Tag: ವಿವೇಕ್ ಹೆಬ್ಬಾರ್

  • ಶಿವರಾಮ್ ಹೆಬ್ಬಾರ್ ಪುತ್ರ ಕಾಂಗ್ರೆಸ್ ಸೇರ್ಪಡೆ

    ಶಿವರಾಮ್ ಹೆಬ್ಬಾರ್ ಪುತ್ರ ಕಾಂಗ್ರೆಸ್ ಸೇರ್ಪಡೆ

    ಕಾರವಾರ: ವಿಧಾನಸಭಾ ಚುನಾವಣೆ ಬಳಿಕ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ (Shivaram Hebbar) ಪುತ್ರ ವಿವೇಕ್ ಹೆಬ್ಬಾರ್ (Vivek Hebbar) ಗುರುವಾರ ಕಾಂಗ್ರೆಸ್ (Congress) ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

    ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ಕಾರ್ಯಕರ್ತರ ಸಮ್ಮುಖದಲ್ಲಿ ವಿವೇಕ್ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಕೆಪಿಸಿಸಿ ಉಪಾಧ್ಯಕ್ಷ ಐವಾನ್ ಡಿಸೋಜಾ ಅವರು ವಿವೇಕ್ ಹೆಬ್ಬಾರ್ ಅವರನ್ನು ತಮ್ಮ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ನೂರಾರು ಬೆಂಬಲಿಗರ ಜೊತೆ ವಿವೇಕ್ ಹೆಬ್ಬಾರ್ ‘ಕೈ’ ಹಿಡಿದಿದ್ದಾರೆ. ಇದನ್ನೂ ಓದಿ: ಚುನಾವಣಾಧಿಕಾರಿಗಳು ಕಾಂಗ್ರೆಸ್ ಕೈಗೊಂಬೆಯಾಗಿದ್ದಾರೆ: ನಿಖಿಲ್ ಕುಮಾರಸ್ವಾಮಿ ಕಿಡಿ

    ಕಾಂಗ್ರೆಸ್ ಸೇರ್ಪಡೆ ಬಳಿಕ ಮಾತನಾಡಿದ ವಿವೇಕ್ ಹೆಬ್ಬಾರ್, ಕಾರ್ಯಕರ್ತರ ವಲಯದಲ್ಲಿ ಬಹಳ ದಿನದಿಂದ ವ್ಯತ್ಯಾಸಗಳು, ತಾರತಮ್ಯಗಳು ಇತ್ತು. ಹೀಗಾಗಿ ನಮ್ಮ ಕಾರ್ಯಕರ್ತರಲ್ಲಿ ಆಕ್ರೋಶ ಇತ್ತು. ಯಾರ ಹತ್ರ ಹೇಳಬೇಕು ಯಾರ ಹತ್ರ ಕೇಳಬೇಕು ಎಲ್ಲಾ ಕೇಳಿದ ನಂತರವೂ ನಮ್ಮ ಕಾರ್ಯಕರ್ತರಿಗೆ ನ್ಯಾಯ ಒದಗಿಸಲು ನಮ್ಮ ಬಳಿ ಆಗದ ಕಾರಣ ಅನಿವಾರ್ಯ ಪರಿಸ್ಥಿತಿಯಲ್ಲಿ ನಮ್ಮ ಕಾರ್ಯಕರ್ತರ ಹಿತದೃಷ್ಟಿಯಿಂದ ಕಾಂಗ್ರೆಸ್‌ಗೆ ಸೇರುವ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ಬಿಜೆಪಿ ಪಕ್ಷದಲ್ಲಿ ಸ್ಥಾನಮಾನ, ಬೇರೆ ರೀತಿಯಲ್ಲಿ ನೋಡುವುದು ಹಲವು ವಿಚಾರಗಳಿವೆ. ನಾವು ಮನೆ ಬಿಟ್ಟು ಹಳೆ ಮನೆಗೆ ಬಂದಾಗಿದೆ. ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇವೆ. ಸೇರ್ಪಡೆ ಕಾರ್ಯ ಇವತ್ತಿಗೆ ಮಾತ್ರ ಮುಗಿದಿಲ್ಲ. ಪ್ರತಿ ಪಂಚಾಯ್ತಿ ಮಟ್ಟದಲ್ಲಿ ಕಾರ್ಯಕರ್ತರು ಸೇರ್ಪಡೆಗೊಳ್ಳುತ್ತಾರೆ. ಬಿಜೆಪಿ ಕಾರ್ಯಕರ್ತರು ಸಹ ನಮ್ಮ ಜೊತೆ ಬರುತ್ತಿದ್ದಾರೆ. ಹೆಬ್ಬಾರ್ ಸ್ಪೋಕ್ಸ್ಪರ್ಸನ್, ನಾನಲ್ಲ. ನನ್ನ ನಿರ್ಣಯ ನಾನು ಹೇಳಿದ್ದೇನೆ. ಅವರು ಯಾವಾಗ ಕಾಂಗ್ರೆಸ್‌ಗೆ ಸೇರುತ್ತಾರೆ ಎಂದು ಅವರ ಬಳಿಯೇ ಕೇಳಬೇಕು ಎಂದರು. ಇದನ್ನೂ ಓದಿ: ಮೈಕ್‌ ಸೌಂಡ್‌ ಕಡಿಮೆ ಮಾಡಿ ಅಂದಿದ್ದಕ್ಕೆ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮೇಲೆ ಹಲ್ಲೆ

    ಬಿಜೆಪಿಯಿಂದ ದೂರ ಉಳಿದಿದ್ದ ಶಿವರಾಮ್ ಹೆಬ್ಬಾರ್ ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡದೆ ಸೈಲೆಂಟ್ ಆಗಿದ್ದರು. ಅಲ್ಲದೇ ಆಗಾಗ ಸಿಎಂ ಸಿದ್ದರಾಮಯ್ಯ ಸೇರಿದಂತೆ ‘ಕೈ’ ನಾಯಕರನ್ನು ಶಿವರಾಮ್ ಹೆಬ್ಬಾರ್ ಹಾಡಿ ಹೊಗಳುತ್ತಿದ್ದರು. ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡದೆ ಹೆಬ್ಬಾರ್ ತಟಸ್ಥರಾಗಿದ್ದಾರೆ. ಇಂದು ಯಲ್ಲಾಪುರ ಕ್ಷೇತ್ರದ ಪ್ರಮುಖ ಮುಖಂಡರ ಜೊತೆ ಹೆಬ್ಬಾರ್ ಪುತ್ರ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಇದನ್ನೂ ಓದಿ: ಹೆಚ್‌ಡಿಕೆ ನಿರ್ಮಲಾನಂದನಾಥ ಶ್ರೀಗಳ ಫೋನ್ ಟ್ಯಾಪ್ ಮಾಡಿಸಿದ್ರು: ಸಚಿವ ಚಲುವರಾಯಸ್ವಾಮಿ

  • ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ ಪುತ್ರ ಇಂದೇ ಕಾಂಗ್ರೆಸ್ ಸೇರ್ಪಡೆ!

    ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ ಪುತ್ರ ಇಂದೇ ಕಾಂಗ್ರೆಸ್ ಸೇರ್ಪಡೆ!

    ಕಾರವಾರ: ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ (Shivaram Hebbar) ಅವರ ಪುತ್ರ ವಿವೇಕ್ ಹೆಬ್ಬಾರ್ ಇಂದೇ (ಏ.11) ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಉತ್ತರ ಕನ್ನಡ (UttaraKannada) ಜಿಲ್ಲೆಯ ಬನವಾಸಿಯಲ್ಲಿ ಜಿಲ್ಲಾ ಕೈ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ (Congress) ಸೇರ್ಪಡೆಯಾಗಲಿದ್ದಾರೆ. ಇದನ್ನೂ ಓದಿ: ಜೋತಿಷ್ಯ ಪ್ರಭಾವ – ಸಂಗಾತಿ, ಮಕ್ಕಳನ್ನ ಕೊಂದು ತಾನೂ ಭೀಕರವಾಗಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ!

    ಯಲ್ಲಾಪುರ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ 2023ರ ವಿಧಾನಸಭಾ ಚುನಾವಣೆ ಬಳಿಕ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದರು. ಹಲವು ಸಭೆಗಳನ್ನೂ ನಡೆಸಿದ್ದ ಹೆಬ್ಬಾರ್, ರಾಜ್ಯಸಭಾ ಚುನಾವಣೆ ವೇಳೆ ಮತದಾನ ಮಾಡದೇ ಸೈಲೆಂಟ್ ಆಗಿದ್ದರು. ಇದನ್ನೂ ಓದಿ: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ಗುಡ್‍ನ್ಯೂಸ್- ನಾಳೆ, ನಾಡಿದ್ದು ಬೆಂಗಳೂರಲ್ಲಿ ಮಳೆ ಸಾಧ್ಯತೆ

    ಅಲ್ಲದೇ ಆಗಾಗ್ಗೆ ಸಿಎಂ ಸಿದ್ದರಾಮಯ್ಯ ಸೇರಿದಂತೆ, ಕೈ ನಾಯಕರನ್ನ ಹಾಡಿ ಹೊಗುಳುತ್ತಿದ್ದರು. ಸದ್ಯ ಲೋಕಸಭಾ ಚುನಾವಣೆ ಸಮೀಪದಲ್ಲಿದ್ದರೂ ಶಿವರಾಂ ಹೆಬ್ಬಾರ್ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕಿಳಿದಿಲ್ಲ. ಈ ನಡುವೆ ಅವರ ಪುತ್ರ ಇಂದೇ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

  • ಕಾರ್ಮಿಕ ಸಚಿವರ ಹೆಬ್ಬಾರ್ ಪುತ್ರನ ಫ್ಯಾಕ್ಟರಿಯ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಸಾವು

    ಕಾರ್ಮಿಕ ಸಚಿವರ ಹೆಬ್ಬಾರ್ ಪುತ್ರನ ಫ್ಯಾಕ್ಟರಿಯ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಸಾವು

    ಹಾವೇರಿ: ಕಾರ್ಮಿಕ ಸಚಿವ (Minister of Labour Department) ಶಿವರಾಮ್ ಹೆಬ್ಬಾರ್ (Shivaram Hebbar) ಮಗನ ಕಾರ್ಖಾನೆಯ ಯಂತ್ರದ ಬೆಲ್ಟ್‍ಗೆ ಸಿಲುಕಿ ಯುವಕನೋರ್ವ ಮೃತಪಟ್ಟ ಘಟನೆ ಜಿಲ್ಲೆಯ ಶಿಗ್ಗಾವಿ (Shiggavi) ತಾಲೂಕಿನ ಕೋಣನಕೇರಿಯಲ್ಲಿ ನಡೆದಿದೆ.

    POLICE JEEP

    ಕಾರ್ಮಿಕನನ್ನು ದುಂಢಸಿ ಗ್ರಾಮದ ನವೀನ ಬಸಪ್ಪ ಚಲವಾದಿ (19) ಎಂದು ಗುರುತಿಸಲಾಗಿದೆ. ಕಾರ್ಖಾನೆಯಲ್ಲಿ ಕಬ್ಬಿನ ಪುಡಿ ತುಂಬುವಾಗ ಈ ದುರ್ಘಟನೆ ಸಂಭವಿಸಿದೆ. ಸಚಿವರ ಮಗ ವಿವೇಕ್ ಹೆಬ್ಬಾರ್ ಅವರ ಮಾಲೀಕತ್ವದ ವಿಐಪಿಎನ್ ಡಿಸ್ಟಲರಿಸ್ (VIPN Distilleries) ಕಾರ್ಖಾನೆಯಲ್ಲಿ ಈ ದುರಂತ ನಡೆದಿದೆ. ಇದನ್ನೂ ಓದಿ: ಹಸಿರು ಉಡುಗೆಯಲ್ಲಿ ಸಪ್ನಾ ಶೈನ್ – ಕೊಹ್ಲಿ ಜೊತೆ ಜಗಳವಾಡಿದ್ರೆ ಇನ್ನೂ ಫೇಮಸ್ ಆಗ್ತೀರಿ: ನೆಟ್ಟಿಗರಿಂದ ತರಾಟೆ

    ಕಾರ್ಖಾನೆಯಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಅಳವಡಿಸಿರದ ಕಾರಣ ಈ ಅವಘಡ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಬಂಕಾಪುರ (Bankapura) ಪೊಲೀಸ್ ಠಾಣೆಯಲ್ಲಿ ಫ್ಯಾಕ್ಟರಿ ಮಾಲೀಕ ಸೇರಿ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಜ್ವರವೆಂದು ಆಸ್ಪತ್ರೆಗೆ ಅಡ್ಮಿಟ್ ಆದ ಯುವಕ ಸಾವು- ವೈದ್ಯರ ನಿರ್ಲಕ್ಷ್ಯ ಆರೋಪ

    Bankapura,
    Arbail Shivaram Hebbar Minister of Labour Department, Shiggavi VIPN Distilleries