Tag: ವಿಶ್ವಕಪ್

  • ನಾಯಕತ್ವದಿಂದ ಕೆಳಗಿಳಿದ ಹಿಂದಿನ ಸೀಕ್ರೆಟ್ ರಿವೀಲ್ ಮಾಡಿದ ಧೋನಿ!

    ನಾಯಕತ್ವದಿಂದ ಕೆಳಗಿಳಿದ ಹಿಂದಿನ ಸೀಕ್ರೆಟ್ ರಿವೀಲ್ ಮಾಡಿದ ಧೋನಿ!

    ನವದೆಹಲಿ: ಟೀಂ ಇಂಡಿಯಾ ತಂಡವನ್ನು 2007 ರಿಂದ ಹಲವು ಟೂರ್ನಿಗಳಲ್ಲಿ ಮುನ್ನಡೆಸಿದ್ದ ಎಂಎಸ್ ಧೋನಿ ವಿಶ್ವಕಪ್ ಸೇರಿದಂತೆ ಹಲವು ಸರಣಿಗಳಲ್ಲಿ ಜಯಗಳಿಸಲು ಕಾರಣರಾಗಿದ್ದರು. ಆದರೆ ಅನಿರೀಕ್ಷಿತವಾಗಿ 2017 ರಲ್ಲಿ ಏಕದಿನ, ಟಿ20 ಪಂದ್ಯಗಳ ತಂಡದ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರ ಪ್ರಕಟಿಸಿದ್ದ ಧೋನಿ ಎಲ್ಲರಿಗೂ ಶಾಕ್ ನೀಡಿದ್ದರು. ಆದರೆ ಸದ್ಯ ತಾವು ಸೀಮಿತ ಓವರ್ ಗಳ ನಾಯಕತ್ವದಿಂದ ಕೆಳಗಿಳಿಯಲು ಕಾರಣವೇನು ಎಂಬುವುದನ್ನು ಖಾಸಗಿ ಕಾರ್ಯಕ್ರಮವೊಂದರಲ್ಲಿ ರಿವೀಲ್ ಮಾಡಿದ್ದಾರೆ.

    ರಾಂಚಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಈ ಕುರಿತು ಮಾತನಾಡಿರುವ ಧೋನಿ, ಕೊಹ್ಲಿ ತಂಡದ ನಾಯಕತ್ವ ವಹಿಸಲು ಈ ನಿರ್ಧಾರ ಮಾಡಿದ್ದೆ. ಏಕೆಂದರೆ 2019ರ ಐಸಿಸಿ ವಿಶ್ವಕಪ್‍ಗೆ ತಂಡವನ್ನು ಸಿದ್ಧಪಡಿಸಲು ಹೊಸ ನಾಯಕತ್ವ ವಹಿಸುವ ಆಟಗಾರನಿಗೆ ಸಮಯವಕಾಶ ನೀಡಬೇಕಿತ್ತು. ಅಲ್ಲದೇ ಶಕ್ತಿಶಾಲಿ ತಂಡ ಕಟ್ಟುವ ಅವಕಾಶ ನೀಡಲು ನಾಯಕತ್ವದಿಂದ ಕೆಳಗಿಳಿಯಲೇ ಬೇಕಾಗಿತ್ತು ಎಂದು ತಂಡದ ಭವಿಷ್ಯ ಕುರಿತ ತಮ್ಮ ಪ್ಲಾನ್ ಅನ್ನು ಬಿಚ್ಚಿಟ್ಟಿದ್ದಾರೆ.

    ಪ್ರತಿಯೊಂದು ತಂಡದ ನಾಯಕ ಕೂಡ ತನ್ನ ತಂಡದಲ್ಲಿ ಬಲಿಷ್ಠ ಆಟಗಾರರು ಇರಲು ಬಯಸುತ್ತಾನೆ. ಅದರಂತೆ ವಿಶ್ವಕಪ್ ಟೂರ್ನಿಯನ್ನು ಎದುರಿಸಲು ಟೀಂ ಇಂಡಿಯಾಗೆ ಸಿದ್ಧತೆ ನಡೆಸಲು ಸಾಕಷ್ಟು ಸಮಯವಕಾಶ ಅಗತ್ಯವಿದೆ ಎಂದು ಹೇಳಿದ್ದಾರೆ.

    ಇದೇ ವೇಳೆ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯ ಸೋಲಿನ ಕುರಿತ ಪ್ರಶ್ನೆಗೆ ಉತ್ತರಿಸಿರುವ ಧೋನಿ, ಇಂಗ್ಲೆಂಡ್ ಸರಣಿ ಹಲವು ಸವಾಲುಗಳಿಂದ ಕೂಡಿದ ಕಾರಣ ಟೂರ್ನಿಗೂ ಮೊದಲು ತಂಡಕ್ಕೆ ಕೆಲ ತರಬೇತಿ ಅಗತ್ಯವಿತ್ತು. ಅದರಲ್ಲೂ ಬ್ಯಾಟ್ಸ್ ಮನ್ ಗಳಿಗೆ ಸರಣಿಯಲ್ಲಿ ಸಾಕಷ್ಟು ಸವಾಲುಗಳು ಎದುರಾಗಿತ್ತು ಎಂದು ತಿಳಿಸಿದ್ದಾರೆ.

    ಸೀಮಿತ ಓವರ್ ಗಳ ಪಂದ್ಯಗಳ ನಾಯಕತ್ವ ತೋರೆಯುವ ಮುನ್ನವೂ ಇಂತಹದ್ದೇ ದಿಢೀರ್ ನಿರ್ಧಾರ ಕೈಗೊಂಡಿದ್ದ ಧೋನಿ 2014 ರ ಆಸೀಸ್ ಟೆಸ್ಟ್ ಟೂರ್ನಿಯ ಮಧ್ಯದಲ್ಲೇ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದಿದ್ದರು. ಅಲ್ಲದೇ ನಾಯಕತ್ವದಿಂದ ಕೆಳಗಿಳಿಯುತ್ತಿದಂತೆ ಟೆಸ್ಟ್ ಕ್ರಿಕೆಟ್‍ಗೆ ನಿವೃತ್ತಿಯನ್ನು ಘೋಷಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಥೈಲ್ಯಾಂಡ್ ಗುಹೆಯಲ್ಲಿ ಸಿಲುಕಿದ್ದ ಎಲ್ಲ ಮಕ್ಕಳು 17 ದಿನಗಳ ಬಳಿಕ ಹೊರಬಂದ್ರು!

    ಥೈಲ್ಯಾಂಡ್ ಗುಹೆಯಲ್ಲಿ ಸಿಲುಕಿದ್ದ ಎಲ್ಲ ಮಕ್ಕಳು 17 ದಿನಗಳ ಬಳಿಕ ಹೊರಬಂದ್ರು!

    ಚಿಯಾಂಗ್ ರಾಯ್: 17 ದಿನಗಳ ನಿರಂತರ ಕಾರ್ಯಾಚರಣೆ ಮೂಲಕ ಥೈಲ್ಯಾಂಡ್ ಥಮ್ ಲುವಾಂಗ್ ಗುಹೆಯಲ್ಲಿ ಸಿಲುಕಿದ್ದ 13 ಮಂದಿಯನ್ನು ರಕ್ಷಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಗುಹೆಯಲ್ಲಿ ಒಟ್ಟು 19 ಮಂದಿ ಡೈವರ್ (ಮುಳುಗು ತಜ್ಞರು) ಹೋಗಿದ್ದು, ಹಂತ ಹಂತವಾಗಿ 12 ಜನ ಮಕ್ಕಳು ಹಾಗೂ ಒಬ್ಬ ಕೋಚ್ ಅನ್ನು ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನು ಓದಿ: ಥೈಲ್ಯಾಂಡ್ ಗುಹೆಯಲ್ಲಿ ಸಿಲುಕಿದ ಮಕ್ಕಳು: ಗುಹೆಯ ವಿಶೇಷತೆ ಏನು? ಸಿಲುಕಿದ್ದು ಹೇಗೆ? ಏನಿದು ಕಾರ್ಯಾಚರಣೆ?

    ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಡೈವರ್ ಸೇರಿದಂತೆ ಅನೇಕ ನುರಿತ ತಜ್ಞರ ತಂಡಕ್ಕೆ ವಿಶ್ವದ ನಾಯಕರಿಂದ ಪ್ರಶಂಸನೆ ಕೇಳಿ ಬರುತ್ತಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟ್ವೀಟ್ ಮಾಡುವ ಮೂಲಕ ರಕ್ಷಣಾ ಕಾರ್ಯದಲ್ಲಿ ಭಾಗವಹಿದ್ದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. 17 ದಿನಗಳ ಕಾಲ ಹಗಲು ರಾತ್ರಿ ಎನ್ನದೇ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗಿತ್ತು.

    ಪಾರಾದ ಎಲ್ಲ ಮಕ್ಕಳು ಈ ಬಾರಿಯ ಫಿಫಾ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಣೆಯ ಟಿಕೆಟ್ ಸಿಕ್ಕಿದೆ. ಜುಲೈ 15 ರಂದು ನಡೆಯಲಿರುವ ಫೈನಲ್ ಪಂದ್ಯಕ್ಕು ಮುನ್ನ ಈ ಮಕ್ಕಳು ಗುಹೆಯಿಂದ ಪಾರಾದರೆ ಅವರಿಗೆ ಈ ಪಂದ್ಯದ ಟಿಕೆಟ್ ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಫಿಫಾ ಅಧ್ಯಕ್ಷರು ಈ ಹಿಂದೆ ಪ್ರಕಟಿಸಿದ್ದರು.

  • ಧೋನಿಯಲ್ಲಿನ ನಾಯಕತ್ವ ಗುಣವನ್ನು ಗುರುತಿಸಿದ್ದು ಹೇಗೆ ಎಂದು ಸಚಿನ್ ವಿವರಿಸಿದ್ರು

    ಧೋನಿಯಲ್ಲಿನ ನಾಯಕತ್ವ ಗುಣವನ್ನು ಗುರುತಿಸಿದ್ದು ಹೇಗೆ ಎಂದು ಸಚಿನ್ ವಿವರಿಸಿದ್ರು

    ಮುಂಬೈ: ಸ್ಲಿಪ್ ನಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಧೋನಿಯಲ್ಲಿರುವ ನಾಯಕತ್ವ ಗುಣವನ್ನು ಗುರುತಿಸಿದ್ದಾಗಿ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

    ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಸಚಿನ್, ಪಂದ್ಯದ ವೇಳೆ ತಾನು ಸ್ಲೀಪ್ ನಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಧೋನಿ ಜೊತೆ ಹೆಚ್ಚು ಮಾತನಾಡುತ್ತಿದ್ದೆ. ಅಲ್ಲದೇ ಫೀಲ್ಡಿಂಗ್ ಆಯ್ಕೆ ಮಾಡುವ, ಬೌಲರ್ ಸಲಹೆ ನೀಡುವ ಕುರಿತು ನನ್ನ ಅಭಿಪ್ರಾಯ ತಿಳಿಸಿ ಪ್ರತಿಕ್ರಿಯೆ ಪಡೆಯುತ್ತಿದೆ. ಈ ವೇಳೆ ಧೋನಿ ಅವರ ನಾಯಕತ್ವದ ಗುಣಗಳನ್ನು ಗುರುತಿಸಿದೆ ಎಂದು ಹೇಳಿದ್ದಾರೆ.

    ಇದೇ ವೇಳೆ ತಮ್ಮ ಕೊನೆಯ ಟೆಸ್ಟ್ ಪಂದ್ಯದ ಬಗ್ಗೆ ನೆನೆಸಿಕೊಂಡ ಅವರು, ಅಂದು ಧೋನಿ ಪಂದ್ಯದ ಮಧ್ಯೆ ತನ್ನನ್ನು ತಂಡದ ಜೊತೆ ಕೆಲ ಸಮಯ ದೂರವಿರುವಂತೆ ಕೇಳಿದರು. ತಮ್ಮ ವಿದಾಯಕ್ಕಾಗಿ ಧೋನಿ ಪ್ಲಾನ್ ಮಾಡುತ್ತಿದ್ದರು. ಈ ವೇಳೆ ತಮಗೇ ನಿವೃತ್ತಿಯ ನೆನಪಾಯಿತು ಎಂದು ತಮ್ಮ ತಾಯಿಯನ್ನು ನೆನೆದರು. ಅಲ್ಲದೇ ಆ ವೇಳೆ ತಾವು ತುಂಬಾ ಭಾವುಕರಾಗಿದ್ದಾಗಿ ತಿಳಿಸಿದರು. ಅಲ್ಲದೇ ತಮ್ಮ ಪತ್ನಿ ಅಂಜಲಿಯೂ ಎಂದು ಕ್ರೀಡಾಂಗಣಕ್ಕೆ ಆಗಮಿಸಿ ತಮ್ಮ ಬ್ಯಾಟಿಂಗ್ ನೋಡಿಲ್ಲ ಎಂದು ತಿಳಿಸಿದರು.

    ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಟೀಂ ಇಂಡಿಯಾ 2007 ರ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಿತ್ತು. ಆದ್ರೆ ಟೂರ್ನಿಯ ಬಳಿಕ ರಾಹುಲ್ ದ್ರಾವಿಡ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಈ ವೇಳೆ ಟೀಂ ಇಂಡಿಯಾ ನಾಯಕತ್ವವನ್ನು ಧೋನಿ ಅವರಿಗೆ ನೀಡಲಾಯಿತು. ಧೋನಿ ನಾಯಕತ್ವ ವಹಿಸುವುದಕ್ಕೆ ಸಚಿನ್ ಅವರ ಸಲಹೆಯೂ ಪ್ರಮುಖ ಪಾತ್ರ ವಹಿಸಿತ್ತು.

    ಸಚಿನ್ ಅವರ ವೃತ್ತಿ ಬದುಕಿನಲ್ಲಿ ಒಮ್ಮೆ ಮಾತ್ರ ಅವರ ಪತ್ನಿ ಅಂಜಲಿ ಅವರು ಕ್ರೀಡಾಂಗಣಕ್ಕೆ ಬಂದು ಪಂದ್ಯ ವೀಕ್ಷಿಸಿದರು. ಟೀಂ ಇಂಡಿಯಾ 2003-04 ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಈ ವೇಳೆ ಮೆಲ್ಬರ್ನ್ ನಲ್ಲಿ ನಡೆದ ಪಂದ್ಯಕ್ಕೆ ಸಚಿನ್ ಅವರ ಪತ್ನಿ ಅಂಜಲಿ ಆಗಮಿಸಿದ್ದರು. ಆದ್ರೆ ಈ ಪಂದ್ಯದಲ್ಲಿ ಸಚಿನ್ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದರು. ಈ ಪಂದ್ಯದ ಬಳಿಕ ಅಂಜಲಿ ಅವರು ಸಚಿನ್ ಅವರ ಕೊನೆಯ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಆಗಮಿಸಿದ್ದರು.

  • 2019ರ ವಿಶ್ವಕಪ್ ಗೆದ್ದರೆ ಕೊಹ್ಲಿ ಶರ್ಟ್ ಬಿಚ್ಚಿ ಸಂಭ್ರಮಿಸುತ್ತಾರೆ: ಸೌರವ್ ಗಂಗೂಲಿ

    2019ರ ವಿಶ್ವಕಪ್ ಗೆದ್ದರೆ ಕೊಹ್ಲಿ ಶರ್ಟ್ ಬಿಚ್ಚಿ ಸಂಭ್ರಮಿಸುತ್ತಾರೆ: ಸೌರವ್ ಗಂಗೂಲಿ

    ಕೋಲ್ಕತ್ತಾ: ಟೀಂ ಇಂಡಿಯಾ ಮುಂಬರುವ 2019ರ ವಿಶ್ವಕಪ್ ಕಪ್ ಗೆದ್ದರೆ ನಾಯಕ ವಿರಾಟ್ ಕೊಹ್ಲಿ ತಮ್ಮ ಶರ್ಟ್ ಬಿಚ್ಚಿ ಇಂಗ್ಲೆಂಡ್ ನ ಆಕ್ಸ್ ಫರ್ಡ್ ಬೀದಿಗಳಲ್ಲಿ ಕಪ್ ಹಿಡಿದು ಸಂಭ್ರಮಿಸುತ್ತಾರೆ ಎಂದು ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.

    ಭಾರತದ ಇತಿಹಾಸ ತಜ್ಞ ಬೋರಿಯಾ ಮಜುಂದಾರ್ ಅವರ `ಎಲೆವೆನ್ ಗಾಡ್ಸ್ ಅಂಡ್ ಎ ಬಿಲಿಯನ್ ಇಂಡಿಯನ್ಸ್’ ಕೃತಿ ಬಿಡುಗಡೆ ಸಮಾರಂಭದಲ್ಲಿ ಕೊಹ್ಲಿಯೊಂದಿಗೆ ಭಾಗವಹಿಸಿದ ವೇಳೆ ಸೌರವ್ ಈ ಮಾತು ಹೇಳಿದ್ದಾರೆ.

    ಕ್ರಿಕೆಟ್ ಕಾಶಿ ಎಂದೇ ಹೆಸರು ಪಡೆದಿರುವ ಇಂಗ್ಲೆಂಡ್ ನಲ್ಲಿ ನಾಟ್ ವೆಸ್ಟ್ ಕ್ರಿಕೆಟ್ ಸರಣಿಯ ಫೈನಲ್ ಪಂದ್ಯ ಗೆದ್ದ ವೇಳೆ ಗಂಗೂಲಿ ತಮ್ಮ ಶರ್ಟ್ ಬಿಚ್ಚಿ ಸಂಭ್ರಮಿಸಿದರು. ಈ ಘಟನೆಯನ್ನು ಕಾರ್ಯಕ್ರಮದ ವೇಳೆ ನೆನಪಿಸಿಕೊಂಡ ಗಂಗೂಲಿ, ಮುಂದಿನ 2019 ರ ವಿಶ್ವಕಪ್ ಅನ್ನು ಟೀಂ ಇಂಡಿಯಾ ಗೆದ್ದರೆ ಕೊಹ್ಲಿ ಸಹ ಶರ್ಟ್ ಬಿಚ್ಚಿ ಸಂಭ್ರಮಿಸುತ್ತಾರೆ. ಕ್ಯಾಮೆರಾಗಳಿಗೆ ಕೊಹ್ಲಿ ಅವರ ಸಿಕ್ಸ್ ಪ್ಯಾಕ್ ಕಾಣಲಿದೆ ಎಂದರು. ಈ ವೇಳೆ ಪಕ್ಕದಲ್ಲೇ ಕುಳಿತಿದ್ದ ಕೊಹ್ಲಿ, ಗಂಗೂಲಿ ಮಾತಿಗೆ ಸಮ್ಮತಿಸಿದರು.

    ಮುಂಬರುವ ಇಂಗೆಂಡ್ ಹಾಗೂ ಆಸ್ಟ್ರೇಲಿಯಾ ಸರಣಿಯಲ್ಲೂ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡುತ್ತದೆ ಎಂಬ ವಿಶ್ವಾಸವನ್ನು ಗಂಗೂಲಿ ವ್ಯಕ್ತಪಡಿಸಿದರು.

    ಗಂಗೂಲಿ ಶರ್ಟ್ ಬಿಚ್ಚಿ ಸಂಭ್ರಮಿಸಿದ್ದು ಏಕೆ?
    2002 ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿ 3-3 ಸಮಬಲದೊಂದಿಗೆ ಮುಕ್ತಾಯಗೊಂಡಿತ್ತು. ಮುಂಬೈನಲ್ಲಿ ನಡೆದ 6ನೇ ಪಂದ್ಯದಲ್ಲಿ ಭಾರತ ಕೊನೆಯ 6 ಎಸೆತದಲ್ಲಿ 2 ವಿಕೆಟ್ ಗಳ ಸಹಾಯದಿಂದ 11 ರನ್ ಗಳನ್ನು ಗಳಿಸಬೇಕಿತ್ತು. ಫ್ಲಿಂಟಾಫ್ ಎಸೆದ ಕೊನೆಯ ಓವರ್ ನಲ್ಲಿ ಭಾರತ ಎಲ್ಲ ವಿಕೆಟ್ ಕಳೆದುಕೊಂಡು 250 ರನ್‍ಗಳಿಗೆ ಆಲೌಟ್ ಆಗಿತ್ತು. 5 ರನ್ ಗಳಿಂದ ಪಂದ್ಯ ಜಯಿಸಿದ್ದನ್ನು ಕಂಡ ಫ್ಲಿಂಟಾಫ್ ಶರ್ಟ್ ಬಿಚ್ಚಿ ಸಂಭ್ರಮಿಸಿದ್ದರು.

    ಈ ಸರಣಿಯ ನಂತರ ನಾಟ್‍ವೆಸ್ಟ್ ಸರಣಿಯಲ್ಲಿ ಪಾಲ್ಗೊಂಡಲು ಟೀಂ ಇಂಡಿಯಾ ಇಂಗ್ಲೆಂಡಿಗೆ ಪ್ರಯಾಣಿಸಿತ್ತು. ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಸೋಲುವತ್ತ ಮುಖಮಾಡಿತ್ತು. 325 ರನ್ ಗಳ ಗುರಿಯನ್ನು ಬೆನ್ನಟ್ಟಿದ್ದ ಭಾರತ 146 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಜೊತೆಯಾದ ಮೊಹಮ್ಮದ್ ಕೈಫ್ ಮತ್ತು ಯುವರಾಜ್ 7ನೇ ವಿಕೆಟ್‍ಗೆ 121 ರನ್ ಜೊತೆಯಾಟವಾಡಿ ಭಾರತಕ್ಕೆ ಗೆಲುವವನ್ನು ತಂದುಕೊಟಿದ್ದರು. ಕೈಫ್ ಔಟಾಗದೇ 87 ರನ್ ಹೊಡೆದಿದ್ದರೆ ಯುವರಾಜ್ 69 ರನ್ ಹೊಡೆದಿದ್ದರು. ಅಂತಿಮವಾಗಿ ಇನ್ನೂ 3 ಎಸೆತ ಬಾಕಿ ಇರುವಂತೆಯೇ ಭಾರತ ಪಂದ್ಯವನ್ನು ಗೆದ್ದಿತ್ತು. ಭಾರತ ಜಯಗಳಿಸಿದ್ದನ್ನು ಕಂಡು ನಾಯಕ ಸೌರವ್ ಗಂಗೂಲಿ ಶರ್ಟ್ ಬಿಚ್ಚಿ ಸಂತಸ ವ್ಯಕ್ತಪಡಿಸಿದ್ದರು.

  • ಐಸಿಸಿ ವಿಶ್ವಕಪ್ ಗೆ ಅರ್ಹತೆ ಪಡೆದ  ಅಫ್ಘಾನಿಸ್ತಾನ- 2019ರ ವಿಶ್ವಕಪ್ ತಂಡಗಳ ಪಟ್ಟಿ ಇಂತಿದೆ

    ಐಸಿಸಿ ವಿಶ್ವಕಪ್ ಗೆ ಅರ್ಹತೆ ಪಡೆದ ಅಫ್ಘಾನಿಸ್ತಾನ- 2019ರ ವಿಶ್ವಕಪ್ ತಂಡಗಳ ಪಟ್ಟಿ ಇಂತಿದೆ

    ನವದೆಹಲಿ: 2019ರ ಐಸಿಸಿ ವಿಶ್ವಕಪ್ ಅರ್ಹತಾ ಟೂರ್ನಿಯ ಸೂಪರ್ ಸಿಕ್ಸ್ ನಿರ್ಣಾಯಕ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಅಪ್ಘಾನಿಸ್ತಾನ ಗೆಲುವು ಪಡೆದಿದೆ. ಈ ಮೂಲಕ ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ನಡೆಯುವ 2019 ರ ವಿಶ್ವಪಕ್‍ಗೆ ಅಫ್ಘಾನಿಸ್ತಾನ ಅರ್ಹತೆ ಪಡೆದುಕೊಂಡಿದೆ.

     ಅಫ್ಘಾನಿಸ್ತಾನ ತಂಡ ಗೆಲುವು ಪಡೆಯುತ್ತಿದಂತೆ ಆಟಗಾರರ ಸಂತೋಷ ಮೇರೆ ಮೀರಿದ್ದು, ಡ್ರೆಸಿಂಗ್ ರೂಮ್ ನಲ್ಲಿ ಆಟಗಾರರು ಕುಣಿದು ಕುಪ್ಪಳಿಸಿದ್ದಾರೆ. ಅ ಅಫ್ಘಾನ್ ಗೆಲುವಿನೊಂದಿಗೆ 2019 ರ ಟೂರ್ನಿಯಲ್ಲಿ ಭಾಗವಹಿಸುವ 10 ತಂಡಗಳ ಪಟ್ಟಿ ಖಚಿತವಾಗಿದೆ.

    ಒಂದು ಹಂತದಲ್ಲಿ ಅಫ್ಘಾನ್ ಅರ್ಹತಾ ಟೂರ್ನಿಯಲ್ಲಿ ತೇರ್ಗಡೆ ಹೊಂದುವುದು ಬಹುತೇಕ ಕಠಿಣವಾಗಿತ್ತು. ಟೂರ್ನಿಯ ಆರಂಭದ ಮೂರು ಪಂದ್ಯಗಳಲ್ಲಿ ಅಫ್ಘಾನ್ ತಂಡ ಸೋಲು ಕಂಡಿತ್ತು. ಆದರೆ ಕೊನೆಯ ಹಂತದಲ್ಲಿ ಅಮೋಘ ಪ್ರದರ್ಶನ ನೀಡಿ ವಿಶ್ವಕಪ್ ಗೆ ಅರ್ಹತೆ ಪಡೆಯಿತು. ವಿಶ್ವಕಪ್ ಟೂರ್ನಿಗೆ ಆಯ್ಕೆ ಆಗುತ್ತಿದಂತೆ ಅಫ್ಘಾನಿಸ್ತಾನ ಆಟಗಾರರು ಡ್ರೆಸಿಂಗ್ ರೂಮ್‍ನಲ್ಲಿ `ವಿ ಆರ್ ಇನ್’ ಎಂದು ಕುಣಿದು ಕುಪ್ಪಳಿಸಿದ್ದಾರೆ. ಸದ್ಯ ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    2019ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ, ಆಸ್ಟ್ರೇಲಿಯಾ, ಶ್ರೀಲಂಕಾ, ಇಂಗ್ಲೆಂಡ್, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಪಾಕಿಸ್ತಾನ, ವೆಸ್ಟ್ ಇಂಡೀಸ್ ಹಾಗೂ ಅಫ್ಘಾನಿಸ್ತಾನ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. 2019 ರ ಟೂರ್ನಿ ಮೇ 30ರಿಂದ ಜುಲೈ 14ರ ವರೆಗೆ ನಡೆಯಲಿದೆ.

  • ಉಳಿದವರಿಗೆ ಕಡಿಮೆ ನೀಡಿ, ನನಗೆ ಮಾತ್ರ ಜಾಸ್ತಿ ನಗದು ಬಹುಮಾನ ಯಾಕೆ: ರಾಹುಲ್ ದ್ರಾವಿಡ್

    ಉಳಿದವರಿಗೆ ಕಡಿಮೆ ನೀಡಿ, ನನಗೆ ಮಾತ್ರ ಜಾಸ್ತಿ ನಗದು ಬಹುಮಾನ ಯಾಕೆ: ರಾಹುಲ್ ದ್ರಾವಿಡ್

    ಬೆಂಗಳೂರು: ಟೀಂ ಇಂಡಿಯಾ ಅಂಡರ್ 19 ತಂಡ ವಿಶ್ವಕಪ್ ಗೆದ್ದ ಬಳಿಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನೀಡಿದ ನಗದು ಬಹುಮಾನದಲ್ಲಿನ ತಾರತಮ್ಯಕ್ಕೆ ಕೋಚ್ ರಾಹುಲ್ ದ್ರಾವಿಡ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಅಂಡರ್ 19 ತಂಡ ಐಸಿಸಿ ವಿಶ್ವಕಪ್ ಮೂಡಿಗೆರಿಸಿಕೊಳ್ಳುವ ಮೂಲಕ ವಿಶ್ವದ ಕ್ರಿಕೆಟ್ ಗಮನ ಸೆಳೆದಿತ್ತು. ತಂಡದ ಸಾಧನೆಗೆ ರಾಹುಲ್ ದ್ರಾವಿಡ್ ಅವರಿಗೆ 50 ಲಕ್ಷ ರೂ., ತಂಡದ ಸಿಬ್ಬಂದಿಗೆ 20 ಲಕ್ಷ ರೂ., ಆಟಗಾರಿಗೆ ತಲಾ 30 ಲಕ್ಷ ರೂ. ಬಹುಮಾನ ಘೋಷಿಸಿತ್ತು.  ಇದನ್ನೂ ಓದಿ: ಯುವಿಪಾಜಿ ನನಗೆ ತುಂಬಾ ಸಹಾಯ ಮಾಡಿದ್ದಾರೆ: ಶುಬ್‍ಮನ್ ಗಿಲ್

    ಪ್ರಸ್ತುತ ಬಿಸಿಸಿಐನ ಈ ನಡೆ ಬಗ್ಗೆ ರಾಹುಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶ್ವಕಪ್ ಗೆದ್ದಿರುವುದರ ಹಿಂದೆ ತಂಡದ ಎಲ್ಲ ಸಿಬ್ಬಂದಿಯ ಶ್ರಮವಿದೆ. ಎಲ್ಲ ಸಿಬ್ಬಂದಿಗೆ ಒಂದೇ ರೀತಿಯ ಬಹುಮಾನ ನೀಡಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮ ಸುದ್ದಿಯನ್ನು ಪ್ರಕಟಿಸಿದೆ. ಇದನ್ನೂ ಓದಿ: 2003ರ ಸೋಲಿಗೆ ಸೇಡು ತೀರಿಸಿಕೊಂಡ ದ್ರಾವಿಡ್!

    ಅಲ್ಲದೇ ವಿಶ್ವಕಪ್ ಗೆದ್ದ ಬಳಿಕ ಮಾತನಾಡಿದ್ದ ಅವರು ತಂಡದ ಗೆಲುವು ಎಲ್ಲರ ಪರಿಶ್ರಮದಿಂದ ಸಾಧ್ಯವಾಯಿತು. ಆದರೆ ಈ ವೇಳೆ ನನ್ನನ್ನು ಮಾತ್ರ ಹೈಲೆಟ್ ಮಾಡಲಾಗುತ್ತಿದೆ. ಇದರಿಂದ ಸ್ಪಲ್ಪ ಮುಜುಗರ ಉಂಟಾಗುತ್ತದೆ. ಆದರೆ ತಂಡದ ಪ್ರತಿಯೊಬ್ಬ ಸಿಬ್ಬಂದಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಈ ವೇಳೆ ಅವರ ಹೆಸರನ್ನು ಪ್ರಸ್ತಾಪಿಸುವುದಿಲ್ಲ. ಆದರೆ ನಾವೆಲ್ಲರೂ ಈ ಮಕ್ಕಳಿಗೆ ಉತ್ತಮ ಬೆಂಬಲ ನೀಡಿದ್ದೇವೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ದ್ರಾವಿಡ್ ಖಡಕ್ ಸೂಚನೆಗೆ ಒಲಿಯಿತು ಅಂಡರ್ 19 ವಿಶ್ವಕಪ್!

    ಈ ಹಿಂದೆ ಭಾರತ `ಎ’ ತಂಡದ ಕೋಚ್ ಆಗಿದ್ದ ರಾಹುಲ್ ಅವರು ಮೂರು ವರ್ಷಗಳ ಕಾಲ ವಾರ್ಷಿಕವಾಗಿ 4 ಕೋಟಿ ರೂ. ಪಡೆಯುತ್ತಿದ್ದರು. ಇದನ್ನೂ ಓದಿ: ವಿಶ್ವಕಪ್ ಗೆದ್ದ ಅಂಡರ್-19 ತಂಡಕ್ಕೆ ಬಿಸಿಸಿಐ ನಗದು ಬಹುಮಾನ ಘೋಷಣೆ

  • ಕನ್ನಡಿಗ ರಾಹುಲ್ ದ್ರಾವಿಡ್‍ ಬಗ್ಗೆ ಮೋದಿ ಪ್ರಶಂಸೆ

    ಕನ್ನಡಿಗ ರಾಹುಲ್ ದ್ರಾವಿಡ್‍ ಬಗ್ಗೆ ಮೋದಿ ಪ್ರಶಂಸೆ

    ಬೆಂಗಳೂರು: ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಐಸಿಸಿ ಅಂಡರ್ 19 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ ಕನ್ನಡಿಗ ರಾಹುಲ್ ದ್ರಾವಿಡ್‍ ರನ್ನು ಹೆಸರು ಪ್ರಸ್ತಾಪಿಸಿ ಹಾಡಿ ಹೊಳಿಸಿದ್ದಾರೆ.

    ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ ತಮ್ಮ ಮೊದಲ ಐದು ನಿಮಿಷದ ಭಾಷಣವನ್ನು ಕನ್ನಡದಲ್ಲೇ ಮಾಡಿದರು. ಈ ವೇಳೆ ಕನ್ನಡ ನಾಡಿನ ಹೆಮ್ಮೆಯ ನಾಡಪ್ರಭೂ ಕೆಂಪೇಗೌಡ, ಬಸವೇಶ್ವರ, ಮಾದರ ಚನ್ನಯ್ಯ, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ರನ್ನು ನೆನೆದರು. ಕರ್ನಾಟಕ ಮಹಾಪುರುಷರ ನಾಡು ನವ ಕರ್ನಾಟಕ ನಿರ್ಮಾಣಕ್ಕೆ ಬಿಜೆಪಿ ಯನ್ನು ಗೆಲ್ಲಿಸಿ ಕಾರ್ಯಕರ್ತರಿಗೆ ಕರೆ ನೀಡಿದರು.

    ಇದೇ ವೇಳೆ ರಾಹುಲ್ ದ್ರಾವಿಡ್ ರನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ ಐಸಿಸಿ ಅಂಡರ್ 19 ವಿಶ್ವಕಪ್ ಗೆಲ್ಲವು ಹಿಂದೆ ದ್ರಾವಿಡ್ ಅವರ ಶ್ರಮ ಹೆಚ್ಚು. ಟೀ ಇಂಡಿಯಾ ವಿಶ್ವಕಪ್ ಗೆಲುವಿನ ಹಿಂದೆ ಕನ್ನಡ ಮಣ್ಣಿನ ದ್ರಾವಿಡ್ ಇದ್ದಾರೆ ಎಂದರು.

    ಕನ್ನಡಿಗ ರಾಹುಲ್ ದ್ರಾವಿಡ್‍ ಅವರ ಮಾರ್ಗರ್ದಶನದಲ್ಲಿ ಐಸಿಸಿ ವಿಶ್ವಕಪ್ ಟೂರ್ನಿ ಎದುರಿಸಿದ್ದ ಅಂಡರ್ 19 ತಂಡ ಅದ್ಭುತ ಪ್ರದರ್ಶನ ನೀಡಿ ವಿಶ್ವಕಪ್ ಮುಡಿಗೆರಿಸಿಕೊಂಡಿತ್ತು. ಫೈನಲ್ ನಲ್ಲಿ ಆಸ್ಟ್ರೇಲಿಯಾವನ್ನು 8 ವಿಕೆಟ್ ಗಳಿಂದ ಬಗ್ಗು ಬಡಿದು ಭಾರತ ನಾಲ್ಕನೇಯ ಬಾರಿ ಅಂಡರ್ 19 ವಿಶ್ವಕಪ್ ಜಯಿಸಿತ್ತು. ಟೀಂ ಇಂಡಿಯಾ ಯುವ ಪಡೆಯ ಕೋಚ್ ಹಾಗೂ ಮಾರ್ಗದರ್ಶರಾಗಿದ್ದ ರಾಹುಲ್ ದ್ರಾವಿಡ್ ಆಟಗಾರರಿಗೆ ಉತ್ತಮ ತರಬೇತಿ ನೀಡಿದ್ದರು. ಅಲ್ಲದೇ ಆಟಗಾರರ ಮನಸ್ಸು ಕೇವಲ ಪಂದ್ಯದ ಕಡೆ ಗಮನ ಹರಿಸುವಂತೆ ಐಪಿಎಲ್ ಹರಾಜಿನ ಬಗ್ಗೆ ತಲೆ ಕೆಡಿಸಿಕೊಡದಂತೆ ಸಲಹೆ ನೀಡಿದ್ದರು. ಟೀ ಇಂಡಿಯಾ ಸೆಮಿ ಫೈನಲ್ ಪ್ರವೇಶಿಸುತ್ತಿದಂತೆ ಆಟಗಾರರ ಮೊಬೈಲ್ ಫೋನ್ ಆಫ್ ಮಾಡುವಂತೆಯೂ ಖಡಕ್ ಸೂಚನೆ ನೀಡಿದ್ದರು. ದ್ರಾವಿಡ್ ರ ಮಾತನ್ನು ಚಾಚು ತಪ್ಪದೆ ಪಾಲಿಸಿದ್ದ ಟೀಂ ಇಂಡಿಯಾ ಆಟಗಾರರು ವಿಶ್ವಕಪ್ ಗೆದ್ದು ವಿಜಯಪತಾಕೆಯನ್ನು ಹಾರಿಸಿದ್ದರು.

  • ಮದುವೆ ಮನೆಯಲ್ಲಿ ಭಾರತದ ಬಾವುಟ ಹಿಡಿದು ವಧು- ವರನ ಸಂಭ್ರಮ

    ಮದುವೆ ಮನೆಯಲ್ಲಿ ಭಾರತದ ಬಾವುಟ ಹಿಡಿದು ವಧು- ವರನ ಸಂಭ್ರಮ

    ಚಾಮರಾಜನಗರ: ಭಾರತ ಕಿರಿಯರ ಕ್ರಿಕೆಟ್ ತಂಡ ವಿಶ್ವಕಪ್ ಜಯಿಸಿದ ಹಿನ್ನೆಲೆಯಲ್ಲಿ ಚಾಮರಾಜನಗರದಲ್ಲಿ ಮದುವೆ ಮಂಟಪದಲ್ಲಿ ವಧು- ವರರು ವಿಭಿನ್ನವಾಗಿ ಸಂಭ್ರಮಿಸಿದ್ದಾರೆ.

    ಶನಿವಾರ ನಡೆದ ಕಿರಿಯರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಗೆದ್ದ ಹಿನ್ನೆಲೆಯಲ್ಲಿ ದೇಶದ್ಯಾಂತ ಸಂಭ್ರಮಾಚರಣೆ ಮಾಡಲಾಗುತ್ತಿದೆ. ಆದರೆ ಚಾಮರಾಜನಗರದ ಭ್ರಮರಾಂಭ ಕಲ್ಯಾಣ ಮಂಟಪದಲ್ಲಿ ಇಂದು ನವ ಜೀವನಕ್ಕೆ ಕಾಲಿಡುತ್ತಿದ್ದ ಕೆ.ಆರ್ ಕಾರ್ತಿಕ್ ಮತ್ತು ಕೆ.ಪಿ ಶ್ವೇತಾ ಮದುವೆ ಮಂಟಪದಲ್ಲಿ ಭಾರತದ ಬಾವುಟ ಹಿಡಿದು ಸಂಭ್ರಮಪಟ್ಟರು.

    ಇದಲ್ಲದೇ ಆರತಕ್ಷತೆ ವೇಳೆ ಭಾರತದ ಕಿರಿಯ ಕ್ರಿಕೆಟ್ ತಂಡದ ಸದಸ್ಯರ ಬಾವುಟ ಹಿಡಿದು ಫೋಟೋ ಕ್ಲಿಕ್ ಮಾಡಿಸಿಕೊಂಡರು. ಈ ಮೂಲಕ ಈ ನವ ದಂಪತಿಗಳು ತಮ್ಮ ದೇಶ ಪ್ರೇಮ ಹಾಗೂ ಕ್ರಿಕೆಟ್ ಮೇಲೆ ಇರುವ ಒಲವನ್ನು ವ್ಯಕ್ತಪಡಿಸಿದರು. ಇದನ್ನೂ ಓದಿ: ವಿರಾಟ್ ಕೊಹ್ಲಿ, ಉನ್ಮುಕ್ತ್ ಚಾಂದ್ ದಾಖಲೆ ಮುರಿದ ಪೃಥ್ವಿ ಶಾ

  • ಡೈವ್ ಮಾಡಿ ಸೂಪರ್ ಕ್ಯಾಚ್ ಪಡೆದ ಹಾರ್ವಿಕ್- ವೈರಲ್ ವಿಡಿಯೋ ನೋಡಿ

    ಡೈವ್ ಮಾಡಿ ಸೂಪರ್ ಕ್ಯಾಚ್ ಪಡೆದ ಹಾರ್ವಿಕ್- ವೈರಲ್ ವಿಡಿಯೋ ನೋಡಿ

    ನವದೆಹಲಿ: ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತೀಯ ಆಟಗಾರು ಆಮೋಘ ಪ್ರದರ್ಶನ ನೀಡುವ ಮೂಲಕ ವಿಶ್ವ ಕ್ರಿಕೆಟ್ ಅಭಿಮಾನಿಗಳ ಮನ ಗೆದಿದ್ದಾರೆ. ಹಲವು ಗಣ್ಯರಿಂದ ಟೀಂ ಇಂಡಿಯಾಗೆ ಶುಭಾಶಯಗಳ ಮಹಾಪುರ ಹರಿದುಬಂದಿದೆ.

    ವಿಶ್ವಕಪ್ ಗೆಲುವು ಪಡೆಯಲು ತಂಡದ ಪ್ರತಿಯೊಬ್ಬ ಆಟಗಾರ ಸಹ ಸ್ಥಿರ ಪ್ರದರ್ಶನವೇ ಕಾರಣ ಎನ್ನಬಹುದು. ಅದರಲ್ಲೂ ಪ್ರಮುಖವಾಗಿಯೂ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸಿದ ಹಾರ್ವಿಕ್ ದೇಸಾಯಿ ಪ್ರದರ್ಶನ ಹೆಚ್ಚಿನ ಅಭಿಮಾನಿಗಳ ಗಮನ ಸೆಳೆದಿದೆ.  ಇದನ್ನೂ ಓದಿ: ನಾಲ್ಕನೇಯ ಬಾರಿ ಅಂಡರ್ 19 ವಿಶ್ವಕಪ್ ಜಯಿಸಿದ ಟೀಂ ಇಂಡಿಯಾ

    ಫೈನಲ್ ಪಂದ್ಯದಲ್ಲಿ ಹಾರ್ವಿಕ್ ದೇಸಾಯಿ ಪಡೆದ ಕ್ಯಾಚ್ ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟೀಂ ಇಂಡಿಯಾ ವೇಗಿ ಕಮಲೇಶ್ ನಾಗರಕೋಟಿ ಬೌಲಿಂಗ್ ನಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಜೇಸನ್ ಸಂಗಾ ಬ್ಯಾಟ್ ಗೆ ತಗಿದ ಆದ ಚೆಂಡ್ ಕೀಪರ್ ಬಲಕ್ಕೆ ಸಿಡಿಯಿತು. ಈ ವೇಳೆ ದೇಸಾಯಿ ಡೈವ್ ಮಾಡುವ ಮೂಲಕ ಕ್ಯಾಚ್ ಪಡೆದು ಸಂಗಾ ಪೆವಿಲಿಯನ್ ಕಡೆ ಮುಖಮಾಡಲು ಕಾರಣರಾದರು. ಆಸ್ಟ್ರೇಲಿಯಾ ಬ್ಯಾಂಟಿಂಗ್ ಪಟ್ಟಿಯಲ್ಲಿ ಸಂಗಾ ಅವರ ವಿಕೆಟ್ ಪ್ರಮುಖವಾಗಿದ್ದು ಈ ಮೂಲಕ ಆಸ್ಟ್ರೇಲಿಯಾ ಅಲ್ಪ ಮೊತ್ತಕ್ಕೆ ಕುಸಿಲು ಕಾರಣವಾಯಿತು. ಈ ಪಂದ್ಯದಲ್ಲಿ ವಿಕೆಟ್ ಹಿಂದೆ ಮೂರು ಕ್ಯಾಚ್‍ಗಳನ್ನು ಹಿಡಿದಿರುವ ದೇಸಾಯಿ ಒಂದು ರನೌಟ್ ಮಾಡಿ ಆಸ್ಟ್ರೇಲಿಯಾ ಕುಸಿತಕ್ಕೆ ಕಾರಣರಾಗಿದ್ದಾರೆ. ಇದನ್ನೂ ಓದಿ: 2003ರ ಸೋಲಿಗೆ ಸೇಡು ತೀರಿಸಿಕೊಂಡ ದ್ರಾವಿಡ್!

    ವಿಶ್ವ ಕ್ರಿಕೆಟ್‍ನಲ್ಲಿ ಸ್ಮರಣಿಯ ಸಾಧನೆ ಮಾಡುವ ಮೂಲಕ ಅಪಾರ ಅಭಿಮಾನಿಗಳನ್ನು ಪಡೆದಿರುವ ಧೋನಿ ಅವರಂತೆ ಆಗಬೇಕೆಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ದ್ರಾವಿಡ್ ಖಡಕ್ ಸೂಚನೆಗೆ ಒಲಿಯಿತು ಅಂಡರ್ 19 ವಿಶ್ವಕಪ್!

    ಇದನ್ನೂ ಓದಿ: ವಿಶ್ವಕಪ್ ಗೆದ್ದ ಅಂಡರ್-19 ತಂಡಕ್ಕೆ ಬಿಸಿಸಿಐ ನಗದು ಬಹುಮಾನ ಘೋಷಣೆ

  • ವಿಶ್ವಕಪ್ ಗೆದ್ದ ಅಂಡರ್-19 ತಂಡಕ್ಕೆ ಬಿಸಿಸಿಐ ನಗದು ಬಹುಮಾನ ಘೋಷಣೆ

    ವಿಶ್ವಕಪ್ ಗೆದ್ದ ಅಂಡರ್-19 ತಂಡಕ್ಕೆ ಬಿಸಿಸಿಐ ನಗದು ಬಹುಮಾನ ಘೋಷಣೆ

    ಮುಂಬೈ: ಐಸಿಸಿ ಅಂಡರ್ 19 ವಿಶ್ವಕಪ್ ನಲ್ಲಿ ಆಮೋಘ ಪ್ರದರ್ಶನ ನೀಡಿದ ಟೀಂ ಇಂಡಿಯಾ ಅಂಡರ್ 19 ಆಟಗಾರರ ತಂಡ ಪ್ರಶಸ್ತಿ ಗೆದ್ದ ಕೆಲವೇ ಕ್ಷಣಗಳಲ್ಲಿ ಬಿಸಿಸಿಐ ನಗದು ಬಹುಮಾನ ಘೋಷಿಸಿದೆ.

    ವಿಶ್ವಕಪ್ ಟೂರ್ನಿಯಲ್ಲಿ ಪೃಥ್ವಿ ಶಾ ನಾಯಕತ್ವದ ತಂಡ ಎಲ್ಲ ಪಂದ್ಯಗಳನ್ನು ಗೆಲ್ಲುವ ಮೂಲಕ ಫೈನಲ್ ಪ್ರವೇಶಿಸಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯ ಗೆದ್ದು ವಿಶ್ವಕಪ್ ಎತ್ತಿದೆ. ಇದನ್ನೂ ಓದಿ: ನಾಲ್ಕನೇಯ ಬಾರಿ ಅಂಡರ್ 19 ವಿಶ್ವಕಪ್ ಜಯಿಸಿದ ಟೀಂ ಇಂಡಿಯಾ

    ವಿಶ್ವಕಪ್ ಗೆದ್ದ ಬೆನ್ನಲ್ಲೇ ಬಿಸಿಸಿಐ ತಂಡದ ಎಲ್ಲಾ ಆಟಗಾರರಿಗೆ ತಲಾ 30 ಲಕ್ಷ ರೂ. ಬಹುಮಾನ ಘೋಷಿಸಿದೆ. ಅಲ್ಲದೇ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ರಾಹುಲ್ ಡ್ರಾವಿಡ್ ಅವರಿಗೆ 50 ಲಕ್ಷ ರೂ. ಬಹುಮಾನ ನೀಡಿದೆ. ತಂಡದ ಬೆಂಬಲವಾಗಿ ನಿಂತಿದ್ದ ಇತರೇ ಸಿಬ್ಬಂದಿ ಹಾಗೂ ಬೌಲಿಂಗ್ ಕೋಚ್ ಆಭಯ್ ಶರ್ಮಾ ಅವರು ತಲಾ 20 ಲಕ್ಷ ರೂ. ಪಡೆಯಲಿದ್ದಾರೆ.  ಇದನ್ನೂ ಓದಿ: 2003ರ ಸೋಲಿಗೆ ಸೇಡು ತೀರಿಸಿಕೊಂಡ ದ್ರಾವಿಡ್!

    ಅಜೇಯ ತಂಡ: ಟೀಂ ಇಂಡಿಯಾ-19 ತಂಡ ಈ ಬಾರಿಯ ವಿಶ್ವಕಪ್‍ನಲ್ಲಿ ಎಲ್ಲ ತಂಡಗಳಿಗೂ ಪೈಪೋಟಿ ನೀಡಿ ಆಜೇಯವಾಗಿ ವಿಶ್ವಕಪ್ ಗೆದ್ದು ಬಿಗಿದೆ. ಟೂರ್ನಿಯ ಲೀಗ್ ಹಂತದಲ್ಲಿ ಯಾವುದೇ ಪಂದ್ಯವನ್ನು ಸೋತಿಲ್ಲ. ಟೀಂ ಇಂಡಿಯಾ ಬ್ಯಾಟಿಂಗ್, ಬೌಲಿಂಗ್ ಫಿಲ್ಡೀಂಗ್ ಸೇರಿದಂತೆ ಎಲ್ಲಾ ಪ್ರಕಾರಗಳಲ್ಲೂ ಉತ್ತಮ ಪ್ರದರ್ಶನವನ್ನು ನೀಡಿತ್ತು. ತಂಡದ ಪ್ರತಿಯೊಬ್ಬ ಆಟಗಾರರನ ಸ್ಥಿರ ಪ್ರದರ್ಶನ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದೆ. ಇದನ್ನೂ ಓದಿ: ದ್ರಾವಿಡ್ ಖಡಕ್ ಸೂಚನೆಗೆ ಒಲಿಯಿತು ಅಂಡರ್ 19 ವಿಶ್ವಕಪ್!