Tag: ವಿವೋ

  • 27 ಸಾವಿರ ವಿವೋ ಫೋನ್‌ಗಳ ರಫ್ತು ತಡೆ ಹಿಡಿದ ಭಾರತ

    27 ಸಾವಿರ ವಿವೋ ಫೋನ್‌ಗಳ ರಫ್ತು ತಡೆ ಹಿಡಿದ ಭಾರತ

    ನವದೆಹಲಿ: ವಿದೇಶಕ್ಕೆ ರಫ್ತು ಆಗಬೇಕಿದ್ದ ಚೀನಾದ ವಿವೋ(Vivo) ಕಂಪನಿಯ 27 ಸಾವಿರ ಫೋನ್‌ಗಳನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ(Delhi Airport) ಕಂದಾಯ ಗುಪ್ತಚರ ವಿಭಾಗ(Revenue Intelligence Unit) ತಡೆ ಹಿಡಿದಿದೆ.

    ಡಿವೈಸ್‌ ಮಾದರಿಗಳು ಮತ್ತು ಅವುಗಳ ಮೌಲ್ಯವನ್ನು ತಪ್ಪಾಗಿ ಘೋಷಿಸಿದ ಆರೋಪದ ಹಿನ್ನೆಲೆಯಲ್ಲಿ ಡಿ.2 ರಿಂದ ಸುಮಾರು ಒಟ್ಟು 15 ದಶಲಕ್ಷ ಡಾಲರ್‌(123.73 ಕೋಟಿ ರೂ.)ಮೌಲ್ಯದ ಸರಕನ್ನು ತಡೆಹಿಡಿಯಲಾಗಿದೆ ಎಂದು ವರದಿಯಾಗಿದೆ.

    ತಡೆ ಹಿಡಿದ ಪ್ರಕರಣದ ಬಗ್ಗೆ ಹಣಕಾಸು ಸಚಿವಾಲಯ ಮತ್ತು ವಿವೋ ಕಂಪನಿ ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಇದನ್ನೂ ಓದಿ: ತೆರಿಗೆ ಪಾವತಿ ತಪ್ಪಿಸಲು 62,476 ಕೋಟಿ ರೂ.ಗಳನ್ನ ಚೀನಾಕ್ಕೆ ಕಳುಹಿಸಿದ ವಿವೋ- ED ತನಿಖೆ ವೇಳೆ ಅಕ್ರಮ ಬಯಲು

    ವಿವೋ ಕಮ್ಯುನಿಕೇಷನ್ಸ್ ಟೆಕ್ನಾಲಜಿ ಕಂಪನಿ ಭಾರತ ಘಟಕದಿಂದ ಈ ಫೋನ್‌ಗಳನ್ನು ತಯಾರಿಸಲಾಗಿದೆ. ವಿವೋ ಮೊದಲ ಬಾರಿಗೆ ಭಾರತ-ನಿರ್ಮಿತ ಸ್ಮಾರ್ಟ್‌ಫೋನ್‌ಗಳನ್ನು ನವೆಂಬರ್ ಆರಂಭದಲ್ಲಿ ಸೌದಿ ಅರೇಬಿಯಾ ಮತ್ತು ಥೈಲ್ಯಾಂಡ್‌ ಮಾರುಕಟ್ಟೆಗಳಿಗೆ ರಫ್ತು ಮಾಡಿತ್ತು.

    ವಿವೋ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.
    ಇದನ್ನೂ ಓದಿ: ಇಡಿ ದಾಳಿ ಬೆನ್ನಲ್ಲೇ ದೇಶ ತೊರೆದ ವಿವೋ ನಿರ್ದೇಶಕರು 

    ಗಲ್ವಾನ್‌ ಕಣಿವೆಯಲ್ಲಿ ಘರ್ಷಣೆ ನಡೆದ ಬಳಿಕ ಚೀನಾ ಕಂಪನಿಗಳ ಮೇಲೆ ಕೇಂದ್ರ ಹದ್ದಿನ ಕಣ್ಣಿಟ್ಟಿದೆ. ಸರ್ಕಾರ ಚೀನಿ ಆಪ್‌ಗಳನ್ನು ನಿಷೇಧಗೊಂಡ ಬಳಿಕ ಚೀನಿ ಕಂಪನಿಗಳ ಮೇಲೆ ಆದಾಯ ತೆರಿಗೆ, ಇಡಿ ದಾಳಿ ಮಾಡಿ ಅಕ್ರಮ ಪತ್ತೆ ಹಚ್ಚಿತ್ತು.

    Live Tv
    [brid partner=56869869 player=32851 video=960834 autoplay=true]

  • ವಿರಾಟ್ ಕೊಹ್ಲಿಯ ಜಾಹೀರಾತು ನಿಲ್ಲಿಸಿದ ವಿವೋ

    ವಿರಾಟ್ ಕೊಹ್ಲಿಯ ಜಾಹೀರಾತು ನಿಲ್ಲಿಸಿದ ವಿವೋ

    ಮುಂಬೈ: ಚೀನಾದ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ ವಿವೋ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ತನಿಖೆಯನ್ನು ತೀವ್ರಗೊಳಿಸಿದ ಬೆನ್ನಲ್ಲೇ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಇದ್ದ ಜಾಹೀರಾತನ್ನು ಪ್ರಸಾರ ಮಾಡದಿರಲು ಕಂಪನಿ ನಿರ್ಧರಿಸಿದೆ.

    2021ರ ಏಪ್ರಿಲ್ ತಿಂಗಳಲ್ಲಿ ವಿವೋ ಕಂಪನಿ ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ವಿರಾಟ್ ಕೊಹ್ಲಿಯನ್ನು ನೇಮಕ ಮಾಡಿತ್ತು. ಆ ಬಳಿಕ ಕೊಹ್ಲಿ ವಿವೋ ಸಂಸ್ಥೆಯ ಪ್ರಚಾರ, ಈವೆಂಟ್‍ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಸೇರಿದಂತೆ ಜಾಹೀರಾತುಗಳಲ್ಲಿ ಕೊಹ್ಲಿ ಕಾಣಿಸಿಕೊಳ್ಳುತ್ತಿದ್ದರು. ಈ ನಡುವೆ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವೋ ಮೊಬೈಲ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಹಾಗೂ ಇದರ ಸಹಭಾಗಿಯಾಗಿರುವ ವಿವಿಧ 23 ಕಂಪನಿಗಳ ಮೇಲೆ ಇಡಿ ಕೆಲ ದಿನಗಳ ಹಿಂದೆ ದಾಳಿ ಮಾಡಿತ್ತು. ಇದಾದ ಬಳಿಕ ಕಂಪನಿಯ ವಿರುದ್ಧ ತನಿಖೆ ಪೂರ್ಣಗೊಳ್ಳುವ ವರೆಗೆ ಕೊಹ್ಲಿ ಇರುವ ಜಾಹೀರಾತನ್ನು ಪ್ರಸಾರ ಮಾಡದಿರಲು ವಿವೋ ತೀರ್ಮಾನಿಸಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ತೆರಿಗೆ ಪಾವತಿ ತಪ್ಪಿಸಲು 62,476 ಕೋಟಿ ರೂ.ಗಳನ್ನ ಚೀನಾಕ್ಕೆ ಕಳುಹಿಸಿದ ವಿವೋ- ED ತನಿಖೆ ವೇಳೆ ಅಕ್ರಮ ಬಯಲು

    ಈ ಬಗ್ಗೆ ವಿವೋ ಆಪ್ತ ಮೂಲಗಳ ಪ್ರಕಾರ ಇಡಿ ತನಿಖೆ ಪೂರ್ಣಗೊಳ್ಳುವವರೆಗೆ ಕೊಹ್ಲಿ ಇರುವ ಜಾಹೀರಾತು ಮತ್ತು ಪ್ರಚಾರ ಚಟುವಟಿಕೆಗಳನ್ನು ತಡೆಹಿಡಿಯಲು ನಿರ್ಧರಿಸಲಾಗಿದೆ. ಇದೊಂದು ಕಾರಣವಾದರೆ. ಇನ್ನೊಂದು ಕೊಹ್ಲಿ ವಿವೋ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಭಾರತದಲ್ಲಿ ಅಪಸ್ವರ ಕೇಳಿಬರುತ್ತಿದೆ. ಟೀಂ ಇಂಡಿಯಾ ಆಟಗಾರರೇ ಈ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ಸ್ಥಳೀಯ ಮಾಧ್ಯಮವೊಂದಕ್ಕೆ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ – ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್‍ನಲ್ಲಿ ಕಾಣಿಸಿಕೊಂಡ ಧೋನಿ

    ಇದಲ್ಲದೆ ಈ ಆರೋಪದ ಬಳಿಕ ಕೊಹ್ಲಿ ಇರುವ ಜಾಹೀರಾತು ಪ್ರಸಾರಗೊಂಡರೆ ಕೊಹ್ಲಿ ಇಮೇಜ್‍ಗೆ ಧಕ್ಕೆ ಬರುವ ಸಾಧ್ಯತೆ ಇರುವುದರಿಂದ ತಾತ್ಕಾಲಿಕವಾಗಿ ಜಾಹೀರಾತು ಪ್ರಸಾರ ಮಾಡದಿರಲು ಕಂಪನಿ ನಿರ್ಧರಿಸಿದೆ. ಜೊತೆಗೆ ಕೊಹ್ಲಿ ಭಾರತ ತಂಡದಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವುದರಿಂದಾಗಿ ವಿವೋ ಈ ರೀತಿ ಮಾಡಿದೆ ಎಂಬ ಮಾತು ಕೇಳಿ ಬರುತ್ತಿದೆ.

    ಏನಿದು ಆರೋಪ:
    ಚೀನಾ ಮೂಲದ ಮೊಬೈಲ್ ತಯಾರಿಕಾ ಸಂಸ್ಥೆ ವಿವೋ ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳಲು ತನ್ನ ಕಂಪನಿ ವಹಿವಾಟಿನ ಶೇ.50 ಪ್ರತಿಶತದಷ್ಟು ಅಂದರೆ ಸುಮಾರು 62,476 ಕೋಟಿ ಹಣವನ್ನು ಚೀನಾಕ್ಕೆ ಕಳುಹಿಸಿಕೊಟ್ಟಿದೆ ಎಂದು ED ತಿಳಿಸಿತ್ತು. ಬಳಿಕ ಇಡಿ ವಿವೋ ಮತ್ತು 23 ಸಂಬಂಧಿತ ಕಂಪನಿಗಳಿಗೆ ಸೇರಿದ 48 ನಿವೇಶನಗಳಲ್ಲಿ ಶೋಧ ಕಾರ್ಯ ನಡೆಸಿತ್ತು.

    Live Tv
    [brid partner=56869869 player=32851 video=960834 autoplay=true]

  • ಇಡಿ ದಾಳಿ ಬೆನ್ನಲ್ಲೇ ದೇಶ ತೊರೆದ ವಿವೋ ನಿರ್ದೇಶಕರು 

    ಇಡಿ ದಾಳಿ ಬೆನ್ನಲ್ಲೇ ದೇಶ ತೊರೆದ ವಿವೋ ನಿರ್ದೇಶಕರು 

    ನವದೆಹಲಿ: ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ವಿರುದ್ಧಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ತನಿಖೆಯನ್ನು ತೀವ್ರಗೊಳಿಸಿದ ಬೆನ್ನಲ್ಲೇ ವಿವೋ ನಿರ್ದೇಶಕರಾದ ಝೆಂಗ್‌ಶೆನ್ ಔ ಮತ್ತು ಜಾಂಗ್ ಜೀ ಅವರು ಭಾರತದಿಂದ ಪರಾರಿಯಾಗಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.

    ಇಡಿ ಮಂಗಳವಾರ ವಿವೋ ಮತ್ತು ಸಂಬಂಧಿತ ಸಂಸ್ಥೆಗಳ 44 ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್‌ಗಳ ಪ್ರಕರಣ ದಾಖಲಿಸಿದ ಇಡಿ ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ದಕ್ಷಿಣ ಭಾರತದ ಹಲವು ಕಡೆಗಳಲ್ಲಿ ದಾಳಿ ನಡೆಸಿದೆ.

    ಗ್ರ್ಯಾಂಡ್‌ ಪ್ರಾಸ್ಪೆಕ್ಟ್‌ ಇಂಟರ್‌ನ್ಯಾಷನಲ್‌ ಕಮ್ಯೂನಿಕೇಷನ್‌ ಪ್ರೈವೆಟ್‌ ಲಿಮಿಟೆಡ್‌ ಜಮ್ಮು ಕಾಶ್ಮೀರದಲ್ಲಿ ವಿವೋ ಫೋನ್‌ಗಳನ್ನು ಮಾರಾಟ ಮಾಡುತ್ತಿದೆ. ಈ ಕಂಪನಿಯ ಸುಳ್ಳು ದಾಖಲೆಗಳನ್ನು ನೀಡಿ ನೋಂದಣಿ ಮಾಡಿಕೊಂಡಿರುವ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಧರ್ಮದ ಬಗ್ಗೆ ಮಾತನಾಡಲು ಸಾಧ್ಯವಿಲ್ಲದ ಭಾರತದಲ್ಲಿ ಬದುಕಲು ಬಯಸುವುದಿಲ್ಲ: ಮೆಹುವಾ

    ಇಬ್ಬರು ಕಂಪನಿ ಸೆಕ್ರೆಟರಿ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಒಬ್ಬರಿಗೆ ಈ ವಿಚಾರ ಗೊತ್ತಿದ್ದರೂ ಸುಳ್ಳು ದಾಖಲೆ ಸೃಷ್ಟಿಸಿ ಅಕ್ರಮಕ್ಕೆ ಸಾಥ್‌ ನೀಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಗ್ರ್ಯಾಂಡ್‌ ಪ್ರಾಸ್ಪೆಕ್ಟ್‌ ಕಂಪನಿ ಕೆವೈಸಿ ಮಾಹಿತಿಯನ್ನು ಸರಿಯಾಗಿ ನೀಡಿಲ್ಲ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

    ಇಡಿ ದಾಳಿ ಬಳಿಕ ವಿವೋ ಕಂಪನಿ ತನಿಖೆಗೆ ಸಹಕಾರ ನೀಡಲಾಗುವುದು ಎಂದು ತಿಳಿಸಿತ್ತು. ಆದರೆ ಈಗ ಕಂಪನಿಯ ನಿರ್ದೇಶಕರು ಪರಾರಿಯಾಗಿರುವುದು ಹಲವು ಅನುಮಾನಗಳನ್ನು ಹುಟ್ಟಿಹಾಕಿದೆ.

    Live Tv
    [brid partner=56869869 player=32851 video=960834 autoplay=true]

  • ವಿವೋ ಐಪಿಎಲ್ ಅಂತ್ಯ ಇನ್ಮುಂದೆ ಟಾಟಾ ಐಪಿಎಲ್

    ವಿವೋ ಐಪಿಎಲ್ ಅಂತ್ಯ ಇನ್ಮುಂದೆ ಟಾಟಾ ಐಪಿಎಲ್

    ಮುಂಬೈ: 15ನೇ ಆವೃತ್ತಿ ಐಪಿಎಲ್ ಆರಂಭಕ್ಕೂ ಮುನ್ನ ಐಪಿಎಲ್‍ನ ಶೀರ್ಷಿಕೆ ಪ್ರಾಯೋಜಕತ್ವ ಪಡೆದುಕೊಂಡಿದ್ದ ವಿವೋ ಜೊತೆಗಿನ ಒಪ್ಪಂದವನ್ನು ಕೊನೆಗೊಳಿಸಿ ಟಾಟಾ ತೆಕ್ಕೆಗೆ ಶೀರ್ಷಿಕೆ ಪ್ರಯೋಜಕತ್ವವನ್ನು ಬಿಸಿಸಿಐ ನೀಡಿದೆ.

    ಇಂದು ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ವಿವೋ ಜೊತೆಗಿನ ಶೀರ್ಷಿಕೆ ಪ್ರಾಯೋಜಕತ್ವವನ್ನು ರದ್ದು ಪಡಿಸುವ ನಿರ್ಣಯ ಕೈಗೊಳ್ಳಲಾಯಿತು. ಬಳಿಕ ಬಿಸಿಸಿಐ ಹೊಸ ಶೀರ್ಷಿಕೆ ಪ್ರಾಯೋಜಕತ್ವವನ್ನು ಭಾರತದ ಉದ್ಯಮರಂಗದಲ್ಲಿ ಹೆಸರುವಾಸಿಯಾಗಿರುವ ಟಾಟಾ ಗ್ರೂಪ್‍ಗೆ ನೀಡಿದೆ.

    ಕೆಲ ವರ್ಷಗಳಿಂದ ವಿವೋ ಐಪಿಎಲ್‍ನ ಶೀರ್ಷಿಕೆ ಪ್ರಾಯೋಜಕತ್ವವನ್ನು ಪಡೆದುಕೊಂಡಿತ್ತು. ಇದೀಗ 2022 ಮತ್ತು 2023 ಅವಧಿಯಲ್ಲಿ ವಿವೋದೊಂದಿಗಿನ ಒಪ್ಪಂದ ಕೊನೆಗೊಳ್ಳುವುದರಿಂದ ಹೊಸ ಶೀರ್ಷಿಕೆ ಪ್ರಾಯೋಜಕತ್ವವನ್ನು ಟಾಟಾ ಪಡೆದುಕೊಂಡಿದೆ. ಹಾಗಾಗಿ 15ನೇ ಆವೃತ್ತಿ ಐಪಿಎಲ್‍ನ್ನು ಟಾಟಾ ಐಪಿಎಲ್ ಎಂದು ಕರೆಯಲಾಗುತ್ತದೆ.

    2018ರಲ್ಲಿ ಚೀನಾ ಮೂಲದ ಸ್ಮಾರ್ಟ್ ಫೋನ್ ಕಂಪನಿ ವಿವೋ 440 ಕೋಟಿ ರೂ.ಗೆ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವವನ್ನು ಪಡೆದುಕೊಂಡಿತು. ಆ ಬಳಿಕ 2020ರ ಐಪಿಎಲ್ ವೇಳೆಗೆ ಭಾರತ ಹಾಗೂ ಚೀನಾ ನಡುವಿನ ಗಡಿ ವಿವಾದದಿಂದಾಗಿ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವದಿಂದ ವಿವೋ ಹಿಂದೆ ಸರಿದಿತ್ತು. ಆಗ ಡ್ರೀಮ್ 11 ಶೀರ್ಷಿಕೆ ಪ್ರಾಯೋಜಕತ್ವವನ್ನು ಪಡೆದುಕೊಂಡಿತ್ತು. ಬಳಿಕ 14ನೇ ಆವೃತ್ತಿ ವೇಳೆ ಮತ್ತೆ ವಿವೋ ಶೀರ್ಷಿಕೆ ಪ್ರಾಯೋಜಕತ್ವ ಪಡೆದಿತ್ತು. ಒಪ್ಪಂದದ ಪ್ರಕಾರ 2023ರ ವರೆಗೆ ವಿವೋ ಶೀರ್ಷಿಕೆ ಪ್ರಾಯೋಜಕತ್ವದಲ್ಲಿ ಮುಂದುವರಿಯ ಬೇಕಿತ್ತು. ಆದರೆ ಇದೀಗ ಐಪಿಎಲ್ ಆಡಳಿತ ಮಂಡಳಿ ನಿರ್ಧಾರದಂತೆ 2022 ಮತ್ತು 2023ರ ಅವಧಿಯ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವವನ್ನು ಟಾಟಾ ಗ್ರೂಪ್‍ಗೆ ನೀಡಿದೆ.

    ಈ ಬಾರಿಯ ಐಪಿಎಲ್‍ನ ಮೆಗಾ ಹರಾಜು ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆಸಲು ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಕೊಂಡಿದೆ ಎಂದು ವರದಿಯಾಗಿದೆ.

  • ಆಪಲ್ ಹಿಂದಿಕ್ಕಿ ವಿಶ್ವದಲ್ಲೇ ನಂಬರ್ 2 ಪಟ್ಟಕ್ಕೆ ಏರಿದ ಕ್ಸಿಯೋಮಿ

    ಆಪಲ್ ಹಿಂದಿಕ್ಕಿ ವಿಶ್ವದಲ್ಲೇ ನಂಬರ್ 2 ಪಟ್ಟಕ್ಕೆ ಏರಿದ ಕ್ಸಿಯೋಮಿ

    – ವಿಶ್ವದ ಸ್ಮಾರ್ಟ್‍ಫೋನ್ ಮಾರುಕಟ್ಟೆಯಲ್ಲಿ ಐಫೋನ್ ಮಾರಾಟ ಕುಸಿತ
    – ಸ್ಯಾಮ್‍ಸಂಗ್ ಮೊದಲ ಸ್ಥಾನದಲ್ಲೇ ಮುಂದುವರಿಕೆ

    ಬೀಜಿಂಗ್:  ವಿಶ್ವದ ಸ್ಮಾರ್ಟ್‍ಫೋನ್ ಮಾರುಕಟ್ಟೆಯಲ್ಲಿ ಆಪಲ್ ಕಂಪನಿಯನ್ನು ಸೋಲಿಸಿ ನಂಬರ್ 2 ಪಟ್ಟಕ್ಕೆ ಕ್ಸಿಯೋಮಿ ಏರಿದೆ.

    Canalys ಸಂಸ್ಥೆ ವಿಶ್ವದ ಸ್ಮಾರ್ಟ್‍ಫೋನ್ ಮಾರುಕಟ್ಟೆಯನ್ನು ಅಧ್ಯಯನ ಮಾಡಿ ಈ ವರದಿಯನ್ನು ಪ್ರಕಟಿಸಿದೆ. 2ನೇ ತ್ರೈಮಾಸಿಕದಲ್ಲಿ ವಿಶ್ವದ ಸ್ಮಾರ್ಟ್‍ಫೋನ್ ಮಾರುಕಟ್ಟೆ ಶೇ. 12ರಷ್ಟು ಪ್ರಗತಿ ಸಾಧಿಸಿದೆ.

    ವಿಶ್ವದ ಮಾರುಕಟ್ಟೆಯಲ್ಲಿ ಆಪಲ್ ಶೇ.14ರಷ್ಟು ಪಾಲನ್ನು ಹೊಂದಿದ್ದರೆ, ಕ್ಸಿಯೋಮಿ ಶೇ.17ರಷ್ಟು ಪಾಲನ್ನು ಹೊಂದಿದೆ. ಸ್ಯಾಮ್‍ಸಂಗ್ ಶೇ.19ರಷ್ಟು ಪಾಲನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲೇ ಮುಂದುವರಿದಿದೆ.

    ವರ್ಷದಿಂದ ವರ್ಷಕ್ಕೆ ಕ್ಸಿಯೋಮಿ ಮಾರುಕಟ್ಟೆ ಪಾಲು ಹೆಚ್ಚಾಗುತ್ತಿದೆ. ಕ್ಸಿಯೋಮಿ ಶೇ.83ರಷ್ಟು ಬೆಳವಣಿಗೆ ಸಾಧಿಸಿದರೆ ಸ್ಯಾಮ್‍ಸಂಗ್ ಶೇ.15, ಆಪಲ್ ಶೇ.1 ರಷ್ಟು ಪ್ರಗತಿ ಸಾಧಿಸಿದೆ. ಚೀನಾದ ಒಪ್ಪೋ ಮತ್ತು ವಿವೋ ಕಂಪನಿಗಳು ಕ್ರಮವಾಗಿ 4 ಮತ್ತು 5ನೇ ಸ್ಥಾನವನ್ನು ಪಡೆದುಕೊಂಡಿದೆ.

    ಕಡಿಮೆ ಬೆಲೆಯ ಮತ್ತು ಮಿಡ್ ರೇಂಜ್ ಫೋನ್ ಮಾರಾಟದಿಂದ ಕ್ಸಿಯೋಮಿ ಈ ಸಾಧನೆ ಮಾಡಿದೆ. ಎರಡನೇ ಸ್ಥಾನಕ್ಕೆ ಏರಿದ್ದರೂ ಆಪಲ್ ಫೋನ್ ಗಳಿಗೆ ಹೋಲಿಸಿದರೆ ಕ್ಸಿಯೋಮಿ ಫೋನ್ ಶೇ.75ರಷ್ಟು ಬೆಲೆ ಕಡಿಮೆಯಿದೆ.

    https://twitter.com/manukumarjain/status/1415897728706519041

    ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಮಾರುಕಟ್ಟೆಯನ್ನು ಗುರಿಯಾಗಿಸಿ ಫೋನ್ ತಯಾರಿಸುತ್ತಿದ್ದ ಕ್ಸಿಯೋಮಿ ಈಗ ಯುರೋಪ್ ಮತ್ತು ಅಮೆರಿಕನ್ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿದೆ. ಈ ನಿಟ್ಟಿನಲ್ಲಿ ಎಂಐ 11 ಆಲ್ಟ್ರಾ, ಎಂಐ ಮಿಕ್ಸ್ ಫೋಲ್ಡ್ ಫೋನ್ ಬಿಡುಗಡೆ ಮಾಡಿದೆ.

    ವಿಶ್ವದ ಸ್ಮಾರ್ಟ್‍ಫೋನ್ ಕಂಪನಿಗಳಲ್ಲಿ ಒಂದಾಗಿದ್ದ ಹುವಾವೇ ಮೇಲೆ ಅಮೆರಿಕ ನಿಷೇಧ ವಿಧಿಸಿದ್ದು ಕ್ಸಿಯೋಮಿಗೆ ವರದಾನವಾಗಿದೆ. ಸಾಫ್ಟ್ ವೇರ್ ಮತ್ತು ಚಿಪ್ ಪೂರೈಕೆಗೆ ತಡೆಯಾಗಿದ್ದರಿಂದ ಹುವಾವೇ ಸ್ಪರ್ಧೆಯಿಂದ ಹಿಂದೆ ಸರಿದರೆ ಕ್ಸಿಯೋಮಿ ನಿಧನವಾಗಿ ಬೆಳವಣಿಗೆಯಾಗಿ ಈಗ ವಿಶ್ವದ ಎರಡನೇ ದೊಡ್ಡ ಸ್ಮಾರ್ಟ್‍ಫೋನ್ ಕಂಪನಿಯಾಗಿ ಹೊರಹೊಮ್ಮಿದೆ. ಇದನ್ನೂ ಓದಿ: ಚೀನಾಗೆ ಸ್ಯಾಮ್‍ಸಂಗ್ ಶಾಕ್ – ನೋಯ್ಡಾಕ್ಕೆ ಡಿಸ್‍ಪ್ಲೇ ಘಟಕ ಸ್ಥಳಾಂತರ

    ಈ ವರ್ಷದ ಮಾರ್ಚ್ ನಲ್ಲಿ ಕ್ಸಿಯೋಮಿ ಎಲೆಕ್ಟ್ರಿಕ್ ವಾಹನ ಉದ್ಯಮದಲ್ಲಿ ತೊಡಗುವುದಾಗಿ ಘೋಷಣೆ ಮಾಡಿತ್ತು. ಈ ಸಂಬಂಧ ಮುಂದಿನ 10 ವರ್ಷದಲ್ಲಿ 10 ಶತಕೋಟಿ ಡಾಲರ್ ಬಂಡವಾಳ ಹೂಡುವುದಾಗಿ ಹೇಳಿದೆ.

  • ಐಪಿಎಲ್ ರದ್ದಾದ್ರೆ ಕೋಟಿ ಕೋಟಿ ನಷ್ಟ – ಯಾರಿಗೆ ಎಷ್ಟು? ಇಲ್ಲಿದೆ ಲೆಕ್ಕ

    ಐಪಿಎಲ್ ರದ್ದಾದ್ರೆ ಕೋಟಿ ಕೋಟಿ ನಷ್ಟ – ಯಾರಿಗೆ ಎಷ್ಟು? ಇಲ್ಲಿದೆ ಲೆಕ್ಕ

    ಮುಂಬೈ: ಕೊರೊನಾ ವೈರಸ್‍ನಿಂದಾಗಿ ಪ್ರಪಂಚದಾದ್ಯಂತದ ಕ್ರಿಕೆಟ್, ಫುಟ್ಬಾಲ್ ಸೇರಿದಂತೆ ಎಲ್ಲಾ ಟೂರ್ನಿಗಳನ್ನು ಮುಂದೂಡಲಾಗುತ್ತಿದೆ ಅಥವಾ ರದ್ದುಗೊಳಿಸಲಾಗುತ್ತಿದೆ. ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್ ಕೂಡ ಏಪ್ರಿಲ್ 15 ರವರೆಗೆ ಮುಂದೂಡಲ್ಪಟ್ಟಿದೆ. ಆದರೆ ಈ ವರ್ಷ ಟೂರ್ನಿ ನಡೆಯುತ್ತದೋ ಇಲ್ಲವೋ ಎಂಬುದು ಇನ್ನೂ ನಿರ್ಧರಿಸಲಾಗಿಲ್ಲ.

    ಬಿಸಿಸಿಐ ಮತ್ತು ಎಲ್ಲಾ ಐಪಿಎಲ್ ಫ್ರಾಂಚೈಸಿಗಳು ಶತಾಯಗತಾಯ ಟೂರ್ನಿ ನಡೆಸಿಯೇ ತೀರಬೇಕು ಎಂದು ಪ್ಲಾನ್ ರೂಪಿಸುತ್ತಿದ್ದಾರೆ. ಯಾಕೆ ಗೊತ್ತಾ? ಒಂದು ವೇಳೆ ಟೂರ್ನಿ ರದ್ದಾದರೆ ಬಿಸಿಸಿಐ ಹಾಗೂ ಫ್ರಾಂಚೈಸಿಗಳು ಭಾರೀ ನಷ್ಟವಾಗಲಿದೆ. ಈ ವರ್ಷ ಐಪಿಎಲ್ ನಡೆಯದಿದ್ದರೆ ಪ್ರಸಾರದ ಹಕ್ಕು ಪಡೆದಿರುವ ಸ್ಟಾರ್ ಸ್ಪೋರ್ಟ್ಸ್ ವಾಹಿನಿಗೆ ಬಿಸಿಸಿಐ 4 ಸಾವಿರ ಕೋಟಿ ರೂ.ಗಳ ನಷ್ಟವನ್ನು ಭರಿಸಬೇಕಾಗುತ್ತದೆ.

    ಬಿಸಿಸಿಐ ಒಂದು ಆವೃತ್ತಿಯ ಪಂದ್ಯಗಳ ನೇರ ಪ್ರಸಾರಕ್ಕಾಗಿ 3,269 ಕೋಟಿ ರೂ. ಬ್ರಾಡ್‍ಕಾಸ್ಟರ್ ನಿಂದ ಪಡೆಯುತ್ತದೆ. ಸ್ಟಾರ್ ಸ್ಪೋರ್ಟ್ಸ್ ಐಪಿಎಲ್ ಪ್ರಸಾರ ಹಕ್ಕನ್ನು 5 ವರ್ಷಗಳ ಕಾಲ 16,347.5 ಕೋಟಿ ರೂ.ಗಳಿಗೆ ಖರೀದಿಸಿದೆ. ಒಂದು ಪಂದ್ಯಕ್ಕೆ 55 ಕೋಟಿ ರೂ. ಅಂದ್ರೆ ಪ್ರತಿ ಎಸೆತಕ್ಕೆ 23.3 ಲಕ್ಷ ರೂಪಾಯಿ ಲೆಕ್ಕಾಚಾರವಾಗುತ್ತದೆ.

    ಬ್ರಾಡ್‍ಕಾಸ್ಟರ್ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ 3,300 ಕೋಟಿ ರೂ.ಗಳ ಡಿಜಿಟಲ್ ಜಾಹೀರಾತು ಆದಾಯವನ್ನು ಗಳಿಸುತ್ತದೆ ಎಂದು ನಿರೀಕ್ಷಿಸಿತ್ತು. ಈಗಾಗಲೇ ಶೇ.90ರಷ್ಟು ಜಾಹೀರಾತು ಸ್ಲಾಟ್‍ಗಳನ್ನು ಮಾರಾಟವಾಗಿದೆ.

    ಡಿಜಿಟಲ್ ಪ್ಲಾಟ್‍ಫಾರ್ಮ್ ನಲ್ಲಿ ಪಂದ್ಯವನ್ನು ಪ್ರಸಾರ ಮಾಡಲು ಬಿಸಿಸಿಐ ಫೇಸ್‍ಬುಕ್‍ನೊಂದಿಗೆ 399 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿದೆ. ಪಂದ್ಯಾವಳಿ ನಡೆಯದಿದ್ದರೆ, ಮಂಡಳಿಯು ನಷ್ಟವನ್ನು ಅನುಭವಿಸಲಿದೆ.

    ಆಟಗಾರರಿಗೆ ನೀಡಲು ಫ್ರ್ಯಾಂಚೈಸಿ 85 ಕೋಟಿ ಪಡೆಯುತ್ತದೆ. ಐಪಿಎಲ್ ನಡೆಯದಿದ್ದರೆ, 8 ತಂಡಗಳು ಆಟಗಾರರಿಗೆ 680 ಕೋಟಿ ಪಾವತಿಸಬೇಕಾಗಿಲ್ಲ. ಹೀಗಾಗಿ ಆಟಗಾರರು ಈ ಬಾರಿಯ ಸಂಭಾವನೆ ಕಳೆದುಕೊಳ್ಳುತ್ತಾರೆ.

    ಐಪಿಎಲ್ ರದ್ದಾದರೆ ಫ್ರಾಂಚೈಸಿಗಳು ಪ್ರತಿ ಪಂದ್ಯದಿಂದ 2.5 ರಿಂದ 4 ಕೋಟಿ ಕಳೆದುಕೊಳ್ಳಬಹುದು ಎಂಬ ಲೆಕ್ಕಾಚಾರವಿದೆ. ತಂಡಗಳು ಹೋರ್ಡಿಂಗ್, ಜರ್ಸಿ ಜಾಹೀರಾತಿನಿಂದ ಪ್ರತಿ ಪಂದ್ಯಕ್ಕೂ ಕಂಪನಿಗಳಿಂದ ಭಾರೀ ಮೊತ್ತದ ಹಣ ಪಡೆಯುತ್ತವೆ. ಪಂದ್ಯ ನಡೆಯದಿದ್ದರೆ ಅವರು ಹಣವನ್ನು ಕಳೆದುಕೊಳ್ಳಲಿದೆ.

    ವಿವೋ ಐದು ವರ್ಷಗಳ ಕಾಲ 2,199 ಕೋಟಿ ರೂ.ಗಳಿಗೆ ಐಪಿಎಲ್ ಪ್ರಶಸ್ತಿ ಪ್ರಾಯೋಜಕತ್ವವನ್ನು ಹೊಂದಿದೆ. ಅಂದ್ರೆ ಒಂದು ಆವೃತ್ತಿಗೆ ಸುಮಾರು 439 ಕೋಟಿ ರೂ. ಪಾವತಿಸಲಾಗುತ್ತದೆ. ಹೀಗಾಗಿ ಪಂದ್ಯ ನಡೆಯದೆ ಹೋದಲ್ಲಿ ವಿವೋ 439 ಕೋಟಿ ರೂ. ಕಡಿತಗೊಳಿಸಲಿದೆ.

    ಅಂತರರಾಷ್ಟ್ರೀಯ ಪಂದ್ಯಗಳ ಪ್ರಸಾರದಿಂದ ಬಿಸಿಸಿಐ ಕೋಟಿಗಟ್ಟಲೇ ಹಣ ಗಳಿಸುತ್ತದೆ. ಪ್ರತಿ ಪಂದ್ಯಕ್ಕೂ ಮಂಡಳಿಗೆ 60.1 ಕೋಟಿ ರೂ. ಹರಿದು ಬರುತ್ತದೆ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಏಕದಿನ ಪಂದ್ಯಗಳನ್ನು ರದ್ದುಗೊಳಿಸಿದ್ದರಿಂದ ಬಿಸಿಸಿಐಗೆ 120.2 ಕೋಟಿ ರೂ. ನಷ್ಟವಾಗಿದೆ.

  • 6.22 ಇಂಚಿನ ಸ್ಕ್ರೀನ್, 3,260 ಎಂಎಎಚ್ ಬ್ಯಾಟರಿಯ ವಿವೋ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣ ವೈಶಿಷ್ಟ್ಯಗಳೇನು?

    6.22 ಇಂಚಿನ ಸ್ಕ್ರೀನ್, 3,260 ಎಂಎಎಚ್ ಬ್ಯಾಟರಿಯ ವಿವೋ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣ ವೈಶಿಷ್ಟ್ಯಗಳೇನು?

    ನವದೆಹಲಿ: ಭಾರತದಲ್ಲಿ ಸೆಲ್ಫಿ ಸ್ಮಾರ್ಟ್ ಫೋನ್ ಎಂದೇ ಹೆಸರುವಾಸಿಯಾಗಿರುವ ವಿವೋ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ತನ್ನ ನೂತನ ವೈ81 ಆವೃತ್ತಿಯನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.

    ವಿವೋ ಕಂಪೆನಿಯು ಈ ಮೊದಲು ತನ್ನ ನೂತನ ವೈ81 ಆವೃತ್ತಿಯನ್ನು ಜೂನ್ ತಿಂಗಳಲ್ಲಿ ವಿಯಟ್ನಾಂನಲ್ಲಿ ಬಿಡುಗಡೆಮಾಡಿತ್ತು. ಈಗ ಇದೇ ಮಾದರಿಯನ್ನು ಭಾರತದಲ್ಲಿ ಪರಿಚಯಿಸಿದೆ. ವಿವೋ ಹೆಚ್ಚಾಗಿ ಸೆಲ್ಫಿ ಪ್ರಿಯರಿಗಾಗಿ ಉತ್ತಮ ಗುಣಮಟ್ಟ ಹಾಗೂ ಬಜೆಟ್ ಗಾತ್ರದಲ್ಲಿ ಸ್ಮಾರ್ಟ್ ಫೋನ್‍ಗಳನ್ನು ಪರಿಚಯಿಸುತ್ತಾ ಬಂದಿದೆ.

    ವೈ81 ಸ್ಮಾರ್ಟ್ ಫೋನ್ ನಲ್ಲಿ ಸೆಲ್ಫಿಗಾಗಿ 5ಎಂಪಿ ಸ್ಮಾರ್ಟ್ ಹೆಚ್‍ಡಿಆರ್ ಕ್ಯಾಮೆರಾ, ಹಿಂದುಗಡೆ 13ಎಂಪಿ ಕ್ಯಾಮೆರಾವನ್ನು ನೀಡಿದೆ. ಕಪ್ಪು ಹಾಗೂ ಬಂಗಾರದ ಬಣ್ಣಗಳಲ್ಲಿ ಈ ಸ್ಮಾರ್ಟ್ ಫೋನ್ ಸಿಗುತ್ತದೆ.

    ಬೆಲೆ ಎಷ್ಟು?
    ನೂತನ ವಿವೋ ವೈ81 ಸ್ಮಾರ್ಟ್ ಫೋನ್ 3ಜಿಬಿ ರ‍್ಯಾಮ್/32 ಜಿಬಿ ಆತಂರಿಕ ಮೆಮೊರಿಗೆ 12,999 ರೂಪಾಯಿ ನಿಗದಿಯಾಗಿದೆ. ವಿವೋ ಆನ್‍ಲೈನ್ ಸ್ಟೋರ್, ಅಮೇಜಾನ್, ಫ್ಲಿಪ್‍ಕಾರ್ಟ್ ಹಾಗೂ ವಿವೋ ಆಫ್‍ಲೈನ್ ಸ್ಟೋರ್ ಗಳಲ್ಲಿ ಲಭ್ಯವಿರಲಿದೆ.

    ಗುಣ ವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ: 155.1 x 75 x 7.8 ಮಿ.ಮೀ. ಗಾತ್ರ, 146.5 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) ವಿತ್ ಮೆಮೊರಿ ಕಾರ್ಡ್ ಸ್ಲಾಟ್ ಸೌಲಭ್ಯ, 6.22 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(720X1520 ಪಿಕ್ಸೆಲ್, 19:9 ಅನುಪಾತ, 270ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.1 (ಓರಿಯೋ), ಮೀಡಿಯಾಟೆಕ್ 6762 ಆಕ್ಟಾ ಕೋರ್ ಪ್ರೋಸೆಸರ್, 2.0 ಗೀಗಾಹರ್ಟ್ಸ್ ಸ್ಪೀಡ್, 3ಜಿಬಿ ರ‍್ಯಾಮ್/32 ಜಿಬಿ ಆಂತರಿಕ ಮೆಮೊರಿ ಹೊಂದಿದ್ದು, 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ಹೊಂದಿದೆ.

    ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
    ಮುಂಭಾಗ 5ಎಂಪಿ ಎಚ್‍ಡಿ ಕ್ಯಾಮೆರಾ, ಹಿಂಭಾಗ 13 ಎಂಪಿ ಆಟೋ ಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ ಫುಲ್ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಹೊಂದಿದೆ. ಅಲ್ಲದೇ ಗೊರಿಲ್ಲಾ ಸ್ಕ್ರೀನ್ ಪ್ರೊಟೆಕ್ಷನ್, ಫಿಂಗರ್ ಪ್ರಿಂಟ್ ಸೆನ್ಸರ್, ಫೇಸ್ ಅನ್‍ಲಾಕಿಂಗ್ ಹಾಗೂ 3,260 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಸೌಲಭ್ಯವನ್ನು ಹೊಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿವೋ ಫೋನಿನ ಬೆಲೆ ದಿಢೀರ್ ಭಾರೀ ಇಳಿಕೆ

    ವಿವೋ ಫೋನಿನ ಬೆಲೆ ದಿಢೀರ್ ಭಾರೀ ಇಳಿಕೆ

    ನವದೆಹಲಿ: ವಿವೋದ ನೂತನ ವಿ9 ಆವೃತ್ತಿಯ ಸ್ಮಾರ್ಟ್ ಫೋನ್ ಬೆಲೆ ದಿಢೀರ್ ಇಳಿಕೆಯಾಗಿದೆ. ಐಪಿಎಲ್ ವೇಳೆ ಏಪ್ರಿಲ್ ತಿಂಗಳಿನಲ್ಲಿ ಫುಲ್ ಸ್ಕ್ರೀನ್ ಹೊಂದಿರುವ ಫೋನ್ 19,990 ರೂ.ಗೆ ಬಿಡುಗಡೆಯಾಗಿತ್ತು. ಈಗ ಮೂರು ಸಾವಿರ ರೂ. ಕಡಿಮೆಯಾಗಿದ್ದು 16,990 ರೂ. ನಿಗದಿಯಾಗಿದೆ.

    ವಿವೋ ವಿ9 ಮೊಬೈಲ್ ಸದ್ಯ ಆನ್‍ಲೈನ್ ನ www.tatacliq.com ವೆಬ್‍ಸೈಟ್‍ ಹಾಗೂ ಆಫ್ ಲೈನ್ ನಲ್ಲಿ 16,990 ರೂಪಾಯಿಗಳಿಗೆ ಲಭ್ಯವಿದ್ದು, ಗೋಲ್ಡ್, ಬ್ಲಾಕ್, ಮ್ಯಾಟ್ ರೆಡ್ ಮತ್ತು ಸಫೈರ್ ಬ್ಲೂ ಬಣ್ಣಗಳಲ್ಲಿ ಸಿಗಲಿದೆ.

    ವಿವೋ 9ಎನ್ ಸ್ಮಾರ್ಟ್ ಫೋನ್ ನ ಗುಣ ವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ: 154.8 x 75.1 x 7.9 ಮಿ.ಮೀ. ಗಾತ್ರ, 150 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) ವಿತ್ ಮೆಮೊರಿ ಕಾರ್ಡ್ ಸ್ಲಾಟ್ ಸೌಲಭ್ಯ, 6.3 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(1080X2280 ಪಿಕ್ಸೆಲ್, 19:9 ಅನುಪಾತ, 400ಪಿಪಿಐ)

    ಪ್ಲಾಟ್‍ ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.1 (ಓರಿಯೋ), ಕ್ವಾಲಕಂ ಪ್ರೋ, ಸ್ನಾಪ್ ಡ್ರಾಗನ್ 626, ಆಕ್ಟಾ ಕೋರ್ ಪ್ರೊಸೆಸರ್, 2.2 ಗೀಗಾಹಟ್ರ್ಸ್ ಸ್ಪೀಡ್, 4ಜಿಬಿ RAM/64 ಜಿಬಿ ಆಂತರಿಕ ಮೆಮೊರಿ ಹೊಂದಿದ್ದು, 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ಹೊಂದಿದೆ.

    ಕ್ಯಾಮೆರಾ:
    ಮುಂಭಾಗ 24ಎಂಪಿ ಎಚ್‍ಡಿ ಕ್ಯಾಮೆರಾ, ಹಿಂಭಾಗ 16+5 ಎಂಪಿ ಡ್ಯುಯಲ್ ಕ್ಯಾಮೆರಾ, ಆಟೋ ಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಫೋಕಸ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್.

    ಇತರೆ ಫೀಚರ್ ಗಳು: ಸ್ಕ್ರೀನ್ ನಲ್ಲಿಯೇ ಫಿಂಗರ್ ಪ್ರಿಂಟ್ ಸೆನ್ಸರ್ ಹೊಂದಿದ್ದು, ಫೋಟೋ ಅನ್ ಲಾಕಿಂಗ್, 3,260 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಸೌಲಭ್ಯವನ್ನು ಹೊಂದಿದೆ.

    https://www.youtube.com/watch?v=tMNheU3NffY