Tag: ವಿಶಾಲ್

  • ಹುಟ್ಟುಹಬ್ಬದ ದಿನವೇ ನಟಿ ಸಾಯಿ ಧನ್ಸಿಕಾ ಜೊತೆ ನಟ ವಿಶಾಲ್ ನಿಶ್ಚಿತಾರ್ಥ

    ಹುಟ್ಟುಹಬ್ಬದ ದಿನವೇ ನಟಿ ಸಾಯಿ ಧನ್ಸಿಕಾ ಜೊತೆ ನಟ ವಿಶಾಲ್ ನಿಶ್ಚಿತಾರ್ಥ

    ಮ್ಮ ಹುಟ್ಟುಹಬ್ಬದ ದಿನವೇ ತಮಿಳು ನಟ ವಿಶಾಲ್ (Vishal) ಅಭಿಮಾನಿಗಳಿಗೆ ಸರ್‌ಪ್ರೈಸ್‌ ನ್ಯೂಸ್ ಕೊಟ್ಟಿದ್ದಾರೆ. ನಟಿ ಸಾಯಿ ಧನ್ಸಿಕಾ (Dhanshika) ಜೊತೆ ಚೆನ್ನೈನಲ್ಲಿ ನಡೆದ ಸರಳ ಸಮಾರಂಭದಲ್ಲಿ ನಿಶ್ಚಿತಾರ್ಥ (Engagement) ಮಾಡಿಕೊಂಡು ಫೋಟೋಸ್‌ಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ನಟ ವಿಶಾಲ್ ಹೆಸರು ಹಿಂದೆ ಹಲವು ನಟಿಯರ ಜೊತೆ ಥಳುಕು ಹಾಕಿಕೊಂಡಿದ್ದರೂ ಮದುವೆವರೆಗೆ ಬಂದಿರಲಿಲ್ಲ. ಇದೀಗ ತಮ್ಮ 48ನೇ ವಯಸ್ಸಿನಲ್ಲಿ ಧನ್ಸಿಕಾ ಜೊತೆ ವಿವಾಹಕ್ಕೆ ಸಜ್ಜಾಗಿದ್ದಾರೆ. ಉಂಗುರ ಬದಲಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

    ಅಸಲಿಗೆ ಆಗಸ್ಟ್ 29ಕ್ಕೆ ವಿವಾಹವನ್ನೇ ಘೋಷಿಸಿದ್ದರು ವಿಶಾಲ್. ಹಿಂದೆ ಯೋಗಿಡಾ ಚಿತ್ರದ ಟ್ರೇಲರ್‌ ರಿಲೀಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ವಿಶಾಲ್ ಧನ್ಸಿಕಾ ಜೊತೆಗಿನ ಪ್ರೀತಿ ಖಚಿತಪಡಿಸಿ ಬಳಿಕ ಮದುವೆ ದಿನಾಂಕ ಘೋಷಿಸಿದ್ದರು. ಆದರೆ ಈ ದಿನ ಸಿನಿ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದೆ. ನಿಶ್ಚಿತಾರ್ಥ ಮಾಡಿಕೊಂಡಿದ್ದರೂ ಮದುವೆ ದಿನವನ್ನು ಜೋಡಿ ಪ್ರಕಟಿಸಿಲ್ಲ. ಇದನ್ನೂ ಓದಿ: ವಿಷ್ಣು ಸಮಾಧಿ ಇದ್ದ ಅಭಿಮಾನ್ ಸ್ಟುಡಿಯೋ ಮುಟ್ಟುಗೋಲು?

    ವಿಶಾಲ್ ಇದುವರೆಗೂ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕರಾಗಿ ಅಭಿನಯಿಸಿದ್ದಾರೆ. ಧನ್ಸಿಕಾ 15 ವರ್ಷಗಳಲ್ಲಿ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕಲಾವಿದರ ಸಂಘ ನಾಡಿಗೇರ್ ಸಂಘದ ಜನರಲ್ ಕಾರ್ಯದರ್ಶಿಯಾಗಿರುವ ವಿಶಾಲ್ ಸಂಘದ ಕಟ್ಟಡ ಸಂಪೂರ್ಣವಾದ ಬಳಿಕ ಮದುವೆಯಾಗುವುದಾಗಿ ಘೋಷಿಸಿದ್ದರು.

  • ವಿಶಾಲ್ ಹುಟ್ಟುಹಬ್ಬದ ದಿನವೇ ಧನ್ಶಿಕಾ ಜೊತೆ ಮದುವೆ- ಕೊನೆಗೂ ಸಿಕ್ತು ಗುಡ್‌ ನ್ಯೂಸ್

    ವಿಶಾಲ್ ಹುಟ್ಟುಹಬ್ಬದ ದಿನವೇ ಧನ್ಶಿಕಾ ಜೊತೆ ಮದುವೆ- ಕೊನೆಗೂ ಸಿಕ್ತು ಗುಡ್‌ ನ್ಯೂಸ್

    ಕಾಲಿವುಡ್ ನಟ ವಿಶಾಲ್ (Vishal) ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ‘ಯೋಗಿದ’ ಚಿತ್ರದ ನಟಿ ಸಾಯಿ ಧನ್ಶಿಕಾ (Sai Dhanshika) ಜೊತೆ ಹಸೆಮಣೆ (Wedding) ಏರಲು ಸಜ್ಜಾಗಿದ್ದಾರೆ. ಈ ಮದುವೆ ಬಗ್ಗೆ ಅಧಿಕೃತವಾಗಿ ಧನ್ಶಿಕಾ, ವಿಶಾಲ್ ಇಬ್ಬರೂ ಅನೌನ್ಸ್ ಮಾಡಿದ್ದಾರೆ. ಆಗಸ್ಟ್‌ನಲ್ಲಿ ಮದುವೆ ಆಗೋದಾಗಿ ಸಿಹಿಸುದ್ದಿ ಕೊಟ್ಟಿದ್ದಾರೆ. ಇದನ್ನೂ ಓದಿ:War 2 Teaser: ಹೃತಿಕ್ ರೋಷನ್ ಮುಂದೆ ವಿಲನ್ ಆಗಿ ಅಬ್ಬರಿಸಿ ಬೊಬ್ಬಿರಿದ ಜ್ಯೂ.ಎನ್‌ಟಿಆರ್

    ಕಳೆದ 15 ವರ್ಷಗಳಿಂದ ಪರಿಚಿತರಾಗಿರುವ ಧನ್ಶಿಕಾ ಜೊತೆ ವಿಶಾಲ್ ಮದುವೆಗೆ ಸಜ್ಜಾಗಿದ್ದಾರೆ. ಈ ಬಗ್ಗೆ ಚೆನ್ನೈನಲ್ಲಿ ನಡೆದ ಧನ್ಶಿಕಾ ನಟನೆಯ ‘ಯೋಗಿದ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶಾಲ್, ನನಗೆ ಧನ್ಶಿಕಾ ಜೊತೆ ಮದುವೆ ಫಿಕ್ಸ್ ಆಗಿದೆ. ಅವರ ತಂದೆ ಕೂಡ ಇಲ್ಲಿಯೇ ಇದ್ದಾರೆ. ಅವರ ಆಶೀರ್ವಾದೊಂದಿಗೆ ನಾನು ಅವಳನ್ನು ಪರಿಚಯಿಸುತ್ತಿದ್ದೇನೆ. ಧನ್ಶಿಕಾ ಅದ್ಭುತ ನಟಿ. ಮದುವೆ ಬಳಿಕವೂ ಆಕೆ ನಟನೆ ಮಾಡುತ್ತಾರೆ ಎಂದಿದ್ದಾರೆ. ಇದನ್ನೂ ಓದಿ:ಲಿಫ್ಟ್‌ನಲ್ಲಿ ಹಠ ಹಿಡಿದು ದರ್ಶನ್ ನಂಬರ್ ಪಡೆದ ಪವಿತ್ರಾಗೌಡ

    ಬಳಿಕ ಸಾಯಿ ಧನ್ಶಿಕಾ ಮಾತನಾಡಿ, ನಮ್ಮ ಮದುವೆ ವಿಷಯ ಈಗಲೇ ತಿಳಿಸಬಾರದು ಅಂದುಕೊಂಡಿದ್ದೇವು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಬೆಳಗ್ಗೆಯಿಂದ ನ್ಯೂಸ್ ವೈರಲ್ ಆಗುತ್ತಿದೆ. ಹೀಗಾಗಿ ಈಗಲೇ ಮದುವೆ ದಿನಾಂಕ ಕೂಡ ಘೋಷಣೆ ಮಾಡುತ್ತೇವೆ. ಕಳೆದ 15 ವರ್ಷಗಳಿಂದಲೂ ಇಬ್ಬರ ನಡುವೆ ಒಳ್ಳೆಯ ಸಂಬಂಧ ಇದೆ. ನಡಿಗರ್ ಸಂಘದ ಕಟ್ಟಡ ಆ.15ರಂದು ಉದ್ಘಾಟನೆ ಮಾಡಲು ಪ್ಲ್ಯಾನ್ ಮಾಡಿದ್ದೇವೆ. ಬಳಿಕ ಆಗಸ್ಟ್ 29ರಂದು ಇಬ್ಬರು ಹೊಸ ಜೀವನಕ್ಕೆ ಕಾಲಿಡಲಿದ್ದೇವೆ ಎಂದು ಹೇಳಿದ್ದಾರೆ.

    ಆಗಸ್ಟ್‌ 29ರಂದು ವಿಶಾಲ್ ಅವರ ಹುಟ್ಟುಹಬ್ಬ. ಅದೇ ದಿನ ವಿವಾಹ ನಿಶ್ಚಯ ಮಾಡಲಾಗಿದೆ. ಈ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

  • ನಡುಗುತ್ತಲೇ ಟ್ರೋಲ್ ಮಾಡಿದವರಿಗೆ ವಿಶಾಲ್ ಟಾಂಗ್

    ನಡುಗುತ್ತಲೇ ಟ್ರೋಲ್ ಮಾಡಿದವರಿಗೆ ವಿಶಾಲ್ ಟಾಂಗ್

    ಮಿಳಿನ ನಟ ವಿಶಾಲ್ (Vishal) ಅವರು ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಕೈ ನಡುಗುತ್ತಿರುವ ಸ್ಥಿತಿ ಕಂಡು  ಫ್ಯಾನ್ಸ್‌ ಆತಂಕ ವ್ಯಕ್ತಪಡಿಸಿದ್ದರು. ಅನಾರೋಗ್ಯದ ವಿಡಿಯೋ ನೋಡಿ ಅನೇಕರು ಕಾಲೆಳೆದಿದ್ದರು. ಈಗ ವಿಶಾಲ್ ಗುಣಮುಖರಾಗಿದ್ದಾರೆ. ಹಾಗಾಗಿ ಸಿನಿಮಾದ ಸಮಾರಂಭವೊಂದರಲ್ಲಿ ತಮ್ಮನ್ನು ಟ್ರೋಲ್ ಮಾಡಿದವರಿಗೆ ಸಖತ್ ಆಗಿ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:ನಾನು ಕನ್ನಡ ಮೀಡಿಯಂ ಸರ್ಕಾರಿ ಶಾಲೆಯಲ್ಲೇ ಓದಿದ್ದು: ರಜನಿಕಾಂತ್

    ‘ಮದಗಜರಾಜ’ (Madha Gaja Raja) ಸಿನಿಮಾದ ಸಕ್ಸಸ್ ಪಾರ್ಟಿಯಲ್ಲಿ ಭಾಗಿಯಾದ ವಿಶಾಲ್ ಅವರು ಮೈಕ್ ಅನ್ನು ಕೈಗೆ ಎತ್ತಿಕೊಳ್ಳುತ್ತಲೇ ಅವರ ಕೈ ನಡುಗಲು ಶುರುವಾಯ್ತು. ಕೂಡಲೇ ಇನ್ನೊಂದು ಕೈಯಿಂದ ನಡುಗುತ್ತಿರುವ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡರು. ಅಯ್ಯೋ ಏನಿದು ನಡುಗುತ್ತಿರುವುದು ನಿಲ್ಲುತ್ತಲೇ ಇಲ್ಲವಲ್ಲ ಎಂದರು. ಮತ್ತೆ ಈ ವಿಡಿಯೋ ಯೂಟ್ಯೂಬ್‌ನಲ್ಲಿ ವೈರಲ್ ಆಗಲ್ಲ ಅಲ್ವಾ? ಎಂದು ತಮಾಷೆಯಾಗಿ ಮಾತನಾಡಿದರು. ಈ ಮೂಲಕ ಟ್ರೋಲ್ ಮಾಡಿದವರಿಗೆ ನಟ ಟಾಂಗ್ ಕೊಟ್ಟಿದ್ದಾರೆ.

     

    View this post on Instagram

     

    A post shared by Raj Creations (@raj_creations._)

    ಇನ್ನೂ 12 ವರ್ಷಗಳ ಹಿಂದೆ ರಿಲೀಸ್ ಆಗಬೇಕಿದ್ದ ಸಿನಿಮಾ ‘ಮದಗಜರಾಜ’ ಇದೀಗ ಜ.12ಕ್ಕೆ ರಿಲೀಸ್ ಆಗಿತ್ತು. ಇದರ ಪ್ರಿ- ರಿಲೀಸ್ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಮೈಕ್ ಹಿಡಿದು ಮಾತನಾಡುವ ವೇಳೆ ವಿಶಾಲ್ ಅವರ ಕೈ ನಡುಗ್ತಾ ಇತ್ತು. ಮೈಕ್ ಹಿಡಿಯಲು ಆಗದಷ್ಟೂ ಕೈ ನಡಗುತ್ತಿತ್ತು. ಮಾತುಗಳು ತೊದಲುತ್ತಿದ್ದವು. ಪದಗಳ ಉಚ್ಛಾರಣೆ ಕೂಡ ಸರಿಯಾಗಿ ಆಗಿರಲಿಲ್ಲ. ತೀವ್ರ ಅಸ್ವಸ್ಥರಾದಂತೆ ಕಂಡು ಬಂದ ವಿಶಾಲ್ ದೇಹ ಶೇಕ್ ಆಗುತ್ತಿತ್ತು. ಅವರ ಕಣ್ಣುಗಳಿಂದ ಕಣ್ಣೀರು ಉಮ್ಮಳಿಸಿತ್ತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಹಾಗಾಗಿ ನಟ ಇದೀಗ ಟ್ರೋಲಿಗೆ ತಿರುಗೇಟು ನೀಡಿದ್ದಾರೆ.

    ಇನ್ನೂ ಅಭಿಮಾನಿಗಳು ಆತಂಕಕ್ಕೆ ಒಳಗಾಗದೇ ಇರಲಿ ಎಂದು ವಿಶಾಲ್ ಕೂಡ ಆರೋಗ್ಯದ ಬಗ್ಗೆ ಕಾರ್ಯಕ್ರಮದಲ್ಲಿ ತಿಳಿಸಿದರು. ನನಗೆ ವೈರಲ್ ಫೀವರ್ ಬಂದಿದೆ ಎಂದು ತಿಳಿಸಿದರು.

  • ಮಾತು ತೊದಲಿದೆ, ಕೈ ನಡುಗುತ್ತಿದೆ: ವಿಶಾಲ್ ಸ್ಥಿತಿ ನೋಡಿ ಫ್ಯಾನ್ಸ್ ಶಾಕ್

    ಮಾತು ತೊದಲಿದೆ, ಕೈ ನಡುಗುತ್ತಿದೆ: ವಿಶಾಲ್ ಸ್ಥಿತಿ ನೋಡಿ ಫ್ಯಾನ್ಸ್ ಶಾಕ್

    ಮಿಳು ನಟ ವಿಶಾಲ್ ‘ಮದಗಜರಾಜ’ (Madha Gaja Raja) ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದ ಕಾರ್ಯಕ್ರಮದಲ್ಲಿ ನಟನನ್ನು ನೋಡಿ ಅಭಿಮಾನಿಗಳು ದಂಗಾಗಿದ್ದಾರೆ. ವಿಶಾಲ್ ಮಾತನಾಡುವಾಗ ತೊದಲಿದ್ದಾರೆ, ಕೈ ನಡುಗುತ್ತಿದೆ ಇದನ್ನು ವಿಶಾಲ್ (Vishal) ಸ್ಥಿತಿ ಕಂಡು ಫ್ಯಾನ್ಸ್ ಆಘಾತಗೊಂಡಿದ್ದಾರೆ. ನಟನ ಹೆಲ್ತ್ ಬಗ್ಗೆ ವೈದ್ಯರು ವರದಿ ನೀಡಿದ್ದಾರೆ. ಇದನ್ನೂ ಓದಿ:ಮಾ.1 ರಿಂದ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಸಿಎಂ

    12 ವರ್ಷಗಳ ಹಿಂದೆ ರಿಲೀಸ್ ಆಗಬೇಕಿದ್ದ ಸಿನಿಮಾ ‘ಮದಗಜರಾಜ’ ಇದೀಗ ಜ.12ಕ್ಕೆ ರಿಲೀಸ್‌ಗೆ ಸಜ್ಜಾಗಿದೆ. ಇದರ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಮೈಕ್ ಹಿಡಿದು ಮಾತನಾಡುವ ವೇಳೆ ಅವರ ಕೈ ನಡುಗ್ತಾ ಇತ್ತು. ಮೈಕ್ ಹಿಡಿಯಲು ಆಗದಷ್ಟೂ ಕೈ ನಡುಗಿದೆ. ಮಾತುಗಳು ತೊದಲುತ್ತಿದ್ದವು. ಪದಗಳ ಉಚ್ಛಾರಣೆ ಕೂಡ ಸರಿಯಾಗಿ ಆಗಿಲ್ಲ. ತೀವ್ರ ಅಸ್ವಸ್ಥರಾದಂತೆ ಕಂಡು ಬಂದ ವಿಶಾಲ್ ದೇಹ ಶೇಕ್ ಆಗ್ತಿದ್ದು, ಅವರ ಕಣ್ಣುಗಳಿಂದ ಕಣ್ಣೀರು ಉಮ್ಮಳಿಸಿತ್ತು. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಅಭಿಮಾನಿಗಳು ಆತಂಕಕ್ಕೆ ಒಳಗಾಗದೇ ಇರಲಿ ಎಂದು ವಿಶಾಲ್ ಕೂಡ ಆರೋಗ್ಯದ ಬಗ್ಗೆ ಕಾರ್ಯಕ್ರಮದಲ್ಲಿ ತಿಳಿಸಿದರು. ನನಗೆ ವೈರಲ್ ಫೀವರ್ ಬಂದಿದೆ. ಅದನ್ನು ಲೆಕ್ಕಿಸದೇ ಸಿನಿಮಾ ಪ್ರಚಾರಕ್ಕೆ ಬಂದಿರೋದಾಗಿ ತಿಳಿಸಿದರು.

    ನಟನ ಆರೋಗ್ಯದ ಕುರಿತು ವೈದ್ಯರು ಹೆಲ್ತ್ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ವಿಶಾಲ್ ವೈರಲ್ ಫೀವರ್‌ನಿಂದ ಬಳಲುತ್ತಿದ್ದಾರೆ. ಅವರಿಗೆ ಬೆಸ್ಟ್ ರೆಸ್ಟ್ ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದು ವರದಿಯಲ್ಲಿದೆ.

    ಇನ್ನೂ ಈ ಸಿನಿಮಾದಲ್ಲಿ ವಿಶಾಲ್ ಜೊತೆ ವರಲಕ್ಷ್ಮಿ ಶರತ್‌ಕುಮಾರ್, ರಣವಿಕ್ರಮ ನಟಿ ಅಂಜಲಿ (Anjali), ಸೋನು ಸೂದ್ (Sonu Sood) ಸೇರಿದಂತೆ ಅನೇಕರು ‘ಮದಗಜರಾಜ’ ಚಿತ್ರದಲ್ಲಿ ನಟಿಸಿದ್ದಾರೆ.

  • ಸೋಲ್‌ಮೇಟ್ ಪರಿಚಯಿಸಿದ ನಟ ವಿಶಾಲ್

    ಸೋಲ್‌ಮೇಟ್ ಪರಿಚಯಿಸಿದ ನಟ ವಿಶಾಲ್

    ಮಿಳು ನಟ ವಿಶಾಲ್ ಇಂದಿಗೂ ಬ್ಯಾಚುಲರ್. ಇವರ ಹೆಸರು ಹಲವು ನಟಿಯರ ಜೊತೆ ಥಳುಕು ಹಾಕಿಕೊಂಡರೂ ಮದುವೆ ಆಗಲಿಲ್ಲ ವಿಶಾಲ್. ಆದರೆ ಇದೀಗ ವಿಶಾಲ್ ಏಕಾಏಕಿ ಸೋಲ್‌ಮೇಟ್ ಪರಿಚಯಿಸಿ ಕುತೂಹಲ ಮೂಡಿಸಿದ್ದಾರೆ. ಗೆಳತಿ ಜೊತೆ ಆತ್ಮೀಯವಾಗಿರುವ ಫೋಟೋ ಪೋಸ್ಟ್ ಮಾಡಿರುವ ವಿಶಾಲ್ ಆಕೆಯನ್ನ ಹಾಡಿ ಹೊಗಳಿದ್ದಾರೆ.

    ವಿಶಾಲ್ ಪರಿಚಯಿಸಿರುವ ಅವರ ಸೋಲ್‌ಮೇಟ್ ಹೆಸರು ವಾಸುಕಿ ಭಾಸ್ಕರ್. ತಮಿಳು ಸಿನಿಮಾ ಇಂಡಸ್ಟ್ರಿಯ ಫೇಮಸ್ ಕಾಸ್ಟ್ಯೂಮ್‍ ಡಿಸೈನರ್. ಸಂಗೀತ ನಿರ್ದೇಶಕ ಇಳಿಯರಾಜಾ ಸಂಬಂಧಿ ಕೂಡ. ಈಕೆ ಹಾಗೂ ವಿಶಾಲ್ ಆಪ್ತರು ಅನ್ನೋದು ಕಾಲಿವುಡ್ ಭಾಗದಲ್ಲಿ ಗೊತ್ತಿರೋದೇ. ಆದರೆ ಇದೀಗ ಗೆಳತಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿದ ಪರಿ ಮಾತ್ರ ವಿಶೇಷವಾಗಿದೆ. ವಾಸುಕಿ ವಿಶಾಲ್ ಮದುವೆಯಾಗುತ್ತಿರಬಹುದೇ ಎಂಬ ಚರ್ಚೆ ಹುಟ್ಟುಹಾಕಿದೆ ಒಂದು ಫೋಟೋ.

     

    ಸದಾ ಒಂದಿಲ್ಲೊಂದು ವಿಚಾರದಲ್ಲಿ ಭಾರೀ ಸುದ್ದಿಯಾಗುವ ತಮಿಳು ನಟ ವಿಶಾಲ್. ಹಲವು ವರ್ಷಗಳಿಂದ ವಾಸುಕಿ ಜೊತೆ ಅನ್ಯೂನ್ಯ ಸ್ನೇಹ ಹೊಂದಿದ್ದಾರೆ. ಆದರೆ ಮದುವೆ ಬಗ್ಗೆ ಈ ಜೋಡಿ ಯೋಚಿಸಿಲ್ಲ ಎಂಬ ಮಾತು ಕಾಲಿವುಡ್ ಗಲ್ಲಿಗಳಲ್ಲಿ ಆಗಾಗ ಓಡಾಡುತ್ತಿರುತ್ತೆ. ಅದಕ್ಕೆ ಸಾಕ್ಷಿ ಅನ್ನುವಂತೆ ಹಲವು ವರ್ಷಗಳಿಂದ ಇಬ್ಬರ ಕಡೆಯಿಂದಲೂ ಮದುವೆ ನ್ಯೂಸ್ ಬರಲೂ ಇಲ್ಲ. ಆದರೆ ಇದೀಗ ವಿಶಾಲ್ ವಾಸುಕಿಯನ್ನ ಸೋಲ್‌ಮೇಟ್ ಎಂದಿದ್ದೇ ಮದುವೆ ಬಗೆಗಿನ ಕುತೂಹಲಕ್ಕೆ ಕಾರಣವಾಗಿದೆ.

  • ಅಣ್ಣಾಮಲೈ ಬಯೋಪಿಕ್‌ನಲ್ಲಿ ತಮಿಳು ನಟ ವಿಶಾಲ್?

    ಅಣ್ಣಾಮಲೈ ಬಯೋಪಿಕ್‌ನಲ್ಲಿ ತಮಿಳು ನಟ ವಿಶಾಲ್?

    ಮ್ಮ ಕಟ್ಟುನಿಟ್ಟಾದ ಕಾರ್ಯ ವೈಖರಿ ಮೂಲಕ ‘ಸಿಂಗಂ ಅಣ್ಣ’ ಎಂದೇ ಬಿರುದು ಪಡೆದಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಅಣ್ಣಾಮಲೈ ಅವರ ಬಯೋಪಿಕ್ ಮಾಡಲು ಕಾಲಿವುಡ್‌ನಲ್ಲಿ ತಯಾರಿ ಮಾಡಲಾಗುತ್ತಿದೆ. ಅಣ್ಣಾಮಲೈ ಪಾತ್ರಕ್ಕೆ ತಮಿಳಿನ ನಟ ವಿಶಾಲ್ (Actor Vishal) ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ಪೊಲೀಸ್ ಕೆಲಸಕ್ಕೆ ರಾಜೀನಾಮೆ ಕೊಟ್ಟ ಬಳಿಕ ರಾಜಕೀಯ ಅಖಾಡದಲ್ಲಿ ಗುರುತಿಸಿಕೊಳ್ತಿದ್ದಾರೆ. ದಕ್ಷ ಅಧಿಕಾರಿ ಆಗಿದ್ದಾಗಲೇ ಹಲವು ಉತ್ತಮ ಕೆಲಸಗಳ ಗಮನ ಸೆಳೆದಿದ್ದ ಸಿಂಗಂ ಅಣ್ಣ ಸದ್ಯ ಲೋಕಸಭಾ ಚುನಾವಣೆ (Loksabha Election 2024) ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:ಹೊಸ ಸಿನಿಮಾದ ಮುಹೂರ್ತ ಸಂಭ್ರಮದಲ್ಲಿ ಜಾನ್ವಿ ಕಪೂರ್

    ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ (Annamalai) ಕುರಿತು ಬಯೋಪಿಕ್ ಮಾಡುವ ಬಗ್ಗೆ ಭಾರೀ ಚರ್ಚೆ ಶುರುವಾಗಿದ್ದು, ಅವರ ಪಾತ್ರಕ್ಕೆ ನಟ ವಿಶಾಲ್ ಸೂಕ್ತ ಎಂದು ಆಯ್ಕೆ ಮಾಡಲಾಗಿದೆ. ಈಗಾಗಲೇ ಪೊಲೀಸ್‌ ಪಾತ್ರದಲ್ಲಿ ಖದರ್‌ ತೋರಿಸಿರುವ ವಿಶಾಲ್‌ಗೆ (Vishal) ಅಣ್ಣಾಮಲೈ ಪಾತ್ರ ಕಷ್ಟವಾಗಲ್ಲ ಎಂಬುದು ಹಲವರ ಅಭಿಪ್ರಾಯ.

    ನಿರ್ಮಾಣ ಸಂಸ್ಥೆಯೊಂದು ಅಣ್ಣಾಮಲೈ ಬಯೋಪಿಕ್ ಮಾಡಲು ಮುಂದಾಗಿದ್ದು, ವಿಶಾಲ್ ಅವರು ಅಣ್ಣಾಮಲೈ ಪಾತ್ರಕ್ಕೆ ಸೂಕ್ತ ಎಂದು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಚಿತ್ರತಂಡ ಕೂಡ ವಿಶಾಲ್‌ರನ್ನು ಸಂಪರ್ಕಿಸಿದೆ ಎನ್ನಲಾಗಿದೆ. ಸದ್ಯದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ. ಅಲ್ಲಿಯವರೆಗೂ ಕಾಯಬೇಕಿದೆ.

  • ನನ್ನ ಕೆಣಕಿದರೆ ನೆಟ್ಟಗೆ ಇರಲ್ಲ: ಸಚಿವನಿಗೆ ವಾರ್ನ್ ಮಾಡಿದ ನಟ ವಿಶಾಲ್

    ನನ್ನ ಕೆಣಕಿದರೆ ನೆಟ್ಟಗೆ ಇರಲ್ಲ: ಸಚಿವನಿಗೆ ವಾರ್ನ್ ಮಾಡಿದ ನಟ ವಿಶಾಲ್

    ಮಿಳು ಚಿತ್ರನಟ ವಿಶಾಲ್ (Vishal) ಕಿಡಿಕಾರಿದ್ದಾರೆ. ತಮ್ಮ ಚಿತ್ರಗಳಿಗೆ ತೊಂದರೆ ನೀಡಲಾಗುತ್ತಿದೆ ಎಂದು ಬಹಿರಂಗವಾಗಿಯೇ ಅವರು ಹೇಳಿಕೆ ನೀಡಿದ್ದಾರೆ. ಹಲವಾರು ಚಿತ್ರಮಂದಿರಗಳಲ್ಲಿ ನನ್ನ ಚಿತ್ರಗಳು ರಿಲೀಸ್ ಆಗುತ್ತಿಲ್ಲ. ಅದಕ್ಕೆ ಕಾರಣ ಏನು ಎನ್ನುವುದು ನನಗೆ ಗೊತ್ತಿದೆ. ಹೀಗೆ ಕೆಣಕಿದರೆ ಸುಮ್ಮನೆ ಇರೋದಿಲ್ಲವೆಂದು ಮಾತನಾಡಿದ್ದಾರೆ.

    ವಿಶಾಲ್ ವಾರ್ನ್ ಮಾಡಿದ್ದು ಬೇರೆ ಯಾರಿಗೂ ಅಲ್ಲ, ಸಚಿವ ಹಾಗೂ ನಟ ಉದಯ್ ನಿಧಿ ಸ್ಟಾಲಿನ್ (Uday Nidhi Stalin) ಗೆ ಎಂದು ಹೇಳಲಾಗುತ್ತಿದೆ. ಈ ಇಬ್ಬರು ಮಧ್ಯ ಕೋಲ್ಡ್ ವಾರ್ ಯಾವತ್ತಿನಿಂದಲೂ ಇದೆ. ವಿಶಾಲ್ ಸಿನಿಮಾಗಳಿಗೆ ಅವರು ತಡೆಯೊಡ್ಡುತ್ತಾರೆ ಎನ್ನುವ ಆರೋಪವೂ ಈ ಹಿಂದೆ ಕೇಳಿ ಬಂದಿತ್ತು. ಈಗಲೂ ಅದನ್ನೇ ಮುಂದುವರೆಸಿದ್ದಾರೆ ಎನ್ನುವುದು ವಿಶಾಲ್ ಆರೋಪ.

    ಸದ್ಯ ವಿಶಾಲ್ ನಟನೆಯ ರತ್ನಂ ಸಿನಿಮಾ ರಿಲೀಸ್ ಆಗಿದೆ. ಜಿಲ್ಲಾ ಕೇಂದ್ರಗಳಲ್ಲೇ ವಿಶಾಲ್ ಚಿತ್ರಕ್ಕೆ ಥಿಯೇಟರ್ ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಜೊತೆಗೆ ಸಿನಿಮಾ ರಂಗದಲ್ಲಿ ಅವರನ್ನು ಹತ್ತಿಕ್ಕುವ ಕೆಲಸವನ್ನೂ ಕೆಲವರು ಮಾಡುತ್ತಿದ್ದಾರಂತೆ. ಹಾಗಾಗಿ ವಿಶಾಲ್ ವಾರ್ನ್ ಮಾಡಿದ್ದಾರೆ.

  • ವಿಜಯ್ ನಂತರ ಮತ್ತೊಂದು ಹೊಸ ಪಕ್ಷ ಕಟ್ಟಲು ಮುಂದಾದ ನಟ

    ವಿಜಯ್ ನಂತರ ಮತ್ತೊಂದು ಹೊಸ ಪಕ್ಷ ಕಟ್ಟಲು ಮುಂದಾದ ನಟ

    ಮಿಳು ನಾಡಿನಲ್ಲಿ (Tamil Nadu) ನಟರ ರಾಜಕೀಯ ಪರ್ವ ಶುರುವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕಮಲ್ ಹಾಸನ್, ರಜನಿಕಾಂತ್ ನಂತರ ದೊಡ್ಡ ಮಟ್ಟದಲ್ಲಿ ರಾಜಕೀಯ ಪ್ರವೇಶ ಮಾಡುವುದರ ಕುರಿತು ಸುದ್ದಿಯಾಗಿದ್ದ ದಳಪತಿ ವಿಜಯ್ ಅವರದ್ದು. ಈಗಾಗಲೇ ವಿಜಯ್ ರಾಜಕೀಯ ಅಖಾಡಕ್ಕೂ ಇಳಿದಾಯಿತು. ಈ ನಡುವೆ ಮತ್ತೋರ್ವ ನಟ ಕೂಡ ರಾಜಕಾರಣಕ್ಕೆ ಪ್ರವೇಶ ಮಾಡಲಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿತ್ತು. ಅದು ನಿಜವಾಗುತ್ತಿದೆ.

    ಹೌದು, ನಟ ವಿಶಾಲ್ (Vishal) ಕೂಡ ರಾಜಕಾರಣಕ್ಕೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗಿತ್ತು. ರಾಜಕಾರಣವನ್ನು ಗುರಿಯಾಗಿಟ್ಟುಕೊಂಡು ಅವರು ಜನಪರ ಕೆಲಸ ಮಾಡುತ್ತಿದ್ದಾರೆ ಎನ್ನುವ ಚರ್ಚೆ ಕೂಡ ನಡೆದಿತ್ತು. ಅವರ ತಾಯಿ ಹೆಸರಿನಲ್ಲಿ ಫೌಂಡೇಶನ್, ಅಭಿಮಾನಿಗಳ ಕ್ಲಬ್ ಹೆಸರಿನಲ್ಲಿ ಸಮಾಜ ಸೇವೆ ಹೀಗೆ ವಿಶಾಲ್ ಮಾಡುತ್ತಿರುವುದಕ್ಕೆ ರಾಜಕಾರಣವನ್ನು ತಳುಕು ಹಾಕಲಾಗಿತ್ತು.

    ಈ ಎಲ್ಲ ಕುರಿತಂತೆ ವಿಶಾಲ್ ಪ್ರತಿಕ್ರಿಯೆ ನೀಡಿದ್ದರು. ರಾಜಕೀಯ ಕನಸು ಇಟ್ಟುಕೊಂಡು ತಾವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿಲ್ಲ. ನನ್ನ ಖುಷಿಗಾಗಿ ಇವೆಲ್ಲವನ್ನೂ ಮಾಡುತ್ತಿರುವೆ. ಅದಕ್ಕೂ ರಾಜಕಾರಣಕ್ಕೂ ತಳುಕು ಹಾಕಬೇಡಿ ಎಂದು ಅವರು ಪತ್ರ ಬರೆದಿದ್ದರು.

    ಸದ್ಯಕ್ಕೆ ರಾಜಕಾರಣದ ಬಗ್ಗೆ ಯೋಚನೆ ಮಾಡಿಲ್ಲ. ಮುಂದೆ ಏನು ಅಂತ ಗೊತ್ತಿಲ್ಲ. ಸಮಾಜ ಸೇವೆ ಎಂದಿನಂತೆ ಮುಂದುವರೆಯಲಿದೆ. ತಾಯಿ ಹೆಸರಿನಲ್ಲಿ ಮತ್ತು ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ ಎಂದಿದ್ದರು. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ವಿಶಾಲ್ ರಾಜಕೀಯ ಕ್ಷೇತ್ರಕ್ಕೆ ಬರಲಿದ್ದಾರಂತೆ. ತಮ್ಮದೇ ಪಕ್ಷ ಕಟ್ಟಿ ಆ ಮೂಲಕ ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

     

    ಈಗಾಗಲೇ ಕಮಲ್, ವಿಜಯ್ ತಮ್ಮದೇ ಆದ ಪಕ್ಷ ಕಟ್ಟಿ (Politics Party) ಆ ಮೂಲಕ  ರಾಜಕಾರಣದಲ್ಲಿ ಸಕ್ರೀಯರಾಗಿದ್ದಾರೆ. ಆ ಸಾಲಿಗೆ ವಿಶಾಲ್ ಕೂಡ ಸೇರಿಕೊಳ್ಳುತ್ತಿದ್ದಾರೆ.

  • ಕಲಾವಿದರ ಸಂಘಕ್ಕೆ 1 ಕೋಟಿ ರೂ. ದೇಣಿಗೆ ನೀಡಿದ ವಿಜಯ್

    ಕಲಾವಿದರ ಸಂಘಕ್ಕೆ 1 ಕೋಟಿ ರೂ. ದೇಣಿಗೆ ನೀಡಿದ ವಿಜಯ್

    ಕಾಲಿವುಡ್ ಸ್ಟಾರ್ ದಳಪತಿ ವಿಜಯ್ (Thalapathy Vijay) ಅವರು ತಮ್ಮದೇ ಸ್ವಂತ ಪಕ್ಷ ಕಟ್ಟಿ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ಸದ್ಯ ಒಪ್ಪಿಕೊಂಡಿರುವ ಸಿನಿಮಾ ಪೂರ್ತಿ ಮಾಡಿ ಇನ್ಮುಂದೆ ಫುಲ್ ಟೈಮ್ ಜನ ಸೇವೆ ಮಾಡುವುದಕ್ಕೆ ಸಮಯ ಮೀಸಲಿಡುತ್ತಾರೆ. ಹೀಗಿರುವಾಗ ಕಲಾವಿದರ ಸಂಘವೊಂದಕ್ಕೆ ವಿಜಯ್ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ.

    ತಮಿಳುನಾಡಿನ ‘ನಡಿಗರ್ ಸಂಘಂ’ ಎಂಬ ಕಲಾವಿದರ ಸಂಘದ ಕಟ್ಟಡವೊಂದು ನಿರ್ಮಾಣವಾಗುತ್ತಿದೆ. ಆ ಕಟ್ಟದ ನಿರ್ಮಾಣಕ್ಕೆ ಬರೋಬ್ಬರಿ 1 ಕೋಟಿ ರೂ. ದೇಣಿಗೆಯನ್ನು ವಿಜಯ್ ನೀಡಿದ್ದಾರೆ. ಈ ಕುರಿತು ವಿಶಾಲ್ (Vishal) ಸಾಮಾಜಿಕ ಜಾಲತಾಣದಲ್ಲಿ ವಿಜಯ್ ನಡೆಗೆ ಶ್ಲಾಘಿಸಿದ್ದಾರೆ. ಇದನ್ನೂ ಓದಿ:ಜ್ಯೂನಿಯರ್ ಎನ್.ಟಿ.ಆರ್ ಸಿನಿಮಾಗಿಂತ ಮುಂಚೆ ಸಲಾರ್ 2

    ‘ನಡಿಗರ್ ಸಂಘಂ’ ಕಟ್ಟಡದ ಕೆಲಸಕ್ಕೆ 1 ಕೋಟಿ ದೇಣಿಗೆ ನೀಡಿದ ನನ್ನ ನೆಚ್ಚಿನ ಸಹೋದರ ವಿಜಯ್‌ಗೆ ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಬರೆದುಕೊಂಡಿದ್ದಾರೆ. ಈ ಸಂಘಕ್ಕೆ ವಿಶಾಲ್ ಅಧ್ಯಕ್ಷರಾಗಿದ್ದಾರೆ. ವಿಜಯ್ ಜೊತೆಗಿನ ಫೋಟೋ ಶೇರ್ ಮಾಡಿ ವಿಶಾಲ್ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ:ಗೋವಾದಲ್ಲಿ ಯಶ್ : ಸದ್ದಿಲ್ಲದೇ ಶುರುವಾಯ್ತಾ ‘ಟಾಕ್ಸಿಕ್’ ಶೂಟಿಂಗ್

    ವಿಜಯ್ ನಟನೆಯ ಕಡೆಯ 2 ಸಿನಿಮಾಗಳ ಮೇಲೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆ ಇದೆ. ವೆಂಕಟ್ ಪ್ರಭು ಜೊತೆ ವಿಜಯ್ ಸಿನಿಮಾ ಮಾಡ್ತಿದ್ದಾರೆ. ವಿಜಯ್ 69ನೇ ಸಿನಿಮಾಗೆ ಜವಾನ್ ಡೈರೆಕ್ಟರ್ ಅಟ್ಲೀ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಈ ಸಿನಿಮಾಗೆ ಸಮಂತಾ ನಾಯಕಿಯಾಗಿ ನಟಿಸಲಿದ್ದಾರೆ.

  • ಸದ್ಯಕ್ಕೆ ರಾಜಕೀಯಕ್ಕೆ ಬರಲ್ಲ, ಜನಪರ ಕೆಲಸ ನಿಲ್ಲಲ್ಲ: ನಟ ವಿಶಾಲ್

    ಸದ್ಯಕ್ಕೆ ರಾಜಕೀಯಕ್ಕೆ ಬರಲ್ಲ, ಜನಪರ ಕೆಲಸ ನಿಲ್ಲಲ್ಲ: ನಟ ವಿಶಾಲ್

    ಮಿಳು ನಾಡಿನಲ್ಲಿ ನಟರ ರಾಜಕೀಯ ಪರ್ವ ಶುರುವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕಮಲ್ ಹಾಸನ್, ರಜನಿಕಾಂತ್ ನಂತರ ದೊಡ್ಡ ಮಟ್ಟದಲ್ಲಿ ರಾಜಕೀಯ ಪ್ರವೇಶ ಮಾಡುವುದರ ಕುರಿತು ಸುದ್ದಿಯಾಗಿದ್ದ ದಳಪತಿ ವಿಜಯ್ ಅವರದ್ದು. ಈಗಾಗಲೇ ವಿಜಯ್ ರಾಜಕೀಯ ಅಖಾಡಕ್ಕೂ ಇಳಿದಾಯಿತು. ಈ ನಡುವೆ ಮತ್ತೋರ್ವ ನಟ ಕೂಡ ರಾಜಕಾರಣಕ್ಕೆ ಪ್ರವೇಶ ಮಾಡಲಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿತ್ತು.

    ಹೌದು, ನಟ ವಿಶಾಲ್ (Vishal) ಕೂಡ ರಾಜಕಾರಣಕ್ಕೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗಿತ್ತು. ರಾಜಕಾರಣವನ್ನು ಗುರಿಯಾಗಿಟ್ಟುಕೊಂಡು ಅವರು ಜನಪರ ಕೆಲಸ ಮಾಡುತ್ತಿದ್ದಾರೆ ಎನ್ನುವ ಚರ್ಚೆ ಕೂಡ ನಡೆದಿತ್ತು. ಅವರ ತಾಯಿ ಹೆಸರಿನಲ್ಲಿ ಫೌಂಡೇಶನ್, ಅಭಿಮಾನಿಗಳ ಕ್ಲಬ್ ಹೆಸರಿನಲ್ಲಿ ಸಮಾಜ ಸೇವೆ ಹೀಗೆ ವಿಶಾಲ್ ಮಾಡುತ್ತಿರುವುದಕ್ಕೆ ರಾಜಕಾರಣವನ್ನು ತಳುಕು ಹಾಕಲಾಗಿತ್ತು.

    ಈ ಎಲ್ಲ ಕುರಿತಂತೆ ವಿಶಾಲ್ ಪ್ರತಿಕ್ರಿಯೆ ನೀಡಿದ್ದಾರೆ. ರಾಜಕೀಯ ಕನಸು ಇಟ್ಟುಕೊಂಡು ತಾವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿಲ್ಲ ಎಂದು ಅವರು ಹೇಳಿದ್ದಾರೆ. ನನ್ನ ಖುಷಿಯಾಗಿ ಇವೆಲ್ಲವನ್ನೂ ಮಾಡುತ್ತಿರುವೆ. ಅದಕ್ಕೂ ರಾಜಕಾರಣಕ್ಕೂ ತಳುಕು ಹಾಕಬೇಡಿ ಎಂದು ಅವರು ಪತ್ರ ಬರೆದಿದ್ದಾರೆ.

     

    ಸದ್ಯಕ್ಕೆ ರಾಜಕಾರಣದ ಬಗ್ಗೆ ಯೋಚನೆ ಮಾಡಿಲ್ಲ. ಮುಂದೆ ಏನು ಅಂತ ಗೊತ್ತಿಲ್ಲ. ಸಮಾಜ ಸೇವೆ ಎಂದಿನಂತೆ ಮುಂದುವರೆಯಲಿದೆ. ತಾಯಿ ಹೆಸರಿನಲ್ಲಿ ಮತ್ತು ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ ಎಂದಿದ್ದಾರೆ.