ಬೆಂಗಳೂರು: ಪ್ರತಿ ಹುಣ್ಣಿಮೆಯಂದು ಚಂದಿರ ಪಳಪಳನೆ ಹೊಳೆಯುತ್ತಾನೆ. ಆದರೆ ಬಾನಂಗಳದಲ್ಲಿ ಶುಕ್ರವಾರ ರಾತ್ರಿ 4 ಗಂಟೆಗಳ ಕಾಲ ನಡೆದ ಚಮತ್ಕಾರದಲ್ಲಿ ಚಂದಿರ ಕೊಂಚ ಮಂಕಾಗಿ ಹೋಗಿದ್ದು, ತೋಳನ ವಕ್ರದೃಷ್ಟಿಯಿಂದಾಗಿ ಚಂದಿರನಿಗೆ ಗ್ರಹಣ ಬಡಿದಿತ್ತು.
ಶುಕ್ರವಾರ ರಾತ್ರಿ 10.38 ರಿಂದ ಮುಂಜಾನೆ 2.42ರವರೆಗೂ ಚಂದ್ರ ಭೂಮಿಯ ಅರೆನೆರಳಿನಲ್ಲಿ ಸಿಲುಕಿದ್ದನು. ಈ ನಾಲ್ಕು ಗಂಟೆಗಳ ಕಾಲ ನಡೆದ ಕೌತುಕವನ್ನು ತೋಳ ಚಂದ್ರ ಗ್ರಹಣ, ಪಾರ್ಶ್ವ ಛಾಯಾ ಗ್ರಹಣ, ಮಸುಕಂಚಿನ ಚಂದ್ರಗ್ರಹಣ ಎಂದೆಲ್ಲ ಕರೆಯುತ್ತಾರೆ. ಮಧ್ಯರಾತ್ರಿ 12.40ರ ಸುಮಾರಿಗೆ ಸಂಪೂರ್ಣ ಚಂದ್ರ ಗ್ರಹಣ ಸಂಭವಿಸಿತ್ತು.
ಈ ಭೂಮಿ-ಚಂದ್ರನ ಆಟ ವಿಶ್ವದ ಕೆಲವೆಡೆ ಮಾತ್ರ ಗೋಚರಿಸಿತು. ಭಾರತ, ಏಷ್ಯಾ, ಆಫ್ರಿಕಾ, ಆಸ್ಟ್ರೇಲಿಯಾ, ಯುರೋಪ್, ಉತ್ತರ ಅಮೆರಿಕದ ಕೆಲ ಪ್ರದೇಶದಲ್ಲಿ ತೋಳ ಚಂದಿರನ ಕೌತುಕತೆಯನ್ನ ಜನ ಕಣ್ತುಂಬಿಕೊಂಡರು. ರಾಜ್ಯದಲ್ಲೂ ತೋಳ ಚಂದಿರನ ವಿಸ್ಮಯ ಜರುಗಿದ್ದು, ಕೆಲವರು ನಿದ್ರೆ ಬಿಟ್ಟು ಈ ಕೌತುಕತೆಯನ್ನ ಕಣ್ತುಂಬಿಕೊಂಡರು. ಬೆಂಗಳೂರಿನ ಟೌನ್‍ಹಾಲ್, ಲಾಲ್‍ಬಾಗ್‍ನಲ್ಲಿ ತೋಳ ಚಂದ್ರಗ್ರಹಣ ವೀಕ್ಷಣೆಗೆ ಅನುವು ಮಾಡಿಕೊಡಲಾಗಿತ್ತು. ವಿದ್ಯಾರ್ಥಿಗಳು ಸೇರಿದಂತೆ ಹಲವರು ಮಧ್ಯರಾತ್ರಿ ಜರುಗಿದ ಚಂದಿರನ ಚಮಾತ್ಕಾರ ನೋಡಿದರು.
2019ರ ಅಂತ್ಯದ ವೇಳೆಗೆ, ಇಡೀ ಜಗತ್ತು ಬೆಂಕಿ ಬಳೆ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಿತ್ತು. ಇದಾಗಿ ಕೇವಲ ಎರಡು ವಾರಗಳ ಅಂತರದಲ್ಲಿ ಚಂದ್ರಗ್ರಹಣ ಸಂಭವಿಸಿದೆ. ಹೀಗಾಗಿ ಅತ್ಯಂತ ಕುತೂಹಲಕಾರಿಯಾಗಿ ಜನ ಚಂದ್ರಗ್ರಹಣವನ್ನ ವೀಕ್ಷಿಸಿದರು.
ಚಂದ್ರ ಗ್ರಹಣದ ವಿಶೇಷತೆಗಳೇನು?
– ಈ ಚಂದ್ರ ಗ್ರಹಣಕ್ಕೆ ತೋಳ ಚಂದ್ರ ಗ್ರಹಣ ಎಂದು ಹೆಸರು
– ಜನವರಿ ತಿಂಗಳು ತೋಳಗಳ ಸಂತಾನಾಭಿವೃದ್ಧಿಯ ಸಮಯ
– ಪಾಶ್ಚಾತ್ಯ ದೇಶಗಳಲ್ಲಿ ಜನವರಿ ತಿಂಗಳ ಗ್ರಹಣವನ್ನು ತೋಳ ಗ್ರಹಣ ಎನ್ನುತ್ತಾರೆ
– ಈ ಗ್ರಹಣವನ್ನು ಸಂಪೂರ್ಣ ಚಂದ್ರ ಗ್ರಹಣ ಎನ್ನುವುದಿಲ್ಲ
– ಇದು ನೆರಳಿನ ಗ್ರಹಣ, ಚಂದ್ರನ ಸ್ಥಾನದಲ್ಲಿ ವಿಶೇಷ ಬದಲಾವಣೆ ಇಲ್ಲ
ವೈಜ್ಞಾನಿಕವಾಗಿ ಇದೊಂದು ಖಗೋಳ ಕೌತುಕತೆ. ಇದರಿಂದ ಯಾವುದೇ ಅಪಾಯವಿಲ್ಲ. ಆದರೆ ಜ್ಯೋತಿಷ್ಯಗಳ ಪ್ರಕಾರ ಈ ಚಂದ್ರಗ್ರಹಣ ದೊಡ್ಡ ಅಪಾಯಕರಿಯಂತೆ. ವರ್ಷಾರಂಭದಲ್ಲಿ ಸಂಭವಿಸಿರುವ ಈ ತೋಳ ಚಂದ್ರ ಗ್ರಹಣದಿಂದ ಜಲಗಂಡಾಂತರವಿದೆ ಅಂತ ಭವಿಷ್ಯ ನುಡಿದಿದ್ದಾರೆ.
ಹುಬ್ಬಳ್ಳಿ: ದೇಶದಲ್ಲಿ ಎಷ್ಟು ಸುಭದ್ರವಾದ ಕಟ್ಟಡ ಇರುತ್ತವೆಯೋ, ಅಷ್ಟೇ ಸುಭದ್ರವಾದ ಕಾನೂನು ಜಾರಿಯಲ್ಲಿರುತ್ತದೆ ಎಂದು ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾರವರು ಹೇಳಿಕೆ ನೀಡಿದ್ದಾರೆ.
ಏಷ್ಯಾದಲ್ಲಿಯೇ ವಿಶೇಷವಾದ ಕೋರ್ಟ್ ಎಂದು ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿಯ ನೂತನ ನ್ಯಾಯಾಲಯ ಸಂಕೀರ್ಣವನ್ನು ಉದ್ಘಾಟಿಸಿ ಕನ್ನಡದಲ್ಲೇ ಭಾಷಣ ಆರಂಭಿಸಿದ ಅವರು, ಇದು ಕೇವಲ ಸಮಾರಂಭ ಅಲ್ಲ, ಇದು ಒಂದು ಕುಟುಂಬದ ಸಮಾರಂಭ. ನ್ಯಾಯದ ಮುಂದೆ ಎಲ್ಲರು ಸಮಾನರು, ಇಲ್ಲಿ ಬಡವ-ಶ್ರೀಮಂತ, ಮೇಲು-ಕೀಳೆಂಬ ಭಾವನೆ ಇಲ್ಲ. ಇದು ಎಲ್ಲರಿಗೂ ಒಂದೇ. ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆ ನಮ್ಮೆಲ್ಲರ ಹೆಮ್ಮೆಯ ಸಂಕೇತವಾಗಿದೆ ಎಂದು ತಿಳಿಸಿದರು.
ನ್ಯಾಯಾಲಯಕ್ಕೆ ಸುಭದ್ರ ಕಟ್ಟಡ ಎಂಬುದು ಕಟ್ಟಡ ಅಲ್ಲ. ಅದು ಸುಭದ್ರ ಕಾನೂನಿನ ಸಂಕೇತ. ಹೀಗಾಗಿ ದೇಶದಲ್ಲಿ ಎಷ್ಟು ಸುಭದ್ರ ಕಟ್ಟಡ ಇರುತ್ತದೆಯೋ, ಅಷ್ಟೇ ಸುಭದ್ರ ಕಾನೂನು ಇರುತ್ತದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಉತ್ತಮ ಕಾಳಜಿಯನ್ನು ಹೊಂದಿದ್ದಾರೆ. ರಾಜ್ಯದ ಎಲ್ಲಾ ನ್ಯಾಯಾಲಯಗಳು ಸ್ವಂತ ಕಟ್ಟಡಗಳು ಹೊಂದಲಿ ಎನ್ನುವ ಅವರ ಕಾಳಜಿಯು ನನಗೆ ತುಂಬಾ ಸಂತೋಷ ತಂದಿದೆ. ದೇಶದಲ್ಲಿ ಎಲ್ಲಾ ನ್ಯಾಯಾಲಯಗಳು ಉತ್ತಮ ಕಟ್ಟಡವನ್ನು ಹೊಂದಬೇಕು. ಇದರ ಜೊತೆಗೆ ಉತ್ತಮ ನ್ಯಾಯ ಕೊಡುವ ಕೆಲಸಗಳು ಆಗಬೇಕು ಎಂದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿ, ಇದು ಗಂಡು ಮೆಟ್ಟಿದ ನಾಡು, ನನಗೆ ಅಧಿಕಾರಿಗಳು ಇಂಗ್ಲೀಷಿನಲ್ಲಿ ಭಾಷಣ ಬರೆದುಕೊಟ್ಟಿದ್ದರು, ಆದರೆ ಮುಖ್ಯನ್ಯಾಯಾಧೀಶರುಗಳೇ ಕನ್ನಡದಲ್ಲಿ ಮಾತನಾಡಿದ ಮೇಲೆ ನಾನು ಕನ್ನಡದಲ್ಲೇ ಮಾತನಾಡುತ್ತೇನೆ. ಈ ಕಟ್ಟಡಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವಧಿಯಲ್ಲಿ ಅಡಿಗಲ್ಲು ಹಾಕಲಾಗಿತ್ತು. ಈ ಹಿಂದೆ ಕಲಬುರಗಿ ಹಾಗೂ ಧಾರವಾಡದಲ್ಲಿ ಹೈಕೋರ್ಟ್ ಆಗಲು ನಾನು ಶ್ರಮಪಟ್ಟಿದ್ದೆ. ನನ್ನ ಈ ಹಿಂದಿನ ಇಪ್ಪತ್ತು ತಿಂಗಳ ಅವಧಿಯಲ್ಲಿ ನ್ಯಾಯಾಲಯಗಳಿಗೆ ಅತೀ ಹೆಚ್ಚು ಮೂಲಭೂತ ಸೌಕರ್ಯ ಕೊಟ್ಟಿದ್ದೆ ಎಂದು ಹೇಳಿದರು.
ರಾಜ್ಯದಲ್ಲಿ ಕೇವಲ 20 ನ್ಯಾಯಾಲಯದ ಕಟ್ಟಡಗಳು ಮಾತ್ರ ಬಾಡಿಗೆ ಕಟ್ಟಡದಲ್ಲಿ ಕೆಲಸ ನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ನ್ಯಾಯಾಲಯ ಮತ್ತು ನ್ಯಾಯಾಂಗ ಇಲಾಖೆಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕೊಡಲು ನಾನು ಸಿದ್ದನಿದ್ದೇನೆ. ಫ್ಲೆಕ್ಸ್ ತೆರವು ಮಾಡಲು ನ್ಯಾಯಮೂರ್ತಿಗಳ ಆದೇಶ ನನಗೆ ಹೆಚ್ಚು ಸಂತೋಷ ಕೊಟ್ಟಿದೆ. ನಾವು ಹೇಳಿದರೆ ಅಧಿಕಾರಿಗಳು ಕೇಳುವುದಿಲ್ಲ, ಆದರೆ ಕೋರ್ಟ್ ಆದೇಶ ನೀಡಿದಾಗ ಅಧಿಕಾರಿಗಳು ಎದ್ದು-ಬಿದ್ದು ಕೆಲಸ ಮಾಡುತ್ತಾರೆ ಎಂದರು.
ನಮ್ಮ ಸರ್ಕಾರ ಅಖಂಡ ಕರ್ನಾಟಕದ ಸರ್ಕಾರವಾಗಿದೆ. ಯಾವುದೇ ಮಾತಿಗೂ ಕಿವಿ ಕೊಡಬೇಡಿ. ಮುಂದಿನ ದಿನಗಳಲ್ಲಿ ಪ್ರವಾಸ ಮಾಡಿದಾಗ ನಮ್ಮ ಸರ್ಕಾರದ ನಿಲುವನ್ನು ನಿಮ್ಮ ಮುಂದಿಡುತ್ತೇನೆ ಎಂದು ಅವರು ತಿಳಿಸಿದರು.
ಹುಬ್ಬಳ್ಳಿ ನ್ಯಾಯಾಲಯದ ವಿಶೇಷವೇನು?
122 ಕೋಟಿ ವೆಚ್ಚದಲ್ಲಿ ಸಿದ್ಧವಾಗಿರುವ ಈ ಕಟ್ಟಡವು ಸುಮಾರು 5 ಎಕರೆ ವ್ಯಾಪ್ತಿ ಪ್ರದೇಶದಲ್ಲಿ ಸುವ್ಯವಸ್ಥಿತವಾಗಿ ನಿರ್ಮಾಣಗೊಂಡಿದೆ. ನ್ಯಾಯಾಲಯದ ಕಟ್ಟಡವು ಒಟ್ಟು 7 ಮಹಡಿಗಳನ್ನು ಹೊಂದಿದ್ದು, ಎಲ್ಲಾ ಕಟ್ಟಡವು ಸಂಪೂರ್ಣ ಕೇಂದ್ರೀಕೃತ ಹವಾನಿಯಂತ್ರಿತ ವ್ಯವಸ್ಥೆಯನ್ನು ಹೊಂದಿದೆ. ಒಟ್ಟು ಏಳು ಅಂತಸ್ತಿನ ಕಟ್ಟದಲ್ಲಿ ಮೊದಲೆರಡು ಅಂತಸ್ತುಗಳನ್ನು ನ್ಯಾಯಧೀಶರು ಹಾಗೂ ವಕೀಲರಿಗೆ ಪಾರ್ಕಿಂಗ್ ಗೆ ಮೀಸಲಿಡಲಾಗಿದೆ. ಮೊದಲ ಮಹಡಿಯಲ್ಲಿ ಹಾಲ್ ನಲ್ಲಿ ವಾದಿ – ಪ್ರತಿವಾದಿ ಹಾಗೂ ಸರಕಾರಿ ವಕೀಲರಿಗೆ ಪ್ರತ್ಯೇಕ ಟೇಬಲ್ ವ್ಯವಸ್ಥೆ ಮಾಡಲಾಗಿದೆ.
ಮೊದಲನೇ ಮಹಡಿಯಲ್ಲಿ 3 ಕೋರ್ಟ್, ಒಂದು ಕಾನ್ಫರೆನ್ಸ್ ಹಾಲ್, ಇನ್ನುಳಿದ 4 ಮಹಡಿಗಳಲ್ಲಿ ತಲಾ 4 ನ್ಯಾಯಾಲಯಗಳಿದ್ದು, 1 ಕೌಟುಂಬಿಕ ನ್ಯಾಯಾಲಯ, 2 ಜಿಲ್ಲಾ ನ್ಯಾಯಾಲಯ, 2 ಕಾರ್ಮಿಕ ನ್ಯಾಯಾಲಯ, 4 ಸಿವಿಲ್ ಜ್ಯೂನಿಯರ್ ಡಿವಿಜನ್, 2 ಜೆಎಂಎಫ್‍ಸಿ, 3 ಸಿನಿಯರ್ ಡಿವಿಜನ್ ಕೋರ್ಟ್‍ಗಳಿವೆ. ಅಲ್ಲದೇ ದೊಡ್ಡದಾಗ ಕಾನ್ಫರೆನ್ಸ್ ಹಾಲ್, 2 ಕೋರ್ಟ್‍ಗಳಲ್ಲಿ ಬಾರ್ ಅಸೋಸಿಯೇಶನ್, ಲೈಬ್ರರಿ, ಮಹಿಳಾ ವಕೀಲರ ಕೊಠಡಿಗಳು ಇವೆ.
ನ್ಯಾಯಾಧೀಶರ ಧ್ವನಿ ಕೇಳಿಸಲು ಪಬ್ಲಿಕ್ ಅಡ್ರೆಸ್ ಸಿಸ್ಟಮ್ ಅಳವಡಿಸಲಾಗಿದೆ. ಸಂಪೂರ್ಣ ನ್ಯಾಯಾಲಯದ ಸಂಕೀರ್ಣಕ್ಕೆ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಹಾಕಲಾಗಿದೆ. ಕೈದಿಗಳಿಗೆ ಲಾಕಪ್ ಕೊಠಡಿ ಮತ್ತು ಕಕ್ಷಿದಾರರಿಗೆ ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಲಾಗಿದೆ. ಸಂಪೂರ್ಣ ನ್ಯಾಯಾಲಯದಲ್ಲಿ ಒಟ್ಟು ಒಂದು ಸಾವಿರ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ನ್ಯಾಯಾಲಯದಲ್ಲಿ ಅತ್ಯಾಧುನಿಕ ಕ್ಯಾಂಟೀನ್ ವ್ಯವಸ್ಥೆ ಹಾಗೂ ಶೌಚಾಲಯಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೇ ಮಹಿಳೆಯರ ಅನುಕೂಲಕ್ಕಾಗಿ ಮಗುವಿಗೆ ಹಾಲುಣಿಸುವ ಕೊಠಡಿಯನ್ನು ಸಹ ನಿರ್ಮಿಸಲಾಗಿದೆ.
ಮುನ್ನೆಚ್ಚರಿಕಾ ಕ್ರಮಗಳು:
ಕಟ್ಟಡವು ಭೂಕಂಪ ನಿರೋಧಕ ಶಕ್ತಿಯನ್ನು ಹೊಂದಿದ್ದು, ಭೂಮಿ ಕಂಪನದ ಮುನ್ಸೂಚನೆಯನ್ನು ತಿಳಿಸುವ ಅತ್ಯಾಧುನಿಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಅಲ್ಲದೇ ಸಂಕೀರ್ಣದ ಯಾವುದೇ ಭಾಗದಲ್ಲಿ ಹೊಗೆ ಕಾಣಿಸಿಕೊಂಡರೆ, ತಕ್ಷಣವೇ ಮುನ್ಸೂಚನೆನೀಡುವ ವ್ಯವಸ್ಥೆ ಸಿದ್ದಪಡಿಸಲಾಗಿದೆ. ಯಾವುದೇ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡರೆ ತಕ್ಷಣ ಫೈರ್‍ವಾಟರ್‍ಗಳು ಆಟೋಮ್ಯಾಟಿಕ್ ಆಗಿ ಕಾರ್ಯನಿರ್ವಹಿಸುವಂತೆ ಸಿದ್ಧಪಡಿಸಲಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಏಷ್ಯಾದಲ್ಲಿಯೇ ವಿಶೇಷವಾದ ಕೋರ್ಟ್ ಎಂದು ಹುಬ್ಬಳ್ಳಿಯ ನ್ಯಾಯಾಲಯ ಸಂಕೀರ್ಣ ಗುರುತಿಸಿಕೊಂಡಿದೆ.
ಮೈಸೂರು: ದಸರಾದ ಪ್ರಮುಖ ವಿಶೇಷ ಆಕರ್ಷಣೆ ಜಂಬೂ ಸವಾರಿಯಾದರೆ ನಂತರದಲ್ಲಿ ಪ್ರೇಕ್ಷಕರನ್ನು ಆಕರ್ಷಿಸುವುದು ಸ್ತಬ್ಧಚಿತ್ರ ಪ್ರದರ್ಶನ. ಈ ಬಾರಿಯೂ ಪ್ರತಿ ವರ್ಷದಂತೆ ದಸರಾ ಸ್ತಬ್ಧಚಿತ್ರ ಪ್ರದರ್ಶನ ಕೈಗೊಳ್ಳಲಾಗಿದೆ. ಆದರೆ ಬಾರಿಯ ಸ್ತಬ್ಧಚಿತ್ರ ಪ್ರದರ್ಶನದ ಮೇಲೆ ಮುಂದಿನ ವಿಧಾನ ಸಭೆ ಚುನಾವಣೆಯ ಬಿಸಿ ತಟ್ಟಿದ್ದು, ಸರ್ಕಾರದ ಸಾಧನೆಯನ್ನು ಬಿಂಬಿಸುವಂತಹ ಸ್ತಬ್ಧಚಿತ್ರಗಳು ಹೆಚ್ಚಾಗಿ ಕಾಣಿಸಿಕೊಳ್ಳಲಿವೆ.
ಈ ಬಾರಿಯ ಜಂಬೂ ಸವಾರಿಯಲ್ಲಿ ಒಟ್ಟು 40 ಸ್ತಬ್ಧಚಿತ್ರಗಳು ಸಾಗಲಿದ್ದು, ರಾಜ್ಯದ ವಿವಿಧ ಕಲೆ, ಸಂಸ್ಕøತಿಯನ್ನು ಬಿಂಬಿಸುವ ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ತಬ್ಧಚಿತ್ರಗಳು ಸಿದ್ಧವಾಗಿದೆ.
ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಪ್ರಮುಖವಾಗಿ ಬೆಂಗಳೂರು ಜಿಲ್ಲೆಯ ಇಂದಿರಾ ಕ್ಯಾಂಟೀನ್ ಸ್ತಬ್ಧಚಿತ್ರ, ದಾವಣಗೆರೆ ಜಿಲ್ಲೆಯ ಸ್ವಚ್ಛ ಭಾರತ್ ಮಿಷನ್ ಸ್ತಬ್ಧಚಿತ್ರ, ಹಾವೇರಿ ಜಿಲ್ಲೆಯ ಕನಕದಾಸರ ಅರಮನೆ ಬಾಡಾದ ಸ್ತಬ್ಧಚಿತ್ರ ಹಾಗೂ ವಾರ್ತಾ ಇಲಾಖೆಯ ನುಡಿದಂತೆ ನಡೆದಿದ್ದೇವೆ ಅನ್ನೋ ಸರ್ಕಾರದ ಘೋಷವಾಕ್ಯ ಸ್ತಬ್ಧಚಿತ್ರ ಈ ಬಾರಿಯ ವಿಶೇಷವಾಗಿ ಕಾಣಿಸಲಿವೆ.
ಇನ್ನುಳಿದಂತೆ ಹಾಸನ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳು, ರಾಯಚೂರು ಜಿಲ್ಲೆಯ ಚಿಕ್ಕಬೂದುರು ಬಹು ಕಮಾನ್ ಚೆಕ್ ಡ್ಯಾಂ, ಬಾದಾಮಿಯ ಭೂತನಾಥ ದೇವಾಲಯ, ಬೀದರ ಜಿಲ್ಲೆಯ ಮಾಡಿವಾಳ ಮಾಚಿ ದೇವರ ಹೊಂಡ ಬಸವ ಕಲ್ಯಾಣ ಸ್ತಬ್ಧಚಿತ್ರಗಳು ಪ್ರಮುಖ ಆಕರ್ಷಣೆಯಾಗಿವೆ.
ಮೈಸೂರು: ದಸರಾ ಎಂದರೇನೆ ಏನೋ ವಿಶೇಷತೆ ಇರುತ್ತದೆ. ಪ್ರತಿ ಬಾರಿಯ ದಸರಾ ಹಲವು ವಿಶೇಷೆಗಳ ಮೂಲಕ ಗಮನ ಸೆಳೆಯುತ್ತದೆ. ಆದರೆ ಈ ಬಾರಿಯ ದಸರಾ ಆಚರಣೆಯಲ್ಲಿ ಅರಮನೆಯಲ್ಲಿ ವಿಶೇಷ ವ್ಯಕ್ತಿಯೊಬ್ಬರು ಕಾಣಿಸಿಕೊಳ್ಳುತ್ತಿದ್ದಾರೆ.
ಎಲ್ಲರಿಗೂ ತಿಳಿದಿರುವ ಹಾಗೇ ಮೈಸೂರು ಮಹಾರಾಣಿ ತ್ರಿಶಿಕಾ ತುಂಬುಗರ್ಭಿಣಿಯಾಗಿದ್ದು, ಅರಮನೆಯ ದಸರಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಈ ಸಂದರ್ಭವು 56 ವರ್ಷಗಳ ಬಳಿಕ ಬಳಿ ಕೂಡಿ ಬರುತ್ತಿರುವ ಅಪರೂಪದ ಸನ್ನಿವೇಶವಾಗಿದೆ.
ಹಿಂದೆ 1961ರಲ್ಲಿ ಮಹಾರಾಣಿ ತ್ರಿಪುರಸುಂದರ ಅಮ್ಮಣಿಯಾವರು(ಜಯ ಚಾಮರಾಜ ಒಡೆಯರ್ ಮಡದಿ) ದಸರಾ ಸಂದರ್ಭದಲ್ಲಿ ಗರ್ಭಿಣಿ ಆಗಿದ್ದ ಸಮಯದಲ್ಲಿ ಭಾಗವಹಿಸಿದ್ದರು. ಇದಕ್ಕೂ ಮೊದಲು ಅಂದರೆ 1890ರಲ್ಲಿ ಮಹಾರಾಣಿ ವಾಣಿ ವಿಲಾಸ ಅಮ್ಮಣ್ಣಿಯವರು ದಸರಾ ಸಂದರ್ಭದಲ್ಲಿ ಗಭಿರ್ಣಿಯಾಗಿದ್ದರು.