Tag: ವಿಶ್ವಕಪ್

  • ಲಕ್ಕಿ ಸ್ಟೇಡಿಯಂನಲ್ಲಿ ಭಾರತಕ್ಕೆ ವಿಶ್ವಕಪ್ ಮತ್ತೊಮ್ಮೆ ಒಲಿಯುತ್ತಾ?

    ಲಕ್ಕಿ ಸ್ಟೇಡಿಯಂನಲ್ಲಿ ಭಾರತಕ್ಕೆ ವಿಶ್ವಕಪ್ ಮತ್ತೊಮ್ಮೆ ಒಲಿಯುತ್ತಾ?

    ಲಾರ್ಡ್ಸ್ : ಟೀಂ ಇಂಡಿಯಾ ಮೂರನೇ ಬಾರಿ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಫೈನಲ್ ಪಂದ್ಯವನ್ನು ಆಡಲಿದ್ದು, ಭಾರತದಲ್ಲೆಡೆ ಅಭಿಮಾನಿಗಳ ಹಾರೈಕೆ ಮತ್ತು ಪ್ರಾರ್ಥನೆ ಜೋರಾಗಿದೆ.

    ವಿಶ್ವಕಪ್ ಕ್ರಿಕೆಟ್
    ಈ ಹಿಂದೆ 1983ರಲ್ಲಿ ಕಪಿಲ್ ದೇವ್ ಸಾರಥ್ಯದಲ್ಲಿ ಟೀಂ ಇಂಡಿಯಾ ಫೈನಲ್ ಪ್ರವೇಶಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 54.4 ಓವರ್ ಗಳಲ್ಲಿ 183 ರನ್ ಗಳಿಗೆ ಆಲೌಟ್ ಆಗಿತ್ತು. ಎದರಾಳಿ ವೆಸ್ಟ್ ಇಂಡಿಸ್ 52 ಓವರ್ ಗಳಲ್ಲಿ 140 ರನ್ ಗಳಿಗೆ ಆಲೌಟ್ ಆಗಿತ್ತು. ಈ  ಭಾರತ 43 ರನ್‍ಗಳಿಂದ ಪಂದ್ಯವನ್ನು ಗೆಲ್ಲುವ ಮೂಲಕ ವಿಶ್ವಕಪ್ ಜಯಿಸಿತ್ತು.

    ನ್ಯಾಟ್‍ವೆಸ್ಟ್ ಟ್ರೋಫಿ
    2012ರ ಜುಲೈ 13ಕ್ಕೆ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 325 ರನ್ ಗಳಿಸಿತ್ತು. ನಾಯಕ ನಾಸೀರ್ ಹುಸೇನ್ 115 ರನ್ ಚಚ್ಚಿದ್ದರು. ನಂತರ ಬ್ಯಾಟಿಂಗ್ ಆರಂಭಿಸಿದ ಭಾರತ 146 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಜೊತೆಯಾದ ಮಹಮ್ಮದ್ ಕೈಫ್ ಮತ್ತು ಯುವರಾಜ್ ಸಿಂಗ್ 7 ವಿಕೆಟ್ ಗೆ 121 ರನ್ ಜೊತೆಯಾಟವಾಡಿದ್ದರು. ಅಂತಿಮವಾಗಿ ಮಹಮ್ಮದ್ ಕೈಫ್ ಔಟಾಗದೇ 87 ರನ್ ಸಿಡಿಸುವ ಮೂಲಕ ಭಾರತ 49.3 ಓವರ್ ಗಳಲ್ಲಿ 326 ರನ್ ಗಳಿಸಿ 2 ವಿಕೆಟ್ ಗಳ ರೋಚಕ ಜಯವನ್ನುಗಳಿಸಿತ್ತು. ಈ ಪಂದ್ಯದಲ್ಲಿ ವಿಜಯಿಯಾದ ಬಳಿಕ ಟೀಂ ಇಂಡಿಯಾದ ನಾಯಕ ಸೌರವ್ ಗಂಗೂಲಿ ತಮ್ಮ ಶರ್ಟ್ ಬಿಚ್ಚಿ ಸಂಭ್ರಮಿಸಿದರು.

    ಈ ಅಂಗಣದಲ್ಲಿ ಎರಡು ಬಾರಿ ಫೈನಲ್ ತಲುಪಿರುವ ಭಾರತ ಕಪ್ ಜಯಿಸಿದೆ. ಹೀಗಾಗಿ ಭಾರತ ಪಾಲಿಗೆ ಲಕ್ಕಿ ಸ್ಟೇಡಿಯಂ ಆಗಿರುವ ಲಾರ್ಡ್ಸ್ ನಲ್ಲಿ ಈ ಬಾರಿ ಫಲಿತಾಂಶ ಏನಾಗಲಿದೆ ಎನ್ನುವ ಪ್ರಶ್ನೆಗೆ ಇಂದು ಸಂಜೆ ಉತ್ತರ ಸಿಗಲಿದೆ.

     

     

  • ಭಾರತಕ್ಕೆ 36 ರನ್ ಗಳ ಜಯ : ಫೈನಲಿಗೆ ಎಂಟ್ರಿ

    ಭಾರತಕ್ಕೆ 36 ರನ್ ಗಳ ಜಯ : ಫೈನಲಿಗೆ ಎಂಟ್ರಿ

    ಡರ್ಬಿ: ಇಂಗ್ಲೆಡಿನಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವ ಕಪ್ ಕ್ರಿಕೆಟ್ ಸೆಮಿಫೈನಲ್ ಭಾರತ ಆಸ್ಟ್ರೇಲಿಯಾದ ವಿರುದ್ಧ 36 ರನ್ ಗಳ ಜಯವನ್ನು ಸಾಧಿಸುವ ಮೂಲಕ ಫೈನಲ್ ಪ್ರವೇಶಿಸಿದೆ‌.

    ಗೆಲ್ಲಲು 282 ರನ್ ಗಳ ಕಠಿಣ ಗುರಿಯನ್ನು ಪಡೆದ ಆಸ್ಟ್ರೇಲಿಯಾ 40. 1 ಓವರ್ ಗಳಲ್ಲಿ 245 ರನ್ ಗಳಿಸಿ ಆಲೌಟ್ ಆಯ್ತು. ಅಸೀಸ್ ಪರ ಎಲಿಸ್ ವಿಲಾನಿ 58 ರನ್ ಗಳಿಸಿದರೆ ಕೊನೆಯಲ್ಲಿ ಬ್ಲ್ಯಾಕ್ ವೆಲ್ 56 ಎಸೆತದಲ್ಲಿ 90 ರನ್ ಗಳಿಸಿದರು‌.

    ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ್ದ ಆಸ್ಟ್ರೇಲಿಯಾ ಸುಲಭವಾಗಿ ಸೋಲುತ್ತೆ ಎಂದು ನಿರೀಕ್ಷಿಸಲಾಗಿತ್ತು. ಆದರೆ 9ನೇ ವಿಕೆಟಿಗೆ ಬ್ಲ್ಯಾಕ್ ವೆಲ್ ಮತ್ತು ಬೀಮ್ಸ್ 76 ರನ್ ಗಳ ಜೊತೆಯಾಟವಾಡಿದ ಕಾರಣ ಆಸೀಸ್ 240 ರನ್ ಗಳ ಗಡಿ ಯನ್ನು ದಾಟಿತ್ತು.

    ಭಾರತದ ಪರವಾಗಿ ದೀಪ್ತಿ ಶರ್ಮಾ ಮೂರು ವಿಕೆಟ್ ಪಡೆದರೆ,ಜೂಲನ್ ಗೋಸ್ವಾಮಿ, ಶಿಖಾ ಪಾಂಡೆ ತಲಾ 2 ವಿಕೆಟ್ ಪಡೆದರು. ರಾಜೇಶ್ವರಿ ಗಾಯಕವಾಡ್, ಪೂನಮ್ ಯಾದವ್ ತಲಾ ಒಂದು ವಿಕೆಟ್ ಪಡೆದರು.

    ಭಾನುವಾರ ಭಾರತ ಮತ್ತು ಇಂಗ್ಲೆಂಡ್ ನಡುವೆ ಫೈನಲ್ ಪಂದ್ಯ ನಡೆಯಲಿದೆ.

    ಹರ್ಮನ್ ಪ್ರೀತ್ ಬ್ಯಾಟಿಂಗ್ ಅಬ್ಬರ: ಸಿಕ್ಸರ್, ಬೌಂಡರಿಗಳ ಸುರಿಮಳೆ. ಕೊನೆಯ 16 ಓವರ್ ಗಳಲ್ಲಿ ಭಾರತ ಗಳಿಸಿದ್ದು  179 ರನ್. ಇದು ವಿಶ್ವಕಪ್ ಕ್ರಿಕೆಟ್‍ನ ಆಸ್ಟ್ರೇಲಿಯಾ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ಹರ್ಮನ್ ಪ್ರೀತ್ ಕೌರ್ ಅವರ ಬ್ಯಾಟಿಂಗ್ ಆರ್ಭಟದ ಝಲಕ್.

    ಟಾಸ್ ಗೆದ್ದು ಬ್ಯಾಟ್ ಮಾಡಿದ ಭಾರತದ ಪರವಾಗಿ ಹರ್ಮನ್ ಪ್ರೀತ್ ಅವರು ಔಟಾಗದೇ 171 ರನ್(115 ಎಸೆತ) ಸಿಡಿಸುವ ಮೂಲಕ 42 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 281 ರನ್ ಗಳಿಸಿತ್ತು.

    ವಿಶೇಷ ಏನೆಂದರೆ 90 ಎಸೆತದಲ್ಲಿ ಶತಕ ಹೊಡೆದ ಹರ್ಮನ್‍ಪ್ರೀತ್ ಕೌರ್ ನಂತರ 25 ಎಸೆತದಲ್ಲಿ 71 ರನ್ ಚಚ್ಚಿದ್ದರು. ಇವರ ಈ ವಿಹಂಗಮ ಇನ್ನಿಂಗ್ಸ್ ನಲ್ಲಿ 20 ಬೌಂಡರಿ, 7 ಸಿಕ್ಸರ್ ಗಳು ಸಿಡಿಯಲ್ಪಟ್ಟಿತ್ತು.

    64 ಎಸೆತದಲ್ಲಿ 50 ರನ್ ಗಳಿಸಿದ್ದ ಇವರು ನಂತರ 26 ಎಸೆತದಲ್ಲಿ ಶತಕ ಹೊಡೆದಿದ್ದರು. 171 ರನ್‌ಗಳಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಹೊಡೆದ ಐದನೇ ಆಟಗಾರ್ತಿಯಾಗಿ  ಕೌರ್ ಹೊಮ್ಮಿದ್ದಾರೆ.

    ಸಿಟ್ಟಿನಲ್ಲಿ ಶತಕ: 35 ನೇ ಓವರ್ ನಲ್ಲಿ ಕೌರ್ 98 ರನ್ ಗಳಿಸಿ ಸ್ಟ್ರೈಕ್ ನಲ್ಲಿದ್ದರು. ಈ ಕೊನೆಯ ಎಸೆತದಲ್ಲಿ ಕೌರ್ ಸಿಂಗಲ್ ರನ್ ತೆಗೆಯಲು ಎಡಗಡೆ ಹೊಡೆದಿದ್ದರು. ಈ ವೇಳೆ ದೀಪ್ತಿ ಶರ್ಮಾ ಎರಡು ರನ್ ಓಡಿದ್ದರು. ಈ ವೇಳೆ ಫೀಲ್ಡರ್ ಎಸೆದ ಬಾಲ್ ನೇರವಾಗಿ ಬೌಲರ್ ಕೈಗೆ ಸಿಕ್ಕಿತ್ತು. ಈ ಸಂದರ್ಭದಲ್ಲಿ ಕೌರ್ ಸ್ಟ್ರೈಕ್ ನತ್ತ ಓಡುತ್ತಿದ್ದರು. ಇದನ್ನು ನೋಡಿದ ಕೂಡಲೇ ಬೌಲರ್ ಬೀಮ್ಸ್ ನೇರವಾಗಿ ಸ್ಟ್ರೈಕ್ ನಲ್ಲಿರುವ ವಿಕೆಟ್ ಗೆ ತ್ರೋ ಮಾಡಿದ್ರು. ಪರಿಣಾಮ ಔಟ್ ನಿರ್ಧಾರ ಮೂರನೇ ಅಂಪೈರ್ ಹೋಯ್ತು. ಕೂಡಲೇ ಸಿಟ್ಟಾದ ಕೌರ್ ಹೆಲ್ಮೆಟ್ ಎಸೆದು ತಮ್ಮ ಆಕ್ರೋಶವನ್ನು ಹೊರ ಹಾಕಿದ್ರು. ಮೂರನೇ ಅಂಪೈರ್ ನಟೌಟ್ ಎಂದು ತೀರ್ಪು ನೀಡಿದ್ರು. ಶತಕ ಪೂರ್ಣ ಗೊಳಿಸಿದ್ದರೂ ಕೌರ್ ಬ್ಯಾಟನ್ನು ಮೇಲಕ್ಕೆ ಎತ್ತಿರಲಿಲ್ಲ. 150 ರನ್ ಗಳಿಸಿದಾಗ ಬ್ಯಾಟ್ ಮೇಲಕ್ಕೆ ಎತ್ತಿ ಸಂಭ್ರಮಿಸಿದರು. ಕೊನೆಯ 23 ಎಸೆತದಲ್ಲಿ 71 ರನ್( 4, 6, 6, 4, 4, 2, 0, 4, 4, 0, 6, 4, 1, 4, 1, 1, 6, 6, 1, 1, 4, 1, 1 ) ಚಚ್ಚಿದ್ದರು.

    ಭಾರತದ ಪರವಾಗಿ ಮಿಥಾಲಿ ರಾಜ್ 36 ರನ್(61 ಎಸೆತ, 2 ಬೌಂಡರಿ) ದೀಪ್ತಿ ಶರ್ಮಾ 25 ರನ್( 35 ಎಸೆತ, 1 ಬೌಂಡರಿ), ವೇದ ಕೃಷ್ಣ ಮೂರ್ತಿ 16 ರನ್(10 ಎಸೆತ,2 ಬೌಂಡರಿ) ಗಳಿಸಿದರು. ಮಳೆ ಬಂದ ಕಾರಣ 50 ಓವರ್ ಗಳ ಪಂದ್ಯವನ್ನು 42 ಓವರ್ ಗಳಿಗೆ ಇಳಿಸಲಾಗಿತ್ತು.

    ಹರ್ಮನ್ ಪ್ರೀತ್ ಕೌರ್ ಬ್ಯಾಟಿಂಗ್ ವೈಭವ ಹೀಗಿತ್ತು
    50 ರನ್ – 64 ಎಸೆತ
    100 ರನ್ – 90 ಎಸೆತ
    150 ರನ್ – 107 ಎಸೆತ
    171 ರನ್ – 115 ಎಸೆತ

    https://twitter.com/AkashKu64782024/status/888073567191146496

  • 90 ಎಸೆತದಲ್ಲಿ ಶತಕ, 115 ಎಸೆತದಲ್ಲಿ 171 ರನ್: ಆಸೀಸ್ ವಿರುದ್ಧ ಸಿಡಿದ ಹರ್ಮನ್ ಪ್ರೀತ್

    90 ಎಸೆತದಲ್ಲಿ ಶತಕ, 115 ಎಸೆತದಲ್ಲಿ 171 ರನ್: ಆಸೀಸ್ ವಿರುದ್ಧ ಸಿಡಿದ ಹರ್ಮನ್ ಪ್ರೀತ್

    ಡರ್ಬಿ: ಸಿಕ್ಸರ್, ಬೌಂಡರಿಗಳ ಸುರಿಮಳೆ. ಕೊನೆಯ 16 ಓವರ್ ಗಳಲ್ಲಿ ಭಾರತ ಗಳಿಸಿದ್ದು  179 ರನ್. ಇದು ವಿಶ್ವಕಪ್ ಕ್ರಿಕೆಟ್‍ನ ಆಸ್ಟ್ರೇಲಿಯಾ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ಹರ್ಮನ್ ಪ್ರೀತ್ ಕೌರ್ ಅವರ ಬ್ಯಾಟಿಂಗ್ ಆರ್ಭಟದ ಝಲಕ್.

    ಟಾಸ್ ಗೆದ್ದು ಬ್ಯಾಟ್ ಮಾಡಿದ ಭಾರತದ ಪರವಾಗಿ ಹರ್ಮನ್ ಪ್ರೀತ್ ಅವರು ಸ್ಫೋಟಕ ಔಟಾಗದೇ 171 ರನ್(115 ಎಸೆತ) ಸಿಡಿಸುವ ಮೂಲಕ 42 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 281 ರನ್ ಗಳಿಸಿತ್ತು

    ವಿಶೇಷ ಏನೆಂದರೆ 90 ಎಸೆತದಲ್ಲಿ ಶತಕ ಹೊಡೆದ ಹರ್ಮನ್‍ಪ್ರೀತ್ ಕೌರ್ ನಂತರ 25 ಎಸೆತದಲ್ಲಿ 71 ರನ್ ಚಚ್ಚಿದ್ದರು. ಇವರ ಈ ವಿಹಂಗಮ ಇನ್ನಿಂಗ್ಸ್ ನಲ್ಲಿ 20 ಬೌಂಡರಿ, 7 ಸಿಕ್ಸರ್ ಗಳು ಸಿಡಿಯಲ್ಪಟ್ಟಿತ್ತು.

    64 ಎಸೆತದಲ್ಲಿ 50 ರನ್ ಗಳಿಸಿದ್ದ ಇವರು ನಂತರ 26 ಎಸೆತದಲ್ಲಿ ಶತಕ ಹೊಡೆದಿದ್ದರು.64 ಎಸೆತದಲ್ಲಿ 50 ರನ್ ಗಳಿಸಿದ್ದ ಇವರು ನಂತರ 26 ಎಸೆತದಲ್ಲಿ ಶತಕ ಹೊಡೆದಿದ್ದರು. 171 ರನ್‌ಗಳಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಹೊಡೆದ ಐದನೇ ಆಟಗಾರ್ತಿಯಾಗಿ  ಕೌರ್ ಹೊಮ್ಮಿದ್ದಾರೆ.

    ಸಿಟ್ಟಿನಲ್ಲಿ ಶತಕ: 35 ನೇ ಓವರ್ ನಲ್ಲಿ ಕೌರ್ 98 ರನ್ ಗಳಿಸಿ ಸ್ಟ್ರೈಕ್ ನಲ್ಲಿದ್ದರು. ಈ ಕೊನೆಯ ಎಸೆತದಲ್ಲಿ ಕೌರ್ ಸಿಂಗಲ್ ರನ್ ತೆಗೆಯಲು ಎಡಗಡೆ ಹೊಡೆದಿದ್ದರು. ಈ ವೇಳೆ ದೀಪ್ತಿ ಶರ್ಮಾ ಎರಡು ರನ್ ಓಡಿದ್ದರು. ಈ ವೇಳೆ ಫೀಲ್ಡರ್ ಎಸೆದ ಬಾಲ್ ನೇರವಾಗಿ ಬೌಲರ್ ಕೈಗೆ ಸಿಕ್ಕಿತ್ತು. ಈ ಸಂದರ್ಭದಲ್ಲಿ ಕೌರ್ ಸ್ಟ್ರೈಕ್ ನತ್ತ ಓಡುತ್ತಿದ್ದರು. ಇದನ್ನು ನೋಡಿದ ಕೂಡಲೇ ಬೌಲರ್ ಬೀಮ್ಸ್ ನೇರವಾಗಿ ಸ್ಟ್ರೈಕ್ ನಲ್ಲಿರುವ ವಿಕೆಟ್ ಗೆ ತ್ರೋ ಮಾಡಿದ್ರು. ಪರಿಣಾಮ ಔಟ್ ನಿರ್ಧಾರ ಮೂರನೇ ಅಂಪೈರ್ ಹೋಯ್ತು. ಕೂಡಲೇ ಸಿಟ್ಟಾದ ಕೌರ್ ಹೆಲ್ಮೆಟ್ ಎಸೆದು ತಮ್ಮ ಆಕ್ರೋಶವನ್ನು ಹೊರ ಹಾಕಿದ್ರು. ಮೂರನೇ ಅಂಪೈರ್ ನಟೌಟ್ ಎಂದು ತೀರ್ಪು ನೀಡಿದ್ರು. ಶತಕ ಪೂರ್ಣ ಗೊಳಿಸಿದ್ದರೂ ಕೌರ್ ಬ್ಯಾಟನ್ನು ಮೇಲಕ್ಕೆ ಎತ್ತಿರಲಿಲ್ಲ. 150 ರನ್ ಗಳಿಸಿದಾಗ ಬ್ಯಾಟ್ ಮೇಲಕ್ಕೆ ಎತ್ತಿ ಸಂಭ್ರಮಿಸಿದರು. ಕೊನೆಯ 23 ಎಸೆತದಲ್ಲಿ 71 ರನ್( 4, 6, 6, 4, 4, 2, 0, 4, 4, 0, 6, 4, 1, 4, 1, 1, 6, 6, 1, 1, 4, 1, 1 ) ಚಚ್ಚಿದ್ದರು.

    ಭಾರತದ ಪರವಾಗಿ ಮಿಥಾಲಿ ರಾಜ್ 36 ರನ್(61 ಎಸೆತ, 2 ಬೌಂಡರಿ) ದೀಪ್ತಿ ಶರ್ಮಾ 25 ರನ್( 35 ಎಸೆತ, 1 ಬೌಂಡರಿ), ವೇದ ಕೃಷ್ಣ ಮೂರ್ತಿ 16 ರನ್(10 ಎಸೆತ,2 ಬೌಂಡರಿ) ಗಳಿಸಿದರು. ಮಳೆ ಬಂದ ಕಾರಣ 50 ಓವರ್ ಗಳ ಪಂದ್ಯವನ್ನು 42 ಓವರ್ ಗಳಿಗೆ ಇಳಿಸಲಾಯಿತು.

    ಹರ್ಮನ್ ಪ್ರೀತ್ ಕೌರ್ ಬ್ಯಾಟಿಂಗ್ ವೈಭವ ಹೀಗಿತ್ತು
    50 ರನ್ – 64 ಎಸೆತ
    100 ರನ್ – 90 ಎಸೆತ
    150 ರನ್ – 107 ಎಸೆತ
    171 ರನ್ – 115 ಎಸೆತ

    https://twitter.com/AkashKu64782024/status/888073567191146496

  • ಒಂದೇ ಪಂದ್ಯದಲ್ಲಿ 2 ವಿಶ್ವದಾಖಲೆ ಬರೆದ ಟೀಂ ಇಂಡಿಯಾದ ನಾಯಕಿ ಮಿಥಾಲಿ ರಾಜ್

    ಒಂದೇ ಪಂದ್ಯದಲ್ಲಿ 2 ವಿಶ್ವದಾಖಲೆ ಬರೆದ ಟೀಂ ಇಂಡಿಯಾದ ನಾಯಕಿ ಮಿಥಾಲಿ ರಾಜ್

    ಬ್ರಿಸ್ಟಲ್: ಟೀಂ ಇಂಡಿಯಾದ ನಾಯಕಿ ಮಿಥಾಲಿ ರಾಜ್ ವಿಶ್ವಕಪ್ ಕ್ರಿಕೆಟ್‍ನ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಎರಡು ವಿಶ್ವದಾಖಲೆ ನಿರ್ಮಿಸಿದ್ದಾರೆ.

    ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಹೊಡೆದ ಆಟಗಾರ್ತಿ ಎಂಬ ಹೆಗ್ಗಳಿಕೆಯ ಜೊತೆ 6 ಸಾವಿರ ರನ್ ಗಡಿ ದಾಟಿದ ಮೊದಲ ಆಟಗಾರ್ತಿಯಾಗಿ ಮಿಥಾಲಿ ರಾಜ್ ಹೊರ ಹೊಮ್ಮಿದ್ದಾರೆ.

    ಇಲ್ಲಿಯವರೆಗೆ ಏಕದಿನದ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಹೊಡೆದ ದಾಖಲೆ ಇಂಗ್ಲೆಂಡಿನ ಚಾರ್ಲೊಟ್ ಎಡ್ವರ್ಡ್ಸ್  ಹೆಸರಿನಲ್ಲಿತ್ತು. 191 ಪಂದ್ಯಗಳಿಂದ ಚಾರ್ಲೊಟ್ 5992 ರನ್ ಹೊಡೆದಿದ್ದರು. ಈ ಪಂದ್ಯ ಆರಂಭಕ್ಕೂ ಮುನ್ನ 5959 ರನ್ ಗಳಿಸಿದ್ದ ಮಿಥಾಲಿ ರಾಜ್ ಇಂದು 33 ರನ್ ಗಳಿಸುವ ಮೂಲಕ ಈ ದಾಖಲೆಯನ್ನು ಮುರಿದಿದ್ದಾರೆ.

    ಇಂದಿನ ಪಂದ್ಯ ಸೇರಿದಂತೆ ಮಿಥಾಲಿ ರಾಜ್ ಒಟ್ಟು 183 ಪಂದ್ಯಗಳ 164 ಇನ್ನಿಂಗ್ಸ್ ಮೂಲಕ 6028 ರನ್ ಗಳಿಸಿದ್ದಾರೆ. ಏಕದಿನದಲ್ಲಿ 5 ಶತಕ, 49 ಅರ್ಧ ಶತಕ ಹೊಡೆದಿದ್ದಾರೆ.

    ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮಿಥಾಲಿ ರಾಜ್ 69 ರನ್(114 ಎಸೆತ, 4 ಬೌಂಡರಿ,1 ಸಿಕ್ಸರ್) ಸಿಡಿಸಿ ಔಟಾದರು. ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನಿಂದಾಗಿ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇಸ್ಥಾನಕ್ಕೆ ಕುಸಿದಿರುವ ಭಾರತಕ್ಕೆ ಈ ಪಂದ್ಯವನ್ನು ಗೆದ್ದರೆ ಮಾತ್ರ ಸೆಮಿಫೈನಲ್ ಪ್ರವೇಶಿಸಲಿದೆ.

    ಪಾದಾರ್ಪಣೆ ಪಂದ್ಯದಲ್ಲಿಯೇ ಮಿಥಾಲಿ ಶತಕ ಹೊಡೆದಿದ್ದರು. 1999ರಲ್ಲಿ ಐರ್ಲೆಂಡ್ ವಿರುದ್ಧದ ನಡೆದ ಏಕದಿನ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದ ಮಿಥಾಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿ 114 ರನ್ ಹೊಡೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

    ಮಹಿಳೆಯರ ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಸತತ 7 ಅರ್ಧಶತಕ ದಾಖಲಿಸಿ ವಿಶ್ವ ದಾಖಲೆ ನಿರ್ಮಿಸಿರುವ ಮಿಥಾಲಿ ಒಟ್ಟು 49 ಅರ್ಧಶತಕ ದಾಖಲಿಸುವ ಮೂಲಕ ಏಕದಿನದಲ್ಲಿ ಅತಿ ಹೆಚ್ಚು ಅರ್ಧಶತಕ ದಾಖಲಿಸಿದ ಆಟಗಾರ್ತಿ ಎಂಬ ದಾಖಲೆಯನ್ನು ಬರೆದಿದ್ದಾರೆ.

     

  • ಮಹಿಳಾ ವಿಶ್ವಕಪ್: ಪಾಕ್ ವಿರುದ್ಧ ಭಾರತಕ್ಕೆ 95 ರನ್‍ಗಳ ಭರ್ಜರಿ ಜಯ

    ಮಹಿಳಾ ವಿಶ್ವಕಪ್: ಪಾಕ್ ವಿರುದ್ಧ ಭಾರತಕ್ಕೆ 95 ರನ್‍ಗಳ ಭರ್ಜರಿ ಜಯ

    ಡರ್ಬಿ: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ 95 ರನ್‍ಗಳ ಭರ್ಜರಿ ಜಯ ಸಾಧಿಸಿದೆ.

    ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆರಂಭಿಸಿದ ಭಾರತ 50 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ 38.1 ಓವರ್‍ಗಳಲ್ಲಿ 74 ರನ್ ಗಳಿಸಿ ಆಲೌಟ್ ಆಯ್ತು.

    ಟೀ ಇಂಡಿಯಾದ ಮಾರಕ ಬೌಲಿಂಗ್ ಗೆ ತತ್ತರಿಸಿದ ಪಾಕಿಸ್ತಾನ ಪರವಾಗಿ ಆರಂಭಿಕ ಆಟಗಾರ್ತಿ ನಹಿದಾ ಖಾನ್ 23 ರನ್ ಮತ್ತು  ಕೊನೆಯಲ್ಲಿ  ಸನಾ ಮಿರ್ 29 ರನ್ ಗಳಿಸಿ  ಸ್ವಲ್ಪ ಪ್ರತಿರೋಧ ತೋರಿದ್ದು ಬಿಟ್ಟರೆ, ಉಳಿದವರು ಬೇಗನೆ ಔಟಾದರು.

     ಭಾರದ ಪರವಾಗಿ ಪೂನಂ ರಾವುತ್ 47 ರನ್, ದೀಪ್ತಿ ಶರ್ಮಾ 28 ರನ್, ಸುಷ್ಮಾ ವರ್ಮಾ 33 ರನ್ ಬಾರಿಸಿದರು. ಬೌಲಿಂಗ್ ನಲ್ಲಿ  ಏಕ್ತಾ ಬಿಷ್ತ್ 5 ವಿಕೆಟ್ ಪಡೆದು ಮಿಂಚಿದರು.

    ಆಡಿರುವ ಮೂರು ಪಂದ್ಯಗಳನ್ನು ಮಿಥಾಲಿ ರಾಜ್ ಪಡೆ ಗೆದ್ದುಕೊಂಡಿದೆ. ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಪಂದ್ಯವನ್ನು 35 ರನ್ ಗಳಿಂದ ಗೆದ್ದಿದ್ದರೆ, ವಿಂಡೀಸ್ ವಿರುದ್ಧದ ಎರಡನೇ ಪಂದ್ಯವನ್ನು 7 ವಿಕೆಟ್‍ಗಳಿಂದ ಜಯಗಳಿಸಿತ್ತು.

     

  • 2018ರಲ್ಲಿ ಟಿ20 ವಿಶ್ವಕಪ್ ಇಲ್ಲ, 2020ಕ್ಕೆ ಮುಂದಿನ ಟೂರ್ನಿ

    2018ರಲ್ಲಿ ಟಿ20 ವಿಶ್ವಕಪ್ ಇಲ್ಲ, 2020ಕ್ಕೆ ಮುಂದಿನ ಟೂರ್ನಿ

    ಲಂಡನ್: ಐಸಿಸಿ ಸದಸ್ಯ ರಾಷ್ಟ್ರಗಳ ನಡುವೆ ಟೂರ್ನಿಗಳಿಗೆ ದಿನಾಂಕ ನಿಗದಿಯಾಗಿರುವುದರಿಂದ 2018ರಲ್ಲಿ ನಡೆಯಬೇಕಿದ್ದ ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ರದ್ದಾಗಿದೆ.

    ಪ್ರತಿ ಎರಡು ವರ್ಷಗಳಿಗೊಮ್ಮೆ ಆಯೋಜನೆ ಆಗುತ್ತಿದ್ದ ಟಿ 20 ವಿಶ್ವಕಪ್ ಕ್ರಿಕೆಟ್ ಟೂರ್ನಿ 2018ರಲ್ಲಿ ಆಯೋಜನೆ ಆಗುವುದಿಲ್ಲ. 2020ರಲ್ಲಿ ದಕ್ಷಿಣ ಆಫ್ರಿಕಾ ಅಥವಾ ಆಸ್ಟ್ರೇಲಿಯಾದಲ್ಲಿ ಮುಂದಿನ ಟಿ20 ವಿಶ್ವಕಪ್ ನಡೆಯಲಿದೆ ಎಂದು ಐಸಿಸಿಯ ಮೂಲಗಳು ಸುದ್ದಿ ಸಂಸ್ಥೆಗೆ ತಿಳಿಸಿದೆ.

    ಸದಸ್ಯ ರಾಷ್ಟ್ರಗಳ ಮಧ್ಯೆ ಹಲವು ದ್ವಿಪಕ್ಷೀಯ ಸರಣಿಗಳು ನಡೆಯಲು ಈಗಾಗಲೇ ದಿನಾಂಕ ನಿಗದಿಯಾದ ಹಿನ್ನೆಲೆಯಲ್ಲಿ ಟಿ20 ವಿಶ್ವಕಪ್ ರದ್ದಾಗಿದೆ ಎಂದು ಐಸಿಸಿಯ ಉನ್ನತ ಮೂಲಗಳು ತಿಳಿಸಿವೆ.

    ಅಷ್ಟೇ ಅಲ್ಲದೇ ವಿವಿಧ ದೇಶಗಳು ತನ್ನದೇ ಆದ ಟಿ20 ಟೂರ್ನಿಗಳನ್ನು ಆಯೋಜಿಸುತ್ತಿರುವುದಿಂದ ಐಸಿಸಿ ವಿಶ್ವಕಪ್ ಟೂರ್ನಿ ನಡೆಸದೇ ಇರಲು ನಿರ್ಧರಿಸಿದೆ.

    ದ್ವಿಪಕ್ಷೀಯ ಸರಣಿ ನಡೆದರೆ ಕ್ರಿಕೆಟ್ ಬೋರ್ಡ್ ಗಳಿಗೆ ಟಿವಿ ಹಕ್ಕುಗಳನ್ನು ಮಾರಾಟ ಮಾಡುವ ಮೂಲಕ ಹೆಚ್ಚಿನ ಆದಾಯ ಸಿಗುತ್ತದೆ. ಅದರಲ್ಲೂ ಭಾರತ ಯಾವುದಾದರೂ ದೇಶದ ಪ್ರವಾಸ ಕೈಗೊಂಡರೆ ಕ್ರಿಕೆಟ್ ಆಯೋಜನೆ ಮಾಡುವ ಬೋರ್ಡ್ ಗೆ ಟಿವಿ ಹಕ್ಕು ರೂಪದಲ್ಲಿ ಕೋಟಿಗಟ್ಟಲೇ ಹಣ ಸಿಗುತ್ತದೆ.

    ಮುಂದಿನ ವರ್ಷ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಬಳಿಕ ಆಸ್ಟ್ರೇಲಿಯಾಗೆ ಟೀಂ ಇಂಡಿಯಾ ಪ್ರವಾಸವನ್ನು ಕೈಗೊಳ್ಳಲಿದೆ. 2021ರ ಚಾಂಪಿಯನ್ಸ್ ಕ್ರಿಕೆಟ್ ಟೂರ್ನಿ ಭಾರತದಲ್ಲಿ ನಡೆಯಲಿದೆ.

    ವಿಶ್ವ ಟೆಸ್ಟ್ ಕ್ರಿಕೆಟ್ ಚಾಂಪಿಯನ್ ಶಿಪ್ ನಡೆಸಲು ಐಸಿಸಿ ಮುಂದಾಗುತ್ತಿದ್ದು, ಸೋಮವಾರದಿಂದ ಆರಂಭವಾಗಲಿರುವ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆ ನಡೆಯಲಿದೆ.

    ಈ ಹಿಂದೆ ಟಿ20 ವಿಶ್ವಕಪ್ ಕ್ರಿಕೆಟ್ ದಕ್ಷಿಣ ಆಫ್ರಿಕಾ(2007), ಇಂಗ್ಲೆಂಡ್(2009), ವೆಸ್ಟ್ ಇಂಡೀಸ್(2010), ಶ್ರೀಲಂಕಾ(2012), ಬಾಂಗ್ಲಾದೇಶ(2014), ಭಾರತ(2016)ದಲ್ಲಿ ನಡೆದಿತ್ತು.