾಘವೇಂದ್ರ

    ಶ್ರೀ ಭುವನೇಶ್ವರಿ ಸಂಘದಿಂದ ಅದ್ಧೂರಿ ಸೆಲಬ್ರೆಷನ್ ನಡೆಯುತ್ತಿದ್ದು, ರಸ್ತೆಯಲ್ಲೆ ವಿಶ್ವಕಪ್ ಟ್ರೋಫಿ ನಿರ್ಮಾಣವಾಗಿದೆ. ಮಂಜುನಾಥ್ ನಗರದಲ್ಲಿ ವಿಶ್ವಕಪ್ ಹವಾ ಎಬ್ಬಿಸಿದ್ದು, ಪ್ರಸನ್ನ ಗಣಪತಿ ದೇವಸ್ಥಾನದ ಎದುರು ಹೋಮ ಹವನ ನಡೆಸಿದ್ದಾರೆ. ರಸ್ತೆಯ ಎರಡೂ ಕಡೆ ದೊಡ್ಡ ಬಾವುಟ ಕಟ್ಟಿ ಸಂಭ್ರಮಿಸಿದ್ದು, ಗೆದ್ದು ಬಾ ಟೀಂ ಇಂಡಿಯಾ ಎಂದು ಘೋಷಣೆ ಕೂಗಿದ್ದಾರೆ. ಇದನ್ನೂ ಓದಿ: ಭಾರತದ ಗೆಲುವಿಗಾಗಿ ಇಶನ್ ಕಿಶನ್ ಕುಟುಂಬಸ್ಥರಿಂದ ವಿಶೇಷ ಪೂಜೆ

    ವರ್ಲ್ಡ್ ಕಪ್‌ಗಾಗಿ ಹಂಪಿನಗರದ ಸಂಕಷ್ಟಹರ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಬ್ರಹ್ಮಶ್ರೀ ಡಾಕ್ಟರ್ ಉಮೇಶ್ ಶರ್ಮಾ ನೇತೃತ್ವದಲ್ಲಿ ಗಣಪತಿ ಹೋಮ, ಸುಬ್ರಹ್ಮಣ್ಯ ಹೋಮ, ಮೃತ್ಯುಂಜಯ ಹೋಮ, ದುರ್ಗ ಹೋಮ ನಡೆಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ದುರ್ಗ ದೇವಸ್ಥಾನದ ಬಂಗಾಳಿ ಪಂಡಿತರು, ವಾರಣಾಸಿ ಪಂಡಿತರು ಸೇರಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನು ವಿಶ್ವ ಹಿಂದೂ ಪರಿಷತ್ ನಿಂದ ವಿಶ್ವಕಪ್‌ಗಾಗಿ ವಿಶೇಷ ಪೂಜೆ ನಡೆಸಿದ್ದಾರೆ. ಕನ್ನಡ ಪರ ಹೋರಾಟಗಾರರು ಉರುಳು ಸೇವೆ ಮಾಡಿದ್ದು, ಸರ್ಕಲ್ ಮಾರಮ್ಮ ದೇವಾಲಯದ ಮುಂಭಾಗದಲ್ಲಿ ಪೂಜೆ ಸಲ್ಲಿಸಲಾಗಿದೆ. ಇದನ್ನೂ ಓದಿ: ವಿಶ್ವಕಪ್ 2023- ಜೀತೆಗಾ ಹಿಂದೂಸ್ತಾನ್ ಜೀತೆಗಾ ಎಂದ ಜಿಲ್ಲೆಯ ಕ್ರೀಡಾಭಿಮಾನಿಗಳು

    ಎಲ್ರಲ್ಲೂ ವಿಶ್ವಕಪ್ ಜ್ವರ ಹೆಚ್ಚಾಗಿದ್ದು, ಕೆಫೆ ಕಾಫಿ ಕನ್ಫೆಷನ್‌ನಿಂದ ಕಾಫಿಯಲ್ಲಿ ವರ್ಲ್ಡ್ ಕಪ್ ಅರಳಿದೆ. ಇನ್ನು ಬನಶಂಕರಿ ದೇವಸ್ಥಾನದಲ್ಲಿ ಹೋಮ ನಡೆಸುತ್ತಿದ್ದು, ಭಾರತ ತಂಡದ ಗೆಲುವಿಗಾಗಿ ಹೋಮ ನಡೆಸಲಾಗುತ್ತಿದೆ. ಇದನ್ನೂ ಓದಿ: World Cup 2023 – ಚಿನ್ನದಲ್ಲಿ ವಿಶ್ವಕಪ್ ತಯಾರಿಸಿದ ಬೆಂಗಳೂರಿನ ಅಕ್ಕಸಾಲಿಗ

  • ಲೆದರ್ ಬಾಲ್ ಮೇಲೆ ಸಹಿ ಮಾಡಿ ಭಾರತ ತಂಡಕ್ಕೆ ಶುಭಕೋರಿದ ಬಿ.ವೈ ರಾಘವೇಂದ್ರ

    ಲೆದರ್ ಬಾಲ್ ಮೇಲೆ ಸಹಿ ಮಾಡಿ ಭಾರತ ತಂಡಕ್ಕೆ ಶುಭಕೋರಿದ ಬಿ.ವೈ ರಾಘವೇಂದ್ರ

    ಬೆಂಗಳೂರು: ಇಂದು ಭಾರತ (India) ಮತ್ತು ಆಸ್ಟ್ರೇಲಿಯಾ (Australia) ನಡುವಿನ ವಿಶ್ವಕಪ್ ಫೈನಲ್‌ಗೆ (World Cup Final) ಕ್ಷಣಗಣನೆ ಆರಂಭವಾಗಿದ್ದು, ಪಂದ್ಯ ವೀಕ್ಷಣೆಗಾಗಿ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಹಿನ್ನೆಲೆ ರಾಜ್ಯದ ಅನೇಕ ಜಿಲ್ಲೆಯ ಅಭಿಮಾನಿಗಳು ವಿವಿಧ ರೀತಿಯಲ್ಲಿ ಟೀಂ ಇಂಡಿಯಾಗೆ ಶುಭಕೋರಿದ್ದಾರೆ.

    ವಿಶ್ವಕಪ್ ಹಿನ್ನೆಲೆ ಸಂಸದ ಬಿವೈ ರಾಘವೇಂದ್ರ (BY Raghavendra) ಶಿವಮೊಗ್ಗದ (Shivamogga) ನೆಹರು ಕ್ರೀಡಾಂಗಣದಲ್ಲಿ ಲೆದರ್ ಬಾಲ್ ಮೇಲೆ ಸಹಿ ಮಾಡಿ ಭಾರತ ತಂಡಕ್ಕೆ ಶುಭ ಕೋರಿದ್ದಾರೆ. ಮೂರನೇ ಬಾರಿ ಭಾರತ ತಂಡ ವಿಶ್ವಕಪ್ ಗೆಲ್ಲುವ ವಿಶ್ವಾಸ ಹೊಂದಿದ್ದು, ಮೋದಿ ಅವರ ತವರಿನಲ್ಲಿ ಈ ಪಂದ್ಯ ನಡೆಯುತ್ತಿದೆ. ಈ ರೋಚಕ ಪಂದ್ಯಕ್ಕಾಗಿ ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ವಿಶ್ವಕಪ್ 2023- ಜೀತೆಗಾ ಹಿಂದೂಸ್ತಾನ್ ಜೀತೆಗಾ ಎಂದ ಜಿಲ್ಲೆಯ ಕ್ರೀಡಾಭಿಮಾನಿಗಳು

    ಇನ್ನು ಏಕದಿನ ವಿಶ್ವಕಪ್ ಮ್ಯಾಚ್‌ನಲ್ಲಿ ಭಾರತದ ಗೆಲುವಿಗಾಗಿ ಅಯ್ಯಪ್ಪ ಮಾಲಾಧಾರಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೇರಳದ ಗುರುವಾಯೂರಿನಲ್ಲಿ ಕರ್ನಾಟಕದ ಅಯ್ಯಪ್ಪ ಭಕ್ತರು ಟೀಂ ಇಂಡಿಯಾ ಗೆಲುವಿಗೆ ಪಾರ್ಥನೆ ಮಾಡಿದ್ದಾರೆ. ಚಾಮರಾಜನಗರ ಜಿಲ್ಲೆ ಹನೂರಿನ ಅಯ್ಯಪ್ಪ ಭಕ್ತರು ಶಬರಿಮಲೆ ಯಾತ್ರೆ ಹೊರಟಿದ್ದು, ಗುರುವಾಯೂರು ಕೃಷ್ಣ ಚೋಟಾನಿಕೆರೆ ಭಗವತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ಭಾರತ ಗೆದ್ದರೆ ಟೀಂ ಇಂಡಿಯಾ ಹೆಸರಿನಲ್ಲಿ ಶಬರಿಮಲೆಯಲ್ಲಿ ವಿಶೇಷ ಪೂಜೆ ಮಾಡಿಸುವುದಾಗಿ ಹರಕೆ ಹೊತ್ತಿದ್ದಾರೆ. ಇದನ್ನೂ ಓದಿ: World Cup 2023 – ಚಿನ್ನದಲ್ಲಿ ವಿಶ್ವಕಪ್ ತಯಾರಿಸಿದ ಬೆಂಗಳೂರಿನ ಅಕ್ಕಸಾಲಿಗ

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಅವಜೀಕರ ಮಠದಲ್ಲಿ ಮಠದ ಕಿರಿಯ ಪೀಠಾಧಿಪತಿ ಅಭಿನವ ಶ್ರೀಗಳು ವಿಶೇಷ ಪೂಜೆ ಮಾಡಿದ್ದಾರೆ. ಟೀಂ ಇಂಡಿಯಾ ಗೆಲುವಿಗಾಗಿ ಅವಜೀಕರ ಗದ್ದುಗೆ ಹಾಗೂ ಆಂಜನೇಯನಿಗೆ ಶ್ರೀಗಳು ವಿಶೇಷ ಪೂಜೆ ಸಲ್ಲಿಸಿದ್ದು, ಭಾರತ ಗೆದ್ದು ಬರಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ವಿಶ್ವಕಪ್ ಫೈನಲ್ ಪಂದ್ಯ ನಡೆಯುವ ಹಿನ್ನೆಲೆ ಕೋಲಾರದಲ್ಲಿ ಯುವಕರು ಟೀಂ ಇಂಡಿಯಾಗೆ ಶುಭಾಶಯ ಕೋರಿದ್ದಾರೆ. ಯುವಕರಿಂದ ಚಿಯರ್ ಅಪ್, ಕ್ರಿಕೆಟ್ ಅಭಿಮಾನಿಗಳಿಂದ ರೋಹಿತ್ ಪಡೆಗೆ ಶುಭಾಶಯ ಕೋರಿದ್ದು, ಫೈನಲ್ ಕ್ರಿಕೆಟ್ ಮ್ಯಾಚ್ ವೀಕ್ಷಣೆಗೆ ಸಜ್ಜಾಗಿದ್ದಾರೆ. ಇದನ್ನೂ ಓದಿ: 13 ವಿಶ್ವಕಪ್‍ನಲ್ಲಿ 8ನೇ ಬಾರಿ ಫೈನಲ್- 5 ಬಾರಿ ಚಾಂಪಿಯನ್ ಆಗಿರೋ ಆಸ್ಟ್ರೇಲಿಯಾ

    ಇನ್ನು ದಾವಣಗೆರೆಯ ಆಂಜನೇಯ ದೇವಸ್ಥಾನದಲ್ಲಿ ಸ್ಕೂಲ್ ಮಕ್ಕಳು ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶಾಮನೂರು ತಿಮ್ಮಾರೆಡ್ಡಿ ಶಾಲಾ ಮಕ್ಕಳು ದೇವರ ಮೊರೆ ಹೋಗಿದ್ದು, ಶಾಲಾ ಆಡಳಿತ ಮಂಡಳಿ ಮತ್ತು ಮಕ್ಕಳು ಆಂಜನೇಯ ಪಾದದ ಬಳಿ ವರ್ಲ್ಡ್ಕಪ್ ಇಟ್ಟು ಪೂಜೆ ಸಲ್ಲಿಸಿದ್ದಾರೆ. ತಂಡ ಸತತವಾಗಿ 10 ಮ್ಯಾಚ್ ಗೆದ್ದು ಪೈನಲ್ ತಲುಪಿದೆ. ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡ ಭಾರತ. ಆದರು ಕೂಡ ದೈವದ ಅನುಗ್ರಹ ಇರಲಿ ಅಂತ ವಿಶೇಷ ಪೂಜೆ ಸಲ್ಲಿಸಲಾಗಿದೆ. ಇನ್ನು ದಾವಣಗೆರೆಯಲ್ಲಿ ಕ್ರಿಕೆಟ್ ಕ್ರೇಜ್ ಜೋರಾಗಿದ್ದು, ತಿಮ್ಮಾರೆಡ್ಡಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ 30 ಅಡಿ ಎತ್ತರದ ದೊಡ್ಡ ಎಲ್‌ಇಡಿ ಪರದೆ ಅಳವಡಿಸುವ ಮೂಲಕ ಇಂದು ಫೈನಲ್ ಫೈಟ್ ವೀಕ್ಷಿಸಲು ಶಾಲಾ ಆಡಳಿತ ಮಂಡಳಿಯಿಂದ ಬಿಗ್ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: World Cup 2023: ರಾಜ್ಯದ ಎಲ್ಲಾ ಜಿಲ್ಲಾ ಕ್ರೀಡಾಂಗಣಗಳಲ್ಲಿ ದೊಡ್ಡ ಪರದೆಯಲ್ಲಿ ನೇರಪ್ರಸಾರದ ವ್ಯವಸ್ಥೆ

    ಅದೇ ರೀತಿ ಭಾರತ ವಿಶ್ವಕಪ್ ಗೆಲುವಿಗಾಗಿ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಿಗಂಧೂರು ಚೌಡೇಶ್ವರಿ ದೇವಾಲಯದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಚಂಡಿಕಾ ಹೋಮ ನಡೆಸಿದ್ದು, ಭಾರತದ ಗೆಲುವಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ. ಇದನ್ನೂ ಓದಿ: ಶಮಿ ಕೈಯಲ್ಲಿ ಬೆಂಕಿ ಚೆಂಡು- ಕಾಂಗರೂಗಳ ನಿದ್ದೆಗೆಡಿಸಿರೋ ಸ್ವಿಂಗ್ ಮಾಸ್ಟರ್

  • World Cup 2023 – ಚಿನ್ನದಲ್ಲಿ ವಿಶ್ವಕಪ್ ತಯಾರಿಸಿದ ಬೆಂಗಳೂರಿನ ಅಕ್ಕಸಾಲಿಗ

    World Cup 2023 – ಚಿನ್ನದಲ್ಲಿ ವಿಶ್ವಕಪ್ ತಯಾರಿಸಿದ ಬೆಂಗಳೂರಿನ ಅಕ್ಕಸಾಲಿಗ

    ಬೆಂಗಳೂರು: ದೇಶದೆಲ್ಲೆಡೆ ಈಗಾಗಲೇ ವಿಶ್ವಕಪ್ (World Cup) ಜ್ವರ ಜೋರಾಗಿದೆ. ಇಂದಿನ ಪಂದ್ಯಾವಳಿಯಲ್ಲಿ ಇಂಡಿಯಾ (India) ಗೆಲ್ಲಲ್ಲಿ ಅನ್ನೋ ಶುಭ ಹಾರೈಕೆ ನಾಡಿನೆಲ್ಲೆಡೆ ಕೇಳಿಬರುತ್ತಿದೆ. ಇದರ ನಡುವೆ ಬೆಂಗಳೂರಿನ (Bengaluru) ಅಕ್ಕಸಾಲಿಗನೊಬ್ಬ (Goldsmith) ಚಿನ್ನದ ವಿಶ್ವಕಪ್ ತಯಾರಿಸಿ ಡಿಫರೆಂಟ್ ಆಗಿ ವಿಶ್ ಮಾಡಿದ್ದಾರೆ.

    ವಿಶ್ವಕಪ್ ಟೂರ್ನಿನಲ್ಲಿ ಟೀಂ ಇಂಡಿಯಾ ಫೈನಲ್‌ಗೆ ಪ್ರವೇಶಿಸುತ್ತಿದ್ದಂತೆ ಭಾರತ ಗೆಲ್ಲುತ್ತದೆ ಎನ್ನುವ ನಿರೀಕ್ಷೆಗಳು ಗರಿಗೆದರಿವೆ. ಲಕ್ಷಾಂತರ ಜನ ಪೂಜೆ, ಪುನಸ್ಕಾರ ಸೇರಿದಂತೆ ಹಲವು ರೀತಿಯಲ್ಲಿ ವಿಶ್ ಮಾಡುತ್ತಿದ್ದಾರೆ. ಬೆಂಗಳೂರಿನ ಚಿನ್ನದ ವ್ಯಾಪಾರಿಯಿಂದ ವಿಶ್ವಕಪ್ ಮಿನಿ ಟ್ರೋಫಿಗಳು (Trophy) ನಿರ್ಮಾಣವಾಗಿವೆ. ಕ್ರಿಕೆಟ್ (Cricket) ಅಭಿಮಾನಿಯಾಗಿರುವ ನಾಗರಾಜ್ ರೇವಣಕರ್ ಅಕ್ಕಸಾಲಿಗನಾಗಿ ಕೆಲಸ ಮಾಡುತ್ತಿದ್ದು, ಇಂದು ಭಾರತ ಗೆಲ್ಲಲಿ ಅನ್ನೋ ಆಶಯದೊಂದಿಗೆ ಚಿನ್ನದಲ್ಲಿ ಮೂರು ವಿಶ್ವಕಪ್ ಟ್ರೋಫಿ ನಿರ್ಮಿಸಿದ್ದಾರೆ. ನಾಗರಾಜ್, ಟೀಂ ಇಂಡಿಯಾ ಮೇಲಿನ ಅಭಿಮಾನಕ್ಕೆ 22 ಕ್ಯಾರೆಟ್‌ನಲ್ಲಿ ಒಂದು ಗ್ರಾಂ, 680 ಮಿಲಿಗ್ರಾಂನಲ್ಲಿ ಒಂದು ವಿಶ್ವಕಪ್‌ನಂತೆ ಒಟ್ಟು ಮೂರು ವಿಶ್ವಕಪ್ ಅನ್ನು ನಾಲ್ಕು ಗ್ರಾಂ 880 ಮಿಲಿಯಲ್ಲಿ, ಎರಡು ಸೆಂ.ಮೀನಲ್ಲಿ ತಯಾರಿಸಿದ್ದಾರೆ. ಇದನ್ನೂ ಓದಿ: 13 ವಿಶ್ವಕಪ್‍ನಲ್ಲಿ 8ನೇ ಬಾರಿ ಫೈನಲ್- 5 ಬಾರಿ ಚಾಂಪಿಯನ್ ಆಗಿರೋ ಆಸ್ಟ್ರೇಲಿಯಾ

    ಇನ್ನೂ ವಿಶ್ಚಕಪ್ ಅನ್ನು ಚಿನ್ನದಲ್ಲಿ ತಯಾರಿಸಿದರೇ, ಬ್ಯಾಟ್‌ಗಳನ್ನು ಬೆಳ್ಳಿಯಲ್ಲಿ ತಯಾರಿಸಿದ್ದಾರೆ. ಸ್ಟಮ್ಸ್‌ಗಳನ್ನು ಚಿನ್ನದ ಕೋಟೆಡ್‌ನಲ್ಲಿ ಮಾಡಿದ್ದಾರೆ. ಮೊದಲನೆ ವಿಶ್ವಕಪ್ ಬ್ಯಾಟ್‌ನಲ್ಲಿ ಕಪೀಲ್ ದೇವ್ (1983), ಎರಡನೇ ಬ್ಯಾಟ್‌ನಲ್ಲಿ ಎಂ.ಎಸ್ ದೋನಿ(2011) ಅಂತಾ ಬರೆದರೇ, ಮೂರನೇ  ಬ್ಯಾಟ್‌ನಲ್ಲಿ ‘ಆಲ್ ದಿ ಬೆಸ್ಟ್ ಇಂಡಿಯಾ’ ಅಂತಾ ಬರೆಯಲಾಗಿದೆ.  ಇದನ್ನೂ ಓದಿ: World Cup 2023: ರಾಜ್ಯದ ಎಲ್ಲಾ ಜಿಲ್ಲಾ ಕ್ರೀಡಾಂಗಣಗಳಲ್ಲಿ ದೊಡ್ಡ ಪರದೆಯಲ್ಲಿ ನೇರಪ್ರಸಾರದ ವ್ಯವಸ್ಥೆ

  • ಚೇಸ್ ಮಾಸ್ಟರ್ ಕೊಹ್ಲಿ ವಿಕೆಟ್ ಮೇಲೆ ಆಸ್ಟ್ರೇಲಿಯಾ ಕಣ್ಣು- ಔಟ್ ಮಾಡಲು ಆಸೀಸ್ ರಣತಂತ್ರ

    ಚೇಸ್ ಮಾಸ್ಟರ್ ಕೊಹ್ಲಿ ವಿಕೆಟ್ ಮೇಲೆ ಆಸ್ಟ್ರೇಲಿಯಾ ಕಣ್ಣು- ಔಟ್ ಮಾಡಲು ಆಸೀಸ್ ರಣತಂತ್ರ

    ಅಹಮದಾಬಾದ್: ಭಾರತ (India) – ಆಸ್ಟ್ರೇಲಿಯಾ (Australia) ವಿಶ್ವಕಪ್ (World Cup) ಫೈನಲ್ (Final) ಪಂದ್ಯಕ್ಕೆ ಕೌಂಟ್ ಡೌನ್ ಶುರುವಾಗಿದೆ. ಆಸೀಸ್‌ಗೆ ಭಾರತದ ಈ ಆಟಗಾರನದ್ದೆ ಫುಲ್ ಟೆನ್ಶನ್. ಟೀಂ ಇಂಡಿಯಾದ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ (Virat Kohli) ವಿಕೆಟ್ ಪಡೆಯೋದೆ ಆಸಿಸ್‌ನ ಫಸ್ಟ್ ಟಾರ್ಗೆಟ್. ವಿರಾಟ್ ಕೊಹ್ಲಿ ವಿಶ್ವಕಪ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಆಸಿಸ್‌ಗೆ ನಡುಕ ಹುಟ್ಟಿಸಿದ್ದಾರೆ.

    ಏಕದಿನ ಕ್ರಿಕೆಟ್‌ನಲ್ಲಿ 50 ಶತಕ ಪೂರೈಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದ ಕ್ರಿಕೆಟ್ ಲೋಕದ ಸರದಾರ ವಿರಾಟ್ ಕೊಹ್ಲಿ. ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಮತ್ತು 50+ ಸ್ಕೋರ್‌ಗಳ ದಾಖಲೆಗಳಲ್ಲಿ ಕೊಹ್ಲಿ, ತೆಂಡೂಲ್ಕರ್ ಅವರನ್ನು ಹಿಂದಿಕ್ಕಿ ಕ್ರಿಕೆಟ್‌ನ ಮತ್ತೊಬ್ಬ ದೇವರು ಎನಿಸಿಕೊಂಡಿದ್ದಾರೆ. ಇದೇ ಕಿಂಗ್ ಕೊಹ್ಲಿ ಇದೀಗ ಆಸ್ಟ್ರೇಲಿಯಾ ಪಾಲಿಗೆ ದ್ವಿಸ್ವಪ್ನವಾಗಿ ಕಾಡುತ್ತಿದ್ದಾರೆ. ಇಂದು ನಡೆಯುವ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ರನ್ ಮಿಷನ್ ವಿರಾಟ್ ಕೊಹ್ಲಿಯದ್ದೆ ಟೆನ್ಶನ್. ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿಯ ವಿಕೆಟ್ ಕಬಳಿಸೋಕೆ ಆಸೀಸ್‌ನ ಬೌಲರ್‌ಗಳು ರಣತಂತ್ರ ಹಣೆಯುತ್ತಿದ್ದು, ವಿರಾಟ್ ಕೊಹ್ಲಿಯೇ ಆಸೀಸ್ ತಂಡದ ಮೊದಲ ಟಾರ್ಗೆಟ್ ಆಗಿದ್ದಾರೆ. ಇದನ್ನೂ ಓದಿ: ಬರೊಬ್ಬರಿ 20 ವರ್ಷದ ಮುಯ್ಯಿಗೆ ಕಾದಿದೆ ಟೀಂ ಇಂಡಿಯಾ!

    2023ರ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಉಗ್ರ ರೂಪಕ್ಕೆ ಎದುರಾಳಿ ಬೌಲರುಗಳು ಪತರುಗಟ್ಟಿ ಹೋಗಿದ್ದಾರೆ. ಒಟ್ಟು 10 ಪಂದ್ಯಗಳಲ್ಲಿ, 90.68 ರನ್ ಸ್ಟ್ರೈಕ್ ರೇಟ್‌ನೊಂದಿಗೆ 711 ರನ್ ಗಳಿಸಿ, 2023ರ ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದವರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಇಳಿದು, ಆಡಿದ 10 ಇನ್ನಿಂಗ್ಸ್ನಲ್ಲಿ 711 ರನ್ ಗಳಿಸಿದ್ದು, ಇದರಲ್ಲಿ ಮೂರು ಶತಕ, 5 ಅರ್ಧಶತಕ ಸೇರಿದೆ. 10 ಇನ್ನಿಂಗ್ಸ್ಗಳಲ್ಲಿ 64 ಬೌಂಡರಿ, 9 ಸಿಕ್ಸ್ಗಳನ್ನು ಸಿಡಿಸಿದ್ದಾರೆ. ಕಿಂಗ್ ಕೊಹ್ಲಿಯ ಈ ಬೆಂಕಿಯಂತಹ ಪರ್ಫಾಮೆನ್ಸ್ ನೋಡಿಯೇ ಕಾಂಗಾರುಗಳಿಗೆ ನಡುಕ ಶುರುವಾಗಿದೆ. ಇದನ್ನೂ ಓದಿ: World Cup 2023: ಟೀಂ ಇಂಡಿಯಾಗೆ 3ನೇ ಪ್ರಶಸ್ತಿ ಗೆಲ್ಲುವ ಕನಸು- ಆಸೀಸ್‍ಗೆ 6ನೇ ಟ್ರೋಫಿ ಮೇಲೆ ಕಣ್ಣು

    ಮೊದಲ ಬ್ಯಾಟಿಂಗ್ ಮಾಡಿದರೂ ಕೊಹ್ಲಿ ಸರಾಗವಾಗಿ ರನ್ ಗಳಿಕೆ ಮಾಡುತ್ತಾರೆ. ಒಂದೊಮ್ಮೆ ಭಾರತಕ್ಕೆ ಎಷ್ಟೇ ಟಾರ್ಗೆಟ್ ನೀಡಿದರೂ ಕೊಹ್ಲಿ ಕ್ರಿಸ್‌ನಲ್ಲಿದ್ದರೆ ಚೇಸ್ ಮಾಡಿ, ಭಾರತವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಅದೇನೆ ಆಗಲಿ, ವಿರಾಟ್ ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ವಿಶ್ವಕಪ್ ಗೆಲ್ಲಲಿ ಅನ್ನೋದು ಕೋಟ್ಯಂತರ ಭಾರತೀಯರ ಪ್ರಾರ್ಥನೆ, ಹಾರೈಕೆ. ಇದನ್ನೂ ಓದಿ: ಇಂದು IND Vs AUS ಸಮರ – 12 ವರ್ಷಗಳ ಬಳಿಕ ವಿಶ್ವಕಪ್ ಗೆಲ್ಲುವ ತವಕ

  • ಬರೊಬ್ಬರಿ 20 ವರ್ಷದ ಮುಯ್ಯಿಗೆ ಕಾದಿದೆ ಟೀಂ ಇಂಡಿಯಾ!

    ಬರೊಬ್ಬರಿ 20 ವರ್ಷದ ಮುಯ್ಯಿಗೆ ಕಾದಿದೆ ಟೀಂ ಇಂಡಿಯಾ!

    ಅಹಮದಾಬಾದ್: ಸೋಲಿಗೆ ಸೇಡು ತೀರಿಸಿಕೊಂಡಿದ್ದ ಟೀಂ ಇಂಡಿಯಾ (Team India) ಇಂದು ಮತ್ತೊಂದು ಅಂತಹದ್ದೆ ಮೆಗಾ ರೈವರ್ಲಿಗೆ ಸಜ್ಜಾಗಿದೆ. ಆದರೆ ಇದು ನಿನ್ನೆ ಮೊನ್ನೆಯ ಸೇಡಲ್ಲ, ಬರೊಬ್ಬರಿ 20 ವರ್ಷಗಳ ಹಿಂದಿನ ಸೇಡು.

    ಕಳೆದ 20 ವರ್ಷಗಳ ಹಿಂದೆ ಅಂದರೆ 2003ರ ವಿಶ್ವಕಪ್ (World Cup) ಫೈನಲ್ ಪಂದ್ಯ ಟೂರ್ನಿ ಉದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ಫೈನಲ್‌ನಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧವೇ ಮುಗ್ಗರಿಸಿತ್ತು. 2ನೇ ಬಾರಿಗೆ ಫೈನಲ್‌ಗೇರಿ ಚಾಂಪಿಯನ್ ಆಗೇಬಿಡುತ್ತೆ ಎಂದು ಕಾದು ಕುಳಿತಿದ್ದ ಕೋಟಿ ಕೋಟಿ ಭಾರತೀಯ ಅಭಿಮಾನಿಗಳ ಆಸೆ ನೂಚ್ಚುನೂರಾಗಿದ್ದ ದಿನ ಅದು. ಆ ದಿನ ಆಸ್ಟ್ರೇಲಿಯಾ ತಂಡದ ವಿರುದ್ಧ ಹೀನಾಯವಾಗಿ ಸೋತಿದ್ದ ಟೀಂ ಇಂಡಿಯಾ ಈಗ ಹಳೆಯ ಸೋಲಿನ ನೋವನ್ನು ಮುಯ್ಯಿ ಸಮೇತ ವಾಪಸ್ ಕೊಡಲು ರೆಡಿ ಆಗಿದೆ.

    ವಿಶ್ವಕಪ್ ಇತಿಹಾಸದಲ್ಲಿ 2 ತಂಡಗಳ ಮುಖಾಮುಖಿಯ ಬಲವನ್ನು ನೋಡುವುದಾದರೆ ಭಾರತ ತಂಡಕ್ಕಿಂತ ಆಸ್ಟ್ರೇಲಿಯಾ ತಂಡವೇ ಬಲಿಷ್ಠವಾಗಿರೋದು ಅಂಕಿ ಅಂಶಗಳ ಮೂಲಕ ಸಾಬೀತಾಗಿದೆ. ವಿಶ್ವಕಪ್ ಇತಿಹಾಸದಲ್ಲಿ 13 ಬಾರಿಗೆ ಮುಖಾಮುಖಿ ಆಗಿರೋ ಉಭಯ ತಂಡಗಳಲ್ಲಿ ಭಾರತ ಗೆದ್ದಿರೋದು ಕೇವಲ 5 ಪಂದ್ಯಗಳು ಮಾತ್ರ. ಉಳಿದಂತೆ ಆಸ್ಟ್ರೇಲಿಯಾ 8 ಪಂದ್ಯಗಳನ್ನು ಗೆಲ್ಲುವ ಮೂಲಕ ವಿಶ್ವಕಪ್‌ನಲ್ಲಿ ಭಾರತದ ಮೇಲೆ ಹಿಡಿತ ಸಾಧಿಸಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರತ ತಂಡದ ಪ್ರದರ್ಶನವನ್ನು ನೋಡುವುದಾದರೆ ಕಳೆದ 3 ಬಾರಿಯ ವಿಶ್ವಕಪ್ ಮುಖಾಮುಖಿಯಲ್ಲಿ ಭಾರತವೇ ಪ್ರಾಬಲ್ಯ ಮೆರೆದಿರೋದು. 2011-2023 ರವರೆಗೆ ಒಟ್ಟು 4 ಬಾರಿ ಎದುರಾಗಿದ್ದು, ಭಾರತ 3 ಬಾರಿ ಜಯ ಸಾಧಿಸುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಶಾಕ್ ನೀಡಿದೆ. ಇದನ್ನೂ ಓದಿ: World Cup 2023: ಟೀಂ ಇಂಡಿಯಾಗೆ 3ನೇ ಪ್ರಶಸ್ತಿ ಗೆಲ್ಲುವ ಕನಸು- ಆಸೀಸ್‍ಗೆ 6ನೇ ಟ್ರೋಫಿ ಮೇಲೆ ಕಣ್ಣು

    ಆಸೀಸ್ ಮುಖಾಮುಖಿಯ ಅಂಕಿ ಅಂಶಗಳು:
    * 1983ರ ವಿಶ್ವಕಪ್‌ನಲ್ಲಿ ಮೊದಲ ಮುಖಾಮುಖಿ ಭಾರತಕ್ಕೆ 162 ರನ್‌ಗಳ ಸೋಲು.
    * 1984ರ ವಿಶ್ವಕಪ್‌ನಲ್ಲೆ 2ನೇ ಬಾರಿಗೆ ಮುಖಾಮುಖಿ. ಭಾರತಕ್ಕೆ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಜಯ. ಆಸೀಸ್ ವಿರುದ್ಧ 118 ರನ್‌ಗಳ ಜಯ.
    * 1987 ರಲ್ಲಿ 3ನೇ ಮುಖಾಮುಖಿ. ಭಾರತಕ್ಕೆ 1 ರನ್‌ಗಳ ವಿರೋಚಿತ ಸೋಲು.
    * 1987 ರಲ್ಲಿ 4ನೇ ಬಾರಿ ಮುಖಾಮುಖಿ. ಭಾರತಕ್ಕೆ 56 ರನ್‌ಗಳ ಜಯ.
    * 1992 ರಲ್ಲಿ 5ನೇ ಮುಖಾಮುಖಿ. ಭಾರತಕ್ಕೆ 3 ರನ್‌ಗಳ ವಿರೋಚಿತ ಸೋಲು.
    * 1996 ರಲ್ಲಿ 6ನೇ ಮುಖಾಮುಖಿ. ಲೀಗ್ ಭಾರತಕ್ಕೆ 16 ರನ್‌ಗಳ ಸೋಲು.
    * 2003 ರಲ್ಲಿ 7ನೇ ಮುಖಾಮುಖಿ. ಲೀಗ್ ಮ್ಯಾಚ್‌ನಲ್ಲಿ ಭಾರತಕ್ಕೆ 9 ವಿಕೆಟ್‌ಗಳ ಸೋಲು.
    * 2003ರ ಫೈನಲ್‌ನಲ್ಲಿ 8ನೇ ಬಾರಿಗೆ ಮುಖಾಮುಖಿ. 125 ರನ್‌ಗಳ ಸೋಲು.
    * 2011 ರಲ್ಲಿ 9ನೇ ಮುಖಾಮುಖಿ. ಸೆಮಿಸ್‌ನಲ್ಲಿ ಭಾರತಕ್ಕೆ 5 ವಿಕೆಟ್‌ಗಳ ಜಯ.
    * 2015ರಲ್ಲಿ 10ನೇ ಮುಖಾಮುಖಿ ಸೆಮಿಸ್‌ನಲ್ಲಿ ಭಾರತಕ್ಕೆ 95 ರನ್‌ಗಳ ಸೋಲು.
    * 2019 ರಲ್ಲಿ 11ನೇ ಬಾರಿಗೆ ಮುಖಾಮುಖಿ. ಭಾರತಕ್ಕೆ 36 ರನ್‌ಗಳ ಜಯ.
    * 2023 ರಲ್ಲಿ ಲೀಗ್‌ನಲ್ಲಿ 12ನೇ ಬಾರಿಗೆ ಮುಖಾಮುಖಿ. ಭಾರತಕ್ಕೆ 6 ವಿಕೆಟ್‌ಗಳ ಜಯ.

    ಒಟ್ಟಾರೆ ಇಲ್ಲಿಯತನಕ ಒಂದು ಲೆಕ್ಕ ಆದರೆ, ಇಂದಿನಿಂದ ಮತ್ತೊಂದು ಲೆಕ್ಕ. ಟೀಂ ಇಂಡಿಯಾ ಇಂದಿನ ಫೈನಲ್ ಗೆಲ್ಲೋ ಮೂಲಕ 2003 ನಿಮ್ಮ ಸಮಯ ಆದರೆ, 2023 ನಮ್ಮ ಸಮಯ ಅನ್ನೋದನ್ನು ತೋರಿಸಬೇಕಿದೆ. ಇದನ್ನೂ ಓದಿ: ಇಂದು IND Vs AUS ಸಮರ – 12 ವರ್ಷಗಳ ಬಳಿಕ ವಿಶ್ವಕಪ್ ಗೆಲ್ಲುವ ತವಕ

  • ಅಂಪೈರ್‌ಗಳ ಆಯ್ಕೆ ಟೀಂ ಇಂಡಿಯಾ ಅಭಿಮಾನಿಗಳ ನಿದ್ದೆಗೆಡಿಸಿದ್ದೇಕೆ? – ಯಾರು ಘಟಾನುಘಟಿಗಳು?

    ಅಂಪೈರ್‌ಗಳ ಆಯ್ಕೆ ಟೀಂ ಇಂಡಿಯಾ ಅಭಿಮಾನಿಗಳ ನಿದ್ದೆಗೆಡಿಸಿದ್ದೇಕೆ? – ಯಾರು ಘಟಾನುಘಟಿಗಳು?

    ಅಹಮದಾಬಾದ್:‌ 13ನೇ ಆವೃತ್ತಿಯ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯ ಆರಂಭಕ್ಕೆ ಕ್ಷಣಗಣನೆ ಬಾಕಿಯಿದೆ. ಆತಿಥೇಯ ಟೀಂ ಇಂಡಿಯಾ 20 ವರ್ಷಗಳ ಬಳಿಕ ಆಸ್ಟ್ರೇಲಿಯಾ ಎದುರು ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟ್ರೋಫಿಗಾಗಿ ಕಾದಾಟ ನಡೆಸಲಿದೆ.

    ಅಂದಹಾಗೆ ಈ ಹೈವೋಲ್ಟೇಜ್‌ ಫೈನಲ್‌ ಪಂದ್ಯದ ಸಲುವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಅಂಪೈರ್‌ಗಳನ್ನ ಘೋಷಣೆ ಮಾಡಿದೆ. ಅದರಲ್ಲೂ ಟೀಂ ಇಂಡಿಯಾಕ್ಕೆ ಬ್ಯಾಡ್‌ಲಕ್‌ ಅಂಪೈರ್‌ ಎಂದೇ ಗುರುತಿಸಿಕೊಂಡಿರುವ ರಿಚರ್ಡ್‌ ಕೆಟೆಲ್‌ಬೊರೊ ಆನ್‌ಫೀಲ್ಡ್‌ ಅಂಪೈರ್‌ ಆಗಿ ಆಯ್ಕೆಯಾಗಿರುವುದು ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ನಿದ್ದೆಗೆಡಿಸಿದೆ. ಏಕೆಂದರೆ ರಿಚರ್ಡ್‌ ಕೆಟೆಲ್‌ಬೊರೊ ಅಂಪೈರ್‌ ಆಗಿರುವ ಬಹುತೇಕ ಪಂದ್ಯಗಳಲ್ಲಿ ಟೀಂ ಇಂಡಿಯಾ ಸೋಲನುಭವಿಸಿದೆ. ಇದನ್ನೂ ಓದಿ: ಈ ಅವಮಾನ ತಪ್ಪಿಸಲು ಭಾರತ ವಿಶ್ವಕಪ್‌ ಗೆಲ್ಲಲೇಬೇಕು: 2006ರ ಚಾಂಪಿಯನ್ಸ್‌ ಟ್ರೋಫಿ ವೇಳೆ ಆಗಿದ್ದೇನು?

    ರಿಚರ್ಡ್‌ ಕೆಟೆಲ್‌ಬೊರೊ ಮತ್ತು ರಿಚರ್ಡ್‌ ಲಿಲ್ಲಿಂಗ್‌ವರ್ತ್‌ 2023ರ ವಿಶ್ವಕಪ್‌ ಫೈನಲ್‌ ಪಂದ್ಯದ ಆನ್‌ಫೀಲ್ಡ್‌ ಅಂಪೈರ್‌ಗಳಾಗಿ ಕೆಲಸ ಮಾಡಲಿದ್ದಾರೆ. ಅಂದಹಾಗೆ ಕೆಟೆಲ್‌ಬೊರೊ ಟೀಂ ಇಂಡಿಯಾ ಪಾಲಿಗೆ ನಾಕ್‌ಔಟ್‌ ಪಂದ್ಯಗಳಲ್ಲಿ ಬ್ಯಾಡ್‌ಲಕ್‌ ಎಂದೇ ಗುರುತಿಸಿಕೊಂಡಿದ್ದಾರೆ. 2019ರ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್‌ ವಿರುದ್ಧ ಸೋತು ನಿರಾಸೆ ಅನುಭವಿಸಿದ ಸಂದರ್ಭದಲ್ಲೂ ಇದೇ ರಿಚರ್ಡ್‌ ಕೆಟೆಲ್‌ಬೊರೊ ಆನ್‌ಫೀಲ್ಡ್‌ ಅಂಪೈರ್‌ ಆಗಿದ್ದರು. ಇದೇ ಕಾರಣಕ್ಕೆ ಭಾರತೀಯ ಕ್ರಿಕೆಟ್‌ ಅಭಿಮಾನಿಗಳು ಚಿಂತೆಯಲ್ಲಿ ಮುಳುಗುವಂತಾಗಿದೆ. ಇದನ್ನೂ ಓದಿ: ಶಾಲೆಗೆ ಸೇರಿಸಲು ಶರ್ಮಾ ಪೋಷಕರಲ್ಲಿ 275 ರೂ. ಫೀಸ್‌ ಕೂಡ ಇರ್ಲಿಲ್ಲ – ಬಾಲ್ಯದಲ್ಲಿ ಹಿಟ್‌ಮ್ಯಾನ್‌ ಕಷ್ಟದ ಜೀವನ!

    ಇನ್ನೂ ರಿಚರ್ಡ್‌ ಇಲ್ಲಿಂಗ್‌ವರ್ತ್‌ ಕೂಡ ಭಾರತ ತಂಡದ ಪಾಲಿಗೆ ಬ್ಯಾಡ್‌ಲಕ್‌. ಭಾರತ ತಂಡ ನಾಕ್‌ಔಟ್‌ ಪಂದ್ಯಗಳಲ್ಲಿ ಸೋತಾಗ ಒಂದು ಕೆಟೆಲ್‌ಬೊರೊ ಅಂಪೈರ್‌ ಆಗಿರುತ್ತಾರೆ. ಇಲ್ಲ ಇಲ್ಲಿಂಗ್‌ವರ್ತ್ ಅಂಪೈರ್‌ ಆಗಿರುತ್ತಾರೆ ಎಂಬುದು ಕಾಕತಾಳೀಯ. ಐಸಿಸಿ ಟೂರ್ನಿಗಳಲ್ಲಿ ನ್ಯೂಟ್ರಲ್‌ ಅಂಪೈರ್‌ಗೆ ಕೆಲಸ ವಹಿಸುವುದು ನಿಯಮ. ಹೀಗಾಗಿ ಫೈನಲ್‌ ಆಡುತ್ತಿರುವ ರಾಷ್ಟ್ರಗಳ ಅಂಪೈರ್‌ನ ಬಿಟ್ಟು ಹೊರಗಿನವರಿಗೆ ಅವಕಾಶ ಕೊಡಲಾಗುತ್ತದೆ. ಹೀಗಾಗಿ ಬ್ರಿಟನ್‌ನ ಅಂಪೈರ್‌ಗಳಾದ ರಿಚರ್ಡ್‌ ಕೆಟೆಲ್‌ಬೊರೊ ಮತ್ತು ಇಲ್ಲಿಂಗ್‌ವರ್ತ್‌ ಆಯ್ಕೆಯಾಗಿದ್ದಾರೆ.

    ರಿಚರ್ಡ್‌ ಕೆಟೆಲ್‌ಬೊರೊ ಇದ್ದಾಗ ಭಾರತ ಸೋತ ಪ್ರಮುಖ ಮ್ಯಾಚ್‌ಗಳು

    • 2014ರ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ
    • 2015ರ ಏಕದಿನ ವಿಶ್ವಕಪ್‌ ಸೆಮೀಸ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ
    • 2016ರ ಟಿ20 ವಿಶ್ವಕಪ್‌ ಸೆಮೀಸ್‌ನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ
    • 2017ರ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ
    • 2019ರ ಏಕದಿನ ವಿಶ್ವಕಪ್‌ ಸೆಮೀಸ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ

    ಇನ್ನು ಫೈನಲ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ನ ಜೋಯೆಲ್‌ ವಿಲ್ಸನ್‌ 3ನೇ ಅಂಪೈರ್‌ ಆಗಿ ಕೆಲಸ ಮಾಡಲಿದ್ದಾರೆ. ಕ್ರಿಸ್‌ ಗ್ಯಾಫನಿ 4ನೇ ಅಂಪೈರ್‌ ಜವಾಬ್ದಾರಿ ವಹಿಸಲಿದ್ದಾರೆ. ಮ್ಯಾಚ್‌ ರೆಫ್ರಿಯಾಗಿ ಆಂಡಿ ಪೈಕ್ರಾಫ್ಟ್‌ ಪಂದ್ಯದ ಮೇಲೆ ಹದ್ದಿನ ಕಣ್ಣಿಡಲಿದ್ದಾರೆ.

  • ಈ ಅವಮಾನ ತಪ್ಪಿಸಲು ಭಾರತ ವಿಶ್ವಕಪ್‌ ಗೆಲ್ಲಲೇಬೇಕು: 2006ರ ಚಾಂಪಿಯನ್ಸ್‌ ಟ್ರೋಫಿ ವೇಳೆ ಆಗಿದ್ದೇನು?

    ಈ ಅವಮಾನ ತಪ್ಪಿಸಲು ಭಾರತ ವಿಶ್ವಕಪ್‌ ಗೆಲ್ಲಲೇಬೇಕು: 2006ರ ಚಾಂಪಿಯನ್ಸ್‌ ಟ್ರೋಫಿ ವೇಳೆ ಆಗಿದ್ದೇನು?

    ಅಹಮದಾಬಾದ್‌: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಏಕದಿನ ವಿಶ್ವಕಪ್​ ಟೂರ್ನಿಯ ಫೈನಲ್​ ಪಂದ್ಯದಲ್ಲಿ 20 ವರ್ಷಗಳ ಬಳಿಕ ಮುಖಾಮುಖಿಯಾಗುತ್ತಿವೆ. ಇತ್ತಂಡಗಳ ಈ ಫೈನಲ್​ ಫೈಟ್‌ ಭಾನುವಾರ ವಿಶ್ವದ ಅತಿ ದೊಡ್ಡ ಕ್ರಿಕೆಟ್​ ಸ್ಟೇಡಿಯಂ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ನಡೆಯಲಿದೆ. ಈಗಾಗಲೇ ಈ ಪಂದ್ಯಕ್ಕೆ ಉಭಯ ತಂಡಗಳ ಆಟಗಾರರು ಭರ್ಜರಿ ತಯಾರಿ ನಡೆಸಿದ್ದಾರೆ.

    ಈ ನಡುವೆ 2006ರ ಚಾಂಪಿಯನ್ಸ್‌ ಟ್ರೋಫಿ (2006 Champions Trophy) ವೇಳೆ ಅಂದಿನ ಬಿಸಿಸಿಐ ಅಧ್ಯಕ್ಷ ಶರದ್‌ ಪವಾರ್‌ (Sharad Pawar) ಅವರೊಂದಿಗೆ ಆಸೀಸ್‌ ಕ್ರಿಕೆಟಿಗರು ನಡೆದುಕೊಂಡ ರೀತಿಯ ವೀಡಿಯೋ ದೃಶ್ಯಗಳು ಜಾಲತಾಣದಲ್ಲಿ ವೈರಲ್‌ ಆಗಿದೆ. ಪ್ಯಾಟ್‌ ಕಮ್ಮಿನ್ಸ್ ಜಯ್ ಶಾಗೆ ಈ ರೀತಿ ಮಾಡುವುದನ್ನು ತಪ್ಪಿಸಲು ಭಾರತ ವಿಶ್ವಕಪ್ ಫೈನಲ್‌ನಲ್ಲಿ (World Cup Final) ಗೆಲ್ಲಬೇಕಾಗಿದೆ ಎಂದು ಅಭಿಮಾನಿಗಳು ಆಶಿಸಿದ್ದಾರೆ. ಇದನ್ನೂ ಓದಿ: 1.30 ಲಕ್ಷ‌ ಅಭಿಮಾನಿಗಳನ್ನ ದಿಗ್ಭ್ರಮೆಗೊಳಿಸುತ್ತೇವೆ – ಟೀಂ ಇಂಡಿಯಾ ಸೋಲಿಸುವ ಎಚ್ಚರಿಕೆ ನೀಡಿದ ಪ್ಯಾಟ್‌ ಕಮ್ಮಿನ್ಸ್

    2006ರ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಆಗಿದ್ದೇನು?
    2006ರ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಪಂದ್ಯವು ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಿತು. ಅಂದು ವೆಸ್ಟ್‌ ಇಂಡೀಸ್‌ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಬೌಲಿಂಗ್‌ನಲ್ಲಿ ಬಿಗಿ ಹಿಡಿತ ಸಾಧಿಸಿದ್ದ ಆಸ್ಟ್ರೇಲಿಯಾ ತಂಡ ಎದುರಾಳಿ ತಂಡವನ್ನು 138 ರನ್‌ಗಳಿಗೆ ಕಟ್ಟಿಹಾಕಿತು. ಆದ್ರೆ ಮಳೆ ಕಾರಣದಿಂದ ಚೇಸಿಂಗ್‌ನಲ್ಲಿದ್ದ ಆಸ್ಟ್ರೇಲಿಯಾ ಡಕ್ವರ್ತ್‌ ಲೂಯಿಸ್‌ ನಿಯಮದನ್ವಯ 35 ಓವರ್‌ಗಳಲ್ಲಿ 116 ರನ್‌ ಗಳಿಸುವ ಗುರಿ ಪಡೆದಿತ್ತು.

    ಶೇನ್‌ ವಾಟ್ಸನ್‌ ಮತ್ತು ಡೇಮಿಯನ್ ಮಾರ್ಟಿನ್ ಅವರ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನದಿಂದ ಆಸೀಸ್‌ ತಂಡವು 28.1 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 116 ರನ್‌ ಗಳಿಸಿ ಗೆಲುವು ಸಾಧಿಸಿತ್ತು. ಆ ನಂತರ ಟ್ರೋಫಿ ಗೆಲುವಿನ ಸಂಭ್ರಮಾಚರಣೆಯಲ್ಲಿದ್ದ ಆಸೀಸ್‌ ತಂಡ ಅಂದು ಬಿಸಿಸಿಐ ಅಧ್ಯಕ್ಷರಾಗಿದ್ದ ಶರದ್ ಪವಾರ್ ಅವರಿಗೆ ವೇದಿಕೆಯಲ್ಲಿ ಮುಜುಗರ ತರಿಸಿತ್ತು. ಅಂದಿನ ನಾಯಕ ರಿಕಿ ಪಾಂಟಿಂಗ್‌, ಶರದ್‌ ಪಾವರ್‌ ಅವರ ಕೈಯಲ್ಲಿದ್ದ ಟ್ರೋಫಿ ಕಸಿದುಕೊಂಡು ಅವರನ್ನು ವೇದಿಕೆಯಿಂದ ಹೊರಹೋಗುವಂತೆ ತಳ್ಳಿದ್ದರು. ಇದು ಭಾರತೀಯ ಇತರ ನಾಯಕರಿಗೂ ಮುಜುಗರ ತರಿಸಿತ್ತು. 17 ವರ್ಷಗಳ ಹಿಂದಿನ ಈ ವೀಡಿಯೋ ಈಗ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಶಾಲೆಗೆ ಸೇರಿಸಲು ಶರ್ಮಾ ಪೋಷಕರಲ್ಲಿ 275 ರೂ. ಫೀಸ್‌ ಕೂಡ ಇರ್ಲಿಲ್ಲ – ಬಾಲ್ಯದಲ್ಲಿ ಹಿಟ್‌ಮ್ಯಾನ್‌ ಕಷ್ಟದ ಜೀವನ!

    ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಅವರಿಗೆ ಆಸೀಸ್‌ ನಾಯಕ ಪ್ಯಾಟ್‌ ಕಮ್ಮಿನ್ಸ್‌ ಈ ರೀತಿ ಮಾಡಬಾರದು ಅಂದ್ರೆ ಭಾರತ ಟ್ರೋಫಿ ಗೆಲ್ಲಲೇಬೇಕು ಎಂದು ಅಭಿಮಾನಿಗಳು ಎಚ್ಚರಿಸಿದ್ದಾರೆ. ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ಒಂದೂ ಪಂದ್ಯದಲ್ಲೂ ಸೋಲಿನ ಮುಖವನ್ನೇ ನೋಡದ ಭಾರತ 11ನೇ ಪಂದ್ಯವನ್ನು ಗೆಲ್ಲುವ ಉತ್ಸಾಹದಲ್ಲಿದೆ. ಆರಂಭಿಕ ಎರಡು ಪಂದ್ಯಗಳಲ್ಲಿ ಸೋತಿದ್ದ ಆಸ್ಟ್ರೇಲಿಯಾ ಇನ್ನುಳಿದ 8 ಪಂದ್ಯಗಳಲ್ಲೂ ಜಯ ಸಾಧಿಸಿದೆ. ಇತ್ತಂಡಗಳ ನಡುವೆ ಜಿದ್ದಾ-ಜಿದ್ದಿ ನಡೆಯಲಿದ್ದು, ಪಂದ್ಯದ ಫಲಿತಾಂಶ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ವಿಶ್ವಕಪ್‌ ಪಂದ್ಯಕ್ಕೂ ಮುನ್ನ ರಂಗೇರಲಿದೆ ಮೋದಿ ಕ್ರೀಡಾಂಗಣ – ಕಾರ್ಯಕ್ರಮಗಳ ಪಟ್ಟಿ ರಿಲೀಸ್‌

    ಟೀಂ ಇಂಡಿಯಾ ಅಜೇಯ ಓಟ!

    • ಮ್ಯಾಚ್ 1: ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ ಗೆಲುವು
    • ಮ್ಯಾಚ್ 2: ಆಫ್ಘಾನಿಸ್ತಾನ ವಿರುದ್ಧ 8 ವಿಕೆಟ್ ಗೆಲುವು
    • ಮ್ಯಾಚ್ 3: ಪಾಕಿಸ್ತಾನ ವಿರುದ್ಧ 7 ವಿಕೆಟ್ ಗೆಲುವು
    • ಮ್ಯಾಚ್ 4: ಬಾಂಗ್ಲಾದೇಶದ ವಿರುದ್ಧ 7 ವಿಕೆಟ್ ಗೆಲುವು
    • ಮ್ಯಾಚ್ 5: ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್ ಗೆಲುವು
    • ಮ್ಯಾಚ್ 6: ಇಂಗ್ಲೆಂಡ್ ವಿರುದ್ಧ 100 ರನ್ ಗೆಲುವು
    • ಮ್ಯಾಚ್ 7: ಶ್ರೀಲಂಕಾ ವಿರುದ್ಧ 302 ರನ್ ಗೆಲುವು
    • ಮ್ಯಾಚ್ 8: ದಕ್ಷಿಣ ಆಫ್ರಿಕಾ ವಿರುದ್ಧ 243 ರನ್ ಗೆಲುವು
    • ಮ್ಯಾಚ್ 9: ನೆದರ್ಲೆಂಡ್ ವಿರುದ್ಧ 160 ರನ್ ಗೆಲುವು
    • ಮ್ಯಾಚ್‌ 10: ನ್ಯೂಜಿಲೆಂಡ್‌ ವಿರುದ್ಧ 70 ರನ್‌ಗಳ ಗೆಲುವು
  • ಸರಣಿ ಶ್ರೇಷ್ಠ ಪ್ರಶಸ್ತಿಗೆ 9 ಮಂದಿಯ ನಾಮನಿರ್ದೇಶನ – ಟೀಂ ಇಂಡಿಯಾದ ನಾಲ್ವರು ಆಯ್ಕೆ

    ಸರಣಿ ಶ್ರೇಷ್ಠ ಪ್ರಶಸ್ತಿಗೆ 9 ಮಂದಿಯ ನಾಮನಿರ್ದೇಶನ – ಟೀಂ ಇಂಡಿಯಾದ ನಾಲ್ವರು ಆಯ್ಕೆ

    ಅಹಮದಾಬಾದ್: 2023ರ ಏಕದಿನ ವಿಶ್ವಕಪ್ (World Cup) ಅಂತಿಮ ಹಂತಕ್ಕೆ ತಲುಪಿದೆ. ಭಾನುವಾರ ಭಾರತ (India) ಮತ್ತು ಆಸ್ಟ್ರೇಲಿಯಾ (Australia) ತಂಡದ ಮಧ್ಯೆ ನಡೆಯಲಿರುವ ಫೈನಲ್ (Final) ಪಂದ್ಯದೊಂದಿಗೆ ಈ ಮಹಾ ಟೂರ್ನಿಯ ಪಯಣ ಕೊನೆಗೊಳ್ಳಲಿದೆ. ಗುಜರಾತ್‌ನ (Gujarat) ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ವಿಶ್ವಕಪ್‌ನ ಕೊನೆಯ ಪಂದ್ಯ ನಡೆಯಲಿದ್ದು, ಹೈವೋಲ್ಟೇಜ್ ಮ್ಯಾಚ್ ವೀಕ್ಷಿಸಲು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಅದಕ್ಕೂ ಮುನ್ನ ಈ ಟೂರ್ನಿಯ ಸರಣಿ ಶ್ರೇಷ್ಠ ಆಟಗಾರ (Player of Tournament) ಪ್ರಶಸ್ತಿಗಾಗಿ 9 ಆಟಗಾರರನ್ನು ಐಸಿಸಿ (ICC) ನಾಮನಿರ್ದೇಶನ ಮಾಡಿದೆ ಎಂದು ವರದಿಗಳು ತಿಳಿಸಿವೆ. ಆದರೆ ಈ ಬಗ್ಗೆ ಐಸಿಸಿ ಯಾವುದೇ ಅಧಿಕೃತ ಮಾಹಿತಿಯನ್ನು ಇದುವರೆಗೂ ಹಂಚಿಕೊಂಡಿಲ್ಲ.

    ಈ 9 ಆಟಗಾರರ ಪೈಕಿ ಟೀಂ ಇಂಡಿಯಾದ ನಾಲ್ವರು ನಾಮನಿರ್ದೇಶನಗೊಂಡಿದ್ದು, ಆಸ್ಟ್ರೇಲಿಯಾಮತ್ತು ನ್ಯೂಜಿಲೆಂಡ್ ತಂಡಗಳ ತಲಾ 2 ಆಟಗಾರರು ಮತ್ತು ದಕ್ಷಿಣ ಆಫ್ರಿಕಾದ ಒಬ್ಬ ಆಟಗಾರ ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಇದನ್ನೂ ಓದಿ: ಶಮಿ ತವರಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾದ ಯೋಗಿ ಸರ್ಕಾರ

    ಭಾರತ ತಂಡದಿಂದ ಆಯ್ಕೆಯಾದವರು ಯಾರು?
    ಐಸಿಸಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಭಾರತದ ಆಟಗಾರರಲ್ಲಿ ನಾಯಕ ರೋಹಿತ್ ಶರ್ಮಾ (Rohit Sharma), ವಿರಾಟ್ ಕೊಹ್ಲಿ (Virat Kohli)), ಮೊಹಮ್ಮದ್ ಶಮಿ (Mohammed Shami) ಮತ್ತು ಜಸ್ಪ್ರೀತ್ ಬುಮ್ರಾ (Jasprit Bumrah) ಅವರ ಹೆಸರುಗಳು ಸೇರಿವೆ. ವಿಶ್ವಕಪ್ ಪಂದ್ಯಾವಳಿಯಲ್ಲಿ ಇವರಿಂದ ಉತ್ತಮ ಪ್ರದರ್ಶನ ಕಂಡುಬಂದಿದೆ. ಬ್ಯಾಟಿಂಗ್‌ನಲ್ಲಿ ಅಬ್ಬರಿಸಿರುವ ವಿರಾಟ್ ಕೊಹ್ಲಿ 700 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಹಾಗೆಯೇ ನಾಯಕ ರೋಹಿತ್ ಶರ್ಮಾ ಕೂಡ ತಂಡಕ್ಕೆ ಉತ್ತಮ ಆರಂಭವನ್ನು ನೀಡಿದ್ದು, 500ಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ. ಇದನ್ನೂ ಓದಿ: ಮತ್ತೆ ಮಾತಿನಲ್ಲೇ ತಿವಿದ ವಿಚ್ಛೇದಿತ ಪತ್ನಿ – ತೆರೆಯ ಹಿಂದೆ ಶಮಿಯ ಬದುಕು ಘೋರ!

    ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಮೊಹಮ್ಮದ್ ಶಮಿ, ಪ್ರಸ್ತುತ ಟೂರ್ನಿಯಲ್ಲಿ 23 ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಬುಮ್ರಾ ಕೂಡ ಇಲ್ಲಿಯವರೆಗೆ ಮ್ಯಾಚ್ ವಿನ್ನಿಂಗ್ ಬೌಲರ್ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇದನ್ನೂ ಓದಿ: ಜೀತೇಗ ಇಂಡಿಯಾ ಜೀತೇಗ – ವಿಶ್ವ ಮಹಾಸಮರಕ್ಕೆ ಮೋದಿ ಅಂಗಳ ಸಜ್ಜು, ಕೋಟ್ಯಂತರ ಅಭಿಮಾನಿಗಳ ಕಾತರ!

    ಇತರ ದೇಶಗಳಿಂದ ಯಾರ್ಯಾರು?
    ಈ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಇತರ ದೇಶಗಳ ಆಟಗಾರರ ಬಗ್ಗೆ ಹೇಳುವುದಾದರೆ, ಆಸೀಸ್ ಲೆಗ್ ಸ್ಪಿನ್ನರ್ ಆಡಮ್ ಝಂಪಾ ಮತ್ತು ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್  ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಝಂಪಾ 22 ವಿಕೆಟ್‌ಗಳೊಂದಿಗೆ ಇದುವರೆಗೆ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಮ್ಯಾಕ್ಸ್ವೆಲ್ ಕೂಡ ಬ್ಯಾಟಿಂಗ್ ಜೊತೆಗೆ ಬೌಲಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಇಬ್ಬರೊಂದಿಗೆ ನ್ಯೂಜಿಲೆಂಡ್‌ನ ಡೇರಿಲ್ ಮಿಚೆಲ್ ಮತ್ತು ರಚಿನ್ ರವೀಂದ್ರ ಅವರೂ ಸಹ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಹೀನಾಯವಾಗಿ ಸೋಲುತ್ತೆ, ಆಸ್ಟ್ರೇಲಿಯಾ ಟ್ರೋಫಿ ಎತ್ತಿ ಹಿಡಿಯುತ್ತೆ – ಮಿಚೆಲ್‌ ಮಾರ್ಷ್‌ ಭವಿಷ್ಯವಾಣಿ ವೈರಲ್‌

    ರಚಿನ್ ರವೀಂದ್ರ ತಮ್ಮ ಮೊದಲ ವಿಶ್ವಕಪ್‌ನಲ್ಲಿಯೇ 64.22 ಸರಾಸರಿಯಲ್ಲಿ 578 ರನ್ ಕಲೆಹಾಕಿದ್ದಾರೆ. ಡೇರಿಲ್ ಮಿಚೆಲ್ ಕೂಡ 69ರ ಸರಾಸರಿಯಲ್ಲಿ 552 ರನ್ ಬಾರಿಸಿದ್ದರು. ಟೂರ್ನಿಯಲ್ಲಿ ನಾಲ್ಕು ಶತಕ ಸೇರಿದಂತೆ 59.40 ಸರಾಸರಿಯಲ್ಲಿ 594 ರನ್ ಬಾರಿಸಿರುವ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: 2023 World Cup Final – 20 ವರ್ಷದ ಹಿಂದಿನ ಸೇಡನ್ನು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?

  • ಹುಬ್ಬಳ್ಳಿಯಲ್ಲಿ ವಿಶ್ವಕಪ್ ಫೈನಲ್ಸ್ ಬೆಟ್ಟಿಂಗ್ ಭರಾಟೆ – 15 ದಿನದಲ್ಲಿ 30 ಕೇಸ್, 42 ಮಂದಿ ಅರೆಸ್ಟ್

    ಹುಬ್ಬಳ್ಳಿಯಲ್ಲಿ ವಿಶ್ವಕಪ್ ಫೈನಲ್ಸ್ ಬೆಟ್ಟಿಂಗ್ ಭರಾಟೆ – 15 ದಿನದಲ್ಲಿ 30 ಕೇಸ್, 42 ಮಂದಿ ಅರೆಸ್ಟ್

    ಹುಬ್ಬಳ್ಳಿ: ದೇಶದೆಲ್ಲೆಡೆ ವಿಶ್ವಕಪ್ (World Cup) ಕ್ರಿಕೆಟ್ (Cricket) ಫೈನಲ್ (Final) ಜ್ವರ ಹೆಚ್ಚಾಗಿದೆ. ಆದರೆ ಹುಬ್ಬಳ್ಳಿಯಲ್ಲಿ (Hubballi) ಮಾತ್ರ ಬೆಟ್ಟಿಂಗ್ (Betting) ಭರಾಟೆ ಜೋರಾಗಿದ್ದು, ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಹುಬ್ಬಳ್ಳಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಅತ್ಯಧಿಕವಾಗಿ ನಡೆಯುತ್ತಿದೆ. ಹೀಗಾಗಿ ದೇಶದಲ್ಲಿಯೇ ಬೆಟ್ಟಿಂಗ್ ಹಬ್ ಆಗಿ ಹುಬ್ಬಳ್ಳಿ ಕುಖ್ಯಾತಿ ಪಡೆಯುತ್ತಿದೆ.

    ಇದಕ್ಕೆ ಸಾಕ್ಷಿಯೆಂಬಂತೆ ಕಳೆದ ಹಲವು ದಿನಗಳ ಹಿಂದೆ ಇಡಿ (ED) ಸಹ ಹುಬ್ಬಳ್ಳಿ ಮನೆಯೊಂದರ ಮೇಲೆ ದಾಳಿ ನಡೆಸಿ ಶೋಧ ನಡೆಸಿತ್ತು. ಈ ಬೆನ್ನಲ್ಲೇ ಹುಬ್ಬಳ್ಳಿ ಧಾರವಾಡ ಪೋಲಿಸ್ ಕಮಿಷನರೇಟ್ ಹೈ ಅಲರ್ಟ್ ಆಗಿದೆ. ಬೆಟ್ಟಿಂಗ್ ದಂಧೆ ವಿರುದ್ಧ ಕಮಿಷನರ್ ರೇಣುಕಾ ಸುಕುಮಾರ್ ಸಮರ ಸಾರಿದ್ದಾರೆ. ಅಪರಾಧ ವಿಭಾಗದ ಡಿಸಿಪಿ ರವೀಶ್ ಮತ್ತು ಕಾನೂನು ಸುವ್ಯವಸ್ಥೆ ಡಿಸಿಪಿ ರಾಜೀವ್ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಇದನ್ನೂ ಓದಿ: ಮಹಿಳೆಯಿಂದ ಬ್ಲ್ಯಾಕ್‌ಮೇಲ್ – ಎಂಪಿ ದೇವೇಂದ್ರಪ್ಪ ಪುತ್ರನಿಂದ ದೂರು, ಎಫ್‌ಐಆರ್ ದಾಖಲು

    ವಿಶ್ವಕಪ್ ಮ್ಯಾಚ್‌ಗೆ ಸಂಬಂಧಪಟ್ಟಂತೆ ಕಳೆದ ಹದಿನೈದು ದಿನದಲ್ಲಿ ಬೆಟ್ಟಿಂಗ್ ವಿರುದ್ಧ 30 ಕೇಸ್ ದಾಖಲಾಗಿದ್ದು, 42 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಅಲ್ಲದೇ 200ಕ್ಕೂ ಅಧಿಕ ಜನರ ವಿಚಾರಣೆ ನಡೆಸಲಾಗಿದೆ. ಆನ್‌ಲೈನ್ ಗೇಮ್ ಆ್ಯಪ್‌ಗಳ ಮೇಲೂ ಕಟ್ಟೆಚ್ಚರ ವಹಿಸಲಾಗಿದೆ. ಇನ್ನೂ ಬೆಟ್ಟಿಂಗ್ ದಂಧೆಕೋರರಿಗೆ ಕಮಿಷನರ್ ಖಡಕ್ ವಾರ್ನಿಂಗ್ ನೀಡಿದ್ದಾರೆ. ಇದನ್ನೂ ಓದಿ: 15 ನಿಮಿಷದಲ್ಲಿ 4 ಕೊಲೆ, ಇದು ವಿಶ್ವ ದಾಖಲೆ – ಸ್ಟೇಟಸ್ ಹಾಕಿದಾತನಿಗೆ ಬಿಸಿ ಮುಟ್ಟಿಸಿದ ಪೊಲೀಸರು

  • ಶಮಿಗೆ 7 ವಿಕೆಟ್ ಸಿಗುತ್ತೆ – ನ.14ಕ್ಕೆ ಬಿದ್ದ ಕನಸು ನನಸಾಯ್ತು

    ಶಮಿಗೆ 7 ವಿಕೆಟ್ ಸಿಗುತ್ತೆ – ನ.14ಕ್ಕೆ ಬಿದ್ದ ಕನಸು ನನಸಾಯ್ತು

    ಮುಂಬೈ: ನ್ಯೂಜಿಲೆಂಡ್ (New Zealand) ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಆಟಗಾರ ಶಮಿ (Mohammed Shami) 7 ವಿಕೆಟ್ ಕಬಳಿಸಿದ್ದಾರೆ. ಇದಕ್ಕೂ ಮುನ್ನ ದಿನವೇ ಅಷ್ಟು ವಿಕೆಟ್ ಗಳಿಸುವುದಾಗಿ ಕನಸು ಕಂಡ ವಿಚಾರವನ್ನು ವ್ಯಕ್ತಿಯೊಬ್ಬ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾನೆ. ಈಗ ವ್ಯಕ್ತಿಯ ಟಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ.

    16 ಲಕ್ಷ ಜನ ಈ ಪೋಸ್ಟ್ ನೋಡಿದ್ದಾರೆ. 43.5 ಸಾವಿರ ಲೈಕ್ ಪಡೆದಿದೆ. 13.4 ಸಾವಿರ ಜನ ಹಂಚಿಕೊಂಡಿದ್ದಾರೆ. 3 ಸಾವಿರ ಜನ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: World Cup Semifinal: 7 ವಿಕೆಟ್‌ ಕಿತ್ತು ಗ್ಲೆನ್‌ ಮ್ಯಾಕ್‌ಗ್ರಾತ್‌ ದಾಖಲೆ ಸರಿಗಟ್ಟಿದ ಶಮಿ

    ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಅಬ್ಬರದ ಬೌಲಿಂಗ್ ನಡೆಸಿ ಮೊಹಮ್ಮದ್ ಶಮಿ ನ್ಯೂಜಿಲೆಂಡ್ ತಂಡದ 7 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದಾರೆ. ಆಸ್ಟ್ರೇಲಿಯಾ ವೇಗದ ಬೌಲರ್ ಗ್ಲೆನ್ ಮೆಕ್‍ಗ್ರಾತ್ ಅವರ ದಾಖಲೆಯನ್ನು ಶಮಿ ಸರಿಗಟ್ಟಿದ್ದಾರೆ. ಗ್ಲೆನ್ ಮೆಕ್‍ಗ್ರಾತ್ ಐಸಿಸಿ ವಿಶ್ವಕಪ್ 2003ರ ದಕ್ಷಿಣ ಆಫ್ರಿಕಾದ ಪೊಟ್ಚೆಫ್‌ಸ್ಟ್ರೂಮ್‌ನಲ್ಲಿ ನಮೀಬಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 15 ರನ್ ನೀಡಿ 7 ವಿಕೆಟ್ ಕಿತ್ತು ವಿಶ್ವ ದಾಖಲೆ ಬರೆದಿದ್ದರು. ಆ ದಾಖಲೆಯನ್ನು ಭಾರತದ ಬೌಲರ್ ಶಮಿ ಈಗ ಸರಿಗಟ್ಟಿದ್ದಾರೆ. ಅಲ್ಲದೇ ಮೂರು ಬಾರಿ 5 ವಿಕೆಟ್ ಪಡೆದ ಆಸ್ಟ್ರೇಲಿಯಾ ಆಟಗಾರ ಮಿಚೆಲ್ ಸ್ಟಾರ್ಕ್ ಅವರ ದಾಖಲೆಯನ್ನು ಶಮಿ ಮುರಿದಿದ್ದಾರೆ.

    ಇದರೊಂದಿಗೆ ಮೊಹಮ್ಮದ್ ಶಮಿ ಏಕದಿನ ಮಾದರಿಯಲ್ಲಿ 7 ವಿಕೆಟ್ ಪಡೆದ ಸಾಧನೆಯನ್ನೂ ಮಾಡಿದ್ದು, ಅಲ್ಲದೇ ಕೇವಲ 17 ವಿಶ್ವಕಪ್ ಇನ್ನಿಂಗ್ಸ್‌ನಲ್ಲಿ 50 ವಿಕೆಟ್ ಪಡೆದು ಮಿಂಚಿದ್ದಾರೆ. 9.5 ಓವರ್‌ಗಳಲ್ಲಿ 57 ರನ್ ನೀಡಿ 7 ವಿಕೆಟ್‍ಗಳನ್ನು ಶಮಿ ಪಡೆದು ಮಿಂಚಿದ್ದಾರೆ. ಜೊತೆಗೆ ಮ್ಯಾನ್ ಆಫ್ ದಿ ಮ್ಯಾಚ್ ಕೂಡ ಶಮಿಗೆ ಒಲಿಯಿತು. ಇದನ್ನೂ ಓದಿ: World Cup Semifinal: 48 ವರ್ಷಗಳ ವಿಶ್ವಕಪ್‌ ಇತಿಹಾಸದಲ್ಲಿ ಹೊಸ ಮೈಲುಗಲ್ಲು‌ ಸ್ಥಾಪಿಸಿದ ಶಮಿ.!

    ವಿಶ್ವಕಪ್‍ನಲ್ಲಿ 7 ವಿಕೆಟ್ ಉರುಳಿಸಿದ ದಿಗ್ಗಜರು
    ಆಸ್ಟ್ರೇಲಿಯಾದ ಆಂಡಿ ಬಿಚೆಲ್ – 20 ರನ್ 7 ವಿಕೆಟ್, ಇಂಗ್ಲೆಂಡ್ (ಎದುರಾಳಿ) 2003, ಮಾ.2
    ನ್ಯೂಜಿಲೆಂಡ್‍ನ ಟಿಮ್ ಸೌಥಿ – 33 ಕ್ಕೆ 7, ಇಂಗ್ಲೆಂಡ್ (ಎದುರಾಳಿ) 2015, ಫೆ.20
    ವೆಸ್ಟಿಂಡೀಸ್‍ನ ವಿನ್ಸ್ಟನ್ ಡೇವಿಸ್ – 51 ಕ್ಕೆ 7, ಆಸ್ಟ್ರೇಲಿಯಾ (ಎದುರಾಳಿ) 1983, ಜೂ.11
    ಭಾರತದ ಮೊಹಮ್ಮದ್ ಶಮಿ – 57 ಕ್ಕೆ 7, ನ್ಯೂಜಿಲೆಂಡ್ (ಎದುರಾಳಿ) 2023, ನ.15