Tag: ವಿಶ್ವ

  • ಮಗನ ತಪ್ಪಿನಿಂದಾಗಿ ಬಾಡಿಗೆ ಮನೆಯಿಂದ ನಮ್ಮನ್ನು ಹೊರಹಾಕಿದ್ರು: ಅಂಜಲಿ ಕೊಲೆ ಆರೋಪಿ ತಾಯಿ ಕಣ್ಣೀರು

    ಮಗನ ತಪ್ಪಿನಿಂದಾಗಿ ಬಾಡಿಗೆ ಮನೆಯಿಂದ ನಮ್ಮನ್ನು ಹೊರಹಾಕಿದ್ರು: ಅಂಜಲಿ ಕೊಲೆ ಆರೋಪಿ ತಾಯಿ ಕಣ್ಣೀರು

    – ವಿಶ್ವ ತಪ್ಪು ಮಾಡಿದ್ದಾನೆ, ಅವರಿಗೆ ಶಿಕ್ಷೆ ಆಗಬೇಕು
    – ಅವನನ್ನು ನೋಡಲು ಆಸ್ಪತ್ರೆಗೂ ನಾನು ಹೋಗಲ್ಲ

    ಹುಬ್ಬಳ್ಳಿ: ವಿಶ್ವ ತಪ್ಪು ಮಾಡಿದ್ದಾನೆ. ಅವನಿಗೆ ಶಿಕ್ಷೆ ಆಗಲೇಬೇಕು. ಅವನಿಂದ ನಮ್ಮ ಮಾನ-ಮರ್ಯಾದೆ ಎಲ್ಲಾ ಹೋಗಿದೆ ಎಂದು ಅಂಜಲಿ ಹತ್ಯೆ (Anjali Murder Case) ಪ್ರಕರಣದ ಆರೋಪಿ ವಿಶ್ವನ ತಾಯಿ ಶ್ವೇತ ಕಣ್ಣೀರು ಹಾಕಿದರು.

    ಹುಬ್ಬಳ್ಳಿಯಲ್ಲಿ (Hubballi) ವೀರಾಪುರ ಓಣಿಯ ಅಂಜಲಿ ಅಂಬಿಗೇರ ಎಂಬಾಕೆ ಹತ್ಯೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಆರೋಪಿ ವಿಶ್ವ ಅಲಿಯಾಸ್ ಗಿರೀಶ್‌ಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಜನರು ಒತ್ತಾಯಿಸಿದ್ದಾರೆ. ಪುತ್ರನ ಕೃತ್ಯಕ್ಕೆ ಆರೋಪಿ ತಾಯಿ ಬೇಸರಗೊಂಡು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಕೊಲೆ ಆರೋಪಿ ಗೋವಾ, ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಳ್ಳಲು ಪ್ಲ್ಯಾನ್‌ ಮಾಡಿದ್ದ: ರೇಣುಕಾ ಸುಕುಮಾರ

    ಪ್ರಕರಣ ಕುರಿತು ಮಾತನಾಡಿದ ಆರೋಪಿ ತಾಯಿ ಶ್ವೇತಾ, ನನ್ನ ಮಗ ಮೊದಲು ಕೆಲಸ ಮಾಡುತ್ತಿದ್ದ. ಈ ನಡುವೆ ಕೆಲಸ ಬಿಟ್ಟ. ಆ ನಂತರ ಮನೆಯಲ್ಲಿದ್ದು, ಮದ್ಯವ್ಯಸನ ಚಟಕ್ಕೆ ಬಲಿಯಾದ. ಆ ನಂತರ 6 ತಿಂಗಳು ಮನೆ ಬಿಟ್ಟು ಹೋಗಿದ್ದ ಎಂದು ಮಗನ ನಡವಳಿಕೆ ಬಗ್ಗೆ ಮಾತನಾಡಿದರು.

    ಅವನು ಆರಾಮಾಗಿ ಇದ್ದಾನೆಂದು ತಿಳಿದುಕೊಂಡಿದ್ದೆವು. ಅದರೆ ಇದೀಗ ಕೊಲೆ ಮಾಡಿರುವುದು ಗೊತ್ತಾಗಿದೆ. ಅವನು ತಪ್ಪು ಮಾಡಿದ್ದಾನೆ. ಅವನಿಗೆ ಕಾನೂನು ಪ್ರಕಾರ ಶಿಕ್ಷೆ ಆಗಲಿ. ಅದರೆ ಮಗ ಮಾಡಿದ ತಪ್ಪಿಗೆ ನಮಗೆ ಶಿಕ್ಷೆ ನೀಡಲಾಗುತ್ತಿದೆ ಎಂದು ಬೇಸರಿಸಿದರು. ಇದನ್ನೂ ಓದಿ: ವಿಶ್ವನಿಗೂ ನಮ್ಮ ಅಕ್ಕನಿಗೂ ಯಾವುದೇ ಸಂಬಂಧ ಇಲ್ಲ: ಅಂಜಲಿ ಸಹೋದರಿ ಸ್ಪಷ್ಟನೆ

    ಅವನಿಂದಾಗಿ ಬಾಡಿಗೆ ಮನೆಯಿಂದ ಹೊರಗೆ ಹಾಕಿದ್ದಾರೆ. ನಾನು ಹೋಟೆಲಿನ ಅಡುಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇನೆ. ಅವನಿಂದ ನಮ್ಮ ಮಾನ-ಮರ್ಯಾದೆ ಎಲ್ಲಾ ಹೋಗಿದೆ. ಅವನನ್ನು ನೋಡಲು ಕಿಮ್ಸ್ ಆಸ್ಪತ್ರೆಗೂ ನಾನು ಹೋಗುವುದಿಲ್ಲ ಎಂದು ನೊಂದು ನುಡಿದರು.

  • ವಿಶ್ವನಿಗೂ ನಮ್ಮ ಅಕ್ಕನಿಗೂ ಯಾವುದೇ ಸಂಬಂಧ ಇಲ್ಲ: ಅಂಜಲಿ ಸಹೋದರಿ ಸ್ಪಷ್ಟನೆ

    ವಿಶ್ವನಿಗೂ ನಮ್ಮ ಅಕ್ಕನಿಗೂ ಯಾವುದೇ ಸಂಬಂಧ ಇಲ್ಲ: ಅಂಜಲಿ ಸಹೋದರಿ ಸ್ಪಷ್ಟನೆ

    ಹುಬ್ಬಳ್ಳಿ: ಆರೋಪಿ ವಿಶ್ವನಿಗೂ ಅಕ್ಕನಿಗೂ ಯಾವುದೇ ಸಂಬಂಧ ಇಲ್ಲ ಎಂದು ಮೃತ ಅಂಜಲಿ ಅಂಬಿಗೇರ (Anjali Ambigera) ಸಹೋದರಿ ಸ್ಪಷ್ಟನೆ ನೀಡಿದ್ದಾಳೆ.

    ಆರೋಪಿ ಬಂಧನ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಯಶೋಧ, ಆರೋಪಿ ವಿಶ್ವನನ್ನು ಆಸ್ಪತ್ರೆಗೆ ಸೇರಿಸಿ ಯಾಕೆ ಚಿಕಿತ್ಸೆ ನೀಡುತ್ತಿದ್ದೀರಿ. ನಮ್ಮ ಅಕ್ಕ ಹೇಗೆ ರಕ್ತ ಹರಿದು ನರಳಿ ನರಳಿ ಸತ್ತಳೊ ಹಾಗೇ ಅವನು ಸಾಯಲಿ ಎಂದು ಆಕ್ರೋಶ ಹೊರಹಾಕಿದ್ದಾಳೆ.

    ನಮ್ಮ ಅಕ್ಕನ ರಕ್ತ ಹರಿದಷ್ಟು ಅವನಿಂದ ಹರಿಯಲಿ. ವಿಶ್ವನಿಗೆ ಹಾಗೂ ನಮ್ಮ ಅಕ್ಕನಿಗೆ ಯಾವುದೇ ಸಂಬಂಧ ಇಲ್ಲ. ಅವಳು ಸತ್ತ ಮೇಲೆ ಈ ರೀತಿ ಕಥೆ ಹುಟ್ಟುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದಳು. ಇದನ್ನೂ ಓದಿ: ಅಂಜಲಿ ಬಳಿಕ ರೈಲಿನಲ್ಲಿ ಮಹಿಳೆಗೆ ಚಾಕು ಹಾಕಲು ಯತ್ನಿಸಿ ಸಿಕ್ಕಿಬಿದ್ದ ಕಿರಾತಕ ವಿಶ್ವ

    ಅವನು ದಾವಣಗೆರೆ ರೈಲಿನಲ್ಲಿ ಮಹಿಳೆ ಮೇಲೆ ಚಾಕು ಹಾಕಿದಾನಲ್ಲಾ ಹಾಗಿದ್ರೆ ಅವಳಗೇನು ಸಂಬಂಧ?. ಯಾಕೆ ಚಾಕು ಹಾಕೋಕೆ ಹೋದ?. ವಿಶ್ವ ಮನಸ್ಥಿತಿ ಹಾಗಿದೆ ಹೀಗಾಗಿ ನಮ್ಮ ಅಕ್ಕ ಬಲಿಯಾಗಿದ್ದಾಳೆ ಎಂದು ಕಿಡಿಕಾರಿದಳು.

    ಪ್ರಕರಣದ ವಿವರ: ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ (21) ಮನೆಯಿದೆ. ಅಂಜಲಿ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಗಿರೀಶ್ ಅಲಿಯಾಸ್ ವಿಶ್ವ ಏಕಾಏಕಿ ಮನೆಗೆ ಎಮಟ್ರಿ ಕೊಟ್ಟಿದ್ದಾನೆ. ಅಲ್ಲದೆ ಅಜ್ಜಿ ಮತ್ತು ಇಬ್ಬರು ಸಹೋದರಿಯರ ಮುಂದೆಯೇ ಅಂಜಲಿಯನ್ನು ಮನೆ ತುಂಬೆಲ್ಲಾ ಎಳೆದಾಡಿ ಚಾಕುವಿನಿಂದ ಚುಚ್ಚಿ ಭೀಕರ ಹತ್ಯೆಗೈದಿದ್ದಾನೆ.

    ಮೊದಲಿಗೆ ಮನೆಯ ಪಡಸಾಲೆಯಲ್ಲಿ ಅಂಜಲಿಗೆ ಚಾಕು ಹಾಕಿ, ಬಳಿಕ ಕುತ್ತಿಗೆ ಹಿಡಿದು ಗೋಡೆಯತ್ತ ಎಳೆದುಕೊಂಡು ಹೋಗಿ ಹೊಟ್ಟೆ ಭಾಗಕ್ಕೆ ಚಾಕು ಹಾಕಿದ್ದಾನೆ. ಅಷ್ಟಕ್ಕೇ ತೃಪ್ತಿಯಾಗದೇ ಅಲ್ಲಿಂದ ಅಡುಗೆ ಮನೆಗೆ ಎಳೆದೊಯ್ದು ಮನ ಬಂದಂತೆ ಚಾಕುವಿನಿಂದ ಚುಚ್ಚಿ ಅಂಜಲಿ ಕೊನೆಯುಸಿರೆಳೆದ ಬಳಿಕವೇ ಅಲ್ಲಿಂದ ಕಾಲ್ಕಿತ್ತಿದ್ದಾನೆ.

  • ಆಟೋದಲ್ಲಿ ಬಂದು ಅಂಜಲಿ ಕೊಲೆಗೈದು ಹಂತಕ ಎಸ್ಕೇಪ್- ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಆಟೋದಲ್ಲಿ ಬಂದು ಅಂಜಲಿ ಕೊಲೆಗೈದು ಹಂತಕ ಎಸ್ಕೇಪ್- ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಹಿರೇಮಠ ಭೀಕರ ಕೊಲೆ ಘಟನೆ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ (Hubballi) ಮತ್ತೊಂದು ಯುವತಿಯ ಬರ್ಬರ ಹತ್ಯೆಯಾಗಿದೆ. ಆಟೋದಲ್ಲಿ ಬಂದ ಹಂತಕ ಯುವತಿ ಅಂಜಲಿ ಅಂಬಿಗೇರಳನ್ನು ಕೊಲೆ ಮಾಡಿದ್ದಾರೆ.

    ಹಂತಕ ವಿಶ್ವ ಆಟೋದಲ್ಲಿ ಬಂದು ಇಳಿಯುತ್ತಿರುವ ದೃಶ್ಯ ಸ್ಥಳೀಯ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಆಟೋದಿಂದ ಇಳಿದು 2 ನಿಮಿಷದಲ್ಲೇ ಕೊಲೆಗೈಯ್ದು ಬಳಿಕ ಹುಬ್ಬಳ್ಳಿ ಹೊಸ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದ ತಲೆಮರೆಸಿಕೊಂಡಿದ್ದಾನೆ. ಈ ದೃಶ್ಯ ಬಸ್ ನಿಲ್ದಾಣ ಇರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವೀಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಮನೆಗೆ ನುಗ್ಗಿ ಸಹೋದರಿಯರ ಮುಂದೆಯೇ ಯುವತಿಯ ಭೀಕರ ಹತ್ಯೆ – ಸಹಪಾಠಿಯಿಂದಲೇ ಕೃತ್ಯ

    ಪ್ರಕರಣದ ವಿವರ: ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ (21) ಮನೆಯಿದೆ. ಅಂಜಲಿ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಗಿರೀಶ್ ಅಲಿಯಾಸ್ ವಿಶ್ವ ಏಕಾಏಕಿ ಮನೆಗೆ ಎಮಟ್ರಿ ಕೊಟ್ಟಿದ್ದಾನೆ. ಅಲ್ಲದೆ ಅಜ್ಜಿ ಮತ್ತು ಇಬ್ಬರು ಸಹೋದರಿಯರ ಮುಂದೆಯೇ ಅಂಜಲಿಯನ್ನು ಮನೆ ತುಂಬೆಲ್ಲಾ ಎಳೆದಾಡಿ ಚಾಕುವಿನಿಂದ ಚುಚ್ಚಿ ಭೀಕರ ಹತ್ಯೆಗೈದಿದ್ದಾನೆ.

    ಮೊದಲಿಗೆ ಮನೆಯ ಪಡಸಾಲೆಯಲ್ಲಿ ಅಂಜಲಿಗೆ ಚಾಕು ಹಾಕಿ, ಬಳಿಕ ಕುತ್ತಿಗೆ ಹಿಡಿದು ಗೋಡೆಯತ್ತ ಎಳೆದುಕೊಂಡು ಹೋಗಿ ಹೊಟ್ಟೆ ಭಾಗಕ್ಕೆ ಚಾಕು ಹಾಕಿದ್ದಾನೆ. ಅಷ್ಟಕ್ಕೇ ತೃಪ್ತಿಯಾಗದೇ ಅಲ್ಲಿಂದ ಅಡುಗೆ ಮನೆಗೆ ಎಳೆದೊಯ್ದು ಮನ ಬಂದಂತೆ ಚಾಕುವಿನಿಂದ ಚುಚ್ಚಿ ಅಂಜಲಿ ಕೊನೆಯುಸಿರೆಳೆದ ಬಳಿಕವೇ ಅಲ್ಲಿಂದ ಕಾಲ್ಕಿತ್ತಿದ್ದಾನೆ.

  • ಏಲಿಯನ್ ಅಟ್ಯಾಕ್, ಸೋಲರ್ ಸುನಾಮಿ – ವಿಶ್ವದ ಅಂತ್ಯದ ಬಗ್ಗೆ ಬಾಬಾ ವಂಗಾ ಭವಿಷ್ಯವಾಣಿ

    ಏಲಿಯನ್ ಅಟ್ಯಾಕ್, ಸೋಲರ್ ಸುನಾಮಿ – ವಿಶ್ವದ ಅಂತ್ಯದ ಬಗ್ಗೆ ಬಾಬಾ ವಂಗಾ ಭವಿಷ್ಯವಾಣಿ

    ಸೋಫಿಯಾ: 2023ರ ಅವಧಿಯಲ್ಲಿ ಅನ್ಯಗ್ರಹ ಜೀವಿಗಳ ದಾಳಿ (Alien Attack), ಸೋಲರ್ ಸುನಾಮಿಯಂತಹ (Solar Storm) ಅನೇಕ ಗಂಡಾ ತರಗಳಿಂದ ವಿಶ್ವ ನಾನಾ ರೀತಿಯ ತೊಂದರೆಗಳನ್ನು ಎದುರಿಸಲಿದೆ ಎಂದು ನಾಸ್ಟ್ರಾಡಾಮಸ್‌ (Nostradamus) ಮಹಿಳೆ ಎಂದೇ ಹೆಸರಾಗಿರುವ ಬಾಬಾ ವಂಗಾ (Baba Vanga) ಭವಿಷ್ಯವಾಣಿ ನುಡಿದಿದ್ದಾರೆ. ವಿಶ್ವದ ಅಂತ್ಯದ ಬಗ್ಗೆಯೂ ಇದೇ ವೇಳೆ ಸುಳಿವು ಕೊಟ್ಟಿದ್ದಾರೆ.

    ಕೆಲ ತಿಂಗಳ ಹಿಂದೆಯಷ್ಟೇ ಭಾರತದ ಭವಿಷ್ಯ ನುಡಿದು ಆತಂಕ ಸೃಷ್ಟಿಸಿದ್ದ ಬಲ್ಗೇರಿಯಾದ ಕುರುಡು ಮಹಿಳೆ ಬಾಬಾ ವಂಗಾ, ಇದೀಗ ವಿಶ್ವದ ಭವಿಷ್ಯ ನುಡಿದು ಮತ್ತೊಮ್ಮೆ ಆತಂಕ ಉಂಟಾಗುವಂತೆ ಮಾಡಿದ್ದಾರೆ. ಇದನ್ನೂ ಓದಿ: ಬಾಂಗ್ಲಾದ ನಾಯಕ-ಭಾರತದ ಬೌಲರ್ – ಏಕದಿನ ಸರಣಿ ಆರಂಭಕ್ಕೂ ಮುನ್ನ ಔಟ್

    ಬಾಬಾ ವಂಗಾರ 2023ರ ಭವಿಷ್ಯವಾಣಿ ಏನು?
    2023ರಲ್ಲಿ ಸೋಲಾರ್ ಸುನಾಮಿ ಸಂಭವಿಸುತ್ತದೆ. ಇದರ ಪರಿಣಾಮವಾಗಿ ಭೂಮಿಯ ಕಾಂತೀಯ ಕವಚವು ನಾಶವಾಗುತ್ತದೆ. ಭೂಮಿಯ ಮೇಲೆ ಏಲಿಯನ್‌ಗಳ (ಅನ್ಯಗ್ರಹ ಜೀವಿ) ದಾಳಿಯಿಂದ ಲಕ್ಷಾಂತರ ನಿವಾಸಿಗಳು ಸಾಯುತ್ತಾರೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಊರು ಬಿಡುವಂತೆ ರೌಡಿಗಳಿಗೆ ಸಿಸಿಬಿ ಖಡಕ್ ಸೂಚನೆ – ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ರೆ ಕ್ರಮದ ಎಚ್ಚರಿಕೆ

    ಬಾಬಾ ವಂಗಾ (Baba Vanga) ಅವರ 2023ರ ಭಯಾನಕ ಭವಿಷ್ಯವಾಣಿಗಳು, ಭೂಮಿಯು ಈಗ ಬ್ರಹ್ಮಾಂಡದಲ್ಲಿ ಅನಿಶ್ಚಿತ ಸಮತೋಲನದಲ್ಲಿ ಉಳಿದಿದೆ. ನಂತರ ಅದು ತನ್ನ ಕಕ್ಷೆಯನ್ನು ಬದಲಿಸುತ್ತದೆ. ಇದರಲ್ಲಿನ ಸಣ್ಣ ಬದಲಾವಣೆಯೂ ಹವಾಮಾನದಲ್ಲಿ ಭಾರೀ ಬದಲಾವಣೆ ಉಂಟುಮಾಡಬಹುದು. ಆಗ ಪರಿಸ್ಥಿತಿ ನಿಜಕ್ಕೂ ಭೀರಕವಾಗಿರುತ್ತದೆ ಎಂದು ಹೇಳಲಾಗಿದೆ.

    2023ರ ವೇಳೆಗೆ ಪ್ರಯೋಗಾಲಯಗಳಲ್ಲಿ ಮಾನವರನ್ನು ಉತ್ಪಾದಿಸಲಾಗುತ್ತದೆ (Humans Produce Laboratories). ಹುಟ್ಟದ ಮಗುವಿಗೆ ತಮ್ಮ ಆಯ್ಕೆಯ ಬಣ್ಣ ಮತ್ತು ಗುಣಲಕ್ಷಣಗಳನ್ನು ಆಯ್ಕೆ ಮಾಡುವ ಸಂದರ್ಭ ಬರುತ್ತದೆ. ಈ ಜನನದ ಪ್ರಕ್ರಿಯೆಯು ಮಾನವನ ನಿಯಂತ್ರಣದಲ್ಲಿರುತ್ತದೆ ಮತ್ತು ಬಾಡಿಗೆ ತಾಯ್ತನದ ಸಮಸ್ಯೆಯು ಅದರ ಆವಿಷ್ಕಾರದೊಂದಿಗೆ ಕೊನೆಗೊಳ್ಳುತ್ತದೆ. ವಿದ್ಯುತ್ ಸ್ಥಾವರದಲ್ಲಿನ ಸ್ಫೋಟವು ವಿಷಕಾರಿ ಮೋಡಗಳ ರಚನೆಗೆ ಕಾರಣವಾಗಬಹುದು. ಇದು ಇಡೀ ಏಷ್ಯಾ ಖಂಡವೇ ಮಂಜು ಕವಿಯುವಂತೆ ಮಾಡುತ್ತದೆ. ಈ ಬದಲಾವಣೆಯಿಂದಾಗಿ ಇತರ ದೇಶಗಳು ಸಹ ಗಂಭೀರ ಕಾಯಿಲೆಗಳಿಂದ ಬಾಧಿಸತೊಡಗುತ್ತವೆ.

    Live Tv

    [brid partner=56869869 player=32851 video=960834 autoplay=true]

  • ಪಂಡೋರಾ ಪೇಪರ್ ರಹಸ್ಯ- ಸಚಿನ್ ತೆಂಡೂಲ್ಕರ್ ಹೆಸರು ಉಲ್ಲೇಖ

    ಪಂಡೋರಾ ಪೇಪರ್ ರಹಸ್ಯ- ಸಚಿನ್ ತೆಂಡೂಲ್ಕರ್ ಹೆಸರು ಉಲ್ಲೇಖ

    ಮುಂಬೈ: ವಿಶ್ವದ ಪ್ರಸಿದ್ಧ ವ್ಯಕ್ತಿಗಳು ತೆರಿಗೆ ವಂಚನೆ ಮಾಡುತ್ತಿದ್ದಾರೆ ಎಂಬ ಬಗ್ಗೆ ಇದೀಗ ಪಂಡೋರಾ ಪೇಪರ್ ಎಂಬ ರಹಸ್ಯ ಹಣಕಾಸು ಮಾಹಿತಿ ಬಿಡುಗಡೆಯಾಗಿದೆ. ಈ ಮಾಹಿತಿಯಲ್ಲಿ ಕ್ರಿಕೆಟ್ ದೇವರು ಎನಿಸಿಕೊಂಡಿರುವ ಸಚಿನ್ ತೆಂಡೂಲ್ಕರ್ ಅವರ ಹೆಸರು ಕೇಳಿಬಂದಿದೆ.

    2016ರಲ್ಲಿ ಸಂಚಲನ ಮೂಡಿಸಿದ್ದ ಪನಾಮಾ ಪೇಪರ್ಸ್ ಬಳಿಕ ಇದೀಗ ಪಂಡೋರಾ ಪೇಪರ್ಸ್ ಬಿಡುಗಡೆಗೊಂಡಿದೆ. ಇದರಲ್ಲಿ ವಿಶ್ವದ ಹಲವಾರು ಪ್ರಸಿದ್ಧ ವ್ಯಕ್ತಿಗಳ ಹೆಸರು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಊಟ ಕೊಡಿಸ್ತೀನೆಂದು ಕರೆದೊಯ್ದು 500 ರೂ.ಗೆ ಪತ್ನಿಯನ್ನೇ ಮಾರಿಬಿಟ್ಟ!

    ಪಂಡೋರಾ ಪೇಪರ್ ಎಂದರೇನು?
    ವಿಶ್ವದ ಶ್ರೀಮಂತ ವ್ಯಕ್ತಿಗಳು ದೇಶ, ವಿದೇಶಗಳಲ್ಲಿ ಕಂಪೆನಿಗಳನ್ನು ಆರಂಭಿಸಿ ಬಳಿಕ ತೆರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಪಂಡೋರಾ ಪೇಪರ್ಸ್‍ನಲ್ಲಿ ಉಲ್ಲೇಖವಾಗಿದೆ. ಈ ಬಗ್ಗೆ ತನಿಖಾ ಪತ್ರಕರ್ತರ ತಂಡ ನಡೆಸಿದ ತನಿಖೆಯ ವರದಿ ಇಲ್ಲಿದೆ. ಇದನ್ನೂ ಓದಿ: ಕೇರಳದಿಂದ ಪ್ರಯಾಣಿಕರಿಗೆ RTPCR ವರದಿ ಕಡ್ಡಾಯ – ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಅರ್ಜಿ ಸಲ್ಲಿಕೆ

    ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೆಸರು ಕೂಡಾ ಪಂಡೋರಾ ಪೇಪರ್ಸ್‍ನಲ್ಲಿದೆ. ಅಲ್ಲದೆ ಅನಿಲ್ ಅಂಬಾನಿ, ಬಯೋಕಾನ್ ಸಂಸ್ಥೆಯ ಕಿರಣ್ ಮುಂಜುದಾರ್ ಶಾ ಪತಿ ಸೇರಿದಂತೆ ಸುಮಾರು 300 ಭಾರತೀಯರನ್ನು ಹೆಸರಿಸಲಾಗಿದೆ. ಬ್ರಿಟನ್ ಮಾಜಿ ಪ್ರಧಾನಿ ಟೋನಿ ಬ್ಲೇರ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಆಪ್ತ ಬಳಗ ಸೇರಿದಂತೆ ಸುಮಾರು 700ಕ್ಕೂ ಹೆಚ್ಚು ಮಂದಿಯ ಮಾಹಿತಿಯಿದೆ ಎಂದು ವರದಿಯಾಗಿದೆ.

  • ಬಿಗ್‍ಬಾಸ್ ಮನೆಯ ಕ್ಯಾಪ್ಟನ್ ವಿಶ್ವ ಮೇಲೆ ಕತ್ತಿ ಮಸೆದ ನಿಧಿ ಸುಬ್ಬಯ್ಯ

    ಬಿಗ್‍ಬಾಸ್ ಮನೆಯ ಕ್ಯಾಪ್ಟನ್ ವಿಶ್ವ ಮೇಲೆ ಕತ್ತಿ ಮಸೆದ ನಿಧಿ ಸುಬ್ಬಯ್ಯ

    ಬೆಂಗಳೂರು: ಬಿಗ್ ಮನೆಯಲ್ಲಿ ಸ್ಪರ್ಧಿಗಳು ಒಬ್ಬರೊನೊಬ್ಬರು ಅಳೆದುತೂಗಿ ಉಪಚರಿಸುವಂತಹ ಹಂತಕ್ಕೆ ಬಂದು ನಿಂತಿದ್ದಾರೆ. ತಂಡವೆಂದು ಬಂದಾಗ ತಂಡದಲ್ಲಿ ಬೆರೆತು ಎದುರಾಳಿ ತಂಡದ ವಿರುದ್ಧ ತೊಡೆತಟ್ಟಿ ಅಖಾಡಕ್ಕೆ ಇಳಿದರೆ ಟಾಸ್ಕ್ ಮುಗಿದ ಮೇಲೆ ಎಲ್ಲರೊಂದಿಗೆ ಬೆರೆಯಲು ಪ್ರಯತ್ನಿಸುತ್ತಾರೆ. ಈ ನಡುವೆ ನಿಧಿ ಸುಬ್ಬಯ್ಯ ಬಿಗ್ ಮನೆಯ ಕ್ಯಾಪ್ಟನ್ ವಿಶ್ವ ಮೇಲೆ ಕತ್ತಿ ಮಸೆಯಲು ಪ್ರಯತ್ನಿಸಿದ್ದಾರೆ.

    ನಿಧಿ ಮತ್ತು ಶುಭಾ ಅಡುಗೆ ಮನೆಯಲ್ಲಿ ತಿಂಡಿ ತಯಾರಿಸುತ್ತಿದ್ದಂತೆ, ನಿಧಿ ಕ್ಯಾಪ್ಟನ್ ವಿಶ್ವನ ಕುರಿತು ಮಾತನಾಡಿದ್ದಾರೆ. ವಿಶ್ವ ನಮ್ಮ ತಂಡ ಏನಾದರೂ ತಪ್ಪು ಮಾಡಿದರೆ ಬೇಗ ಬಂದು ಹೇಳುತ್ತಾನೆ. ಆದರೆ ನಮ್ಮ ಎದುರಾಳಿ ತಂಡ ಏನಾದರು ತಪ್ಪು ಮಾಡಿದರೆ ಅದನ್ನು ಅವರೊಂದಿಗೆ ತಿಳಿಸಲು ಹೆದರುತ್ತಾನೆ ಎಂದು ವಿಶ್ವನ ವಿರುದ್ಧ ಆರೋಪ ಮಾಡಿದ್ದಾರೆ.

    ಟಾಸ್ಕ್ ವೇಳೆ ಅರವಿಂದ್ ಫೌಲ್ ಆಗಿದ್ದಾಗ ವಿಶ್ವ ಅರವಿಂದ್ ಬಳಿ ಫೌಲ್ ಕುರಿತು ಹೇಳಲು ಭಯ ಪಡುತ್ತಿದ್ದ. ಹಾಗಾಗಿ ನಾನು ವಿಶ್ವನಿಗೆ ಬೈದೆ, ನಾವು ತಪ್ಪು ಮಾಡಿದಾಗ ಜೋರಾಗಿ ಅದು ಇಲ್ಲ ಫೌಲ್ ಎನ್ನುತ್ತಿಯ, ಅವರ ತಪ್ಪನ್ನು ಮಾತ್ರ ಮೇಲ್ಲನೆ ಹೇಳುತ್ತಿಯಾ ಎಂದು ಪ್ರಶ್ನೆ ಮಾಡಿದೆ ಎಂದು ನಿಧಿ ಶುಭಾಗೆ ತಿಳಿಸಿದರು.

    ಈ ವೇಳೆ ಶುಭಾ ಎಲ್ಲರೂ ಹಾಗೆ ನಮ್ ಮಾವನು ನಮ್ಮ ಮುಂದೆ ಎಗರಾಡುತ್ತಾರೆ ಅಲ್ಲಿ ಸುಮ್ಮನಿರುತ್ತಾರೆ ಎಂದರು. ಅದಕ್ಕೆ ನಿಧಿ ಮಾವ ‘ಡರ್ ಪೋಕ್’ ಎಂದು ಹೀಯಾಳಿಸಿದರು. ನಂತರ ಮಾತು ಮುಂದುವರಿಸಿದ ಶುಭಾ, ಪ್ರಶಾಂತ್ ಡರ್ ಪೋಕ್ ಅಲ್ಲ ಅವರು ಮಾತನಾಡಿದರೆ ಮನೆಮಂದಿ ಅವರ ವಿರುದ್ಧ ನಿಲ್ಲಬಹುದೆಂದು ಆ ನಿಲುವಿಗೆ ಬಂದಿದ್ದಾರೆ. ಅದು ಒಂದು ಅವರ ವ್ಯಕ್ತಿತ್ವ ಎಂದರು.

    ಪ್ರಶಾಂತ್ ಯಾರೊಂದಿಗೆ ಜಗಳ ಮಾಡಿದರೂ ಕೂಡ ನಂತರ ಬಂದು ಅವರೇ ಮಾತನಾಡಿಸುತ್ತಾರೆ. ಅವರಿಗೆ ಈ ಮನೆಯಲ್ಲಿ ಎಲ್ಲರೊಂದಿಗೆ ಇರಬೇಕೆಂಬ ಮನೋಭಾವ ಇದೆ. ಹಾಗಾಗಿ ಅವರು ಆ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಶುಭಾ ಮತ್ತು ನಿಧಿ ಅಭಿಪ್ರಾಯಪಟ್ಟರು.

    ಬಿಗ್ ಮನೆಯ ಸದಸ್ಯರು ಒಬ್ಬರಿಗೊಬ್ಬರು ಎಷ್ಟೇ ಜಗಳವಾಡಿದರೂ ಕೂಡ ತಮ್ಮ ಸ್ವಾರ್ಥಕ್ಕಾಗಿ ಮತ್ತೆ ಒಂದಾಗುತ್ತಿದ್ದಾರೆ ಎಂಬುದು ಅಭಿಮಾನಿಗಳ ನಿಲುವು.

  • ಭಾರತದಿಂದ ಕ್ಷಿಪಣಿ ದಾಳಿ – ನಮಗೆ ಆತಂಕವಾಗ್ತಿದೆ ಎಂದು ಪಾಕ್ ನಾಟಕ

    ಭಾರತದಿಂದ ಕ್ಷಿಪಣಿ ದಾಳಿ – ನಮಗೆ ಆತಂಕವಾಗ್ತಿದೆ ಎಂದು ಪಾಕ್ ನಾಟಕ

    ಇಸ್ಲಾಮಾಬಾದ್: ಭಾರತ ನಮ್ಮ ಮೇಲೆ ಯುದ್ಧ ಮಾಡಲು ಸನ್ನದ್ಧವಾಗಿದ್ದು, ನಮ್ಮ ನೆಲ, ವಾಯು, ಜಲಮಾರ್ಗವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ ಎಂದು ವಿಶ್ವದ ಇತರೇ ರಾಷ್ಟ್ರಗಳಿಗೆ ಪಾಕ್ ತೊರಿಸಲು ದೂರು ನೀಡಲು ಮುಂದಾಗಿದೆ.

    ಭಾರತದ ಯುದ್ಧ ನೌಕೆಗಳು ಕರಾಚಿ ಭಾಗದತ್ತ ಬರುತ್ತಿದೆ. ಇದರಿಂದ ನಮಗೇ ಆತಂಕ ಸೃಷ್ಟಿಯಾಗಿದೆ ಎಂದು ಪಾಕ್ ಹೇಳಿಕೆ ನೀಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಈಗಾಗಲೇ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿ ಗಡಿ ಪ್ರದೇಶಗಳಿಗೆ ಯುದ್ಧ ಟ್ಯಾಂಕರ್ ಗಳನ್ನು ರವಾನೆ ಮಾಡಿರುವ ಪಾಕಿಸ್ತಾನ, ಗಡಿ ಭಾಗದ ಗ್ರಾಮಗಳ ಜನರನ್ನು ಖಾಲಿ ಮಾಡುವ ಕಾರ್ಯವನ್ನು ಬುಧವಾರವೇ ಮಾಡಿದೆ. ಆದರೆ ಇತರೇ ದೇಶಗಳ ಎದುರು ತಾನು ಏನು ಮಾಡುತ್ತಿಲ್ಲ. ಭಾರತವೇ ನಮ್ಮನ್ನು ಸುತ್ತುವರಿದು ದಾಳಿ ನಡೆಸಲು ಪ್ರಚೋದನೆ ನೀಡುತ್ತಿದೆ ಎಂದು ಎಂದು ತಿಳಿಸಲು ಮುಂದಾಗಿದೆ.

    ಕಳೆದ ಮೂರು ದಿನಗಳಿಂದಲೂ ಕೂಡ ಭಾರತ ಗಡಿ ಪ್ರದೇಶಗಳಲ್ಲಿ ಪದೇ ಪದೇ ದಾಳಿ ನಡೆಸುತ್ತಿದ್ದರು ಕೂಡ ಏನು ಗೊತ್ತಿಲ್ಲ ಎಂಬಂತೆ ನಾಟಕ ಮಾಡಲು ಶುರು ಮಾಡಿದೆ. ತನ್ನ ಸುಳ್ಳಿನ ನಾಟಕವನ್ನು ಜಗತ್ತಿಗೆ ಸತ್ಯ ಎಂದು ತಿಳಿಸಲು ಬೇಕಾದ ಸಿದ್ಧತೆಯನ್ನು ಪಾಕಿಸ್ತಾನ ಮಾಡಿಕೊಂಡಿದೆ.

    ಪಾಕಿಸ್ತಾನ ಈಗಾಗಲೇ ಎಲ್ಲ ವಿಮಾನಗಳ ಹಾರಾಟವನ್ನು ಬಂದ್ ಮಾಡಿದೆ. ಸಂಜೋತಾ ಎಕ್ಸ್ ಪ್ರೆಸ್ ರೈಲಿನ ಸಂಚಾರವನ್ನು ಕಡಿತ ಮಾಡಿದೆ. ಭಾರತ ಗಡಿನಿಯಂತ್ರಣ ರೇಖೆಯನ್ನು ದಾಟಿ ನಮ್ಮ ಸ್ಥಳಗಳಲ್ಲಿ ಬಾಂಬ್ ದಾಳಿ ನಡೆಸಿದೆ. ಹೀಗಾಗಿ ಭಾರತದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿಶ್ವದ ಮುಂದೆ ದೂರು ನೀಡಲು ಮುಂದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 2018ರ ರೌಂಡಪ್ – ವಿಶ್ವದಲ್ಲಿ ಹೆಚ್ಚು ಸುದ್ದಿ ಮಾಡಿದ ಟಾಪ್ 12 ಘಟನೆಗಳ ಕಿರು ಮಾಹಿತಿ

    2018ರ ರೌಂಡಪ್ – ವಿಶ್ವದಲ್ಲಿ ಹೆಚ್ಚು ಸುದ್ದಿ ಮಾಡಿದ ಟಾಪ್ 12 ಘಟನೆಗಳ ಕಿರು ಮಾಹಿತಿ

    ಹೊಸ ವರ್ಷಕ್ಕೆ ಇನ್ನು ಕೇವಲ ಮೂರು ದಿನಗಳಷ್ಟೇ ಬಾಕಿ ಇದೆ. ಹೀಗಾಗಿ ಹೊಸ ವರ್ಷ ಬರುವ ಮುನ್ನ 2018ರಲ್ಲಿ ವಿಶ್ವದಲ್ಲಿ ಏನೇನು ನಡೆದಿದೆ ಎನ್ನುವ ಕಿರು ಮಾಹಿತಿ ಇಲ್ಲಿದೆ.

    1) ಡೊನಾಲ್ಡ್ ಟ್ರಂಪ್:  ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವರ್ಷಪೂರ್ತಿ ಸುದ್ದಿಯಲ್ಲೇ ಇದ್ದರು. ಕೆಲವೊಮ್ಮೆ ತಮ್ಮ ಹೇಳಿಕೆಯಿಂದ ಸುದ್ದಿಯಾಗುತ್ತಿದ್ದರೆ, ಮತ್ತೆ ತಮ್ಮ ನಿರ್ಧಾರಗಳಿಂದ ಸುದ್ದಿಯಾಗುತ್ತಿದ್ದರು. ವಲಸೆ ನೀತಿ ವಿಚಾರದಲ್ಲಿ ಕಠಿಣ ನಿರ್ಧಾರ ತೆಗೆದು ಪೋಷಕರು ಮತ್ತು ಮಕ್ಕಳನ್ನು ಪ್ರತ್ಯೇಕ ಮಾಡಿದ ವಿಚಾರಕ್ಕೆ ಅಮೆರಿಕದಲ್ಲಿ ಭಾರೀ ಪ್ರತಿಭಟನೆ ನಡೆಯಿತು. ನಂತರ ಚೀನಾ ವಸ್ತುಗಳ ಮೇಲೆ ಆಮದು ಸುಂಕ ಹೇರಿದ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿತ್ತು. ಉತ್ತರ ಕೊರಿಯಾದ ವಿರುದ್ಧ ಯುದ್ಧಕ್ಕೂ ಹೆದರುವುದಿಲ್ಲ ಎಂದು ಗುಡುಗಿದ್ದ ಟ್ರಂಪ್ ಅಚ್ಚರಿಯ ಬೆಳವಣಿಗೆಯಲ್ಲಿ ಸಿಂಗಾಪುರದಲ್ಲಿ ಅಧ್ಯಕ್ಷ ಕಿಮ್ ಜಾಂಗ್ ಉನ್ ಜೊತೆ ಮಾತನಾಡಿದ್ದರು.

    2) ಫೇಸ್‍ಬುಕ್ ಕ್ಷಮೆ: ಬಳಕೆದಾರರಿಗೆ ತಿಳಿಯದಂತೆ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ಫೇಸ್‍ಬುಕ್ ನಿಂದ ಅವರ ವೈಯಕ್ತಿಕ ಮಾಹಿತಿಯನ್ನು ಕದ್ದು, ಅವರ ಮೇಲೆ ಪ್ರಭಾವ ಬೀರುವ ಕೆಲಸ ಮಾಡಿತ್ತು. ಆರಂಭದಲ್ಲಿ ಈ ಸುದ್ದಿಯನ್ನು ಫೇಸ್‍ಬುಕ್ ತಿರಸ್ಕರಿಸಿದ್ದರೆ, ಬಳಿಕ ಸಾಕ್ಷ್ಯಗಳ ಸಮೇತ ಸುದ್ದಿಗಳು ಪ್ರಕಟವಾದ ಬಳಿಕ ಬಳಕೆದಾರರ ಮಾಹಿತಿ ಸೋರಿಕೆಯಾಗಿದ್ದನ್ನು ಒಪ್ಪಿಕೊಂಡಿತು. ನಂತರ ಫೇಸ್‍ಬುಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಕ್ ಜೂಕರ್ ಬರ್ಗ್ ಕ್ಷಮೆ ಕೇಳಿ, ಮುಂದಿನ ದಿನಗಳಲ್ಲಿ ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಸೋರಿಕೆಯಾಗದೇ ಇರಲು ಮತ್ತಷ್ಟು ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳುತ್ತೇವೆ. ವಿಶೇಷವಾಗಿ ಚುನಾವಣೆಯ ಸಮಯದಲ್ಲಿ ರಾಜಕೀಯ ಪಕ್ಷಗಳ ಪ್ರಚಾರದ ಮೇಲೆ ನಿಗಾ ವಹಿಸಲಾಗುವುದು ಎಂದು ತಿಳಿಸಿದ್ದರು.

    3) ಇಂಡೋನೇಷ್ಯಾದಲ್ಲಿ ಸುನಾಮಿ: ಸೆಪ್ಟಂಬರ್ 28 ರಂದು ಇಂಡೋನೇಷ್ಯಾದ ಸುಲವೆಸಿ ದ್ವೀಪದಲ್ಲಿ ಸಂಭವಿಸಿದ ಭೀಕರ ಭೂಕಂಪ ಹಾಗೂ ಸುನಾಮಿಯಿಂದಾಗಿ 2,256 ಮಂದಿ ಮೃತಪಟ್ಟಿದ್ದರು. ಸುಲವೆಸಿ ದ್ವೀಪದಲ್ಲಿ ಸೆಪ್ಟೆಂಬರ್ 28 ಶುಕ್ರವಾರ ಬೆಳಗ್ಗೆ 6.1 ತೀವ್ರತೆಯ ಭೂಕಂಪ ದಾಖಲಾಗಿದ್ದರೆ, ಮಧ್ಯಾಹ್ನ 7.5 ತೀವ್ರತೆಯಲ್ಲಿ ಭೂಕಂಪ ಉಂಟಾಗಿತ್ತು. ಸುನಾಮಿಯಿಂದಾಗಿ 10,679 ಮಂದಿ ಗಾಯಗೊಂಡಿದ್ದರೆ, 1,075 ಜನ ನಾಪತ್ತೆಯಾಗಿದ್ದರು.

    4) ಇಂಡೋನೇಷ್ಯಾ ವಿಮಾನ ದುರಂತ: ಅಕ್ಟೋಬರ್ 29 ರಂದು ಇಂಡೋನೇಷ್ಯಾದ ರಾಜಧಾನಿ ಜಕಾರ್ತದಿಂದ ಪಾಂಗ್‍ಕಲ್ ಪಿನಾಗ್ ದ್ವೀಪಕ್ಕೆ ಹೊರಟಿದ್ದ ಲಯನ್ ಏರ್‍ಲೈನ್ಸ್ ಸಂಸ್ಥೆಗೆ ಸೇರಿದ್ದ ವಿಮಾನ ಪಾಂಗ್‍ಕಲ್ ದ್ವೀಪದ ಬಳಿ ಪತನಗೊಂಡಿತ್ತು. ಪರಿಣಾಮ ವಿಮಾನದಲ್ಲಿದ್ದ ಎಲ್ಲಾ 189 ಮಂದಿ ಪ್ರಯಾಣಿಕರು ದಾರುಣವಾಗಿ ಮೃತಪಟ್ಟಿದ್ದರು.

    5) ಖಶೋಗಿ ಹತ್ಯೆ: ಸೌದಿ ಅರೇಬಿಯಾ ಮೂಲದ ಪತ್ರಕರ್ತ, ಲೇಖಕ ಜಮಾಲ್ ಖಶೋಗಿ ಹತ್ಯೆ ಪ್ರಕರಣ ಅಂತಾರಾಷ್ಟ್ರೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಅಕ್ಟೋಬರ್ 2 ರಂದು ಟರ್ಕಿಯ ಇಸ್ತಾಂಬುಲ್‍ನ ಸೌದಿ ರಾಯಭಾರಿ ಕಚೇರಿಗೆ ತಮ್ಮ ಮದುವೆಯ ದಾಖಲಾತಿ ಪಡೆಯಲು ತೆರಳಿದ್ದ `ವಾಷಿಂಗ್ಟನ್ ಪೋಸ್ಟ್’ನ ಹಿರಿಯ ವರದಿಗಾರ ಜಮಾಲ್ ಖಶೋಗಿ (60) ನಿಗೂಢವಾಗಿ ಕಣ್ಮರೆಯಾಗಿದ್ದರು. ಈ ಪತ್ರಕರ್ತನ ಹತ್ಯೆ ಹಿಂದೆ ಸೌದಿ ರಾಜಮನೆತನದ ಕೈವಾಡ ಇದೆ ಎಂಬ ಆರೋಪ ಕೇಳಿಬಂದಿತ್ತು.

    6) ಉತ್ತರ ಕೊರಿಯಾ-ದಕ್ಷಿಣ ಕೊರಿಯಾ ಮಾತುಕತೆ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಈ ವರ್ಷ ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾದ ನಾಯಕರು ಮುಖಾಮುಖಿಯಾಗಿದ್ದಾರೆ. ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮತ್ತು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ ಇನ್ ಉಭಯ ದೇಶಗಳ ಗಡಿ ಪ್ರದೇಶದಲ್ಲಿನ ತಟಸ್ಥ ನಗರವೆಂದೇ ಖ್ಯಾತವಾಗಿರುವ ಪಾನ್‍ಮೂಂಜಾಮ್‍ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. 1950-53ರ ನಡುವೆ ನಡೆದ ಕೊರಿಯಾ ಯುದ್ಧದ ನಂತರ ಪ್ರಪ್ರಥಮ ಬಾರಿಗೆ ಉತ್ತರ ಕೊರಿಯಾದ ಅಧ್ಯಕ್ಷರು ದಕ್ಷಿಣ ಕೊರಿಯಾ ನಾಯಕರೊಂದಿಗೆ ಮಾತುಕತೆ ನಡೆಸಿದ್ದರು.

    7) ವ್ಲಾದಿಮಿರ್ ಪುಟಿನ್: ಡೊನಾಲ್ಡ್ ಟ್ರಂಪ್ ನಂತರ ವಿಶ್ವದಲ್ಲಿ ಅತಿ ಹೆಚ್ಚು ಸುದ್ದಿಯಾದ ವ್ಯಕ್ತಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್. ಸತತ ನಾಲ್ಕನೇಯ ಬಾರಿ ಪುಟಿನ್ ಆಯ್ಕೆ ಆಗಿದ್ದು ವಿಶೇಷ. ಅಮೆರಿಕ ಅಧ್ಯಕ್ಷ ಚುನಾವಣೆಯ ಸಂದರ್ಭದಲ್ಲಿ ಹಿಲರ್ ಕ್ಲಿಂಟನ್ ವಿರುದ್ಧ ಟ್ರಂಪ್ ಪರ ಆನ್‍ಲೈನ್ ನಲ್ಲಿ ಪ್ರಚಾರ ನಡೆಸಲಾಗಿದ್ದು, ಪುಟಿನ್ ನಿರ್ದೇಶನದಂತೆ ಈ ಪ್ರಚಾರ ವ್ಯವಸ್ಥಿತವಾಗಿ ರೂಪಿಸಲಾಗಿತ್ತು ಎನ್ನುವ ಆರೋಪ ಕೇಳಿ ಬಂದಿತ್ತು. ಆದರೆ ಈ ಆರೋಪವನ್ನು ಪುಟಿನ್ ಮತ್ತು ಟ್ರಂಪ್ ನಿರಾಕರಿಸಿದ್ದರು.

    8) ನೇಪಾಳ ವಿಮಾನ ದುರಂತ: ಯುಎಸ್-ಬಾಂಗ್ಲಾ ಏರ್‍ಲೈನ್ಸ್ ಗೆ ಸೇರಿದ್ದ ವಿಮಾನವೊಂದು ನೇಪಾಳದ ಕಠ್ಮಂಡುವಿನ ತ್ರಿಭುವನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಅಪಘಾತಕ್ಕೀಡಾಗಿ ಸ್ಫೋಟಗೊಂಡು 52 ಪ್ರಯಾಣಿಕರು ಮೃತಪಟ್ಟಿದ್ದರು.

    9) ಆಪಲ್ ಸಾಧನೆ: ಅಮೆರಿಕದ ಐಟಿ ದಿಗ್ಗಜ ಆಪಲ್ ಕಂಪನಿಯ ಮಾರುಕಟ್ಟೆ ಮೌಲ್ಯ ಲಕ್ಷ ಕೋಟಿ ಡಾಲರ್ ದಾಟಿದೆ. ಈ ಸಾಧನೆ ನಿರ್ಮಿಸಿದ ವಿಶ್ವದ ಮೊದಲ ಕಂಪನಿ ಎನ್ನುವ ಹೆಗ್ಗಳಿಕೆಗೆ ಆಪಲ್ ಪಾತ್ರವಾಗಿದೆ.

    10) ಮೊದಲ ಸಮುದ್ರ ಸೇತುವೆ: ಅಕ್ಟೋಬರ್ 23 ರಂದು ವಿಶ್ವದ ಅತಿ ಉದ್ದದ ಸಮುದ್ರ ಸೇತುವೆ ಚೀನಾದ ಝಹೈನಲ್ಲಿ ಉದ್ಘಾಟನೆಯಾಗಿದೆ. ಈ ಸೇತುವೆಯು ಹಾಂಗ್‍ಕಾಂಗ್ ಮತ್ತು ಮಕಾವ್ ರಾಷ್ಟ್ರಗಳಿಗೆ ಸಂರ್ಪಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಾಗಿದೆ. ಒಟ್ಟು 55 ಕಿ.ಮೀ ಉದ್ದವನ್ನು ಹೊಂದಿರುವ ಈ ರಸ್ತೆಯೂ ಸೇತುವೆ ಹಾಗೂ ನೀರೊಳಗಿನ ಸುರಂಗ ಮಾರ್ಗವನ್ನು ಹೊಂದಿದೆ.

    11) ಪಾಕ್ ಪ್ರಧಾನಿಯಾಗಿ ಮಾಜಿ ಕ್ರಿಕೆಟರ್: ಪಾಕಿಸ್ತಾನದ 22ನೇ ಪ್ರಧಾನಿಯಾಗಿ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಪ್ರಮಾಣವಚನ ಸ್ವೀಕರಿಸಿದ್ದರು. ಪಾಕಿಸ್ತಾನದ ಸಂಸತ್‍ಗೆ ನಡೆದ 25ನೇ ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್ ಖಾನ್ ಅವರ ಪಿಟಿಐ(ಪಾಕಿಸ್ತಾನ್ ತೆಹರಿಕ್ ಇನ್ಸಾಫ್) 116 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ದೇಶದ ಮೀಸಲು ಕ್ಷೇತ್ರಗಳ ಫಲಿತಾಂಶವನ್ನು ಅಲ್ಲಿನ ಚುನಾವಣಾ ಆಯೋಗ ಪ್ರಕಟಿಸಿದ ನಂತರ ಅವರ ಪಿಟಿಐನ ಗಳಿಕೆ 158 ಸ್ಥಾನಕ್ಕೆ ಏರಿತ್ತು. ಇಮ್ರಾನ್ ಖಾನ್ ಪದಗ್ರಹಣ ಸಮಾರಂಭಕ್ಕೆ ಭಾರತದ ಮಾಜಿ ಕ್ರಿಕೆಟರ್ ಹಾಗೂ ಪಂಜಾಬ್ ನ ಸಚಿವ ನವಜೋತ್ ಸಿಂಗ್ ಸಿಧು ಕೂಡ ಭಾಗವಹಿಸಿದ್ದರು. ಅವರನ್ನು ಸೇನಾ ಪಡೆಯ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವಾ ಆತ್ಮೀಯವಾಗಿ ಬರಮಾಡಿಕೊಂಡಿದ್ದರು. ಇಮ್ರಾನ್ ಖಾನ್ ಪದಗ್ರಹಣಕ್ಕೆ ಭೇಟಿ ನೀಡಿದ್ದ ಸಿಧು ವಿರುದ್ಧ ದೇಶದಲ್ಲಿ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು.

    12) ಎಐ ನ್ಯೂಸ್ ಆ್ಯಂಕರ್ ಅನಾವರಣ: ನವೆಂಬರ್ 7 ರಂದು ಚೀನಾ ಜಗತ್ತಿನ ಮೊದಲ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್(ಎಐ ಅಥವಾ ಕೃತಕ ಬುದ್ಧಿಮತ್ತೆ) ನ್ಯೂಸ್ ಆ್ಯಂಕರ್ ಅನ್ನು ಬೀಜಿಂಗ್ ನಲ್ಲಿ ಅನಾವಣರಣಗೊಳಿಸಿತ್ತು. ಅಲ್ಲದೇ ವಿಶ್ವ ಅಂತರ್ಜಾಲದ ಸಮ್ಮೇಳನದಲ್ಲಿ ಚೀನಾ `ಝಿನುವಾ’ ಸುದ್ದಿ ಸಂಸ್ಥೆಯು ಮೊದಲ ಬಾರಿಗೆ ಎಐ ನ್ಯೂಸ್ ಆ್ಯಂಕರ್ ಅನ್ನು ಜಗತ್ತಿಗೆ ಪರಿಚಯಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜಗತ್ತಿನಲ್ಲೇ ಜನರಿಗಿಂತ ಹೆಚ್ಚು ವಾಹನ ಹೊಂದಿರೋ ದೇಶವಿದು!

    ಜಗತ್ತಿನಲ್ಲೇ ಜನರಿಗಿಂತ ಹೆಚ್ಚು ವಾಹನ ಹೊಂದಿರೋ ದೇಶವಿದು!

    ಸಾನ್‍ಮರಿನೋ: ದೇಶದಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವುದನ್ನು ಕೇಳಿದ್ದೇವೆ. ಆದ್ರೆ ಜನರಿಗಿಂತ ಹೆಚ್ಚು ವಾಹನಗಳನ್ನು ಹೊಂದಿರುವುದನ್ನು ಕೇಳಿರಲ್ಲಿಕ್ಕಿಲ್ಲ. ಅಂತಹ ಪಟ್ಟಿಗೆ ಸೇರಿದೆ ಸಾನ್ ಮರಿನೋ ರಾಷ್ಟ್ರ.

    ಹೌದು. ವಿಶ್ವದ ಅತಿ ಪುಟ್ಟ ಸ್ವತಂತ್ರ ರಾಷ್ಟ್ರಗಳಲ್ಲಿ ಒಂದಾದ ಈ ದೇಶದಲ್ಲಿ ಜನರು ಕಡಿಮೆ. ವಾಹನಗಳು ಜಾಸ್ತಿ ಇವೆ. ಈ ರಾಷ್ಟ್ರದಲ್ಲಿ ಸುಮಾರು 34 ಸಾವಿರ ಜನರಿದ್ದಾರೆ. ಅಂಕಿ ಅಂಶಗಳ ಪ್ರಕಾರ ಈ ರಾಷ್ಟ್ರದ ಸರಾಸರಿ 1 ಸಾವಿರ ಜನರಿಗೆ 1,263 ವಾಹನಗಳಿವೆ. ಮಾತ್ರವಲ್ಲದೇ ಈ ದೇಶ ಒಟ್ಟು ಜಿಡಿಪಿಯಲ್ಲೂ ಶ್ರೀಮಂತವಾಗಿದೆ.

    ಸಾನ್ ಮರಿನೋ ಹಾಗೂ ವಾಟಿಕನ್ ಸಿಟಿ ಈ ಎರಡೂ ರಾಷ್ಟ್ರಗಳು ಸಂಪೂರ್ಣವಾಗಿ ಇಟಲಿಯ ಒಳಗೆ ಹುದುಗಿಕೊಂಡಿವೆ. ಇನ್ನು ಮೂರನೇ ರಾಷ್ಟ್ರವಾದ ಲೆಸ್ತೋ ಸಂಪೂರ್ಣವಾಗಿ ದಕ್ಷಿಣ ಆಫ್ರಿಕಾದಿಂದ ಸುತ್ತುವರಿದಿದೆ.