ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆಯಲಿರುವ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನದ ವಿಶ್ವಕಪ್ ( World Cup Cricket) ಪಂದ್ಯಕ್ಕೆ ಪ್ರತಿಭಟನೆ ಬಿಸಿ ತಟ್ಟುವ ಸಾಧ್ಯತೆಯಿದೆ.
ಆಸ್ಟ್ರೇಲಿಯಾ ಹಾಗೂ ಪಾಕ್ ಮ್ಯಾಚ್ ವಿರೋಧಿಸಿ ಹಿಂದೂಪರ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿವೆ. ಪಾಕ್ ಆಟಗಾರ ರಿಜ್ವಾನ್ (Mohammad Rizwan) ನೆದರ್‌ಲ್ಯಾಂಡ್ಸ್ (Nederland) ವಿರುದ್ಧದ ಪಂದ್ಯದ ವೇಳೆ ಮೈದಾನದಲ್ಲಿ ನಮಾಜ್ (Namaz) ಮಾಡಿದ್ದಾರೆ ಎಂದು ಸಂಘಟನೆಗಳು ಆರೋಪಿಸಿವೆ. ಇದನ್ನೇ ಮುಂದಿಟ್ಟುಕೊಂಡು ಗೋ ಬ್ಯಾಕ್ ರಿಜ್ವಾನ್ ಎಂಬ ಫಲಕಗಳನ್ನು ಹಿಡಿದು ಹೋರಾಟಕ್ಕೆ ಮುಂದಾಗಿವೆ.
ರಿಜ್ವಾನ್, ಶ್ರೀಲಂಕಾ ವಿರುದ್ಧ ಸೆಂಚುರಿ ಸಿಡಿಸಿ ಅದನ್ನು ಪ್ಯಾಲೆಸ್ತಿನ್‍ಗೆ ಇದೀಗ ಆಟಗಾರನ ನಡೆಗೆ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ನಾಳೆ ನಡೆಯಲಿರುವ ಪಂದ್ಯಕ್ಕೆ ಪ್ರತಿಭಟನೆಯ ಶಾಕ್ ನೀಡಲು ಮುಂದಾಗಿವೆ. ಇದನ್ನೂ ಓದಿ: ಕೋರಮಂಗಲ ಕೆಫೆಯಲ್ಲಿ ಬೆಂಕಿ ಅವಘಡ ಪ್ರಕರಣ – ಮಾಲೀಕ ನಾಪತ್ತೆ
ಚೆನ್ನೈ: ಬುಧವಾರ ಚೆನ್ನೈನಲ್ಲಿ (Chennai) ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ (One-Sided World Cup Match) ಅಫ್ಘಾನಿಸ್ತಾನದ (Afghanistan) ವಿರುದ್ಧ ನ್ಯೂಜಿಲೆಂಡ್ (New Zealand) 149 ರನ್‌ಗಳ ಜಯಗಳಿಸಿದೆ. ಈ ಮೂಲಕ 8 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ನ್ಯೂಜಿಲೆಂಡ್ ನೀಡಿದ್ದ 289 ರನ್ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ ತಂಡ 34.4 ಓವರ್‌ಗಳಿಗೆ 139 ರನ್ ಗಳಿಸಿ ಆಲ್‌ಔಟ್ ಆಯಿತು. ನ್ಯೂಜಿಲೆಂಡ್‌ನ ಮಾರಕ ಬೌಲಿಂಗ್‌ಗೆ ಅಫ್ಘಾನ್ ಬ್ಯಾಟರ್ಸ್ ಪ್ರತ್ಯುತ್ತರ ನೀಡಲಾಗದೇ ಸುಸ್ತಾಗಿ ಸೋಲೊಪ್ಪಿಕೊಂಡರು. ರೆಹಮತ್ ಶಾ 36 ರನ್, ಅಜ್ಮತುಲ್ಲಾ 27 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವ ಆಟಗಾರರು ಸಹ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು.
ಮಿಚೆಲ್ ಸಾಂಟ್ನರ್, ಫರ್ಗೂಸನ್ ತಲಾ 3 ವಿಕೆಟ್ ಪಡೆದರೆ ಟ್ರೆಂಟ್ ಬೌಲ್ಟ್ 2 ವಿಕೆಟ್ ಉರುಳಿಸಿದರು.
ಟಾಸ್ ಗೆದ್ದು ಅಫ್ಘಾನಿಸ್ತಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ತಂಡ 50 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 288 ರನ್ ಗಳಿಸಿತು. 289 ರನ್‌ಗಳ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ ನ್ಯೂಜಿಲೆಂಡ್ ಬೌಲರ್‌ಗಳ ಮಾರಕ ಬೌಲಿಂಗ್‌ಗೆ ಶರಣಾಗಿ ಸೋಲನುಭವಿಸಿತು.
ವಿಲ್‌ಯಂಗ್ (54), ಟಾಮ್ ಲಥಾಮ್ (68) ಹಾಗೂ ಗ್ಲೆನ್ ಫಿಲಿಪ್ಸ್ (71) ಅರ್ಧಶತಕ ಬಾರಿಸುವ ಮೂಲಕ ನ್ಯೂಜಿಲೆಂಡ್ ಗೆಲುವಲ್ಲಿ ಪ್ರಮುಖ ಪಾತ್ರವಹಿಸಿದರು.
ನವದೆಹಲಿ: ವಿಶ್ವಕಪ್ ಕ್ರಿಕೆಟ್‌ನಲ್ಲಿ (World Cup Cricket) ಇಂಗ್ಲೆಂಡ್ (England) ವಿರುದ್ಧ 69 ರನ್‌ಗಳ ಗೆಲುವು ಸಾಧಿಸಿದ ಅಫ್ಘಾನಿಸ್ತಾನ (Afghanistan) ತಂಡದ ಸಾಧನೆಯ ಹಿಂದೆ ಬಿಸಿಸಿಐ (BCCI) ಪಾಲಿದೆ.
ಹೌದು. ಆಂತರಿಕ ಕಿತ್ತಾಟದಿಂದ ನಲುಗಿ ಹೋಗಿದ್ದ ಅಫ್ಘಾನಿಸ್ತಾನಕ್ಕೆ ಆರ್ಥಿಕ ಸಹಕಾರ ನೀಡಿ ಆಟಗಾರರನ್ನು ಬಿಸಿಸಿಐ ಪ್ರೋತ್ಸಾಹಿಸಿದ ಪರಿಣಾಮ ಕ್ರಿಕೆಟ್ ಟೂರ್ನಿಗಳಲ್ಲಿ ಅಫ್ಘಾನ್ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಈ ಹಿಂದೆ ಪಾಕಿಸ್ತಾನದಲ್ಲಿ (Pakistan) ಅಫ್ಘಾನಿಸ್ತಾನ ತಂಡಕ್ಕೆ ತರಬೇತಿ ಸಿಕ್ಕಿತ್ತು. ಆದರೆ ತರಬೇತಿ ಅಷ್ಟೇನು ಚೆನ್ನಾಗಿ ಸಿಗದ ಕಾರಣ ಬಿಸಿಸಿಐ 2015ರಲ್ಲಿ ಅಫ್ಘಾನಿಸ್ತಾನ ತಂಡಕ್ಕೆ ನೆರವು ನೀಡಲು ಆರಂಭಿಸಿತು. ಗ್ರೇಟರ್ ನೋಯ್ಡಾದಲ್ಲಿರುವ ವಿಜಯ್ ಸಿಂಗ್ ಸ್ಫೋರ್ಟ್ಸ್ ಕಾಂಪ್ಲೆಕ್ಸ್ ಅಫ್ಘಾನಿಸ್ತಾನದ ಹೋಮ್ ಗ್ರೌಂಡ್ ಆಗಿತ್ತು. ಶಾರ್ಜಾದಿಂದ ನೋಯ್ಡಾಕ್ಕೆ ಶಿಫ್ಟ್ ಆಗಿದ್ದ ಅಫ್ಘಾನಿಸ್ತಾನ 2017ರಲ್ಲಿ ಗ್ರೇಟರ್ ನೋಯ್ಡಾದಲ್ಲೇ ಐರ್ಲೆಂಡ್ ವಿರುದ್ಧ ಸರಣಿ ಆಡಿತ್ತು.
ಅಫ್ಘಾನಿಸ್ತಾನ ಡೆಹ್ರಾಡೂನ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಟಿ20 ಸರಣಿ ಸಹ ಆಯೋಜಿಸಿತ್ತು. ಟೀಂ ಇಂಡಿಯಾದ ಮಾಜಿ ಆಟಗಾರರಾದ ಲಾಲ್‌ಚಂದ್ ರಜಪುತ್ ಮತ್ತು ಮನೋಜ್ ಪ್ರಭಾಕರ್ ಅವರು ಕೋಚ್ ಆಗಿ ಮಾರ್ಗದರ್ಶನ ಸಹ ನೀಡಿದ್ದರು. ಸಂಬಂಧ ಮತ್ತಷ್ಟು ಉತ್ತಮವಾಗುತ್ತಿದ್ದಂತೆ ಬೆಂಗಳೂರಿನಲ್ಲಿ ನಡೆದ ಟೆಸ್ಟ್ ಪಂದ್ಯಕ್ಕೆ ಬಿಸಿಸಿಐ ಅಫ್ಘಾನಿಸ್ತಾನದ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ ಅವರನ್ನು ಆಹ್ವಾನಿಸಿತ್ತು. ಅಂದು ಅಶ್ರಫ್ ಘನಿ ಟ್ವೀಟ್ ಮಾಡಿ ಅಫ್ಘಾನ್ ಆಟಗಾರರಿಗೆ ತಮ್ಮ ಕೌಶಲ್ಯವನ್ನು ತೋರಿಸಲು ವೇದಿಕೆಯನ್ನು ನೀಡಿದ್ದಕ್ಕಾಗಿ ನಾನು ನಮ್ಮ ಭಾರತೀಯ ಸ್ನೇಹಿತರಿಗೆ ಕೃತಜ್ಞನಾಗಿದ್ದೇನೆ ಎಂದು ಬರೆದು ಪ್ರಧಾನಿ ನರೇದ್ರ ಮೋದಿ ಅವರಿಗೆ ಟ್ಯಾಗ್ ಮಾಡಿದ್ದರು. ಇದನ್ನೂ ಓದಿ: ಸಿಕ್ಸರ್ ಗುಟ್ಟು ಬಿಚ್ಚಿಟ್ಟ ರೋಹಿತ್ ಶರ್ಮಾ
Delhi sach mein dil walon ki hai 🙌
A huge thank you to all the fans at the stadium who supported us and kept us going through out the game 🙏
And to all our supporters around the 🌍 thank you for your love 💙
ಭಾರತ ಸರ್ಕಾರ ಅಫ್ಘಾನಿಸ್ತಾನದಲ್ಲಿ ಕ್ರಿಕೆಟ್‌ಗೆ ಪ್ರೋತ್ಸಾಹ ನೀಡಲು 1 ಮಿಲಿಯನ್ ಡಾಲರ್ ನೀಡಿತ್ತು. ಈ ಹಣದಲ್ಲಿ ಕಂದಹಾರ್‌ನಲ್ಲಿ ನಿರ್ಮಾಣವಾದ ಕ್ರಿಕೆಟ್ ಕ್ರೀಡಾಂಗಣವನ್ನು ಭಾರತದ ರಾಯಭಾರ 2018ರ ಏಪ್ರಿಲ್‌ನಲ್ಲಿ ಉದ್ಘಾಟಿಸಿದ್ದರು. ಸ್ನೇಹದ ಭಾಗವಾಗಿ 2019ರಲ್ಲಿ ಅಮುಲ್ ಕಂಪನಿ ಅಫ್ಘಾನಿಸ್ತಾನದ ಮುಖ್ಯ ಪ್ರಾಯೋಜಕತ್ವ ವಹಿಸಿಕೊಂಡಿದೆ. ಕಳೆದ 2 ದಶಕಗಳಿಂದ ಅಮುಲ್ ತನ್ನ ಹಾಲಿನ ಪುಡಿ ಮತ್ತು ಮಗುವಿನ ಆಹಾರವನ್ನು ಅಫ್ಘಾನಿಸ್ತಾನಕ್ಕೆ ರಫ್ತು ಮಾಡುತ್ತಿದೆ.
ಐಪಿಎಲ್‌ನಲ್ಲಿ ಪಾಕ್ ಆಟಗಾರರಿಗೆ ನಿರ್ಬಂಧವಿದ್ದರೆ ಅಫ್ಘಾನ್ ಆಟಗಾರರು ಬಿಡ್‌ನಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಅದರಲ್ಲೂ ಸ್ಪಿನ್ನರ್ ರಶೀದ್ ಖಾನ್ ಅವರಿಗೆ ಭಾರತದಲ್ಲಿ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಈ ಹಿಂದೆ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ರಶೀದ್ ಖಾನ್ ಅವರು ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸಿದ್ದರು. ದೆಹಲಿಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ವಿಶ್ವಕಪ್ ಪಂದ್ಯದ ವೇಳೆ ಅಫ್ಘಾನಿಸ್ತಾನ ತಂಡವನ್ನು ಅಭಿಮಾನಿಗಳು ಹುರಿದುಂಬಿಸಿದ್ದರು. ಪ್ರೇಕ್ಷಕರ ಅಭಿಮಾನಕ್ಕೆ ರಶೀದ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಅಹಮದಾಬಾದ್: ಕ್ರಿಕೆಟ್‌ನಲ್ಲಿ ಆಟಗಾರರ ಮಧ್ಯೆ ಸ್ಲೆಡ್ಜಿಂಗ್, ಗುರಾಯಿಸುವುದು, ಉದ್ದೇಶಪೂರ್ವಕವಾಗಿ ಕಿರಿಕ್ ಮಾಡುವುದು ಸಾಮಾನ್ಯ. ಆದರೆ ಭಾರತ (India) ಮತ್ತು ಪಾಕಿಸ್ತಾನದ (Pakistan) ವಿರುದ್ಧ ವಿಶ್ವಕಪ್ ಕ್ರಿಕೆಟ್‌ನಲ್ಲಿ (World Cup Cricket) ಟೀಂ ಇಂಡಿಯಾದ ಅಭಿಮಾನಿಗಳು ಪಾಕ್ ಆಟಗಾರ ಮೊಹಮ್ಮದ್ ರಿಜ್ವಾನ್ (Mohammad Rizwan) ಅವರಿಗೆ ಸ್ಲೆಡ್ಜಿಂಗ್ ಮಾಡಿ ಸುದ್ದಿಯಾಗಿದ್ದಾರೆ.
ರಿಜ್ವಾನ್ ಅವರ ವಿರುದ್ಧ ಟೀಂ ಇಂಡಿಯಾ (Team India) ಅಭಿಮಾನಿಗಳು ಮುಗಿಬೀಳಲು ಕಾರಣವಿದೆ. ದುಬೈನಲ್ಲಿ ನಡೆದ 2021ರ ಟಿ20 ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ನಡೆದ ಪಂದ್ಯದಲ್ಲಿ ಪಾಕಿಸ್ತಾನ 10 ವಿಕೆಟ್‌ಗಳ ಭರ್ಜರಿ ಜಯಗಳಿಸಿತ್ತು. ಭಾರತದ ಡ್ರಿಂಕ್ಸ್ ಬ್ರೇಕ್ ಸಮಯದಲ್ಲಿ ರಿಜ್ವಾನ್ ಮೈದಾನದಲ್ಲೇ ನಮಾಜ್ ಮಾಡಿದ್ದರು.
-Rizwan prays on the ground every now and then, but that's okay.
-He often speaks about his religion on the field and in press conferences, but that's okay.
-What's not okay is Hindus chanting 'Jai Shree Ram'.
ಮೈದಾನದಲ್ಲಿ ನಮಾಜ್ ಮಾಡಿದ್ದಕ್ಕೆ ಅಂದೇ ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿತ್ತು. ಆದರೆ ಈ ಪಂದ್ಯದ ನಂತರ ಪಾಕ್ ಮಾಜಿ ಆಟಗಾರ ವಾಕರ್ ಯೂನಿಸ್ (Waqar Younis) ನೀಡಿದ ಹೇಳಿಕೆ ಸುಂಟರಗಾಳಿ ಎಬ್ಬಿಸಿತ್ತು. ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕ್ ಗೆಲ್ಲುವುದರ ಜೊತೆಗೆ ಹಿಂದೂಗಳ ಮುಂದೆ ನಮಾಜ್ ಮಾಡಿದ್ದು ವಿಶೇಷವಾಗಿತ್ತು ಎಂದು ಹೇಳಿದ್ದರು. ಇದನ್ನೂ ಓದಿ: ಸಿಕ್ಸ್ ಸಿಡಿಸಿ ದಾಖಲೆ ಬರೆದ ರೋಹಿತ್ ಶರ್ಮಾ
ಇಂಡೋ ಪಾಕ್ ಕ್ರಿಕೆಟ್ ಕದನ ನಡೆಯುವ ಮೊದಲು ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿತ್ತು. ಈ ಹೇಳಿಕೆಗೆ ಪೂರಕವಾಗಿ ಪಾಕ್ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದರು. ಮೋದಿ ಸ್ಟೇಡಿಯಂನಲ್ಲಿ ಭಾರತ ಸೋಲಬೇಕು ಮತ್ತು ಹಿಂದೂಗಳ ಮುಂದೆ ರಿಜ್ವಾನ್ ನಮಾಜ್ ಮಾಡುವುದನ್ನು ನೋಡಬೇಕು ಎಂದು ಕಮೆಂಟ್ ಮಾಡುತ್ತಿದ್ದರು. ಪಾಕ್ ಅಭಿಮಾನಿಗಳ ಆಸೆಯಂತೆ ರಿಜ್ವಾನ್ ಅವರು ವಿಶ್ವಕಪ್ ಕ್ರಿಕೆಟ್‌ನಲ್ಲಿ ನೆದರ್‌ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಮೈದಾನದಲ್ಲೇ ನಮಾಜ್ ಮಾಡಿದ್ದರು.
They wanted to watch Mohammad Rizwan offer Namaz at the Narendra Modi Stadium
BCCI had the DJ play "Bharat ka Bachcha Bachcha Jai Shri Ram bolega" and "Vande Mataram" and 1,30,000 Indians singing to it
ಈಗಾಗಲೇ ನಮಾಜ್ ಮಾಡಿದ ಹಿನ್ನೆಲೆಯಲ್ಲಿ ಭಾರತದ ವಿರುದ್ಧ ಮೈದಾನದಲ್ಲಿ ರಿಜ್ವಾನ್ ನಮಾಜ್ ಮಾಡುತ್ತಾರಾ ಎಂಬ ಕುತೂಹಲ ಇತ್ತು. ಆದರೆ ರಿಜ್ವಾನ್ ಅಂಗಳಕ್ಕೆ ಬರುತ್ತಿದ್ದಂತೆ ಮೋದಿ ಸ್ಟೇಡಿಯಂನಲ್ಲಿ ಜೈಶ್ರೀರಾಮ್ ಎಂಬ ಘೋಷಣೆ ಮೊಳಗಲು ಆರಂಭವಾಗಿತ್ತು. ರಿಜ್ವಾನ್ 49 ರನ್‌ಗಳಿಸಿ ಔಟಾಗಿ ಡ್ರೆಸ್ಸಿಂಗ್ ರೂಮ್‌ಗೆ ತೆರಳುತ್ತಿದ್ದಾಗ ಅಭಿಮಾನಿಗಳು ಜೈಶ್ರೀರಾಮ್ ಎಂದು ಘೋಷಣೆ ಕೂಗಿದ್ದರು.
ಈ ರೀತಿ ಸ್ಲೆಡ್ಜ್ ಮಾಡಿದ್ದು ಸರಿಯೇ ಎಂಬ ಪ್ರಶ್ನೆಗೆ, ಕ್ರಿಕೆಟ್‌ನಲ್ಲಿ ಧರ್ಮ ತಂದಿದ್ದು ಮೊದಲು ಅವರು. ಹಿಂದೂಗಳ ಮುಂದೆ ನಮಾಜ್ ಮಾಡಿದ್ದು ಎಂಬ ಹೇಳಿಕೆ ಸರಿಯೇ ಎಂದು ಅಭಿಮಾನಿಗಳು ಮರು ಪ್ರಶ್ನೆ ಹಾಕುತ್ತಾರೆ. ಅಷ್ಟೇ ಅಲ್ಲದೇ 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಟೀಂ ಇಂಡಿಯಾದ ಕೊಹ್ಲಿ, ಶಮಿ ಸೇರಿದಂತೆ ಇತರೇ ಆಟಗಾರರನ್ನು ಪಾಕ್ ಅಭಿಮಾನಿಗಳು ಕೆಟ್ಟ ಪದಗಳನ್ನು ಬಳಸಿ ನಿಂದಿಸಿದ್ದರು. 2019ರ ವಿಶ್ವಕಪ್ ವೇಳೆ ಹೋಟೆಲಿನಲ್ಲಿ ಪಾಕ್ ಅಭಿಮಾನಿಗಳು ವಿಜಯ್ ಶಂಕರ್ ಮತ್ತು ದಿನೇಶ್ ಕಾರ್ತಿಕ್ ಅವರನ್ನು ಅವಾಚ್ಯ ಪದ ಬಳಸಿ ನಿಂದನೆ ಮಾಡಿದ್ದು ಸರಿಯೇ ಎಂದು ಕೇಳುತ್ತಾರೆ.
ಸದ್ಯ ಈಗ ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ರಿಜ್ವಾನ್ ಅವರು ಔಟಾಗಿ ಡ್ರೆಸ್ಸಿಂಗ್ ರೂಮಿಗೆ ತೆರಳುವಾಗ ಜೈಶ್ರೀರಾಮ್ ಎಂದು ಘೋಷಣೆ ಕೂಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಅಹಮದಾಬಾದ್: ನಾಯಕ ರೋಹಿತ್ ಶರ್ಮಾ (Rohit Sharma) ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಭಾರತ (Team India) ಪರ ದಾಖಲೆ (Record) ಬರೆದಿದ್ದಾರೆ.
ಭಾರತದ ಪರ ಏಕದಿನ ಪಂದ್ಯದಲ್ಲಿ 300ಕ್ಕೂ ಅಧಿಕ ಸಿಕ್ಸರ್ (Sixer) ಸಿಡಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ.
ಪಾಕ್ ವಿರುದ್ಧದ ವಿಶ್ವಕಪ್ ಕ್ರಿಕೆಟ್ (World Cup Cricket) ಪಂದ್ಯದಲ್ಲಿ 3ನೇ ಸಿಕ್ಸರ್ ಸಿಡಿಸುವ ಮೂಲಕ ಈ ದಾಖಲೆಯನ್ನು ಬರೆದಿದ್ದಾರೆ. ಭಾರತದ ಪರ ಇಲ್ಲಿಯವರೆಗೆ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಹೆಲಿಕಾಪ್ಟರ್ ಶಾಟ್ ಖ್ಯಾತಿಯ ಧೋನಿ (MS Dhoni) ಹೆಸರಿನಲ್ಲಿತ್ತು. ಧೋನಿ ಇಲ್ಲಿಯವರೆಗೆ 299 ಸಿಕ್ಸ್ ಹೊಡೆದಿದ್ದಾರೆ. ಇದನ್ನೂ ಓದಿ: Record… Record… Record: ಇಂಡೋ-ಪಾಕ್ ಕದನದಲ್ಲಿ ಎಲ್ಲಾ ದಾಖಲೆ ಉಡೀಸ್!
ವಿಶ್ವ ಕ್ರಿಕೆಟ್‌ನಲ್ಲಿ ಏಕದಿನದಲ್ಲಿ ಅತಿ ಹೆಚ್ಚು ಸಿಕ್ಸ್ ಸಿಡಿಸಿದ ದಾಖಲೆ ಪಾಕ್ ಆಟಗಾರ ಶಾಹೀದ್ ಅಫ್ರಿದಿ ಹೆಸರಿನಲ್ಲಿದೆ. ಅಫ್ರಿದಿ 351 ಸಿಕ್ಸ್ ಸಿಡಿಸಿದ್ದರೆ ವಿಂಡೀಸ್ ಆಟಗಾರ ಕ್ರಿಸ್‌ಗೇಲ್ 331 ಸಿಕ್ಸ್ ಸಿಡಿಸಿ ಎರಡನೇ ಸ್ಥಾನದಲ್ಲಿದ್ದಾರೆ.
ಅಫ್ಘಾನಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಸಿಕ್ಸ್ ಸಿಡಿಸುವ ಮೂಲಕ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸ್ ಸಿಡಿಸಿದ ಬ್ಯಾಟರ್ ಎಂದು ವಿಶ್ವದಾಖಲೆ ಬರೆದಿದ್ದಾರೆ.
ಕ್ರಿಸ್‌ಗೇಲ್ 551 ಇನ್ನಿಂಗ್ಸ್ ಆಡಿ 553 ಸಿಕ್ಸ್ ಸಿಡಿಸಿದ್ದರೆ ರೋಹಿತ್ ಶರ್ಮಾ 473 ಇನ್ನಿಂಗ್ಸ್ ಆಡಿ ಈ ದಾಖಲೆ ಮುರಿದಿದ್ದರು. ಸದ್ಯ ರೋಹಿತ್ ಶರ್ಮಾ ಟೆಸ್ಟ್‌ನಲ್ಲಿ 77 ಸಿಕ್ಸ್, ಏಕದಿನದಲ್ಲಿ 303 ಸಿಕ್ಸ್, ಟಿ20 ಮಾದರಿಯಲ್ಲಿ 182 ಸಿಕ್ಸ್ ಸೇರಿ ಒಟ್ಟು 562 ಸಿಕ್ಸ್ ಹೊಡೆದ್ದಾರೆ. ಇದನ್ನೂ ಓದಿ: 1 ಲಕ್ಷ + ಅಭಿಮಾನಿಗಳ ಮುಂದೆ ಪಾಕ್ ಆಟಗಾರನನ್ನು ಟ್ರೋಲ್‌ಗೈದ ಕೊಹ್ಲಿ
ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ 63 ಎಸೆತಗಳಲ್ಲಿ 86 ರನ್ ಚಚ್ಚಿದ್ದರು. ಈ ಸೊಗಸಾದ ಇನ್ನಿಂಗ್ಸ್‌ನಲ್ಲಿ 6 ಸಿಕ್ಸ್, 6 ಬೌಂಡರಿಯನ್ನು ಬ್ಯಾಟ್‌ನಿಂದ ಸಿಡಿಸಿದ್ದರು.
ಅಹಮದಾಬಾದ್: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ (Wordl Cup Cricket) ಪಂದ್ಯದಲ್ಲಿ ಪಾಕ್ (Pakistan) ತಂಡದ ರಿಜ್ವಾನ್ ಮೊಹಮ್ಮದ್ (Mohammad Rizwan) ಅವರನ್ನು ವಿರಾಟ್ ಕೊಹ್ಲಿ ಟ್ರೋಲ್ ಮಾಡಿದ್ದಾರೆ.
12.3 ಓವರ್‌ನಲ್ಲಿ ಇಮಾಮ್-ಉಲ್-ಹಕ್ ಔಟಾದ ನಂತರ ರಿಜ್ವಾನ್ ಕ್ರೀಸ್‌ಗೆ ಆಗಮಿಸಿದರು. ಈ ವೇಳೆ ಗಾರ್ಡ್ ತೆಗೆದುಕೊಳ್ಳಲು ರಿಜ್ವಾನ್ ಕೆಲ ನಿಮಿಷ ತೆಗೆದುಕೊಂಡರು. ಅಂದಾಜು ಬ್ಯಾಟರ್ ತೆಗೆದುಕೊಳ್ಳುವ ಸೆಕೆಂಡ್‌ಗಿಂತಲೂ ಹೆಚ್ಚು ಸಮಯ ತೆಗೆದುಕೊಂಡಿದ್ದಕ್ಕೆ ಕೊಹ್ಲಿ (Virat Kohli) ವಾಚ್ ಕಟ್ಟುವ ಎಡಗೈನ್ನು ನೋಡಿ “ಎಷ್ಟು ಸಮಯ ಎಂದು” ಪ್ರಶ್ನೆ ಮಾಡುವಂತೆ ಟ್ರೋಲ್ ಮಾಡಿದರು.
ಶ್ರೀಲಂಕಾ ವಿರುದ್ಧ ಸೆಂಚೂರಿ ಸಿಡಿಸಿದ್ದ ರಿಜ್ವಾನ್ ಈ ಪಂದ್ಯದಲ್ಲಿ 1 ರನ್‌ನಿಂದ ಅರ್ಧಶತಕ ವಂಚಿತರಾದರು. 69 ಎಸೆತ ಎದುರಿಸಿದ ರಿಜ್ವಾನ್ 7 ಬೌಂಡರಿಯೊಂದಿಗೆ 49 ರನ್‌ಗಳಿಸಿ ಔಟಾದರು. ಪಾಕಿಸ್ತಾನ 29.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 155 ರನ್‌ಗಳಿಸಿ ಸುಭದ್ರ ಸ್ಥಿತಿಯಲ್ಲಿ ಇತ್ತು. ಆದರೆ ಯಾವಾಗ ಬಾಬರ್ ಅಜಂ ಔಟಾದರೋ ಅಲ್ಲಿಂದ ಕುಸಿತ ಆರಂಭವಾಯಿತು. ಮಧ್ಯಮ ಕ್ರಮಾಂಕದಲ್ಲಿ ಯಾರು ಪ್ರತಿರೋಧ ನೀಡದ ಪರಿಣಾಮ ಕೇವಲ 36 ರನ್‌ಗಳ ಅಂತರದಲ್ಲಿ 8 ವಿಕೆಟ್ ಕಳೆದುಕೊಂಡು 42.5 ಓವರ್‌ಗಳಲ್ಲಿ 191 ರನ್‌ಗಳಿಗೆ ಸರ್ವಪತನ ಕಂಡಿತು. ಇದನ್ನೂ ಓದಿ: Ind Vs Pak: ಪಾಕ್ ತಂಡಕ್ಕೆ ಅಗೌರವ ತೋರಬೇಡಿ – ಟೀಂ ಇಂಡಿಯಾ ಫ್ಯಾನ್ಸ್‌ಗೆ ಗಂಭೀರ್ ಮತ್ತೆ ಕ್ಲಾಸ್
ಬಾಬರ್ ಅಜಂ (Babar Azam) ಮತ್ತು ರಿಜ್ವಾನ್ (Mohammad Rizwan) 3ನೇ ವಿಕೆಟಿಗೆ 103 ಎಸೆತಗಳಲ್ಲಿ 82 ರನ್ ಜೊತೆಯಾಟವಾಡಿದ್ದರು. 50 ರನ್ (58 ಎಸೆತ, 7 ಬೌಂಡರಿ) ಹೊಡೆದಿದ್ದ ಅಜಂ ಅವರನ್ನು ಸಿರಾಜ್ ಬೌಲ್ಡ್ ಮಾಡಿದರೆ 49 ರನ್ (69 ಎಸೆತ, 7 ಬೌಂಡರಿ) ಹೊಡೆದಿದ್ದ ರಿಜ್ವಾನ್ ಅವರನ್ನು ಬುಮ್ರಾ ಬೌಲ್ಡ್ ಮಾಡಿದರು.
ಬುಮ್ರಾ , ಸಿರಾಜ್, ಪಾಂಡ್ಯ, ಕುಲದೀಪ್ ಯಾದವ್ , ಜಡೇಜಾ ತಲಾ ಎರಡು ವಿಕೆಟ್ ಪಡೆದರು. ಬುಮ್ರಾ 7 ಓವರ್ ಅದರಲ್ಲಿ 1 ಮೇಡನ್ ಸೇರಿ 19 ರನ್ ನೀಡಿದರೆ ಕುಲದೀಪ್ ಯಾದವ್ 10 ಓವರ್ ಹಾಕಿ 35 ರನ್ ನೀಡಿದರು.
ಅಹಮದಾಬಾದ್: ವಿಶ್ವಕಪ್ (World Cup 2023) ಟೂರ್ನಿಯ ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಆರಂಭವಾಗಿದೆ. ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಫೀಲ್ಡಿಂಗ್ ಆಯ್ದುಕೊಂಡಿದ್ದು, ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಿದ್ದಾರೆ.
1.32 ಲಕ್ಷ ಸಾಮರ್ಥ್ಯ ಆಸನಗಳ ವ್ಯವಸ್ಥೆಯುಳ್ಳ ಮೋದಿ ಕ್ರೀಡಾಂಗಣಕ್ಕೆ ಜನಸಾಗರವೇ ಹರಿದುಬಂದಿದ್ದು, ಕ್ರೀಡಾಂಗಣದ ಹೊರಗೂ ಸಾವಿರಾರು ಅಭಿಮಾನಿಗಳು ಟೀಂ ಇಂಡಿಯಾವನ್ನು (Team India Fans) ಹುರಿದುಂಬಿಸುತ್ತಿದ್ದಾರೆ. ಈ ನಡುವೆ ಎದುರಾಳಿ ತಂಡದ ಆಟಗಾರರನ್ನೂ ವ್ಯಂಗ್ಯಮಾಡುವ ಪ್ರಸಂಗಗಳೂ ಕಂಡುಬಂದಿದ್ದು, ಅಂತಹ ಅಭಿಮಾನಿಗಳಿಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಟಾಸ್ ಬಳಿಕ ಈ ಕುರಿತು ಮಾತನಾಡಿರುವ ಗೌತಮ್ ಗಂಭೀರ್ (Gautam Gambhir), ವಿಶ್ವಕಪ್‌ನಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿರುವ ಪಾಕಿಸ್ತಾನ ತಂಡಕ್ಕೆ ಅಗೌರವ ತೋರಬೇಡಿ. ನಿಮ್ಮ ತಂಡವನ್ನು ಬೆಂಬಲಿಸಿ, ಆದ್ರೆ ನಿಮ್ಮ ಸಂದರ್ಶಕರೊಂದಿಗೆ ಮತ್ತು ಅತಿಥಿಗಳಾಗಿ ಬಂದವರೊಡನೆ ಅನುಚಿತವಾಗಿ ವರ್ತಿಸಬೇಡಿ. ಅವರು ಇಲ್ಲಿಗೆ ವಿಶ್ವಕಪ್ ಆಡಲು ಬಂದಿದ್ದಾರೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: World Cup 2023: ಇಂಡೋ-ಪಾಕ್ ಕದನ ಯಾವಾಗಲೂ ರಣಕಣ ಏಕೆ? – ನೆನಪಿದೆಯಾ ಆ ಕರಾಳ ದಿನಗಳು?
ಅಹಮಾದಾಬಾದ್: ಪಾಕಿಸ್ತಾನ (Pakistan) ವಿರುದ್ಧ ವಿಶ್ವಕಪ್ ಕ್ರಿಕೆಟ್ (World Cup Cricket) ಪಂದ್ಯದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಎಡವಟ್ ಮಾಡಿಕೊಂಡಿದ್ದಾರೆ.
ಪಂದ್ಯವಾಡಲು ಮೈದಾನಕ್ಕೆ ಬಂದಾಗ ಬಿಳಿ ಬಣ್ಣದ ಪಟ್ಟಿ ಇರುವ ಜೆರ್ಸಿ (Jersey) ಧರಿಸಿ ಇಳಿದಿದ್ದರು. ನಂತರ ಈ ವಿಚಾರ ತಿಳಿದು ಜೆರ್ಸಿ ಬದಲಾವಣೆ ಮಾಡಿ ಅಂಗಳಕ್ಕೆ ಇಳಿದಿದ್ದರು.
Virat Kohli by mistake comes on the field by wearing the white stripes jersey instead of the tricolour one. pic.twitter.com/sv09MalH3X
ಟೀಂ ಇಂಡಿಯಾದ ಜೆರ್ಸಿ ಕಿಟ್ ಪ್ರಾಯೋಜಕತ್ವವನ್ನು ಅಡಿಡಾಸ್ ಕಂಪನಿ ವಹಿಸಿಕೊಂಡಿದೆ. ವಿಶ್ವಕಪ್‌ಗೆ ಸಿದ್ಧಪಡಿಸಲಾದ ಜೆರ್ಸಿಯಲ್ಲಿ ಭುಜದ ಮೇಲುಗಡೆ ಕೇಸರಿ, ಬಿಳಿ, ಹಸಿರು ಬಣ್ಣದ ಪಟ್ಟಿಯನ್ನು ಹಾಕಲಾಗಿದೆ. ಇದನ್ನೂ ಓದಿ: ಇಂಡಿಯಾ-ಪಾಕಿಸ್ತಾನ ಪಂದ್ಯ: ನಟ ಶಿವರಾಜ್ ಕುಮಾರ್ ಭಾಗಿ
ಈ ವರ್ಷದ ಫೆಬ್ರವರಿಯಲ್ಲಿ ಜರ್ಮನಿ ಮೂಲದ ಅಡಿಡಾಸ್ ಕಂಪನಿ ಬರೋಬ್ಬರಿ 350 ಕೋಟಿ ರೂ. ಬಿಡ್ ಮಾಡಿ ಕಿಟ್ ಪ್ರಾಯೋಜಕತ್ವವನ್ನು ಗೆದ್ದುಕೊಂಡಿತ್ತು. ಅಡಿಡಾಸ್ 2028ರವರೆಗೆ ಪ್ರಾಯೋಜಕತ್ವ ವಹಿಸಿಕೊಳ್ಳಲಿದೆ. ಪ್ರತಿ ಪಂದ್ಯಕ್ಕೆ ಅಡಿಡಾಸ್ (Adidas) ಕಂಪನಿ ಬಿಸಿಸಿಐಗೆ (BCCI) 65 ಲಕ್ಷ ರೂ. ಪಾವತಿಸಿದರೆ ವಾರ್ಷಿಕ 70 ಕೋಟಿ ರೂ. ನೀಡಲಿದೆ.
ಜೂನ್ ತಿಂಗಳಿನಲ್ಲಿ ಅಡಿಡಾಸ್ ಕಂಪನಿ ಟೆಸ್ಟ್, ಏಕದಿನ, ಟಿ20 ಕ್ರಿಕೆಟಿಗೆ ಧರಿಸುವ ಮೂರು ಜೆರ್ಸಿಯನ್ನು ಬಿಡುಗಡೆ ಮಾಡಿತ್ತು. ಟೆಸ್ಟ್ ಜೆರ್ಸಿಯಲ್ಲಿ ಮೂರು ಬಣ್ಣದ ಪಟ್ಟಿ ನೀಲಿ ಬಣ್ಣದಲ್ಲಿ ಇದೆ.
ಅಹಮದಾಬಾದ್: ಟೀಂ ಇಂಡಿಯಾ (Team India) ಹಾಗೂ ಪಾಕ್ (Pakistan) ನಡುವೆ ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿರುವ ಹೈವೋಲ್ಟೇಜ್ ವಿಶ್ವಕಪ್ ಪಂದ್ಯಕ್ಕಾಗಿ (World Cup 2023) ಕ್ರಿಕೆಟ್ ಪ್ರೇಮಿಗಳು ಕಾದು ಕುಳಿತಿದ್ದಾರೆ. ಎರಡೂ ತಂಡಗಳು ತಮ್ಮ ಮೊದಲ ಎರಡೂ ಪಂದ್ಯಗಳನ್ನು ಗೆದ್ದಿವೆ. ಇದರಿಂದಾಗಿ ಉಭಯ ತಂಡಗಳ ಪೈಪೋಟಿಯ ಮೇಲೆ ಅಭಿಮಾನಿಗಳು ಕಾತುರದ ಕಣ್ಣಿಟ್ಟಿದ್ದಾರೆ. ಎರಡೂ ತಂಡಗಳು ಈಗಾಗಲೇ ಅಹಮದಾಬಾದ್ ತಲುಪಿದ್ದು, ಅಭ್ಯಾಸವನ್ನು ಆರಂಭಿಸಿವೆ.
ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್‍ಗಳಿಂದ ಗೆದ್ದರೆ ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ 8 ವಿಕೆಟ್‍ಗಳಿಂದ ಗೆಲುವು ಸಾಧಿಸಿತ್ತು. ಮತ್ತೊಂದೆಡೆ ಪಾಕಿಸ್ತಾನ ನೆದಲ್ಯಾರ್ಂಡ್ಸ್ ಮತ್ತು ಶ್ರೀಲಂಕಾ ವಿರುದ್ಧದ ಕ್ರಮವಾಗಿ 81 ರನ್ ಮತ್ತು 6 ವಿಕೆಟ್‍ಗಳಿಂದ ಗೆದ್ದುಕೊಂಡಿದೆ. ಇದನ್ನೂ ಓದಿ: ಇಂಡೋ-ಪಾಕ್ ಕದನ: 10 ಸೆಕೆಂಡ್ ಜಾಹೀರಾತಿನ ಬೆಲೆ ಕೇಳಿದ್ರೆ ಎದೆ ಬಡಿತ ಹೆಚ್ಚಿಸುತ್ತೆ..!
ಇದರ ನಡುವೆ ನಾಳೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ. ಪಂದ್ಯದ ವೇಳೆ ಉತ್ತರ ಗುಜರಾತ್‍ನಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ಪಂದ್ಯದ ನೇರ ಪ್ರಸಾರವನ್ನು ಎಲ್ಲಾ ಸ್ಟಾರ್ ಸ್ಪೋರ್ಟ್ಸ್ ನೆಟ್‍ವರ್ಕ್ ಚಾನೆಲ್‍ಗಳಲ್ಲಿ ವೀಕ್ಷಿಸಬಹುದಾಗಿದೆ. ಭಾರತ ಮತ್ತು ಪಾಕಿಸ್ತಾನದ ಪಂದ್ಯದ ಲೈವ್-ಸ್ಟ್ರೀಮಿಂಗ್‍ನ್ನು ಡಿಸ್ನಿ+ ಹಾಟ್‍ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‍ಸೈಟ್‍ನಲ್ಲಿ ವೀಕ್ಷಿಸಬಹುದಾಗಿದೆ.
7-0 ಮುನ್ನಡೆಯಲ್ಲಿ ಭಾರತ:
ಭಾರತ ಮತ್ತು ಪಾಕ್ ನಡುವಿನ ಏಕದಿನ ವಿಶ್ವಕಪ್‍ನಲ್ಲಿ ಇದುವರೆಗೆ ಒಟ್ಟು 7 ಪಂದ್ಯಗಳು ನಡೆದೆದಿವೆ. ಈ ಪೈಕಿ ಟೀಂ ಇಂಡಿಯಾ ಎಲ್ಲಾ ಏಳು ಪಂದ್ಯಗಳನ್ನು ಗೆದ್ದಿದೆ. 1992, 1996, 1999, 2003, 2011, 2015 ಮತ್ತು 2019 ರಲ್ಲಿ ನಡೆದ ಎಲ್ಲಾ ಏಳು ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸಿದೆ.
ಕಳೆದ ಬಾರಿ 2019ರ ವಿಶ್ವಕಪ್‍ನಲ್ಲಿ ಟೀಂ ಇಂಡಿಯಾ ಪಾಕಿಸ್ತಾನವನ್ನು 89 ರನ್‍ಗಳಿಂದ ಸೋಲಿಸಿತ್ತು. ಮೊದಲು ಬ್ಯಾಟ್ ಮಾಡಿ ಭಾರತ 5 ವಿಕೆಟ್‍ಗೆ 336 ರನ್ ಗಳಿಸಿತ್ತು. ಮಳೆ ಅಡ್ಡಿಪಡಿಸಿದ ಈ ಪಂದ್ಯದಲ್ಲಿ ಪಾಕಿಸ್ತಾನಕ್ಕೆ 40 ಓವರ್‍ಗಳಲ್ಲಿ 302 ರನ್‍ಗಳ ಗುರಿ ನೀಡಲಾಗಿತ್ತು. ಪಾಕಿಸ್ತಾನ ತಂಡ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‍ಗೆ 212 ರನ್ ಗಳಿಸಿ ಸೋಲು ಕಂಡಿತ್ತು. ಈ ಮೂಲಕ ಭಾರತ 89 ರನ್‍ಗಳಿಂದ ಜಯ ಸಾಧಿಸಿತ್ತು. ಇದನ್ನೂ ಓದಿ: ಆಸೀಸ್ ವಿರುದ್ಧ 134 ರನ್‌ಗಳ ಭರ್ಜರಿ ಜಯ – ಮೊದಲ ಸ್ಥಾನಕ್ಕೆ ದ.ಆಫ್ರಿಕಾ ಜಿಗಿತ
ಲಕ್ನೋ: ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಆಸ್ಟ್ರೇಲಿಯಾ (Australia) ವಿಶ್ವಕಪ್ ಕ್ರಿಕೆಟ್‌ನ (World Cup Cricket) ಎರಡನೇ ಪಂದ್ಯದಲ್ಲೂ ಹೀನಾಯವಾಗಿ ಸೋತಿದೆ. ಕ್ವಿಂಟಾನ್ ಡಿ ಕಾಕ್ ಅವರ ಶತಕ ಮತ್ತು ಬೌಲರ್‌ಗಳ ಮಾರಕ ಬೌಲಿಂಗ್‌ನಿಂದ ದಕ್ಷಿಣ ಆಫ್ರಿಕಾ (South Africa) 134 ರನ್‌ಗಳ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 7 ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ 40.5 ಓವರ್‌ಗಳಲ್ಲಿ 177 ರನ್‌ಗಳಿಗೆ ಸರ್ವಪತನ ಕಂಡಿತು.
ವೇಗದ ಬೌಲರ್ ಕಗಿಸೋ ರಬಡಾ 3 ವಿಕೆಟ್ ಪಡೆದರೆ ಜನ್‌ಸೆನ್, ಕೇಶವ್ ಮಹರಾಜ್, ತಬ್ರೇಜ್ ಶಂಶಿ ತಲಾ 2 ವಿಕೆಟ್ ಪಡೆದರು. ಲುಂಗಿ ಎನ್‌ಗಿಡಿ 1 ವಿಕೆಟ್ ಕಿತ್ತರು.
ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ಪರ ಮೊದಲ ವಿಕೆಟಿಗೆ ಕೀಪರ್ ಕ್ವಿಂಟನ್ ಡಿ ಕಾಕ್ (Quinton de Kock ) ಮತ್ತು ತೆಂಬಾ ಬವುಮಾ 108 ರನ್ ಜೊತೆಯಾಟವಾಡುವ ಮೂಲಕ ಭದ್ರ ಇನ್ನಿಂಗ್ಸ್ ಕಟ್ಟಿದರು. ಆಡೆನ್ ಮ್ಯಾಕ್ರಮ್ 56 ರನ್ (44 ಎಸೆತ, 7 ಬೌಂಡರಿ, 1 ಸಿಕ್ಸರ್) ಹೊಡೆದರೆ ಹೊಡೆದರೆ ಕ್ವಿಂಟನ್ ಡಿ ಕಾಕ್ ಈ ವಿಶ್ವಕಪ್‌ನಲ್ಲಿ ಎರಡನೇ ಶತಕ ಸಿಡಿಸಿದರು. 109 ರನ್( 106 ಎಸೆತ, 8 ಬೌಂಡರಿ, 5 ಸಿಕ್ಸ್) ಹೊಡೆದು ತಂಡದ ಮೊತ್ತ 197 ಗಳಿಸಿದ್ದಾಗ ಮೂರನೇಯವರಾಗಿ ಔಟಾದರು.
ಮೊದಲ ಸ್ಥಾನ:
134 ರನ್‌ಗಳ ಭರ್ಜರಿ ಜಯ ಸಾಧಿಸಿದ ದಕ್ಷಿಣ ಆಫ್ರಿಕಾ ಅಂಕಪಟ್ಟಿಯಲ್ಲಿ 2.360 ನೆಟ್ ರನ್ ರೇಟ್‌ನೊಂದಿಗೆ ಮೊದಲ ಸ್ಥಾನಕ್ಕೆ ಜಿಗಿದಿದೆ. ತಲಾ 4 ಅಂಕ ಪಡೆದಿದ್ದರೂ ನೆಟ್ ರನ್‌ರೇಟ್ ಉತ್ತಮವಾಗಿರುವ ಇರುವ ಕಾರಣ ನ್ಯೂಜಿಲೆಂಡ್ (1.958), ಭಾರತ (1.500), ಪಾಕಿಸ್ತಾನ(0.927) ಅನುಕ್ರಮವಾಗಿ ನಂತರದ ಸ್ಥಾನ ಪಡೆದಿದೆ. ಎರಡು ಪಂದ್ಯಗಳನ್ನು ಸೋತಿರುವ ಆಸ್ಟ್ರೇಲಿಯಾ 9ನೇ ಸ್ಥಾನಕ್ಕೆ ಕುಸಿದಿದೆ.