Tag: ವಿಶ್ವಕಪ್

  • ಕೊನೆಯ ಓವರ್‌ನಲ್ಲಿ ಧೋನಿ 2 ಸಿಕ್ಸ್, ವಿಂಡೀಸ್‍ಗೆ 269 ರನ್ ಗುರಿ

    ಕೊನೆಯ ಓವರ್‌ನಲ್ಲಿ ಧೋನಿ 2 ಸಿಕ್ಸ್, ವಿಂಡೀಸ್‍ಗೆ 269 ರನ್ ಗುರಿ

    ಮ್ಯಾಂಚೆಸ್ಟರ್: ವಿಶ್ವಕಪ್ ಕ್ರಿಕೆಟ್‍ನಲ್ಲಿ ವಿಂಡೀಸ್‍ಗೆ ಭಾರತ 269 ರನ್‍ಗಳ ಗುರಿಯನ್ನು ನೀಡಿದೆ.

    ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್‍ಗಳ ವೈಫಲ್ಯದ ನಡುವೆಯೂ ಕೊಹ್ಲಿ, ಧೋನಿ ಅರ್ಧಶತಕ, ಪಾಂಡ್ಯ, ರಾಹುಲ್ ಉತ್ತಮ ಆಟದಿಂದ ಭಾರತ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 268 ರನ್ ಗಳಿಸಿತು. ಇದನ್ನೂ ಓದಿ: ಸಚಿನ್, ಲಾರಾ ಹಿಂದಿಕ್ಕಿ ಕೊಹ್ಲಿ ವಿಶ್ವದಾಖಲೆ

    38.2 ಓವರ್‌ಗಳಲ್ಲಿ 180 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡಾಗ ಭಾರತ 250 ರನ್‍ಗಳ ಗಡಿಯನ್ನು ದಾಟುವುದು ಅನುಮಾನವಾಗಿತ್ತು. ಆದರೆ ಪಾಂಡ್ಯ ಮತ್ತು ಧೋನಿ ಗಟ್ಟಿ ನಿಂತು ಆಡಿದ ಪರಿಣಾಮ ಭಾರತ ಉತ್ತಮ ಮೊತ್ತವನ್ನು ಪೇರಿಸಿದೆ.

    1 ಸಿಕ್ಸರ್, 1 ಬೌಂಡರಿ ಹೊಡೆದು ಉತ್ತಮವಾಗಿ ಆಡುತ್ತಿದ್ದ ರೋಹಿತ್ ಶರ್ಮಾ 18 ರನ್ ಗಳಿಸಿ ಔಟಾದರು. ಮೂರನೇ ಅಂಪೈರ್ ಈ ಔಟ್ ತೀರ್ಪು ನೀಡಿದ್ದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: 3ನೇ ಅಂಪೈರ್ ಬೇಡ, 4ನೇ ಅಂಪೈರ್ ಬೇಕು – ಐಸಿಸಿ ವಿರುದ್ಧ ನೆಟ್ಟಿಗರು ಕಿಡಿ

    ಎರಡನೇ ವಿಕೆಟಿಗೆ ರಾಹುಲ್ ಮತ್ತು ಕೊಹ್ಲಿ 69 ರನ್ ಜೊತೆಯಾಟವಾಡಿದರು. ರಾಹುಲ್ 48 ರನ್(64 ಎಸೆತ, 4 ಬೌಂಡರಿ) ಹೊಡೆದರೆ ಕೊಹ್ಲಿ 72 ರನ್( 82 ಎಸೆತ, 8 ಬೌಂಡರಿ) ಹೊಡೆದು ಔಟಾದರು.

    ನಂತರ ಬಂದ ವಿಜಯ್ ಶಂಕರ್ ಮತ್ತು ಕೇದಾರ್ ಜಾಧವ್ ಕ್ರಮವಾಗಿ 14, 7 ರನ್ ಗಳಿಸಿ ಪೆವಿಲಿಯನ್‍ಗೆ ನಡೆದರು. ಕೊನೆಯಲ್ಲಿ ಧೋನಿ ಮತ್ತು ಪಾಂಡ್ಯ ಬಿರುಸಿನ ಬ್ಯಾಟಿಂಗ್ ನಡೆಸಿ 6ನೇ ವಿಕೆಟಿಗೆ 60 ಎಸೆತಗಳಲ್ಲಿ 70 ರನ್ ಜೊತೆಯಾಟವಾಡಿದರು. ಪಾಂಡ್ಯ 46 ರನ್(38 ಎಸೆತ, 5 ಬೌಂಡರಿ) ಹೊಡೆದರೆ ಧೋನಿ 56 ರನ್(61 ಎಸೆತ,3 ಬೌಂಡರಿ, 2 ಸಿಕ್ಸರ್) ಸಿಡಿಸಿದರು. 50ನೇ ಓವರ್‍ನಲ್ಲಿ ಧೋನಿ 2 ಸಿಕ್ಸರ್, ಒಂದು ಬೌಂಡರಿ ಸಿಡಿಸಿ ರನ್ ಏರಿಸಿದರು.

    ರೋಚ್ ಮೂರು ವಿಕೆಟ್ ಪಡೆದರೆ, ಕೊಟ್ರೆಲ್ ಮತ್ತು ಹೋಲ್ಡರ್ ತಲಾ 2 ವಿಕೆಟ್ ಪಡೆದರು.

  • ಟೀಂ ಇಂಡಿಯಾದ ಹೊಸ ಜರ್ಸಿಗೆ ವಿಪಕ್ಷಗಳಿಂದ ಭಾರೀ ಟೀಕೆ

    ಟೀಂ ಇಂಡಿಯಾದ ಹೊಸ ಜರ್ಸಿಗೆ ವಿಪಕ್ಷಗಳಿಂದ ಭಾರೀ ಟೀಕೆ

    ನವದೆಹಲಿ: ಟೀಂ ಇಂಡಿಯಾದ ಕಿತ್ತಳೆ (ಕೇಸರಿ) ಬಣ್ಣದ ಜರ್ಸಿಗೆ ವಿಪಕ್ಷಗಳಿಂದ ಟೀಕೆ ವ್ಯಕ್ತವಾಗಿದೆ.

    ಭಾನುವಾರ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಆಟಗಾರರು ಕಿತ್ತಳೆ ಬಣ್ಣದ ಬಟ್ಟೆಯನ್ನು ಧರಿಸಿ ಮೈದಾನಕ್ಕೆ ಇಳಿಯಲಿದ್ದಾರೆ. ಕಿತ್ತಳೆ ಬಣ್ಣದ ಜರ್ಸಿಗೆ ಕಾಂಗ್ರೆಸ್, ಸಮಾಜವಾದಿ ಪಕ್ಷ ಸೇರಿದಂತೆ ಅನೇಕ ವಿಕ್ಷಗಳು ಭಾರೀ ವಿರೋಧ ವ್ಯಕ್ತಪಡಿಸಿವೆ.

    ಈ ಬಗ್ಗೆ ಅಸಮಾಧಾನ ಹೊರ ಹಾಕಿರುವ ಉತ್ತ ಪ್ರದೇಶದ ಸಮಾಜವಾದಿ ಪಕ್ಷದ ಶಾಸಕ ಅಬು ಅಸಿಮ್ ಅಜ್ಮಿ ಅವರು, ಬಿಸಿಸಿಐ ನಿರ್ಧಾರದ ಹಿಂದೆ ಕೇಂದ್ರ ಸರ್ಕಾರವಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶವನ್ನು ಕೇಸರಿಮಯವಾಗಿಸಲು ಹೊರಟಿದ್ದಾರೆ. ಭಾರತದ ತ್ರಿವರ್ಣ ಧ್ವಜವನ್ನು ವಿನ್ಯಾಸಗೊಳಿಸಿದ್ದು ಒಬ್ಬ ಮುಸ್ಲಿಂ. ತ್ರಿವರ್ಣ ಧ್ವಜದ ಮೂರು ಬಣ್ಣಗಳಲ್ಲಿ ಕೇಸರಿಯನ್ನೇ ಆಯ್ಕೆ ಮಾಡಿದ್ದು ಯಾಕೆ? ಜರ್ಸಿಯಲ್ಲಿ ಮೂರು ವರ್ಣಗಳನ್ನು ಬಳಸಿದ್ದರೆ ಉತ್ತಮವಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಹೊಸ ಜರ್ಸಿ ಯಾಕೆ?
    ಐಸಿಸಿ ನಿಯಮದಂತೆ 2 ತಂಡಗಳು ಒಂದೇ ಬಣ್ಣದ ಜರ್ಸಿ ಧರಿಸುವಂತಿಲ್ಲ. ಎರಡೂ ತಂಡಗಳು ಒಂದೇ ವರ್ಣದ ಜರ್ಸಿ ತೊಟ್ಟು ಮೈದಾನಕ್ಕೆ ಇಳಿದರೆ ಪ್ರೇಕ್ಷಕರಿಗೆ ಗೊಂದಲ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಒಂದು ತಂಡವು ತನ್ನ ಜರ್ಸಿಯನ್ನು ಬದಲಾಯಿಸಬೇಕಾಗುತ್ತದೆ.

    ಫುಟ್ಬಾಲ್‍ನಲ್ಲಿರುವ ‘ಹೋಮ್’ ಮತ್ತು ‘ಅವೇ’ ನಿಯಮವನ್ನು ಕ್ರಿಕೆಟ್‍ಗೆ ಅಳವಡಿಸಲಾಗಿದೆ. ಈ ನಿಯಮದ ಪ್ರಕಾರ ಅತಿಥೇಯ ತಂಡ ಇಂಗ್ಲೆಂಡ್ ತನ್ನದೇ ಜರ್ಸಿಯನ್ನು ತೊಟ್ಟು ಆಡಲಿದ್ದು, ಕೊಹ್ಲಿ ಪಡೆ ಬೇರೆ ಬಣ್ಣದ ಜರ್ಸಿ ಧರಿಸಬೇಕಿದೆ. ಹೀಗಾಗಿ ಭಾರತ ನೀಲಿಯ ಬದಲು ಕೇಸರಿ ಬಣ್ಣ ಇರುವ ಜರ್ಸಿಯನ್ನು ಧರಿಸಲಿದೆ.

  • ಭಾರತ ಗೆದ್ದ ಅವಿಸ್ಮರಣೀಯ ಮೊದಲ ವಿಶ್ವಕಪ್‍ಗೆ ಇಂದು 36ರ ಸಂಭ್ರಮ

    ಭಾರತ ಗೆದ್ದ ಅವಿಸ್ಮರಣೀಯ ಮೊದಲ ವಿಶ್ವಕಪ್‍ಗೆ ಇಂದು 36ರ ಸಂಭ್ರಮ

    ನವದೆಹಲಿ: 1983 ಜೂನ್ 25 ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ. ಯಾರು ನಿರೀಕ್ಷೆ ಮಾಡದ ರೀತಿಯಲ್ಲಿ ಕಪಿಲ್ ದೇವ್ ನೇತೃತ್ವದ ಭಾರತ ತಂಡ ಮೊದಲ ಬಾರಿಗೆ ವಿಶ್ವ ಕಪ್ ಎತ್ತಿ ಹಿಡಿದು ಹೊಸ ಇತಿಹಾಸವನ್ನು ಈ ದಿನ ಸೃಷ್ಟಿಸಿತ್ತು.

    ಇಂದಿಗೆ ಭಾರತ ತಂಡ ಈ ಸಾಧನೆ ಮಾಡಿ 36 ವರ್ಷವಾಗಿದೆ. ಇಂಗ್ಲೆಂಡಿನ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಬಗ್ಗು ಬಡಿದು ಚೊಚ್ಚಲ ವಿಶ್ವಕಪ್‍ನ್ನು ಗೆದ್ದು ಬೀಗಿತ್ತು. ಆ ಕಾಲಕ್ಕೆ ಕ್ರಿಕೆಟ್ ಸಾಮ್ರಾಜ್ಯವನ್ನು ಆಳುತ್ತಿದ್ದ ದೈತ್ಯ ವಿಂಡೀಸ್ ಪಡೆಯ ವಿರುದ್ಧ ಭಾರತ 43 ರನ್‍ಗಳ ಅಂತರದಲ್ಲಿ ಗೆಲುವು ಪಡೆದಿತ್ತು.

    ಅಂದು ಮೊದಲು ಟಾಸ್ ಗೆದ್ದು ವಿಂಡೀಸ್ ತಂಡದ ನಾಯಕ ಕ್ಲೈವ್ ಲಾಯ್ಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ರಾಬಟ್ರ್ಸ್, ಮಾರ್ಶಲ್, ಗಾರ್ನರ್, ಹೋಲ್ಡಿಂಗ್‍ನಂತಹ ಘಟಾನುಘಟಿ ಬೌಲರ್‍ಗಳ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ ಕೇವಲ 54.4 ಓವರ್ ಗಳಲ್ಲಿ 183 ರನ್ ಗಳಿಸಿ ಅಲೌಟ್ ಆಗಿತ್ತು. ಇದರಲ್ಲಿ ಭಾರತ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಮಾತ್ರ 57 ಎಸೆತಗಳನ್ನು ಆಡಿ 38 ರನ್ ಗಳಿಸಿದ್ದರು. ಇದನ್ನು ಬಿಟ್ಟರೆ ನಾಯಕ ಕಪಿಲ್ ದೇವ್, ಕೀರ್ತಿ ಆಜಾದ್, ರೋಜರ್ ಬಿನ್ನಿ ಬ್ಯಾಟಿಂಗ್‍ನಲ್ಲಿ ವಿಫಲರಾಗಿದ್ದರು.

    ಈ ಸುಲಭ ಗುರಿಯನ್ನು ಬೆನ್ನಟ್ಟಿದ್ದ ವಿಂಡೀಸ್ ತಂಡಕ್ಕೆ ಬಹುದೊಡ್ಡ ಶಾಕ್ ಕಾದಿತ್ತು. ಭಾರತೀಯ ಬೌಲರ್‍ಗಳಾದ ಮೊಹಿಂದರ್ ಅಮರ್‍ನಾಥ್ ಮತ್ತು ಮದನ್ ಲಾಲ್ ಮಾರಕ ದಾಳಿಗೆ ಬಲಿಷ್ಠ ವಿಂಡೀಸ್ ಪಡೆ ನಲುಗಿ ಹೋಗಿತ್ತು. 7 ಓವರ್ ಬೌಲ್ ಮಾಡಿದ ಅಮರ್‍ನಾಥ್ 12 ರನ್ ನೀಡಿ 3 ವಿಕೆಟ್ ಕಿತ್ತಿದ್ದರು. ಇವರಿಗೆ ಉತ್ತಮ ಸಾಥ್ ಕೊಟ್ಟ ಮದನ್ ಲಾಲ್ 31 ರನ್ ನೀಡಿ 3 ವಿಕೆಟ್ ಬಲಿ ಪಡೆದು ವಿಂಡೀಸ್ ಆಟಗಾರಿಗೆ ಪೆವಿಲಿಯನ್ ದಾರಿ ತೋರಿಸಿದ್ದರು.

    ಕಪಿಲ್ ಕ್ಯಾಚ್ ಭಾರತಕ್ಕೆ ಟ್ರೋಫಿ:
    ಒಂದು ಉತ್ತಮ ಕ್ಯಾಚ್ ಪಂದ್ಯದ ಗತಿಯನ್ನೇ ಬದಲಿಸುತ್ತದೆ ಎನ್ನುವ ಮಾತಿಗೆ ಪೂರಕ ಎಂಬಂತೆ 28 ಎಸೆತದಲ್ಲಿ 33 ರನ್ ಗಳಿಸಿ ಗೆಲುವಿನ ದಡಕ್ಕೆ ಮುನ್ನಡೆಸುತ್ತಿದ್ದ ಸಾರ್ವಕಾಲಿಕ ಶ್ರೇಷ್ಠ ಏಕದಿನ ಕ್ರಿಕೆಟಿಗ ವಿವಿಯನ್  ರಿಚರ್ಡ್ಸ್ ಬಾರಿಸಿದ ಚೆಂಡನ್ನು ಕಪಿಲ್ ಹಿಮ್ಮುಖವಾಗಿ ಓಡಿ ಕ್ಯಾಚ್ ಹಿಡಿದ್ದಿದ್ದರು. ಈ ಮೂಲಕ ಭಾರತ ತಂಡವನ್ನು ಮೊದಲ ವಿಶ್ವಕಪ್ ಕಡೆಗೆ ಕರೆದುಕೊಂಡು ಹೋಗಿದ್ದರು.

    ಎರಡು ಬಾರಿ ಗೆದಿದ್ದ ವೆಸ್ಟ್ ಇಂಡೀಸ್‍ನ ಗೆಲುವಿನ ಓಟಕ್ಕೆ ಭಾರತ ಪೂರ್ಣ ವಿರಾಮ ಹಾಕಿತು. 184 ರನ್ ಬೆನ್ನಟ್ಟಿದ ವಿಂಡೀಸ್ 140 ರನ್‍ಗಳಿಗೆ ಪತನ ಹೊಂದಿತ್ತು. ಈ ಮೂಲಕ ಭಾರತ 42 ರನ್‍ಗಳ ಜಯ ದಾಖಲಿಸಿ ತನ್ನ ಮೊದಲ ವಿಶ್ವಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು.

  • ಭಾರತದ ವಿರುದ್ಧ ಸೋಲು – ಆತ್ಮಹತ್ಯೆಗೆ ಚಿಂತಿಸಿದ್ದ ಪಾಕ್ ಕೋಚ್

    ಭಾರತದ ವಿರುದ್ಧ ಸೋಲು – ಆತ್ಮಹತ್ಯೆಗೆ ಚಿಂತಿಸಿದ್ದ ಪಾಕ್ ಕೋಚ್

    ಲಂಡನ್: ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಮಿಕ್ಕಿ ಅರ್ಥರ್ ವಿಶ್ವಕಪ್ ಟೂರ್ನಿಯ ಟೀಂ ಇಂಡಿಯಾ ವಿರುದ್ಧದ ಪಂದ್ಯದ ಸೋಲಿನ ಬಳಿಕ ಆತ್ಮಹತ್ಯೆಗೆ ಚಿಂತನೆ ನಡೆಸಿದ್ದೆ ಎಂಬ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.

    ಜೂನ್ 16 ರಂದು ನಡೆದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 89 ರನ್ ಗಳ ಜಯ ಪಡೆದಿತ್ತು. ಅಲ್ಲದೇ ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧದ ತನ್ನ ಅಮೋಘ ಜಯದ ದಾಖಲೆಯನ್ನು ಮುಂದುವರಿಸಿತ್ತು. ಭಾರತ ವಿರುದ್ಧದ ಸೋಲು ಪಾಕಿಸ್ತಾನ ತಂಡಕ್ಕೆ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್‍ಗೆ ಹೋಗುವ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿತ್ತು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ನಿರ್ಣಯಕ ಪಂದ್ಯದಲ್ಲಿ ಭಾನುವಾರ ಗೆಲುವು ಪಡೆಯುವ ಮೂಲಕ ತನ್ನ ಸೆಮಿ ಫೈನಲ್ ಆಸೆಯನ್ನು ಜೀವಂತವಾಗಿರಿಸಿದೆ.

    ಪಂದ್ಯದ ಬಳಿಕ ಮಾತನಾಡಿರುವ ಮಿಕ್ಕಿ, ಕಳೆದ ಭಾನುವಾರ ನಾನು ಆತ್ಮಹತ್ಯೆ ಮಾಡಿಕೊಳ್ಳುವ ಚಿಂತನೆ ಮಾಡಿದ್ದೆ. ಭಾರತ ವಿರುದ್ಧ ಪಂದ್ಯ ನಮಗೆ ಬಹಳ ಮುಖ್ಯವಾಗಿತ್ತು. ವಿಶ್ವಕಪ್ ಟೂರ್ನಿಯಲ್ಲಿ ಸೋಲಿನ ಮೇಲೆ ಸೋಲು ಸ್ವೀಕರಿಸುವುದು ಕಷ್ಟಸಾಧ್ಯವಾಗುತ್ತದೆ. ಜನರು ನಿರೀಕ್ಷೆ ಹಾಗೂ ಮಾಧ್ಯಮಗಳ ಒತ್ತಡದಿಂದ ಇಕ್ಕಟ್ಟಿಗೆ ಸಿಲುಕಿದ್ದೆ. ಈ ವೇಳೆ ಆತ್ಮಹತ್ಯೆ ಚಿಂತನೆ ಬಂದಿತ್ತು ಎಂದಿದ್ದಾರೆ.

    ಭಾರತದ ವಿರುದ್ಧ ಸೋಲಿನ ಬಳಿಕ ಪಾಕಿಸ್ತಾನ ತಂಡದ ವಿರುದ್ಧ ಕಟು ಟೀಕೆಗಳು ಕೇಳಿ ಬಂದಿದ್ದವು. ಸದ್ಯ ಮಿಕ್ಕಿ ಇಂದಿನ ಹೇಳಿಕೆಗಳಿಗೂ ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ನೀಡಿದ್ದು, ಕೋಚ್‍ರ ಮಾತುಗಳು ಕೆಟ್ಟ ಅಭಿರುಚಿಯನ್ನು ತೋರುತ್ತದೆ ಎಂದಿದ್ದಾರೆ.

    ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಸೆಮಿ ಫೈನಲ್ ಹಂತ ತಲುಪಬೇಕಾದರೆ ಉಳಿರುವ 3 ಪಂದ್ಯಗಳಲ್ಲಿ ಗೆಲುವು ಪಡೆಯುವುದು ಅನಿವಾರ್ಯವಾಗಿದೆ. ಅಲ್ಲದೇ ಪಾಕ್ ರನ್ ರೇಟ್ ಕೂಡ ಇದರ ಮೇಲೆ ಪ್ರಾಮುಖ್ಯತೆ ಪಡೆದಿದೆ. ಪಾಕಿಸ್ತಾನ ತಂಡ ನಾಳಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.

  • ವಿಶ್ವಕಪ್ 2019: ಟೀಂ ಇಂಡಿಯಾವನ್ನ ಕೂಡಿಕೊಂಡ ಆರ್‌ಸಿಬಿ ಬೌಲರ್

    ವಿಶ್ವಕಪ್ 2019: ಟೀಂ ಇಂಡಿಯಾವನ್ನ ಕೂಡಿಕೊಂಡ ಆರ್‌ಸಿಬಿ ಬೌಲರ್

    ಲಂಡನ್: ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾಗೆ ಬೌಲಿಂಗ್ ಸಮಸ್ಯೆ ಕಾಡುತ್ತಿದ್ದು, ಭುವನೇಶ್ವರ್ ಗಾಯದ ಸಮಸ್ಯೆಯಿಂದ ಚೇತರಿಕೊಳ್ಳುತ್ತಿದ್ದಾರೆ. ಇದರ ನಡುವೆಯೇ ಯುವ ಬೌಲರ್ ನವದೀಪ್ ಸೈನಿ ತಂಡವನ್ನು ಕೂಡಿಕೊಂಡಿದ್ದಾರೆ.

    ಈ ಕುರಿತು ಮಾಹಿತಿ ನೀಡಿರುವ ಬಿಸಿಸಿಐ, ನವದೀಪ್ ಸೈನಿ ಮ್ಯಾಂಚೆಸ್ಟರ್ ಗೆ ಆಗಮಿಸಿದ್ದು, ನೆಟ್ ಬೌಲರ್ ಆಗಿ ಅವರು ಕಾರ್ಯನಿರ್ವಹಿಸಲಿದ್ದಾರೆ. ಅಲ್ಲದೇ ಟೀಂ ಇಂಡಿಯಾದೊಂದಿಗೆ ಅವರು ತರಬೇತಿ ಪಡೆಯಲಿದ್ದಾರೆ ಎಂದು ಸ್ಪಷ್ಟಪಡಿಸಿದೆ.

    ಏ.15 ರಂದು ಬಿಸಿಸಿಐ ಬಿಡುಗಡೆ ಮಾಡಿದ್ದ ಸ್ಯಾಂಡ್ ಬೈ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಬೇಕಿರುವ ಶೈನಿ ರಣಜಿ ಟ್ರೋಫಿಯಲ್ಲಿ ಡೆಲ್ಲಿ ತಂಡದ ಪರ ಆಡ ಆಯ್ಕೆ ಸಮಿತಿ ಗಮನ ಸೆಳೆದಿದ್ದರು. ಅಲ್ಲದೇ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಪರವೂ ಉತ್ತಮ ಪ್ರದರ್ಶನ ನೀಡಿದ್ದರು.

    ಭುವನೇಶ್ವರ್ ಗಾಯದ ಸಮಸ್ಯೆಯಿಂದ ಅವರಿಗೆ 8 ದಿನಗಳ ವಿಶ್ರಾಂತಿ ನೀಡಿ, ಬಹು ವೇಗ ಚೇತರಿಸಿಕೊಳ್ಳುವಂತೆ ತಜ್ಞ ವೈದ್ಯರಿಂದ ಚಿಕಿತ್ಸೆ ಮುಂದುವರಿಸಲಾಗಿದೆ. ಇತ್ತ ಟೀಂ ಇಂಡಿಯಾ ತಂಡದೊಂದಿಗೆ ಖಲೀಲ್ ಅಹಮದ್ ಟೀಂ ಇಂಡಿಯಾ ಎ ತಂಡದ ಪರ ಆಡಲು ತವರಿಗೆ ಹಿಂದಿರುಗಿದ್ದಾರೆ. ಸದ್ಯ ಮಾಹಿತಿ ಅನ್ವಯ ಒಂದು ವಾರದಲ್ಲಿ ಭುವನೇಶ್ವರ್ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳಿದ್ದಾರೆ ಎನ್ನಲಾಗಿದೆ.

    ರಿಷಬ್ ಪಂತ್ ಹಾಗೂ ನವದೀಪ್ ಸಿಂಗ್ ಸೈನಿ ಇಬ್ಬರು ಬೆಂಗಳೂರು ಎನ್‍ಸಿಎ ನಲ್ಲಿ ತರಬೇತಿ ಪಡೆಯುತ್ತಿದ್ದರು. ಧವನ್ ಗಾಯದ ಸಮಸ್ಯೆ ಬಳಿಕ ಪಂತ್ ಟೀಂ ಇಂಡಿಯಾವನ್ನು ಸೇರಿಕೊಂಡಿದ್ದರು. ಭುವನೇಶ್ವರ್ ಗಾಯದ ಸಮಸ್ಯೆಗೆ ಒಳಗಾದ ಬಳಿಕ ಸದ್ಯ ಸೈನಿ ತಂಡವನ್ನು ಸೇರಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಭಾರತ ತನ್ನ ಮುಂದಿನ ಪಂದ್ಯವನ್ನು ಜೂನ್ 27 ರಂದು ಆಡಲಿದೆ.

  • ವೆಸ್ಟ್ ಇಂಡೀಸ್ ಟಿ20, ಏಕದಿನ ಸರಣಿ – ಕೊಹ್ಲಿ, ಬುಮ್ರಾಗೆ ವಿಶ್ರಾಂತಿ

    ವೆಸ್ಟ್ ಇಂಡೀಸ್ ಟಿ20, ಏಕದಿನ ಸರಣಿ – ಕೊಹ್ಲಿ, ಬುಮ್ರಾಗೆ ವಿಶ್ರಾಂತಿ

    ಮುಂಬೈ: ವಿಶ್ವಕಪ್ ಟೂರ್ನಿಯ ಬಳಿಕ ಟೀಂ ಇಂಡಿಯಾ ಕೈಗೊಳ್ಳಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬುಮ್ರಾಗೆ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ.

    ಆಗಸ್ಟ್ 3ರಿಂದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಆರಂಭವಾಗಲಿದ್ದು, ಏಕದಿನ ಪಂದ್ಯಗಳಿಗೆ ವಿಂಡೀಸ್ ಟೂರ್ನಿಯಲ್ಲಿ ವಿಶ್ರಾಂತಿ ಪಡೆಯಲಿರುವ ಇಬ್ಬರು ಆಟಗಾರರು ಟೆಸ್ಟ್ ಪಂದ್ಯಗಳಿಗೆ ತಂಡವನ್ನು ಕೂಡಿಕೊಳ್ಳಲಿದ್ದಾರೆ.

    ಕೊಹ್ಲಿ ಹಾಗೂ ಬುಮ್ರಾ ಮೇಲಿನ ಕೆಲಸದ ಒತ್ತಡವನ್ನು ನಿಭಾಯಿಸಲು ಬಿಸಿಸಿಐ ಈ ನಿರ್ಣಯ ಕೈಗೊಂಡಿದೆ. ವಿರಾಟ್ ಹಾಗೂ ಬುಮ್ರಾ ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದಲೂ ನಿರಂತರವಾಗಿ ಟೀಂ ಇಂಡಿಯಾ ಪರ ಆಡುತ್ತಿದ್ದಾರೆ. ಕೇವಲ ಈ ಇಬ್ಬರು ಆಟಗಾರರು ಮಾತ್ರವಲ್ಲದೇ ಕೆಲ ಆಟಗಾರರಿಗೂ ವಿಶ್ರಾಂತಿ ನೀಡುವ ಸಾಧ್ಯತೆ ಇರುವುದಾಗಿ ಸಮಿತಿ ತಿಳಿಸಿದೆ.

    ಟೀಂ ಇಂಡಿಯಾ ಟೂರ್ನಿಯಲ್ಲಿ ಇದುವರೆಗೂ ಆಡಿರುವ 5 ಪಂದ್ಯಗಳಲ್ಲಿ 4 ರಲ್ಲಿ ಗೆದ್ದು 9 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದು, ಬಹುತೇಕ ಸೆಮಿ ಫೈನಲ್ ಪ್ರವೇಶಸುವ ಹಾದಿ ಸುಗಮಗೊಳಿಸಿದೆ. ತಂಡ ಫೈನಲ್ ಪ್ರವೇಶ ಪಡೆದರೆ ವಿಶ್ವಕಪ್ ಟೂರ್ನಿಯ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡುವ ಚಿಂತನೆಯನ್ನು ಸಮಿತಿ ಕೈಗೊಂಡಿದೆ. ವೆಸ್ಟ್ ಇಂಡೀಸ್ ವಿರುದ್ಧ ಆಗಸ್ಟ್ 17 ರಿಂದ 19ರವೆಗೂ ನಡೆಯುವ ಅಭ್ಯಾಸ ಪಂದ್ಯಕ್ಕೆ ವಿಶ್ರಾಂತಿ ಪಡೆಯುವ ಆಟಗಾರರು ತಂಡವನ್ನು ಕೂಡಿಕೊಳ್ಳಲಿದ್ದಾರೆ.

    ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಆ.22 ರಿಂದ ಆರಂಭವಾಗಲಿದ್ದು, ಅನುಭವಿಗಳ ಸ್ಥಾನದಲ್ಲಿ ಯುವ ಆಟಗಾರರು ಸ್ಥಾನ ಪಡೆಯುವ ನಿರೀಕ್ಷೆ ಇದೆ. ಪ್ರಮುಖವಾಗಿ ಟಿ20 ಸರಣಿಯಲ್ಲಿ ಶ್ರೇಯಸ್ ಅಯ್ಯರ್, ರಾಹುಲ್ ಚಹರ್, ಸಂಜು ಸ್ಯಾಮ್ಸನ್ ರಂತಹ ಆಟಗಾರರು ಅವಕಾಶ ಪಡೆಯುವ ಸಾಧ್ಯತೆ ಇದೆ. ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಸ್ಥಾನ ಪಡೆಯಲು ಮಯಾಂಕ್, ಪೃಥ್ವಿ ಶಾ, ಹನುಮ ವಿಹಾರಿ ರೇಸ್ ನಲ್ಲಿದ್ದಾರೆ.

  • ಅಂಪೈರ್‌ಗೆ ಕೈ ಮುಗಿದ ಕೊಹ್ಲಿಗೆ ಭಾರೀ ದಂಡ

    ಅಂಪೈರ್‌ಗೆ ಕೈ ಮುಗಿದ ಕೊಹ್ಲಿಗೆ ಭಾರೀ ದಂಡ

    ಸೌತಾಂಪ್ಟನ್: ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ 11 ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಆದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಆಕ್ರೋಶದಲ್ಲಿ ಅಂಪೈರ್‍ಗೆ ಕೈ ಮುಗಿದು ಅಶಿಸ್ತು ತೋರಿದ್ದಕ್ಕೆ ಭಾರೀ ದಂಡ ತೆತ್ತಿದ್ದಾರೆ.

    ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹೆಚ್ಚು ಆಕ್ರಮಣಕಾರಿಯಾಗಿ ಕಾಣಿಸಿಕೊಂಡಿದ್ದರು ಮತ್ತು ಅಂಪೈರ್ ಜೊತೆ ವಾಗ್ವಾದ ಮಾಡಿದ್ದರು. ಅದ್ದರಿಂದ ಐಸಿಸಿ ನೀತಿ ಸಂಹಿತೆಯ ಉಲ್ಲಂಘನೆ ಮಾಡಿದ್ದಕ್ಕೆ ಪಂದ್ಯದ ಶೇ.25 ರಷ್ಟು ದಂಡ ವಿಧಿಸಲಾಗಿದೆ.

    ಪಂದ್ಯದ ಎರಡನೇ ಇನ್ನಿಂಗ್ಸ್ ನ ಅರಂಭದಲ್ಲಿ ಮೊಹಮ್ಮದ್ ಶಮಿ ಅಫ್ಘಾನ್ ಆರಂಭಿಕ ಆಟಗಾರ ಹಜರತುಲ್ಲಾ ಜಜೈ ವಿರುದ್ಧ ಎಲ್‍ಬಿ ಮನವಿಯನ್ನು ಅಂಪೈರ್ ಪುರಸ್ಕರಿಸಿರಲಿಲ್ಲ. ಈ ಸಮಯದಲ್ಲಿ ಕೊಹ್ಲಿ ಡಿಆರ್‍ಎಸ್ ನೆರವಿನಿಂದ ಮೇಲ್ಮನವಿ ಸಲ್ಲಿಸಿದ್ದರು. ರಿಪ್ಲೈ ವೇಳೆ ಬಾಲ್ ಲೆಗ್ ಸ್ಟಂಪ್‍ನಿಂದ ಹೊರಗೆ ಇದ್ದ ಕಾರಣ ಔಟ್ ನೀಡಲಿಲ್ಲ. ಪಂದ್ಯದ ಅರಂಭಿಕ ಹಂತದಲ್ಲೇ ಡಿಆರ್‍ಎಸ್‍ನನ್ನು ಕಳೆದುಕೊಂಡ ಕೊಹ್ಲಿ ಅಂಪೈರ್ ಜೊತೆ ಆಕ್ರಮಣಕಾರಿಯಾಗಿ ವರ್ತಿಸಿದ್ದರು.

    ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರ ಉತ್ತಮ ಬೌಲಿಂಗ್ ಪ್ರದರ್ಶನದಿಂದ ಭಾರತ 11 ರನ್ ಗಳಿಂದ ಈ ಪಂದ್ಯವನ್ನು ರೋಚಕವಾಗಿ ಗೆದ್ದುಕೊಂಡಿತ್ತು. ಈ ಮೂಲಕ 2019ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ನಾಲ್ಕನೇ ಜಯ ಸಾಧಿಸಿದೆ. ಟಾಸ್ ಗೆದ್ದ ಭಾರತ 50 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 224 ರನ್ ಗಳಿಸಿತ್ತು. 225 ರನ್ ಗಳ ಗುರಿಯನ್ನು ಪಡೆದ ಅಫ್ಘಾನಿಸ್ತಾನ 49.5 ಓವರ್ ಗಳಲ್ಲಿ 213 ರನ್ ಗಳಿಗೆ ಆಲೌಟ್ ಆಗಿ ಸೋಲನ್ನು ಒಪ್ಪಿಕೊಂಡಿತ್ತು.

    https://twitter.com/DoctorrSays/status/1142436031058178049

    ಕೊನೆಯ ಓವರ್ ನಲ್ಲಿ ಅಫ್ಘಾನಿಸ್ತಾನಕ್ಕೆ ಗೆಲ್ಲಲು 16 ರನ್ ಬೇಕಿತ್ತು. ಈ ಓವರ್ ನಲ್ಲಿ ಶಮಿ ಹ್ಯಾಟ್ರಿಕ್ ಸಾಧನೆ ಮಾಡಿದರು. ಈ ಮೂಲಕ ಈ ವಿಶ್ವಕಪ್ ನಲ್ಲಿ ಹ್ಯಾಟ್ರಿಕ್ ಸಾಧನೆಗೈದ ಮೊದಲ ಬೌಲರ್ ಎನಿಸಿಕೊಂಡರು. 46ನೇ ಓವರ್ ನಲ್ಲಿ ಬುಮ್ರಾ 7 ರನ್ ನೀಡಿದರೆ, 49 ನೇ ಓವರ್ ನಲ್ಲಿ 5 ರನ್ ನೀಡಿ ರನ್ ವೇಗಕ್ಕೆ ಕಡಿವಾಣ ಹಾಕಿದರು. ಅಂತಿಮವಾಗಿ 10 ಓವರ್ ಎಸೆದ ಬುಮ್ರಾ 1 ಮೇಡನ್ ಓವರ್ 39 ರನ್ ನೀಡಿ 2 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

  • 32 ವರ್ಷಗಳ ಬಳಿಕ ಟೀಂ ಇಂಡಿಯಾ ಪರ ಹ್ಯಾಟ್ರಿಕ್ ಗಳಿಸಿದ ಶಮಿ

    32 ವರ್ಷಗಳ ಬಳಿಕ ಟೀಂ ಇಂಡಿಯಾ ಪರ ಹ್ಯಾಟ್ರಿಕ್ ಗಳಿಸಿದ ಶಮಿ

    ಸೌತಾಂಪ್ಟನ್: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅಫ್ಘಾನಿಸ್ತಾನದ ವಿರುದ್ಧ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದು, ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪರ ಹ್ಯಾಟ್ರಿಕ್ ಪಡೆದ 2ನೇ ಬೌಲರ್ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

    1987 ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾದ ಚೇತನ್ ಶರ್ಮಾ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ನ್ಯೂಜಿಲೆಂಡ್ ವಿರುದ್ಧ ನಾಗ್ಪುರದಲ್ಲಿ ನಡೆದ ಪಂದ್ಯದಲ್ಲಿ ಶರ್ಮಾ ಹ್ಯಾಟ್ರಿಕ್ ಪಡೆದಿದ್ದರು. ಸದ್ಯ 32 ವರ್ಷಗಳ ಬಳಿಕ ಮತ್ತೆ ಮೊಹಮ್ಮದ್ ಶಮಿ ಹ್ಯಾಟ್ರಿಕ್ ಪಡೆದಿದ್ದಾರೆ. ಅಲ್ಲದೇ ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲೇ ಹ್ಯಾಟ್ರಿಕ್ ಸಾಧನೆ ಮಾಡಿದ 10ನೇ ಬೌಲರ್ ಕೂಡ ಆಗಿದ್ದಾರೆ.

    ವಿಶೇಷ ಎಂದರೆ ಶ್ರೀಲಂಕಾದ ಲಸಿತ್ ಮಾಲಿಂಗ ವಿಶ್ವಕಪ್ ಕ್ರಿಕೆಟ್‍ನಲ್ಲಿ 2 ಬಾರಿ ಹ್ಯಾಟ್ರಿಕ್ ಪಡೆದ ದಾಖಲೆಯನ್ನು ಹೊಂದಿದ್ದಾರೆ. 2007ರ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣಾ ಆಫ್ರಿಕಾ ವಿರುದ್ಧ ಹಾಗೂ 2011 ರಲ್ಲಿ ಕೀನ್ಯಾ ವಿರುದ್ಧ ಹ್ಯಾಟ್ರಿಕ್ ಸಾಧನೆ ಮಾಡಿದ್ದರು.

    ಶಮಿ ಪಡೆದ ಹ್ಯಾಟ್ರಿಕ್ ವಿಕೆಟ್ ನಿನ್ನೆಯ ಪಂದ್ಯದಲ್ಲಿ ಅಫ್ಘಾನ್ ವಿರುದ್ಧ 11 ರನ್ ಗಳಿಸುವಲ್ಲಿ ಪ್ರಮುಖ ಪಾತ್ರವಹಿಸಿತ್ತು. ಪಂದ್ಯದ 7ನೇ ಓವರಿನಲ್ಲಿ ಹಜರತ್ ಉಲ್ಲಾ ವಿಕೆಟ್ ಪಡೆದಿದ್ದ ಶಮಿ, ಅಂತಿಮ ಓವರಿನ 3ನೇ ಎಸೆತದಲ್ಲಿ ಅರ್ಧ ಶತಕ ಗಳಿಸಿ ಟೀಂ ಇಂಡಿಯಾಗೆ ತಲೆನೋವಾಗಿದ್ದ ನಬಿ ವಿಕೆಟ್ ಪಡೆದು ಪಂದ್ಯ ಗತಿಯನ್ನೇ ಬದಲಿಸಿದ್ದರು. ಆ ಬಳಿಕ 4 ಮತ್ತು 5ನೇ ಎಸೆತಗಳಲ್ಲಿ ಅಫ್ತಾಬ್ ಆಲಮ್, ಮುಜೀರ್ ಉರ್ ರೆಹಮಾನ್ ವಿಕೆಟ್ ಪಡೆದರು. ಪಂದ್ಯದಲ್ಲಿ 9.5 ಓವರ್ ಬೌಲ್ ಮಾಡಿರುವ ಶಮಿ 40 ರನ್ ನೀಡಿ 4 ವಿಕೆಟ್ ಪಡೆದಿದ್ದಾರೆ.

    ಅಂದಹಾಗೇ ಭುವನೇಶ್ವರ್ ಕುಮಾರ್ ಗಾಯದ ಸಮಸ್ಯೆಯಿಂದ ಟೀಂ ಇಂಡಿಯಾದಿಂದ ಹೊರಗಡೆ ಇದ್ದ ಪರಿಣಾಮ ಶಮಿ ಅಫ್ಘಾನಿಸ್ತಾನ ವಿರುದ್ಧ ಪಂದ್ಯದ ಆಡುವ 11 ಬಳಗದಲ್ಲಿ ಸ್ಥಾನ ಪಡೆದಿದ್ದರು. 2019ನೇ ವಿಶ್ವಕಪ್ ನಲ್ಲಿ ಅಫ್ಘಾನ್ ತಂಡ ಪಡೆಯುತ್ತಿರುವ 6ನೇ ಸೋಲು ಇದಾಗಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಬುಮ್ರಾ ಕಮಾಲ್, ಶಮಿ ಹ್ಯಾಟ್ರಿಕ್ – ಭಾರತಕ್ಕೆ 11 ರನ್ ರೋಚಕ ಜಯ

    ಬುಮ್ರಾ ಕಮಾಲ್, ಶಮಿ ಹ್ಯಾಟ್ರಿಕ್ – ಭಾರತಕ್ಕೆ 11 ರನ್ ರೋಚಕ ಜಯ

    ಸೌತಾಂಪ್ಟನ್: ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರ ಉತ್ತಮ ಬೌಲಿಂಗ್ ಪ್ರದರ್ಶನದಿಂದ ಭಾರತ 11 ರನ್ ಗಳಿಂದ ರೋಚಕವಾಗಿ ಗೆದ್ದುಕೊಂಡಿದೆ. ಈ ಮೂಲಕ 2019ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ನಾಲ್ಕನೇ ಜಯ ಸಾಧಿಸಿದೆ.

    ಟಾಸ್ ಗೆದ್ದ ಭಾರತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 224 ರನ್ ಗಳಿಸಿತ್ತು. 225 ರನ್ ಗಳ ಗುರಿಯನ್ನು ಪಡೆದ ಅಫ್ಘಾನಿಸ್ತಾನ 49.5 ಓವರ್ ಗಳಲ್ಲಿ 213 ರನ್ ಗಳಿಗೆ ಆಲೌಟ್ ಆಗಿ ಸೋಲನ್ನು ಒಪ್ಪಿಕೊಂಡಿತು. ಈ ಮೂಲಕ 2019ರ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಗೆಲುವಿನ ಕನಸು ಕೈ ತಪ್ಪಿಸಿಕೊಂಡಿದೆ.

    ಕೊನೆಯ ಓವರ್ ನಲ್ಲಿ ಅಫ್ಘಾನಿಸ್ತಾನಕ್ಕೆ ಗೆಲ್ಲಲು 16 ರನ್ ಬೇಕಿತ್ತು. ಈ ಓವರ್ ನಲ್ಲಿ ಶಮಿ ಹ್ಯಾಟ್ರಿಕ್ ಸಾಧನೆ ಮಾಡಿದರು. ಈ ಮೂಲಕ ಈ ವಿಶ್ವಕಪ್ ನಲ್ಲಿ ಹ್ಯಾಟ್ರಿಕ್ ಸಾಧನೆಗೈದ ಮೊದಲ ಬೌಲರ್ ಎನಿಸಿಕೊಂಡರು.

    46ನೇ ಓವರ್ ನಲ್ಲಿ ಬುಮ್ರಾ 7 ರನ್ ನೀಡಿದರೆ, 49 ನೇ ಓವರ್ ನಲ್ಲಿ 5 ರನ್ ನೀಡಿ ರನ್ ವೇಗಕ್ಕೆ ಕಡಿವಾಣ ಹಾಕಿದರು. ಅಂತಿಮವಾಗಿ 10 ಓವರ್ ಎಸೆದ ಬುಮ್ರಾ 1 ಮೇಡನ್ ಓವರ್ 39 ರನ್ ನೀಡಿ 2 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    ಅಫ್ಘಾನ್‍ನ ಮೊಹಮ್ಮದ್ ನಬಿ 52 ರನ್ (55 ಎಸೆತ, 4 ಬೌಂಡರಿ,1 ಸಿಕ್ಸರ್), ರಹ್ಮತ್ ಶಾಹ 36 ರನ್ (63 ಎಸೆತ, 3 ಬೌಂಡರಿ) ನಾಯಕ ನೈಬ್ 27 ರನ್ (42 ಎಸೆತ, 2 ಬೌಂಡರಿ) ಗಳಿಸಿ ಔಟಾದರು.

    ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಬ್ಯಾಟಿಂಗ್ ಪಡೆ ಅಫ್ಘಾನ್ ಯುವ ಬೌಲರ್ ಮುಜೀಬ್ ಉರ್ ರೆಹಮಾನ್, ರಶೀದ್ ಖಾನ್ ಬೌಲಿಂಗ್ ಎದುರು ರನ್ ಗಳಿಸಿಲು ಪರದಾಡಿತ್ತು. ಪಾಕ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ್ದ ರೋಹಿತ್ ಶರ್ಮಾ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ನಾಯಕ ಕೊಹ್ಲಿ ಹಾಗೂ ಕೆಎಲ್ ರಾಹುಲ್ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದರು. ಪರಿಣಾಮ ಯಾವುದೇ ಹಂತದಲ್ಲಿ ಟೀಂ ಇಂಡಿಯಾ ರನ್ ರೇಟ್ ಹೆಚ್ಚಿಸಲು ಸಾಧ್ಯವಾಗಲೇ ಇಲ್ಲ.

    53 ಎಸೆತಗಳಲ್ಲಿ 2 ಬೌಂಡರಿ ನೆರವಿನಿಂದ 30 ರನ್ ಸಿಡಿಸಿ ಉತ್ತಮವಾಗಿ ಆಡುತ್ತಿದ್ದ ಕೆಎಲ್ ರಾಹುಲ್ ಮೊಹಮ್ಮದ್ ನಬಿಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದ್ದರು. ಆ ಬಳಿಕ ಬಂದ ವಿಜಯ್ ಶಂಕರ್ ಕೂಡ 41 ಎಸೆತಗಳಲ್ಲಿ 21 ರನ್ ಗಳಿಸಿ ನಿರ್ಗಮಿಸಿದ್ದರು. ಕೊಹ್ಲಿ, ರಾಹುಲ್ ಜೋಡಿ 52 ರನ್ ಜೊತೆಯಾಟ ನೀಡಿದರೆ, ಕೊಹ್ಲಿ ಮತ್ತು ವಿಜಯ್ ಶಂಕರ್ 58 ರನ್ ಜೊತೆಯಾಟವಾಡಿದ್ದರು. 5 ಬೌಂಡರಿ ಸಹಾಯದಿಂದ 63 ಎಸೆತಗಳಲ್ಲಿ 67 ರನ್ ಗಳಿಸಿದ್ದ ಕೊಹ್ಲಿ ವಿಕೆಟ್ ಪಡೆದ ಮೊಹಮ್ಮದ್ ನಬಿ ಭಾರತಕ್ಕೆ ರನ್ ವೇಗ ಹೆಚ್ಚಿಸಿಕೊಳ್ಳದಂತೆ ನೋಡಿಕೊಂಡಿದ್ದರು.

    ಈ ಹಂತದಲ್ಲಿ ಒಂದಾದ ಧೋನಿ, ಕೇದಾರ್ ಜಾಧವ್ ಕುಸಿಯುತ್ತಿದ್ದ ಟೀಂ ಇಂಡಿಯಾಗೆ ಚೇತರಿಕೆ ನೀಡಲು ಮುಂದಾಗಿದ್ದರು. ಈ ಜೋಡಿ 5ನೇ ವಿಕೆಟ್‍ಗೆ 57 ರನ್ ಜೊತೆಯಾಟ ನೀಡಿತ್ತು. ಭಾರತ 40 ಓವರ್ ಗಳ ಅಂತ್ಯಕ್ಕೆ ಕೇವಲ 157 ರನ್ ಗಳಷ್ಟೇ ಪೇರಿಸಿತ್ತು. ಇತ್ತ ಕೇದಾರ್ ಜಾಧವ್ 68 ಎಸೆತಗಳಲ್ಲಿ 52 ರನ್ ಗಳಿಸಿ ತಂಡ ಮೊತ್ತ 200 ರನ್ ಗಡಿ ದಾಟುವಂತೆ ಮಾಡಿದ್ದರು. ಅಂತಿಮ ಹಂತದಲ್ಲಿ ಬಿರುಸಿನ ಆಟಕ್ಕೆ ಮುಂದಾಗಿ ದಿಢೀರ್ ಕುಸಿತ ಕಂಡ ಟೀಂ ಇಂಡಿಯಾ 41 ರನ್ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡಿತ್ತು.

    ಅಫ್ಘಾನಿಸ್ತಾನ ಪರ ಶಿಸ್ತುಬದ್ಧ ಬೌಲಿಂಗ್ ನಡೆಸಿದ ಮೊಹಮ್ಮದ್ ನಬಿ, ಗುನ್ಬದೀನ್ ನೈಬ್ ತಲಾ 2 ವಿಕೆಟ್ ಪಡೆದರೆ ರಶಿದ್ ಖಾನ್, ರಹಮಾತ್ ಶಾ, ರೆಹಮಾನ್, ಅಲಮ್ ತಲಾ ಒಂದು ವಿಕೆಟ್ ಪಡೆದಿದ್ದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಕ್ರಿಕೆಟ್ ಶಿಶುಗಳ ಎದುರು ರನ್‍ಗಾಗಿ ತಿಣುಕಾಡಿದ ಕೊಹ್ಲಿ ಪಡೆ

    ಕ್ರಿಕೆಟ್ ಶಿಶುಗಳ ಎದುರು ರನ್‍ಗಾಗಿ ತಿಣುಕಾಡಿದ ಕೊಹ್ಲಿ ಪಡೆ

    ಸೌತಾಂಪ್ಟನ್: ವಿಶ್ವಕಪ್ ಟೂರ್ನಿಯಲ್ಲಿ ಗೆಲುವಿನ ಓಟವನ್ನು ಮುಂದುವರಿಸಿದ್ದ ಟೀಂ ಇಂಡಿಯಾ ಕ್ರಿಕೆಟ್ ಶಿಶು ಅಫ್ಘಾನಿಸ್ತಾನ ವಿರುದ್ಧ ರನ್ ಗಳಿಸಲು ಪರದಾಡಿದೆ. ನಾಯಕ ಕೊಹ್ಲಿಯ ಅರ್ಧ ಶತಕದ ಬಳಿವೂ ನಿಗದಿತ 50 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 224 ರನ್ ಗಳಿಸಲಷ್ಟೇ ಶಕ್ತವಾಯಿತು.

    ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಬ್ಯಾಟಿಂಗ್ ಪಡೆ ಅಫ್ಘಾನ್ ಯುವ ಬೌಲರ್ ಮುಜೀಬ್ ಉರ್ ರೆಹಮಾನ್, ರಶೀದ್ ಖಾನ್ ಬೌಲಿಂಗ್ ಎದುರು ರನ್ ಗಳಿಸಿಲು ಪರದಾಡಿತು. ಪಾಕ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ್ದ ರೋಹಿತ್ ಶರ್ಮಾ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ನಾಯಕ ಕೊಹ್ಲಿ ಹಾಗೂ ಕೆಎಲ್ ರಾಹುಲ್ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದರು. ಪರಿಣಾಮ ಯಾವುದೇ ಹಂತದಲ್ಲಿ ಟೀಂ ಇಂಡಿಯಾ ರನ್ ರೇಟ್ ಹೆಚ್ಚಿಸಲು ಸಾಧ್ಯವಾಗಲೇ ಇಲ್ಲ.

    53 ಎಸೆತಗಳಲ್ಲಿ 2 ಬೌಂಡರಿ ನೆರವಿನಿಂದ 30 ರನ್ ಸಿಡಿಸಿ ಉತ್ತಮವಾಗಿ ಆಡುತ್ತಿದ್ದ ಕೆಎಲ್ ರಾಹುಲ್ ಮೊಹಮ್ಮದ್ ನಬಿಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ಆ ಬಳಿಕ ಬಂದ ವಿಜಯ್ ಶಂಕರ್ ಕೂಡ 41 ಎಸೆತಗಳಲ್ಲಿ 29 ರನ್ ಗಳಿಸಿ ನಿರ್ಗಮಿಸಿದರು. ಕೊಹ್ಲಿ, ರಾಹುಲ್ ಜೋಡಿ 52 ರನ್ ಜೊತೆಯಾಟ ನೀಡಿದರೆ, ಕೊಹ್ಲಿ ಮತ್ತು ವಿಜಯ್ ಶಂಕರ್ 58 ರನ್ ಜೊತೆಯಾಟವಾಡಿದರು. 5 ಬೌಂಡರಿ ಸಹಾಯದಿಂದ 63 ಎಸೆತಗಳಲ್ಲಿ 67 ರನ್ ಗಳಿಸಿದ್ದ ಕೊಹ್ಲಿ ವಿಕೆಟ್ ಪಡೆದ ಮೊಹಮ್ಮದ್ ನಬಿ ಭಾರತಕ್ಕೆ ರನ್ ವೇಗ ಹೆಚ್ಚಿಸಿಕೊಳ್ಳದಂತೆ ನೋಡಿಕೊಂಡರು.

    ಈ ಹಂತದಲ್ಲಿ ಒಂದಾದ ಧೋನಿ, ಕೇದಾರ್ ಜಾಧವ್ ಕುಸಿಯುತ್ತಿದ್ದ ಟೀಂ ಇಂಡಿಯಾಗೆ ಚೇತರಿಕೆ ನೀಡಲು ಮುಂದಾದರು. ಈ ಜೋಡಿ 5ನೇ ವಿಕೆಟ್‍ಗೆ 57 ರನ್ ಜೊತೆಯಾಟ ನೀಡಿತು. ಭಾರತ 40 ಓವರ್ ಗಳ ಅಂತ್ಯಕ್ಕೆ ಕೇವಲ 157 ರನ್ ಗಳಷ್ಟೇ ಪೇರಿಸಿತ್ತು. ಇತ್ತ ಕೇದಾರ್ ಜಾಧವ್ 68 ಎಸೆತಗಳಲ್ಲಿ 52 ರನ್ ಗಳಿಸಿ ತಂಡ ಮೊತ್ತ 200 ರನ್ ಗಡಿ ದಾಟುವಂತೆ ಮಾಡಿದರು. ಅಂತಿಮ ಹಂತದಲ್ಲಿ ಬಿರುಸಿನ ಆಟಕ್ಕೆ ಮುಂದಾಗಿ ದಿಢೀರ್ ಕುಸಿತ ಕಂಡ ಟೀಂ ಇಂಡಿಯಾ 41 ರನ್ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡಿತು.

    ಅಫ್ಘಾನಿಸ್ತಾನ ಪರ ಶಿಸ್ತುಬದ್ಧ ಬೌಲಿಂಗ್ ನಡೆಸಿದ ಮೊಹಮ್ಮದ್ ನಬಿ, ಗುನ್ಬದೀನ್ ನೈಬ್ ತಲಾ 2 ವಿಕೆಟ್ ಪಡೆದರೆ ರಶಿದ್ ಖಾನ್, ರಹಮಾತ್ ಶಾ, ರೆಹಮಾನ್, ಅಲಮ್ ತಲಾ ಒಂದು ವಿಕೆಟ್ ಪಡೆದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]