Tag: ವಿಶ್ವಕಪ್

  • ಕ್ಯಾಪ್ಟನ್ ಕೊಹ್ಲಿ, ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ: ರಣ್‍ವೀರ್ ಸಿಂಗ್

    ಕ್ಯಾಪ್ಟನ್ ಕೊಹ್ಲಿ, ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ: ರಣ್‍ವೀರ್ ಸಿಂಗ್

    ಮುಂಬೈ: ಭಾನುವಾರ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಏಕದಿನ ಪಂದ್ಯಾವಳಿಯಲ್ಲಿ ಬಾಲಿವುಡ್ ಸ್ಟಾರ್ ರಣ್‍ವೀರ್ ಸಿಂಗ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಜೊತೆ ಫೋಟೋ ತೆಗೆಸಿಕೊಂಡಿದ್ದರು.

    ಸದ್ಯ ಈ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿರುವ ರಣ್‍ವೀರ್ ಸಿಂಗ್ ಅವರು, ಕ್ಯಾಪ್ಟನ್ ಕೊಹ್ಲಿ, ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ. ನೀವು ನವ ಭಾರತದ ನಿಜವಾದ ಹೀರೋ ಎಂದು ಬರೆದುಕೊಂಡಿದ್ದಾರೆ.

    https://www.instagram.com/p/By02n_zhF9x/?utm_source=ig_embed

    ನಾನು ಬಾಲ್ಯದಿಂದಲೂ ಭಾರತೀಯ ಕ್ರಿಕೆಟ್‍ನ ಬಹು ದೊಡ್ಡ ಅಭಿಮಾನಿ. ನಾವು ನಮ್ಮ ತಂಡದ ಮೇಲೆ ತುಂಬ ಭಾವನೆಯನ್ನು ಹೂಡಿಕೆ ಮಾಡಿದ್ದೇವೆ. ನಮ್ಮ ದೇಶ ಕ್ರಿಕೆಟ್‍ನಲ್ಲಿ ಜಗತ್ತಿಗೆ ಉತ್ತಮ ದೇಶವಾಗಬೇಕು. ಇದಕ್ಕೆ ವಿರಾಟ್ ಕೊಹ್ಲಿ ಅವರು ನಮಗೆ ಆದರ್ಶವಾಗಿದ್ದಾರೆ ಎಂದಿದ್ದಾರೆ.

    ಕೊಹ್ಲಿ ಅವರು ಉಗ್ರಸ್ವಭಾವ ಮತ್ತು ಬಿರುಸಿನ ಆಟವನ್ನು ಪ್ರದರ್ಶಿಸಿ, ಭಾರತ ಕ್ರಿಕೆಟ್ ತಂಡದ ಚಹರೆಯನ್ನೇ ಬದಲಾಯಿಸಿದ್ದಾರೆ. ನಮ್ಮ ದೇಶದ ಕ್ರಿಕೆಟ್ ತಂಡವನ್ನು ಒಬ್ಬ ಯೋಧನಂತೆ ಮುನ್ನಡೆಸುತ್ತಿದ್ದಾರೆ. ಅವರ ಆಟವನ್ನು ನೋಡುತ್ತಿದ್ದರೆ ಅವರು ಸಾರ್ವಕಾಲಿಕ ಶ್ರೇಷ್ಠರೆಂದು ಕರೆಸಿಕೊಳ್ಳುವ ಹಾದಿಯಲ್ಲಿದ್ದಾರೆ. ಇದು ನವಭಾರತ ಮತ್ತು ಅವರು ನವ ಭಾರತದ ಹೀರೋ. ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ ಕ್ಯಾಪ್ಟನ್ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

    https://www.instagram.com/p/By0vqNFhPOX/?utm_source=ig_embed

    ಭಾನುವಾರ ನಡೆದ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಡಕ್ವರ್ಥ್ ಲೂಯಿಸ್ ನಿಯಮದನ್ವಯ 89 ರನ್‍ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ವಿಶ್ವಕಪ್ ಪಂದ್ಯಾವಳಿ ವೇಳೆ ಪಟ್ಟಿ ವಿನ್ಯಾಸದ ಬಟ್ಟೆ, ದೊಡ್ಡ ಕನ್ನಡಕ, ವಿಭಿನ್ನವಾದ ಕ್ರಿಕೆಟ್ ವೀಕ್ಷಕ ವಿವರಣೆಯಿಂದ ಅಭಿಮಾನಿಗಳಲ್ಲಿ ಹುರುಪು ತುಂಬಲು ಯತ್ನಿಸಿದ್ದರು.

    ಸುನಿಲ್ ಗವಾಸ್ಕರ್, ಹರಭಜನ್ ಸಿಂಗ್, ವೀರೇಂದ್ರ ಸೆಹ್ವಾಗ್ ಜೊತೆಗಿನ ವೀಕ್ಷಕ ವಿವರಣೆಯ ವಿಡಿಯೋ ಅವರ ಅಭಿಮಾನಿಗಳಲ್ಲಿ ಮತ್ತು ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಮಸ್ತ್ ಮಜಾ ನೀಡಿದೆ. ಸದ್ಯ ಈಗ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

    https://www.instagram.com/p/By0ni4KhwGF/?utm_source=ig_embed

    ಕಳೆದ ಎರಡು ವಾರದಿಂದ ಲಂಡನ್ ನಲ್ಲೇ ಇರುವ ರಣವೀರ್ ಸಿಂಗ್ 83 ಎಂಬ ಕಪಿಲ್ ದೇವ್ ಜೀವನಾಧಾರಿತ ಸಿನಿಮಾದ ಶೂಟಿಂಗ್ ನಡೆಸುತ್ತಿದ್ದಾರೆ. ಸಿನಿಮಾದಲ್ಲಿ ನಟಿಸಲು ಕೆಲವು ಸಂಶೋಧನೆ ಮತ್ತು ಸಾಕಷ್ಟು ಮಾಹಿತಿ ಕಲೆಹಾಕಿರುವ ನಟ, ಲಂಡನ್ ನಲ್ಲಿ ನೆಲೆಸಿರುವ ಅನೇಕ ಕ್ರಿಕೆಟ್ ಲೆಜೆಂಡ್‍ಗಳನ್ನು ಭೇಟಿ ಮಾಡಿದ್ದಾರೆ. ಈ ಸಿನಿಮಾದಲ್ಲಿ ರಣ್‍ವೀರ್ ಅವರ ಪತ್ನಿ ದೀಪಿಕಾ ಪಡುಕೋಣೆ ಅವರು ಕಪಿಲ್ ದೇವ್ ಅವರ ಪತ್ನಿ ಪಾತ್ರದಲ್ಲಿ ಅಭಿನಯ ಮಾಡಲಿದ್ದಾರೆ. ಸಿನಿಮಾ 2020 ರಲ್ಲಿ ಬಿಡುಗಡೆಗೊಳ್ಳಲಿದೆ.

    https://www.instagram.com/p/By0tA_IBaLc/?utm_source=ig_embed

  • ಟೀಂ ಇಂಡಿಯಾ ಗೆಲುವನ್ನು ಸಂಭ್ರಮಿಸಿದ್ದಕ್ಕೆ ದಲಿತ ಯುವಕನ ಹತ್ಯೆ

    ಟೀಂ ಇಂಡಿಯಾ ಗೆಲುವನ್ನು ಸಂಭ್ರಮಿಸಿದ್ದಕ್ಕೆ ದಲಿತ ಯುವಕನ ಹತ್ಯೆ

    ಲಕ್ನೋ: ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದ್ದಕ್ಕೆ ಸಂಭ್ರಮಿಸುತ್ತಿದ್ದ ದಲಿತ ಯುವಕನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಪ್ರತಾಪಗಢ ರಾಮ್‍ಪುರ್ ಬೆಲಾ ಗ್ರಾಮದಲ್ಲಿ ನಡೆದಿದೆ.

    ಪರಿಶಿಷ್ಟ ಜಾತಿಗೆ ಸೇರಿದ ಯುವಕ ವಿನಯ್ ಪ್ರಕಾಶ್ ಭಾನುವಾರ ಭಾರತ-ಪಾಕಿಸ್ತಾನ ಪಂದ್ಯವನ್ನು ವೀಕ್ಷಿಸುತ್ತಿದ್ದ. ಪಂದ್ಯದಲ್ಲಿ ಭಾರತ ಗೆದ್ದ ನಂತರ ಸಂಭ್ರಮ ವ್ಯಕ್ತಪಡಿಸಿ, ಕುಣಿದು ಕುಪ್ಪಳಿಸಿದ್ದಾನೆ. ಈ ಕುರಿತು ಇನ್ನೊಂದು ಸಮುದಾಯದೊಂದಿಗೆ ವಾದವನ್ನೂ ಮಾಡಿದ್ದಾನೆ. ಇದೇ ವಾದ ವಿಕೋಪಕ್ಕೆ ತಿರುಗಿ ಯುವಕ ವಾಸಿಸುತ್ತಿದ್ದ ಗುಡಿಸಲಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಸೋಮವಾರ ಬೆಳಗ್ಗೆ ಗ್ರಾಮಸ್ಥರು ಗ್ರಾಮದ ಹೊರವಲಯದಲ್ಲಿರುವ ವಿನಯ್ ಪ್ರಕಾಶ ಅವರ ಗುಡಿಸಲನ್ನು ನೋಡಿದಾಗ ಸುಟ್ಟು ಕರಕಲಾಗಿತ್ತು. ಹತ್ತಿರ ಬಂದು ನೋಡಿದಾಗ ಪ್ರಕಾಶ್ ದೇಹವೂ ಸಹ ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿತ್ತು. ಇದನ್ನು ಕಂಡ ಗ್ರಾಮಸ್ಥರು, ಕೊಲೆ ಎಂದು ಶಂಕಿಸಿದ್ದಾರೆ. ರಾತ್ರಿ ಕ್ರಿಕೆಟ್ ಪಂದ್ಯ ವೀಕ್ಷಿಸುವ ವೇಳೆ ಭಾರತ ತಂಡದ ಗೆಲುವಿನ ನಂತರ ನಡೆದ ವಾದಕ್ಕೆ ಪ್ರತಿಯಾಗಿ ಈ ಕೊಲೆ ನಡೆದಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

    ರಾಜ್ಯ ಎಸ್‍ಸಿ, ಎಸ್‍ಟಿ ಆಯೋಗ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಘಟನೆ ಕುರಿತು ತನಿಖೆ ನಡೆಸಿ ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಂತೆ ಪ್ರತಾಪ್‍ಗಢ ಎಸ್‍ಪಿಗೆ ಮನವಿ ಮಾಡಿದ್ದು, ಘಟನೆ ಕುರಿತು ಆಯೋಗಕ್ಕೆ ವರದಿ ನೀಡಿದ್ದಾರೆ.

  • ಬೇಬಿ ಜೀವಾಳ ಜೊತೆ ರಿಷಬ್ ಪಂತ್- ಕ್ಯೂಟ್ ವಿಡಿಯೋ ನೋಡಿ

    ಬೇಬಿ ಜೀವಾಳ ಜೊತೆ ರಿಷಬ್ ಪಂತ್- ಕ್ಯೂಟ್ ವಿಡಿಯೋ ನೋಡಿ

    ನವದೆಹಲಿ: ಭಾನುವಾರ ಇಂಗ್ಲೆಂಡ್‍ನ ಓಲ್ಡ್ ಟ್ರಾಫರ್ಡ್‍ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನದ ವಿರುದ್ಧ ಪಂದ್ಯದಲ್ಲಿ ಭಾತರ ಡಕ್ವರ್ಥ್ ಲೂಯಿಸ್ ನಿಯಮದನ್ವಯ 89 ರನ್‍ಗಳ ಭರ್ಜರಿ ಗೆಲುವು ಸಾಧಿಸಿತ್ತು. ಈ ಪಂದ್ಯದ ವೇಳೆ ಎಂ.ಎಸ್ ಧೋನಿ ಅವರ ಪುತ್ರಿ ಜೀವಾ ಮತ್ತು ಭಾತರದ ಆಟಗಾರ ರಿಷಬ್ ಪಂತ್ ಅವರ ಕ್ಯೂಟ್ ವಿಡಿಯೋ ಒಂದು ವೈರಲ್ ಆಗಿದೆ.

    ಪಂದ್ಯದ ಆರಂಭಕ್ಕೂ ಮುನ್ನಾ ಜೀವಾ ಧೋನಿ ಹಾಗೂ ರಿಷಬ್ ಪಂತ್ ಸೇರಿಕೊಂಡು ಮಸ್ತಿ ಮಾಡುತ್ತಿರುವ ವಿಡಿಯೋವನ್ನು ರಿಷಬ್ ಪಂತ್ ಅವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿಕೊಂಡಿದ್ದು, ಅಭಿಮಾನಿಗಳು ಈ ವಿಡಿಯೋವನ್ನು ಇಷ್ಟಪಟ್ಟಿದ್ದಾರೆ. ರಿಷಬ್ ಮತ್ತು ಜೀವಾ ಕಿರುಚುತ್ತಿರುವ ವಿಡಿಯೋ ಹಾಕಿರುವ ಪಂತ್ ಕ್ರೈಮ್ ಪಾಟ್ನನರ್ ಎಂದು ಬರೆದುಕೊಂಡಿದ್ದಾರೆ.

    https://www.instagram.com/p/Byx_NZDnu9A/?utm_source=ig_embed&utm_campaign=embed_video_watch_again

    ಭಾರತ ತಂಡದ ಆರಂಭಿಕ ಶಿಖರ್ ಧವನ್ ಅವರು ಗಾಯದ ಸಮಸ್ಯೆಗೆ ತುತ್ತಾದ ಕಾರಣ ರಿಷಬ್ ಪಂತ್ ಅವರನ್ನು ಬದಲಿ ಆಟಗಾರನಾಗಿ ಜೂನ್ 14 ಕ್ಕೆ ಇಂಗ್ಲೆಂಡ್‍ಗೆ ಕರಸಿಕೊಳ್ಳಲಾಗಿದೆ. ಇನ್ನೂ ಅವರು ಭಾರತ ತಂಡದಲ್ಲಿ ಅಧಿಕೃತವಾಗಿ ಸ್ಥಾನ ಪಡೆದಿಲ್ಲ. ಆದರೆ ಭಾನುವಾರದ ಪಂದ್ಯದಲ್ಲಿ ತಮ್ಮ ತಂಡದ ಆಟಗಾರರಿಗೆ ಡ್ರಿಂಕ್ಸ್ ಸಪ್ಲೇಯರ್ ಆಗಿ ಕಾಣಿಸಿಕೊಂಡಿದ್ದಾರೆ.

    ಪಂತ್ ಮಕ್ಕಳ ಜೊತೆ ಆಟವಾಡ್ತಿರೋದು ಇದೇ ಮೊದಲಲ್ಲ. ಈ ಹಿಂದೆ ಪಂತ್ ಬೇಬಿ ಸಿಟ್ಟರ್ ಆಗಿದ್ದರು. ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ವೇಳೆ ಭರ್ಜರಿ ಆಟವಾಡಿದ್ದ ರಿಷಬ್ ಪಂತ್, ಬೇಬಿ ಸಿಟ್ಟರ್ ಎಂಬ ಹೆಸರು ಪಡೆದಿದ್ದರು.

    ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಕ್ಯಾಪ್ಟನ್ ಟಿಮ್ ಪೈನ್, ಪಂತ್ ರನ್ನು ಬೇಬಿ ಸಿಟ್ಟರ್ ಎಂದು ಕರೆದಿದ್ದರು. ಮನೆಗೆ ಬಂದು ಮಕ್ಕಳನ್ನು ನೋಡಿಕೋ, ನಾನು ನನ್ನ ಪತ್ನಿ ಸಿನಿಮಾಕ್ಕೆ ಹೋಗ್ತೇವೆ ಎಂದಿದ್ದರು. ಮೆಲ್ಬೋರ್ನ್ ಪಂದ್ಯ ಮುಗಿದ ಬಳಿಕ ಟಿಮ್ ಪೈನ್ ಮನೆಗೆ ಹೋಗಿ ಅವರ ಮಕ್ಕಳನ್ನು ಎತ್ತಿಕೊಂಡು ಫೋಟೋಕ್ಕೆ ಫೋಸ್ ನೀಡಿದ್ದರು. ಅಲ್ಲಿಂದ ಅವರಿಗೆ ಬೇಬಿ ಸಿಟ್ಟರ್ ಎಂಬ ಹೆಸರು ಬಂದಿದೆ.

  • ಟೀಂ ಇಂಡಿಯಾಕ್ಕೆ ಮತ್ತೊಂದು ಹಿನ್ನಡೆ- ಗಬ್ಬರ್ ನಂತರ ಭುವಿ ಪಂದ್ಯದಿಂದ ಹೊರಕ್ಕೆ

    ಟೀಂ ಇಂಡಿಯಾಕ್ಕೆ ಮತ್ತೊಂದು ಹಿನ್ನಡೆ- ಗಬ್ಬರ್ ನಂತರ ಭುವಿ ಪಂದ್ಯದಿಂದ ಹೊರಕ್ಕೆ

    ನವದೆಹಲಿ: ವಿಶ್ವಕಪ್ ನಲ್ಲಿ ಭಾರತ, ಪಾಕಿಸ್ತಾನದ ವಿರುದ್ಧ ಡಕ್ವರ್ಥ್ ಲೂಯಿಸ್ ನಿಯಮದನ್ವಯ 89 ರನ್‍ಗಳ ಭರ್ಜರಿ ಗೆಲುವು ಸಾಧಿಸಿದೆ. ಆದರೆ ಟೀಂ ಇಂಡಿಯಾಕ್ಕೆ ಗಾಯದ ಸಮಸ್ಯೆ ಕಾಡುತ್ತಿದೆ. ಆರಂಭಿಕ ಆಟಗಾರ ಶಿಖರ್ ಧವನ್ ನಂತರ ಭಾರತದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಪಂದ್ಯದಿಂದ ಹೊರ ನಡೆದಿದ್ದಾರೆ.

    ಭಾನುವಾರ ಇಂಗ್ಲೆಂಡ್‍ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ತನ್ನ ಎರಡನೇ ಓವರ್‍ನ ನಾಲ್ಕನೇ ಎಸೆತವನ್ನು ಎಸೆಯುವ ಸಮಯದಲ್ಲಿ ಗಾಯದ ಸಮಸ್ಯೆಗೆ ತುತ್ತಾದ ಭುವನೇಶ್ವರ್ ಕುಮಾರ್ ಆಟದ ಮಧ್ಯಯೇ ಮೈದಾನದಿಂದ ಹೊರ ಹೋಗಿದ್ದರು.

    ಈ ವಿಚಾರವಾಗಿ ಮಾತನಾಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಭುವನೇಶ್ವರ್ ಕುಮಾರ್ ಕಾಲಿನ ಸ್ನಾಯು ಸೆಳೆತದಿಂದ ಬಳಲುತ್ತಿದ್ದಾರೆ. ಅವರಿಗೆ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಸಲಹೆ ನೀಡಿದ್ದು, ಮುಂದಿನ 2-3 ಪಂದ್ಯಗಳಿಗೆ ಭುವನೇಶ್ವರ್ ಕುಮಾರ್ ಅಲಭ್ಯರಾಗಲಿದ್ದಾರೆ ಎಂದು ಹೇಳಿದ್ದಾರೆ.

    ಭುವನೇಶ್ವರ್ ಕುಮಾರ್ ಅವರು ನಮ್ಮ ತಂಡದಲ್ಲಿ ಉತ್ತಮ ಬೌಲರ್ ಅವರು ಗಾಯದ ಸಮಸ್ಯೆಗೆ ತುತ್ತಾಗಿದ್ದು ನಮಗೆ ಬೇಸರದ ಸಂಗತಿ. ಆದರೆ ನಮ್ಮ ಜೊತೆ ಅವರ ಜಾಗವನ್ನು ತುಂಬಲು ಅನುಭವಿ ವೇಗಿ ಮೊಹಮ್ಮದ್ ಶಮಿ ಅವರು ಇದ್ದಾರೆ. ಹಾಗಾಗಿ ನಾವು ತುಂಬಾ ಚಿಂತಿಸಬೇಕಿಲ್ಲಾ ಎಂದು ಅವರು ಹೇಳಿದ್ದಾರೆ.

    ಈಗಾಗಲೇ ಶಿಖರ್ ಧವನ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ ಮೈದಾನಕ್ಕಿಳಿಯಲಿಲ್ಲ. ಈಗ ಭುವನೇಶ್ವರ್ ಕುಮಾರ್ ಗಾಯಗೊಂಡಿದ್ದಾರೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

  • ಪ್ರಧಾನಿ ಮಾತೇ ಕೇಳಲ್ವಾ ನೀನು? – ಪಾಕ್ ಕ್ಯಾಪ್ಟನ್ ಟ್ರೋಲ್

    ಪ್ರಧಾನಿ ಮಾತೇ ಕೇಳಲ್ವಾ ನೀನು? – ಪಾಕ್ ಕ್ಯಾಪ್ಟನ್ ಟ್ರೋಲ್

    ನವದೆಹಲಿ: ಮ್ಯಾಂಚೆಸ್ಟರ್ ವಿಶ್ವಕಪ್ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದರೆ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಿ ಎಂಬ ಪಾಕ್ ಪ್ರಧಾನಿ ಇಮ್ರಾನ್ ಖಾನ್‍ರ ಸಲಹೆಯನ್ನು ನಿರ್ಲಕ್ಷ್ಯ ಮಾಡಿದಕ್ಕೆ ಪಾಕ್ ತಂಡದ ನಾಯಕ ಸರ್ಫರಾಜ್ ಅಹಮದ್ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಾರೆ.

    ‘ಸರ್ಫರಾಜ್.. ನಮ್ಮ ಪ್ರಧಾನಿಗಳ ಮಾತನ್ನೇ ನೀವು ಕೇಳುವುದಿಲ್ಲವಾ? ಎಷ್ಟು ಪೊಗರು? ಎಂದು ಪಾಕ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸರ್ಫರಾಜ್ ಅಹಮದ್ ರನ್ನ ತರಾಟೆ ತೆಗೆದುಕೊಂಡಿದ್ದಾರೆ.

    ಪಂದ್ಯ ಆರಂಭಕ್ಕೂ ಮುನ್ನವೇ ಟ್ವೀಟ್ ಮಾಡಿದ್ದ ಪಾಕಿಸ್ತಾನ ಪ್ರಧಾನಿ, ಮಾಜಿ ಪಾಕ್ ಕ್ರಿಕೆಟ್ ತಂಡದ ನಾಯಕ, ವಿಶ್ವಕಪ್ ವಿಜೇತ ತಂಡದ ನಾಯಕರೂ ಆಗಿದ್ದ ಇಮ್ರಾನ್ ಖಾನ್, ಪಂದ್ಯದಲ್ಲಿ ಟಾಸ್ ಗೆದ್ದರೆ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಿ. ಸೋಲಿನ ಭಯ ಬಿಟ್ಟು ಧೈರ್ಯದಿಂದ ಆಡಿ ಎಂದು ಸಲಹೆ ನೀಡಿದ್ದರು. ಆದರೆ ಇತ್ತ ಪಂದ್ಯದಲ್ಲಿ ಟಾಸ್ ಗೆಲುವು ಪಡೆಯುತ್ತಿದಂತೆ ಅಚ್ಚರಿ ಎಂಬಂತೆ ಬೌಲಿಂಗ್ ಆಯ್ಕೆ ಮಾಡಿಕೊಂಡ ಸರ್ಫರಾಜ್ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಆ ವೇಳೆಗಾಗಲೇ ಪಂದ್ಯದಲ್ಲಿ ಪಾಕ್ ಸೋಲುವುದು ಖಚಿತ ಎಂದು ಹಲವು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದರು. ಇತ್ತ ಟೀಂ ಇಂಡಿಯಾ ಬ್ಯಾಟಿಂಗ್ ವೇಳೆ ಮೈದಾನದಲ್ಲೇ ಆಕಳಿಸಿದ್ದ ಸರ್ಫರಾಜ್ ಅಹಮದ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೋಲ್ ಆಗಿತ್ತು.

    ಸದ್ಯ ಇಮ್ರಾನ್ ಹೇಳಿದಂತೆ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರೆ ಭಾರತ ವಿರುದ್ಧ ಗೆಲ್ಲುವ ಅವಕಾಶ ಇತ್ತು. ಪಂದ್ಯದಲ್ಲಿ ಸೋಲಲು ಸರ್ಫರಾಜ್ ಅಹಮದ್ ಕಾರಣ ಎಂದು ಪಾಕ್ ಅಭಿಮಾನಿಗಳು ಗರಂ ಆಗಿದ್ದಾರೆ. ಪಂದ್ಯ ಬಳಿಕ ಮಾತನಾಡಿದ ಕೊಹ್ಲಿ ಟಾಸ್ ಗೆಲುವು ಪಡೆದ್ದರೆ ತಾನು ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತಿದೆ ಎಂದು ಹೇಳಿದ್ದರು. ಅಲ್ಲದೇ ಈ ಹಿಂದೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ವೇಳೆಯೂ ಕೊಹ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಆ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಂಡಿತ್ತು.

    https://twitter.com/_Madhu__/status/1140192647476236288

  • ಪಾಕ್ ವಿರುದ್ಧದ ಪಂದ್ಯವನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳಲ್ಲ: ಕೊಹ್ಲಿ

    ಪಾಕ್ ವಿರುದ್ಧದ ಪಂದ್ಯವನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳಲ್ಲ: ಕೊಹ್ಲಿ

    -ಭಾವನಾತ್ಮಕವಾದ್ರೆ ಆಡೋದು ಕಷ್ಟ

    ನವದೆಹಲಿ: ಬದ್ಧ ವೈರಿಗಳನ್ನು ಬಗ್ಗುಬಡಿದು ವಿಶ್ವಕಪ್‍ನಲ್ಲಿ ಭಾರತ ಮೂರನೇ ಪಂದ್ಯವನ್ನು ಗೆದ್ದು ಬೀಗಿದೆ. ಈ ಸಮಯದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ನಾವು ಭಾವನಾತ್ಮಕವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

    ಭಾನುವಾರ ಇಂಗ್ಲೆಂಡ್ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ, ಪಾಕಿಸ್ತಾನದ ವಿರುದ್ಧ ಡಕ್ವರ್ಥ್ ಲೂಯಿಸ್ ನಿಯಮದನ್ವಯ 89 ರನ್‍ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 2017ರಲ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್‍ನ ಸೋಲಿನ ಪ್ರತೀಕಾರವನ್ನು ತೀರಿಸಿಕೊಂಡಿದೆ. ಒಟ್ಟು ವಿಶ್ವಕಪ್‍ನಲ್ಲಿ ಆಡಿದ 7 ಪಂದ್ಯದಲ್ಲೂ ಪಾಕಿಸ್ತಾನಕ್ಕೆ ಸೋಲುಣಿಸಿದೆ.

    ಈ ಜಯದ ನಂತರ ಮಾತನಾಡಿರುವ ವಿರಾಟ್ ಕೊಹ್ಲಿ, ನಾವು ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳದೆ ವೃತ್ತಿಪರವಾಗಿ ತೆಗೆದುಕೊಂಡಿದ್ದವು. ಚಾಂಪಿಯನ್ಸ್ ಟ್ರೋಫಿ ಫೈನಲ್‍ನ ಸೋಲಿನ ನಂತರ ಅದನ್ನು ಮರೆತು ಅವರ ವಿರುದ್ಧ ಉತ್ತಮ ಕ್ರಿಕೆಟ್ ಆಡಿದ್ದೇವೆ. ನಾವು ಈ ಪಂದ್ಯವನ್ನು ಹೆಚ್ಚು ಭಾವನಾತ್ಮಕವಾಗಿ ತೆಗೆದುಕೊಂಡಿದ್ದರೆ ಆಟವಾಡಲು ಕಷ್ಟವಾಗುತ್ತಿತು ಎಂದು ಹೇಳಿದ್ದಾರೆ.

    ನಾವು ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಅಭಿಮಾನಿಗಳು ತೆಗೆದುಕೊಳ್ಳುವ ರೀತಿಯಲ್ಲಿ ತೆಗೆದುಕೊಳ್ಳುವುದಿಲ್ಲ. ಕ್ರಿಕೆಟಿಗರಾದ ನಾವು ಆಟವಾನ್ನು ವೃತ್ತಿಪರವಾಗಿ ಆಡಬೇಕು ಮತ್ತು ಪಂದ್ಯಕ್ಕಾಗಿ ಮೈದಾನದಲ್ಲಿ ಏನೂ ಮಾಡಬೇಕು ಎಂಬುವುದನ್ನು ಅರ್ಥಮಾಡಿಕೊಂಡಿರಬೇಕು ಎಂದು ಹೇಳಿದರು.

    ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದು, ಪಂದ್ಯದಲ್ಲಿ 57 ರನ್ ಗಳಿಸಿದ ಸಂದರ್ಭದಲ್ಲಿ ಏಕದಿನ ಕ್ರಿಕೆಟ್‍ನಲ್ಲಿ ವೇಗವಾಗಿ 11 ಸಾವಿರ ರನ್ ಗಳಿಸಿದ ದಾಖಲೆ ಬರೆದರು. ಕೊಹ್ಲಿ 222 ಇನ್ನಿಂಗ್ಸ್ ಗಳಲ್ಲೇ ಈ ಸಾಧನೆ ಮಾಡಿದ್ದು, ಈ ಹಿಂದೆ ಸಚಿನ್ 276 ಇನ್ನಿಂಗ್ಸ್ ಗಳಲ್ಲಿ 11 ಸಾವಿರ ರನ್ ಗಳಿಸಿದ್ದರು. ಏಕದಿನ ಕ್ರಿಕೆಟ್‍ನಲ್ಲಿ ಕೊಹ್ಲಿ 11 ಸಾವಿರ ರನ್ ಪೂರ್ಣಗೊಳಿಸಿದ 9ನೇ ಆಟಗಾರ ಎಂಬ ಹೆಗ್ಗಳಿಕೆಯನ್ನ ಪಡೆದಿದ್ದು, ಭಾರತ ಪರ ಈ ಸಾಧನೆ ಮಾಡಿ 3ನೇ ಆಟಗಾರ ಎನಿಸಿಕೊಂಡಿದ್ದಾರೆ.

  • ಪಾಕ್ ಮೇಲೆ ಟೀಂ ಇಂಡಿಯಾ ಮತ್ತೊಂದು ಸ್ಟ್ರೈಕ್: ಅಮಿತ್ ಶಾ

    ಪಾಕ್ ಮೇಲೆ ಟೀಂ ಇಂಡಿಯಾ ಮತ್ತೊಂದು ಸ್ಟ್ರೈಕ್: ಅಮಿತ್ ಶಾ

    ನವದೆಹಲಿ: ಟೀಂ ಇಂಡಿಯಾ ತಂಡದಲ್ಲಿ ಆಟಗಾರರು ಬದಲಾದರು, ಕ್ರೀಡಾಂಗಣ ಬದಲಾದರೂ ವಿಶ್ವ ಕ್ರಿಕೆಟ್ ಟೂರ್ನಿಯಲ್ಲಿ ತಮ್ಮನ್ನು ಸೋಲಿಸಲು ಪಾಕಿಸ್ತಾನಕ್ಕೆ ಸಾಧ್ಯವಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

    ಮ್ಯಾಂಚೆಸ್ಟರ್ ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 89 ರನ್ (ಡಕ್ವರ್ಥ್ ಲೂಯಿಸ್ ನಿಯಮ) ಅಂತರದಲ್ಲಿ ಪಾಕಿಸ್ತಾನದ ವಿರುದ್ಧ ಜಯಗಳಿಸಿರುವುದಕ್ಕೆ ಭಾರತದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೊಹ್ಲಿ ಸೇನೆಯ ಈ ಗೆಲುವಿಗೆ ರಾಜಕೀಯ, ಸಿನಿಮಾ, ಕೀಡಾ ರಂಗದ ಹಲವು ದಿಗ್ಗಜರು ಶುಭ ಕೋರಿದ್ದಾರೆ.

    ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡ ಟೀಂ ಇಂಡಿಯಾಗೆ ಶುಭ ಕೋರಿದ್ದು, ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಮಾಡಿರುವ ಮತ್ತೊಂದು ಸ್ಟ್ರೈಕ್ ಎಂದು ಬಣ್ಣಿಸುವ ಮೂಲಕ ಅಭಿನಂದನೆ ತಿಳಿಸಿದ್ದಾರೆ. ಅಲ್ಲದೆ ಕೇಂದ್ರ ಸಚಿವರಾದ ರಾಜ್‍ನಾಥ್ ಸಿಂಗ್, ನಿತಿನ್ ಗಡ್ಕರಿ, ಕಿರಣ್ ರಿಜಿಜು, ಮಾಜಿ ಕೇಂದ್ರ ಸಚಿವರಾದ ಸುಷ್ಮಾ ಸ್ವರಾಜ್, ರಾಜವರ್ಧನ್ ಸಿಂಗ್ ರಾಥೋಡ್ ಸೇರಿದಂತೆ ಹಲವರು ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ. ಇದನ್ನೂ ಓದಿ: ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು- ಟೀಂ ಇಂಡಿಯಾ ಬೌಲರ್ ಗಳ ಅಬ್ಬರಕ್ಕೆ ಪಾಕ್ ತತ್ತರ

    ಟ್ವೀಟ್‍ನಲ್ಲೇನಿದೆ?:
    ‘ಪಾಕಿಸ್ತಾನದ ಮೇಲೆ ಟೀಂ ಇಂಡಿಯಾ ಮಾಡಿದ ಮತ್ತೊಂದು ಸ್ಟ್ರೈಕ್. ಫಲಿತಾಂಶ ಒಂದೇ ಆಗಿದೆ. ಉತ್ತಮ ಪ್ರದರ್ಶನ ನೀಡಿದ ತಂಡಕ್ಕೆ ಅಭಿನಂದನೆ. ಈ ಗೆಲುವಿನಿಂದ ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುತ್ತಾರೆ. ಗೆಲುವನ್ನು ಸಂಭ್ರಮದೊಂದಿಗೆ ಸ್ವೀಕರಿಸುತ್ತೇವೆ’ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

    ‘ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿದೆ. ಅದ್ಭುತ ವಿಜಯ ಪಡೆದ ಟೀಂ ಇಂಡಿಯಾಗೆ ಅಭಿನಂದನೆ. ಜೈ ಹಿಂದ್’ ಎಂದು ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದಾರೆ.

    ‘ರನ್ ಮಳೆ, ಅಂತಿಮವಾಗಿ ನಮ್ಮದೆ 7-0 ಅಧಿಪತ್ಯ. ಜೈಹಿಂದ್ ಎಂದು ಟೀಂ ಇಂಡಿಯಾ ಮಾಜಿ ಆಟಗಾರ, ಬಿಜೆಪಿ ಎಂಪಿ ಗೌತಮ್ ಗಂಭೀರ್ ಟ್ವೀಟ್ ಮಾಡಿದ್ದಾರೆ.

  • ಬೃಹತ್ ಮೊತ್ತದತ್ತ ಟೀಂ ಇಂಡಿಯಾ – ಪಂದ್ಯಕ್ಕೆ ವರುಣ ಅಡ್ಡಿ

    ಬೃಹತ್ ಮೊತ್ತದತ್ತ ಟೀಂ ಇಂಡಿಯಾ – ಪಂದ್ಯಕ್ಕೆ ವರುಣ ಅಡ್ಡಿ

    ಮ್ಯಾಂಚೆಸ್ಟರ್: ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಭರ್ಜರಿ ಶತಕ (140 ರನ್, 78 ಎಸೆತ, 3 ಬೌಂಡರಿ, 2 ಸಿಕ್ಸರ್) ಹಾಗೂ ರಾಹುಲ್, ನಾಯಕ ಕೊಹ್ಲಿರ ಅರ್ಧ ಶತಕಗಳ ನೆರವಿನಿಂದ ಟೀಂ ಇಂಡಿಯಾ 46.4 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 305 ರನ್ ಗಳಿಸಿದ್ದು, ಈ ನಡುವೆ ವರುಣ ಪಂದ್ಯಕ್ಕೆ ಅಡ್ಡಿ ಪಡಿಸಿದ್ದಾನೆ.

    ಧವನ್ ಅನುಪಸ್ಥಿತಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿ ತಂಡಕ್ಕೆ ನಿಧಾನಗತಿಯ ಆರಂಭ ನೀಡಿದರು. ಪಾಕ್ ಬೌಲರ್ ಗಳ ಕೆಟ್ಟ ಎಸೆತಗಳನ್ನು ದಂಡಿಸುತ್ತ ಸಾಗಿದ ಈ ಜೋಡಿ ಮೊದಲ 10 ಓವರ್ ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 53 ರನ್ ಕಲೆ ಹಾಕಿತ್ತು. ಈ ವೇಳೆಗೆ ಪಾಕಿಸ್ತಾನದ ಬೌಲರ್ ಮೊಹಮ್ಮದ್ ತಹೀರ್ ಪಿಚ್ ನ ಮಧ್ಯ ಭಾಗದಲ್ಲಿ ಓಡಾಡಿದ ಪರಿಣಾಮ 2 ಬಾರಿ ಅಂಪೈರ್ ರಿಂದ ಎಚ್ಚರಿಕೆ ಪಡೆದಿದ್ದರು. ಅಲ್ಲದೇ ಟೀಂ ಇಂಡಿಯಾದ ಇಬ್ಬರು ಆರಂಭಿಕರನ್ನು ರನೌಟ್ ಮಾಡುವ ಎರಡು ಅವಕಾಶಗಳನ್ನು ಪಾಕ್ ಕೈ ಚೆಲ್ಲಿತ್ತು.

    ರೋಹಿತ್ ಬಿರುಸಿನ ಆಟಕ್ಕೆ ಮುಂದಾದರೆ ರಾಹುಲ್ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು. ಇಬ್ಬರು ಆಟಗಾರರು ಜುಗಲ್ ಬಂದಿ ನಡೆಸಿ ಪಾಕ್ ಬೌಲರ್ ಗಳ ಬೆವರಿಳಿಸಿದರು. ತಂಡದ ಮೊದಲ 50 ರನ್, 60 ಎಸೆಗಳಲ್ಲಿ ಬಂದರೆ ಮಂದಿನ 50 ರನ್ 45 ಎಸೆತಗಳಲ್ಲಿ ಹರಿದು ಬಂತು. 17.3 ಓವರ್ ಗಳಲ್ಲಿ ಭಾರತ 100 ರನ್ ಗಡಿದಾಡಿತ್ತು. ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿಗೆ ಪಾಕಿಸ್ತಾನದ ವಿರುದ್ದ ಟೀಂ ಇಂಡಿಯಾ ಆರಂಭಿಕ ಜೋಡಿ ಶತಕ ಜೊತೆಯಾಟ ನೀಡಿದ ಸಾಧನೆ ಮಾಡಿತು. ಈ ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ರಾಹುಲ್ 78 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ನೆರವಿನಿಂದ 57 ರನ್ ಗಳಿಸಿ ವಹಾಬ್ ರಿಯಾಜ್‍ಗೆ ವಿಕೆಟ್ ಒಪ್ಪಿಸಿದರು.

    ರೋ’ಹಿಟ್’: ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಅಜೇಯ 122 ರನ್ ಹಾಗೂ ಆಸ್ಟ್ರೇಲಿಯಾ ವಿರುದ್ಧ 57 ರನ್ ಗಳಿಸಿದ್ದ ರೋಹಿತ್ ಶರ್ಮಾ ಪಾಕಿಸ್ತಾನದ ವಿರುದ್ಧವೂ ಭರ್ಜರಿ ಬ್ಯಾಟಿಂಗ್ ನಡೆಸಿದರು. 34 ಎಸೆತಗಳಲ್ಲೇ 50 ರನ್ ಪೂರೈಸಿದ ರೋಹಿತ್ 85 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದರು. ಆ ಮೂಲಕ ವೃತ್ತಿಯ 24ನೇ ಶತಕ, 2019ರ ಟೂನಿಯಲ್ಲಿ 2ನೇ ಶತಕ ಸಿಡಿಸಿದರು. ಸಚಿನ್ (6), ಗಂಗೂಲಿ (5) ಮತ್ತು ಶಿಖರ್ ಧವನ್ (3) ಬಳಿಕ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಭಾರತೀಯ ಆಟಗಾರರಾಗಿದ್ದಾರೆ.

    ಉತ್ತಮ ಆಟದ ಮೂಲಕ ಮುನ್ನಗುತ್ತಿದ್ದ ರೋಹಿತ್ ಶರ್ಮಾ ವಿಕೆಟನ್ನು ವಯಾಬ್ ರಿಯಾಜ್ ಪಡೆದು ಪಾಕಿಸ್ತಾನಕ್ಕೆ ಬಹುದೊಟ್ಟ ಬ್ರೇಕ್ ನೀಡಿದರು. ಇದಕ್ತ್ತಕೂ ಮುನ್ನ ರೋಹಿತ್ ರನ್ನು ಕೂಡಿಕೊಂಡ ನಾಯಕ ವಿರಾಟ್ ಕೊಹ್ಲಿ ತಂಡದ ಸ್ಕೋರ್ ಹೆಚ್ಚಿಸಲು ರಕ್ಷಣಾತ್ಮಕವಾಗಿ ಆಡುತ್ತ ಸಾಗಿದರು. 2ನೇ ವಿಕೆಟ್ 98 ರನ್ ಜೊತೆಯಾಟ ನೀಡಿದರು. ಕೊಹ್ಲಿ 51 ಎಸೆತಗಳಲ್ಲಿ ಅರ್ಧ ಶತಕ ಪೂರ್ಣಗೊಳಿಸದರೆ, ಆ ಬಳಿಕ ಬಂದ ಹಾರ್ದಿಕ್ ಪಾಂಡ್ಯ 19 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ನಿಂದ 26 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

    ಅಂತಿಮ ಓವರ್ ಗಳಲ್ಲಿ ಬಿರುಸಿನ ಆಟಕ್ಕೆ ಮುಂದಾದ ನಾಯಕ ಕೊಹ್ಲಿ ಟೀಂ ಇಂಡಿಯಾ ಮೊತ್ತವನ್ನು 300 ಗಡಿ ದಾಟಲು ಕಾರಣರಾದರು. ಇತ್ತ ಧೋನಿ 2 ಎಸೆತಗಳಲ್ಲಿ 1 ರನ್ ಗಳಿಸಿ ಔಟಾದರು. ಕೊಹ್ಲಿ 62 ಎಸೆತಗಳಲ್ಲಿ 71 ರನ್ ಗಳಿಸಿದ್ದು, 6 ಎಸೆತಗಳನ್ನು ಎದುರಿಸಿರುವ ವಿಜಯ್ ಶಂಕರ್ 3 ರನ್ ಗಳಿಸಿ ಬ್ಯಾಟಿಂಗ್ ನಡೆಸುತ್ತಿದ್ದಾರೆ.

    ಟಾಸ್ ವಿಶೇಷ: ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಇಂಡೋ, ಪಾಕ್ ಕದನದಲ್ಲಿ ಇದುವರೆಗೂ ಇತ್ತಂಡಗಳು 6 ಬಾರಿ ಮುಖಾಮುಖಿಯಾಗಿತ್ತು. 6 ಪಂದ್ಯಗಳಲ್ಲಿ ಭಾರತ ಗೆಲುವು ಪಡೆದಿದ್ದರೆ, ಈ ಪಂದ್ಯಗಳಲ್ಲಿ ಟಾಸ್ ಗೆದ್ದ ನಾಯಕರು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಆದರೆ ಮೊದಲ ಬಾರಿಗೆ ಪಾಕ್ ನಾಯಕ ಸರ್ಫರಾಜ್ ಅಹ್ಮದ್ ಟಾಸ್ ಗೆದ್ದು, ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು.

  • ಪಾಕ್ ವಿರುದ್ಧದ ಪಂದ್ಯದಲ್ಲಿ ದ್ರಾವಿಡ್‍ರನ್ನ ಹಿಂದಿಕ್ಕಿದ ಧೋನಿ

    ಪಾಕ್ ವಿರುದ್ಧದ ಪಂದ್ಯದಲ್ಲಿ ದ್ರಾವಿಡ್‍ರನ್ನ ಹಿಂದಿಕ್ಕಿದ ಧೋನಿ

    ಮ್ಯಾಂಚೆಸ್ಟರ್: ಪಾಕಿಸ್ತಾನ ವಿರುದ್ಧ ಮಹತ್ವದ ವಿಶ್ವಕಪ್ ಪಂದ್ಯದಲ್ಲಿ ಆಡುವ ಮೂಲಕ ಟೀಂ ಇಂಡಿಯಾ ಮಾಜಿ ನಾಯಕ ಅಪರೂಪದ ಸಾಧನೆಯನ್ನು ಮಾಡಿದ್ದು, ಸಚಿನ್ ಬಳಿಕ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎನಿಸಿಕೊಂಡಿದ್ದಾರೆ.

    ಇದುವರೆಗೂ ಧೋನಿ 341 ಏಕದಿನ ಪಂದ್ಯಗಳನ್ನು ಆಡಿದ್ದು, ಟೀಂ ಇಂಡಿಯಾ ಮಾಜಿ ಆಟಗಾರ ರಾಹುಲ್ ದ್ರಾವಿಡ್ 340 ಪಂದ್ಯಗಳನ್ನು ಆಡಿದ್ದರು. ಆ ಮೂಲಕ ರಾಹುಲ್ ದ್ರಾವಿಡ್ ದಾಖಲೆಯನ್ನು ಧೋನಿ ಹಿಂದಿಕ್ಕಿದ್ದಾರೆ. ಉಳಿದಂತೆ ಪಟ್ಟಿಯಲ್ಲಿ 461 ಏಕದಿನ ಪಂದ್ಯಗಳನ್ನು ಆಡಿರುವ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನ ಪಡೆದಿದ್ದಾರೆ.

    ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿಯೇ ಧೋನಿ ಮಹತ್ವದ ಸಾಧನೆ ಮಾಡಿರುವುದು ಅಭಿಮಾನಿಗಳ ಸಂತಸ ಹೆಚ್ಚಾಗಲು ಕಾರಣವಾಗಿದೆ. 13 ವರ್ಷಗಳಿಂದ ಟೀಂ ಇಂಡಿಯಾ ತಂಡದ ಭಾಗವಾಗಿರುವ ಧೋನಿ 2004 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಡಿದ್ದರು. ಆ ಬಳಿಕ ತಮ್ಮ ನಾಯಕತ್ವದಲ್ಲಿ ಐಸಿಸಿ ನಡೆಸುವ ಟಿ20, ಏಕದಿನ ಹಾಗೂ ಚಾಂಪಿಯನ್ಸ್ ಟ್ರೋಫಿಗಳಲ್ಲಿ ಗೆಲುವು ಪಡೆದು ತಂಡವನ್ನು ಮುನ್ನಡೆಸಿದ್ದರು. ಉಳಿದಂತೆ ಧೋನಿ ಏಷ್ಯಾ IX ತಂಡದ ಪರ 3 ಪಂದ್ಯಗಳನ್ನಾಡಿದ್ದಾರೆ.

  • ಇಂದು ಇಂಡೋ-ಪಾಕ್ ಮಧ್ಯೆ ಹೈವೋಲ್ಟೇಜ್ ಫೈಟ್ – ಮ್ಯಾಂಚೆಸ್ಟರ್‌ನಲ್ಲಾಗುತ್ತಾ ಸರ್ಜಿಕಲ್ ಸ್ಟ್ರೈಕ್

    ಇಂದು ಇಂಡೋ-ಪಾಕ್ ಮಧ್ಯೆ ಹೈವೋಲ್ಟೇಜ್ ಫೈಟ್ – ಮ್ಯಾಂಚೆಸ್ಟರ್‌ನಲ್ಲಾಗುತ್ತಾ ಸರ್ಜಿಕಲ್ ಸ್ಟ್ರೈಕ್

    ಮ್ಯಾಂಚೆಸ್ಟರ್‌: ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂಗ್ಲೆಂಡ್‍ನ ಮ್ಯಾಂಚೆಸ್ಟರ್‌ನ ಕ್ರಿಕೆಟ್ ಸ್ಟೇಡಿಯಂನಲ್ಲಿ ಟೀಂ ಇಂಡಿಯಾದ ಸರ್ಜಿಕಲ್ ಸ್ಟ್ರೈಕ್ ನೋಡಲು ಸಿಲಿಕಾನ್ ಸಿಟಿಯ ಮಂದಿ ಕೂಡ ಕಾತುರದಿಂದ ಕಾದು ಕುಳಿತಿದ್ದಾರೆ.

    ಭಾರತ -ಪಾಕಿಸ್ತಾನ ವಿಶ್ವಕಪ್ ಕ್ರಿಕೆಟ್ ಸಮರಕ್ಕೆ ಮ್ಯಾಂಚೆಸ್ಟರ್‌ನ ಮೈದಾನ ಸಿದ್ಧವಾಗಿದೆ. ಇಂಗ್ಲೆಂಡ್‍ನಲ್ಲಿ ನಡೆಯುವ ಪಂದ್ಯವನ್ನು ಲೈವ್ ನೋಡಲು ಸಿಲಿಕಾನ್ ಸಿಟಿ ಮಂದಿ ಕೂಡ ಕಾತರರಾಗಿದ್ದಾರೆ. ಭಾನುವಾರ ರಜೆ ಬೇರೆ, ಶಾಪಿಂಗ್, ಮಾಲ್ ರೌಂಡ್ಸ್ ಎಲ್ಲದಕ್ಕೂ ಬ್ರೇಕ್ ಹಾಕಿ ಮ್ಯಾಚ್ ನೋಡುವ ತಯಾರಿಯಲ್ಲಿದ್ದಾರೆ. ನಗರದ ಗಲ್ಲಿಗಲ್ಲಿಗಳಲ್ಲಿ ಸಿಗುವ ಟೀ ಶಾಪ್‍ಗಳಲ್ಲಿ ಇಂಡೋ-ಪಾಕ್ ಮ್ಯಾಚ್ ನೋಡಲು ಸಹ ಜನ ಕಾದಿದ್ದಾರೆ.

    ಕ್ಲಬ್, ಪಬ್, ಬಾರ್ ಆ್ಯಂಡ್ ರೆಸ್ಟೋರೆಂಟ್‍ಗಳು ಕೂಡ ಇಂದು ಹೌಸ್‍ಫುಲ್ ಆಗಿರುತ್ತವೆ. ದೊಡ್ಡ ದೊಡ್ಡ ಸ್ಕ್ರೀನ್‍ಗಳಲ್ಲಿ ಟೀಂ ಇಂಡಿಯಾ, ಪಾಕ್ ಮೇಲೆ ಸವಾರಿ ಮಾಡುವುದನ್ನು ನೋಡಲು ಅತಿ ಉತ್ಸಾಹದಿಂದ ಕಾದಿದ್ದಾರೆ. ಭಾರತ ಕಪ್ ಗೆಲ್ಲುತ್ತೋ ಬಿಡುತ್ತೋ ಅದು ನಮಗೆ ಬೇಕಾಗಿಲ್ಲ. ಆದರೆ ಪಾಕಿಸ್ತಾನದ ವಿರುದ್ಧ ಗೆಲ್ಲಬೇಕು ಅಷ್ಟೇ ಎಂದು ಭಾರತೀಯರು ಹೇಳುತ್ತಿದ್ದಾರೆ.