Tag: ವಿಶ್ವಕಪ್

  • ವಿಶ್ವಕಪ್ ಸಮಯದಲ್ಲೂ ಏರಿಕೆಯಾಗದ ಟಿವಿ ಮಾರಾಟ, ಎಸಿಗಾಗಿ ಮುಗಿಬಿದ್ದ ಜನ

    ವಿಶ್ವಕಪ್ ಸಮಯದಲ್ಲೂ ಏರಿಕೆಯಾಗದ ಟಿವಿ ಮಾರಾಟ, ಎಸಿಗಾಗಿ ಮುಗಿಬಿದ್ದ ಜನ

    ಕೋಲ್ಕತ್ತಾ: ಐಸಿಸಿ ವಿಶ್ವಕಪ್ ಕ್ರಿಕೆಟ್ ಅಬ್ಬರ ಆರಂಭವಾಗಿದ್ದು, ಕ್ರಿಕೆಟ್ ಪ್ರಿಯ ಅಭಿಮಾನಿಗಳನ್ನು ಹೆಚ್ಚು ಹೊಂದಿರುವ ಭಾರತದಲ್ಲಿ ಇದರ ಕ್ರೇಜ್ ಹೆಚ್ಚಾಗಿಯೇ ಇರುತ್ತದೆ. ಈ ಹಿನ್ನೆಲೆಯಲ್ಲೇ ವಿಶ್ವಕಪ್ ಸಮಯದಲ್ಲಿ ಹೊಸ ಟಿವಿಗಳ ಮಾರಾಟ ಕೂಡ ಸಾಮಾನ್ಯವಾಗಿ ಹೆಚ್ಚಾಗುತ್ತದೆ. ಆದರೆ ಈ ಬಾರಿ ಹೆಚ್ಚಾದ ಬಿಸಿಲಿನ ತಾಪಮಾನದಿಂದಾಗಿ ಹೆಚ್ಚು ಮಂದಿ ಟಿವಿ ಖರೀದಿ ಮಾಡುವ ಬದಲು ಎಸಿಗಳ ಖರೀದಿ ಮಾಡಿದ್ದಾರೆ. ಪರಿಣಾಮ ಮಾರುಕಟ್ಟೆಯಲ್ಲಿ ಎಸಿ ಮಾರಾಟ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

    ಸಾಮಾನ್ಯವಾಗಿ ವಿಶ್ವಕಪ್ ಟೂರ್ನಿ ಆರಂಭವಾಗುತ್ತಿದಂತೆ ಟಿವಿ ಮಾರಾಟಗಾರ ಸಂಖ್ಯೆಯಲ್ಲೂ ಹೆಚ್ಚಾಗುತ್ತಿತ್ತು. ಆದರೆ ಈ ವರ್ಷ ದೇಶದಲ್ಲಿ ತಾಪಮಾನ ಏರಿಕೆ 40 ಡಿಗ್ರಿ ಸೆಲ್ಸಿಯಸ್ ತಾಪಮಾನದಿಂದಾಗಿ, ಐಸಿಸಿ ವಿಶ್ವಕಪ್ ಆಕರ್ಷಣೆಯ ನಡುವೆಯೂ ಎಸಿ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದಾರೆ.

    2017-18ರಲ್ಲಿ ಎಸಿ ಮಾರಾಟದಲ್ಲಿ ಭಾರೀ ಇಳಿಕೆಯಾಗಿತ್ತು, ಆದರೆ ಈ ಬಾರಿ ಏಪ್ರಿಲ್‍ನಿಂದ ಮೇ ತಿಂಗಳವರೆಗೆ ಎಸಿ ಮಾರಾಟ ಶೇ.18-20ರಷ್ಟು ಹೆಚ್ಚಾಗಿದೆ. ಇದೇ ಟ್ರೆಂಡ್ ಜೂನ್ ಮೊದಲ ವಾರದಲ್ಲೂ ಮುಂದುವರಿಯುತ್ತಿದೆ. ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಟಿವಿ ಮಾರಾಟ ಪ್ರಮಾಣದ ಕೇವಲ ಶೇ.5-8 ರಷ್ಟು ಮಾತ್ರ ಏರಿಕೆಯಾಗಿದೆ.

    ಭಾರೀ ಹೊಡೆತ:
    ವಿಶ್ವಕಪ್ ಪಂದ್ಯಾವಳಿ ವಿಕ್ಷೀಸುವವರ ಸಂಖ್ಯೆ ಭಾರತದಲ್ಲಿ ಹೆಚ್ಚಾಗಿದ್ದರೂ ಕೂಡ ಶೇ.80-90ರಷ್ಟು ಏರಿಕೆಯಾಗುತ್ತಿದ್ದ ಟಿವಿ ಮಾರಾಟ ಪ್ರಮಾಣ ಬಾರಿ ಮಟ್ಟದಲ್ಲಿ ಇಳಿಕೆಯಾಗಿದೆ. ಈ ಬಾರಿ ಕ್ರಿಕೆಟ್ ವೀಕ್ಷಕರ ಸಂಖ್ಯೆ ಹೆಚ್ಚಳವಾಗಿದ್ದರೂ ಸಹ ಟಿವಿ ಖರೀದಿಯಲ್ಲಿ ಮಾತ್ರ ಕುಸಿತದಿಂದ ಎಲೆಕ್ಟ್ರಾನಿಕ್ಸ್ ವ್ಯಾಪಾರಿಗಳಿಗೆ ಹೊಡೆತ ನೀಡಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಥಾಮ್ಸನ್ ಮತ್ತು ಕೊಡಕ್ ಟಿವಿ ತಯಾರಿಕಾ ಸಂಸ್ಥೆಯ ಸೂಪರ್ ಪ್ಲಾಸ್ಟ್ರೋನಿಕ್ಸ್ ಸಿಇಓ ಅವನೀತ್ ಸಿಂಗ್, ಕಳೆದ ಎರಡು ತಿಂಗಳಿಂದ ಗ್ರಾಹಕರ ಕೊಂಡುಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತಲೇ ಇದ್ದು, ಎಸಿ ಖರೀದಿಸಿದ ಬಳಿಕ ಜನ ಬೇರೆ ಉತ್ಪನ್ನಗಳಿಗೆ ಸಾವಿರ ರೂ.ಗಳನ್ನೂ ಖರ್ಚು ಮಾಡಲು ಜನರು ಹಿಂಜರಿಯುತ್ತಾರೆ ಎಂದಿದ್ದಾರೆ.

    ಗ್ರೇಟ್ ಈಸ್ಟರ್ನ್ ರಿಟೇಲ್‍ನ ನಿರ್ದೇಶಕ ಪುಲಕಿತ್ ಬೇದ್ ಮಾತನಾಡಿ, ಒಟ್ಟಾರೆಯಾಗಿ ಕಳೆದ ದೀಪಾವಳಿಯಿಂದಲೂ ಟಿವಿ ಕಂಪನಿಗಳು ಗ್ರಾಹಕರನ್ನು ಸೆಳೆಯಲು ವಿವಿಧ ಪ್ರಯತ್ನಗಳನ್ನು ನಡೆಸುತ್ತಿದೆ. ಟಿವಿ ಮಾರಾಟ ಮೇ ತಿಂಗಳಿನಲ್ಲಿ ಮಾತ್ರ ಶೇ.20ರಷ್ಟು ಹೆಚ್ಚಾಗಿತ್ತು. ಆದರೆ 2018ರ ರಷ್ಯಾದ ಫುಟ್ಬಾಲ್ ಫಿಫಾ ವಿಶ್ವಕಪ್ ಸಮಯ ಸೇರಿದಂತೆ 2018 ರ ಜೂನ್ ನಿಂದ ಮಾರಾಟ ಪ್ರಮಾಣ ಭಾರೀ ಇಳಿಕೆ ಕಂಡಿದೆ ಎಂದಿದ್ದಾರೆ.

    ವಿಜಯ್ ಸೇಲ್ಸ್, ಗ್ರೇಟ್ ಎಲೆಕ್ಟ್ರಾನಿಕ್ಸ್ ಮತ್ತು ಕೊಹಿನೂರ್ ಎಲೆಕ್ಟ್ರಾನಿಕ್‍ಗಳಂತಹ ಉತ್ತಮ ಬ್ರಾಂಡ್‍ಗಳು ಸಹ ಈ ವರ್ಷ ಹೆಚ್ಚಿನ ಪ್ರಚಾರವನ್ನು ಕಂಡಿಲ್ಲ. ಕಂಪನಿಗಳಲ್ಲಿ ಹಳೆಯ ಮಾದರಿ ಟಿವಿ ಗಳಿಂದ ಹೊಸ ಮಾಡೆಲ್‍ಗಳ ಟಿವಿಗಳು ಮಾರಾಟವಾಗದೇ ಹಾಗೆ ಉಳಿದಿವೆ. ಕಳೆದ ಎರಡು ವಿಶ್ವಕಪ್‍ಗಳಲ್ಲಿ ಕ್ರಿಕೆಟ್ ಆಟಗಾರರು ಬ್ರಾಂಡ್‍ಗಳ ಬಗ್ಗೆ ಜಾಹೀರಾತು ನೀಡಿದ್ದರೂ ಮಾರುಕಟ್ಟೆಯಲ್ಲಿ ಕುಸಿತ ಕಂಡಿದೆ ಎಂದು ವಿಜಯ್ ಸೇಲ್ಸ್ ತಿಳಿಸಿದ್ದಾರೆ.

    2015ರ ವಿಶ್ವಕಪ್ ಸಮಯದಲ್ಲಿ 55 ಇಂಚುಗಳ ಪರದೆಯ ಟಿವಿಯ ಮಾರಾಟವನ್ನು ದ್ವಿಗುಣಗೊಂಡಿತ್ತು. ಆದರೆ, ಈ ವರ್ಷದ ವಿಶ್ವಕಪ್ ಸಮಯದಲ್ಲಿ 55 ಇಂಚುಗಳ ಟಿವಿಯ ಮಾರಾಟ ಶೇ.20-25 ರಷ್ಟು ಮಾತ್ರ ಹೆಚ್ಚಾಗಿದೆ. ಅಲ್ಲದೇ 26, 32 ಮತ್ತು 45 ಇಂಚುಗಳ ಪರದೆಯ ಟಿವಿಗೆ ಬಹು ಬೇಡಿಕೆ ಉಂಟಾಗಿದ್ದು, ಮಾರಾಟದಲ್ಲಿ ಶೇ.90ರಷ್ಟು ಏರಿಕೆ ಕಂಡಿದೆ ಎಂದು ಸೋನಿ ಇಂಡಿಯಾ ಕಂಪನಿಯ ಮುಖ್ಯಸ್ಥ ಸಚ್ಚಿನ್ ರೈ ಹೇಳಿದ್ದಾರೆ. ಇತ್ತ ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯಲ್ಲಿ ನಾಕೌಟ್ ಹಂತ ತಲುಪಿದರೆ ಬಹುಶಃ ಟಿವಿ ಮಾರಾಟದಲ್ಲಿ ಏರಿಕೆ ಕಾಣಬಹುದೆಂದು ಟಿವಿ ಮಾರಾಟ ಉದ್ಯಮಗಳು ಭರವಸೆ ಹೊಂದಿವೆ.

    ಈ ಬಾರಿಯ ವಿಶ್ವಕಪ್ ಅವಧಿ ಆಫೀಸ್ ಸಮಯದಲ್ಲಿ ನಡೆಯುತ್ತಿದೆ. ಹೀಗಾಗಿ ಕ್ರಿಕೆಟ್ ಪ್ರಿಯರು ತಮ್ಮ ಫೋನ್‍ಗಳಲ್ಲೇ ವೀಕ್ಷಣೆ ಮಾಡುತ್ತಿದ್ದಾರೆ. ಈ ಕಾರಣದಿಂದ ಟಿವಿ ಮಾರುಕಟ್ಟೆಗೆ ಹೊಡೆತ ಬಿದ್ದಿರಬಹುದು ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಕ್ರಿಕೆಟ್ ಮಕ್ಕಳ ಜೀವನದಲ್ಲಿ ಬದಲಾವಣೆಯನ್ನು ತರುತ್ತದೆ: ವಿರಾಟ್ ಕೊಹ್ಲಿ

    ಕ್ರಿಕೆಟ್ ಮಕ್ಕಳ ಜೀವನದಲ್ಲಿ ಬದಲಾವಣೆಯನ್ನು ತರುತ್ತದೆ: ವಿರಾಟ್ ಕೊಹ್ಲಿ

    – ಕ್ರಿಕೆಟ್ ಮನುಷ್ಯತ್ವವನ್ನು ಸುಧಾರಿಸುವ ಶಿಕ್ಷಕ

    ಲಂಡನ್: ಕ್ರಿಕೆಟ್ ಮಕ್ಕಳ ಜೀವನದಲ್ಲಿ ಬದಲಾವಣೆಯನ್ನು ತರುತ್ತದೆ ಮತ್ತು ಒಂದು ಉತ್ತಮ ಶಿಕ್ಷಕನಂತೆ ಆದು ಮನುಷ್ಯತ್ವವನ್ನು ಸುಧಾರಿಸುತ್ತದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

    ವಿರಾಟ್ ಕೊಹ್ಲಿ, ರಿಷಭ್ ಪಂತ್, ಕೆ.ಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಅವರು ಸೌಥಾಂಪ್ಟನ್‍ನಲ್ಲಿ ಅಂತಾರಾಷ್ಟೀಯ ಕ್ರಿಕೆಟ್ ಕೌನ್ಸಿಲ್ ಆಯೋಜಿಸಿದ್ದ ಕ್ರಿಕೆಟ್ ಕ್ಲಿನಿಕ್ ಎಂಬ ಕಾರ್ಯಕ್ರಮದಲ್ಲಿ ಮಕ್ಕಳ ಜೊತೆ ಕಾಲ ಕಳೆದಿದ್ದು, ಆಟೋಗ್ರಾಫ್ ನೀಡಿ ಮಕ್ಕಳೊಂದಿಗೆ ಸಂವಹನ ನಡೆಸಿದ್ದಾರೆ.

    ಈ ಕಾರ್ಯಕ್ರಮದ ನಂತರ ಮಾತನಾಡಿರುವ ಕೊಹ್ಲಿ, ಕ್ರೀಡೆಯ ಉತ್ಸಾಹವನ್ನು ಮಕ್ಕಳ ಜೊತೆ ಹಂಚಿಕೊಂಡಿದ್ದು ತುಂಬಾ ಹೆಮ್ಮೆ ಎನಿಸಿತು. ಕ್ರಿಕೆಟ್ ಒಂದು ಉತ್ತಮ ಶಿಕ್ಷಕರಂತೆ ಆದು ಮನುಷ್ಯತ್ವವನ್ನು ಸುಧಾರಿಸುತ್ತದೆ ಎಂದು ಒತ್ತಿ ಹೇಳಿ, ಅವರು ಬಾಲ್ಯದಲ್ಲಿ ಕ್ರಿಕೆಟ್ ಆಡಿದ ಆರಂಭಿಕ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

    ನನ್ನ ಬಾಲ್ಯದ ದಿನಗಳಲ್ಲಿ ಈ ರೀತಿಯಲ್ಲೇ ಪಾರ್ಕಿನಲ್ಲಿ ಆಟವಾಡಿ ಮೋಜು ಮಸ್ತಿ ಮಾಡುತ್ತಿದೆ. ಕ್ರಿಕೆಟ್ ಮಕ್ಕಳ ಜೀವನವನ್ನು ಸುಧಾರಿಸುತ್ತದೆ ಮತ್ತು ಮನುಷ್ಯತ್ವವನ್ನು ಸುಧಾರಿಸುತ್ತದೆ ಎಂದು ನಾನು ನಂಬಿದ್ದೇನೆ. ಕ್ರಿಕೆಟ್ ಜೀವನದ ಏರಿಳಿತಗಳನ್ನು ಅರ್ಥ ಮಾಡಿಸುತ್ತದೆ ಮತ್ತು ಕಷ್ಟದ ಸಮಯವನ್ನು ಹೇಗೆ ಎದುರಿಸಬೇಕು ಎಂಬುದನ್ನು ಕಲಿಸುತ್ತದೆ. ಅದ್ದರಿಂದ ನನ್ನ ಪ್ರಕಾರ ಕ್ರಿಕೆಟ್ ಉತ್ತಮ ಶಿಕ್ಷಕ ಎಂದು ಹೇಳಿದ್ದಾರೆ.

    ಇತ್ತೀಚಿನ ಕಾಲದಲ್ಲಿ ಹುಡುಗರು ಜೀವನವನ್ನು ಆನಂದಿಸುತ್ತಿದ್ದಾರೆ. ಆದರೆ ಹುಡುಗಿಯರು ನಿಜವಾಗಿಯೂ ತುಂಬಾ ಫೋಕಸ್ ಆಗಿ ಇದ್ದಾರೆ. ಹುಡುಗಿಯರಿಗೆ ಕ್ರಿಕೆಟ್ ಬಗ್ಗೆ ಉತ್ತಮ ಪ್ರಜ್ಞೆ ಇದೆ. ನಾನು ಈ ಮಕ್ಕಳ ಮುಖದಲ್ಲಿ ಮತ್ತು ಕಣ್ಣಿನಲ್ಲಿ ತುಂಬಾ ಖುಷಿಯನ್ನು ಕಾಣುತ್ತಿದ್ದೇನೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ನನಗೆ ತುಂಬಾ ಹೆಮ್ಮೆ ಇದೆ ಎಂದು ಹೇಳಿದ್ದಾರೆ.

    ಪಾಕಿಸ್ತಾನ ವಿರುದ್ಧ ಅರ್ಧ ಶತಕ ಸಿಡಿಸಿ ವೇಗವಾಗಿ ಏಕದಿನ ಕ್ರಿಕೆಟಿನಲ್ಲಿ 11 ಸಾವಿರ ರನ್ ಸಿಡಿಸಿ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಶನಿವಾರ ನಡೆಲಿರುವ ಅಫ್ಘಾನಿಸ್ತಾನದ ವಿರುದ್ಧ ಪಂದ್ಯದಲ್ಲಿ ಮತ್ತೊಂದು ವಿಶ್ವದಾಖಲೆ ನಿರ್ಮಿಸುವ ಸನಿಹದಲ್ಲಿದ್ದಾರೆ. 104 ರನ್ ಗಳಿಸಿದರೆ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ವೇಗವಾಗಿ 20 ಸಾವಿರ ರನ್ ಸಿಡಿಸಿದ ವಿಶ್ವ ದಾಖಲೆ ಬರೆಯಲಿದ್ದಾರೆ.

    ವಿರಾಟ್ ಕೊಹ್ಲಿ 415 ಇನ್ನಿಂಗ್ಸ್ ಅಂದರೆ 131 ಟೆಸ್ಟ್, 222 ಏಕದಿನ ಪಂದ್ಯ ಹಾಗೂ 62 ಟಿ20 ಪಂದ್ಯಗಳಿಂದ ಒಟ್ಟು 19,886 ರನ್ ಸಿಡಿಸಿದ್ದಾರೆ. ಸದ್ಯ ಕೊಹ್ಲಿ 20 ಸಾವಿರ ರನ್ ಸಾಧನೆ ಮಾಡಲು 104 ರನ್ ಮಾತ್ರ ಅಗತ್ಯವಿದ್ದು, ಅಫ್ಘಾನಿಸ್ತಾನ ವಿರುದ್ಧ ಪಂದ್ಯದಲ್ಲಿ ಈ ಸಾಧನೆ ನಿರ್ಮಿಸುವ ಅವಕಾಶ ಹೊಂದಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಪಂತ್‍ಗಿಂತ ಮುಂದಿನ ಪಂದ್ಯಗಳಿಗೆ ವಿಜಯ್ ಶಂಕರ್ ಸೂಕ್ತ: ಹರ್ಭಜನ್

    ಪಂತ್‍ಗಿಂತ ಮುಂದಿನ ಪಂದ್ಯಗಳಿಗೆ ವಿಜಯ್ ಶಂಕರ್ ಸೂಕ್ತ: ಹರ್ಭಜನ್

    – ಭುವಿ ಬದಲು ಶಮಿ ಒಳ್ಳೆಯ ಆಯ್ಕೆ

    ನವದೆಹಲಿ: ಶನಿವಾರ ನಡೆಯಲಿರುವ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ರಿಷಭ್ ಪಂತ್‍ಗಿಂತ ವಿಜಯ್ ಶಂಕರ್ ಅವರನ್ನು ಆಡಿಸುವುದು ಸೂಕ್ತ ಎಂದು ಸ್ಪಿನ್ನರ್ ಹರ್ಭಜನ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಅವರು ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರ ಉಳಿದಿದ್ದು, ಆ ಜಾಗಕ್ಕೆ ಬದಲಿ ಆಟಗಾರ ರಿಷಭ್ ಪಂತ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ವೇಳೆ ಮುಂದಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ವಿಜಯ್ ಅವರನ್ನು ಆಡಿಸಬೇಕಾ ಇಲ್ಲವೇ ಬದಲಿ ಆಟಗಾರ ರಿಷಭ್ ಪಂತ್ ಅವರನ್ನು ಆಡಸಬೇಕಾ ಎಂಬ ಪ್ರಶ್ನೆ ಎದ್ದಿದೆ.

    ಇದರ ನಡುವೇ ಭಾರತ ತಂಡಕ್ಕೆ ಇನ್ನೊಂದು ಸಮಸ್ಯೆ ಎದುರಾಗಿದ್ದು ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರು ಸ್ನಾಯು ಸೆಳೆತಕ್ಕೆ ತುತ್ತಾಗಿ ಪಂದ್ಯದಿಂದ ಹೊರ ಉಳಿದಿದ್ದಾರೆ. ಹೀಗಾಗಿ ಅವರ ಜಾಗದಲ್ಲಿ ಯಾರನ್ನು ಆಡಿಸಬೇಕು ಎಂಬುದು ಕೂಡ ಭಾರತಕ್ಕೆ ಬಂದು ಸವಾಲಾಗಿದೆ. ಭುವಿ ಬದಲು ಅನುಭವಿ ಮೊಹಮ್ಮದ್ ಶಮಿ ಅವರನ್ನು ಆಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

    ಈ ವಿಚಾರವಾಗಿ ಮಾತನಾಡಿರುವ ಹರ್ಭಜನ್ ಸಿಂಗ್ ಅವರು, ರಿಷಭ್ ಪಂತ್‍ಗಿಂತ ಮುಂದಿನ ಪಂದ್ಯಗಳಿಗೆ ವಿಜಯ್ ಶಂಕರ್ ಆಡಿಸುವುದು ಸೂಕ್ತ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅವರು ಉತ್ತಮ ಪ್ರದರ್ಶನ ತೋರಿದ್ದಾರೆ. ಅದ್ದರಿಂದ ಪಂತ್‍ಗಿಂತ ಮುಂದಿನ ಪಂದ್ಯದಲ್ಲಿ ವಿಜಯ್ ಶಂಕರ್ ಅವರನ್ನು ಆಡಿಸುವುದು ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಭುವನೇಶ್ವರ್ ಕುಮಾರ್ ಅವರು ಗಾಯಗೊಂಡ ಕಾರಣ ಅವರ ಬದಲು ಶಮಿ ಅವರನ್ನು ಆಡಿಸಬಹುದು, ಆದನ್ನು ಬಿಟ್ಟರೆ ಈಗ ಇರುವ ಕಾಂಬಿನೇಷನ್‍ನಲ್ಲೇ ಇಂಡಿಯಾ ಆಡುವುದು ಒಳಿತು. ಭಾರತ ತಂಡದಲ್ಲಿ ಆಗಲೇ ಒಳ್ಳೆಯ ಸ್ಫೋಟಕ ಬ್ಯಾಟ್ಸ್‌ಮ್ಯಾನ್‍ಗಳು  ಇದ್ದಾರೆ. ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಸಿಕ್ಸರ್ ಹೊಡೆಯಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಈಗ ಇರುವ ಆಟಗಾರರೇ ಭಾರತವನ್ನು 400 ರನ್‍ಗಳವರೆಗೆ ಕರೆದುಕೊಂಡು ಹೋಗುತ್ತಾರೆ ಎಂದು ಹೇಳಿದ್ದಾರೆ.

    ಬುಧವಾರ ಅಭ್ಯಾಸ ಮಾಡುತ್ತಿರುವ ವೇಳೆ ಜಸ್ಪ್ರಿತ್ ಬುಮ್ರಾ ಅವರ ಎಸೆದ ಯಾರ್ಕರ್ ವಿಜಯ್ ಅವರ ಕಾಲಿನ ಬೆರಳನ್ನು ಗಾಯಗೊಳಿಸಿತ್ತು. ಅವರ ಗಾಯಗೊಂಡಿದ್ದಾರೆ ಮುಂದಿನ ಪಂದ್ಯಗಳಿಗೆ ಲಭ್ಯವಿಲ್ಲ ಎಂದು ಸುದ್ದಿಯಾಗಿತ್ತು. ಆದರೆ ಈಗ ಚೇತರಿಸಿಕೊಂಡಿರುವ ವಿಜಯ್ ಶಂಕರ್ ಗುರುವಾರ ಮತ್ತೆ ನೆಟ್ಸ್ ನಲ್ಲಿ ಕಾಣಿಸಿಕೊಂಡಿದ್ದು ಅವರು ಮುಂದಿನ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡಲಿದ್ದಾರೆ ಎನ್ನಲಾಗಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಸಚಿನ್, ಲಾರಾ ವಿಶ್ವದಾಖಲೆ ಮುರಿಯುವ ಸನಿಹದಲ್ಲಿ ಕೊಹ್ಲಿ

    ಸಚಿನ್, ಲಾರಾ ವಿಶ್ವದಾಖಲೆ ಮುರಿಯುವ ಸನಿಹದಲ್ಲಿ ಕೊಹ್ಲಿ

    ಲಂಡನ್: ಪಾಕಿಸ್ತಾನ ವಿರುದ್ಧ ಅರ್ಧ ಶತಕ ಸಿಡಿಸಿ ವೇಗವಾಗಿ ಏಕದಿನ ಕ್ರಿಕೆಟಿನಲ್ಲಿ 11 ಸಾವಿರ ರನ್ ಸಿಡಿಸಿ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಶನಿವಾರ ನಡೆಲಿರುವ ಅಫ್ಘಾನಿಸ್ತಾನದ ವಿರುದ್ಧ ಪಂದ್ಯದಲ್ಲಿ ಮತ್ತೊಂದು ವಿಶ್ವದಾಖಲೆ ನಿರ್ಮಿಸುವ ಸನಿಹದಲ್ಲಿದ್ದಾರೆ.

    2019 ರ ವಿಶ್ವಕಪ್ ಟೂರ್ನಿಯಲ್ಲಿ ಶತಕ ಸಿಡಿಸಬೇಕಿರುವ ಕೊಹ್ಲಿ, 104 ರನ್ ಗಳಿಸಿದರೆ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ವೇಗವಾಗಿ 20 ಸಾವಿರ ರನ್ ಸಿಡಿಸಿದ ವಿಶ್ವ ದಾಖಲೆ ಬರೆಯಲಿದ್ದಾರೆ.

    ವಿರಾಟ್ ಕೊಹ್ಲಿ 415 ಇನ್ನಿಂಗ್ಸ್ ಅಂದರೆ 131 ಟೆಸ್ಟ್, 222 ಏಕದಿನ ಪಂದ್ಯ ಹಾಗೂ 62 ಟಿ20 ಪಂದ್ಯಗಳಿಂದ ಒಟ್ಟು 19,896 ರನ್ ಸಿಡಿಸಿದ್ದಾರೆ. ಸದ್ಯ ಕೊಹ್ಲಿ 20 ಸಾವಿರ ರನ್ ಸಾಧನೆ ಮಾಡಲು 104 ರನ್ ಮಾತ್ರ ಅಗತ್ಯವಿದ್ದು, ಅಫ್ಘಾನಿಸ್ತಾನ ವಿರುದ್ಧ ಪಂದ್ಯದಲ್ಲಿ ಈ ಸಾಧನೆ ನಿರ್ಮಿಸುವ ಅವಕಾಶ ಹೊಂದಿದ್ದಾರೆ.

    ಈ ಹಿಂದೆ ಸಚಿನ್ ತೆಂಡೂಲ್ಕರ್ ಹಾಗೂ ಲಾರಾ 453 ಇನ್ನಿಂಗ್ಸ್ ಗಳಿಂದ 20 ಸಾವಿರ ರನ್ ಸಿಡಿಸಿದ್ದರು. ಉಳಿದಂತೆ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಟಿಂಗ್ 468 ಇನ್ನಿಂಗ್ಸ್ ಗಳಿಂದ ಈ ಸಾಧನೆ ಮಾಡಿದ್ದರು. ಮೂವರು ದಿಗ್ಗಜರನ್ನು ಹಿಂದಿಕ್ಕುವ ಅವಕಾಶವನ್ನು ಕೊಹ್ಲಿ ಹೊಂದಿದ್ದಾರೆ.

    ವಿಶ್ವಕಪ್ ಟೂರ್ನಿಯಲ್ಲಿ ಕೊಹ್ಲಿ, ಸೌತ್ ಆಫ್ರಿಕಾ ವಿರುದ್ಧ 18 ರನ್, ಆಸ್ಟ್ರೇಲಿಯಾ ವಿರುದ್ಧ 82 ರನ್ ಹಾಗೂ ಪಾಕಿಸ್ತಾನದ ವಿರುದ್ಧ 77 ರನ್ ಸಿಡಿಸಿದ್ದಾರೆ. ಸದ್ಯ ಟೀಂ ಇಂಡಿಯಾ ವಿಶ್ವಕಪ್ ಅಂಕಪಟ್ಟಿಯಲ್ಲಿ 4 ಸ್ಥಾನದಲ್ಲಿದ್ದು, ಟೂರ್ನಿಯಲ್ಲಿ ನಾವು ಯಾವುದೇ ತಂಡವನ್ನು ಸುಲಭವಾಗಿ ಪರಿಗಣಿಸುವುದಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಟೀಂ ಇಂಡಿಯಾಗೆ ಬೆಂಬಿಡದ ಗಾಯದ ಸಮಸ್ಯೆ – ಧವನ್ ಬಳಿಕ ವಿಜಯ್ ಶಂಕರ್‌ಗೆ  ಗಾಯ

    ಟೀಂ ಇಂಡಿಯಾಗೆ ಬೆಂಬಿಡದ ಗಾಯದ ಸಮಸ್ಯೆ – ಧವನ್ ಬಳಿಕ ವಿಜಯ್ ಶಂಕರ್‌ಗೆ ಗಾಯ

    ಲಂಡನ್: ಟೀಂ ಇಂಡಿಯಾ ಆಲೌಂಡರ್ ಆಟಗಾರ ವಿಜಯ್ ಶಂಕರ್ ಅಫ್ಘಾನಿಸ್ತಾನದ ಎದುರಿನ ಪಂದ್ಯಕ್ಕಾಗಿ ತರಬೇತಿ ಪಡೆಯುತ್ತಿದ್ದ ವೇಳೆ ಗಾಯಗೊಂಡಿದ್ದಾರೆ.

    ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲೇ ವಿಜಯ್ ಶಂಕರ್ ಗಾಯಗೊಂಡಿರುವುದು ಟೀಂ ಇಂಡಿಯಾ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಗಾಯದ ಸಮಸ್ಯೆಯಿಂದ ವಿಜಯ್ ಶಂಕರ್ ತರಬೇತಿಯನ್ನು ಅರ್ಧಕ್ಕೆ ನಿಲ್ಲಿಸಿ ಮೈದಾನದಿಂದ ಹೊರ ನಡೆದಿದ್ದಾರೆ.

    ತರಬೇತಿಯ ವೇಳೆ ವೇಗಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ನಲ್ಲಿ ಅಭ್ಯಾಸ ನಡೆಸುತ್ತಿದ್ದ ವಿಜಯ್ ಶಂಕರ್ ಅವರ ಕಾಲಿನ ಬೆರಳಿಗೆ ಚೆಂಡು ಬಡಿದಿದೆ. ಪರಿಣಾಮ ನೋವಿನಿಂದ ಶಂಕರ್ ತೆರಳಿದ್ದಾರೆ. ಸದ್ಯ ವಿಜಯ್ ಶಂಕರ್ ಅವರ ಗಾಯದ ಸಮಸ್ಯೆ ಬಗ್ಗೆ ಬಿಸಿಸಿಐ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆದರೆ ಮೂಲಗಳ ಪ್ರಕಾರ ವಿಜಯ್ ಶಂಕರ್ ಅವರ ಗಾಯದ ಬಗ್ಗೆ ಹೆಚ್ಚಿನ ಆತಂಕ ಪಡುವಂತಿಲ್ಲ ಎಂಬ ಮಾಹಿತಿ ಲಭಿಸಿದೆ.

    ಧವನ್ ಅವರು ತಂಡದಿಂದ ಹೊರಗುಳಿದ ಪರಿಣಾಮ ರಾಹುಲ್ ಬ್ಯಾಟಿಂಗ್ ಬಡ್ತಿ ನೀಡಿ ಆರಂಭಿಕರಾಗಿ ಕಣಕ್ಕೆ ಇಳಿಸಲಾಗಿತ್ತು. ರಾಹುಲ್ ಅವರ ನಂ.4 ಸ್ಥಾನದಲ್ಲಿ ವಿಜಯ್ ಶಂಕರ್ ಅವರಿಗೆ ಸ್ಥಾನ ನೀಡಲಾಗಿತ್ತು. ಇತ್ತ ಟೀಂ ಇಂಡಿಯಾ ಪ್ರಮುಖ ವೇಗಿ ಭುವನೇಶ್ವರ್ ಅವರು ಕೂಡ ಗಾಯದ ಸಮಸ್ಯೆಗೆ ಸಿಲುಕಿದ್ದು, 8 ದಿನಗಳ ಕಾಲ ವಿಶ್ರಾಂತಿ ಪಡೆದಿದ್ದಾರೆ. ಅಫ್ಘಾನಿಸ್ತಾನ ಪಂದ್ಯ ಸೇರಿದಂತೆ ಜೂನ್ 30 ರಂದು ನಡೆಲಿರುವ ಇಂಗ್ಲೆಂಡ್ ವಿರುದ್ಧ ಪಂದ್ಯಕ್ಕೂ ಭುವನ್ ಅಲಭ್ಯರಾಗಿದ್ದಾರೆ.

    ಧವನ್ ಪ್ರಕರಣದಂತೆಯೇ ಭುವನೇಶ್ವರ್ ಮೇಲೆ ವಿಶ್ವಾಸ ಹೊಂದಿರುವ ಬಿಸಿಸಿಐ ಸಮಿತಿ ಭುವಿ ಚೇತರಿಸಿಕೊಳ್ಳಲಿದ್ದಾರೆ ಎಂದಿದೆ. ಇತ್ತ ಭುವನೇಶ್ವರ್ ಅವರು ಕೂಡ ಕಠಿಣ ಅಭ್ಯಾಸದಿಂದ ದೂರ ಉಳಿದಿದ್ದಾರೆ. ಒಂದೊಮ್ಮೆ ಭುವನೇಶ್ವರ್ ಕೂಡ ಸರಣಿಯಿಂದ ಹೊರಗುಳಿದರೆ ಯುವ ವೇಗಿ ಖಲೀಲ್ ಅಹ್ಮದ್ ಸ್ಥಾನ ಪಡೆಯುವ ಸಾಧ್ಯತೆ ಇದೆ. ಆದರೆ ಅನುಭವಿ ಆಟಗಾರರ ಪರ ಬಿಸಿಸಿಐ ಒಲವು ತೋರಿದರೆ ಇಶಾಂತ್ ಶರ್ಮಾ ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಆರೆಂಜ್ ಜೆರ್ಸಿಯಲ್ಲಿ ಟೀಂ ಇಂಡಿಯಾ ಕಣಕ್ಕೆ

    ಆರೆಂಜ್ ಜೆರ್ಸಿಯಲ್ಲಿ ಟೀಂ ಇಂಡಿಯಾ ಕಣಕ್ಕೆ

    ಲಂಡನ್: ಟೀಂ ಇಂಡಿಯಾ ಬ್ಲೂ ಬಾಯ್ಸ್ ಮೊದಲ ಬಾರಿಗೆ ಆರೆಂಜ್ ಕಲರ್ ಜೆರ್ಸಿಯಲ್ಲಿ ಮೈದಾನಕ್ಕೆ ಇಳಿಯಲಿದ್ದಾರೆ.

    ಮೂಲಗಳ ಪ್ರಕಾರ ಟೀಂ ಇಂಡಿಯಾ ಅಫ್ಘಾನಿಸ್ತಾನದ ವಿರುದ್ಧ ಪಂದ್ಯಕ್ಕೆ ಆರೆಂಜ್ ಜೆರ್ಸಿ ತೊಟ್ಟು ಆಡಲಿದೆ ಎನ್ನಲಾಗಿತ್ತು. ಆದರೆ ಅಫ್ಘಾನಿಸ್ತಾನದ ಬದಲಾಗಿ ಇದೀಗ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆರೆಂಜ್ ಜೆರ್ಸಿ ತೊಡುವುದು ಬಹುತೇಕ ಖಚಿತವಾಗಿದೆ.

    ಕಳೆದ ಕೆಲ ದಿನಗಳ ಹಿಂದೆ ಟೀಂ ಇಂಡಿಯಾ ಯಾವ ಬಣ್ಣದ ಜೆರ್ಸಿ ತೊಡಲಿದೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆದಿತ್ತು. ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ ಟೀಂ ಇಂಡಿಯಾ ಮೊದಲ ಬಾರಿಗೆ ಆರೆಂಜ್ ಬಣ್ಣದಲ್ಲಿ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ.

    ಫುಟ್ಬಾಲ್ ನಿಂದ ಪ್ರೇರಣೆ ಪಡೆದಿದ್ದ ಐಸಿಸಿ, ಜೆರ್ಸಿ ವಿಚಾರದಲ್ಲಿ ಹೋಮ್ ಅಂಡ್ ಅವೇ ನಿಯಮಗಳನ್ನು ಈ ಬಾರಿಯ ವಿಶ್ವಕಪ್ ಲೀಗ್ ನಲ್ಲಿ ಅಳವಡಿಸಿಕೊಂಡಿತ್ತು. ಪರಿಣಾಮ ಪ್ರತಿಯೊಂದು ತಂಡವು ಎರಡು ಬಣ್ಣದ ಕಿಟ್ ಹೊಂದಿರ ಬೇಕಿದೆ. ತವರಿನ ತಂಡಕ್ಕೆ ಮಾತ್ರ ವಿನಾಯಿತಿ ನೀಡಲಾಗಿತ್ತು.

    ಸದ್ಯ ಈ ನಿರ್ಧಾರದ ಬಗ್ಗೆ ಸಾಕಷ್ಟು ಗೊಂದಲಗಳು ಮುಂದುವರಿದಿದ್ದು, ವಿಶ್ವಕಪ್‍ಗೂ ಮುನ್ನವೇ ಎಲ್ಲಾ ತಂಡಗಳು ತಮ್ಮ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದ್ದವು. ಆಸ್ಟ್ರೇಲಿಯಾ ತಂಡ ಹಳದಿ, ನ್ಯೂಜಿಲೆಂಡ್ ಬ್ಲಾಕ್ ಮತ್ತು ವೆಸ್ಟ್ ಇಂಡೀಸ್ ಮೆರೂನ್ ಕಲರ್ ಹೊಂದಿರುವುದರಿಂದ ಈ ತಂಡಗಳು ತಮ್ಮ ಜೆರ್ಸಿಯನ್ನು ಬದಲಾವಣೆ ಮಾಡುವ ಅಗತ್ಯವಿಲ್ಲ. ಆದರೆ ಟೀಂ ಇಂಡಿಯಾ ಸೇರಿದಂತೆ ಉಳಿದ ತಂಡಗಳು ಹೊಸ ಜೆರ್ಸಿ ಧರಿಸುವ ಅಗತ್ಯತೆ ಇದೆ.

    ಟೀಂ ಇಂಡಿಯಾ ಸಮಿತಿ ಮಾತ್ರ ಈವರೆಗೂ ಹೊಸ ಜೆರ್ಸಿ ಧರಿಸುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನ ಬಿಡುಗಡೆ ಮಾಡಿಲ್ಲ. ಆದರೆ ಅಭಿಮಾನಿಗಳು ಮಾತ್ರ ಫೋಟೋ ಶಾಪ್ ಬಳಸಿ ತಮ್ಮ ನೆಚ್ಚಿನ ತಂಡದ ಆಟಗಾರರ ಜೆರ್ಸಿಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ ವಿರಾಟ್ ಕೊಹ್ಲಿ

    ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ ವಿರಾಟ್ ಕೊಹ್ಲಿ

    ಲಂಡನ್: ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಏಕದಿನ ಕ್ರಿಕೆಟಿನಲ್ಲಿ 11 ಸಾವಿರ ರನ್ ದಾಖಲೆ ಬರೆದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ.

    ಆಸ್ಟ್ರೇಲಿಯಾ ವಿರುದ್ಧ ಪಂದ್ಯದ ವೇಳೆ ಮಾಜಿ ನಾಯಕ ಎಂಎಸ್ ಧೋನಿ ಸಿಡಿಸಿದ ಸಿಕ್ಸರ್ ಕಂಡು ಅಚ್ಚರಿ ವ್ಯಕ್ತಪಡಿಸಿದ್ದ ಕೊಹ್ಲಿರ ವಿಡಿಯೋ ಸಾಮಾಜಿಕ ಜಾಲತಾಣ ಟ್ವಿಟ್ಟರಿನಲ್ಲಿ ಬರೋಬ್ಬರಿ 30 ಮಿಲಿಯನ್ ವ್ಯೂ ಕಂಡಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಕೊಹ್ಲಿ, ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

    ನನ್ನ ರಿಯಾಕ್ಷನ್ ಕೂಡ ಟ್ವಿಟ್ಟರಿನಲ್ಲಿ 30 ಮಿಲಿಯನ್ ವ್ಯೂ ಅನ್ನು ದಾಟಿದೆ. ನಿಮ್ಮ ಪ್ರೀತಿ ಹಾಗೂ ಬೆಂಬಲಕ್ಕೆ ಧನ್ಯವಾದ ಎಂದು ಕೊಹ್ಲಿ ಹೇಳಿದ್ದಾರೆ. ಟ್ವಿಟ್ಟರಿನಲ್ಲಿ ಕೊಹ್ಲಿ 100 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದು, ಟ್ವಿಟ್ಟರ್, ಫೇಸ್ ಬುಕ್ ಹಾಗೂ ಇನ್‍ಸ್ಟಾಗ್ರಾಮ್ ನಂತಹ ಸಾಮಾಜಿಕ ಜಾಲತಾಣದಲ್ಲಿ ಅತಿಹೆಚ್ಚು ಹಿಂಬಾಲಕರನ್ನ ಹೊಂದಿರುವ ಕ್ರಿಕೆಟಿಗ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ.

    ವಿಶ್ವಕಪ್ ಟೂರ್ನಿಯಲ್ಲಿ ಕೊಹ್ಲಿ ಆಡಿರುವ ಮೂರು ಇನ್ನಿಂಗ್ಸ್ ಗಳಲ್ಲಿ 177 ರನ್ ಗಳಿಸಿದ್ದು, ಇದರಲ್ಲಿ 2 ಅರ್ಧ ಶತಕಗಳು ಸೇರಿದೆ. ಟೀಂ ಇಂಡಿಯಾ ಅಂಕಪಟ್ಟಿಯಲ್ಲಿ ಸದ್ಯ 4ನೇ ಸ್ಥಾನವನ್ನು ಹೊಂದಿದ್ದು, ಆಡಿರುವ 4 ಪಂದ್ಯಗಳಲ್ಲಿ ಒಂದು ಪಂದ್ಯ ಮಳೆಯಿಂದ ರದ್ದಾಗಿರುವ ಪರಿಣಾಮ 7 ಅಂಕಗಳನ್ನು ಗಳಿಸಿದೆ. ಜೂನ್ 22 ರಂದು ನಡೆಯುವ ಆಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾ ಸಿದ್ಧತೆ ನಡೆಸಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಭಾರತದ ವಿರುದ್ಧ ಸೋತ ಪಾಕ್‍ನನ್ನು ನಿಷೇಧಿಸುವಂತೆ ಅಭಿಮಾನಿಗಳಿಂದ ಕೋರ್ಟಿಗೆ ಅರ್ಜಿ

    ಭಾರತದ ವಿರುದ್ಧ ಸೋತ ಪಾಕ್‍ನನ್ನು ನಿಷೇಧಿಸುವಂತೆ ಅಭಿಮಾನಿಗಳಿಂದ ಕೋರ್ಟಿಗೆ ಅರ್ಜಿ

    – ಪಿಸಿಬಿಗೆ ಕೋರ್ಟ್‍ನಿಂದ ಸಮನ್ಸ್

    ಲಾಹೋರ್: ವಿಶ್ವಕಪ್‍ನಲ್ಲಿ ಭಾರತದ ವಿರುದ್ಧ ಪಂದ್ಯದಲ್ಲಿ ಹೀನಾಯವಾಗಿ ಸೋಲು ಕಂಡ ಪಾಕಿಸ್ತಾನ ತಂಡವನ್ನು ಕ್ರಿಕೆಟ್‍ನಿಂದ ನಿಷೇಧಿಸಬೇಕು ಎಂದು ಪಾಕ್ ಅಭಿಮಾನಿಯೊಬ್ಬರು ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.

    ಜೂನ್ 16, ಭಾನುವಾರ ಇಂಗ್ಲೆಂಡ್‍ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಭಾರತ 89 ರನ್‍ಗಳ ಭರ್ಜರಿ ಜಯವನ್ನು ಕಂಡಿತು. ಬದ್ಧ ವೈರಿಗಳ ಕಾದಾಟದಲ್ಲಿ ಹೀನಾಯವಾಗಿ ಸೋತ ಪಾಕಿಸ್ತಾನ ತಂಡ ಪಾಕ್ ಕ್ರಿಕೆಟ್ ಅಭಿಮಾನಿಗಳಿಂದ ಮತ್ತು ಮಾಜಿ ಆಟಗಾರರಿಂದ ತೀವ್ರ ಟೀಕೆಗೆ ಗುರಿಯಾಗಿದೆ.

    ಪಾಕಿಸ್ತಾನ ಈ ಬಾರಿಯ ವಿಶ್ವಕಪ್‍ನಲ್ಲಿ ಆಡಿದ ಒಟ್ಟು ಐದು ಪಂದ್ಯಗಳಲ್ಲಿ ಕೇವಲ ಮೂರು ಅಂಕವನ್ನು ಪಡೆದು ಅಂಕ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಭಾರತ ತಂಡದ ವಿರುದ್ಧ ಹೀನಾಯವಾಗಿ ಸೋತಿದೆ. ಇದನ್ನು ಸಹಿಸಿಕೊಳ್ಳಲಾಗದ ಪಾಕ್ ಅಭಿಮಾನಿಗಳು ಪಾಕ್ ತಂಡವನ್ನು ಬ್ಯಾನ್ ಮಾಡುವಂತೆ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.

    ಈ ವಿಚಾರವಾಗಿ ಪಾಕ್ ತಂಡದ ಮಾಜಿ ನಾಯಕ ಇಂಜಿಮಾಮ್-ಉಲ್-ಹಕ್ ನೇತೃತ್ವದ ಆಯ್ಕೆ ಸಮಿತಿಯನ್ನು ಕಿತ್ತೊಗೆಯಬೇಕು ಮತ್ತು ಪಾಕ್ ತಂಡವನ್ನು ಕ್ರಿಕೆಟ್‍ನಿಂದ ನಿಷೇಧ ಮಾಡಬೇಕು ಎಂದು ಪಾಕ್ ಅಭಿಮಾನಿಯೊಬ್ಬ ಗುರ್ಜನ್‍ವಾಲ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧಿಕಾರಿಳಿಗೆ ವರದಿ ನೀಡುವಂತೆ ಸಮನ್ಸ್ ನೀಡಿದ್ದಾರೆ.

    ಇದರಿಂದಾಗಿ ಇಂದು ಲಾಹೋರ್‍ ನಲ್ಲಿ ಪಿಸಿಬಿ ಅಧಿಕಾರಿಗಳು ಸಭೆ ಸೇರಲಿದ್ದು, ತಂಡದ ನಿರ್ವಹಣೆಯ ವಿಚಾರದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗುತ್ತದೆ ಎನ್ನಲಾಗಿದೆ. ಮೂಲಗಳ ಪ್ರಕಾರ ತಂಡದ ಕೋಚ್ ಮಿಕ್ಕಿ ಆರ್ಥರ್, ತಂಡದ ವ್ಯವಸ್ಥಾಪಕ ತಲಾತ್ ಅಲಿ ಮತ್ತು ಬೌಲಿಂಗ್ ಕೋಚ್ ಅಜರ್ ಮಹಮೂದ್ ಅವರನ್ನು ಸೇರಿದಂತೆ ಇಡೀ ಆಯ್ಕೆ ಸಮಿತಿಯನ್ನು ವಜಾಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ರಶೀದ್ ಖಾನ್ ಕಾಲೆಳೆದ ಐಸ್ಲ್ಯಾಂಡ್ – ಬೆಂಬಲಕ್ಕೆ ನಿಂತ ಆಟಗಾರರು

    ರಶೀದ್ ಖಾನ್ ಕಾಲೆಳೆದ ಐಸ್ಲ್ಯಾಂಡ್ – ಬೆಂಬಲಕ್ಕೆ ನಿಂತ ಆಟಗಾರರು

    ಲಂಡನ್: ವಿಶ್ವಕಪ್ ಕ್ರಿಕೆಟ್ ಭಾಗವಾಗಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ಬೌಲರ್ ರಶೀದ್ ಖಾನ್ 110 ರನ್‍ಗಳನ್ನು ನೀಡಿ ಕೆಟ್ಟ ದಾಖಲೆಯನ್ನು ಬರೆದಿದ್ದರು. ಸದ್ಯ ಈ ಬಗ್ಗೆ ಟ್ವೀಟ್ ಮಾಡಿರುವ ಐಸ್ಲ್ಯಾಂಡ್ ಕ್ರಿಕೆಟ್, ರಶೀದ್ ಖಾನ್ ಕಾಲೆಳೆದಿದೆ.

    ವಿಶ್ವಕಪ್ ಕ್ರಿಕೆಟ್ ಸರಣಿಗೂ ಮುನ್ನ ಭರವಸೆ ಆಟಗಾರ ಎನಿಸಿಕೊಂಡಿದ್ದ ರಶೀದ್ ಖಾನ್, ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ದುಬಾರಿಯಾಗಿ ಪರಿಣಮಿಸಿದ್ದರು. ಪಂದ್ಯದ ಮೊದಲ 4 ಓವರ್ ಗಳಲ್ಲಿ 29 ರನ್ ಮಾತ್ರ ನೀಡಿದ್ದ ರಶೀದ್ ಖಾನ್, ತಮ್ಮ ಸ್ಪೆಲ್‍ನ ಅಂತಿಮ 5 ಓವರ್ ಗಳಲ್ಲಿ 81 ರನ್ ನೀಡಿದರು. ಪರಿಣಾಮ 9 ಓವರ್ ಗಳಲ್ಲಿ 150 ಬಿಟ್ಟುಕೊಟ್ಟು ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಬೌಲರ್ ಎನಿಸಿಕೊಂಡರು. ಅಲ್ಲದೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ 100ಪ್ಲಸ್ ರನ್ ಕೊಟ್ಟ ಸಿನ್ನರ್ ಎಂಬ ಅಪಖ್ಯಾತಿಯನ್ನು ಪಡೆದರು.

    ಇತ್ತ ರಶೀದ್ ಖಾನ್ ಸ್ಪೆಲ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಲವರು ಕಮೆಂಟ್ ಮಾಡಿ ಕಾಲೆಳೆದಿದ್ದರು. ಅಲ್ಲದೇ ಹಲವು ಮಿಮ್ಸ್ ಕೂಡ ಹರಿದಾಡಿತ್ತು. ಈ ಸಂದರ್ಭದಲ್ಲಿಯೇ ಟ್ವೀಟ್ ಮಾಡಿರುವ ಐಸ್ಲ್ಯಾಂಡ್ ತಂಡ, ನಾವು ಈಗಷ್ಟೇ ರಶೀದ್ ಖಾನ್ ವಿಶ್ವಕಪ್ ಕ್ರಿಕೆಟಿನಲ್ಲಿ 56 ರನ್ ಗಳಿಗೆ 110 ರನ್ ನೀಡಿ ಶತಕ ಸಿಡಿಸಿದ್ದಾರೆ ಎಂಬ ಮಾಹಿತಿ ಪಡೆದಿದ್ದೇವೆ. ಉತ್ತಮ ಬ್ಯಾಟಿಂಗ್ ಮ್ಯಾನ್ ಎಂದು ತಿಳಿಸಿತ್ತು.

    ಕ್ರಿಕೆಟ್ ಸಂಸ್ಥೆಯ ಈ ಟ್ವೀಟಿಗೆ ಕಿಡಿಕಾರಿರುವ ಹಲವು ಹಿರಿಯ ಆಟಗಾರರು, ರಶೀದ್ ಖಾನ್ ಪರ ಬ್ಯಾಟ್ ಮಾಡಿ ಬೆಂಬಲ ಸೂಚಿಸಿದ್ದಾರೆ. ರಶೀದ್ ಖಾನ್ ವಿಶ್ವ ಮಟ್ಟದ ಬೌಲರ್ ಆಗಿದ್ದು, ಎಲ್ಲಾ ಆಟಗಾರರ ಜೀವನದಲ್ಲೂ ಇಂತಹ ಒಂದು ಸಂದರ್ಭ ಎದುರಾಗುತ್ತದೆ ಎಂದು ಬರೆದುಕೊಂಡಿದ್ದಾರೆ. ಅಂದಹಾಗೇ ಈ ಹಿಂದೆ ಅಫ್ಘಾನಿಸ್ತಾನ ಬೌಲರ್ ಸೈಬ್ 101 ರನ್ ನೀಡಿದ್ದರು. ರಶೀದ್ ಖಾನ್ ಬೌಲಿಂಗ್ ನಲ್ಲಿ ಇಂಗ್ಲೆಂಡ್ ತಂಡದ ಆಟಗಾರರು 11 ಸಿಕ್ಸರ್ ಗಳನ್ನು ಸಿಡಿಸಿದ್ದರು.

  • ನಮ್ಗೆ ಕಾಶ್ಮೀರ ಬೇಡ ಕೊಹ್ಲಿ ಬೇಕು – ವೈರಲ್ ಫೋಟೋ ಹಿಂದಿನ ಸತ್ಯಾಂಶ

    ನಮ್ಗೆ ಕಾಶ್ಮೀರ ಬೇಡ ಕೊಹ್ಲಿ ಬೇಕು – ವೈರಲ್ ಫೋಟೋ ಹಿಂದಿನ ಸತ್ಯಾಂಶ

    ನವದೆಹಲಿ: ಭಾನುವಾರ ಇಂಗ್ಲೆಂಡ್‍ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯದಲ್ಲಿ ಭಾರತ 89 ರನ್‍ಗಳ ಭರ್ಜರಿ ಜಯಗಳಿಸಿದೆ. ಈ ಹಿನ್ನೆಲೆಯಲ್ಲಿ ನಮಗೆ ಕಾಶ್ಮೀರ ಬೇಡ ಕೊಹ್ಲಿ ಬೇಕು ಎಂದು ಬ್ಯಾನರ್ ಹಿಡಿದು ನಿಂತಿರುವ ಕೆಲ ಅಭಿಮಾನಿಗಳ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವಿರಾಟ್ ಕೊಹ್ಲಿ ನಮಗೆ ಬೇಕು, ನಮಗೆ ಕಾಶ್ಮೀರ ಬೇಡ ವಿರಾಟ್ ಕೊಹ್ಲಿ ಬೇಕು ಎಂದು ಪಾಕಿಸ್ತಾನಿಗಳು ಬೇಡಿಕೆ ಇಟ್ಟಿರುವುದಾಗಿ ಎಂದು ಹೇಳಲಾಗುವ ಫೋಟೋವನ್ನು ಜನರು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಕಾಶ್ಮೀರ ಮೂಲದ ಇಬಾ ಸಿನಾ ಎಂಬವರು ಈ ಫೋಟೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡು, ಇವಾಗ ಖುಷಿನಾ ಎಂದು ಬರೆದುಕೊಂಡಿದ್ದಾರೆ. ಇದೇ ಸಿನಾ ಪಿನ್ ಮಾಡಿಕೊಂಡಿರುವ ಟ್ವೀಟ್ ನಲ್ಲಿ ನಾನೋರ್ವ ಮುಸ್ಲಿಂ, ಆದ್ರೆ ಹಿಂದೂಗಿಂತ ಕಡಿಮೆ ಏನಿಲ್ಲ. ನನ್ನ ಧರ್ಮ ಇಸ್ಲಾಂ, ಆದ್ರೆ ನನ್ನ ಸಂಸ್ಕೃತಿ  ಹಿಂದೂ ಎಂದು ಬರೆದುಕೊಂಡಿದ್ದಾರೆ.

    https://twitter.com/Ibne_Sena/status/1140530531399921664

    ಈ ಟ್ವೀಟ್‍ನ್ನು ಸಾಹಿತಿ ಮಧು ಕಿಶ್ವರ್ ರೀಟ್ವೀಟ್ ಮಾಡಿದ್ದು, ಒಂದು ಕಾಲದಲ್ಲಿ ಪಾಕಿಸ್ತಾನದವರು ನಟಿ ಮಾಧುರಿಯವರನ್ನು ಕೊಡಿ ಪಾಕಿಸ್ತಾನ ತೆಗೆದುಕೊಳ್ಳಿ ಎಂದು ಜಪಿಸಿದ್ದರು. ಈಗ ಪಂದ್ಯ ಸೋತ ಹತಾಶೆಯಲ್ಲಿ ಹೊಸ ಬೇಡಿಕೆಯನ್ನು ಇಟ್ಟಿದ್ದಾರೆ ಎಂದು ಪಾಕ್ ಕಾಲೆಳೆದಿದ್ದಾರೆ.

    ವೈರಲ್ ಫೋಟೋ ನಿಜಾನಾ?
    ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋ ಸುಳ್ಳು ಎಂದು ರಾಷ್ಟ್ರೀಯ ಪತ್ರಿಕೆಗಳು ವರದಿ ಮಾಡಿವೆ. 2016ರಲ್ಲಿ ಕಶ್ಮೀರಾ ಕಣಿವೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಬುರ್ಹಾನ್ ವಾನಿಯ ಭಾರತೀಯ ಸೇನೆ ಹತ್ಯೆ ಮಾಡಿತ್ತು. ಇದನ್ನು ಖಂಡಿಸಿ ಕೆಲ ಕಾಶ್ಮೀರಿ ಯುವಕರು ಪಾಕ್ ಪರ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದರು.

    ಅಂದು ಕಾಶ್ಮೀರಿ ಕೆಲ ಯುವಕರು ಹಸಿರು ಬಣ್ಣದ ದೊಡ್ಡ ಬ್ಯಾನರ್ ಜೊತೆ ಪಾಕಿಸ್ತಾನ ಧ್ವಜಗಳನ್ನು ಹಿಡಿದು ನಿಂತಿದ್ದರು. ಹಸಿರು ಬ್ಯಾನರ್ ಮೇಲೆ ನಮಗೆ ಸ್ವಾತಂತ್ರ ಬೇಕೆಂದು ಬರೆಯಲಾಗಿತ್ತು. ಇದೀಗ ಅದೇ ಫೋಟೋವನ್ನು ಎಡಿಟ್ ಮಾಡಿ, ನಮಗೆ ಕಾಶ್ಮೀರ ಬೇಡ ಕೊಹ್ಲಿ ಬೇಕು ಎಂದು ಬರೆದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ.

    ಕಾರ್ಗಿಲ್ ಯುದ್ಧದಷ್ಟೇ ಕಾವು ಪಡೆದ ಮತ್ತು ಕ್ರಿಕೆಟ್ ಲೋಕದ ಅತಿದೊಡ್ಡ ಕಾದಾಟವೆಂದೇ ಹೇಳಲಾಗುವ ಭಾರತ ಮತ್ತು ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿದೆ. ಭಾರತದ ವಿರುದ್ಧದ ಸೋಲನ್ನು ಸಹಿಸಿಕೊಳ್ಳಲಾಗದ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಪಾಕ್ ತಂಡದ ವಿರುದ್ಧ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ, ಹಿರಿಯ ಆಟಗಾರರು ಕೂಡ ನಾಯಕ ಸರ್ಫರಾಜ್ ವಿರುದ್ಧ ಕಿಡಿಕಾರಿದ್ದಾರೆ.