Tag: ವಿಶೇಷ ಚೇತನರು

  • ನಾಲ್ವರು ವಿಕಲ ಚೇತನ ಹೆಣ್ಣು ಮಕ್ಕಳಿಗೆ ಸ್ವೀಟ್‌ನಲ್ಲಿ ವಿಷ ಕೊಟ್ಟು ತಾನೂ ಆತ್ಮಹತ್ಯೆ ಮಾಡಿಕೊಂಡ ತಂದೆ

    ನಾಲ್ವರು ವಿಕಲ ಚೇತನ ಹೆಣ್ಣು ಮಕ್ಕಳಿಗೆ ಸ್ವೀಟ್‌ನಲ್ಲಿ ವಿಷ ಕೊಟ್ಟು ತಾನೂ ಆತ್ಮಹತ್ಯೆ ಮಾಡಿಕೊಂಡ ತಂದೆ

    – ಸ್ವೀಟ್ ತಂದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

    ನವದೆಹಲಿ: ತನ್ನ ನಾಲ್ವರು ವಿಕಲ ಚೇತನ ಹೆಣ್ಣು ಮಕ್ಕಳಿಗೆ ಸ್ವೀಟ್‌ನಲ್ಲಿ ವಿಷ ಬೆರೆಸಿ, ಜೊತೆಗೆ ತಂದೆಯೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯ ರಂಗಪುರಿ (Rangpuri) ನಗರದಲ್ಲಿ ನಡೆದಿದೆ.

    ಮೃತ ತಂದೆಯನ್ನು 48 ವರ್ಷದ ಹೀರಾಲಾಲ್ ಶರ್ಮಾ ಹಾಗೂ ತನ್ನ ನಾಲ್ಕು ವಿಶೇಷಚೇತನ ಮಕ್ಕಳಾದ ನೀತು (26), ನಿಕ್ಕಿ (24), ನೀರು (23) ಮತ್ತು ನಿಧಿ (20) ಎಂದು ಗುರುತಿಸಲಾಗಿದೆ. ಇಬ್ಬರು ವಿಶೇಷಚೇತನ ಮಕ್ಕಳು ಹಾಗೂ ಇನ್ನುಳಿದ ಇಬ್ಬರಿಗೆ ಅಂಗವೈಕಲ್ಯದಿಂದಾಗಿ ನಡೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿದುಬಂದಿದೆ.ಇದನ್ನೂ ಓದಿ: ಸಿಎಂ ವಿರುದ್ಧ FIR ಬೆನ್ನಲ್ಲೇ ಮುಡಾ ಹಗರಣ ತನಿಖೆಗೆ 4 ತಂಡ ರಚಿಸಿದ ಲೋಕಾ ಎಸ್ಪಿ

    ದೆಹಲಿಯ ನೈರುತ್ಯ ಉಪ ಪೊಲೀಸ್ ಆಯುಕ್ತ ರೋಹಿತ್ ಮೀನಾ ಮಾತನಾಡಿ, ಕಟ್ಟಡದ ಮಾಲೀಕ ನಿತಿನ್ ಚೌಹಾಣ್ ಎಂಬಾತ ಕರೆ ಮಾಡಿ, ಹೀರಾಲಾಲ್ ಮನೆಯ ಬಳಿ ದುರ್ವಾಸನೆ ಬರುತ್ತಿರುವುದಾಗಿ ಶುಕ್ರವಾರ ಬೆಳಿಗ್ಗೆ 10:18ರ ಸುಮಾರಿಗೆ ವಿಷಯ ತಿಳಿಸಿದ್ದಾರೆ ಎಂದು ಹೇಳಿದರು.

    ಫ್ಲಾಟ್‌ನ ಬಾಗಿಲಿನ ಒಳಗಿನಿಂದ ಚಿಲಕ ಹಾಕಲಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಯ ಸಹಾಯದಿಂದ ತೆಗೆಯಿಸಲಾಗಿದೆ. ಫ್ಲಾಟ್‌ನಲ್ಲಿ ಎರಡು ಕೊಠಡಿಗಳಿದ್ದು, ಒಂದು ಕೋಣೆಯಲ್ಲಿ ತಂದೆಯ ಶವ ಹಾಗೂ ಇನ್ನೊಂದು ಕೋಣೆಯಲ್ಲಿ ಆತನ ನಾಲ್ಕು ಮಕ್ಕಳ ಶವ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

    ಕಳೆದ ಒಂದು ವರ್ಷದ ಹಿಂದೆಯಷ್ಟೇ ಆ ನಾಲ್ಕು ಮಕ್ಕಳು ಕ್ಯಾನ್ಸ್‌ರ್‌ನಿಂದಾಗಿ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ತನ್ನ ಹೆಂಡತಿಯ ಸಾವಿನ ಬಳಿಕ ತನ್ನ ನಾಲ್ಕು ಮಕ್ಕಳನ್ನು ತಾನೇ ನೋಡಿಕೊಳ್ಳಲು ಆರಂಭಿಸಿದನು. ಹೆಂಡತಿಯ ಸಾವಿನ ಬಳಿಕ ಮನೆಯವರ ಸಂಪರ್ಕ ಕಳೆದುಕೊಂಡಿದ್ದನು. ಜೊತೆಗೆ ತನ್ನ ಮಕ್ಕಳ ಹೆಚ್ಚು ಗಮನ ಹರಿಸಲು ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿದ್ದನು ಎಂದು ಮೂಲಗಳು ತಿಳಿಸಿವೆ.

    ಸೆ.28 ರಂದು ಈ ಘಟನೆ ಬೆಳಕಿಗೆ ಬಂದಿದ್ದು, ಫ್ಲಾಟ್ ಮತ್ತು ಮೃತ ದೇಹವನ್ನು ಪರಿಶೀಲಿಸಿದಾಗ ಮೃತ ದೇಹಗಳ ಮೇಲೆ ಯಾವುದೇ ಗಾಯದ ಗುರುತುಗಳು ಕಂಡುಬಂದಿಲ್ಲ. ಐದು ಗ್ಲಾಸ್‌ಗಳು, ಸ್ಪೂನ್, ವಿಷದ ಪ್ಯಾಕೆಟ್‌ಗಳು ಹಾಗೂ ಅನುಮಾನಾಸ್ಪದ ದ್ರವವೊಂದು ದೊರೆತಿದೆ. ಇದರಿಂದಾಗಿ ಕುಟುಂಬದ ಐವರು ವಿಷ ಸೇವಿಸುವುದರ ಮೂಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

    ಸದ್ಯ ಈ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ಮೇಲೆ ಹೆಚ್ಚು ರೈತರ ಸಾವು: ಪ್ರಧಾನಿ ಮೋದಿ ಆರೋಪ

  • ಪಬ್ಲಿಕ್ ಟಿವಿ ಪ್ರೇರಣೆ – ಇಬ್ಬರು ವಿಶೇಷ ಚೇತನರಿಗೆ ಬ್ಯಾಟರಿ ಚಾಲಿತ ಗಾಲಿ ಕುರ್ಚಿ ವಿತರಿಸಿದ ಸವದಿ

    ಪಬ್ಲಿಕ್ ಟಿವಿ ಪ್ರೇರಣೆ – ಇಬ್ಬರು ವಿಶೇಷ ಚೇತನರಿಗೆ ಬ್ಯಾಟರಿ ಚಾಲಿತ ಗಾಲಿ ಕುರ್ಚಿ ವಿತರಿಸಿದ ಸವದಿ

    ಚಿಕ್ಕೋಡಿ: ಪಬ್ಲಿಕ್ ಟಿವಿಯ (Public Tv) ‘ಬೆಳಕು’ (Belaku) ಕಾರ್ಯಕ್ರಮದ ಪ್ರೇರಣೆಯಿಂದ ಬೆನ್ನುಹುರಿ ಇಲ್ಲದ ಇಬ್ಬರು ವಿಕಲಚೇತನರಿಗೆ (Disabled Persons) ಬ್ಯಾಟರಿ ಚಾಲಿತ ಗಾಲಿ ಕುರ್ಚಿ (Wheelchair) ಬೈಕ್‌ಗಳನ್ನು ಅಥಣಿ ಶಾಸಕ ಲಕ್ಷ್ಮಣ ಸವದಿ (Laxman Savadi) ನೀಡಿದ್ದಾರೆ.

    ದೀಪಾವಳಿ (Deepavali) ಹಬ್ಬದ ನಿಮಿತ್ತ ವಿಶೇಷ ಚೇತನರಿಗೆ ವಿಶೇಷ ಕೊಡುಗೆ ನೀಡಿದ ಶಾಸಕ ಸವದಿ, ನಡೆಯಲಾಗದೇ ಹಾಸಿಗೆ ಮೇಲಿದ್ದ ಇಬ್ಬರಿಗೆ ಬ್ಯಾಟರಿ ಚಾಲಿತ ಗಾಲಿ ಕುರ್ಚಿ ಕೊಡುಗೆಯಾಗಿ ನೀಡಿದ್ದಾರೆ. ಅಥಣಿ ಪಟ್ಟಣದ ಅವರ ಸ್ವಗೃಹದಲ್ಲಿ ಹಬ್ಬದ ನಿಮಿತ್ತ ನಿಯೋ ಮೋಶನ್ ಕಂಪನಿಯ 1,05,000 ರೂ. ಬೆಲೆಯ 2 ಬ್ಯಾಟರಿ ಚಾಲಿತ ವಾಹನ ಕೊಡುಗೆಯಾಗಿ ನೀಡಿದ್ದಾರೆ. ಇದನ್ನೂ ಓದಿ: ಬಲಿಪಾಡ್ಯಮಿ; ಮಂತ್ರಾಲಯ ಮಠದಲ್ಲಿ ಶ್ರೀಗಳಿಂದ ವಿಶೇಷ ಮಹಾಭಿಷೇಕ

    ವಿದ್ಯುತ್ ಕಂಬದಿಂದ ಬಿದ್ದು ಬೆನ್ನುಹುರಿ ಅಪಘಾತಕ್ಕೆ ಒಳಗಾಗಿದ್ದ ಬಡಚಿ ಗ್ರಾಮದ ಬಸಪ್ಪ ಪೂಜಾರಿ ಹಾಗೂ ಹುಟ್ಟಿನಿಂದ ಪೋಲಿಯೋ ಪೀಡಿತ ದೇಸಾರಟ್ಟಿ ಗ್ರಾಮದ ಸಚ್ಚಿನ ಗಾಂವಕರ ಎಂಬವರಿಗೆ ಸವದಿ ಗಾಲಿ ಕುರ್ಚಿ ಹಸ್ತಾಂತರ ಮಾಡಿದರು. ಕಳೆದ ವರ್ಷ ದೀಪಾವಳಿ ಹಬ್ಬದ ನಿಮಿತ್ತ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದಡಿ ಬೆನ್ನುಹುರಿ ಅಪಘಾತಕ್ಕೆ ಒಳಗಾಗಿದ್ದ ಹನುಮಂತ ಕುರುಬರ ಎಂಬ ಯುವಕನಿಗೆ ಬ್ಯಾಟರಿ ಚಾಲಿತ ಗಾಲಿ ಕುರ್ಚಿಯನ್ನು ನೀಡಿದ್ದರು. ಇದನ್ನೂ ಓದಿ: ವಿದ್ಯುತ್‌ ಕಳ್ಳತನ ಆರೋಪ – ಹೆಚ್‌.ಡಿ.ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್‌ ದಾಖಲು

    ಈ ಬಾರಿ ಬೆಳಕು ಕಾರ್ಯಕ್ರಮವನ್ನು ಪ್ರೇರಣೆಯಾಗಿಸಿಕೊಂಡು ಮತ್ತಿಬ್ಬರಿಗೆ ಬ್ಯಾಟರಿ ಚಾಲಿತ ಗಾಲಿ ಕುರ್ಚಿ ಬೈಕ್ ನೀಡಿದ್ದಾರೆ. ವಿಶೇಷ ಚೇತನರಿಗೆ ಬೈಕ್ ನೀಡಿದ ಬಳಿಕ ಪಬ್ಲಿಕ್ ಟಿವಿ ಕಾರ್ಯವನ್ನು ಶಾಸಕ ಲಕ್ಷ್ಮಣ ಸವದಿ ಶ್ಲಾಘಿಸಿದ್ದು, ಅನೇಕ ನಿರ್ಗತಿಕರಿಗೆ ಬಡವರಿಗೆ ಪಬ್ಲಿಕ್ ಟಿವಿಯ ‘ಬೆಳಕು’ ಕಾರ್ಯಕ್ರಮ ನವಚೈತನ್ಯ ನೀಡುವ ಕಾರ್ಯ ಮಾಡುತ್ತಿದೆ ಎಂದರು. ಇದನ್ನೂ ಓದಿ: ಬಿಜೆಪಿಗೆ ವಿಜಯೇಂದ್ರ ಹಿಟ್ ಮ್ಯಾನ್: ಶ್ರೀರಾಮುಲು