Tag: ವಿಶಾಖನ್

  • ಒಂದೇ ಸಾಲಿನಲ್ಲಿ ಮದ್ವೆಯ ಬಗ್ಗೆ ರಜಿನಿಕಾಂತ್ ಮಗಳು ಟ್ವೀಟ್

    ಒಂದೇ ಸಾಲಿನಲ್ಲಿ ಮದ್ವೆಯ ಬಗ್ಗೆ ರಜಿನಿಕಾಂತ್ ಮಗಳು ಟ್ವೀಟ್

    ಚೆನ್ನೈ: ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಎರಡನೇ ಪುತ್ರಿ ಸೌಂದರ್ಯ ಅವರು ಸೋಮವಾರ ಉದ್ಯಮಿ ವಿಶಾಖನ್ ವನಗಮುಡಿ ಜೊತೆ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಸೌಂದರ್ಯ ಅವರು ಮದುವೆಯ ಬಗ್ಗೆ ಒಂದೇ ಒಂದು ಸಾಲಿನಲ್ಲಿ ಟ್ವೀಟ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ.

    ಸೌಂದರ್ಯ ಅವರು ತಮ್ಮ ಟ್ವೀಟರ್ ನಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದು, ಈ ವೇಳೆ ತಮ್ಮ ಮದುವೆಯ ಬಗ್ಗೆ ,”ಮಿಸ್ಟರ್, ಮಿಸೆಸ್, ನನ್ನ ಕುಟುಂಬ, ನಾವು ಒಂದಾದೆವು, ವೇದ್ ವಿಶಾಖನ್‍ಸೌಂದರ್ಯ” ಎಂಬ ಹ್ಯಾಶ್ ಟ್ಯಾಗ್‍ಗಳನ್ನು ಬರೆದು ಒಂದೇ ಸಾಲಿನಲ್ಲಿ ಟ್ವೀಟ್ ಮಾಡಿದ್ದಾರೆ. ಜೊತೆಗೆ ವಿಶಾಖನ್ ತಾಳಿ ಕಟ್ಟುತ್ತಿರುವ ಸಂಭ್ರಮದ ಕ್ಷಣದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

    ಚೆನ್ನೈನ ಲೀಲಾ ಪ್ಯಾಲೇಸ್ ಹೋಟೆಲ್‍ನಲ್ಲಿ ಸೌಂದರ್ಯ ಅವರು ವಿಶಾಖನ್ ಜೊತೆ ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದಿದ್ದರು. ಇವರ ಮದುವೆಗೆ ಗಣ್ಯರು, ಆಪ್ತರು, ಸಿನಿಮಾ ತಾರೆಯರು ಆಗಮಿಸಿದ್ದರು. ಇಂದು ಸಂಜೆ ಚೆನ್ನೈನಲ್ಲಿ ಔತಣಕೂಟ ಏರ್ಪಡಿಸಲಾಗಿದೆ.

    ಈ ಹಿಂದೆ 2010ರಲ್ಲಿ ಸೌಂದರ್ಯ ಉದ್ಯಮಿ ಅಶ್ವಿನ್ ಅವರನ್ನು ವರಿಸಿದ್ದರು. ಈ ದಂಪತಿಗೆ ಗಂಡು ಮಗು ಕೂಡ ಇದೆ. ಆದರೆ ಕಾರಣಾಂತರದಿಂದ 2017 ರಲ್ಲಿ ವಿಚ್ಛೇದನ ಪಡೆದಿದ್ದರು. ವಿಶಾಖನ್ ಕೂಡ ಕನಿಕಾ ಎಂಬವರ ಜೊತೆ ಮದುವೆಯಾಗಿದ್ದರು. ಇಬ್ಬರ ಮಧ್ಯೆ ದಾಂಪತ್ಯ ಜೀವನ ಸರಿ ಹೋಗದ ಕಾರಣ ಅವರು ವಿಚ್ಛೇದನ ಪಡೆದುಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv