Tag: ವಿಶ್ವಕಪ್

  • ರೋಹಿತ್, ಬುಮ್ರಾ ಬ್ಯಾಟಿಂಗ್ ದಾಳಿ ಕೊಂಡಾಡಿದ ಕ್ರಿಕೆಟ್ ದಿಗ್ಗಜ ತೆಂಡೂಲ್ಕರ್

    ರೋಹಿತ್, ಬುಮ್ರಾ ಬ್ಯಾಟಿಂಗ್ ದಾಳಿ ಕೊಂಡಾಡಿದ ಕ್ರಿಕೆಟ್ ದಿಗ್ಗಜ ತೆಂಡೂಲ್ಕರ್

    ನವದೆಹಲಿ: ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ (Rohit Sharma) ಸ್ಫೋಟಕ ಶತಕ ಬಾರಿಸಿ ದಾಖಲೆ ನಿರ್ಮಿಸಿದ ನಂತರ ಅವರ ಆಟದ ಬಗ್ಗೆ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ (Sachin Tendulkar) ಪ್ರತಿಕ್ರಿಯಿಸಿದ್ದಾರೆ. ಬುಮ್ರಾ ಮತ್ತು ರೋಹಿತ್ ಅವರ ಎರಡು ಉತ್ತಮ ಪ್ರದರ್ಶನಗಳು ಟೀಂ ಇಂಡಿಯಾಕ್ಕೆ ಬಲ ನೀಡಿದೆ ಎಂದು ಅವರು ಕೊಂಡಾಡಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

    ಐಸಿಸಿ ವಿಶ್ವಕಪ್‍ನಲ್ಲಿ  (World Cup) ಟೀಂ ಇಂಡಿಯಾ ಪರ ರೋಹಿತ್ ಶರ್ಮಾ ಅವರ ಸ್ಫೋಟಕ ಶತಕದಿಂದ ಸತತ ಎರಡನೇ ಗೆಲುವು ದಾಖಲಿಸಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಬುಧವಾರ ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ 8 ವಿಕೆಟ್‍ಗಳ ಜಯ ಗಳಿಸಿತು. ಅಲ್ಲದೆ, ಪ್ರಸ್ತುತ ಅಂಕಪಟ್ಟಿಯಲ್ಲಿ ಭಾರತ 4ನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಜಿಗಿಯಿತು. ಇದನ್ನೂ ಓದಿ: World Cup 2023: ಗುಡ್‌ನ್ಯೂಸ್‌ – ಪಾಕ್‌ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಸೇರಲಿದ್ದಾರೆ ಗಿಲ್‌

    ರೋಹಿತ್ ಶರ್ಮಾ ಕೇವಲ 84 ಎಸೆತಗಳಲ್ಲಿ 16 ಬೌಂಡರಿ ಹಾಗೂ 5 ಸಿಕ್ಸರ್ ಸೇರಿ 131 ರನ್ ಬಾರಿಸಿದರು. ಅಲ್ಲದೇ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ 31ನೇ ಶತಕ ಸಿಡಿಸಿದ ರೋಹಿತ್ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದರು.

    ಪ್ರಸ್ತುತ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ 19ನೇ ಇನ್ನಿಂಗ್ಸ್‍ನಲ್ಲಿ 7ನೇ ಶತಕ ಸಿಡಿಸುವ ಮೂಲಕ ಅತಿ ಹೆಚ್ಚು ಶತಕಗಳನ್ನು ಗಳಿಸಿದವರ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ. ಒಟ್ಟು ಶತಕಗಳ ಪಟ್ಟಿಯಲ್ಲಿ ಸಚಿನ್ (49) ಮೊದಲ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ (47) 2ನೇ ಸ್ಥಾನದಲ್ಲಿದ್ದಾರೆ. ವಿಶ್ವಕಪ್‍ನಲ್ಲಿ ವೇಗವಾಗಿ 1,000 ರನ್ ಪೂರೈಸಿದರಲ್ಲಿ ರೋಹಿತ್ ಶರ್ಮಾ ಜಂಟಿಯಾಗಿ ಡೇವಿಡ್ ವಾರ್ನರ್ ಮೊದಲನೇ ಸ್ಥಾನದಲ್ಲಿದ್ದಾರೆ. ಈ ಇಬ್ಬರೂ ಆಟಗಾರರು 19 ಇನ್ನಿಂಗ್ಸ್‌ಗಳಿಂದ 1 ಸಾವಿರ ರನ್ ಬಾರಿಸಿದ್ದಾರೆ.

    ಐಸಿಸಿ ವಿಶ್ವಕಪ್‍ನಲ್ಲಿ ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್‍ಗಳಿಂದ ಗೆದ್ದುಕೊಂಡಿತ್ತು. ಅಫ್ಘಾನಿಸ್ತಾನ ವಿರುದ್ಧದ ಎರಡನೇ ಪಂದ್ಯದಲ್ಲಿ 8 ವಿಕೆಟ್‍ಗಳು ಗೆಲುವು ಪಡೆದಿದೆ. 2011ರ ವಿಶ್ವಕಪ್‍ನಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗಿತ್ತು. ಆಗ ಸಚಿನ್ ತಂಡದ ಭಾಗವಾಗಿದ್ದರು. ವಿಶ್ವಕಪ್‍ನಲ್ಲಿ ಸಚಿನ್ 44 ಇನ್ನಿಂಗ್ಸ್‌ಗಳನ್ನು ಆಡಿದ್ದು, 6 ಶತಕಗಳನ್ನು ಗಳಿಸಿದ್ದರು. ಇದನ್ನೂ ಓದಿ: ರೋಹಿತ್‌ ಶರ್ಮಾ ಸ್ಫೋಟಕ ಶತಕ – 8 ವಿಕೆಟ್‌ಗಳ ಜಯದೊಂದಿಗೆ ಪಾಕ್‌ ಹಿಂದಿಕ್ಕಿದ ಭಾರತ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಾಕ್ ನೆಲದಲ್ಲೇ ಆಡಿದ ಫೀಲ್ ನೀಡಿದೆ – ಅಭಿಮಾನಿಗಳ ಬೆಂಬಲಕ್ಕೆ ಪಾಕ್ ಆಟಗಾರ ರಿಜ್ವಾನ್ ಪ್ರತಿಕ್ರಿಯೆ

    ಪಾಕ್ ನೆಲದಲ್ಲೇ ಆಡಿದ ಫೀಲ್ ನೀಡಿದೆ – ಅಭಿಮಾನಿಗಳ ಬೆಂಬಲಕ್ಕೆ ಪಾಕ್ ಆಟಗಾರ ರಿಜ್ವಾನ್ ಪ್ರತಿಕ್ರಿಯೆ

    ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಪಾಕಿಸ್ತಾನ (Pakistan) ಹಾಗೂ ಶ್ರೀಲಂಕಾ (Sri Lanka) ವಿಶ್ವಕಪ್ ಪಂದ್ಯದ (World Cup 2023) ವೇಳೆ ಪಾಕ್ ತಂಡ ಅಭಿಮಾನಿಗಳಿಂದ ಭಾರೀ ಬೆಂಬಲವನ್ನು ಪಡೆದುಕೊಂಡಿತು. ಆಟಗಾರರು ಈ ವೇಳೆ ತಾಯ್ನಾಡಿನಲ್ಲೇ ಆಡಿದಷ್ಟು ಸಂಭ್ರಮಿಸಿದ್ದಾರೆ. ಪ್ರೇಕ್ಷಕರ ಪ್ರೀತಿಯಿಂದ ನನಗೆ ರಾವಲ್ಪಿಂಡಿಯಲ್ಲಿಯೇ ಪಂದ್ಯವನ್ನು ಆಡುತ್ತಿರುವಂತೆ ಭಾಸವಾಯಿತು. ಇಡೀ ತಂಡಕ್ಕೂ ಈ ಪ್ರೀತಿ ಸಿಕ್ಕಿದೆ ಎಂದು ಪಾಕ್ ಆಟಗಾರ ರಿಜ್ವಾನ್ ಹೇಳಿದ್ದಾರೆ.

    ಆಟದ ವೇಳೆ `ಜೀತೇಗಾ ಭಾಯಿ ಜೀತೇಗಾ ಪಾಕಿಸ್ತಾನ್ ಜೀತೇಗಾ’ ಎಂಬ ಘೋಷಣೆಗಳು ಆಟಗಾರರನ್ನು ಹುರಿದುಂಬಿಸಿದವು. ಮೊಹಮ್ಮದ್ ರಿಜ್ವಾನ್ ಮತ್ತು ಸೌದ್ ಶಕೀಲ್ ಅವರು ಶ್ರೀಲಂಕಾ ವಿರುದ್ಧದ ವಿಶ್ವಕಪ್ 2023 ಪಂದ್ಯದಲ್ಲಿ ತಮ್ಮ ದಾಖಲೆಯ 345 ರನ್ ಚೇಸ್‍ನಲ್ಲಿ 34 ನೇ ಓವರ್‍ನ ಅಂತ್ಯದ ನಂತರ ಈ ಧ್ವನಿ ಕೇಳಿ ಬಂದಿದೆ. ಈ ಬೆಂಬಲ ಆಟಗಾರರಿಗೆ ತಾವು ಪಾಕ್‍ನ ಹೊರಗಿದ್ದೇವೆ ಎಂಬ ಭಾವವನ್ನು ಅಳಿಸಿ ಹಾಕಿದೆ ಎಂದು ಆಟಗಾರರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಶತಕ ಸಿಡಿಸಿ ಎರಡು ದಾಖಲೆ ಬರೆದ ಮಲಾನ್‌ – ಇಂಗ್ಲೆಂಡ್‌ಗೆ 137ರನ್‌ಗಳ ಭರ್ಜರಿ ಜಯ

    ಶ್ರೀಲಂಕಾ ಕೂಡ ಸಾಕಷ್ಟು ಬೆಂಬಲವನ್ನು ಪಡೆದುಕೊಂಡಿದೆ. ವಿಶೇಷವಾಗಿ ಕುಸಾಲ್ ಮೆಂಡಿಸ್ ಮತ್ತು ಸಮರವಿಕ್ರಮ ಅವರ ಬ್ಯಾಟಿಂಗ್ ವೇಳೆ ಅಭಿಮಾನಿಗಳಿಂದ ಭಾರೀ ಬೆಂಬಲ ಪಡೆದುಕೊಂಡರು.

    ಟೂರ್ನಿಯಲ್ಲಿ ವಿಶ್ವದಾಖಲೆಯ ರನ್ ಚೇಸ್ ಮಾಡಿದ ಪಾಕಿಸ್ತಾನ ಶ್ರೀಲಂಕಾ ವಿರುದ್ಧ 6 ವಿಕೆಟ್‍ಗಳ ಜಯ ಸಾಧಿಸಿತು. ಗೆಲ್ಲಲು 345 ರನ್‍ಗಳ ಕಠಿಣ ಸವಾಲು ಪಡೆದ ಪಾಕಿಸ್ತಾನ ಮೊಹಮ್ಮದ್ ರಿಜ್ವಾನ್ ಅಜೇಯ ಶತಕ ಮತ್ತು ಅಬ್ದುಲ್ಲಾ ಶಫೀಕ್ ಅವರ ಶತಕದ ಆಟದಿಂದ 48.2 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 345 ರನ್ ದಾಖಲಿಸುವ ಮೂಲಕ ಸತತ ಎರಡನೇ ಜಯ ಸಾಧಿಸಿತು.

    7.2 ಓವರ್‌ಗಳಿಗೆ 2 ವಿಕೆಟ್ ನಷ್ಟಕ್ಕೆ 37 ರನ್ ಗಳಿಸಿ ಸಂಕಷ್ಟದಲ್ಲಿದ್ದಾಗ ಅಬ್ದುಲ್ಲಾ ಶಫಿಕ್ ಮತ್ತು ರಿಜ್ವಾನ್ ಮೂರನೇ ವಿಕೆಟಿಗೆ 156 ಎಸೆತಗಳಲ್ಲಿ 176 ಜೊತೆಯಾಟವಾಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು.

    ಅಬ್ದುಲ್ಲಾ ಶಫಿಕ್ 113 ರನ್ (103 ಎಸೆತ, 10 ಬೌಂಡರಿ, 3 ಸಿಕ್ಸರ್) ಹೊಡೆದು ಔಟಾದರೆ ಸೌದ್ ಶಕೀಲ್ 31 ರನ್ ಕೊನೆಯಲ್ಲಿ ಇಫ್ತಿಕಾರ್ ಅಹ್ಮದ್ ಔಟಾಗದೇ 22 ರನ್ (10 ಎಸೆತ, 4 ಬೌಂಡರಿ) ಹೊಡೆದರು. ಔಟಾಗದೇ 131 ರನ್ (121 ಎಸೆತ, 8 ಬೌಂಡರಿ, 3 ಸಿಕ್ಸರ್) ಹೊಡೆದ ಮೊಹ್ಮದ್ ರಿಜ್ವಾನ್ ಅವರಿಗೆ ಪಂದ್ಯಶ್ರೇಷ್ಠ ಗೌರವ ಸಿಕ್ಕಿತು.

    ಟಾಸ್ ಗೆದ್ದು ಬ್ಯಾಟ್ ಮಾಡಿದ ಲಂಕಾ ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ಪಾತುಮ್ ನಿಸ್ಸಾಂಕ 51 ರನ್ (61 ಎಸೆತ, 7 ಬೌಂಡರಿ, 1 ಸಿಕ್ಸರ್), ಕುಶಲ್ ಪಿರೇರಾ 122 ರನ್ (77 ಎಸೆತ, 14 ಬೌಂಡರಿ, 6 ಸಿಕ್ಸರ್) ಕುಸಾಲ್ ಮೆಂಡಿಸ್ 108 ರನ್ (89 ಎಸೆತ, 11 ಬೌಂಡರಿ, 2 ಸಿಕ್ಸರ್) ಹೊಡೆದ ಬಳಿಕ ತಂಡದ ಮೊತ್ತ 9 ವಿಕೆಟ್ ನಷ್ಟಕ್ಕೆ 344 ರನ್ ಗಳಿಸಿತು. ಅದರಲ್ಲೂ ಮೆಂಡಿಸ್ 40 ಎಸೆತಗಳಲ್ಲಿ ಅರ್ಧಶತಕ ಹೊಡೆದರೆ 67 ಎಸೆತಗಳಲ್ಲಿ ಶತಕ ಸಿಡಿಸಿದರು. ಇದನ್ನೂ ಓದಿ: World Cup 2023: ಇಂದು ಇಂಡೋ-ಅಫ್ಘಾನ್‌ ಕದನ – ಕೊಹ್ಲಿ ಅಬ್ಬರ ನೋಡಲು ಅಭಿಮಾನಿಗಳ ಕಾತರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶತಕ ಸಿಡಿಸಿ ಎರಡು ದಾಖಲೆ ಬರೆದ ಮಲಾನ್‌ – ಇಂಗ್ಲೆಂಡ್‌ಗೆ 137ರನ್‌ಗಳ ಭರ್ಜರಿ ಜಯ

    ಶತಕ ಸಿಡಿಸಿ ಎರಡು ದಾಖಲೆ ಬರೆದ ಮಲಾನ್‌ – ಇಂಗ್ಲೆಂಡ್‌ಗೆ 137ರನ್‌ಗಳ ಭರ್ಜರಿ ಜಯ

    ಧರ್ಮಶಾಲಾ: ಆರಂಭಿಕ ಆಟಗಾರ ಡೇವಿಡ್‌ ಮಲಾನ್‌ (Dawid Malan) ಅವರ ಸ್ಫೋಟಕ ಶತಕದ ಆಟದಿಂದ ಬಾಂಗ್ಲಾದೇಶದ (Bangladesh) ವಿರುದ್ಧ ಇಂಗ್ಲೆಂಡ್‌ (England) 137 ರನ್‌ಗಳ ಭರ್ಜರಿ ಜಯ ಸಾಧಿಸಿ ವಿಶ್ವಕಪ್‌ ಟೂರ್ನಿಯಲ್ಲಿ (World Cup Cricket) ಶುಭಾರಂಭ ಮಾಡಿದೆ.

    ಇಂಗ್ಲೆಂಡ್‌ ನೀಡಿದ 365 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ 48.2 ಓವರ್‌ಗಳಲ್ಲಿ 227 ರನ್‌ಗಳಿಗೆ ಸರ್ವಪತನ ಕಂಡಿತು.

    ಬಾಂಗ್ಲಾ ಪರವಾಗಿ ಆರಂಭಿಕ ಆಟಗಾರ ಲಿಟ್ಟನ್‌ ದಾಸ್‌ 76 ರನ್‌ (66 ಎಸೆತ, 7 ಬೌಂಡರಿ, 2 ಸಿಕ್ಸರ್‌) ಹೊಡೆದರೆ ಮುಷ್ಫಿಕರ್‌ ರಹೀಂ 51 ರನ್‌ (64 ಎಸೆತ, 4 ಬೌಂಡರಿ) ತೌಹಿದ್‌ 39 ರನ್‌ (61 ಎಸೆತ, 2 ಬೌಂಡರಿ) ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು.  ಇದನ್ನೂ ಓದಿ: ಪಾಕ್‌ ಉಗ್ರರನ್ನ ಹತ್ಯೆಗೈದ ಕಮಾಂಡೋಗಳಿಂದಲೇ ಭಾರತ-ಪಾಕ್ ಪಂದ್ಯಕ್ಕೆ ಭದ್ರತೆ – ಇಲ್ಲಿದೆ ಡಿಟೇಲ್ಸ್‌

    ರೀಸ್ ಟೋಪ್ಲಿ 4 ವಿಕೆಟ್‌, ಕ್ರೀಸ್‌ ವೋಕ್ಸ್‌ 2 ವಿಕೆಟ್‌ ಪಡೆದರು. ಸ್ಯಾಮ್‌ ಕರ್ರನ್‌, ಮಾರ್ಕ್‌ ವುಡ್‌, ಅದಿಲ್‌ ರಶೀದ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ ಪರವಾಗಿ ಜಾನಿ ಬೈರ್‌ಸ್ಟೋವ್‌ ಮತ್ತು ಡೇವಿಡ್‌ ಮಲಾನ್‌ ಮೊದಲ ವಿಕೆಟಿಗೆ 107 ಎಸೆತಗಳಲ್ಲಿ 115 ರನ್‌ ಜೊತೆಯಾಟವಾಡಿದರು. ಜಾನಿ ಬೈರ್‌ಸ್ಟೋವ್‌ 52 ರನ್‌(59 ಎಸೆತ, 8 ಬೌಂಡರಿ ಹೊಡೆದು ಔಟಾದರೆ, ಮಲಾನ್‌ 140 ರನ್‌ (107 ಎಸೆತ, 16 ಬೌಂಡರಿ, 5 ಸಿಕ್ಸರ್‌), ನಾಯಕ ಜೋ ರೂಟ್‌ 82 ರನ್‌ (68 ಎಸೆತ, 8 ಬೌಂಡರಿ, 1 ಸಿಕ್ಸರ್)‌ ಹೊಡೆದು ಔಟಾದರು. ಅಂತಿಮವಾಗಿ ಇಂಗ್ಲೆಂಡ್‌ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 364 ರನ್‌ ಹೊಡೆಯಿತು.

    ಮಲಾನ್‌ ದಾಖಲೆ:
    ಡೇವಿಡ್‌ ಮಲಾನ್‌ ಕೇವಲ 23 ಇನ್ನಿಂಗ್ಸ್‌ನಲ್ಲಿ 6ನೇ ಶತಕ ಹೊಡೆಯುವ ಮೂಲಕ ದಾಖಲೆ ಬರೆದಿದ್ದಾರೆ. ಈ ಹಿಂದೆ ಪಾಕಿಸ್ತಾನದ ಇಮಾನ್‌ ಉಲ್‌ ಹಕ್‌ 27 ಇನ್ನಿಂಗ್ಸ್‌, ಶ್ರೀಲಂಕಾದ ಉಪುಲ್‌ ತರಂಗಾ 29 ಇನ್ನಿಂಗ್ಸ್‌ನಲ್ಲಿ 6 ಶತಕ ಹೊಡೆದಿದ್ದರು.

    ಶತಕ ಹೊಡೆಯುವ ಜೊತೆ ವಿಶ್ವಕಪ್‌ನಲ್ಲಿ ಒಂದೇ ಓವರ್‌ನಲ್ಲಿ ಗರಿಷ್ಠ ರನ್‌ ಹೊಡೆದ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೂ ಮಲಾನ್‌ ಪಾತ್ರವಾಗಿದ್ದಾರೆ. ಮೆಹ್ದಿ ಹಸನ್‌ ಓವರ್‌ನಲ್ಲಿ 2 ಸಿಕ್ಸ್‌, 2 ಬೌಂಡರಿ,   ಸಿಂಗಲ್‌ ಸೇರಿ ಒಟ್ಟು 21 ರನ್‌ ಚಚ್ಚುವ ಮೂಲಕ ದಾಖಲೆ ಬರೆದಿದ್ದಾರೆ. ಈ ಹಿಂದೆ ಶ್ರೀಲಂಕಾ ವಿರುದ್ಧ ಜೋಸ್‌ ಬಟ್ಲರ್‌ ಮತ್ತು ಇಯನ್‌ ಮಾರ್ಗನ್‌ 20 ರನ್‌ ಚಚ್ಚಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಾಕ್‌ ಉಗ್ರರನ್ನ ಹತ್ಯೆಗೈದ ಕಮಾಂಡೋಗಳಿಂದಲೇ ಭಾರತ-ಪಾಕ್ ಪಂದ್ಯಕ್ಕೆ ಭದ್ರತೆ – ಇಲ್ಲಿದೆ ಡಿಟೇಲ್ಸ್‌

    ಪಾಕ್‌ ಉಗ್ರರನ್ನ ಹತ್ಯೆಗೈದ ಕಮಾಂಡೋಗಳಿಂದಲೇ ಭಾರತ-ಪಾಕ್ ಪಂದ್ಯಕ್ಕೆ ಭದ್ರತೆ – ಇಲ್ಲಿದೆ ಡಿಟೇಲ್ಸ್‌

    ಅಹಮದಾಬಾದ್‌: ಏಕದಿನ ವಿಶ್ವಕಪ್‌ (World Cup 2023) ಟೂರ್ನಿ ಆರಂಭವಾಗಿದ್ದು, ತೀವ್ರ ಕುತೂಹಲ ಕೆರಳಿಸಿರುವ ಭಾರತ – ಪಾಕಿಸ್ತಾನ ಪಂದ್ಯಕ್ಕೆ (Ind vs Pak) ದಿನಗಣನೆ ಆರಂಭವಾಗಿದೆ. ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಟ್ವಿಟ್ಟರ್‌ನಲ್ಲೂ ಟ್ರೆಂಡ್ ಅಲೆ ಎದ್ದಿದೆ.

    ಹೌದು. ಇದೇ ಅಕ್ಟೋಬರ್‌ 14 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium)  ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್‌ ಪಂದ್ಯ ನಡೆಯಲಿದ್ದು, ಬಿಗಿ ಭದ್ರತೆ ಒದಗಿಸಲಾಗಿದೆ. 2008ರ ನವೆಂಬರ್‌ 26ರಂದು ನಡೆದ ಮುಂಬೈ ದಾಳಿಯಲ್ಲಿ ಪಾಕ್‌ ಉಗ್ರರನ್ನು ಮಟ್ಟ ಹಾಕಿದ್ದ NSG ಕಮಾಂಡೋಗಳನ್ನು ಈ ಪಂದ್ಯಕ್ಕೆ ಭದ್ರತೆಗಾಗಿ ನಿಯೋಜಿಸಲಾಗಿದೆ.

    ಗುಜರಾತ್ ಪೊಲೀಸ್, ಎನ್​ಎಸ್​​ಜಿ, ರ‍್ಯಾಪಿಡ್‌ ಆಕ್ಷನ್‌ ಫೋರ್ಸ್‌ (RAF) ಮತ್ತು ಗೃಹರಕ್ಷರು ಸೇರಿದಂತೆ ವಿವಿಧ ಏಜೆನ್ಸಿಗಳ 11,000ಕ್ಕೂ ಹೆಚ್ಚು ಸಿಬ್ಬಂದಿಯನ್ನ ಭದ್ರತೆಗೆ ನಿಯೋಜಿಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿ ಕಾಂಗ್ರೆಸ್‌ನವರು ಬೈದಿದ್ದಕ್ಕೆ ಪ್ರದೀಪ್ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿರೋದು: ಸುಧಾಕರ್  

    ಕಳೆದ 20 ವರ್ಷಗಳಲ್ಲಿ ಅಹಮದಾಬಾದ್ ನಗರದಲ್ಲಿ ಯಾವುದೇ ಕೋಮುಗಲಭೆಗಳು ನಡೆದಿಲ್ಲವಾದರೂ, ಮುನ್ನೆಚ್ಚರಿಕೆ ಕ್ರಮವಾಗಿ ಹಲವಾರು ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗುವುದು ಎಂದು ಅಹಮದಾಬಾದ್ ಪೊಲೀಸ್ ಆಯುಕ್ತ ಜಿ.ಎಸ್.ಮಲಿಕ್ ತಿಳಿಸಿದ್ದಾರೆ.

    ಇದಕ್ಕೂ ಮುನ್ನ ಗುಜರಾತ್ ಸಿಎಂ ಭೂಪೇಂದ್ರಬಾಯ್‌ ಪಟೇಲ್ ಅವರು ಗೃಹ ಖಾತೆ ರಾಜ್ಯ ಸಚಿವ ಹರ್ಷ್ ಸಾಂಘವಿ, ರಾಜ್ಯ ಡಿಜಿಪಿ ವಿಕಾಸ್ ಸಹಾಯ್, ಜಿ.ಎಸ್ ಮಲಿಕ್ ಮತ್ತು ಇತರ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಗಾಂಧಿನಗರದಲ್ಲಿ ಸಭೆ ನಡೆಸಿ ಪೊಲೀಸರ ಪ್ಲ್ಯಾನ್‌ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ಇಂಡೋ ಪಾಕ್‌ ಪಂದ್ಯದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಇಸ್ರೇಲ್‌ನಲ್ಲಿರುವ ಕರಾವಳಿಗರ ರಕ್ಷಣೆಗೆ ವಿದೇಶಾಂಗ ಸಚಿವರಿಗೆ ಪತ್ರ: ನಳಿನ್ ಕುಮಾರ್ ಕಟೀಲ್

    ಮೋದಿ ಕ್ರೀಡಾಂಗಣದಲ್ಲಿ 1.32 ಲಕ್ಷ ಆಸನಗಳ ವ್ಯವಸ್ಥೆಯಿದ್ದು, ಪ್ರತಿಯೊಬ್ಬ ಪ್ರೇಕ್ಷಕರ ಚಲನವಲನಗಳ ಮೇಲೆ ನಿಗಾ ವಹಿಸಲು ಸೂಚನೆ ನೀಡಿದ್ದಾರೆ. ಅಲ್ಲದೇ ಇತ್ತೀಚೆಗೆ ಮುಂಬೈ ಪೊಲೀಸರಿಗೆ ಬಂದಿದ್ದ ಇಮೇಲ್‌ ಬೆದರಿಕೆ ಸಂದೇಶಗಳನ್ನು ಗಮನದಲ್ಲಿಟ್ಟುಕೊಂಡು ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನ‌ ನಿಯೋಜನೆ ಮಾಡಿರುವುದಾಗಿ ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ. ಇದನ್ನೂ ಓದಿ: ಉಗ್ರರಿದ್ದ ಕಾರನ್ನು ಬೆನ್ನಟ್ಟಿ ಬೈಕ್‌ ಓಡಿಸುತ್ತಲೇ ಗುಂಡು ಹಾರಿಸಿದ ಇಸ್ರೇಲ್‌ ಪೊಲೀಸ್‌ – ರೋಚಕ ದೃಶ್ಯದ ವೀಡಿಯೋ ವೈರಲ್‌

    7,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯೊಂದಿಗೆ, ಕ್ರೀಡಾಂಗಣದ ಭದ್ರತೆಗಾಗಿ ಮತ್ತು ಪಂದ್ಯದ ಸಮಯದಲ್ಲಿ ನಗರದ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಾವು ಸುಮಾರು 4,000 ಗೃಹರಕ್ಷಕರನ್ನು ನಿಯೋಜಿಸಲಾಗುವುದು. ಈ ಸಿಬ್ಬಂದಿಯ ಜೊತೆಗೆ ನಾವು ಮೂರು ‘ಹಿಟ್ ತಂಡಗಳು’ ಮತ್ತು ಎನ್ಎಸ್​ಜಿಯು ಒಂದು ಡ್ರೋನ್ ತಡೆ ತಂಡವನ್ನು ನಿಯೋಜಿಸುತ್ತೇವೆ. ನಮ್ಮ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ 9 ತಂಡಗಳನ್ನು ಸಹ ಬಳಸಿಕೊಳ್ಳಲಾಗುತ್ತದೆ. ಅಷ್ಟೇ ಅಲ್ಲದೇ ಇನ್ಸ್‌ಪೆಕ್ಟರ್‌ ಜನರಲ್ ಮತ್ತು ಡೆಪ್ಯೂಟಿ ಇನ್ಸ್‌ಪೆಕ್ಟರ್‌ ಜನರಲ್ ಶ್ರೇಣಿಯ ನಾಲ್ವರು ಹಿರಿಯ ಐಪಿಎಸ್ ಅಧಿಕಾರಿಗಳು ಮತ್ತು 21 ಉಪ ಪೊಲೀಸ್ ಆಯುಕ್ತರು (ಡಿಸಿಪಿ) ಶ್ರೇಣಿಯ ಅಧಿಕಾರಿಗಳು ಪಂದ್ಯದ ದಿನದಂದು ಸಿಬ್ಬಂದಿ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನ ನೀಡಲಿದ್ದಾರೆ ಎಂದೂ ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

    “ರಾಜ್ಯ ಮೀಸಲು ಪೊಲೀಸ್ (SRP) ಯ 13 ತುಕಡಿಗಳಲ್ಲದೆ, ನಮ್ಮ ಭದ್ರತಾ ವ್ಯವಸ್ಥೆಯ ಭಾಗವಾಗಿ ನಾವು ಕ್ಷಿಪ್ರ ಕ್ರಿಯಾ ಪಡೆಯ ಮೂರು ತುಕಡಿಗಳನ್ನು ನಿಯೋಜಿಸುತ್ತೇವೆ. ಆರ್ ಎಎಫ್ ನಗರದ ಕೋಮು ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾ ಇಡಲಿದೆ. ಕಾಲ್ತುಳಿತದ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡಲು, ನಾವು ಈಗಾಗಲೇ ಸ್ಥಳಾಂತರಿಸುವ ಯೋಜನೆಯನ್ನು ಸಿದ್ಧಪಡಿಸಿದ್ದೇವೆ ಮತ್ತು ಕ್ರೀಡಾಂಗಣದಲ್ಲಿ ಪೂರ್ವಾಭ್ಯಾಸವೂ ನಡೆಯುತ್ತಿದೆ ಎಂದು ಮಲಿಕ್ ಮಾಹಿತಿ ನೀಡಿದ್ದಾರೆ.

    ಇತ್ತೀಚೆಗಷ್ಟೇ ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್‌ನನ್ನ ಬಿಡುಗಡೆ ಮಾಡಬೇಕು, ಜೊತೆಗೆ 500 ಕೋಟಿ ರೂ. ನೀಡಬೇಕು. ಇಲ್ಲವಾದರೆ ಪ್ರಧಾನಿ ಮೋದಿ ಅವರನ್ನು ಹತ್ಯೆ ಮಾಡಲಾಗುವುದು. ಅಷ್ಟೇ ಅಲ್ಲದೇ ಅಹಮದಾಬಾದ್‌ನ ಮೋದಿ ಕ್ರೀಡಾಂಗಣವನ್ನು ಸ್ಫೋಟಿಸಲಾಗುವುದು ಎಂದು ಮುಂಬೈ ಪೊಲೀಸರಿಗೆ ಇಮೇಲ್‌ ಮೂಲಕ ಬೆದರಿಕೆ ಸಂದೇಶ ಬಂದಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನ್ಯೂಜಿಲೆಂಡ್‌ಗೆ 99 ರನ್‌ಗಳ ಭರ್ಜರಿ ಜಯ – ಡಚ್ಚರ ಗೇಮ್‌ ಪ್ಲ್ಯಾನ್‌ಗೆ ಅಭಿಮಾನಿಗಳ ಮೆಚ್ಚುಗೆ

    ನ್ಯೂಜಿಲೆಂಡ್‌ಗೆ 99 ರನ್‌ಗಳ ಭರ್ಜರಿ ಜಯ – ಡಚ್ಚರ ಗೇಮ್‌ ಪ್ಲ್ಯಾನ್‌ಗೆ ಅಭಿಮಾನಿಗಳ ಮೆಚ್ಚುಗೆ

    ಹೈದರಾಬಾದ್‌: ವಿಶ್ವಕಪ್‌ ಟೂರ್ನಿಯಲ್ಲಿ (ICC World Cup) ನೆದರ್‌ಲ್ಯಾಂಡ್‌ (Netherlands) ವಿರುದ್ಧ 99 ರನ್‌ಗಳ ಭರ್ಜರಿ ಜಯ ಸಾಧಿಸಿದ ನ್ಯೂಜಿಲೆಂಡ್‌ (New Zealand) ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 322 ರನ್‌ ಗಳಿಸಿತು. ನೆದರ್‌ಲ್ಯಾಂಡ್‌ ಹೋರಾಟ ನಡೆಸಿ ಕೊನೆಗೆ 46.3 ಓವರ್‌ಗಳಲ್ಲಿ 223 ರನ್‌ಗಳಿಗೆ ಸರ್ವಪತನ ಕಂಡಿತು. ಇದನ್ನೂ ಓದಿ: ಭಾರತ, ಹಿಂದೂ ಧರ್ಮ ಅವಹೇಳನ – ಪಾಕ್‌ ನಿರೂಪಕಿ ಗಡೀಪಾರು

    ನ್ಯೂಜಿಲೆಂಡ್‌ ಪರವಾಗಿ ವಿಲ್‌ ಯಂಗ್‌ 70 ರನ್‌ (80 ಎಸೆತ, 7 ಬೌಂಡರಿ, 2 ಸಿಕ್ಸರ್)‌, ರಚಿನ್‌ ರವೀಂದ್ರ 51 ರನ್‌(51 ಎಸೆತ, 3 ಬೌಂಡರಿ, 1 ಸಿಕ್ಸರ್)‌ ಡ್ಯಾರೆಲ್‌ ಮಿಷೆಲ್‌ 48 ರನ್‌ (47 ಎಸೆತ, 5 ಬೌಂಡರಿ, 2 ಸಿಕ್ಸರ್‌), ನಾಯಕ ಟಾಮ್‌ ಲ್ಯಾಥಮ್‌ 53 ರನ್‌ (46 ಎಸೆತ, 6 ಬೌಂಡರಿ, 1 ಸಿಕ್ಸರ್‌) ಕೊನೆಯಲ್ಲಿ ಮಿಚೆಲ್ ಸ್ಯಾಂಟ್ನರ್ ಔಟಾಗದೇ 36 ರನ್‌ (17 ಎಸೆತ, 3 ಬೌಂಡರಿ, 2 ಸಿಕ್ಸರ್‌) ಹೊಡೆದ ಪರಿಣಾಮ ನ್ಯೂಜಿಲೆಂಡ್‌ ಮೊತ್ತ 300 ರನ್‌ಗಳ ಗಡಿ ದಾಟಿತು.

    ನೆದರ್‌ಲ್ಯಾಂಡ್‌ ಪರವಾಗಿ ಕಾಲಿನ್‌ ಅಕರ್ಮನ್‌ 69 ರನ್‌ (73 ಎಸೆತ, 5 ಬೌಂಡರಿ), ಸ್ಕಾಟ್ ಎಡ್ವರ್ಡ್ಸ್ 30 ರನ್‌ (27 ಎಸೆತ, 2 ಬೌಂಡರಿ, 1 ಸಿಕ್ಸರ್)‌, ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ 29 ರನ್‌(34 ಎಸೆತ, 3 ಬೌಂಡರಿ) ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು. ಚೆಲ್ ಸ್ಯಾಂಟ್ನರ್ 5 ವಿಕೆಟ್‌, ಮ್ಯಾಟ್‌ ಹೆನ್ತಿ 3 ವಿಕೆಟ್‌, ರಚಿನ್‌ ರವೀಂದ್ರ 1 ವಿಕೆಟ್‌ ಪಡೆದರು.

    ಪೇಪರ್‌ ತಂದ ಡಚ್ಚರು:
    ಈ ಪಂದ್ಯವನ್ನು ಗೆಲ್ಲಬೇಕೆಂದು ನೆದರ್‌ಲ್ಯಾಂಡ್‌ ಆಟಗಾರರು ಫೀಲ್ಡಿಂಗ್‌ ವೇಳೆ ಪೇಪರ್‌ ನೋಡಿಕೊಂಡು ನ್ಯೂಜಿಲೆಂಡ್‌ ಬ್ಯಾಟ್ಸ್‌ಮನ್‌ಗಳ ವಿರುದ್ಧ ಗೇಮ್‌ ಪ್ಲ್ಯಾನ್‌ ಮಾಡುತ್ತಿದ್ದರು. ಪಂದ್ಯದ ಮೇಲಿನ ಡಚ್‌ ಆಟಗಾರರ ಈ ಶ್ರದ್ಧೆಯ ಬಗ್ಗೆ ಕ್ರಿಕೆಟ್‌ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಾಕ್‌ ಪಂದ್ಯಕ್ಕೆ ಕೇಸರಿ ಜೆರ್ಸಿಯಲ್ಲಿ ಮೆನ್‌ ಇನ್‌ ಬ್ಲೂ ಕಣಕ್ಕೆ – ಬಿಸಿಸಿಐನಿಂದ ಖಡಕ್‌ ಉತ್ತರ

    ಪಾಕ್‌ ಪಂದ್ಯಕ್ಕೆ ಕೇಸರಿ ಜೆರ್ಸಿಯಲ್ಲಿ ಮೆನ್‌ ಇನ್‌ ಬ್ಲೂ ಕಣಕ್ಕೆ – ಬಿಸಿಸಿಐನಿಂದ ಖಡಕ್‌ ಉತ್ತರ

    ಮುಂಬೈ: ಪಾಕಿಸ್ತಾನ (Pakistan) ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ (Team India) ಆಟಗಾರರು ಕೇಸರಿ ಜೆರ್ಸಿ (Orange Jersey) ಧರಿಸಿ ಕಣಕ್ಕೆ ಇಳಿಯುತ್ತಾರಾ? – ಹೀಗೊಂದು ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.

    ಮಾಧ್ಯಮವೊಂದು ಅ.14 ಶನಿವಾರ ಗುಜರಾತಿನ ಅಹಮದಾಬಾದ್‌ನಲ್ಲಿ ನಡೆಯಲಿರುವ ಪಂದ್ಯಕ್ಕೆ ಕೇಸರಿ ಬಣ್ಣದ ಜೆರ್ಸಿ ಧರಿಸಿ ಕಣಕ್ಕೆ ಇಳಿಯಲಿದೆ ಎಂದು ವರದಿ ಮಾಡಿದ ಹಿನ್ನೆಲೆಯಲ್ಲಿ ಈ ವಿಚಾರ ಈಗ ಮುನ್ನೆಲೆಗೆ ಬಂದಿದೆ.

    ವರದಿ ಪ್ರಕಟವಾದ ಬೆನ್ನಲ್ಲೇ ಬಿಸಿಸಿಐ (BCCI) ಪ್ರತಿಕ್ರಿಯಿಸಿದೆ. ಟೀಂ ಇಂಡಿಯಾ ವಿಶ್ವಕಪ್‌ ಕ್ರಿಕೆಟ್‌ನಲ್ಲಿ (World Cup Cricket) ನೀಲಿ ಬಣ್ಣದ ಜೆರ್ಸಿ ಧರಿಸಿ ಆಡಲಿದ್ದಾರೆ ಎಂದು ಬಿಸಿಸಿಐ ಖಜಾಂಚಿಯಾಗಿರುವ ಆಶಿಶ್ ಶೆಲಾರ್ ಸ್ಪಷ್ಟಪಡಿಸಿದ್ದಾರೆ.  ಇದನ್ನೂ ಓದಿ: ಅತ್ಯುತ್ತಮ ಫೀಲ್ಡಿಂಗ್‍ಗಾಗಿ ಚಿನ್ನ ಗೆದ್ದ ಕೊಹ್ಲಿ

    ಪಾಕಿಸ್ತಾನದ ವಿರುದ್ಧ ಟೀಮ್ ಇಂಡಿಯಾ ಬೇರೆ ಕಿಟ್‌ ಧರಿಸಲಿದೆ ಎಂಬ ಮಾಧ್ಯಮ ವರದಿಗಳನ್ನು ನಾವು ಸ್ಪಷ್ಟವಾಗಿ ತಳ್ಳಿಹಾಕುತ್ತೇವೆ. ಈ ವರದಿಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ ಮತ್ತು ಯಾರೊಬ್ಬರ ಕಲ್ಪನೆಯ ಕೆಲಸವಾಗಿದೆ. ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಮೆನ್ ಇನ್ ಬ್ಲೂ ನಿಲ್ಲಿ ಬಣ್ಣ ಜೆರ್ಸಿ ಧರಿಸಲಿದೆ ಎಂದು ತಿಳಿಸಿದ್ದಾರೆ.

    ಭಾರತ ತಂಡದ ಆಟಗಾರರು ಅಭ್ಯಾಸದ ವೇಳೆ ತಿಳಿ ಕೇಸರಿ ಬಣ್ಣದ ಜೆರ್ಸಿ ಧರಿಸುತ್ತಿದ್ದರೂ ಪಂದ್ಯದ ವೇಳೆ ನೀಲಿ ಬಣ್ಣದ ಜೆರ್ಸಿಯಲ್ಲೇ ಆಡುತ್ತಿದ್ದಾರೆ

    2019ರಲ್ಲಿ ಕೇಸರಿ ಜೆರ್ಸಿ ಧರಿಸಿದ್ದ ಟೀಂ ಇಂಡಿಯಾ:
    ಇಂಗ್ಲೆಂಡಿನಲ್ಲಿ ನಡೆದ 2019ರ ವಿಶ್ವಕಪ್‌ ಕ್ರಿಕೆಟ್‌ ವೇಳೆ ಭಾರತ ಕೇಸರಿ ಬಣ್ಣದ ಜೆರ್ಸಿ ಧರಿಸಿ ಕಣಕ್ಕೆ ಇಳಿದಿತ್ತು. ಫುಟ್‌ಬಾಲ್‌ ಆಡುವಾಗ ಎರಡು ತಂಡಗಳ ಒಂದೇ ಬಣ್ಣದ ಜರ್ಸಿ ಧರಿಸುವುದಿಲ್ಲ. ಈ ನಿಯಮವನ್ನೇ ಐಸಿಸಿ ಕ್ರಿಕೆಟಿಗೂ ಪರಿಚಯಿಸಿತ್ತು. ಇಂಗ್ಲೆಂಡ್ (England) ಮತ್ತು ಭಾರತ ನೀಲಿ ಜೆರ್ಸಿ ಹೊಂದಿತ್ತು. ಇಂಗ್ಲೆಂಡ್‌ ತವರು ತಂಡವಾಗಿದ್ದ ಕಾರಣ ಭಾರತ ನೀಲಿ ಮತ್ತು ಕೇಸರಿ ಬಣ್ಣದ ಜೆರ್ಸಿ ಧರಿಸಿ ಕಣಕ್ಕೆ ಇಳಿದಿತ್ತು.

     

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅತ್ಯುತ್ತಮ ಫೀಲ್ಡಿಂಗ್‍ಗಾಗಿ ಚಿನ್ನ ಗೆದ್ದ ಕೊಹ್ಲಿ

    ಅತ್ಯುತ್ತಮ ಫೀಲ್ಡಿಂಗ್‍ಗಾಗಿ ಚಿನ್ನ ಗೆದ್ದ ಕೊಹ್ಲಿ

    ಚೆನ್ನೈ: ಟೀಂ ಇಂಡಿಯಾ (Team India) ಆಟಗಾರ ವಿರಾಟ್ ಕೊಹ್ಲಿ (Virat Kohli) ಅತ್ಯುತ್ತಮ ಫೀಲ್ಡಿಂಗ್‍ಗಾಗಿ ಚಿನ್ನದ ಪದಕವನ್ನು ಪಡೆದಿದ್ದಾರೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್‍ನ (ODI World Cup) ಐದನೇ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ ಭಾರತ ಗೆದ್ದ ಬಳಿಕ ಅವರಿಗೆ ಅತ್ಯುತ್ತಮ ಫಿಲ್ಡಿಂಗ್‍ಗಾಗಿ ತಂಡದ ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಅವರಿಂದ ಪದಕ ಪಡೆದರು.

    ಕೋಚ್ ಪದಕ ನೀಡುತ್ತಿರುವ ವೀಡಿಯೋವನ್ನು ಬಿಸಿಸಿಐ ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಇದೇ ವೇಳೆ ಶ್ರೇಯಸ್ ಅಯ್ಯರ್ ಅವರ ಫೀಲ್ಡಿಂಗ್ ಪ್ರಯತ್ನಗಳಿಗಾಗಿ ಮೆಚ್ಚುಗೆಯನ್ನೂ ದಿಲೀಪ್ ಅವರು ವ್ಯಕ್ತಪಡಿಸಿದರು. ತಂಡದ ಒಟ್ಟಾರೆ ಪ್ರದರ್ಶನವನ್ನು ಅವರು ಶ್ಲಾಘಿಸಿದ್ದಾರೆ.

    ಮೊದಲ ಇನ್ನಿಂಗ್ಸ್‌ನಲ್ಲಿ ಸ್ಲಿಪ್‍ನಲ್ಲಿದ್ದ ಕೊಹ್ಲಿ ಮೈದಾನದಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಬುಮ್ರಾ ಎಸೆತದಲ್ಲಿ ಹಾರಿ ಮಿಚೆಲ್ ಮಾರ್ಷ್ ಅವರ ಕ್ಯಾಚನ್ನು ಪಡೆದರು. ಈ ಮೂಲಕ ಪಂದ್ಯದಲ್ಲಿ ಭಾರತಕ್ಕೆ ಆರಂಭಿಕ ಮುನ್ನಡೆ ಲಭಿಸಿತು. ಆಸ್ಟ್ರೇಲಿಯಾದ 199 ರನ್‍ಗಳನ್ನು ಬೆನ್ನಟ್ಟಿದ ಭಾರತ 6 ವಿಕೆಟ್‍ಗಳ ಗೆಲುವು ಸಾಧಿಸಿ ಶುಭಾರಂಭ ಮಾಡಿತು.

    ಚೇಸಿಂಗ್ ಆರಂಭಿಸಿದ ಭಾರತ 2ನೇ ಓವರ್‍ನಲ್ಲಿ ಕೇವಲ 2 ರನ್‍ಗಳಿಗೆ 3 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟ ಅನುಭವಿಸಿತ್ತು. ಬಳಿಕ 4ನೇ ವಿಕೆಟ್‍ಗೆ ಜೊತೆಯಾದ ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ ಜೋಡಿ ಆಟವನ್ನು ಮುಂದುವರಿಸಿತು. 15 ಓವರ್ ಪೂರ್ಣಗೊಂಡರೂ ಭಾರತ 49 ರನ್ ಗಳಿಸಿದ್ದರಿಂದ ಗೆಲವು ಅಸಾಧ್ಯವೆಂದೇ ಅಭಿಮಾನಿಗಳು ನಿರಾಸೆಯಲ್ಲಿದ್ದರು. ಬಳಿಕ ಸಮಯೋಚಿತ ಬ್ಯಾಟಿಂಗ್ ನಿಂದ ಒಂದೊಂದೇ ಬೌಂಡರಿಗಳನ್ನ ಸಿಡಿಸುತ್ತಾ ತಂಡವನ್ನು ಗೆಲುವಿನ ಹಾದಿಯತ್ತ ಮುನ್ನಡೆಸಿದರು.

    ಇವರಿಬ್ಬರ ಜೊತೆಯಾಟದಿಂದ ಭಾರತ 35 ಓವರ್‍ಗಳಲ್ಲಿ 151 ರನ್ ಬಾರಿಸಿತ್ತು. 4ನೇ ವಿಕೆಟ್‍ಗೆ ಕೆ.ಎಲ್ ರಾಹುಲ್ ಹಾಗೂ ಕೊಹ್ಲಿ 215 ಎಸೆತಗಳಲ್ಲಿ 165 ರನ್‍ಗಳ ಜೊತೆಯಾಟ ನೀಡಿ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು. ಕೊಹ್ಲಿ 116 ಎಸೆತಗಳಲ್ಲಿ 6 ಬೌಂಡರಿಯೊಂದಿಗೆ 85 ರನ್ ಚಚ್ಚಿ ಶತಕ ವಂಚಿರಾದರು. ಇನ್ನೂ ಕೊನೆಯವರೆಗೂ ಹೋರಾಡಿದ ಕೆ.ಎಲ್ ರಾಹುಲ್ 115 ಎಸೆತಗಳಲ್ಲಿ 97 ರನ್ (8 ಬೌಂಡರಿ, 2 ಸಿಕ್ಸರ್) ಗಳಿಸಿದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ 11 ರನ್ ಕೊಡುಗೆ ನೀಡಿದರು.

    ಮುಂಬರುವ ಪಂದ್ಯದಲ್ಲಿ ಭಾರತವು ಅಕ್ಟೋಬರ್ 11 ರಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟೀಂ ಇಂಡಿಯಾಕ್ಕೆ ಆಘಾತ – ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಶುಭಮನ್ ಅನುಮಾನ

    ಟೀಂ ಇಂಡಿಯಾಕ್ಕೆ ಆಘಾತ – ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಶುಭಮನ್ ಅನುಮಾನ

    ನವದೆಹಲಿ: 2023ರ ವಿಶ್ವಕಪ್ ಕ್ರಿಕೆಟ್‍ನ (World Cup) ಮೊದಲ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಕ್ಕೆ (Team India) ಭಾರೀ ಆಘಾತವಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಆರಂಭಿಕ ಆಟಗಾರ ಶುಭಮನ್ ಗಿಲ್‍ಗೆ (Shubman Gill) ಡೆಂಗ್ಯೂ ಖಚಿತವಾಗಿದೆ. ಇದರಿಂದಾಗಿ ಅವರು ಭಾನುವಾರ (ಅ.8) ಆಸ್ಟ್ರೇಲಿಯಾ (Australia) ವಿರುದ್ಧದ ಪಂದ್ಯದಲ್ಲಿ ಆಡುವುದು ಬಹುತೇಕ ಅನುಮಾನ.

    ಟೀಂ ಇಂಡಿಯಾ ವಿಶ್ವಕಪ್ ದಂಡಯಾತ್ರೆಯನ್ನು ರೋಹಿತ್ ಶರ್ಮಾ ನಾಯಕತ್ವದಲ್ಲಿ ಅಕ್ಟೋಬರ್ 8 ರಂದು ಪ್ರಾರಂಭಿಸಲಿದೆ. ಚೆನ್ನೈನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಆದರೆ ಪಂದ್ಯಕ್ಕೂ ಮುನ್ನ ಶುಭಮನ್ ಗಿಲ್ ಅನಾರೋಗ್ಯದಿಂದ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ. ಇದನ್ನೂ ಓದಿ: Asian Games: ಬಾಂಗ್ಲಾ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ – ಫೈನಲಿಗೆ ಭಾರತ

    ಟೀಂ ಮ್ಯಾನೇಜ್‍ಮೆಂಟ್ ಗಿಲ್ ಮೇಲೆ ತೀವ್ರ ನಿಗಾ ಇಟ್ಟಿದೆ. ಇಂದು ಗಿಲ್‍ಗೆ ಮತ್ತೊಂದು ಪರೀಕ್ಷೆ ನಡೆಯಲಿದೆ. ಇದರ ನಂತರ ಅವರ ಆಟದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ವರದಿಯಾಗಿದೆ.

    ಗಿಲ್ ಈ ಪಂದ್ಯವನ್ನು ಆಡದಿದ್ದರೆ, ರೋಹಿತ್ ಶರ್ಮಾ ಅವರೊಂದಿಗೆ ಇಶಾನ್ ಕಿಶನ್ ಅಥವಾ ಕೆಎಲ್ ರಾಹುಲ್ ಅವರು ಆರಂಭಿಕ ಆಟಗಾರರಾಗಿ ಕಣಕ್ಕೆ ಇಳಿಯುವ ಸಾಧ್ಯತೆಯಿದೆ.

    ಸದ್ಯಕ್ಕೆ ಗಿಲ್ ಅತ್ಯುತ್ತಮ ಫಾರ್ಮ್ ಹೊಂದಿದ್ದಾರೆ. ಈ ವರ್ಷದ ಆರಂಭದಲ್ಲಿ ಅವರು ನ್ಯೂಜಿಲೆಂಡ್ ವಿರುದ್ಧ ರೋಚಕ ದ್ವಿಶತಕ ಗಳಿಸಿದ್ದರು. ಇತ್ತೀಚೆಗೆ 2023 ರ ಏಷ್ಯಾ ಕಪ್‍ನಲ್ಲಿ ಗಿಲ್ ಒಟ್ಟು 302 ರನ್‍ಗಳನ್ನು ಗಳಿಸಿದ್ದರು. ಇದನ್ನೂ ಓದಿ: ಆಂಗ್ಲರ ವಿರುದ್ಧ ಶತಕ ಸಿಡಿಸಿ ಮೆರೆದಾಡಿದ ಬೆಂಗ್ಳೂರು ಮೂಲದ ರಚಿನ್‌ ರವೀಂದ್ರ ಯಾರು ಗೊತ್ತಾ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಂದಿನಿಂದ ವಿಶ್ವಕಪ್ ಫೈಟ್ – ಪಂದ್ಯಗಳಿಂದ ಔಟಾದವರ ಪಟ್ಟಿ ಇಲ್ಲಿದೆ

    ಇಂದಿನಿಂದ ವಿಶ್ವಕಪ್ ಫೈಟ್ – ಪಂದ್ಯಗಳಿಂದ ಔಟಾದವರ ಪಟ್ಟಿ ಇಲ್ಲಿದೆ

    ನವದೆಹಲಿ: ವಿಶ್ವಕಪ್ 2023 (ಅಹಮದಾಬಾದ್‍ನ) ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ಆರಂಭಗೊಳ್ಳಲಿದೆ. ಪ್ರಸ್ತುತ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಆರಂಭಿಕ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಬಾರಿಯ ವಿಶ್ವಕಪ್ ಆಯ್ಕೆ ಸಮಯದಲ್ಲಿ ಫಿಟ್ ಆಗಿರದೆ ಪಂದ್ಯಗಳಿಂದ ವಂಚಿತರಾಗಿರುವ ಪಟ್ಟಿ ಇಲ್ಲಿದೆ.

    ರಿಷಭ್ ಪಂತ್ (ಭಾರತ): ಕಳೆದ ವರ್ಷ ಭೀಕರ ಕಾರು ಅಪಘಾತದ ನಂತರ ರಿಷಬ್ ಪಂತ್ (Rishabh Pant) ಅವರು ಕ್ರಿಕೆಟ್‍ನಲ್ಲಿ (Cricket) ಪಾಲ್ಗೊಂಡಿಲ್ಲ. ಅವರು ಕ್ರಿಕೆಟ್‍ಗೆ ಮರಳಲು ಭಾರಿ ಪ್ರಯತ್ನದಲ್ಲಿದ್ದಾರೆ. ಇದನ್ನೂ ಓದಿ: ಪತ್ನಿಗೆ ಡಿವೋರ್ಸ್ ಕೊಟ್ಟ ಶಿಖರ್ ಧವನ್

    ಮೈಕೆಲ್ ಬ್ರೇಸ್‍ವೆಲ್ (ನ್ಯೂಜಿಲೆಂಡ್): ಇಂಗ್ಲೆಂಡ್‍ನ ದೇಶೀಯ ಟಿ20 ಪಂದ್ಯಾವಳಿಯಲ್ಲಿ ನ್ಯೂಜಿಲೆಂಡ್ ಆಲ್‍ರೌಂಡರ್ ಗಾಯಗೊಂಡು ವಿಶ್ವಕಪ್‍ನಿಂದ ಹೊರಗುಳಿದಿದ್ದಾರೆ. ವೋರ್ಸೆಸ್ಟರ್‍ಶೈರ್‌ಗಾಗಿ ಆಡುವಾಗ ಅವರು ಗಾಯಗೊಂಡರು. ಅವರು ಗುಣಮುಖರಾಗಲು ಸ್ವಲ್ಪ ಸಮಯ ಹಿಡಿಯಲಿದೆ ಎಂದು ವರದಿಯಾಗಿದೆ.

    ನಸೀಮ್ ಷಾ (ಪಾಕಿಸ್ತಾನ): ವಿಶ್ವದ ಅತ್ಯಂತ ಭರವಸೆಯ ವೇಗಿಗಳಲ್ಲಿ ಒಬ್ಬರಾದ ನಸೀಮ್ ಷಾ ಅವರು ಪಂದ್ಯಾವಳಿ ಪ್ರಾರಂಭವಾಗುವ ಕೆಲವೇ ದಿನಗಳ ಮೊದಲು ವಿಶ್ವಕಪ್‍ನಿಂದ ವಂಚಿತರಾದರು. ಭಾರತ ವಿರುದ್ಧದ ಏಷ್ಯಾ ಕಪ್ ಸೂಪರ್ 4 ಸೆಣಸಾಟದಲ್ಲಿ ಅವರು ಗಾಯಗೊಂಡರು. ಅವರು ಇನ್ನೂ ಸರಿಯಾಗಿ ಚೇತರಿಸಿಕೊಂಡಿಲ್ಲ.

    ಆಶ್ಟನ್ ಅಗರ್ (ಆಸ್ಟ್ರೇಲಿಯಾ): ಗಾಯದಿಂದಾಗಿ ಆಶ್ಟನ್ ಅಗರ್ ಅವರು ವಿಶ್ವಕಪ್‍ನಿಂದ ಹೊರಗುಳಿದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಆರಂಭಕ್ಕೂ ಮುನ್ನ ಅವರು ಗಾಯಗೊಂಡಿದ್ದರು. ಅವರು ಏಕದಿನ ಪಂದ್ಯದ ವೇಳೆ ಭಾರತದ ವಿರುದ್ಧ ಆಡಿದ್ದರು. ಬಳಿಕ ಗಾಯದ ಸಮಸ್ಯೆ ಮರಳಿ ಕಾಣಿಸಿಕೊಂಡಿತ್ತು. ಇದರಿಂದಾಗಿ ಮುಂದಿನ ಎರಡು ಪಂದ್ಯಗಳಲ್ಲಿ ಅವರು ಆಡಿರಲಿಲ್ಲ.

    ಎಬಾಡೋಟ್ ಹೊಸೈನ್ (ಬಾಂಗ್ಲಾದೇಶ): ಮೊಣಕಾಲು ಗಾಯಗೊಂಡಿದ್ದು ಇವರು ವಿಶ್ವಕಪ್‍ನಿಂದ ಹೊರಗುಳಿದಿದ್ದಾರೆ. ಗಾಯ ತೀವ್ರವಾಗಿದ್ದು ದೀರ್ಘಕಾಲದವರೆಗೆ ಇವರು ಆಡುವ ಸಾಧ್ಯತೆ ಇಲ್ಲ ಎಂದು ವರದಿಯಾಗಿದೆ.

    ಅನ್ರಿಚ್ ನಾಟ್ರ್ಜೆ (ದಕ್ಷಿಣ ಆಫ್ರಿಕಾ): ಎಕ್ಸ್‍ಪ್ರೆಸ್ ವೇಗಿ ವಿಶ್ವಕಪ್‍ನಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ದೊಡ್ಡ ಆಘಾತ ಕೊಟ್ಟಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ಬೆನ್ನಿನ ಗಾಯಕ್ಕೆ ಒಳಗಾದರು. ಇವರ ಬದಲಿಗೆ ಲಿಝಾರ್ಡ್ ವಿಲಿಯಮ್ಸ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.

    ಹಸರಂಗಾ (ಶ್ರೀಲಂಕಾ): ಶ್ರೀಲಂಕಾ ತಂಡದ ಸೂಪರ್‍ಸ್ಟಾರ್ ಹಸರಂಗಾ ಅವರು ಲಂಕಾ ಪ್ರೀಮಿಯರ್ ಲೀಗ್‍ನಲ್ಲಿ ಮಂಡಿಯ ಗಾಯಕ್ಕೆ ಒಳಗಾಗಿದ್ದಾರೆ. ಇದರಿಂದಾಗಿ ಅವರು ವಿಶ್ವಕಪ್‍ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಅವರು ಏಷ್ಯಾ ಕಪ್ 2023ರಲ್ಲೂ ಕಾಣಿಸಿಕೊಂಡಿರಲಿಲ್ಲ.

    ಅಕ್ಷರ್ ಪಟೇಲ್ (ಭಾರತ): ಒಮ್ಮೆ ವಿಶ್ವಕಪ್‍ಗಾಗಿ ಭಾರತದ 15 ಜನರ ತಂಡದ ಭಾಗವಾಗಿದ್ದ ಅಕ್ಷರ್ 2023ರ ಏಷ್ಯಾ ಕಪ್ ವೇಳೆ ಗಾಯಗೊಂಡಿದ್ದರು. ಅವರು ಈವರೆಗೂ ಚೇತರಿಸಿಕೊಂಡಿಲ್ಲ. ಅವರ ಬದಲಿಗೆ ರವಿಚಂದ್ರನ್ ಅಶ್ವಿನ್ ಅವರನ್ನು ಆಯ್ಕೆ ಮಾಡಲಾಗಿದೆ.

    ಸಿಸಂಡಾ ಮಗಾಲಾ (ದಕ್ಷಿಣ ಆಫ್ರಿಕಾ): ದಕ್ಷಿಣ ಆಫ್ರಿಕಾದ ವೇಗದ ಆಟಗಾರ ಬಲ ಮೊಣಕಾಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರ ಸ್ಥಾನವನ್ನು ಆಂಡಿಲ್ ಫೆಹ್ಲುಕ್ವಾಯೊ ಅವರು ತುಂಬಿದ್ದಾರೆ.

    ದುಷ್ಮಂತ ಚಮೀರಾ (ಶ್ರೀಲಂಕಾ): ಆಗಸ್ಟ್‌ನಲ್ಲಿ ಲಂಕಾ ಪ್ರೀಮಿಯರ್ ಲೀಗ್‍ನಲ್ಲಿ ಆಡುತ್ತಿರುವಾಗ ಚಮೀರಾ ಗಾಯಕ್ಕೆ ಒಳಗಾಗಿದ್ದರು. ಅಂದಿನಿಂದ ಅವರು ಕ್ರಿಕೆಟ್‍ನಲ್ಲಿ ಕಾಣಿಸಿಕೊಂಡಿಲ್ಲ. ಇದನ್ನೂ ಓದಿ: ‌ICC World Cup 2023: ಇಂದಿನಿಂದ ವಿಶ್ವಕಪ್‌ ಮಹಾಸಮರ – ಇಂದು ಇಂಗ್ಲೆಂಡ್‌ ವಿರುದ್ಧ ನ್ಯೂಜಿಲೆಂಡ್ ಸೆಣಸಾಟ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೈದರಾಬಾದ್ ಬಿರಿಯಾನಿಯಿಂದಾಗಿ ಸ್ವಲ್ಪ ಸ್ಲೋ – ಅಭ್ಯಾಸ ಪಂದ್ಯದ ಸೋಲಿಗೆ ಪಾಕ್ ಆಟಗಾರನ ಪ್ರತಿಕ್ರಿಯೆ

    ಹೈದರಾಬಾದ್ ಬಿರಿಯಾನಿಯಿಂದಾಗಿ ಸ್ವಲ್ಪ ಸ್ಲೋ – ಅಭ್ಯಾಸ ಪಂದ್ಯದ ಸೋಲಿಗೆ ಪಾಕ್ ಆಟಗಾರನ ಪ್ರತಿಕ್ರಿಯೆ

    ಹೈದರಾಬಾದ್: ವಿಶ್ವಕಪ್  (ODI World Cup) ಆರಂಭಕ್ಕೂ ಮುನ್ನ ನಡೆದಿರುವ ಎರಡೂ ಅಭ್ಯಾಸ ಪಂದ್ಯಗಳಲ್ಲಿ ಪಾಕಿಸ್ತಾನ (Pakistan) ಸೋಲು ಕಂಡಿದೆ. ಈ ಬಗ್ಗೆ ಪಾಕ್ ತಂಡದ ಉಪನಾಯಕ ಶಾದಾಬ್ ಖಾನ್ (Shadab Khan), ನಾವು ಪ್ರತಿದಿನ ಹೈದರಾಬಾದ್ ಬಿರಿಯಾನಿ ತಿನ್ನುತ್ತಿದ್ದೇವೆ. ಅದಕ್ಕೆ ಸ್ಲೋ ಆಗಿದ್ದೇವೆ ಎಂದು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

    ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದ ಬಳಿಕ ಖಾನ್ ಮಾತನಾಡಿದ್ದಾರೆ. ನಾವು ಭಾರತಕ್ಕೆ ಏಳು ವರ್ಷಗಳ ಬಳಿಕ ಬಂದಿದ್ದೇವೆ. ನಮ್ಮ ತಂಡ ಹೈದರಾಬಾದ್‍ಗೆ ಆಗಮಿಸಿ ಒಂದು ವಾರ ಕಳೆದಿದೆ. ಇಲ್ಲಿ ಬಂದ ಮೇಲೆ ಇಲ್ಲಿನ ಬಿರಿಯಾನಿಯನ್ನು ಯಾಕೆ ರುಚಿ ನೋಡಬಾರದು ಎಂದು ಪ್ರತಿದಿನ ಬಿರಿಯಾನಿ ತಿನ್ನುತ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಸೋಶಿಯಲ್‌ ಮೀಡಿಯಾದಲ್ಲಿ ಧೂಳೆಬ್ಬಿಸಿದ ಮಹಿ ನ್ಯೂ ಲುಕ್‌; ಯಾರಿದು ಹೀರೋ ಅಂತಿದ್ದಾರೆ ಫ್ಯಾನ್ಸ್‌

    ಮಂಗಳವಾರ ಹೈದರಾಬಾದ್‍ನ ಉಪ್ಪಲ್ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನ 15 ರನ್‍ಗಳಿಂದ ಸೋಲು ಕಂಡಿದೆ. ಇದಕ್ಕೂ ಮುನ್ನ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ಸೋತಿತ್ತು. ಇದೇ ವಿಚಾರದ ಬಗ್ಗೆ ಪ್ರತಿಕ್ರಿಸಿರುವ ಶಾಬಾದ್ ಖಾನ್, ಹೈದರಾಬಾದಿ ಬಿರಿಯಾನಿಯಿಂದಾಗಿ ಸ್ವಲ್ಪ ಸ್ಲೋ ಆಗಿದ್ದೇವೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

    ಎರಡೂ ಅಭ್ಯಾಸ ಪಂದ್ಯಗಳನ್ನು ಸೋತಿರುವ ಪಾಕಿಸ್ತಾನ ವಿಶ್ವಕಪ್‍ನಲ್ಲಿ ಶುಭಾರಂಭ ಮಾಡಲು ಕಾಯುತ್ತಿದೆ. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಎರಡೂ ಪಂದ್ಯಗಳಲ್ಲಿ ಪಾಕಿಸ್ತಾನ 300ಕ್ಕೂ ಅಧಿಕ ರನ್ ಗಳಿಸಿತ್ತು. ಆಸ್ಟ್ರೇಲಿಯಾ ವಿರುದ್ಧದ 352 ರನ್‍ಗಳ ಗುರಿ ಬೆನ್ನಟ್ಟಿದಾಗ ಅಂತಿಮವಾಗಿ 337 ರನ್‍ಗಳಿಗೆ ಆಲೌಟ್ ಆಗಿತ್ತು.

    ಐಸಿಸಿ ಏಕದಿನ ವಿಶ್ವಕಪ್‍ಗೆ ಕ್ಷಣಗಣನೆ ಆರಂಭವಾಗಿದೆ. ಟೂರ್ನಿಯಲ್ಲಿ 10 ತಂಡಗಳು ಪೈಪೋಟಿ ನಡೆಸಲು ಎಲ್ಲಾ ರೀತಿಯಲ್ಲಿ ಸಜ್ಜಾಗಿವೆ. ಗುರುವಾರ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಅಕ್ಟೋಬರ್ 6 ರಂದು ಪಾಕಿಸ್ತಾನ ತಂಡ ನೆದರ್‌ಲ್ಯಾಂಡ್ಸ್ ವಿರುದ್ಧ ಹೈದರಾಬಾದ್‍ನ ಉಪ್ಪಲ್ ಸ್ಟೇಡಿಯಂನಲ್ಲೇ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಇದನ್ನೂ ಓದಿ: Asian Games 2023: ಚೊಚ್ಚಲ ಅಂತಾರಾಷ್ಟ್ರೀಯ T20 ಶತಕ ಸಿಡಿಸಿ ಗಿಲ್‌ ದಾಖಲೆ ಮುರಿದ ಯಶಸ್ವಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]