Tag: ವಿಶೇಷ ಚೇತನ

  • 5ರ ಕಿವುಡ, ಮೂಕ ಮಗುವಿನ ಮೇಲೆ ನೆರೆಮನೆಯಾತನಿಂದ ರೇಪ್

    5ರ ಕಿವುಡ, ಮೂಕ ಮಗುವಿನ ಮೇಲೆ ನೆರೆಮನೆಯಾತನಿಂದ ರೇಪ್

    ಭೋಪಾಲ್: ಐದು ವರ್ಷದ ಕಿವುಡ ಮತ್ತು ಮೂಕ ಬಾಲಕಿಯ ಮೇಲೆ ಆಕೆಯ ನೆರೆ ಮನೆಯಲ್ಲಿ (Neighbour) ವಾಸಿಸುತ್ತಿದ್ದ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ ಘಟನೆ ಭೋಪಾಲ್‍ನಲ್ಲಿ (Bhopal) ನಡೆದಿದೆ.

    ಘಟನೆಗೆ ಸಂಬಂಧಿಸಿ 56 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಐದು ವರ್ಷದ ವಿಶೇಷ ಚೇತನ (Specially Abled) ಬಾಲಕಿಗೆ ಆಟವಾಡಲು ತನ್ನ ಮನೆಗೆ ಕರೆದಿದ್ದು ಆಕೆಯ ಮೇಲೆ ಆತ ಅತ್ಯಾಚಾರವೆಸಗಿದ್ದಾನೆ. ಆ ವೇಳೆ ಬಾಲಕಿ ಕಿರುಚಿದ್ದಾಳೆ. ಬಾಲಕಿಯ ಚೀರಾಟವನ್ನು ಕೇಳಿದ ಆಕೆಯ ತಾಯಿಯು (Mother) ಆರೋಪಿ ಮನೆಗೆ ಬಂದಿದ್ದಾಳೆ. ಅಲ್ಲಿ ಬಾಲಕಿಯ ಮೇಲೆ ಆತ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದನ್ನು ನೋಡಿ ಒಮ್ಮೆಲೆ ಆತಂಕಕ್ಕೆ ಒಳಗಾಗಿದ್ದಾಳೆ.

    ಆದರೂ ಚೇತರಿಸಿಕೊಂಡು ತಕ್ಷಣ ತನ್ನ ಮಗುವನ್ನು ಪಾರು ಮಾಡಿದ್ದಾಳೆ. ಇದಾದ ಬಳಿಕ ಘಟನೆಗೆ ಸಂಬಂಧಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಮಗುವು ತನ್ನ ತಾಯಿಯ ಸಹಾಯ ಪಡೆದು ತನಗಾದ ತೊಂದರೆಯನ್ನು ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಟಿಪ್ಪು ಪ್ರತಿಮೆ ಸ್ವಂತ ಜಾಗದಲ್ಲಿ ಕಟ್ತೀವಿ ಅಂದ್ರೂ ಬಿಡಲ್ಲ, ಬಾಬ್ರಿ ಮಸೀದಿ ರೀತಿ ಧ್ವಂಸ ಮಾಡ್ತೇವೆ – ಮುತಾಲಿಕ್

    POLICE JEEP

    ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಪರೀಕ್ಷೆ ನಡೆಸಿದಾಗ ಆತ ಪಾನಮತ್ತನಾಗಿರುವುದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿ ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ದೇವರ ಪೂಜೆಗೆ ಎರಡು ಗುಂಪುಗಳ ನಡುವೆ ಗಲಾಟೆ – ಬೀಗ ಮುರಿದು ಪೂಜೆ ಮಾಡಿದ ಪೊಲೀಸರು

    Live Tv
    [brid partner=56869869 player=32851 video=960834 autoplay=true]

  • ರಿಯಾಲಿಟಿ ಶೋನಲ್ಲಿ ಗೆದ್ದ ಹಣವನ್ನು ಕೇರಳ ನೆರೆಪೀಡಿತರಿಗೆ ನೀಡಿದ ವಿಶೇಷ ಚೇತನ

    ರಿಯಾಲಿಟಿ ಶೋನಲ್ಲಿ ಗೆದ್ದ ಹಣವನ್ನು ಕೇರಳ ನೆರೆಪೀಡಿತರಿಗೆ ನೀಡಿದ ವಿಶೇಷ ಚೇತನ

    – ಕಾಲಿನಿಂದಲೇ ಸಿಎಂ ಜೊತೆ ಕ್ಲಿಕ್ಕಿಸಿಕೊಂಡ ಸೆಲ್ಫಿ ವೈರಲ್

    ತಿರುವನಂತಪುರಂ: ಭೀಕರ ನೆರೆಯಿಂದ ಕೇರಳ ಅಕ್ಷರಶಃ ನಲುಗಿಹೋಗಿದೆ. ನೆರೆ ಪೀಡಿತ ಪ್ರದೇಶಗಳ ಜನರ ಪಾಡು ಮೂರಾಬಟ್ಟೆಯಾಗಿದೆ. ಹೀಗಾಗಿ ಕೇರಳ ನೆರ ಸಂತ್ರಸ್ತರ ನೆರವಿಗೆ ವಿಶೇಷ ಚೇತನ ಚಿತ್ರ ಕಲಾವಿದರೊಬ್ಬರು ಸ್ವಯಃ ಪೇರಿತರಾಗಿ ಮುಂದೆ ಬಂದಿದ್ದು, ರಿಯಾಲಿಟಿ ಶೋ ಒಂದರಲ್ಲಿ ಗೆದ್ದ ಸಂಪೂರ್ಣ ಹಣವನ್ನು ಕೇರಳ ಸಿಎಂ ನೆರೆ ಪರಿಹಾರ ನಿಧಿಗೆ ದೇಣಿಗೆ ಕೊಟ್ಟಿದ್ದಾರೆ.

    ಕೇರಳದ ಅಲತ್ತೂರಿನ ವಿಶೇಷ ಚೇತನ ಪ್ರಣವ್ ಬಾಲಸುಬ್ರಹ್ಮಣ್ಯನ್ ಅವರು ಸಿಎಂ ನೆರೆ ಪರಿಹಾರ ನಿಧಿಗೆ ದೇಣಿಗೆ ನೀಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಹುಟ್ಟಿನಿಂದಲೇ ಎರಡು ಕೈಗಳನ್ನು ಕಳೆದುಕೊಂಡಿರುವ ಪ್ರಣವ್ ಅವರು ಕಾಲಿನಿಂದಲೇ ಚಿತ್ರ ಬಿಡಿಸುವ ಕಲೆಯನ್ನು ಕರಗತ ಮಾಡಿಕೊಂಡು ಸಾಕಷ್ಟು ಹೆಸರುಗಳಿಸಿದ್ದಾರೆ. ಮಂಗಳವಾರ ಕೇರಳ ಸಿಎಂ ಪಿಣರಾಯಿ ವಿಜಯ್‍ನ್ ಅವರನ್ನು ಪ್ರಣವ್ ಭೇಟಿಯಾಗಿ ಕೇರಳ ನೆರೆಸಂತ್ರಸ್ತರ ನೆರವಿಗಾಗಿ ದೇಣಿಗೆ ಚೆಕ್ ನೀಡಿದ್ದಾರೆ.

    https://twitter.com/vijayanpinarayi/status/1194138212169445376

    ಅಲ್ಲದೆ ಇದೇ ವೇಳೆ ಪ್ರಣವ್ ಕಾಲಿನ ಬೆರಳಿಂದಲೇ ಸಿಎಂ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಈ ಫೋಟೋ ಎಲ್ಲೆಡೆ ಸಖತ್ ವೈರಲ್ ಆಗಿದ್ದು, ವಿಶೇಷ ಚೇತನರಾಗಿದ್ದರೂ ಪ್ರಣವ್ ಬೇರೆಯವರಿಗೆ ಸಹಾಯ ಮಾಡುತ್ತಿರುವ ಗುಣ ಪಿಣರಾಯಿ ಅವರ ಮನಗೆದ್ದಿದೆ. ಹೀಗಾಗಿ ಪ್ರಣವ್ ಜೊತೆಗೆ ತಾವಿರುವ ಫೋಟೋಗಳನ್ನು ಪಿಣರಾಯಿ ಅವರು ಟ್ವೀಟ್ ಮಾಡಿ ಪ್ರಣವ್ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿ, ಅವರೊಂದಿಗೆ ಕಳೆದ ಕ್ಷಣದ ಬಗ್ಗೆ ಹಂಚಿಕೊಂಡಿದ್ದಾರೆ.

    ಇಂದು(ಮಂಗಳವಾರ) ಬೆಳಗ್ಗೆ ನನಗೆ ಹೃದಯಸ್ಪರ್ಶಿ ಅನುಭವವಾಯಿತು. ಅಲತ್ತೂರಿನ ಚಿತ್ರ ಕಲಾವಿದ ಪ್ರಣವ್ ಕಚೇರಿಗೆ ಆಗಮಿಸಿ ಸಿಎಂ ನೆರೆ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಹಾಗೆಯೇ ವಿಶೇಷ ಚೇತನರಿಗೆ ಕೇರಳ ಸರ್ಕಾರ ನೀಡುತ್ತಿರುವ ಸಹಕಾರಕ್ಕೆ ಪ್ರಣವ್ ಸಂತೋಷ ವ್ಯಕ್ತಪಡಿಸಿದ್ದಾರೆ ಎಂದು ಬರೆದುಕೊಂಡು ಪ್ರಣವ್ ಜೊತೆಗಿರುವ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.

    https://twitter.com/vinesh2112/status/1194290285917851649

    ಈ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಪ್ರಣವ್ ಸಹಾಯ ಗುಣಕ್ಕೆ ನೆಟ್ಟಿಗರು ಮನಸೋತ್ತಿದ್ದಾರೆ. ಎಲ್ಲವೂ ಸರಿಯಾಗಿದ್ದರು ಜನರು ಇನ್ನೊಬ್ಬರ ಸಹಾಯ ಮಾಡಲು ಹಿಂದೆ ಮುಂದೆ ನೋಡುತ್ತಾರೆ. ಅಂತಹದರಲ್ಲಿ ವಿಶೇಷ ಚೇತನರಾಗಿದ್ದರೂ ಬೇರೊಬ್ಬರ ನೆರವಿಗೆ ಬಂದ ಪ್ರಣವ್ ಅವರ ಗುಣವನ್ನು ನಿಜಕ್ಕೂ ಮೆಚ್ಚಲೇಬೇಕು. ನೆರೆ ಪೀಡಿತರಿಗೆ ನೆರವಾದ ಪ್ರಣವ್ ಅವರಿಗೆ ಸಲಾಂ ಎಂದು ಗೌರವ ಸಲ್ಲಿಸಿದ್ದಾರೆ.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಾತು ಬಾರದ, ಕಿವಿ ಕೇಳದ ವಿಶೇಷ ಚೇತನರು

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಾತು ಬಾರದ, ಕಿವಿ ಕೇಳದ ವಿಶೇಷ ಚೇತನರು

    ಕಾರವಾರ: ಮಾತು ಬಾರದ ಹಾಗೂ ಕಿವಿ ಕೇಳದ ವಿಶೇಷ ಚೇತನರು ಕಾರವಾರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಹೊನ್ನಯ್ಯ ಮೊಗೇರ ಹಾಗೂ ಅಂಕಿತಾ ಶಿರೋಡಕರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೊನ್ನಯ್ಯ ಮೊಗೇರ ಭಟ್ಕಳ ತಾಲೂಕಿನ ಸಣ್ಣಬಾವಿ ಗ್ರಾಮದವರಗಿದ್ದು, ಅಂಕಿತಾ ಕಾರವಾರದ ಕಾಜಭಾಗದ ಗ್ರಾಮದ ನಿವಾಸಿಯಾಗಿದ್ದಾರೆ.

    ಹೊನ್ನಯ್ಯ ಮೊಗೇರ ಹಾಗೂ ಅಂಕಿತಾ ಶಿರೋಡಕರ್ ಇಬ್ಬರಿಗೂ ಮಾತು ಬರುವುದಿಲ್ಲ ಹಾಗೂ ಕಿವಿ ಕೇಳುವುದಿಲ್ಲ. ಹೊನ್ನಯ್ಯ ವಾಸ್ತು ಶಿಲ್ಪಿಯಾಗಿ ಕೆಲಸ ಮಾಡುತ್ತಿದ್ದು, ವಿಶೇಷ ಚೇತನರ ಸಮಾರಂಭವೊಂದರಲ್ಲಿ ಇಬ್ಬರು ಪರಿಚಯವಾಗಿ ಮದುವೆಯಾಗಲು ನಿರ್ಧರಿಸಿದ್ದರು.

    ಹೊನ್ನಯ್ಯ ಹಾಗೂ ಅಂಕಿತಾ ಕಾರವಾರ ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಮದುವೆಯಾಗಿದ್ದಾರೆ. ಇವರ ಮದುವೆ ಸಮಾರಂಭದಲ್ಲಿ ಬಹುತೇಕ ವಿಶೇಷ ಚೇತನರೇ ಪಾಲ್ಗೊಂಡಿದ್ದು, ಎಲ್ಲರ ಗಮನವನ್ನು ಸೆಳೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಶೇಷಚೇತನ ತಾಯಿಗಾಗಿ ಗಲ್ಲಿಗಲ್ಲಿ ಶೋಧ- ಅಮ್ಮನಿಗಾಗಿ ಪೋಸ್ಟರ್ ಅಂಟಿಸ್ತಿದ್ದಾರೆ ಮಕ್ಕಳು

    ವಿಶೇಷಚೇತನ ತಾಯಿಗಾಗಿ ಗಲ್ಲಿಗಲ್ಲಿ ಶೋಧ- ಅಮ್ಮನಿಗಾಗಿ ಪೋಸ್ಟರ್ ಅಂಟಿಸ್ತಿದ್ದಾರೆ ಮಕ್ಕಳು

    ಉಡುಪಿ: ಮೊಮ್ಮಗನಿಗೆ ರಂಜಾನ್ ಗಿಫ್ಟ್ ಕೊಡಬೇಕು ಅಂತ ಮಹಿಳೆಯೊಬ್ಬರು ಭಟ್ಕಳದಲ್ಲಿ ಬಸ್ ಹತ್ತಿದ್ದಾರೆ. ಮಾತು ಬಾರದ ಕಿವಿ ಕೇಳದ ಅವರು ಒಂದು ಸ್ಟಾಪ್ ಮುಂದೆ ಬಸ್ಸಿಂದ ಇಳಿದಿದ್ದಾರೆ. ತಾನೆಲ್ಲಿ ಇಳಿದಿದ್ದೇನೆ ಅಂತ ತಿಳಿಯದ ಜುಲೇಖಾ ಊರೂರು ಸುತ್ತಿ ಕಣ್ಮರೆಯಾಗಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ರವೂಫ್ ಇದೀಗ ಅಮ್ಮನಿಗಾಗಿ ಕೈಯ್ಯಲ್ಲಿ ಪೋಸ್ಟರ್ ಹಿಡಿದು ಊರೂರು ಸುತ್ತುತ್ತಿದ್ದಾರೆ. ಜೂನ್ 23ರಂದು ಕರಾವಳಿಯಲ್ಲಿ ರಂಜಾನ್ ಹಬ್ಬವಿತ್ತು. ಭಟ್ಕಳದ ಜುಲೆಖಾ ಕುಂದಾಪುರದ ಹೆಮ್ಮಾಡಿಗೆ ತನ್ನ ಮೊಮ್ಮಗನನ್ನು ನೋಡಲು ಬಸ್ ಹತ್ತಿದ್ದರು. ಹೆಮ್ಮಾಡಿಯಲ್ಲಿ ಇಳಿಯುವ ಬದಲು ಕುಂದಾಪುರದಲ್ಲಿ ಇಳಿದಿದ್ದರು. ತಾನೆಲ್ಲಿ ಇಳಿದ್ದೇನೆ ಎಂಬುದನ್ನು ಅರಿಯದ ಜುಲೇಖಾ ಇದೀಗ ಕಳೆದುಹೋಗಿದ್ದಾರೆ. ತನ್ನ ತಾಯಿ ಕಳೆದು ಹೋಗಿದ್ದಾರೆ ಅನ್ನೋದು ಗೊತ್ತಾಗಿ ಕತಾರ್‍ನಿಂದ ಮಗ ಬಂದಿದ್ದಾರೆ. ಮಂಗಳೂರು ಸೇರಿ ಹಲವು ಕಡೆ ಹುಡುಕಾಟ ನಡೆದಿದೆ. ಆದ್ರೂ ಪ್ರಯೋಜನವಾಗಿಲ್ಲ. ಹೀಗಾಗಿ ಇದೀಗ ಗಲ್ಲಿ ಗಲ್ಲಿಯಲ್ಲಿ ಪೋಸ್ಟರ್- ಸ್ಟಿಕ್ಕರ್ ಅಂಟಿಸಲು ಶುರು ಮಾಡಿದ್ದಾರೆ.

    ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದ್ರೆ ಪೊಲೀಸರು ಪತ್ತೆಗೆ ಪ್ರಯತ್ನ ಮಾಡುತ್ತಿಲ್ಲ ಅಂತ ಕುಟುಂಬಸ್ಥರು ದೂರಿದ್ದಾರೆ. ಭಾವಚಿತ್ರದಲ್ಲಿರುವ ಜಲೇಕಾ ಎಲ್ಲಾದ್ರು ಕಾಣಸಿಕ್ಕರೆ ಮಾಹಿತಿ ಕೊಡಿ ಅಂತ ಕೇಳಿಕೊಂಡಿದ್ದಾರೆ.

  • ಕಿವಿ ಕೇಳಿಸಲ್ಲ, ಮಾತು ಬರಲ್ಲ ಆದ್ರೆ ಪಿಯುಸಿಯಲ್ಲಿ ಶೆ.93 ಅಂಕ- ಇತರರಿಗೆ ಮಾದರಿಯಾದ್ರು ಧಾರವಾಡದ ಶಿವಯೋಗಿ

    ಕಿವಿ ಕೇಳಿಸಲ್ಲ, ಮಾತು ಬರಲ್ಲ ಆದ್ರೆ ಪಿಯುಸಿಯಲ್ಲಿ ಶೆ.93 ಅಂಕ- ಇತರರಿಗೆ ಮಾದರಿಯಾದ್ರು ಧಾರವಾಡದ ಶಿವಯೋಗಿ

    ಧಾರವಾಡ: ವಿದ್ಯಾಕಾಶಿ ಧಾರವಾಡದ ಮಹೇಶ ಪಿಯು ಕಾಲೇಜಿನ ವಿಶೇಷ ಚೇತನ ವಿದ್ಯಾರ್ಥಿಯೊಬ್ಬರು ಶೇಕಡಾ 93 ಅಂಕ ಪಡೆದಿದ್ದಾರೆ.

    ಮೂಲತಃ ಕಾರವಾರದ ಕದ್ರಾದವರಾದ ಶಿವಯೋಗಿ ಶೆಟ್ಟಿ ಈ ಸಾಧನೆ ಮಾಡಿದವರು. ಕಿವಿ ಕೇಳಿಸಿ, ಮಾತನಾಡೊಕೆ ಬಂದ್ರೂ ಈ ಸಾಧನೆ ಮಾಡೊಕೆ ಆಗದ ವಿದ್ಯಾರ್ಥಿಗಳ ಮುಂದೆ ಇವರು ಶೇಕಡಾ 93 ರಷ್ಟು ಅಂಕ ಪಡೆದು ಸೈ ಎನಿಸಿಕೊಂಡಿದ್ದಾರೆ.

    ಹುಟ್ಟಿನಿಂದ ಶಿವಯೋಗಿಗೆ ಕಿವಿ ಕೇಳಿಸಲ್ಲ. ಹೀಗಾಗಿ ಮಾತನಾಡೊಕೆ ಕೂಡಾ ಆಗಲ್ಲ. ಆದರೂ, ಪ್ರತಿಭೆಯ ಪ್ರತಿರೂಪವಾದ ಶಿವಯೋಗಿ ಶೆಟ್ಟಿ, ಎಸ್ ಎಸ್ ಎಲ್ ಸಿ 97 ರಷ್ಟು ಅಂಕ ಪಡೆದಿದ್ದರು. ಬಳಿಕ ಪಿಯುಸಿಯಲ್ಲಿ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡಿದ್ದರು. ಇದೀಗ ಪರೀಕ್ಷೆಯಲ್ಲಿ 558 ಅಂಕ ಪಡೆದು ಡಿಸ್ಟಿಂಕ್ಷನ್‍ನಲ್ಲಿ ಪಾಸಾಗುವ ಮೂಲಕ ಶಾಲೆಗೆ ಹಾಗೂ ಹೆತ್ತವರಿಗೆ ಕೀರ್ತಿ ತಂದಿದ್ದಾರೆ.

    ಈ ತರದ ಮಕ್ಕಳಿಗೆ ಶಾಲೆಯಲ್ಲಿ ಸಹಾಯ ಸಿಗುವುದೇ ಕೆಲವೆಡೆ ಮಾತ್ರ. ಅಂತದ್ದರದಲ್ಲಿ ಮಹೇಶ್ ಕಾಲೇಜಿನ ಪ್ರತಿಯೊಬ್ಬ ಶಿಕ್ಷಕರು ಸಹಾಯ ಮಾಡಿದ್ದಾರೆ. ಒಟ್ಟಿನಲ್ಲಿ ಇಂತಹ ಮಕ್ಕಳಿಗೆ ಶಿಕ್ಷಕರ ಬೆಂಬಲವಿದ್ದಲ್ಲಿ ಮುಂದು ಬರುತ್ತಾರೆ ಅನ್ನೋದಕ್ಕೆ ನನ್ನ ಮಗನೇ ಸಾಕ್ಷಿ ಅಂತಾ ಶಿವಯೋಗಿ ತಾಯಿ ನಾಗರತ್ನ ಅಭಿಪ್ರಾಯಿಸಿದ್ದಾರೆ.

    ಶಿವಯೋಗಿ ಶಾಲೆಗೆ ಪ್ರವೇಶ ನೀಡುವಾಗಲೇ ಎಲ್ಲರ ಜೊತೆ ಬೆರೆಯುವಂತೆ ಸಮಾನತೆ ಕೊಟ್ವಿ. ಶ್ರವಣ ದೋಷ ಇದ್ದುದರಿಂದ ಆತನಿಗೆ ತರಗತಿ ಮುಗಿದ ಬಳಿಕ ಮತ್ತೆ ಪಾಠವನ್ನು ಉಪನ್ಯಾಸಕರು ಹೇಳಿಕೊಡುತ್ತಿದ್ದರು. ಹೀಗಾಗಿ ವಿಜ್ಞಾನ ವಿಭಾಗದಲ್ಲಿ ಇಂದು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾನೆ. ಮನುಷ್ಯ ಛಲಗಾರನಿರಬೇಕು. ಸತತ ಪರಿಶ್ರಮ ಪಟ್ಟಲ್ಲಿ ಮಾತ್ರ ಯಶಸ್ಸು ಸಾಧ್ಯ ಅಂತಾ ಕಾಲೇಜಿನ ಪ್ರಾಂಶುಪಾಲ ಉಮೇಶ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದ್ದಾರೆ.