Tag: ವಿಶ್ವಕಪ್

  • ಧೋನಿ ಇದ್ದರೆ 2023ರ ವಿಶ್ವಕಪ್ ಆಡುತ್ತೇನೆ: ಎಬಿಡಿ

    ಧೋನಿ ಇದ್ದರೆ 2023ರ ವಿಶ್ವಕಪ್ ಆಡುತ್ತೇನೆ: ಎಬಿಡಿ

    ನವದೆಹಲಿ: ಸೌತ್ ಆಫ್ರಿಕಾ ಮಾಜಿ ಕ್ರಿಕೆಟ್ ಆಟಗಾರ ಎಬಿ ಡಿವಿಲಿಯರ್ಸ್ ಮತ್ತೆ ಕ್ರಿಕೆಟ್‍ಗೆ ಕಮ್ ಬ್ಯಾಕ್ ಮಾಡುವ ಮಾತನಾಡಿದ್ದು, ಆದರೆ ಧೋನಿ ಇದ್ದರೆ ಮಾತ್ರ ಕ್ರಿಕೆಟ್ ಆಡುತ್ತೇನೆ ಎಂದಿದ್ದಾರೆ.

    ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಎಬಿಡಿ, ನಿವೃತ್ತಿ ಘೋಷಣೆ ಮಾಡುವ ಮುನ್ನ ತಮಗೆ 2019ರ ವಿಶ್ವಕಪ್ ಆಡುವ ಆಸೆ ಇತ್ತು ಎಂದಿದ್ದಾರೆ. ಅಲ್ಲದೇ 2023ರ ವಿಶ್ವಕಪ್ ಆಡಲು ನಾನು ಆರ್ಹನಾಗಿದ್ದು ಖಂಡಿತ ಆಡುತ್ತೇನೆ. ಆದರೆ ಆ ವೇಳೆ ಧೋನಿ ಕೂಡ ಇರಬೇಕು ಎಂದಿದ್ದಾರೆ. ಆ ಮೂಲಕ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಧೋನಿ ಎಷ್ಟು ಪ್ರೇರಣೆ ನೀಡಿದ್ದಾರೆ ಎಂಬುವುದನ್ನು ಬಹಿರಂಗ ಪಡಿಸಿದ್ದಾರೆ.

    2023ರ ವೇಳೆಗೆ ನನಗೆ 39 ವರ್ಷಗಳಾಗಿರುತ್ತದೆ. ಆಗಲೂ ಧೋನಿ ಆಡುತ್ತಿರುತ್ತಾರೆ, ನಾನೂ ವಿಶ್ವಕಪ್ ಆಡುತ್ತೇನೆ ಎಂದಿದ್ದಾರೆ. ಇದೇ ವೇಳೆ ಕೊಹ್ಲಿ ಅವರೊಂದಿಗೆ ಇರುವ ಬಾಂಧವ್ಯದ ಬಗ್ಗೆಯೂ ಹೇಳಿಕೊಂಡಿದ್ದಾರೆ. ನಾನು ನಿವೃತ್ತಿ ಹೇಳಿದ ಸಂದರ್ಭದಲ್ಲೂ ಹಲವರು ಟೀಕೆಗಳನ್ನು ಎದುರಿಸಿದ್ದೇನೆ. ಆ ಸಮಯ ನನಗೆ ಬಹಳ ಕಷ್ಟಕಾರವಾಗಿತ್ತು ನೆನಪಿಸಿ ಕೊಂಡಿದ್ದಾರೆ.

    ದಕ್ಷಿಣ ಆಫ್ರಿಕಾ ಪರ 114 ಟೆಸ್ಟ್ ಪಂದ್ಯಗಳನ್ನು ಆಡಿರುವ ಎಬಿಡಿ 8,765 ರನ್ ಸಿಡಿಸಿದ್ದಾರೆ. ಇದರಲ್ಲಿ 46 ಅರ್ಧ ಶತಕ, 22 ಶತಕಗಳನ್ನು ಸಿಡಿಸಿದ್ದಾರೆ. ಏಕದಿನ ಕ್ರಿಕೆಟಿನಲ್ಲಿ 228 ಪಂದ್ಯಗಳಿಂದ 9,577 ರನ್ ಗಳಿಸಿದ್ದು, ಇದರಲ್ಲಿ 25 ಶತಕ, 53 ಅರ್ಧ ಶತಕ ಸಿಡಿಸಿದ್ದಾರೆ. 2004 ರಲ್ಲಿ ಟೆಸ್ಟ್ ಪಂದ್ಯಗಳಿಗೆ ಪಾದಾರ್ಪಣೆ ಮಾಡಿದ ಎಬಿಡಿ 2018ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಘೋಷಿಸಿದ್ದರು.

  • ಆಸ್ಟ್ರೇಲಿಯಾ ಕ್ರಿಕೆಟಿಗನ ವಿರುದ್ಧ ಸಿಡಿದ ಕೊಹ್ಲಿ ಫ್ಯಾನ್ಸ್!

    ಆಸ್ಟ್ರೇಲಿಯಾ ಕ್ರಿಕೆಟಿಗನ ವಿರುದ್ಧ ಸಿಡಿದ ಕೊಹ್ಲಿ ಫ್ಯಾನ್ಸ್!

    ನವದೆಹಲಿ: ಆಸ್ಟ್ರೇಲಿಯಾದ ಮಾಜಿ ಆಟಗಾರ ಬ್ರಾಡ್ ಹಾಡ್ಜ್ ಮಾಡಿದ ಟ್ವೀಟ್‍ಗೆ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಭಿಮಾನಿಗಳು ಸಿಡಿದೆದ್ದಿದ್ದಾರೆ.

    ವಿರಾಟ್ ಕೊಹ್ಲಿ ಮತ್ತು ಯುವ ಆಟಗಾರ ರಿಷಬ್ ಪಂತ್ ಹಿಮಾಲಯ ಕಂಪನಿಗೆ ಬ್ರಾಂಡ್ ಅಂಬಾಸಿಡರ್‍ಗಳಾಗಿ ಅಯ್ಕೆಯಾಗಿದ್ದು. ಆ ಕಂಪನಿಯ ಉತ್ಪನ್ನ ಪುರಷರ ಫೇಸ್ ಕ್ರೀಮ್ ಪ್ರಚಾರ ಮಾಡುವ ಜಾಹೀರಾತಿನಲ್ಲಿ ಅಭಿನಯಿಸಿದ್ದಾರೆ. ಈ ವಿಡಿಯೋವನ್ನು ಕೊಹ್ಲಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.

    ಈ ವಿಡಿಯೋವನ್ನು ನೋಡಿದ ಬ್ರಾಡ್ ಹಾಡ್ಜ್, “ಅದ್ಭುತವಾಗಿದೆ ಜನರು ಹಣಕ್ಕಾಗಿ ಏನ್ ಬೇಕಾದರು ಮಾಡುತ್ತಾರೆ” ಎಂದು ಕಮೆಂಟ್ ಮಾಡಿ ಕೊಹ್ಲಿ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದ್ದಾರೆ. ಈ ರೀತಿ ಕಮೆಂಟ್ ಮಾಡೋದು ಎಷ್ಟು ಸರಿ ಎಂದು ಕೊಹ್ಲಿ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

    ಟ್ವೀಟ್‍ಗೆ ಎಲ್ಲಡೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಬ್ರಾಡ್ ಹಾಡ್ಜ್ ಮರು ಟ್ವೀಟ್ ಮಾಡಿದ್ದಾರೆ. ನಾನು ತಮಾಷೆಗೆಂದು ಆ ರೀತಿಯಲ್ಲಿ ಹೇಳಿದ್ದು. ಅದರಲ್ಲಿ ಏನ್ ತಪ್ಪಿದೆ. ನಾನು ಕೂಡ ಕ್ರಿಕೆಟಿಗ ನಾನು ಈ ತರಹದ ಕೆಲಸವನ್ನು ಮಾಡುತ್ತೇನೆ. ಈ ಮಾತಿನಲ್ಲಿ ಏನೂ ವಿಭಿನ್ನವಾಗಿದೆ ನನಗೆ ಗೊತ್ತಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ.

    ಕಳೆದ ಕೆಲ ವಾರದಲ್ಲಿ ಕೊಹ್ಲಿ ಹಲವಾರು ಜಾಹೀರಾತು ಯೋಜನೆಗೆ ಸಹಿ ಹಾಕಿದ್ದಾರೆ. ಇದೇ ತಿಂಗಳು ಮೇ 30ರಿಂದ ಇಂಗ್ಲೆಂಡ್‍ನಲ್ಲಿ ನಡೆಯವ ವಿಶ್ವಕಪ್ ಟೂರ್ನಿಯಲ್ಲಿ ಭಾರತವನ್ನು ವಿರಾಟ್ ಕೊಹ್ಲಿ ಮುನ್ನಡೆಸಲಿದ್ದಾರೆ.

  • ಫೋಟೋ ಹಾಕಿದ ಕೊಹ್ಲಿಯನ್ನು ಟ್ರೋಲ್ ಮಾಡಿದ ಯುವಿ

    ಫೋಟೋ ಹಾಕಿದ ಕೊಹ್ಲಿಯನ್ನು ಟ್ರೋಲ್ ಮಾಡಿದ ಯುವಿ

    ನವದೆಹಲಿ: ಇನ್ಸಟಾಗ್ರಾಮ್‍ಗೆ ಫೋಟೋ ಹಾಕಿದ್ದ ವಿರಾಟ್ ಕೊಹ್ಲಿಗೆ ಕಮೆಂಟ್ ಮಾಡುವ ಮೂಲಕ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಕಾಲೆಳೆದಿದ್ದಾರೆ.

    ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತನ್ನ ಇನ್ಸಾಟಗ್ರಾಮ್ ಖಾತೆಯಲ್ಲಿ ಜೆಕ್ ರಿಪಬ್ಲಿಕ್‍ನ ರಾಜಧಾನಿ ಫ್ರಾಗ್ ನಗರದಲ್ಲಿನ ಓಲ್ಡ್ ಟೌನ್ ಸ್ಕ್ವೇರ್ ನಲ್ಲಿ ತೆಗೆದಿರುವ ಹಳೆಯ ಸೆಲ್ಫಿ ಫೋಟೋ ಹಾಕಿಕೊಂಡು ‘ಫ್ಲಾಶ್‍ಬ್ಯಾಕ್‍ಫ್ರೈಡೆ’ ಎಂಬ ಹ್ಯಾಶ್ ಟ್ಯಾಗ್ ಬಳಸಿ ಗೆಳಯರೇ ಈ ನಗರ ಯಾವುದು ಎಂದು ಊಹಿಸುವಿರಾ?” ಎಂದು ಬರೆದಿದ್ದಾರೆ.

    https://www.instagram.com/p/Bxj7q7cgb_q/?utm_source=ig_embed

    ಫೋಟೋಗೆ ಕಮೆಂಟ್ ಮಾಡಿರುವ ಯುವರಾಜ್ ಸಿಂಗ್ ಪಂಜಾಬಿನ ಐತಿಹಾಸಿಕ ನಗರ ಕೋಟಕ್ಪುರ ಎಂದು ಕಾಣುತ್ತದೆ ಎಂದು ಬರೆದು ಹರ್ಭಜನ್ ಸಿಂಗ್ ಅವರನ್ನು ಟ್ಯಾಗ್ ಮಾಡಿ ಕೊಹ್ಲಿಯನ್ನು ಕಿಚಾಯಿಸಿದ್ದಾರೆ.

    ಐಪಿಎಲ್ 12ನೇ ಅವೃತ್ತಿಯಲ್ಲಿ ಬೆಂಗಳೂರು ತಂಡವನ್ನು ಮುನ್ನಡೆಸುತ್ತಿದ್ದ ಕೊಹ್ಲಿಗೆ ಈ ಬಾರಿ ಯಶಸ್ಸು ಸಿಕ್ಕಿರಲಿಲ್ಲ. ಐಪಿಎಲ್ ಬಳಿಕ ವಿಶ್ವಕಪ್‍ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿರುವ ಕೊಹ್ಲಿ ಮೇಲೆ ಭಾರೀ ನೀರಿಕ್ಷೆಗಳಿವೆ.

    ಇಂಗ್ಲೆಂಡ್‍ನಲ್ಲಿ ಮೇ 30 ರಿಂದ ವಿಶ್ವಕಪ್ ಟೂರ್ನಿ ಆರಂಭವಾಗಲಿದ್ದು. ಈ ವಿಶ್ವಕಪ್‍ನಲ್ಲಿ ತನ್ನ ಮೊದಲ ಪಂದ್ಯವನ್ನು ಟೀಂ ಇಂಡಿಯಾ ಜೂನ್ 5ರಂದು ಸೌತ್ ಆಫ್ರಿಕಾ ವಿರುದ್ಧ ಆಡಲಿದೆ.

  • ಟೀಂ ಇಂಡಿಯಾ ಪರ ಯಾವುದೇ ಕ್ರಮಾಂಕದಲ್ಲೂ ಆಡಲು ಸಿದ್ಧ: ಕೆಎಲ್ ರಾಹುಲ್

    ಟೀಂ ಇಂಡಿಯಾ ಪರ ಯಾವುದೇ ಕ್ರಮಾಂಕದಲ್ಲೂ ಆಡಲು ಸಿದ್ಧ: ಕೆಎಲ್ ರಾಹುಲ್

    ನವದೆಹಲಿ: ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪರ ಸ್ಥಾನ ಪಡೆದಿರುವ ಕನ್ನಡಿಗ ಕೆಎಲ್ ರಾಹುಲ್, ತಂಡದ ಪರ ಯಾವುದೇ ಕ್ರಮಾಂಕದಲ್ಲಿ ಆದ್ರು ಬ್ಯಾಟ್ ಮಾಡಲು ಸಿದ್ಧ ಎಂದು ಹೇಳಿದ್ದಾರೆ.

    ಇಂಗ್ಲೆಂಡ್ ಫಿಚ್ ಕಂಡಿಷನ್ ಮೇಲೆ ತಂಡದ ಆಟಗಾರರ ಬ್ಯಾಟಿಂಗ್ ಕ್ರಮಾಂಕವನ್ನು ನಿರ್ಧರಿಸಲಾಗುತ್ತದೆ ಎಂದು ಕೋಚ್ ಈಗಾಗಲೇ ಸೂಚನೆ ನೀಡಿದ್ದಾರೆ. ಆದ್ದರಿಂದ ನಾನು ಯಾವುದೇ ಕ್ರಮಾಂಕದಲ್ಲಿ ಆದ್ರು ಆಡಲು ಸಿದ್ಧವಾಗಿದ್ದೇನೆ ಎಂದು ಮಾಧ್ಯಮ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

    ಇಂಗ್ಲೆಂಡ್ ನಲ್ಲಿ ಎದುರಾಗಬಹುದಾದ ಯಾವುದೇ ಸವಾಲನ್ನು ಎದುರಿಸಲು ನಾನು ಸಿದ್ಧ. ತಂಡ ಕೈಗೊಂಡಿರುವ ನಿರ್ಧಾರಕ್ಕೆ ಪೂರಕವಾಗಿ ಆಡುತ್ತೇನೆ. ಭಾರತ ‘ಎ’ ತಂಡದ ಪರ ಆಡಿರುವ ಅನುಭವ ನನ್ನಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಿದೆ. ಅಲ್ಲದೇ ಐಪಿಎಲ್ ಕೂಡ ತಮ್ಮ ವಿಶ್ವಕಪ್ ತಯಾರಿಗೆ ಸಹಕಾರಿ ಆಗಿದೆ ಎಂದಿದ್ದಾರೆ.

    27 ವರ್ಷದ ಕೆಎಲ್ ರಾಹುಲ್ ಉತ್ತಮ ಫಾರ್ಮ್ ನಲ್ಲಿ ಇದ್ದು, ಐಪಿಎಲ್ ನಲ್ಲೂ 593 ರನ್ (ಶತಕ, 6 ಅರ್ಧ ಶತಕ) ಗಳಿಸಿದ್ದರು. ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಅವರು ರಾಹುಲ್‍ರನ್ನು ವಿಶ್ವಕಪ್ ಆಯ್ಕೆ ಮಾಡಿದ್ದರ ಬಗ್ಗೆ ಸಮರ್ಥನೆ ನೀಡಿ, ನಾವು 2ನೇ ಓಪನರ್ ಅವಕಾಶವನ್ನು ತೆರಲು ಸಿದ್ಧರಿಲ್ಲ ಎಂದಿದ್ದರು. ಪರಿಣಾಮ ರಾಹುಲ್ ಮೀಸಲು ಆರಂಭಿಕರಾಗಿ ವಿಶ್ವಕಪ್‍ಗೆ ಆಯ್ಕೆ ಆಗಿದ್ದರು. ತಂಡದಲ್ಲಿ ಸದ್ಯ 4ನೇ ಕ್ರಮಾಂಕದಲ್ಲಿ ಆಡುವ ಆಟಗಾರನ ಆಯ್ಕೆ ಬಗ್ಗೆ ಚರ್ಚೆ ನಡೆದಿದ್ದು, ಟೀಂ ಇಂಡಿಯಾ ಆಟಗಾರ ಹರ್ಭಜನ್ ಸಿಂಗ್ ಕೂಡ ನಂ.4 ಆಟಗಾರರಾಗಿ ವಿಜಯ್ ಶಂಕರ್ ಬದಲು ಕೆಎಲ್ ರಾಹುಲ್ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

  • ವಿಶ್ವಕಪ್ ಗೆದ್ದ ತಂಡಕ್ಕೆ ಸಿಗಲಿದೆ ಭಾರೀ ಬಹುಮಾನ!

    ವಿಶ್ವಕಪ್ ಗೆದ್ದ ತಂಡಕ್ಕೆ ಸಿಗಲಿದೆ ಭಾರೀ ಬಹುಮಾನ!

    ಲಂಡನ್: ವಿಶ್ವಕಪ್ ಕ್ರಿಕೆಟ್ ಟೂರ್ನಿ ಆರಂಭವಾಗಲು 2 ವಾರಗಳಷ್ಟೇ ಬಾಕಿ ಇದ್ದು, ವಿಶ್ವದಾದ್ಯಂತ ಈಗಾಗಲೇ ಕ್ರಿಕೆಟ್ ಜ್ವರ ಹೆಚ್ಚಾಗುತ್ತಿದೆ. ಇದೇ ಸಂದರ್ಭದಲ್ಲಿ ಐಸಿಸಿ ಸಮಿತಿ 2019ರ ವಿಶ್ವಕಪ್ ವಿಜೇತ ತಂಡ ಗಳಿಸುವ ಪ್ರಶಸ್ತಿ ಮೊತ್ತವನ್ನು ಘೋಷಿಸಿದೆ.

    10 ತಂಡಗಳು ಭಾಗವಹಿಸುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಒಟ್ಟು 10 ದಶಲಕ್ಷ ಡಾಲರ್ (ಅಂದಾಜು 70.18 ಕೋಟಿ ರೂ.) ನಗದು ಬಹುಮಾನ ನೀಡಲಾಗುತ್ತದೆ. ವಿಜೇತ ತಂಡಕ್ಕೆ 4 ದಶಲಕ್ಷ ಡಾಲರ್ (ಅಂದಾಜು 28.08 ಕೋಟಿ ರೂ.) ರನ್ನರ್ ಅಪ್ ತಂಡ 2 ಮಿಲಿಯನ್ ಡಾಲರ್ (ಅಂದಾಜು 14.04 ಕೋಟಿ ರೂ.) ಗಳಿಸಲಿದೆ. ಇದುವರೆಗೂ ನಡೆದಿರುವ ವಿಶ್ವಕಪ್ ಟೂರ್ನಿಗಳಿಗಿಂತ ಅತಿ ಹೆಚ್ಚು ಬಹುಮಾನ ಮೊತ್ತ ಇದಾಗಿದೆ. ಸೆಮಿ ಫೈನಲ್ ನಲ್ಲಿ ಸೋತ ತಂಡಗಳಿಗೆ ತಲಾ 8,00,00 ಡಾಲರ್ (ಅಂದಾಜು 11.36 ಕೋಟಿ ರೂ.) ಬಹುಮಾನ ಲಭಿಸಲಿದೆ.

    ಕಳೆದ ಬಾರಿಯ ವಿಶ್ವಕಪ್ ನಲ್ಲಿ ಗೆಲುವು ಪಡೆದ ತಂಡಕ್ಕೆ 3,975,000 ಡಾಲರ್ (ಅಂದಾಜು 27.90 ಕೋಟಿ ರೂ.), ರನ್ನರ್ ಅಪ್ ತಂಡಕ್ಕೆ 1,750,000 (ಅಂದಾಜು 12.28 ಕೋಟಿ ರೂ.) ಹಾಗೂ ಸೆಮಿ ಫೈನಲಿನಲ್ಲಿ ಸೋತ ತಂಡಗಳಿಗೆ ತಲಾ 600,000 (ಅಂದಾಜು 6.5 ಕೋಟಿ ರೂ.) ಡಾಲರ್ ನೀಡಲಾಗಿತ್ತು.

    14 ತಂಡಗಳು ಲೀಗ್ ಹಂತದಲ್ಲಿ 45 ಪಂದ್ಯಗಳಲ್ಲಿ ಭಾಗವಹಿಸಲಿದೆ. ಮೇ 30 ರಿಂದ ಆರಂಭವಾಗುವ ಟೂರ್ನಿ 11 ವಿವಿಧ ಕ್ರೀಡಾಂಗಣದಲ್ಲಿ ನಡೆಯಲಿದೆ. ಟೂರ್ನಿಯ ಸೆಮಿ ಫೈನಲ್ ಪಂದ್ಯಗಳು ಮ್ಯಾಂಚೆಸ್ಟರ್ ಮತ್ತು ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಜುಲೈ 14 ರಂದು ಲಾಡ್ರ್ಸ್ ಅಂಗಳದಲ್ಲಿ ಫೈನಲ್ ಪಂದ್ಯ ನಡೆಯಲಿದೆ.

    ಎರಡು ಬಾರಿ ವಿಶ್ವಕಪ್ ಚಾಂಪಿಯನ್ ಆಗಿರುವ ಟೀಂ ಇಂಡಿಯಾ ಈ ಟೂರ್ನಿಯಲ್ಲಿ ಕಪ್ ಗೆಲ್ಲುವ ಫೆವರೀಟ್ ತಂಡವಾಗಿದೆ. ಬಿಸಿಸಿಐ ಸಮಿತಿ ಆಯ್ಕೆ ಮಾಡಿರುವ ಆಟಗಾರರ ಪ್ರದರ್ಶನದ ಮೇಲೆ ಎಲ್ಲರ ಗಮನ ಕೇಂದ್ರಿಕೃತವಾಗಿದೆ.

  • ಗೋವಾದಲ್ಲಿ ಕೊಹ್ಲಿ, ಮಾಲ್ಡೀವ್ಸ್‌ನಲ್ಲಿ ರೋಹಿತ್ ಸಖತ್ ಎಂಜಾಯ್!

    ಗೋವಾದಲ್ಲಿ ಕೊಹ್ಲಿ, ಮಾಲ್ಡೀವ್ಸ್‌ನಲ್ಲಿ ರೋಹಿತ್ ಸಖತ್ ಎಂಜಾಯ್!

    ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ಐಪಿಎಲ್ ಬಳಿಕ ಸಿಕ್ಕ ವಿರಾಮದ ಸಮಯವನ್ನು ಕುಟುಂಬದೊಂದಿಗೆ ಕಳೆಯುತ್ತಿದ್ದಾರೆ.

    ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಜೊತೆ ಗೋವಾಗೆ ಬಂದಿದ್ದರೆ, ರೋಹಿತ್ ಕುಟುಂಬದೊಂದಿಗೆ ಮಾಲ್ಡೀವ್ಸ್‍ಗೆ ತೆರಳಿದ್ದಾರೆ. ಇಬ್ಬರು ಪ್ರವಾಸ ಸಮಯದಲ್ಲಿ ಕುಟುಂಬದೊಂದಿಗೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರು ರೆಸ್ಟೋರೆಂಟ್ ನಲ್ಲಿ ಗೆಳೆಯರೊಂದಿಗೆ ಇರುವುದು ಫೋಟೋದಲ್ಲಿ ಕಾಣಬಹುದಾಗಿದೆ. ಅನುಷ್ಕಾ ಶರ್ಮಾ ಅವರು ಸದ್ಯ ಸಿನಿಮಾಗಳಿಂದ ಬ್ರೇಕ್ ಪಡೆದಿದ್ದು, ಯಾವುದೇ ಸಿನಿಮಾದಲ್ಲಿ ನಟಿಸುತ್ತಿಲ್ಲ. ಸದ್ಯದಲ್ಲೇ ಅವರ ಮುಂದಿನ ಸಿನಿಮಾ ಘೋಷಣೆಯಾಗುವ ಸಾಧ್ಯತೆ ಇದೆ.

    ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಐಪಿಎಲ್ ಟೈಟಲ್ ಗೆದ್ದು ಸಂಭ್ರಮಿಸಿದೆ. ರೋಹಿತ್ ಶರ್ಮಾ 4ನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದ ಸಾಧನೆಯನ್ನು ಮಾಡಿದ್ದರು. ಆ ಬಳಿಕ ರೋಹಿತ್ ಶರ್ಮಾ ಕುಟುಂಬದೊಂದಿಗೆ ಮಾಲ್ಡೀವ್ಸ್ ಗೆ ತೆರಳಿದ್ದು, ಈ ಸಂದರ್ಭದ ಫೋಟೋಗಳನ್ನು ತಮ್ಮ ಇನ್ಸ್ ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    Home away from home. Absolutely stunning #WMaldives

    A post shared by Rohit Sharma (@rohitsharma45) on

    ಐಸಿಸಿ ವಿಶ್ವಕಪ್ ಮೇ 30 ರಿಂದ ಆರಂಭವಾಗಲಿದ್ದು, ಟೀಂ ಇಂಡಿಯಾ ಆಟಗಾರರು ಇಂಗ್ಲೆಂಡ್‍ಗೆ ತೆರಳುವ ಮುನ್ನ ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುತ್ತಿದ್ದಾರೆ. ಮೇ 25ರಂದು ಟೀಂ ಇಂಡಿಯಾ, ನ್ಯೂಜಿಲೆಂಡ್ ತಂಡದ ವಿರುದ್ಧ ಆಭ್ಯಾಸ ಪಂದ್ಯ ಆಡುವ ಮೂಲಕ ವಿಶ್ವಕಪ್ ಪಯಣ ಆರಂಭ ಮಾಡಲಿದೆ. ಜೂನ್ 5 ರಂದು ನಡೆಯುವ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ತಂಡ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.

  • ವಿಶ್ವಕಪ್ ಕಮೆಂಟ್ರಿ ಪಟ್ಟಿ – ಗಂಗೂಲಿ, ಭೋಗ್ಲೆ,  ಮಂಜ್ರೇಕರ್‌ಗೆ ಸ್ಥಾನ

    ವಿಶ್ವಕಪ್ ಕಮೆಂಟ್ರಿ ಪಟ್ಟಿ – ಗಂಗೂಲಿ, ಭೋಗ್ಲೆ, ಮಂಜ್ರೇಕರ್‌ಗೆ ಸ್ಥಾನ

    ಲಂಡನ್: ವಿಶ್ವಕಪ್ ಕ್ರಿಕೆಟ್ ಅಂಗವಾಗಿ ಭಾರತದ ಮೂವರನ್ನು ಐಸಿಸಿ ವೀಕ್ಷಕ ವಿವರಣೆಗಾರರನ್ನಾಗಿ ನೇಮಕ ಮಾಡಿದೆ. ಹರ್ಷ ಭೋಗ್ಲೆ, ಸಂಜಯ್  ಮಂಜ್ರೇಕರ್‌, ಸೌರವ್ ಗಂಗೂಲಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

    ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 23 ಮಂದಿ ವೀಕ್ಷಕ ವಿವರಣೆಗಾರರ ಪಟ್ಟಿಯನ್ನು ಐಸಿಸಿ ಗುರುವಾರ ಪ್ರಕಟಿಸಿದೆ. ಇದರಲ್ಲಿ ಇಂಗ್ಲೆಂಡಿನ 4, ಭಾರತ ಮತ್ತು ನ್ಯೂಜಿಲೆಂಡಿನ 3, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ, ಪಾಕಿಸ್ತಾನ ಪರ ಇಬ್ಬರು ಹಾಗೂ ಬಾಂಗ್ಲಾದೇಶ, ಶ್ರೀಲಂಕಾ, ಜಿಂಬಾಬ್ವೆಯಿಂದ ತಲಾ ಒಬ್ಬರನ್ನು ಆಯ್ಕೆ ಮಾಡಲಾಗಿದೆ.

    ಈ ಪಂದ್ಯಕ್ಕೆ ಮೂವರು ಮಹಿಳಾ ವೀಕ್ಷಕ ವಿವರಣೆಗಾರರನ್ನು ಆಯ್ಕೆ ಮಾಡಲಾಗಿದೆ. ಇಷಾ ಗುಹಾ, ಮೆಲಾಜಿ ಜೋನ್ಸ್, ಅಲಿಸನ್ ಮಿಚೆಲ್ ಸ್ಥಾನ ಪಡೆದಿದ್ದಾರೆ.

    ವೀಕ್ಷಕ ವಿವರಣೆಗಾರರ ಪಟ್ಟಿ: ಸೌರವ್ ಗಂಗೂಲಿ, ಇಯಾನ್ ಬಿಷಪ್, ಮೈಕಲ್ ಕ್ಲಾರ್ಕ್, ನಾಸಿರ್ ಹುಸೇನ್, ಮಿಚೆಲ್ ಜೋನ್ಸ್, ಕುಮಾರ ಸಂಗಕ್ಕಾರ, ಮೈಕಲ್ ಅಥರ್ಟನ್, ಅಲಿಸನ್ ಮಿಚೆಲ್, ಬ್ರೆಂಡನ್ ಮೆಕ್ಕಲಂ, ಗ್ರೇಮ್ ಸ್ಮಿತ್, ವಾಸೀಂ ಅಕ್ರಂ, ಶಾನ್ ಪೋಲಾಕ್, ಮೈಕಲ್ ಸ್ಲೇಟರ್, ಮಾರ್ಕ್ ನಿಕೋಲಸ್, ಮೈಕಲ್ ಹೋಲ್ಡಿಂಗ್, ಸಂಜಯ್ ಮಂಜ್ರೇಕರ್, ಹರ್ಷ ಭೋಗ್ಲೆ, ಸಿಮಾನ್ ಡೌಲ್, ಇಯಾನ್ ಸ್ಮಿತ್, ರಮೀಜ್ ರಾಜಾ, ಅಥರ್ ಅಲಿ ಖಾನ್, ಇಯಾನ್ ವಾರ್ಡ್.

  • ಕೇದಾರ್ ಜಾಧವ್ ಗಾಯದ ಸಮಸ್ಯೆ – ಮೇ 23ರೊಳಗೆ ಬಿಸಿಸಿಐ ಅಂತಿಮ ನಿರ್ಧಾರ

    ಕೇದಾರ್ ಜಾಧವ್ ಗಾಯದ ಸಮಸ್ಯೆ – ಮೇ 23ರೊಳಗೆ ಬಿಸಿಸಿಐ ಅಂತಿಮ ನಿರ್ಧಾರ

    ಮುಂಬೈ: ಟೀಂ ಇಂಡಿಯಾ ಆಟಗಾರ ಕೇದಾರ್ ಜಾಧವ್ ಗಾಯದ ಸಮಸ್ಯೆ ಬಗ್ಗೆ ಮೇ 23ರ ಒಳಗೆ ಅಂತಿಮ ತೀರ್ಮಾನ ಕೈಗೊಳ್ಳಲು ಬಿಸಿಸಿಐ ಆಯ್ಕೆ ಸಮಿತಿ ನಿರ್ಧರಿಸಿದೆ.

    ವಿಶ್ವಕಪ್‍ಗೆ ಈಗಾಗಲೇ ಆಯ್ಕೆ ಮಾಡಿರುವ 15 ಆಟಗಾರರ ಪಟ್ಟಿಯಲ್ಲಿ ಬದಲಾವಣೆ ಮಾಡಲು ಮೇ 23ರ ವರೆಗೂ ಅವಕಾಶ ಇದ್ದು, ಪರಿಣಾಮ ಅಲ್ಲಿಯವರೆಗೂ ಜಾಧವ್ ಅವರ ಗಾಯದ ಸಮಸ್ಯೆ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುತ್ತದೆ ಎಂಬ ಮಾಹಿತಿ ಲಭಿಸಿದೆ. ಜಾಧವ್ ಅವರ ಗಾಯದ ಸಮಸ್ಯೆ ಬಗ್ಗೆ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್ ಅವರು ಈಗಾಗಲೇ ಮಾಹಿತಿ ಪಡೆದಿದ್ದು, ಗಂಭೀರ ಗಾಯವಾಗಿಲ್ಲ ಎಂದು ತಿಳಿದು ಬಂದಿದೆ.

    ಕಳೆದ ಭಾನುವಾರ ನಡೆದ ಕಿಂಗ್ಸ್ ಇಲೆವೆನ್ ತಂಡದ ವಿರುದ್ಧದ ಪಂದ್ಯದ ಫೀಲ್ಡಿಂಗ್ ವೇಳೆ ಜಾಧವ್ ಅವರ ಎಡ ಭುಜಕ್ಕೆ ಗಾಯವಾಗಿತ್ತು. ಪರಿಣಾಮ ಅವರನ್ನು ಟೂರ್ನಿಯ ಮುಂದಿನ ಪಂದ್ಯಗಳಿಂದ ಕೈಬಿಡಲಾಗಿತ್ತು. ಈ ವೇಳೆ ಜಾಧವ್ ಅವರ ವಿಶ್ವಕಪ್ ಜರ್ನಿ ಅಂತ್ಯವಾಗಿದೆ ಎಂದೇ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಆದರೆ ಆ ಬಳಿಕ ಚೆನ್ನೈ ತಂಡ ಈ ಬಗ್ಗೆ ಸ್ಪಷ್ಟನೆ ನೀಡಿ ಗಂಭೀರ ಗಾಯವಾಗಿಲ್ಲ ಎಂದು ತಿಳಿಸಿತ್ತು.

    ಒಂದೊಮ್ಮೆ ಮೇ 23ರ ವೇಳೆಗೆ ಜಾಧವ್ ಫಿಟ್ ಆಗದಿದ್ದರೆ ಆಯ್ಕೆ ಸಮಿತಿ ಪರ್ಯಾಯ ಆಟಗಾರರನ್ನು ಆಯ್ಕೆ ಮಾಡುತ್ತದೆ. ಸದ್ಯ ಸ್ಟಂಡ್ ಬೈ ಆಟಗಾರರ ಪಟ್ಟಿಯಲ್ಲಿ ರಿಷಬ್ ಪಂತ್, ಅಂಬಾಟಿ ರಾಯುಡು, ಅಕ್ಷರ್ ಪಟೇಲ್, ನವದೀಪ್ ಸೈನಿ, ಇಶಾಂತ್ ಶರ್ಮಾ ಅವರ ಹೆಸರಿದೆ. ಉಳಿದಂತೆ ನೆಟ್ ಬೌಲರ್ ಗಳ ಹೆಸರಿನಲ್ಲಿ ಸೈನಿ ಹೆಸರು ಇರುವುದರಿಂದ ವಿಶ್ವಕಪ್ 15 ಆಟಗಾರರರೊಂದಿಗೆ ಅವರು ಇಂಗ್ಲೆಂಡ್‍ಗೆ ಪ್ರಯಾಣಿಸಲಿದ್ದಾರೆ. ಇವರೊಂದಿಗೆ ದೀಪಕ್ ಚಹರ್, ಖಲೀಲ್ ಅಹ್ಮದ್, ಅವೇಶ್ ಖಾನ್ ಅವರು ವಿಶ್ವಕಪ್ ತಂಡದೊಂದಿಗೆ ತೆರಳಲಿದ್ದಾರೆ. ಟೀಂ ಇಂಡಿಯಾ ಮೇ 22ರಂದು ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದ್ದು, ಜೂನ್ 5 ರಂದು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

  • ವಿಶ್ವಕಪ್‍ಗೂ ಮುನ್ನ ಟೀಂ ಇಂಡಿಯಾಗೆ ಅಘಾತ

    ವಿಶ್ವಕಪ್‍ಗೂ ಮುನ್ನ ಟೀಂ ಇಂಡಿಯಾಗೆ ಅಘಾತ

    -ಕೇದಾರ್ ಜಾಧವ್ ಐಪಿಎಲ್ ನಿಂದ ಔಟ್

    ನವದೆಹಲಿ: ವಿಶ್ವಕಪ್ ಟೂರ್ನಿಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಭಾರತ ಕ್ರಿಕೆಟ್ ತಂಡಕ್ಕೆ ಸಂಕಷ್ಟವೊಂದು ಎದುರಾಗಿದ್ದು, ಟೂರ್ನಿಗೆ ಆಯ್ಕೆಯಾಗಿದ್ದ ಆಲ್‍ರೌಂಡರ್ ಕೇದಾರ್ ಜಾಧವ್ ಅವರು ಗಾಯದ ಸಮಸ್ಯೆಯಿಂದಾಗಿ ಐಪಿಎಲ್ ನಿಂದ ನಿರ್ಗಮಿಸಿದ್ದಾರೆ.

    ಪ್ರಸ್ತುತ ಐಪಿಎಲ್ 12 ಅವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ಕೇದಾರ್ ಜಾಧವ್, ಭಾನುವಾರ ನಡೆದ ಚೆನ್ನೈ ಮತ್ತು ಕಿಂಗ್ಸ್ ಇಲೆವನ್ ಪಂಜಾಬ್ ನಡುವಿನ ಪಂದ್ಯದಲ್ಲಿ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಪರಿಣಾಮ ಐಪಿಎಲ್ ನ ಉಳಿದ ಪಂದ್ಯಗಳಿಗೆ ಅವರು ಅಲಭ್ಯರಾಗಿದ್ದಾರೆ.

    ವಿಶ್ವಕಪ್‍ಗೆ ಆಯ್ಕೆ ಮಾಡಲಾದ ಭಾರತ ತಂಡದಲ್ಲಿ ಕೇದರ್ ಜಾಧವ್ ಅವರನ್ನು ಪ್ರಮುಖ ಆಲ್‍ರೌಂಡರ್ ಎಂದು ಆಯ್ಕೆ ಮಾಡಲಾಗಿತ್ತು. ಭಾನುವಾರ ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಓವರ್ ಥ್ರೋ ತಡೆಯಲು ಹೋಗಿ ಜಾಧವ್ ಅವರು ಗಾಯಗೊಂಡಿದ್ದರು. ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರು ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ ಎಂದು ಖಚಿತ ಪಡಿಸಿದ್ದರು.

    ಮೇ 25ರಂದು ಟೀಂ ಇಂಡಿಯಾ, ನ್ಯೂಜಿಲೆಂಡ್ ತಂಡದ ವಿರುದ್ಧ ಆಭ್ಯಾಸ ಪಂದ್ಯ ಆಡುವ ಮೂಲಕ ವಿಶ್ವಕಪ್ ಪಯಣ ಆರಂಭ ಮಾಡಲಿದೆ. ಜೂನ್ 05 ರಂದು ನಡೆಯುವ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ತಂಡ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.

  • ನಿಷೇಧಿತ ಡ್ರಗ್ಸ್ ಸೇವನೆ: ವಿಶ್ವಕಪ್ ತಂಡದಿಂದ ಇಂಗ್ಲೆಂಡ್ ಆಟಗಾರ ಔಟ್

    ನಿಷೇಧಿತ ಡ್ರಗ್ಸ್ ಸೇವನೆ: ವಿಶ್ವಕಪ್ ತಂಡದಿಂದ ಇಂಗ್ಲೆಂಡ್ ಆಟಗಾರ ಔಟ್

    ಲಂಡನ್: ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಅಲೆಕ್ಸ್ ಹೆಲ್ಸ್ ನಿಷೇಧಿತ ಡ್ರಗ್ಸ್ ಸೇವನೆ ಹಿನ್ನೆಲೆಯಲ್ಲಿ ವಿಶ್ವಕಪ್ ತಂಡದಿಂದ ಕೈಬಿಡಲಾಗುತ್ತಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಸಮಿತಿ ಮಾಹಿತಿ ನೀಡಿದೆ.

    ವಿಶ್ವಕಪ್ ಮಾತ್ರವಲ್ಲದೇ ಐರ್ಲೆಂಡ್ ಹಾಗೂ ಪಾಕಿಸ್ತಾನದ ವಿರುದ್ಧ ನಡೆಯುವ ಸೀಮಿತ ಓವರ್ ಗಳ ಸರಣಿಯಿಂದಲೂ ಹೊರಗಿಡಲಾಗಿದ್ದು, 21 ದಿನಗಳ ನಿಷೇಧ ವಿಧಿಸಲಾಗಿದೆ. ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ನಿಷೇಧಿತ ಔಷಧಿ ಸೇವನೆ ಖಚಿತವಾಗಿರುವುದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇಸಿಬಿ ಹೇಳಿದೆ.

    ಇಂಗ್ಲೆಂಡ್ ತಂಡದ ಹಿತಾದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದ ಎಂದು ಇಸಿಬಿ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದು, ತಂಡದೊಳಗೆ ಉತ್ತಮ ವಾತಾವರಣ ಸೃಷ್ಟಿಸಿ ಅನಗತ್ಯ ಗೊಂದಲ ಆಗದಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಉಲ್ಲೇಖಿಸಲಾಗಿದೆ.

    ಇದೇ ವೇಳೆ ಈ ನಿರ್ಧಾರವನ್ನು ಅಲೆಕ್ಸ್ ಅವರ ವೃತ್ತಿ ಜೀವನದ ಕೊನೆ ಎಂದು ಪರಿಗಣಿಸುವಂತಿಲ್ಲ. ಅವರಿಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹಾಗೂ ಪಿಸಿಎ ಸಹಕಾರ ಮುಂದುವರಿಯಲಿದೆ. ಅಲ್ಲದೇ ದೇಶಿಯ ನಾಟಿಂಗ್‍ಹ್ಯಾಮ್‍ಶೈರ್ ನಲ್ಲಿ ಆಡಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ.

    ಇಂಗ್ಲೆಂಡ್ ತಂಡದ ಪರ 70 ಏಕದಿನ ಪಂದ್ಯಗಳನ್ನು ಆಡಿರುವ ಅಲೆಕ್ಸ್ 95.52 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಅಲ್ಲದೇ ಅವರನ್ನು ವಿಶ್ವಕಪ್ ತಂಡದಲ್ಲಿ ಆರಂಭಿಕ ಸ್ಥಾನ ನೀಡಿ ಆಯ್ಕೆ ಮಾಡಲಾಗಿತ್ತು. ಆದರೆ ವಿಶ್ವಕಪ್‍ಗೆ 1 ತಿಂಗಳು ಬಾಕಿ ಇರುವ ಸಂದರ್ಭದಲ್ಲಿ ಇಂತಹ ನಿರ್ಧಾರ ಕೈಗೊಂಡಿರುವುದು ಅಲೆಕ್ಸ್ ಹೆಲ್ಸ್ ಅವರ ವೃತ್ತಿ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇಸಿಬಿ ವಿಶ್ವಕಪ್ ಗೆ ಬೇರೆ ಆಟಗಾರನ ಹೆಸರನ್ನು ಇಲ್ಲಿಯವರೆಗೆ ಪ್ರಕಟಿಸಿಲ್ಲ.